vaddagere.bloogspot.com

ಭಾನುವಾರ, ಜನವರಿ 15, 2017

ಇದು ಪ್ರಶಾಂತ ಕೃಷಿ: ಬಾಳೆಯಲ್ಲಿ ಪ್ರಯೋಗ
ನಂಜನಗೂಡು ತಾಲೂಕು ಹೊಸವೀಡು ಗ್ರಾಮದ ಎಚ್.ಎಂ.ಮಲ್ಲಿಕಾಜರ್ುನಪ್ಪ ಮತ್ತು ಸುಶೀಲಮ್ಮ ಅವರ ಪುತ್ರ ಪ್ರಶಾಂತ್ ಓದಿದ್ದು ಎಂಎ ಅರ್ಥಶಾಸ್ತ್ರ. ಆದರೆ ಕೈ ಹಿಡಿದಿದ್ದು ಕೃಷಿ. ಕಾಲೇಜು ದಿನಗಳಲ್ಲಿ  ಎನ್ಸಿಸಿ ಸೇರಿದ್ದ ಪ್ರಶಾಂತ್ ಸೇನೆಗೆ ಸೇರಿ ಸೈನಿಕನಾಗಬೇಕೆಂಬ ಕನಸುಕಂಡಿದ್ದರು. ಆದರೆ ಭೂಮಿ ಸೇವೆಗೆ ನಿಂತು ಜೈ ಜವಾನ್ ಬದಲು ಜೈ ಕಿಸಾನ್ ಆದರು. ಹುಲ್ಲಹಳ್ಳಿಯಲ್ಲಿ ನಂದಿ ಅಗ್ರಿ ಕ್ಲಿನಿಕ್ ಎಂಬ ರೈತ ಸಲಹಾ ಕೇಂದ್ರ ಸ್ಥಾಪಸಿ, ಸ್ವತಃ ಕೃಷಿಕನಾಗಿ ರೈತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡುವ ಮೂಲಕ ರೈತರೂ ಉತ್ತಮ ಆದಾಯಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಯುವ ಕೃಷಿಕ ಪ್ರಶಾಂತ್ ಯಶಸ್ವಿ ಕೃಷಿಕ. ಮಾರ್ಗದರ್ಶಕ. ಮಾದರಿ ರೈತ. ನಿಜ ಅರ್ಥದಲ್ಲಿ ಬಂಗಾರದ ಮನುಷ್ಯ.
========================================================
ಕೃಷಿ ಚಿಂತನ ಮಂಥನ ಸಭೆ ಮೂಲಕ ರೈತರಿಗೆ ಅರಿವು  
ನಂಜನಗೂಡು : ಸಾಮಾನ್ಯವಾಗಿ ನಾವೆಲ್ಲ ಒಂದು ಎಕರೆಗೆ 1200 ಬಾಳೆಗಿಡ ಬೆಳೆಯುತ್ತೇವೆ. ಆದರೆ ಇಲ್ಲೊಬ್ಬ ಪ್ರಯೋಗಶೀಲ ಯುವರೈತ ಎಕರೆಗೆ 2970 ಬಾಳೆ ಬೆಳೆಯುವ ಮೂಲಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.ಸೇನೆಗೆ ಸೇರಿ ಸೈನಿಕನಾಗಬೇಕಿದ್ದವರು ನೇಗಿಲ ಯೋಗಿಯಾಗಿ ಮಾದರಿಯಾಗಿದ್ದಾರೆ.
ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ತಂತ್ರಜ್ಞಾನದ ಬಳಕೆಯಲ್ಲಿಯೂ ಮುಂದಿದ್ದಾರೆ. ಇಂತಹ ತಂತ್ರಜ್ಞಾವನ್ನು ಅಳವಡಿಸಿಕೊಳ್ಳುವುದರಲ್ಲಿ ಸುತ್ತಮತ್ತಲಿನ ಆರು ಜಿಲ್ಲೆಗಳಲ್ಲಿ ಮೊದಲಿಗ ರಾಜ್ಯದಲ್ಲಿ ಮೂರನೇಯವ ಎಂಬ ಹೆಮ್ಮೆಗೂ ಪಾತ್ರರಾಗಿದ್ದಾರೆ.
ನಂಜನಗೂಡು ತಾಲೂಕು ಹೊಸವೀಡು ಗ್ರಾಮದ ಎಚ್.ಎಂ.ಮಲ್ಲಿಕಾಜರ್ುನಪ್ಪ ಮತ್ತು ಸುಶೀಲಮ್ಮ ಅವರ ಪುತ್ರ ಪ್ರಶಾಂತ್ ಓದಿದ್ದು ಎಂಎ ಅರ್ಥಶಾಸ್ತ್ರ. ಆದರೆ ಕೈ ಹಿಡಿದಿದ್ದು ಕೃಷಿ. ಕಾಲೇಜು ದಿನಗಳಲ್ಲಿ  ಎನ್ಸಿಸಿ ಸೇರಿದ್ದ ಪ್ರಶಾಂತ್ ಸೇನೆಗೆ ಸೇರಿ ಗಡಿ ಕಾಯುವ ಸೈನಿಕನಾಗಬೇಕೆಂಬ ಕನಸುಕಂಡಿದ್ದರು. ಅದಕ್ಕಾಗಿ ಹಿಂದಿ ಕಲಿತು ರಾಷ್ಟ್ರ ಭಾಷಾ ವಿಶಾರದ ಎಂಬ ಪದವಿಯನ್ನೂ ಮುಡಿಗೇರಿಸಿಕೊಂಡಿದ್ದರು.
2001 ರಲ್ಲಿ ಭಾರತೀಯ ಸೇನೆಗೆ ಸಕ್ಷೆನ್ ಆಫೀಸರ್ ಆಗಿ ಆಯ್ಕೆಯಾದರು. ಸೇನೆಗೆ ಸೇರಬೇಕು ಎನ್ನುವ ಯುವಕನ ಕನಸಿಗೆ ತಂದೆ ತಡೆಯಾದರು. ಪ್ರೀತಿಯ ಮಗ ಸೇನೆ ಸೇರಲು ಅವರು ಬಿಲ್ಕುಲ್ ಒಪ್ಪಲಿಲ್ಲ. ದೇಶ ಕಾಯುವುದು ಒಂದೇ, ನೆಲ ಕಾಯುವುದು ಒಂದೇ. ಜೈ ಜವಾನ್ ಬದಲು ಜೈ ಕಿಸಾನ್ ಆಗು ಸಾಕು ಎಂದರು.
ತಂದೆಯ ಮಾತಿಗೆ ಗೌರವಕೊಟ್ಟು ಹುಲ್ಲಹಳ್ಳಿಯಲ್ಲಿ ನಂದಿ ಅಗ್ರಿ ಕ್ಲಿನಿಕ್ ಎಂಬ ರೈತ ಸಲಹಾ ಕೇಂದ್ರ ಸ್ಥಾಪಸಿ, ಸ್ವತಃ ಕೃಷಿಕನಾಗಿ ರೈತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡುವ ಮೂಲಕ ರೈತರೂ ಉತ್ತಮ ಆದಾಯಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಯುವ ಕೃಷಿಕ ಪ್ರಶಾಂತ್.ಇವರೊಬ್ಬ ಯಶಸ್ವಿ ಕೃಷಿಕ. ಮಾರ್ಗದರ್ಶಕ. ಮಾದರಿ ರೈತ. ನಿಜ ಅರ್ಥದಲ್ಲಿ ಬಂಗಾರದ ಮನುಷ್ಯ.
ಆರಂಭದಲ್ಲಿ ಒಂದುವರೆ ಎಕರೆಯಲ್ಲಿ 74 ಕ್ವಿಂಟಾಲ್ ಅರಿಶಿನ ಬೆಳೆದರು. 3800 ಟೊಮಟೊ ಗಿಡದಲ್ಲಿ22 ಟನ್ ಇಳುವರಿ ತೆಗೆದಿದ್ದರು.2000 ಕಲ್ಲಂಗಡಿ ಗಿಡದಿಂದ 19 ಟನ್ ಹಣ್ಣುಗಳನ್ನು ಪಡೆದು ದಾಖಲೆಮಾಡಿದ್ದರು. ಅಲ್ಲಿಂದ ಇಲ್ಲಿವವರೆಗೆ ಕೃಷಿಯಲ್ಲಿ ಅವರು ನಷ್ಟ ಅನುಭವಿಸಿಲ್ಲ.ಕೃಷಿಯನ್ನು ಒಂದು ಉದ್ಯಮ ಎಂದುಕೊಂಡು ಕೃಷಿಕಾಯಕ ನಿರತರಾಗಿದ್ದಾರೆ. ಅದಕ್ಕೆ ಪತ್ನಿ ಬಿಕಾಂ ಪದವಿಧರೆ ತೇಜಸ್ವಿನಿ ಅವರ ಸಹಕಾರ ಮತ್ತು ಬೆಂಬಲವೂ ಇದೆ.
ನಾಲ್ಕು ಎಕರೆ ಪ್ರದೇಶದಲ್ಲಿ 2000 ನಂಜನಗೂಡು ರಸಬಾಳೆ,3900 ಏಲಕ್ಕಿ ಬಾಳೆ,1800 ನೇಂದ್ರ ಬಾಳೆ,1250 ಜಿ 9 ಗಿಡಗಳನ್ನು ಬೆಳೆಯುವ ಮೂಲಕ ಬಾಳೆಯಲ್ಲಿ ವಿನೂತನ ಪ್ರಯೋಗಮಾಡಿ ಯಶಸ್ವಿಯಾಗಿದ್ದಾರೆ.ಒಂದು ಎಕರೆ ಪ್ರದೇಶದಲ್ಲಿ ಒಂದು ಹೆಕ್ಟರ್ ಪ್ರದೇಶದಲ್ಲಿ ಬರುವಷ್ಟು ಉತ್ಪನ್ನ ತೆಗೆಯುವುದು ಪ್ರಶಾಂತ್ ಅವರ ಗುರಿ.ಇಂತಹ ಮಾದರಿಗಳಿಂದ ಸಣ್ಣ ಹಿಡುವಳಿದಾರ ರೈತರು ಹೆಚ್ಚು ಆದಾಯಗಳಿಸಬೇಕು ಎನ್ನುವುದು ಇವರ ಆಶಯ.
ಸತತವಾಗಿ ನಾಲ್ಕು ವರ್ಷಗಳ ಕಾಲ ಕೃಷಿ ಸಾಧಕರ ತೋಟಗಳಿಗೆ ಭೇಟಿ.ಬನವಾಸಿಯ ಫೈನಾಫಲ್ ಕಿಂಗ್ ಅಬ್ದುಲ್ ರವೊಫ್ ಶೇಖ್ ಮತ್ತು ಶಿವಮೊಗ್ಗದ ಡಾ. ಪ್ರಫುಲ್ಲ ಚಂದ್ರ, ಹನಿ ನೀರಾವರಿಯ ಮಾದರಿ ಕ್ಷೇತ್ರವಾದ ರಂತಲ್ ಪ್ರಾಜೆಕ್ಟ್ ಸೇರಿದಂತೆ ನೂರಾರು ತೋಟಗಳಿಗೆ ಭೇಟಿ. ತೋಟಗಾರಿಕೆ ವಿವಿಯ ಪ್ರಧ್ಯಾಪಕ ಡಾ.ಬಿ.ಎಸ್.ಹರೀಶ್, ಅಗ್ರೋನಾಟಿಕ್ಸ್ನ ಹರೀಶ್ ಅವರಿಂದ ಕೃಷಿಪಾಠ ಕಲಿತು ನಂತರ ಕೃಷಿಕರಾದವರು ಪ್ರಶಾಂತ್. ಕಾಲೇಜು ದಿನಗಳಲ್ಲಿ ಎನ್ಸಿಸಿಯಲ್ಲಿ ಶಿಸ್ತು ಕಲಿಸಿದ ಗುರುಗಳಾದ ಸಾಂಬಸದಾಶಿವಯ್ಯ ಅವರನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ.
ಸಧ್ಯ ಆಕಳ ಗ್ರಾಮದಲ್ಲಿ 2015 ಅಕ್ಟೋಬರ್ 10 ರಂದು ಏಳು ಎಕರೆ ಜಮೀನು ಖರೀದಿಸಿ ಬಾಳೆ ಕೃಷಿಯಲ್ಲಿ ಪ್ರಯೋಗನಿರತರಾಗಿದ್ದಾರೆ. 2016 ಮೇ 15 ರಂದು ಸಾಂದ್ರ ಬೇಸಾಯ ಪದ್ಧತಿಯಲ್ಲಿ ನಾಟಿ ಮಾಡಿದ ಬಾಳೆಯ ಗಿಡಗಳು ಗೊನೆ ಬಿಡಲು ಆರಂಭಿಸಿದ್ದು ಗಾತ್ರ ಮತ್ತು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿದ್ದು ನೋಡಿದವರು ಅಚ್ಚರಿಪಡುವಂತಿವೆ.
ಭೂಮಿ ಸಿದ್ಧತೆ : "ನೀರು ಮತ್ತು ಮಣ್ಣು ಕೃಷಿಯ ಎರಡು ಕಣ್ಣುಗಳಿದ್ದಂತೆ.ಮೊದಲು ಇವೆರಡನ್ನು ನಾವು ಕೃಷಿಗೆ ಪೂರಕವಾಗುವಂತೆ ಸಿದ್ಧಮಾಡಿಕೊಳ್ಳಬೇಕು.ನಾವು ಇಲ್ಲಿ ಜಮೀನು ಖರೀದಿಸಿದಾಗ ಕಲ್ಲುಗುಡ್ಡೆಯಂತೆ ಇತ್ತು. ಜೆಸಿಬಿ ಬಳಸಿ ಕಷ್ಟಪಟ್ಟು ಮೊದಲು ನಮಗೆ ಬೇಕಾದಂತೆ ಸಮತಟ್ಟು ಮಾಡಿಕೊಂಡೆವು. ನಂತರ ಮಳೆಗಾಲದಲ್ಲಿ ಜಮೀನಿಗೆ ನೀರು ನುಗ್ಗಿ ಕೆರೆಯಂತಾಗಿ ಮಣ್ಣನ್ನೆಲ್ಲಾ ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು. ಇದು ನಮಗೆ ದೊಡ್ಡ ಸಮಸ್ಯೆ ಆಯಿತು. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಲು ಜಲತಜ್ಞ ದೇವರಾಜರೆಡ್ಡಿ ಅವರನ್ನು ಕರೆಸಿ ಸವರ್ೇ ಮಾಡಿಸಿದೆವು.ಭೂಮಿ ತುಂಬಾ ಏರುಪೇರಿನಿಂದ ಕೂಡಿದ್ದು ಇಲ್ಲಿ ಮಳೆನೀರು ಕೊಯ್ಲು ಕಷ್ಟ ಎಂದು ಅವರು ಕೈ ಚೆಲ್ಲಿ ಬಿಟ್ಟರು. ನಂತರ ನಾವೇ ಉಪಾಯಮಾಡಿ ಭೂಮಿಯನ್ನು ಬೇಸಾಯಕ್ಕೆ ಸಿದ್ಧ ಮಾಡಿಕೊಂಡೆವು" ಎನ್ನುತ್ತಾರೆ ಪ್ರಶಾಂತ್.
ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಬೇಸಾಯ ಮಾಡುವುದು ನಮ್ಮ ಉದ್ದೇಶವಾಗಿತ್ತು. ಹನಿ ನೀರಾವರಿಗೆ ಡ್ರಿಫ್ ಡಿಸೈನ್ ಮಾಡುವುದು ನಮಗೆ ದೊಡ್ಡ ಸವಾಲಿನ ಕೆಲಸವಾಯಿತು.ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವರು, ಈಗ ನಾವು ಮಾಡಿದ್ದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅನುಭವ ಮತ್ತು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ರೈತರು ಬಳಸುವುದನ್ನು ಕಲಿತುಕೊಳ್ಳಬೇಕು. ಆವಾಗ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಬೆಳೆಸಬಹುದು. ಇದು ಅನುಭವದಿಂದ ಕಂಡುಕೊಂಡಿರುವ ಸತ್ಯ ಎನ್ನುತ್ತಾರೆ.
ಬಾಳೆ ನಾಟಿ ಹೇಗೆ ? : "ಭೂಮಿ ಸಿದ್ಧಮಾಡಿಕೊಂಡ ನಂತರ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಿಸಿದೆವು. ನಾವು ಎಲ್ಲರಂತೆ ಬಾಳೆಯನ್ನು ಗುಂಡಿತೋಡಿಯಾಗಲಿ,ಟ್ರಂಚ್ ಮಾಡಿಯಾಗಲಿ ಹಾಕಿಲ್ಲ.ನಾಲ್ಕು ಅಡಿ ಅಂತರದ ಬೆಡ್ ಮಾಡಿಕೊಂಡು, ತ್ರಿಭುಜಾಕಾರದಲ್ಲಿ(ಜಿಗ್ಜಾಗ್ ಮಾದರಿ) ಒಂದು ಪಿಟ್ಗೆ ಮೂರು ಗಿಡಗಳಂತೆ ಕೂರಿಸಿದ್ದೇವೆ. ಇದರಿಂದ ಬೀಸುವ ಗಾಳಿ ಸುಲಭವಾಗಿ ಯಾವುದೇ ಅಡತಡೆ ಇಲ್ಲದೆ ಹೊರಹೋಗುತ್ತದೆ. ಗೊನೆಬಂದ ನಂತರವೂ ಗಿಡಗಳು ಗಾಳಿಗೆ ನೆಲಕ್ಕೆ ಬೀಳದಂತೆ ನಾವು ಯಾವುದೇ ಕವಲುಗಡ್ಡಿಯನ್ನಾಗಲಿ,ದಾರವನ್ನಾಗಲಿ ಕಟ್ಟಿಲ್ಲ. ಮೂರು ಗಿಡಗಳ ಬೇರುಗಳು ತಳದಲ್ಲಿ ಒಂದಕ್ಕೊಂದು ಹೆಣೆದುಕೊಂಡು ಸದೃಢವಾಗಿ ನಿಂತಿವೆ" ಎಂದರು.
ಆರಂಭದಲ್ಲಿ ಮಣ್ಣಿಗೆ 32 ಟನ್ ಸಿಟಿ ಕಾಂಪೋಸ್ಟ್, 28 ಟನ್ ದನದ ಗೊಬ್ಬರ ಸೇರಿಸಿ ಉಳುಮೆ ಮಾಡಿದೆವು. ನಂತರ ಟ್ರ್ಯಾಕ್ಟರ್ನಲ್ಲಿ ಉಳುಮೆಮಾಡುವುದರಲ್ಲಿ ಪರಿಣತರಾದ ನಂಜನಗೂಡಿನ ಸುಂದರ್ ಆರು ಅಡಿ ಅಂತರ ಬಿಟ್ಟು ನಾಲ್ಕು ಅಡಿಗೆ ಒಂದೊಂದು ಬೆಡ್ಮಾಡಿಕೊಟ್ಟರು. ಮಲ್ಚಿಂಗ್ ಶೀಟ್ ಹಾಕಿ ಗುರುತು ಮಾಡಿಕೊಂಡು ಪ್ರತಿ ಗುಂಡಿಗೂ 25 ಗ್ರಾಂ ಬೇವಿನ ಹಿಂಡಿ,20 ಗ್ರಾಂ ಪೋರೆಟ್ ಹಾಕಿ ಗಿಡಹಾಕಿದೆವು.ಆರಂಭದಲ್ಲಿ ಬಿಸಿಲಿನ ತಾಪ ತಡೆಯಲಾರದೆ 8500 ಗಿಡಗಳು ಮುರುಟಿಹೋದವು. 1500 ದಷ್ಟು ಗಿಡಗಳು ಮಾತ್ರ ಉಳಿದುಕೊಂಡವು. ಆದರೂ ನಾವು ಧೃತಿಗೆಡದೆ ಮತ್ತೆ ನಾಟಿಮಾಡಿದೆವು, ಗೆದ್ದೆವು ಎನ್ನುತ್ತಾರೆ ಪ್ರಶಾಂತ್.
ಇಸ್ರೇಲ್ ತಂತ್ರಜ್ಞಾನ : ಕಳೆದ ಆರು ತಿಂಗಳಿನಿಂದ ಬಾಳೆಯ ಗಿಡಗಳಿಗೆ ಎರಡು ಕೋಟಿ, ತ್ತೊಂಭತ್ತು ಲಕ್ಷದ ಹನ್ನೊಂದು ಸಾವಿರ ಲೀಟರ್ ಕೊಟ್ಟಿದ್ದೇವೆ ಎಂದು ನಿಖರವಾದ ಲೆಕ್ಕ ಹೇಳುವ ಪ್ರಶಾಂತ್ ಇದೆಲ್ಲಾ ಇಸ್ರೇಲ್ ತಂತ್ರಜ್ಞಾನದ ಬಳಕೆಯಿಂದ ಸಾಧ್ಯ ಎನ್ನುತ್ತಾರೆ.
50 ಲಕ್ಷ ಲೀಟರ್ ನೀರು ಸಂಗ್ರಹಣಾ ತೊಟ್ಟಿಯನ್ನು ಆಸ್ಟ್ರೇಲಿಯನ್ ತಂತ್ರಜ್ಞಾನ ಬಳಸಿ ನಿಮರ್ಾಣಮಾಡಿಕೊಳ್ಳಲಾಗಿದೆ. ಎರಡು ಬೋರ್ವೆಲ್ನಿಂದ ಬರುವ ನೀರನ್ನು ಇಲ್ಲಿ ಸಂಗ್ರಹಮಾಡಿಕೊಳ್ಳಲಾಗುತ್ತದೆ.ವಿದ್ಯುತ್ ಕೊರತೆ ಇರುವುದರಿಂದ ಸಿಂಗಲ್ ಫೇಸ್ವಿದ್ಯುತ್ನಲ್ಲಿ ನೀರೆತ್ತುವಂತೆ ಮೋಟಾರನ್ನು ಕಂಪನಿಯವರಿಗೆ ಹೇಳಿ ತಮಗೆ ಬೇಕಾದಂತೆ ಮಾಡಿಸಿಕೊಂಡಿದ್ದಾರೆ.
ಈ ತಂತ್ರಜ್ಞಾನದಲ್ಲಿ ಎರಡು ಕಿ.ಮೀ.ಅಂತರದಲ್ಲಿ 200 ಎಕರೆವರೆಗೂ ಕುಳಿತಲ್ಲೇ ಹನಿ ನೀರಾವರಿಯ ಗೇಟ್ ಕಂಟ್ರೋಲ್ ಮಾಡಬಹುದಾಗಿದೆ. ಆಟೋಮ್ಯಾಟಿಕ್ ಗೇಟ್ವಾಲ್ ಸೆನ್ಸಾರ್ ಅಳವಡಿಸಲಾಗಿದ್ದು ನೀರು ಎಲ್ಲೇ ಪೋಲಾದರೂ ತಕ್ಷಣ ತಿಳಿಸುವಂತಹ ವ್ಯವಸ್ಥೆ ಇದೆ. ಗಿಡಕ್ಕೆ 15 ನಿಮಿಷದಲ್ಲಿ ಇಂತಿಷ್ಟೇ ನೀರು, ಇಷ್ಟೇ ಗೊಬ್ಬರ ಕೊಡಬೇಕೆಂದು ಪ್ರೋಗ್ರಾಮಿಂಗ್ ಮಾಡಿ ಇಟ್ಟುಬಿಟ್ಟರೆ ಆರು ತಿಂಗಳವರೆಗೂ ಇರುತ್ತದೆ. ಮಣ್ಣಿನಲ್ಲಿ ಇಂಗಾಲ(ಪಿಎಚ್) ಕೊರತೆ ಎಷ್ಟಿದೆ, ಏನು ಮಾಡಬೇಕು ಎನ್ನುವುದು ಸುಲಭವಾಗಿ ತಿಳಿಯುತ್ತದೆ.
ಬಾಳೆಯ ಗಿಡಗಳಿಗೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಶೇಕಡ 50 ರಷ್ಟು ಕಡಿಮೆ ರಸಗೊಬ್ಬರ ಕೊಟ್ಟಿದ್ದೇವೆ.ಮುಖ್ಯವಾಗಿ ಹಸಿರೆಲೆ ಗೊಬ್ಬರಕ್ಕೂ ಪ್ರಧಾನ್ಯತೆ ನೀಡಲಾಗಿದೆ. ದ್ವಿದಳ,ಏಕದಳ,ಎಣ್ಣೆಕಾಳುಗಳನ್ನು ಭಿತ್ತಿ ಹೋ ಬಿಡುವ ಹಂತದಲ್ಲಿ ಮಣ್ಣಿಗೆ ಸೇರಿಸುವ ಮೂಲಕ ಸಾವಯವ ಕೃಷಿಗೂ ಆಧ್ಯತೆ ನೀಡಿದ್ದೇವೆ.ಇದರಿಂದಾಗಿ ನಮ್ಮ ಭೂಮಿಯಲ್ಲಿ ಬಿದ್ದ ಹನಿ ನೀರು ಹೊರಗೆ ಹೋಗದೆ ಭೂಮಿಯಲ್ಲಿ ಹಿಂಗುವ ಮೂಲಕ ಮಣ್ಣು ಮೃದುವಾಗಿದ್ದು ಹ್ಯೂಮಸ್ ನಿಂದ ಕೂಡಿದೆ. ಆಧುನಿಕ ಕೃಷಿ ಮತ್ತು ಪಾರಂಪರಿಕ ಕೃಷಿ ಎರಡನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನೆಲ ಮತ್ತು ಜಲದ ಆರೋಗ್ಯವನ್ನು ಕಾಪಾಡಿಕೊಂಡಿದ್ದೇವೆ ಎನ್ನುತ್ತಾರೆ.
ನಾಲ್ಕು ಎಕರೆಗೆ ಕೇವಲ 140 ಬ್ಯಾಗ್ ಗೊಬ್ಬರ,120 ಲೀಟರ್ ನವರಸ್ ಪಂಚಾಜನ್ಯ ಸಿಂಪರಣೆ ಮಾಡಿದ್ದು ಬಿಟ್ಟರೆ ಬೇರೆನನ್ನೂ ಕೊಟ್ಟಿಲ್ಲ.ಒಂದು ಬುಡದಲ್ಲಿ ಏಳು ಕಟ್ಟೆಗಳು ಇವೆ.ಅವೆಲ್ಲಾ ಒಂದೇ ಗಾತ್ರದಲ್ಲಿದ್ದು ಸದೃಢವಾಗಿವೆ. ಉತ್ತಮ ಇಳುವರಿಯೂ ಇದೆ. ಆರಂಭದಿಂದ ಗೊನೆ ಕಟಾವು ಆಗುವವರೆಗೆ ಪ್ರತಿ ಗಿಡಕ್ಕೆ 135 ರೂಪಾಯಿ ವೆಚ್ಚವಾಗುತ್ತದೆ. ಏಲಕ್ಕಿ ಬಾಳೆ ಕನಿಷ್ಟ 20 ಕೆಜಿ ಬಂದರೂ ಕೆಜಿಗೆ 25 ರೂನಂತೆ ಮಾರಾಟವಾದರೂ 500 ರೂ ಬರುತ್ತದೆ. ಖಚರ್ು ಕಳೆದು 365 ರೂ ಉಳಿಯುತ್ತದೆ ಇದಕ್ಕಿಂತ ಲಾಭ ಬೇಕೆ ಎಂದು ಪ್ರಶ್ನಿಸುತ್ತಾರೆ.
ಗುಂಪು ಕೃಷಿ : ಸುತ್ತಮುತ್ತಲಿನ ಎಂಟು ಯುವ ರೈತರನ್ನು ಸೇರಿಸಿಕೊಂಡು ಅವರಿಗೂ ಸಲಹೆ ಮಾರ್ಗದರ್ಶನ ಮಾಡುತ್ತಾ ಕೃಷಿ ಮಾಡುತ್ತಿರುವ ರೀತಿ ಯುವ ರೈತರಿಗೆ ಮಾದರಿಯಾಗುವಂತಿದೆ.ಎಂಬಿಎ ಪದವಿ ಪಡೆದವರು ಉನ್ನತ ವ್ಯಾಸಂಗ ಪಡೆದವರು ಟೀಮಿನಲ್ಲಿದ್ದಾರೆ. ಮಹಾಂತೇಶ್,ಲಿಂಗರಾಜು,ಶಿವಕುಮಾರ್,ಹರ್ಷ,ರಾಜೇಶ್,ಪ್ರಸನ್ನ ಇವರಿಗೆ ಸಾಥ್ ನೀಡುತ್ತಿದ್ದಾರೆ. ಗಿಡ ಹಾಕುವುದರಿಂದ ಹಿಡಿದು ಕಟಾವು ಮಾಡುವವವರೆಗೂ ಏನೆಲ್ಲಾ ಮಾಡಬೇಕು ಎಂಬ ತರಬೇತಿಯನ್ನು ತಂಡಕ್ಕೆ ನೀಡಲಾಗಿದೆ.
15 ತಿಂಗಳ ಅವಧಿಯಲ್ಲಿ 25 ಮಂದಿ ಆಯ್ದ ರೈತರಿಗೆ  ಅವರ ಜಮೀನಿನಲ್ಲಿ ಬಾಳೆ ಬೆಳೆಯಲು ಸಲಹೆ ಮಾರ್ಗದರ್ಶನ ನೀಡಿ ಆರು ಕೋಟಿ ಮೂವತ್ತೆಂಟು ಲಕ್ಷ ರೂಪಾಯಿ ಆದಾಯ ಬರುವಂತೆ ಮಾಡಿದ್ದ ಪ್ರಶಾಂತ್ ಕೃಷಿಯಲ್ಲೂ ಕೋಟಿಗಳಿಸಬಹುದು ಎನ್ನುವುದನ್ನು ರೈತರಿಗೆ ತೋರಿಸಿಕೊಟ್ಟಿದ್ದಾರೆ. ಪ್ರಶಾಂತ್ ಮಾರ್ಗದರ್ಶನದಲ್ಲಿ ಕೃಷಿಮಾಡಿದ್ದ ಹುಸುಗೂರಿನ ಮಂಜಣ್ಣ ಒಂದುವರೆ ಎಕರೆಯಲ್ಲಿ ವಾಷರ್ಿಕ ಹನ್ನೂಂದುವರೆ ಲಕ್ಷ ರೂ.ಸಂಪಾದನೆ ಮಾಡುವ ಮೂಲಕ ಹಳ್ಳಿಯ ಮಾದರಿ ರೈತರಾಗಿದ್ದರು.ಇಂತಹ ಮಾದರಿ ರೈತರು ಹೋಬಳಿಗೊಬ್ಬ ಇದ್ದು ರೈತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರೆ ರೈತರ ಬಾಳು ಬಂಗಾರವಾಗುತ್ತದೆ.
ಹುಲ್ಲಹಳ್ಳಿಯಿಂದ ಕಣನೂರು,ಕಪ್ಪಸೋಗೆ,ಚಂದ್ರವಾಡಿಗೆ ಹೋಗುವ ರಸ್ತೆಯಲ್ಲಿ ಆಕಳ ಗ್ರಾಮ ಸಿಗುತ್ತದೆ. ಅಲ್ಲಿ ಅನುಭವ ಮತ್ತು ತಾಂತ್ರಿಕತೆಗಳನ್ನು ಬಳಸಿಕೊಂಡು ಬಾಳೆ ಕೃಷಿಯಲ್ಲಿ ವಿನೂತನ ಪ್ರಯೋಗಮಾಡಿರುವ ಯಶಸ್ವಿ ಕೃಷಿಕ ಪ್ರಶಾಂತ್ ಅವರ ತೋಟ ಇದೆ.ಆಸಕ್ತರು ಹೆಚ್ಚಿನ ಮಾಹಿತಿಗೆ 9740128896 ಸಂಪಕರ್ಿಸಬಹುದು.









ಸೋಮವಾರ, ಜನವರಿ 9, 2017

 ಚಾಮರಾಜನಗರ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಗಿರೀಶ್ ಅವರಿಗೆ ಕೃಷಿ ಸೋತಿದ್ದು ಎಲ್ಲಿ ಎನ್ನುವುದು ಈಗ ಗೊತ್ತಾಗಿದೆ. ಕೃಷಿಯ ಸೋಲಿಗೆ ಹತ್ತಾರು ಕಾರಣಗಳನ್ನು ಪಟ್ಟಿ ಮಾಡುತ್ತಾರೆ.ಯುವಕರು ಮಣ್ಣಿನೊಂದಿಗೆ ಒಡನಾಟ ಇಟ್ಟುಕೊಳ್ಳುವುದನ್ನು ಮರೆತದ್ದೆ ಕೃಷಿ ಕುಸಿತಕ್ಕೆ ಮೂಲ ಕಾರಣ ಎನ್ನುತ್ತಾರೆ. "ನಮ್ಮದು ಭವಿಷ್ಯದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಡುವ ಕೃಷಿ ಪದ್ಧತಿ. ರೈತನೆಂದರೆ ಎಲ್ಲರೂ ಅಸಡ್ಡೆಯಿಂದ ನೋಡುತ್ತಾರೆ. ಕೃಷಿಕರಿಗೆ ಮದುವೆಯಾಗಲೂ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿರುವ ನಾವು ರೈತ ಕೂಡ ಸಕರ್ಾರಿ ನೌಕರನಿಗಿಂತ ನೆಮ್ಮದಿಯಾಗಿ ಹಳ್ಳಿಯಲ್ಲೆ ಬದುಕಬಹುದು ಎನ್ನುವುದನ್ನು ತೋರಿಸಿಕೊಡಲು ಹೊರಟಿದ್ದೇವೆ" ಎನ್ನುತ್ತಾರೆ ಬೇಡರಪುರದ ಯುವ ಕೃಷಿಕ ಗಿರೀಶ್.

ಕೃಷಿಗೆ ಆರ್ಥಿಕಬಲ ತುಂಬಲು ಹೊರಟ ಯುವರೈತ ಗಿರೀಶ್
ಚಾಮರಾಜನಗರ : ಇಂದಿನ ಯುವಕರು ಕತೆ ಹೇಳಿದರೆ ಕೇಳಲ್ಲ. ಕೃಷಿ ನಷ್ಟದ ಬಾಬ್ತು ಅನ್ನುವಂತಾಗಿದೆ. ಕೃಷಿಕರು ಮದುವೆಯಾಗಲು ಯಾರು ಹೆಣ್ಣು ಕೊಡಲ್ಲ. ಅದಕ್ಕೇ ನಾವು ಹಳ್ಳಿಯಲ್ಲಿ ನಿಂತು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ಮಾದರಿಯಾಗಲು ಹೊರಟಿದ್ದೇವೆ ಎಂದು ಆತ್ಮ ವಿಶ್ವಾಸದಿಂದ ಹೇಳಿದರು ಬೇಡರಪುರದ ಮತ್ತೊಬ್ಬ ಯುವ ಕೃಷಿಕ ಗಿರೀಶ್.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾಗಿ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಗಿರೀಶ್ ಅವರಿಗೆ ಕೃಷಿ ಸೋತಿದ್ದು ಎಲ್ಲಿ ಎನ್ನುವುದು ಈಗ ಗೊತ್ತಾಗಿದೆ. ಕೃಷಿಯ ಸೋಲಿಗೆ ಹತ್ತಾರು ಕಾರಣಗಳನ್ನು ಈಗ ಅವರು ಪಟ್ಟಿ ಮಾಡುತ್ತಾರೆ.ಯುವಕರು ಮಣ್ಣಿನೊಂದಿಗೆ ಒಡನಾಟ ಇಟ್ಟುಕೊಳ್ಳುವುದನ್ನು ಮರೆತದ್ದೆ ಕೃಷಿ ಕುಸಿತಕ್ಕೆ ಮೂಲ ಕಾರಣ ಎನ್ನುತ್ತಾರೆ.
ಮುಂದಿನ ಐದು ವರ್ಷದಲ್ಲಿ ಬೇಡರಪುರವನ್ನು ಸಂಪೂರ್ಣ ನೈಸಗರ್ಿಕ ಗ್ರಾಮ ಮಾಡುವ ನಿಟ್ಟಿನಲ್ಲಿ ಸಕ್ರೀಯರಾಗಿರುವ ರವಿ ಮತ್ತು ಗಿರೀಶ್ ಎಂಬ ಇಬ್ಬರು ಯುವಕರು ಕಳೆದ ಎರಡು ವರ್ಷಗಳಿಂದ ಕೃಷಿಯಲ್ಲಿ ಪ್ರಯೋಗನಿರತರಾಗಿ ಗಮನಸೆಳೆಯುವಂತಹ ಕೆಲಸಮಾಡುತ್ತಿದ್ದಾರೆ. ಇವರಿಗೆ ಹೆಗ್ಗವಾಡಿಪುರದ ಶಿವಕುಮಾರ್ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.
ನೈಸಗರ್ಿಕ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಗಿರೀಶ್, ನಾಲ್ಕು ಎಕರೆ ಪ್ರದೇಶದಲ್ಲಿ ಒಂದು ಸಾವಿರ ಏಲಕ್ಕಿ ಬಾಳೆ, 600 ಪರಂಗಿ, 150 ವಿವಿಧ 9 ತಳಿಯ ಮಾವು (ಇದರಲ್ಲಿ ಮುಖ್ಯವಾಗಿ ಹಿಮಾಮ್ ಪಸಂದ್,ದಶೇರಿ,ಮಲ್ಲಿಕಾ ಹೆಚ್ಚಿನ ಸಂಖ್ಯೆಯಲ್ಲಿದ್ದು ಉಳಿದವು ತಳಿ ಸಂರಕ್ಷಣೆಗಾಗಿ ಹಾಕಲಾಗಿದೆ),25 ನೇರಳೆ (ಬಾಡರ್ೋಲಿ, ಕೃಷ್ಣಗಿರಿ ತಳಿ), 10 ಸಪೋಟ,ನುಗ್ಗೆ ಗಿಡಗಳನ್ನು ಹಾಕಿದ್ದಾರೆ. ಇದಲ್ಲದೆ ನಮ್ಮ ಕೃಷಿ ತಂಡ ತೋಟಕ್ಕೆ ಭೇಟಿ ನೀಡಿದಾಗ ದಾಳಿಂಬೆ, ಮೊಸಂಬಿ, ಕಿತ್ತಳೆ,ಅನಾನಸ್,ಕರಿ ಬೇವು ಹಾಕುವ ಸಿದ್ಧತೆಯಲ್ಲಿದ್ದರು.
ನಮ್ಮದು ಭವಿಷ್ಯದ ಬೇಸಾಯ : "ನಮ್ಮದು ಭವಿಷ್ಯದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಡುವ ಕೃಷಿ ಪದ್ಧತಿ. ರೈತನೆಂದರೆ ಎಲ್ಲರೂ ಅಸಡ್ಡೆಯಿಂದ ನೋಡುತ್ತಾರೆ. ನನ್ನನ್ನೂ ಸೇರಿಕೊಂಡು ಯಾರು ಕೃಷಿಕರಿಗೆ ಮದುವೆಯಾಗಲೂ ಹೆಣ್ಣು ಕೊಡಲ್ಲ. ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿರುವ ನಾವು ರೈತ ಕೂಡ ಸಕರ್ಾರಿ ನೌಕರನಿಗಿಂತ ನೆಮ್ಮದಿಯಾಗಿ ಹಳ್ಳಿಯಲ್ಲಿ ಬದುಕಬಹುದು ಎನ್ನುವುದನ್ನು ತೋರಿಸಿಕೊಡಲು ಹೊರಟಿದ್ದೇವೆ" ಎನ್ನುತ್ತಾರೆ ಗಿರೀಶ್.
"ಮುಂದಿನ ತಲೆಮಾರಿನ ರೈತಮಿತ್ರರು ನಮ್ಮಂತೆ ನೋವು ಅನುಭವಿಸಬಾರದು.ರೈತನ ಬದುಕಿಗೂ ಒಂದು ಘನತೆ ಬರಬೇಕು.ನಗರದಲ್ಲಿದ್ದು ಸಣ್ಣ ಚಾಕರಿ ಮಾಡುವವರಿಗೂ ಹೆಣ್ಣು ಕೊಡುತ್ತಾರೆ. ಕೃಷಿಕ ಎಂದರೆ ಹಿಂಜರಿಯುತ್ತಾರೆ.ಇಂತಹ ಮನೋಭಾವ ತೊಲಗಬೇಕು.ರೈತನಿಗೂ ಹೆಣ್ಣುಕೊಟ್ಟು ಸಂತೋಷದಿಂದ ಮದುವೆಮಾಡಿಕೊಡುವ ನವಸಮಾಜ ನಿಮರ್ಾಣವಾಗಬೇಕು. ಅದಕ್ಕಾಗಿ ನಾವು ಕೃಷಿಯೂ ಲಾಭದಾಯಕ ಉದ್ಯೋಗ ಎಂದು ಸಾಬೀತು ಮಾಡಲು ಹೊರಟಿದ್ದೇವೆ.
ಕೆರೆಗಳಿಗೆ ನೀರು ತುಂಬಿಸಿರುವುದರಿಂದ ಈಗ ನಮಗೆ ನೀರು ಸಿಗುತ್ತಿದೆ. ಮುಂದೆ ಕಬಿನಿ ಜಲಾಶಯಕ್ಕೆ ನೀರು ಬಾರದೆ ಇದ್ದರೆ ಸಮಸ್ಯೆ ನಿಶ್ಚಿತ. ಅದಕ್ಕಾಗಿ ನಾವು ಒಣಭೂಮಿ ಬೇಸಾಯಕ್ಕೆ ಆದ್ಯತೆ ನೀಡಿದ್ದೇವೆ. ಮುಂದೆ ನೀರಿನ ಸಮಸ್ಯೆ ಉಂಟಾಗಬಹುದು.ವಿದ್ಯುತ್ ಸಮಸ್ಯೆ ತಲೆದೋರಬಹುದು.ಅದಕ್ಕಿಂತ ಹೆಚ್ಚಾಗಿ ತೋಟದಲ್ಲಿ ಕೆಲಸ ಮಾಡಲು ಕೂಲಿ ಆಳುಗಳ ಸಮಸ್ಯೆಯಾಗಬಹುದು. ಚಾಮರಾಜನಗರದ ಸಮೀಪ ಕೈಗಾರಿಕಾ ವಲಯ ಬಂದಿದೆ.ಇದರಿಂದ ಕೃಷಿ ಕಾಮರ್ಿಕರ ವಲಸೆ ಗ್ಯಾರಂಟಿ. ಅದಕ್ಕಾಗಿ ನಾವು ಮಾನವ ಹಸ್ತಕ್ಷೇಪ ಕಡಿಮೆ ಇರುವ, ಕಡಿಮೆ ಖಚರ್ು ಆದಾಯ ಹೆಚ್ಚು ಎನ್ನುವ ಕೃಷಿ ಪದ್ಧತಿಯನ್ನು ಅನುಸರಿಸಲು ಮುಂದಾಗಿದ್ದೇವೆ" ಎನ್ನುತ್ತಾರೆ.
ಈ ಕೃಷಿ ಪದ್ಧತಿ "ಫುಡ್,ಹುಡ್,ಫಾರೆಸ್ಟ್" (ಪಿಎಚ್ಎಫ್) ಎಂಬ ಕಾನ್ಸೆಪ್ಟ್ನಿಂದ ಕೂಡಿದೆ. ಮಾವು,ಹಲಸು,ನಿಂಬೆ,ದಾಳಿಂಬೆ,ನೇರಳೆ,ಸೀತಾಫಲ ಹೀಗೆ ಒಂಭತ್ತು ವಿಧದ ಹಣ್ಣಿನ ಗಿಡಗಳು ನಡುವೆ ತರಕಾರಿ ಬೆಳೆದುಕೊಳ್ಳುವುದು. ಮೂರು ವರ್ಷಗಳವರೆಗೆ ಗಿಡಗಳನ್ನು ಜೋಪಾನವಾಗಿ ನೋಡಿಕೊಂಡರೆ,ಮುಂದೆ ಅವೇ ನಮ್ಮನ್ನು ನೋಡಿಕೊಳ್ಳುತ್ತವೆ. ಮನೆಯವರೆ ಸುಲಭವಾಗಿ ತೋಟ ನಿರ್ವಹಣೆ ಮಾಡಿಕೊಳ್ಳಬಹುದು ಎಂಬ ವಿಧಾನದಲ್ಲಿ ಮರಗಿಡಗಳನ್ನು ಸಂಯೋಜನೆ ಮಾಡಲಾಗಿದೆ.
ರಾಸಾಯನಿಕದಲ್ಲೂ ಗೆದ್ದಿದ್ದ ಕೃಷಿಕ :  ಇಪ್ಪತ್ತು ಎಕರೆ ಜಮೀನು ಹೊಂದಿರುವ ಕೃಷಿಕ ಗಿರೀಶ್ ಆರಂಭದಲ್ಲಿ ರಾಸಾಯನಿಕ ಕೃಷಿಮಾಡಿಯೂ ಯಶಸ್ವಿಯಾಗಿದ್ದರು. ಬಾಳೆ,ಅರಿಶಿನ,ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ಅಧಿಕ ಇಳುವರಿಯೊಂದಿಗೆ ಬೆಳೆದಿದ್ದರು. ಆದರೆ ಇದರಿಂದ ಕೃಷಿಯ ವೆಚ್ಚ ಮತ್ತು ಆದಾಯ ಎರಡೂ ಸಮನಾಗಿ ರೈತನಿಗೆ ಲಾಭವಾಗಲಿಲ್ಲ.
"ಗೊಬ್ಬರ ಮತ್ತು ಕ್ರಿಮಿನಾಶಕ, ಭಿತ್ತನೆ ಬೀಜ ಕಂಪನಿಯವರು ನಮ್ಮ ರಾಸಾಯನಿಕ ಪದ್ಧತಿ ಕೃಷಿಯಿಂದ ಶ್ರೀಮಂತರಾದರೆ ಹೊರತು ನಾವು ನಿಂತಲ್ಲೆ ನಿಂತೆವು. ಕೆಲವರಂತೂ ಸಾಲದ ಶೂಲಕ್ಕೆ ಸಿಲುಕಿದರು. ಹಳ್ಳಿಯ ಹಣವೆಲ್ಲಾ ಹೀಗೆ ನಗರ ಸೇರಿತು. ಇದರಿಂದಾಗಿ ರೈತ ಸಮುದಾಯ ಆತ್ಮವಿಶ್ವಾಸ ಕಳೆದುಕೊಂಡಿತು. ಸಾಂಪ್ರದಾಯಿಕ ಕೃಷಿ ಮರೆತ ರೈತ ಸೋಮಾರಿಯಾದ. ಇದರಿಂದ ನಮ್ಮ ಕೃಷಿಗೆ ಸೋಲಾಯಿತು" ಎಂದು ಗಿರೀಶ್ ಹೇಳುತ್ತಾರೆ.
ಎಂಭತ್ತರ ದಶಕದಲ್ಲಿ ಫ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಕಾಲದಲ್ಲಿ ಇದ್ದ ಸಮಸ್ಯೆಗಳೆ ಬೇರೆ. ಈಗ ನಮ್ಮ ಮುಂದಿರುವ ಸವಾಲುಗಳೆ ಬೇರೆ.ಸಂಘಟನೆ, ಚಳವಳಿ,ಹೋರಾಟ ಅಂತ ನಾವು ಇಡೀ ಜೀವನ ಸವೆಸಿಬಿಟ್ಟಿದ್ದೇವೆ. ಪ್ರತಿ ಹಳ್ಳಿಯಲ್ಲೂ ರೈತ ಸಂಘಟನೆಯ ಯುವಕರು ಇದ್ದೇ ಇದ್ದಾರೆ. ಈಗ ತುತರ್ಾಗಿ ಆಗಬೇಕಾದ ಕೆಲಸ ಕೃಷಿಯನ್ನು ಲಾಭದಾಯಕ ಉದ್ಯೋಗ ಎಂದು ತೋರಿಸಿಕೊಡುವುದು. ಅದಕ್ಕಾಗಿ ಆಥರ್ಿಕವಾಗಿ ಗಟ್ಟಿಯಾಗಿರುವ ಯುವಕರು ಪ್ರತಿ ಹಳ್ಳಿಯಲ್ಲೂ ನಮ್ಮಂತೆ ಸ್ವಾವಲಂಬನೆ ಕೃಷಿ ಮಾಡಿ, ಜೀವಂತ ನಿದರ್ಶನವಾಗುವ ಮೂಲಕ ಮಾದರಿಯಾಗಬೇಕು.
ಕತೆ ಹೇಳಿದರೆ,ಭಾಷಣ ಮಾಡಿದರೆ ಈಗ ಯಾರು ನಂಬುವುದಿಲ್ಲ.ನಮ್ಮ ಬದುಕೇ ಕತೆಯಾಗಬೇಕು. ಆಗ ಸಮಾಜದಲ್ಲಿ ರೈತರ ಬಗ್ಗೆಯೂ ಗೌರವ ಭಾವನೆ ಬರುತ್ತದೆ ಎನ್ನುವುದು ಗಿರೀಶ್ ಅವರ ಆತ್ಮವಿಶ್ವಾಸ ನುಡಿ.
ಮಣ್ಣಿಗೆ ಬಲ ನೀಡಬೇಕು: ಇಷ್ಟೆಲ್ಲಾ ಮಾಡುವ ಮೊದಲು ರೈತರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮಣ್ಣಿಗೆ ಅವೈಜ್ಞಾನಿಕವಾಗಿ ರಾಸಾಯನಿಕ ಸುರಿಯುವ ಮೂಲಕ ಜೀವ ಇಲ್ಲದಂತೆ ಮಾಡಿದ್ದೇವೆ. ಮತ್ತೆ ಮಣ್ಣಿಗೆ ಜೀವ ನೀಡುವ ಕೆಲಸ ಮೊದಲು ಆಗಬೇಕು.
ನವಧಾನ್ಯಗಳನ್ನು ಭಿತ್ತಿ ಅವು ಹೂ ಬಿಡುವ ಹಂತದಲ್ಲಿ ಮಣ್ಣಿಗೆ ಸೇರಿಸಬೇಕು. ಮೂರು ಎಣ್ಣೆ ಕಾಳು, ಮೂರು ಏಕದಳ, ಮೂರು ದ್ವಿದಳ ಧಾನ್ಯಗಳನ್ನು ಭಿತ್ತಿ ಮಣ್ಣಿಗೆ ಸೇರಿಸಿದರೆ ಜೀವಕಣಗಳು ಚೈತನ್ಯ ಪಡೆಯುವ ಮೂಲಕ ಮಣ್ಣಿಗೆ ಬಲ ಬರುತ್ತದೆ. ಬೀಜ ಮತ್ತು ಮಣ್ಣು ಎರಡರ ಬಲ ಕೃಷಿಯನ್ನು ಗೆಲ್ಲಿಸುತ್ತದೆ.
ಆರಂಭದಲ್ಲಿ ಮೂರು ಭಾರಿ ತಮ್ಮ ತೋಟದಲ್ಲಿ ಇದೆ ಪದ್ಧತಿ ಅನುಸರಿಸಲಾಗಿದೆ.ನಂತರ ಪ್ರತಿ ಗಿಡಕ್ಕೂ ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಕೊಟ್ಟು ಗಿಡಗಳನ್ನು ಹಾಕಲಾಗಿದೆ. ಇದನ್ನು ಬಿಟ್ಟರೆ ಯಾವ ಜೀವಾಮೃತವನ್ನಾಗಲಿ, ಗಂಜಲ ಹುಳಿ ಮಂಜಿಗೆ ಸಿಂಪರಣೆಯನ್ನಾಗಲಿ ಮಾಡಿಲ್ಲಾ. ಆದರೂ ಪ್ರತಿ ಗಿಡಗಳು ಎಷ್ಟೊಂದು ಹಸಿರು ಮತ್ತು ಆರೋಗ್ಯ ಪೂರ್ಣವಾಗಿ ನೋಡಿ ಎಂದು ಗಿರೀಶ್ ಹೇಳುವಾಗ ಅವರ ಹಸಿರು ತೋಟದ ನಡುವೆ ನಾವು ಕಣ್ಣರಳಿಸಿ ನೋಡುತ್ತಾ ನಿಂತಿದ್ದೆವು. ಪರಂಗಿ ಗಿಡಗಳು ಯಾವ ಔಷಧವನ್ನು ಸಿಂಪಡಿಸಿಕೊಳ್ಳದೆ ಹೂ ಬಿಟ್ಟು ನಗುತ್ತಿದ್ದವು.
ಸವಾಲು ಸಮಸ್ಯೆ ಆಗಬಾರದು : ಯುವಕರಿಗೆ ಕೃಷಿಯ ಮೇಲೆ ಆಸಕ್ತಿ ಬರುವಂತೆ ಮೊದಲು ಮಾಡಬೇಕು. ಕೃಷಿಯಿಂದಲೂ ಆದಾಯ ಬರುತ್ತದೆ ಎನ್ನುವುದು ಗ್ಯಾರಂಟಿಯಾದಾಗ ಅವರು ಕೃಷಿಯತ್ತ ಬರುತ್ತಾರೆ. ಯಾರಿಗೂ ಈಗ ಜ್ಞಾನದ ಮೇಲೆ ಆಸಕ್ತಿ ಇಲ್ಲ.ಹಣದ ಮೇಲೆ ಮೋಹ. ಕೃಷಿಯಲ್ಲಿ ಎದುರಾಗುವ ಸವಾಲುಗಳನ್ನೆ ಸಮಸ್ಯೆಗಳು ಎಂದುಕೊಳ್ಳುತ್ತಿದ್ದಾರೆ. ಇಂದೊಂದು ಕಲಿಕಾ ಕ್ರಮ ಎಂದುಕೊಳ್ಳತ್ತಿಲ್ಲಾ. ನಮ್ಮ ಮನೆಯವರೇ ಆರಭದಲ್ಲಿ ನೈಸಗರ್ಿಕ ಕೃಷಿ ಪದ್ಧತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರಿಗೂ ನಮ್ಮ ಮೇಲೆ ನಂಬಿಕೆ ಬಂದಿದೆ. ತರಕಾರಿ, ಬಾಳೆ ಬೆಳೆದು ತೋರಿಸಿದ್ದೇವೆ. ಮುಂದೆ ಪ್ರತಿ ಹಳ್ಳಿಯಲ್ಲಿಯೂ ಇಬ್ಬರು ಯುವಕರನ್ನು ಹೀಗೆ ಮಾದರಿ ರೈತರನ್ನಾಗಿ ಮಾಡುವುದು ನಮ್ಮ ಗುರಿ.
ರಾಜಕೀಯ ಮತ್ತು ಆಡಳಿತಾತ್ಮಕವಾಗಿ ರೈತಸಂಘಟನೆಯ ನಿಲುವು ಧೋರಣೆ ಸರಿ. ಆದರೆ ಜೀವನ ನಿರ್ವಹಣೆ ಮತ್ತು ಆರೋಗ್ಯದ ದೃಷ್ಠಿಯಿಂದ ಇಂತಹ ಮಾದರಿಗಳನ್ನು ನಾವು ಕಟ್ಟಿಕೊಟಬೇಕಾದ ಅನಿವಾರ್ಯತೆ ಈಗ ಇದೆ ಎಂದು ಯುವಕರಿಗೆ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತಿರುವ ಒಣಭೂಮಿ ಬೇಸಾಯ ತಜ್ಞ ಹೆಗ್ಗವಾಡಿಪುರ ಶಿವಕುಮಾರ್ ದನಿಗೂಡಿಸುತ್ತಾರೆ.
120 ಕೋಟಿ ಜನಸಂಖ್ಯೆಯೇ ನಮ್ಮ ಮಾರುಕಟ್ಟೆ. ಎಲ್ಲರೂ ಒಂದಲ್ಲ ಒಂದು ರೋಗದಿಂದ ನರಳುತ್ತಿದ್ದಾರೆ. ತಿನ್ನುವ ಆಹಾರವೇ ವಿಷವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇಂತಿಷ್ಟು ಟನ್ ಸಾವಯವ ಗೊಬ್ಬರ ಮಾರಾಟ ಮಾಡಲೇ ಬೇಕು ಅಂತ ಸಕರ್ಾರವೆ ಅಧಿಕಾರಿಗಳಿಗೆ ಹೇಳುತ್ತಿದೆ.ಅದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಕೃಷಿ ಇಲಾಖೆಗಳು ರೈತರಿಗೆ ಪರಿಚಯವಾಗುವ ಮೊದಲು ರೈತರು ಚೆನ್ನಾಗಿಯೇ ಇದ್ದರು.ಮನೆ ತುಂಬ ದವಸಧಾನ್ಯ ತುಂಬಿರುತ್ತಿತ್ತು.ರಾಸಾಯನಿಕ ಕೃಷಿ ಬಂದ ಮೇಲೆ ರೈತರ ಮನೆಮನ ಎರಡೂ ಬರಡಾದವು ಎಂದು ಶಿವಕುಮಾರ್ ಹೇಳುವಾಗ ಹಸಿರು ಕ್ರಾಂತಿಯ ಪರಿಣಾಮಗಳು ಕಣ್ಣಮುಂದೆ ಮೆರವಣಿಗೆ ಹೊರಟವು.
ಹಳ್ಳಿ ಮತ್ತು ರೈತ ಇಬ್ಬರನ್ನು ಉಳಿಸಿಕೊಳ್ಳುವ ಹೊಸ ಮಾದರಿಯೊಂದನ್ನು ಕಟ್ಟಲು ಹೊರಟ ಯುವಕರು ತಮ್ಮ ವಿಶಿಷ್ಟ ಪ್ರಯೋಗದ ಮೂಲಕ ಈಗ ಜಿಲ್ಲೆಯಲ್ಲಿ ಸುದ್ದಿಯಾಗಿದ್ದಾರೆ. ಇವರ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ಮತ್ತಷ್ಟು ಯುವಕರು ಸ್ಫೂತರ್ಿ ಪಡೆಯುವಂತಾಗಲಿ ಎನ್ನುವುದೆ ನಮ್ಮ ಆಶಯ. ಹೆಚ್ಚಿನ ಮಾಹಿತಿಗೆ ಗಿರೀಶ್ 9964825234 ಸಂಪಕರ್ಿಸಬಹುದು.



ಗುರುವಾರ, ಜನವರಿ 5, 2017

ಬೆಳಕಿನ ಬೇಸಾಯದ ಕಡೆಗೆ ಮೊದಲ ಹೆಜ್ಜೆ...

ಇದು "ಬಿದಿರು ಬೇಸಾಯ ಬಳಗ"ದ ಹೊಸ ಪರಿ ಕಲ್ಪನೆ. ಕುಸಿಯುತ್ತಿರುವ ಕೃಷಿಗೆ ಹೆಗಲು ಕೊಡುವ ಸಣ್ಣ ಪ್ರಯತ್ನ. ಹೊಸ ವರ್ಷದ ಹೊಸ ಸಂಕಲ್ಪ. ಬೆಳಕಿನ ಬೇಸಾಯದ ಕಡೆಗೆ ನಮ್ಮ ಪಯಣ..........
ಹದಿನೈದು ತಿಂಗಳಲ್ಲಿ ಆರು ಕೋಟಿ ಆದಾಯ...!.ಹಾಗಂತ ನಾನು ಫೇಸ್ ಬುಕ್ ನಲ್ಲಿ ಬರೆದಾಗ ಆ ಸುದ್ದಿಯನ್ನು ನೂರಕ್ಕೂ ಹೆಚ್ಚು ಗೆಳೆಯರು ಶೇರ್ ಮಾಡಿಕೊಂಡರು. ಸಾವಿರಾರು ಜನ ಓದಿ ಹುಬ್ಬೆರಿಸಿದರು. ಆಗ ನನಗನಿಸಿದ್ದು ಈ ಸುದ್ದಿಗೆ ಇಷ್ಟೊಂದು ಪ್ರಾಮುಖ್ಯತೆ ಇದೆಯಾ ?. ಹಾಗಾದರೆ ವಿವರವಾಗಿ ಬರೆದುಬಿಡೋಣ ಎಂದು ಕುಳಿತೆ. ಪ್ರತಿವಾರ ಸಣ್ಣ ಸಣ್ಣ ಸಂಗತಿಗಳೊಂದಿಗೆ ಮುಖಾಮುಖಿಯಾಗೋಣ. ನಾನು ಬರೆದಿರುವುದೆ ಅಂತಿಮ ಸತ್ಯ ಅಲ್ಲ. ನಿಮ್ಮಗೂ ಕೃಷಿಯಲ್ಲಿ ವಿಭಿನ್ನ ಅನುಭವಗಳಾಗಿರಬಹುದು. ಹಂಚಿಕೊಳ್ಳಿ.
ಇದು ಗ್ರೂಫ್ ಪಾರ್ಮಿಂಗ್. ಗುಂಪು ಬೇಸಾಯ. ಹೀಗೆ ಮಾಡುವುದರಿಂದ ಎಷ್ಟು ಲಾಭ ಎನ್ನುವುದಕ್ಕೆ ನಾವು ಕಂಡ ಮಾದರಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಹದಿನೈದು ತಿಂಗಳಲ್ಲಿ ಬಾಳೆ ಬಾಳೆದು ಆರು ಕೋಟಿ ಮೂವತ್ತೆಂಟು ಲಕ್ಷ ರೂಪಾಯಿ ಆದಾಯಗಳಿಸಿದ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸುತ್ತಲಿನ ಗ್ರಾಮದ ರೈತರು. ಹೌದು. ಆಶ್ಚರ್ಯವಾಗುತ್ತಿರಬಹುದು. ಆದರೂ ಇದು ನಿಜ. ಒಂದು, ಎರಡು ಎಕರೆ ಜಮೀನು ಇರುವ ಸಣ್ಣ ಸಣ್ಣ ರೈತರ ಗುಂಪುಮಾಡಿ 25 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಸಿಗಳಿಸಿದ ಆದಾಯ ಇದು.ಇದರ ಹಿಂದಿನ ವ್ಯಕ್ತಿ ಮತ್ತು ಶಕ್ತಿ ಒರ್ವ ಯುವ ಕೃಷಿಕ.
ನಂಜನಗೂಡು ತಾಲೂಕು ಹುಲ್ಲಹಳ್ಳಿಯಲ್ಲಿ ನಂದಿ ಅಗ್ರಿ ಕ್ಲಿನಿಕ್ ಎಂಬ ರೈತ ಸಲಹಾ ಕೇಂದ್ರ ಸ್ಥಾಪಸಿಕೊಂಡು ರೈತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡುವ ಮೂಲಕ ರೈತರು ಸಾಕಷ್ಟು ಆದಾಯಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಯುವ ಕೃಷಿಕ ಪ್ರಶಾಂತ್.
ಹೊಸವೀಡು ಗ್ರಾಮದ ಎಚ್.ಎಂ. ಮಲ್ಲಿಕಾರ್ಜನಪ್ಪ ಮತ್ತು ಸುಶೀಲಮ್ಮ ದಂಪತಿಯ ಪುತ್ರ ಪ್ರಶಾಂತ್ ಓದಿದ್ದು ಎಂ.ಎ,ಅರ್ಥಶಾಸ್ತ್ರ.ಆದರೆ ಕೈಹಿಡಿದಿದ್ದು ಕೃಷಿ. ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ ಎಂದು ಎಲ್ಲರೂ ಚಚರ್ೆಮಾಡುವ ಕಾಲಕ್ಕೆ ಉನ್ನತ ಶಿಕ್ಷಣ ಮುಗಿಸಿದ ಪ್ರಶಾಂತ್ ಹಳ್ಳಿಯ ದಿಕ್ಕಿಗೆ ಮುಖಮಾಡಿದ್ದ.ಈಗ ಅವನೊಬ್ಬ ಯಶಸ್ವಿ ಕೃಷಿಕ. ಮಾರ್ಗದರ್ಶಕ.ಮಾದರಿ ರೈತ. ನಿಜ ಅರ್ಥದಲ್ಲಿ ಬಂಗಾರದ ಮನುಷ್ಯ. ಪ್ರಶಾಂತ ಕೃಷಿಗೆ ಪತ್ನಿ ತೇಜಸ್ವಿನಿ ಸಾಥ್ ನೀಡುವ ಮೂಲಕ ರೈತ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ.
ಗ್ರಾಮೀಣ ಆಥರ್ಿಕತೆಯನ್ನು ಸದೃಢಮಾಡಬೇಕು. ರೈತರು ಸಬ್ಸಿಡಿಗಾಗಿ ಭಿಕ್ಷಾಪಾತ್ರೆ ಹಿಡಿದು ನಿಲ್ಲಬಾರದು.ಸ್ವಾಭಿಮಾನ, ಆತ್ಮ ವಿಶ್ವಾಸದಿಂದ ತಲೆ ಎತ್ತಿ ನಡೆಯುವಂತಾಗಬೇಕು.ರೈತ ಮಕ್ಕಳಿಗೆ ಗೌರವತರುವಂತೆ ಬದುಕು ಕಟ್ಟಿಕೊಳ್ಳಲು ಏನಾದರೊಂದು ಮಾಡಲೇ ಬೇಕು ಎಂಬ ಅಚಲ ನಿಧರ್ಾರ ಮಾಡಿ ಊರಿಗೆ ಹೋದ ತರುಣ ಪ್ರಶಾಂತ್.
"ತಾನು ಅಂದುಕೊಂಡದ್ದನ್ನು ಸಾಧಿಸಿದ ತೃಪ್ತಿ ಇದೆ. ಕೃಷಿಯಲ್ಲೂ ಹಣವಿದೆ ಎನ್ನುವುದನ್ನು ತೋರಿಸಿ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿದ ಸಮಾಧಾನವಿದೆ.ಆದರೂ ತಾನು ಸಾಧಿಸಿದ್ದು ಏನೇನು ಅಲ್ಲಾ.ನಮ್ಮ ಉದ್ದೇಶ ಮತ್ತು ಗುರಿ ತುಂಬಾ ದೊಡ್ಡದಿದೆ. ನಾವು ಅಂದುಕೊಂಡದ್ದು ಆದರೆ ಇದೆ ವರ್ಷ ನೂರ ಇಪ್ಪತ್ತು ಎಕರೆಯಲ್ಲಿ ಪರಸ್ಪರ ಸಹಕಾರ ತತ್ವದಡಿ( ಕ್ರೌಡಿಂಗ್ ಫಂಡ್) ಕೃಷಿಮಾಡಿ ತೋರಿಸುತ್ತೇವೆ" ಎಂದು ಪ್ರಶಾಂತ್ ತುಂಬು ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಮೈಸೂರು ಜಿಲ್ಲೆಯಲ್ಲೆ ತನ್ನ ಹೊಸ ಪ್ರಾಜೆಕ್ಟ್ನ ಕಲ್ಪನೆ ಸಾಕಾರವಾಗುತಿದ್ದು ಅದೆಲ್ಲಾ ಒಂದು ಹಂತಕ್ಕೆ ಬಂದ ನಂತರ ವಿವರವಾಗಿ ತಿಳಿಸುವುದಾಗಿ ಹೇಳುತ್ತಾರೆ.
ಇಂತಹ ಕನಸು ಮತ್ತು ಆದರ್ಶವಿಟ್ಟುಕೊಂಡ ರೈತ ಹೋಬಳಿಗೊಬ್ಬ ಇದ್ದರೆ ರೈತ ಮತ್ತು ಕೃಷಿ ಉಳಿಯುತ್ತದೆ.ಹಳ್ಳಿಗಳೂ ಆಥರ್ಿಕವಾಗಿ ಸದೃಢವಾಗುತ್ತವೆ. ರೈತ ಬದುಕಿಗೆ ಘನತೆ ಬರುತ್ತದೆ. ರಾಜ್ಯದ ಉದ್ದಗಲ್ಲಕ್ಕೂ ಬೆಳಕಿನ ಬೇಸಾಯ ಮಾಡುತ್ತಿರುವ ಮಾದರಿ ರೈತರನ್ನು ಹುಡುಕಿ ಹೊರಟ ನಮಗೆ ನೂರಾರು ಅಚ್ಚರಿಯ ಅನುಭವಗಳಾಗಿವೆ. ಪ್ರತಿ ತೋಟದಲ್ಲೂ ಬೇರೆ ಬೇರೆ ಕೃಷಿ ವಿಶ್ವ ವಿದ್ಯಾನಿಲಯಗಳಿಂದ ಕಲಿತು ಬಂದ ವಿಜ್ಞಾನಿಗಳಂತೆ ರೈತರು ಕಂಡಿದ್ದಾರೆ.
ನಿಮಗೆ ನೆನಪಿರಲ್ಲಿ ಅವರಲ್ಲಿ ಅನಕ್ಷರಸ್ಥರು, ಉನ್ನತ ವ್ಯಾಸಂಗ ಮಾಡಿದವರು, ಸಾಫ್ಟ್ವೇರ್ ಎಂಜಿನಿಯರ್ಗಳು ಹೀಗೆ ಎಲ್ಲರೂ ಇದ್ದರು. ನಾವೆಲ್ಲಾ ನಗರದಲ್ಲಿ ಕುಳಿತು ಕೃಷಿಲಾಭದಾಯಕ ಉದ್ಯೋಗವಲ್ಲ ಎಂದು ಮಾತನಾಡುವ ಹೊತ್ತಿಗೆ ಅವರೆಲ್ಲಾ ತೋಟದಲ್ಲಿ ನಿಂತು ದುಡಿಯುತ್ತಿದ್ದರು. ಒತ್ತಡರಹಿತ, ಆರೋಗ್ಯಕರ ಬದುಕು ಕಟ್ಟಿ ಕೊಂಡಿದ್ದರು. ಹಸಿರು ವನಸಿರಿಯ ನಡುವೆ ತಮಗೆ ಇಷ್ಟದ ಕೆಲಸಮಾಡುತ್ತಾ ನಗು ನಗುತಾ ಕೃಷಿಯಲ್ಲಿ, ಖುಶಿಯಲ್ಲಿ ಇದ್ದರು.
ಇಂತಹ ಮೂವತ್ತೈದಕ್ಕೂ ಹೆಚ್ಚು ಕೃಷಿ ಮಾದರಿಗಳನ್ನು ಪ್ರತಿವಾರ "ಆಂದೋಲನ" ದಿನ ಪತ್ರಿಕೆಯ ಬಂಗಾರದ ಮನುಷ್ಯರು ಎಂಬ ಅಂಕಣದ ಮೂಲಕ ನಾನು ನಿಮ್ಮ ಮುಂದೆ ಸವಿಸ್ತಾರವಾಗಿ ಹೇಳುತ್ತಾ ಬಂದೆ. ಕಾಯಕ ಜೀವಿಗಳ ತೀರಿಸಲಾಗದಷ್ಟು ಶ್ರಮದ ಋಣ ನಮ್ಮ ಮೇಲಿದೆ ಅಂತ ತಿಳಿದುಕೊಂಡಿರುವವನು ನಾನು. ಅಂತಹ ತೀರಿಸಲಾಗದ ಋಣದ ಭಾರವನ್ನು ತುಸು ಕಡಿಮೆ ಮಾಡಿಕೊಳ್ಳುವ ಆಸೆಯಿಂದ ಮಣ್ಣಿನ ಮಕ್ಕಳ ಯಶೋಗಾಥೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಬಂದೆ.
ಫಾರ್ ಎ ಚೇಂಜ್ ಹೊಸ ವರ್ಷದ ಹೊಸ ನಿರ್ಣಯವೊಂದನ್ನು ಮಾಡಿರುವೆ. ಈ ಸಲ ಮಾದರಿ ರೈತರ ಕೃಷಿ ಅನುಭವಗಳನ್ನು ಸಮಾನಾಸಕ್ತ ಫೇಸ್ಬುಕ್ ಗೆಳೆಯರ ಜೊತೆ ಹಚ್ಚಿಕೊಳ್ಳಲು ನಿರ್ಧರಿಸಿದ್ದೇನೆ.2017 ಸಂಪೂರ್ಣ ಕೃಷಿ ವರ್ಷ.ಕುಂತರೂ ನಿಂತರೂ ಕೃಷಿಯನ್ನೇ ಧ್ಯಾನ ಮಾಡಲು ನಿರ್ಣಯಿಸಿದ್ದೇನೆ. ಇದು ಹೊಸವರ್ಷದ ಒಂದೇ ನಿರ್ಣಯ. ಇದರ ಭಾಗವಾಗಿ ತುಂಬಾ ಇಷ್ಟವಾದ ರೈತರ ಕೃಷಿ ಅನುಭವಗಳನ್ನು ಬಿಡುವಾದಗಲೆಲ್ಲಾ ಚಿಕ್ಕ ಚಿಕ್ಕ ಕಂತುಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಇದರಿಂದ ನಿಮಗೆ ಎಷ್ಟು ಸಹಾಯವಾಗುವುದೋ ಗೊತ್ತಿಲ್ಲಾ. ಆದರೆ ಪ್ರಶಾಂತ್ನಂತಹ ಹತ್ತು ಮಂದಿ ಯುವಕರಾದರೂ ಹಳ್ಳಿಗಳಲ್ಲಿ ಹುಟ್ಟಿಕೊಳ್ಳುತ್ತಾರೆ. ಕುಸಿಯುತ್ತಿರುವ ಕೃಷಿಗೆ ಹೆಗಲು ಕೊಡುತ್ತಾರೆ ಎಂಬ ಆಶಾಭಾವನೆ ಇದೆ. "ಬಿದಿರು ಬೇಸಾಯ ಬಳಗ" ದ ಹೊಸ ಕಲ್ಪನೆ ಇದು. ರೈತ ಅರಿವು ಸರಣಿ ಆರಂಭವಾಗುತ್ತಿದೆ. ನಿಮ್ಮ ಸಲಹೆ, ಮಾರ್ಗದರ್ಶನ ಇರಲಿ. ಸಂವಾದ ಇದ್ದರೆ ಮತ್ತಷ್ಟೂ ಅರ್ಥಪೂರ್ಣ. ಮೊದಲ ಕಂತಿನಲ್ಲಿ ಪ್ರಶಾಂತನ ಕೃಷಿಯ ಬಗ್ಗೆ ಹೇಳುತ್ತೇನೆ.ಕೇಳಿಸಿಕೊಳ್ಳಲು ನೀವು ಸಿದ್ಧವಿದ್ದೀರಿ ತಾನೆ.
ಹಾಗಾದರೆ ಕೇಳಿ... ರೈತನ ಸಂಕಷ್ಟಕ್ಕೆ ಯಾರು ಹೊಣೆ? ಬನ್ನಿ ಹುಡುಕೋಣ........








ಭಾನುವಾರ, ಜನವರಿ 1, 2017

ಚಾಮರಾಜನಗರ : ಬೇಡರಪುರದಲ್ಲಿ ಬೆಳಕಾದ "ರವಿ"
ಬೆಳಕಿನ ಬೇಸಾಯಕ್ಕೆ ಮುನ್ನುಡಿ ಬರೆದ ರೈತ ಕಾರ್ಯಕರ್ತ

ಚಾಮರಾಜನಗರ ಸಮೀಪ ಇರುವ ಬೇಡರಪುರ ಈಗ ವಿಭಿನ್ನ ಕೃಷಿ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗೆ ಪ್ರೆರೇಪಣೆ ನೀಡಿದೆ. ಗ್ರಾಮದ ರವಿ ಮತ್ತು ಗಿರೀಶ್ ಎಂಬ ಇಬ್ಬರು ಯುವಕರು ಎರಡು ವಿಭಿನ್ನ ಮಾದರಿಯ ತೋಟ ಕಟ್ಟುವ ಮೂಲಕ ನೈಸಗರ್ಿಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ. ರೈತಸಂಘದ ಸಕ್ರೀಯ ಕಾರ್ಯಕರ್ತರಾಗಿ ದಶಕಗಳಿಗೂ ಹೆಚ್ಚುಕಾಲ ಪ್ರತಿಭಟನೆ, ಚಳವಳಿ,ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದ ಇಬ್ಬರು ಯುವಕರು ಈಗ ತಮ್ಮ ತೋಟಗಳಲ್ಲಿ ನಿಜವಾದ ಕ್ರಾಂತಿಮಾಡುವ ಮೂಲಕ ಕಾಯಕ ಚಳವಳಿಗೆ ನಾಂದಿಯಾಡಿದ್ದಾರೆ.ಪ್ರತಿ ಗ್ರಾಮದಲ್ಲೂ ಇಂತಹ ಯುವರೈತರು ತಾವೇ ಮಾದರಿಯಾಗಿ, ಕೃಷಿಯಲ್ಲಿ ಆದಾಯಗಳಿಸಿ ತೋರಿಸುವ ಮೂಲಕ ಹಳ್ಳಿಯ ಜನರ ಬದುಕನ್ನು ಹಸನು ಮಾಡಬೇಕಿದೆ. ಕೃಷಿಯ ಸಬಲೀಕರಣ ನಾಲ್ಕು ಗೋಡೆಗಳ, ಹವಾನಿಯಂತ್ರಿತ ಕೊಠಡಿಗಳಲ್ಲಿ ಸಿನಿಮಾ ನಟರು ಮತ್ತು ವಿಜ್ಞಾನಿಗಳೊಂದಿಗೆ ನಡೆಯುವ ಚಚರ್ೆಗಳಿಂದ ಆಗದು. ಇಂತಹ ಜೀವಂತ ಮಾದರಿಗಳು ಮಾತ್ರ ಕುಸಿದಿರುವ ಕೃಷಿಯನ್ನು ಮೇಲೆತ್ತಬಹುದು. ರವಿಯಂತಹ ರೈತಸಂಘದ ಕಾರ್ಯಕರ್ತರು ಪ್ರತಿಹಳ್ಳಿಯಲ್ಲೂ ಇಂತಹ ಮಾದರಿ ಕಟ್ಟುವ ಮೂಲಕ ಬಂಗಾರದ ಮನುಷ್ಯರಾಗಲಿ ಎಂಬ ಆಶಯ ನಮ್ಮದು.

=======================================================================

ಚಾಮರಾಜನಗರ : "ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಕೃಷಿ ಮಾಡಲು ಸಾಧ್ಯವೇ...?" ಇದು ಊರ ಹಿರಿಯರ ಪ್ರಶ್ನೆ. ಹೌದು ಖಂಡಿತಾ ಸಾಧ್ಯ. ಯಾವುದೆ ರಾಸಾಯನಿಕ ಬಳಸದೆ ಕೃಷಿ ಮಾಡಿ ಆಥರ್ಿಕ ಸ್ವಾವಲಂಬನೆ ಸಾಧಿಸಿಬಹುದು ಎನ್ನುವುದು ಕಿರಿಯ ತಲೆಮಾರಿನ ವಾದ.
ಇದು ಕೃಷಿಯ ಬಗ್ಗೆ ಎರಡೂ ತಲೆಮಾರುಗಳ ನಡುವೆ ಹಳ್ಳಿಯಲ್ಲಿ ನಡೆಯುತ್ತಿರುವ ಸಂಘರ್ಷ. ಇಂತಹ ಎರಡೂ ವಾದಗಳ ನಡುವೆ ನಮ್ಮ ಸಂಪ್ರಾದಾಯಿಕ ಕೃಷಿಯನ್ನು ಮರೆತ ಕಾರಣ ಕೃಷಿ ಕ್ಷೇತ್ರ ಹತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು" ಎಂಬ ಕವಿವಾಣಿಯನ್ನು ನಾವು ಮರೆತಿದ್ದೇವೆ.
ಕೃಷಿ ಲಾಭದಾಯಕ ಕಸುಬಾಗಿ ಉಳಿದಿಲ್ಲ. ರೈತರಿಗೆ ಸ್ವಾಭಿಮಾನ ಮತ್ತು ಗೌರವತರಬಲ್ಲ ಉದ್ಯೋಗವಾಗಿ ಉಳಿದಿಲ್ಲ ಎನ್ನುವುದು ಎಲ್ಲೆಡೆ ಕೇಳುವ ಮಾತು. ಇಂತಹ ಮಾತುಗಳನ್ನು ಸುಳ್ಳುಮಾಡಿ ರೈತ ಬದುಕಿಗೂ ಒಂದು ಘನತೆ, ಗೌರವ ಇದೆ ಎನ್ನುವುದನ್ನು ತೋರಿಸಲು ಹೊರಟ ಇಬ್ಬರು ಯುವಕರ ಸಾಹಸಗಾಥೆ ಇದು.
ಚಾಮರಾಜನಗರ ಸಮೀಪ ಇರುವ ಪುಟ್ಟ ಗ್ರಾಮ ಬೇಡರಪುರ.  ಊರಿನ ಇಬ್ಬರು ಯುವಕರು ಎರಡು ವಿಭಿನ್ನ ಕೃಷಿ ಸಾಧ್ಯತೆಗಳನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗೆ ಪ್ರೆರೇಪಣೆ ನೀಡಿದ್ದಾರೆ. ಗ್ರಾಮದ ರವಿ ಮತ್ತು ಗಿರೀಶ್ ಎಂಬ ಇಬ್ಬರು ಯುವಕರು ವಿಶಿಷ್ಠ ಮಾದರಿಯ ತೋಟ ಕಟ್ಟುವ ಮೂಲಕ ನೈಸಗರ್ಿಕ ಕೃಷಿಯ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ರೈತಸಂಘದ ಸಕ್ರೀಯ ಕಾರ್ಯಕರ್ತರಾಗಿ ದಶಕಗಳಿಗೂ ಹೆಚ್ಚುಕಾಲ ಪ್ರತಿಭಟನೆ, ಚಳವಳಿ,ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದ ಯುವಕರು ಈಗ ತಮ್ಮ ತೋಟಗಳಲ್ಲಿ ನೈಜ ಕ್ರಾಂತಿಮಾಡುವ ಮೂಲಕ ಕಾಯಕ ಚಳವಳಿಗೆ ನಾಂದಿಯಾಡಿದ್ದಾರೆ. ಹೆಗ್ಗವಾಡಿಪುರದ ಇನ್ನೊಬ್ಬ ಒಣಭೂಮಿ ಬೇಸಾಯ ತಜ್ಞ ಶಿವಕುಮಾರ್ ಯುವಕರಿಗೆ ಸಾಥ್ ನೀಡುತ್ತಿದ್ದಾರೆ.
ಸಂಘರ್ಷದ ಪಯಣ : "ಆರಂಭದಿಂದಲ್ಲೂ ಮನೆಯವರಿಗೂ ನನಗೂ ಕೆಮಿಕಲ್ ಫಾರ್ಮಿಂಗ್ ಮತ್ತು ಆಗ್ಯರ್ಾನಿಕ್ ಫಾರ್ಮಿಂಗ್ ಬಗ್ಗೆ ತಿಕ್ಕಾಟ ಇತ್ತು. ನಮ್ಮ ತಂದೆ ಸಕರ್ಾರಿ ಗೊಬ್ಬರ ಬಳಸದೆ ತರಕಾರಿ ಬೆಳಿಯಕಾ ಅದ್ದಾ. ಏನೋ ಹಿಂದಿನ ಕಾಲದಲ್ಲಿ ಇದೆಲ್ಲ ನಡೆತಿತ್ತು. ಈಗ ಆಗಲ್ಲ. ಅಂತ ಹೇಳ್ತಾ ಇದ್ರು. ನಾನು ಮಾಡಿ ತೋರಸ್ತೀನಿ ನನಗೂ ಒಂದು ಅವಕಾಶ ಕೊಡಿ ಅಂತ ಕೇಳ್ದೆ.ಹೆಚ್ಚು ವಿರೋಧ ಮಾಡ್ದೆ ಒಪ್ಪಿಕೊಂಡ್ರು". ಕಳೆದ ಮೂರು ವರ್ಷದಿಂದ ನೈಸಗರ್ಿಕ ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ ಎಂದು ಆತ್ಮ ವಿಶ್ವಾಸದಿಂದ ಹೇಳಿದರು ಬೇಡರಪು ರವಿ.
ನಮ್ಮಲ್ಲಿ ಐದಾರು ವರ್ಷದಿಂದ ಭೀಕರವಾದ ಬರ ಇರೋದ್ರಿಂದ ಮೊದಮೊದಲು ನೀರಿಗೆ ತುಂಬಾ ತೊಂದರೆ ಆಯ್ತು. ಈಗ ಕಬಿನಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾದ ಮೇಲೆ ನೀರಿಗೆ ತೊಂದರೆ ಇಲ್ಲ. ಸಾವಿರ ಅಡಿಗೆ ಕುಸಿದಿದ್ದ ಅಂತರ್ಜಲ ಈಗ ನೂರು ಅಡಿಗೆ ಸಿಗುತ್ತಿದೆ. ನಮ್ಮ ಭಾಗದ ಶಿವಗಂಗೆ ಮತ್ತು ಮಾಲಗೆರೆ ಕೆರೆಗಳಿಗೆ ನೀರು ತುಂಬಿದ ಮೇಲೆ ನಮಗೆ ಹೋದ ಜೀವ ಬಂದಂತಾಗಿದೆ ಎನ್ನುತ್ತಾರೆ.
"ಇದು ಎರಡು ಎಕರೆ ವಿಸ್ತೀಣ ಹೋಂದಿರುವ ತಾಕು. ಅರ್ಧ ಎಕರೆಯಲ್ಲಿ ಹಸುಕರುಗಳಿಗೆ ಬೇಕಾದ ಮೇವನ್ನು ಬೆಳೆದುಕೊಂಡಿದ್ದೇವೆ. ಉಳಿದ ಒಂದುವರೆ ಎಕರೆಯಲ್ಲಿ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಸಂಯೋಜನೆ ಮಾಡಿ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದೇನೆ" ಎಂದರು.
ನವಧಾನ್ಯ ಮಾಡಿದ ಮ್ಯಾಜಿಕ್ : ಮೂರು ವರ್ಷದ ಹಿಂದೆ ಇಲ್ಲಿಯೂ ರಾಸಾಯನಿಕ ಗೊಬ್ಬರ ಬಳಸಿಕೊಂಡು ಕಬ್ಬು, ಬಾಳೆ, ತರಕಾರಿ ಬೆಳೆಯಲಾಗುತ್ತಿತ್ತು. 2014 ರಿಂದ ಈಚೆಗೆ ಭೂಮಿಗೆ ಯಾವುದೇ ಸಕರ್ಾರಿ ಗೊಬ್ಬರ ಬಳಕೆಮಾಡಿಲ್ಲ. ನೈಸಗರ್ಿಕ ಕೃಷಿಗೆ ಭೂಮಿಯನ್ನು ಒಳಪಡಿಸುವ ಮುನ್ನಾ ನವಧಾನ್ಯಗಳನ್ನು ಭಿತ್ತಿ, ಅವು ಹೂ ಬಿಡುವ ಹಂತದಲ್ಲಿ ಮತ್ತೆ ಭೂಮಿಗೆ ಸೇರಿಸಲಾಯಿತು. ನಂತರ 2000 ಸಾವಿರ ಟೋಮಟೊ ಗಿಡಗಳನ್ನು ನಾಟಿಮಾಡಿ, ಗಿಡದ ಎರಡೂ ಬದಿಯಲ್ಲಿ ಮೂಲಂಗಿ ಹಾಕಲಾಯಿತು.
"ಗಿಡಗಳಿಗೆ ಹತ್ತು ದಿನಕ್ಕೊಮ್ಮೆ ಹನಿ ನೀರಾವರಿ ಮೂಲಕ ಜೀವಾಮೃತ ಕೊಡುತ್ತಾ ಬಂದೆ. ಗಿಡಗಳ ಬೆಳವಣಿಗೆ ತುಂಬಾ ಚೆನ್ನಾಗಿ ಬಂತು. ಇದನ್ನು ಬಂದು ನೋಡಿದ ಹಿರಿಯರು. ಗಿಡ ಚೆನ್ನಾಗಿ ಬಂದಿದೆ. ಕಾಯಿ ಕಚ್ಚುವ ಹಂತದಲ್ಲಿ ತೊಂದರೆ ಬಂದುಬಿಡಬಹುದು.ಒಂದು ಕ್ರಿಮಿನಾಶಕ ತಂದು ಸಿಂಪರಣೆ ಮಾಡಿಬಿಡು ಅಂದ್ರು. ಆದರೆ ನಾನು ಅವರ ಮಾತು ಕೇಳಲಿಲ್ಲ. ನನ್ನ ಟೋಮಟೊ ಕಾಯಿ ಕಚ್ಚದೆ ಇದ್ರು ಪರ್ವಾಗಿಲ್ಲ. 2000 ಗಿಡ ಹಾಕೇ ಇಲ್ಲ ಅಂತ ತಿಳಕತ್ತೀನಿ. ಯಾವುದೇ ಕಾರಣಕ್ಕೂ ಹೊರಗಿನಿಂದ ಹಣಕೊಟ್ಟು ಯಾವ ಔಷಧಿಯನ್ನು ನಾನು ಸ್ಪ್ರೈ ಮಾಡಲ್ಲಾ ಅಂತ ಹೇಳಿಬಿಟ್ಟೆ" ಅಂದರು ರವಿ. ಹೊರಸುಳಿಗಳಿಲ್ಲದೆ ಬೇಸಾಯವನ್ನು ಗೆಲ್ಲಿಸಲೇ ಬೇಕು ಎಂಬ ಛಲ ಅವರ ಮಾತಿನಲ್ಲಿತ್ತು.
ಕಾಯಿ ಕಚ್ಚಿದ ಮೇಲೆ ಟೋಮೊಟೊಗೆ ಒಮ್ಮೆ ತರಗುಮಾರಿ ರೋಗ ಬಂತು. ಆಗ 1:10 ಅನುಪಾತದಲ್ಲಿ ಗಿಡಗಳಿಗೆ ಒಂದು ದಿನ ಹುಳಿಮಜ್ಜಿಗೆ, ಒಂದು ದಿನ ಗೋಮೂತ್ರ ಮತ್ತೊಂದು ದಿನ ಜೀವಾಮೃತ ಸಂಪರಣೆ ಮಾಡಿದೆ. ತರಗುಮಾರಿ ರೋಗ ಕಂಟ್ರೋಲ್ ಆಯ್ತು. ಪ್ರತಿ ಗಿಡಕ್ಕೆ ಆರು ಕೆಜಿಯಂತೆ ಹನ್ನೆರಡು ಟನ್ ಟೋಮಟೊ ಬೆಳೆದೆ. ಜೊತೆಗೆ ಒಂದಷ್ಟು ಮೂಲಂಗಿಯೂ ಬಂತು. ಇದನ್ನು ನೋಡಿ ನಮ್ಮ ಮನೆಯವರಿಗೆ ನನ್ನ ಮೇಲೆ ನಂಬಿಕೆ ಬಂತು. ನಿನ್ನಗೆ ನಾವು ಏನೂ ತೊಂದರೆ ಕೊಡಲ್ಲ. ನೀನು ನಿನಗೆ ಬೇಕಾದ ಪದ್ಧತಿಯಲ್ಲಿ ಎರಡು ಎಕರೆಯಲ್ಲಿ ಕೃಷಿ ಮಾಡು ಎಂದು ಬಿಟ್ಟುಕೊಟ್ಟರು. ಅಲ್ಲಿಂದ ಶುರುವಾದ ನಮ್ಮ ನೈಸಗರ್ಿಕ ಕೃಷಿ ಪಯಣ ಇಲ್ಲಿಯವರೆಗೆ ಬಂದಿದೆ. ಈಗ ನಾವು ಮಾಡಿರುವ ಕೃಷಿ ಪ್ರಯೋಗ ನಮ್ಮೂರಿನ ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ನಾವೂ ಈ ಮಾದರಿಯಲ್ಲಿ ಕೃಷಿ ಮಾಡಿ ಗೆಲ್ಲಬಹುದು ಎಂಬ ನಂಬಿಕೆ ಮೂಡಿಸಿದೆ.
ಅಷ್ಟೇ ಏಕೆ ಕ್ರಿಮಿನಾಶಕ ಅಂಗಡಿಯವರೇ ಬಂದು ನಾವು ನೇಸಗರ್ಿಕವಾಗಿ ಬೆಳೆದ ತರಕಾರಿಯನ್ನು ಕಂಡು ಅಚ್ಚರಿ ಪಟ್ಟಿದ್ದಾರೆ.ಕ್ರಿಮಿನಾಶಕ ಬಳಸದೆ ತರಕಾರಿ ಬೆಳೆಯಲು ಸಾಧ್ಯವಿಲ್ಲ ಎಂಬ ಊರ ಹಿರಿಯರ ನಂಬಿಕೆಯನ್ನು ನಾವು ಸುಳ್ಳು ಎಂದು ಸಾಬೀತು ಮಾಡಿದ್ದೇವೆ. ನಮ್ಮ ಕೆಲಸ ಸಾರ್ಥಕವಾಗಿದೆ ಎಂದು ಹೇಳಿದರು ರೈತಸಂಘದ ನೈಜ ಕಟ್ಟಾಳು ರವಿ.
ತಾಳಿಕೆ-ಬಾಳಿಕೆ ಬೇಸಾಯ: "ಮೊದಲು ಹೈಬ್ರಿಡ್ ತಳಿಯ ಟೋಮೊಟೊ ಹಾಕಿದ್ದಾಗ ಸ್ವಲ್ಪ ರಿಸ್ಕ್ ಆಯ್ತು.ಈ ಭಾರಿ ತೋಟದಲ್ಲಿ ಇರುವ ಪ್ರತಿ ಗಿಡವನ್ನು ಬೆಂಗಳೂರಿನ ಐಐಹೆಚ್ಆರ್ನಿಂದ ತಂದು ಹಾಕಿದ್ದೇವೆ. ಇವು ಸುಧಾರಿತ ಸಂಕರಣ ತಳಿಗಳಾಗಿರುವುದರಿಂದ ಹೆಚ್ಚು ರಿಸ್ಕ್ ಇಲ್ಲ" ಎನ್ನುವುದು ರವಿ ಅನುಭವದಿಂದ ಕಂಡುಕೊಂಡಿರುವ ಸತ್ಯ.
ಹೊಸದಾಗಿ ತೋಟಕಟ್ಟುವಾಗ ಮತ್ತೆ ನವಧಾನ್ಯ ಭಿತ್ತಲಾಯಿತು. ಮೂರು ಎಣ್ಣೆಕಾಳು, ಮೂರು ದ್ವಿದಳ ಧಾನ್ಯ, ಮೂರು ಏಕದಳ ಧಾನ್ಯ ಮಿಶ್ರಣಮಾಡಿ ಹೂ ಬಿಡುವ ಹಂತದಲ್ಲಿ ಭೂಮಿಗೆ ಸೇರಿಸಲಾಯಿತು. ನಂತರ ಆರು ಅಡಿಗೆ ಒಂದು ಸಾಲು ಹೊಡೆದುಕೊಂಡು ಗಿಡ ಕೂರಿಸುವ ಸಿದ್ಧತೆ ಮಾಡಿಕೊಳ್ಳಲಾಯಿತು.
ಗಿಡದಿಂದ ಗಿಡಕ್ಕೆ ಮತ್ತ ಸಾಲಿನಿಂದ ಸಾಲಿಗೆ 24 ಅಡಿ ಅಂತರದಲ್ಲಿ ಮಾವು ಹಾಕಲಾಗಿದೆ. ಪ್ರತಿ ಆರು ಅಡಿ ಸಾಲಿಗೆ ಒಂದು ಸಾಲಿಗೆ ಟೋಮೊಟೊ. ನಂತರದ ಸಾಲಿಗೆ ಪರಂಗಿ ಜೊತೆಗೆ ಮೆಣಸಿನಕಾಯಿ ಗಿಡ. ನಂತರದ ಸಾಲಿಗೆ 12 ಅಡಿ ಅಂತರದಲ್ಲಿ ಸೀಬೆ, ಜೊತೆಗೆ ಮಾವು. ಮಾವಿನ ಗಿಡದ ಜೊತೆಗೂ ಬದನೆ. ಬದನೆಯಲ್ಲೂ ಎರಡು ತಳಿ.ಒಂದು ಬಿಳಿ ಉದ್ದ ಮತ್ತೊಂದು ಕಪ್ಪು ಉದ್ದ. ನಡುವೆ ನುಗ್ಗೆಯೂ ಇದೆ. ಹೀಗೆ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಸಂಯೋಜನೆ ಮಾಡಿ ಸಮಗ್ರ ತೋಟ ಕಟ್ಟಲಾಗಿದೆ.
ಸಧ್ಯ ಟೋಮೊಟೊ, ಮೆಣಸಿ ಕೊಯ್ಲು, ಬದನೆ ಕೊಯ್ಲು ಶುರುವಾಗಿದೆ. ಇದು ಮುಗಿಯುವ ಹಂತಕ್ಕೆ ಪರಂಗಿ, ನುಗ್ಗೆ ಬರುತ್ತದೆ. ಪ್ರತಿ ತಿಂಗಳು ಒಂದಲ್ಲ ಒಂದು ಬೆಳೆಗಳು ಆದಾಯ ತಂದುಕೊಡಬೇಕು ಎನ್ನುವ ಕಾನ್ಸೆಫ್ಟ್ ಇಲ್ಲಿ ಕೆಲಸಮಾಡಿದೆ. ಇದನ್ನೇ ದೇವನೂರ ಮಹಾದೇವ ಅವರು ತಾಳಿಕೆ-ಬಾಳಿಕೆ ಬೇಸಾಯ, ಬೆಳಕಿನ ಬೇಸಾಯ ಎಂದು ಕರೆಯುತ್ತಾರೆ.
ಗಿಡಗಳಿಗೆ ರೋಗ ಲಕ್ಷಣ ಕಾಣಿಸಿಕೊಂಡರೆ, "ಕಾಲು ಕೆಜಿ ಬೆಳ್ಳುಳ್ಳಿ,ಕಾಲು ಕೆಜಿ ಮೆಣಸಿನಕಾಯಿ, ಮೂರು ಕೆಜಿ ಲಕ್ಕಿ,ಬೇವು,ಹೊಂಗೆ ಸೊಪ್ಪನ್ನು ಚೆನ್ನಾಗಿ ಅರೆದು ಕೊಳ್ಳುತ್ತೇನೆ.ಗೋಮೂತ್ರದಲ್ಲಿ ನೆನೆಸಿ ನಾನೇ ಔಷಧ ಸಿದ್ದ ಮಾಡಿಟ್ಟುಕೊಂಡು 1:10 ಪ್ರಮಾಣದಲ್ಲಿ ಸಿಂಪರಣೆ ಮಾಡುತ್ತೇನೆ. ಇದರಿಂದ ರೋಗ ಹತೋಟಿಗೆ ಬಂದಿದೆ. ಈಗ ಚಳಿಗಾಲ ಆಗಿರುವುದರಿಂದ ತರಕಾರಿ ಗಿಡಗಳಿಗೆ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಹುಳಿ ಮಜ್ಜಿಗೆ ಸಿಂಪರಣೆ ಮಾಡುತ್ತೇನೆ. ಪರಿಣಾಮ ಚೆನ್ನಾಗಿದೆ" ಗಿಡಗಳನ್ನು ನೋಡಿದರೆ ನಿಮಗೆ ಇದು ಗೊತ್ತಾಗುತ್ತದೆ ಎಂದು ರವಿ ಕಣ್ಣರಳಿಸುತ್ತಾರೆ.
ಲೆಕ್ಕಚಾರದ ಬದುಕು : ಕೃಷಿ ಲೆಕ್ಕಚಾರಕ್ಕೆ ನಿಲುಕದ ಬದುಕು ಎನ್ನುತ್ತಾರೆ. ಆದರೆ ರವಿಯಂತಹ ಯುವಕರು "ಲೆಕ್ಕವಿಲ್ಲದವನ್ನು ಒಕ್ಕಲೋದ" ಎಂಬ ಗಾದೆಮಾತನ್ನು ನಂಬಿದವರಂತೆ ಕಾಣುತ್ತಾರೆ. ಒಂದು ಎಕರೆಯಲ್ಲಿ ರವಿ ತಾನು ಮಾಡಿರುವ ಕೃಷಿಯಿಂದ ಬರುವ ಕನಿಷ್ಟ ಆದಾಯವನ್ನು ನಿರೀಕ್ಷೆ ಮಾಡಿರುವುದನ್ನು ನೋಡಿದರೆ ಎಂತಹವರಿಗೂ ಆಶ್ಚರ್ಯವಾಗುತ್ತದೆ.
ಎಕರೆಗೆ ಸುಮಾರು ಅರವತ್ತು ಸಾವಿರ ರೂಪಾಯಿ ವೆಚ್ಚಮಾಡಿ ಅದರಿಂದ ಐದುವರೆ ಲಕ್ಷ ರೂಪಾಯಿ ನಿರೀಕ್ಷೆ ಮಾಡಲಾಗಿದೆ. ಟೋಮೋಟೊ ಗಿಡಗಳು ಸಾವಿರ.ಪ್ರತಿ ಗಿಡ ಐದು ಕೆಜಿಯಂತೆ 5000 ಕೆಜಿ. ಕೆಜಿ ಐದು ರೂಪಾಯಿಗೆ ಮಾರಾಟವಾದರೂ 25 ಸಾವಿರ ರೂ.ಆದಾಯ.ಬದನೆ 2000 ಗಿಡ. ಪ್ರತಿ ಗಿಡಕ್ಕೆ 5 ಕೆಜಿಯಂತೆ 10,000 ಕೆಜಿ. ಹಾಗೆಯೇ ಪರಂಗಿ, ಸೀಬೆ,ಬಾಳೆ ಎಲ್ಲವನ್ನು ಕನಿಷ್ಠ ದರದಲ್ಲಿ ಲೆಕ್ಕಹಾಕಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಪ್ರತಿ ಗ್ರಾಮದಲ್ಲೂ ಇಂತಹ ಯುವರೈತರು ತಾವೇ ಮಾದರಿಯಾಗಿ, ಕೃಷಿಯಲ್ಲಿ ಆದಾಯಗಳಿಸಿ ತೋರಿಸುವ ಮೂಲಕ ಹಳ್ಳಿಯ ಜನರ ಬದುಕನ್ನು ಹಸನು ಮಾಡಬೇಕಿದೆ. ಕೃಷಿಯ ಸಬಲೀಕರಣ ನಾಲ್ಕು ಗೋಡೆಗಳ, ಹವಾನಿಯಂತ್ರಿತ ಕೊಠಡಿಗಳಲ್ಲಿ ಸಿನಿಮಾ ನಟರು ಮತ್ತು ವಿಜ್ಞಾನಿಗಳೊಂದಿಗೆ ನಡೆಯುವ ಚಚರ್ೆಗಳಿಂದ ಆಗದು. ಇಂತಹ ಜೀವಂತ ಮಾದರಿಗಳು ಮಾತ್ರ ಕುಸಿದಿರುವ ಕೃಷಿಯನ್ನು ಮೇಲೆತ್ತಬಹುದು. ರವಿಯಂತಹ ರೈತಸಂಘದ ಕಾರ್ಯಕರ್ತರು ಪ್ರತಿಹಳ್ಳಿಯಲ್ಲೂ ಇಂತಹ ಮಾದರಿ ಕಟ್ಟುವ ಮೂಲಕ ಬಂಗಾರದ ಮನುಷ್ಯರಾಗಲಿ ಎಂಬ ಆಶಯ ನಮ್ಮದು. ಹೆಚ್ಚಿನ ಮಾಹಿತಿಗೆ ಆಸಕ್ತರು ರವಿಬೇಡರಪುರ ಅವರನ್ನು 9686772631 ಸಂಪಕರ್ಿಸಬಹುದು.








ಭಾನುವಾರ, ಡಿಸೆಂಬರ್ 25, 2016

ಸರಳ ತಂತ್ರಜ್ಞಾನಗಳ ಆವಿಷ್ಕಾರ ಸಾಧಕ "ಸವ್ಯಸಾಚಿ"
ಜನಮೆಚ್ಚಿದ ಮಣ್ಣಿನಮಗ ಡಾ.ದೇವಂಗಿ ಪ್ರಪುಲ್ಲ ಚಂದ್ರ
ಶಿವಮೊಗ್ಗ :   ಕೃಷಿ ಎಂದರೆ ಕಷ್ಟ. ತೋಟದಲ್ಲಿ ಕೆಲಸಮಾಡಲು ಆಳುಗಳೇ ಸಿಗುವುದಿಲ್ಲ ಎಂದು ಹೇಳುವವರೆ ನಮ್ಮ ನಡುವೆ ಹೆಚ್ಚು ಜನ ಇದ್ದಾರೆ. ಇಂತಹವರ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ಕೃಷಿಯಲ್ಲಿ ಹಣ,ಶ್ರಮ,ಸಮಯ ಎಲ್ಲವನ್ನೂ ಮಿತವಾಗಿ ಬಳಸಿಕೊಂಡು ಗರಿಷ್ಠ ಇಳುವರಿ ಪಡೆಯುವ ಮೂಲಕ ಆದಾಯ ಪಡೆಯುತ್ತಿದ್ದಾರೆ. ಅಂತಹ ಸಾಧಕರಲ್ಲಿ ಡಿ.ಪಿ.ಸವ್ಯಸಾಚಿ ಒಬ್ಬರು. ಕಬ್ಬಿನಲ್ಲಿ 40 ಕೂಳೆ ಬೆಳೆ ತೆಗೆದು ಹತ್ತಾರು ರಾಷ್ಟ್ರೀಯ,ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡ ಡಾ. ದೇವಂಗಿ ಪ್ರಪುಲ್ಲ ಚಂದ್ರ ಅವರ ಸುಪುತ್ರ.
ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಪೂರ್ಣಚಂದ್ರ ತೇಜಸ್ವಿ, ಡಿವಿಜಿ ಅವರಿಗೆ ಬಿಜಿಎಲ್ಸ್ವಾಮಿ, ಶಿವರಾಮಕಾರಂತರಿಗೆ ಉಲ್ಲಾಸ್ ಕಾರಂತ ಇದ್ದಂತೆ ಕೃಷಿ ಕ್ಷೇತ್ರದಲ್ಲಿ ಡಾ.ಪ್ರಪುಲ್ಲ ಚಂದ್ರ ಅವರಿಗೆ ಸವ್ಯಸಾಚಿ ತಂದೆಗೆ ತಕ್ಕ ಮಗನಾಗಿದ್ದಾರೆ. ದೇಶದಲ್ಲಷ್ಟೇ ಅಲ್ಲಾ ವಿದೇಶಗಳಲ್ಲೂ ಇವರ ಕೃಷಿ ಕ್ಷೇತ್ರದ ಸಾಧನೆಗಳು ಗಮನಸೆಳೆದಿವೆ.
ಒಂದು ಟ್ರ್ಯಾಕ್ಟರ್ನಿಂದ ಕಲ್ಪನೆಗೂ ನಿಲುಕದಷ್ಟು ಕೃಷಿ ಕೆಲಸಗಳನ್ನು ಮಾಡುತ್ತಾರೆ. ಟ್ರ್ಯಾಕ್ಟರ್ಅನ್ನು ಬಹುಉಪಯೋಗಿ ಆಗಿ ಬಳಸುವಂತೆ ಆವಿಷ್ಕಾರ ಮಾಡಿರುವ ಇವರ ಜಾಣ್ಮೆ ಇವರನ್ನು ನೇಗಿಲಯೋಗಿಯ ಬದಲಾಗಿ "ಟ್ರ್ಯಾಕ್ಟರ್ ಯೋಗಿ" ಎಂದು ಕರೆಯುವಂತೆ ಮಾಡಿದೆ.
ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಆರೇಳು ಕಿ.ಮೀ. ದೂರ ಸಾಗಿ ಬಲಕ್ಕೆ ಎರಡು ಕಿ.ಮೀ ಕ್ರಮಿಸದರೆ ಡಾ.ದೇವಂಗಿ ಪ್ರಪುಲ್ಲ ಚಂದ್ರ ಅವರ "ಕೃಷಿ ಸಂಪದ" ತೋಟ ಸಿಗುತ್ತದೆ. ಕಡಿಮೆ ಶ್ರಮ,ಕನಿಷ್ಠ ಬಂಡವಾಳ ತೊಡಗಿಸಿ ನೈಸಗರ್ಿಕವಾಗಿ ಕೃಷಿ ಮಾಡಬೇಕೆಂಬ ರೈತರಿಗೆ "ಕೃಷಿಸಂಪದ"ವೊಂದು ಮಾದರಿ ಪ್ರಾತ್ಯಕ್ಷಿಕೆ. ಕಳೆದ ನಾಲ್ಕು ದಶಕಗಳಿಂದ ಇಲ್ಲಿಗೆ ದೇಶ,ವಿದೇಶಗಳ 25 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡಿ, 8 ಸಾವಿರ ಗಂಟೆಗಳಿಗೂ ಹೆಚ್ಚು ಸಮಯ ಕೃಷಿ ಪಾಠ ಕೇಳಿಸಿಕೊಂಡಿದ್ದಾರೆ. ಆಶ್ಚರ್ಯ ಎಂದರೆ "ಕೃಷಿಸಂಪದ"ದಲ್ಲಿ ಈ ಎಲ್ಲಾ ವಿವರಗಳನ್ನು ದಾಖಲಿಸಿ ಜೋಪಾನವಾಗಿ ಇಡಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್,ಪಟೇಲ್,ರಾಮಕೃಷ್ಣ ಹೆಗಡೆ, ಕೇಂದ್ರ ಮಂತ್ರಿಯಾಗಿದ್ದ ಬಲರಾಮ್ ಜಾಕಡ್, ಗುಜರಾತ್ನ ದೊರೆ ಎಂ.ಸಿ.ವಿರೇಂದ್ರಸಿಂಗ್, ನೈಸಗರ್ಿಕ ಕೃಷಿಕ ಸುಭಾಷ್ ಪಾಳೇಕರ್ ಸೇರಿದಂತೆ ಗಾನಾ, ಆಫ್ರಿಕಾ ದೇಶದ ವಿದ್ಯಾಥರ್ಿಗಳು "ಕೃಷಿ ಸಂಪದ"ಕ್ಕೆ ಭೇಟಿ ನೀಡಿ ಕೃಷಿಸಾಧನೆಯನ್ನು ಕಣ್ತುಂಬಿಕೊಂಡಿದ್ದಾರೆ.
35 ಎಕರೆ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾಗಿ ತೆಂಗು,ಅಡಿಕೆ. ಉಪ ಬೆಳೆಗಳಾಗಿ ಕೋಕೋ,ಬಾಳೆ,ಹಲಸು,ಮಾವು,ಕಾಫಿ. ಇತರೆ ಬೆಳೆಗಳಾಗಿ ಮೆಣಸು,ವೆನಿಲ್ಲಾ,ಸಪೋಟ,ದಾಲ್ಚಿನಿ ಜೊತೆಗೆ ಅರಣ್ಯ ಕೃಷಿ.ನೀಲಗಿರಿ,ಸವರ್ೇ,ಸಿಲ್ವರ್,ಹೆಬ್ಬೇವು, ತೇಗ ಹೀಗೆ ನಾನಾ ರೀತಿಯ ಸಸ್ಯಮರ ಗಿಡಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಅಪ್ಪ-ಮಕ್ಕಳ ಸಂಶೋಧನೆಗಳನ್ನು ಪಟ್ಟಿಮಾಡುವುದು ಕಷ್ಟ.ಒಂದು ಎಕರೆಯಲ್ಲಿ ಒಂದು ಹೆಕ್ಟರ್ನಲ್ಲಿ ಬೆಳೆಯಬಹುದಾದಷ್ಟು ತೆಂಗು ಬೆಳೆದಿರುವುದು. ಕೂಳೆ ಕಬ್ಬಿನಿಂದ 40 ವರ್ಷ ಅತಿ ಹೆಚ್ಚು ಇಳುವರಿ ತೆಗೆದದ್ದು, ದನದ ಕೊಟ್ಟಿಗೆಗೆ ಹೊಸ ರೂಪಕೊಟ್ಟಿರುವುದು, ಗಿಡಗಳಿಗೆ ಸ್ಲರಿಬ್ಲೀಡಿಂಗ್ ಮೂಲಕ ಗೊಬ್ಬರ ಕೊಟ್ಟಿದ್ದು, ಅಡಿಕೆ,ತೆಂಗು ಕೊಯ್ಲು ಮಾಡುವ ತಂತ್ರಜ್ಞಾನ, ಅಡಿಕೆ ಉದುರು ಯಂತ್ರ,ಪಶು ಆಹಾರದಲ್ಲೂ ಪ್ರಯೋಗ,ಅಡಿಕೆ-ತೆಂಗಿನ ನಿರ್ವಹಣೆಯಲ್ಲಿ ಸರಳಯಂತ್ರ,ಅಡಿಕೆ ಬೇಯಿಸಲು ಹೊಸ ತಂತ್ರಜ್ಞಾನ ಕಂಡುಹಿಡಿದು ಲಕ್ಷಾಂತರ ಎಕರೆ ಕಾಡು ಉಳಿಸಿದ್ದು, ಕೃಷಿ ತ್ಯಾಜ್ಯ ಕೊಳೆಸಿ ಉತ್ಕೃಷ್ಟ ಗೊಬ್ಬರವಾಗಿಸಿದ್ದು,ಶೂನ್ಯ ಕೃಷಿ ಹೀಗೆ ಹಲವಾರು ಸಂಶೋಧನೆಗಳನ್ನು ಮಾಡುವ ಮೂಲಕ ಅದನ್ನು ರೈತರಿಗೆ ಧಾರೆ ಎರಿದಿದ್ದಾರೆ.

ಮಾಧ್ಯಮಗಳಿಂದ "ಐಡಿಯಲ್ ಮ್ಯಾನ್ ಆಫ್ ಶಿವಮೊಗ್ಗ" ಎಂದು ಕರೆಸಿಕೊಂಡಿದ್ದವರು ಡಾ. ದೇವಂಗಿ ಪ್ರಪುಲ್ಲ ಚಂದ್ರ. ರಾಷ್ಟ್ರಕವಿ ಕುವೆಂಪು ಅವರ ಭಾವಮೈದುನ. ತಮ್ಮ 80 ನೇ ವಯಸ್ಸಿನಲ್ಲೂ ಪ್ರತಿ ದಿನಾ ಐದಾರು ಗಂಟೆ ದುಡಿಯುತ್ತಿದ್ದ ಪ್ರಪುಲ್ಲ ಚಂದ್ರ ಈಗ ನಮ್ಮೊಡನಿಲ್ಲ ಆದರೆ ಅವರ ಮಗ ಸವ್ಯಸಾಚಿ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಯುವ ಕೃಷಿಕರಿಗೆ ಸ್ಫೂತರ್ಿಯ ಚಿಲುಮೆಯಾಗಿ "ಕೃಷಿಸಂಪದ"ಕ್ಕೆ ಬಂದವರಿಗೆ ಮಾರ್ಗದರ್ಶಕರಾಗಿ ತಂದೆಯ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ಆಕ್ಟೋಬರ್ ಮೂರನೇ ವಾರದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಕೃಷಿಮೇಳಕ್ಕೆ ಭೇಟಿ ನೀಡಿದ್ದ ನಮ್ಮ ಕೃಷಿ ಅಧ್ಯಯನ ತಂಡ ಶಿವಮೊಗ್ಗದ ಸನಿಹದಲ್ಲೇ ಇರುವ "ಕೃಷಿಸಂಪದ"ಕ್ಕೆ ಭೇಟಿ ನೀಡಿ ಸವ್ಯಸಾಚಿಯವರ ಅಭಿರುಚಿ, ಆಸಕ್ತಿ,ಕೃಷಿ ಸಾಧನೆ,ಕೃಷಿಗೆ ಬೇಕಾದ ಯಂತ್ರಗಳ ಆವಿಷ್ಕಾರ ಮತ್ತು ಸ್ಕೀಟ್ ಶೂಟಿಂಗ್ ಎಲ್ಲವನ್ನೂ ಕಣ್ಣಾರೆ ಕಂಡು ಬೆರಗಾಯಿತು.
ಹಳೆ ಬೇರು ಹೊಸ ಚಿಗುರು : "1952 ರಲ್ಲಿ ಟ್ಟ್ರ್ಯಾಕ್ಟರ್ ಓಡಿಸುವ ಹುಚ್ಚಿನಿಂಡ ಕೃಷಿ ಕ್ಷೇತ್ರಕ್ಕೆ ಬಂದ ನಮ್ಮ ತಂದೆಯವರು 1962 ರಲ್ಲಿ ಸಣ್ಣ ಸಣ್ಣ ತಪ್ಪುಗಳಿಂದ ಕಷ್ಟಕ್ಕೆ ಸಿಲುಕಿಕೊಂಡರು. ಅಪ್ಪನಿಂದ ಬಂದ ಆಸ್ತಿ ಎಲ್ಲ ಕಳೆದುಕೊಂಡು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋದರು. ಅನಾರೋಗ್ಯಕ್ಕೆ ತುತ್ತಾಗಿ ತಮಿಳುನಾಡಿನ ವೆಲ್ಲೂರು ಆಸ್ಪತ್ರೆ ಸೇರಿಕೊಂಡರು. ಅಲ್ಲಿ ತಮ್ಮ ತಪ್ಪುಗಳ ಅರಿವಾಗಿ ಅಲ್ಲಿಂದ ಆರೋಗ್ಯವಾಗಿ ಕೃಷಿಗೆ ಬಂದವರು ಮತ್ತೆ ಹಿಂತಿರುಗಿ ನೋಡಲಿಲ್ಲ.
ಕೃಷಿಯಿಂದ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳು ರೈತರು ಇದನ್ನು ಗಮನಿಸಬೇಕು.ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಮ್ಮ ತಂದೆ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಜಗತ್ತು ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ತಮ್ಮ ಇಬ್ಬರು ಮಕ್ಕಳಿಗೆ ಅಗ್ರಿಕಲ್ಚರ್ನಲ್ಲೇ ಶಿಕ್ಷಣಕೊಡಿಸಿ ಪದವಿಧರದನ್ನಾಗಿ ಮಾಡಿ ಕೃಷಿಕರಾಗಿ ಮಾಡಿದ್ದು ನಮ್ಮ ರೈತರಿಗೆ ಆದರ್ಶವಾಗಬೇಕು ಎಂದು ಸವ್ಯಸಾಚಿ ಹೇಳುತ್ತಿದ್ದರೆ ಹೊಲ ಬಿಟ್ಟು ನಗರಗಳಲ್ಲಿ ಕೂಲಿಕೆಲಸಕ್ಕೆ ಸೇರಿಕೊಂಡ ಅನ್ನದಾತರ ಮಕ್ಕಳು ನೆನಪಾದರು.
ವೆಲ್ಲೂರಿನ ಆಸ್ಪತ್ರೆಯ ಅನುಭವಗಳನ್ನು ಪ್ರಪುಲ್ಲ ಚಂದ್ರ ಅವರೆ ಒಂದೆಡೆ ಹೀಗೆ ಬರೆದುಕೊಂಡಿದ್ದಾರೆ. "ಅದು ಅಕ್ಷರಸಹ ಮೃತ್ಯವಿನ ದವಡೆ. ಪ್ರತಿ ದಿನ ಒಂದೊಂದು ಹಾಸಿಗೆ ಖಾಲಿಯಾಗುತ್ತಿತ್ತು. ನಾನು ದಿನ ಎಣಿಸುತ್ತಾ ಗಡ್ಡ ಬಿಟ್ಟುಕೊಂಡು ಕಳೆಗುಂದಿದ್ದೆ. ಆಗತಾನೆ ಇಂಗ್ಲೆಂಡ್ನಿಂದ ಎಂಆರ್ಸಿಪಿ ಮುಗಿಸಿಬಂದಿದ್ದ ಯುವ ವೈದ್ಯ ಡಾ.ಸುಕುಮಾರ ಎಂಬುವವರು ನಿಮಗೇನಾಗಿದೆ ಮೊದಲು ಗಡ್ಡ ಬೊಳಿಸಿ ಎಂದರು. ಗಡ್ಡ ತೆಗೆದು ನೋಡಿಕೊಂಡಾಗ ಮುಖ ಲವಲವಿಕೆಯಿಂದ ಕಾಣುತ್ತಿತ್ತು, ಹಂತ ಹಂತವಾಗಿ ಚೇತರಿಸಿಕೊಂಡೆ'. ಆರೋಗ್ಯವಾಗುತ್ತಿದ್ದಂತೆ ಇದುವರೆಗೂ ಕೃಷಿಯಲ್ಲಿ ನಾನು ಮಾಡಿದ ತಪ್ಪುಗಳ ಬಗ್ಗೆ ಚಿಂತಿಸಿದೆ. ಮತ್ತೆ ಅಂತಹ ತಪ್ಪುಗಳನ್ನು ಮಾಡದಿರಲು ನಿರ್ಧರಿಸಿದೆ.ಅಲ್ಲಿಂದ ಆರಂಭವಾದ ನನ್ನ ಕೃಷಿ ಪ್ರಯೋಗಗಳು ಯಶಸ್ಸಿನ ಮೆಟ್ಟಿಲಾದವು" ಎಂದು ದಾಖಲಿಸಿದ್ದಾರೆ.
ಇಂತಹ ರೈತ ವಿಜ್ಞಾನಿಯ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ, ಅರಣ್ಯ ಇಲಾಖೆ ನೀಡುವ ಪರಿಸರ ಪಶ್ರಸ್ತಿ,ಕೃಷಿ ಪಂಡಿತ, 1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯವರು ನೀಡುವ "ವಿಶ್ವ ಆಹಾರ" ಪ್ರಶಸ್ತಿ, 2000 ನೆ ಇಸವಿಯಲ್ಲಿ ಅಮೇರಿಕಾ ದೇಶದ ರೈತಮಿತ್ರರಿಂದ ಗೌರವ ಪ್ರಶಸ್ತಿ ಹೀಗೆ ನೂರಾರು ಪುರಸ್ಕಾರಗಳು ಸಂದಿವೆ.

ಅವರೊಬ್ಬ ನಿರಂತರ ಪ್ರಯೋಗಶೀಲ ಕೃಷಿಕ. ಕಾಲೇಜು ಮೆಟ್ಟಿಲು ಹತ್ತದಿದ್ದರೂ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಹೆಮ್ಮೆಯ ಕೃಷಿಕ. ಹತ್ತಾರು ರಾಷ್ಟ್ರೀಯ,ಅಂತರಾಷ್ಟ್ರೀಯ ಪ್ರಶ್ತಿಗಳು ಸೇರಿದಂತೆ ಕೂಳೆ ಕಬ್ಬಿನ ಬೆಳೆಗೆ ಎಂಟು ಸ್ವರ್ಣ ಪದಕಗಳನ್ನು ಪಡೆದ ಕೃಷಿಪಂಡಿತ.
ಸೆನೆಟ್,ಸಿಂಡಿಕೇಟ್ ಸದಸ್ಯ.ಕಬ್ಬು,ಬತ್ತ,ಅಡಿಕೆ ಅಭಿವೃದ್ಧಿ ಮಂಡಳಿಗಳಿಗೆ ಸದಸ್ಯ. ವೈಲ್ಡ್ ಲೈಫ್ ವಾರ್ಡನ್, ಕೃಷಿ ಉತ್ಪನ್ನಗಳ ದರ ನಿಗಧಿ ಸಮಿತಿ ಸದಸ್ಯ. ಹೀಗೆ ಅವರು ನಿರಂತರವಾಗಿ 40 ವರ್ಷಗಳ ಕಾಲ ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಾ ಯಶಸ್ಸುಕಂಡ ಕೃಷಿಕ.
1966 ರಲ್ಲಿ 2.3 ಎಕರೆ ಪ್ರದೇಶದಲ್ಲಿ ಸಿಓ 740 ಮತ್ತು ಸಿಓ 419 ತಳಿಯ ಕಬ್ಬು ನಾಟಿ ಮಾಡಿ ಸತತವಾಗಿ 40 ವರ್ಷ ದಾಖಲೆ ಇಳುವರಿ. ಅದಕ್ಕಾಗಿ 8 ಸುರ್ವಣ ಪದಕ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಹರಸಿಬಂದವು. 20 ದೇಶಗಳ ಪ್ರಗತಿಪರ ರೈತರು ಸಮೀಕ್ಷೆ ನಡೆಸಿ ಅಂತರಾಷ್ಟ್ರೀಯ ಕಬ್ಬು ಬೆಳೆಗಾರ ಪ್ರಶಸ್ತಿ ನೀಡಿದ್ದು ಎನ್ನುವುದು ಇಲ್ಲಿ ನಮ್ಮ ನೆನಪಿನಲ್ಲಿರಬೇಕಾದ ಮುಖ್ಯ ವಿಚಾರ.
"ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಕುಡಿದರೆ ಶೀಘ್ರ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಿದ್ದರು. ಇದು ಅಲ್ಫಾವಧಿ ಬೆಳೆಗಳಿಗೆ ದ್ರವರೂಪದಲ್ಲಿ ಗೊಬ್ಬರ ಕೊಡಲು ಪ್ರೇರಣೆ ನೀಡಿತು"
"ನಾನು ಬರಿ ರೈತನಾಗಿದ್ದರೆ ಈ ಸ್ಥಿತಿ ತಲುಪುತಿರಲಿಲ್ಲ.ನಾನೊಬ್ಬ ವ್ಯಾಪಾರಿಯೂ ಆಗಿ ಸಾಧಿಸಿದ್ದು  ಬಹಳ". ಎಂದು ತಮ್ಮ ತಂದೆ ಹೇಳುತ್ತಿದ್ದ ಮಾತುಗಳನ್ನು ಸವ್ಯಸಾಚಿ ನೆನಪಿಸಿಕೊಂಡರು.
ರೈತರಿಗೆ ಸಲಹೆ : "ಕೃಷಿಸಂಪದ"ವೊಂದು ಕೃಷಿ ತಾಂತ್ರಿಕ ವಿಶ್ವವಿದ್ಯಾನಿಲಯದಂತಿದೆ.ನಿರಂತರ ಶ್ರಮ, ಕೆಲಸದಲ್ಲಿ ಅಚ್ಚುಕಟ್ಟುತನ,ಕಲಿಯುವ ಶ್ರದ್ಧೆ,ವೈಜ್ಞಾನಿಕ ಪದ್ಧತಿಗಳ ಅಳವಡಿಕೆ ಇವೆ ನಮ್ಮ ಯಶಸ್ಸಿನ ಗುಟ್ಟು" ಎನ್ನುತ್ತಾರೆ ಸವ್ಯಸಾಚಿ.
ರೈತರು ತಮ್ಮ ಸುತ್ತ ಮುತ್ತ ಇರುವ ಉತ್ತಮವಾದ ತಾಕುಗಳಿಗೆ ಭೇಟಿ ನೀಡಬೇಕು. ಪ್ರಗತಿಪರ ರೈತರಿಂದ ಕಲಿತುಕೊಂಡು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಬೇಕು. ರೈತರು ಹೋಗಬೇಕಾಗಿರುವುದು ದೇವಸ್ಥಾನಕ್ಕಲ್ಲ ಪ್ರಗತಿಪರ ರೈತರ ತೋಟಗಳಿಗೆ" ಎನ್ನುತ್ತಾರೆ. ಉತ್ಪಾದನೆ,ಸಂಸ್ಕರಣೆ, ಮಾರಾಟ ಜೊತೆಗೆ ಮಾಹಿತಿ ಪ್ರಸಾರ ತುಂಬಾ ಮುಖ್ಯ. ಮುಂದಿನ ಇಪ್ಪತ್ತು ವರ್ಷದ ಯೋಜನೆ ದೂರದೃಷ್ಠಿ ಇದ್ದರೆ ನಿಮ್ಮ ಜಮೀನನ್ನು ನೀವೇ ಬಂಗಾರ ಮಾಡಿಕೊಳ್ಳಬಹುದು.
ದನಕರುಗಳನ್ನು ಕಟ್ಟಿ ಸಾಕುವುದನ್ನು ಕಲಿಯಬೇಕು. ರೈತ ತನ್ನ ತೋಟಕ್ಕೆ ಮಾಲೀಕನಷ್ಟೇ ಅಲ್ಲಾ ನಾನೂ ಇಬ್ಬ ಕೂಲಿ ಎಂದು ತಿಳಿಯಬೇಕು.ಬೇಲಿಯ ಸಾಲಿನಲ್ಲಿ ಹೂ,ಹಣ್ಣು,ಮರಮುಟ್ಟುಗಳನ್ನು ಬೆಳೆಸಿಕೊಳ್ಳಬೇಕು.ಸಾಧ್ಯವಾದಷ್ಟು ಅವು ಪೂರ್ವ ಪಶ್ಚಿಮವಾಗಿರಬೇಕು. ಮುಖ್ಯವಾಗಿ ಜಮೀನಿನಲ್ಲೆ ಮನೆ ಮಾಡಿಕೊಂಡಿರಬೇಕು. ನಾವು ಯಾರಿಗಾಗಿ ಕೃಷಿ ಮಾಡುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ತಾನು ಬದುಕಲು, ತನ್ನ ಸುಖ ಸಂತೋಷಕ್ಕಾಗಿ ಕೃಷಿ ಮಾಡುತ್ತಿದ್ದೇನೆ ಎನ್ನುವುದು ಬಹಳ ಮುಖ್ಯ ಎಂದು ಸವ್ಯಸಾಚಿ ಕಡಕ್ ಆಗಿ ಹೇಳುತ್ತಾರೆ.
ನಮ್ಮ ತಂದೆ ಪ್ರಪುಲ್ಲ ಚಂದ್ರ ಅವರು ಹೇಳುತ್ತಿದ್ದರು "ರೈತರಲ್ಲರುವ ಸೋಮಾರಿತನ, ಆಲಸ್ಯ,ಒಡುಕು,ಪುಡಿ ರಾಜಕೀಯ ಅವರನ್ನು ಆಥರ್ಿಕವಾಗಿ ಕೆಳಕ್ಕೆ ನೂಕಿದೆ.
ಅಧಿಕ ಬೆಳೆದರೆ ಅಧಿಕ ಲಾಸು ,ಕಡಿಮೆ ಬೆಳೆದರೆ ಕಡಿಮೆ ಲಾಸು. ಏನು ಬೆಳೆಯದಿದ್ದರೆ ಏನೂ ನಷ್ಟವೇ ಇಲ್ಲ ಎಂಬಂತಾಗಿದೆ ರೈತರ ಸ್ಥಿತಿ". ಒಂದು ಕಾಲದಲ್ಲಿ ಜೀವನ ಕ್ರಮವಾಗಿದ್ದ ಕೃಷಿಯನ್ನು ಇಂದು ಒಂದು ಉದ್ಯಮವಾಗಿ ನೋಡುವ ಅಪಾಯಕಾರಿ ಕ್ರಮ ಬೆಳೆಯುತ್ತಿದೆ. ಪರಿಣಾಮ ಸಣ್ಣಪುಟ್ಟ ರೈತರು ಹೊಲಗದ್ದೆ ಮಾರಾಟಮಾಡಿ ಕೂಲಿಗಳಾಗುತ್ತಿದ್ದಾರೆ. ಹಣವಂತರು,ಬಂಡವಾಳಶಾಹಿಗಳು ನೂರಾರು ಎಕರೆ ಭೂಮಿ ಖರೀದಿಸಿ ಕೃಷಿಯನ್ನು ಉದ್ಯಮ ಮಾಡಲು ಹೊರಟಿದ್ದಾರೆ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ಕೃಷಿಯನ್ನು ಸರಳ,ಸಹಜಗೊಳಿಸುವುದು,ಕೃಷಿ ಕಾಮರ್ಿಕರ ದೈಹಿಕ ಶ್ರಮವನ್ನು ಕಡಿಮೆಗೊಳಿಸಿ ಸಣ್ಣ ಹಿಡುವಳಿ ಹೊಂದಿರುವ ರೈತ ಸಮುದಾಯವನ್ನು ಉಳಿಸಿಕೊಳ್ಳಬೇಕಿದೆ. ರೈತರಿಗೆ ಸುಲಭವಾಗಿ ಸಿಗುವಂತೆ ಕೃಷಿ ತಂತ್ರಜ್ಞಾನಗಳನು ಇವೆರಡರ ಅನುಭವವಿರುವ ರೈತರು ಆವಿಷ್ಕಾರ ಮಾಡಬೇಕು.ಇಂತಹ ಸಾಧನೆಗಳಿಗೆ ಸಕರ್ಾರವೂ ಪ್ರೋತ್ಸಾಹ ನೀಡಬೇಕು ಎಂದು ಸವ್ಯಸಾಚಿ ಹೇಳುತ್ತಾರೆ. ಆಸಕ್ತರು ಮೊ. 8182272730 ಸಂಪಕರ್ಿಸಬಹುದು.
"ಸ್ಕೀಟ್ ಶೂಟರ್,ಗುರಿಕಾರ ಸವ್ಯಸಾಚಿ"
ಶಿವಮೊಗ್ಗ: "ಕೃಷಿಸಂಪದ" ಕ್ಕೆ ನಾವು ಭೇಟಿ ನೀಡಿದಾಗ ಮಧ್ಯಾಹ್ನ ಎರಡೂವರೆ ಗಂಟೆಯಾಗಿತ್ತು. ಮಲೆನಾಡಿನಲ್ಲೂ ಸುಡುಬಿಸಿಲು ನೆತ್ತಿ ಸುಡುತ್ತಿತ್ತು.ಬದಲಾದ ಹವಾಮಾನ ವೈಪರಿತ್ಯದಿಂದ ವಿಪರೀತ ಬೀಸಲು ನಮ್ಮನ್ನೂ ಸುಸ್ತುಮಾಡಿತ್ತು.
ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಕೃಷಿಮೇಳಕ್ಕೆ ನಮ್ಮ ಕೃಷಿ ಅಧ್ಯಯನ ತಂಡ ಹೊರಟಿತ್ತು. ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ, ಎಂ.ಕೆ.ಜಗದೀಶ್ ಕುಮಾರ್ ಗೌಡನೊಂದಿಗೆ ಈ ಬಾರಿ ಹೊಸದಾಗಿ ಬಿಲ್ವಮಹೇಶ್ ಸೇರಿಕೊಂಡಿದ್ದರು. ತೋಟದಲ್ಲಿ ಅಡಿಕೆ ಕೊಯ್ಲು ನಡೆಯುತ್ತಿತ್ತು. ಸೀದಾ ನಮ್ಮನ್ನು ಅಡಿಕೆ ತೋಟಕ್ಕೆ ಕರೆದುಕೊಂಡು ಹೋದ ಸವ್ಯಸಾಚಿಯವರು ಅಡಿಕೆ ಕೊಯ್ಲಿನಲ್ಲಿ ಅಳವಡಿಸಿಕೊಂಡಿರುವ ನೂತನ ತಂತ್ರಜ್ಞಾನದ ಬಗ್ಗೆ ಪರಿಚಯಿಸಿದರು.ಸ್ವತಃ ನಾವೇ ಟ್ರ್ಯಾಕ್ಟರ್ ಏರಿ ಅಡಿಕೆ ಕಿತ್ತೆವು. ತೋಟದ ತುಂಬಾ ತಿರುಗಾಡಿ ಡಾ.ದೇವಂಗಿ ಪ್ರಪುಲ್ಲ ಚಂದ್ರ ಅವರ ಪ್ರತಿಮೆ ಬಳಿ ಪೋಟೊ ತೆಗೆಸಿಕೊಂಡೆವು. ಅವರಿಗೆ ಬಂದ ಪ್ರಶಸ್ತಿ,ಪೋಟೊಗಳನ್ನೆಲ್ಲಾ ನೋಡಿದೆವು.
ಮತ್ತೊಂದು ವಿಶೇಷ ಎನ್ನುವಂತೆ, ಸವ್ಯಸಾಚಿ ಅವರ ಬಳಿ ಇರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಓಡಿಸುತ್ತಿದ್ದ ಜೀಪ್ನಲ್ಲಿ ಸವಾರಿ ಮಾಡಿದ್ದು.ತೋಟದ ವೀಕ್ಷಣೆ ಮುಗಿಯುವ ಹೊತ್ತಿಗೆ ಮುಸ್ಸಂಜೆ ಆಗಿತ್ತು. ತಕ್ಷಣ ಸವ್ಯಸಾಚಿ ತಮ್ಮ ಮಗನ ಜೊತೆ ಹೆಗಲಿಗೆ ವಿದೇಶಿ ರೈಫಲ್ ಏರಿಸಿಕೊಂಡು ಬನ್ನಿ ಬನ್ನಿ ಕತ್ತಲಾಗಿಬಿಟ್ಟರೆ ಕಷ್ಟ ಎಂದು ಹೇಳುತ್ತಾ ಮತ್ತೊಂದು ಅಚ್ಚರಿ ತೋರಿಸಲು ಜೀಪಿನಲ್ಲೆ ನಮ್ಮನ್ನು ಸ್ಕೀಟ್ ಶೂಟಿಂಗ್ ಸ್ಥಳಕ್ಕೆ ಕರೆದೊಯ್ದರು.
ರೈತನೆಂದರೆ ಬರಿ ದುಡಿಯುವ ಆಳಲ್ಲ.ಅವನಿಗೂ ಹವ್ಯಾಸ, ಆಸಕ್ತಿಗಳಿರುತ್ತವೆ.ಅದೇ ರೀತಿ ತಮಗೂ ಸ್ಕೀಟ್ ಶೂಟಿಂಗ್ ಒಂದು ಹವ್ಯಾಸ. ವೀಕೆಂಡ್ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ನಾನೂ ಸಂತಸ ಪಡುತ್ತೇನೆ ಎಂದರು ಸವ್ಯಸಾಚಿ.
ಅಂತರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ನಲ್ಲಿ ಮಾನ್ಯತೆ ಪಡೆದಿರುವ ಸವ್ಯಸಾಚಿ ಅನೇಕ ಪದಕ,ಪ್ರಶಸ್ತಿಗಳನ್ನು ಪಡೆದಿದ್ದಾರೆ.ಭಾರತದ ಉತ್ತಮ ಗುರಿಕಾರರಲ್ಲಿ ಒಬ್ಬರಾಗಿರುವ ಇವರು ಸ್ಕೀಟ್ ಶೂಟಿಂಗ್ಗಾಗಿಯೇ ತೋಟದಲ್ಲಿ ಒಲಂಪಿಕ್ಸ್ ಮಾದರಿಯಲ್ಲಿ ಪ್ರಾಕ್ಟೀಸ್ ಗ್ರೌಂಡ್ ನಿಮರ್ಾಣಮಾಡಿಕೊಂಡಿದ್ದಾರೆ.
"ಕೃಷಿ ಸಂಪದ"ನೋಡಲು ಹೋದವರಿಗೆ ಕೃಷಿ ಪಾಠದ ನಂತರ ಶೂಟಿಂಗ್ ಕೊನೆಯ ಮನರಂಜನೆ.ಅಪ್ಪ ಮಕ್ಕಳು ಅರ್ಧಗಂಟೆಗೂ ಹೆಚ್ಚು ಕಾಲ ಸ್ಕೀಟ್ ಶೂಟಿಂಗ್ ಮಾಡುವ ಮೂಲಕ ನಮ್ಮ ಕೃಷಿ ತಂಡ "ವಾ"ಎನ್ನುವಂತೆ ಮಾಡಿದರು. ರೈತನೊಬ್ಬ ತಂತ್ರಜ್ಞಾನನಾಗಿ, ಉತ್ತಮ ಶೂಟರ್ ಆಗಿ ತೋಟದಲ್ಲಿ ಕೆಲಸಮಾಡುವ ನೌಕರರೊಂದಿಗೆ ನಗುತ್ತಾ, ನಗಿಸುತ್ತಾ ಹಸನ್ಮುಖಿಯಾಗಿ ಕೆಲಸ ಮಾಡುವ ಅವರ ಆಸಕ್ತಿ,ಹವ್ಯಾಸಗಳನ್ನು ಹತ್ತಿರದಿಂದ ಕಂಡು ಸವ್ಯಸಾಚಿ ಅವರ ಬಗ್ಗೆ ಅಪಾರ ಗೌರವ ಭಾವನೆ ಮೂಡಿತು. ಸೂರ್ಯ ಮುಳುಗುತ್ತಿದ್ದಂತೆ "ಕೃಷಿಸಂಪದ" ಬಿಟ್ಟು ನಾವು ಹೊರಟಾಗ ನಿಧಾನವಾಗಿ ಕತ್ತಲು ಆವರಿಸಿಕೊಳ್ಳತೊಡಗಿತು.ಅಪ್ಪ ಮಕ್ಕಳ ಸಿಡಿಸಿದ ಗುಂಡಿನ ಶಬ್ಧ ಕಿವಿಯಲ್ಲಿ ಗೂಯ್ಗುಡುತ್ತಿತ್ತು.ಅವರ ಏಕಾಗ್ರತೆಯನ್ನೇ ಮನಸ್ಸು ಧ್ಯಾನಿಸುತ್ತಿತ್ತು.





ಶನಿವಾರ, ಡಿಸೆಂಬರ್ 17, 2016

ದೇಶಭಕ್ತ "ಶ್ರೀರಾಮ" ಕನ್ನೇನಹಳ್ಳಿ ಮಣ್ಣಿನ ಮಗ
ಮೈಸೂರು : "ಮಣ್ಣು ಮತ್ತು ನೀರು ಸುಸ್ಥಿರ ಕೃಷಿಯ ಜೀವಾಳ. ಫಲವತ್ತಾದ ಮಣ್ಣು ಮತ್ತು ನೀರು ಇರುವ ಕಡೆ ಕೃಷಿಯ ಎಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ತೋಟ ಕಟ್ಟುವ ಮೊದಲು ಕೃಷಿಗೆ ಬೇಕಾದ ಸೂಕ್ತ ಜಮೀನು ಆಯ್ಕೆ ಮಾಡಿಕೊಲ್ಳುವುದರಲ್ಲಿ ಕೃಷಿಕನ ಸೋಲು, ಗೆಲುವು ನಿಧರ್ಾರವಾಗುತ್ತದೆ" ಎನ್ನುತ್ತಾರೆ ಕೃಷಿಕ ಇ.ಆರ್.ಶ್ರೀರಾಮನ್.

ಎತ್ತ ನೋಡಿದರೂ ಹಸಿರು.ಬಾಗಿ ಬಳುಕುವ ಅಡಿಕೆ, ಬಾಳೆ,ತೆಂಗು,ಮೆಣಸು. ಮಲೆನಾಡು ನೆನಪಿಸುವ ಗಿಡಮರಗಳು. ತೋಟ ನೋಡಲು ಹೋದವರಿಗೆ ಎಲ್ಲಿಂದ ಒಳಗೆ ಹೋಗಬೇಕು, ಎಲ್ಲಿಂದ ಆಚೆ ಬರಬೇಕು ಎನ್ನುವುದು ಗೊತ್ತೆ ಆಗುವುದಿಲ್ಲ. ಅಂತಹ ದಟ್ಟ ಕಾಡಿನಂತಹ ತೋಟ ಅದು. ಅಪ್ಪಟ ಮಲೆನಾಡು. ಇಂತಹ ಒಂದು ದಟ್ಟ ಹಸಿರು (ಹೈಡೆನ್ಸಿಟಿ) ಸಾಂದ್ರ ಪದ್ಧತಿಯಲ್ಲಿ ತೋಟ ಕಟ್ಟಿದ ಸಾಧಕ ಈಶ್ವರಹಳ್ಳಿ ರಂಗನಾಥ ಅಯ್ಯಂಗಾರ್ ಶ್ರೀರಾಮನ್.
ಚಿಕ್ಕಮಗಳೂರು ಜಿಲ್ಲೆಯ ಲಕ್ಕೆ ಹೋಬಳಿಯ ಈಶ್ವರಹಳ್ಳಿ ಶ್ಯಾನುಭೋಗ ರಂಗನಾಥ್ ಅಯ್ಯಂಗಾರ್ ಅವರ ಪುತ್ರ ಇ.ಆರ್.ಶ್ರೀರಾಮನ್ ಓದಿದ್ದು ಎಸ್ಎಸ್ಎಲ್ಸಿ .ಕೃಷಿಯಿಂದ ನಿಮ್ಮ ವಾಷರ್ಿಕ ವರಮಾನ ಎಷ್ಟು? ಎಂದು ಕೇಳಿದರೆ ಸಾಫ್ಟ್ವೇರ್ ಎಂಜಿಯರ್ಗಿಂತ ಹೆಚ್ಚು ಎಂದು ಕೇಳಿದವರೇ ಆಶ್ಚರ್ಯಚಕಿತರಾಗುವಂತೆ ಮಾಡುತ್ತಾರೆ.
ತೋಟದಿಂದಲ್ಲೆ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿರುವ ಶ್ರೀರಾಮನ್, ಪತ್ನಿ ಕಮಲ ಅವರೊಂದಿಗೆ ತೋಟದ ಮನೆಯಲ್ಲೆ ವಾಸವಾಗಿದ್ದಾರೆ. ಅವರ ಮಗಳು ಅಮೇರಿಕಾದಲ್ಲಿದ್ದರೆ,ಮಗ ಮೆಡಿಕಲ್ ಟ್ರನ್ಸಿಸ್ಟರ್ ಕೆಲಸಮಾಡುತ್ತಾ ಮೈಸೂರಿನಲ್ಲಿದ್ದಾನೆ. ತೋಟ ಕಟ್ಟುವ ಬಗೆ ಸ್ವಾನುಭವದಿಂದ ಅವರು ಗಳಿಸಿದ ಅಸಾಧಾರಣ ಜ್ಞಾನ ಕಡಿಮೆ ಏನಲ್ಲಾ.
ನೈಸಗರ್ಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್, ಶ್ರೀರಾಮನ್ ಅವರ ತೋಟಕ್ಕೆ ಭೇಟಿನೀಡಿ "ರಾಮಣ್ಣ ನಿನ್ನ ತೋಟದಲ್ಲಿ ಎಲ್ಲವನ್ನೂ ನೀನೆ ಮಾಡಿದ್ದೀಯಲ್ಲಪ್ಪಾ,ನಿನಗೆ ಹೇಳುವುದು ಮತ್ತೇನು ಇಲ್ಲಾ" ಅಂತ ಹೇಳಿದ್ದರಂತೆ. ಬನ್ನೂರು ಕೃಷ್ಣಪ್ಪ ರಾಮಣ್ಣನವರ ತೋಟ ನೋಡಿ ಸಂತೋಷಪಟ್ಟಿದ್ದರಂತೆ.ತೋಟಗಾರಿಕೆ ಇಲಾಖೆಯ ಜಂಟಿ ನಿದರ್ೇಶಕರಾಗಿದ್ದ ವಿಷಕಂಠ, ಆಕಾಶವಾಣಿಯ ಕೇಶವಮೂತರ್ಿ ಸೇರಿದಂತೆ ನಾನಾ ಭಾಗಗಳ ಜನ ತೋಟಕ್ಕೆ ಭೇಟಿ ನೀಡಿ ಸಂತಸ ಪಟ್ಟು ಸಲಹೆ ನೀಡಿದ್ದಾರೆ. ಮಾರ್ಗದರ್ಶನ ಪಡೆದು ಹೋಗಿದ್ದಾರೆ ಎಂದು ರಾಮಣ್ಣ ನೆನಪಿಸಿಕೊಳ್ಳುತ್ತಾರೆ. 
ಮೈಸೂರು ಎಚ್.ಡಿ.ಕೋಟೆ ರಸ್ತೆಯಲ್ಲಿ ಕರಿಗಳ ಗೇಟ್ ಬಳಿ (16ನೇ ಮೈಲಿ ಕಲ್ಲು) ಬಲಕ್ಕೆ ತಿರುಗಿ 2.5 ಕಿ.ಮೀ ಕ್ರಮಿಸಿದರೆ ಕೆ.ಕನ್ನೇನಹಳ್ಳಿ ಬರುತ್ತದೆ. ಅಲ್ಲೇ ದೊಡ್ಡಕೆರೆಯ ಮೊಗ್ಗಲಲ್ಲೆ  ಸದಾ ಹಸಿರಾಗಿರುವಂತೆ ಯೋಜಿಸಿ,ಯೋಚಿಸಿ ಕಟ್ಟಿದ ಶ್ರೀರಾಮನ್ ಅವರ ಹಸಿರು ತೋಟ ಇದೆ.
ಎಂಟು ಎಕರೆ ಪ್ರದೇಶದಲ್ಲಿ 6500 ಅಡಿಕೆ, ಮೆಣಸು, 500 ತೆಂಗು, 70 ಮಾವು, 1000 ಕೊಕೊ, ಸಾವಿರಾರು ಬಾಳೆ,ಸೀಬೆ,ಸಪೋಟ,ನಿಂಬೆ,ಮೂಸಂಬಿ, ಹಲಸು, ಬಿದಿರು ಹೀಗೆ ನಾನಾ ತಳಿಯ ಮರಗಿಡಗಳು ಒಂದರ ಪಕ್ಕದಲ್ಲಿ ಮತ್ತೊಂದು ಸಹಬಾಳ್ವೆ ನಡೆಸುವಂತೆ ಹೆಚ್ಚು ಸಾಂದ್ರತೆ (ಹೈಡೆನ್ಸಿಟಿ) ಬೇಸಾಯ ಪದ್ಧತಿಯಲ್ಲಿ ಬೆಳೆದು ನಿಂತಿವೆ.
ನಾವು ತೋಟಕ್ಕೆ ಭೇಟಿ ನೀಡಿದಾಗ ಮನೆಯ ಸುತ್ತಮತ್ತ ಗುಡ್ಡೆಹಾಕಿದ ತೆಂಗಿನ ಕೊಬ್ಬರಿ ಕಾಯಿ ಮಾರಾಟ ಮಾಡಿದರೆ ಹತ್ತು ಲಕ್ಷಕ್ಕೂ ಹೆಚ್ಚು ಹಣ ಬಂದರೆ, ತೋಟದಲ್ಲಿ ಬಿದ್ದಿರುವ ತೆಂಗಿನ ಕೊಬ್ಬರಿ ಕಾಯಿಗಳನ್ನು ಎತ್ತಿ ಮಾರಿದರೂ ಲಕ್ಷ ರೂಪಾಯಿಗೂ ಹೆಚ್ಚು ಹಣ ಸಿಗುವ ಸ್ಥಿತಿ ಇತ್ತು. ಲಕ್ಷಾಂತರ ರೂಪಾಯಿ ಹಣ ಮನೆಯ ಎದುರೆ ಬಯಲಿನಲ್ಲಿ ಬಿದ್ದಿತ್ತು. ಲಕ್ಷ ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿಡುವ ನೌಕರರ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನವನ್ನು ಬಯಲಿನಲ್ಲೆ ಸುರಿದ ಮಣ್ಣಿನ ಮಗನನ್ನು ನೋಡಿ ಆಶ್ಚರ್ಯವಾಯಿತು. ತೆಂಗಿನ ಮರಗಳಿದ್ದು ಕಾಯಿ ಖರೀದಿಸಿ ತರುವ, ಜಮೀನಿದ್ದರೂ ಪಟ್ಟಣದಿಂದ ತರಕಾರಿ,ಸೊಪ್ಪು ಕೊಂಡು ತರುವ ರೈತರಿಗಿಂತ ರಾಮಣ್ಣ ನಮಗೆ ಭಿನ್ನವಾಗಿ ಕಂಡರು.
ಪ್ರತಿಯೊಂದು ಅಡಿಕೆ ಮರ ಸಮೃದ್ಧ ಅಡಿಕೆ ಗೊಂಚಲು ಬಿಟ್ಟಿದೆ.ಒಂದು ಮರ ಕನಿಷ್ಠ 10 ಕೆಜಿ ವರೆಗೆ ಕಾಯಿ ಸಿಗುವಂತಿದೆ. ತೆಂಗಿನ ಕಾಯಿಗಳಂತೂ ಬಿದ್ದಲ್ಲೆ ಗಿಡವಾಗಿವೆ. ರೈತರು ಈ ಗಿಡಗಳನ್ನೇ ಖರೀದಿಸುತ್ತಾರೆ. ಐದು ವರ್ಷ ಪುಟ್ಟಬಾಳೆಯನ್ನು ಪ್ರತಿ ಗೊನೆ 15 ಕೆಜಿ ಬರುವಂತೆ ಸಾವಯವ ಪದ್ಧತಿಯಲ್ಲಿ ಬೆಳೆದರು. ನಂತರ ಜಾಣ್ಮೆ ಉಪಯೋಗಿಸಿ  ಒಂದು ಜಾಗದಲ್ಲಿ ಐದರಿಂದ ಹತ್ತು ಬುಡ ಬರುವಂತೆ ಬಾಳೆ ಬೆಳೆಸಿದರು.ಇದರಿಂದ ಯಾವುದೆ ಗೊಬ್ಬರ ಕೊಡದೆ ಪ್ರತಿ ಗೊನೆ ಆರು ಕೆಜಿ ಬಂದರೂ ಹತ್ತು ಗಿಡದಿಂದ 60 ಕೆಜಿ ಇಳುವರಿ ಬಂತು ಎನ್ನುತ್ತಾರೆ.
ಅಪ್ಪಟ ಕೃಷಿಕ ಶ್ರೀರಾಮನ್, ಮೇಲ್ನೋಟಕ್ಕೆ ಹುಂಬ ಮತ್ತು ಒರಟರಂತೆ ಕಂಡರು ತಾಯಿ ಕರುಳಿನ ಮನುಷ್ಯ. ಜೀವನ ನಿರ್ವಹಣೆಗೆ ಷೇರುಪೇಟೆ, ಗುಜರಿ ಸಾಮಾನು ಮಾರಾಟ, ಪ್ರಾವಿಷನ್ ಸ್ಟೋರ್ ,ಟ್ರಾವೆಲ್ ಏಜೆನ್ಸಿ ಹೀಗೆ ನಾನಾ ಕಸುಬುಗಳನ್ನು ಮಾಡಿದ ದೇಶಭಕ್ತ. ಅಂತಿಮವಾಗಿ ಮರಳಿ ಮಣ್ಣಿನ ಕಡೆ ನಡೆದು ಕೃಷಿಕನಾದ ಜೀವನ ಪಯಣವೆ ಸಹಾಸಗಾಥೆಯಂತಿದೆ.
ಆರ್ಎಸ್ಎಸ್ ಹುರಿಯಾಳು : ಮೈಸೂರು ರಾಮಣ್ಣ ಎಂದೆ ಪರಿಚಿತರಾಗಿರುವ ಶ್ರೀರಾಮನ್ ಊರಿನಲ್ಲಿದ್ದಾಗ ಆರ್ಎಸ್ಎಸ್ ಕಟ್ಟಾಳು. ಶ್ರೀರಾಮ ಸೇನೆ, ದತ್ತಪೀಠ ,ಸಂಘಟ, ಚಳವಳಿ,ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲ್ಲೂ ಹುಚ್ಚು ಕಲ್ಪನೆಗೆಳ ಬೆನ್ನೇರಿಹೊರಡುತ್ತಿದ್ದ ಇವರು 1985 ರಲ್ಲಿಯೆ ಈಶ್ವರಹಳ್ಳಿಯಲ್ಲಿ ಸಾವಯವ ಕೃಷಿ ಆರಂಭಿಸಿದ್ದರು. ಏನೇ ಮಾಡಿ ದರೂ ಇತರರಿಗಿಂತ ಭಿನ್ನವಾಗಿರಬೇಕು. ಸಮಾಜಕ್ಕೆ ಮಾದರಿಯಾಗುವಂತಿರಬೇಕು. ನೆಲದ ಮಣ್ಣಿಗೆ, ದೇಶಕ್ಕೆ ಕೊಡುಗೆ ನೀಡುವಂತಿರಬೇಕು ಎಂಬ ಆದರ್ಶ ಜೀವನಕ್ಕೆ ತಮ್ಮನ್ನು ಅಪರ್ಿಸಿಕೊಂಡವರು.
ರಸಾಯನಿಕ ಕೃಷಿ ಅಥವಾ ಸಾವಯವ ಕೃಷಿ ಮಾಡಬೇಕೆ ಎಂಬ ಗೊಂದಲದಲ್ಲೆ ಕೃಷಿಯಲ್ಲಿ ಅಪಾರ ನಷ್ಟ ಅನುಭವಿಸಿದರು. ಉರುಳಿ,ಅವರೆ,ಜೋಳ,ಎಳ್ಳು ಬೆಳೆಯುತ್ತಿದ್ದ ಭೂಮಿಯಲ್ಲಿ ರಾಸಾಯನಿಕ ಬಳಸಿ ಕಬ್ಬು,ಹತ್ತಿ ಬೆಳೆದರು. ನಂತರ ಕೃಷಿಯಲ್ಲಿ ನಷ್ಟವಾದಾಗ ಊರನ್ನೆ ಬಿಟ್ಟು ಮೈಸೂರಿಗೆ ಬಂದರು.
ವ್ಯವಸಾಯದ ಸಹವಾಸ ಸಾಕು ಅಂತ ಊರು ಬಿಟ್ಟು ಅರಮನೆ ನಗರಿಗೆ ಬಂದ ರಾಮಣ್ಣ ಷೇರು ಪೇಟೆಯಲ್ಲಿ ಹಣ ತೊಡಗಿಸಿ ನಷ್ಟ ಅನುಭವಿಸಿ ಬೀದಿಗೆ ಬಿದ್ದರು. ನಂತರ ಸರಸ್ವತಿಪುರಂನ 6 ನೇ ಮೇನ್ನಲ್ಲಿ ಪ್ರಾವಿಷನ್ ಸ್ಟೋರ್ ಹಾಕಿದರು. ಹೆಳೆ ಸೈಕಲ್, ಕಾರು ಅಂತ ಗುಜರಿ ವ್ಯಾಪಾರವನ್ನೂ ಮಾಡಿದರು. ಟ್ರಾವೆಲ್ ಏಜೆನ್ಸಿಯನ್ನು ಮಾಡಿದರು. ಹಾರುವ ಹಕ್ಕಿಯನ್ನು ಪಂಜರದಲ್ಲಿಟ್ಟಂತೆ ಆಗಿತ್ತು ಆಗ ನನ್ನ ಜೀವನ ಎನ್ನುವ ರಾಮಣ್ಣ ಅದೆಲ್ಲವನ್ನು ಬಿಟ್ಟು ಮತ್ತೆ ಮರಳಿ ಮಣ್ಣಿಗೆ ಬರಲು ನಿರ್ಧರಿಸಿಬಿಟ್ಟರು. ರಕ್ತಗತವಾಗಿ ಬಂದಿದ್ದ ಬೇಸಾಯ ಮಾಡುವ ಹಂಬಲ ಕೊನೆಗೆ ನಾನು ಇಲ್ಲಿ ಒಂದುಕಡೆ ನೆಲೆನಿಲ್ಲುವಂತೆ ಮಾಡಿತು ಎನ್ನುತ್ತಾರೆ.
ಭೂಮಿ ಖರೀದಿಗೂ ಸಿದ್ಧತೆ ಬೇಕು : ಯಾವುದೆ ಜಮೀನು ಖರೀದಿಸುವ ಮುನ್ನಾ ಸಾಕಷ್ಟು ಹೋಂವಕರ್್ ಮಾಡಿಕೊಳ್ಳಬೇಕು. ಮಣ್ಣಿನ ಗುಣ. ನೀರಿನ ಲಭ್ಯತೆ.ವ್ಯವಸಾಯಕ್ಕೆ ಸೂಕ್ತ ವಾತವರಣ ಇದೆಯೆ ಇದೆಲ್ಲವನ್ನು ನೋಡಿ ನಂತರ ಬೇಸಾಯ ಮಾಡಲು ಮುಂದಾಗಬೇಕು ಎನ್ನುವ ರಾಮಣ್ಣ ಮೂರು ವರ್ಷ ಮಳೆ ಹೋದರೂ ಬೇಸಾಯಕ್ಕೆ ತೋದರೆಯಾಗದಂತಹ ಕಡೆ ತಾವು ಜಮೀನು ಖರೀದಿಸಿದ್ದಾಗಿ ಹೇಳುತ್ತಾರೆ.
2000 ಇಸವಿಯಲ್ಲಿ ಕೆ.ಕನ್ನೆನಹಳ್ಳಿಯ ದೊಡ್ಡಕೆರೆ ಕೆಳಗಡೆಗೆ ಎಂಟು ಎಕರೆ ಜಮೀನು ಖರೀದಿಸುತ್ತಾರೆ. ಆಗ ಅಲ್ಲಿ ಜೊಂಡು ಬೆಳೆದುಕೊಂಡು, ಜೌಳು ಮಣ್ಣು ತುಂಬಿಕೊಂಡು ಇದನ್ನು ದೆವ್ವದ ಭೂಮಿ ಅಂತ ಜನ ಕರೆಯುತ್ತಿದ್ದರು. ಇಫರ್ು ಜಲಪಾತದಿಂದ ಹರಿದು ಬರುವ ನೀರು ಲಕ್ಷಣ ತೀರ್ಥ ಸೇರುತ್ತದೆ. ಆ ನದಿಗೆ ಹನಗೋಡು ಸಮೀಪ ಒಡ್ಡು ಕಟ್ಟಲಾಗಿದೆ. ಅಲ್ಲಿಂದ 42 ಕೆರೆಗಳಿಗೆ ನೀರು ಬರುತ್ತದೆ.ಅದರಲ್ಲಿ ನಮ್ಮ ಈ ದೊಡ್ಡಕೆರೆಯೂ ಒಂದು. ಐದು ವರ್ಷ ಮಳೆ ನಿಂತರೂ ನಮಗೆ ನೀರಿನ ತೊಂದರೆ ಇಲ್ಲ.ಹಾಗಾಗಿ ನಾನು ಇದೆ ಜಾಗವನ್ನು ತೋಟಮಾಡಲು ಆರಿಸಿಕೊಂಡೆ ಎಂದು ಹೇಳುವಾಗ ಭವಿಷ್ಯದ ಬಗ್ಗೆ ಸ್ಪಷ್ಟ ಚಿಂತನೆ ಇರುವ ರೈತನಂತೆ ರಾಮಣ್ಣ ಕಾಣುತ್ತಾರೆ.
ದೆವ್ವದ ಭೂಮಿ ಅಂತ ಕರೆಯುತ್ತಿದ್ದ ಜಮೀನು ಖರೀದಿಸಿದಾಗ ಇಲ್ಲಿನ ಜನ "ಬ್ರಾಹ್ಮಣನಿಗ್ಯಾಕೆ ಬೇಸಾಯ" ಅಂತ ಲೇವಡಿ ಮಾಡಿದ್ದರೂ. ಐದು ವರ್ಷ ಬಿಟ್ಟು ಬಂದು ನೋಡಿ ಆಗ ಇಲ್ಲಿ ಏನು ಮಾಡಬಹುದು ಅಂತ ತೋರಿಸುತ್ತೇನೆ ಎಂದು ಹೇಳಿದ್ದೆ ಎಂದು ಆಗಿನ ದಿನಗಳನ್ನು ರಾಮಣ್ಣ ನೆನಪಿಸಿಕೊಂಡರು.
ಭೂಮಿ ಸಿದ್ಧತೆ : ಎಂಟು ಎಕರೆ ಭೂಮಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡೆ. ಬಾರ್ಡರ್ನಲ್ಲಿ 12 ಅಡಿಗೆ ಒಂದು ತೆಂಗು,ತೆಂಗಿನ ಮಧ್ಯದಲ್ಲಿ ಒಂದು ಮಾವು, ಕೊಕೊ ಹಾಕಿದೆ. ನಡುವೆ ಪ್ರತಿ ಹತ್ತು ಅಡಿ ಅಂತರದಲ್ಲಿ ಒಂದು ಮೀಟರ್ ಆಳ,ಒಂದು ಮೀಟರ್ ಅಗಲ ಬರುವಂತೆ (ಟ್ರಂಚ್/ಕಾಲುವೆ)ಗುಂಡಿ ತೆಗೆಸಿದೆ. ಭೂಮಿಗೆ ನೈಟ್ರೋಜನ್ ಫಿಕ್ಸ್ ಮಾಡಲು ಏಕದಳ ದ್ವಿದಳ ಧಾನ್ಯಗಳನ್ನು ಭಿತ್ತಿ ನಂತರ ಬಾಳೆ ಗುಂಡಿ ತೆಗೆದು ಕೋಳಿ ಗೊಬ್ಬರಹಾಕಿ ಬಾಳೆ ನಾಟಿ ಮಾಡಿದೆ. ಮೂರು ತಿಂಗಳ ನಂತರ ಅಡಿಕೆ ಮತ್ತು ತೆಂಗು ಹಾಕಿದೆ. ನಾಲ್ಕು ಅಡಿಕೆ ಮರದ ಮಧ್ಯ ಒಂದು ಮರ ಹರಳು, ಆಲುವಾಣ,ಜಟ್ರೋಪ,ಗ್ಲಿರಿಸೀಡಿಯಾ ಹಾಕಿದೆ. 
ನಂತರ ನಮ್ಮ ಸಮೀಪದಲ್ಲೇ ಸಿಗುತ್ತಿದ್ದ ಕಬ್ಬಿನ ತರಗನ್ನು ತಂದು ಇಡೀ ತೋಟಕ್ಕೆ ಹೊದಿಕೆಯಾಗಿ ಹಾಸಿದೆ.ತೋಟದ ತುಂಬ ವೆಲ್ವೆಟ್ ಬೀನ್ಸ್ ಹಾಕಿಬಿಟ್ಟೆ. ಇದರಿಂದ ನಮ್ಮ ಭೂಮಿಯಲ್ಲಿ ಹ್ಯೂಮಸ್ ನಿಮರ್ಾಣವಾಗುವಂತೆ ಮಾಡಿ, ಎರೆಹುಳುಗಳು ಹೆಚ್ಚಾಗುವಂತೆ ಮಾಡಿಬಿಟ್ಟೆ ಎನ್ನುತ್ತಾರೆ ರಾಮಣ್ಣ.
ಮಧ್ಯೆ 500 ಹೆಬ್ಬೇವು,200 ಸಿಲ್ವರ್ ಬೇರೆ ಹಾಕಿದ್ದೆ. ನೀರಿಗೆ ಕೊರತೆ ಇರಲಿಲ್ಲ ಬಾಳೆ ಚೆನ್ನಾಗಿ ಬಂತು ಸಾಕಷ್ಟು ಆದಾಯವೂ ಬಂತು. ಜೊತೆಗೆ ಬೇರೆಗಿಡಗಳೆಲ್ಲಾ ಬಾಳೆಯ ನಡುವೆ ಚೆನ್ನಾಗಿ ಬಂದವು. ಚಿನ್ನದ ಬೆಳೆ ಅಂತ ಕರೆಯುತ್ತಿದ್ದ ವೆನ್ನಿಲ್ಲಾವನ್ನು ಹಾಕಿ ಕೈಸುಟ್ಟುಕೊಂಡೆ.ಹತ್ತು ಲೋಡ್ ಮಂಗಳೂರು ಸೌತೆ ಬೆಳೆದು ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆಯೂ ಬರಲಿಲ್ಲ. ಸಾಕಾಷ್ಟು ನಷ್ಟ ಆಯಿತು. ಆರಂಭದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುತ್ತಿದ್ದೆ. ಈಗ ಸಂಪೂರ್ಣ ನಿಲ್ಲಿಸಿದ್ದೇನೆ. ನನ್ನ ತೋಟ ಈಗ ಸಂಪೂರ್ಣ ಮಳೆ ಆಶ್ರಯದಲ್ಲೆ ಅಚ್ಚ ಹಸಿರಾಗಿದೆ. ಬೋರ್ವೆಲ್ ಅನ್ನು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಿಸುತ್ತಿದ್ದೇವೆ ಎನ್ನುತ್ತಾರೆ.
ಪಾಳೇಕರ್ ಪದ್ಧತಿ : ಒಮ್ಮೆ ಆರ್.ಸ್ವಾಮಿ ಆನಂದ್ ನಮ್ಮ ತೋಟಕ್ಕೆ ಬಂದವರು "ರಾಮಣ್ಣ ಒಂದು ನಾಟಿ ಹಸು ಇದ್ರೆ ಇಪ್ಪತ್ತು ಎಕರೆ ಕೃಷಿ ಮಾಡಬಹುದು. ಸುಭಾಷ್ ಪಾಳೇಕರ್ ಎಂಬ ಕೃಷಿ ಬ್ರಹ್ಮ ಮೈಸೂರಿಗೆ ಬಂದು ಕಾರ್ಯಾಗಾರ ಮಾಡ್ತಾರೆ ನೀವೂ ಭಾಗವಹಿಸಿ " ಎಂದರು. ನಾನು 2009-10 ರಲ್ಲಿ ನಡೆದ ಪಾಳೇಕರ್ ಕಾರ್ಯಾಗಾರದಲ್ಲಿ ಭಾಗವಹಿಸಿ ಸಾಕಷ್ಟು ಕಲಿತುಕೊಂಡೆ. 2010 ರಲ್ಲಿ ಒಂದು ಹಳ್ಳಿಕಾರ್ ನಾಟಿ ಹಸು ತಂದೆ. ಈಗ ಅವುಗಳ ಸಂಖ್ಯೆ ಎಂಟಾಗಿದೆ. ಜೀವಾಮೃತ ನಿಜಕ್ಕೂ ಭೂಮಿಯಲ್ಲಿ ಮ್ಯಾಜಿಕ್ ರೀತಿ ಕೆಲಸಮಾಡುತ್ತೆ. ಮೂರ್ನಾಲ್ಕು ವರ್ಷ ಜೀವಾಮೃತ ಬಳಸಿದೆ. ಈಗ ಏನನ್ನು ಬಳಸುತ್ತಿಲ್ಲ. ಸ್ವಲ್ಪ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ ಅಷ್ಟೇ ಎನ್ನುತ್ತಾರೆ ರಾಮಣ್ಣ.
ಜೀವಾಮೃತದ ವಿಷಯದಲ್ಲಿ ಸ್ವಾಮಿ ಆನಂದ್ ನನ್ನ ಗುರು ಎಂದು ಹೇಳುವ ರಾಮಣ್ಣ ಯಾವಯಾವ ಗಿಡಗಳಿಗೆ ಎಷ್ಟು ಕ್ಯಾಂಡಲ್ ಬಲ್ಪ್ ಶಾಖ ಬೇಕು ಎನ್ನುವುದನ್ನ ಕಲಿಸಿಕೊಟ್ಟವರು ಸುಭಾಷ್ ಪಾಳೇಕರ್. ಕೃಷಿ ಮಾಡಲು ನಾಟಿ ಹಸು ಬೇಕೆ ಬೇಕು ಎನ್ನುವ ಇವರು ಹಾಲನ್ನು ಡೈರಿಗೆ ಕೊಡುವುದರಿಂದ ಪ್ರತಿ ತಿಂಗಳು 2000 ಬಂದರೆ ಮನೆಗೆ 2 ಲೀಟರ್ ಬಳಸುವುದರಿಂದ 1800 ಉಳಿತಾಯವಾದಂತಾಗುತ್ತದೆ. ತೋಟದ ಒಳಗೆ ದನಗಳನ್ನು ಕಟ್ಟಿ ಮೇಯಿಸುವುದರಿಂದ ನಮಗೆ ಇತರೆ ಖಚರ್ುಗಳು ಬರುವುದಿಲ್ಲ. ತೋಟದಲ್ಲೇ ದನಗಳ ಸಗಣಿ, ಗಂಜಲ ಬೀಳುವುದರಿಂದ ಗಿಡಗಳಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ.
ಮಾರುಕಟ್ಟೆ : ಆರಂಭದಲ್ಲಿ ತಾನು ಬೆಳೆದ ಉತ್ಪನ್ನಗಳನ್ನು ನೈಸಗರ್ಿಕ ಮಾರಾಟ ಮಳಿಗೆಗೆ ತಂದು ಕೊಡುತ್ತಿದ್ದೆ. ಬೀದಿ ಬೀದಿ ತಿರುಗಿ ಮಾರಾಟ ಮಾಡಿದೆ. ಲಾಭದಾಯಕ ಎನಿಸಲಿಲ್ಲ.  ಈಗ ಮನೆ ಬಾಗಿಲ್ಲಲ್ಲೆ ಮಾರಾಟ ಮಾಡಿಬಿಡುತ್ತೇನೆ. ಇದರಿಂದ ಸಾಗಾಣಿಕೆ ವೆಚ್ಚ ಉಳಿದಂತೆಯೂ ಆಗಿದೆ. ಸ್ಥಳದಲ್ಲೆ ಹಣಕೊಟ್ಟು ಖರೀಸುವಂತವರೂ ಸಿಕ್ಕಂತಾಗಿದೆ ಎನ್ನುತ್ತಾರೆ.
ವ್ಯವಸಾಯ ಮಾಡಬೇಕು ಎನ್ನುವವರು, ಜಮೀನಿನಲ್ಲೆ ಮನೆ ಮಾಡಿಕೊಂಡು ಇರಬೇಕು.ದುಶ್ಚಟಗಳಿಂದ ದೂರವಿರಬೇಕು. ನಾಟಿ ಹಸು ಸಾಕಬೇಕು. ವಿಜ್ಞಾನ ಮತ್ತು ಅನುಭವವನ್ನು ಸೇರಿಸಿಕೊಂಡು ವ್ಯವಸಾಯ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಕೃಷಿಯೂ ಲಾಭದಾಯಕ ಆಗುತ್ತದೆ ಎಂದು ಸಲಹೆ ನೀಡುತ್ತಾರೆ. ನಮ್ಮ ಸುತ್ತಲಿನ ರೈತರಿಗೆ ರಾಸಾಯನಿಕ ದುಷ್ಪರಿಣಾಮದ ಬಗ್ಗೆ ಎಷ್ಟೆ ತಿಳಿ ಹೇಳಿದರೂ ತಲೆಗೆ ಹೋಗಲಿಲ್ಲ. ಈಗ ರಾಸಾಯನಿಕ ಬಳಸುವುದರಿಂದ ಆಗುವ ಅನಾಹುತಗಳು ಗೊತ್ತಾದ ಮೇಲೆ ಎರಡು ವರ್ಷಗಳಿಂದ ಸುತ್ತಲಿನ ರೈತರು ನೈಸಗರ್ಿಕ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀರಾಮನ್ ಅವರನ್ನು ಮೊ. 9902651417 ಸಂಪಕರ್ಿಸಬಹುದು 




ಭಾನುವಾರ, ಡಿಸೆಂಬರ್ 11, 2016

ಸಿಲ್ಕ್ "ಸಿರಿ" ನಾಗಭೂಷಣ: ರೈತರಿಗೆ ಘನತೆ ತಂದ ಕೃಷಿಕ 
ಮೈಸೂರು : ಬಡತನ,ಸೋಲು,ಅಪಮಾನಗಳನ್ನೇ ಸವಾಲಾಗಿ ಸ್ವೀಕರಿಸಿ "ಸಿರಿಕಲ್ಚರ್" ನಿಂದ "ಸಿರಿವಂತ"ರಾದ ಯಶಸ್ವಿ ರೈತರೊಬ್ಬರ ಕಥಾನಕ ಇದು.
ಹದಿನೈದು ವರ್ಷಗಳ ಹಿಂದೆ ಹತ್ತು ರೂಪಾಯಿ ದಿನಗೂಲಿ ನೌಕರರಾಗಿದ್ದ ಕೆ.ಬಿ.ನಾಗಭೂಷಣ್ ಅವರನ್ನು ಕೆಲಸದ ಮೇಲಿನ ಶ್ರದ್ಧೆ,ಶಿಸ್ತು ಮತ್ತು ಕೃಷಿ ಅನುಭವ ಮಾದರಿ ರೈತರನ್ನಾಗಿ ರೂಪಿಸಿದೆ.
"ರಾಜಕಾರಣಿಯ ಮಗ ರಾಜಕಾರಣಿಯಾಗುತ್ತಾನೆ. ಅಧಿಕಾರಿಯ ಮಗ ಅಧಿಕಾರಿಯಾಗುತ್ತಾನೆ. ರೈತನ ಮಗ ಯಾಕೆ ರೈತನಾಗಬಾರದು?" ಎಂದು ಕೇಳುವ ನಾಗಭೂಷಣ ತಮ್ಮ ಮಗ ಕಿರಣ್ ಅವರನ್ನು ಮಾದರಿ ರೈತನನ್ನಾಗಿಸಿ ರೈತ ಬದುಕಿಗೆ ಘನತೆ ಗೌರವವನ್ನು ತಂದುಕೊಟ್ಟ ಕೃಷಿಕ.
ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುವ ಹಾದಿಯಲ್ಲಿ ಬರುವ ಚಿಕ್ಕಳ್ಳಿ ಸಮೀಪ ಮೊಸಂಬಾಯನಹಳ್ಳಿ ರಸ್ತೆಯಲ್ಲಿ "ಕಿರಣ್ ಸಿರಿ ಫಾರಂ" ಘಟಕ ಒಂದು. ಮೇಗಳಾಪುರದ ಸಮೀಪ "ಕಿರಣ್ ಸಿರಿ ಫಾರಂ" ಘಟಕ ಎರಡು.ದುದ್ದಗೆರೆ ಬಳಿ ಮತ್ತೊಂದು ತೋಟಗಾರಿಕೆ ಬೇಸಾಯ ಮಾಡಲು "ಕಡ್ಲೆ ಮನೆ ತೋಟ" ಎಂಬ ಘಟಕ ಮೂರು. ಹೀಗೆ ಮೂರು ಮಾದರಿ ತೋಟಗಳನ್ನು ರೂಪಿಸುವ ಮೂಲಕ ರೇಷ್ಮೆ ಕೃಷಿಯಲ್ಲಿ ಹೆಚ್ಚು ಆದಾಯಗಳಿಸಿ "ಸಿಲ್ಕ್" ನಾಗಭೂಷಣ್ ಎಂದೇ ಚಿರಪರಿಚಿತರಾಗಿದ್ದಾರೆ.
ಮಗ ಕಿರಣ್ ಎಂಬಿಎ,ಬಿಬಿಎಂ,ಬಿಇ ಓದಿಕೊಂಡು ರೇಷ್ಮೆ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.ಇನ್ಫ್ಪೋಸಿಸ್ನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸೊಸೆ ಮದುವೆ ನಂತರ ಕೆಲಸಕ್ಕೆ ಗುಡ್ ಬೈ ಹೇಳಿ ಪತಿ ಕಿರಣ್ ಅವರ ಕೃಷಿಗೆ ಸಾಥ್ ನೀಡುತ್ತಾರೆ. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣುಕೊಡಲು ಯಾರು ಮುಂದೆ ಬರುವುದಿಲ್ಲ ಎಂಬ ಮಾತನ್ನೇ ಕೇಳುತ್ತಿದ್ದ ನಮಗೆ ನಾಗಭೂಷಣ್ ಅವರ ಸಂಸಾರವನ್ನು ನೋಡಿ ಅಚ್ಚರಿ ಮತ್ತು ರೈತ ಬದುಕಿನ ಬಗ್ಗೆ ಹೆಮ್ಮೆ ಅನಿಸಿತು.
ಎಸ್ಸೆಸ್ಸೆಲ್ಸಿ ಫೇಲಾದ ನಾಗಭೂಷಣ್ ಕಾಖರ್ಾನೆಯೊಂದರಲ್ಲಿ ನೌಕರರಾಗಿ, ಟ್ರಾವೆಲ್ ಏಜೆನ್ಸಿ ನಡೆಸಿ, ನಂತರ ಅದರಿಂದ ಬಂದ ಲಾಭದ ಹಣದಲ್ಲಿ ಜಮೀನು ಖರೀದಿಸಿ ರೇಷ್ಮೆ ಕೃಷಿಕರಾಗಿ ಬೆಳೆದು ಬಂದ ಜೀವನ ಪಯಣವೇ ಎಂತಹವರಿಗೂ ಸ್ಪೂತರ್ಿ ನೀಡುವ ಮೂಲಕ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುತ್ತದೆ.
"ವಿಧ್ಯಾಭ್ಯಾಸ ಕಡಿಮೆ.ಆದರೆ ಸೆಂಟ್ರಲ್ ಸಿಲ್ಕ್ ಬೋರ್ಡನವರು ನನ್ನನ್ನು ಡಾ.ನಾಗಭೂಷಣ್ ಎಂದು ಕರೆಯುತ್ತಾರೆ" ಎನ್ನುವ ಇವರನ್ನು ರೇಷ್ಮೆಕೃಷಿಯಲ್ಲಿನ ಅನುಭವ ಕೃಷಿವಿಜ್ಞಾನಿಯನ್ನಾಗಿ ರೂಪಿಸಿದೆ.
ಅವರದೇ ಮಾತುಗಳಲ್ಲಿ ಅವರ ಜೀವನಾನುಭವಗಳನ್ನು ಕೇಳಿ...
ವಲಸೆ ಬಂದವರು : " ನಾವು ಮೂಲತಃ ಕೊಡಗಿನ ಸೋಮವಾರಪೇಟೆ ನಿವಾಸಿಗಳು. ನಮ್ಮ ತಾತ ಮುತ್ತಾತಂದಿರು ಸಂತೆ ಸಂತೆಗೆ ಹೋಗಿ ಕಡ್ಲೆ ವ್ಯಾಪಾರ ಮಾಡಿಕೊಂಡು ಬೆಳೆದವರು. ಸ್ವಾತಂತ್ರ ಬಂದ ಕಾಲದಲ್ಲಿ ತಾತ 150 ಎಕರೆ ಕಾಫಿ ತೋಟದ ಮಾಲೀಕರಾಗಿದ್ದರು. ನಮ್ಮ ತಂದೆ ನಮ್ಮ ತಾತನಿಗೆ ಒಬ್ಬನೆ ಮಗ. ನಮ್ಮ ತಂದೆಗೆ ಇದ್ದ ದುರಭ್ಯಾಸದ ಫಲವಾಗಿ ಆಸ್ತಿಯನ್ನೆಲ್ಲ ಕಳೆದುಕೊಂಡರು.ಆಗ ನಾವು ಅಕ್ಷರ ಸಹ ಬೀದಿಗೆ ಬಿದ್ದೆವು. ನಂತರ ಹೊಟ್ಟೆ ಪಾಡಿಗಾಗಿ  1971 ರಲ್ಲಿ ಮೈಸೂರಿಗೆ ಬಂದು ನೆಲೆ ನಿಂತೆವು"  ಜೀವನದಲ್ಲಿ  ಹಲವಾರು ಕಷ್ಟ ನಷ್ಟ ಅನುಭವಿಸಿ ಮೇಲೆ ಬಂದವರು ನಾವು. ನಮ್ಮ ತಂದೆಗೆ ಏಳೆಂಟು ಜನ ಮಕ್ಕಳು. ನಾನು ನಾಲ್ಕನೇ ಕ್ಲಾಸ್ ಓದುವಾಗಲೇ ನಮ್ಮ ತಂದೆ ಸತ್ತುಹೋದರು. ನಂತರ ನಮ್ಮ ಅಣ್ಣ ನಮ್ಮೆಲ್ಲರನ್ನು ಸಾಕಿ ಸಲುಹಿದರು.
ವಿಧ್ಯಾಭ್ಯಾಸ ಎಸ್ಸ್ಸ್ಸೆಲ್ಸಿ ಅಷ್ಟೆ. ಮುಂದೆ ಓದಲಿಲ್ಲ. ಆದರೆ ಯಾವುದೆ ಸಿರಿಕಲ್ಚರ್ನಲ್ಲಿ ಪದವಿ ಪಡೆದವರಿಗಿಂತ ಹೆಚ್ಚು ತಿಳುವಳಿಕೆ ಇದೆ. ಎಲ್ಲವೂ ಪ್ರಾಕ್ಟಿಕಲ್ ಆಗಿ ಬಂದ ಜ್ಞಾನ. 1971 ರಲ್ಲಿ ಮೈಸೂರಿಗೆ ಬಂದು ಶಾಲೆಗೆ ಸೇರಿದೆ. ಎಸ್ಸೆಎಸ್ಸೆಲ್ಸಿಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆದೆ. ಆವಾಗ ನಮ್ಮಣ್ಣ ನನ್ನನ್ನು ಹೊಡೆದು ಮೂರು ದಿನ ಊಟಕೊಡ್ದೆ ಮನೆಯಿಂದ ಆಚೆ ಇಟ್ಟಿದ್ದರು.ಕೊನೆಗೆ ಬೇರೆ ದಾರಿ ಕಾಣದೆ ಯಾರ್ಯಾರನೋ ಕೈಕಾಲು ಹಿಡಿದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. 150 ರೂಪಾಯಿ ತಿಂಗಳ ಸಂಬಳದಲ್ಲಿ ಮೂರು ವರ್ಷ ಕೆಲಸ ಮಾಡಿದೆ.
ಬಸ್ ಏಜೆಂಟ್ : ಇದೇ ಸಂದರ್ಭದಲ್ಲಿ ನಮ್ಮಣ್ಣ ಬಸ್ ಏಜೆಂಟ್ ಆಗಿದ್ದರು.  ಬಸ್ ಓನರ್ ಹತ್ರ ಹೋಗಿ ನನಗೂ ಬಸ್ ಏಜೆಂಟ್ ಕೆಲಸ ಕೊಡಿ. ಫ್ಯಾಕ್ಟರಿ ಕೆಲಸ ಮಾಡಕ್ಕೆ ಆಗಲ್ಲ ಅಂತ ಕೇಳಕೊಂಡೆ. ಆಗ ಅವರು ಆಯ್ತು ದಿನಕ್ಕೆ ಹತ್ತ್ ರೂಪಾಯಿ ಸಂಬಳ ಕೊಡ್ತಿನಿ ಅಂದ್ರು. ತಿಂಗಳಿಗೆ 300 ರೂಪಾಯಿ ಸಂಬಳಕ್ಕೆ ಬಸ್ ಏಜೆಂಟ್ ಕೆಲಸಕ್ಕೆ ಸೇರಿಕೊಂಡೆ.
ಅಲ್ಲಿಂದ ನನ್ನ ನಿಜವಾದ ಜೀವನದ ಜನರ್ಿ ಆರಂಭವಾಯ್ತು. 1978-79 ರ ಸಮಯ ಅದು. ನನ್ನ ಕೆಲಸ ನೋಡಿದ ಟೋರಿಸ್ಟ್ಗಳು ನನಗೆ ಒಂದು,ಎರಡ್ ರೂಪಾಯಿ ಟಿಫ್ಸ್ ಕೊಡ್ತಾ ಇದ್ರು. ಆ ದುಡ್ಡನ್ನೆಲ್ಲಾ ಕೂಡಿಡುತ್ತಾ ಬಂದೆ. ಬಸ್ ಓನರ್ ನನ್ನ ಶ್ರಮ ನೋಡಿ ಸಂಬಳ ಜಾಸ್ತಿ ಮಾಡ್ತ ಬಂದ್ರು. ನಂತರದ ದಿನಗಳಲ್ಲಿ ನಾನು ಅದೇ ಕಂಪನಿಯಲ್ಲಿ ಮ್ಯಾನೇಜರ್ ಆದೆ. ನಂತರ ಅದೇ ಕಂಪನಿ ಓನರ್ ಕೂಡ ಆದೆ. "ಶೇಖರ್ ಲೈನ್ ಟೂರಿಸ್ಟ್ ಕಂಪನಿ" ಅಂತ ಮೈಸೂರಿನ ಗಾಂಧಿ ಸ್ಕ್ವೈರ್ನಲ್ಲಿ ಈಗಲೂ ಇದೆ. ಹಿಂದೆ ಕೆ.ವಿ.ಮೋಟಾರ್ ಸವರ್ಿಸ್ ಅಂತ ಇತ್ತು. ಮುಂದೆ ನಾನು ಅದೇ ಕೆವಿ ಮೋಟಾರ್ ಸವರ್ಿಸ್ನ ಮಾಲೀಕನೂ ಆದೆ. ಸುಖ ಅನ್ನೋದು ಆಗ ನನಗೆ ಮರೀಚಿಕೆ ಆಗಿತ್ತು.
ನಾನು ಟ್ರಾವೆಲ್ ಏಜೆನ್ಸಿಲಿ ಇದ್ದಾಗ, ನನ್ನ ಫೀಲ್ಡ್ ಸರಿ ಇಲ್ಲ. ನನ್ನ ಮಗ ನನ್ನ ವೃತ್ತಿ ಮಾಡುವುದು ಬೇಡ. ವ್ಯವಸಾಯ ಮಾಡಲಿ ಅಂತ 2000 ನೇ ಇಸವಿಯಲ್ಲಿ ಈ ಜಮೀನು ಖರೀದಿಸಿದೆ. ಇದೇ "ಕಿರಣ್ ಸಿರಿ ಫಾರಂ" ಯುನಿಟ್ ಒನ್. ಆದರೆ ನನ್ನ ಮಗ ಕಿರಣ ಮೊದಲು ನನ್ನ ಹಾಗೆ ಓದಿನಲ್ಲಿ ದಡ್ಡನಾಗಿದ್ದ. ಎಸ್ಸೆಸ್ಸೆಲ್ಸಿ ಫೇಲಾಗ್ತಾನೆ ಅವನಿಗೆ ಕೋಳಿ ಫಾರಂ ಹಾಕಿಕೊಡೋಣ ಅಂತ ಇಲ್ಲಿ ಐದು ಎಕರೆ ಜಮೀನು ಖರೀದಿ ಮಾಡಿದ್ದೆ. ಆದರೆ ಎಸ್ಸೆಸೆಲ್ಸಿ ಪಾಸಾಗಿಬಿಟ್ಟ. ನನಗೆ ಬಹಳಾ ಬೇಜಾರಾಯ್ತು. ಕೋಳಿಫಾರಂ ಮಾಡೋಣ ಅಂತ ಜಮೀನು ಖರೀದಿಸಲು ಬಡ್ಡಿ ಸಾಲ ತೆಗೆದುಕೊಂಡಿದ್ದೆ. ಜಮೀನು ಮಾರಾಟಕ್ಕೆ ಇಟ್ಟೆ ಯಾರು ತಗೆದುಕೊಳ್ಳಲು ಮುಂದೆ ಬರಲಿಲ್ಲ. ನಂತರ ಎರಡು ವರ್ಷ ಜಮೀನನ್ನು ಖಾಲಿ ಬಿಟ್ಟೆ. ನಂತರ ಪಿಯುಸಿ ಫೇಲಾದ. ನನಗೆ ತುಂಬಾ ಸಂತೋಷ ಆಯ್ತು. ತುಂಬು ಹೃದಯದಿಂದ ವೆಲ್ಕಮ್ ಮಾಡ್ದೆ.
ಸಿರಿತನ ತಂದ ಸಿರಿಕಲ್ಚರ್ : ನನಗಿಂತ ಜಾಸ್ತಿ ಓದಿದ್ದೀಯಾ ಬಾ ಅಂತ ನನ್ನ ಮಗ ಕಿರಣ್ನನ್ನು ಪ್ರೀತಿಯಿಂದ ಸ್ವಾಗತಿಸಿದೆ. ಕೋಳಿಫಾರಂ ಮಾಡುವ ಮೊದಲು ನಾಲ್ಕಾರು ತೋಟಗಳಿಗೆ ಹೋಗಿ ರೈತರ ಅನುಭವ ಕೇಳಿದೆ. ಎಲ್ಲರೂ ತಮ್ಮ ಕಷ್ಟಗಳನ್ನೇ ಹೇಳಿಕೊಂಡರು. ಆಗ ನೂರೆಂಟು ರೋಗ ಬಂದು ಕೋಳಿ ಮರಿಗಳೆಲ್ಲಾ ಸಾಯ್ತಾ ಇದ್ವು. ಕೋಳಿಫಾರಂಗಿಂತ ಸಿರಿಕಲ್ಚರ್ ಮಾಡಿ ಅಂತ ಹಲವರು ಸಲಹೆ ನೀಡಿದ್ರು. ತಿಂಗಳಿಗೆ  ಎಂಟಂತ್ತು ಸಾವಿರ ರೂಪಾಯಿ ಸಿಗುತ್ತೆ ರೇಷ್ಮೆ ಕೃಷಿ ಮಾಡಿ ಅಂದ್ರು. 
ಅದು 2002 ನೇ ಇಸವಿ. ಜಮೀನಿನಲ್ಲಿ ಐದು ತಿಂಗಳು ಶ್ರಮಪಟ್ಟು ಕೆಲಸ ಮಾಡಿ ರೇಷ್ಮೆ ಕಡ್ಡಿ ನಾಟಿ ಮಾಡಿದೆವು. ಪಿಯುಸಿ ಫೇಲಾಗಿದ್ದ ಮಗನಿಗೆ ಜಮೀನಿನ ಕೆಲಸ ಕಷ್ಟ ಅಂತ ಗೊತ್ತಾಗೋಯ್ತು. ನಂತರ ಪಿಯುಸಿ ಪಾಸ್ ಮಾಡಿ ಬಿಬಿಎಂ, ಎಂಬಿಎ,ಬಿಇ ಮಾಡಿದ. ಕೆಲಕಾಲ ನೌಕರಿಗೂ ಹೋಗಿದ್ದ ಅದಕ್ಕಿಂತ ಕೃಷಿನೇ ಮೇಲೂ ಅಂತ ಈಗ ಅವನೇ ರೇಷ್ಮೆ ನೋಡಿಕೊಳ್ಳುತ್ತಿದ್ದಾನೆ.
ಅನುಭವ ಕಲಿಸಿತು ಪಾಠ : ರೇಷ್ಮೆ ಕೃಷಿ ಮಾಡ್ದಾಗ ನಮಗೆ ಏನೇನೂ ಅನುಭವ ಇರಲಿಲ್ಲಾ. ರೇಷ್ಮೆ ಕಡ್ಡಿ ಹಾಕಿ ಐದು ತಿಂಗಳಾದ ಮೇಲೆ ಜಮೀನಿಗೆ ಬಂದ ರೇಷ್ಮೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ವರನಾಗಭೂಷಣ ಅವರು "ಇದು ಕಲ್ಲು ಭೂಮಿ ಇಲ್ಲಿ ರೇಷ್ಮೆ ಬೆಳೆಯೋದು ಕಷ್ಟ ನಿನಗೆ ಬುದ್ದಿ ಇಲ್ಲ" ಅಂತ ಹೇಳಿ ಹೋದರು.ಇದನ್ನೇ ನಾನು ಚಾಲೇಂಜಿಂಗ್ ಆಗಿ ತೆಗೆದುಕೊಂಡೆ. ಕೃಷಿ ಮಾಡುವುದು ನನಗೆ ಅನಿವಾರ್ಯ ಕೂಡ ಆಗಿತ್ತು. ರೇಷ್ಮೆ ಬೆಳೆದು ತೋರಿಸಿದೆ. ಎರಡು ವರ್ಷ 2005-06 ವರೆಗೂ ಹೈಬ್ರಿಡ್ ಬೆಳೆ ಬೆಳೆದೆ.ಮೊದಲ ಸಲ ನನಗೆ ಆರು ಸಾವಿರ ರೂಪಾಯಿ ಆದಾಯ ಬಂದಿತ್ತು. ಅದರಿಂದ ನನಗಾದ ಖುಷಿ ಅಷ್ಟಿಷ್ಟಲ್ಲಾ.
ನಂತರ ಹಿಂತಿರುಗಿ ನೋಡಲೆ ಇಲ್ಲ. ಎರಡು ವರ್ಷ ಹೈಬ್ರಿಡ್ ಮಾಡ್ದೆ. ಶ್ರಮ ಪಟ್ಟು ಮಾಡ್ದೆ. ರೇಷ್ಮೆ ಮಾರುಕಟ್ಟೆಗೆ ನನ್ನ ಗೂಡು ಹೋದರೆ. ಅಲ್ಲಿ ಚೆಕ್ ಮಾಡೋರು. ರ್ಯಾಂಡಿಟಾ ಚೆಕ್ ಅಂತ. ಅಂದ್ರೆ ಒಂದು ಗೂಡಿನಲ್ಲಿ ಎಷ್ಟು ನೂಲು ಇದೆ ಅಂತ. ನನಗೆ ರೆಟಲ್ಲು ಫಸ್ಟ್ ಕೊಡೋರು. ಪ್ರತಿಯೊಂದು ಸಟರ್್ಫಿಕೇಟ್ಗಳನ್ನು ಇಡ್ತಾ ಬಂದೆ. ಎರಡು ವರ್ಷದ ನಂತರ ಕೇಂದ್ರ ರೇಷ್ಮೆ ಮಂಡಳಿಯವರು ನಮ್ಮ ತೋಟಕ್ಕೆ ಭೇಟಿ ನೀಡಿದರು. ಸೀಡ್ ಮಾಡು ಸಹಾಯ ಮಾಡ್ತೀವಿ ಅಂದ್ರು. ಆಗ ನನಗೆ ಸೀಡ್ ಅಂದ್ರೆ ಏನೂ ಅಂತನೂ ಗೊತ್ತಿರಲಿಲ್ಲ. ಆಗ ಸೀಡ್ ಕಕೂನ್ಗೆ ಕೆ.ಜಿ.ಗೆ 350 ರೂಪಾಯಿ ಕೊಡ್ತಾ ಇದ್ರು. ಈಗ 800 ರೂ.ಗೆ ಕೊಡ್ತಾ ಇದ್ದಾರೆ.
ನೈಸಗರ್ಿಕ ಕೃಷಿಯತ್ತ ಒಲವು : ಆರಂಭದಲ್ಲಿ ರೇಷ್ಮೆ ಕೃಷಿ ಶುರು ಮಾಡ್ದಾಗ ರಾಸಾಯನಿಕ ಪದ್ಧತಿಯಲ್ಲೇ ಬೆಳಿತಾ ಇದ್ವಿ.  ನೈಸಗರ್ಿಕ ಕೃಷಿ ಆರಂಭಿಸಿ ಆರು ವರ್ಷ ಆಯ್ತು.ನಾನು ಬೇರೆ ಬೇರೆ ರೈತರ ತೋಟಗಳಿಗೂ ಬೇಟಿ ಮಡ್ತಾ ಇದ್ದೆ. ಹಸು ಕಟ್ಟಿ ಕೊಟ್ಟಿಗೆ ತೋಳ್ದ ನೀರನ್ನು ರೇಷ್ಮೆ ತೋಟಕ್ಕೆ ಬಿಡ್ತಾ ಇದ್ದೆ. ಅಲ್ಲಿ ಸೊಪ್ಪು ಬಹಳ ದಟ್ಟವಾಗಿ ಹಸಿರಾಗಿ ಬೆಳಿತಾ ಇತ್ತು. ರಾಸಾಯನಿಕ ಗೊಬ್ಬರ ಹಾಕಿದ ಕಡೆ ಸೊಪ್ಪು ಕಲರ್ರೇ ಇರ್ತಾ ಇರಲಿಲ್ಲಾ. ಅದನ್ನು ಗಮನಿಸಿದಾಗ ನನಗೆ ನೈಸಗರ್ಿಕ ಕೃಷಿಯ ಮಹತ್ವ ಅರ್ಥ ಆಯ್ತು.
ಬಯೋಡೈಜಸ್ಟರ್ : ನಾಲ್ಕಾರು ಕಡೆ ಹೋಗಿ ನೋಡಿ ಬಂದ ಮೇಲೆ ಬೇರೆ ಬೇರೆ ಅನುಭವ ಆಯ್ತು. ನೈಸಗರ್ಿಕ ಕೃಷಿ ಮಾಡಲು ಜೀವಾಮೃತ ಎಷ್ಟು ಮಹತ್ವ ಅಂತ ಗೊತ್ತಾಯ್ತು. ಬಯೋಡೈಜಸ್ಟರ್ ಕಟ್ಟಿಕೊಂಡೆವು. ಇದೊಂದು ತುಂಬಾ ವೈಜ್ಞಾನಿಕವಾದ ಪದ್ಧತಿಯಲ್ಲಿ ಕಟ್ಟಿರುವ ಬಯೋಡೈಸ್ಟರ್ ತೊಟ್ಟಿ. 21 ಅಡಿ ಉದ್ದ, 14 ಅಡಿ ಅಗಲ, 15 ಅಡಿ ಆಳ ಇದು ಡೈಜಸ್ಟರ್ ತೊಟ್ಟಿ. ಇನ್ನೊಂದು ರಸಸಾರ (ಜ್ಯೂಸ್) ಸಂಗ್ರಹಣ ತೊಟ್ಟಿ. ಇದು 18 ಅಡಿ ಆಳ, ಐದು ಅಡಿ ಅಗಲ, 14 ಅಡಿ ಉದ್ದ ಇದೆ. ದೊಡ್ಡ ತೊಟ್ಟಿಗೆ ಪೈಪ್ ಲೈನ್ ಕೊಟ್ಟು ಆ ರಸಸಾರವನ್ನು ಸಣ್ಣ ತೊಟ್ಟಿಗೆ ಬರುವಂತೆ ಮಾಡಿದ್ದೇವೆ. ಇಲ್ಲಿ ಸಂಗ್ರಹವಾದ ರಸಸಾರವನ್ನು ಮೋಟರ್ ಇಟ್ಟು ಡ್ರಿಪ್ ಮೂಲಕ ಗಿಡಗಳಿಗೆ ಕೊಡುತ್ತೇವೆ.
ರೇರಿಂಗ್ ಹೌಸ್ : ಸಿದ್ದಾರ್ಥ ಲೇಔಟ್ನ ಕೆನರಾ ಬ್ಯಾಂಕ್ ಅವರು ಎರಡು ಲಕ್ಷ ರೂ ಸಾಲ ಕೊಟ್ಟಿದ್ದರು. ಆ ಹಣದ ಜೊತೆ ನನ್ನದು ಸ್ವಲ್ಪ ಹಣ ಹಾಕಿ ಮೊದಲ ರೇರಿಂಗ್ ಹೌಸ್ ಕಟ್ಟಿದೆ. 60 ಅಡಿ ಉದ್ದ 21 ಅಡಿ ಅಗಲ.  ಆಂಟಿ ಚೇಂಬರ್ 15 ಅಡಿ ಉದ್ದ 21 ಅಡಿ ಅಗಲ. ಮೊದಲ ರೇರಿಂಗ್ ಹೌಸ್ ಉದ್ಘಾಟನೆಗೆ ಸಿಎಸ್ಆರ್ಎನ್ಟಿ ಡೈರೆಕ್ಟರ್ ಶಂಕರ್ ದಂಡಿನ ಬಂದಿದ್ದರು.
ನಂತರ ರೇಷ್ಮೆಯಲ್ಲಿ ಒಳ್ಳೆಯ ಆದಾಯ ಬರಲು ಶುರುವಾಯ್ತು. ಹಣ ಸಂಪಾದನೆ ಮಾಡ್ದೆ. 2010 ರಲ್ಲಿ ಇನ್ನೊಂದು ರೇರಿಂಗ್ ಹೌಸ್ ಕಟ್ಟಿದೆ.ಅದು 70 ಅಡಿ ಉದ್ದ 24 ಅಡಿ ಅಗಲ 18 ಅಡಿ ಎತ್ತರ. ಅದಕ್ಕೆ 10 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಅದನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದ್ರು. ಈ ಥರ ನನ್ನ ಸಿರಿಕಲ್ಚರ್ ಜನರ್ಿ ಆರಂಭವಾಯ್ತು.
ಯುನಿಟ್ ಒಂದರಲ್ಲಿ ನನಗೆ ತಿಂಗಳಿಗೆ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ಬರಲು ಶುರುವಾಯ್ತು. ಐದು ಎಕರೆ ಜಮೀನಿನಲ್ಲಿ ಮೂರುವರೆ ಎಕರೆ ಮಾತ್ರ ರೇಷ್ಮೆ ಕಡ್ಡಿ ಇದೆ. ಇದೆ ಹಣದಲ್ಲಿ ಮೇಗಳಾಪುರದ ಹತ್ತಿರ ಮತ್ತೆ ಏಳು ಎಕರೆ ಜಮೀನು ಖರೀದಿಸಿದೆ. ಅದನ್ನು ಯುನಿಟ್ 2 ಅಂತ ಕರೆದು ಅಲ್ಲೂ ರೇಷ್ಮೆ ಮಾಡ್ತಾಇದ್ದೀನಿ. ಅದು 100 ಅಡಿ ಉದ್ದ, 24 ಅಡಿ ಅಗಲ ಇದೆ.ಅದನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕಟ್ಟಲಾಗಿದ್ದು 400 ಮೊಟ್ಟೆ ಮೇಯಿಸಬಹುದು. ಅಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಅಂತರದಲ್ಲಿ ಮೂರು ಭಾಗಗಳಾಗಿ ರೇಷ್ಮೆ ಕಡ್ಡಿ ಹಾಕಿದ್ದೇನೆ.       ರೇಷ್ಮೆಗೆ ಭವಿಷ್ಯ ಇದೆ : ರೈತರು ಒಂದು ವರ್ಷದ ಹಿಂದೆ ದರ ಕಡಿಮೆ ಆಯ್ತು ಅಂತ ರೇಷ್ಮೆ ಕಡ್ಡಿ ಕಿತ್ತಾಕಿ ಸುದ್ದಿಯಾದರು.ಅದು ಗೂಡಿನ ದರ ಇಳಿತು ಅಂತ ಅಲ್ಲಾ . ರೇಷ್ಮೆ ಗೂಡಿನ ದರ ವರ್ಷದಲ್ಲಿ ಒಂದೆರಡು ಬಾರಿ ಕಡಿಮೆ ಆಗುತ್ತೆ ನಿಜ. 10 ಬೆಳೆಯಲ್ಲಿ ಒಂದೆರಡು ಸಲ ಗೂಡಿನ ದರ ಕಡಿಮೆ ಆದರೆ ತೊಂದರೆ ಆಗಲ್ಲ.
ರೇಷ್ಮೆ ಕಡ್ಡಿ ಕಿತ್ತು ಹಾಕಿದರೆ ಮತ್ತೆ ಅದನ್ನು ಬೆಳೆಸಲು ಆರು ತಿಂಗಳು ಬೇಕು. ಎರಡು ವರ್ಷದಲ್ಲಿ ಒಂದೇ ಸಾರಿ ರೇಟ್ ಕಡಿಮೆ ಆಗಿದ್ದು. ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ ತಕ್ಷಣ ಹರಜಾಗುತ್ತೆ. ಐದು-ಹತ್ತು ರೂಪಾಯಿ ದರ ಕಡಿಮೆ ಆಗಬಹುದು. ಆದರೆ ತಕ್ಷಣ ಕೈಗೆ ಹಣ ಬರುತ್ತೆ. ಅದೆ ಕಬ್ಬು ಬೆಳೆದರೆ, 15 ತಿಂಗಳು ಕಾಯಬೇಕು. ಕಬ್ಬು ಬೆಳೆದ ರೈತ ಅದರ ತೂಕವನ್ನು ನೋಡಂಗಿಲ್ಲ. ಅವರು ಹಾಕಿದ್ದೆ ತೂಕ. ಮೂರು ತಿಂಗಳು ಬಿಟ್ಟು ಹಣ ಕೊಡ್ತಾರೆ. ತೋಟಗಾರಿಕೆ , ತರಕಾರಿ ಬೆಳೆಯಲ್ಲಿ ಮೂರು ತಿಂಗಳಿಗೆ, ಆರು ತಿಂಗಳಿಗೆ ಒಂದು ಸಾರಿ ಹಣ ಬರುತ್ತೆ. ಅದಕ್ಕಿಂತ ಇದು ಬೆಟರ್ ಅನ್ನುವುದು ನನ್ನ ಅನುಭವ. ಪ್ರತಿ ತಿಂಗಳು ಹಣ. ನಮ್ಮ ಕಣ್ಣಮುಂದೆ ತೂಕ. ತಕ್ಷಣ ಹಣ. ಅಲ್ಲೆ ಡ್ರಾ ಅಲ್ಲೆ ಬಹುಮಾನ.
ಮುಂದಿನ ವರ್ಷಗಳಲ್ಲಿ ರೇಷ್ಮೆಕೃಷಿಗೆ ಉತ್ತಮ ಭವಿಷ್ಯ ಇದೆ. ಅಂದು ರೇಷ್ಮೆ ವ್ಯವಸಾಯ ಕಷ್ಟ ಇತ್ತು.ಹಣಕ್ಕೂ ಕೊರತೆ ಇತ್ತು ಆದರೂ ರೇಷ್ಮೆ ಬೆಳಿತಾ ಇದ್ರು. ಸೀರೆ, ಬಟ್ಟೆಗಷ್ಟೇ ರೇಷ್ಮೆ ಉಪಯೋಗಿಸ್ತಾ ಇದ್ರು. ಇಂದು ಅದೇ ರೇಷ್ಮೆ ನಾವು ಓಡಿಸುವ ವಾಹನದ ಪ್ರತಿ ಚಕ್ರದಲ್ಲೂ ಇದೆ. ವಾಹನದ ಚಕ್ರಗಳಲ್ಲಿ ರಬ್ಬರ್ ಜೊತೆ ತಂತಿ ಬಳಸುವ ಬದಲು  ಸಿಲಿಕಾನ್ ದಾರ ಬಳಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಲಿಗೆ ಹಾಕಲು ಸಿಲಿಕಾನ್ ಥ್ರೆಡ್. ಮೊಬೈಲ್, ಟಿವಿ, ಕೇಬಲ್ ಎಲ್ಲಾದರಲ್ಲೂ ಸಿಲಿಕಾನ್ ಥ್ರೆಡ್ ಬಳಕೆಯಾಗುತ್ತಿದೆ. ಹಾಗಾಗಿ ರೇಷ್ಮೆ ಬೆಳೆಯಲು ಯಾರು ಹೆದರಬೇಕಾಗಿಲ್ಲಾ. ಮುಂದೆಯೂ ತಂತ್ರಜ್ಞಾನಗಳ ಬಳಕೆಯಲ್ಲಿ ರೇಷ್ಮೆಯ ಉಪಯೋಗ ಹೆಚ್ಚಾಗಲಿದೆ.
ಊಜಿ ನೊಣ ನಿಯಂತ್ರಣ : ರೇಷ್ಮೆ ಕೃಷಿಯಲ್ಲಿ ಊಜಿ ನೊಣ ನಿಯಂತ್ರಣ ಮುಖ್ಯ. ಇದಕ್ಕಾಗಿ ಇಲಾಖೆಯವರು ಊಜಿ ಟ್ರ್ಯಾಪ್, ಊಜಿ ಟ್ಯಾಬ್ಲೆಟ್ ಅಂತ ಮಾಡಿದ್ದಾರೆ. ಆದರೆ ನಾವು ಸ್ಥಳೀಯವಾಗಿ ನಮ್ಮದೆ ತಂತ್ರಜ್ಞಾನ ಬಳಸಿ ಊಜಿ ನಿಯಂತ್ರಣ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಒಂದು ಹಳೆ ಬಕೆಟ್ ಸಾಕು. ಒಂದು ಲೀಟರ್ ಮೊಸರು, 4 ಅಚ್ಚು ಬೆಲ್ಲ, ಸ್ವಲ್ಪ ನೀರು, ಕೊಳೆತ ಬಾಳೆ, ಕಿತ್ತಳೆ, ಸೇಬು, ಪಪ್ಪಾಯ ಹಾಕಿ  ಕಡ್ಡಿಯಲ್ಲಿ ತಿರುಗಿಸಿದರೆ ಮೂರು ನಾಲ್ಕು ದಿನದಲ್ಲಿ  ಡೀಕಾಂಪೋಸ್ ಆಗಿ ವಾಸನೆ ಬರುತ್ತೆ. ಅದು ಗಾಳಿಯಲ್ಲಿ ಬೆರೆತು ಊಜಿ ನೊಣ ಆ ವಾಸನೆಗೆ ತಿನ್ನಲು ಬಂದು ಈ ಬಕೆಟ್ನಲ್ಲಿ ಬಿದ್ದು ಸಾಯುತ್ತವೆ.
"ಪ್ರತಿ ಬೆಳೆ ಆದಗಲೂ ರೇರಿಂಗ್ ಹೌಸ್ಅನ್ನು ತುಂಬಾ ಸ್ವಚ್ಚತೆಯಾಗಿ ಇಡಬೇಕು. ತಕ್ಷಣ ಬೆಡ್ ಕ್ಲೀನ್ ಮಾಡಬೇಕು. ಯಾಕೆಂದರೆ ಹುಳು ಸತ್ತು ಹೋಗಿರುತ್ತೆ, ಊಜಿ ನೊಣ ಒಡೆದು ರೋಗ ಹರಡುತ್ತೆ ಪಿಕ್ಕೆಯಲ್ಲಿರುವ ಬ್ಯಾಕ್ಟೇರಿಯಾ ಸಂದಿಗೆಲ್ಲಾ ಸೇರಿಕೊಂಡು ಕೊಟ್ಯಾಂತರ ಸಂಖ್ಯೆಯಲ್ಲಿ ರೋಗಾಣುಗಳು ಹೆಚ್ಚಳವಾಗಿ ಬಿಡುತ್ತವೆ. ಅದಕ್ಕಾಗಿ ತಕ್ಷಣ ಕಸವನ್ನೆಲ್ಲಾ ತೆಗೆದು ಬಿಸಿಲಿಗೆ ಹಾಕಬೇಕು. ಇಲ್ಲ ಗುಂಡಿ ತೆಗೆದು ಮಣ್ಣಿನಲ್ಲಿ ಮುಚ್ಚಬೇಕು. ಬ್ಲೀಚಿಂಗ್ ಪೌಡರ್, ಸುಣ್ಣ ,ಸ್ಯಾನಿಟೆಕ್ ಕೆಮಿಕಲ್ನಲ್ಲಿ ಹುಳು ಸಾಕಾಣಿಕೆ ಮನೆಯನ್ನು ತೊಳೆಯಬೇಕು. ಇದನ್ನೆಲ್ಲ ವಿಜ್ಞಾನಿಗಳನ್ನು ಕೇಳಿಕೊಂಡೆ ಮಾಡಬೇಕು. ಮನೆಯ ಅಳತೆಗೆ ಎಷ್ಟು ಕೆಜಿ ಔಷದ ಹಾಕಬೇಕು ಅಂತ. ಒಂದು ರ್ಯಾಕ್ನಿಂದ ಇನ್ನೊಂದು ರ್ಯಾಕ್ಗೆ ಕನಿಷ್ಟ ಎರಡು ಅಡಿ ಇದ್ದರೆ ಉತ್ತಮ.  ಯಂತ್ರೋಪಕರಣ ಇಲ್ಲದೆ ರೇಷ್ಮೆ ಕೃಷಿ ಬೇಡ. ಆಳುಗಳ ಮೇಲೆ ಅವಲಂಭಿತರಾಗಬಾರದು. ಎಕರೆಗೆ 1500 ಕಡ್ಡಿ ಹಾಕಿದರೆ ಸಾಕು. 200 ಮೊಟ್ಟೆ ಸಾಕಾಣಿಕೆ ಮಾಡಬಹುದು.
ಪ್ರತಿ ತಿಂಗಳು ಯಾವ ಸಾಫ್ಟ್ವೇರ್ ಉದ್ಯೋಗಿಯೂ ಪಡೆಯದ ಸಂಬಳವನ್ನು ಸಂಪಾದನೆ ಮಾಡಬಹುದು. ಯುವಕರು ರೇಷ್ಮೆ ಕೃಷಿಗೆ ಬರುತ್ತಿದ್ದಾರೆ. ನಮ್ಮ ತೋಟ ನೋಡಲು ಪ್ರತಿ ತಿಂಗಳು ಮೂರ್ನಾಲ್ಕು ತಂಡಗಳಲ್ಲಿ ಬರುತ್ತಾರೆ. ರಾಜ್ಯ ಮತ್ತು ಕೇಂದ್ರ ರೇಷ್ಮೆ ಇಲಾಖೆಯವರು ಕರೆದುಕೊಂಡು ಬಂದು ನಮ್ಮ ರೇಷ್ಮೆಕೃಷಿ ವಿಧಾನವನ್ನು ತೋರಿಸುತ್ತಾರೆ. ರೇಷ್ಮೆಕೃಷಿ ಸಮಾಜದಲ್ಲಿ ನನ್ನನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ಮಾಡಿದೆ" ಎಂದು ನಾಗಭೂಷಣ್ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಹೆಚ್ಚಿನ ಮಾಹಿತಿಗೆ 7353593007 ಅಥವಾ 9945614007 ಸಂಪಕರ್ಿಸಬಹುದು.