vaddagere.bloogspot.com

ಮಂಗಳವಾರ, ಆಗಸ್ಟ್ 23, 2016

 ಜೀವ ಚೈತನ್ಯ ಕೃಷಿ ಸಾಧಕ ಪಾಪಣ್ಣ

ಇದು ವೃತ್ತಿನಿರತ ರಾಜಕಾರಣಿಯೊಬ್ಬ ಹಸಿರು ಪ್ರೇಮಿಯಾಗಿ ಬದಲಾದ ಅಚ್ಚರಿ !

ಮೈಸೂರು : ಎರಡು ದಶಕಗಳಿಗೂ ಹೆಚ್ಚುಕಾಲ ಸಕ್ರೀಯ ರಾಜಕಾರಣದಲ್ಲಿದ್ದ ನಾಯಕರೊಬ್ಬರು ಇದ್ದಕ್ಕಿದ್ದಂತೆ ರಾಜಕೀಯದಿಂದ ದೂರ ಸರಿದು ಪರಿಸರ ಚಕ್ರವತರ್ಿಯಾದರು. ತಮ್ಮದೇ ಹಸಿರು ಸಾಮ್ರಾಜ್ಯ ರೂಪಿಸಿ ಬಂಗಾರದ ಮನುಷ್ಯನಾದರು. ಕರುನಾಡಲ್ಲದೆ ವಿದೇಶಿ ರೈತರಿಗೂ ಮಾದರಿಯಾದರು. ಅವರೇ ಹುಣಸೂರಿನ ಮಾಜಿ ಶಾಸಕ ವಿ.ಪಾಪಣ್ಣ.
ಸದಾ ಹಸಿರು ಸಿರಿಯ ನಡುವೆ ಇರುವ ಪಾಪಣ್ಣ ತಮ್ಮ ಎಂಬತ್ತೊಂದನೇ ವಯಸ್ಸಿನಲ್ಲೂ ಲವಲವಿಕೆಯಿಂದ ತೋಟದ ತುಂಬಾ ತಿರುಗಾಡುತ್ತಾ ಬಂದವರಿಗೆ ಕೃಷಿಪಾಠ ಮಾಡುತ್ತಾರೆ.
ಸಾಮಾನ್ಯವಾಗಿ ರಾಜಕೀಯ ಅಖಾಡ ಪ್ರವೇಶಿಸಿದವರು ಮತ್ತೆ ತಿರುಗಿ ಬಂದು ಕೃಷಿಯನ್ನು ಅಪ್ಪಿಕೊಂಡದ್ದು ಕಡಿಮೆ. ಈಗಿರುವಾಗ ಪಾಪಣ್ಣ 1987ರಲ್ಲಿ ಜಿಲ್ಲಾಪಂಚಾಯಿತಿ ಚುನಾವಣೆಗೆ ನಿಲ್ಲುವ ಮೂಲಕ ರಾಜಕೀಯ ಪ್ರವೇಶಿಸಿ ಸೋತು, ಹುಣಸೂರು ಕ್ಷೇತ್ರದಿಂದ ವಿಧಾನ ಸಭೆಗೆ ನಿಲ್ಲುವ ಮೂಲಕ ಗೆದ್ದು ಶಾಸಕರಾಗಿ ಮತ್ತೆ ಸೋತು ಚುನಾವಣಾ ರಾಜಕೀಯದಿಂದ ದೂರ ಸರಿದು ಮಾದರಿ ಕೃಷಿಕರಾಗಿದ್ದು ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.
ಪಾಪಣ್ಣನವರ ಎದುರು ಕುಳಿತು ಅವರ ಮಾತು ಕೇಳುತ್ತಿದ್ದರೆ ಪರಿಸರದ ಎಲ್ಲ ಸೂಕ್ಷ್ಮಗಳು ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ.ಮಣ್ಣಿಗೆ ಬೇಕಾದ ಪೋಷಕಾಂಶಗಳು,ಲವಣಗಳು,ಪರಿಸರದೊಂದೆಗೆ ಮುನುಷ್ಯ,ಪ್ರಾಣಿಪಕ್ಷಿಗಳ ಸಂಬಂಧ ಹೀಗೆ ದಿನಗಟ್ಟಳೆ ಮಾತನಾಡಬಲ್ಲ ಜ್ಞಾನವನ್ನು ತಮ್ಮ ಅನುಭವದ ಮೂಲಕ ಹೇಳುವ ಪಾಪಣ್ಣ ಸಂತೆಕೆರೆ ಕೋಡಿಯ ಮಣ್ಣಿನಲ್ಲಿ  ಚಿನ್ನದಂತ ಬೆಳೆ ತೆಗೆಯುತ್ತಿದ್ದಾರೆ.
ಮುವತ್ತು ವರ್ಷಗಳಿಂದ ಉಳುಮೆಯನ್ನೇ ಕಾಣದ  ಮೂವತ್ತು ಎಕರೆ ತೋಟದಲ್ಲಿ ನೂರಾರು ಸಸ್ಯ ಪ್ರಬೇಧಗಳು ಹಸಿರಿನಿಂದ ನಳನಳಿಸುತ್ತಿವೆ. ಸಾಮಾನ್ಯವಾಗಿ ಆರೋಗ್ಯವಂತ ತೆಂಗಿನ ಮರವೊಂದು ವಾಷರ್ಿಕ ನೂರೈವತ್ತರಿಂದ ಇನ್ನೂರು ತೆಂಗಿನ ಕಾಯಿ ಬಿಟ್ಟರೆ ಇಲ್ಲಿರುವ ಒಂದೊಂದು ಮರವು ವಾಷರ್ಿಕ ಐದನೂರು ತೆಂಗಿನ ಕಾಯಿಗಳನ್ನು ಬಿಡುವ ಮೂಲಕ ಅಚ್ಚರಿ ಮೂಡಿಸಿವೆ. ಅಡಿಕೆ ಮರಗಳಂತೂ ಕಾಯಿಯ ಭಾರಕ್ಕೆ ಬಾಗಿ ನಿಂತಿವೆ. ಬಟರ್ ಪ್ರೂಟ್, ನಿಂಬೆ, ಜಾಯಿಕಾಯಿ ಗಿಡಗಳು ಎಲೆಗಿಂತ ಹಣ್ಣುಗಳನ್ನೇ ಗಿಡದ ತುಂಬೆಲ್ಲಾ ಹೊದ್ದು ಕಂಪು ಬೀರುತ್ತಿವೆ.
ಇದಕ್ಕೆಲ್ಲ ಮುಖ್ಯ ಕಾರಣ ಮಳೆನೀರು ಕೊಯ್ಲು.ಗಿಡಗಳಿಗೆ ಜೀವಾಮೃತ ಮತ್ತು ಎರೆ ಗೊಬ್ಬರ ಬಳಕೆ. ಮಣ್ಣಿಗೆ ಮುಚ್ಚುಗೆಯಾಗಿ ಕೃಷಿ ತ್ಯಾಜ್ಯಗಳ ಸಮರ್ಥ ಬಳಕೆ.ಇವು ಪಾಪಣ್ಣನವರ ತೋಟವನ್ನು ಸಮೃದ್ಧ ಜೀವ ಚೈತನ್ಯ ಕಾಡನ್ನಾಗಿ ಪರಿವತರ್ಿಸಿವೆ.
ಇಡೀ ತೋಟದಲ್ಲಿ ಎಲ್ಲೇ ಭೂಮಿಯನ್ನು ಅಗೆದರೆ ಸಿಗುವುದು ಮಣ್ಣಲ್ಲ ಎರೆಗೊಬ್ಬರ. ಭೂಮಿಯಿಂದ ಸುಮಾರು ಮೂರು ಅಡಿಗಳವರೆಗೂ ಮಣ್ಣು ಎರೆಗೊಬ್ಬರವಾಗಿ ರೂಪಾಂತರಗೊಂಡಿದೆ. ಈ ಸಾಧನೆಗಾಗಿಯೇ ಸ್ವಿಡ್ಜರ್ಲ್ಯಾಂಡ್ನ ಐಎಂಒ ಸಂಸ್ಥೆ ಪಾಪಣ್ಣನವರ ತೋಟಕ್ಕೆ ಜೀವ ಚೈತನ್ಯ ಕೃಷಿ ತೋಟ ಎಂದು ಮಾನ್ಯತೆ ನೀಡಿದೆ.30 ಎಕರೆ ಪ್ರದೇಶದಲ್ಲಿ ವಿಸ್ತರಿಕೊಂಡಿರುವ ತೋಟದಲ್ಲಿ ಬಹುತೇಕ ಜಾಗವನ್ನು ತೆಂಗು ಮತ್ತು ಅಡಿಕೆ ಆವರಿಸಿಕೊಂಡಿದ್ದರೆ. ಉಳಿದಂತೆ ಕಾಡು ಬಾಳೆ, ಪೂಜಾ,ಏಲಕ್ಕಿ,ಕಪರ್ೂರವಳ್ಳಿ,ದಿಂಡಿಗಲ್ ಹೀಗೆ ನಾನಾ ತಳಿಯ ಬಾಳೆಗಳು ಮುಗಿಲೆತ್ತರಕ್ಕೆ ಬೆಳೆದು ಬಾಗಿ ಬೀಗುತ್ತಿವೆ. ಜಾಯ್ ಕಾಯಿ,ನಿಂಬೆ,ಪಪ್ಪಾಯಿ, ಮಲ್ಲಿಕಾ ಮಾವು, ಸಪೋಟ,ನುಗ್ಗೆ, ಮೆಣಸು, ಅಗರ್, ಗಮ್ಲೆಸ್ ಹಲಸು ಹೀಗೆ ನಾನಾ ರೀತಿಯ ಸಸ್ಯ ಪ್ರಭೇದಗಳಿವೆ. ತೋಟದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಬೆಳೆ ಕೊಯ್ಲಿಗೆ ಬಂದು ನಿರಂತರ ಆದಾಯ ತಂದುಕೊಡುತ್ತಿವೆ.
ಸಹಜ ಸಾಗುವಳಿ, ಅಡಿಕೆ ಪತ್ರಿಕೆ,ಸಿರಿ ಸಮೃದ್ಧಿ, ಸುಜಾತ, ಶರದ್ ಕೃಷಿ, ಲೀಸಾ ಹೀಗೆ ರಾಜ್ಯದಲ್ಲಿ ಪ್ರಕಟವಾಗುವ ಬಹುತೇಕ ಎಲ್ಲಾ ಕೃಷಿ ಪತ್ರಿಕೆಗಳಿಗೂ ಅಜೀವಾ ಚಂದಾದರರಾಗಿರುವ    ಪಾಪಣ್ಣ ಮಾಧ್ಯಮದಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ತಪ್ಪದೇ ಓದುತ್ತಾರೆ. ಅದರಲ್ಲಿ ತಮಗೆ ಬೇಕಾದ ಮಾಹಿತಿ ಮತ್ತು ತಂತ್ರಜ್ಞಾನವನ್ನು ತಮ್ಮ ತೋಟದಲ್ಲಿ ಜಾರಿ ಮಾಡುತ್ತಾರೆ. ಇದಲ್ಲದೆ ತಿಪಟೂರು ಭೈಫ್ ಸಂಸ್ಥೆಯ ಮನುತೇಜ್ ದೇಸಾಯಿ, ಅರಸೀಕೆರೆ ತಾಲೂಕು ಮಾರಗೋಡನಹಳ್ಳಿಯ ಸದಾಶಿವಪ್ಪ ಮತ್ತು ಮೈಸೂರಿನ ಡಿ.ಶಿವಲಿಂಗು ಅವರ ಸಲಹೆ ಮತ್ತು ಮಾರ್ಗದರ್ಶನ ತಮ್ಮ ಕೃಷಿ ಸಾಧನೆಗೆ ನೆರವಾಯಿತು ಎಂದು ಸ್ಮರಿಸಿಕೊಳ್ಳುತ್ತಾರೆ.
ಪ್ರತಿವರ್ಷ ಹದಿನೈದು ದಿನಗಳು ವಿವಿಧ ರಾಜ್ಯಗಳಿಗೆ ಕೃಷಿ ಪ್ರವಾಸ ಕೈಗೊಳ್ಳುವ ಪಾಪಣ್ಣ ನಮ್ಮ ನಾಡಿನಲ್ಲಿಲ್ಲಿರುವ ಅತ್ಯತ್ತಮ ನರ್ಸರಿಗಳ ಪಟ್ಟಿಯನ್ನೇ ಕೊಡುತ್ತಾರೆ. ಅಲ್ಲಿಂದ ನಾನಾ ರೀತಿಯ ಗಿಡಗಳನ್ನು ತಂದು ಬೆಳೆಸುತ್ತಿದ್ದಾರೆ.
ತಮ್ಮ ತೋಟದಲ್ಲಿ ಮಳೆಗಾಲದಲ್ಲಿ ಎರಡು ತಿಂಗಳು ಮಾತ್ರ ಹೆಚ್ಚಿನ ಆಳುಗಳು ಕೆಲಸಮಾಡುತ್ತಾರೆ. ಗಿಡಗಳಿಗೆ ಎರೆಗೊಬ್ಬರ ಹಾಕುವುದು. ಗಿಡಗಳನ್ನು ಸವರುವುದು.ಕೃಷಿ ತ್ಯಾಜ್ಯ ಸಂಗ್ರಹಣೆ ಮತ್ತಿತರ ಕೆಲಸಗಳಿಗೆ ವಾಷರ್ಿಕ ಎರಡು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಉಳಿದಂತೆ ವರ್ಷವಿಡಿ ಇಬ್ಬರು ಆಳುಗಳು ಮೇಕೆ ಕುರಿ ಸಾಕಾಣಿಕೆ ಜತೆಗೆ ತೋಟವನ್ನು ನಿರ್ವಹಣೆಮಾಡುತ್ತಾರೆ. 1986 ರಿಂದ ಇಲ್ಲಿಯವರೆಗೂ ಭೂಮಿಯನ್ನು ಉಳುಮೆಮಾಡಿಲ್ಲ. ಪ್ರಕೃತಿಯಲ್ಲಿ ಬದುಕಲು ಪ್ರತಿಯೊಂದು ಜೀವಿಗೂ ಹಕ್ಕಿದ್ದು, ಯಾವುದೇ ಕೀಟಗಳನ್ನು ನಾವು ಕ್ರಿಮಿನಾಶಕ ಸಿಂಪಡಿಸಿ ಕೊಲ್ಲುವುದಿಲ್ಲ. ಇಲಿಗಳಿಗೆ ಗೆಣಸು, ಪಕ್ಷಿಗಳಿಗೆ ಪಪ್ಪಾಯಿ ಹಾಕಿದ್ದೇವೆ. ಪರಿಸರದಲ್ಲಿ ಒಂದಕ್ಕೊಂದು ಪೂರಕ ಚಟುವಟಿಕೆಗಳು ನಡೆಯುತ್ತಿರುತ್ತವೆ ಅದಕ್ಕೆ ನಾವು ಅಡ್ಡಿ ಪಡಿಸಬಾರದು ಎಂಬ ಪಾಪಣ್ಣ ಜಪಾನಿನ ಸಹಜ ಕೃಷಿಕ ಮಸನೊಬ್ಬ ಪುಕೊವಕೊ ಕುರಿತು ಮಾತನಾಡಲು ಶುರುಮಾಡಿಬಿಡುತ್ತಾರೆ.
ಭೂಮಿಯನ್ನು ಆಳವಾಗಿ ಉಳುಮೆ ಮಾಡಬಾರದು.ಅದೊಂದು ಅವೈಜ್ಞಾನಿಕ ಪದ್ಧತಿ.ಬೇಕಾದರೆ ರೋಟೊವೇಟರ್ನಿಂದ ತ್ಯಾಜ್ಯವನ್ನು ಭೂಮಿಗೆ ಸೇರಿಸಬಹುದು.ಭೂಮಿಯನ್ನು ಸಾಧ್ಯವಾದಷ್ಟು ಫಲವತ್ತತೆ ಮಾಡುವುದಷ್ಟೇ ನಮ್ಮ ಕೆಲಸ. ಉಳಿದಂತೆ ಭೂಮಿತಾಯಿಯೇ ನಮಗೆ ಸಕಲವನ್ನೂ ಕೊಡುತ್ತಾ ಹೋಗುತ್ತಾಳೆ ಎನ್ನುವುದು ಅವರ ಅನುಭವ.
ತೋಟದಲ್ಲಿ ಮಳೆ ನೀರು ಕೊಯ್ಲಿಗೆ 53 ಕಡೆ ಟ್ರಂಚ್ ಕಮ್ ಬಂಡ್ ಪದ್ಧತಿ ಮಾಡಲಾಗಿದೆ.23 ಬಯೋಡೈಜೆಸ್ಟರ್ ಮಾಡಿಕೊಳ್ಳಲಾಗಿದೆ.ಎರೆಹುಳು ಗೊಬ್ಬರ ಘಟಕವನ್ನು ನಿರ್ವಹಿಸಲಾಗುತ್ತಿದೆ.ಈ ಪ್ರದೇಶ ಮಿನಿ ಮಲೆನಾಡಿನಂತಿದ್ದರೂ ಪಾಪಣ್ಣ ಅವರ ತೋಟದ ಸುತ್ತಮತ್ತ 150 ಮೀಟರ್ ಅಂತರದಲ್ಲಿರುವ ಬೋರ್ವೆಲ್ಗಳಲ್ಲಿ ಸಾವಿರಾರು ಅಡಿಗಳಿಂದ ನೀರನ್ನು ತೆಗೆದು ಕೃಷಿ ಮಾಡಲಾಗುತ್ತಿದೆ. ಆದರೆ ಇವರ ತೋಟದಲ್ಲಿರುವ ಮೂರು ಬೋರ್ವೆಲ್ಗಲು ಕೇವಲ ನಲವತ್ತು ಅಡಿಯಿಂದ ನೀರನ್ನು ಪಂಪ್ ಮಾಡುತ್ತವೆ. ಸ್ಪಿಂಕ್ಲರ್ ಮೂಲಕ ನೀರು ಕೊಡಲಾಗುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಮಳೆನೀರು ಕೊಯ್ಲು ಎನ್ನುವ ಪಾಪಣ್ಣ ಬೋರ್ವೆಲ್ಗಳಿಂದಲ್ಲೂ ನಾವು ನೀರನ್ನು ಕಡಿಮೆ ಬಳಸಿಕೊಳ್ಳುತ್ತಿದ್ದು ತಮ್ಮ ತೋಟದಲ್ಲಿ ಭೂಮಿಯ ಆಳದಲ್ಲಿರುವ ಕಠಿಣ ಶಿಲೆಗಳು ಮೃದುಶಿಲೆಗಳಾಗಿ ಪರಿವರ್ತನೆಯಾಗಿಬಿಟ್ಟಿವೆ. ಅದರಿಂದಾಗಿಯೇ ಹೊರಗಡೆಗಿಂತ ತಮ್ಮ ತೋಟದ ವಾತವಾರಣ ತಂಪಿನಿಂದ ಕೂಡಿದ್ದು ಹಿತವಾಗಿದೆ ಎನ್ನುತ್ತಾರೆ.
ಪಾಥರ್ೇನಿಯಂ ಸೇರಿದಂತೆ ತೋಟದಲ್ಲಿ ಸಿಗುವ ಎಲ್ಲಾ ರೀತಿಯ ಕೃಷಿ ತ್ಯಾಜ್ಯಗಳನ್ನು ಮರಳಿ ಮಣ್ಣಿಗೆ ಸೇರಿಸುವ ಮೂಲಕ ಎರೆಹುಳುಗಳನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ಹೆಚ್ಚಿಸಲಾಗಿದೆ. ಇವುಗಳಿಗೆ ಭೂಮಿಯನ್ನು ಉಳುಮೆ ಮಾಡುವ ಕೆಲಸವಹಿಸಿ ನಿಶ್ಚಿಂತೆಯಿಂದ ಇದ್ದೇನೆ ಎನ್ನುವ ಪಾಪಣ್ಣ ಪರಿಸರವಾದಿಗಳೆಲ್ಲ ಕಾಂಕ್ರೀಟ್ ಕಾಡು ಸೇರಿಕೊಂಡರೆ ನಮ್ಮ ಪರಿಸರ ಉಳಿಯುವುದಾದರು ಹೇಗೆ ಎಂದು ಕೇಳುತ್ತಾರೆ.
ಸಿಸರ್ಿ, ಸಿದ್ದಾಪುರ,ಶ್ರೀ ಪಡ್ರೆಯವರ ತೋಟ, ಸಹ್ಯಾದ್ರಿ ನರ್ಸರಿ,ಶ್ರೀಧರ ಆಶ್ರಮ ಹೀಗೆ ರಾಜ್ಯದ ನಾನಾ ಭಾಗಗಳಿಗೆ ಕೃಷಿ ಪ್ರವಾಸ ಹೋಗಿ ಬಂದಿರುವ ಪಾಪಣ್ಣ ತಮ್ಮ ತೋಟದಲ್ಲಿ ಪರಸ್ಪರ ಹೋಂದಾಣಿಕೆಯಾಗಬಲ್ಲಂತ ಮರಗಿಡಳನ್ನು ಮಾತ್ರ ಹಾಕಲಾಗಿದೆ. ಯಾವುದೇ ಒಂದು ವಿದೇಶಿ ಗಿಡಗಳನ್ನು ಹಾಕಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. ತಂಬಾಕು ಮಂಡಳಿಯವರು ಕೇಳಿದರೆ ನಿಕೋಟಿನ್ ಮುಕ್ತ ತಂಬಾಕು ಬೆಳೆದು ಕೊಡುವುದಾಗಿ ಸವಾಲು ಹಾಕುವ ಪಾಪಣ್ಣ ಸದ್ಯ 500 ರೆಡ್ಲೇಡಿ ಪಪ್ಪಾಯ ಗಿಡಗಳನ್ನು ಯಾವುದೇ ರಾಸಾಯನಿಕ ಸಿಂಪಡಿಸದೆ ನೇಸಗರ್ಿಕ ಪದ್ಧತಿಯಲ್ಲಿ ಬೆಳೆಯುವ ಪ್ರಯೋಗದಲ್ಲಿದ್ದಾರೆ.
ಕೃಷಿ ವಿಜ್ಞಾನಿಗಳಿಗೆ ಸಾವಯವ ಪಾಠ ಮಾಡುವ ಪಾಪಣ್ಣ ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಭಿವೃದ್ಧಿ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆಯವರು ಕರೆದು ತರುವ ರೈತರ ಗುಂಪುಗಳಿಗೂ ಸಹಜ ಕೃಷಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಾರೆ.ರಾಜ್ಯದ ನಾನಾ ಭಾಗದ ರೈತರು ಇವರ ತೋಟಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಆಸಕ್ತರು ದೂ. 8762356042,  9900166256 ಸಂಪಕರ್ಿಸಬಹುದು.
=========================================

ಕೋಟಿ ಆದಾಯ ತರುವ ಅಗರ್

ಇದರ ಹೆಸರು ಅಗರ್ ವುಡ್ ಅಂತ. ಇದನ್ನು ಶೃಂಗೇರಿಯ ವನದುರ್ಗ ಅಗರ್ ಇಂಡಸ್ಟ್ರೀಸ್ನ ಛೇರ್ಮನ್ ಮಲ್ಲಪ್ಪ ಹೆಗಡ ಫಾರಂನಿಂದ ತಂದು ಹಾಕಿದ್ದೇನೆ. ಗಿಡ 10 ವರ್ಷದ ಮರವಾಗಿ ಬೆಳೆದಾದ ಒಂದು ರೀತಿಯ ದ್ರವವನ್ನು ಮರಕ್ಕೆ ಇಂಜೆಕ್ಟ್ ಮಾಡುವ ಮೂಲಕ ಸೇರಿಸಲಾಗುತ್ತದೆ. ಇಡೀ ಮರವೆಲ್ಲ ಶ್ರೀಗಂಧದ ಕಂಪಿನಿಂದ ಸುವಾಸನೆ ಬೀರುತ್ತದೆ.ನಂತರ ಆರು ತಿಂಗಳಿಗೆ ಮರ ಕಡಿಯಬಹುದು. ಒಂದು ಮರ ಲಕ್ಷಾಂತರ ಬೆಲೆ ಬಾಳುತ್ತದೆ. ಈ ಮರದಿಂದ ತೆಗೆಯಲಾಗುವ ಎಣ್ಣೆಗೆ ಅಪಾರ ಹಣ ನೀಡಲಾಗುತ್ತದೆ. ಇದನ್ನು ಅರಬ್ ದೇಶ ಸೇರಿದಂತೆ ಅಮೇರಿಕಾ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಪ್ರತಿ ಗಿಡಕ್ಕೆ 53 ರೂಪಾಯಿ ಕೊಟ್ಟು 250 ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆಸುತ್ತಿರುವುದಾಗಿ ಪಾಪಣ್ಣ ಹೇಳುತ್ತಾರೆ.
ಕೃಷಿಯಲ್ಲಿ ಸಿಗುವ ನಿಗಧಿತ ಆದಾಯದ ಬಗ್ಗೆ ವಿರೋಧ ವ್ಯಕ್ತಪಡಿಸುವ ಪಾಪಣ್ಣ ತಮ್ಮ ತೋಟದ ಸುತ್ತಾ ಹಾಕಿದ್ದ ಅಕೆಶಿಯಾ, ಐಟಿಸಿ ಕ್ಲೋನ್, ಹೆಬ್ಬೇವಿನ ಕೆಲವು ಮರಗಳನ್ನು ಇತ್ತೀಚಿಗೆ ಮಾರಾಟ ಮಾಡಿದೆವು. ಅದರಿಂದ ನಾಲ್ಕುವರೆ ಲಕ್ಷ ಆದಾಯ ಬಂತು. ಅದರಲ್ಲೇ 25 ಸಾವಿರ ಕೊಟ್ಟು ಒಂದು ಪವರ್ ಟಿಲ್ಲರ್ ಹಾಗೂ 75 ಸಾವಿರ ಕೊಟ್ಟು ಒಂದು ಜನರೇಟರ್ ತಂದೆವು. ಇದು ಕೃಷಿ ಚಟುವಟಿಕೆಗಾಗಿಯೇ ತಂದದ್ದು. ಇದರಲ್ಲಿ ಯಾವುದು ಆದಾಯ, ಯಾವುದು ವೆಚ್ಚ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ.
ಪರಿಸರ ಪೂರಕ ಕೃಷಿ ಚಟುವಟಿಕೆಯಿಂದ ಖಂಡಿತಾ ನಷ್ಟವಂತು ಆಗುವುದಿಲ್ಲ. ನಮ್ಮ ತೋಟದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಬೆಳೆ ಕೊಯ್ಲಿಗೆ ಬರುತ್ತಲೇ ಇರುತ್ತದೆ. ಅದರಿಂದ ಸಾಕಷ್ಟು ಆದಾಯ ಇದ್ದೆ ಇದೆ.ಯಾವುದೋ ಒಂದು ಬೆಳೆ ಬೆಳೆದು ಲಕ್ಷಾಂತರ ಆದಾಯಗಳಿಸಿಬಿಟ್ಟು, ಮುಂದಿನ ವರ್ಷದಿಂದ ಯಾವುದೇ ಆದಾಯವಿಲ್ಲದೇ ನರಳುವ ಕೃಷಿ ನಮಗೆ ಬೇಡ.ತೋಟವನ್ನು ನಿತ್ಯ ಆದಾಯ ಬರುವಂತೆ ರೂಪಿಸಿಕೊಳ್ಳಬೇಕು ಎಂದು ಪ್ರಯೋಗಶೀಲ ರೈತರಿಗೆ ಪಾಪಣ್ಣ ಸಲಹೆ  ನೀಡುತ್ತಾರೆ 

ಸುಸ್ಥಿರ ಬದುಕಿಗೆ ಒಲಿದ ಕ್ಷೀರಸಾಗರ

ಎತ್ತ ನೋಡಿದರತ್ತ ಹಚ್ಚ ಹಸಿರು.ನಾನಾ ಜಾತೀಯ ಹಣ್ಣಿನ ಗಿಡಗಳು. ಅಲ್ಲಲ್ಲಿ ಮುರಿದು ಬಿದ್ದ ದೊಡ್ಡ ದೊಡ್ಡ, ಹಣ್ಣಾದ ಪಚ್ಚಾಬಾಳೆ ಗೊನೆಗಳು. ಸುಮಾರು ನಾಲ್ಕು ಎಕರೆ ಪ್ರದೇಶದ ಸುತ್ತಲ್ಲೂ ಸೋಲಾರ್ ಬೇಲಿ. ತೋಟದ ಅಂಚಿನಲ್ಲಿ ಗ್ಲಿರಿಸಿಡಿಯಾ,ಸಿಲ್ವರ್,ಅಕೇಶಿಯಾ ಹೀಗೆ ನಾನಾ ಜಾತಿಯ ಗಿಡಗಳು. ಹೀಗೆ ತಾವು ಕಳೆದ ನಾಲ್ಕು ವರ್ಷದಿಂದ ಕಟ್ಟಿದ ಹಸಿರು ತೋಟದ ಬಗ್ಗೆ ಪ್ರೀತಿಯಿಂದ, ಅಕ್ಕರೆಯಿಂದ ಪ್ರತಿಗಿಡವನ್ನು ತೋರಿಸುತ್ತಾ ಅದರ ಬಗ್ಗೆ ವಿವರಿಸುತ್ತಾ ನಡೆಯುತ್ತಿದ್ದರು ಕ್ಷೀರಸಾಗರ.

ಅಸಂಘಟಿತ ಕಾಮರ್ಿಕರು, ಭೂ ಸುಧಾರಣೆಯ ಬಗ್ಗೆ ಬೆಂಗಳೂರಿನ ವೈಟ್ಫೀಲ್ಡ್ ಸುತ್ತಮುತ್ತ  ಸಿಯೆಡ್ಸ್ ಸಂಸ್ಥೆಯೊಂದಿಗೆ ಸೇರಿಕೊಂಡು ಎಂಟು ವರ್ಷ ಕೆಲಸಮಾಡಿರುವ ಕ್ಷಿರಸಾಗರ ಎಚ್.ಡಿ.ಕೋಟೆ ತಾಲೂಕಿನ ಕಬಿನಿಕಾಲೋನೊಯವರು.ಮಾನಸ ಗಂಗೋತ್ರಿಯಲ್ಲಿ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ದೇವನೂರ ಮಹಾದೇವ ಅವರ ಸಹಪಾಠಿಯಾಗಿದ್ದ ಸಾಗರ ತಮಗಿರುವ ಪರಿಸರ ಕಾಳಜಿಯಿಂದಾಗಿಯೇ ಗಿರಿಜನರೊಟ್ಟಿಗೆ ಬಹುಕಾಲ ಕೆಲಸ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ನಡೆದ ಸಂಪೂರ್ಣ ಸಕ್ಷಾರತ ಆಂದೋಲನದಲ್ಲಿ ಕಾರ್ಯಕ್ರಮ ಸಂಯೋಜನೆಯ ಸಂಪೂರ್ಣ ಹೊಣೆಹೊತ್ತಿದ್ದ ಕ್ಷೀರಸಾಗರ ಗಿರಿಜನರ ಬದುಕು ಬವಣೆ ಕುರಿತು "ಜೇನು ಆಕಾಶದ ಅರಮನೆಯೂ" ಎಂಬ ಕಾದಂಬರಿಯನ್ನು ಭೂ ಸುಧಾರಣೆ ಕುರಿತು "ದಿಕ್ಕು ತಪ್ಪಿದ ಕನರ್ಾಟಕ ಭೂ ಸುಧಾರಣೆ" ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಪಕ್ಷಿ ಮತ್ತು ಪರಿಸರವನ್ನು ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.1984 ರಿಂದ 2002 ರವರೆಗೆ ಫೆಡಿನ ವಿಕಾಸ (ವಿವಿಧ ಕಾಡುಕುರುಬರ ಸಂಘ) ದೊಂದಿಗೆ ಸೇರಿಕೊಂಡು ವಿವಿಧ ಸಂಘಟನೆಗಳೊಂದಿಗೆ ಸೇರಿ ಸುಮಾರು ಎಂಟು ಸಾವಿರ ಎಕರೆ ಭೂಮಿಯನ್ನು ಕಾಡು ಕುರುಬರಿಗೆ ಸಿಗುವಂತೆ ಮಾಡಿದ್ದಾರೆ. ಸಧ್ಯ ಈಗ ಗದ್ದಿಗೆ-ಎಚ್.ಡಿ.ಕೋಟೆ ಮುಖ್ಯರಸ್ತೆಯಲ್ಲಿ ಬರುವ ವಡ್ಡರಗುಡಿ ಬಳಿಯ ತಮ್ಮ ನಾಲ್ಕು ಎಕರೆ ಹಸಿರು ಸಾವಯವ ತೋಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ವಿವಿಧ ಪ್ರಯೋಗದಲ್ಲಿ ನಿರತರಾಗಿದ್ದಾರೆ.
ಅವರೊಂದಿಗೆ ನಾವು ತೋಟದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದಂತೆ, ಪಕ್ಕನೇ ಬಿಳಿಯ ಬಣ್ಣದ ಹಕ್ಕಿಯೊಂದು ನಮ್ಮ ಕಣ್ಣಮುಂದೆ ಪುರ್ರನೇ ಹಾರಿ ಹೋಯಿತು.ತಕ್ಷಣ ಅಲ್ಲೇ ನಿಂತ ಕ್ಷೀರಸಾಗರ ತೋಟವನ್ನು ಬಿಟ್ಟು ಆ ಹಕ್ಕಿಯ ಬಗ್ಗೆ ಮಾತನಾಡತೊಡಗಿದರು. ಆ ಹಕ್ಕಿಯನ್ನು ನೋಡಿದ್ರಾ, ಅದು ವೈಟ್ ಬ್ರಾಡ್ ಬುಲ್ ಬುಲ್ ಅಂತ ಅದರ ಹೆಸರು. ಅದು ಇಲ್ಲಿ ಕಾಣಸಿಗುವುದು ಅಪರೂಪ. ಅದು ಇಲ್ಲಿಗೆ ಯಾಕೆ ಬಂದಿರಬಹುದು.ಬಹುಶಃ ಬಾಳೆಯ ಹಣ್ಣುಗಳು ಕೊಳೆತು ಬಿದ್ದಿರುವ ಹಣ್ಣಗಳನ್ನು ತಿನ್ನಲು ಬಂದಿರಬಹುದು.ಮುರ್ನಾಲ್ಕು ದಿನಗಳಿಂದ ನೋಡುತ್ತಿದ್ದೇನೆ ಅದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕು ಎಂದರು.
ಪೂರ್ಣಚಂದ್ರತೇಜಸ್ವಿಯವರಂತೆ ಅವರಿಗಿದ್ದ ಪರಿಸರ ಕುತೂಹಲವನ್ನು ಗಮನಿಸಿದ ನಾವು ಸಾರ್ ಇದೆಲ್ಲಾ ಹೇಗಾಯ್ತು, ನೀವು ಕಟ್ಟಿದ ತೋಟದ ಬಗ್ಗೆ ಹೇಳ್ತೀರಾ ಅಂತ ಮೊದಲ ಬಾರಿಗೆ ಮಾತಿಗೆಳೆದವು, ಅವರು ಹೇಳುತ್ತಾ ಹೋದರು...
ಇದು ಸಂಪೂರ್ಣ ನೈಸಗರ್ಿಕ ಕೃಷಿ ತೋಟ. ಇಲ್ಲಿ ಮಾನವ ಮತ್ತು ಯಂತ್ರಗಳ ಹಸ್ತಕ್ಷೇಪ ತುಂಬಾ ಕಡಿಮೆ. ಆರಂಭದಲ್ಲಿ ಗಿಡ ನೆಡುವಾಗ ದನದ ಗೊಬ್ಬರದ ಜೊತೆಗೆ ಬೇವಿನ ಹಿಂಡಿ, ಟ್ರೈಕೋಡಮರ್ಾ ಜೀವಾಣುಗಳನ್ನು ಮಿಶ್ರಣಮಾಡಿ ಪ್ರತಿ ಗಿಡಕ್ಕೂ ನೀಡಲಾಗಿದೆ. ನಂತರ ಮಣ್ಣಿಗೆ ಮುಚ್ಚಿಗೆಯಾಗಿ ಉರುಳಿಯನ್ನು ಭಿತ್ತಿ,ಅದು ಹೂವು ಬಿಡುವ ಹಂತದಲ್ಲಿ ಅಲ್ಲೇ ಉಳುಮೆ ಮಾಡಿ ಮಣ್ಣಿಗೆ ಸೇರಿಸುತ್ತಾ ಬಂದೆ.ಭೂಮಿಯಲ್ಲಿ ತೇವಾಂಶ ಕಾಪಾಡಿಕೊಂಡು ಜೀವಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಈ ಕ್ರಮ ಅನುಸರಿಸಲಾಯಿತು.
ಕಳೆದ ಐದು ವರ್ಷಗಳಿಂದ ನಮ್ಮ ಭೂಮಿಗೆ ಯಾವುದೇ ವಿಷಕಾರಿ ಪದಾರ್ಥಗಳನ್ನು ಸೇರಿಸಿಲ್ಲ. ನಮ್ಮದು ಸಂಪೂರ್ಣ ಸಾವಯವ ಕೃಷಿ ತೋಟ.ಇಲ್ಲಿ 140 ತೆಂಗು,1200 ಅಡಿಕೆ, 200 ಸಪೋಟ,125 ನಿಂಬೆ,10 ಬಟರ್ ಪ್ರೂಟ್, 15 ಮೂಸಂಬಿ,12 ಕಿತ್ತಳೆ,15 ವಿವಿಧ ತಳಿಯ ಮಾವು, 500 ಮೆಣಸು ಇದರೊಂದಿಗೆ ವಾಣಿಜ್ಯ ಬೆಳೆಗಳಾಗಿ ನುಗ್ಗೆ ಮತ್ತು ಪಪ್ಪಾಯಿ ಗಿಡಗಳನ್ನು ಸಮಿಶ್ರ ಪದ್ಧತಿ ವಿಧಾನದಲ್ಲಿ ಬೆಳೆಯಲಾಗಿದೆ.
ಇದರಿಂದ ಲಕ್ಷಾಂತರ ಆದಾಯ ಬರುತ್ತಿರಬಹುದು ಎನ್ನುವುದು ನಿಮ್ಮ ನಿರೀಕ್ಷೆ ಆಗಿದ್ದರೆ. ಅದು ಸುಳ್ಳು. ಇದುವರೆಗೂ ನಯಾ ಪೈಸೆ ಆದಾಯ ಬಂದಿಲ್ಲ.ಆರೋಗ್ಯ ಮಾತ್ರ ಸುಧಾರಿಸಿದೆ.ಕಳೆದ ಐದು ವರ್ಷದಿಂದ ಇಲ್ಲಿಯವರೆಗೆ ಒಟ್ಟು ಸುಮಾರು 12 ಲಕ್ಷ ರೂಪಾಯಿಗಳನ್ನು ಖಚ್ಚರ್ುಮಾಡಿದ್ದೇನೆ. ಆರಂಭದಲ್ಲಿ ನೀರಿಗಾಗಿ ಒಂದೆರಡು ಬೋರ್ವೆಲ್ ಕೊರೆಸಿದೆ. ನೀರು ಬರಲಿಲ್ಲ. ಕೊನೆಗೆ ಧೈರ್ಯಮಾಡಿ ಮತ್ತೊಂದು ಬೊರ್ವೆಲ್ ಕೊರೆಸಿದೆ. ಅದರಲ್ಲಿ ಸುಮಾರು ಎರಡುವರೆ ಇಂಚು ನೀರು ಬಂತು. ಇಡೀ ನಾಲ್ಕು ಎಕರೆ ತೋಟದಲ್ಲಿ ಬೆಳೆದು ನಿಂತಿರುವ ಸುಮಾರು ಹದಿನೈದು ವಿವಿಧ ಜಾತಿಯ ಗಿಡಮರಗಳಿಗೆ ಈ ಒಂದೇ ಬೋರ್ವೆಲ್ನಿಂದ ಹನಿ ನೀರಾವರಿಯಲ್ಲಿ ನೀರು ಕೊಡುತ್ತಿದ್ದೇನೆ.ಹನಿ ನೀರಾವರಿಗಿಂತ ಸ್ಪಿಂಕ್ಲರ್ ಪದ್ಧತಿ ಅಳವಡಿಸಿಕೊಂಡರೆ ಒಳ್ಳೆಯದು ಎನ್ನುವುದು ಈಗ ಅನುಭವಕ್ಕೆ ಬಂದಿದೆ.
ಸೋಲಾರ್ ಬೇಲಿ ನಿಮರ್ಾಣ.ಬೋರ್ವೆಲ್ ಮತ್ತು ಬೇರೆ ಬೇರೆ ನರ್ಸರಿಗಳಿಂದ ತಂದು ನೆಟ್ಟಗಿಡಗಳು ಎಲ್ಲಾ ಸೇರಿ 12 ಲಕ್ಷ ರೂಪಾಯಿ ವೆಚ್ಚಮಾಡಿದ್ದೇನೆ. ಈ ವರ್ಷದಿಂದ ಆದಾಯ ನಿರೀಕ್ಷೆಮಾಡಬಹುದು ಎಂದು ಕ್ಷೀರಸಾಗರ ನಕ್ಕರು.
ಬಾಳೆ,ಟೊಮಟೋ,ಹರಿಶಿನ ಹೀಗೆ ನಾನಾ ತೋಟಗಾರಿಕೆ ಬೆಳೆದು ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯಗಳಿಸುವ ರೈತರ ಬಗ್ಗೆ ಕೇಳಿದ್ದ ನಮಗೆ ಐದು ವರ್ಷಗಳಿಂದಲ್ಲೂ ನಯಾಪೈಸೆ ಆದಾಯ ಇಲ್ಲದೇ ಬೇಸಾಯ ಮಾಡುತ್ತಿರುವ ಸಾಗರ ನಮ್ಮ ಕಣ್ಣಿಗೆ ವಿಚಿತ್ರವಾಗಿ ಕಂಡರು.ಆದಾಯವಿಲ್ಲದ ಬೇಸಾಯ ಯಾಕೆ? ಖುಶಿಗಾಗಿ, ಫ್ಯಾಶನ್ಗಾಗಿ ಕೃಷಿಮಾಡಿದರೆ ರೈತ ಬದುಕಲು ಸಾಧ್ಯವೇ ಎನ್ನುವುದು ನಮ್ಮ ಪ್ರಶ್ನೆಯಾಗಿತ್ತು.
ಕ್ಷೀರಸಾಗರ್ ವಿವರಿಸುತ್ತಾ ಹೋದರು... ನೋಡಿ ನಾಲ್ಕು ಎಕರೆ ಜಮೀನಿನಲ್ಲಿ ಒಂದು ಕುಟುಂಬ ನೆಮ್ಮದಿಯಿಂದ ಜೀವನ ಮಾಡುವಷ್ಟು ಆದಾಯ ಬಂದೇ ಬರುತ್ತದೆ. ಸುಸ್ಥಿರವಾದ ಕೃಷಿಮಾಡುವಾಗ, ಅದರಲ್ಲೂ ಯಾವುದೇ ರಾಸಾಯನಿಕ,ಕ್ರಮಿನಾಶಕಗಳನ್ನು ಬಳಸದೆ, ಹೊರಸುಳಿಗಳ ಹಂಗಿಲ್ಲದೇ ಜಮೀನಿನಲ್ಲೇ ಬೆಳೆದ ಸೆತ್ತೆ ಸೆದೆ, ಹಸಿರು ಗೊಬ್ಬರಗಳನ್ನು ಬಳಸಿಕೊಂಡು ವ್ಯವಸಾಯ ಮಾಡುವಾಗ ತತ್ಕ್ಷಣದ ಲಾಭವನ್ನು ನಿರೀಕ್ಷೆಮಾಡಬಾರದು.
ಹಾಗಂತ ಬೇಸಾಯಮಾಡುವ ಕುಟುಂಬ ನಷ್ಟಮಾಡಿಕೊಂಡು ಕೃಷಿ ಮಾಡಬೇಕಾಗಿಲ್ಲ.ಆರಂಭದಲ್ಲಿ ನಾನು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಮಾತು ಕೇಳಿಕೊಂಡು ಆದಾಯದಲ್ಲಿ ನಷ್ಟ ಅನುಭವಿಸಿದೆ.ಬಾಗಲಕೋಟ ಕೃಷಿ ವಿಶ್ವವಿದ್ಯಾನಿಲಯದವರ ನೂತನವಾಗಿ ಸಂಶೋದನೆ ಮಾಡಿದ್ದ ಭಾಗ್ಯ ತಳಿಯ 600 ನುಗ್ಗೆಗಿಡಗಳನ್ನು ನಾಟಿಮಾಡಿದೆ. ಗಿಡಗಳು ತುಂಬಾ ಹುಲುಸಾಗಿ ಚೆನ್ನಾಗಿ ಬಂದವು. ಆದರೆ 600 ಗಿಡದಲ್ಲಿ ಕೇವಲ ಹತ್ತೇ ಹತ್ತು ಗಿಡಗಳು ಮಾತ್ರ ಕಾಯಿ ಬಿಟ್ಟವು. ಹಾಗೇ ಸೂರ್ಯ ತಳಿಯ ಪಪ್ಪಾಯ ಗಿಡಗಳನ್ನು ಬೆಳೆದು ಹಣ್ಣು ಬಿಡದೇ ನಷ್ಟ ಅನುಭವಿಸಿದೆ.ತಳಿಯ ಆಯ್ಕೆಯಲ್ಲಿ ನಾನು ಸ್ವಲ್ಪ ಮುಂಜಾಗ್ರತೆ ವಹಿಸಿದ್ದರೆ ನಷ್ಟ ತಪ್ಪಿಸಿ ಆದಾಯಗಳಿಸಬಹುದಿತ್ತು.
ನನಗೆ ಬಾರಿ ಹೊಡೆತ ಕೊಟ್ಟದ್ದು ಬಾಳೆ. 2000 ಜಿ 9 ತಳಿಯ ಬಾಳೆಯನ್ನು ನಾಟಿಮಾಡಿ,ಸಾವಯವ ಪದ್ಧತಿಯಲ್ಲೇ ಬೆಳೆಸಿದೆ. ಗಿಡಗಳು ಸಮೃದ್ಧವಾಗಿ ಬೆಳೆದು,ಒಂದೊಂದು ಗೊನೆಗಳು ಕನಿಷ್ಠ 25 ರಿಂದ 30 ಕೆಜಿವರೆಗೂ ಬಂದವು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬಾಳೆಹಣ್ಣಿಗೆ ಕೇವಲ ಎರಡು ರೂಪಾಯಿ ಬೆಲೆಬಂತು.ಒಂದು ಗೊನೆಯನ್ನು ಕಡಿಯಲು ಆಗುವ ವೆಚ್ಚವೂ ಕೈಗೆ ಬರದಿದ್ದರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಾದರೂ ಹೇಗೆ?. ಅದಕ್ಕೆ ಒಂದಷ್ಟು ಗೊನೆಗಳನ್ನು ಗಿರಿಜನ ಮಕ್ಕಳ ಶಾಲೆಗೆ ಕಡಿದು ಸ್ವತಃ ನಾನೇ ತೆಗೆದುಕೊಂಡು ಹೋಗಿ ಕೊಟ್ಟು ಬಂದೆ. ಒಂದಷ್ಟು ಗೊನೆಗಳು ಗಿಡದಲ್ಲೇ ಹಣ್ಣಾಗಿ, ಕೊಳೆತು ಪಕ್ಷಿಗಳಿಗೆ ಆಹಾರವಾಗಿ ಮಣ್ಣಿಗೆ ಸೇರಿ ಒಳ್ಳೆಯ ಗೊಬ್ಬರವಾದವು.
ನೆನಪಿರಲಿ,ನಾನು ಇಡೀ ತೋಟವನ್ನು ನೋಡಿಕೊಳ್ಳಲು ಯಾವುದೇ ಕೂಲಿ ಆಳನ್ನು ಅವಲಂಬಿಸಿಲ್ಲ. ಗಿಡ ನೇಡುವಾಗ, ಗೊಬ್ಬರ ಹಾಕುವಾಗ ಅಗತ್ಯ ಬಿದ್ದಾಗಷ್ಟೇ ಆಳನ್ನು ಕರೆದುಕೊಳ್ಳುತ್ತೇನೆ. ಉಳಿದಂತೆ ತೋಟದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ. ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಪ್ರತಿಪಾದಕ ಸುಭಾಷ್ ಪಾಳೇಕರ್ ಅವರ ಪ್ರಭಾವಕ್ಕೆ ಒಳಗಾಗಿ ಆರಂಭದ ಒಂದೆರಡು ವರ್ಷ ಗಿಡಗಳಿಗೆ ಜೀವಾಮೃತ ನೀಡಿದೆ. ನಾನು ಯಾವ ಹಸುಗಳನ್ನು ಇಲ್ಲಿ ಸಾಕದೇ ಇರುವುದರಿಂದ ಅದನ್ನು ಮುಂದುವರಿಸಲು ಕಷ್ಟವಾಗಿ ನಿಲ್ಲಿಸಿಬಿಟ್ಟೆ. ಈಗ ಅಗತ್ಯ ಬಿದ್ದಾಗ ಇಡೀ ತೋಟಕ್ಕೆ ಏಕದಳ, ದ್ವಿದಳ ಧಾನ್ಯಗಳನ್ನು ಮಿಶ್ರಣಮಾಡಿ ಭಿತ್ತಿ, ಅದನ್ನೇ ಹಸಿರು ಗೊಬ್ಬರವಾಗಿ ಪವರ್ ಟಿಲ್ಲರ್ನಿಂದ ಉಳುಮೆಮಾಡಿ ಭೂಮಿಗೆ ಸೇರಿಸಿಬಿಡುತ್ತೇನೆ.ಇದಲ್ಲದೇ ಭೂಮಿಯಲ್ಲಿ ಬೆಳೆಯುವ ಸೆತ್ತೆಸೆದೆ, ಗಿಡಗಳ ಎಲೆ ಎಲ್ಲವನ್ನು ಮಣ್ಣಿಗೆ ಮುಚ್ಚಿಗೆಯಾಗಿ ಬಳಸುತ್ತೇನೆ.ವರ್ಷಕ್ಕೆ ಒಂದು ಬಾರಿ ಕೊಟ್ಟಿಗೆ ಗೊಬ್ಬರ ಖರೀದಿಸಿ ಅದಕ್ಕೆ ಬೇವಿನಹಿಂಡಿ, ಟ್ರೈಕೋಡಮರ್ಾ ಜೀವಾಣುಗಳನ್ನು ಮಿಶ್ರಣಮಾಡಿ ಪ್ರತಿ ಗಿಡಗಳಿಗೂ ಕೊಡುತ್ತೇನೆ. ಉಳಿದಂತೆ ಇಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ.
ಈ ವರ್ಷದಿಂದ ಆದಾಯದ ನಿರೀಕ್ಷೆ ಇದೆ. ಪಚ್ಚಾಬಾಳೆ ಎರಡನೇ ಕೂಳೆಗೆ ಏನು ಖಚರ್ುಮಾಡದಿದ್ದರು ಚೆನ್ನಾಗಿದೆ. ಈ ಬಾರಿ ಕನಿಷ್ಟ ಕೆಜಿಗೆ 10 ರಿಂದ 12 ರೂಪಾಯಿ ಸಿಕ್ಕರೂ ಮೂರು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ತೆಂಗು, ಅಡಿಕೆ, ನಿಂಬೆ, ಮೂಸಂಬಿ ಹೀಗೆ ನಾನಾ ಜಾತಿಯ ಹಣ್ಣಿನ ಗಿಡಗಳು ಉತ್ತಮ ಫಸಲು ಬಿಟ್ಟಿದ್ದು ಇವು ಇನ್ನುಮುಂದೆ ನಿರಂತರವಾಗಿ ಆದಾಯ ತಂದು ಕೊಡುವ ಮೂಲಗಳಾಗಿವೆ.
ನಮ್ಮ ರೈತರು ಕನಿಷ್ಟ ಐದು ವರ್ಷ ಹೆಚ್ಚಿನ ಆದಾಯ ನಿರೀಕ್ಷೆ ಮಾಡದೆ,ನೆಮ್ಮದಿಯ ಬದುಕಿಗಾಗುಷ್ಟು ಉತ್ಪನ್ನಗಳನ್ನಾ ಬೆಳೆದುಕೊಂಡು ಹೀಗೆ ಮಿಶ್ರ ಪದ್ಧತಿಯಲ್ಲಿ ಬೇಸಾಯ ಕ್ರಮ ರೂಢಿಸಿಕೊಂಡರೆ ಸುಸ್ಥಿರವಾದ ಬದುಕು ಕಟ್ಟಿಕೊಳ್ಳಬಹುದು. ಕಡಿಮೆ ಖಚರ್ುಮಾಡಿ, ನಿರಂತರವಾಗಿ ಆದಾಯಗಳಿಸುತ್ತಾ ಹೋಗಬಹುದು.ವಿಷಮುಕ್ತ ಆಹಾರ ಬೆಳೆಯುವ ಮೂಲಕ ಪರಿಸರವನ್ನು ಕಾಪಾಡಿಕೊಂಡು,ಉತ್ತಮ ಆರೋಗ್ಯವನ್ನು ಪಡೆಯಬಹುದು. ತಾವು ಬೇಸಾಯ ಮಾಡುವ ಭೂಮಿಯಲ್ಲಿ ಬೆಳೆಯಬಲ್ಲಂತಹ ಹಲವು ಬೆಳೆಗಳನ್ನು ಸಂಯೋಜಿಸಿ ಮಿಶ್ರ ಪದ್ಧತಿಯಲ್ಲಿ, ನೈಸಗರ್ಿಕ ವಿಧಾನದಿಂದ ಬೆಳೆದಾಗ ಮಾತ್ರ ರೈತ ಸಾಲಮುಕ್ತನಾಗಿ ನೆಮ್ಮದಿ ಕಂಡುಕೊಳ್ಳಬಹುದು ಎನ್ನುವುದು ಕ್ಷೀರಸಾಗರ ಅವರ ದೃಢವಾದ ಮಾತು. ಹೆಚ್ಚಿನ ಮಾಹಿತಿಗಾಗಿ 9481321246 ಸಂಪಕರ್ಿಸಬಹುದು.                                                     ಚಿನ್ನಸ್ವಾಮಿವಡ್ಡಗೆರ