vaddagere.bloogspot.com

ಸೋಮವಾರ, ಜನವರಿ 30, 2017

ತಾಳ್ಮೆ, ಶ್ರಮದಿಂದ ಕೃಷಿಯಲ್ಲಿ ಯಶಸ್ಸು ಕಂಡ  ರೋಹಿತ್
ಬೇಸಾಯವನ್ನೆ ಧ್ಯಾನಿಸಿ ಕೃಷಿಯಲ್ಲೆ ಖುಶಿ ಕಂಡ ಕಳಲವಾಡಿ ಕೃಷಿಕ
ಎಂಬಿಎ ಪದವಿಧರ ಆರ್.ರೋಹಿತ್ ಮತ್ತು 80 ರ ದಶಕದ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ರೇಖಾ ಹಸಿರು ಪ್ರೀತಿಗೆ ಒಲಿದ ಕೃಷಿಕ ದಂಪತಿ. "ತುಳಸಿ ದಳ" ಮತ್ತು "ಭಕ್ತ ಸಿರಿಯಾಳ" ಸಿನಿಮಾದಲ್ಲಿನ ಅತ್ಯತ್ತಮ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದ ರೇಖಾ ಅವರ ಕೃಷಿ ಆಸಕ್ತಿ ಅಚ್ಚರಿ ಮೂಡಿಸುವಂತಿದೆ. ಇಬ್ಬರು ಮಕ್ಕಳನ್ನು ರಾಜ್ಯಮಟ್ಟದ ಟೆನ್ನಿಸ್ ಟೇಬಲ್ ಆಟಗಾತರ್ಿಯರಾಗಿ ರೂಪಿಸುವಲ್ಲಿಯೂ ರೋಹಿತ್ ಶ್ರಮವಿದೆ . ರಿಜಿ ರೋಹಿತ್ 8 ವರ್ಷಗಳ ಕಾಲ ರಾಜ್ಯದ ಪರ ಟೆನಿಸ್ ಆಡಿದರೆ ಕಿರಿಯ ಮಗಳು ಋತು ರೋಹಿತ್ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಕಳಲವಾಡಿಯಲ್ಲಿ ಇವರು ಕಟ್ಟಿದ ತೋಟ ದಂಪತಿಯ ಹಸಿರು ಪ್ರೀತಿಗೆ ಸಾಕ್ಷಿ.
------------------------------------------
ಮೈಸೂರು : ಅದೊಂದು ಕೃಷಿಯಲ್ಲೆ ಖುಷಿ ಕಂಡ ಸುಖಿ ಕುಟುಂಬ.ಪತ್ನಿ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರು.ಪತಿ ಎಂಬಿಎ ಪದವಿಧರ.ಆದರೂ ಇಬ್ಬರೂ ಹಸಿರು ಪ್ರೀತಿಗೆ ಒಲಿದು ಕೃಷಿಕರಾದವರು. ಇಬ್ಬರು ಮಕ್ಕಳನ್ನು ರಾಜ್ಯಮಟ್ಟದ ಟೆನ್ನಿಸ್ ಟೇಬಲ್ ಆಟಗಾತರ್ಿಯರಾಗಿ ರೂಪಿಸುವಲ್ಲಿಯೂ ರೋಹಿತ್ ಶ್ರಮವಿದೆ . ರಿಜಿ ರೋಹಿತ್ 8 ವರ್ಷಗಳ ಕಾಲ ರಾಜ್ಯದ ಪರ ಟೆನಿಸ್ ಆಡಿದರೆ ಕಿರಿಯ ಮಗಳು ಋತು ರೋಹಿತ್ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಕೃಷಿ ಎಂದರೆ ದಡ್ಡರು ಮಾಡುವ ಕೆಲಸ ಎನ್ನುವವರು ಇವರನ್ನು ನೋಡಿ ಕಲಿಯುವುದು ತುಂಬಾ ಇದೆ.ಅದೊಂದು ಜೀವನ ಪ್ರೀತಿ,ಕಲೆ. ಕೃಷಿಯನ್ನೇ ಸಂಸೃತಿ ಎಂದು ನಂಬಿದವರು ರೋಹಿತ್ ಮತ್ತು ರೇಖಾ ದಂಪತಿ. ಮೈಸೂರಿನ ಹೊರವಲಯದಲ್ಲಿರುವ ಕಳಲವಾಡಿಯಲ್ಲಿ ತೋಟ ಕಟ್ಟಿ ಬದುಕು ಕಟ್ಟಿಕೊಂಡ ದಂಪತಿಯ ಜೀವನ ಪಯಣ ಇದು.
 "1994 ನವೆಂಬರ್ ತಿಂಗಳಿನಲ್ಲಿ ತೋಟ ಖರೀದಿಮಾಡಿ ಫೆಬ್ರವರಿಯಲ್ಲಿ ತೆಂಗಿನಕಾಯಿ ಕಿತ್ತಾಗ 1600 ಕಾಯಿ ಸಿಕ್ಕವು.ಈಗ ಅದೇ ತೋಟದಲ್ಲಿ ವಾಷರ್ಿಕ ಒಂದು ಲಕ್ಷ ತೆಂಗಿನ ಕಾಯಿ ಸಿಗುತ್ತಿದೆ" ನಿರಂತರವಾಗಿ ಹತ್ತು ವರ್ಷ ಕೃಷಿಯನ್ನು ವ್ರತದಂತೆ ಬಿಡದೆ ಮಾಡಿದ ಫಲ ಈಗ ಸಿಗುತ್ತಿದೆ" ಎಂದರು ಕೃಷಿಕ ಆರ್.ರೋಹಿತ್.
ಮೈಸೂರಿನ ಹೊರವಲಯದ ಎಚ್.ಡಿ.ಕೋಟೆ ರಸ್ತೆಯ ಕಳಲವಾಡಿಯಲ್ಲಿರುವ 24 ಎಕರೆ ಪ್ರದೇಶದಲ್ಲಿ ಅಡಿಕೆ,ತೆಂಗು,ಕಾಳು ಮೆಣಸು,ರೇಷ್ಮೆ, ಎಳನೀರುತೆಂಗು, ಬಾಳೆ ಹೀಗೆ ವಿವಿಧ ಬೆಳೆ ಬೆಳೆಯುತ್ತಾ ಸಮಗ್ರ ಕೃಷಿ ಮಾಡುತ್ತಿರುವ ರೋಹಿತ್ ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಕೃಷಿಯೆ ಅವರಿಗೆ ಧ್ಯಾನ,ಜೀವನ,ಖುಶಿ ಎಲ್ಲವೂ.
ಎಂಬಿಎ ಪದವಿಧರರಾಗಿರುವ ರೋಹಿತ್ ಇಷ್ಟಪಟ್ಟಿದ್ದರೆ ಯಾವುದಾದರೊಂದು ಕಾಪರ್ೊರೇಟ್ ಕಂಪನಿಯಲ್ಲಿ ಕೆಲಸಮಾಡುತ್ತಾ ಆಯಾಗಿರಬಹುದಿತ್ತು. ಆದರೆ ಕಷ್ಟಪಟ್ಟು ಮಾಡುವ ಕೃಷಿಯನ್ನು ಅವರು ಆಯ್ಕೆ ಮಾಡಿಕೊಂಡರು.
1991-92 ರಲ್ಲಿ ಮಾನಸ ಗಂಗೋತ್ರಿಯಲ್ಲಿ ಎಂಬಿಎ ಪದವಿ ಮುಗಿಸಿದ ರೋಹಿತ್ ಒಂದೂವರೆ ವರ್ಷ ಫಾರ್ಮಸಿಟಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ತಾನು ಓದಿದು ಕಾಮಸರ್್ ಮಾಡುತ್ತಿರುವುದು ಫಾರ್ಮಸಿಟಿಕಲ್ ಕಂಪನಿಯ ಕೆಲಸ. ಓದಿದ್ದಕ್ಕೂ ಕೆಲಸ ಮಾಡುತ್ತಿರುವುದಕ್ಕೂ ಸಂಬಂಧವಿಲ್ಲ ಅನಿಸಿ ಕೆಲಸ ಬೇಸರವಾಗಿ ವೃತ್ತಿಗೆ ಗುಡ್ ಬೈ ಹೇಳಿ ಕೃಷಿಕರಾದರು.
ಒಳ್ಳೆಯ ತೆಂಗಿನ ತೋಟ ಮಾಡಬೇಕು ಎನ್ನುವುದು ತಂದೆ ಎಸ್.ಸಿ.ರಾಮದೇವ್ ಮತು ತಾಯಿ ವಿಜು ಅವರ ಕನಸು. ತಂದೆಯ ತೆಂಗಿನ ತೋಟದ ಕನಸನ್ನು ನನಸು ಮಾಡಲು ನಿರ್ಧರಿಸಿದ ರೋಹಿತ್ 1994 ರಿಂದ ತಮ್ಮ ಕೃಷಿ ಪಯಣ ಆರಂಭಿಸಿದರು. ಇದಕ್ಕೆ ಪತ್ನಿ ರೇಖಾ ಅವರ ಬೆಂಬಲವೂ ಇತ್ತು. 80 ರ ದಶಕದಲ್ಲಿ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಹೆಸರು ಮಾಡಿದ್ದ ರೇಖಾ ಅವರು ಹಸಿರಿಗೆ ಒಲಿದದ್ದು ಮತ್ತೊಂದು ಅಚ್ಚರಿ.
"ತುಳಸಿ ದಳ" ಮತ್ತು "ಭಕ್ತ ಸಿರಿಯಾಳ" ಸಿನಿಮಾದಲ್ಲಿನ ಅತ್ಯತ್ತಮ ನಟನೆಗಾಗಿ ರೇಖಾ ಅವರು ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.ಆರಂಭದಲ್ಲಿ ಅಣ್ಣ ರಘುನಂದನ್ ಮತ್ತು ಮಾವನವರ ನೆರವನ್ನು ರೋಹಿತ್ ನೆನಪುಮಾಡಿಕೊಂಡರು. ಸಮೀಪ ಹದಿನೇಳು ಎಕರೆ ತೋಟ ಈಗ ಅದು 24 ಎಕರೆಗೆ ವಿಸ್ತಾರಗೊಂಡಿದೆ.
ಭೂಮಿ ಖರೀದಿಸಿದಾಗ 25 ರಿಂದ 40 ವರ್ಷದ 500 ತೆಂಗಿನ ಮರಗಳು ಮಾತ್ರ ಇದ್ದವು. ಭೂಮಿಯ ರಸಸಾರ 9.5 ನ್ನೂ ದಾಟಿತ್ತು. ಅತಿಯಾದ ನೀರಿನ ಬಳಕೆಯಿಂದ ಉಪ್ಪು ಮಣ್ಣು(ಜೌಳು ಮಣ್ಣು) ನಿಮರ್ಾಣವಾಗಿ,ಫಲವತ್ತತೆ ಕಳೆದುಕೊಂಡಿತ್ತು. ತೆಂಗಿನ ಮರಗಳನ್ನು ಪುನುರುಜ್ಜೀವನ ಮಾಡುವುದೆ ದೊಡ್ಡ ಸವಾಲಿನ ಕೆಲಸವಾಯಿತು. ಮಣ್ಣಿನ ಇಂಗಾಲವನ್ನು ನಿಯಂತ್ರಣಕ್ಕೆ ತಂದು ಈಗ ಒಂದು ಹಂತಕ್ಕೆ ಭೂಮಿಯನ್ನು ಹದಮಾಡಿಕೊಂಡಿದ್ದೇವೆ ಎನ್ನುತ್ತಾರೆ ರೋಹಿತ್.
ಈಗ ಇಲ್ಲಿ 1200 ತೆಂಗು, ನಾಲ್ಕು ಸಾವಿರ ಅಡಿಕೆ,175 ಸಪೋಟ,ಕಾಳು ಮೆಣಸು ಗಿಡಗಳಿವೆ. ಅಲ್ಲದೆ ಎರಡುವರೆ ಎಕರೆಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಐದು ಎಕರೆಯಲ್ಲಿ ಎಳನೀರುತೆಂಗಿನ ಗಿಡಗಳನ್ನು ಬೆಳೆಸಿದ್ದು ನಡುವೆ ಏಲಕ್ಕಿ ಬಾಳೆ ಕೃಷಿ ಮಾಡುತ್ತಾ, ಬೇಸಾಯವನ್ನು ಲಾಭದಾಯಕ ಉದ್ಯೋಗವಾಗಿಸಿದ್ದಾರೆ.
"ಹತ್ತು ವರ್ಷ ನಿರಂತರವಾಗಿ ಕೃಷಿಯಲ್ಲಿ ನಷ್ಟ ಅನುಭವಿಸಿದೆ. ಈಗ ಪರ್ವಾಗಿಲ್ಲ ಗುಡ್ ಲೈಫ್ ಲೀಡ್ ಮಾಡಿಕೊಂಡು ಹೋಗುವಷ್ಟರ ಮಟ್ಟಿಗೆ ನೆಮ್ಮದಿ ಇದೆ" ಎನ್ನುತ್ತಾರೆ.
ಜೌಗು ಮಣ್ಣಿಗೆ ಜೀವ :ನಾವು ಸೋಮವಾರಪೇಟೆ ಕಡೆಯಿಂದ ಮೈಸೂರಿಗೆ ಬಂದವರು."ಬೇಸಿಕಲಿ ನಮ್ಮದು ಫ್ಲಾಟೇಶನ್ ಬ್ಯಾಕ್ ಗ್ರೌಂಡ್ ಇದ್ದ ಕುಟುಂಬ. ನೀರು ಚೆನ್ನಾಗಿ ಸಿಗುವ ಕಡೆ ತೋಟ ಮಾಡಬೇಕೆಂಬುದು ನಮ್ಮ ತಿಳಿವಳಿಕೆ. ಮೈಸೂರು ಸಮೀಪ ತೋಟ ಇದ್ದರೆ ಒಳ್ಲೆಯದು ಅಂತ 90 ರ ದಶಕದಲ್ಲಿ ಈ ತೋಟ ಖರೀದಿ ಮಾಡಿದೆವು. ಆಗ ನಗರ ಇಷ್ಟೊಂದು ಬೆಳೆದಿರಲಿಲ್ಲ. ಭೂಮಿಯ ರೇಟು ಗಗನ ಮುಟ್ಟಿರಲಿಲ್ಲ. ವರುಣ ನಾಲೆ ಸಮೀಪದಲ್ಲೇ ಹರಿಯುತ್ತಿದ್ದರಿಂದ ತೋಟ ಖರೀದಿ ಮಾಡಿದೆವು. ನೀರೆ ನಮಗೆ ದೊಡ್ಡ ಸಮಸ್ಯೆ ಆಯಿತು.
ಎಂಡು ವರ್ಷ ಏನನ್ನು ಮಾಡದೆ ಪಾಳು ಬಿದಿದ್ದ ತೆಂಗಿನ ತೋಟವನ್ನು ಖರೀದಿಸಿ, ಮಣ್ಣಿಗೆ ಜೀವನೀಡಿದ್ದೇವೆ. ಕೃಷಿಯಿಂದ ಯಾರು ದಿಢೀರ್ ಶ್ರೀಮಂತರಾಗುವ ಕನಸು ಕಾಣಬಾರದು. ಇದು ಕ್ಯಾಲಿಕುಲೇಟರ್ ಕೈಯಲ್ಲಿ ಹಿಡಿದು ಅಂಕಿಸಂಖ್ಯೆ ಕೂಡಿಕಳೆದು ಮಾಡುವ ಕೆಲಸ ಅಲ್ಲ.ಇದೊಂದು ಜೀವನ ಕ್ರಮ. ಇದು ಪ್ರತಿನಿತ್ಯ ಸವಾಲುಗಳನ್ನು ಎದುರಿಸುವ ಉದ್ಯೋಗ. ಕಾಮಸರ್್ ಕಲಿತ ನಾನು ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡಬೇಕೆಂದು ಆಸೆಪಟ್ಟಿದ್ದೆ. ಅದಕ್ಕಾಗಿ ಹಲವಾರು ಸಂದರ್ಶನಗಳನ್ನು ಎದುರಿಸಿದ್ದೆ. ಈಗಿನಂತೆ ಆವಾಗ ಕೆಲಸದ ಅವಕಾಶಗಳು ಇರಲಿಲ್ಲ. ವ್ಯವಸಾಯದ ಮೇಲಿದ್ದ ಒಲವೋ ಹಣೆ ಬರಹವೋ ಗೊತ್ತಿಲ್ಲ ಕೊನೆಗೆ ಅಪ್ಪಟ್ಟ ರೈತನಾದೆ ಎನ್ನುತ್ತಾರೆ.
ಆರಂಭದಲ್ಲಿ ಕೃಷಿ ಮತ್ತು ನೌಕರಿ ಎರಡನ್ನೂ ಒಟ್ಟಿಗೆ ಮಾಡುತ್ತಿದ್ದೆ. ಆದರೆ ಕೃಷಿಗೆ ಹಣ ಹಾಕಿದ್ದು ವಾಪಸ್ ಬರ್ತಾ ಇರಲಿಲ್ಲ. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ರೈತನಾದೆ. ಎಷ್ಟರಮಟ್ಟಿಗೆ ಎಂದರೆ ನನ್ನ ಭಾಷೆಯೆ ಇದರಿಂದ ಬದಲಾಗಿದೆ. ತೋಟವೇ ನಮ್ಮ ಲೋಕವಾಗಿದೆ. ಬೆಳಗ್ಗೆ ಇಲ್ಲಿಗೆ ಬಂದರೆ ತಿರುಗಿ ಮನೆಗೆ ಹೋಗುವುದು ಸಂಜೆಯೆ. ನಮ್ಮಪ್ಪ ಹೇಳ್ತಾ ಇರ್ತಾರೆ ನೀನು ಹಳ್ಳಿಯವರ ಥರನೇ ಮಾತಾಡ್ತೀಯ ಅಂತ ಎಂದು ನಕ್ಕರು ರೋಹಿತ್. ಅವರ ನಡೆನುಡಿ ಹಳ್ಳಿಯ ಟಿಪಿಕಲ್ ರೈತರಂತೆ ಕಾಣಿಸಿತು.
ಕೈ ಹಿಡಿದ ರೇಷ್ಮೆ : ತೋಟಗಾರಿಕೆ ಬೆಳೆಗಳ ಜೊತೆಗೆ 2001 ರಿಂದ ರೇಷ್ಮೆ ಕೃಷಿ ಆರಂಭಿಸಿದ ರೋಹಿತ್ ಅದರಿಂದ ಪ್ರತಿ ತಿಂಗಳು ಆದಾಯ ಕಾಣತೊಡಗಿದರು. ವಾಷರ್ಿಕ ಒಂಭತ್ತರಿಂದ ಹತ್ತು ರೇಷ್ಮೆ ಬೆಳೆ ತೆಗೆಯುತ್ತಾರೆ. ಪ್ರತಿ ಸಲ 225 ಮೊಟ್ಟೆ ಸಾಕಾಣಿಕೆ ಮಾಡುತ್ತಾರೆ.
ಇದರಿಂದ 160 ಕೆಜಿ ಉತ್ತಮ ಗೂಡು, 25 ರಿಂದ 30 ಕೆಜಿವರೆಗೆ ದ್ವೀತಿಯ ದಜರ್ೆಗೂಡು ಮಾರಾಟ ಮಾಡುತ್ತಾರೆ. ಆ ಮೂಲಕ ಪ್ರತಿ ತಿಂಗಳು ಕನಿಷ್ಠ ರೇಷ್ಮೆಯಿಂದ ಅರವತ್ತೈದು ಸಾವಿರ ಆದಾಯ ಗಳಿಸುತ್ತಾರೆ.
ಎರಡೂವರೆ ಎಕರೆಯಲ್ಲಿ ರೇಷ್ಮೆ ಕಡ್ಡಿ ಹಾಕಿದ್ದು ಎರಡು ಬ್ಯಾಚ್ ಮಾಡಿಕೊಂಡಿದ್ದಾರೆ. ಕೇವಲ 35,000 ರೂ ಮೂಲ ಬಂಡವಾಳದಿಂದ ರೇಷ್ಮೆ ಕೃಷಿ ಆರಂಭಿಸಿದ ರೋಹಿತ್ ಇಂದು ಉತ್ತಮ ತಾಂತ್ರಿಕತೆಗಳನ್ನು ಬಳಸಿಕೊಂಡು ಯಶಸ್ವಿ ರೇಷ್ಮೆ ಬೆಳೆಗಾರ.
"ಆರಂಭದಲ್ಲಿ ಕೋಳಿಫಾರಂಗಳಲ್ಲಿ ಸಿಗುತ್ತಿದ್ದ ಕಲ್ಲು,ತೋಟದಲ್ಲಿ ಸಿಕ್ಕ ತೆಂಗಿನಗರಿ, ಸೊಳ್ಳೆ ಪರದೆ, ಗೊಬ್ಬರದ ಚೀಲ ಬಳಸಿಕೊಂಡು ಹುಳು ಸಾಕಾಣಿಕೆ ಮನೆ ನಿಮರ್ಾಣ ಮಾಡಿಕೊಂಡಿದ್ದೆ. ನಮಲ್ಲಿ ಇದ್ದ ಬಾಗೇ ಮರ,ತೆಂಗಿನ ಮರ ಬಳಸಿಕೊಂಡು ರ್ಯಾಕ್ ಮಾಡಿಕೊಂಡೆ. ಮೊದಲೇ ಫ್ಲೋರಿಂಗ್ ಮಾಡಿಕೊಂಡಿದ್ದೆ. ನಂತರ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ರೇಷ್ಮೆ ಹುಳು ಸಾಕಾಣಿಕೆ ಮನೆಯನ್ನು ಮೇಲ್ದಜರ್ೆಗೆ ಏರಿಸುತ್ತಾ ಬಂದೆ. ಗೋಡೆ, ಕಿಟಕಿ ಎಲ್ಲಾ ಆದ ನಂತರ ಎರಡು ವರ್ಷದ ಮೇಲೆ ರೇಷ್ಮೆ ಇಲಾಖೆಯಿಂದ ಸಿಗುತ್ತಿದ್ದ 75,000 ರೂ. ಸಬ್ಸಿಡಿ ತೆಗೆದುಕೊಂಡೆ ಎಂದು ಹಳೆಯ ನೆನಪಿಗೆ ಜಾರಿದರು ರೋಹಿತ್.
ರೈತರಿಗೆ ಸಲಹೆ : ರೇಷ್ಮೆ ಕೃಷಿಯಲ್ಲಿ ಹುಳು ಸಾಕಾಣಿಕೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೆ ಮುಖ್ಯವಾದ ಕೆಲಸ. ಇದಕ್ಕಾಗಿ ನಮ್ಮ ರೈತರು 250 ರೂಪಾಯಿ ಖಚರ್ು ಮಾಡಲು ಹಿಂದುಮುಂದು ನೋಡುತ್ತಾರೆ. ರೇಷ್ಮೆ ಮನೆಗೆ ಸೋಂಕು ನಿವಾರಣೆ ದ್ರಾವಣವನ್ನು ಒಂದು ಸಿಂಪರಣೆ ಜಾಸ್ತಿ ಮಾಡಿದರೆ ನಷ್ಟವಿಲ್ಲ. ರೋಗ ಬರಲ್ಲ. ಚಾಕಿ ಸೆಂಟರ್ ಅವರನ್ನು ದೂರುವುದರಿಂದ ಪ್ರಯೋಜನವಿಲ್ಲ. ಭಿತ್ತನೆ ಸರಿ ಇದ್ದರೆ ಬೆಳೆ ನಷ್ಟವಾಗುವುದಿಲ್ಲ ಎನ್ನುತ್ತಾರೆ.
"ಫಾರ್ಮಲಿನ್ ದ್ರಾವಣ ಸಿಂಪರಣೆಯನ್ನು ನಾವು ಮನೆಯ ಒಳಗೆ ಮಾಡುವುದಿಲ್ಲ. ಮನೆಯ ಒಳಗೆ 8 ಫ್ಯಮೀಗೇಟರ್ ಹಾಕಿದ್ದೇವೆ. ಆಚೆ ಕಡೆ 200 ಲೀಟರ್ ಫಾರ್ಮಲಿನ್ ದ್ರಾವಣ ಇಟ್ಟು ಇಂಜೆಕ್ಟ್ ಮಾಡಿದರೆ ಸಾಕು ಮನೆ ಸ್ವಚ್ಛವಾಗುತ್ತದೆ. ನಾಲ್ಕು ಸಲ ಈ ರೀತಿ ಮಾಡುತ್ತೇವೆ. ಮೊದಲನೇ ಸಲ ಅಸ್ತ್ರ ದ್ರಾವಣ. ಎರಡನೇ ಸಲ ವಾಟರ್ ವಾಶ್, ಮೂರನೇ ಬಾರಿಗೆ ಫಾರ್ಮಲಿನ್ ದ್ರಾವಣ ಕೊನೆಯ ಬಾರಿಗೆ ಸ್ಯಾನಿಟೆಕ್, ಅಸಿಫೋರ್ ದ್ರಾವಣ ಸಿಂಪರಣೆ ಮಾಡುತ್ತೇವೆ. ಇದರಿಂದ ರೇಷ್ಮೆ ಹುಳುಗಳಿಗೆ ಸೋಂಕು ತಗಲುವುದಿಲ್ಲ.ಗೂಡಿನ ಇಳುವರಿ ಚೆನ್ನಾಗಿರುತ್ತದೆ. 
ನಾವು ಬ್ಲೀಚಿಂಗ್ ಪುಡಿ ಬಳಸುವುದಿಲ್ಲ. ಅದು ಕಬ್ಬಿಣವನ್ನು ತಿಂದುಹಾಕುತ್ತದೆ.ಅದಕ್ಕಾಗಿ ರೇಷ್ಮೆ ಹುಳು ಸಾಕಾಣಿಕೆ ಮನೆಯ ಒಳಗೆ ಪ್ಲಾಸ್ಟಿಕ್ ಪಾಲ್ಸೀಲಿಂಗ್ ಮಾಡಿಸಲು ಮುಂದಾಗಿದ್ದೇನೆ. ಇದರಿಂದ ಕಬ್ಬಿಣಕ್ಕೆ ಏನೂ ಆಗಲ್ಲ. ಮನೆಯ ಮೇಲೆ ತೆಂಗಿನ ಗರಿಯೂ ಬೇಕಾಗಿಲ್ಲ. ಬೇಸಿಗೆ ಕಾಲದಲ್ಲಿ ಮನೆಯೂ ತಣ್ಣಗೆ ಇರುತ್ತದೆ" ಎನ್ನುತ್ತಾರೆ.
ದೇಸಿ ತಂತ್ರಜ್ಞಾನ ಬಳಕೆ : ರೇಷ್ಮೆ ಮನೆಯಲ್ಲಿ ಬೆಚ್ಚನೆಯ ವಾತಾವರಣ ಕಾಪಾಡಿಕೊಳ್ಳಲು ಸ್ವತಃ ತಾವೇ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಕಬ್ಬಿಣದ ಎರಡು ಡ್ರಮ್ಗಳನ್ನು ಒಂದರ ಮೇಲೊಂದು ಹಾಕಿ  ಡ್ರಮ್ನ ಒಳಗಡೆ ಯು ಶೇಪ್ ಕಟಿಂಗ್ ಮಾಡಿ ವೆಲ್ಡ್ ಮಾಡಿದ್ದಾರೆ. ಕೆಳಗಡೆ ಮೂರು ಇಂಚು ಬಿಟ್ಟು (ಇದು ಕೋಳಿ ಸಾಕಾಣಿಕೆದಾರರಿಗೆ ಚೆನ್ನಾಗಿ ಗೊತ್ತಿರುತ್ತದೆ) ಕೆಳಗೆ ಬೂದಿ ತೆಗೆಯಲು ಅನುಕೂಲ ಮಾಡಲಾಗಿದೆ. ಡ್ರಮ್ನಲ್ಲಿ ತೆಂಗಿನ ಕಾಯಿ ಮಟ್ಟೆಗಳನ್ನು ಹಾಕಿ ಬೆಂಕಿಕೊಡಲಾಗುತ್ತದೆ. ಮೇಲಗಡೆ ಟೆಂಪರೇಚರ್ ಕಂಟ್ರೋಲ್ ಮಾಡಲು, ಹೊಗೆ ಹೋಗುವ ಕೊಳವೆಯಲ್ಲಿ ಶಾಖವನ್ನು ಕಂಟ್ರೋಲ್ ಮಾಡಿದರೆ ಒಳಗೇ ಶಾಖ ಇರುತ್ತದೆ. ಇದರಿಂದ ಚಳಿಗಾಲದಲ್ಲಿ ಮನೆಯಲ್ಲಿ ಹಿತವಾದ ವಾತಾವರಣ ನಿಮರ್ಾಣವಾಗುತ್ತದೆ ಎನ್ನುತ್ತಾರೆ. ಇದನ್ನು ಯುಟ್ಯೂಬ್ನಲ್ಲಿ ನೋಡಿ ತಾವೇ ಮಾಡಿಕೊಂಡಿದ್ದಾರೆ.
ತೆಂಗಿನಲ್ಲಿ ಪ್ರಯೋಗ : ಹೊಸದಾಗಿ ಐದು ಎಕರೆ ಪ್ರದೇಶದಲ್ಲಿ ಎಳನೀರುತೆಂಗು ಕೃಷಿ ಮಾಡುತ್ತಿರುವುದು ರೋಹಿತ್ ಅವರ ಮತ್ತೊಂದು ವಿಶೇಷ. ಮಧುರೈನ ಡೀಜೆ ಖಾಸಗಿ ಫಾರಂನಿಂದ ಪ್ರತಿ ಗಿಡಕ್ಕೆ 500 ರೂಪಾಯಿ ನೀಡಿ 370 ಸಸಿಗಳನ್ನು ತಂದು ಹಾಕಿದ್ದಾರೆ. ರಾಜ್ಯದ ಮುರುಡೇಶ್ವರದಲ್ಲೂ ಈ ತೆಂಗಿನ ನರ್ಸರಿ ಇದೆ. ತೆಂಗಿನ ಗಿಡಗಳಿಗೆ ಈಗ ಎರಡು ವರ್ಷ ಎರಡು ತಿಂಗಳಾಗಿದೆ.
ಮೂರನೇ ವರ್ಷದಿಂದ ಫಲ ನೀಡುತ್ತವೆ. ವಾಷರ್ಿಕ ಗಿಡದಲ್ಲಿ 300 ಎಳನೀರು ಸಿಗುವ ನಿರೀಕ್ಷೆ ಇದೆ. ತೆಂಗಿನ ಒಳಗಡೆ ಎರಡೂ ವರ್ಷದಿಂದ ಏಲಕ್ಕಿ ಬಾಳೆ ಬೆಳೆಯುತ್ತಿದ್ದು ಅದರಿಮದಲ್ಲೂ ಉತ್ತಮ ಆದಾಯ ಬಂದಿದೆ ಎನ್ನುತ್ತಾರೆ.
"ಮೈಸೂರಿನಲ್ಲಿ ನಾವೇ ಎಳನೀರು ಮಾರಾಟ ಮಳಿಗೆ ತೆರೆಯಬೇಕು.ನೇರವಾಗಿ ಗ್ರಾಹಕರಿಗೆ ಎಳನೀರು ಕೊಡುವುದರಿಂದ ಐದು ರೂಪಾಯಿ ಕಡಿಮೆಗೂ ಸಿಗುತ್ತದೆ.ನಮಗೂ ಐದು ರೂಪಾಯಿ ಲಾಭವೂ ಸಿಗುತ್ತದೆ.ಇದಲ್ಲದೆ ತೆಂಗಿನ ತೋಟವನ್ನು ಏಳು ಬ್ಲಾಕ್ಗಳಾಗಿ ಮಾಡಿ ಅಲ್ಲಿ ಬಂಡೂರು ಕುರಿ ಸಾಕಾಣಿಕೆ ಮಾಡಲು ನಿರ್ಧರಿಸಿದ್ದಾರೆ. ಬಕ್ರೀದ್ ಸಮಯದಲ್ಲಿ ಮಾತ್ರ ಕುರಿಗಳನ್ನು ಮಾರಾಟ ಮಾಡುವ ಉದ್ದೇಶ ಇದೆ. ಪ್ರತಿ ದಿನ ಒಂದೊಂದು ಬ್ಲಾಕ್ನಲ್ಲಿ ಕುರಿ ಮೇಯಲು ಬಿಡುವುದರಿಂದ ತೋಟಕ್ಕೆ ಕುರಿ ಗೊಬ್ಬರ ಸಿಕ್ಕಂತಾಗುತ್ತದೆ.ತೋಟದ ನಿರ್ವಹಣೆಯೂ ಕಡಿಮೆಯಾಗುತ್ತದೆ ಎನ್ನುವುದು ರೋಹಿತ್ ಅವರ ಯೋಜನೆಯಾಗಿದೆ.
ಸದ್ಯ ತೋಟದ ನಿರ್ವಹಣೆಗೆ ಒಂದು ಎರಡು ತೆರೆದ ಬಾವಿ,ಮೂರು ಬೋರ್ವೆಲ್ ಇದೆ. ತೆರದ ಬಾವಿಯ ನೀರನ್ನೇ ಬಳಸುವ ಇವರು ಬೋರವೆಲ್ಗಳನ್ನು ಅಷ್ಟಾಗಿ ಬಳಸುವುದಿಲ್ಲ. ಆದರೂ ಇದೆ ರೀತಿ ಮಳೆಯ ಪ್ರಮಾಣ ಕಡಿಮೆಯಾದರೆ ತೋಟದ ನಿರ್ವಹಣೆ ಕಷ್ಟ ಎನ್ನುತ್ತಾರೆ.ರೈತರು ಬೇಸಾಯಕ್ಕಾಗಿ ದೊಡ್ಡ ಟ್ರ್ಯಾಕ್ಟರ್ ಖರೀದಿಸದೆ ಅನುಕೂಲಕ್ಕೆ ತಕ್ಕಂತೆ ಸಣ್ಣ ಟ್ರ್ಯಾಕ್ಟರ್ ಖರೀದಿಸಿಕೊಳ್ಳಬೇಕು.ಇದರಿಂದ ಚಾಲಕನ ಅಗತ್ಯವಿಲ್ಲದೆ ತಾವೇ ತೋಟದ ಕೆಲಸಗಳನ್ನು ಮಾಡಿಕೊಳ್ಳಬಹುದು. ತಮ್ಮ ತೋಟದ ಎಲ್ಲಾ ಕೆಲಸವನ್ನು ಸಣ್ಣ ಕೋಬಾಟ ಟ್ರ್ಯಾಕ್ಟರ್ನಿಂದ ತಾನೇ ನಿರ್ವಹಣೆಮಾಡುವುದಾಗಿ ಹೇಳುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ರೋಹಿತ್ ಅವರನ್ನು 9448750558 ಸಂಪಕರ್ಿಸಬಹುದು