ರಾಷ್ಟ್ರಪತಿ ಭವನದಲ್ಲಿ ತಲಕಾಡು ತರಕಾರಿ:
"ಮೇಕ್ ಇನ್ ಇಂಡಿಯಾ" ದಲ್ಲಿ ಯಶೋಗಾಥೆ
ರೈತ,ನೇಗಿಲಯೋಗಿ ಎಂತಹ ಸುಂದರವಾದ ಪದ. ರೈತನೆಂದರೆ ಕಲೆಗಾರ, ವಿಜ್ಞಾನಿ, ಎಂಜಿನೀಯರ್, ವೈದ್ಯ, ಪೋಷಕ, ಕೇರ್ ಟೇಕರ್ ಆಫ್ ಆಲ್. ಇದೆಲ್ಲವನ್ನು ಒಂದು ಕಡೆ ತಂದು ಬದುಕಿ ತೋರಿಸುವವನು ರೈತ. ನಮ್ಮ ದೇಶ, ನಮ್ಮ ಆರೋಗ್ಯ, ನಮ್ಮ ಮಣ್ಣು, ನೀರು ಇದೆಲ್ಲದ್ದರ ಬಗ್ಗೆ ಅಭಿಮಾನ ಇರುವವನು ರೈತ. ವಿಷಮುಕ್ತ ಆಹಾರ, ವಿಷಮುಕ್ತ ನೆಲ, ಜಲ ಕಾಪಾಡುವುದು ರೈತನ ಕರ್ತವ್ಯ. ಆದರೆ ನಮ್ಮ ರೈತರು ಸೋಮಾರಿಗಳು. ಪ್ರಾಮಾಣಿಕ ಪ್ರಯತ್ನ ಮಾಡಲ್ಲ. ರೈತರು ಮೂರ್ಖರಲ್ಲ. ಅತಿ ಬುದ್ಧಿವಂತರು. ಆದರೆ ಎಲ್ಲಿ, ಯಾವಾಗ ತಮ್ಮ ಬುದ್ಧಿಯನ್ನು ಬಳಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲಾ" ಎನ್ನುತ್ತಾರೆ ಮಾಜಿ ಫೈಲಟ್,ಹಾಲಿ ಕೃಷಿಕ ನಮೀತ್.
----------------------------------------------
ಮೈಸೂರು : ತಿ.ನರಸೀಪುರ ತಾಲೂಕಿನ ತಲಕಾಡು ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆಮಾಡುವ ಮೂಲಕ ದೇಶದ ಗಮನಸೆಳೆದಿದೆ. ಉತ್ತರ್ಖಾಂಡ್ನಿಂದ ಬಂದ ಉತ್ಸಾಹಿ ಯುವಕರ ತಂಡ ಸಂಪೂರ್ಣ ವಿಷಮುಕ್ತವಾಗಿ 40 ಕ್ಕೂ ಹೆಚ್ಚು ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಜಾಗತಿಕ ಗುಣಮಟ್ಟದಲ್ಲಿ ಬೆಳೆಯುತ್ತಿದ್ದಾರೆ.ಇದನ್ನು ಕಂಡ ಭಾರತ ಸಕರ್ಾರದ ಪ್ರತಿಷ್ಠಿತ "ಮೇಕ್ ಇನ್ ಇಂಡಿಯಾ" ಪತ್ರಿಕೆಯಲ್ಲಿ ಸಾವಯವ ಪಯಣದ ಸಂಪೂರ್ಣ ಕಥಾನಕ ಪ್ರಕಟವಾಗಿದೆ.
ಮೈಸೂರು ಜಿಲ್ಲೆಯ ತಲಕಾಡಿನ ಪುಟ್ಟ ಹಳ್ಳಿ ಟಿ.ಬೆಟ್ಟಹಳ್ಳಿ. ಮಾಜಿ ಸೈನಿಕರು ಮತ್ತು ಉತ್ಸಾಹಿ ಯುವಕರ ಸಾವಯವ ಕೃಷಿ ಪ್ರೀತಿ ಮತ್ತು ಕಾಳಜಿಯಿಂದಾಗಿ ಈ ಹಳ್ಳಿ 144 ದೇಶಗಳಲ್ಲಿ ಸುದ್ದಿ ಮಾಡುತ್ತಿದೆ. ಫಲವತ್ತಾದ ಮಣ್ಣು, ನೀರು ಎಲ್ಲಾ ಇದ್ದು ನಾವು ಮಾಡಲಾಗದ್ದನ್ನು ದೂರದ ಉತ್ತರ ಖಾಂಡ್ನಿಂದ ಬಂದ ನಿವೃತ್ತ ಸೈನಿಕರು ಸಾಧಿಸಿ ತೋರಿಸಿದ್ದಾರೆ.ಸಾವಯವ ಕೃಷಿಯನ್ನು ಗೆಲ್ಲಿಸಿದ್ದಾರೆ. ಕಾಪರ್ೋರೇಟ್ ಕಂಪನಿಗಳಿಗಿಂತಲ್ಲೂ ಎತ್ತರದ ಮಟ್ಟಕ್ಕೆ ಕೃಷಿ ವಲಯವನ್ನು ಎತ್ತರಕ್ಕೆ ನಿಲ್ಲಿಸಿದ್ದಾರೆ.
ಇಂತಹ ಸಾಧನೆ ಮಾಡಿದ ಮಹಾನ್ ಸಾಧಕರು ಸಹೋದರರಾದ ನವೀನ್ ಎಂ.ವಿ.,ನಮೀತ್ ಮೊಡಕುತರ್ಿ ಮತ್ತು ಕೆ.ಎನ್.ಪ್ರಸಾದ್ .ಇವರೊಂದಿಗೆ ಜೈ ಕಿಸಾನ್ ಎಂದು ಕೃಷಿಗೆ ಸಾಥ್ ನೀಡುತ್ತಿರುವವರು ನಿವೃತ್ತ ಸೈನಿಕರಾದ ಮನೀಂದರ್ ಸಿಂಗ್, ರಾಜೇಂದ್ರ ಪಾಟೀಲ್. ಕೃಷಿ ವಿಜ್ಞಾನಿಗಳಾದ ಕೀಟಶಾಸ್ತ್ರಜ್ಞ ದೇವರಾಜ್, ಜನಾರ್ಧನ ರೆಡ್ಡಿ. ಫಸ್ಟ್ ಆಗ್ರೋ ಟೆಕ್ ಪ್ರೊಡ್ಯುಸ್ ಪ್ರೈ.ಲಿ. ಎಂಬ ಕಂಪನಿಯಡಿ ಕೃಷಿಯನ್ನು ಕಾಖರ್ಾನೆಯಂತೆ ಕಟ್ಟಿ ಬೆಳೆಸುತ್ತಿರುವ ಇವರ ಶ್ರಮ ಮತ್ತು ಬುದ್ದಿವಂತಿಕೆ ಉತ್ಸಾಹಿ ಯುವಕರಿಗೆ ಮಾದರಿಯಂತಿದೆ.
ತಲಕಾಡಿನಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪು ಸಂಪೂರ್ಣ ವಿಷಮುಕ್ತವಾಗಿದ್ದು ಜಾಗತಿಕ ಗುಣಮಟ್ಟದಲ್ಲಿವೆ.ಜಾಗತಿಕ ಮಟ್ಟದ (ಡಬ್ಲ್ಯೂಎಚ್ಒ) ಇಂಟರ್ ಟೆಕ್ ಸಂಸ್ಥೆ ಇಲ್ಲಿ ಬೆಳೆದ ತರಕಾರಿಗಳಿಗೆ ಸಾವಯವ ಧೃಡೀಕರಣ ನೀಡಿ "ಜೀರೋ" ಪ್ರೆಸ್ಟಿಸೈಡ್ ತರಕಾರಿ ಎಂದು ಖಾತರಿ ಪ್ರಮಾಣ ಪತ್ರ ನೀಡುತ್ತದೆ.
ತಲಕಾಡು ಈಗ ಐಒಟಿ ( ಇಂಟರ್ ನೆಟ್ ಆಫ್ ಥಿಂಗ್ಸ್) ಬಥರ್್ ಪ್ಲೇಸ್ ಆಫ್ ಅಗ್ರಿಕಲ್ಚರ್ ಎಂಬ ಕೀತರ್ಿಗೆ ಭಾಜನವಾಗಿದೆ. ಕೃಷಿ ಕ್ಷೇತ್ರದಲ್ಲಿ ಇಂಟರ್ ನೆಟ್,ರೋಬೊಟ್,ಡ್ರೋಣ್ನಂತಹ ತಾಂತ್ರಿಕತೆಗಳ ಬಳಕೆ ಮೊಟ್ಟ ಮೊದಲ ಬಾರಿಗೆ ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿದೆ.
ರೈತನೆಂದರೆ ಅಭಿಮಾನ : ಎಂಜಿನಿಯರ್,ಪೈಲಟ್,ಡಾಕ್ಟರ್,ಸಾಫ್ಟವೇರ್ ಎಂಜಿನಿಯರ್ ಎಂದು ಹೇಳಿಕೊಂಡು ಬೀಗುತ್ತಿದ್ದ ಯುವಕರು ಈಗ ಧೈರ್ಯದಿಂದ ತಾನೊಬ್ಬ ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ರೈತ ಎಂಬ ಪದಕ್ಕೆ ಈಗೊಂದು ಆಕರ್ಷಣೆ ಬಂದಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಮಾತು ಇಲ್ಲಿ ಸಾರ್ಥಕ್ಯ ಪಡೆದುಕೊಂಡಿದೆ. ಜಾಗತಿಕ ಗುಣಮಟ್ಟದಲ್ಲಿ ಸೊಪ್ಪು ಮತ್ತು ತರಕಾರಿಯನ್ನು ಉತ್ಪಾದನೆ ಮಾಡುತ್ತಿರುವ ತಂಡದ ಯಶೋಗಾಥೆ ಇದು.
ಇವರು ಬೆಳೆದ ಸೊಪ್ಪು,ತರಕಾರಿ ದೇಶದ ಪಂಚತಾರಾ ಹೋಟೆಲ್ ಮತ್ತು ಬೆಂಗಳೂರಿನ ಪ್ರತಿಷ್ಠಿತ ರಿಟೇಲ್ ಶಾಫ್ಗಳಲ್ಲಿ ಮಾರಾಟವಾಗುತ್ತಿದೆ. ವಿಷಮುಕ್ತ ಆಹಾರಕ್ಕೆ ಭಾರಿ ಬೇಡಿಕೆ ಇದೆ. ಒಬ್ಬ ಮನುಷ್ಯ ದಿನಕ್ಕೆ ಕನಿಷ್ಠ 200 ಗ್ರಾಂ ತರಕಾರಿ ತಿನ್ನುತ್ತಾನೆ. ಅವನಿಗೆ ವಿಷಮುಕ್ತ ಆಹಾರ ಕೊಡುವುದು ನಮ್ಮ ಗುರಿ ಎನ್ನುತ್ತಾರೆ ಸಾಧಕ ಮಾಜಿ ಫೈಲಟ್, ಹಾಲಿ ಕೃಷಿಕ ನಮೀತ್.
2011 ರಲ್ಲಿ ಸಂಪೂರ್ಣ ವಿಷಮುಕ್ತ ಆಹಾರ ಉತ್ಪಾದಿಸುವ ಗುರಿಯೊಂದಿಗೆ ತಲಕಾಡಿಗೆ ಬಂದ ಇವರು 45 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಆರಂಭಿಸಿದರು. ಇಂದು ದೇಶದ ನಾನಾ ಭಾಗಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ವಿಷಮುಕ್ತ ಆಹಾರ ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ತಲಕಾಡಿನ ತೋಟದಲ್ಲಿ ಮೊದಲ ಬಾರಿಗೆ ಈ ಸೀಸನ್ನಲ್ಲಿ ಆರೂವರೆ ಟನ್ ಅನ್ ಪ್ಯಾಶ್ಚರೈಸಡ್,ಅನ್ ಫಿಲ್ಟರ್ಡ್ ಹನಿ ಉತ್ಪಾದಿಸಿದ್ದಾರೆ.
ಹಳೆಯ ನೆನಪಿಗೆ ಜಾರಿದ ನಮೀತ್ : "2011. ನಿಮಗೆಲ್ಲ ನೆನಪಿರಬೇಕು. ಇದೊಂದು ಸಂಪೂರ್ಣ ಕಲ್ಲುಬಂಡೆಗಳಿದ್ದ ಭೂಮಿ. ಅಲ್ಲಿಗೆ ನಮ್ಮ ತಂಡ ಕೃಷಿ ಮಾಡಲು ಬಂತು. ಬಂಡೆಯನ್ನು ಕಿತ್ತು, ಭೂಮಿಯನ್ನು ಬಗೆದು ಸಮತಟ್ಟು ಮಾಡಿ ಕೃಷಿ ಆರಂಭಿಸಿದೆವು. ಎಲ್ಲರು ನಕ್ಕು ಬಿಟ್ಟರು. ಇಲ್ಲಿ ಸಾವಯವ ಕೃಷಿ ಮಾಡಲು ಆಗಲ್ಲ. ಇದನ್ನು ಮಾರಾಟ ಮಾಡಿ ಇಲ್ಲಿಂದ ಹೊರಡಿ. ಇಲ್ಲಿ ನಾವು ಬತ್ತನೋ, ಕಬ್ಬೋ ಬೆಳೆದುಕೊಳ್ಳುತ್ತೇವೆ ಅಂತ ಹೇಳಿದರು".ಆದರೆ ನಾವು ನಂಬಿದ ಕಾಯಕ ಬಿಡಲಿಲ್ಲ ಎಂದರು ನಮೀತ್ .
ಹಲವಾರು ಭಾರಿ ಸೋತರು ಇಂದು ನಾವು ಗೆದ್ದಿದ್ದೇವೆ. ಭಾರತ ಸಕರ್ಾರದ "ಮೇಕ್ ಇನ್ ಇಂಡಿಯಾ" ಪತ್ರಿಕೆಯಲ್ಲಿ ನಮ್ಮ ಯಶೋಗಾಥೆ ಪ್ರಕಟವಾಗಿದೆ. ತಿ.ನರಸೀಪುರ ತಾಲೂಕು, ತಲಕಾಡು ಹೋಬಳಿಯ ಈ ಸವರ್ೇ ನಂಬರ್ನಲ್ಲಿ ನಾವು ಮಾಡಿದ ಸಾಧನೆಯನ್ನು ಭಾರತ ಸಕರ್ಾರ ಗುರುತಿಸಿದೆ. ಜಗತ್ತಿನ 144 ದೇಶಗಳು ಈ ಹಳ್ಳಿಯ ಕಡೆಗೆ ತಿರುಗಿ ನೋಡುತ್ತಿವೆ.
ಇಲ್ಲಿ ಬೆಳೆದ ಸೊಪ್ಪು, ತರಕಾರಿಗಳು ರಾಷ್ಟ್ರಪತಿ ಭವನ ತಲುಪಿವೆ. ದೇಶದ ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ಗಳು ಇಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಉಪಯೋಗಿಸುತ್ತಿದ್ದಾರೆ.
ನೋ ಪ್ರೆಸ್ಟೀಸೈಡ್, ನೋ ಅರ್ಮೀಸೈಡ್,ನೋ ಕೆಮಿಕಲ್. ಇದು "ಜಿರೋ ಪ್ರೆಸ್ಟೀಸೈಡ್" ಅಗ್ರಿಕಲ್ಚರ್. ಸಾವಯವ, ವಿಷಮುಕ್ತ ಆಹಾರ ಪದಾರ್ಥಗಳನ್ನು ಜಾಗತಿಕ ಗುಣಮಟ್ಟದಲ್ಲಿ ಉತ್ಪಾದಿಸುವ ಮೂಲಕ ದೇಶಕ್ಕೆ ಹೆಮ್ಮೆ ತರುವ ಕೆಲಸಮಾಡಿದ್ದೇವೆ ಎಂದರು.
"ಎಲ್ಲಾ ರೇಸ್ಗಳಲ್ಲೂ ನಾವೇ ಮುಂದೆ ಬರಬೇಕು ಅಂತ ಇಲ್ಲ. ಹಲವಾರು ಬಾರಿ ಸೋತಿದ್ದೇವೆ. ಆದರೂ ಪಂದ್ಯದಲ್ಲಿ ಭಾಗವಹಿಸುವುದು ಮುಖ್ಯ. ಗೆಲುವು, ಸೋಲಲ್ಲ. ಇದನ್ನು ಇಂಡಿಯನ್ ಆರ್ಮಿ ನಮಗೆ ಹೇಳಿಕೊಟ್ಟಿದೆ"
ಇದನ್ನು ಯಾಕೆ ಹೇಳುತ್ತಿದ್ದೇನೆ ಗೊತ್ತಾ?. ಮೊದಲು ರೈತರು ರಾಸಾಯನಿಕ ಬಳಕೆ, ಕ್ರಿಮಿನಾಶಕ ಸಿಂಪರಣೆಯನ್ನು ನಿಲ್ಲಿಸುತ್ತೇವೆ ಅಂತ ಪ್ರತಿಜ್ಞೆ ಮಾಡಬೇಕು.ಅಲ್ಲಿಂದ ಕೃಷಿಯಲ್ಲಿ ನಿಜವಾದ ಗೇಮ್ ಪ್ಲಾನ್ ಆರಂಭವಾಗುತ್ತದೆ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಕೃಷಿ ಮಾಡಿದರೆ ಖಂಡಿತಾ ಗೆಲ್ಲಬಹುದು. ಇದಕ್ಕೆ ನಮ್ಮ ತಂಡದ ಸಾಧನೆಯೇ ಸಾಕ್ಷಿ ಎನ್ನುತ್ತಾರೆ.
ನೀರು, ಮಣ್ಣು ರೈತನ ಎರಡು ಕಣ್ಣು : ಸಾವಯವ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರ, ವಿಷಮುಕ್ತವಾದ ಮಣ್ಣು ಮತ್ತು ನೀರು. ಭೂಮಿಯಲ್ಲಿ ಸೂಕ್ಷ್ಮಾಣುಜೀವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎರೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ. ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ, ಬೀಜಾಮೃತ. ಏನೇ ಮಾಡಿ ರಾಸಾಯನಿಕ ಗೊಬ್ಬರದ ಬಳಕೆ ಮಾತ್ರ ಬೇಡ. ಬೀಸುವ ಗಾಳಿಯಲ್ಲೇ ಶೇಕಡ 76 ರಷ್ಟು ಯೂರಿಯಾ ಇದೆ. ಎನ್ಪಿಕೆ ಸುರಿದು ಭೂಮಿಯನ್ನು ಬರಡು ಮಾಡುವುದನ್ನು ನಿಲ್ಲಿಸಿ ಎಂದು ನಮೀತ್ ಮನವಿ ಮಾಡುತ್ತಾರೆ.
ಒಂದೇ ದಿನದಲ್ಲಿ ಕಾಂಪೋಸ್ಟ್ ಗೊಬ್ಬರವನ್ನು ಬಳಕೆಗೆ ಬರುವಂತೆ ಜೀವಾಣುಗಳನ್ನು ವಿಜ್ಞಾನ ಕಂಡುಹಿಡಿದಿದೆ.ತಾಂತ್ರಿಕತೆಯನ್ನು ಬಳಸಿಕೊಂಡು ಸುಲಭವಾಗಿ ಕೃಷಿ ಮಾಡಬಹುದು.
ಪರಿಸರದಲ್ಲಿ ಮಿತ್ರ ಕೀಟಗಳು ,ಶತ್ರು ಕೀಟಗಳು ಇವೆ. ಕ್ರಿಮಿನಾಶಕ ಸಿಂಪರಣೆಮಾಡಿ ಎರಡನ್ನೂ ಕೊಲ್ಲಬಾರದು. ಊಜಿ ಟ್ರ್ಯಾಪ್, ಗೋಮೂತ್ರ ಸಿಂಪರಣೆ, ಪಂಚಗವ್ಯ, ಬೇವಿನ ಎಣ್ಣೆ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ಮಾಡಿ ಬಳಸಬೇಕು.ಪರಿಸರ ಸ್ನೇಹಿ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.
ಮಣ್ಣಿನಲ್ಲಿ ಹೆಚ್ಚು ಹ್ಯೂಮಸ್ ನಿಮರ್ಾಣ ಮಾಡುವ ಮೂಲಕ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣ ಹೆಚ್ಚಿಸಬೇಕು. ತೋಟದ ಇಳುವರಿ ಹೆಚ್ಚಾಗುವಂತೆ ಮಾಡಲು ಸರಾಗ ಪರಾಗಸ್ಪರ್ಶ ನಡೆಯಲು ಜೇನುನೊಣಗಳನ್ನು ಸಾಕಾಣಿಕೆ ಮಾಡಬೇಕು. ಇದೆಲ್ಲದ್ದರ ಒಟ್ಟು ನೀತಿಪಾಠ ಏನು ಗೊತ್ತಾ ?. ಗೇಮ್ ಪ್ಲಾನ್ ಹೇಗಿರಬೇಕು. ಏನು ಬೆಳೆದರೆ ಹೇಗೆ ಕೃಷಿ ಮಾಡಬೇಕು ಎನ್ನುವುದು ಮೊದಲು ರೈತನಿಗೆ ಗೊತ್ತಿರಬೇಕು ಎನ್ನುವುದೆ ಆಗಿದೆ ಎಂದು ವಿವರಿಸುತ್ತಾರೆ.
ದೇಸಿ ಬೀಜಗಳಿಗೆ ಆದ್ಯತೆ : ದೇಸಿಬೀಜಗಳನ್ನು ಉಳಿಸಿ ಬೆಳೆಸುವುದು ರೈತನ ಆದ್ಯತೆಯಾಗಿಬೇಕು. ತಾತ ಮುತ್ತಾತನ ಕಾಲದಲ್ಲಿ ಮನ್ಸಾಂಟೋ,ಡೂಪ್ಲಾಂಟ್, ಬಾಯರ್, ಹೈಬ್ರಿಡ್ ಬೀಜ ಇರಲಿಲ್ಲ. ಆದರೂ ಮನೆ ತುಂಬ ದವಸಧಾನ್ಯ ಇತ್ತು. ಈಗ ಯಾಕೆ ಅದು ಆಗಲ್ಲ ಎಂದು ನಮೀತ್ ಪ್ರಶ್ನೆ ಮಾಡುತ್ತಾರೆ.
ರೈತ ಸೈನಿಕನಂತೆ ಕೆಲಸ ಮಾಡಬೇಕು. ಹೋರಾಟ, ಚಳವಳಿ, ಹರತಾಳ ಅಂತ ಮಾಡಿಕೊಂಡು ನಿಂತರೆ ಭೂಮಿಯನ್ನು ಯಾರು ನೋಡ್ತಾರೆ. ರೈತ ಅಂದರೆ ಯಾರು ?. ಜಮೀನಿನಲ್ಲಿ ಕೂಲಿ ಕೆಲಸ ಮಾಡುವವನಾ, ತರಕಾರಿ, ಬತ್ತ ಬೆಳೆಯುವವನಾ, ಹಗಲು ರಾತ್ರಿಗಳೆನ್ನದೆ ಜಮೀನಿನಲ್ಲಿ ಕತ್ತೆ ಥರ ದುಡಿಯುವವನಾ.? ಅಲ್ಲಾ. ಜಪಾನಿನ ಫಾರ್ಮರ್ ಒಬ್ಬ ನನಗೆ ರೈತ ಎಂಬ ಪದಕ್ಕೆ ಅರ್ಥ ಹೇಳಿಕೊಟ್ಟ. ಎಂತಹ ಸುಂದರವಾದ ಅರ್ಥ ಅದು. ರೈತನೆಂದರೆ ಕಲೆಗಾರ, ವಿಜ್ಞಾನಿ,ಎಂಜಿನೀಯರ್,ವೈದ್ಯ, ಪೋಷಕ, ಕೇರ್ ಟೇಕರ್ ಆಫ್ ಆಲ್. ಇದೆಲ್ಲವನ್ನು ಒಂದು ಕಡೆ ತಂದು ಬದುಕಿ ತೋರಿಸುವವನು ರೈತ. ನಮ್ಮ ದೇಶ, ನಮ್ಮ ಆರೋಗ್ಯ, ನಮ್ಮ ಮಣ್ಣು, ನೀರು ಇದೆಲ್ಲದ್ದರ ಬಗ್ಗೆ ಅಭಿಮಾನ ಇರುವವನು ರೈತ. ವಿಷಮುಕ್ತ ಆಹಾರ, ವಿಷಮುಕ್ತ ನೆಲ, ಜಲ ಕಾಪಾಡುವುದು ರೈತನ ಕರ್ತವ್ಯ. ಆದರೆ ನಮ್ಮ ರೈತರು ಸೋಮಾರಿಗಳು. ಪ್ರಾಮಾಣಿಕ ಪ್ರಯತ್ನ ಮಾಡಲ್ಲ. ರೈತರು ಮೂರ್ಖರಲ್ಲ. ಅತಿ ಬುದ್ಧಿವಂತರು. ಆದರೆ ಎಲ್ಲಿ, ಯಾವಾಗ ತಮ್ಮ ಬುದ್ಧಿಯನ್ನು ಬಳಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲಾ" ಎಂದು ಹೇಳುವ ಮೂಲಕ ನಮೀತ್ ರೈತರನ್ನು ತರಾಟೆಗೆ ತೆಗೆದುಕೊಂಡರು.
ನಮಗೆ ಭೂಮಿ ಇದೆ.ಸಂಸಾರ ಇದೆ. ಸಣ್ಣಪುಟ್ಟ ಆಸೆಗಳೂ ಇದೆ. ನಮ್ಮ ಸ್ವರ್ಗ ನಮ್ಮಕೈಲಿದೆ. ನರಕವೂ ನಮ್ಮ ಕೈಯಲ್ಲೇ ಇದೆ. ಆಯ್ಕೆ ನಮ್ಮದು. ಪ್ರತಿದಿನ ರಸ್ತೆ ತಡೆ. ಪ್ರತಿಭಟನೆ, ಸಕರ್ಾರದ ವಿರುದ್ಧ, ಕೆಇಬಿ ವಿರುದ್ಧ ಪ್ರತಿಭಟನೆ ಯಾಕೆ ಬೇಕು ?. ಯಾರಾದರೂ ಬಂದು ನಮಗೆ ಇಂತದ್ದೇ ಬೆಳೆ ಬೆಳಿರೀ, ಅದನ್ನ ಬೆಳಿಬೇಡಿ ಅಂತ ಹೇಳಿದ್ದಾರಾ. ಇಲ್ಲಾ.
ನಾನೊಬ್ಬ ಪೈಲಟ್. ಎರೋಪ್ಲೈನ್ ಡ್ರೈವರ್. ಕೃಷಿ ಬಗ್ಗೆ ಏನೂ ಗೊತ್ತಿಲ್ಲ. ಆದರೂ ರೈತರನ್ನು ನೋಡಿ, ಇಂಟರ್ ನೆಟ್ ನೋಡಿ ಇಷ್ಟೆಲ್ಲಾ ಸಾಧನೆ ಮಾಡಿದ್ದೇನೆ. ನಾನು ಇದನೆಲ್ಲಾ ಮಾಡಿ ತೋರಿಸಲು ಈ ಹಳ್ಳಿಗೆ ದೂರದ ಉತ್ತರ್ಖಾಂಡ್ ನಿಂದ ಬರಬೇಕಾ ?. ಇಲ್ಲಿನ ರೈತರೇ ಮಾಡಲಿ. ಇಂಟರ್ನೆಟ್ ಇದೆ. ಮಾಹಿತಿ ಸಿಗುತ್ತದೆ ಎಂದು ಹೇಳುವಾಗ ಸೋಮಾರಿ ರೈತರ ಮೇಲೆ ಅವರಿಗಿರುವ ಸಿಟ್ಟು ಸ್ಫೋಟವಾದಂತೆ ಕಾಣುತ್ತಿತ್ತು.
ಕೃಷಿಕ ಸುಬೇದಾರ್ ಪಾಟೀಲ್ ಹೇಳ್ತಾ ಇದ್ರು "ಸಾಬ್ ದೇಶಸೇವಾ ಅಲ್ಲಿ ಮುಗಿತು. ಇಲ್ಲಿ ಆರಂಭವಾಗಿದೆ" ಅಂತ. ಕುಂಬಾರನಿಗೆ ಮಡಿಕೆ ಮಾಡಲು ಏನು ಬೇಕು?. ಹದವಾದ ತೇವಾ ಇರುವ ಮಣ್ಣು ಬೇಕು. ಹಾಗೆ ಕೃಷಿ ಮಾಡಲು ಆಸಕ್ತಿ ಬೇಕು. ನಿಮ್ಮಲ್ಲಿ ತೇವನ್ನೂ ಇಲ್ಲ, ಹದವೂ ಇಲ್ಲ. ರೈತರಿಗೆ ಕೃಷಿ ಮಾಡಿ ಅಂತ ಹೇಳಿದರೆ ಪ್ರಯೋಜನವೂ ಇಲ್ಲ ಎಂದು ರೈತರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ದೇಶಕ್ಕೆ ಬೇಕಾದ ತೊಗರಿ ಬೇಳೆ ಕೆನಡಾದಿಂದ ಬರುತ್ತದೆ.ಕೊತ್ತಂಬರಿ ರಷ್ಯಾದಿಂದ ಬರುತ್ತದೆ. ಸೇಬು ಅಮೇರಿಕಾದಿಂದ ಬರುತ್ತೆ.ಇದನೆಲ್ಲಾ ಬೆಳೆಯೋಕೆ ನಮ್ಮಲ್ಲಿ ಭೂಮಿ ಇಲ್ವಾ. ಧಮ್ ಇಲ್ವಾ.
ವಿದೇಶದ ಜನ ಉದ್ಧಾರ ಆಗ್ತಾರೆ, ನಾವ್ಯಾಕೆ ಆಗಲ್ಲ.ನಮ್ಮ ಸಕರ್ಾರಗಳಿಗೆ ನಾವು ಕೃಷಿಯಿಂದ ದೂರವಾಗೋದೆ ಬೇಕು. ಅದು ಅವರ ಗೇಮ್ ಫ್ಲಾನ್.ನಮ್ಮದು ಒಂದು ಗೇಮ್ ಫ್ಲಾನ್ ಇರಬೇಕಲ್ವಾ.
ಸಿಕ್ಕಿಂ ಇಂದು ಭಾರತ ದೇಶದ ಮೊದಲ (ಆಗ್ಯರ್ಾನಿಕ್ ಸ್ಟೇಟ್) ಸಾವಯವ ರಾಜ್ಯ ಆಗಿದೆ. ನಮಗೆ ಹೆಮ್ಮ ಅನಿಸುತ್ತದೆ. ತಮಿಳುನಾಡಿನಾದ್ಯಂತ ಉಪ್ಪಿನಕಾಯಿ ತಯಾರಿಸುವ, ಆಂಧ್ರ ಪ್ರದೇಶದಲ್ಲಿ ಹಪ್ಪಳ ತಯಾರುಮಾಡುವ ಗುಡಿ ಕೈಗಾರಿಕೆಗಳಿವೆ. ರಾಜಸ್ಥಾನದಲ್ಲಿ ಅಸಂಖ್ಯಾತ "ನಾರಿ ಸೇವಾ ಕೇಂದ್ರ"ಗಳಿವೆ. ನಮಲ್ಲಿ ಯಾಕೆ ಇಲ್ಲ ಎಂದು ಮೌನಕ್ಕೆ ಜಾರುತ್ತಾರೆ.
ನಮ್ಮ ರೈತರು ಸಂಪೂರ್ಣ ಸಾವಯವದಲ್ಲಿ ಟೊಮಟೊ ಬೆಳೆದು ಫ್ಯಾಕ್ಟರಿಮಾಡಿ ಕ್ಯಾಚಫ್ ತಯಾರಿಸಲಿ. ಕಿಸಾನ್ ಕಂಪನಿಯವರು ವಿಷಮುಕ್ತ ಪದಾರ್ಥ ಖರೀದಿಸಲು ನಾಳೆ ಬೆಳಗ್ಗೆ ರೈತರ ಫ್ಯಾಕ್ಟರಿ ಮುಂದೆ ನಿಂತಿರುತ್ತಾರೆ. ರೈತರು ಆಗ್ಯರ್ಾನಿಕ್ ಫಾರ್ಮರ್ ಪ್ರೊಡ್ಯುಸರ್ ಕಂಪನಿ ಮಾಡಿಕೊಂಡು ಸಾವಯವ ಆಹಾರ ಬೆಳೆಯಬೇಕು. ಜಗತ್ತೆ ಇಂದು ಮಾರುಕಟ್ಟೆಯಾಗಿ ರೂಪುಗೊಂಡಿದೆ. ಬೇಡಿಕೆಯೂ ಇದೆ ಎನ್ನುತ್ತಾರೆ.
ವೈವಿದ್ಯತೆ ಇದ್ದರೆ ಮಾರುಕಟ್ಟೆ : ನಿವೃತ್ತ ಸೈನಿಕರು ಬಂದು ಇಲ್ಲಿ ವಿಷಮುಕ್ತ ತರಕಾರಿ ಬೆಳಿತಾರೆ. ರೈತರಿಂದ ಯಾಕೆ ಆಗ್ತಾ ಇಲ್ಲಾ. ಟೋಮಟೋ ಬೆಳೆದು ಒಬ್ಬ ಒಂದು ಲಕ್ಷ ಸಂಪಾದನೆ ಮಾಡಿದರೆ ಎಲ್ಲರೂ ಟೊಮಟೊ ಹಾಕ್ತಾರೆ. ರೇಟ್ ಬಿದ್ದ್ ಹೋಗುತ್ತೆ. ಬೀದಿಗೆ ಸುರಿತಾರೆ. ಇದು ಬೇಕಾ. ಒಬ್ಬರು ಟೊಮಟೊ ಬೆಳೆದರೆ, ಇನ್ನೊಬ್ಬರು ಕೊತಂಬರಿ, ಮತ್ತೊಬ್ಬ ಸೌತೆಕಾಯಿ, ಇನ್ನೊಬ್ಬ ಕ್ಯಾರೆಟ್, ಮೂಲಂಗಿ ಎಲ್ಲಾ ಒಂದು ಕಡೆ ಸಿಗುತ್ತೆ ಅಂದರೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. 50 ಜನ 50 ಬೇರೆ ಬೇರೆ ರೀತಿ ತರಕಾರಿ ಸೊಪ್ಪು ಬೆಳಸಲಿ. ಮಾರುಕಟ್ಟೆ ಮತ್ತು ಬೇಡಿಕೆ ತಾನಾಗೆ ಸೃಷ್ಠಿಯಾಗುತ್ತೆ.
ನಮ್ಮಲ್ಲಿ 40 ತಳಿ ಟಟೊಮಟೊ ಇದೆ. ನಾವು ಚೆರ್ರಿ ಟೊಮಟೊ ಬೆಳೆದಾಗ ಇಲ್ಲಿನ ಜನ ತಿಪ್ಪೆ ಟೊಮಟೊ ಅಂತ ನಕ್ಕರು. ನಾವು ಅದನ್ನ ಕೆಜಿಗೆ 60 ರೂಪಾಯಿಗೆ ಮಾರಾಟ ಮಾಡಿದ್ವಿ ಎಂದರು.
ಒಂದು ಟೊಮಟೊ 50 ಗ್ರಾಂ ನಿಂದ ಶುರುವಾಗಿ 120 ಗ್ರಾಂ, 200 ಗ್ರಾಂ,350 ಗ್ರಾಂ, 850 ಗ್ರಾಂ ಅಲ್ಲದೆ ಒಂದು ಜಂಬೋ ಟೊಮಟೊ 1.9 ಗ್ರಾಂ ವರೆಗೆ ಇಲ್ಲಿ ಬೆಳಿದ್ದಿದ್ದಾರೆ.
ಒಂದು ಕುಂಬಳಕಾಯಿಯನ್ನು 300 ಕೆಜಿ ವರೆಗೆ ಬೆಳೆದು ಲಿಮ್ಕಾ, ಗಿನ್ನಿಸ್ ಬುಕ್ ರೆಕಾಡರ್್ಗೆ ಕಳುಹಿಸಿದ್ದಾರೆ.
ಜಮೀನಿನಲ್ಲಿ ತಾಂತ್ರಿಕತೆ ಬಳಸುವಾಗ ಅತ್ಯಂತ ಕಡಿಮೆ ಖಚರ್ಿನಲ್ಲಿ, ಹೆಚ್ಚು ಆದಾಯ ಬರುವಂತೆ ಮಾಡಿಕೊಳ್ಳಬೇಕು. ಅದಕ್ಕೆ ರೈತ ಎಂಜಿಯರ್ ಆಗಬೇಕು. ತಾಲ್ ಮಹಲ್, ಎಲಿಪೆಂಟಾ ಗುಹೆ, ಅರಮನೆಗಳನ್ನು ಕಟ್ಟಿದ ದೇಶ ನಮ್ಮದು. ಅಂತಹ ಸಾಮಥ್ರ್ಯ ಇರುವ ನಾಡಿನಲ್ಲಿ ಹುಟ್ಟಿ ಸುಲಭ ಸರಳ ತಾಂತ್ರಿಕತೆ ಅಳವಡಿಸಿಕೊಳ್ಳುವುದನ್ನು ರೈತರು ಕಲಿಯದಿದ್ದರೆ ಅವರನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಮೀತ್.
ದೇಶದ ನಾನಾ ಭಾಗಗಳಲ್ಲಿ ಸಿಗುವ ದೇಸಿಬೀಜ ಸಂರಕ್ಷಣೆಯನ್ನು ಮಾಡುತ್ತಿರುವ ನಮೀತ್ ಮತ್ತು ತಂಡ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಸಾಬೀತು ಮಾಡಿದೆ. ಇಂಟರ್ ನೆಟ್ನಲ್ಲಿ ಫಸ್ಟ್ ಆಗ್ರೋ ಅಂತ ಟೈಪ್ ಮಾಡಿದರೆ ಕಂಪನಿಯ ಮತ್ತಷ್ಟು ಯಶೋಗಾಥೆಗಳನ್ನು ನೀವು ನೋಡಬಹುದು. ಮುಡುಕುತೊರೆಯ ಮಲ್ಲಿಕಾಜರ್ುನಸ್ವಾಮಿ ಬೆಟ್ಟದ ಎಡ ಭಾಗಕ್ಕೆ ತಿರುಗಿದರೆ "ಕಾವೇರಿ ಕ್ಲಸ್ಟರ್" ಎಂಬ ಜಾಗತಿಕ ಗುಣಮಟ್ಟದಲ್ಲಿ ಸಂಪೂರ್ಣ ವಿಷಮುಕ್ತ ಸೊಪ್ಪು ತರಕಾರಿ ಉತ್ಪಾದನೆ ಮಾಡುತ್ತಿರುವ ತೋಟ ಸಿಗುತ್ತದೆ. ಆಸಕ್ತರು ಹೋಗಿ ನೋಡಬಹುದು.ಹೆಚ್ಚಿನ ಮಾಹಿತಿಗೆ ಫಸ್ಟ್ ಆಗ್ರೋ ಎಂಬ ವೆಬ್ ಸೈಟ್ ನೋಡಿ. ಫೇಸ್ ಬುಕ್ನಲ್ಲೂ ಪಸ್ಟ್ ಆಗ್ರೋ ಪೇಜ್ ಲಭ್ಯವಿದೆ.