vaddagere.bloogspot.com
ಶನಿವಾರ, ಸೆಪ್ಟೆಂಬರ್ 3, 2016
ಕನ್ನಡಬ್ಲಾಗ್ ಲಿಸ್ಟ್ KannadaBlogList: ವರುಷದ ಹರುಷ
ಕನ್ನಡಬ್ಲಾಗ್ ಲಿಸ್ಟ್ KannadaBlogList: ವರುಷದ ಹರುಷ: ಕನ್ನಡಬ್ಲಾಗ್ ಲಿಸ್ಟ್ ಗೆ ವರುಷ ತುಂಬಿದ ಸಂಭ್ರಮ. ನಮಗೆ email ಹಾಗೂ ಕಾಮೆಂಟ್ಗಳನ್ನು ಬರೆದು, ಕನ್ನಡಬ್ಲಾಗ್ ಪಟ್ಟಿಯನ್ನು ತಯಾರಿಸಲು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್...
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ಸೋಮವಾರ, ಆಗಸ್ಟ್ 29, 2016
ಬಯಲುಸೀಮೆಯಲ್ಲಿ ಹೊಸ ಮಾದರಿ ಅಡಿಕೆ ಬೇಸಾಯ
ನೈಸಗರ್ಿಕ ಕೃಷಿಯಲ್ಲಿ ಯಶಸ್ಸು ಕಂಡ ಉದ್ಯಮಿ ನಿಜಗುಣ
ಚಾಮರಾಜನಗರ : ಮಣ್ಣು ಮತ್ತು ಸಸ್ಯಗಳ ಗುಣಧರ್ಮವನ್ನು ಅರಿತು ಬಯಲು ಸೀಮೆಯಲ್ಲಿ ಕಟ್ಟಿದ ಸುಂದರ ಅಡಿಕೆ ತೋಟ ಇದು. ದಶಕಗಳ ಹಿಂದೆ ರಾಗಿ, ಜೋಳ,ಹಸರು,ಉದ್ದು,ಅವರೆ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದ ಭೂಮಿ ಈಗ ಮಲೆನಾಡಿನ ಹಸಿರು ಹೊದ್ದು ನಿಂತಿದೆ. ದಶಕಗಳ ಹಿಂದೆ ಮಳೆ ಬಂದರೆ ಜಮೀನಿನ ಮಣ್ಣೆಲ್ಲ ಕೊಚ್ಚಿ,ಕೊರೆದು ಹಳ್ಳ ಮಾಡಿ, ಬೆಳೆದ ಬೆಳೆಯನ್ನೆಲ್ಲ ನೀರನೊಂದಿಗೆ ಕೊಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಆಗ ಕೊರಕಲು ಜಮೀನು ಎಂದೆ ಕರೆಯಲಾಗುತ್ತಿತ್ತು. ಆದರೆ ಇಂದು ಅದೇ ಜಮೀನಿನಲ್ಲಿ ಬಿದ್ದ ಮಳೆ ನೀರು ಮಣ್ಣಿನೊಂದಿಗೆ ಬೆರೆತು ಸ್ನೇಹಮಾಡುತ್ತಿದೆ. ನೆಲಕ್ಕೆ ಬಿದ್ದ ಒಂದೊಂದು ಹನಿಯೂ ಆಚೆ ಹೋಗದೆ ಅಂತರ್ಜಲವಾಗಿ ಪರಿವರ್ತನೆಯಾಗಿ ಭೂಮಿಯ ಕೊರಕಲನ್ನು ತಪ್ಪಿಸಿದೆ. ಈಗ ಅಲ್ಲೊಂದು ಸುಂದರ ಅಡಿಕೆ ತೋಟ ಕೈ ಬೇಸಿ ಕರೆಯುತ್ತಿದೆ. ಇಂತಹ ಹಸಿರು ಸಸ್ಯಕಾಶಿಯನ್ನು ರೂಪಿಸಿದವರು ಉದ್ಯಮಿ ನಿಜಗುಣರಾಜು.ಚಾಮರಾಜಗರದ ಸೆರಗಿಗೆ ಇದೆ ರಾಮಸಮುದ್ರ. ಅಲ್ಲಿಂದ ಅರುಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಒಂದು ಕಿ.ಮೀ.ದೂರ ಕ್ರಮಿಸಿದರೆ ಬಲಗಡೆಗೆ ಸಿಗುವುದೆ ನಿಜಗುಣ ಫಾರಂ. ಸುತ್ತಮತ್ತಲಿನ ತೋಟಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಪ್ರತಿ ಕೊಳವೆ ಬಾವಿಗಳನ್ನು 600 ರಿಂದ 800 ಅಡಿ ಕೊರೆಸಿದ್ದರೂ ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಾಗುತ್ತದೆ.ಆದರೆ ನಿಜಗುಣ ಫಾರಂನಲ್ಲಿ 160 ಅಡಿ ಇರುವ ಕೊಳವೆ ಬಾವಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದಲೂ ನೀರು ಸ್ವಲ್ಪವೂ ಕಡಿಮೆಯಾಗಿಲ್ಲ.ಅಷ್ಟೆ ಅಲ್ಲ ಈ ಬೋರ್ವೆಲ್ನಿಂದ ಬರುವ ನೀರು ಸಿಹಿಯಾಗಿದ್ದು ವರ್ಷದ ಎಲ್ಲಾ ಕಾಲಗಳಲ್ಲೂ ಎಂತಹ ಬರಕ್ಕೂ ದಕ್ಕದೆ ಒಂದೆ ಸಮನೆ ಮೂರು ಇಂಚು ನೀರು ಕೊಡುತ್ತಿದೆ.ಪರಿಣಾಮ ಮೂರು ಎಕರೆ ಪ್ರದೇಶದಲ್ಲಿ 2400 ಅಡಿಕೆ, 2500 ಏಲಕ್ಕಿ ಬಾಳೆ ,20 ತೆಂಗು, ತೋಟದ ಸುತ್ತ ಲಕ್ಷಾಂತರ ಬೆಲೆ ಬಾಳುವ 300 ತೇಗದ ಮರಗಳು ಅಲ್ಲದೆ ನುಗ್ಗೆ, ಮನೆ ಬಳಕೆಗೆ ವಿಷಮುಕ್ತವಾಗಿ ಬೆಳೆದುಕೊಂಡಿರುವ ಒಂದೆರಡು ಸೀಬೆ, ದಾಳಿಂಬೆ, ಪಪ್ಪಾಯ ಹಣ್ಣುಗಳನ್ನು ಕೊಡುವ ಗಿಡಗಳಿದ್ದು ಹಸಿರಿನಿಂದ ಕಂಗೊಳಿಸುತ್ತಾ ಹಾದಿಯಲ್ಲಿ ಹೋದವರ ಕಣ್ಮನ ಸೆಳೆದು ಬಾಗಿ ಬಳುಕುತ್ತಿವೆ.
ಈ ತೋಟದ ವಾಷರ್ಿಕ ಆದಾಯ ಅಡಿಕೆಯಿಂದ ಮಾತ್ರ ಬರುತ್ತದೆ. ಉಳಿದಂತೆ ಬಾಳೆ, ತೆಂಗು ಸಮೃದ್ಧವಾಗಿದ್ದರೂ ಅವುಗಳಿಂದ ಹೆಚ್ಚಿನ ಆದಾಯವನ್ನು ತೋಟದ ಮಾಲೀಕ, ಉದ್ಯಮಿ ನಿಜಗುಣ ರಾಜು ನಿರೀಕ್ಷಿಸುವುದಿಲ್ಲ.ಆದರೂ ಬಾಳೆಯೂ ಒಂದುವರೆ ಲಕ್ಷ ಆದಾಯ ತಂದುಕೊಡುತ್ತದೆ. ಚಾಮರಾಜನಗರದಲ್ಲಿ ನಿಜಗುಣ ಗ್ರೂಫ್ ಆಫ್ ಕಂಪನಿ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಹಲವಾರು ಉದ್ಯಮಗಳನ್ನು ಕಟ್ಟಿ ಯಶಸ್ವಿಯಾಗಿರುವ ನಿಜಗುಣರಾಜು ಇಂತಹ ಸಂಪೂರ್ಣ ಸಾವಯವ ಹಸಿರು ತೋಟವನ್ನು ಕಟ್ಟಿದ್ದರು ತಾನೊಬ್ಬ ಉದ್ಯಮಿ ಎಂದು ಗುರುತಿಸಿಕೊಳ್ಳುತ್ತಾರೆಯೆ ವಿನಹ ರೈತ ಎಂದು ಗುರುತಿಸಿಕೊಂಡಿಲ್ಲ. ಆದರೆ ರಾಜು ಕಟ್ಟಿದ ತೋಟ ಹಲವಾರು ಕಾರಣಗಳಿಗೆ ಈಗ ಕೃಷಿ ವಿಜ್ಞಾನಿಗಳಿಗೆ ಒಂದು ಪಾಠ ಶಾಲೆಯಾಗಿ ರೂಪುಗೊಂಡಿದೆ.
ವರ್ಷದಲ್ಲಿ ಐದಾರು ಬಾರಿ ಮಾತ್ರ ತೋಟಕ್ಕೆ ಹೋಗುವ ನಿಜಗುಣರಾಜು ಶಿವರಾತ್ರಿಯಿಂದ ಶಿವರಾತ್ರಿವರೆಗೆ ಅಡಿಕೆ ತೋಟವನ್ನು ಸ್ಥಳೀಯ ಅಡಿಕೆ ವ್ಯಾಪಾರಿಗಳಿಗೆ ವಾಷರ್ಿಕ ಗುತ್ತಿಗೆ ಕೊಟ್ಟು ಬಿಡುತ್ತಾರೆ.ಕಳೆದ ವರ್ಷ ಮೂರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟವನ್ನು ಆರು ಲಕ್ಷದ ನಲವತ್ತು ಸಾವಿರ ರೂಪಾಯಿಗೆ ಕೊಟ್ಟಿದ್ದೆ. ಈ ಬಾರಿ ಅಡಿಕೆ ದರ ಕುಸಿತ ಕಂಡಿದ್ದರು ಐದು ಲಕ್ಷದ ಹತ್ತು ಸಾವಿರ ರೂಪಾಯಿಗಳಿಗೆ ಗುತ್ತಿಗೆ ಕೊಟ್ಟಿದ್ದೇನೆ ಎನ್ನುತ್ತಾರೆ. ನಮ್ಮ ಬೇಸಾಯ ಒಂದು ರೀತಿ ಕಾಪರ್ೋರೇಟ್ ರೀತಿಯದು ಎನ್ನುತ್ತಾರೆ. ತೋಟಕ್ಕೆ ಮುಖ್ಯವಾಗಿ ಏನು ಮಾಡಿಸಬೇಕು, ಏನನ್ನು ಮಾಡಬಾರದು ಎನ್ನುವುದು ಮಾಲೀಕನಿಗೆ ಗೊತ್ತಿರಬೇಕು. ಜೊತೆಗೆ ಅದರ ನಿರ್ವಹಣೆ ತುಂಬಾ ಮುಖ್ಯ ಎನ್ನುತ್ತಾರೆ.
ನಮ್ಮ ಕಡೆ ಆಳು ಮಾಡಿದ ಕೆಲಸ ಆಳು ಎನ್ನುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲಿಗೆ ಬಂದ ದಂಪತಿ ಕಳೆದ ಒಂದು ದಶಕಗಳಿಂದ ತೋಟದಲ್ಲೆ ನೆಲೆನಿಂತು ಆಗುಹೋಗುಗಳನ್ನು ನೋಡಿಕೊಳ್ಳುತ್ತಿದೆ.ಮೂಡ್ನಾಕೂಡು ಗ್ರಾಮದಿಂದ ಹದಿನಾಲ್ಕು ವರ್ಷಗಳ ಹಿಂದ ತೋಟಕ್ಕೆ ಬಂದ ನಂಜಮ್ಮಣಿ ಮತ್ತು ಬಸವರಾಜಪ್ಪ ದಂಪತಿ ಇಲ್ಲೆ ನೆಲೆ ನಿಂತು ತೋಟದ ಕಾವಲುಗಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ತೋಟದಲ್ಲೆ ಸದಾ ಇದ್ದರು ಬೇಸಾಯದ ಬಗ್ಗೆ ಬೇಸರದಿಂದಲ್ಲೆ ಮಾತನಾಡುವ ಜನರೆ ಹೆಚ್ಚು. ಹೀಗಿರುವಾಗ ಯಶಸ್ವಿ ಉದ್ಯಮಿಯೂ ಆಗಿರುವ ನಿಜಗುಣ ವ್ಯವಸಾಯದ ಬಗ್ಗೆ ಪ್ರೀತಿ ಮೂಡಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ದಶಕದ ಹಿಂದಿನ ನೆನೆಪುಗಳಿಗೆ ಜಾರಿ ಬಿಡುತ್ತಾರೆ.
ಪಿತ್ರಾಜರ್ಿತ ಆಸ್ತಿ : ನಾನೊಬ್ಬ ಉದ್ಯಮಿಯಾಗಬೇಕೆಂದು ಕನಸು ಕಂಡವನು. ಜಮೀನು ಬೇಡ ಎಂದಿದ್ದೆ. ಆದರೆ ನಮ್ಮ ತಂದೆ ಎಚ್.ಎಂ.ಗುರುಮಲ್ಲಪ್ಪ ನನ್ನ ಹೆಸರಿನಲ್ಲಿ ಆರ್ಟಿಸಿ ಇರಲಿ ಎಂಬ ಕಾರಣಕ್ಕೆ ನನಗೆ ಈ ಮೂರು ಎಕರೆ ಕೊರಕಲು ಜಮೀನು ಕೊಟ್ಟರು. ಆರಂಭದಲ್ಲಿ ಕೊಳವೆ ಬಾವಿ ಕೊರೆಸಿದೆ.ಒಳ್ಳೆಯ ನೀರು ಬಂತು.ಕಬ್ಬು ನಾಟಿಮಾಡಿಸಿದೆ. ಕಾಖರ್ಾನೆಯವರು ಕಬ್ಬು ಖರೀದಿ ಮಾಡುವುದನ್ನು ವಿಳಂಬಮಾಡಿದರು. 12 ತಿಂಗಳಿಗೆ ಕಟಾವಿಗೆ ಬರುವ ಕಬ್ಬನ್ನು 14 ತಿಂಗಳಾದರೂ ಖರೀದಿಸುತ್ತಿರಲಿಲ್ಲ. ಇದರಿಂದ ಬೇಸತ್ತು ಎರಡೆ ವರ್ಷಕ್ಕೆ ಕಬ್ಬು ಕಿತ್ತು ಮೂರು ತಿಂಗಳ ಬೆಳೆ ಮಾಡೋಣ ಅಂತ ಅಲ್ಲಿ ಕೋಸು ಹಾಕಿದೆ. ಹೊಸ ಮಣ್ಣು ಕೋಸು ಚೆನ್ನಾಗಿ ಬಂತು. ಆದರೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಖಚರ್ು ಕೂಡ ಹೆಚ್ಚಾಗಿ ಬರಿ ಹತ್ತಿಪ್ಪತ್ತು ಸಾವಿರ ರೂ. ಆದಾಯ ಮಾತ್ರ ಬಂತು.
ಇದರಿಂದ ನನಗೆ ಒಂದು ಸತ್ಯ ಗೊತ್ತಾಯಿತು. ನಾವು ಕ್ರಿಮಿನಾಶಕ ಮತ್ತು ಗೊಬ್ಬರದ ಕಂಪನಿಗಳಿಗಾಗಿ ದುಡಿಯುತ್ತಿದ್ದೇವೆ. ನಾವು ಇದನ್ನೆಲ್ಲ ಬಳಸಿ ಬೇಸಾಯ ಮಾಡುವುದರಿಂದ ಅವರು ಶ್ರೀಮಂತರಾಗುತ್ತಾರೆ ನಾವು ಬಡವರಾಗುತ್ತೇವೆ ಎಂಬುದು ಅರಿವಿಗೆ ಬಂತು. ಸ್ವತಃ ಆಗ ನಾನೆ ಜಿಲ್ಲೆಯ ಫಟರ್ಿಲೈಸರ್ ಡೀಲರ್ ಆಗಿ ವ್ಯಾಪಾರದಲ್ಲಿ ಜಿಲ್ಲೆಗೆ ಮೊದಲಿಗನಾಗಿದ್ದೆ. ವಿಜಯ ಮಲ್ಯ ನನಗೆ ಸನ್ಮಾನ ಮಾಡಿದ್ದರು. ಭೂಮಿಗೆ ವಿಷ ಉಣಿಸುವುದರಿಂದ ನಾವೂ ಮಾತ್ರ ಬಡವರಾಗುವುದಿಲ್ಲ, ಭೂತಾಯಿಯನ್ನು ಬಂಜೆ ಮಾಡುತ್ತೇವೆ ಎಂಬ ಸತ್ಯದ ಸಾಕ್ಷಾತ್ಕಾರವಾಗಿ ಗೊಬ್ಬರ ವ್ಯಾಪಾರ ಬಿಡಲು ತೀಮರ್ಾನಿಸಿದೆ.
ಸಾವಯವಕ್ಕೂ ಮುನ್ನಾ : ಮೂರು ಎಕರೆ ಜಮೀನುಗು ಮೊದಲು ತಂತಿ ಬೇಲಿ ಹಾಕಿಸಿ ಆಳವಾಗಿ ಉಳುಮೆ ಮಾಡಿ ಆರು ತಿಂಗಳು ಮಣ್ಣನ್ನು ಬಿಸಿಲಿನಲ್ಲಿ ಕಾಯಲು ಬಿಟ್ಟೆ. ನಂತರ ಅಡಿಕೆ ಹಾಕಲು ನಿರ್ಧರಿಸಿ ರಾಮ ಸಮುದ್ರದ ಸಮೀಪ ಇರುವ ಚಿಕ್ಕಕೆರೆ ದೊಡ್ಡಕೆರೆಯಿಂದ ಜಮೀನಿಗೆ ಕೆರೆಮಣ್ಣು ಹೊಡೆಸಿದೆ. ಇದರ ಜತೆ ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಕೊಟ್ಟೆ. 8 ಮತ್ತು 8 ಅಡಿ ಅಂತರದಲ್ಲಿ ಏಲಕ್ಕಿ ಬಾಳೆ ಹಾಕಿ ಮಿಶ್ರ ಪದ್ಧತಿಯಲ್ಲಿ ನಾಮಧಾರಿ ತಳಿಯ ಕಲ್ಲಂಗಡಿ ಹಾಕಿದೆ. ಇದರಿಂದ ಮೂರು ತಿಂಗಳಲ್ಲಿ ಉತ್ತಮ ಆದಾಯ ಬಂತು. ಕಲ್ಲಂಗಡಿ ಕಿತ್ತ ನಂತರ ಸ್ಥಳೀಯವಾಗಿ ನಮ್ಮಲೆ ಸಿಗುವ ಅಡಿಕೆ ಸಸಿ ಖರೀದಿಸಿ ಅದನ್ನು 8 ಮತ್ತು 8 ಅಡಿ ಅಂತರದಲ್ಲಿ ನಾಟಿ ಮಾಡಿಸಿದೆ. ಸಾಮಾನ್ಯವಾಗಿ ಎಲ್ಲರಿ ಆರು ಮತ್ತು ಆರು ಅಡಿ ಅಂತರದಲ್ಲಿ ಅಡಿಕೆ ನಾಟಿ ಮಾಡುತ್ತಾರೆ. ಇದರಿಂದ ಮಣ್ಣಿಗೆ ಸಾಕಷ್ಟು ಬಿಸಿಲು ತಾಗದೆ ಫಸಲು ಕಡಿಮೆ ಬರುತ್ತದೆ.
ಮೊದಲ ಮತ್ತು ಎರಡನೆ ವರ್ಷದ ಬಾಳೆಯಲ್ಲಿ ಸಾಕಷ್ಟು ಆದಾಯ ಬಂತು. ನಾನು ಮಾಡಿದ ಒಳ್ಳೆಯ ಕೆಲಸವೆಂದರೆ ಬಾಳೆಯ ತರಗನ್ನು ಮುಚ್ಚಿಗೆಯಾಗಿ ಬಳಸಿಕೊಂಡು, ದಿಂಡನ್ನು ಸಣ್ಣ ಸಣ್ಣದಾಗಿ ಕಟ್ ಮಾಡಿಸಿ ಮೂರು ಎಕರೆ ಅಡಿಕೆ ತೋಟಕ್ಕೂ ಹಾಸಿಗೆಯಂತೆ ಹಾಸಿ ಅದರ ಮೇಲೆ ಮತ್ತೆ ಕೆರೆ ಮಣ್ಣು ಸುರಿಸಿದೆ. ಇಲ್ಲೂ ಒಂದು ಉಪಾಯ ಮಾಡಿದ್ದೆ. ಸುತ್ತ ಮತ್ತು ಇರುವ ಬೇಲಿಯನ್ನು ಸವರಿಸಿ ಉಗನಿ ಹಂಬು, ಭೂತಾಳೆ, ಮತ್ತಿತರ ತ್ಯಾಜ್ಯಗಳನ್ನು ತರಿಸಿ ಗುಂಡಿಗೆ ತುಂಬಿ ಅದರ ಮೇಲೆ ಕೆರೆ ಮಣ್ಣು ಸುರಿಸಿ ಮೂರು ತಿಂಗಳು ಚೆನ್ನಾಗಿ ಕಳಿಸಿ ಗೊಬ್ಬರ ತಯಾರುಮಾಡಿಕೊಂಡಿದ್ದೆ. ಅದನ್ನೆ ಬಾಳೆ ದಿಂಡಿನ ಮುಚ್ಚಿಗೆ ಮೇಲೆ ಸುರಿಸಿದೆ.
ಪಕ್ಕದ ಮೂರು ಎಕರೆ ಕಬ್ಬಿನ ತೋಟದಲ್ಲೂ ಸಿಕ್ಕ ತರಗನ್ನು ತಂದು ಮುಚ್ಚಿಗೆಯಾಗಿ ಬಳಸಿಕೊಂಡೆ. ಆಗ ನೀರು ಹಾಹಿಸುವ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದೆವು. ಇದೆಲ್ಲ ಮಾಡಿದ ಪರಿಣಾಮ ಮೂರೆ ತಿಂಗಳಲ್ಲಿ ನನ್ನ ಭೂಮಿಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಅಸಂಖ್ಯಾತ ಎರೆ ಹುಳುಗಳು ಕಾಣಿಸಿಕೊಂಡವು.ಮಣ್ಣು ಮೃದುವಾಯಿತು. ಆಗ ನನಗೆ ಸಾವಯವದ ಸತ್ಯ ಮತ್ತು ಪರಿಣಾಮ ಗೊತ್ತಾಯಿತು. ಪರಿಣಾಮ ಮಣ್ಣಿಗೆ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಬಂತು. ಇದರಿಂದಾಗಿ ಈಗ ಸತತವಾಗಿ ಐದು ದಿನ ಮಳೆಯಾದರೂ ನಮ್ಮ ತೋಟದಲ್ಲಿ ಮಣ್ಣು ಕೊಚ್ಚಿಹೋಗುವುದಿಲ್ಲ. ಬಿದ್ದ ಪ್ರತಿ ಹನಿಯೂ ಅಂತರ್ಜಲವಾಗಿ ಪರಿವರ್ತನೆಯಾಗಿ ತೋಟದಲ್ಲೆ ಫಿಕ್ಸಡ್ ಡೆಫಸಿಂಟ್ ಆಗಿಬಿಡುತ್ತದೆ. ಅದಕ್ಕಾಗಿಯೆ ನಮ್ಮ ತೋಟದ ನೀರಿಗೆ ಸಿಹಿಉ ಗುಣ ಇದೆ. ಎಂತಹ ಬರಗಾಲದಲ್ಲೂ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಗಿಲ್ಲ.
ಹನಿ ನೀರಾವರಿ : ಕಳೆದ ಆರು ವರ್ಷಗಳಿಂದ ಈಗ ಹನಿ ನೀರಾವರಿ ಅಳವಡಿಸಿಕೊಂಡಿದ್ದೇವೆ. ಜಮೀನಿಗೆ ಯಾವ ರೀತಿಯ ಗೊಬ್ಬರವನ್ನು ಹಾಕಿಲ್ಲ. ಉಳುಮೆಯನ್ನು ಮಾಡುವುದಿಲ್ಲ. ಹಾಲಿಗಾಗಿ ಎರಡು ನಾಟಿ ಹಸು ಸಾಕಿಕೊಂಡಿದ್ದೇವೆ ಅದರ ಸಗಣಿಯನ್ನು ಮಾತ್ರ ಗಿಡದ ಬೊಡ್ಡೆಗೆ ಸುರಿಯುತ್ತಾರೆ. ಜೀವಾಮೃತ,ಎರೆಗೊಬ್ಬರ ಅಂತ ಏನನ್ನು ನಾವು ಮಾಡಿಕೊಂಡಿಲ್ಲ. ನಾನು ತೋಟಕ್ಕೆ ವರ್ಷದಲ್ಲಿ ಐದಾರು ಬಾರಿ ಮಾತ್ರ ಬರುತ್ತೇನೆ.ಆದರೂ ನನ್ನ ತೋಟದ ಆದಾಯ ವಾಷರ್ಿಕ ಏಳು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇಲ್ಲ.ಅಡಿಕೆ ತೋಟದಲ್ಲಿ ಬೀಳುವ ಹಾಳೆಗಳನ್ನು ಸಂಗ್ರಹಿಸಿದರೆ ಅಡಿಕೆ ಪ್ಲೇಟ್ಮಾಡಿ ಅದನ್ನೆ ಒಂದು ದೊಡ್ಡ ವ್ಯಾಪಾರಮಾಡಿ ಆದಾಯಗಳಿಸಬಹುದು.ಆದರೆ ನಾನು ಅದನ್ನು ಮಾಡುತ್ತಿಲ್ಲ. ಮೊದಲ ಮೂರ್ನಾಲ್ಕು ವರ್ಷ ಶ್ರದ್ಧೆಯಿಂದ ತೋಟ ಕಟ್ಟಿದರೆ ನಂತರ ಅರಾಮವಾಗಿ ಮುವತ್ತು ನಲವತ್ತು ವರ್ಷ ಸೋಮಾರಿ ಬೇಸಾಯಮಾಡಿ ಹೆಚ್ಚಿನ ಆದಾಯಗಳಿಸಬಹುದು. ಈಗ ನಾನು ತೋಟದ ಕಡೆ ತಿರುಗಿ ನೋಡದಿದ್ದರು ಆದಾಯ ಗ್ಯಾರಂಟಿ. ತೋಟದಲ್ಲಿರವ ಕುಟುಂಬ ತೋಟಕ್ಕೆ ಕಾವಲಾಗಿದ್ದರೆ ಸಾಕು. ದಿನಕ್ಕೆ ಒಂದೆರಡು ಗಂಟೆ ಮೋಟಾರ್ ಹಾಕುವುದಷ್ಟೆ ಅವರ ಕೆಲಸ. ಡ್ರಿಫ್ ಮೂಲಕ ಗಿಡಗಳಿಗೆ ನೀರು ಹೋಗುತ್ತದೆ.ಅವರಿಗೆ ಇಲ್ಲಿ ಬೇರೆನೂ ಕೆಲಸ ಇಲ್ಲ. ನನ್ನ ತೋಟದಲ್ಲಿ ಈಗ ನೂರಾರು ರೀತಿಯ ಪಕ್ಷಿಗಳು, ಹಾವು, ಮುಂಗೂಸಿ ಎಲ್ಲಾ ಜೀವನ ಮಾಡುತ್ತಿವೆ ಅವುಗಳಿಂದ ನಮಗೆ ತೊಂದರೆಯಾಗಿಲ್ಲ,ಜೀವ ವೈವಿಧ್ಯತೆ ಕಾಪಾಡಿಕೊಂಡಷ್ಟು ತೋಟ ಚೆನ್ನಾಗಿರುತ್ತದೆ.
ಮೂರು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಯಾವ ಸಕರ್ಾರಿ ನೌಕರರಿಗೂ ಕಡಿಮೆ ಇರದಂತೆ ಒಂದು ಸಂಸಾರ ನೆಮ್ಮದಿಯಾಗಿ ಜೀವನ ಸಾಗಿಸಬಹುದು. ಇದು ನನ್ನ ಸ್ವಂತ ಅನುಭವ, ನಾನು ಕಂಡುಕೊಂಡ ಸತ್ಯ ಎನ್ನುತ್ತಾರೆ ನಿಜಗುಣರಾಜು. ಹೆಚ್ಚಿನ ಮಾಹಿತಿಗೆ 9480190282 ಸಂಪಕರ್ಿಸಬಹುದು.
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ನಗರ ಬದುಕಿನ ಪಯರ್ಾಯಗಳ ಹುಡುಕಾಟದಲ್ಲಿ......
ಕುಡಿಯುವ ನೀರು ಮತ್ತು ತ್ಯಾಜ್ಯ ನಿರ್ವಹಣೆ ಮಹಾನಗರಗಳ ಪಾಲಿನ ಅತಿ ದೊಡ್ಡ ಸಮಸ್ಯೆ. ಮುಂದಿನ ಜನಾಂಗ ಕುಡಿಯುವ ನೀರಿಗಾಗಿ ಕಾದಾಟ ಮಾಡಬೇಕಾದ ಪರಿಸ್ಥಿತಿ ನಿಮರ್ಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಒಂದೆಡೆ ಬೆಳೆಯುತ್ತಿರುವ ಮಹಾನಗರಗಳು ಮತ್ತೊಂದೆಡೆ ಅಷ್ಟೆ ವೇಗವಾಗಿ ಬೆಳೆಯುತ್ತಿರುವ ಕಸದ ರಾಶಿ ನಗರದ ಅಂದ ಮತ್ತು ಆರೋಗ್ಯವನ್ನು ಕೆಡಿಸುತ್ತಿವೆ.
ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಮೈಸೂರು ಎರಡನೆ ಸ್ಥಾನದಲ್ಲಿದೆ.ಮೊದಲ ಸ್ಥಾನದಲ್ಲಿ ಬೆಂಗಳೂರಿದೆ. ನಗರದ ಜನಸಂಖ್ಯೆ 10 ಲಕ್ಷವನ್ನು ಮೀರಿ ನಾಗಲೋಟದಲ್ಲಿ ಸಾಗುತ್ತಿದೆ. ನಗರದ ಜನರಿಗೆ ಪರಿಶುದ್ಧ ಕುಡಿಯುವ ನೀರು ಪೂರೈಸುವುದು ಮತ್ತು ತ್ಯಾಜ್ಯ ನಿರ್ವಹಣೆ ಮಹಾ ನಗರಪಾಲಿಕೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಗರದ ಜನರ ದಾಹ ತಣಿಸಲು ಕಾವೇರಿ ಮತ್ತು ಕಬಿನಿ ಜಲಾಶಯಗಳಿಂದ ನೀರು ಹರಿಸಿ ಶುದ್ಧೀಕರಣಮಾಡಿ ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಒಂದೆರಡು ತಿಂಗಳು ಜಲಾಶಯಗಳ ಒಡಲು ಬರಿದಾದಾಗ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಲಶುದ್ದೀಕರಣದ ಘಟಕಗಳು ಕೆಟ್ಟು ನಿಂತಾಗ ಟ್ಯಾಂಕರ್ ನೀರಿಗಾಗಿ ಜನ ಮೈಲುದ್ದ ಸರತಿ ಸಾಲಿನಲ್ಲಿ ನಿಂತು ಪರಿತಪಿಸುವುದು ನಗರದಲ್ಲಿ ಸವರ್ೇ ಸಾಮಾನ್ಯ ಸಂಗತಿ ಎನ್ನುವಷ್ಟರ ಮಟ್ಟಿಗೆ ಜನ ಒಗ್ಗಿ ಕೊಂಡಿದ್ದಾರೆ.
ಬಹುಪಾಲು ಅಭಿವೃದ್ಧಿ ಕಾಮಗಾರಿಗಳು ಪರಿಸರಕ್ಕೆ ಹಾನಿ ಮಾಡದೆ ನಡೆಯುವುದೆ ಇಲ್ಲ. ನಗರದ ಧೂಳು, ದಟ್ಟ ಹೊಗೆ,ಕೆಟ್ಟ ಗಾಳಿ, ಕಸದ ರಾಶಿ,ಕಲುಷಿತ ನೀರು ಎಲ್ಲಾ ಸೇರಿ ನಗರವನ್ನು ಕೊಳೆತು ನಾರುವ ಜೈಲನ್ನಾಗಿ ಪರಿವತರ್ಿಸಿವೆ.
ಇದಕ್ಕೆಲ್ಲ ಪಯರ್ಾಯವನ್ನು ಕಂಡುಕೊಳ್ಳದೆ ಹೋದರೆ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ. ಈಗಾಗಲೇ ಮಹಾ ನಗರಗಳಲ್ಲಿ ವಾಸಿಸುವ ಪ್ರತಿ ಶತ 80 ರಷ್ಟು ಮಂದಿ ಅಸ್ತಮಾ, ಹೃದಯ ರೋಗ ಸೇರಿದಂತೆ ನಾನಾ ಕಾಯಿಲೆಗಳಿಂದ ನರಳುತ್ತಿದ್ದಾರೆ. ನೆಲಜಲ ಸಂರಕ್ಷಣೆ ವಿಚಾರದಲ್ಲಿ ನಾವು ಕರ್ತವ್ಯ ಭ್ರಷ್ಟರಾಗಿದ್ದೇವೆ.
ಪರಿಸ್ಥಿತಿ ಇಷ್ಟು ಭೀಕರವಾಗಿರುವುದರ ನಡುವೆಯೂ ಅಲ್ಲಲ್ಲಿ ಸಮಸ್ಯೆಗಳಿಗೆ ಪರಿಸರದಲ್ಲೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಅಂತಹ ಪಯಾರ್ಯ ಮಾದರಿಯೊಂದನ್ನು ಕಂಡುಕೊಂಡಿರುವ ವ್ಯಕ್ತಿಯೊಬ್ಬರು ಮೈಸೂರಿನ ಕುವೆಂಪುನಗರದಲ್ಲಿ ಇದ್ದಾರೆ. ಅವರೆ ನಿವೃತ್ತ ಕಾರ್ಯ ಪಾಲಕ ಅಭಿಯಂತರ ಎಸ್.ವೈ ಸದಾಶಿವ ಮೂತರ್ಿ. 80 ರ ಹರಯದ ಮೂತರ್ಿಯವರ ಪರಿಸರ ಕಾಳಜಿ ಮತ್ತು ಉತ್ಸಾಹ ಯುವಕರನ್ನು ನಾಚಿಸುವಂತಿದೆ. ಕುಡಿಯುವ ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಅವರು ಅನುಸರಿಸುತ್ತಿರುವ ಮಾದರಿಯನ್ನು ನಗರದ ಜನ ರೂಢಿಸಿಕೊಂಡರೆ ಆರೋಗ್ಯ ಸಮಸ್ಯೆಯೂ ಸೇರಿದಂತೆ ಮಹಾ ನಗರಗಳ ಮುಖ್ಯ ಸಮಸ್ಯೆಗಳೆಲ್ಲವೂ ಬಹುಪಾಲು ಬಗೆಹರಿದಂತಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಜಲಾಶಯಗಳು ಬರಿದಾಗಲಿ, ನೀರು ಶುದ್ಧೀಕರಣ ಘಟಕ ಕೆಟ್ಟು ನಿಲ್ಲಲಿ ಅವರಿಗೆ ನೀರಿನ ಸಮಸ್ಯೆ ಭಾದಿಸಿಲ್ಲ. ಅವರ ಮನೆಗೆ ಮಹಾನಗರ ಪಾಲಿಕೆಯ ಕಸ ಸಂಗ್ರಹ ಮಾಡುವವರು ಬರಲೇ ಬೇಕಿಲ್ಲ. ಅಷ್ಟರ ಮಟ್ಟಿಗೆ ಅವರು ಸ್ವಾವಲಂಬನೆ ಸಾಧಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನಮಗೆ ನಾವೆ ಮಾದರಿ :
ಕಳೆದ ಹನ್ನೆರಡು ವರ್ಷದಿಂದ ಮಳೆ ನೀರು ಕೊಯ್ಲು ಮಾಡುತ್ತಿದ್ದೇವೆ. ಮೂರ್ನಾಲ್ಕು ವರ್ಷಗಳಿಗೂ ಮುಂಚೆ ಸಂಗ್ರಹವಾದ ನೀರನ್ನು ಸ್ನಾನ,ಶೌಚ,ಬಟ್ಟೆ,ಪಾತ್ರೆ ತೊಳೆಯಲು ಬಳಸುತ್ತಿದ್ದೆವು. ಈಗ ಮೂರು ವರ್ಷದಿಂದ ಕುಡಿಯಲು ಮತ್ತು ಅಡುಗೆ ಮಾಡಲು ಮಳೆ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಮಳೆ ನೀರನ್ನು ಉಪಯೋಗಿಸುವುದರಿಂದ ಮೂಳೆ ಮತ್ತು ಕೀಲು ನೋವಿಗೆ ಸಂಬಂಧಿಸಿದ ಕಾಯಿಲೆಗಳು ದೂರವಾಗಿವೆ. ಸತತವಾಗಿ ಮಳೆಯ ನೀರನ್ನು ಕುಡಿಯುವುದರಿಂದ ಮಂಡಿ, ಮೂಳೆ, ಕೀಲು ನೋವು ಬರುವುದಿಲ್ಲ. ಅವು ಬಂದಿದ್ದರೂ ನಿವಾರಣೆಯಾಗುತ್ತವೆ ಎನ್ನುತ್ತಾರೆ ಪರಶಿವಮೂತರ್ಿ.
ಕುವೆಂಪುನಗರದ ಪರಮಹಂಸ ರಸ್ತೆಯಲ್ಲಿ ಮೂತರ್ಿಯವರ 15 ಚದರ ಅಡಿ ಮನೆ ಇದೆ. ಅದರಲ್ಲಿ 5 ಅಡಿ ಬಿಟ್ಟು, ಉಳಿದ 10 ಚದರ ಅಡಿ ಜಾಗದಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ಸೆ.ಮೀ.ಮಳೆ ಬಂದರೆ ಒಂದು ಸಾವಿರ ಲೀಟರ್ ನೀರು ಸಂಗ್ರಹವಾಗುತ್ತದೆ. ಹತ್ತು ಸಾವಿರ ಲೀಟರ್ ಸಾಮಥ್ರ್ಯ ಇರುವ ನೀರು ಸಂಗ್ರಹಣ ತೊಟ್ಟಿಯನ್ನು ನಿಮರ್ಾಣಮಾಡಿಕೊಳ್ಳಲಾಗಿದೆ. ಈ ತೊಟ್ಟಿ ಸಂಪೂರ್ಣ ತುಂಬಿದರೆ ಎರಡು ವರ್ಷ ಮಳೆ ಕೈಕೊಟ್ಟರು ಅವರಿಗೆ ಚಿಂತೆಇಲ್ಲ. ನಾಲ್ಕು ಮಂದಿ ಇರುವ ಸಂಸಾರಕ್ಕೆ ಎರಡು ವರ್ಷ ಕುಡಿಯಲು ಮತ್ತು ಅಡುಗೆ ಮಾಡಲು ನೀರು ಸಾಕಾಗುತ್ತದೆ.
ಕಾಟರ್್ ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿರುವ ಸದಾಶಿವಮೂತರ್ಿ ಅವರು, ಹತ್ತು ಚದರ ಅಡಿ ತಾರಸಿಯಲ್ಲಿ ಬಿದ್ದ ಮಳೆಯ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ತಾರಸಿಯ ಹೊರಗೆ ಮನೆಯ ಗೋಡೆಯ ಸುತ್ತಲೂ ಪೈಪ್ ಹಾಕಿದ್ದು ನಾಲ್ಕು ಕಡೆಯಿಂದ ಅಲ್ಲಿಗೆ ಮಳೆಯ ನೀರು ಹೋಗುವಂತೆ ವ್ಯವಸ್ಥೆಮಾಡಲಾಗಿದೆ. ಈ ನಾಲ್ಕು ದಿಕ್ಕಿನಿಂದಲ್ಲೂ ಬಂದ ಮಳೆ ನೀರು ಒಂದೆಡೆ ಸಂಗ್ರಹವಾಗಿ 250 ಲೀಟರ್ ಹಿಡಿಯುವ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಬೀಳುತ್ತದೆ. ಅದರ ತಳದಲ್ಲಿ ಒಂದು ನಲ್ಲಿ ಅಳವಡಿಸಲಾಗಿದೆ. ಮತ್ತೆ ಒಂದುವರೆ ಅಡಿ ಮೇಲೆ ಮತ್ತೊಂದು ನಲ್ಲಿ ಹಾಕಲಾಗಿದೆ. ತಳದಲ್ಲಿ ಕಲ್ಮಶ ನೀರು ಶೇಖರಣೆಯಾಗಿ ಮೇಲೆ ತಿಳಿಯಾದ ನೀರು ಬರುತ್ತದೆ. ಮತ್ತೆ ಅಲ್ಲಿಂದ ಮತ್ತೊಂದು 250 ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ಡಬ್ಬವನ್ನು ಇಟ್ಟು ಅಲ್ಲಿಗೆ ಆ ತಿಳಿಯಾದ ಮಳೆಯ ನೀರನ್ನು ಬಿಡಲಾಗುತ್ತದೆ. ಅಲ್ಲಿ ಮೂರು ಹಂತದ ನೀರು ಸೋಸುವಿಕೆ ಕೆಲಸ ನಡೆಯುತ್ತದೆ. ಮೊದಲು ನಾಲ್ಕು ಲೇಯರ್ ಸ್ಪಾಂಜ್ ನಂತರ ಅದರ ಕೆಳಗೆ ನೈಲಾನ್ ಪರದೆಯಲ್ಲಿ ಮರಳು ತುಂಬಿಡಲಾಗುತ್ತದೆ .ನಂತರ ಅದರ ಕೆಳಗೆ ದಪ್ಪ ಜಲ್ಲಿ ಹಾಕಲಾಗಿದೆ. ಇಲ್ಲಿಂದ ಮೂರು ಹಂತಗಳಲ್ಲಿ ಸಂಸ್ಕರಣೆಯಾದ ನೀರು ತೊಟ್ಟಿಗೆ ಬಂದು ಬೀಳುತ್ತದೆ. ಇದು ಪರಿಶುದ್ಧವಾದ ಕುಡಿಯುವ ನೀರು. ಇದನ್ನು ಕಾಯಿಸಿ,ಕುದಿಸಿ ಕುಡಿಯುವುದರಿಂದ ಮತ್ತು ಅಡುಗೆಗೆ ಬಳಸುವುದರಿಂದ ಆರೋಗ್ಯದಲ್ಲಿ ಅನೇಕ ಸುಧಾರಣೆಗಳನ್ನು ಅವರು ಕಂಡು ಕೊಂಡಿದ್ದಾರೆ.
ಪರಿಶುದ್ಧ, ಪೌಷ್ಠಿಕ ನೀರು :
ಮಳೆಯ ಹನಿಗಳು ಆಕಾಶದಿಂದ ಭೂಮಿಗೆ ಬೀಳುವ ಹಂತದಲ್ಲಿ ಅನೇಕ ಅನಿಲಗಳನ್ನು ಹೀರಿಕೊಂಡು ಬರುವುದರಿಂದ ದೇಹಕ್ಕೆ ಬೇಕಾದ ನಾನಾ ಮಿನರಲ್ಗಳು ನಮಗೆ ಸುಲಭವಾಗಿ ಸಿಕ್ಕಂತಾಗುತ್ತದೆ. ಮಳೆಯ ನೀರಿನಲ್ಲಿ ಬೆಳೆಯೂ ಬೇಗ ಬೇಯುತ್ತದೆ. ಅಡಿಗೆಯೂ ಬೇಗ ಆಗಿ ಇಂಧನವೂ ಉಳಿಯುತ್ತದೆ.
ಕಾವೇರಿ,ಕಬಿನಿ ನೀರು ಮನೆಗೆ ಬಂದು ಸೇರುವವರೆಗೆ, ಅವು ಹರಿಯುವ ನದಿ ಪಾತ್ರದಲ್ಲಿ ಕಾಖರ್ಾನೆ ತ್ಯಾಜ್ಯಗಳು, ಮಾನವನ ಮಲಮೂತ್ರ ಎಲ್ಲಾ ಸೇರಿಕೊಂಡು ಬರುತ್ತದೆ. ಆ ನೀರನ್ನು ಎಷ್ಟೆ ಸಂಸ್ಕರಣೆ ಮಾಡಿ ಕೊಟ್ಟರು ಅದು ಪರಿಶುದ್ಧವಾದ ನೀರಲ್ಲ. ನಲ್ಲಿಯಲ್ಲಿ ಬರುವ ನೀರು ಹಿಡಿದುಕೊಂಡರೆ ಬಕೆಟ್ನಲ್ಲಿ ಕೆಲವು ಸಲ ಮಣ್ಣು ಮತ್ತು ಕಲ್ಮಶ ಬಂದಿರುವುದನ್ನು ಕಂಡಿದ್ದೇವೆ. ಈ ನೀರನ್ನು ಶುದ್ಧ ಮಾಡಿಕೊಳ್ಳಲು ಹಣವುಳ್ಳವರು ಅಕ್ವಾಗಾಡರ್್ ಬಳಸುತ್ತಾರೆ.ಇಷ್ಟೆಲ್ಲಾ ಮಾಡಿದರೂ ಶುದ್ಧ ನೀರು ಕುಡಿಯುವ ಬಗ್ಗೆ ಖಾತರಿ ಇಲ್ಲ. ಆದರೆ ಮಳೆಯ ನೀರಿನಲ್ಲಿ ಇಂತಹ ಸಮಸ್ಯೆಗಳೆ ಇಲ್ಲ ನೇರವಾಗಿ ಅಕಾಶದಿಂದ ಬಿದ್ದ ನೀರನ್ನು ಸಂಗ್ರಹಿಸಿಟ್ಟು ಬಳಸಿದರೆ ಈ ನೀರಿನ ಪರಿಶುದ್ಧತೆಯ ಬಗ್ಗೆ ಯಾವುದೆ ಖಾತರಿ ಬೇಕಾಗಿಲ್ಲ ಎನ್ನುತ್ತಾರೆ ಸದಾಶಿವಮೂತರ್ಿ.
ತಾವು ಸಂಗ್ರಹಿಸಿಕೊಂಡಿರುವ ಮಳೆಯ ನೀರು ಕನ್ನಡಿಯಂತೆ ಪಳಪಳನೆ ಹೊಳೆಯುವುದನ್ನು ತೋರಿಸುತ್ತಾರೆ.
ಹಿಮಾಚಲ ಪ್ರದೇಶದ ಶಿಮ್ಲಾ ನಗರವು ನೀರಿನ ಕೊರತೆ ಮತ್ತು ಅಶುದ್ಧ ಕುಡಿಯುವ ನೀರಿನ ಸರಬರಾಜಿನಿಂದ ಕಾಮಾಲೆ ರೋಗಕ್ಕೆ ತುತ್ತಾಗಿದ್ದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಪುಣೆಯಲ್ಲಿ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಪೂರೈಸಲು ಮಹಾರಾಷ್ಟ್ರ ಸಕರ್ಾರ ನೀರಿನ ಟ್ಯಾಂಕರ್ಗಳನ್ನು ಅವಲಂಭಿಸಿತ್ತು. 2016 ರ ವರದಿಯ ಪ್ರಕಾರ ಜಗತ್ತಿನಲ್ಲಿ ಅಶಾಂತಿ ಉಂಟುಮಾಡಬಹುದಾದ ಮುಖ್ಯ ಹತ್ತು ಸಮಸ್ಯೆಗಳಲ್ಲಿ ನೀರಿನ ಕೊರತೆ ಮೂರನೆಯ ಸ್ಥಾನ ಪಡೆದುಕೊಂಡಿದೆ.
ಈಗಾಗಲೆ ನಗರಕ್ಕೆ ನೀರು ಪೂರೈಸುವ ಮುಖ್ಯ ಮೂಲವಾದ ಕೆಆರ್ಎಸ್ ಜಲಾಶಯದಲ್ಲಿ ದಶಕದಲ್ಲೆ ಮೂರನೇ ಬಾರಿಗೆ ಕಡಿಮೆ ನೀರು ಸಂಗ್ರಹಣೆಗೊಂಡಿದೆ. 2010 ರಲ್ಲಿ ಇದೇ ಸಮಯದಲ್ಲಿ ಜಲಾಶಯದ ನೀರಿನ ಮಟ್ಟ 89.65 ಅಡಿ ಇದ್ದರೆ 2012 ರಲ್ಲಿ ಕನಿಷ್ಟ ಅಂದರೆ 75.09 ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ ಜಲಾಶಯದಲ್ಲಿ 98.63 ಅಡಿ ನೀರು ಸಂಗ್ರಹಣೆಯಾಗಿದ್ದ ಅದರಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ತಮಿಳು ನಾಡಿಗೆ ಪ್ರತಿ ವರ್ಷ ಬಿಡಬೇಕಾದ 192 ಟಿಎಂಸಿ ಅಡಿ ನೀರು ಸೇರಿದೆ.
ನೀರಿಗೆ ಪಯರ್ಾಯ ಇಲ್ಲ.ನೀರು ಜೀವನಾವಶ್ಯಕ ಮತ್ತು ಜೀವಿಗಳ ಬೆಸುಗೆಯ ಕೊಂಡಿ. ಬದುಕುವ ಉದ್ದೇಶಕ್ಕಾಗಿ ನೀರು ಸರ್ವರಿಗೂ ಉಚಿತವಾಗಿ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ನಗರದ ಜನತೆ ಚಿಂತಿಸಬೇಕು. ಪಯರ್ಾಯ ಮಾರ್ಗಗಳನ್ನು ತಾವೇ ಕಂಡುಕೊಳ್ಳಬೇಕು. ಈಗಾಗಲೇ ನಗರಪಾಲಿಕೆ ಹೊಸದಾಗಿ ನಿಮರ್ಾಣವಾಗುವ ಮನೆಗಳಿಗೆ ಕಡ್ಡಾಯವಾಗಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಳ್ಳಲು ಕಾನೂನು ಜಾರಿ ಮಾಡಿದ್ದರು ಅದು ಕಟ್ಟು ನಿಟ್ಟಾಗಿ ಜಾರಿಯಾಗಬೇಕು. ಆಗಾದಾಗ ಕುಡಿಯು ನೀರಿಗೆ ಪರಿತಪಿಸುವುದು ತಪ್ಪುತ್ತದೆ.
ಮಾದರಿಯಾದರು ಸದಾ"ಶಿವ"
ಮೈಸೂರು ನಗರ ಪಾಲಿಕೆ ಸತತವಾಗಿ ಎರಡನೇ ಬಾರಿಯೂ ದೇಶದ ಸ್ವಚ್ಛನಗರಿ ಎಂಬ ಹಿರಿಮೆಗೆ ಭಾಜನವಾಗಿದೆ. ಆದರೂ ನಗರದ ರಸ್ತೆಗಳು, ವಿವಿಧ ಬಡಾವಣೆಗಳ ಉದ್ಯಾನವನಗಳಲ್ಲಿ ಬಿದಿರುವ ಕಸದ ರಾಶಿ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.ಮೈಸೂರು ಮಹಾ ನಗರಪಾಲಿಕೆ ಮನೆ ಮನೆಯಲ್ಲಿ ಕಸ ಸಂಗ್ರಹಣೆ ಆರಂಭಿಸುವ ಮುನ್ನವೇ, ಸದಾಶಿವಮೂತರ್ಿಯವರು ತಮ್ಮ ಸ್ನೇಹಿತರಾದ ಟಿ.ಕೆ.ಬಡಾವಣೆಯ ನಿವೃತ್ತ ಎಂಜಿನಿಯರ್ ಚಂದ್ರಣ್ಣ ಅವರೊಂದಿಗೆ ಸೇರಿಕೊಂಡು ತೊಂಭತ್ತರ ದಶಕದಲ್ಲೆ ಸತತವಾಗಿ ಹತ್ತು ವರ್ಷ ತ್ಯಾಜ್ಯ ನಿರ್ವಹಣೆ ಮಾಡಿದ್ದಾರೆ.
ಕುವೆಂಪುನಗರ ಮತ್ತು ಟಿಕೆ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯಗಳನ್ನು ಸಂಗ್ರಹಿಸಲು ತಿಳಿವಳಿಕೆ ನೀಡಿ ಯಶಸ್ವಿಯಾಗಿದ್ದಾರೆ.ಇದಕ್ಕಾ ಇಬ್ಬರು ನೌಕರರನ್ನು ನೇಮಿಸಿಕೊಂಡು ಅವರಿಗೆ ತಳ್ಳುವ ಗಾಡಿಯನ್ನು ಖರೀದಿಸಿ ಕೊಟ್ಟು ಮನೆ ಮನೆಯ ಕಸ ಸಂಗ್ರಹಣೆ ಮಾಡಲಾಗುತ್ತಿತ್ತು. ಇವರಿಗೆ ಸಂಬಳ ನೀಡಲು ಪ್ರತಿ ಮನೆಯವರಿಂದ ಹತ್ತು ರೂಪಾಯಿ ದೇಣಿಗೆ ಪಡೆಯಲಾಗುತ್ತಿತ್ತು.
ಅದರಲ್ಲಿ ಕಸ ಸಂಗ್ರಹಿಸುವವರಿಗೆ ಚಪ್ಪಲಿ, ಕೈ ಗ್ಲೌಸು,ಸಮವಸ್ತ್ರ ಜೊತೆಗೆ ಸಂಬಳ ಕೊಟ್ಟು ಉಳಿದ ಹಣದಲ್ಲಿ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಿದ್ದಾರೆ.ಮೂರು ವರ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಹೊಂಗೆ, ಬೇವು, ಸಂಪಿಗೆ ಗಿಡಗಳನ್ನು ನೆಟ್ಟರು. ಅದರಲ್ಲಿ ಇಂದು ಇವರು ನೆಟ್ಟ ಹೊಂಗೆ ಗಿಡಗಳು ಟಿ.ಕೆ.ಬಡಾವಣೆ ಮತ್ತು ಕುವೆಂಪುನಗರದ ಮುಖ್ಯ ರಸ್ತೆಗಳಲ್ಲಿ ತಂಪಾದ ನೆರಳು ನೀಡುತ್ತಾ, ಅನೇಕ ಪಕ್ಷಿಗಳಿಗೆ ಆಶ್ರಯ ತಾಣವಾಗಿರುವುದನ್ನು ಕಾಣಬಹುದು.
ನಗರದಲ್ಲಿ ಪ್ರತಿನಿತ್ಯ ಸುಮಾರು 400 ಟನ್ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಜೆಪಿ ನಗರಕ್ಕೆ ಹೊಂದಿಕೊಂಡತೆ ಇರುವ ಎಕ್ಸಲ್ ಪ್ಲಾಂಟ್ನಲ್ಲಿ ತ್ಯಾಜನಿರ್ವಹಣೆ ಘಟಕ ಇದ್ದು ಅದರ ಸಾಮಾಥ್ರ್ಯ 200 ಟನ್ ಮಾತ್ರ. ಉಳಿದದ್ದು ಅಲ್ಲೆ ಕಸದ ರಾಶಿಯಾಗಿ ಬಿದ್ದು ದುನರ್ಾತ ಬೀರುತ್ತದೆ. ಕಸ ನಿರ್ವಹಣೆಯೆ ನಗರಗಳ ಅತಿ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೂ ಕೂಡ ಪರಶಿವಮೂತರ್ಿ ಪರಿಹಾರ ಕಂಡುಕೊಂಡಿದ್ದಾರೆ.
ಮನೆಯ ಆವರಣದಲ್ಲೆ 6 ಅಡಿ ಉದ್ದ, 2 ಅಡಿ ಅಗಲ ಮತ್ತು ಒಂದೂವರೆ ಅಡಿ ಆಳ ಇರುವ ಗುಂಡಿ ಮಾಡಿಕೊಂಡಿದ್ದು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅಲ್ಲಿಗೆ ಹಾಕಿ ಉತ್ಕೃಷ್ಟ ಎರೆಹುಳು ಗೊಬ್ಬರವಾಗಿ ಪರಿವತರ್ಿಸಿಕೊಳ್ಳುತ್ತಿದ್ದಾರೆ.
ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಭಾಗವಹಿಸುವಿಕೆ ಮತ್ತು ಸ್ವಾವಲಂಬನೆ ಇಲ್ಲದಿದ್ದರೆ ನಗರಗಳು ನರಕ ಕೂಪಗಳಾಗುತ್ತವೆ ಎನ್ನುವ ಇವರ ಮಾದರಿ ಮಾತ್ರ ನಗರಗಳ ಸಮಸ್ಯೆಗಳಿಗೆ ಬೆಳಕಾಗಬಲ್ಲದು. ಬನ್ನಿ ಇನ್ನೇಕೆ ತಡ ನಾವೂ ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಕೈ ಜೋಡಿಸೋಣ. ನಮ್ಮ ನಗರವನ್ನು ಮತ್ತಷ್ಟೂ ಸುಂದರಗೊಳಿಸೋಣ.
ಮೂತರ್ಿಗಳ ಕೃಷಿ ಪ್ರೀತಿ
ಮೂಲತಃ ಮೈಸೂರಿನವರೆ ಆದ ಎಸ್.ವೈ.ಸದಾಶಿವಮೂತರ್ಿ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ದಾವಣಗೆರೆಯಲ್ಲಿ ಬಿಇ ಮಾಡಿ ರಾಜ್ಯದ ನಾನಾ ಭಾಗಗಳಲ್ಲಿ ಲೋಕೊಪಯೋಗಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯಾಗಿ ಇಪ್ಪತ್ತು ವರ್ಷವಾದರೂ ರಸ್ತೆ, ತ್ಯಾಜ್ಯ ನಿರ್ವಹಣೆ ಮತ್ತಿತರ ಸಮಸ್ಯೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಲಹೆ ಮಾರ್ಗದರ್ಶನ ಮಾಡುತ್ತಾರೆ. ವಿವಿಧ ಇಲಾಖೆಗಳಿಗೆ ಸಮಸ್ಯೆ ಕುರಿತು ಪತ್ರ ಬರೆಯುತ್ತಾರೆ. ಪಾಲಿಕೆಯ ಅಧಿಕಾರಿಗಳನ್ನು ಕಂಡು ಚಚರ್ೆಮಾಡುತ್ತಾರೆ.ಮಡದಿ ಚಂದ್ರಲೇಖಾ,ಮಗಳು ಲೀಲಾ ಮತ್ತು ಅಳಿಯ ಸಂಗಮೇಶ್ (ಸಹಾಯಕ ಕಾರ್ಯಪಾಲಕ ಎಂಜಿನಿಯರ್,ಲೋಕೊಪಯೋಗಿ ಇಲಾಖೆ) ಜೊತೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇಡೀ ಕುಟುಂಬ ಮಳೆಯ ನೀರನ್ನು ಸಂಗ್ರಹಿಸಿ ಬಳಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯಿಂದ ದೂರವಾಗಿದೆ. ಮನೆಯಲ್ಲೇ ತ್ಯಾಜ್ಯ ನಿರ್ವಹಣೆ ತೊಟ್ಟಿ ನಿಮರ್ಾಣ ಮಾಡಿಕೊಳ್ಳುವ ಮೂಲಕ ಶೂನ್ಯ ಕಸ ಉತ್ಪಾದನೆ ಮನೆ ಎಂಬ ಕೀತರ್ಿಗೂ ಭಾಜನವಾಗಿದೆ.
ತಾವೆ ಉತ್ಪಾದಿಸುವ ಎರೆ ಗೊಬ್ಬರ ಬಳಸಿಕೊಂಡು ಮನೆಯ ಆವರಣದಲ್ಲೆ ಮನೆಗೆ ಬೇಕಾದ ತರಕಾರಿ. ಸೊಪ್ಪು ಬೆಳೆದುಕೊಳ್ಳುತ್ತಾರೆ. ಒಂದು ತೆಂಗಿನ ಮರ,ಒಂದು ದಾಳಿಂಬೆ, ಎರಡು ಕರಿಬೇವು ಗಿಡಗಳನ್ನು ಬೆಳೆಸಿಕೊಂಡಿರುವ ಇವರು ಸಂಪೂರ್ಣ ಸಾವಯವ ಆಹಾರ ಉತ್ಪನ್ನಗಳನ್ನೆ ಬಳಸುತ್ತಾರೆ.
ಆಗ ನಾವು ರಸ್ತೆ ಬದಿಯಲ್ಲಿ ಗಿಡ ನೆಟ್ಟು ಬೇಸಿಗೆಯಲ್ಲಿ ನೀರು ಹಾಕುತ್ತಿದ್ದರೆ ಎಲ್ಲರೂ ನಗುತ್ತಿದ್ದರು. ಈಗ ಆ ಗಿಡಗಳೆ ಎಷ್ಟೊಂದು ನೆರಳು ಮತ್ತು ಆಮ್ಲಜನಕ ನೀಡುತ್ತಿವೆ ನೋಡಿ. ಸಂಪಿಗೆ ಮತ್ತು ಬೇವು ಸಸಿಗಳನ್ನು ದನ, ಆಡು ಕುರಿ ತಿಂದುಕೊಂಡವು ,ಹೊಂಗೆ ಹೆಮ್ಮರವಾಗಿ ಬೆಳೆದುಕೊಂಡಿತು ಎನ್ನುತ್ತಾರೆ ಪರಶಿವಮೂತರ್ಿ.
ಬಸವ ತತ್ವದ ಆರಾಧಕರು, ಪರಿಪಾಲಕರು ಆಗಿರುವ ಮೂತರ್ಿಯವರು ದೂರದ ಕೆನಡಾ ದೇಶದಲ್ಲಿರುವ ಭಾವ ಮೈದುನ ಸುಂದರೇಶ್ ಅವರ ಜೊತೆ ಸೇರಿಕೊಂಡು "ಕುಟುಂಬ ಸೇವಾ ಟ್ರಸ್ಟ್" ಮಾಡಿಕೊಂಡು ಬಡ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿದ್ದಾರೆ. ನಮ್ಮ ಕಾಯಕ ಆಯಿತು ಈಗ ದಾಸೋಹ ಮಾಡಬೇಕಲ್ಲ. ಅದಕ್ಕೆ ಕೈಲಾದ ಸಹಾಯ ಮಾಡಬೇಕು ಎನ್ನುತ್ತಾರೆ. ವಿದ್ಯಾಭ್ಯಾಸ ಮಾಡಿದ ನಂತರ ಸಾವಯವ ಕೃಷಿಕರಾಗುತ್ತೇವೆ ಎಂಬ ವಿದ್ಯಾಥರ್ಿಗಳನ್ನೆ ಹುಡುಕಿ ನೆರವು ನೀಡುತ್ತಿರುವುದು ಇವರ ಕೃಷಿ ಪ್ರೀತಿಗೆ ಸಾಕ್ಷಿಯಾಗಿದೆ.
ಎಲ್ಲರು ಇಂಜಿನಿಯರ್, ವೈದ್ಯರೆ ಆದರೆ ಆಹಾರ ಬೆಳೆದು ಹಸಿವು ನೀಗುವವರು ಯಾರು. ಅದಕ್ಕಾಗಿಯೇ ಕೃಷಿಯ ಬಗ್ಗೆ ಒಲವಿರುವ ವಿದ್ಯಾಥರ್ಿಗಳಿಗೆ ನೆರವು ನೀಡುತ್ತಿದ್ದೇವೆ ಎನ್ನುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ಪಡಗೂರು ಅಡವಿ ಮಠ, ಚಾಮರಾಜನಗರದ ಮರಿಯಾಲ ಮಠ ಮತ್ತು ಹುಣುಸೂರು ತಾಲೂಕಿನ ಗಾವಡಗೆರೆ ಮಠದವರು ನಡೆಸುವ ಶಾಲೆಯ ತಲಾ ಮೂವರು ವಿದ್ಯಾಥರ್ಿಗಳ ವಾಷರ್ಿಕ ವೆಚ್ಚವನ್ನು ಭರಿಸುತ್ತಾರೆ.ಅಲ್ಲದೆ ಆ ಶಾಲೆಗಳಲ್ಲಿ ಪ್ರತಿ ವರ್ಷ ಸಾವಯವ ಕೃಷಿ ಮತ್ತು ಆರೋಗ್ಯದ ಬಗ್ಗೆ ವಿದ್ಯಾಥರ್ಿಗಳಲ್ಲಿ ಅರಿವು ಮೂಡಿಸಲು ಉಪನ್ಯಾಸ ಕಾರ್ಯಕ್ರಗಳನ್ನು ಆಯೋಜಿಸುತ್ತಾರೆ.
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ಭಾನುವಾರ, ಆಗಸ್ಟ್ 28, 2016
ಗುಂಡ್ಲುಪೇಟೆ : ದ್ರಾಕ್ಷಿ,ದಾಳಿಂಬೆ ಬೆಳೆದು
ಸೈ ಎನಿಸಿಕೊಂಡ ಸಾವಯವ ಕೃಷಿಕ
ದೇಶ ವಿದೇಶ ಸುತ್ತಿಬಂದರೂ ನಮ್ಮೂರೆ ನಮಗೆ ಮೇಲು ಎಂದ ಶೇಷಕುಮಾರ್
ಗುಂಡ್ಲುಪೇಟೆ : ಜರ್ಮನಿ, ಇಸ್ರೇಲ್ ಸೇರಿದಂತೆ ಅನೇಕ ದೇಶ ವಿದೇಶಗಳನ್ನು ಸುತ್ತಿಬಂದೆ.ನಮ್ಮ ದೇಶದ ಬಹುತೇಕ ರಾಜ್ಯಗಳನ್ನು ಕಂಡು ಬಂದೆ ಆದರೆ ಕೋಟೆಕೆರೆಯ ಕರ್ಮಭೂಮಿಯಲ್ಲಿ ಸಿಗುತ್ತಿರುವ ನೆಮ್ಮದಿಯನ್ನು ನಾನು ಬೇರೆಲ್ಲೂ ಕಾಣಲಿಲ್ಲ.ಹೀಗೆಂದವರು ಸಾವಯವ ಕೃಷಿಕ ಶೇಷಕುಮಾರ್.ಗುಂಡ್ಲುಪೇಟೆ ತಾಲೂಕು ಬೇಗೂರಿನಲ್ಲಿರುವ ಜೂನಿಯರ್ ಕಾಲೇಜಿನ ಎದುರು ಸರಗೂರು ಕಡೆಗೆ ಹೋಗುವ ರಸ್ತೆಯಲ್ಲಿ ಸರಿಯಾಗಿ ನಾಲ್ಕು ಕಿ.ಮೀ.ದೂರ ಹೋದರೆ ಬಲಗಡೆ ಕಾಣುವ ದಾಳಿಂಬೆವನದ ಮಧ್ಯ ಇರುವ ಗಾಳಿಯಂತ್ರವೊಂದು (ವಿಂಡ್ ಮಿಲ್) ನೋಡುಗರ ಗಮನಸೆಳೆಯುತ್ತದೆ. ಅದೇ ಕೋಟೆಕೆರೆ ಫಾರಂ. ತೋಟದ ಒಳಗೆ ಹೋಗುತ್ತಿದಂತೆ ಬೆಂಗಳೂರು ಬ್ಲೂ ದ್ರಾಕ್ಷಿ, ಹತ್ತಾರು ತಳಿಯ ಹಣ್ಣಿನ ಗಿಡಗಳು,ನುಗ್ಗೆ,ಗುಲಾಬಿ,ದಾಸವಾಳ,ಅರಿಶಿನ, ಹತ್ತಿ,ಈರುಳ್ಳಿ,ತರಕಾರಿ,ಸೊಪ್ಪು ಹೀಗೆ ವಿವಿದ ಬೆಳೆಗಳು ಎದುರಾಗುತ್ತವೆ. ಸಮಗ್ರ ಸುಸ್ಥಿರ ಬೆಳೆ ಪದ್ಧತಿ ಅಳವಡಿಸಿಕೊಂಡು ಮೂರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಸಾವಯವ ಸಸ್ಯಕಾಶಿ ಅಚ್ಚರಿ ಮೂಡಿಸುತ್ತದೆ.
ಮೂರು ಎಕರೆ ಜಮೀನಿಗೆ ಇರುವುದು ಒಂದೆ ಬೋರು. ಅದರಲ್ಲಿ ಬರುವುದು ಕೇವಲ ಒಂದು ಇಂಚು ನೀರು. ಆ ಕಡಿಮೆ ನೀರನ್ನೆ ಬಳಸಿಕೊಂಡು ಶೇಷಕುಮಾರ್ ಮಾಡಿರುವ ಸಾಧನೆ ಬರದನಾಡಿನ ಯುವಕರಿಗೆ ಮಾದರಿಯಾಗಿದೆ.ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಹೊರಟಿರುವ ಇವರು ವಿದ್ಯುತ್ ಉತ್ಪಾದಿಸಲು ಜಮೀನಿನಲ್ಲಿ ಸುಮಾರು 7.5 ಕಿ.ಲೋ ವ್ಯಾಟ್ ಜನರೇಟರ್ಗೆ ಬಳಕೆಗೆ ಬರುವ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರ (ವಿಂಡ್ಮಿಲ್) ಮತ್ತು ಸೋಲಾರ್ ಎರಡನ್ನು ಸೇರಿಸಿ(ಹೈಬ್ರಿಡ್) ವಿದ್ಯುತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಇವರ ಮನೆಯಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳು ದೀಪ ಬೆಳಗುತ್ತದೆ. ಅಷ್ಟರ ಮಟ್ಟಿಗೆ ಅವರು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ.
ತಮ್ಮ ತೋಟದ ನಿರ್ವಹಣೆಗೆ ಅತ್ಯಂತ ಸರಳ ಸುಲಭ ಉಪಾಯಗಳನ್ನು ಕಂಡುಕೊಂಡಿರುವ ಇವರು ಗಿಡಗಳಿಗೆ ಜೀವಾಮೃತ ಕೊಡುತ್ತಾರೆ.ಅಲ್ಲದೆ ಕಾಂಪೋಸ್ಟ್ ಗೊಬ್ಬರ ಮತ್ತು ಗಿಡಗಳನ್ನು ಬಾಧಿಸುವ ರೋಗಗಳಿಗೆ ತಾವೇ ಕಂಡುಕೊಂಡ ದ್ರವರೂಪದ ರಸಸಾರಗಳನ್ನು ಸಿಂಪಡಿಸುತ್ತಾರೆ. ಹೊರಗಿನಿಂದ ಯಾವುದು ರಾಸಾಯನಿಕ ಗೊಬ್ಬರ ,ಕ್ರಿಮಿನಾಶಕ ತರುವುದು ಇಲ್ಲಿ ಸಂಪೂರ್ಣ ನಿಷಿದ್ಧ. ಇವರ ತೋಟದ ಹಣ್ಣುಗಳ ರುಚಿ ಮತ್ತು ತರಕಾರಿ,ಸೊಪ್ಪುಗಳ ರುಚಿಗೆ ಮಾರು ಹೋಗಿರುವ ಗ್ರಾಹಕರು ತೋಟದ ಬಳಿಯೆ ಬಂದು ಖರೀದಿಸುತ್ತಾರೆ. ಹೆಚ್ಚಾಗಿ ಕೇರಳದ ಗ್ರಾಹಕರು ಇವರ ಉತ್ಪನ್ನಗಳಿಗೆ ನೇರ ಖರೀದಿದಾರರಾಗಿದ್ದಾರೆ.
ತಾವು ಬೆಳೆದ ತರಕಾರಿ, ಸೊಪ್ಪು,ಹಣ್ಣುಗಳನ್ನು ಮೈಸೂರಿನ ನೇಸರ,ನಿಸರ್ಗ ಸೇರಿದಂತೆ ಬಹುತೇಕ ಎಲ್ಲಾ ಸಾವಯವ ಉತ್ಪನ್ನ ಮಳಿಗೆಗಳಿಗೂ ತಂದುಕೊಡುವ ಶೇಷಕುಮಾರ್ ತಮ್ಮ ಉತ್ಪನ್ನಗಳಿಗೆ ಎಲ್ಲಾ ಕಡೆ ಬಹು ಬೇಡಿಕೆ ಇರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ.
ಎರಡು ನಾಟಿ ಹಸುಗಳಿದ್ದರೆ ಹತ್ತು ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಿ ಲಾಭಗಳಿಸಬಹುದು ಎನ್ನುವ ಇವರು ನಮ್ಮ ಜನರಲ್ಲಿರುವ ಸೋಮಾರಿತನ ಮತ್ತು ಹೊಸದನ್ನು ಕಲಿಯಬೇಕೆಂಬ ಹಂಬಲ ಇಲ್ಲದಿರುವುದು, ಪ್ರಯೋಗಶೀಲ ಗುಣ ಇಲ್ಲದಿರುವುದೆ ದೇಶದ ದಾರಿದ್ರ್ಯ ಮತ್ತು ಬಡತನಕ್ಕೆ ಕಾರಣವಾಗಿದೆ ಎನ್ನುತ್ತಾರೆ.
2012 ರಿಂದ ಈಚೆಗೆ ಅಂದರೆ ನಾಲ್ಕೇ ವರ್ಷದಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಕಟ್ಟಿದ ತೋಟದಲ್ಲಿ 500 ದಾಳಿಂಬೆ,ಅನುಪಮ ತಳಿಯ 200 ನುಗ್ಗೆ, ಹನುಮಫಲ, ವೈಟ್ ಆಫೆಲ್,ಮೂಸಂಬಿ,ನಿಂಬೆ,ಸೀಬೆ,ದ್ರಾಕ್ಷಿ ಸೇರಿದಂತೆ ಅನೇಕ ಏಕದಳ,ದ್ವಿದಳ ಬೆಳೆಗಳು,ತರಕಾರಿ, ಸೊಪ್ಪು ಸಮೃದ್ಧವಾಗಿ ಬೆಳೆದು ನೋಡುವ ಕಂಗಳಿಗೆ ಆನಂದವನ್ನುಂಟುಮಾಡುತ್ತಿದೆ.
ಹಿತ್ತಲಗಿಡ ಮದ್ದಲ್ಲ :
ತೋಟಗಾರಿಕೆಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಇದೆ. ಹಣ್ಣಿನ ಗಿಡಗಳನ್ನು ನಾವು ನಾಲ್ಕು ವರ್ಷ ಮಕ್ಕಳು ಸಾಕಿದಂತೆ ನೋಡಿಕೊಂಡರೆ ಮುಂದಿನ ಮೂವತ್ತೈದು ನಲವತ್ತು ವರ್ಷ ಅವು ನಮ್ಮನ್ನು ಸಾಕುತ್ತವೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಮಳೆ ಕಡಿಮೆ. ಅಂತರ್ಜಲ ಬತ್ತಿ ಹೋಗಿದೆ.ಈಗಿದ್ದರೂ ರಸ್ತೆ ಬದಿಯಲ್ಲೆ ಜನರ ಕಣ್ಣಿಗೆ ಬೀಳುವಂತೆ ನಾನು ಇಂತಹದೊಂದು ತೋಟ ಮಾಡಿದ್ದರು, ಸ್ಥಳೀಯ ಜನನಾಯಕರಾಗಲಿ, ಮುಖಂಡರಾಗಲಿ, ರೈತರಾಗಲಿ ಕುತೂಹಲಕ್ಕಾದರೂ ಬಂದು ಇಲ್ಲಿ ನೋಡುವುದಿಲ್ಲ. ಅದೆ ನನ್ನಲ್ಲಿ ಕೆಲವು ಸಲ ಬೇಸರ ಮೂಡಿಸುತ್ತದೆ. ಉತ್ತರ ಕನರ್ಾಟಕದಿಂದ ಜನ ಬಂದು ಇಲ್ಲಿ ಇಂತಹ ಪ್ರಯೋಗವನ್ನು ನೋಡಿ ಮೆಚ್ಚಿ ಕಲಿತು ಹೋಗುತ್ತಾರೆ.
ಹತ್ತು ಹದಿನೈದು ಎಕರೆ ಜಮೀನು ಇರುವ ವಿದ್ಯಾವಂತ ಯುವಕರು ನಗರದ ಆಕರ್ಷಣೆಗೆ ಮಾರುಹೋಗಿ ಪಟಣ್ಣಸೇರಿ ಕೃಷಿಯನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.ಮುಂದಿನ ಹತ್ತು ವರ್ಷಗಳಲ್ಲಿ ಇದರ ಭೀಕರ ಪರಿಣಾಮಗಳನ್ನು ಎದುರಿಸುಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡುವುದನ್ನು ಅವರು ಮರೆಯುವುದಿಲ್ಲ.
ಸರಕಾರಗಳು ಈಗ ಸೌರ ವಿದ್ಯುತ್ ಮತ್ತು ಪವನ ಶಕ್ತಿಯ ಬಗ್ಗೆ ಮಾತನಾಡುತ್ತಿವೆ, ನಾನು ನನ್ನ ತೋಟದಲ್ಲಿ ನಾಲ್ಕು ವರ್ಷದ ಹಿಂದೆ ಇಂತಹ ಪ್ರಯೋಗಮಾಡಿ ಯಶಸ್ವಿಯಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಸ್ಥಳೀಯವಾಗಿ ರೂಪಿಸಿದ ತಂತ್ರಜ್ಞಾನಗಳ ಬಗ್ಗೆ ಜನರು ಅರಿವು ಮೂಡಿಸಿಕೊಳ್ಳುವುದಿಲ್ಲ.ಕೃಷಿಯ ಬಗ್ಗೆ ಕಲಿಯಲು ದೇಶ ವಿದೇಶಗಳಿಗೆ ಹೋಗುತ್ತಾರೆ.ಇದರಿಂದ ಯಾವುದೇ ಪ್ರಯೋಜನ ಹೇಳಿ ಎಂದು ಅವರು ಪ್ರಶ್ನಿಸುತ್ತಾರೆ.ನಮ್ಮವರೆ ಬಂದು ನೋಡಿ ಕಲಿತು ನೆಮ್ಮದಿಯ ಜೀವನ ರೂಢಿಸಿಕೊಳ್ಳದಿರುವುದು ನನಗೆ ಕೆಲವು ಸಲ ಬೇಸರ ಮೂಡಿಸುತ್ತದೆ ಎನ್ನುತ್ತಾರೆ ಶೇಷಕುಮಾರ್.
ಅಂದಿನ ದಿನಕ್ಕೆ ನಾನು ಆರುವರೆ ಲಕ್ಷ ರೂಪಾಯಿ ವೆಚ್ಚಮಾಡಿ ಗಾಳಿಯಂತ್ರ ಮತ್ತು ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿಕೊಂಡು ವಿದ್ಯುತ್ ಉತ್ಪಾದನೆಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇನೆ.ನಮ್ಮ ರೈತರು ಬಂದರೆ ಎಲ್ಲಾ ರೀತಿಯ ತಿಳುವಳಿಕೆ ಮತ್ತು ಅರಿವು ಮೂಡಿಸಲು ನಾನು ಸದಾ ಸಿದ್ಧ ಎಂದು ಅವರು ಹೇಳುತ್ತಾರೆ.
ಕೀಟಗಳ ಹಾವಳಿ ತಡೆಯಲು ಸೋಲಾರ್ ವ್ಯವಸ್ಥೆಇರುವ ಆಟೋ ಮ್ಯಾಟಿಕ್ ದೀಪಗಳನ್ನು ತೋಟದ ಅಲ್ಲಲ್ಲಿ ಅಳವಡಿಸಿದ್ದಾರೆ.ರಾತ್ರಿ ಆಗುತ್ತಿದಂತೆ ಆ ದೀಪಗಳು ಬೆಳಗುತ್ತವೆ. ದೀಪದ ಕೆಳಗೆ ಇರುವ ನೀರಿನ ತಟ್ಟೆಗಳಿಗೆ ಬಿದ್ದು ಕೀಟಗಳು ಸಾವನ್ನಪ್ಪುತ್ತವೆ.
ಅಮೇರಿಕಾದಿಂದ ತರಿಸಿ ಹಾಕಿರುವ ಎಂಟು ಹಣ್ಣಿನ ಗಿಡಗಳು ವರ್ಷದ ಎಲ್ಲಾ ಕಾಲದಲ್ಲೂ ಹಣ್ಣು ಬಿಡುತ್ತವೆ.ಇವು ಉಪ್ಪಿನ ಕಾಯಿ ಮತ್ತು ಜ್ಯೂಸ್ಗೆ ಬಳಕೆಯಾಗುತ್ತವೆ.
ಸರಳ ಮತ್ತು ಸುಲಭ ವಿಧಾನ:
ನಮ್ಮ ಬೇಸಾಯ ಸರಳ ಮತ್ತು ಸುಲಭ. ಈ ಮೂರು ಎಕರೆ ಸ್ವಂತ ಜಮೀನು ಸೇರಿ ಹತ್ತಿರದಲ್ಲೇ ಐದು ಎಕರೆ ಜಮೀನನ್ನು ವಾಷರ್ಿಕ ಗುತ್ತಿಗೆಗೆ ಮಾಡಿಕೊಂಡಿದ್ದೇನೆ. ಅಲ್ಲೂ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲಾಗುತ್ತಿದೆ. ನಾಲ್ಕು ಸಾವಿರ ಏಲಕ್ಕಿ ಬಾಳೆ,ಸಾವಿರ ಪಚ್ಚಬಾಳೆ ಹಾಕಿದ್ದೇನೆ. ಈಗ ಅದು ಎರಡನೇ ಕೂಳೆ ಬೆಳೆ. ಕನಿಷ್ಠ ಐದಾರು ವರ್ಷ ಕೂಳೆಯಲ್ಲೇ ಫಸಲು ತೆಗೆಯುವ ಗುರಿ ನಮ್ಮದು.ಪ್ರತಿ ಹತ್ತು ಗುಂಟೆಯಲ್ಲಿ ಸೊಪ್ಪು, ತರಕಾರಿಯನ್ನು ಬೆಳೆದುಕೊಂಡು, ಅದರ ಆದಾಯದಲ್ಲಿ ಆಳುಕಾಳುಗಳಿಗೆ ಕೂಲಿ ನೀಡಲು ಸಾಕಾಗುತ್ತದೆ.ಇದರಿಂದ ನಮ್ಮ ಆರೋಗ್ಯವು ಸುಧಾರಿಸಿ ಜಮೀನಿನಲ್ಲಿ ಕೆಲಸ ಮಾಡುವವರು ಆರೋಗ್ಯದಿಂದ ಜೀವನಮಾಡುವಂತಾಗಿದೆ.
ಈಗೆ ಒಟ್ಟು ಎಂಟು ಎಕರೆ ತೋಟದ ನಿರ್ವಹಣೆಗೆ ಇರುವುದು ಎರಡು ನಾಟಿ ಹಸುಗಳು ಮಾತ್ರ. ಇವುಗಳ ಗೋಮೂತ್ರ ಮತ್ತು ಸಗಣಿಯಿಂದ ತೋಟದ ನಿರ್ವಹಣೆ ಮಾಡಲಾಗುತ್ತದೆ. ಇನ್ನೂರು ಲೀಟರ್ ನೀರು ಹಿಡಿಸುವ ತಲಾ ಎರಡು ಪ್ಲಾಸ್ಟಿಕ್ ಡ್ರಮ್ ಇದೆ. ಅದರಲ್ಲಿ ಪ್ರತಿ ವಾರ ನಾನೂರು ಲೀಟರ್ ಜೀವಾಮೃತ ಮಾಡಿಕೊಳ್ಳುತ್ತೇವೆ. ವಾರಕ್ಕೆ ಒಂದು ಬಾರಿಯಂತೆ ತಿಂಗಳಿಗೆ ನಾಲ್ಕು ಬಾರಿ ಹನಿ ನೀರಾವರಿ ಮೂಲಕ ಜೀವಾಮೃತವನ್ನು ಗಿಡಗಳಿಗೆ ಕೊಡುತ್ತೇವೆ.
ಜೀವಾಮೃತ ಮಾಡುವ ವಿಧಾನ:
ಐದು ಲೀಟರ್ ಗಂಜಲ.ಎರಡು ಕೆಜಿ ಸಗಣಿ.ಎರಡು ಕೆಜಿ ಕಳಿತ ಬಾಳೆ ಅಥವಾ ಪಪ್ಪಾಯಿ ಹಣ್ಣು.ಎರಡು ಕೆಜಿ ಬೆಲ್ಲ ಜೊತೆಗೆ ಒಂದಿಡಿ ಜೀವಂತ ಮಣ್ಣು. ಇವಿಷ್ಟನ್ನು ಮಿಶ್ರಣ ಮಾಡಿ ಒಂದು ಡ್ರಮ್ನಲ್ಲಿ ಎರಡು ದಿನ ಇಡುತ್ತೇವೆ. ನಂತರ ಅದನ್ನು ಇನ್ನೂರು ಲೀಟರ್ ನೀರು ಇರುವ ಡ್ರಮ್ಗೆ ಸುರಿದು ಮಿಶ್ರಣ ಮಾಡುತ್ತೇವೆ. ಗಿಡಗಳಿಗೆ ಸಿಂಪಡಿಸುವ ದಿವ್ಯ ಔಷದ ಜೀವಾಮೃತ ಮೂರೇ ದಿನಕ್ಕೆ ಸಿದ್ಧ.
ಗಿಡಗಳಿಗೆ ರೋಗ ಬಂದರೆ 50 ಎಂಎಲ್ ಬೇವಿನ ಎಣ್ಣೆಯನ್ನು 10 ಲೀಟರ್ ನೀರಿಗೆ ಸೇರಿಸಿ,ಖಾದಿ ಭಂಡಾರ್ನಲ್ಲಿ ಸಿಗುವ ಮೀನಿನ ಸೋಪು ಪುಡಿ ಮಿಶ್ರಣಮಾಡಿ ಸಿಂಪರಣೆ ಮಾಡುತ್ತೇವೆ. ನಮ್ಮ ಬೆಳೆಗಳಿಗೆ ಯಾವುದೆ ರೋಗಗಳು ಇಲ್ಲಿಯವರೆಗೆ ಭಾದಿಸಿಲ್ಲ ಎನ್ನುತ್ತಾರೆ.
ರಸಸಾರ ಎಂಬ ಮ್ಯಾಜಿಕ್ : ಇದಲ್ಲದೆ ಫಿಶ್ ಅಮ್ಯೂನೊ ಆಸಿಡ್ ಎಂದ ರಸಸಾರವನ್ನು ತಯಾರು ಮಾಡಿಕೊಳ್ಳುತ್ತೇವೆ. ಇದಕ್ಕೆ ಮಾರುಕಟ್ಟೆಯಲ್ಲಿ ಲೀಟರ್ಗೆ ಆರು ಸಾವಿರ ರೂಪಾಯಿ ಇದ್ದು ನಾವು ಅದನ್ನು ನಮ್ಮಲ್ಲಿ ಕೇವಲ ಇನ್ನೂರ ಐವತ್ತು ರೂಪಾಯಿ ವೆಚ್ಚಮಾಡಿ ತಯಾರಿಸಿಕೊಳ್ಳಯತೇವೆ. ಒಂದು ಬಾರಿ ಇದನ್ನು ಸಿದ್ಧ ಮಾಡಿಕೊಂಡರೆ ಆರು ತಿಂಗಳವರೆಗೆ ಇಟ್ಟುಕೊಂಡು ಗಿಡಗಳಿಗೆ ಸಿಂಪಡಿಸಬಹುದು. ಇದೊಂದು ತುಂಬಾ ಪ್ರಯೋಜನಕಾರಿ ರಸಸಾರ. ಇದರಿಂದ ಹಣ್ಣಿನ ಗಿಡಗಳು, ತರಕಾರಿ.ಸೊಪ್ಪು ಸಮೃದ್ಧಿಯಾಗಿ ಬೆಳೆವಣಿಗೆ ಕಾಣುವುದಲ್ಲದೆ. ಒಳ್ಳೆಯ ರುಚಿಯು ಬರುತ್ತದೆ ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಎರಡು ಕೆಜಿ ಮೀನು ಖರೀದಿಸಿ, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕಟ್ ಮಾಡಿಸಿಕೊಳ್ಳಬೇಕು. ಎರಡು ಕೆಜಿ ಕಪ್ಪು ಬೆಲ ಮತ್ತು ಎರಡು ಲೀಟರ್ ಗೋಮೂತ್ರದ ಜೊತೆ ಒಂದು ಮಡಕೆಯಲ್ಲಿ ಹಾಕಿ ಮಣ್ಣಿನಲ್ಲಿ ಹೂಳಬೇಕು. ಒಂದು ತಿಂಗಳಿಗೆ ಜೇನು ತುಪ್ಪದಂತ ಫಿಶ್ ಅಮ್ಯೂನೊ ಆಸಿಡ್ ರಸಸಾರ ಸಿದ್ಧ. ಇದನ್ನು ಆರು ತಿಂಗಳು ಇಟ್ಟುಕೊಂಡು ಬಳಸಬಹುದು. 20 ಎಂಎಲ್ ಮೀನಿನ ರಸಸಾರಕ್ಕೆ 10 ಲೀಟರ್ ನೀರು ಮಿಶ್ರಣಮಾಡಿ ಬಳಸಿದರೆ ಗಿಡಗಳ ಬೆಳವಣಿಗೆ ಸಮೃದ್ಧಿಯಾಗಿ ಬರುತ್ತದೆ. ತರಕಾರಿ ಮತ್ತು ಸೊಪ್ಪಿನ ಗಿಡಗಳಿಗಂತೂ ಈ ರಸಸಾರ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ.
ಇವರ ತೋಟದಲ್ಲಿ ಬೆಳೆದಿರುವ ಸ್ಥಳೀಯ ನಾಟಿ ತಳಿಯ ಬೆಂಡೆಕಾಯಿ ಮತ್ತು ಗೋರಿಕಾಯಿ ಗಿಡಗಳು ಎಂಟು ಅಡಿಗೂ ಮಿಗಿಲಾಗಿ ಎತ್ತರಕ್ಕೆ ಬೆಳೆದಿದ್ದು ಸ್ವಾದಿಷ್ಟ ಮತ್ತು ರುಚಿಕರವಾಗಿವೆ. ಇವರು ದಾಳಿಂಬೆ ಮತ್ತು ದ್ರಾಕ್ಷಿ ಗಿಡಗಳನ್ನು ನರ್ಸರಿಯಲ್ಲಿ ಬೆಳೆದು ಮಾರಾಟ ಮಾಡುತ್ತಾರೆ.ಆಸಕ್ತರು ಶೇಷಕುಮಾರ್ 9952962114 ಸಂಪಕರ್ಿಸಬಹುದು.
"ಸಬ್ಸಿಡಿ ಸಹಾಯಧನ ಬಿಡಿ,ಶ್ರಮದಿಂದ ದುಡಿ"
ಗುಂಡ್ಲುಪೇಟೆ: ಮೂಲತಃ ಮಂಡ್ಯಜಿಲ್ಲೆ ಪಾಂಡವಪುರ ತಾಲೂಕಿನ ಕೆರೆತೊಣ್ಣುರು ಗ್ರಾಮದ ಶೇಷಕುಮಾರ್ ಸ್ವಗ್ರಾಮದಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಮಂಡ್ಯದಲ್ಲಿ ಪಿಯುಸಿ ಓದಿ,ಮೈಸೂರಿನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸಮಾಡಿದ್ದಾರೆ.ಕೆಲಸದ ನಿಮಿತ್ತ ರಾಜ್ಯ, ದೇಶವಿದೇಶಗಳನ್ನು ಸುತ್ತಿದ್ದಾರೆ. ಅವರೊಂದಿಗೆ ಮಾತನಾಡುತ್ತಿದ್ದರೆ ಕೃಷಿ ವಿಜ್ಷಾನಿಯೊಬ್ಬರ ಜತೆ ಮಾತನಾಡುತ್ತಿರುವಂತೆ ಅನುಭವವಾಗುತ್ತದೆ.ತಂತ್ರಜ್ಞಾನ ಮತ್ತು ದೇಸಿ ಮೂಲದ ಜ್ಞಾನವನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲಿ ಇವರು ಮಾಡಿರುವ ಸಾಧನೆ ಆಸಕ್ತರ ಗಮನಸೆಳೆದಿದೆ.ರಾಜ್ಯದ ನಾನಾ ಭಾಗಗಳಿಂದ ಇವರ ತೋಟಕ್ಕೆ ಬಂದ ಕೃಷಿಕರು ಶೇಷಕುಮಾರ್ ಅವರಿಂದ ಪಾಠ ಕೇಳಿ ಸಾವಯವ ಕೃಷಿಯ ಮಹತ್ವದ ಬಗ್ಗೆ ಕಲಿತು ಹೋಗುತ್ತಿದ್ದಾರೆ.
ಕೆಲಸದ ಒತ್ತಡ.ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಗರ್ಾವಣೆಯ ಕಾರಣದಿಂದ ವ್ಯಯಕ್ತಿಕ ಸಮಸ್ಯೆಗಳು ಬಿಗಡಾಯಿಸತೊಡಗಿದವು.ವಗರ್ಾವಣೆಯ ಕಿರಿಕಿರಿಯಿಂದಾಗಿ ನಮ್ಮ ಮಗಳ ವಿದ್ಯಾಭ್ಯಾಸಕ್ಕೆ ಅನಾನುಕೂಲಗಳಾದವು. ಇದೆಲ್ಲದರಿಂದ ಮುಕ್ತಿಪಡೆಯಲು ನಿರ್ಧರಿಸಿ 1995 ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಕೃಷಿಕರಾದರು.
ಗೊಮ್ಮಟಗಿರಿಯಲ್ಲಿ ಸ್ವಲ್ಪ ಜಮೀನಿದ್ದು ಅಲ್ಲಿ ಮಾವು ಮತ್ತು ತೆಂಗು ಬೆಳೆಯಲಾಗಿದೆ. ಸುತ್ತಮುತ್ತ ಬಡಾವಣೆಗಳಾದ ನಂತರ ಸಾವಿರದ ಇನ್ನೂರು ಅಡಿ ಬೊರು ಕೊರೆಸಿದರು ಅಲ್ಲಿ ನೀರು ಬರಲಿಲ್ಲ.ಅದಕ್ಕಾಗಿ ಕೋಟೆಕೆರೆಗೆ ಬಂದು ಜಮೀನು ಖರೀದಿಸಿ ಕೃಷಿಯಲ್ಲಿ ಖುಷಿಯಾಗಿರುವುದಾಗಿ ಹೇಳುತ್ತಾರೆ.
ಪತ್ನಿ ಸುಧಾ, ಮಗಳು ರಮ್ಯ, ಅಳಿಯ ಪ್ರಮತಿ ಹಿಲ್ ವ್ಯೂ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಶರತ್ ಕುಮಾರ್ ಅವರೊಂದಿಗೆ ಮೈಸೂರಿನ ಸರಸ್ವತಿಪುರಂನಲ್ಲಿದ್ದಾರೆ. ವಾರದಲ್ಲಿ ಎರಡು ರಾತ್ರಿ ನಾಲ್ಕು ಹಗಲು ಕೋಟೆಕೆರೆ ಫಾರಂನಲ್ಲಿ ಇದ್ದು ಕಾಮರ್ಿಕರೊಂದಿಗೆ ತಾವೂ ಕೆಲಸಮಾಡುತ್ತಾರೆ. ಮೂನ್ನಾರ ಅರವತ್ತೈದು ದಿನವೂ ತೋಟದಲ್ಲೇ ಇದ್ದು ಬೇಸಾಯ ನಷ್ಟ ಎನ್ನುವ ರೈತರು ಇವರಿಂದ ಕಲಿಯುವುದು ಸಾಕಷ್ಟಿದೆ.
ಸರಕಾರದಿಂದ ಯಾವುದೇ ಸಬ್ಸಿಡಿ, ಸಹಾಯಧನಕ್ಕಾಗಿ ಎಡತಾಕದ ಶೇಷಕುಮಾರ್ ಕೃಷಿ ಇಲಾಖೆಗೆ ಸುತ್ತಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ತೋಟದಲ್ಲಿ ದುಡಿದರೆ ಲಾಭ ಹೆಚ್ಚು ಎನ್ನುತ್ತಾರೆ. ಕೃಷಿ ಇಲಾಖೆಯ ಕಡೆ ತಿರುಗಿಯೂ ನೋಡದ ಇವರ ಬೇಸಾಯವನ್ನು ನೋಡಿದ ತೋಟಗರಿಕೆ ಇಲಾಖೆಯವರೆ ತೋಟಕ್ಕೆ ಬಂದು ದಾಳಿಂಬೆ ಗಿಡಗಳಿಗೆ ಸಹಾಯಧನ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಪ್ರಯೋಗ ಮಾಡಲೆಂದು ಮನೆ ಮುಂದೆ ಹಾಕಿದ ಬೆಂಗಳೂರು ಬ್ಲೂ ದ್ರಾಕ್ಷಿ 11 ತಿಂಗಳ ನಂತರ ವಾಷರ್ಿಕ 200 ಕೆಜಿ ಇಳುವರಿ ಬಂತು. ರುಚಿಯಾದ ದ್ರಾಕ್ಷಿಗೆ ತುಂಬಾ ಬೇಡಿಕೆ ಇದ್ದು ಗ್ರಾಹಕರು ತೋಟದ ಬಳಿಯೆ ಬಂದು ಖರೀದಿಸುತ್ತಾರೆ. ಇಕ್ರಾ ಸಂಸ್ಥೆಯವರೂ ಇವರು ಬೆಳೆದ ತರಕಾರಿಗಳನ್ನು ಖರೀದಿಸುತ್ತಾರೆ
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ಕಾಡು ಕೃಷಿಯ ನಡುವೆ "ಕಾಫಿ"ಯ ಘಮಲು
ಸಮಗ್ರ ಬೇಸಾಯದಲ್ಲಿ ಸಾಧನೆಮಾಡಿದ ರಾವ್ ಸಹೋದರರು
ಈಗ ಎಲ್ಲ ಕಡೆ ಹೆಬ್ಬೇವು ಕೃಷಿಯದೆ ಮಾತು. ತುರು ಬೇವು, ಚುರುಕ್ ಬೇವು, ಮಿಲಿಯಾ ದುಬಿಯಾ, ಹೀಗೆ ನಾನಾ ಹೆಸರಿನಿಂದ ಕರೆಯುವ ಮರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಫ್ಲೈ ಹುಡ್ ಫ್ಯಾಕ್ಟರಿಗಳು ನಡೆಯುವುದೆ ಈ ಮರಗಳಿಂದ. ಅಂತಹ ಮರಗಳನ್ನು ಬೆಳೆದು ನಡುವೆ ಸಮಿಶ್ರ ಬೇಸಾಯ ಮಾಡಿ ನಿರಂತರ ಆದಾಯದ ಮೂಲಮಾಡಿಕೊಂಡಿರುವ ರಘುನಾಥ್ ರಾವ್ ಸಹೋದರರ ಸಾಧನೆ ನಮ್ಮ ಯುವಕರಿಗೆ ಸ್ಫೂತರ್ಿಯಾಗಬಲ್ಲದು.
ಹುಣಸೂರು : ನಮ್ಮ ಕೃಷಿ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದೆ. ಅನಿಶ್ಚಿತ ಮಳೆ,ಕೂಲಿ ಕಾಮರ್ಿಕರ ಸಮಸ್ಯೆ,ಕಾಡು ಪ್ರಾಣಿಗಳ ಹಾವಳಿ,ಸಸ್ಯಗಳ ಆಯ್ಕೆ,ಯಾವುದನ್ನ ಬಿಡಬೇಕು ಮತ್ಯಾವುದನ್ನ ಕಟ್ಟಿಕೊಳ್ಳಬೇಕು ಹೀಗೆ ನಾನಾ ರೀತಿಯ ಸಮಸ್ಯೆಗಳ ಬಲೆಯಲ್ಲಿ ಸಿಲುಕಿರುವ ರೈತ ಪರಿಹಾರ ಕಾಣದೆ ಪರಿತಪಿಸುತ್ತಿದ್ದಾನೆ.ಆದರೆ ಅಲ್ಲೊಬ್ಬ ಇಲ್ಲೊಬ್ಬ ಸಾಹಸಿ ರೈತ ತನ್ನ ಮಟ್ಟದ್ದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಇರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿ ಯಶಸ್ಸುಹೊಂದಿ "ಬಂಗಾರದ ಮನುಷ್ಯ" ರಾಗಿ ಸಮಾಜಕ್ಕೆ ಮಾದರಿಯಾದ ಉದಾಹರಣೆಗಳು ಸಾಕಷ್ಟಿವೆ.
ಇಂತಹ ವಿಶಿಷ್ಠ ಮಾದರಿಗೆ ಸಾಕ್ಷಿಯಾದವರು ದೌಲತ್ ರಾವ್ ಮತ್ತು ರಘುನಾಥ್ ರಾವ್ ಸಹೋದರರು. ಹುಣಸೂರು ತಾಲೂಕು ಗಾವಡಗೆರೆ (ಕೆ.ಆರ್.ನಗರಕ್ಕೂ ಹತ್ತಿರ) ಸಮೀಪ ಇರುವ ನಾಲ್ಕು ಎಕರೆ ಪ್ರದೇಶದಲ್ಲಿ ಇವರು ಮಾಡಿರುವ ಕಾಡುಕೃಷಿ ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಕೇವಲ ನಾಲ್ಕೇ ನಾಲ್ಕು ವರ್ಷದಲ್ಲಿ ಇವರು ಸೃಷ್ಠಿಸಿರುವ ಕಾಡು ಕಣ್ಮನಸೆಳೆಯುತ್ತಿದೆ.
ಅಡ್ಡಿಯಾಗದ ಸಕರ್ಾರಿ ನೌಕರಿ :
ಸಕರ್ಾರಿ ನೌಕರಿಯಲ್ಲಿರುವವರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಮಯವಿರುವುದಿಲ್ಲ ನಿಜ. ಜೊತೆಗೆ ಆಳನ್ನ ನಂಬಿ ಮಾಡಿದ ಬೇಸಾಯ ಆಳು ಎಂಬ ಮಾತು ಸತ್ಯ.ಆದರೆ ಇದನ್ನೆ ಒಂದು ಸವಾಲಾಗಿ ಸ್ವೀಕರಿಸಿದವರು ರಘುನಾಥ್ ರಾವ್.
ಇವರು ಸಕರ್ಾರಿ ನೌಕರ. ವೀರಾಜಪೇಟೆಯ ತಾಲೂಕು ಕಚೇರಿಯಲ್ಲಿ ಸವರ್ೇಯರ್ ಆಗಿ ಕೆಲಸ. ಇವರ ಸಹೋದರ ಕೃಷಿಕ. ಒಬ್ಬರದು ಯೋಜನೆ ಮತ್ತೊಬ್ಬರದು ಅದನ್ನು ಜಮೀನಿನಲ್ಲಿ ಜಾರಿ ಮಾಡುವ ಕೆಲಸ. ಇಬ್ಬರು ಸಹೋದರರು ಶ್ರದ್ಧೆಯಿಂದ ಕಟ್ಟಿದ ತೋಟ ಅರಣ್ಯ ಇಲಾಖೆಯ ಗಮನ ಸೆಳೆದಿದೆ. ಅಲ್ಲದೆ ಪ್ರತಿ ವರ್ಷ ಬೆಂಗಳೂರಿನಿಂದ ಬರುವ ಕೃಷಿ ವಿಜ್ಞಾನಿಗಳ ಪ್ರಯೋಗಶಾಲೆಯಾಗಿದೆ. ಕೆಲವು ಮರಗಳಿಗೆ ಈ ವಿಜ್ಞಾನಿಗಳು ಗುರುತು ಮಾಡಿದ್ದು ಪ್ರತಿ ವರ್ಷ ಬಂದು ಅವುಗಳನ್ನು ಅಧ್ಯಯನ ಮಾಡುತ್ತಾರೆ. ಪ್ರತಿ ವರ್ಷ ಮರದ ಸುತ್ತಳತೆ ವೇಗವಾಗಿ ಬೆಳೆಯುತ್ತಿರುವುದು ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಮೂರು ಎಕರೆ ಪ್ರದೇಶದಲ್ಲಿರುವ ಕಾಡು ಕೃಷಿ ತೋಟದಲ್ಲಿ ನಾಲ್ಕು ವರ್ಷದ 500 ಹೆಬ್ಬೇವು, 450 ಸಿಲ್ವರ್, ಎರಡು ವರ್ಷದ 2100 ಕಾಫಿ ಗಿಡ, ಮೆಣಸು ಹೀಗೆ ನಾನಾ ರೀತಿಯ ಮರಗಿಡಗಳನ್ನು ಸಮಿಶ್ರ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆದು ಸುತ್ತ ಮತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
ಸಮಗ್ರ, ಸಮಿಶ್ರ ಬೇಸಾಯ :
ಹೆಬ್ಬೇವು ಹಾಕಿದ ಮೊದಲ ಎರಡು ವರ್ಷ ಸಮಿಶ್ರ ಬೆಳೆಯಾಗಿ ಮುಸುಕಿನ ಜೋಳ ಮತ್ತು ಪಪ್ಪಾಯ ಹಾಕಿ ಯಾವುದೆ ಕ್ರಿಮಿನಾಶಕ ಸಿಂಪಡಿಸದೆ ಉತ್ತಮ ಇಳುವರಿ ಪಡೆದು ಸಾಕಷ್ಟು ಆದಾಯವನ್ನು ಪಡೆದುಕೊಂಡಿದ್ದಾರೆ. ಮಾವು, ಸಪೋಟ, ನೇರಳೆ ಮತ್ತಿತರ ಹಣ್ಣಿನ ಗಿಡಗಳನ್ನು ಹಾಕಿಕೊಂಡಿದ್ದು ಮನೆಗೆ ಬೇಕಾದ ಹಣ್ಣು ತರಕಾರಿಗಳನ್ನು ಅಲ್ಲೇ ಬೆಳೆದುಕೊಳ್ಳುವ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆಇಟ್ಟಿದ್ದಾರೆ. ತೋಟದ ಸುತ್ತ 150 ಅಡಿಕೆ, 15 ತೆಂಗಿನ ಗಿಡಗಳನ್ನು ಹಾಕಲಾಗಿದ್ದ ತೋಟದ ಪ್ರತಿ ಇಂಚು ಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಇದಲ್ಲದೆ ಅಲ್ಲೆ ಸಮೀಪದಲ್ಲಿರುವ ಮತ್ತೊಂದು ಎಕರೆ ಪ್ರದೇಶದಲ್ಲಿ 700 ಹಕರ್ಿಲೆಸ್ ಗಿಡಗಳನ್ನು ಹಾಕಿದ್ದು ಅವು ಈಗ ಮರವಾಗಿ ಕಾಡಿನಂತೆ ಕಾಣುತ್ತಿದೆ. ಮುಂದಿನ ಹದಿನೈದು ವರ್ಷಕ್ಕೆ ಅದರಿಂದಲ್ಲೂ ಲಕ್ಷಾಂತರ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ರಘುನಾಥ್ ರಾವ್ ಅವರಿಗೆ ಪಿತಾಜರ್ಿತವಾಗಿ ಬಂದ ನಾಲ್ಕು ಎಕರೆ ಖುಷ್ಕಿ ಜಮೀನು ಈಗ ನೋಡಿದವರು ಅಚ್ಚರಿ ಪಡುವಂತೆ ಕಾಡಾಗಿ ಮಾರ್ಪಡಾಗಿದೆ.ಇದರ ಹಿಂದೆ ಸಹೋದರರ ಜಾಣ್ಮೆ ಮತ್ತು ಪರಿಶ್ರಮ ಕಣ್ಣಿಗೆ ಕಾಣುವಂತೆ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ.
ಸಮಸ್ಯೆಗಳಿಗೆ ಕಂಡ ಉತ್ತರ :
ನಾನೊಬ್ಬ ಸಕರ್ಾರಿ ನೌಕರ.ಆಳುಕಾಳು ಕಟ್ಟಿಕೊಂಡು ವ್ಯವಸಾಯ ಮಾಡಿಸುವುದು ನನ್ನಂತಹವರಿಗೆ ಕಷ್ಟ.ನಾವು ದನಕರುಗಳನ್ನು ಸಾಕಿಕೊಂಡಿಲ್ಲ.ಇರುವ ಜಮೀನನ್ನು ಪಾಳು ಬಿಡುವುದು ಇಷ್ಟ ಇರಲಿಲ್ಲ.ಗುತ್ತಿಗೆಗೆ ಕೊಟ್ಟರೆ ವರ್ಷಕ್ಕೆ ನಾಲ್ಕು ಎಕರೆಯಿಂದ ಹತ್ತು ಸಾವಿರ ರೂ. ಸಿಗಬಹುದಿತ್ತು ಅಷ್ಟೆ. ಅದಕ್ಕಾಗಿ ನಾವೇ ಏನಾದರೂ ಮಾಡೋಣ ಅಂತ ಯೋಚಿಸುತ್ತಿದ್ದೆ. ಆಗ ಹೊಳೆದದ್ದೆ ಈ ಕಾಡು ಕೃಷಿ ಕಲ್ಪನೆ.
ಹೆಚ್ಚು ಆಳುಗಳನ್ನು ಬೇಡದ, ಹೆಚ್ಚು ಕೆಲಸವನ್ನು ಕೇಳದ ಈ ಬಗ್ಗೆಯ ಕೃಷಿ ನನಗೆ ತುಂಬಾ ಇಷ್ಟವಾಯಿತು. ಮೊದಲಿಗೆ ನಮ್ಮ ತಾಲೂಕಿನ ಸುತ್ತಮುತ್ತ ಇರುವ ಬೇರೆ ಬೇರೆ ಹೆಬ್ಬೇವು ತೋಟಗಳನ್ನು ನೋಡಿಕೊಂಡು ಬಂದೆ. ನಂತರ ಒಂದು ದೃಢವಾದ ತೀಮರ್ಾನಕ್ಕೆ ಬಂದು ನನ್ನ ಸಹೋದರನ ಜತೆ ಮಾತನಾಡಿ, ಸಾದಾರಣವಾಗಿ ಮಳೆಯಾಗುತ್ತಿದ್ದ ಈ ಪ್ರದೇಶದಲ್ಲಿ ಮೊದಲಿಗೆ ಒಂದು ಬೋರ್ವೆಲ್ ಕೊರೆಸಿದೆವು. ಎರಡುವರೆ ಇಂಚಿನಷ್ಟು ಒಳ್ಳೇಯ ನೀರು ಬಂತು. ನಂತರ ಬೇರೆ ಏನು ಯೋಚನೆಮಾಡದೆ ಹೆಬ್ಬೇವು ಮತ್ತು ಸಿಲ್ವರ್ ಗಿಡಗಳನ್ನು ನೆಡಲು ತೀಮರ್ಾನಿಸಿದೆವು.
ಗಿಡ ಬೆಳೆಸಲು ಸಹಾಯ ಧನ : ನಮ್ಮ ಎಷ್ಟೊ ರೈತರಿಗೆ ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ಸಕರ್ಾರ ಹಣ ಕೊಡುತ್ತಿದೆ ಎನ್ನುವುದೆ ಗೊತಿಲ್ಲ. ಅರಣ್ಯ ಇಲಾಖೆ ಇದಕ್ಕಾಇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಅದಕ್ಕಾಗಿ ನಮ್ಮ ರೈತರು ಇಲಾಖೆಯನ್ನು ಸಂಪಕರ್ಿಸಬೇಕು ಅಷ್ಟೆ. ನಾವು ಮೊದಲಿಗೆ ಅರಣ್ಯ ಇಲಾಖೆಯವರನ್ನು ಸಂಪಕರ್ಿಸಿದೆವು. ಭೂಮಿಯನ್ನು ಹಸಿರಿಕರಣ ಮಾಡಲು ಮುಂದಾಗಿರುವ ಅರಣ್ಯ ಇಲಾಖೆಯವರು ಯೋಜನೆಯೊಂದರ ಅಡಿ ಒಟ್ಟು ಸಾವಿರ ಗಿಡಗಳನ್ನು ನೆಟ್ಟು ನಿರ್ವಹಣೆಮಾಡಲು ಸಹಾಯ ಧನ ಕೊಡುವುದಾಗಿ ಹೇಳಿದರು. ಅದರಂತೆ ಗಿಡ ಒಂದಕ್ಕೆ ಪ್ರತಿವರ್ಷ ಸಹಾಯ ಧನವಾಗಿ ಮೊದಲ ವರ್ಷ ಐದು ರೂಪಾಯಿಯಂತೆ ಸಾವಿರಗಿಡ ನಿರ್ವಹಣೆಗೆಂದು ಐದು ಸಾವಿರ ಸಹಾಯಧನ ಕೊಟ್ಟರು. ಎರಡನೇ ವರ್ಷ 10 ರೂ. ನಂತೆ ಹತ್ತು ಸಾವಿರ.ಮೂರನೇ ವರ್ಷ 15 ರೂ.ನಂತೆ ಹದಿನೈದು ಸಾವಿರ ಹೀಗೆ ಒಟ್ಟು ಮೂರು ವರ್ಷದಲ್ಲಿ 30 ಸಾವಿರ ಸಹಾಯ ಧನವೂ ನಮಗೆ ದೊರೆಯಿತು.
ಗುಂಡಿ ಮತ್ತು ಅಂತರ ಮುಖ್ಯ:
ಆರಂಭದಲ್ಲಿ ಪ್ರತಿ ಗಿಡಕ್ಕೆ ಮೂರು ರೂಪಾಯಿ ನೀಡಿ ಅರಣ್ಯ ಇಲಾಖೆಯ ನರ್ಸರಿಯಿಂದ ಸಾವಿರ ಗಿಡಗಳನ್ನು ತಂದು ನೆಟ್ಟೆವು. ಗಿಡಗಳನ್ನು ಹನ್ನೆರಡು ಅಡಿ ಉದ್ದ ಮತ್ತು ಹನ್ನೆರಡು ಅಡಿ ಅಗಲ ಬರುವಂತೆ ಗುರುತುಮಾಡಿ ಜೆಸಿಬಿಯಿಂದ ಗುಂಡಿ ತೆಗೆಸಿಕೊಂಡೆವು. ದನದ ಗೊಬ್ಬರ, ಬೇವಿನ ಹಿಂಡಿಯನ್ನು ಗುಂಡಿಗೆ ತುಂಬಿ ನಂತರ ಒಂದು ಸಾಲು ಹೆಬ್ಬೇವು ಗಿಡ ನಂತರದ ಸಾಲ ಸಿಲ್ವರ್ ಗಿಡ ಬರುವಂತೆ ಸಂಯೋಜನೆಮಾಡಿ ಒಂದು ಸಾವಿರ ಗಿಡಗಳನ್ನು ನಾಟಿ ಮಾಡಿದೆವು.
ಯಾವುದೇ ಗಿಡ ಆಳವಾಗಿ ಬೇರು ಬಿಡಲು,ಸದೃಢವಾಗಿ ಬೆಳೆಯಲು ಗುಂಡಿಯನ್ನು ಸಾಕಷ್ಟು ಆಳ ಮತ್ತು ಅಗಲವಾಗಿ (ಎರಡು ಮತ್ತು ಎರಡು ಅಡಿ)ತೆಗೆಯುವುದು ಮುಖ್ಯ. ಆಗಾದಾಗ ಗಿಡಗಳು ಆರೋಗ್ಯವಾಗಿ ಸದೃಢವಾಗಿ ಬೆಳೆಯುತ್ತವೆ ಎನ್ನುವುದು ನಮ್ಮ ಅನುಭವದಿಂದ ಕಂಡುಕೊಂಡ ಸತ್ಯ.
ನಂತರ ಮೊದಲವರ್ಷ ಪ್ರತಿ ಗಿಡದ ಸಾಲಿನಲ್ಲಿ ಎರಡು ಮರಗಳ ನಡುವಿನ ಅಂತರದಲ್ಲಿ ಎರಡು ಪಪ್ಪಾಯ ಗಿಡಗಳನ್ನು ನಾಟಿ ಮಾಡಿದೆವು. ಮಧ್ಯದ ಹನ್ನೆರಡು ಅಡಿ ಜಾಗದಲ್ಲಿ ಮುಸುಕಿನ ಜೋಳ ಭಿತ್ತನೆ ಮಾಡಿದೆವು. ಮುಸುಕಿನ ಜೋಳದಿಂದ ಮೂರೆ ತಿಂಗಳಲ್ಲಿ ಲಕ್ಷ ರೂಪಾಯಿ ಆದಾಯ ಬಂತು. ಪಪ್ಪಾಯದಿಂದ ಏಳು ತಿಂಗಳ ನಂತರ ನಿರಂತರವಾಗಿ ಒಂದುವರೆ ವರ್ಷ ಸಾಕಷ್ಟು ಆದಾಯ ಬಂತು. ಗಿಡಗಳಿಗೆ ನೀರು ಉಣಿಸಲು ಹನಿ ನೀರಾವರಿ ವ್ಯವಸ್ಥೆಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಆಳುಕಾಳುಗಳ ಅಗತ್ಯ ಬೀಳಲಿಲ್ಲ. ನನ್ನ ಸಹೋದರ ದೌಲತ್ ಒಬ್ಬರೆ ಇಡಿ ತೋಟವನ್ನು ಸುಲಭವಾಗಿ ನಿರ್ವಹಣೆಮಾಡಿಕೊಂಡು ಹೋಗುತ್ತಿದ್ದಾರೆ.
ಮಳೆಗಾಲದಲ್ಲಿ ವರ್ಷಕ್ಕೆ ಎರಡು ಬಾರಿ ನಾವು ಗಿಡಗಳಿಗೆ ದನದ ಕಾಂಪೋಸ್ಟ್ ಗೊಬ್ಬರವನ್ನು ಕೊಡುವುದು ಬಿಟ್ಟರೆ ಬೇರೆನೂ ಕೊಡುವುದಿಲ್ಲ. ಭೂಮಿ ಚೆನ್ನಾಗಿ ನೀರು ಕುಡಿಯಲ್ಲಿ ಎಂಬ ಕಾರಣದಿಂದ ಒಂದೆರಡು ಬಾರಿ ಉಳುಮೆ ಮಾಡಿಸುತ್ತೇವೆ.
ಗಿಡ ನಿರ್ವಹಣೆ ಹೀಗಿರಬೇಕು :
ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಪ್ರತಿ ಗಿಡಗಳ ನಿರ್ವಹಣೆ ತುಂಬಾ ಮುಖ್ಯ. ಗಿಡಗಳು 15 ರಿಂದ 20 ಅಡಿಗಳಾಗುವವರೆಗೆ ರೆಂಬೆಗಳನ್ನು ತೆಗೆಯುತ್ತಿರಬೇಕು. ಮರಕ್ಕೆ ನೋವಾಗದಂತೆ, ಸೀಳು ಬಾರದಂತೆ ತುಂಬಾ ಸೂಕ್ಷ್ಮವಾಗಿ ರೆಂಬೆಗಳನ್ನು ತೆಗೆಯುತ್ತಾ ಬರಬೇಕು. ಗಿಡ 20 ಅಡಿ ಬೆಳೆದ ನಂತರ ರೆಂಬೆ ತೆಗೆಯುವುದನ್ನು ನಿಲ್ಲಿಸಬೇಕು. ಆಗ ಮಾರುಕಟ್ಟೆಯಲ್ಲಿ ಇಂತಹ ಮರಗಳಿಗೆ ಒಳ್ಳೆಯ ಬೇಡಿಕೆ ಇದ್ದು ಪ್ರತಿ ಮರ ಹದಿನೈದು ಸಾವಿರದವರೆಗೂ ಮಾರಾಟವಾಗುವ ಸಾಧ್ಯತೆ ಇರುತ್ತದೆ.
ಈಗ ನಾವೇ ತೋಟದಲ್ಲಿ ಬೀಳುವ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಕಾಂಪೋಸ್ಟ್ ತಯಾರಿಸಿಕೊಳ್ಳಲು ಗೊಬ್ಬರದ ಗುಂಡಿಯನ್ನು ಮಾಡಿಕೊಂಡಿದ್ದೇವೆ. ಅಷ್ಟರ ಮಟ್ಟಿಗೆ ನಮ್ಮದು ಕಡಿಮೆ ಖಚರ್ು ಬೇಡುವ ಬೇಸಾಯವಾಗಿದೆ.
ಕಾಫಿಯಲ್ಲೂ ಪ್ರಯೋಗ :
ನಾನು ಕೊಡಗಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿನಂತೆ ಇಲ್ಲೂ ಯಾಕೆ ಕಾಫಿ ಬೆಳೆಯಬಾರದು ಅನಿಸಿತು. ಹಾಗನಿಸಿದೆ ತಡ ಎರಡು ವರ್ಷದ ನಂತರ ಪಪ್ಪಾಯವನ್ನು ತೆಗೆದು 2100 ಕಾಫಿ ಗಿಡಗಳನ್ನು ಪ್ರತಿ ಮರದ ಸಾಲಿನ ಖಾಲಿ ಜಾಗದಲ್ಲಿ ನೆಟ್ಟಿದ್ದೇನೆ. ಅವು ಈಗ ಚೆನ್ನಾಗಿ ಬಂದಿದ್ದು. ಹೂ ಬಿಡುವ ಹಂತದಲ್ಲಿವೆ. ಸಿಲ್ವರ್ ಮರಗಳಿಗೆ ಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗಿದ್ದು ಅವು ಕೂಡ ಚೆನ್ನಾಗಿ ಬೆಳೆದು ಈಗ ಫಸಲು ಬಿಡುವ ಹಂತದಲ್ಲಿವೆ.
ಈಗ ನೀವೆ ಹೇಳಿ ಕೃಷಿ ಯಾಕೆ ಲಾಭದಾಯಕ ಅಲ್ಲ.ರೈತರು ಹೊಸ ಹೊಸ ಆಲೋಚನೆ ಮಾಡುತ್ತಾ ಸದಾ ಪ್ರಯೋಗಶೀಲರಾದಾಗ ಖಂಡಿತಾ ಕೃಷಿಯಲ್ಲೂ ಲಾಭ ಇದೆ. ನಾನೊಬ್ಬ ಸಕರ್ಾರಿ ನೌಕರನಾಗಿದ್ದು ನನಗೆ ಸಿಗುವ ರಜ ದಿನಗಳನ್ನೆ ಬಳಸಿಕೊಂಡು ಹೆಚ್ಚುವರಿ ಆಳು, ಹೆಚ್ಚು ರಾಸಾಯನಿಕ ಗೊಬ್ಬರ,ಕ್ರಿಮಿನಾಶಕಗಳ ಮೇಲೆ ಅವಲಂಭಿತನಾಗದೆ ನನ್ನ ಸಹೋದರ ದೌಲತ್ ರಾವ್ ಅವರೊಬ್ಬರ ಶ್ರಮದಾನದಿಂದ ಈ ತೋಟವನ್ನು ಕಟ್ಟಿದ್ದೇವೆ.
ಮಾರಾಟ ಹೀಗೆ :
ಒಂದು ಟನ್ ಹೆಬ್ಬೇವು ಮರಕ್ಕೆ ಮಾರುಕಟ್ಟೆಯಲ್ಲಿ ಒಂಭತ್ತು ಸಾವಿರ ರೂಪಾಯಿ ಇದೆ. ಆದರೆ ನಾವು ಟನ್ ಲೆಕ್ಕದಲ್ಲಿ ಮರವನ್ನು ಮಾರುವುದಿಲ್ಲ. ಗಿಡ ಏಳೆಂಟು ವರ್ಷ ಬೆಳೆದು ದೊಡ್ಡದಾದಾಗ ಬಲಿತ ಮರವನ್ನು ಫ್ಲೈ ಹುಡ್ ಫ್ಯಾಕ್ಟರಿಯವರು ಒಂದು ಸಿಎಫ್ಟಿಗೆ ಈಗಿನ ಮಾರುಕಟ್ಟೆ ದರ 450 ರೂಪಾಯಿ ಕೊಟ್ಟು ಖರೀದಿಸುತ್ತಾರೆ.ಒಂದು ಮರ ಎಂಟರಿಂದ ಹತ್ತು ವರ್ಷದಲ್ಲಿ ಕನಿಷ್ಟ 20 ಸಿಎಫ್ಟಿ ಬರುತ್ತದೆ. ಅಂದರೆ ಒಂದು ಮರ 9000 ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುತ್ತದೆ. 500 ಮರದಿಂದ 45 ಲಕ್ಷಕ್ಕೂ ಹೆಚ್ಚು ಆದಾಯ ಗ್ಯಾರಂಟಿ.
ಇನ್ನು ಹೆಬ್ಬೇವು ಮರಗಳನ್ನು ಎಂಟು ವರ್ಷಕ್ಕೆ ಕಟಾವು ಮಾಡಿದರೆ ಉಳಿದ 450 ಸಿಲ್ವರ್ ಗಿಡಗಳು ಮತ್ತೆ ಐದು ವರ್ಷದ ನಂತರ ಸಾಕಷ್ಟು ಆದಾಯ ತಂದುಕೊಡಬಲ್ಲ ಮರಗಳಾಗಿ ಬೆಳೆದಿರುತ್ತವೆ. ಈ ನಡುವೆ ಮೆಣಸಿನಿಂದಲ್ಲೂ ಸಾಕಷ್ಟು ಆದಾಯ ಬಂದಿರುತ್ತದೆ.
ಆದಾಯ ತರುವ ಹಕರ್ಿಲಸ್ : ನೋಡಿ ಇದರ ಸಮೀಪದಲ್ಲಿ ಕಾಣಿಸುತ್ತಿರುವ ಕಾಡಿನಂತಿರುವ ಮತ್ತೊಂದು ತೋಟವು ನಮ್ಮದೆ. ಅಲ್ಲಿ ಫನರ್ಿಚರ್ಗೆ ಬಳಸುವಂತಹ ಹಕರ್ಿಲಸ್ ಗಿಡಗಳನ್ನು ಹಾಕಿದ್ದೇವೆ. ಅಲ್ಲಿಗೆ ನಾವು ಯಾವುದೇ ನೀರಾವರಿ ಮೂಲಗಳಿಂದ ನೀರು ಕೊಡುತ್ತಿಲ್ಲ. ಮಳೆಯ ಆಶ್ರಯದಲ್ಲೇ ಬೆಳೆಸುತ್ತಿದ್ದೇವೆ. ಒಂದು ಎಕರೆ ಪ್ರದೇಶದಲ್ಲಿ 700 ಗಿಡಗಳಿವೆ. ನಾವು ಅದನ್ನು ಗುತ್ತಿಗೆ ಕೊಟ್ಟಿದ್ದರೆ ಪ್ರತಿ ವರ್ಷಕ್ಕೆ ಎರಡು ಸಾವಿರದಂತೆ ಹದಿನೈದು ವರ್ಷಕ್ಕೆ 30 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ ಈಗ ನಾವು ಈ ಗಿಡಗಳನ್ನಿ ಹದಿನೈದು ವರ್ಷ ಕಾಪಾಡಿಕೊಂಡರೆ ಪ್ರತಿ ಗಿಡ ಕನಿಷ್ಟ ಹತ್ತು ಸಾವಿರ ರೂಪಾಯಿಗೆ ಮಾರಾಟವಾದರೂ ಎಪ್ಪತ್ತು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ಗೊಬ್ಬರ ಗೋಡು, ನೀರು ಏನನ್ನು ಕೊಡದೆ ಅವು ಮಳೆಯಾಶ್ರಯದಲ್ಲಿ ಬೆಳೆದಿವೆ. ಅಂದರೆ ನಾವು ಹದಿನೈದು ವರ್ಷದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಪಡೆದುಕೊಂಡಂತಾಗುತ್ತದೆ ಎಂದು ರಘುನಾಥ್ ರಾವ್ ತಮ್ಮ ಪ್ರಯೋಗ ಮತ್ತು ಪರಿಶ್ರಮವನ್ನು ನಮ್ಮ ಕಣ್ಣ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ನಮಗೆ ಅವರ ತೋಟವೊಂದು ದಟ್ಟವಾದ ಅರಣ್ಯ ಪ್ರದೇಶದಂತೆ ಕಾಣುತ್ತಿದ್ದು ಪ್ರತಿ ಮರವು ಹಣ ತರುವ ಕಲ್ಪವೃಕ್ಷವಾಗಿ ನಮಗೆ ಕಾಣತೊಡಗಿದವು.
ಇವರನ್ನು ನೋಡಿದ ಅಕ್ಕ ಪಕ್ಕದ ರೈತರು ಹೆಬ್ಬೇವು ಕಾಡು ಕೃಷಿಯನ್ನು ಮಾಡಿದ್ದು ಒಳ ಹೊಕ್ಕರೆ ಕಾಡಿಗೆ ಹೋಗಿ ಬಂದ ಅನುಭವವಾಗುತ್ತದೆ. ಅರಣ್ಯ ಇಲಾಖೆಯವರು ತೋಟದ ನಿರ್ವಹಣೆಯನ್ನು ತುಂಬಾ ಮೆಚ್ಚಿಕೊಂಡಿದ್ದು ಬೇರೆ ಬೇರೆ ಕಡೆಗಳಿಂದ ರೈತರ ತಂಡಗಳನ್ನು ಕಾಡು ಕೃಷಿ ತೋಟ ನೋಡಿಬರಲು ಕಳುಹಿಸುತ್ತಿದ್ದು, ತಾಲೂಕಿನಲ್ಲೆ ಅತ್ಯತ್ತಮ ನಿರ್ವಹಣೆ ಮಾಡಿರುವ ತೋಟ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಹಸಿರು, ಆರೋಗ್ಯ, ಹಣ ಮೂರನ್ನು ಇಷ್ಟೊಂದು ಸುಲಭವಾಗಿ ಪಡೆದುಕೊಂಡ ರಾವ್ ಸಹೋದರರು ಕಾಡು ಕೃಷಿಯಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಅಪರೂಪದ್ದು ಮತ್ತು ಮಾದರಿಯಾಗುವಂತದ್ದು. ಹೆಚ್ಚಿನ ಮಾಹಿತಿಗೆ ರಘುನಾಥ್ ರಾವ್ 9449529439 ಸಂಪಕರ್ಿಸಿ.
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ರಸಸಾರ ಕೃಷಿ ಸಾಧಕ ಸುಂದರರಾಮನ್
ಮೊದಲು ನಾವು ನಂತರ ಮಾರುಕಟ್ಟೆ ಎಂದ ಕೃಷಿಋಷಿ
ಸತ್ಯಮಂಗಲ : ಯಾವುದೇ ಕೃಷಿಯ ಯಶಸ್ಸು ಆ ಮಣ್ಣಿನ ಗುಣಲಕ್ಷಣಗಳ ಮೇಲೆ ಅವಲಂಭಿಸಿರುತ್ತದೆ. ಮಣ್ಣು ಜೀವಂತವಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಯೂ ಜೀವಂತವಾಗಿರುತ್ತದೆ. ಆದರೆ ರೈತರು ಜೀವ ಇಲ್ಲದ ರಸಗೊಬ್ಬರಗಳನ್ನು ಮಣ್ಣಿಗೆ ಆಹಾರವಾಗಿ ನೀಡುತ್ತಾ ಭೂಮಿಯನ್ನು ಬರಡುಮಾಡುತ್ತಿದ್ದಾರೆ.ಇದರಿಂದಾಗಿ ಮನುಷ್ಯ ವಿಷಪೂರಿತ ಆಹಾರ ಸೇವಿಸಿ, ನಾನಾ ರೋಗಗಳ ಗೂಡಾಗುತ್ತಿದ್ದಾನೆ. ಪರಿಣಾಮ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ತಮ್ಮ ನಲವತ್ತನೇ ವಯಸ್ಸಿಗೆ ವೃದ್ಧಾಪ್ಯ ಬಂದು,ನಾನಾ ಕಾಯಿಲೆಗಳಿಂದ ನರಳಬೇಕಾಗಿದೆ.ರೈತರು ಮಣ್ಣು, ಗಿಡ ಮತ್ತು ಸೂರ್ಯನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಆಗ ನಮ್ಮ ಕೃಷಿಯು ಬದುಕುತ್ತದೆ ನಾವೂ ನೂರಾರು ವರ್ಷ ಆರೋಗ್ಯವಾಗಿ ಬದುಕುತ್ತೇವೆ... ಹೀಗೆ ಸುಂದರ ರಾಮನ್ ಹೇಳುತ್ತಾ ಹೋದರು, ಎದುರಿಗೆ ಕುಳಿತ ರೈತರು ಪ್ರತಿ ವಾಕ್ಯವನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದರು.
ಚಾಮರಾಜನಗರದ ಗಡಿ ಭಾಗದಲ್ಲಿರುವ ಹೆಸರಾಂತ ಸಾವಯವ ಕೃಷಿಕ, ರಸಸಾರ (ದ್ರಾವಣ) ಕೃಷಿಯನ್ನು ಜನಪ್ರಿಯಗೊಳಿಸಿದವರು ಎಸ್.ಆರ್.ಸುಂದರರಾಮನ್. ಸತತ 25 ವರ್ಷಗಳಿಂದ ನಿರಂತರವಾಗಿ ಕೃಷಿಯಲ್ಲಿ ಪ್ರಯೋಗಮಾಡುತ್ತಾ ಅವರು ಕಂಡುಕೊಂಡ ವಿಧಾನಗಳನ್ನು "ಸುಂದರರಾಮನ್ ಎಫೆಕ್ಟ್" ಎಂದು ಕರೆಯಲಾಗುತ್ತದೆ.
ಮೈಸೂರಿನಿಂದ ಸುಮಾರು 180 ಕಿ.ಮೀ.ದೂರದ ಸತ್ಯಮಂಗಲ ಸಮೀಪ ಇರುವ ಸುಂದರರಾಮನ್ ಅವರ ತೋಟ ಕೃಷಿಕರ ಪಾಲಿನ ಪಾಠ ಶಾಲೆ. ಅಲ್ಲಿ ಅವರು ಸಾವಯವ ಸಸ್ಯ ಸಂರಕ್ಷಣೆಗೆ ಕಂಡು ಕೊಂಡಿರುವ ಸರಳ ಸೂತ್ರಗಳು ಜಾರಿಯಾಗಿದ್ದು 10 ಎಕರೆಯ ಸುಂದರ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲಿ ತೆಂಗು, ಕಬ್ಬು,ಅರಿಶಿನ,ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಸುಂದರರಾಮನ್ ದೇಶದ ನಾನಾ ಭಾಗಗಳಲ್ಲಿ ಸರಳ ಕೃಷಿಯ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಇಂತಹ ಕೃಷಿ ಋಷಿಯ ಅನುಭವವನ್ನು ತಮ್ಮದಾಗಿಸಿಕೊಳ್ಳುವ ಮಹದಾಸೆಯಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ರೈತರನ್ನೊಳಗೊಂಡ ನಮ್ಮ ತಂಡ ಸುಂದರರಾಮನ್ ಅವರ ತೋಟಕ್ಕೆ ಭೇಟಿ ನೀಡಿತ್ತು. ಅವರು ತಮ್ಮ 73 ವರ್ಷದ ಇಳಿಗಾಲದಲ್ಲೂ ದಣಿವರಿಯದೆ ನಮ್ಮ ಜತೆ ಸತತವಾಗಿ ಬೆಳಗಿನಿಂದ ಸಂಜೆಯವರೆಗೂ ಮಾತನಾಡಿದರು. ಸುಸ್ಥಿರ ಬೇಸಾಯ ಕ್ರಮ , ವಿಷಮುಕ್ತ ಮಣ್ಣಿನ ನಿಮರ್ಾಣ, ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ರೈತರು ಮಾಡಬೇಕಾದ ಸರಳ ವಿಧಾನಗಳನ್ನು ಐದು ಗಂಟೆಗಳಿಗೂ ಹೆಚ್ಚು ಕಾಲ ಬೋಧಿಸಿದರು.
ಆರೋಗ್ಯಕರ ಮಣ್ಣಿನ ನಿಮರ್ಾಣ: ಯಾವುದೇ ಮಣ್ಣು ಫಲವತ್ತಾಗಿರಬೇಕಾದರೆ ಅಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಹೆಚ್ಚಾಗಿರಬೇಕು. ರಸಾಯನಿಕ ಗೊಬ್ಬರವನ್ನು ನಾವು ಹೆಚ್ಚು ಹೆಚ್ಚು ಬಳುಸುತ್ತಿರುವ ಪರಿಣಾಮ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವನ್ನಪ್ಪಿ ಮಣ್ಣು ಬರಡಾಗುತ್ತಿದೆ. ಭೂಮಿಯ ಮೇಲೆ ಇರುವ ಆರರಿಂದ ಒಂಭತ್ತು ಇಂಚು ಮಣ್ಣು ಮಾತ್ರ ಜೀವಂತವಾಗಿದ್ದು ಸಸ್ಯಗಳಿಗೆ ಬೇಕಾದ ಸಮಗ್ರ ಪೋಷಕಾಂಶಗಳನ್ನು ಅದು ಒದಗಿಸಿಕೊಡುತ್ತದೆ.
ಆದ್ದರಿಂದ ನಾವು ಈ ಒಂಭತ್ತು ಇಂಚು ಮಣ್ಣನ್ನು ಸದಾ ಜೀವಂತವಾಗಿಟ್ಟುಕೊಳ್ಳವ ನಿಟ್ಟಿನಲ್ಲಿ ನಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಈಗಾದಾಗ ಭೂಮಿಯ 25 ಅಡಿ ಆಳದ ಲ್ಲಿರುವ ಎರೆಹುಳುಗಳು ತಮ್ಮ ಕೆಲಸವನ್ನು ಸಲೀಸಾಗಿ ನಿರ್ವಹಿಸಿ ಗಾಳಿಯಾಡುವಂತೆ ಮಾಡಿ ಜೀವಂತ ಮಣ್ಣು ನಿಮರ್ಾಣಮಾಡುತ್ತವೆ.
ಯಾವುದೇ ಬೆಳೆಗಳು ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಸಮಾನವಾಗಿ ಸ್ವೀಕರಿಸುತ್ತವೆ. ಸಾವಯವದಲ್ಲಿ ಬೆಳೆದ ಬೆಳೆ ಶೇ 10 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಂಡರೆ, ರಸಾಯನಿಕದಲ್ಲಿ ಬೆಳೆದ ಸಸ್ಯಗಳು ಶೇ 3 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಅವಕ್ಕೆ ಸಿದ್ಧ ಆಹಾರ ಸಿಗುವುದರಿಂದ ಅವು ಸೋಮಾರಿಗಳಾಗಿಬಿಡುತ್ತವೆ. ಕಳೆದ 50-60 ವರ್ಷಗಳಿಂದ ನಾವು ಹೀಗೆ ಮಾಡುತ್ತಾ ಬಂದಿದ್ದು ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಪರಿಣಾಮ ಸಸ್ಯಗಳು ಬಿಸಿಲನ್ನು ಬಳಸಿಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಅದಕ್ಕಾಗಿ ನಾವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕೆಲಸವನ್ನು ಮೊದಲು ಮಾಡಬೇಕು. ರಾಸಾಯನಿಕ ಗೊಬ್ಬರ ಬಳಕೆಯನ್ನು ತಕ್ಷಣ ನಿಲ್ಲಿಸಿ, ಸಾವಯವ ಕೃಷಿಗೆ ಮರಳಬೇಕು.
ಕಳೆದು ಹೋಗಿರುವ ಮಣ್ಣಿನ ಫಲವತ್ತತೆಯನ್ನು ಮರಳಿ ತರಲು ದ್ರವ ರೂಪದ (ಜೀವಾಮೃತ ಅಥವಾ ರಸಸಾರ) ಗೊಬ್ಬರಗಳು ಚಮತ್ಕಾರಿಕ ಕೆಲಸಗಳನ್ನು ಮಾಡುತ್ತವೆ. ನಾನು ಮತ್ತು ನನ್ನಂತಹ ಹಲವಾರು ರೈತರ ಅನುಭವದಿಂದ ಕಳೆದ 25 ವರ್ಷಗಳಿಂದ ವಿವಿಧ ಬೆಳೆಗಳ ಮೇಲೆ ಪ್ರಯೋಗಮಾಡುತ್ತಾ, ಸುಧಾರಣೆ ಮಾಡುತ್ತಾ ಅಭಿವೃದ್ಧಿಪಡಿಸಿದ ದ್ರವಣಗಳು ಇವು. ಇವುಗಳಿಗೆ ಆರ್ಕೆ ದ್ರಾವಣ, ಅಮುದಂ ದ್ರಾವಣ, ಪಂಚಗವ್ಯ, ಮೊಟ್ಟೆ ನಿಂಬೆ ರಸದ ಪಾನಕ,ಮಜ್ಜಿಗೆ ದ್ರಾವಣ, ಎಲೆಗಳ ಕಷಾಯ, ಮೀನು ಬೆಲ್ಲದ ಶರಬತ್ತು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮ್ಮ 25 ವರ್ಷದ ಅನುಭವ ತಕ್ಷಣ ನಿಮಗೆ ಸಿಗುವುದರಿಂದ ನೀವು ನಮಗಿಂತ 25 ವರ್ಷ ಮುಂದೆ ಇದ್ದೀರಿ. ನಮ್ಮ ಅನುಭವದ ಆಧಾರದ ಮೇಲೆ ನೀವು ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ನಿಮದಾಗಿಸಿಕೊಳ್ಳಬಹುದು ಎಂದರು ಸುಂದರ ರಾಮನ್.
ರಸಾಯನಿಕ ತಂದ ಆಪತ್ತು: ಮನುಷ್ಯನ ಸರಾಸರಿ ಆಯಸ್ಸು ಈಗ 60 ರಿಂದ 65 ವರ್ಷಕ್ಕೆ ಬಂದು ನಿಂತಿದೆ. ಇದೇ ರೀತಿ ನಾವು ವಿಷಯುಕ್ತ ಆಹಾರ ಸೇವನೆ ಮಾಡುತ್ತಾ ಹೋದರೆ ಮುಂದೆ 40 ರಿಂದ 45 ವರ್ಷಗಳಿಗೆ ಬಂದು ನಿಲ್ಲುವುದರಲ್ಲಿ ಅನುಮಾನ ಇಲ್ಲ. ಮನುಷ್ಯನನ್ನು 50 ವರ್ಷಕ್ಕೆ ಕೊಲ್ಲಲ್ಲು ನಾವು ಇಂತಹ ವಿಷ ಪದಾರ್ಥಗಳನ್ನು ಬಳಸಿ ವ್ಯವಸಾಯ ಮಾಡಬೇಕೆ ?. ನಮಗ್ಯಾಕೆ ಬೇಕು ಇಂತಹ ಬೇಸಾಯ. ಮುಂದಿನ ಜನಾಂಗದ ಭವಿಷ್ಯ ನೆನೆದರೆ ಭಯವಾಗುತ್ತದೆ. ನಾವು ಕಳೆದ 20 ವರ್ಷಗಳಿಂದ ಏನನ್ನು ಹೊರಗಿನಿಂದ ತಂದು ತಿಂದಿಲ್ಲ.ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. ನಮ್ಮ ಮನೆಯಲ್ಲಿ ಯಾರು ಇಂದಿಗೂ ಆಸ್ಪತ್ರೆಯ ಮೆಟ್ಟಿಲನ್ನು ತುಳಿದಿಲ್ಲ. ಇದಕ್ಕೆಲ್ಲ ಕಾರಣ ನಾವು ಅನುಸರಿಸುತ್ತಿರುವ ರಸಸಾರ ಸಾವಯವ ಕೃಷಿ.
ಅಮೇರಿಕಾ, ಚೀನಾ ದೇಶದಲ್ಲಿ ಮನುಷ್ಯ 135 ವರ್ಷ ಬದುಕಿದ ಜೀವಂತ ಉದಾಹರಣೆಗಳು ನಮ್ಮ ಮುಂದಿವೆ.ಹಾಗಾಗಿ ಯಾರೇ ಕೃಷಿ ಮಾಡಿದರು "ಮೊದಲು ನಾವು ನಂತರ ಮಾರುಕಟ್ಟೆ" ಎಂಬ ತತ್ವವನ್ನು ಧ್ಯೇಯವನ್ನಾಗಿಸಿಕೊಳ್ಳಬೇಕು.
ಅಮೇರಿಕಾದ ರೂಡಲೇ ಸಂಸ್ಥೆಯವರು 80 ವರ್ಷ ರಾಸಾಯನಿಕ ಮತ್ತು ಜೈವಿಕ ಕೃಷಿಯಲ್ಲಿ ಪ್ರಯೋಗಮಾಡಿ (ಆಸಕ್ತರು ಆರ್ಯುಡಿಎಎಲ್ಇ ಇನ್ಸ್ಟಿಟ್ಯೂಟ್ ಎಂಬ ಜಾಲ ತಾಣವನ್ನು ನೋಡಬಹುದು) ಜೈವಿಕ ಕೃಷಿಯಲ್ಲಿ ಮಾತ್ರ ಅಧಿಕ ಇಳುವರಿ ಮತ್ತು ಸತ್ವ ಇದೆ ಎಂಬ ಸಾರ್ವಕಾಲೀಕ ಸತ್ಯವನ್ನು ಕಂಡುಕೊಂಡಿದ್ದಾರೆ. ರಾಸಾಯನಿಕ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡರೆ, ಜೈವಿಕ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಸತ್ವವನ್ನು ಹೆಚ್ಚಿಸಿಕೊಳ್ಳುತ್ತಾ ಅಧಿಕ ಇಳುವರಿ ನೀಡುತ್ತಾ ಹೋದ ಸತ್ಯವನ್ನು ಅವರು ವಿವರಿಸಿದ್ದಾರೆ. ರಾಸಾಯನಿಕ ಬಳಕೆ ಮಾಡುವುದರಿಂದ ಭೂಮಿ ಗಟ್ಟಿಯಾಗಿ ನೀರು ಕುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭೂಮಿಗೆ ಬಿದ್ದ ಮಳೆಯ ನೀರು ಹರಿದು ವ್ಯರ್ಥವಾಗಿ ಸಮುದ್ರವನ್ನು ಸೇರುವುದರಿಂದ ಅಂತರ್ಜಲ ಮಟ್ಟವೂ ಕುಸಿತಕಂಡು ಅಪಾಯ ತಂದುಕೊಳ್ಳುತ್ತಿದ್ದೇವೆ.
ಫಲ ಭಿತ್ತನೆ : ಯಾವುದೇ ಬೆಳೆ ಬೆಳೆಯುವ ಮುನ್ನಾ ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತನೆ ಮಾಡಬೇಕು. ಇದರಿಂದಾಗಿ ಅಗಾಧ ಪರಿಣಾಮ ಉಂಟಾಗುತ್ತದೆ. ಯೂರಿಯಾ ಡಿಎಪಿ ಎನ್ಪಿಕೆ ಹೀಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ನಾವು ಭೂಮಿಗೆ ನೀಡಿದರು ಯಾವುದೇ ಸಸ್ಯ ಮೂರನೇ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಉಳಿದದ್ದು ಭೂಮಿಯಲ್ಲೇ ಕರಗಿ ಭೂಮಿಯ ಫಲವತ್ತತೆಯನ್ನು ನಾಶಮಾಡುತ್ತದೆ.
ಏಕದಳ ಮತ್ತು ದ್ವಿದಳ ರೀತಿಯ ನವ ಧಾನ್ಯಗಳನ್ನು ಮಿಶ್ರಣಮಾಡಿಕೊಂಡು ಮುಖ್ಯ ಫಸಲು ಮಾಡುವ 60 ರಿಂದ 70 ದಿನ ಮೊದಲು ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತಬೇಕು. ಇದರಿಂದಾಗಿ ಮಣ್ಣು ಫಲವತ್ತಾಗಿ, ಆರೋಗ್ಯಕರವಾಗುತ್ತದೆ. ಮಣ್ಣನ್ನು ಫಲವತ್ತು ಮಾಡಿದರೆ ಭೂಮಿಯಲ್ಲಿ ಶೇ 3 ರ ಪ್ರಮಾಣದಲ್ಲಿದ್ದ ಸೂಕ್ಷ್ಮಾಣು ಜೀವಿಗಳು ಶೇ 10 ರಷ್ಟಾಗುತ್ತವೆ. ಮಣ್ಣಿನ ಫಲವತ್ತು ಮಾಡುವುದು ಮತ್ತು ಆರೋಗ್ಯಕರಮಾಡುವುದಷ್ಟೇ ನಮ್ಮ ಕೆಲಸ. ಉಳಿದದ್ದನ್ನು ಪ್ರಕೃತಿ ನೋಡಿಕೊಳ್ಳುತ್ತದೆ.ಇದು ಶಿವನಿಲ್ಲದೆ ಶಕ್ತಿ ಇಲ್ಲ ಶಕ್ತಿ ಇಲ್ಲದೆ ಶಿವನಿಲ್ಲ (ಶಿವನಿಲ್ಲಾಮೆ ಶಕ್ತಿ ಇಲ್ಲೈ ,ಶಕ್ತಿ ಇಲ್ಲಾಮೆ ಶಿವನಿಲ್ಲೈ) ಎನ್ನುವಂತೆ. ಫಲ ಧಾನ್ಯ ಭಿತ್ತನೆ ಮಾಡಿದ 60 ದಿನದ ನಂತರ ಅದನ್ನು ರೋಟವೇಟರ್ ಸಹಾಯದಿಂದ ಮಣ್ಣಿಗೆ ಸೇರಿಸಬೇಕು. ಇದರಿಂದ 10 ಟನ್ಗೂ ಮಿಗಿಲಾಗಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ಬರಡು ಮಣ್ಣನ್ನು ಆರು ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಫಲವತ್ತು ಮಾಡಬಹುದು.ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡುವುದನ್ನು ನಾವು ನಿಲ್ಲಿಸಬೇಕು. ಸಾಧ್ಯವಾದಷ್ಟು ಮಾನವನ ಹಸ್ತಕ್ಷೇಪವನ್ನು ಕಡಿಮೆ ಮಾಡಿಕೊಂಡರೆ ಸಾವಯವ ಕೃಷಿಯಲ್ಲಿ ಉತ್ತಮ ಪಲಿತಾಂಶ ಕಾಣಬಹುದು.
ದ್ರಾವಣ ಅಥವಾ ರಸ ಸಾರ :10 ಎಕರೆ ಜಮೀನು ನಿರ್ವಹಿಸಲು ಎರಡು ಜಾನುವಾರು ಸಾಕು. ಇದರಿಂದ ಸಿಗುವ ಗೋಮೂತ್ರ ಮತ್ತು ಸಗಣಿಯನ್ನು ಬಳಸಿ ದ್ರವಣ ಮಾಡಿಕೊಂಡು ಭೂಮಿಗೆ ಕೊಡುತ್ತಾ ಹೋದರೆ ಸೂಕ್ಷ್ಮಾಣು ಜೀವಿಗಳು ಕೋಟ್ಯಾನು ಕೋಟಿಯಾಗಿ ಭೂಮಿ ಫಲವತ್ತಾಗುತ್ತದೆ.
ಇದಕ್ಕಾಗಿ ನಾವು ಹೊರಗಿನಿಂದ ಏನನ್ನು ಹಣ ಕೊಟ್ಟು ತರಬೇಕಾಗಿಲ್ಲ. ಜಮೀನಿನಲ್ಲೇ ಸಿಗುವ ಔಷದೀಯ ಗಿಡಗಳನ್ನು ಸಗಣಿ ಮತ್ತು ಗೋಮೂತ್ರದ ಜತೆ ಬಳಸಿಕೊಂಡು ಎಲ್ಲಾ ರೀತಿಯ ಕೀಟ ಬಾಧೆಗಳಿಗೆ ಕ್ರಿಮಿನಾಶಕ ತಯಾರುಮಾಡಿಕೊಳ್ಳಬಹುದು.
ಎಲ್ಲಾಕ್ಕಿಂತ ಮುಖ್ಯವಾಗಿ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚು ಮಾಡುವುದರಿಂದ ಅವು ಬಲಿಷ್ಠ ಸೈನಿಕರಂತೆ ಕೆಲಸ ನಿರ್ಮಹಿಸಿ ಗಿಡಗಳಿಗೆ ಬಾಧೆ ತರುವ ಕೀಟಗಳನ್ನು ನಿಯಂತ್ರಿಸುತ್ತವೆ.ರಾಸಾಯನಿಕದಲ್ಲಿ ಕೀಟಗಳನ್ನು ಕೊಲ್ಲುವುದೇ ಮುಖ್ಯವಾದರೆ ನಮ್ಮ ಕೃಷಿ ವಿಧಾನದಲ್ಲಿ ಒಳ್ಳೆಯ ಸೂಕ್ಷ್ಮಾಣು ಜೀವಿಗಳನ್ನು ಬಲಿಷ್ಠಮಾಡುವುದು ಮುಖ್ಯ. ನಮ್ಮಲ್ಲಿ ಕೊಲ್ಲುವ ಮಾತೇ ಇಲ್ಲ. ರಸಾಯನಿಕ ಮತ್ತು ಸಾವಯವ ಕೃಷಿಗೆ ಇರುವ ವ್ಯತ್ಯಾಸ ಇಷ್ಟೆ.
ಹೀಗೆ ಬಾಳೆ, ಅರಿಶಿನ, ಕಬ್ಬು, ತೆಂಗು, ವಿವಿಧ ತರಕಾರಿ ಬೆಳೆಗಳನ್ನು ಕೇವಲ ರಸ ಸಾರವನ್ನು ಬಳಸಿಕೊಂಡು ಬೆಳೆಯುವ ಸರಳ ವಿಧಾನಗಳನ್ನು ಸುಂದರ ರಾಮನ್ ಹೇಳುತ್ತಾ ಹೋದರು. ನಾವು ಮಂತ್ರಮುಗ್ಧರಾಗಿ ವಿಧೇಯ ವಿದ್ಯಾಥರ್ಿಗಳಂತೆ ಕೇಳಿಸಿಕೊಳ್ಳುತ್ತಾ ಹೋದೆವು. ನಿಜಕ್ಕೂ ನಮ್ಮ ಕೃಷಿ ಇಷ್ಟೊಂದು ಸರಳ ಮತ್ತು ಕಡಿಮೆ ಖಚರ್ಿನದ್ದಾಗಿದ್ದು ನಾವ್ಯಾಕೆ ರಾಸಾಯನಿಕ ಗೊಬ್ಬರಕ್ಕಾಗಿ ಲಕ್ಷಾಂತರ ಹಣ ಸುರಿದು ಆರೋಗ್ಯ, ಹಣ ಎರಡನ್ನೂ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಅಬಾಲ ವೃದ್ಧರಾಗುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಿತು. ಸುಂದರರಾಮನ್ ಅವರ ಮಾತು ಕೇಳಿಸಿಕೊಂಡ ಯಾರೇ ಆದರೂ ತಕ್ಷಣದಿಂದಲೇ ರಾಸಾಯನಿಕ ಗೊಬ್ಬರಕ್ಕೆ ವಿದಾಯ ಹೇಳಿ ಪ್ರಕೃತಿಗೆ ಸನಿಹವಾದ ಸಾವಯವ ಕೃಷಿಯತ್ತ ಮುಖ ಮಾಡಿನಿಲ್ಲುವುದು ನಿಶ್ಚಿತ ಅನಿಸಿತು.
ತಮಿಳುನಾಡು, ಕನರ್ಾಟಕ ಸೇರಿದಂತೆ ಹಲವಾರು ಕಡೆ ಸುಂದರರಾಮನ್ ರೂಪಿಸಿದ ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಜಾರಿಮಾಡಿಕೊಂಡು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ತಾಳವಾಡಿಗೆ ಸಮೀಪ ಇರುವ ಕಲ್ಲುಬಂಡಿಪುರದಲ್ಲಿರುವ ಶಕ್ತಿವೇಲು ತಮ್ಮ ಹದಿಮೂರು ಎಕರೆ ಪ್ರದೇಶದಲ್ಲಿ ರಸ ಸಾರ ಬಳಸಿ ಸರಳ ರೀತಿಯಲ್ಲಿ ಕೃಷಿ ಮಾಡುತ್ತಿದ್ದರೆ, ಗುಂಡ್ಲುಪೇಟೆಯ ಕೂಗಳತೆ ದೂರದಲ್ಲಿರುವ ವೀರನಪುರದಲ್ಲಿ ರಾಜು ಎನ್ನುವವರು ಸುಂದರರಾಮನ್ ರೂಪಿಸಿದ ದ್ರವಣಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಬಾಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸುಂದರರಾಮನ್ ಅವರ ಶಿಷ್ಯ ಚಾಮರಾಜನಗರ ಜಿಲ್ಲೆಯಲ್ಲಿ ಜೈವಿಕ ಕೃಷಿಯನ್ನು ಮುನ್ನಲೆಗೆ ತರುವ ಕೆಲಸಮಾಡುತ್ತಿರುವ ರಾಜು ಅವರನ್ನು ಮೊ.9448954851 ಸಂಪಕರ್ಿಸಬಹುದು. - ಚಿನ್ನಸ್ವಾಮಿ ವಡ್ಡಗೆರೆ
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ಮಣ್ಣಿನ ಸೆಳೆತಕ್ಕೆ ಮನಸೋತ ಹಸಿರು ಪ್ರೇಮಿ
ನಂಬಿದವರ ಕೈ ಬಿಡಾಕಿಲ್ಲ ಭೂಮತಾಯಿ ಎಂದ ಕೃಷ್ಣರಾವ್
ಚಾಮರಾಜನಗರ : ನಗರ ಜನರ ಹಸಿರು ಪ್ರೀತಿ ಇತ್ತೀಚಿಗೆ ಒಂದು ಫ್ಯಾಶನ್ ಆಗಿದೆ. ಟೆಕ್ಕಿಗಳು, ಹಣವಂತರು ಕೃಷಿಯ ಕಡೆಗೆ ಆಕಷರ್ಿತರಾಗುತ್ತಿದ್ದಾರೆ. ಪರಿಣಾಮ ಹೊಸದಾಗಿ ಕೃಷಿ ಭೂಮಿ ಖರೀದಿಸಿ ಹೊಸ ಹೊಸ ಸಾಧನೆಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ಹಳ್ಳಿಯ ಪಾರಂಪರಿಕ ಕೃಷಿಕೂಡ ಸಾಕಷ್ಟು ಸುಧಾರಣೆಯತ್ತ ಸಾಗುತ್ತಿರುವುದನ್ನು ಕಾಣಬಹುದು.ಹೊಸದಾಗಿ ಬಂದ ವಿದ್ಯಾವಂತರು ಪರಿಚಯಿಸುತ್ತಿರುವ ಹೊಸಹೊಸ ಪ್ರಯೋಗಗಳು ನಮ್ಮವರಿಗೂ ಮಾದರಿಗಳಾಗುತ್ತಿವೆ. ಮಾರುಕಟ್ಟೆ, ಭಿತ್ತನೆ ಬೀಜ, ತಂತ್ರಜ್ಞಾನಗಳ ಬಳಕೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸುತ್ತಿವೆ.
ಇಂತಹವರ ಸಾಲಿಗೆ ನಿಲ್ಲಬಲ್ಲವರು ಕೃಷ್ಣರಾವ್. ಬಿಡುವಿಲ್ಲದ ಕೆಲಸ.ವ್ಯಾಪಾರ, ಸುತ್ತಾಟದಿಂದ ಉಂಟಾದ ಒತ್ತಡದಿಂದ ಬೇಸತ್ತು ಭೂಮಿಯ ಸೆಳೆತಕ್ಕೆ ಅವರು ಮನಸೋತಿದ್ದಾರೆ.
ಮೂಲತಃ ಕೃಷಿಕರೆ ಆದ ಹುಣಸೂರು ತಾಲೂಕು ರತ್ನಪುರಿಗ್ರಾಮದ ಕೃಷ್ಣರಾವ್ ಓದಿದ್ದು ಭೂಗರ್ಭ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ.ನಂತರ ಅವರು ದೇಶ ವಿದೇಶಗಳಲ್ಲಿ ಕಲ್ಲು ಗಣಿ ಮಾಕರ್ೇಟಿಂಗ್ಗಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಚೀನಾ,ಜಪಾನ್ ಸೇರಿದಂತೆ ನಾನಾ ದೇಶಗಳಲ್ಲಿ ವ್ಯಾಪಾರ ವಹಿವಾಟು ಮಾಡಿದರು. ಕೊನೆಗೆ ಅವರು ಬಂದು ನಿಂತಿದ್ದು ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಸಮೀಪ ಇರುವ ಕುದೇರು ಮತ್ತು ದೇಮಳ್ಳಿ ನಡುವೆ ಹೊಸದಾಗಿ ಖರೀದಿಸಿದ ತಮ್ಮ ಕರ್ಮಭೂಮಿಯಲ್ಲಿ. ಇಲ್ಲಿ ಎಬಚಗಳ್ಳಿಯ ಮಹೇಶ್ ಎಂಬ ತರುಣನ ಜೊತೆ ಸೇರಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಗೆಳೆಯರು ಪ್ರೀತಿಯಿಂದ ಅವರನ್ನು "ಕಲ್ಲು' ಎಂದೇ ಕರೆಯುತ್ತಾರೆ.
ಉಸಿರುಗಟ್ಟಿಸುವ ನಗರದ ವಾತಾವರಣ,ವೇಗದ ಬದುಕು, ಸದಾ ಏರುಪೇರಾಗುವ ವ್ಯಾಪಾರ ಇದೆಲ್ಲದ್ದರ ಒತ್ತಡದಿಂದ ಪಾರಾಗಲು ಯೋಚಿಸುತ್ತಿದ್ದಾಗ ಹೊಳೆದದ್ದು ಕೃಷಿ. ಭೂಮಿ ತಾಯಿ ನಂಬಿದವರನ್ನ ಎಂದಿಗೂ ಕೈಬಿಡಲ್ಲ ಎಂಬ ನಂಬಿಕೆಯಿಂದ ಕೃಷಿಕನಾಗಿದ್ದೇನೆ ಎಂದರು ಕೃಷ್ಣರಾವ್.
ತನ್ನ ಆಲೋಚನೆಗಳನ್ನು ಭೂಮಿಯಲ್ಲಿ ಸಾಕಾರಗೊಳಿಸಲು ತಮ್ಮನಂತಹ ಆತ್ಮೀಯ ಗೆಳೆಯ ಮಹೇಶ್ ತಮ್ಮ ಜೊತೆ ಕೈಜೋಡಿಸಿದ್ದು ತಮ್ಮ ಕೃಷಿ ಬದುಕಿಗೆ ಸ್ಫೂತರ್ಿಯಾಯಿತು ಎನ್ನುತ್ತಾರೆ. ತಾವು ತಮ್ಮ ಕೆಲಸದ ನಿಮಿತ್ತ ರಾಜ್ಯದ ಎಲ್ಲೆಡೆ ಸುತ್ತಾಡುವಾಗ ಅಲ್ಲಿ ಸಿಗುವ ಬೇರೆ ಬೇರೆ ಹಣ್ಣು ಮತ್ತು ಔಷದೀಯ ಸಸ್ಯಗಳನ್ನು ತೋಟದ ಅಲ್ಲಲ್ಲಿ ಹಾಕಿದ್ದಾರೆ.
ಬೇಳೆ ಕಾಳುಗಳ ಸಂಯೋಜನೆ : ದೇಮಹಳ್ಳಿ ಸಮೀಪ ತಮ್ಮ ಹದಿಮೂರು ಎಕರೆ ಇರುವ ಜಮೀನಿನಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದು ಮುಖ್ಯವಾಗಿ ಬೇಳೆಕಾಳುಗಳನ್ನು ಬೆಳೆಯುತ್ತಾರೆ. ಸಂಪೂರ್ಣ ಎರೆಮಣ್ಣು ಇರುವ ಇಲ್ಲಿ ಕೊತ್ತಂಬರಿ, ಹೆಸರು. ಉದ್ದು, ಮುಸುಕಿನ ಜೋಳದಂತಹ ದ್ವಿದಳ ದಾನ್ಯಗಳನ್ನು ಬೆಳೆಯುತ್ತಿರುವ ಇವರು ತೋಟದ ಸುತ್ತ ವಿಶೇಷ ತಳಿಯ ಬೇಗ ಕಟಾವಿಗೆ ಬರುವ ತೇಗದ ಮರಗಳನ್ನು ನಾಟಿಮಾಡಿದ್ದಾರೆ. ಅಲ್ಲದೇ ಮಂಡ್ಯ ಸಮೀಪ ಇರುವ ಲೋಕಸರದ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಎಳನೀರು ತಳಿಯ 200 ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಹಾಕಿದ್ದಾರೆ. ಇದಲ್ಲದೆ ಮೂಸಂಬಿ, ಕರಿಬೇವು, ನುಗ್ಗೆ, ನೆಲ್ಲಿ,ನೇರಳೆ,ಅಮಟೆ ,ಅಂಜೂರ ಹೀಗೆ ಮುಂತಾದ ಹಣ್ಣಿನ ಗಿಡಗಳನ್ನು ಹಾಕಿದ್ದು ಸಮಗ್ರ ಕೃಷಿಯ ಕಲ್ಪನೆಯನ್ನು ಸಾಕಾರಮಾಡಿದ್ದಾರೆ.ಕೃಷಿಯ ಬಗ್ಗೆ ಈಗ ತಿಳಿದುಕೊಳ್ಳತೊಡಗಿದ್ದು ಈಗ ಸ್ವಲ್ಪ ರಾಸಾಯನಿಕ ಬಳಸುತ್ತಿದ್ದೇವೆ, ಮುಂದೆ ಸಂಪೂರ್ಣ ಸಾವಯವ ಕೃಷಿಮಾಡಲು ಆಲೋಚಿಸುತ್ತಿದ್ದೇವೆ ಎನ್ನುತ್ತಾರೆ.
ಸಾಮಾನ್ಯವಾಗಿ ರೈತರು ತಮ್ಮ ತೋಟದಲ್ಲಿ ಮುಖ್ಯ ಬೆಳೆ ಮಾಡುವಾಗ ಬೇಲಿಯ ಸುತ್ತಲು ಒಂದಿಂಚು ಜಾಗವನ್ನು ಬಿಡದೆ ಫಸಲು ಹಾಕುತ್ತಾರೆ. ಆದರೆ ಇವರು ಆ ರೀತಿ ಮಾಡದೇ ಅಲ್ಲೂ ಜಾಣ್ಮೆ ಮೆರೆದಿದ್ದಾರೆ. ಬೇಲಿಯ ಬದುವಿನಲ್ಲಿ ಸುಮಾರು ಒಂದು ಮೀಟರ್ನಷ್ಟು ಜಾಗವನ್ನು ಯಾವುದೇ ಮುಖ್ಯ ಬೆಳೆ ಬೆಳೆಯದೇ ತುಪ್ಪದ ಈರೇಕಾಯಿ, ಕುಂಬಳಕಾಯಿ, ಹಾಗಲ ಕಾಯಿ ಹೀಗೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಸಂಯೋಜನೆ ಮಾಡಿದ್ದು ಇದರಿಂದ ಮನೆಗೆ ಬೇಕಾದ ತರಕಾರಿಗಳು ವರ್ಷಪೂತರ್ಿ ಸಿಗುವಂತೆ ಮಾಡಿಕೊಂಡಿದ್ದಾರೆ.
ಬಾಳೆ ಬಾಗಿದಾಗ : ಕುದೇರು ಸಮೀಪ ಹೊಸದಾಗಿ ಆರಂಭವಾಗಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಕೊಗಳತೆ ದೂರದಲ್ಲಿರು ಕೆಂಪು ಮಣ್ಣಿನಿಂದ ಕೂಡಿದ ಮೂರುವರೆ ಎಕರೆಯಲ್ಲಿ ಇವರು ಮಾಡಿರು ಕೃಷಿ ಪ್ರಯೋಗ ಮೊದಲ ನೋಟದಲ್ಲೆ ಗಮನ ಸೆಳೆಯುತ್ತದೆ.
ಚಾಮರಾಜನಗರ ಸಮೀಪ ಎಣ್ಣೆಹೊಳೆಯ ತೋಟವೊಂದರಲ್ಲಿ ತಂದು ಹಾಕಿರುವ ಏಲಕ್ಕಿ ಬಾಳೆ ಕಂದುಗಳು ದಷ್ಟಪುಷ್ಟವಾಗಿದ್ದು ಅಂಗಾಂಶ ಕೃಷಿಯ ಗಿಡಗಳು ನಾಚುವಂತೆ ನಳನಳಿಸುತ್ತಿವೆ.
ಕಳೆದ ವರ್ಷ ನವಂಬರ್ ತಿಂಗಳಿನಲ್ಲಿ ನಾಟಿ ಮಾಡಿರುವ 3400 ಏಲಕ್ಕಿ ಬಾಳೆ ಫಲವತ್ತಾಗಿ ಬಂದಿದ್ದು ಈಗ ಗೊನೆ ಬರಲು ಶುರುವಾಗಿವೆ. ಸರಿಯಾಗಿ ಗೊನೆಗಳು ವರಲಕ್ಷ್ಮಿ ಹಬ್ಬ, ದಸರಾ ಸಮಯದಲ್ಲಿ ಕಟಾವಿಗೆ ಬರುವಂತೆ ಯೋಜನೆಮಾಡಿ ಹಾಕಿದ್ದು ಪ್ರತಿ ಗೊನೆ ಸರಾಸರಿ 15 ಕೆಜಿ ಬರುವಂತಿದ್ದು ಅದರಿಂದ 20 ಲಕ್ಷಕ್ಕೂ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಿದ್ದಾರೆ.
ಸುತ್ತಮುತ್ತ ನೀರಿಗೆ ತೊಂದರೆ ಇದೆ. ಆದರೆ ತಾವು ಹೊಸದಾಗಿ ಖರೀದಿಸಿದ ಈ ಜಮೀನು ಕಳೆದ 20 ವರ್ಷಗಳಿಂದ ವವ್ಯಸಾಯವನ್ನೇ ಮಾಡದೆ ಪಾಳು ಬಿದ್ದಿತ್ತು. ಅಲ್ಲಿ ಜಮೀನು ಕೊಂಡು ಮೊದಲು ನಾವು ಮಾಡಿದ್ದು ನೀರಿಗಾಗಿ ಬೋರ್ವೆಲ್ ಹಾಕಿಸಿದ್ದು. ಎರಡುವರೆ ಇಂಚು ನೀರು ಬಂತು. ಬೋರ್ ಹಾಕುವಾಗ ನೀರಿನ ರಭಸಕ್ಕೆ ಬೆಣಚುಕಲ್ಲೊಂದು ರೊಯ್ಯನೇ ಮೇಲೆ ಹಾರಿ ಕೆಳಗೆ ಬಿತ್ತು. ಆ ಖುಶಿ, ಸಂಭ್ರಮ ನನ್ನ ಜೀವನದಲ್ಲಿ ಎಂದೂ ಮರೆಯಲಾದ ನೆನಪು. ಅದಕ್ಕಾಗಿಯೇ ಆ ಕಲ್ಲನ್ನು ಈಗಲೂ ತಮ್ಮ ಮನೆಯಲ್ಲಿ ಇಟ್ಟಿರುವುದಾಗಿ ಕೃಷ್ಣರಾವ್ ಹೇಳುತ್ತಾರೆ.
ವ್ಯವಸಾಯವನ್ನೇ ಮಾಡದೇ ಪಾಳು ಬಿಟ್ಟಿದ್ದ ಜಮೀನಾಗಿದ್ದರಿಂದ ನಾವು ಇಲ್ಲಿ ಏನೇ ಬೆಳೆದರು ಉತ್ತಮವಾದ ಫಸಲೇ ಬರುತ್ತಿದೆ. ಕೆಂಪು ಮಣ್ಣಿನಿಂದ ಕೂಡಿರುವ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಕೃಷಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ತನ್ನನ್ನು ಹುಣಸೂರಿನಿಂದ ಇಲ್ಲಿಗೆ ಕರೆದುಕೊಂಡು ಬಂತು ಎನ್ನುತ್ತಾರೆ.
ಈಗ ಕೃಷ್ಣರಾವ್ ಚಾಮರಾಜ ನಗರ ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ರೈತರಿಗೆ ತಾವೇ ಭಿತ್ತನೆ ಬೀಜ ಕೊಟ್ಟು ಮತ್ತೆ ಅವರಿಂದ ಬೆಳೆದ ಧಾನ್ಯಗಳನ್ನು ಖರೀದಿ ಮಾಡಿ ಅದಕ್ಕೆ ಸೂಕ್ತ ಮಾರುಕಟ್ಟೆ ರೂಪಿಸುವ ಹೊಸ ಯೋಜನೆಯೊಂದರ ಸಿದ್ಧತೆಯಲ್ಲಿದ್ದಾರೆ.ಜಿಲ್ಲೆಯ ಪರಿಸರ ಸಿರಿಧಾನ್ಯಗಳನ್ನು ಬೆಳೆಯಲು ಸೂಕ್ತವಾಗಿದ್ದು, ನಮ್ಮ ರೈತರು ಹೆಚ್ಚು ಖಚರ್ಿಲ್ಲದೆ ಸಿರಿಧಾನ್ಯ ಬೆಳೆದು ಹೆಚ್ಚು ಲಾಭ ಗಳಿಸಬಹುದು ಎನ್ನುತ್ತಾರೆ.
ಮೂರು ತಿಂಗಳಿಗೆ ಮೂರು ಲಕ್ಷ ಆದಾಯ : ಕಳೆದ ನವೆಂಬರ್ ತಿಂಗಳಿನಲ್ಲಿ ಬಾಳೆ ನಾಟಿ ಮಾಡುವಾಗ ಮಿಶ್ರ ಬೆಳೆಯಾಗಿ ಹಾಕಿದ ಕಲ್ಲಂಗಡಿಯಲ್ಲಿ ಬಂಪರ್ ಬೆಳೆ ತೆಗೆದು ಒಳ್ಳೆಯ ಲಾಭಗಳಿಸಿದ್ದಾರೆ.
ಮೂರುವರೆ ಎಕರೆಯಲ್ಲಿ ಒಟ್ಟು 60 ಟನ್ ಕಲ್ಲಂಗಡಿ ಬಂತು. ಅದರಲ್ಲಿ 48 ಟನ್ ಪ್ರಥಮ ದಜರ್ೆಯವು, 12 ಟನ್ ದ್ವಿತೀಯ ದಜರ್ೆಯ ಹಣ್ಣುಗಳು. ಕಲ್ಲಂಗಡಿ ಬಾಳೆ ಸೇರಿದಂತೆ ಮೂರು ತಿಂಗಳವರೆಗೆ ಒಟ್ಟು ಒಂದು ಲಕ್ಷದ ಅರವತ್ತು ಸಾವಿರ ರೂ ವೆಚ್ಚಮಾಡಲಾಗಿತ್ತು. ಕಲ್ಲಂಗಡಿ ಮಾರಾಟದಿಂದ ನಾಲ್ಕುವರೆ ಲಕ್ಷ ರೂ. ಆದಾಯ ಬಂತು. ಅಲ್ಲಿಗೆ ನಮಗೆ ಖಚರ್ು ಕಳೆದು ಮೂರು ಲಕ್ಷ ರೂ. ಉಳಿತಾಯವಾದಂತಾಯಿತು ಎನ್ನತ್ತಾರೆ ತೋಟದ ನಿರ್ವಹಣೆಯ ಹೊಣೆಹೊತ್ತ ಮಹೇಶ್.
ತಾನು ಕೂಡ ಕೃಷ್ಣರಾವ್ ಅವರ ಸಂಪರ್ಕಕ್ಕೆ ಬರುವ ಮೊದಲು ರಾಜಕೀಯದಲ್ಲಿ ಸಕ್ರೀಯವಾಗಿದ್ದೆ. ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಂತು ಪಂಚಾಯಿತಿ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದೆ. ಕೃಷ್ಣರಾವ್ ಅವರ ಸಂಪರ್ಕ ಸಿಕ್ಕ ಮೇಲೆ ರಾಜಕೀಯದಿಂದ ದೂರ ಸರಿದು ಸಂಪೂರ್ಣ ಕೃಷಿಯನ್ನೇ ಅವಲಂಭಿಸಿರುವುದಾಗಿ ಎಬಚಗಳ್ಳಿಯ ಮಹೇಶ್ ಹೇಳುತ್ತಾರೆ.
ಕೃಷಿಯಿಂದ ಮಾನಸಿಕ ನೆಮ್ಮದಿ ಇದ್ದು ಸದಾ ಹಸಿರಿನ ನಡುವೆ ಇರುವುದರಿಂದ ಆರೋಗ್ಯವಾಗಿದ್ದೇನೆ.ನಮ್ಮ ಯುವಕರು ರಾಜಕೀಯವನ್ನೇ ಪ್ರಧಾನವಾಗಿ ತೆಗೆದುಕೊಂಡು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಕೃಷಿ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಇದು ತಪ್ಪು ಕಲ್ಪನೆ. ಶ್ರದ್ಧೆಯಿಂದ, ಯೋಜನೆ ಹಾಕಿಕೊಂಡು ಕೃಷಿ ಮಾಡಿದರೆ ಎಂದಿಗೂ ನಷ್ಟ ಎಂಬ ಮಾತೇ ಇಲ್ಲ. ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಾರೆ ಮಹೇಶ್. ಆಸಕ್ತರು ಇವರನ್ನು ಮೊ.9743271157 ಸಂಪಕರ್ಿಸಬಹುದು.
ಬಾನೆತ್ತರ ಬೆಳೆವ ತೇಗ
ಚಾಮರಾಜನಗರ : ಕೃಷ್ಣರಾವ್ ಅವರ ತೋಟಕ್ಕೆ ಹೋದವರ ಮೊದಲ ಗಮನ ಸೆಳೆಯುವುದು ತೋಟದ ಸುತ್ತ ಹಾಕಿರುವ ಸಾವಿರಕ್ಕೂ ಹೆಚ್ಚು ತೇಗದ ಗಿಡಗಳು. ಬೆಂಗಳೂರಿನ ಮದರ್ ಬಯೋಟೆಕ್ ಸಂಸ್ಥೆಯಿಂದ ತಂದು ಹಾಕಿರುವ ತೇಗದ ಗಿಡಗಳು ಕೇವಲ ಆರೆ ತಿಂಗಳಲ್ಲಿ ಹತ್ತು ಅಡಿಗೂ ಎತ್ತರ ಬೆಳೆದು, ಅಗಲವಾದ ಎಲೆಗಳಿಂದ ಕೂಡಿವೆ.
ಅಂಗಾಂಶ ಕೃಷಿ ವಿಧಾನದಲ್ಲಿ ಈ ಗಿಡಗಳನ್ನು ಮೂರು ಹಂತಗಳಲ್ಲಿ ಬೆಳೆಸಲಾಗುತ್ತದೆ. ಪ್ರತಿ 30 ದಿನಗಳಂತೆ ಮೂರು ಹಂತಗಳಲ್ಲಿ 90 ದಿನ ಬೆಳೆಸಿದ ಒಂದು ಗಿಡದ ಬೆಲೆ 180 ರಿಂದ 220 ರೂಪಾಯಿ. ಆಯಾಯ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿಯೇ ಲ್ಯಾಬ್ನಲ್ಲಿ ಸಸಿಗಳನ್ನು ಬೆಳೆಸಲಾಗುತ್ತಾದೆ ಎನ್ನುತ್ತಾರೆ ಕೃಷ್ಣರಾವ್.
ಎರಡು ಅಡಿ ಅಗಲ ಆಳದ ಗುಂಡಿ ತೆಗೆದು ಪ್ರತಿ 7 ಅಡಿಗೆ ಒಂದರಂತೆ ಸಸಿಗಳನ್ನು ನಾಟಿ ಮಾಡಲಾಗಿದೆ. ಹತ್ತು ವರ್ಷಕ್ಕೆ ಸುಮಾರು 25 ಅಡಿಗಳಿಗೂ ಹೆಚ್ಚು ಉದ್ದ ಬೆಳೆಯುವ ಈ ತಳಿಯ ಮರದ ಗತರ್್ ಒಂದು ಮೀಟರ್ಗೂ ಮಿಗಿಲಾಗಿ ಇರುತ್ತದೆ. ಇಂತಹ ಗಿಡಮರಗಳನ್ನು ಜಮೀನಿನ ಬದುಗಳಲ್ಲಿ ನಮ್ಮ ರೈತರು ಬೆಳೆದುಕೊಳ್ಳುವುದರಿಂದ ಸಾಕಷ್ಟು ಆದಾಯಗಳಿಸಬಹುದು. ಅಲ್ಲದೆ ಮುಂದೊಂದು ದಿನ ಪರಿಶಯದ್ಧವಾದ ಗಾಳಿಯನ್ನು ಮಾರಾಟ ಮಾಡುವ ಜಾಲ ಸೃಷ್ಠಿಯಾಗುತ್ತದೆ. ನೀರನ್ನು ಬಾಟಲ್ನಲ್ಲಿ ಮಾರುವಂತೆ ಗಾಳಿಯನ್ನು ಮಾರಾಟಮಾಡುವ ಕಾಲ ಬರುತ್ತದೆ. ಇಂತಹ ಸಂಕಷ್ಟದಿಂದ ಪಾರಾಗಲು ನಮ್ಮ ರೈತರು ಬದುಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿಕೊಳ್ಳುವುದರಿಂದ ಮುಂದೊಂದು ದಿನ ಅವು ಸಾಕಷ್ಟು ಕಾಸು ತರಬಲ್ಲ ಆಸ್ತಿಗಳಾಗುತ್ತವೆ ಎನ್ನುತ್ತಾರೆ ಕೃಷ್ಣರಾವ್. ಆಸಕ್ತರು ಇವರನ್ನು ಮೊ.8762031704 ಸಂಪಕರ್ಿಸಬಹುದು.
ಕಾಡಂಚಿನ ಗ್ರಾಮ ವಡ್ಡಗೆರೆಯಲ್ಲಿ ಜನನ. ಚಾಮರಾಜನಗದಲ್ಲಿ ಪಿಯುಸಿ ,ಮೈಸೂರಿನಲ್ಲಿ ಪದವಿ ವಿಧ್ಯಾಭ್ಯಾಸ. ಪಿ.ಲಂಕೇಶ ,ಪೂರ್ಣ ಚಂದ್ರ ತೇಜಸ್ವಿ ಬರಹಗಳಿಂದ ಪ್ರಭಾವಿತ . ಕೆಲ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ. ಆಂದೋಲನ ,ವಿಜಯ ಕರ್ನಾಟಕ ದಿನ ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಬದುಕಿನಲ್ಲಿ ನಿರ್ಧಿಷ್ಟ ಗುರಿ ಉದ್ದೇಶ ಇಲ್ಲ.ಅಲೆಮಾರಿ. ಉಪನ್ಯಾಸಕ, ಪತ್ರಕರ್ತ, ಹೀಗೆ ಬದುಕಿನ ಬಂಡಿಸಾಗಿತ್ತು. ಈಗ ಕೃಷಿಯಲ್ಲಿ , ಕೃಷಿ ಬರವಣಿಗೆಯಲ್ಲಿ ವಿಶೇಷ ಆಸಕ್ತಿ . ಗ್ರಾಮೀಣ ಬದುಕನ್ನು ಹಸನಾಗಿಸುವ, ಪರಿಸರ ಮತ್ತು ಜೀವಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಹಂಬಲ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)