vaddagere.bloogspot.com

ಭಾನುವಾರ, ಏಪ್ರಿಲ್ 16, 2017

ಇದು "ಬೆಳವಲ"ದ ಮಡಿಲಲ್ಲಿ ಅರಳಿನಿಂತ ಸಸ್ಯಕಾಶಿ 
 ತರಬೇತಿ ಕೇಂದ್ರವಾಗಿಸಿದ ಬೇಸಾಯ ತಪಸ್ವಿ ರಾಮಕೃಷ್ಣಪ್ಪ
ಮೈಸೂರು : ಅದೊಂದು ಆರೂವರೆ ಎಕರೆ ಪ್ರದೇಶದ ಪ್ರಯೋಗಶೀಲ ತೋಟ. ಹನ್ನೆರಡಕ್ಕೂ ಹೆಚ್ಚು ತುಂಡು ಭಾಗಗಗಳಾಗಿ ವಿಂಗಡಿಸಿ ಬೇರೆ ಬೇರೆ ಸುಸ್ಥಿರ ಕೃಷಿ ತಾಕುಗಳಾಗಿ ರೂಪಿಸಿದ ಮಾದರಿ ಕೃಷಿ ತೋಟ. ಒಂದು ಎಕರೆ, ಅರ್ಧ ಎಕರೆ ಭೂಮಿ ಹೊಂದಿರುವ ರೈತರು ಹೇಗೆ ಸುಸ್ಥಿರ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ತೋರಿಸಲೆಂದೇ ಪ್ರಯೋಗಿಕವಾಗಿ ತೋರಿಸಲು ಕಟ್ಟಿದ ತೋಟ.
ಯಾವುದೆ ರಾಸಾಯನಿಕ ಕ್ರಿಮಿನಾಶಕ ಬಳಸದೆ,ಹೊರಗಿನಿಂದ ಏನನ್ನೂ ತಾರದೆ ಜಮೀನಿನಲ್ಲಿ ಸಿಗುವ ಕೃಷಿ ತ್ಯಾಜ್ಯಗಳನ್ನಷ್ಟೇ ಬಳಸಿಕೊಂಡು ಬೆಳೆಸಿದ ಸಸ್ಯಕಾಶಿ. ಮಣ್ಣು, ನೀರು, ಸೂಕ್ಷ್ಮಾಣುಜೀವಿಗಳು,ಪ್ರಾಣಿ,ಪಕ್ಷಿ,ಸಸ್ಯಗಳಿಗೆ ಸಾವಯವ ಸಂಬಂಧ ಕಲ್ಪಿಸುವ ಮೂಲಕ ಇಲ್ಲಿ ಪೌಷ್ಠಿಕ ಆಹಾರ ಉತ್ಪಾದನೆಗೆ ಆಧ್ಯತೆ ನೀಡಲಾಗಿದೆ. ಇದರ ಹೆಸರು "ಬೆಳವಲ ಫಾರಂ". ಇದರ ರೂವಾರಿ ಹೆಮ್ಮೆಯ ಕನ್ನಡಿಗ ರಾಮಕೃಷ್ಣಪ್ಪ ಎಂಬ ಬೇಸಾಯ ತಪಸ್ವಿ.ಇವರು ಮೂಲತಃ ತುಮಕೂರು ಜಿಲ್ಲೆಯವರು.
ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿ ಹಲವಾರು ರೈತಪರ ಯೋಜನೆ ರೂಪಿಸುವ ಮೂಲಕ ಒಳ್ಳೆಯ ಹೆಸರುಮಾಡಿದ್ದ ರಾಮಕೃಷ್ಣಪ್ಪ ನಿವೃತ್ತರಾದ ನಂತರವೂ ರೈತರ ಏಳಿಗೆಗೆ ದುಡಿಯುತ್ತಿದ್ದಾರೆ. ಇದಕ್ಕೆ ಅವರ ಪತ್ನಿ ಮಂಜುಳಾ ರಾಮಕೃಷ್ಣಪ್ಪ ಅವರ ಸಂಪೂರ್ಣ ಬೆಂಬಲವಿದೆ.
ಬೆಳವಲ ಪೌಂಡೇಶನ್ನ ಸಂಸ್ಥಾಪಕರೂ,ಅಧ್ಯಕ್ಷರು ಆದ ರಾಮಕೃಷ್ಣಪ್ಪ ಮೂರು ವರ್ಷದಲ್ಲಿ ಕಟ್ಟಿದ ತೋಟ ಈಗ  ರೈತರಿಗೆ,ಕೃಷಿ ಆಸಕ್ತರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ಕೇಂದ್ರವಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ಹೆಚ್ಚುವರಿ ನಿದರ್ೇಶಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸಮಾಡಿ ನಿವೃತ್ತರಾಗಿರುವ ರಾಮಕೃಷ್ಣಪ್ಪ ಈಗ ಬೆಂಗಳೂರಿನ ಲಾಲ್ಬಾಗ್ನಲ್ಲಿರುವ ಜೈವಿಕ್ ಕೃಷಿಕ್ ಸೊಸೈಟಿಯ ಅಧ್ಯಕ್ಷರಾಗಿಯೂ ರೈತರೊಂದಿಗೆ ನೇರ ಒಡನಾಟ ಇಟ್ಟುಕೊಂಡಿದ್ದಾರೆ.
ಮೈಸೂರಿನಿಂದ ಕೇವಲ ಹನ್ನೆರಡು ಕಿ,ಮೀ ದೂರದ ಕೆಆರ್ಎಸ್ ರಸ್ತೆಯಲ್ಲಿರುವ ಬೆಳಗೊಳ ಗ್ರಾಮದ ಅಂಚಿನಲ್ಲಿ ಇದೆ "ಬೆಳವಲ ಫಾರಂ". ಮೊದಲಿಗೆ ತೋಟವನ್ನು ನೋಡಿದ ತಕ್ಷಣ ನಮಗೆ "ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ಒಂದೊಂದು ಬೆವರ ಹನಿ ಮುತ್ತಾಯ್ತಾದೊ, ರಾಗಿಯಾ ಜ್ವಾಳದ ತೆನೆಯಾಯ್ತಾದೋ" ಎಂಬ ಹಾಡು ಥಟ್ಟನೆ ನೆನಪಾಯಿತು.
ಪ್ರತಿ ಹತ್ತು ಗುಂಟೆ,ಇಪ್ಪತ್ತು ಗುಂಟೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಸೀಬೆ,ಸಪೋಟ, ಸೀತಾಫಲ,ಹನುಮಫಲ,ರಾಮಫಲ,ಮಾವು, ಮೂಸಂಬಿ,ನಿಂಬೆ,ನೇರಳೆ,ಪನ್ನೆರಳೆ, ಬಾಳೆ ಇವುಗಳ ನಡುವೆ ತರಕಾರಿ, ಸೊಪ್ಪು ಮತ್ತು ರಾಗಿಯಂತಹ ಧಾನ್ಯದ ಬೆಳೆಗಳು.
ಪ್ರತಿಯೊಂದು ಗಿಡಮರಗಳು ಒಂದಕ್ಕೊಂದು ಪೂರಕವಾಗಿ ಬಿಸಿಲು ನೆರಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುತ್ತಲೇ ಆಥರ್ಿಕವಾಗಿಯೂ ರೈತನನ್ನು ಸಾಕಬಲ್ಲ ಚೈತನ್ಯದಾಯಕ ಪರಿಸರವನ್ನು ರಾಮಕೃಷ್ಣಪ್ಪ "ಬೆಳವಲ" ಫಾರಂನಲ್ಲಿ ಕಲ್ಪಿಸಿದ್ದಾರೆ.ಇದೊಂದು ಜೀವ ವೈವಿಧ್ಯತೆಯ ಆಗರವಾಗಿದೆ.
ಒಂದು ಕಡೆ ನಿಂಬೆ ಜಾತಿಯ ಸಸ್ಯಗಳು.ಮತ್ತೊಂದು ಕಡೆ ಮಾವು.ಇನ್ನೊಂದು ಕಡೆ ಸೊಪ್ಪು ತರಕಾರಿ ಹೀಗೆ ಭಿನ್ನ ವಿಭಿನ್ನ ಬೆಳೆ ವೈವಿಧ್ಯತೆಗಳು.ಸಮಗ್ರ ಕೃಷಿಯ ನೋಟಗಳು.
ಭೂಮಿಯಿಂದ ಹೆಚ್ಚು ಉತ್ಪಾದನೆ ತೆಗೆಯುವ ಜಿದ್ದಿಗೆ ಬಿದ್ದ ಮಾನವ ಭೂಮಿಯನ್ನು ನಿಜರ್ೀವ ವಸ್ತುವಿನಂತೆ ಕಂಡ. ಪರಿಣಾಮ, ಜೀವವೈವಿಧ್ಯತೆ ನಾಶವಾಗಿ ಹಲವು ಅಪಾಯಗಳು ಎದುರಾದವು. ಅತಿ ಹೆಚ್ಚು ನೀರು,ರಾಸಾಯನಿಕ ಬಳಕೆಯಿಂದ ಭೂಮಿ ಬರಡಾಯಿತು.ಇದನ್ನೆಲ್ಲ ಹತ್ತಿರದಿಂದ ನೋಡುತ್ತಾ ಬಂದ ರಾಮಕೃಷ್ಣಪ್ಪ ಅವರು ಭೂಮಿಗೆ ಆಗುತ್ತಿರುವ ಅಪಾಯವನ್ನು ತಪ್ಪಿಸಲು.ಸಣ್ಣ ರೈತರಿಗೆ ಸುಸ್ಥಿರ ಕೃಷಿ ಮಾಡಲು ಉತ್ತೇಜಿಸುವ ಕನಸು ಕಂಡರು. ಅದು ಸಾಕಾರಗೊಂಡಾಗ ಅದು "ಬೆಳವಲ"ಪೌಂಡೇಶನ್ ಎಂಬ ಕೃಷಿ ಪ್ರಯೋಗಶಾಲೆ ಆಯಿತು.
ಆ ಮೂಲಕ ಅವರು ಕೃಷಿ ಕ್ಷೇತ್ರದಲ್ಲಿ ಒಂದು ಸಂಚಲನವನ್ನೇ ಮೂಡಿಸುತ್ತಿದ್ದಾರೆ. ಬೆಳವಲ ಫಾರಂ ಕಳೆದ ಜನವರಿ ತಿಂಗಳಿಂದ ರೈತರಿಗೆ ಪ್ರತಿ ಶನಿವಾರ ತರಬೇತಿ ಆರಂಭಿಸಿದ್ದು ಇದುವರೆಗೆ ಐದಾರು ತಂಡಗಳು ಇಲ್ಲಿ ಬಂದು ಕೃಷಿ ಜ್ಞಾನ ಹೆಚ್ಚಿಸಿಕೊಂಡು ಹೋಗಿವೆ. ಮೈಸೂರಿನ ತೋಟಗಾರಿಕಾ ವಿಶ್ವ ವಿದ್ಯಾನಿಲಯದ ಯುವ ಕೃಷಿವಿಜ್ಞಾನಿಗಳು, ಶಾಲಾ ಕಾಲೇಜಿನ ವಿದ್ಯಾಥರ್ಿಗಳು ಇಲ್ಲಿಗೆ ಬಂದು  ಜೀವ ವೈವಿಧ್ಯತೆ ಸುಸ್ಥಿರ ಕೃಷಿಯ ಬಗ್ಗೆ ಪಾಠ ಕೇಳಿದ್ದಾರೆ.
ಬೆಳೆ ಯೋಜನೆ,ಬೀಜ ಉತ್ಪಾದನೆ,ನರ್ಸರಿ,ಜೇನು ಸಾಕಾಣಿಕೆ,ಹೋಂ ಗಾರ್ಡನ್,ತರಕಾರಿ ನಾಟಿ,ಜೀವಾಮೃತ,ಕಾಂಪೋಸ್ಟ್ ಗೊಬ್ಬರ ಮಾಡುವುದು ಸೇರಿದಂತೆ ಹತ್ತು ಹಲವು ಕೃಷಿ ಚಟುವಟಿಕೆಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗುತ್ತದೆ.
ಇದೆಲ್ಲಾ ಹೇಗಾಯ್ತು ಎಂದು ರಾಮಕೃಷ್ಣಪ್ಪನವರನ್ನು ಕೇಳಿದರೆ, "ಮಂಡ್ಯ ಜಿಲ್ಲೆಯಲ್ಲಿ ಶೇಕಡ 46 ರಷ್ಟು ನೀರಾವರಿ ಪ್ರದೇಶ ಇದೆ.ರಾಜ್ಯದ ಸರಾಸರಿ ಶೇಕಡ 26. 2.4 ಹೆಕ್ಟರ್ ಭೂಮಿಯಲ್ಲಿ ನೀರಾವರಿ ಇದ್ದರೂ ಶೇಕಡ 86 ರಷ್ಟು ರೈತರು ಬರೀ ಕಬ್ಬು ಬತ್ತ ಮಾತ್ರ ಬೆಳೆಯುತ್ತಾರೆ. ಕೆಲವರು ರಾಗಿ ಬೆಳೆಯುತ್ತಾರೆ. ಈ ಮೂರೆ ಬೆಳೆಗಳು ಇಲ್ಲಿನ ಬಹುತೇಕ ಪ್ರದೇಶವನ್ನು ಆವರಿಸಿಕೊಂಡಿವೆ
ಬೆಳೆಗಳ ವೈವಿಧ್ಯ ಇದ್ದರೆ ಮಾತ್ರ ಕೃಷಿ ಉಳಿಯುವುದು, ಬೆಳೆಯುವುದು ಸಾಧ್ಯ. ಶೇಕಡ 46 ರಷ್ಟು ನೀರಾವರಿಯಲ್ಲಿ ಶೇಕಡ 10 ರಿಂದ 12 ರಷ್ಟು ಪ್ರಮಾಣದ ರೈತರು ಕಾಲುವೆಗೆ ಮೋಟಾರ್ ಪಂಪ್ ಹಾಕಿ  ನೀರಾವರಿ ಮಾಡುತ್ತಾರೆ. ಅವರು ಕಾಲುವೆಯಿಂದ ಎತ್ತರದ ಪ್ರದೇಶದಲ್ಲಿದ್ದಾರೆ. ನೀರು ಅವರ ನಿಯಂತ್ರಣದಲ್ಲಿ ಇದ್ದರೂ ಅವರೆಲ್ಲ ಮತ್ತೆ ಬತ್ತ ಕಬ್ಬಿನಂತಹ ಬೆಳೆಗಳನ್ನೇ ಬೆಳೆಯುತ್ತಾರೆ.
ಇಂತಹ ರೈತರು ತಮ್ಮ ಆಲೋಚನೆ ಬದಲಿಸಿಕೊಳ್ಳಬೇಕು. ಬೆಳೆ ವಿಧಾನಗಳನ್ನು ಬದಲುಮಾಡಿಕೊಂಡು ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶ ನಮ್ಮದಾಗಿತ್ತು.ಅದಕ್ಕಾಗಿ ನಾವು "ಬೆಳವಲ ಫಾರಂ"ನಲ್ಲಿ ಬೇರೆ ಬೇರೆ ರೀತಿಯ 12 ಕ್ಕೂ ಹೆಚ್ಚು ಕೃಷಿ ಮಾದರಿಗಳನ್ನು ರೂಪಿಸಿದ್ದೇವೆ.
ಜನರಿಗೆ ಕೃಷಿಯಲ್ಲಿ ಸುಸ್ಥಿರ ಮಾದರಿಗಳನ್ನು ತೋರಿಸಬೇಕು. ಆಸಕ್ತ ರೈತರಿಗೆ ಇದೊಂದು ತರಬೇತಿ ಕೇಂದ್ರದ ರೀತಿಯಲ್ಲಿ ಕೆಲಸಮಾಡಬೇಕು. ನಮ್ಮ ಪರಿಸರ ಮತ್ತು ಆರೋಗ್ಯ ಕಾಪಾಡಿಕೊಳ್ಳುವಂತಹ ಮಾದರಿ ರೋಪಿಸಬೇಕು ಎಂಬ ಉದ್ದೇಶದಿಂದ ಇದನ್ನು ಮಾಡಿದ್ದೇವೆ. ನಿಜ ಹೇಳ ಬೇಕೆಂದರೆ ಈ ಭೂಮಿಯು ನನ್ನದಲ್ಲ.ನನ್ನ ಭಾವಮೈದುನನದು. ವಿದೇಶದಲ್ಲಿ ನೌಕರಿಯಲ್ಲಿರುವ ಆತ ಕೃಷಿ ಮಾಡಲು ಭೂಮಿ ಖರೀದಿಸಿದ್ದ. ಭೂಮಿಗೆ ಒಳ್ಳೆಯ ದರ ಬಂದಾಗ ಮಾರಾಟ ಮಾಡಲು ಮುಂದಾಗಿದ್ದ.
ಆಗ ನಾನು ಅವನಿಗೆ ಹೇಳಿದೆ. ನೋಡು ಈಗಾಗಲೇ ನಿಮಲ್ಲಿ ಸಾಕಷ್ಟು ಹಣ ಇದೆ. ಸುಮ್ಮನೆ ಭೂಮಿಯನ್ನು ಯಾಕೆ ಮಾರಾಟ ಮಾಡುತ್ತೀರಿ.ನೀವು ಮುಂದೆ ಈ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂಬ ಭರವಸೆ ನೀಡಿದರೆ.ಇಲ್ಲೊಂದು ಸುಸ್ಥಿರ ಕೃಷಿಯ ಮಾದರಿಯಂದನ್ನು ರೂಪಿಸುವ ಮೂಲಕ ಏನಾದರೂ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡೋಣ ಎಂದೆ. ಅದಕ್ಕೆ ಆತ ಒಪ್ಪಿಕೊಂಡ. ಈಗ ಇಲ್ಲೊಂದು ಸುಂದರ ತೋಟ ರೋಪುಗೊಂಡಿದೆ ಎನ್ನುತ್ತಾರೆ.
"ಬೆಳವಲ ಪೌಂಡೇಶನ್" ಎಂಬ ಹೆಸರಿನ ಸುಸ್ಥಿರ ಸಾವಯವ ತೋಟದಲ್ಲೀಗ ಪ್ರತಿ ಶನಿವಾರ ಆಸಕ್ತ ಕೃಷಿಕರು ಬಂದು ಪಾಠ ಕೇಳುತ್ತಾರೆ. ಕ್ಷೇತ್ರ ವಿಕ್ಷಣೆ ಮಾಡುತ್ತಾರೆ. ಸಮಗ್ರ ಸಹಜ ಕೃಷಿಯ ಬಗ್ಗೆ ಅರಿವು ಮೂಡಿಸಿಕೊಂಡು ಹೋಗುತ್ತಾರೆ.
ಇದು 2010 ರಲ್ಲಿ ಖರೀದಿಸಿದ್ದ ಭೂಮಿ. ಇಲ್ಲಿ ಒಂದಷ್ಟು ಹಳೆಯ ಮರಗಿಡಗಳಿವೆ.ಅದನ್ನು ಹೊರತು ಪಡಿಸಿದರೆ ಕೇವಲ ಮೂರು ವರ್ಷದಲ್ಲಿ ರೂಪಿಸಿದ ಸಸ್ಯಕಾಶಿ ಇದು. ನಾನು ನೌಕರಿಯಿಂದ ನಿವೃತ್ತನಾದ ನಂತರ ಕಳೆದ ಎರಡು ವರ್ಷಗಳಿಂದ ಇಲ್ಲೆ ನಿಂತು ಬೆಳವಲ ಫಾರಂ ಕಟ್ಟಿದ್ದೇನೆ ಎಂದು ಹೆಮ್ಮಯಿಂದ ಹೇಳಿದರು ರಾಮಕೃಷ್ಣಪ್ಪ.
ನೀವು ಕಿಚನ್ ಗಾರ್ಡನ್ ಬಗ್ಗೆ ಕೇಳಿರಬಹುದು. ಆದರೆ ಹೋಂ ಗಾರ್ಡನ್ ಎಂಬ ಕಾನ್ಸೆಫ್ಟ್ನಲ್ಲಿ ಇವರು ಕೇವಲ 20 ಗುಂಟೆ ಪ್ರದೇಶದಲ್ಲಿ ಇವರು ರೂಪಿಸಿರುವ ಕೈ ತೋಟ ಸುಸ್ಥಿರ ಕೃಷಿಗೆ ಮಾದರಿಯಂತಿದೆ. ಸಣ್ಣ ಹಿಡುವಳಿದಾರರು, ಎಂದು ಎಕರೆ, ಎರಡು ಎಕರೆ, 20 ಗುಂಟೆ ಜಮೀನು ಇರುವಂತಹ ರೈತರು ಹೇಗೆ ಕೃಷಿಯಿಂದ ಬದುಕು ಕೊಟ್ಟಿಕೊಳ್ಳಬಹುದು ಎಂಬ ಮಾದರಿಗಳನ್ನು ಇಲ್ಲಿ ರೂಪಿಸಲಾಗಿದೆ.
ಭೂಮಿ ಹೊಂದಿರುವ ರೈತರು ಪ್ರತಿವಾರ ಸಂತೆಗೆ ಹೋಗಿ ಸೊಪ್ಪು ತರಕಾರಿ ತರುತ್ತಾರೆ. ಅದು ವಿಷಪೂರಿತವಾದದ್ದು. ಎಲ್ಲೋ ಕೊಳಚೆಯಲ್ಲಿ ಬೆಳೆದದ್ದು. ಇದನ್ನು ಕಂಡರೆ ಮನಸ್ಸಿಗೆ ನೋವಾಗುತ್ತದೆ. ದೇಶಕ್ಕೆ ಅನ್ನ ಕೊಡುವ ಅನ್ನದಾತನೇ ಗ್ರಾಹಕನಾಗಿಬಿಟ್ಟರೆ ಕೃಷಿ ಉಳಿಯುತ್ತಾ, ಪರಿಸರ, ಆರೋಗ್ಯ ಉಳಿಯುತ್ತಾ ಅಂತ ಆತಂಕವಾಗುತ್ತದೆ. ಹಳ್ಳಿಯ ಜನರೇ ಈ ರೀತಿ ಆದರೆ ಹೇಗೆ ?.ಅದಕ್ಕಾಗಿ ಇಂತಹ ಸಣ್ಣ ರೈತರಿಗೆ ನಾವು ಇಲ್ಲಿ ಮಾದರಿಯೊಂದನ್ನು ಮಾಡಿದ್ದೇವೆ. ಅದೇ ಹೋಂ ಗಾರ್ಡನ್.  ಒಂದು ಮನೆ. ಅರ್ಧ ಗುಂಟೆ ಜಮೀನು ಇದ್ದರೆ ಮನೆಗೆ ಬೇಕಾದ ಎಲ್ಲಾ ಹಣ್ಣು ತರಕಾರಿ ಸೊಪ್ಪು ಬೆಳೆದು ಕೊಳ್ಳಬಹುದು. ಒಂದು ಸುಂದರವಾದ ಪರಿಸರವನ್ನು ಸೃಷ್ಠಿಸಿ ಅಲ್ಲಿ ಏನೂ ಬೇಕಾದರೂ ಬೆಳೆದುಕೊಳ್ಳಬಹುದು.
ಒಟ್ಟು ಆರೂವರೆ ಎಕರೆಯಲ್ಲಿ 10 ಗುಂಟೆ 20 ಗುಂಟೆ ಪ್ರದೇಶದಲ್ಲಿ 15 ಮಾಡೆಲ್ಗಳಿವೆ. ಹಾಗಂತ ಇದು ನೈಸಗರ್ಿಕ ಕೃಷಿಯ ತೋಟ ಅಲ್ಲ. ಜೀವ ವೈವಿಧ್ಯತೆಯಿಂದ ಕೂಡಿರುವ ತೋಟ.ರೈತರು ರಾಸಾಯನಿಕ ಬಳಸದಿರುವುದು, ಕೀಟ ನಾಶಕ ಸಿಂಪರಣೆ ಮಾಡದಿರುವುದನ್ನೇ ನೈಸಗರ್ಿಕ ಕೃಷಿ ಅಂತ ಭಾವಿಸಿಕೊಂಡಿದ್ದಾರೆ. ಇದು ತಪ್ಪು ಕಲ್ಪನೆ. ನಾವಿಲ್ಲಿ ಸೂಕ್ಷ್ಮಜೀವಿಗಳು ನಿರಂತರವಾಗಿ ವೃದ್ಧಿಸುತ್ತಿರುವ ಜೀವಂತ ಮಣ್ಣಿನ ಬಗ್ಗೆ ಹೇಳುತ್ತಿರುತ್ತೇವೆ.
ಪ್ರಂಪಚದ ಪರಿಸರ ಕೃಷಿತಜ್ಞರೆಲ್ಲ ಸೇರಿ ಈಗ ಆಲೋಚನೆ ಮಾಡುತ್ತಿದ್ದಾರೆ.ಕಳೆದ ಹತ್ತು ವರ್ಷಗಳಿಂದ ನೈಸಗರ್ಿಕ ಕೃಷಿ ಮಾಡಿದರೂ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ. ಅದಕ್ಕಾಗಿ ಜೀವ ವೈವಿಧ್ಯತೆತೆಯಿಂದ ಕೂಡಿದ ಕೃಷಿಯಿಂದ ರೈತ ಸುಸ್ಥಿರ ಬದುಕು ಕಟ್ಟಿಕೊಳ್ಳಬಲ್ಲ ಎಂಬ ತೀಮರ್ಾನಕ್ಕೆ ಬಂದಿದ್ದಾರೆ. ಅಂತಹ ಮಾದರಿಗಳನ್ನು ಇಲ್ಲಿ ನಾವು ನಿಮರ್ಾಣ ಮಾಡಿದ್ದೇವೆ ಎನ್ನುತ್ತಾರೆ.
ಕೃಷಿ ಮಾಡುವಾಗ ಆ ಪ್ರದೇಶದಲ್ಲಿ ಒಂದು ಸೂಕ್ತ ವಾತಾವರಣವನ್ನು ಮೊದಲು ನಿಮರ್ಾಣಮಾಡಬೇಕು. ಜೀವ ವೈವಿಧ್ಯತೆ ಇರುವಂತಹ ವ್ಯವಸ್ಥೆ ರೂಪಿಸಬೇಕು.ಇದಕ್ಕೆ ಬಿಟ್ಸ್ ಅಂಡ್ ಫೀಸಸ್ ಆಫ್ ಅಗ್ರಿಕಲ್ಚರ್ ಎನ್ನುತ್ತೇವೆ. ತುಂಡು ಭೂಮಿಯಲ್ಲಿ ವಿಭಿನ್ನ ಮಾದರಿಗಳ ನಿಮರ್ಾಣ ಎನ್ನಬಹುದು.
ಮಣ್ಣು ಮತ್ತು ಸೂಕ್ಮಾಣುಜೀವಿಗಳಿಗೆ ಒಂದು ಒಳ್ಳೆಯ ಸಂಬಂಧ ಕಲ್ಪಿಸಿಕೊಳ್ಳಬೇಕು. ನೈಸಗರ್ಿಕ ಕೃಷಿ ಮಾಡುತ್ತಿರುವವರಿಗೆ ಜ್ಞಾನ ಮತ್ತು ಅರಿವಿನ ಕೊರತೆ ಇದೆ. ಅದನ್ನು ತಿಳಿಸುವಂತಹ ಕೆಲಸ ಈಗ ಆಗಬೇಕು. ಪ್ರತಿ ಚಟುವಟಿಕೆಗೂ ಒಂದು ಸೂಕ್ತವಾದ ವಾತಾವರಣ ಇರುತ್ತದೆ.ಅಂತಹ ಜೈವಿಕ ಪರಿಸರ ಈಗ ನಾಶವಾಗಿದೆ.ಅದನ್ನು ಮೊದಲು ನಿಮರ್ಾಣ ಮಾಡಬೇಕು.
ಸರಕಾರದಲ್ಲಿ ಕೃಷಿ ವಲಯಕ್ಕೆ ಮೀಸಲಿಟ್ಟಿರುವ ಹಣ ಖಚರ್ು ಮಾಡುವುದ್ದಕ್ಕಾಗಿ ಕೃಷಿಯನ್ನು ದಂಧೆಮಾಡಿಕೊಂಡಿದ್ದಾರೆ. ಕೃಷಿ ಹೊಂಡ ನಿಮರ್ಾಣ ಮಾಡುತ್ತಾರೆ. ಮಳೆಯೇ ಬಾರದಿದ್ದರೆ ಆ ಹೊಂಡಗಳು ತುಂಬುವುದು ಎಲ್ಲಿಂದ. ಮಳೆ ಬರಿಸುವಂತಹ, ಬರವನ್ನು ತಡೆಯುವಂತಹ ಚಟುವಟಿಕೆಗಳನ್ನು ಏನಾದರೂ ಸರಕಾರ ಮಾಡಿದೆಯೇ ?. ಹೋಗಲಿ ಬಿದ್ದ ಮಳೆಯಾದರೂ ಹೀಂಗುವಂತಹ ವ್ಯವಸ್ಥೆ ಏನಾದರೂ ಇದೆಯೇ. ಇಲ್ಲ. ಅದಕ್ಕಾಗಿ ಮೊದಲು ನಾವು ಅಂತಹ ಪರಿಸರವನ್ನು ರೂಪಿಸುವುದರ ಕಡೆಗೆ ಈಗ ಆದ್ಯತೆ ನೀಡಬೇಕು ಎನ್ನುತಾರೆ.
ಈಗ ಎಲ್ಲಾ ಕಡೆ ಗ್ರೀನ್ ಹೌಸ್ ನಿಮರ್ಾಣ ಮಾಡುತ್ತಿದ್ದಾರೆ. ಇದೆಲ್ಲ ಸರಕಾರದ ಸಬ್ಸಿಡಿಗಾಗಿ ಮಾಡುತ್ತಾರೆ.ಇಲ್ಲಿ ಬಹುತೇಕ ದಪ್ಪ ಮೆಣಸಿನಕಾಯಿಯನಷ್ಟೆ ಬೆಳೆಯಲಾಗುತ್ತದೆ. ಅದಕ್ಕಾಗಿ ಅಷ್ಟೊಂದು ಹಣ ವೆಚ್ಚಮಾಡಬೇಕೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪಾಲಿಹೌಸ್ ನಿಮರ್ಾಣ ಮಾಡಲಾಗುತ್ತಿದೆ. ಇದರಿಂದ ಮಣ್ಣಿನ ಆರೋಗ್ಯವು ಕೆಡುತ್ತದೆ. ಜೀವ ವೈವಿಧ್ಯತೆಗೂ ದಕ್ಕೆ ಬರುತ್ತದೆ. ಮಳೆಯ ನೀರು ಗಿಡಗಳಿಗೆ ಸಿಗುವುದೆ ಇಲ್ಲ. ಮಳೆಯ ನೀರಲ್ಲಿರುವ ಜೀವ ಚೈತನ್ಯದಿಂದ ಸಸ್ಯಗಳು ಮಣ್ಣು ವಂಚಿತವಾಗುತ್ತವೆ.
ನಮ್ಮಲ್ಲಿ ಯುರೋಪ್ ದೇಶದ ಕೃಷಿಕರು ಬಂದಾಗ ಕೇಳುತ್ತಿದ್ದರು. ನಿಮ್ಮ ದೇಶದಲ್ಲಿ ಇಷ್ಟೊಂದು ಗ್ರೀನ್ಹೌಸ್ ಕಟ್ಟಿದ್ದಾರಲ್ಲ ಇದರ ಅವಶ್ಯಕತೆ ಇದೆಯೆ. ನಮ್ಮಲ್ಲಾದರೆ ವರ್ಷದಲ್ಲಿ ಹತ್ತು ತಿಂಗಳು ಸೂರ್ಯನ ಮುಖವನ್ನೆ ನಾವು ನೋಡುವುದಿಲ್ಲ. ನಿಮ್ಮಲ್ಲಿ ಹಿತಕರವಾದ ವಾತಾವರಣ ಇದೆ. ಅದನ್ನು ಕಾಪಾಡಿಕೊಂಡು ಹೋದರೆ ದೊಡ್ಡ ಸಾಧನೆ ಮಾಡಬಹುದು. ಅದಕ್ಕಾಗಿ ಗ್ರೀನ್ ಹೌಸ್ ಯಾಕೆ?.
ಅದರ ಬದಲಿಗೆ ಜೀವ ವೈವಿಧ್ಯ ಕೃಷಿ ಮಾಡಿದರೆ ಒಳ್ಳೆಯದು.
ಇಲ್ಲಿ ಆರೂವರೆ ಎಕರೆ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ವಿಧದ ಸಸ್ಯ ಗಿಡಮರ ಬಳ್ಳಿಗಳಿವೆ. ಕಿವಿ ಹಣ್ಣು ಮತ್ತು ದ್ರಾಕ್ಷಿ ಹೊರತು ಪಡಿಸಿ ಬಹುತೇಕ ಎಲ್ಲಾ ಹಣ್ಣಿನ ಗಿಡಗಳಿವೆ. ಸೇಬು, ರಾಂಬೂಟನ್,ಮ್ಯಾಂಗೊಸ್ಟಿನ್, ವಾಟರ್ ಆಫಲ್ ಎಲ್ಲ ಬೆಳೆಯಬಹುದು. ಅದಕ್ಕೆ ಬೇಕಾದ ವಾತಾವರಣ ರೂಪಿಸಿಕೊಳ್ಳಬೇಕು ಅಷ್ಟೇ.
ಪ್ರತಿ ಶನಿವಾರ ಒಂದಲ್ಲ ಒಂದು ಕೃಷಿ ತರಬೇತಿ ನಡೆಯುತ್ತಿರುತ್ತದೆ. ಬೇಕಾಬಿಟ್ಟಿ ಕೃಷಿ ಪ್ರವಾಸ ಬರುವವರಿಗೆ ಇಲ್ಲ ಪ್ರವೇಶ ಇಲ್ಲ. ನಿಜವಾದ ಆಸಕ್ತಿ ಇರಬೇಕು. ಕೃಷಿ ಮಾಡುವ ಹಂಬಲ ಇರಬೇಕು.ಅಂತಹವರಿಗೆ ಮಾತ್ರ ಬೆಳವಲ ಫಾರಂಗೆ ಪ್ರವೇಶ. ಹೊಲ ಇಲ್ಲದವರು ಒಳಕ್ಕೂ ಬರಬೇಡಿ ಅಂತ ಹೇಳುತ್ತೇವೆ ಎಂದು ನಿಷ್ಠುರವಾಗಿ ಹೇಳುತ್ತಾರೆ ರಾಮಕೃಷ್ಣಪ್ಪ.
ಜಮೀನಿನಲ್ಲಿ ಟ್ಯಾಕ್ಟರ್ ಬಳಕೆ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಭೂಮಿಯನ್ನು ಹಾಳು ಮಾಡುವ ದೈತ್ಯ ರಾಕ್ಷಸ ಟ್ಯಾಕ್ಟರ್. ಉಳುಮೆ ಮಾಡುವುದನ್ನೇ ವಿರೋಧಿಸುವ ನಾನು ತರಕಾರಿ ಸೊಪ್ಪು ಬೆಳೆಯುವಂತಹ ಜಾಗದಲ್ಲಿ ಮಾತ್ರ ಎತ್ತುಗಳಿಂದ ಉಳುಮೆ ಮಾಡಬೇಕು ಎಂದು ಹೇಳುತ್ತೇನೆ. ತೋಟಗಾರಿಕೆ ಮಾಡುವವರಂತೂ ಉಳುಮೆ ಮಾಡಲೇ ಬಾರದು. ಎನ್ನುತ್ತಾರೆ.
ಸುತ್ತಮುತ್ತ ಎಲ್ಲಾ ರೈತರು ಭೂಮಿಯನ್ನು ರಿಯಲ್ ಎಸ್ಟೇಟ್ನವರಿಗೆ ಮಾರಿಕೊಂಡಿದ್ದಾರೆ. ಬೆಳೆ ಬೆಳೆಯುತ್ತಿದ್ದ ಜಾಗದಲ್ಲಿ ಮನೆಗಳಾಗುತ್ತಿವೆ. ಮರಗಳನ್ನೆಲ್ಲಾ ಕಡಿದು ಕಾಂಕ್ರಿಟ್ ಕಾಡು ಮಾಡಲಾಗಿದೆ. ನಾವೆಲ್ಲ ಎತ್ತ ಸಾಗುತ್ತಿದ್ದೇವೆ ಎಂಬ ಆತಂಕ ಅವರದು.
ಆಸಕ್ತರು ಪ್ರತಿ ಶನಿವಾರ ಇಪ್ಪತ್ತರಿಂದ ಇಪ್ಪತೈದು ಜನರ ತಂಡ ಮಾಡಿಕೊಂಡು "ಬೆಳವಲ" ಫಾರಂಗೆ ಭೇಟಿ ನೀಡಬಹುದು.ನೆನಪಿರಲ್ಲಿ ಮೊದಲೇ ದೂರವಾಣಿ ಮಾಡಿ ತಮ್ಮ ಸಮಯ ನಿಗಧಿ ಪಡಿಸಿಕೊಂಡು ನಂತರ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ ರಾಮಕೃಷ್ಣಪ್ಪ 9620999203 ಸಂಪಕರ್ಿಸಿ