vaddagere.bloogspot.com

ಶುಕ್ರವಾರ, ಆಗಸ್ಟ್ 19, 2016


ಎಂಜಿನಿಯರಿಂಗ್ ಹುಡುಗನ ಕೃಷಿ ಪ್ರೀತಿ


"ನಮ್ಮ ಕೃಷಿ ಸುಲಭ ಮತ್ತು ಸರಳ"


ಚಾಮರಾಜನಗರ : ಕೃಷಿ ಪ್ರೀತಿಯಿಂದಾಗಿ ಚಾಮರಾಜನರದಿಂದ ದೂರದ ಥೈಲ್ಯಾಂಡ್ದೇಶದ ಬ್ಯಾಂಕಾಕ್ವರೆಗೂ ಹೋಗಿ ಬಂದಿದ್ದಾರೆ. ಅಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅಮೃತ ಭೂಮಿ ನೆರವಿನೊಂದಿಗೆ ಹೋಗಿ ಭಾಗವಹಿಸಿ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಿದೇಶಗಳಿಗೆ ಹೋಲಿಸಿದರೆ ನಮ್ಮ ಕೃಷಿ ಕಡಿಮೆ ಬಂಡವಾಳವನ್ನು ಬೇಡುವಂತಾಗಿದ್ದು ಲಾಭದಾಯಕವಾಗಿದೆ. ಕೃಷಿ ವಿಜ್ಞಾನಿಗಳು, ಕಾಪರ್ೋರೇಟ್ ಕಂಪನಿಗಳು ನಮ್ಮ ಕೃಷಿಯನ್ನು ಗೊಂದಲವಾಗಿಸಿವೆ. ಪಾಳೇಕರ್ ಮಾದರಿಯ ಕೃಷಿ ಸರಳ ಮತ್ತು ನೆಮ್ಮದಿಯ ಬದುಕಿಗೆ ಸಾಕು . ಈ ಒಂದುವರೆ ವರ್ಷದ ನನ್ನ ಕೃಷಿ ಅನುಭವ ಸಾಕಷ್ಟು ಪಾಠ ಕಲಿಸಿದ್ದು ಕೃಷಿಯಲ್ಲೇ ನಾನು ಸಾರ್ಥಕ ಜೀವನ ಕಂಡುಕೊಳ್ಳಲು ನೆರವಾಗಿದೆ ಎನ್ನುತ್ತಾರೆ.
ತಮ್ಮ ಪ್ರೀತಿಯ ಬುಲೆಟ್ ರೈಡ್ನಲ್ಲಿ ಪರಿಚಯಕ್ಕೆ ಬಂದ ವಾಯುದಳದಲ್ಲಿ ನೌಕರಿಯಲ್ಲಿರುವ ರಾಮಸಮುದ್ರದ ಗುರು ಅವರ ಎರಡು ಎಕರೆ ಜಮೀನಿನಲ್ಲಿ ಶ್ರೀನಿಧಿ ಪ್ರಯೋಗಾತ್ಮಕವಾಗಿ ಏಲಕ್ಕಿ ಬಾಳೆಯೊಂದಿಗೆ ಹಾಕಿರುವ ನುಗ್ಗೆ ಎಂಟೇ ತಿಂಗಳಲ್ಲಿ ಗಿಡದ ತುಂಬಾ ಕಾಯಿಗಳನ್ನು ಹೊದ್ದುಕೊಂಡು ನೋಡುವವರು ಬೆರಗಾಗುವಂತೆ ಮಾಡಿದೆ. ಹೆಗ್ಗವಾಡಿಪುರದ ಶಿವಕುಮಾರಸ್ವಾಮಿ ಅವರಿಂದ ತಂದ ನುಗ್ಗೆ ಬೀಜಗಳು ಇವು. ಇದೆಲ್ಲ ಹುಡುಗಾಟಕ್ಕೆ ಕಡಿಮೆ ಖಚರ್ಿನಲ್ಲಿ ಮಾಡಿರುವುದು. ನೋಡಿ ಇದರಲ್ಲಿ ನಷ್ಟ ಹೇಗೆ ಆಗುತ್ತದೆ ಎಂಬ ಶ್ರೀನಿಧಿಯ ಕೃಷಿಪ್ರೀತಿ ಯುವಕರಿಗೆ ಮಾದರಿಯಾಗುವಂತಿದೆ 

===================================
ಚಾಮರಾಜನಗರ: ಏಪ್ರಿಲ್ನ ಕ್ರೂರ ಬೇಸಿಗೆಯಲ್ಲೂ  ಅಚ್ಚ ಹಸಿರಾಗಿರುವ ಬಾಳೆಯತೋಟ. ಮಣ್ಣಿಗೆ ಹೊದಿಕೆಯಾಗಿ ತೇವಾಂಶ ಕಾಪಾಡಿಕೊಳ್ಳಲು ಅಲಸಂದೆ, ಉದ್ದು,ಅವರೆಯಂತಹ ದ್ವಿದಳ ಧಾನ್ಯಗಳ ಜತೆಗೆ ತೋಟದ ತುಂಬೆಲ್ಲ ಹರಡಿಕೊಂಡಿರುವ ಗೆಣಸಿನ ಬಳ್ಳಿ. ಸುತ್ತಲ್ಲೂ ಗಾಳಿ ತಡೆಗೆ ಬೆಳೆಸಿದ ಅಗಸೆ ಗಿಡಗಳು.
ವ್ಯವಸಾಯದ ಬಗ್ಗೆ ಯಾವುದೇ ತಿಳವಳಿಕೆ ಇಲ್ಲದ ಹುಡುಗನೊಬ್ಬ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ಪುಸ್ತಕವನ್ನು ಓದಿಕೊಂಡು ತುಂಬು ಆಸಕ್ತಿಯಿಂದ ರೂಪಿಸಿದ ಬಾಳೆಯ ತೋಟ ಇದು. ಚಾಮರಾಜನಗರದ ವೆಂಕಟೇಶ್ಮೂತರ್ಿ ಮತ್ತು ಮೀನಾಕ್ಮಮ್ಮ ನವರ ಮಗ ಎಂಜಿನಿಯರಿಂಗ್ ಪದವಿಧರ ಸಿ.ವಿ.ಶ್ರಿನಿಧಿ ಎದುರು ಕುಳಿತು ಮಾತನಾಡುತ್ತಿದ್ದರೆ ಅವನ ಆಸಕ್ತಿ ಮತ್ತು ಸಾಧನೆ ರೈತರ ಮಕ್ಕಳ್ಳೇ ನಾಚುವಂತೆ ಮಾಡುತ್ತದೆ.
ಚಾಮರಾಜಮಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆಆಧಾರದಲ್ಲಿ ಎಂಜಿನಿಯರ್ ಆಗಿ ನೌಕರಿ ಮಾಡುತ್ತಿರುವ ಶ್ರೀನಿಧಿ ತಮ್ಮ ಬಿಡುವಿನ ವೇಳೆಯನ್ನು ದಕ್ಷತೆಯಿಂದ ಬಳಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತೆಪೇಟೆಯಲ್ಲಿ ವ್ಯಾಪಾರಮಾಡುತ್ತಾ ಸಂತೋಷವಾಗಿಯೇ ಇದ್ದ ತನ್ನ ತಂದೆ ಕೃಷಿ ಮಾಡಲು ಹೋಗಿ ಕೈಸುಟ್ಟುಕೊಂಡು ಖಿನ್ನತೆಯಿಂದ ಬಳಲಿ ಅಕಾಲಿಕ ಸಾವನ್ನಪ್ಪಿದ್ದು, ಕೃಷಿಯನ್ನು ಒಂದು ಸವಾಲಾಗಿ ಸ್ವೀಕರಿಸಲು ನನಗೆ ಕಾರಣವಾಯಿತು ಎನ್ನುತ್ತಾರೆ.
ನೀರಿನ ನಿರ್ವಹಣೆಯ ಬಗ್ಗೆ ಯೋಜನೆಮಾಡದೆ ಹತ್ತು ಹದಿನೈದು ಎಕರೆ ಪ್ರದೇಶದಲ್ಲಿ ಬಾಳೆ ಹಾಕಿದ ರೈತರು ಕಷ್ಟಪಟ್ಟು ಬೆಳೆದು ಗೊನೆ ಬರುವ ಸಮಯದಲ್ಲಿ ನೀರಿಲ್ಲದೆ ಬಾಳೆಯನ್ನು ಕಡಿದು ಗೋಳಾಡುವುದನ್ನು ನಾವೆಲ್ಲ ಈಗ ನೋಡುತ್ತಿದ್ದೇವೆ. ಆದರೆ ಶ್ರೀನಿಧಿ ಬಾಳೆಯ ತೋಟಕ್ಕೆ ನೀವು ಹೋದರೆ ಅಲ್ಲಿ ನೆಲದ ಮೇಲೆ ಹಣ್ಣಾಗಿ ಅಲ್ಲಲ್ಲಿ ಬಿದ್ದಿರುವ ಬಾಳೆಯ ಗೊನೆಗಳು ಬೇರೆಯದೆ ಆದ ಕತೆ ಹೇಳುತ್ತವೆ.
ಇಷ್ಟೆಲ್ಲ ಬಾಳೆ ಗೊನೆಗಳನ್ನು ಯಾಕೆ ಕಡಿಯದೆ ಬಿಟ್ಟಿದ್ದೀರಿ ಎಂಬ ನಮ್ಮ ಪ್ರಶ್ನೆಗೆ ಹುಡುಗ ಕೊಟ್ಟ ಉತ್ತರವೇ ಆತನ ಕೃಷಿಯ ಪ್ರೀತಿಗೆ ಸಾಕ್ಷಿ...
2013 ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ ಸೌತ್ ಕ್ಯಾಂಪಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ ಶ್ರೀನಿಧಿಗೆ ಕೃಷಿ ಮೇಲೆ ಅತೀವ ಪ್ರೀತಿ. ತಂದೆಯ ಕಡೆಯಿಂದ ಬಂದ ಆರು ಎಕರೆ ಜಮೀನಿನಲ್ಲೇ ವ್ಯವಸಾಯಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆ. ಆದರೆ ಭೂಮಿಗೆ ಏನನ್ನು ಯಾವಾಗ ಯಾಕೆ ಭಿತ್ತನೆ ಮಾಡಬೇಕು ಎನ್ನುವ ಬಗ್ಗೆ ಕೃಷಿ ಜ್ಞಾನವಿಲ್ಲ. ಆಗ ಗೆಳೆಯರೊಂದಿಗೆ ತನ್ನ ಆಸಕ್ತಿಯನ್ನು ಹಂಚಿಕೊಳ್ಳುತ್ತಿರುವಾಗ ಸಂತೋಷ್ ಎಂಬ ಗೆಳೆಯ ಆರ್.ಸ್ವಾಮಿ ಆನಂದ್ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳದ ಕೃಷಿಯ ಬಗ್ಗೆ ಬರೆದ ಪುಸ್ತಕವನ್ನು ಓದಲು ಕೊಡುತ್ತಾನೆ. ಈ ಪುಸ್ತಕವೇ ಶ್ರೀನಿಧಿಯ ಪಾಲಿಗೆ ಭಗವದ್ಗೀತೆಯಾಗುತ್ತದೆ.
ಈ ಪುಸ್ತಕವನ್ನು ಐದಾರು ಬಾರಿ ಓದಿಕೊಳ್ಳುತ್ತಾನೆ. ಆದರೂ ಕೆಲವೊಂದು ಗೊಂದಲಗಳು ಹಾಗೆಯೇ ಉಳಿದು ಕೊಳ್ಳುತ್ತವೆ. ಸ್ವಾಮಿ ಆನಂದ್ ಅವರಿಗೆ ದೂರವಾಣಿ ಮಾಡಿ ಕೃಷಿ ಮಾರುಕಟ್ಟೆಯ ಬಗ್ಗೆ ಕೇಳಿದಾಗ " ರೀ ನೀವು ನಿಮ್ಮ ಮನೆಗೆ ಬೇಕಾದ ಆಹಾರವನ್ನು ಮೊದಲು ವಿಷಮುಕ್ತವಾಗಿ ಬೆಳೆದುಕೊಳ್ಳಿ" ನಂತರ ಆ ಬಗ್ಗೆ ಮಾತನಾಡೋಣ ಎಂದು ಹೇಳಿದ್ದು ಹುಡುಗನಲ್ಲಿ ಮತ್ತಷ್ಟು ಗೊಂದಲ ಮೂಡಿಸುತ್ತದೆ.
ಅದೇ ಸಮಯದಲ್ಲಿ (ಡಿಸೆಂಬರ್ 2014) ಮೈಸೂರಿನ ಕಲಾಮಂದಿರದಲ್ಲಿ ಶೂನ್ಯ ಬಂಡವಾಳ ಕೃಷಿ ಕುರಿತು ಸುಭಾಷ್ ಪಾಳೇಕರ್ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿದ    ಶ್ರೀನಿಧಿಗೆ ಕೃಷಿಯ ಬಗ್ಗೆ ಒಂದು ಸ್ಪಷ್ಟ ತಿಳವಳಿಕೆ ಸಿಗುತ್ತದೆ. ಅಲ್ಲಿಂದ ಬಂದ ನಂತರ ಮೂರು ಎಕರೆ ಪ್ರದೇಶದಲ್ಲಿ ಪಾಳೇಕರ್ ವಿಧಾನದಲ್ಲಿ ಮೂರು ಸಾವಿರ ಏಲಕ್ಕಿ ಬಾಳೆ ನಾಟಿಮಾಡಲು ತೀಮರ್ಾನಿಸುತ್ತಾರೆ.
ಸಗಣಿಗಾಗಿ ಅಲೆದಾಟ: ಪಾಳೇಕರ್ ವಿಧಾನದಲ್ಲಿ 3000 ಏಲಕ್ಕಿ ಬಾಳೆ ನಾಟಿ ಮಾಡುವ ಶ್ರೀನಿಧಿ ಅದರೊಂದಿಗೆ ಮಿಶ್ರ ಬೆಳೆಯಾಗಿ ಚಿತ್ರದುರ್ಗದಿಂದ ತರಿಸಿದ ದಪ್ಪ ಈರುಳ್ಳಿ ಮತ್ತು ದ್ವಿದಳ ಧಾನ್ಯಗಳನ್ನು ಹಾಕುತ್ತಾರೆ. ನಂತರ ಇದಕ್ಕೆಲ್ಲ ಮೂಲ ಬಂಡವಾಳವಾಗಿ ಬೇಕಿದ್ದ ಹಸುವಿನ ಗಂಜಲ ಮತ್ತು ಸಗಣಿಗಾಗಿ ಒಂದು ನಾಟಿ ಹಸುವನ್ನು ಸಾಕುತ್ತಾರೆ. ಸಗಣಿ ಸಾಲದಾದಾಗ ತಮ್ಮ ಪ್ರೀತಿಯ ಬುಲೆಟ್ ಬೈಕ್ ಏರಿ ಸುತ್ತಮುತ್ತ ಸಿಗುವ ಸಗಣಿಯನ್ನು ಹೊತ್ತುತಂದು ಜೀವಾಮೃತವಾಗಿಸಿ ಭೂಮಿಗೆ ಉಣಿಸಿದ್ದಾರೆ.
3000 ಸಾವಿರ ಬಾಳೆಯ ಗಿಡಗಳಲ್ಲಿ ಕರಳು ಭೂಮಿಯಲ್ಲಿ ಹಾಕಿದ್ದ ಒಂದು ಸಾವಿರಗಿಡಗಳು ಸರಿಯಾಗಿ ಬರಲಿಲ್ಲ.ಇದನ್ನು ಬಿಟ್ಟರೆ ಉಳಿದಂತೆ ತಾನು ಲಾಭದಲ್ಲೇ ಇರುವುದಾಗಿ ಶ್ರೀನಿಧಿ ಹೆಮ್ಮೆಯಿಂದ ಹೇಳುತ್ತಾರೆ. ಬಾಳೆ ವ್ಯವಸಾಯಕ್ಕೆ ಎಲ್ಲಾ ಸೇರಿ ಒಟ್ಟು ಎಂಬತ್ತು ಸಾವಿರ ರೂಪಾಯಿ ಖಚರ್ು ಮಾಡಿದ್ದೆ. ಈ ಒಂದುವರೆ ವರ್ಷದಲ್ಲಿ ಖಚರ್ುಕಳೆದು ಮೊದಲ ಕಟಾವಿನಲ್ಲಿ ತ್ತೊಂಬತ್ತುಸಾವಿರ ರೂಪಾಯಿ ಆದಾಯ ಬಂದಿದೆ. ಇಲ್ಲಿ ಹಣ್ಣಾಗಿ ಬಿದ್ದಿರುವ ಗೊನೆಗಳನ್ನು ಕಡಿಮೆ ದರಕ್ಕೆ ಮಾರಾಟಮಾಡುವ ಬದಲು ಇಲ್ಲೇ ಇರುವ ಪ್ರಾಣಿ ಪಕ್ಷಿಗಳು ತಿಂದು ಮಣ್ಣನ್ನು ಫಲವತ್ತಾಗುವಂತೆ ಮಾಡುತ್ತವೆ ಎನ್ನುವಾಗ ಜಪಾನಿನ ಸಹಜ ಕೃಷಿಕ ಮಸನಬ್ಬ ಪುಕೊವಕೊ ನೆನಪಾಗುತ್ತಾರೆ. ಈಗ ತೋಟದಲ್ಲಿ ನೀವು ನೋಡುತ್ತಿರುವುದು ಎರಡನೇಯ ಕೂಳೆ ಬೆಳೆ. ಇದಕ್ಕಾಗಿ ಜೀವಾಮೃತ ಬಿಟ್ಟರೆ ಮತ್ತೇ ತಾನು ಯಾವುದೇ ಖಚರ್ು ಮಾಡಬೇಕಿಲ್ಲ. ಒಂದುವರೆಯಿಂದ ಎರಡು ಲಕ್ಷ ರೂಪಾಯಿ ಆದಾಯ ಗ್ಯಾರಂಟಿ ಎನ್ನುತ್ತಾರೆ. ತೋಟದಲ್ಲಿ ಅವರು ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಮಾಡಿರುವ ಹೊದಿಕೆಯ ವಿಧಾನ ಹೇಗಿದೆ ಎಂದರೆ ಗಮ್ ಬೂಟ್ ಇಲ್ಲದೆ ಕಾಲಿಡಲು ಎಂತಹವರಿಗೂ ಹೆದರಿಕೆಯಾಗುತ್ತದೆ.
ಮಾರಾಟದ್ದೇ ಸಮಸ್ಯೆ : ನಮ್ಮ ರೈತರಿಗೆ ಬೆಳೆ ಬೆಳೆಯುವುದು ಸುಲಭ ಆದರೆ ಅದನ್ನು ಮಾರಾಟ ಮಾಡುವುದೇ ಸಮಸ್ಯೆ. ಹಾಗಾಗಿ ಕೃಷಿ ಇಂದು ಬಿಕ್ಕಟ್ಟು ಎದುರಿಸುತ್ತಿದೆ ಎನ್ನುವ ಶ್ರೀನಿದಿ, ತಾನು ಬೆಳೆದ ಬಾಳೆಗ ತನ್ನದೇ ರೀತಿಯಲ್ಲಿ ಗ್ರಾಹಕರನ್ನು ಹುಡುಕಿಕೊಳ್ಳುತ್ತಾರೆ. ತಾನು ಕೆಲಸಮಾಡುವ ಕಚೇರಿ, ಹತ್ತು ಜನರಿರುವ ಗುಂಪು, ರೋಟರಿ ಸಭೆಗಳು, ಯೋಗ ತರಗತಿಗಳು ಇಲ್ಲೆಲ್ಲ ಸಾವಯವದಲ್ಲಿ ಬೆಳೆದ ಬಾಳೆ ಎಂದು ಪ್ರತಿ ಕೆಜಿಗೆ 50 ರಿಂದ ಕನಿಷ್ಟ 30 ರೂಪಾಯಿವರೆಗೂ ಮಾರಾಟಮಾಡಿ ಆದಾಯಗಳಿಸಿದ್ದಾರೆ.
ಸಾಮಾಜಿಕ ಜಾಲ ತಾಣ ಬಳಕೆ : ಕಳೆದ ಡಿಸೆಂಬರ್ 24 ರಂದು ಚಾಮರಾಜನಗರದಲ್ಲಿ ನಡೆದ ರೈತದಿನಾಚರಣೆಗೆ ಉಪನ್ಯಾಸ ನೀಡಲು ಬಂದಿದ್ದ ಬೆಂಗಳೂರು ಜಿಕೆವಿಕೆಯ ಕೃಷಿವಿಜ್ಞಾನಿ ವೆಂಕಟರೆಡ್ಡಿ ಅವರ ಮಾತಿನಿಂದ ಸ್ಪೂತರ್ಿ ಪಡೆದು  ಸಿವಿಎಸ್ ಆಗ್ಯರ್ಾನಿಕ್ ಪ್ರಾಡೆಕ್ಟ್ ಎಂಬ ಹೆಸರಿನಲ್ಲಿ 3 ಕೆಜಿಯ ಅಳತೆಯಲ್ಲಿ ಬಾಕ್ಸ್ ಮಾಡಿ ಬಾಳೆಹಣ್ಣನ್ನು 100 ರಿಂದ 120 ರೂವರೆಗೂ ಮಾರಾಟಮಾಡಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲ ತಾಣವನ್ನು ಬಳಸಿಕೊಂಡ ಶ್ರೀನಿಧಿ ಇದರಿಂದಾಗಿ ತನ್ನ ಕೃಷಿ ಉತ್ಪನ್ನಗಳಿಗೆ ಬೆಂಗಳೂರಿನ ಗ್ರಾಹಕರು ನನಗೆ ಸಿಕ್ಕಂತಾಯಿತು ಎನ್ನುತ್ತಾರೆ.
ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಯಾವುದೇ ಬೆಳೆಗೆ ಮುಖ್ಯ ಎನ್ನುವ ಶ್ರೀನಿಧಿ ಬಾಳೆಗೆ ಎಲ್ಲಕ್ಕಿಂತ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಗೆಣಸು ಮಲ್ಚಿಂಗ್ ನೆರವಾಗುತ್ತದೆ ಎನ್ನುತ್ತಾರೆ. ಆಸಕ್ತರು ಇವರನ್ನು ಮೊ.9738540990 ಸಂಪಕರ್ಿಸಬಹುದು.
 -ಚಿನ್ನಸ್ವಾಮಿವಡ್ಡಗೆರೆ
------------------------