ಕಣಗಾಲು ಕೃಷ್ಣಮೂತರ್ಿಗೆ ಗೌರವ ತಂದ ಪಾಳೇಕರ್ ಕೃಷಿ
"ಆಗ ಪೀಡಿಸುತ್ತಿದ್ದ ಬ್ಯಾಂಕಿನವರು ಈಗ ಚೇರು ಕೊಟ್ಟು ಗೌರವಿಸುತ್ತಾರೆ"
ಮೈಸೂರು : "ಏಳು ವರ್ಷಗಳ ಹಿಂದೆ ಸಾಲಕೊಟ್ಟ ಬ್ಯಾಂಕಿನವರ ಮುಂದೆ ನಾನು ನಡು ಬಗ್ಗಿಸಿ ಕೈಮುಗಿದು ನಿಲ್ಲುತ್ತಿದ್ದೆ. ಇಂದು ಅದೆ ಬ್ಯಾಂಕಿನವರು ನಾನು ಬ್ಯಾಂಕಿಗೆ ಹೋದರೆ ಖುಚರ್ಿ ಕೊಟ್ಟು ಕುಳ್ಳಿರಿಸಿ ಟೀ ಕೊಟ್ಟು, ಗೌರವ ಭಾವನೆಯಿಂದ ಕಂಡು ಕಳುಹಿಸುತ್ತಾರೆ". ಇದು ನೈಸಗರ್ಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿಯ ಏಫೆಕ್ಟ್ ಎಂದರು ಕಣಗಾಲಿನ ಕೃಷ್ಣಮೂತರ್ಿಗಳು.
ಸಂಪೂರ್ಣವಾಗಿ ಶೂನ್ಯಬಂಡವಾಳ ನೈಸಗರ್ಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮದ ಕೃಷ್ಣಮೂತರ್ಿ ಅವರ ಜೀವನ ಪಯಣವೆ ಒಂದು ರೋಚಕ ಅನುಭವ. ಯುರೋಪ್, ಏಷ್ಯಾ ಖಂಡ ಸೇರಿದಂತೆ ಆರು ಖಂಡಗಳ ಹತ್ತಾರು ದೇಶಗಳನ್ನು ಸುತ್ತಿಬಂದಿರುವ ಕೃಷ್ಣಮೂತರ್ಿ ಅವರು ಹಡಗಿನಲ್ಲಿ (ಎರೋನಾಟಿಕ್) ಎಂಜಿನಿಯರ್ ಆಗಿದ್ದವರು. ಖ್ಯಾತ ಸಿನಿಮಾ ನಿದರ್ೇಶಕ ಪುಟ್ಟಣಕಣಗಾಲ್ ಅವರ ಆತ್ಮೀಯ . ಅಪಾರವಾದ ಜೀವನ ಪ್ರೀತಿ ಮತ್ತು ಹಾಸ್ಯ ಪ್ರಜ್ಞೆ ಇರುವ ಇವರು ಈಗ ಕಣಗಾಲಿನಲ್ಲಿ ನೈಸಗರ್ಿಕ ಕೃಷಿಮಾಡುತ್ತಾ ನೈಜ ಮಣ್ಣಿನ ಮಗನಾಗಿದ್ದಾರೆ. ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿ ಬಂದಿವೆ.
ತಮ್ಮ ಹದಿನೆಂಟು ಎಕರೆ ಪ್ರದೇಶದಲ್ಲಿ ಶೂನ್ಯ ಬಂಡವಾಳ ಕೃಷಿ ಮಾಡುತ್ತಿರುವ ಕೃಷ್ಣಮೂತರ್ಿ ಆರು ಎಕರೆಯಲ್ಲಿ 150 ತೆಂಗು, 1200 ಅಡಿಕೆ, ಟೀಕ್, 2000 ಗ್ಲಿರಿಸೀಡಿಯಾ, ಬಾಳೆ ಬೆಳೆದರೆ, ಎರಡೂವರೆ ಎಕರೆಯಲ್ಲಿ ಭತ್ತ, ಉಳಿದ ಕಡೆ ಮಾವು, ಗೋಡಂಬಿ, ಬನಾರಸ್ ನೆಲ್ಲಿ,ಅಪ್ಪೆಮಿಡಿ ಮಾವು ಹೀಗೆ ಮನೆಗೆ ಬೇಕಾದ ವಿವಿಧ ಬಗೆಯ ಹಣ್ಣುಗಳನ್ನು ಸಂಪೂರ್ಣ ವಿಷಮುಕ್ತವಾಗಿ ಬೆಳೆಯುತ್ತಿದ್ದಾರೆ.
ಪಾಳೇಕರ್ ಕೃಷಿ ಪದ್ಧತಿಯ ಬಂದ ಮೇಲೆ ಭೂಮಿ ಉಳುಮೆ ನಿಲ್ಲಿಸಿದ್ದಾರೆ, ಹೊರಗಿನಿಂದ ಯಾವುದೆ ಗೊಬ್ಬರಗೋಡನ್ನಾಗಲಿ ತರುವುದನ್ನು ನಿಲ್ಲಿಸಿದ್ದಾರೆ.ಬೀಜಾಮೃತ,ಜೀವಾಮೃತ, ಹೊದಿಕೆ, ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವ ಮೂಲಕ ಕಡಿಮೆ ಖಚರ್ಿನಲ್ಲಿ ಹೆಚ್ಚು ಲಾಭಪಡೆದು ಉತ್ತಮ ಆದಾಯಗಳಿಸುತ್ತಾ ಬಂಗಾರದ ಮನುಷ್ಯನಾಗಿದ್ದಾರೆ.
ಪತ್ನಿ ಕುಸುಮ ಹಾಗೂ ಮಕ್ಕಳಾದ ಸಂದೀಪ್,ಸನತ್,ಸವಿತಾ, ಸಹನಾ ಸೇರಿದಂತೆ ನಮ್ಮ ಮನೆಯ ಎಲ್ಲರೂ ಪಾಸ್ಪೋಟರ್್ ಹೊಂದಿದ್ದೇವೆ ಎನ್ನುವ ಕೃಷ್ಣಮೂತರ್ಿಗಳ ಹಸಿರು ಪ್ರೀತಿ ಅವರನ್ನು ಹಳ್ಳಿಯಲ್ಲೇ ಇರುವಂತೆಮಾಡಿದೆ. ಕಣಗಾಲಿನಲ್ಲಿ ಕಿಟ್ಟಯ್ಯನೋರು ಎಂದೆ ಹೆಸರಾದ ಕೃಷ್ಣಮೂತರ್ಿ ತಮ್ಮ 74 ನೇ ಇಳಿವಯಸ್ಸಿನಲ್ಲೂ ಅದೆ ಗ್ರಾಮದ ಇನ್ನೊಬ್ಬ ನೈಸಗರ್ಿಕ ಕೃಷಿಕ ಬಾಲ್ಯದ ಗೆಳೆಯ ಕುಳ್ಳೆಗೌಡರೊಂದಿಗೆ ರಾಜ್ಯದ ನಾನಾ ಭಾಗದಲ್ಲಿರುವ ನೈಸಗರ್ಿಕ ಕೃಷಿಯ ತೋಟಗಳಿಗೆ ಭೇಟಿ ನೀಡುತ್ತಾ,ಕೃಷಿಯ ಬಗ್ಗೆ ಕಲಿಯುತ್ತಾ, ಪರಸ್ಪರ ಹಾಸ್ಯ, ಗೇಲಿ ಮಾಡಿಕೊಳ್ಳುತ್ತಾ ಹಳ್ಳಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.ಇಂತಹ ಹಿರಿಯ ಜೀವಗಳ ಹಸಿರು ಪ್ರೀತಿಗೆ ಅವರು ಕಟ್ಟಿರುವ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿಯ ತೋಟಗಳೆ ಸಾಕ್ಷಿಯಾಗಿವೆ.
ದ.ಕನ್ನಡ, ಚಿಕ್ಕಮಗಳೂರು,ಶಿರಸಿಯ ಕಡೆ ಅತ್ತ್ಯುತ್ತಮ ಮಾದರಿ ತೋಟಗಳಿದ್ದು, ತೀರ್ಥಹಳ್ಳಿಯ ಪುರುಷೋತ್ತಮ ರಾಯರು, ಉಡುಪಿಯ ಶಂಕರ ಹೆಗಡೆ ಸೇರಿದಂತೆ ನಾನಾ ತೋಟಗಳಿಗೆ ಹೋಗಿ ಬಂದಿದ್ದೇವೆ ಎನ್ನುವ ಈ ಬಾಲ್ಯದ ಗೆಳೆಯರಿಗೆ ಇಳಿವಯಸ್ಸಿನಲ್ಲೂ ಇರುವ ಹಸಿರು ಪ್ರೀತಿ ಯುವಕರನ್ನೇ ನಾಚಿಸುವಂತಿದೆ.
ಅರಸು ಕಾಯಿದೆ ತಂದ ಆಪತ್ತು: ಕೃಷ್ಣಮೂತರ್ಿ ಅವರು ಎರೋನಾಟಿಕ್ ಎಂಜಿನೀಯರ್ ಆಗಿ 18 ವರ್ಷಗಳಿಗೂ ಹೆಚ್ಚು ಕಾಲ ದೇಶ ವಿದೇಶಗಳನ್ನು ಸುತ್ತುತ್ತಾ ನೌಕರಿ ಮಾಡಿಕೊಂಡಿದ್ದವರು. ದೇವರಾಜು ಅರಸು ಉಳುವವನಿಗೆ ಭೂಮಿ ಕಾಯಿದೆ ಜಾರಿಗೆ ತಂದಾಗ ಕಣಗಾಲಿನಲ್ಲಿರುವ ತಮ್ಮ ಪಿತ್ರಾಜರ್ಿತ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಕೃಷಿಯನ್ನು ಅಪ್ಪಿಕೊಂಡರು. ಪತ್ನಿಯೊಂದಿಗೆ ಹಳ್ಳಿಯಲ್ಲೆ ಉಳಿದುಕೊಂಡರು.
ಕೃಷಿಯ ಬಗ್ಗೆ ಆಳವಾದ ತಿಳಿವಳಿಕೆ ಇಲ್ಲದ ಕಾರಣ ಆರಂಭದಲ್ಲಿ ಕೈ ಸುಟ್ಟುಕೊಂಡರು. ರಾಸಾಯನಿಕ ಕೃಷಿಮಾಡಿ ಮೈತುಂಬಾ ಸಾಲಮಾಡಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸಿದರು. ಆದರೂ ಭೂಮಿಯನ್ನು ಉಳಿಸಿಕೊಳ್ಳಲೆ ಬೇಕು ಎಂದು ಪಣತೊಟ್ಟು ಪಟ್ಟಣದ ವ್ಯಾಮೋಹವನ್ನು ತೊರೆದು ಹಳ್ಳಿಯಲ್ಲೆ ನೆಲೆನಿಂತ ಕೃಷ್ಣಮೂತರ್ಿ ರೈತ ಸಮುದಾಯದ ಹೆಮ್ಮೆಯ ಮಗನಾಗಿ,ನೈಸಗರ್ಿಕ ಕೃಷಿಯ ಸಾಧಕನಾಗಿ ಯುವ ಜನಾಂಗಕ್ಕೆ ಮಾದರಿಯಾಗುವಂತೆ ಬೆಳೆದಿದ್ದಾರೆ.
ರಾಸಾಯನಿಕ ತಂದ ಆಪತ್ತು : ಮೊದಲು ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ಬ್ಯಾಂಕಿನಲ್ಲಿ 7.5 ಲಕ್ಷ ರೂಪಾಯಿ ಸಾಲಗಾರನಾಗಿದ್ದೆ. ಬ್ಯಾಂಕಿನವರು ಸಾಲ ವಸೂಲಿಗೆ ಮನೆಗೆ ಬಂದರೆ ಸಾಲತೀರಿಸಲು ಕಾಲವಕಾಶ ಕೇಳಿ ಕೈ ಮುಗಿದು ನಿಲ್ಲುವ ಪರಿಸ್ಥಿತಿ ಇತ್ತು. ಸಾವಿರಾರು ರೂಪಾಯಿ ಕೊಟ್ಟು ಅಂಗಡಿಯಿಂದ ತಂದ ಗೊಬ್ಬರ ಔಷಧಿಗೆ ನಾವು ಬೆಳೆದ ಉತ್ಪನ್ನಗಳು ಸಮವಾಗುತ್ತಿರಲಿಲ್ಲ. ಸಾಲ ಏರುತ್ತಲೇ ಹೋಗುತಿತ್ತು.ಬಸ್ಸ್ ಚಾಜರ್್ಗೂ ಒದ್ದಾಟ, ಖಚರ್ು ಜಾಸ್ತಿ ಆದಾಯ ಕಡಿಮೆ ಎಂಬ ಪರಿಸ್ಥಿತಿ. ಇಂತಹ ಸಮಯದಲ್ಲಿ ಸುಭಾಷ್ ಪಾಳೇಕರ್ ನಮ್ಮ ಪಾಲಿನ ದೈವವಾಗಿ ಬಂದರು ಎಂದು 74 ವರ್ಷದ ಯುವಕೃಷಿಕ ಕೃಷ್ಣಮೂತರ್ಿ ನೆನಪಿಸಿಕೊಂಡರು.
ಪತ್ರಿಕೆಗಳಲ್ಲಿ ನೈಸಗರ್ಿಕ ಕೃಷಿಕರ ಯಶೋಗಾಥೆಗಳನ್ನು ಓದುತ್ತಿದ್ದವು. ಇದೆ ಸಮಯದಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಪಾಳೇಕರ್ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು. ನಾವು ಹೋಗಿ ಬಾಗವಹಿಸಿದೆವು. ಅದು ನಮ್ಮ ಅದೃಷ್ಟವನ್ನೆ ಬದಲಿಸಿತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಪಾಳೇಕರ್ ಕೃಷಿ ತರಬೇತಿ ಎಲ್ಲೆ ನಡೆದರೂ ಹೋಗುತ್ತೇವೆ. ಹೊಂಡರಬಾಳಿನಲ್ಲಿರುವ ಅಮೃತ ಭೂಮಿಯಲ್ಲಿ ನಡೆದ ಕಾರ್ಯಾಗಾರದಲ್ಲೂ ಭಾಗವಹಿಸಿದ್ದೆವು.
ಪಾಳೇಕರ್ ಪದ್ಧತಿಯ ಕೃಷಿಯನ್ನು ಜಾರಿಗೆ ತಂದ ಮೇಲೆ ಬ್ಯಾಂಕಿನವರ ಸಾಲವೂ ತೀರಿತು. ಅದೇ ಬ್ಯಾಂಕಿನಲ್ಲಿ ನಾವು ದುಡಿದು ಸಂಪಾದಿಸಿದ ಹಣವನ್ನು ಡೆಫಾಸಿಟ್ ಮಾಡುವ ಸ್ಥಿತಿಗೂ ಬಂದೆವು.ರಾಸಾಯನಿಕ ಕೃಷಿಕರಾಗಿದ್ದಾಗ ಸಾಲಗಾರರಾಗಿ ಬ್ಯಾಂಕಿನವರ ಮುಂದೆ ಕೈ ಮುಗಿದು ನಿಲ್ಲುತಿದ್ದೆವು, ಇಂದು ನೈಸಗರ್ಿಕ ಕೃಷಿಕರಾಗಿ ಅದೇ ಬ್ಯಾಂಕಿನವರು ಗೌರವಿಸುವ ಮಟ್ಟಕ್ಕೆ,ಸ್ವಾಭಿಮಾನದಿಂದ ತಲೆ ಎತ್ತಿ ಬದುಕುತ್ತಿದ್ದೇವೆ ಎಂದರು.
ವಿವಿಧ ಸಬ್ಸಿಡಿ, ಭಿತ್ತನೆ ಬೀಜ ಅಂತ ಕೃಷಿ ಇಲಾಖೆಗೆ ಹೋಗುತ್ತಿದ್ದೆವು. ಈಗ ಕೃಷಿ ಇಲಾಖೆಯತ್ತ ತಲೆ ಹಾಕುವುದಿಲ್ಲ. ದೇಸಿ ಬೀಜ, ಒಂದು ನಾಟಿ ಹಸು ಸ್ವಾಭಿಮಾನದ ಬದುಕು ಕಲಿಸಿದೆ. ನಮಗೆ ಯಾವುದೆ ಸರಕಾರಿ ಸವಲತ್ತು ಬೇಕಾಗಿಲ್ಲ ನಾವು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ಸಾಕು ಎನ್ನುತ್ತಾರೆ.
ಆದಾಯ : ವಾಷರ್ಿಕ 150 ಕ್ವಿಂಟಾಲ್ ಅಡಿಕೆ, ಎರಡು ಬಾರಿ ಕೊಬ್ಬರಿ ಮಾರಾಟ, ಕೊಕೊ ಮಾರಾಟದಿಂದ ಆರು ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದೇನೆ. ಇದಕ್ಕಾಗಿ ಮಾಡುವ ವೆಚ್ಚ ವರ್ಷಕ್ಕೆ ಎಲ್ಲಾ ಸೇರಿ ಐವತ್ತು ಸಾವಿರವನ್ನೂ ದಾಟುವುದಿಲ್ಲ. ಪ್ರತಿವರ್ಷ ವೀಡ್ಕಟರ್ನಲ್ಲಿ ಕಳೆ ತೆಗಿಸಿ ಅಲ್ಲೆ ಹೊದಿಕೆ ಮಾಡಲು 10 ಸಾವಿರ, ಜೀವಾಮೃತ ತಯಾರಿಗೆ ಒಂದೆರಡು ಸಾವಿರ, ಆಳುಕಾಳು ಅಂತ ಸಣ್ಣಪುಟ್ಟ ಖಚರ್ು ಬೆಟ್ಟರೆ ಕೃಷಿಗೆ ಬೇರೇನೂ ಬೇಕಿಲ್ಲಾ.ಕುರಿ,ಕೋಳಿ,ಮೇಕೆ ಏನನ್ನೂ ಸಾಕಿಲ್ಲ. ಒಂದೆರಡು ಹಳ್ಳಿಕಾರ್ ಹಸುಗಳಿವೆ. ಹಸುಗಳಿಂದಲ್ಲೂ ನಾವು ಹೆಚ್ಚು ಹಾಲು ಕರೆಯುವುದಿಲ್ಲ. ನಮಗೆ ಬೇಕಾದ ಸ್ವಲ್ಪ ಪ್ರಮಾಣದ ಹಾಲನ್ನು ಕರೆದುಕೊಂಡು ಉಳಿದ ಹಾಲನ್ನು ಅದರ ಕರುವಿಗೆ ಕುಡಿಸುತ್ತೇವೆ. ಅದರಿಂದಾಗಿಯೆ ನಮ್ಮ ಕರುಗಳನ್ನು ಒಂದೆ ವರ್ಷಕ್ಕೆ 18 ರಿಂದ 20 ಸಾವಿರ ರೂಪಾಯಿಕೊಟ್ಟು ಖರೀದಿಸುತ್ತಾರೆ. ಹಾಲಿನ ಆದಾಯ ಕರುವಿನಲ್ಲಿ ಬಂತು ಎಂದು ಲೆಕ್ಕಚಾರ ನೀಡುತ್ತಾರೆ.
ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ವರ್ಷಕ್ಕೆ ನಾಲ್ಕು ಲಕ್ಷ ರೂ. ಖಚರ್ಾಗಿ ಆದಾಯವೆ ಬರುತ್ತಿರಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದೆ ಹೋದರೆ ರೈತರಿಗೆ ಉಳಿಗಾಲ ಇಲ್ಲ.ಸರಕಾರ, ಸಂಘಸಂಸ್ಥೆಗಳನ್ನು ನಂಬಿ ಕೂರದೆ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ.
ನೀರಿನ ಮಿತ ಬಳಕೆ : ತೋಟದಲ್ಲಿ ನೀರನ್ನು ಮಿತವಾಗಿ ಬಳಸುವ ತಂತ್ರಜ್ಞಾನ ಕಂಡುಕೊಂಡಿದ್ದಾರೆ. ಆರು ಎಕರೆ ಅಡಿಕೆ, ತೆಂಗಿನ ತೋಟಕ್ಕೆ ನೀರು ಕೊಡುವುದನ್ನೆ ಕೈಬಿಟ್ಟಿರುವ ಕೃಷ್ಣಮೂತರ್ಿ ಭೂಮಿಯಲ್ಲಿ ತೇವಾಂಶ ಕಾಪಾಡಿಕೊಳ್ಳಲು (ಮಲ್ಚಿಂಗ್) ಹೊದಿಕೆಗೆ ಮೊರೆಹೋಗಿದ್ದಾರೆ.ಗ್ಲಿರಿಸೀಡಿಯಾ, ನೆಲದ ಮೇಲೆ ಬೆಳೆಯುವ ಕಳೆ ಹುಲ್ಲುಗಳಿಂದ ಜೀವಂತ ಹೊದಿಕೆ ಮಾಡುತ್ತಾರೆ. ಆರಂಭದಲ್ಲಿ ಪ್ರತಿ ತಿಂಗಳು ಭೂಮಿಗೆ ಜೀವಾಮೃತ ಚೆಲ್ಲುತ್ತಿದ್ದರು. ಈಗ ಮೂರು ತಿಂಗಳಿಗೆ ಒಮ್ಮೆ ಮಾತ್ರ ಜೀವಾಮೃತ ಚೆಲ್ಲುತ್ತಾರೆ.
ಒಂದು ಬಾರಿ ಭತ್ತದ ಗದ್ದೆಗೆ ನೀರು ಕಟ್ಟಿದರೆ ಅದು ಬರಿದಾಗುವವರೆಗೆ ನೀರು ಬಿಡುವುದಿಲ್ಲ. ನೀರು ಖಾಲಿ ಹಾಗಿ ಮಣ್ಣಿನಲ್ಲಿ ಗಾಳಿ ಆಡಲು ಅವಕಾಶ ಕಲ್ಪಿಸಿ ನಂತರ ಮತ್ತೆ ನೀರು ಬಿಡುತ್ತಾರೆ, ಇದಕ್ಕೆ ಕಟ್ನೀರು ಎಂದು ಕರೆಯಲಾಗುತ್ತದೆ.ಜೀವಾಮೃತ, ಉಳಿ ಮಜ್ಜಿಗೆ ಸಿಂಪರಣೆ ಮಾಡಿ ಎಕರೆಗೆ 15 ರಿಂದ 18 ಕ್ವಿಂಟಾಲ್ ರಾಜಮುಡಿ ಭತ್ತ ಬೆಳೆಯುವ ಕೃಷ್ಣಮೂತರ್ಿ, ಭತ್ತದ ಹುಲ್ಲ ಎತ್ತರವಾಗಿ ಬೆಳೆಯುವುದರಿಂದ ದನಕರುಗಳಿಗೂ ಸಮೃದ್ಧ ಮೇವು ಸಿಕ್ಕಂತಾಗುತ್ತದೆ ಎಂದರು.
ಅಡಿಕೆ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿ ತೋಟದಲ್ಲಿ ಹಾಕುವುದಕ್ಕಿಂತ ಅಡಿಕೆ ಗೋಟನ್ನೆ ತಂದು ಭೂಮಿಯಲ್ಲಿ ಹಾಕಿ ಬೆಳೆಸಿದರೆ ಉತ್ತಮವಾಗಿರುತ್ತದೆ. ಗಿಡ ವಾತವರಣಕ್ಕೆ ಹೊಂದಿಕೊಂಡು ಬೆಳೆಯುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರುತ್ತದೆ. ಯಾವುದೆ ಗಿಡವನ್ನು ಇದೆ ರೀತಿ ಬೆಳೆಸುವುದು ಉತ್ತಮ ಎನ್ನುವುದನ್ನು ಅನುಭವದಿಂದ ಕಂಡುಕೊಂಡಿರುವುದಾಗಿ ಹೇಕುತ್ತಾರೆ.
ಮಾವು,ಗೋಡಂಬಿ,ಅಪ್ಪೆ ಮಿಡಿ ಮಾವು ಬೆಳೆದಿರುವ ತೋಟಕ್ಕೂ ವಾರಕ್ಕೆ ಎರಡು ಬಾರಿ ನೀರು ನೀಡುತ್ತೇನೆ. ಯಾಕೆಂದರೆ ನಮ್ಮಲ್ಲಿ ಬೋರ್ವೆಲ್ ಇಲ್ಲ. ನಾಲೆಯಿಂದ ಡಿಸೇಲ್ ಮೋಟಾರ್ನಿಂದ ನೀರು ಎತ್ತಬೇಕು. ಅದಕ್ಕಾಗಿ ಹೆಚ್ಚು ಹಣ ಕಳೆದುಕೊಳ್ಳಲು ಸಿದ್ಧನಿಲ್ಲ ಎನ್ನುತ್ತಾರೆ.
ಕೃಷಿ ಅನಿವಾರ್ಯ : ಆರೋಗ್ಯಕ್ಕೆ. ಖುಷಿಗೆ. ನೆಮ್ಮದಿಗೆ ಕೃಷಿ ಅನಿವಾರ್ಯವಾದ ಕಸುಬು. ಮುಂದಿನ ಹತ್ತು ವರ್ಷದಲ್ಲಿ ತಂತ್ರಜ್ಞಾನವಲಯದಲ್ಲಿ ಬರೀ ಬದಲಾವಣೆಯ ಗಾಳಿ ಬೀಸಲಿದೆ. ಆಗ ಎಲ್ಲಾ ಕೆಲಸವನ್ನು ಯಂತ್ರಗಳೆ ಮಾಡಲಿದ್ದು, ಏಟಿಬಿಟಿ ಬೆನ್ನತ್ತಿರುವ ಯುವಜನಾಂಗ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಗ್ಯಾರಂಟಿ. ಈಗಿನಿಂದಲೆ ಮುನ್ನೆಚ್ಚರಿಕೆ ಕ್ರಮವಾಗಿ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡವರು ಮಾತ್ರ ಸೇಫ್. ರೈತರು ಏಕ ಬೆಳೆ ಪದ್ಧತಿಯನ್ನು ಕೈಬಿಟ್ಟು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಹೆಚ್ಚು ಗುಡನರಗಳನ್ನು ಬೆಳೆಸಿಕೊಳ್ಳಬೇಕು. ನಾವೆ ಬೆಳೆಸಿದ ತೇಗದ ಮರಗಳು ಈಗ ನಮಗೆ ಫೆನ್ಷನ್ನಂತೆ ಹಣ ತಂದುಕೊಡುತ್ತಿವೆ. ಪ್ರತಿ ಮರ 50 ಸಾವಿರ ರೂ.ಬೆಲೆಬಾಳುತ್ತಿದೆ ಎಂದು ಬೇಲಿಯ ಸುತ್ತ ಇದ್ದ ಟೀಕ್ ಮರಗಳತ್ತ ಕೈಮಾಡಿದರು.
ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ 1957 ರಲ್ಲಿ ರಾಷ್ಟ್ರಕವಿ ಕುವೆಂಪು, ಎಫ್.ಕೆ.ಇರಾನಿ ಮತ್ತಿತರರ ಗಣ್ಯರ ಮನೆಗೆ ಪೇಪರ್ ಹಾಕುತ್ತಿದ್ದ ಹುಡುಗನೊಬ್ಬ ಈ ಮಟ್ಟಕ್ಕೆ ಬೆಳೆದ ಪರಿಯೆ ನಮ್ಮಗೊಂದು ಅಚ್ಚರಿಯಂತೆ ಕಂಡಿತು. ಬಿ.ಆರ್.ಪಂತುಲು ಅವರಿಗೆ ಕಾರ್ ಡ್ರೈವರ್ ಆಗಿ ಬೆಳ್ಳಿಮೋಡ ಸಿನಿಮಾ ನಿದರ್ೇಶನ ಮಾಡುವವರೆಗೆ 20 ವರ್ಷಗಳಿಗೂ ಹೆಚ್ಚು ಕಾಲ ಪುಟ್ಟಣ್ಣ ಕಣಗಾಲ್ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದಾಗಿ ಹೇಳುವ ಕೃಷ್ಣಮೂತರ್ಿ, ಪುಟ್ಟಣ್ಣ ಕಣಗಾಲ್ ಒಬ್ಬ ಜೀನಿಯಸ್ ಎಂದು ಹೇಳಿ ಅವರ ಜೊತೆಗಿನ ತಮ್ಮ ಆ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು.
ಸಂಪೂರ್ಣ ಶೂನ್ಯ ಬಂಡವಾಳದ ನಿರ್ವಹಣೆಯ ಉತ್ತಮ ಆದಾಯ ಬರುತ್ತಿರುವ ತೋಟ ನೋಟಬೇಕೆಂಬ ಕೃಷಿಕರು ಹೆಚ್ಚಿನ ಮಾಹಿತಿಗೆ ಕೃಷ್ಣಮೂತರ್ಿ 9449942806- 9591230259 ಅವರನ್ನು ಸಂಪಕರ್ಿಸಬಹುದು.