vaddagere.bloogspot.com

ಭಾನುವಾರ, ಮೇ 7, 2017

ಆಧ್ಯಾತ್ಮದ ಆರಂಭ ಕೃಷಿ : ಅದೃಶ್ಯ ಕಾಡಸಿದ್ದೇಶ್ವರಸ್ವಾಮೀಜಿ
ಮೈಸೂರು : ರಾಜ್ಯದ ಗಡಿಯಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶ್ರೀ ಕ್ಷೇತ್ರ ಸಿದ್ಧಗಿರಿಯ ಕನೇರಿ ಮಠ ಸಾಮಾಜಿಕ ಸುಧಾರಣೆಯ ಜೊತೆಗೆ ದೇಸಿಯ ಗೋತಳಿ ಸಂರಕ್ಷಣೆ,ಆದರ್ಶ ಗ್ರಾಮಗಳ ಪರಿಕಲ್ಪನೆ ಹಾಗೂ ಸಾವಯವ ಕೃಷಿಯ ಬಗ್ಗೆ ನಾಡಿನ ಜನರಲ್ಲಿ ಅರಿವು ಮೂಡಿಸುವ ಮೂಲಕ ಗಮನಸೆಳೆಯುತ್ತಿದೆ.
ಆಧ್ಯಾತ್ಮ, ಧಾರ್ಮಿಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಲೇ ನೂರಾರು ಎಕರೆ ಪ್ರದೇಶದಲ್ಲಿ ಹಣ್ಣು ತರಕಾರಿ ಬೆಳೆಯುವ ಮೂಲಕ ರೈತರಿಗೆ ಸುಸ್ಥಿರ ಮಾದರಿಯೊಂದನ್ನು ತೋರಿಸುವ ಮೂಲಕ ಹತಾಶ ರೈತರ ಬಾಳಲ್ಲಿ ಆಶಾಭಾವನೆ ಮೂಡಿಸುತ್ತಿದೆ.
ಇಂತಹ ಗುಣಾತ್ಮಾಕ ಚಟುವಟಿಕೆಗಳ ಹಿಂದಿನ ಪ್ರೇರಣ ಶಕ್ತಿ ಶ್ರೀ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಅವರು ಸಾಗುತ್ತಿರುವ ಹಾದಿ,ಮಾಡುತ್ತಿರುವ ಕೆಲಸಗಳು ಶ್ರೀಗಳ ಬಗ್ಗೆ ಭಕ್ತರಲ್ಲಿ ಅಪಾರ ಗೌರವಭಾವನೆ ಮೂಡಿಸಿವೆ.
ಮೊನ್ನೆ ನನಗೆ ಶ್ರೀ ಸುತ್ತೂರು ಮಠದ ಕಿರಿಯ ಶ್ರೀಗಳಾದ ಚುಂಚಶ್ರೀ ಅವರಿಂದ ದೂರವಾಣಿ ಕರೆಯೊಂದು ಬಂತು. ಮೈಸೂರಿನ ಸುತ್ತಮುತ್ತ ನೈಸಗರ್ಿಕ ಕೃಷಿ ಮಾಡುತ್ತಿರುವ ರೈತರ ತೋಟಗಳ ಬಗ್ಗೆ ಮಾಹಿತಿ ಕೊಡಿ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಅಂತಹ ರೈತರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದರು.
ನನಗೆ ಮೊದಲು ಆಶ್ಚರ್ಯವಾಯಿತು ಎಲ್ಲಿಯ ಮಠ, ಅದೆಲ್ಲಿಯ ಕೃಷಿ ಅನಿಸಿತು. ಸ್ವಾಮೀಜಿ ಅವರ ಹಸಿರು ಪ್ರೀತಿಯ ಬಗ್ಗೆ ನನಗೆ ಮಾಹಿತಿ ಇದ್ದ ಕಾರಣ ಅವರ ಬಗ್ಗೆ ಮತ್ತಷ್ಟು ಗೌರವಭಾವನೆ ಮೂಡಿತು. ಸಂಜೆ ರೈತರ ತೋಟಗಳ ವಿಕ್ಷಣೆ ನಂತರ ಶ್ರೀಗಳನ್ನು ಭೇಟಿಯಾಗುವುದಾಗಿ ಹೇಳಿದೆ. ಬನ್ನಿ ಎಂದರು.ಸುತ್ತೂರಿನ ಜೆಎಸ್ಎಸ್ ಮಠದಲ್ಲಿ ಸಂಜೆ ಕುಳಿತು ಅವರೊಂದಿಗೆ ಮಾತನಾಡಿದ ಹಸಿರು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.  
ಜನರ ವಿಶ್ವಾಸ ಮುಖ್ಯ : "ಅಧಿಕಾರಿಗಳ ಮೇಲೆ ಜನರಿಗೆ ವಿಶ್ವಾಸ ಇಲ್ಲ.ಅಲ್ಲಲ್ಲಿ ಒಳ್ಳೆಯ ಪ್ರಯೋಗಶೀಲ ಅಧಿಕಾರಿಗಳು ಇದ್ದಾರೆ.ಆದರೂ ಜನರಿಗೆ ಅವರ ಮೇಲೆ ವಿಶ್ವಾಸ ಇಲ್ಲ. ಆದರೆ ಜನರ ವಿಶ್ವಾಸ ಇನ್ನೂ ಮಠದ ಸ್ವಾಮಿಗಳ ಮೇಲೆ ಇದೆ. ಸ್ವಾಮೀಜಿಗಳು, ಮಠಗಳು ಸಮಾಜದಲ್ಲಿ ಆಧ್ಯಾತ್ಮ ಮತ್ತು ಧಾರ್ಮಿಕ ಅರಿವು ಮೂಡಿಸುವುದರ ಜೊತೆಗೆ ಸಾವಯವ ಕೃಷಿಯಲ್ಲಿ ಮಾದರಿಯಾದರೆ ಜನ ಅದನ್ನು ತಕ್ಷಣ ಅನುಸರಿಸುತ್ತಾರೆ. ಮಠಗಳ ನಿಜವಾದ ಕೆಲಸ ಕೂಡ ಅದೇ ಆಗಿದೆ. 
ನಮ್ಮ ಎಲ್ಲಾ ಮಠಗಳು ಕೃಷಿ ಹಿನ್ನೆಲೆಯಿಂದ ಬಂದ ಮಠಗಳೆ. ಆಧ್ಯಾತ್ಮದ ಆರಂಭನೇ ಕೃಷಿ. ಋಷಿಗಳ ಮೂಲ ವೃತ್ತಿ ಕೃಷಿ. ಆನಂತರದಲ್ಲಿ ಆಶ್ರಮಗಳು ಹೋಗಿ ಮಠಗಳಾದವು. ಮಠಗಳ ದೈನಂದಿನ ಕಾರ್ಯಚಟುವಟಿಕೆ ನಡೆಯಲು ಆ ಕಾಲದ ಸಮಾಜ, ಹಿರಿಯರು ಮಠಗಳಿಗೆ ಭೂಮಿಯನ್ನು ಉಂಬಳಿಯಾಗಿ ಕೊಡುತ್ತಿದ್ದರು. ಅದರ ಮೇಲೆ ಮಠಗಳು ನಡೆಯಬೇಕು ಅಂತ. ಆದರೆ ಕ್ರಮೇಣ ಬೇರೆ ಬೇರೆ ಕಾರಣಗಳಿಂದ ಅದು ಕಡಿಮೆಯಾಯಿತು. ಆಗಾಗಬಾರದಿತ್ತು.ದುದರ್ೈವ ಆಗಿಬಿಟ್ಟಿದೆ.
ರೈತರಿಗೆ ಆದರ್ಶ ಮಾದರಿಗಳು ಮೊದಲು ಮಠಗಳಲ್ಲಿ ತಯಾರಾಗಬೇಕು. ಪ್ರತಿಯೊಬ್ಬ ಸ್ವಾಮಿಗಳು ತಮ್ಮ ಬಳಿ ಬಂದ ಭಕ್ತರಿಗೆ ಏನೋ ಪ್ರಸಾದ ಕೊಡುವ ಬದಲು ಒಂದಿಷ್ಟು ದೇಸಿ ಬೀಜಗಳನ್ನು ಕೊಡಬೇಕು. ಪ್ರತಿಯೊಂದು ಮಠದಲ್ಲಿ ನರ್ಸರಿ ಆಗಬೇಕು. ಪ್ರತಿಯೊಬ್ಬ ಭಕ್ತರಿಗೂ ಒಂದೊಂದು ಗಿಡ ಕೊಡಬೇಕು. ಭಕ್ತರಿಗೆ ಸುಮ್ಮನೇ ಒಂದು ತೆಂಗಿನಕಾಯಿ ಕೊಟ್ಟರೂ ಸಹಿತ  ಗುರುಗಳು ಕೊಟ್ಟಿದ್ದು ಅಂತ ಅವರು ಅದನ್ನೆ ಶ್ರದ್ಧೆಯಿಂದ ಸಸಿಯಾಗಿ ಬೆಳೆಸುತ್ತಾರೆ" ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಹೇಳುವಾಗ ಅವರಲ್ಲಿದ್ದ ಆತ್ಮವಿಶ್ವಾಸ ಸಮಾಜ ಬದಲಾವಣೆಯತ್ತ ಮುಖಮಾಡಿದ ನಂಬಿಕೆ ಎದ್ದು ಕಾಣುತ್ತಿತ್ತು.
ರೈತರಿಗೆ ಕಾರ್ಯಾಗಾರ : ನಮ್ಮಲ್ಲಿ ಎರಡು ತಿಂಗಳಿಗೆ ಒಂದು ಬಾರಿ ಎರಡು ದಿನದ ರೈತರ ಕಾರ್ಯಾಗಾರ ಮಾಡುತ್ತೇವೆ. ಅಲ್ಲಿ ಮಣ್ಣು, ನೀರು, ಬೀಜ ಮತ್ತು ಗೊಬ್ಬರ ಈ ನಾಲ್ಕು ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ರೈತರೊಂದಿಗೆ ಚಚರ್ೆ ಸಂವಾದ ನಡೆಸುತ್ತೇವೆ.ಇದು ಕೂಡ ಪರಿಣಾಮಕಾರಿಯಾದ ಪ್ರಯೋಗವಾಗಿದೆ.
ದೇಶದಲ್ಲಿ ಇರುವ ನೂರಾರು ಡ್ಯಾಂಗಳು ಸರಿಯಾಗಿ ನಾಲ್ಕು ದಿನ ಮಳೆ ಆದರೆ ತುಂಬಿಹೋಗುತ್ತವೆ. ಐದನೇ ದಿನದಿಂದ ಬಿದ್ದ ಮಳೆಯ ನೀರೆಲ್ಲ ಸಮುದ್ರ ಸೇರುತ್ತದೆ. ಬಿದ್ದ ನೀರನ್ನೆಲ್ಲ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ನಮ್ಮ ಡ್ಯಾಂಗಳಿಗೆ, ಕೆರೆ ಕಟ್ಟೆಗಳಿಗೆ ಇಲ್ಲ. ಮಣ್ಣಿನಲ್ಲಿ ಶೇಕಡ ಎರಡಷ್ಟು ಸಾವಯವ ಇಂಗಾಲ ಹೆಚ್ಚುಮಾಡಿದರೆ ಸಾಕು ಇಂತಹ ಸಾವಿರ ಡ್ಯಾಂಗಳಲ್ಲಿ ಹಿಡಿದಿಟ್ಟುಕೊಳ್ಳಲಾರದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಮಣ್ಣಿಗೆ ಬರುತ್ತದೆ. ಆ ದಿಶೆಯಲ್ಲಿ ನಮ್ಮ ಪ್ರಯತ್ನ ಸಾಗಿದೆ.
ಎಲ್ಲ ಕಡೆ ನಾಟಿ ಬೀಜದ ಸಮಸ್ಯೆ ಇದೆ ನಿಜ. ನಮ್ಮ ಮಠದಿಂದ ರೈತರಿಗೆ ಸಾಧ್ಯವಾದಷ್ಟು ಬೀಜ ಕೊಡುತಿದ್ದೇವೆ. ನಾವು ಎಲ್ಲೇ ಹೋದರು ಬರಿಗೈಯಲ್ಲಿ ಬರುವುದಿಲ್ಲ.ಏನಾದರೂ ಬೀಜ ತೆಗೆದುಕೊಂಡೆ ಬರುತ್ತೇವೆ. ಅದನ್ನೆ ನಮ್ಮಲ್ಲಿ ಬೆಳೆದು ಹೆಚ್ಚುಮಾಡಿ ರೈತರಿಗೆ ಹಂಚುತ್ತೇವೆ. ನಮ್ಮಲ್ಲಿ ಒಂದು ಬತ್ತದ ತಳಿ ಇತ್ತು. ಅದು ಒಂಭತ್ತುವರೆ ಅಡಿ ಬೆಳೆಯೋದು. ಅದನ್ನು ಸುಮಾರು ಐವತ್ತು ಸಾವಿರ ರೈತರಿಗೆ ತಲುಪಿಸಿದೆವು. ಅದು ಗಿನ್ನಿಸ್ ಬುಕ್ನಲ್ಲಿ ರೆಕಾಡರ್್ ಆಗಿತ್ತು. ಬತ್ತದ ಇಳುವರಿಯೂ ಚೆನ್ನಾಗಿದ್ದು, ದನಗಳಿಗೆ ಮೇವು ಸಿಗುತ್ತಿತ್ತು. ಎಲ್ಲೋ ಒಮ್ಮೆ ಕೃಷಿ ವಸ್ತು ಪ್ರದರ್ಶನಕ್ಕೆ ಹೋಗಿದ್ದಾಗ ಅದು ನಮಗೆ ಸಿಕ್ಕಿತು. ತಂದು ಅದನ್ನು ಬಿತ್ತನೆ ಮಾಡಿ ರೈತರಿಗೆ ಕೊಟ್ಟೆವು. ಈ ರೀತಿಯಾಗಿ ದೇಸಿ ಬೀಜಗಳನ್ನು ಉಳಿಸೋವ ಕೆಲಸ ಮಾಡುತ್ತಿದ್ದೇವೆ ಎಂದರು.
ಭಾಷಣ ಸಾಕು ಪ್ರಯೋಗ ಬೇಕು : "ರೈತರಿಗೆ ಥಿಯರಿ ಸಾಕಾಗಿದೆ ಪ್ರಾಕ್ಟಿಕಲ್ ಬೇಕಾಗಿದೆ. ಭಾಷಣಗಳಿಂದ ಬದಲಾವಣೆ ಆಗುವುದಿಲ್ಲ. ಸುಸ್ಥಿರ ಮಾದರಿಗಳನ್ನು ಅವರಿಗೆ ನೀಡಬೇಕು. ಹೋಬಳಿಗೊಂದು ಮಾದರಿ ತೋಟಗಳನ್ನು ಮಾಡಬೇಕು. ಮುಖ್ಯವಾಗಿ ಮಠಗಳು ಇಂತಹ ಕೆಲಸಗಳನ್ನು ಮಾಡಬೇಕು. ಜೊತೆಗೆ ಪ್ರಯೋಗಶೀಲ ರೈತರೂ ಮಾಡಬೇಕು.
ನೆನಪಿರಲಿ,ಈ ರೀತಿ ಮಾಡಿದಾಗ ನಮ್ಮ ಅಕ್ಕ ಪಕ್ಕದ ರೈತರು ಮೊದಲು ಸುಧಾರಣೆ ಆಗುವುದಿಲ್ಲ. ದೂರದವರು ಮೊದಲು ಸುಧಾರಣೆ ಆಗ್ತಾರೆ. ಯಾವಾಗಲೂ ಅಕ್ಕಪಕ್ಕದವರು ಸುಧಾರಣೆ ಆಗೋದಿಲ್ಲ. ಯಾಕೆಂದರೆ ಅವರ ಸಂಬಂಧಗಳು ಅಷ್ಟು ಚೆನ್ನಾಗಿ ಇರೋದಿಲ್ಲ. ಅವನು ಮಾಡಿದ್ದನ್ನು ನಾನು ಯಾಕೆ ಮಾಡಬೇಕು ಎಂಬ ಇಗೋ, ಅಹಂಕಾರ ಹೆಚ್ಚು ಇರುತ್ತದೆ. ದೇಶದ ಎಲ್ಲಾ ಕಡೆ ಹೀಗೆ ಇದೆ. ಮನುಷ್ಯನ ಇಂತಹ ಮಾನಸಿಕ ಸ್ಥಿತಿಗೆ ಚಿಕಿತ್ಸೆ ಇಲ್ಲ. ಕ್ರಮೇಣ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು" ಎಂದು ಶ್ರೀಗಳು ಹೇಳುವಾಗ ದೀಪದ ಬುಡದಲ್ಲಿ ಕತ್ತಲು ಎಂಬ ನಾಣ್ಣುಡಿ ನೆನಪಾಯಿತು.
ಕೃಷಿ ತಿರುಗಾಟ ತುಂಬಾ ಇಷ್ಟ : ದೇಶದ ತುಂಬಾ ತಿರುಗಾಡುತ್ತಿರುತ್ತೇವೆ. ಒಳ್ಳೆಯ ರೈತರು ಎಲ್ಲೇ ಇದ್ದರು ಅವರನ್ನು ಹುಡುಕಿಕೊಂಡು ಹೋಗಿ ನೋಡಿ ಮಾತನಾಡಿಸಿ ಬರುತ್ತೇವೆ. ಇಂದು ಕೊಳ್ಳೇಗಾಲದ ದೊಡ್ಡಿಂದುವಾಡಿಯ ನೈಸಗರ್ಿಕ ಕೃಷಿಕ ಕೈಲಾಸಮೂತರ್ಿ ಅವರ ತೋಟ, ಬೆಳಗೊಳದ ಬೆಲವಲ ಫಾರ್ಮಂನ ರಾಮಕೃಷ್ಣಪ್ಪ ಅವರ ತೋಟಕ್ಕೆ ಹೋಗಿ ಬಂದೆವು. ಕೈಲಾಸಮೂತರ್ಿ ಅವರದು ಶಾಶ್ವತ ಕೃಷಿ. ಇದರಿಂದ ಸಣ್ಣ ರೈತ ಪ್ರೇರಣೆ ಪಡೆಯಲಾರ. ಆದರೆ ಬುದ್ದಿವಂತ ರೈತ ಅದರಿಂದ ಪ್ರಭಾವಿತನಾಗುತ್ತಾನೆ.ದೂರ ದೃಷ್ಟಿಯಿಂದ ವಿಚಾರ ಮಾಡುವಂತಹ ಜನ ಕೈಲಾಸಮೂತರ್ಿ ಅವರ ತೋಟದಿಂದ ಪ್ರಬಾವಿತರಾಗಿ ಪ್ರೇರಣೆಹೊಂದುತ್ತಾರೆ. ಕೈಲಾಸಮೂತರ್ಿ ಅವರ ತೋಟ ವೈಜ್ಞಾನಿಕವಾಗಿದೆ. ಬೆಳಗೊಳದ  ರಾಮಕೃಷ್ಣಪ್ಪನವರ ಬೆಳವಲ ಫಾರ್ಮ ಸಣ್ಣರೈತರಿಗೆ ಮಾದರಿಯಾಗಿದೆ.
ನಾವೂ ಕೇಂದ್ರ ಸಕರ್ಾರದ ಮೇಲೆ ಒತ್ತಡ ತಂದು ಪ್ರಾಕೃತಿಕ ಕೃಷಿಯನ್ನು  ಉಳಿಸಲು  ನೂರು ರೈತ ತರಬೇತಿ ಕೇಂದ್ರ ತೆರೆದಿದ್ದೇವೆ. "ದೀನ್ ದಯಾಳ್ ಉಪಾಧ್ಯಾಯ ಉನ್ನತ್ ಕೃಷಿ ಪ್ರಶಿಕ್ಷಣ ಕೇಂದ್ರ" ಎಂಬ ಹೆಸರಿನಲ್ಲಿ ಈ ಕೇಂದ್ರಗಳು ರೈತರಿಗೆ ತರಬೇತಿ ನೀಡುತ್ತಿವೆ ಎಂದರು. 
ಮಠಗಳು ರೈತರಿಗೆ ಮಾದರಿಯಾಗಬೇಕು. ಜಾತ್ರೆ ಮಾಡುವಾಗ ಕೃಷಿಕರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಬೇಕು.ತಮ್ಮ ಭಾಗದ ಕೃಷಿಕರ ಯಶೋಗಾಥೆ ಬರೆಸಿ ಹಂಚಬೇಕು. ಪ್ರತಿ ಮಠದಲ್ಲಿ ಬೀಜ ಬ್ಯಾಂಕ್ ಇರಬೇಕು ಎನ್ನುವುದು ಶ್ರೀಗಳ ಆಶಯ ಮತ್ತು ಕನಸಾಗಿದೆ.
ರಾಸಾಯನಿಕ ಬಳಕೆಯಿಂದ ಕ್ಯಾನ್ಸರ್ :ಸಮಾಜದಲ್ಲಿ ಬದಲಾವಣೆಯ ತಂಗಾಳಿ ನಿಧಾನಕ್ಕೆ ಬೀಸತೊಡಗಿದೆ. ನಮ್ಮ ಮಠದ ಸುತ್ತಮತ್ತಲಿನ ಗ್ರಾಮಗಳಲ್ಲಿ ಈಚೆಗೆ ತುಂಬಾ ಗುಣಾತ್ಮಕ ಬದಲಾವಣೆಗಳು ಆಗತೊಡಗಿವೆ. ಆರಂಭದಲ್ಲಿ ಇಡೀ ಊರಿಗೆ ಊರೇ ಬದಲಾವಣೆ ಆಗಿಬಿಡುತ್ತದೆ ಅಂತ ಅಲ್ಲ. ಒಂದು ಗ್ರಾಮದಲ್ಲಿ ನಾಲ್ಕರಿಂದ ಆರು ಮಂದಿ ರೈತರು ಬದಲಾಗುತ್ತಾರೆ.ಅಷ್ಟೇ ಸಾಕು.
ಮಹಾರಾಷ್ಟ್ರದ ಶಿರೋಳ ತಾಲೂಕಿನಲ್ಲಿ 25 ಸಾವಿರ ಹೆಕ್ಟರ್ ಭೂಮಿ ಕ್ಷಾರಯುಕ್ತವಾಗಿದೆ. ನೀರು ಮತ್ತು ರಸಗೊಬ್ಬರದ ಅತಿ ಬಳಕೆಯಿಂದ ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಂತಾಗಿದೆ.   ಏನೂ ಬೆಳೆಯಲು ಸಾಧ್ಯವಿಲ್ಲ ಎಂಬ ಸ್ಥಿತಿ. ಒಂದೇ ತಾಲೂಕಿನಲ್ಲಿ ಸುಮಾರು ಹದಿನೈದು ಸಾವಿರ ಕ್ಯಾನ್ಸರ್ ರೋಗಿಗಳು ಇದ್ದಾರೆ. ಅದು ಕನರ್ಾಟಕದ ಗಡಿ ತಾಲೂಕು.ಅಲ್ಲಿ ಏಳು ನದಿಗಳು ಹರಿಯುತ್ತವೆ. ನೀರಿಗೆ ತೊಂದರೆ ಇಲ್ಲ. ಆದರೆ ರೈತರು ಭೂಮಿಯನ್ನು ಕೆಡಿಸಿದ್ದಾರೆ ಜೊತೆಗೆ ತಮ್ಮ ಆರೋಗ್ಯವನ್ನೂ ಕೂಡ.
ಪ್ರತಿ ವರ್ಷ ಕನಿಷ್ಠ ನೂರು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ನಾವು ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಈ ವರ್ಷವೂ 57 ಹಳ್ಳಿಗಳಿಗೆ ಹೋಗಿದ್ದೆವು. ಪ್ರತಿಯೊಂದು ಹಳ್ಳಿಯಲ್ಲೂ ಬದಲಾವಣೆಗಳು ಆಗುತ್ತಿವೆ. ಈ ಬಾರಿ ಶಿರೋಳ ತಾಲೂಕಿನಲ್ಲಿ ನಾವು ಪಾದಯಾತ್ರೆಮಾಡಿ ಅರಿವು ಮೂಡಿಸಿದಾಗ ಜನರಲ್ಲಿ ಜಾಗೃತಿ ಮೂಡಿದೆ.  
ಅಲ್ಲಿನ ಸಕ್ಕರೆ ಕಾಖರ್ಾನೆ ಮಾಲೀಕ ಜೊತೆ ಮಾತನಾಡಿ ಕೃಷಿತಜ್ಞರನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಸಾವಯವ ಕೃಷಿಯ ಮಹತ್ವದ ಬಗ್ಗೆ ತಿಳಿಸಿದೆವು. 57 ಹಳ್ಳಿಗಳಲ್ಲಿ 570 ಎಕರೆ ಭೂಮಿಯಲ್ಲಿ  ರೈತರು ಸಾವಯವ ಕೃಷಿ ಮಾಡಲು ಮುಂದಾದರು.ಆರಂಭದಲ್ಲಿ ಪ್ರಯೋಗಿಕವಾಗಿ 5 ಎಕರೆ ಪ್ರದೇಶದಲ್ಲಿ ಬೆಳೆದು ನೋಡಲಾಯಿತು. ಸಾವಯವದಲ್ಲಿ ಪ್ರತಿ ಎಕರೆಗೆ 60 ಟನ್ ಕಬ್ಬು ಇಳುವರಿ ಬರುವ ಬಗ್ಗೆ ಅವರಿಗೆ ತಿಳಿಸಲಾಯಿತು. ಈಗ ಅವರಿಗೆ ಗೊತ್ತಾಗಿದೆ.ರಾಸಾಯನಿಕ ಬಳಸದೆಯೂ ಕಬ್ಬು ಬೆಳೆಯಬಹುದು ಎಂದು. ಮುಂದಿನ ವರ್ಷ ಇಡೀ ತಾಲೂಕಿನಲ್ಲಿ ರೈತರೆ ಸಾವಯವ ಕೃಷಿಮಾಡಲು ಮುಂದೆಬರುತ್ತಾರೆ. ಅವರಿಗೆ ಯಾರು ತಿಳಿಸಿ ಹೇಳಬೇಕಿಲ್ಲ.
ದೇಸಿ ತಳಿ ಗೋಸಂರಕ್ಷಣೆ ಬೇಕು: "ನಮ್ಮಲ್ಲಿ ಇತ್ತೀಚಿಗೆ ದೇಸಿ ಹಸುಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಗ್ರಾಮವೊಂದರಲ್ಲಿ ಐದನೂರು ಮನೆಗಳಿದ್ದರೆ ಅಲ್ಲಿ ಕೇವಲ ಇಪ್ಪತ್ತರಿಂದ ಮೂವತ್ತು ಮನೆಗಳಲ್ಲಿ ಮಾತ್ರ ದೇಸಿ ಹಸುಗಳು ಇರುತ್ತವೆ.ಉಳಿದಂತೆ ಜಸರ್ಿ, ಎಚ್ಎಫ್ ನಂತಹ ವಿದೇಶಿ ಹಸುಗಳನ್ನು ಹಾಲಿಗಾಗಿ ಸಾಕುತ್ತಾರೆ. ಆದರೆ ಈಗ ನಾವು ಪಾದಯಾತ್ರೆಮಾಡಿ ಜಾಗೃತಿ ಮೂಡಿಸಿದ ನಂತರ ಮುನ್ನೂರು ಮನೆಗಳಲ್ಲಿ ದೇಸಿ ಹಸುಗಳು ಇವೆ. ದೇಸಿ ಹಸುಗಳ ಜೊತೆಗೆ ಸಾವಯವ ಕೃಷಿಯನ್ನು ಜೋಡಿಸಿದ್ದರ ಪರಿಣಾಮ ಇದು. ನಾಲ್ಕೈದು ವರ್ಷದ ಅಭಿಯಾನದಲ್ಲಿ ಈ ರೀತಿಯ ಗುಣಾತ್ಮಕ ಬದಲಾವಣೆಗಳು ಆಗಿವೆ. ಹಸು ಸಾಕಾಣಿಕೆ ಮುಖ್ಯ ಉದ್ದೇಶ ಹಾಲು ಪಡೆಯುವುದೆ ಆಗಿದ್ದರೂ ಅದರ ಸಂಗಣಿ ಮತ್ತು ಗಂಜಲ ಬಳಸಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ದೇವೆ. ಆ ಮೂಲಕ ವಿಷಮುಕ್ತವಾದ ಆಹಾರಪದಾರ್ಥಗಳನ್ನು ಬೆಳೆದು ರೋಗಮುಕ್ತ ಜೀವನ ಸಾಗಿಸಬೇಕು ಎನ್ನುವುದು ನಮ್ಮ ಆಶಯ.
ಸಾವಯವ ಕೃಷಿ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ನಿಜ. ರೈತರು ತಮ್ಮ ಮನಸ್ಸಿಗೆ ಬಂದಂತೆ ಕೃಷಿ ಮಾಡುತ್ತಾರೆ. ಜನರಿಗೆ ತಕ್ಷಣ ರಿಸಲ್ಟ್ ಬೇಕು. ಸುಖ ಬೇಕು ಕಷ್ಟ ಬೇಡ. ಸಾವಯವ,ನೈಸಗರ್ಿಕ ಕೃಷಿ ಮಾಡಿ ಅಂತ ಹೇಳಿದರೆ, ಅದಕ್ಕೆ ಬೇಕಾದ ಪದಾರ್ಥಗಳು ಎಲ್ಲಿ ಸಿಗುತ್ತವೆ ಎಂದು ಕೇಳುತ್ತಾರೆ. ಸಗಣಿ ಗಂಜಲ ಬಳಸಿ ಗೊಬ್ಬರ ಮಾಡಿಕೊಳ್ಳಬೇಕು ಎಂಬ ತಿಳಿವಳಿಕೆ ಇಲ್ಲ.ಅವರಿಗೆ ಎಲ್ಲವೂ ರೆಡಿಮೇಡ್ ಬೇಕು. ರೈತ ಕೂಡ ಇಂದು ರಾಸಾಯನಿಕ ಗೊಬ್ಬರ, ಔಷಧ ಕಂಪನಿಗಳ ಗ್ರಾಹಕನಾಗಿ ಬದಲಾಗಿದ್ದಾನೆ.ಇದರಿಂದ ಸಾವಯವ ಕೃಷಿಗೆ ಹಿನ್ನೆಡೆ ಆಗಿದೆ" ಎಂದು ಅವರು ಹೇಳುವಾಗ ಭೂಮಿ ಮತ್ತು ರೈತರ ಬಗೆಗಿನ ಕಾಳಜಿ ಎದ್ದು ಕಾಣುತ್ತಿತ್ತು.
ಎಲ್ಪಿಜಿ ಫ್ರೀ ವಿಲೇಜ್ : "ಮಹಾರಾಷ್ಟ್ರದ ಚಳಕೆವಾಡಿ ಎಂಬ ಗ್ರಾಮ ದೇಶದ ಮೊದಲ ಎಲ್ಪಿಜಿ ಫ್ರೀ ವಿಲೇಜ್ ಎಂಬ ಖ್ಯಾತಿಗಳಿಸಿದೆ.ಅಲ್ಲಿ ಯಾರೂ ಎಲ್ಪಿಜಿ ಬಳಸುವುದಿಲ್ಲ.ಜೊತೆಗೆ ಶೇಕಡ ನೂರಕ್ಕೆ ನೂರರಷ್ಟು ಮನೆಗಳು ಶೌಚಾಲಯವನ್ನು ಹೊಂದಿದ ಗ್ರಾಮ ಅದು.
2005-06 ನೇ ಇಸವಿಯಲ್ಲಿ  ಗ್ರಾಮ ನೈರ್ಮಲ್ಯ ಕಾರ್ಯಕ್ರಮ ಆರಂಭಿಸಿದೆವು. ವಾರಕ್ಕೊಂದು ದಿನದಲ್ಲಿ ಮೂರು ಗಂಟೆ ಊರಿಗೆ ಅಂತ. ದೇವಾಲಯದಲ್ಲಿ ಗಂಟೆ ಬಾರಿಸಿದ ತಕ್ಷಣ ಮನೆಗೊಬ್ಬರು ಬಂದು ಸೇರಬೇಕು. ಅದು ಸಣ್ಣ ಹಳ್ಳಿ.ಸುಮಾರು 80 ಮನೆಗಳಿವೆ. ತಪ್ಪಿಸಿ ಹೊಲಕ್ಕೆ ಹೋಗುತ್ತಿದ್ದವರನ್ನು ಮಂಗಳವಾದ್ಯ ಡೋಲು ಸಮೇತ ಅಲ್ಲಿಂದ ಕರೆದುಕೊಂಡು ಬರಲಾಗುತ್ತಿತ್ತು. ಇದು ಅವರಿಗೆ ಮಾನವೂ ಅಲ್ಲ ಅಪಮಾನವೂ ಅಲ್ಲ. ಮತ್ತೊಂದು ರೀತಿಯಲ್ಲಿ ಮಾನವೂ ಹೌದು ಅಪಮಾನವೂ ಹೌದು. ಸುಮಾರು ದಿನಗಳವರೆಗೆ ಅದು ನಡಿತು. ಊರಲ್ಲಿ ಒಗ್ಗಟ್ಟು ಬಂತು. ಊರು ಸ್ವಚ್ಛವಾಯಿತು. ಅದರ ಪರಿಣಾಮ ಗೊತ್ತಾಯಿತು.
ನಂತರ ಮನೆಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಹೇಳಿದೆವು.ಎಲ್ಲರೂ ಒಪ್ಪಿಕೊಂಡರು. ಬ್ಯಾಂಕಿನವರಿಗೆ ಹೇಳಿ ಪ್ರತಿಯೊಬ್ಬರಿಗೂ ಹದಿಮೂರು ಸಾವಿರ ಸಾಲ ಕೊಡಿಸಿ ಪ್ರತಿ ಮನೆಯಲ್ಲೂ ಒಂದು ಗೋಬರ್ ಗ್ಯಾಸ್ ಮತ್ತು ಒಂದು ಶೌಚಾಲಯ ನಿಮರ್ಾಣ ಮಾಡಿಸಿದೆವು. ಅದು ದೇಶದಲ್ಲೆ ಮೊದಲ ಎಲ್ಪಿಜಿ ಪ್ರೀ ವಿಲೇಜ್ ಆಯಿತು. ಚಳಕೆವಾಡಿ ಗ್ರಾಮ ನಮ್ಮ ಕನೇರಿ ಮಠದಿಂದ 20 ಕಿ,ಮೀ, ದೂರದಲ್ಲಿದೆ. ಊರಿನ ಎಲ್ಲಾ ಮನೆಗಳಿಗೆ ಒಂದೆ ಬಣ್ಣ. ಹೆಂಗಸರ ಹೆಸರಿಗೆ ಮನೆಯ ದಾಖಲೆಗಳು. ಹೆಂಡ, ತಂಬಾಕು,ಜೂಜು ಎಲ್ಲಾ ದುಶ್ಚಟಗಳು ಸಂಪೂರ್ಣ ನಿಷೇಧವಾಗಿದೆ.ಇಂತಹ ಕೆಲಸಗಳನ್ನು ಮಠಗಳು ಮಾಡಬೇಕು. ಆಗಾದಾಗ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯ" ಎನ್ನುವುದು ಶ್ರೀಗಳ ಅನುಭವದ ನುಡಿ.
ಸಾವಯವ ಕೃಷಿಯಲ್ಲಿ ಭವಿಷ್ಯವಿದೆ: "ಕನರ್ಾಟಕದಲ್ಲೂ ಸಾವಯವ ಕೃಷಿ ಪ್ರವರ್ಧಮಾನಕ್ಕೆ ಬರುತ್ತಿದೆ. ದೇಶದಲ್ಲಿ ಮಧ್ಯ ಪ್ರದೇಶ ಸಾವಯವ ಕೃಷಿಯಲ್ಲಿ ಮಂಚೂಣಿಯಲ್ಲಿದೆ. ಬೈ ಡಿಪಾಲ್ಟ್. ಅಲ್ಲಿ ಆದಿವಾಸಿ ಭಾಗ ಹೆಚ್ಚಾಗಿ ಇರುವುದರಿಂದ , ಗುಡ್ಡಗಾಡಿಗೆ ರಸಗೊಬ್ಬರ ತೆಗೆದುಕೊಂಡು ಹೋಗೋದು ಕಷ್ಟ ಆಗಿರುವುದರಿಂದ ಬೈ ಡಿಪಾಲ್ಟ್ ಅಲ್ಲಿ ಸಾವಯವಕೃಷಿ ಹೆಚ್ಚಾಗಿದೆ. ದೇಸಿ ಹಸುಗಳ ಸಂಖ್ಯೆ ಕೂಡ ಅಲ್ಲಿ ಹೆಚ್ಚಾಗಿದೆ. ಉತ್ತರ ಕಾಂಡ, ಸಿಕ್ಕಿಂ, ಮಣಿಪುರ ಭೈ ಡಿಪಾಲ್ಟ್ ಅಲ್ಲೂ ಸಾವಯವ ಕೃಷಿ ಹೆಚ್ಚಿದೆ. ಸಿಕ್ಕಿಂನಲ್ಲಿ ನಗರ ಪ್ರದೇಶದ ಹತ್ತಿರ ಇದ್ದವರು ಮಾತ್ರ ರಾಸಾಯನಿಕ ಕೃಷಿಕರಾಗಿದ್ದರು. ದೂರದ ರೈತರಿಗೆ ಒಂದು ಚೀಲ ಗೊಬ್ಬರ ತೆಗೆದುಕೊಂಡು ಹೋಗಲು ಹೆಚ್ಚು ಖಚರ್ು ಬರುತ್ತಿತ್ತು. ಈಗ ಸಿಕ್ಕಿಂ ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿ ಘೋಷಣೆ ಮಾಡಿಕೊಂಡಿದೆ.
ಯುರೋಪ್ನ ಉದ್ಯಮಿಯೊಬ್ಬರು ಮೊನ್ನೆ ಮಠಕ್ಕೆ ಬಂದಿದ್ದರು. ಅವರದ್ದು ಅಲ್ಲಿ 104 ದೊಡ್ಡ ಮಾಲ್ಗಳಿವೆ. ಮಾಲ್ಗಳಿಗೆ ಸಾವಯವ ಉತ್ಪನ್ನ ಪೂರೈಕೆ ಮಾಡಿದರೆ ನೀವು ಹೇಳಿದ ದರ ಕೊಡಲು ನಾವು ಸಿದ್ಧ ಎಂದರು. ಆದರೆ ಅವರಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ನಾವು ಪೂರೈಸಬೇಕು.
ಆರಂಭದಲ್ಲಿ ನಮ್ಮಲ್ಲೆ ಯುವಕರ ತಂಡ ಮಾಡಿ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಡಿಕೊಟ್ಟಿದ್ದೇವೆ. ಸುಮಾರು ನಾಲ್ಕು ಸಾವಿರ ರೈತರಿಂದ ಉತ್ಪನ್ನ ಖರೀದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ದೇಶದ ಹತ್ತು ದೊಡ್ಡ ನಗರಗಳಲ್ಲಿ ಕಂಪನಿ ವತಿಯಿಂದ ಸಾವಯವ ಉತ್ಪನ್ನ ಮಳಿಗೆ ತೆರೆಯಲಾಗಿದೆ. ವೆಬ್ ಸೈಟ್ ಕೂಡ ಸಿದ್ಧವಾಗುತ್ತಿದೆ. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಬೆಲೆಯನ್ನ ರೈತ ಹೇಳಬೇಕು. ಜಾಗದ ಬಾಡಿಗೆ ಪ್ಯಾಕಿಂಗ್ ಮಾಡುವುದಕ್ಕೆ ಕಮಿಷನ್ ಕೊಡಬೇಕು.ಈ ರೀತಿ ಯೋಜನೆ ರೂಪಿಸುತ್ತಿದ್ದೇವೆ" ಎಂದರು.
ಶ್ರೀಗಳ ನಡಿಗೆ ಕೃಷಿಯ ಕಡೆಗೆ: ಕನರ್ಾಟಕದ ಬೀದರ್,ಗುಲಬರ್ಗ,ಹಾವೇರಿ,ಧಾರವಾಡ,ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ " ಶ್ರೀಗಳ ನಡಿಗೆ ಕೃಷಿಯ ಕಡೆಗೆ" ಎಂನ್ನುವ ಯೋಜನೆ ಮಾಡಿದ್ದೆವು. ಜಿಲ್ಲೆಯ ಮಠಾಧಿಪತಿಗಳು, ಪ್ರಗತಿಪರ ರೈತರು ಜೊತೆಗೆ ಕೃಷಿ ವಿಜ್ಞಾನಿಗಳು ಎಲ್ಲಾ ಸೇರಿ ಹಳ್ಳಿಗೆ ಹೋಗೋದು.
ರೈತರನ್ನು ಒಂದೆಡೆ ಸೇರಿಸಿ ಅವರೊಂದಿಗೆ ಸಂವಾದ ನಡೆಸೋದು.ರೈತರಿಗೆ ಯಾರಿಂದ ಯಾವ ಸಹಾಯ ಬೇಕು ಎಂದು ತಿಳಿದುಕೊಂಡು ಜಾರಿಮಾಡುವುದು ನಮ್ಮ ಉದ್ದೇಶವಾಗಿತ್ತು. ಬಾಗಲಕೋಟ  ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ದಂಡಿನ್ ಅವರಿ ಕುಲಪತಿಗಳಾಗಿದ್ದಾಗ ಕೆಲ ತಿಂಗಳು ಈ ಕಾರ್ಯಕ್ರಮ ಚೆನ್ನಾಗಿ ನಡೆಯಿತು.ನಂತರ ಸ್ವಲ್ಪ ಹಿನ್ನೆಡ ಆಯಿತು.ನಾನು ಮಹಾರಾಷ್ಟ್ರದಲ್ಲಿದ್ದು ಇಂತಹ ಬದಲಾವಣೆ ಬಯಸಿದ್ದು ನನ್ನ ತಪ್ಪೇ ಇರಬಹುದು ಅಂತ ಸುಮ್ಮನಾದೆ ಎಂದು ಶ್ರೀಗಳು ಹೇಳುವಾಗ ನುಡಿದಂತೆ ನಡೆಯುವ ನಡೆದಂತೆ ನುಡಿಯುವ ಬಸವಣ್ಣನ ತತ್ವದ ಆರಾಧಕರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಎನ್ನುವುದು ನಮಗೆ ಅರಿವಾಗಿತ್ತು.