vaddagere.bloogspot.com

ಭಾನುವಾರ, ಆಗಸ್ಟ್ 28, 2016



ಕಾಡು ಕೃಷಿಯ ನಡುವೆ "ಕಾಫಿ"ಯ ಘಮಲು

ಸಮಗ್ರ ಬೇಸಾಯದಲ್ಲಿ ಸಾಧನೆಮಾಡಿದ ರಾವ್ ಸಹೋದರರು

 ಈಗ ಎಲ್ಲ ಕಡೆ ಹೆಬ್ಬೇವು ಕೃಷಿಯದೆ ಮಾತು. ತುರು ಬೇವು, ಚುರುಕ್ ಬೇವು, ಮಿಲಿಯಾ ದುಬಿಯಾ, ಹೀಗೆ ನಾನಾ ಹೆಸರಿನಿಂದ ಕರೆಯುವ ಮರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಫ್ಲೈ ಹುಡ್ ಫ್ಯಾಕ್ಟರಿಗಳು ನಡೆಯುವುದೆ ಈ ಮರಗಳಿಂದ. ಅಂತಹ ಮರಗಳನ್ನು ಬೆಳೆದು ನಡುವೆ ಸಮಿಶ್ರ ಬೇಸಾಯ ಮಾಡಿ ನಿರಂತರ ಆದಾಯದ ಮೂಲಮಾಡಿಕೊಂಡಿರುವ ರಘುನಾಥ್ ರಾವ್ ಸಹೋದರರ ಸಾಧನೆ ನಮ್ಮ ಯುವಕರಿಗೆ ಸ್ಫೂತರ್ಿಯಾಗಬಲ್ಲದು.

ಹುಣಸೂರು : ನಮ್ಮ ಕೃಷಿ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದೆ. ಅನಿಶ್ಚಿತ ಮಳೆ,ಕೂಲಿ ಕಾಮರ್ಿಕರ ಸಮಸ್ಯೆ,ಕಾಡು ಪ್ರಾಣಿಗಳ ಹಾವಳಿ,ಸಸ್ಯಗಳ ಆಯ್ಕೆ,ಯಾವುದನ್ನ ಬಿಡಬೇಕು ಮತ್ಯಾವುದನ್ನ ಕಟ್ಟಿಕೊಳ್ಳಬೇಕು ಹೀಗೆ ನಾನಾ ರೀತಿಯ ಸಮಸ್ಯೆಗಳ ಬಲೆಯಲ್ಲಿ ಸಿಲುಕಿರುವ ರೈತ ಪರಿಹಾರ ಕಾಣದೆ ಪರಿತಪಿಸುತ್ತಿದ್ದಾನೆ.
ಆದರೆ ಅಲ್ಲೊಬ್ಬ ಇಲ್ಲೊಬ್ಬ ಸಾಹಸಿ ರೈತ ತನ್ನ ಮಟ್ಟದ್ದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಇರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿ ಯಶಸ್ಸುಹೊಂದಿ "ಬಂಗಾರದ ಮನುಷ್ಯ" ರಾಗಿ ಸಮಾಜಕ್ಕೆ ಮಾದರಿಯಾದ ಉದಾಹರಣೆಗಳು ಸಾಕಷ್ಟಿವೆ.
ಇಂತಹ ವಿಶಿಷ್ಠ ಮಾದರಿಗೆ ಸಾಕ್ಷಿಯಾದವರು ದೌಲತ್ ರಾವ್ ಮತ್ತು ರಘುನಾಥ್ ರಾವ್ ಸಹೋದರರು. ಹುಣಸೂರು ತಾಲೂಕು ಗಾವಡಗೆರೆ (ಕೆ.ಆರ್.ನಗರಕ್ಕೂ ಹತ್ತಿರ) ಸಮೀಪ ಇರುವ ನಾಲ್ಕು ಎಕರೆ ಪ್ರದೇಶದಲ್ಲಿ ಇವರು ಮಾಡಿರುವ ಕಾಡುಕೃಷಿ ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಕೇವಲ ನಾಲ್ಕೇ ನಾಲ್ಕು ವರ್ಷದಲ್ಲಿ ಇವರು ಸೃಷ್ಠಿಸಿರುವ ಕಾಡು ಕಣ್ಮನಸೆಳೆಯುತ್ತಿದೆ.
ಅಡ್ಡಿಯಾಗದ ಸಕರ್ಾರಿ ನೌಕರಿ :
ಸಕರ್ಾರಿ ನೌಕರಿಯಲ್ಲಿರುವವರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಮಯವಿರುವುದಿಲ್ಲ ನಿಜ. ಜೊತೆಗೆ ಆಳನ್ನ ನಂಬಿ ಮಾಡಿದ ಬೇಸಾಯ ಆಳು ಎಂಬ ಮಾತು ಸತ್ಯ.ಆದರೆ ಇದನ್ನೆ ಒಂದು ಸವಾಲಾಗಿ ಸ್ವೀಕರಿಸಿದವರು ರಘುನಾಥ್ ರಾವ್.
ಇವರು ಸಕರ್ಾರಿ ನೌಕರ. ವೀರಾಜಪೇಟೆಯ ತಾಲೂಕು ಕಚೇರಿಯಲ್ಲಿ ಸವರ್ೇಯರ್ ಆಗಿ ಕೆಲಸ. ಇವರ ಸಹೋದರ ಕೃಷಿಕ. ಒಬ್ಬರದು ಯೋಜನೆ ಮತ್ತೊಬ್ಬರದು ಅದನ್ನು ಜಮೀನಿನಲ್ಲಿ ಜಾರಿ ಮಾಡುವ ಕೆಲಸ. ಇಬ್ಬರು ಸಹೋದರರು ಶ್ರದ್ಧೆಯಿಂದ ಕಟ್ಟಿದ ತೋಟ ಅರಣ್ಯ ಇಲಾಖೆಯ ಗಮನ ಸೆಳೆದಿದೆ. ಅಲ್ಲದೆ ಪ್ರತಿ ವರ್ಷ ಬೆಂಗಳೂರಿನಿಂದ ಬರುವ ಕೃಷಿ ವಿಜ್ಞಾನಿಗಳ ಪ್ರಯೋಗಶಾಲೆಯಾಗಿದೆ. ಕೆಲವು ಮರಗಳಿಗೆ ಈ ವಿಜ್ಞಾನಿಗಳು ಗುರುತು ಮಾಡಿದ್ದು ಪ್ರತಿ ವರ್ಷ ಬಂದು ಅವುಗಳನ್ನು ಅಧ್ಯಯನ ಮಾಡುತ್ತಾರೆ. ಪ್ರತಿ ವರ್ಷ ಮರದ ಸುತ್ತಳತೆ ವೇಗವಾಗಿ ಬೆಳೆಯುತ್ತಿರುವುದು ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಮೂರು ಎಕರೆ ಪ್ರದೇಶದಲ್ಲಿರುವ ಕಾಡು ಕೃಷಿ ತೋಟದಲ್ಲಿ ನಾಲ್ಕು ವರ್ಷದ 500 ಹೆಬ್ಬೇವು, 450 ಸಿಲ್ವರ್, ಎರಡು ವರ್ಷದ 2100 ಕಾಫಿ ಗಿಡ, ಮೆಣಸು ಹೀಗೆ ನಾನಾ ರೀತಿಯ ಮರಗಿಡಗಳನ್ನು ಸಮಿಶ್ರ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆದು ಸುತ್ತ ಮತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.
ಸಮಗ್ರ, ಸಮಿಶ್ರ ಬೇಸಾಯ :
ಹೆಬ್ಬೇವು ಹಾಕಿದ ಮೊದಲ ಎರಡು ವರ್ಷ ಸಮಿಶ್ರ ಬೆಳೆಯಾಗಿ ಮುಸುಕಿನ ಜೋಳ ಮತ್ತು ಪಪ್ಪಾಯ ಹಾಕಿ ಯಾವುದೆ ಕ್ರಿಮಿನಾಶಕ ಸಿಂಪಡಿಸದೆ ಉತ್ತಮ ಇಳುವರಿ ಪಡೆದು ಸಾಕಷ್ಟು ಆದಾಯವನ್ನು ಪಡೆದುಕೊಂಡಿದ್ದಾರೆ. ಮಾವು, ಸಪೋಟ, ನೇರಳೆ ಮತ್ತಿತರ ಹಣ್ಣಿನ ಗಿಡಗಳನ್ನು ಹಾಕಿಕೊಂಡಿದ್ದು ಮನೆಗೆ ಬೇಕಾದ ಹಣ್ಣು ತರಕಾರಿಗಳನ್ನು ಅಲ್ಲೇ ಬೆಳೆದುಕೊಳ್ಳುವ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆಇಟ್ಟಿದ್ದಾರೆ. ತೋಟದ ಸುತ್ತ 150 ಅಡಿಕೆ, 15 ತೆಂಗಿನ ಗಿಡಗಳನ್ನು ಹಾಕಲಾಗಿದ್ದ ತೋಟದ ಪ್ರತಿ ಇಂಚು ಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಇದಲ್ಲದೆ ಅಲ್ಲೆ ಸಮೀಪದಲ್ಲಿರುವ ಮತ್ತೊಂದು ಎಕರೆ ಪ್ರದೇಶದಲ್ಲಿ 700 ಹಕರ್ಿಲೆಸ್ ಗಿಡಗಳನ್ನು ಹಾಕಿದ್ದು ಅವು ಈಗ ಮರವಾಗಿ ಕಾಡಿನಂತೆ ಕಾಣುತ್ತಿದೆ. ಮುಂದಿನ ಹದಿನೈದು ವರ್ಷಕ್ಕೆ ಅದರಿಂದಲ್ಲೂ ಲಕ್ಷಾಂತರ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ರಘುನಾಥ್ ರಾವ್ ಅವರಿಗೆ ಪಿತಾಜರ್ಿತವಾಗಿ ಬಂದ ನಾಲ್ಕು ಎಕರೆ ಖುಷ್ಕಿ ಜಮೀನು ಈಗ ನೋಡಿದವರು ಅಚ್ಚರಿ ಪಡುವಂತೆ ಕಾಡಾಗಿ ಮಾರ್ಪಡಾಗಿದೆ.ಇದರ ಹಿಂದೆ ಸಹೋದರರ ಜಾಣ್ಮೆ ಮತ್ತು ಪರಿಶ್ರಮ ಕಣ್ಣಿಗೆ ಕಾಣುವಂತೆ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ.
ಸಮಸ್ಯೆಗಳಿಗೆ ಕಂಡ ಉತ್ತರ :
ನಾನೊಬ್ಬ ಸಕರ್ಾರಿ ನೌಕರ.ಆಳುಕಾಳು ಕಟ್ಟಿಕೊಂಡು ವ್ಯವಸಾಯ ಮಾಡಿಸುವುದು ನನ್ನಂತಹವರಿಗೆ ಕಷ್ಟ.ನಾವು ದನಕರುಗಳನ್ನು ಸಾಕಿಕೊಂಡಿಲ್ಲ.ಇರುವ ಜಮೀನನ್ನು ಪಾಳು ಬಿಡುವುದು ಇಷ್ಟ ಇರಲಿಲ್ಲ.ಗುತ್ತಿಗೆಗೆ ಕೊಟ್ಟರೆ ವರ್ಷಕ್ಕೆ ನಾಲ್ಕು ಎಕರೆಯಿಂದ ಹತ್ತು ಸಾವಿರ ರೂ. ಸಿಗಬಹುದಿತ್ತು ಅಷ್ಟೆ. ಅದಕ್ಕಾಗಿ ನಾವೇ ಏನಾದರೂ ಮಾಡೋಣ ಅಂತ ಯೋಚಿಸುತ್ತಿದ್ದೆ. ಆಗ ಹೊಳೆದದ್ದೆ ಈ ಕಾಡು ಕೃಷಿ ಕಲ್ಪನೆ.
ಹೆಚ್ಚು ಆಳುಗಳನ್ನು ಬೇಡದ, ಹೆಚ್ಚು ಕೆಲಸವನ್ನು ಕೇಳದ ಈ ಬಗ್ಗೆಯ ಕೃಷಿ ನನಗೆ ತುಂಬಾ ಇಷ್ಟವಾಯಿತು. ಮೊದಲಿಗೆ ನಮ್ಮ ತಾಲೂಕಿನ ಸುತ್ತಮುತ್ತ ಇರುವ ಬೇರೆ ಬೇರೆ ಹೆಬ್ಬೇವು ತೋಟಗಳನ್ನು ನೋಡಿಕೊಂಡು ಬಂದೆ. ನಂತರ ಒಂದು ದೃಢವಾದ ತೀಮರ್ಾನಕ್ಕೆ ಬಂದು ನನ್ನ ಸಹೋದರನ ಜತೆ ಮಾತನಾಡಿ, ಸಾದಾರಣವಾಗಿ ಮಳೆಯಾಗುತ್ತಿದ್ದ ಈ ಪ್ರದೇಶದಲ್ಲಿ ಮೊದಲಿಗೆ ಒಂದು ಬೋರ್ವೆಲ್ ಕೊರೆಸಿದೆವು. ಎರಡುವರೆ ಇಂಚಿನಷ್ಟು ಒಳ್ಳೇಯ ನೀರು ಬಂತು. ನಂತರ ಬೇರೆ ಏನು ಯೋಚನೆಮಾಡದೆ ಹೆಬ್ಬೇವು ಮತ್ತು ಸಿಲ್ವರ್ ಗಿಡಗಳನ್ನು ನೆಡಲು ತೀಮರ್ಾನಿಸಿದೆವು.
ಗಿಡ ಬೆಳೆಸಲು ಸಹಾಯ ಧನ : ನಮ್ಮ ಎಷ್ಟೊ ರೈತರಿಗೆ ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ಸಕರ್ಾರ ಹಣ ಕೊಡುತ್ತಿದೆ ಎನ್ನುವುದೆ ಗೊತಿಲ್ಲ. ಅರಣ್ಯ ಇಲಾಖೆ ಇದಕ್ಕಾಇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಅದಕ್ಕಾಗಿ ನಮ್ಮ ರೈತರು ಇಲಾಖೆಯನ್ನು ಸಂಪಕರ್ಿಸಬೇಕು ಅಷ್ಟೆ. ನಾವು ಮೊದಲಿಗೆ ಅರಣ್ಯ ಇಲಾಖೆಯವರನ್ನು ಸಂಪಕರ್ಿಸಿದೆವು. ಭೂಮಿಯನ್ನು ಹಸಿರಿಕರಣ ಮಾಡಲು ಮುಂದಾಗಿರುವ ಅರಣ್ಯ ಇಲಾಖೆಯವರು ಯೋಜನೆಯೊಂದರ ಅಡಿ ಒಟ್ಟು ಸಾವಿರ ಗಿಡಗಳನ್ನು ನೆಟ್ಟು ನಿರ್ವಹಣೆಮಾಡಲು ಸಹಾಯ ಧನ ಕೊಡುವುದಾಗಿ ಹೇಳಿದರು. ಅದರಂತೆ ಗಿಡ ಒಂದಕ್ಕೆ ಪ್ರತಿವರ್ಷ ಸಹಾಯ ಧನವಾಗಿ ಮೊದಲ ವರ್ಷ ಐದು ರೂಪಾಯಿಯಂತೆ ಸಾವಿರಗಿಡ ನಿರ್ವಹಣೆಗೆಂದು ಐದು ಸಾವಿರ ಸಹಾಯಧನ ಕೊಟ್ಟರು. ಎರಡನೇ ವರ್ಷ 10 ರೂ. ನಂತೆ ಹತ್ತು ಸಾವಿರ.ಮೂರನೇ ವರ್ಷ 15 ರೂ.ನಂತೆ ಹದಿನೈದು ಸಾವಿರ ಹೀಗೆ ಒಟ್ಟು ಮೂರು ವರ್ಷದಲ್ಲಿ 30 ಸಾವಿರ ಸಹಾಯ ಧನವೂ ನಮಗೆ ದೊರೆಯಿತು.
ಗುಂಡಿ ಮತ್ತು ಅಂತರ ಮುಖ್ಯ:
ಆರಂಭದಲ್ಲಿ ಪ್ರತಿ ಗಿಡಕ್ಕೆ ಮೂರು ರೂಪಾಯಿ ನೀಡಿ ಅರಣ್ಯ ಇಲಾಖೆಯ ನರ್ಸರಿಯಿಂದ ಸಾವಿರ ಗಿಡಗಳನ್ನು ತಂದು ನೆಟ್ಟೆವು. ಗಿಡಗಳನ್ನು ಹನ್ನೆರಡು ಅಡಿ ಉದ್ದ ಮತ್ತು ಹನ್ನೆರಡು ಅಡಿ ಅಗಲ ಬರುವಂತೆ ಗುರುತುಮಾಡಿ ಜೆಸಿಬಿಯಿಂದ ಗುಂಡಿ ತೆಗೆಸಿಕೊಂಡೆವು. ದನದ ಗೊಬ್ಬರ, ಬೇವಿನ ಹಿಂಡಿಯನ್ನು ಗುಂಡಿಗೆ ತುಂಬಿ ನಂತರ ಒಂದು ಸಾಲು ಹೆಬ್ಬೇವು ಗಿಡ ನಂತರದ ಸಾಲ ಸಿಲ್ವರ್ ಗಿಡ ಬರುವಂತೆ ಸಂಯೋಜನೆಮಾಡಿ ಒಂದು ಸಾವಿರ ಗಿಡಗಳನ್ನು ನಾಟಿ ಮಾಡಿದೆವು.
ಯಾವುದೇ ಗಿಡ ಆಳವಾಗಿ ಬೇರು ಬಿಡಲು,ಸದೃಢವಾಗಿ ಬೆಳೆಯಲು ಗುಂಡಿಯನ್ನು ಸಾಕಷ್ಟು ಆಳ ಮತ್ತು ಅಗಲವಾಗಿ (ಎರಡು ಮತ್ತು ಎರಡು ಅಡಿ)ತೆಗೆಯುವುದು ಮುಖ್ಯ. ಆಗಾದಾಗ ಗಿಡಗಳು ಆರೋಗ್ಯವಾಗಿ ಸದೃಢವಾಗಿ ಬೆಳೆಯುತ್ತವೆ ಎನ್ನುವುದು ನಮ್ಮ ಅನುಭವದಿಂದ ಕಂಡುಕೊಂಡ ಸತ್ಯ.
ನಂತರ ಮೊದಲವರ್ಷ ಪ್ರತಿ ಗಿಡದ ಸಾಲಿನಲ್ಲಿ ಎರಡು ಮರಗಳ ನಡುವಿನ ಅಂತರದಲ್ಲಿ ಎರಡು ಪಪ್ಪಾಯ ಗಿಡಗಳನ್ನು ನಾಟಿ ಮಾಡಿದೆವು. ಮಧ್ಯದ ಹನ್ನೆರಡು ಅಡಿ ಜಾಗದಲ್ಲಿ ಮುಸುಕಿನ ಜೋಳ ಭಿತ್ತನೆ ಮಾಡಿದೆವು. ಮುಸುಕಿನ ಜೋಳದಿಂದ ಮೂರೆ ತಿಂಗಳಲ್ಲಿ ಲಕ್ಷ ರೂಪಾಯಿ ಆದಾಯ ಬಂತು. ಪಪ್ಪಾಯದಿಂದ ಏಳು ತಿಂಗಳ ನಂತರ ನಿರಂತರವಾಗಿ ಒಂದುವರೆ ವರ್ಷ ಸಾಕಷ್ಟು ಆದಾಯ ಬಂತು. ಗಿಡಗಳಿಗೆ ನೀರು ಉಣಿಸಲು ಹನಿ ನೀರಾವರಿ ವ್ಯವಸ್ಥೆಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಆಳುಕಾಳುಗಳ ಅಗತ್ಯ ಬೀಳಲಿಲ್ಲ. ನನ್ನ ಸಹೋದರ ದೌಲತ್ ಒಬ್ಬರೆ ಇಡಿ ತೋಟವನ್ನು ಸುಲಭವಾಗಿ ನಿರ್ವಹಣೆಮಾಡಿಕೊಂಡು ಹೋಗುತ್ತಿದ್ದಾರೆ.
ಮಳೆಗಾಲದಲ್ಲಿ ವರ್ಷಕ್ಕೆ ಎರಡು ಬಾರಿ ನಾವು ಗಿಡಗಳಿಗೆ ದನದ ಕಾಂಪೋಸ್ಟ್ ಗೊಬ್ಬರವನ್ನು ಕೊಡುವುದು ಬಿಟ್ಟರೆ ಬೇರೆನೂ ಕೊಡುವುದಿಲ್ಲ. ಭೂಮಿ ಚೆನ್ನಾಗಿ ನೀರು ಕುಡಿಯಲ್ಲಿ ಎಂಬ ಕಾರಣದಿಂದ ಒಂದೆರಡು ಬಾರಿ ಉಳುಮೆ ಮಾಡಿಸುತ್ತೇವೆ.
ಗಿಡ ನಿರ್ವಹಣೆ ಹೀಗಿರಬೇಕು :
ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಪ್ರತಿ ಗಿಡಗಳ ನಿರ್ವಹಣೆ ತುಂಬಾ ಮುಖ್ಯ. ಗಿಡಗಳು 15 ರಿಂದ 20 ಅಡಿಗಳಾಗುವವರೆಗೆ ರೆಂಬೆಗಳನ್ನು ತೆಗೆಯುತ್ತಿರಬೇಕು. ಮರಕ್ಕೆ ನೋವಾಗದಂತೆ, ಸೀಳು ಬಾರದಂತೆ ತುಂಬಾ ಸೂಕ್ಷ್ಮವಾಗಿ ರೆಂಬೆಗಳನ್ನು ತೆಗೆಯುತ್ತಾ ಬರಬೇಕು. ಗಿಡ 20 ಅಡಿ ಬೆಳೆದ ನಂತರ ರೆಂಬೆ ತೆಗೆಯುವುದನ್ನು ನಿಲ್ಲಿಸಬೇಕು. ಆಗ ಮಾರುಕಟ್ಟೆಯಲ್ಲಿ ಇಂತಹ ಮರಗಳಿಗೆ ಒಳ್ಳೆಯ ಬೇಡಿಕೆ ಇದ್ದು ಪ್ರತಿ ಮರ ಹದಿನೈದು ಸಾವಿರದವರೆಗೂ ಮಾರಾಟವಾಗುವ ಸಾಧ್ಯತೆ ಇರುತ್ತದೆ.
ಈಗ ನಾವೇ ತೋಟದಲ್ಲಿ ಬೀಳುವ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಕಾಂಪೋಸ್ಟ್ ತಯಾರಿಸಿಕೊಳ್ಳಲು ಗೊಬ್ಬರದ ಗುಂಡಿಯನ್ನು ಮಾಡಿಕೊಂಡಿದ್ದೇವೆ. ಅಷ್ಟರ ಮಟ್ಟಿಗೆ ನಮ್ಮದು ಕಡಿಮೆ ಖಚರ್ು ಬೇಡುವ ಬೇಸಾಯವಾಗಿದೆ.
ಕಾಫಿಯಲ್ಲೂ ಪ್ರಯೋಗ :
ನಾನು ಕೊಡಗಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅಲ್ಲಿನಂತೆ ಇಲ್ಲೂ ಯಾಕೆ ಕಾಫಿ ಬೆಳೆಯಬಾರದು ಅನಿಸಿತು. ಹಾಗನಿಸಿದೆ ತಡ ಎರಡು ವರ್ಷದ ನಂತರ ಪಪ್ಪಾಯವನ್ನು ತೆಗೆದು 2100 ಕಾಫಿ ಗಿಡಗಳನ್ನು ಪ್ರತಿ ಮರದ ಸಾಲಿನ ಖಾಲಿ ಜಾಗದಲ್ಲಿ ನೆಟ್ಟಿದ್ದೇನೆ. ಅವು ಈಗ ಚೆನ್ನಾಗಿ ಬಂದಿದ್ದು. ಹೂ ಬಿಡುವ ಹಂತದಲ್ಲಿವೆ. ಸಿಲ್ವರ್ ಮರಗಳಿಗೆ ಮೆಣಸಿನ ಬಳ್ಳಿಗಳನ್ನು ಹಬ್ಬಿಸಲಾಗಿದ್ದು ಅವು ಕೂಡ ಚೆನ್ನಾಗಿ ಬೆಳೆದು ಈಗ ಫಸಲು ಬಿಡುವ ಹಂತದಲ್ಲಿವೆ.
ಈಗ ನೀವೆ ಹೇಳಿ ಕೃಷಿ ಯಾಕೆ ಲಾಭದಾಯಕ ಅಲ್ಲ.ರೈತರು ಹೊಸ ಹೊಸ ಆಲೋಚನೆ ಮಾಡುತ್ತಾ ಸದಾ ಪ್ರಯೋಗಶೀಲರಾದಾಗ ಖಂಡಿತಾ ಕೃಷಿಯಲ್ಲೂ ಲಾಭ ಇದೆ. ನಾನೊಬ್ಬ ಸಕರ್ಾರಿ ನೌಕರನಾಗಿದ್ದು ನನಗೆ ಸಿಗುವ ರಜ ದಿನಗಳನ್ನೆ ಬಳಸಿಕೊಂಡು ಹೆಚ್ಚುವರಿ ಆಳು, ಹೆಚ್ಚು ರಾಸಾಯನಿಕ ಗೊಬ್ಬರ,ಕ್ರಿಮಿನಾಶಕಗಳ ಮೇಲೆ ಅವಲಂಭಿತನಾಗದೆ ನನ್ನ ಸಹೋದರ ದೌಲತ್ ರಾವ್ ಅವರೊಬ್ಬರ ಶ್ರಮದಾನದಿಂದ ಈ ತೋಟವನ್ನು ಕಟ್ಟಿದ್ದೇವೆ.
ಮಾರಾಟ ಹೀಗೆ :
ಒಂದು ಟನ್ ಹೆಬ್ಬೇವು ಮರಕ್ಕೆ ಮಾರುಕಟ್ಟೆಯಲ್ಲಿ ಒಂಭತ್ತು ಸಾವಿರ ರೂಪಾಯಿ ಇದೆ. ಆದರೆ ನಾವು ಟನ್ ಲೆಕ್ಕದಲ್ಲಿ ಮರವನ್ನು ಮಾರುವುದಿಲ್ಲ. ಗಿಡ ಏಳೆಂಟು ವರ್ಷ ಬೆಳೆದು ದೊಡ್ಡದಾದಾಗ ಬಲಿತ ಮರವನ್ನು  ಫ್ಲೈ ಹುಡ್ ಫ್ಯಾಕ್ಟರಿಯವರು ಒಂದು ಸಿಎಫ್ಟಿಗೆ ಈಗಿನ ಮಾರುಕಟ್ಟೆ ದರ 450 ರೂಪಾಯಿ ಕೊಟ್ಟು ಖರೀದಿಸುತ್ತಾರೆ.ಒಂದು ಮರ  ಎಂಟರಿಂದ ಹತ್ತು ವರ್ಷದಲ್ಲಿ ಕನಿಷ್ಟ 20 ಸಿಎಫ್ಟಿ ಬರುತ್ತದೆ. ಅಂದರೆ ಒಂದು ಮರ 9000 ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುತ್ತದೆ. 500 ಮರದಿಂದ 45 ಲಕ್ಷಕ್ಕೂ ಹೆಚ್ಚು ಆದಾಯ ಗ್ಯಾರಂಟಿ.
ಇನ್ನು ಹೆಬ್ಬೇವು ಮರಗಳನ್ನು ಎಂಟು ವರ್ಷಕ್ಕೆ ಕಟಾವು ಮಾಡಿದರೆ ಉಳಿದ 450 ಸಿಲ್ವರ್ ಗಿಡಗಳು ಮತ್ತೆ ಐದು ವರ್ಷದ ನಂತರ ಸಾಕಷ್ಟು ಆದಾಯ ತಂದುಕೊಡಬಲ್ಲ ಮರಗಳಾಗಿ ಬೆಳೆದಿರುತ್ತವೆ. ಈ ನಡುವೆ ಮೆಣಸಿನಿಂದಲ್ಲೂ ಸಾಕಷ್ಟು ಆದಾಯ ಬಂದಿರುತ್ತದೆ.

ಆದಾಯ ತರುವ ಹಕರ್ಿಲಸ್ :  ನೋಡಿ ಇದರ ಸಮೀಪದಲ್ಲಿ ಕಾಣಿಸುತ್ತಿರುವ ಕಾಡಿನಂತಿರುವ ಮತ್ತೊಂದು ತೋಟವು ನಮ್ಮದೆ. ಅಲ್ಲಿ ಫನರ್ಿಚರ್ಗೆ ಬಳಸುವಂತಹ ಹಕರ್ಿಲಸ್ ಗಿಡಗಳನ್ನು ಹಾಕಿದ್ದೇವೆ. ಅಲ್ಲಿಗೆ ನಾವು ಯಾವುದೇ ನೀರಾವರಿ ಮೂಲಗಳಿಂದ ನೀರು ಕೊಡುತ್ತಿಲ್ಲ. ಮಳೆಯ ಆಶ್ರಯದಲ್ಲೇ ಬೆಳೆಸುತ್ತಿದ್ದೇವೆ. ಒಂದು ಎಕರೆ ಪ್ರದೇಶದಲ್ಲಿ 700 ಗಿಡಗಳಿವೆ. ನಾವು ಅದನ್ನು ಗುತ್ತಿಗೆ ಕೊಟ್ಟಿದ್ದರೆ ಪ್ರತಿ ವರ್ಷಕ್ಕೆ ಎರಡು ಸಾವಿರದಂತೆ ಹದಿನೈದು ವರ್ಷಕ್ಕೆ 30 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ ಈಗ ನಾವು ಈ ಗಿಡಗಳನ್ನಿ ಹದಿನೈದು ವರ್ಷ ಕಾಪಾಡಿಕೊಂಡರೆ ಪ್ರತಿ ಗಿಡ ಕನಿಷ್ಟ ಹತ್ತು ಸಾವಿರ ರೂಪಾಯಿಗೆ ಮಾರಾಟವಾದರೂ ಎಪ್ಪತ್ತು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ. ಗೊಬ್ಬರ ಗೋಡು, ನೀರು ಏನನ್ನು ಕೊಡದೆ ಅವು ಮಳೆಯಾಶ್ರಯದಲ್ಲಿ ಬೆಳೆದಿವೆ. ಅಂದರೆ ನಾವು ಹದಿನೈದು ವರ್ಷದಲ್ಲಿ ಮೂರು ಎಕರೆ ಪ್ರದೇಶದಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಪಡೆದುಕೊಂಡಂತಾಗುತ್ತದೆ ಎಂದು ರಘುನಾಥ್ ರಾವ್ ತಮ್ಮ ಪ್ರಯೋಗ ಮತ್ತು ಪರಿಶ್ರಮವನ್ನು ನಮ್ಮ ಕಣ್ಣ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ನಮಗೆ ಅವರ ತೋಟವೊಂದು ದಟ್ಟವಾದ ಅರಣ್ಯ ಪ್ರದೇಶದಂತೆ ಕಾಣುತ್ತಿದ್ದು ಪ್ರತಿ ಮರವು ಹಣ ತರುವ ಕಲ್ಪವೃಕ್ಷವಾಗಿ ನಮಗೆ ಕಾಣತೊಡಗಿದವು.
ಇವರನ್ನು ನೋಡಿದ ಅಕ್ಕ ಪಕ್ಕದ ರೈತರು ಹೆಬ್ಬೇವು ಕಾಡು ಕೃಷಿಯನ್ನು ಮಾಡಿದ್ದು ಒಳ ಹೊಕ್ಕರೆ ಕಾಡಿಗೆ ಹೋಗಿ ಬಂದ ಅನುಭವವಾಗುತ್ತದೆ. ಅರಣ್ಯ ಇಲಾಖೆಯವರು ತೋಟದ ನಿರ್ವಹಣೆಯನ್ನು ತುಂಬಾ ಮೆಚ್ಚಿಕೊಂಡಿದ್ದು ಬೇರೆ ಬೇರೆ ಕಡೆಗಳಿಂದ ರೈತರ ತಂಡಗಳನ್ನು ಕಾಡು ಕೃಷಿ ತೋಟ ನೋಡಿಬರಲು ಕಳುಹಿಸುತ್ತಿದ್ದು, ತಾಲೂಕಿನಲ್ಲೆ ಅತ್ಯತ್ತಮ ನಿರ್ವಹಣೆ ಮಾಡಿರುವ ತೋಟ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.
ಹಸಿರು, ಆರೋಗ್ಯ, ಹಣ ಮೂರನ್ನು ಇಷ್ಟೊಂದು ಸುಲಭವಾಗಿ ಪಡೆದುಕೊಂಡ ರಾವ್ ಸಹೋದರರು ಕಾಡು ಕೃಷಿಯಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಅಪರೂಪದ್ದು ಮತ್ತು ಮಾದರಿಯಾಗುವಂತದ್ದು. ಹೆಚ್ಚಿನ ಮಾಹಿತಿಗೆ ರಘುನಾಥ್ ರಾವ್ 9449529439 ಸಂಪಕರ್ಿಸಿ.            


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ