vaddagere.bloogspot.com

ಸೋಮವಾರ, ಆಗಸ್ಟ್ 29, 2016


 ಬಯಲುಸೀಮೆಯಲ್ಲಿ ಹೊಸ ಮಾದರಿ ಅಡಿಕೆ ಬೇಸಾಯ
ನೈಸಗರ್ಿಕ ಕೃಷಿಯಲ್ಲಿ ಯಶಸ್ಸು ಕಂಡ ಉದ್ಯಮಿ ನಿಜಗುಣ
ಚಾಮರಾಜನಗರ : ಮಣ್ಣು ಮತ್ತು ಸಸ್ಯಗಳ ಗುಣಧರ್ಮವನ್ನು ಅರಿತು ಬಯಲು ಸೀಮೆಯಲ್ಲಿ ಕಟ್ಟಿದ ಸುಂದರ ಅಡಿಕೆ ತೋಟ ಇದು. ದಶಕಗಳ ಹಿಂದೆ ರಾಗಿ, ಜೋಳ,ಹಸರು,ಉದ್ದು,ಅವರೆ ಮತ್ತಿತರ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದ ಭೂಮಿ ಈಗ ಮಲೆನಾಡಿನ ಹಸಿರು ಹೊದ್ದು ನಿಂತಿದೆ. ದಶಕಗಳ ಹಿಂದೆ ಮಳೆ ಬಂದರೆ ಜಮೀನಿನ ಮಣ್ಣೆಲ್ಲ ಕೊಚ್ಚಿ,ಕೊರೆದು ಹಳ್ಳ ಮಾಡಿ, ಬೆಳೆದ ಬೆಳೆಯನ್ನೆಲ್ಲ ನೀರನೊಂದಿಗೆ ಕೊಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಆಗ ಕೊರಕಲು ಜಮೀನು ಎಂದೆ ಕರೆಯಲಾಗುತ್ತಿತ್ತು. ಆದರೆ ಇಂದು ಅದೇ ಜಮೀನಿನಲ್ಲಿ ಬಿದ್ದ ಮಳೆ ನೀರು ಮಣ್ಣಿನೊಂದಿಗೆ ಬೆರೆತು ಸ್ನೇಹಮಾಡುತ್ತಿದೆ. ನೆಲಕ್ಕೆ ಬಿದ್ದ ಒಂದೊಂದು ಹನಿಯೂ ಆಚೆ ಹೋಗದೆ ಅಂತರ್ಜಲವಾಗಿ ಪರಿವರ್ತನೆಯಾಗಿ ಭೂಮಿಯ ಕೊರಕಲನ್ನು ತಪ್ಪಿಸಿದೆ. ಈಗ ಅಲ್ಲೊಂದು ಸುಂದರ ಅಡಿಕೆ ತೋಟ ಕೈ ಬೇಸಿ ಕರೆಯುತ್ತಿದೆ. ಇಂತಹ ಹಸಿರು ಸಸ್ಯಕಾಶಿಯನ್ನು ರೂಪಿಸಿದವರು ಉದ್ಯಮಿ ನಿಜಗುಣರಾಜು.
ಚಾಮರಾಜಗರದ ಸೆರಗಿಗೆ ಇದೆ ರಾಮಸಮುದ್ರ. ಅಲ್ಲಿಂದ ಅರುಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಒಂದು ಕಿ.ಮೀ.ದೂರ ಕ್ರಮಿಸಿದರೆ ಬಲಗಡೆಗೆ ಸಿಗುವುದೆ ನಿಜಗುಣ ಫಾರಂ. ಸುತ್ತಮತ್ತಲಿನ ತೋಟಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಪ್ರತಿ ಕೊಳವೆ ಬಾವಿಗಳನ್ನು 600 ರಿಂದ 800 ಅಡಿ ಕೊರೆಸಿದ್ದರೂ ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಾಗುತ್ತದೆ.ಆದರೆ ನಿಜಗುಣ ಫಾರಂನಲ್ಲಿ 160 ಅಡಿ ಇರುವ ಕೊಳವೆ ಬಾವಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದಲೂ ನೀರು ಸ್ವಲ್ಪವೂ ಕಡಿಮೆಯಾಗಿಲ್ಲ.ಅಷ್ಟೆ ಅಲ್ಲ ಈ ಬೋರ್ವೆಲ್ನಿಂದ ಬರುವ ನೀರು ಸಿಹಿಯಾಗಿದ್ದು ವರ್ಷದ ಎಲ್ಲಾ ಕಾಲಗಳಲ್ಲೂ ಎಂತಹ ಬರಕ್ಕೂ ದಕ್ಕದೆ ಒಂದೆ ಸಮನೆ ಮೂರು ಇಂಚು ನೀರು ಕೊಡುತ್ತಿದೆ.ಪರಿಣಾಮ ಮೂರು ಎಕರೆ ಪ್ರದೇಶದಲ್ಲಿ 2400 ಅಡಿಕೆ, 2500 ಏಲಕ್ಕಿ ಬಾಳೆ ,20 ತೆಂಗು, ತೋಟದ ಸುತ್ತ ಲಕ್ಷಾಂತರ ಬೆಲೆ ಬಾಳುವ 300 ತೇಗದ ಮರಗಳು ಅಲ್ಲದೆ ನುಗ್ಗೆ, ಮನೆ ಬಳಕೆಗೆ ವಿಷಮುಕ್ತವಾಗಿ ಬೆಳೆದುಕೊಂಡಿರುವ ಒಂದೆರಡು ಸೀಬೆ, ದಾಳಿಂಬೆ, ಪಪ್ಪಾಯ ಹಣ್ಣುಗಳನ್ನು ಕೊಡುವ ಗಿಡಗಳಿದ್ದು ಹಸಿರಿನಿಂದ ಕಂಗೊಳಿಸುತ್ತಾ ಹಾದಿಯಲ್ಲಿ ಹೋದವರ ಕಣ್ಮನ ಸೆಳೆದು ಬಾಗಿ ಬಳುಕುತ್ತಿವೆ.
ಈ ತೋಟದ ವಾಷರ್ಿಕ ಆದಾಯ ಅಡಿಕೆಯಿಂದ ಮಾತ್ರ ಬರುತ್ತದೆ. ಉಳಿದಂತೆ ಬಾಳೆ, ತೆಂಗು ಸಮೃದ್ಧವಾಗಿದ್ದರೂ ಅವುಗಳಿಂದ ಹೆಚ್ಚಿನ ಆದಾಯವನ್ನು ತೋಟದ ಮಾಲೀಕ, ಉದ್ಯಮಿ ನಿಜಗುಣ ರಾಜು ನಿರೀಕ್ಷಿಸುವುದಿಲ್ಲ.ಆದರೂ ಬಾಳೆಯೂ ಒಂದುವರೆ ಲಕ್ಷ ಆದಾಯ ತಂದುಕೊಡುತ್ತದೆ. ಚಾಮರಾಜನಗರದಲ್ಲಿ  ನಿಜಗುಣ ಗ್ರೂಫ್ ಆಫ್ ಕಂಪನಿ ಎಂಬ ಹೆಸರಿನಲ್ಲಿ  ಹೋಟೆಲ್ ಉದ್ಯಮ ಸೇರಿದಂತೆ ಹಲವಾರು ಉದ್ಯಮಗಳನ್ನು ಕಟ್ಟಿ ಯಶಸ್ವಿಯಾಗಿರುವ ನಿಜಗುಣರಾಜು ಇಂತಹ ಸಂಪೂರ್ಣ ಸಾವಯವ ಹಸಿರು ತೋಟವನ್ನು ಕಟ್ಟಿದ್ದರು ತಾನೊಬ್ಬ ಉದ್ಯಮಿ ಎಂದು ಗುರುತಿಸಿಕೊಳ್ಳುತ್ತಾರೆಯೆ ವಿನಹ ರೈತ ಎಂದು ಗುರುತಿಸಿಕೊಂಡಿಲ್ಲ. ಆದರೆ ರಾಜು ಕಟ್ಟಿದ ತೋಟ ಹಲವಾರು ಕಾರಣಗಳಿಗೆ ಈಗ ಕೃಷಿ ವಿಜ್ಞಾನಿಗಳಿಗೆ ಒಂದು ಪಾಠ ಶಾಲೆಯಾಗಿ ರೂಪುಗೊಂಡಿದೆ.
ವರ್ಷದಲ್ಲಿ ಐದಾರು ಬಾರಿ ಮಾತ್ರ ತೋಟಕ್ಕೆ ಹೋಗುವ ನಿಜಗುಣರಾಜು ಶಿವರಾತ್ರಿಯಿಂದ ಶಿವರಾತ್ರಿವರೆಗೆ ಅಡಿಕೆ ತೋಟವನ್ನು ಸ್ಥಳೀಯ ಅಡಿಕೆ ವ್ಯಾಪಾರಿಗಳಿಗೆ ವಾಷರ್ಿಕ ಗುತ್ತಿಗೆ ಕೊಟ್ಟು ಬಿಡುತ್ತಾರೆ.ಕಳೆದ ವರ್ಷ ಮೂರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟವನ್ನು ಆರು ಲಕ್ಷದ ನಲವತ್ತು ಸಾವಿರ ರೂಪಾಯಿಗೆ ಕೊಟ್ಟಿದ್ದೆ. ಈ ಬಾರಿ ಅಡಿಕೆ ದರ ಕುಸಿತ ಕಂಡಿದ್ದರು ಐದು ಲಕ್ಷದ ಹತ್ತು ಸಾವಿರ ರೂಪಾಯಿಗಳಿಗೆ ಗುತ್ತಿಗೆ ಕೊಟ್ಟಿದ್ದೇನೆ ಎನ್ನುತ್ತಾರೆ. ನಮ್ಮ ಬೇಸಾಯ ಒಂದು ರೀತಿ ಕಾಪರ್ೋರೇಟ್ ರೀತಿಯದು ಎನ್ನುತ್ತಾರೆ. ತೋಟಕ್ಕೆ ಮುಖ್ಯವಾಗಿ ಏನು ಮಾಡಿಸಬೇಕು, ಏನನ್ನು ಮಾಡಬಾರದು ಎನ್ನುವುದು ಮಾಲೀಕನಿಗೆ ಗೊತ್ತಿರಬೇಕು. ಜೊತೆಗೆ ಅದರ ನಿರ್ವಹಣೆ ತುಂಬಾ ಮುಖ್ಯ ಎನ್ನುತ್ತಾರೆ.
ನಮ್ಮ ಕಡೆ ಆಳು ಮಾಡಿದ ಕೆಲಸ ಆಳು ಎನ್ನುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲಿಗೆ ಬಂದ ದಂಪತಿ ಕಳೆದ ಒಂದು ದಶಕಗಳಿಂದ ತೋಟದಲ್ಲೆ ನೆಲೆನಿಂತು ಆಗುಹೋಗುಗಳನ್ನು ನೋಡಿಕೊಳ್ಳುತ್ತಿದೆ.ಮೂಡ್ನಾಕೂಡು ಗ್ರಾಮದಿಂದ ಹದಿನಾಲ್ಕು ವರ್ಷಗಳ ಹಿಂದ ತೋಟಕ್ಕೆ ಬಂದ ನಂಜಮ್ಮಣಿ ಮತ್ತು ಬಸವರಾಜಪ್ಪ ದಂಪತಿ ಇಲ್ಲೆ ನೆಲೆ ನಿಂತು ತೋಟದ ಕಾವಲುಗಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ತೋಟದಲ್ಲೆ ಸದಾ ಇದ್ದರು ಬೇಸಾಯದ ಬಗ್ಗೆ ಬೇಸರದಿಂದಲ್ಲೆ ಮಾತನಾಡುವ ಜನರೆ ಹೆಚ್ಚು. ಹೀಗಿರುವಾಗ ಯಶಸ್ವಿ ಉದ್ಯಮಿಯೂ ಆಗಿರುವ ನಿಜಗುಣ ವ್ಯವಸಾಯದ ಬಗ್ಗೆ ಪ್ರೀತಿ ಮೂಡಲು ನಿಮಗೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ದಶಕದ ಹಿಂದಿನ ನೆನೆಪುಗಳಿಗೆ ಜಾರಿ ಬಿಡುತ್ತಾರೆ.
ಪಿತ್ರಾಜರ್ಿತ ಆಸ್ತಿ : ನಾನೊಬ್ಬ ಉದ್ಯಮಿಯಾಗಬೇಕೆಂದು ಕನಸು ಕಂಡವನು. ಜಮೀನು ಬೇಡ ಎಂದಿದ್ದೆ. ಆದರೆ ನಮ್ಮ ತಂದೆ ಎಚ್.ಎಂ.ಗುರುಮಲ್ಲಪ್ಪ ನನ್ನ ಹೆಸರಿನಲ್ಲಿ ಆರ್ಟಿಸಿ ಇರಲಿ ಎಂಬ ಕಾರಣಕ್ಕೆ ನನಗೆ ಈ ಮೂರು ಎಕರೆ ಕೊರಕಲು ಜಮೀನು ಕೊಟ್ಟರು. ಆರಂಭದಲ್ಲಿ ಕೊಳವೆ ಬಾವಿ ಕೊರೆಸಿದೆ.ಒಳ್ಳೆಯ ನೀರು ಬಂತು.ಕಬ್ಬು ನಾಟಿಮಾಡಿಸಿದೆ. ಕಾಖರ್ಾನೆಯವರು ಕಬ್ಬು ಖರೀದಿ ಮಾಡುವುದನ್ನು ವಿಳಂಬಮಾಡಿದರು. 12 ತಿಂಗಳಿಗೆ ಕಟಾವಿಗೆ ಬರುವ ಕಬ್ಬನ್ನು 14 ತಿಂಗಳಾದರೂ ಖರೀದಿಸುತ್ತಿರಲಿಲ್ಲ. ಇದರಿಂದ ಬೇಸತ್ತು ಎರಡೆ ವರ್ಷಕ್ಕೆ ಕಬ್ಬು ಕಿತ್ತು ಮೂರು ತಿಂಗಳ ಬೆಳೆ ಮಾಡೋಣ ಅಂತ ಅಲ್ಲಿ ಕೋಸು ಹಾಕಿದೆ. ಹೊಸ ಮಣ್ಣು ಕೋಸು ಚೆನ್ನಾಗಿ ಬಂತು. ಆದರೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಖಚರ್ು ಕೂಡ ಹೆಚ್ಚಾಗಿ ಬರಿ ಹತ್ತಿಪ್ಪತ್ತು ಸಾವಿರ ರೂ. ಆದಾಯ ಮಾತ್ರ ಬಂತು.
ಇದರಿಂದ ನನಗೆ ಒಂದು ಸತ್ಯ ಗೊತ್ತಾಯಿತು. ನಾವು ಕ್ರಿಮಿನಾಶಕ ಮತ್ತು ಗೊಬ್ಬರದ ಕಂಪನಿಗಳಿಗಾಗಿ ದುಡಿಯುತ್ತಿದ್ದೇವೆ. ನಾವು ಇದನ್ನೆಲ್ಲ ಬಳಸಿ ಬೇಸಾಯ ಮಾಡುವುದರಿಂದ ಅವರು ಶ್ರೀಮಂತರಾಗುತ್ತಾರೆ ನಾವು ಬಡವರಾಗುತ್ತೇವೆ ಎಂಬುದು ಅರಿವಿಗೆ ಬಂತು. ಸ್ವತಃ ಆಗ ನಾನೆ ಜಿಲ್ಲೆಯ ಫಟರ್ಿಲೈಸರ್ ಡೀಲರ್ ಆಗಿ ವ್ಯಾಪಾರದಲ್ಲಿ ಜಿಲ್ಲೆಗೆ ಮೊದಲಿಗನಾಗಿದ್ದೆ. ವಿಜಯ ಮಲ್ಯ ನನಗೆ ಸನ್ಮಾನ ಮಾಡಿದ್ದರು. ಭೂಮಿಗೆ ವಿಷ ಉಣಿಸುವುದರಿಂದ ನಾವೂ ಮಾತ್ರ ಬಡವರಾಗುವುದಿಲ್ಲ, ಭೂತಾಯಿಯನ್ನು ಬಂಜೆ ಮಾಡುತ್ತೇವೆ ಎಂಬ ಸತ್ಯದ ಸಾಕ್ಷಾತ್ಕಾರವಾಗಿ ಗೊಬ್ಬರ ವ್ಯಾಪಾರ ಬಿಡಲು ತೀಮರ್ಾನಿಸಿದೆ.
ಸಾವಯವಕ್ಕೂ ಮುನ್ನಾ : ಮೂರು ಎಕರೆ ಜಮೀನುಗು ಮೊದಲು ತಂತಿ ಬೇಲಿ ಹಾಕಿಸಿ ಆಳವಾಗಿ ಉಳುಮೆ ಮಾಡಿ ಆರು ತಿಂಗಳು ಮಣ್ಣನ್ನು ಬಿಸಿಲಿನಲ್ಲಿ ಕಾಯಲು ಬಿಟ್ಟೆ. ನಂತರ ಅಡಿಕೆ ಹಾಕಲು ನಿರ್ಧರಿಸಿ ರಾಮ ಸಮುದ್ರದ ಸಮೀಪ ಇರುವ ಚಿಕ್ಕಕೆರೆ ದೊಡ್ಡಕೆರೆಯಿಂದ ಜಮೀನಿಗೆ ಕೆರೆಮಣ್ಣು ಹೊಡೆಸಿದೆ. ಇದರ ಜತೆ ಸಾಕಷ್ಟು ಕೊಟ್ಟಿಗೆ ಗೊಬ್ಬರವನ್ನು ಕೊಟ್ಟೆ. 8 ಮತ್ತು 8 ಅಡಿ ಅಂತರದಲ್ಲಿ ಏಲಕ್ಕಿ ಬಾಳೆ ಹಾಕಿ ಮಿಶ್ರ ಪದ್ಧತಿಯಲ್ಲಿ ನಾಮಧಾರಿ ತಳಿಯ ಕಲ್ಲಂಗಡಿ ಹಾಕಿದೆ. ಇದರಿಂದ ಮೂರು ತಿಂಗಳಲ್ಲಿ ಉತ್ತಮ ಆದಾಯ ಬಂತು. ಕಲ್ಲಂಗಡಿ ಕಿತ್ತ ನಂತರ ಸ್ಥಳೀಯವಾಗಿ ನಮ್ಮಲೆ ಸಿಗುವ ಅಡಿಕೆ ಸಸಿ ಖರೀದಿಸಿ ಅದನ್ನು 8 ಮತ್ತು 8 ಅಡಿ ಅಂತರದಲ್ಲಿ ನಾಟಿ ಮಾಡಿಸಿದೆ. ಸಾಮಾನ್ಯವಾಗಿ ಎಲ್ಲರಿ ಆರು ಮತ್ತು ಆರು ಅಡಿ ಅಂತರದಲ್ಲಿ ಅಡಿಕೆ ನಾಟಿ ಮಾಡುತ್ತಾರೆ. ಇದರಿಂದ ಮಣ್ಣಿಗೆ ಸಾಕಷ್ಟು ಬಿಸಿಲು ತಾಗದೆ ಫಸಲು ಕಡಿಮೆ ಬರುತ್ತದೆ.
ಮೊದಲ ಮತ್ತು ಎರಡನೆ ವರ್ಷದ ಬಾಳೆಯಲ್ಲಿ ಸಾಕಷ್ಟು ಆದಾಯ ಬಂತು. ನಾನು ಮಾಡಿದ ಒಳ್ಳೆಯ ಕೆಲಸವೆಂದರೆ ಬಾಳೆಯ ತರಗನ್ನು ಮುಚ್ಚಿಗೆಯಾಗಿ ಬಳಸಿಕೊಂಡು, ದಿಂಡನ್ನು ಸಣ್ಣ ಸಣ್ಣದಾಗಿ ಕಟ್ ಮಾಡಿಸಿ ಮೂರು ಎಕರೆ ಅಡಿಕೆ ತೋಟಕ್ಕೂ ಹಾಸಿಗೆಯಂತೆ ಹಾಸಿ ಅದರ ಮೇಲೆ ಮತ್ತೆ ಕೆರೆ ಮಣ್ಣು ಸುರಿಸಿದೆ. ಇಲ್ಲೂ ಒಂದು ಉಪಾಯ ಮಾಡಿದ್ದೆ. ಸುತ್ತ ಮತ್ತು ಇರುವ ಬೇಲಿಯನ್ನು ಸವರಿಸಿ ಉಗನಿ ಹಂಬು, ಭೂತಾಳೆ, ಮತ್ತಿತರ ತ್ಯಾಜ್ಯಗಳನ್ನು ತರಿಸಿ ಗುಂಡಿಗೆ ತುಂಬಿ ಅದರ ಮೇಲೆ ಕೆರೆ ಮಣ್ಣು ಸುರಿಸಿ ಮೂರು ತಿಂಗಳು ಚೆನ್ನಾಗಿ ಕಳಿಸಿ ಗೊಬ್ಬರ ತಯಾರುಮಾಡಿಕೊಂಡಿದ್ದೆ. ಅದನ್ನೆ ಬಾಳೆ ದಿಂಡಿನ ಮುಚ್ಚಿಗೆ ಮೇಲೆ ಸುರಿಸಿದೆ.
ಪಕ್ಕದ ಮೂರು ಎಕರೆ ಕಬ್ಬಿನ ತೋಟದಲ್ಲೂ ಸಿಕ್ಕ ತರಗನ್ನು ತಂದು ಮುಚ್ಚಿಗೆಯಾಗಿ ಬಳಸಿಕೊಂಡೆ. ಆಗ ನೀರು ಹಾಹಿಸುವ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದೆವು. ಇದೆಲ್ಲ ಮಾಡಿದ ಪರಿಣಾಮ ಮೂರೆ ತಿಂಗಳಲ್ಲಿ ನನ್ನ ಭೂಮಿಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಅಸಂಖ್ಯಾತ ಎರೆ ಹುಳುಗಳು ಕಾಣಿಸಿಕೊಂಡವು.ಮಣ್ಣು ಮೃದುವಾಯಿತು. ಆಗ ನನಗೆ ಸಾವಯವದ ಸತ್ಯ ಮತ್ತು ಪರಿಣಾಮ ಗೊತ್ತಾಯಿತು. ಪರಿಣಾಮ ಮಣ್ಣಿಗೆ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಬಂತು. ಇದರಿಂದಾಗಿ ಈಗ ಸತತವಾಗಿ ಐದು ದಿನ ಮಳೆಯಾದರೂ ನಮ್ಮ ತೋಟದಲ್ಲಿ ಮಣ್ಣು ಕೊಚ್ಚಿಹೋಗುವುದಿಲ್ಲ. ಬಿದ್ದ ಪ್ರತಿ ಹನಿಯೂ ಅಂತರ್ಜಲವಾಗಿ ಪರಿವರ್ತನೆಯಾಗಿ ತೋಟದಲ್ಲೆ ಫಿಕ್ಸಡ್ ಡೆಫಸಿಂಟ್ ಆಗಿಬಿಡುತ್ತದೆ. ಅದಕ್ಕಾಗಿಯೆ ನಮ್ಮ ತೋಟದ ನೀರಿಗೆ ಸಿಹಿಉ ಗುಣ ಇದೆ. ಎಂತಹ ಬರಗಾಲದಲ್ಲೂ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಆಗಿಲ್ಲ.
ಹನಿ ನೀರಾವರಿ : ಕಳೆದ ಆರು ವರ್ಷಗಳಿಂದ ಈಗ ಹನಿ ನೀರಾವರಿ ಅಳವಡಿಸಿಕೊಂಡಿದ್ದೇವೆ. ಜಮೀನಿಗೆ ಯಾವ ರೀತಿಯ ಗೊಬ್ಬರವನ್ನು ಹಾಕಿಲ್ಲ. ಉಳುಮೆಯನ್ನು ಮಾಡುವುದಿಲ್ಲ. ಹಾಲಿಗಾಗಿ ಎರಡು ನಾಟಿ ಹಸು ಸಾಕಿಕೊಂಡಿದ್ದೇವೆ ಅದರ ಸಗಣಿಯನ್ನು ಮಾತ್ರ ಗಿಡದ ಬೊಡ್ಡೆಗೆ ಸುರಿಯುತ್ತಾರೆ. ಜೀವಾಮೃತ,ಎರೆಗೊಬ್ಬರ ಅಂತ ಏನನ್ನು ನಾವು ಮಾಡಿಕೊಂಡಿಲ್ಲ. ನಾನು ತೋಟಕ್ಕೆ ವರ್ಷದಲ್ಲಿ ಐದಾರು ಬಾರಿ ಮಾತ್ರ ಬರುತ್ತೇನೆ.ಆದರೂ ನನ್ನ ತೋಟದ ಆದಾಯ ವಾಷರ್ಿಕ ಏಳು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇಲ್ಲ.ಅಡಿಕೆ ತೋಟದಲ್ಲಿ ಬೀಳುವ ಹಾಳೆಗಳನ್ನು ಸಂಗ್ರಹಿಸಿದರೆ ಅಡಿಕೆ ಪ್ಲೇಟ್ಮಾಡಿ ಅದನ್ನೆ ಒಂದು ದೊಡ್ಡ ವ್ಯಾಪಾರಮಾಡಿ ಆದಾಯಗಳಿಸಬಹುದು.ಆದರೆ ನಾನು ಅದನ್ನು ಮಾಡುತ್ತಿಲ್ಲ. ಮೊದಲ ಮೂರ್ನಾಲ್ಕು ವರ್ಷ ಶ್ರದ್ಧೆಯಿಂದ ತೋಟ ಕಟ್ಟಿದರೆ ನಂತರ ಅರಾಮವಾಗಿ ಮುವತ್ತು ನಲವತ್ತು ವರ್ಷ ಸೋಮಾರಿ ಬೇಸಾಯಮಾಡಿ ಹೆಚ್ಚಿನ ಆದಾಯಗಳಿಸಬಹುದು. ಈಗ ನಾನು ತೋಟದ ಕಡೆ ತಿರುಗಿ ನೋಡದಿದ್ದರು ಆದಾಯ ಗ್ಯಾರಂಟಿ. ತೋಟದಲ್ಲಿರವ ಕುಟುಂಬ ತೋಟಕ್ಕೆ ಕಾವಲಾಗಿದ್ದರೆ ಸಾಕು. ದಿನಕ್ಕೆ ಒಂದೆರಡು ಗಂಟೆ ಮೋಟಾರ್ ಹಾಕುವುದಷ್ಟೆ ಅವರ ಕೆಲಸ. ಡ್ರಿಫ್ ಮೂಲಕ ಗಿಡಗಳಿಗೆ ನೀರು ಹೋಗುತ್ತದೆ.ಅವರಿಗೆ  ಇಲ್ಲಿ ಬೇರೆನೂ ಕೆಲಸ ಇಲ್ಲ. ನನ್ನ ತೋಟದಲ್ಲಿ ಈಗ ನೂರಾರು ರೀತಿಯ ಪಕ್ಷಿಗಳು, ಹಾವು, ಮುಂಗೂಸಿ ಎಲ್ಲಾ ಜೀವನ ಮಾಡುತ್ತಿವೆ ಅವುಗಳಿಂದ ನಮಗೆ ತೊಂದರೆಯಾಗಿಲ್ಲ,ಜೀವ ವೈವಿಧ್ಯತೆ ಕಾಪಾಡಿಕೊಂಡಷ್ಟು ತೋಟ ಚೆನ್ನಾಗಿರುತ್ತದೆ.
ಮೂರು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯನ್ನು ಶ್ರದ್ಧೆಯಿಂದ ಮಾಡಿದರೆ ಯಾವ ಸಕರ್ಾರಿ ನೌಕರರಿಗೂ ಕಡಿಮೆ ಇರದಂತೆ ಒಂದು ಸಂಸಾರ ನೆಮ್ಮದಿಯಾಗಿ ಜೀವನ ಸಾಗಿಸಬಹುದು. ಇದು ನನ್ನ ಸ್ವಂತ ಅನುಭವ, ನಾನು ಕಂಡುಕೊಂಡ ಸತ್ಯ ಎನ್ನುತ್ತಾರೆ ನಿಜಗುಣರಾಜು. ಹೆಚ್ಚಿನ ಮಾಹಿತಿಗೆ 9480190282 ಸಂಪಕರ್ಿಸಬಹುದು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ