ಸಾಂಬಾರ ಈರುಳ್ಳಿಗೂ ಬಂತು ನೂತನ ತಂತ್ರಜ್ಞಾನ
# ಕಾಡಂಚಿಗೂ ಬಂದ ತೋಟಗಾರಿಕೆ ಮಹಾವಿದ್ಯಾಲಯ # ಬೀಜದಿಂದ ಈರುಳ್ಳಿ ."ಚಾಮರಾಜನಗರ ಜಿಲ್ಲೆಯೊಂದರಲ್ಲೇ ರೈತರು ಪ್ರತಿವರ್ಷ ಬಿತ್ತನೆ ಈರುಳ್ಳಿ ಖರೀದಿಸಲು ತಮಿಳುನಾಡಿನ ವ್ಯಾಪಾರಿಗಳಿಗೆ ಮೂವತ್ತೆರಡು ಕೋಟಿ ರೂಪಾಯಿ ಹಣ ಕೊಡುತ್ತಾರೆ.ನಮ್ಮ ಸರಕಾರ ಮನಸ್ಸು ಮಾಡಿದರೆ ಜಿಲ್ಲೆಯ ರೈತರಿಗೆ ವಾಷರ್ಿಕ ಮೂವತ್ತು ಕೋಟಿ ರೂಪಾಯಿ ಉಳಿಸಬಹುದು. ಕೇವಲ ಎರಡು ಕೋಟಿ ರೂಪಾಯಿಗೆ ಗುಣಮಟ್ಟದ ಈರುಳ್ಳಿ ಬೀಜ ಖರೀದಿಸಿ ವಿತರಿಸಿದರೆ ಕೋಟಿ ಕೋಟಿ ರೂಪಾಯಿಗಳು ಉಳಿಸಿದಂತಾಗುತ್ತದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು,ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ನೆರವಾಗಬೇಕು" -ಎಂ.ಸಂಪತ್ತು
--------------------------------------
ಸಾಂಬಾರು ಈರುಳ್ಳಿ ಬೀಜದಿಂದ ಗುಣಮಟ್ಟದ ಗೆಡ್ಡೆ ಉತ್ಪಾದನೆ ಮಾಡುವ ಮೂಲಕ ಕಾಡಂಚಿನ ಕುಂದಕೆರೆ ಗ್ರಾಮದ ರೈತರೊಬ್ಬರು ಸಾಧನೆಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ರೈತರು ಮನಸ್ಸು ಮಾಡಿದರೆ ವಾಷರ್ಿಕ ಮೂವತ್ತು ಕೋಟಿ ರೂಪಾಯಿಗಳನ್ನು ಉಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಹೀಗೆ ಕೃಷಿಯಲ್ಲಿ ಪ್ರಯೋಗಶೀಲರಾಗಿ ಯಶಸ್ಸು ಪಡೆದವರು ಗುಂಡ್ಲುಪೇಟೆ ತಾಲೂಕು ರೈತಸಂಘದ ಅಧ್ಯಕ್ಷ,ಪ್ರಗತಿಪರ ಕೃಷಿಕ ಎಂ.ಸಂಪತ್ತು.
ಕೃಷಿ ಕ್ಷೇತ್ರದಲ್ಲಿ ನೂತನ ತಾಂತ್ರಿಕತೆಗಳು ಬಂದಾಗ ರೈತರು ಅದನ್ನು ಒಪ್ಪಿ ಅನುಸರಿಸಲು ಅನುಮಾನ ಪಡುತ್ತಾರೆ.ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಕೃಷಿ ವಿಶ್ವ ವಿದ್ಯಾನಿಲಯಗಳು ಹೊಸ ಹೊಸ ತಾಂತ್ರಿಕತೆಗಳನ್ನು ಸಂಶೋಧನೆ ಮಾಡುತ್ತಾ ಬಂದಿವೆ.ಆದರೆ ಈ ತಂತ್ರಜ್ಞಾನಗಳು ರೈತರ ಹೊಲಗಳಲ್ಲಿ,ತೋಟಗದ್ದೆಗಳಲ್ಲಿ ಹೆಚ್ಚು ಅನುಷ್ಠಾನಗೊಂಡಿದ್ದು ಕಡಿಮೆ.ಇದಕ್ಕೆ ಮಾಹಿತಿ ಕೊರತೆ ಕಾರಣವೋ ಅಥವಾ ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಹಿಂಜರಿಕೆಪಡುವುದು ಕಾರಣವೋ ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ.
ಇಂತಹ ಹತಾಶ ಪರಿಸ್ಥಿತಿಯ ನಡಯವೆಯೂ ಅಲ್ಲೊಬ್ಬ,ಇಲ್ಲೊಬ್ಬ ರೈತ ಪ್ರಯೋಗಶೀಲರಾಗುವ ಮೂಲಕ ಭರವಸೆಯ ಬೆಳಕಾಗಿ ಕಂಡುಬರುತ್ತಾರೆ.ಅಂತಹವರಲ್ಲಿ ಸಂಪತ್ತು ಒಬ್ಬರು.ಏಳು ಎಕರೆ ಜಮೀನು ಹೊಂದಿರುವ ಇವರು ಈಗ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಈರುಳ್ಳಿ ಬೀಜದಿಂದ ಗುಣಮಟ್ಟದ ಗೆಡ್ಡೆ ಉತ್ಪಾದನೆಮಾಡಿ ಗಮನಸೆಳೆದಿದ್ದಾರೆ.
ಇದಲ್ಲದೆ ಸಂಪತ್ತು ಬೆಳ್ಳುಳ್ಳಿ, ಅರಶಿನ,ಬಾಳೆ,ಮೆಣಸಿಕಾಯಿ,ರಾಗಿ ಜೋಳ ಎಲ್ಲವನ್ನೂ ಬೆಳೆಯುತ್ತಾರೆ. ಒಂದು ಎಕರೆಯಲ್ಲಿ ತೆಂಗಿನತೋಟವಿದೆ.ಒಂದಷ್ಟು ಹಣ್ಣಿನ ಗಿಡಗಳು ಇವೆ. ಮನೆಗೆ ಬೇಕಾದ ತರಕಾರಿ ಸೊಪ್ಪುಗಳನ್ನು ಬೆಳೆದುಕೊಳ್ಳುತ್ತಾರೆ. ಇವರ ಪತ್ನಿ ಮಂಗಳಮ್ಮ ಇವರ ಎಲ್ಲಾ ಕೃಷಿ ಚಟುವಟಿಕೆಗಳಿಗೂ ಬೆನ್ನೆಲುಬಾಗಿದ್ದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕೃಷಿಯಿಂದ ಬರುವ ಆದಾಯದಿಂದಲೇ ತಮ್ಮ ಒಬ್ಬ ಮಗಳನ್ನು ಮೈಸೂರಿನಲ್ಲಿ ಓದಿಸುತ್ತಾ ಇನ್ನಿಬ್ಬರು ಮಕ್ಕಳನ್ನು ಗುಂಡ್ಲುಪೇಟೆಯಲ್ಲಿ ವ್ಯಾಸಂಗಮಾಡಿಸುತ್ತಿದ್ದು ತಮಗೆ ಕೃಷಿಯಿಂದ ಎಂದೂ ನಷ್ಟವಾಗಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ನೀರು ಮತ್ತು ವಿದ್ಯುತ್ ಎರಡೂ ಸರಿಯಾಗಿದ್ದರೆ ಕೃಷಿಯಿಂದ ನಷ್ಟವಾಗುವುದೇ ಇಲ್ಲ ಎನ್ನುವ ಸಂಪತ್ತು ತಮ್ಮ ಎಲ್ಲಾ ಖಚರ್ುವೆಚ್ಚಗಳನ್ನು ಕಳೆದು ವಾಷರ್ಿಕ ನಮಗೆ ಒಂದು ಲಕ್ಷ ರೂಪಾಯಿ ಉಳಿತಾಯವಾಗುತ್ತದೆ ಎನ್ನುತ್ತಾರೆ.ರೈತಪರ ಹೋರಾಟಗಳಲ್ಲಿ ಸದಾ ಸಕ್ರೀಯರಾಗಿರುವ ಸಂಪತ್ತು ಹೋರಾಟ ಮತ್ತು ಕೃಷಿ ಎರಡನ್ನೂ ಸಮಾನವಾಗಿ ಪ್ರೀತಿಸುತ್ತಾ ಅಕ್ಷರಸಹ ಬಂಗಾರದ ಮನುಷ್ಯನಂತೆ ಕಾಯಕನಿರತರಾಗಿದ್ದಾರೆ.
ಕುಂದಕೆರೆ ಗ್ರಾಮದ ಸಂಪತ್ತು ಅವರು ಈರುಳ್ಳಿ ಬೀಜದಿಂದ ಗುಣಮಟ್ಟದ ಗೆಡ್ಡೆ ಬೆಳೆಯಲು ಕಾರಣಕರ್ತರಾದವರು ಮೈಸೂರು ತೋಟಗಾರಿಕೆ ಮಹಾವಿದ್ಯಾಲಯದ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಂ.ಪಲ್ಲವಿ ಮತ್ತು ಸಿಬ್ಬಂದಿ. ಕಾಡಂಚಿನ ಗ್ರಾಮಗಳಿಗೆ ಕೃಷಿ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬರಲು ಹಿಂದೇಟು ಹಾಕುವಾಗ ತೋಟಗಾರಿಕೆ ಮಹಾವಿದ್ಯಾಲಯದವರು ಕುಂದಕೆರೆಯಲ್ಲಿ ಬಂದು ಸಾಂಬಾರ ಈರುಳ್ಳಿ ಪ್ರಾತ್ಯಕ್ಷಿತೆ ನಡೆಸಿಕೊಟ್ಟದ್ದು ಸುತ್ತಮುತ್ತಲಿನ ರೈತರ ಪ್ರಶಂಸೆಗೆ ಪಾತ್ರವಾಯಿತು. ಆ ಮೂಲಕ ಈ ಭಾಗದ ರೈತರು ತೋಟಗಾರಿಕೆ ಮಹಾ ವಿದ್ಯಾಲಯದ ಜೊತೆಗೆ ಸಂಪರ್ಕ ಇಟ್ಟುಕೊಂಡು ಕೃಷಿಯಲ್ಲಿ ಪ್ರಯೋಗಶೀಲರಾಗಲು ಉತ್ತೇಜನ ನೀಡಿದಂತಾಯಿತು.
"ಚಾಮರಾಜನಗರ ಜಿಲ್ಲೆಯೊಂದರಲ್ಲೇ ರೈತರು ಪ್ರತಿವರ್ಷ ಭಿತ್ತನೆ ಈರುಳ್ಳಿ ಖರೀದಿಸಲು ತಮಿಳುನಾಡಿನ ವ್ಯಾಪಾರಿಗಳಿಗೆ ಮೂವತ್ತೆರಡು ಕೋಟಿ ರೂಪಾಯಿ ಹಣ ಕೊಡುತ್ತಾರೆ.ನಮ್ಮ ಸರಕಾರ ಮನಸ್ಸು ಮಾಡಿದರೆ ಜಿಲ್ಲೆಯ ರೈತರಿಗೆ ವಾಷರ್ಿಕ ಮೂವತ್ತು ಕೋಟಿ ರೂಪಾಯಿ ಉಳಿಸಬಹುದು. ಕೇವಲ ಎರಡು ಕೋಟಿ ರೂಪಾಯಿಗೆ ಗುಣಮಟ್ಟದ ಈರುಳ್ಳಿ ಬೀಜ ಖರೀದಿಸಿ ವಿತರಿಸಿದರೆ ಕೋಟಿ ಕೋಟಿ ರೂಪಾಯಿಗಳು ಉಳಿಸಿದಂತಾಗುತ್ತದೆ. ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳು,ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ರೈತರಿಗೆ ನೆರವಾಗಬೇಕು" ಎಂದು ಸಂಪತ್ತು ಹೇಳುತ್ತಾರೆ.
ಕಳೆದ ವರ್ಷ ತೋಟಗಾರಿಕ ಮಹಾವಿದ್ಯಾಲಯದ ವಿಸ್ತರಣಾ ಮುಂದಾಳು ಬಿ.ಎಸ್.ಹರೀಶ್ ಅವರು ಜಿಲ್ಲೆಯಲ್ಲಿ ಈರುಳ್ಳಿ ಬೀಜದಿಂದ ಗೆಡ್ಡೆ ಉತ್ಪಾದನೆಗೆ ಉತ್ತೇಜನ ನೀಡಿದ್ದರು. ಚೌಡಳ್ಳಿಯ ಪ್ರಗತಿಪರ ರೈತ ಸದಾಶಿವಮೂತರ್ಿಯವರು ಈರುಳ್ಳಿ ಬೀಜದಿಂದ ಗುಣಮಟ್ಟದ ಗೆಡ್ಡೆ ಉತ್ಪಾದನೆಮಾಡಿದ್ದರು. ಆದರೂ ರೈತರು ಯಾಕೋ ಹೆಚ್ಚು ಹೆಚ್ಚು ಈ ತಾಂತ್ರಿಕತೆ ಅಳವಡಿಸಿಕೊಂಡು ಈರುಳ್ಳಿ ಬೆಳೆಯಲು ಮನಸ್ಸು ಮಾಡಿದಂತಿಲ್ಲ. ತಾಲೂಕಿನ ಕೃಷಿ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುವ ಮೂಲಕ ಈ ತಾಂತ್ರಿಕತೆಯನ್ನು ಹೆಚ್ಚು ಪ್ರಚಾರಮಾಡಬೇಕಾಗಿದೆ.
ಲೆಕ್ಕಚಾರ ಹೀಗಿದೆ :ಸಾಮಾನ್ಯವಾಗಿ ಒಂದು ಎಕರೆ ಸಾಂಬಾರ ಈರುಳ್ಳಿ ಬೆಳೆಯಲು ಮೂರರಿಂದ ನಾಲ್ಕು ಕ್ವಿಂಟಾಲ್ ಗೆಡ್ಡೆಗಳುಬೇಕು. ಈ ಬಾರಿ ರೈತರು ಪ್ರತಿ ಕ್ವಿಂಟಾಲ್ ಬಿತ್ತನೆ ಈರುಳ್ಳಿಗೆ ಹದಿನಾಲ್ಕು ಸಾವಿರ ರೂಪಾಯಿ ಕೊಟ್ಟು ಖರೀದಿಸಿದರು.ಅಂದರೆ ಒಂದು ಎಕರೆಗೆ ಬಿತ್ತನೆ ಈರುಳ್ಳಿಗೆ 56,000 ರೂಪಾಯಿ ಜೊತೆಗೆ ಉಳುಮೆ ಗೊಬ್ಬರ ಕಳೆತೆಗೆಯುವುದು ಎಲ್ಲಾ ಸೇರಿ 80,000 ರೂಪಾಯಿವರೆಗೆ ವೆಚ್ಚಮಾಡಬೇಕಾಗುತ್ತದೆ. ಆದರೆ ಅದೇ ಈರುಳ್ಳಿ ಬೀಜದಿಂದ ಗೆಡ್ಡೆ ಉತ್ಪಾದನೆ ಮಾಡಿದರೆ ಕೇವಲ ಹದಿನೈದ ರಿಂದ ಇಪ್ಪತ್ತು ಸಾವಿರ ರೂಪಾಯಿಯಲ್ಲಿ ಎಲ್ಲಾ ಮುಗಿಸಬಹುದು.
ಸಾಂಬಾರ ಈರುಳ್ಳಿಯನ್ನು ಹೆಚ್ಚಾಗಿ ಚಾಮರಾಜನಗರ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ತಮಿಳುನಾಡು ಮತ್ತು ಕೇರಳದಲ್ಲಿ ಇದಕ್ಕೆ ಬೇಡಿಕೆ ಇದ್ದು ವಿದೇಶಗಳಿಗೂ ರಫ್ತುಮಾಡಲಾಗುತ್ತದೆ.
ಮುಂಗಾರಿನಲ್ಲಿ ಅರಿಶಿನ ಜೊತೆ ಮಿಶ್ರಬೆಳೆಯಾಗಿಯೂ, ಅಕ್ಟೋಬರ್-ನವಂಬರ್ನಲ್ಲಿ ಏಕ ಬೆಳೆಯಾಗಿಯೂ ವಾಷರ್ಿಕ ಎರಡು ಬಾರಿ ಸಾಂಬಾರ ಈರುಳ್ಳಿ ಬೆಳೆಯಲಾಗುತ್ತದೆ. ಕೆಲವು ಸಲ ಗುಣಮಟ್ಟದ ಗೆಡ್ಡೆಗಳನ್ನು ಉಪಯೋಗಿಸದೆ ಇಳುವರಿ ಕಡಿಮೆಬಂದ ನಿದರ್ಶನಗಳು ಇವೆ.ಜೊತೆಗೆ ದಲ್ಲಾಳಿಗಳು ಬಿತ್ತನೆ ಈರುಳ್ಳಿಗೆ ದಿಢೀರ್ ದರ ಏರಿಕೆ ಮಾಡಿ ರೈತರಿಗೆ ನಷ್ಟವಾಗುವಂತೆ ಮಾಡುತ್ತಾರೆ.
ಲಾಭಗಳು : ಪ್ರಸ್ತುತ ತಂತ್ರಜ್ಞಾನದ ಬೆಳವಣಿಗೆಯಿಂದ ಬೀಜಬಳಸಿ ಗೆಡ್ಡೆ ಉತ್ಪಾದಿಸುವ ತಳಿಗಳನ್ನು ಕೊಯಂತ್ತೂರಿನ ಕೃಷಿ ವಿಶ್ವವಿದ್ಯಾನಿಲಯ ಸಂಶೋಧನೆ ಪಡಿಸಿದ್ದು ಇದು ರೈತರಿಗೆ ವರದಾನವಾಗಿದೆ.ಕೋ ಫೋರ್ ಎಂಬ ತಳಿ ಈಗ ಜನಪ್ರೀಯವಾಗಿದೆ.
ಬಿತ್ತನೆಗೆ ಗೆಡ್ಡೆಗಳನ್ನು ಉಪಯೋಗಿಸುವಬದಲು ಬೀಜಗಳನ್ನು ಉಪಯೋಗಿಸಿದರೆ ಉತ್ಪಾದನಾ ವೆಚ್ಚದಲ್ಲಿ ಕಡಿತವಾಗುತ್ತದೆ. ಅಲ್ಪ ಪ್ರಮಾಣದ ಬಿತ್ತನೆ ಬೀಜ ಸಾಕಾಗುತ್ತದೆ. ಎಕರೆಗೆ ಒಂದು ಕೆಜಿ, ಪ್ರತಿ ಕೆಜಿ ಬೀಜಕ್ಕೆ ನಾಲ್ಕುವರೆ ಸಾವಿರ ರೂಪಾಯಿ ವೆಚ್ಚಮಾಡಿದರೆ ಸಾಕಾಗುತ್ತದೆ.ಮೊಳಕೆಯ ಪ್ರಮಾಣ ಅಧಿಕವಾಗಿ ಇಳುವರಿಯೂ ಉತ್ತಮವಾಗಿರುತ್ತದೆ.
ಸಣ್ಣ ಈರುಳ್ಳಿಯು ಹವಾಮಾನ ಮತ್ತು ಬೆಳೆಯುವ ಕಾಲವನ್ನು ಅನುಸರಿಸಿ ಅವಧಿಯಲ್ಲಿ ಬದಲಾವಣೆಯಾಗುತ್ತದೆ. ಬೇಸಿಗೆಯಲ್ಲಿ 60-70 ದಿನಕ್ಕೆ ಕಟಾವಿಗೆ ಬಂದರೆ ಮುಂಗಾರಿನಲ್ಲಿ 70-80 ದಿನ ಬೇಕಾಗುತ್ತದೆ. ಚಳಿಗಾಲದಲ್ಲಿ ನೂರು ದಿನದವರೆಗೂ ಬೆಳೆಯುವ ಅವಧಿ ವಿಸ್ತರಣೆಯಾಗುತ್ತದೆ.
ಈ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಬೀಜದಿಂದ ಈರುಳ್ಳಿ ಬೆಳೆಯಬೇಕಾದರೆ ರೈತರು ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಸಸಿಮಡಿ ತಯಾರಿಕೆ,ನಿರ್ವಹಣೆ ಮತ್ತು ನಾಟಿ ಸಮಯದಲ್ಲಿ ಸ್ವಲ್ಪ ಎಚ್ಚರಿಕೆವಹಿಸಿದರೆ ಗಣನೀಯ ಪ್ರಮಾಣದಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದು.
"ತೋಟಗಾರಿಕೆ ಇಲಾಖೆಗೆ ಸರಕಾರ ತರಕಾರಿ ಬೀಜಗಳನ್ನು ಖರೀದಿಸಿ ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಅನುದಾನ ನೀಡುತ್ತಿದೆ.ಚಾಮರಾಜನಗರ ಜಿಲ್ಲೆಯ ಅಧಿಕಾರಿಗಳು ತಮಿಳುನಾಡಿನ ಕೊಯಂತ್ತೂರು ಕೃಷಿ ವಿಶ್ವ ವಿದ್ಯಾನಿಲಯದಿಂದ ಕೋ ಫೋರ್ ಬೀಜಗಳನ್ನು ತರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜಿಲ್ಲೆಯ ರೈತರ ಕೋಟ್ಯಾಂತರ ರೂಪಾಯಿ ಹಣ ದಲ್ಲಾಳಿಗಳ ಜೇಬು ಸೇರುವುದನ್ನು ತಪ್ಪಿಸಬೇಕು" ಎನ್ನುವುದು ಎಂ.ಸಂಪತ್ತು ಅವರ ಆಗ್ರಹ.
ಈರುಳ್ಳಿ ಬೀಜದಿಂದ ಗುಣಮಟ್ಟದ ಗೆಡ್ಡೆ ಉತ್ಪಾದನೆ ಮಾಡುವ ಆಸಕ್ತಿ ಇರುವ ರೈತರು ಕುಂದಕೆರೆ ಗ್ರಾಮಕ್ಕೆ ಹೋಗಿ ಈರುಳ್ಳಿ ಬೇಸಾಯವನ್ನು ನೋಡಿ ಕಲಿಯಬಹುದು. ಸಂಪತ್ತು ಅವರನ್ನು ಮಾತನಾಡಿಸಲು 9980309478 ಸಂಪಕರ್ಿಸಬಹುದು.
ಹೆಚ್ಚಿನ ಮಾಹಿತಿಗೆ ಮೈಸೂರು ತೋಟಗಾರಿಕೆ ಮಹಾ ವಿದ್ಯಾಲಯದ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಎಂ.ಪಲ್ಲವಿ 7338365100 ಅವರನ್ನೂ ಸಂಪಕರ್ಿಸಬಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ