ಕಾಳು ಮೆಣಸು ಬೆಳೆದ ಆದಿವಾಸಿಯ ಕೃಷಿ ಯಶೋಗಾಥೆ
# ಆರ್ಥಿಕ ಸದೃಢತೆಯತ್ತ ಗಿರಿಜನರ ಚಿತ್ತ # ರೈತರಾಗಿಯೂ ಯಶಸ್ಸು ಪಡೆದ ಕಾಡುಜನರು
ಮುಗಿಲಿನ ಕಡೆಗೆ ಮುಖಮಾಡಿ ನಿಂತ ಮರಗಳ ಸಾಲು.ತೇಗ,ಹೊನ್ನೆ,ಬೀಟೆ,ಸಿಲ್ವರ್,ಹಲಸು ಹೆಚ್ಚಾಗಿ ಗ್ಲಿರಿಸೀಡಿಯಾ (ಗೊಬ್ಬರದ ಗಿಡ) ಮರಗಳು.ಪ್ರತಿ ಮರಮರಕ್ಕೂ ಹಬ್ಬಿದ ಕಾಳು ಮೆಣಸಿನ ಬಳ್ಳಿಗಳು. ಕಾಳು ಮೆಣಸಿನ ಅರ್ಧ ತೋಟಕ್ಕೆ ಮೂವತ್ತು ವರ್ಷ ತುಂಬಿದ್ದರೆ. ಇನ್ನರ್ಧ ತೋಟಕ್ಕೆ ಈಗ ಏಳು ವರ್ಷ. ಸಂಪೂರ್ಣ ನೈಸಗರ್ಿಕವಾಗಿ ಬೆಳೆಸಿರುವ ಈ ಕಾಳು ಮೆಣಸಿನ ತೋಟಕ್ಕೆ ಸರಕಾರಿ ಗೊಬ್ಬರ ಬಳಸಿಲ್ಲ.ದನದ ಗೊಬ್ಬರ ಮಾತ್ರ ಬಳಕೆ ಮಾಡಲಾಗಿದೆ. ಸಣ್ಣಪುಟ್ಟ ರೋಗ ಕಾಣಿಸಿಕೊಂಡರೆ ಸುಣ್ಣದ ನೀರಿಗೆ ಸಗಣಿ ಕಲಿಸಿ ಬುಡಕ್ಕೆ ಹಾಕುತ್ತಾರೆ.ಒಂದೂವರೆ ಎಕರೆಯಲ್ಲಿರುವ ಈ ಮೆಣಸಿನ ತೋಟ ಕಟ್ಟಿದ್ದು ಅನುಭವಿ ರೈತನಲ್ಲ ಆದಿವಾಸಿ ಜನಾಂಗದ ಜೇನು ಕುರುಬ ಶಿವಣ್ಣ ಎನ್ನುವುದು ವಿಶೇಷ.
ಹೆಗ್ಗಡದೇವ ಕೋಟೆ ತಾಲೂಕಿಗೆ ಸೇರಿದ ಎನ್.ಬೇಗೂರು ವ್ಯಾಪ್ತಿಗೆ ಸೇರಿರುವ ಹೊಸಹಳ್ಳಿ ಹಾಡಿಯ ಕಾಡಂಚಿನಲ್ಲಿರುವ ಈ ಕಾಳು ಮೆಣಸಿನ ತೋಟ ನಾಗರಿಕ ಜಗತ್ತಿನ ರೈತಾಪಿ ಜನಕ್ಕೆ ಹಲವಾರು ಪಾಠಗಳನ್ನು ಕಲಿಸುತ್ತದೆ. ನಾಡಿನ ರೈತರು ಕೃಷಿಯನ್ನು ಮರೆತು ನಗರ ಸೇರುತ್ತಿರುವ ಈ ಹೊತ್ತಿನಲ್ಲಿ ಕಾಡಿನ ಜನ, ಆದಿವಾಸಿ ಜನಾಂಗಕ್ಕೆ ಸೇರಿದ ಗಿರಿಜನ ಕೃಷಿ ಮಾಡುತ್ತಿದ್ದಾರೆ. ನಿಸರ್ಗದೊಂದಿಗೆ ಬದುಕಿದ ಜೀವಗಳು ನಿಸರ್ಗವನ್ನು ಬಿಟ್ಟು ಇರಲಾರರು ಎನ್ನುವುದನ್ನು ಇದು ತೋರಿಸುತ್ತದೆ.
ಎಪ್ಪತ್ತರ ದಶಕದಲ್ಲಿ ಹೆಗ್ಗಡದೇವನ ಕೋಟೆ ತಾಲೂಕು ಒಂದರಲ್ಲೇ ಮೂರು ಅಣೆಕಟ್ಟುಗಳನ್ನು ಕಟ್ಟಲಾಯಿತು. ಅವು ನುಗು,ತಾರಕ,ಕಬಿನಿ ಅಣೆಕಟ್ಟುಗಳು. ಇದರಲ್ಲಿ ಕಬಿನಿ ದೊಡ್ಡದು.ಇದರೊಂದಿಗೆ ಆದಿವಾಸಿ ಗಿರಿಜನರ ಬದುಕು ಮುಳುಗಡೆಯಾಯಿತು.
ಕಬಿನಿ ಹಿನ್ನೀರು ಚಾಚಿಕೊಂಡಿರುವ 61 ಚ.ಕಿ.ಮೀ ವ್ಯಾಪ್ತೀಯ 14 ಗಿರಿಜನರ ಹಾಡಿಯ ಸಾವಿರ ಕುಟುಂಬಗಳು ಅತಂತ್ರವಾದವು. ಒಟ್ಟು 22 ಹಳ್ಳಿಗಳು ಮುಳುಗಡೆಯಾದವು. ಹಳ್ಳಿಗಳ ಕಂದಾಯ ಭೂಮಿಯ ವಿಸ್ತೀರ್ಣ 9 ಸಾವಿರ ಎಕರೆಗಳು.ಪಯರ್ಾಯವಾಗಿ ಇವರಿಗೆ ಹದಿನಾಲ್ಕುಸಾವಿರ ಎಕರೆ ಪ್ರದೇಶವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಅರಣ್ಯಭೂಮಿಯೂ ಸೇರಿದೆ. ಆದರೆ ಆದಿವಾಸಿಗಳಿಗೆ ಸೇರಬೇಕಿದ್ದ ಭೂಮಿ ನ್ಯಾಯಯುತವಾಗಿ ಸಿಗಲಿಲ್ಲ.ಕೆಲವರಿಗೆ ಮಾತ್ರ ಭೂಮಿ ಮಂಜೂರಾತಿ ಸಿಕ್ಕಿದೆ.ಇವುಗಳೆ ಇಂದು ಹೊಸಹಳ್ಳಿ ಹಾಡಿ,ಅಣ್ಣೂರು ಹಾಡಿ,ಮಂಚೇಗೌಡನ ಹಾಡಿ ಹೀಗೆ ವಿವಿಧ ಹಾಡಿಗಳಲ್ಲಿ ಹಂಚಿ ಹರಿದುಹೋಗಿದೆ.ಅಂತಹ ಒಂದು ಹಾಡಿ ಹೊಸಹಳ್ಳಿ ಹಾಡಿ.
ಮೂಲ ಹುಡುಕುತ್ತಾ...: ಆದಿವಾಸಿಗಳ ಬೇಸಾಯ ಜ್ಞಾನದ ಮೂಲ ಹುಡುಕುತ್ತಾ ಹೋದರೆ ಹಲವು ಕುತೂಹಲಕರ ಸಂಗತಿಗಳು ತೆರೆದುಕೊಳ್ಳುತ್ತವೆ ಎನ್ನುವ ಕ್ಷೀರಸಾಗರ "ಪ್ರಪಂಚದಾದ್ಯಂತ ಆದಿವಾಸಿ ಜನಾಂಗದವರು ಇದ್ದಾರೆ. ಮಂಗೋಲಾಯ್ಡ್,ಟಿಬೆಟ್,ಜಪಾನ್,ಚೀನಾ,ಬರ್ಮ ಆದಿವಾಸಿ ಮತ್ತು ಬುಡಕಟ್ಟು ಜನಾಂಗಗಳಿರುವ ದೇಶಗಳು. ಇಂತಹ ಸಣ್ಣಪುಟ್ಟ ದೇಶಗಳ ವಿರುದ್ಧ ಸತತವಾಗಿ ಮೂವತ್ತು ವರ್ಷಗಳ ಕಾಲ ಹೋರಾಟಮಾಡಿದ ಅಮೇರಿಕಾ ಅವುಗಳನ್ನು ವಸಹತುಗಳನ್ನಾಗಿ ಮಾಡಿಕೊಂಡು ವಶಕ್ಕೆ ಪಡೆಯಲು ನೋಡಿತು. ಕೊನೆಗೂ ವಶಕ್ಕೆ ಪಡೆಯಲು ಆಗಲಿಲ್ಲಾ. ಬಿಟ್ಟು ಹೋದರು. ಇಂಗ್ಲೇಡ್ ಕೂಡ ಹೀಗೆ ಮಾಡಿತು.
ಆದಿವಾಸಿಗಳಿರುವ ಈ ಪುಟ್ಟ ದೇಶಗಳು ಮಿಲ್ಟ್ರಿ ಸೈನ್ಯದ ವಿರುದ್ಧ ಹೋರಾಡಿ ಸ್ವಾಂತಂತ್ರ ರಾಷ್ಟ್ರಗಳಾದ ಮೇಲೆ ಆಥರ್ಿಕವಾಗಿ ಸಬಲರಾಗಲು ಹಲವು ದಾರಿಗಳನ್ನು ಹುಡುಕಿಕೊಂಡವು. ಅದರಲ್ಲಿ ಕಾಳು ಮೆಣಸಿನ ಕೃಷಿಯೂ ಒಂದು.ಸ್ವಾತಂತ್ರ ಸಿಕ್ಕ ಮೇಲೆ ಈ ದೇಶಗಳು ದಿವಾಳಿ ಆಗುತ್ತವೆ ಅಂತ ಎಲ್ಲರೂ ಭಾವಿಸಿದ್ದರು.
ಆದರೆ ಅಲ್ಲಿನ ನಾಯಕರು ಜನಪರವಾದ ಕಮ್ಯೂನ್ (ವಿಕೇಂದ್ರಿಕೃತ) ರೀತಿಯ ಹೋರಾಟ ರೂಪಿಸಿದ್ದರು. ವಾಣಿಜ್ಯ ಬೆಳೆ ಬೆಳೆಯುವ ಮೂಲಕ ದೇಶವನ್ನು ಆಥರ್ಿಕವಾಗಿ ಸದೃಢಮಾಡುತ್ತಾ ಹೋದರು. ಮುಖ್ಯವಾಗಿ ಅವರು ಆಯ್ಕೆ ಮಾಡಿಕೊಂಡದ್ದು ಕಾಳು ಮೆಣಸು . ಸಿಮೆಂಟ್ ಕಂಬ, ಮರಗಿಡ ನೆಟ್ಟು 100, 500 ಎಕರೆ ಪ್ರದೇಶದಲ್ಲಿ ವ್ಯಾಪಕವಾಗಿ ಕಾಳು ಮೆಣಸು ಬೆಳೆಸಿದರು.
ಬಡತನ ಹೋಗಲಾಡಿಸಲು ಇಂತಹ ಸಣ್ಣ ಸಮುದಾಯಗಳು ಮಾಡಿದ ಪಯರ್ಾಯಗಳನ್ನು ನಾವೂ ಕಂಡುಕೊಳ್ಳಬೇಕು. ನಮ್ಮ ಇಂಡಿಯಾದಂತಹ ದೇಶಗಳಲ್ಲಿ ಸಂಘಟಿತರಾಗಿ ರೈತರು ಯಾಕೆ ಇಂತಹ ಪ್ರಯತ್ನ ಮಾಡ್ತಾ ಇಲ್ಲ ಅಂತ ಯೋಚಿಸುತ್ತಾ ಇದ್ದೆ. ಒಂದು ದಿನ ಕೆಲಸ ನಿಮಿತ್ತ ಹೊಸಹಳ್ಳಿ ಹಾಡಿಗೆ ಹೋಗಬೇಕಾಯಿತು. ಅಲ್ಲಿ ಹೋಗಿ ನೋಡಿದರೆ ಶಿವಣ್ಣ ಈ ರೀತಿಯ ಕೆಲಸ ಮಾಡುತ್ತಿರುವುದನ್ನು ನೋಡಿ ಅಚ್ಚರಿಯಾಯಿತು' ಎನ್ನುತ್ತಾರೆ.
ಆದಿವಾಸಿಗಳಿರುವ ಬೇರೆ ಬೇರೆ ದೇಶದ ಜನರಿಗೂ, ಕೋಟೆಯ ಹಾಡಿಯಲ್ಲಿರುವ ಇವರಿಗೂ ನೇರಸಂಪರ್ಕ ಇಲ್ಲದೆ ಇರಬಹುದು ನಿಜ. ಆದರೆ ಈ ಆದಿವಾಸಿಗಳಿಗೆ, ಆ ಆದಿವಾಸಿಗಳಿಗೂ ಏನೋ ಸಂಬಂಧ ಇದೆ. ಇಬ್ಬರ ಆಲೋಚನೆಗಳು ಒಂದೆ ರೀತಿ ಇವೆ ಅಂತ ಅನಿಸಿತು.
ನಾಡಿನಲ್ಲಿರುವ ನಮ್ಮ ರೈತರೇ ಹೀಗೆ ಆಥರ್ಿಕವಾಗಿ ಸದೃಢವಾಗುವ ಕೃಷಿ ಮಾಡಿಕೊಂಡಿಲ್ಲ. ಆದರೆ ಆದಿವಾಸಿಗಳು ಮಾಡಿದ್ದಾರೆ. ನಾವು ಕೂಡ ಆದಿವಾಸಿಗಳಿಂದ ಕಲಿಯುವುದು ಬಹಳ ಇದೆ. ಕಳೆದು ಹೋಗಿರುವ ಆಥರ್ಿಕತೆಯನ್ನು ಪುನಶ್ಚೇತನಗೊಳಿಸಲು ಈ ರೀತಿಯ ಪ್ರಯತ್ನಗಳು ಆಗಬೇಕು. ಸರಕಾರಗಳು ಈ ದಿಕ್ಕಿನಲ್ಲಿ ಯೋಚಿಸಬೇಕು ಎಂದು ಕ್ಷೀರಸಾಗರ ಹೇಳುತ್ತಾರೆ.
ಹಾಡಿಯತ್ತ ಪಯಣ : ನಾಡಿನ ಜನರೇ ಕೃಷಿಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಆದಿವಾಸಿ ಜನಾಂಗಕ್ಕೆ ಸೇರಿದವರೊಬ್ಬರು ಕಳೆದ ಮೂವತ್ತು ವರ್ಷಗಳಿಂದ ಕಾಡಂಚಿನ ಹಾಡಿಯಲ್ಲಿ ಕಾಳಿ ಮೆಣಸು ಬೆಳೆಯುತ್ತಿದ್ದಾರೆ ಎಂದು ಹೋರಾಟಗಾರ,ಲೇಖಕ ಕ್ಷೀರಸಾಗರ ಹೇಳಿದಾಗ ಮೊದಲು ನಂಬಲಾಗಲಿಲ್ಲ.ಸಾಮಾಜಿಕ ಜಾಲತಾಣದಲ್ಲಿ (ಫೇಸ್ಬುಕ್)ನಲ್ಲಿ ಕ್ಷೀರಸಾಗರ ಕೆಲವು ಪೋಟೊಗಳನ್ನು ಹಾಕಿದ್ದು ನೋಡಿದ ನಮಗೆ ಅವರನ್ನು ಕಾಣುವ ಕುತೂಹಲ ಹೆಚ್ಚಾಯಿತು.
ನಿಸರ್ಗ ಸಿದ್ದರಾಜು ಜೊತೆಗೆ ಆದಿವಾಸಿ ಹೋರಾಟಗಾರ ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಮತ್ತು ಕ್ಷೀರಸಾಗರ ನಮ್ಮನ್ನು ಕೋಟೆಯ ಹ್ಯಾಂಡ್ಪೋಸ್ಟ್ ಬಳಿ ಸೇರಿಕೊಂಡರು. ಆದಿವಾಸಿ ಕೃಷಿಯನ್ನು ಹುಡುಕಿಕೊಂಡು ಹೊಸಹಳ್ಳಿ ಹಾಡಿಗೆ ನಮ್ಮ ಕಾರು ಕಚ್ಛಾ ರಸ್ತೆಯಲ್ಲಿ ಏರುತ್ತಾ ಇಳಿಯುತ್ತಾ ಹೋಗಿ ನಿಂತಾಗ ಮಧ್ಯಾಹ್ನ ಹನ್ನೊಂದು ಗಂಟೆ.
ಸಾಮಾನ್ಯವಾಗಿ ಯಾವುದೇ ಹಳ್ಳಿಗೆ ಹೋದರು ಅಲ್ಲಿ ವಯಸ್ಸಿಗೆ ಬಂದ ಯುವಕರು,ಮಕ್ಕಳು ಕಾಣುವುದೇ ಇಲ್ಲ. ಆದರೆ ಇಲ್ಲಿ ಹಾಡಿಯಲ್ಲಿ ಮಕ್ಕಳ ಸೈನ್ಯವೇ ನೆರೆದಿತ್ತು.ಇದನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಹಳ್ಳಿಗಳಲ್ಲಿ ವೃದ್ಧರ ಕಾಲಯಾಪನೆ.ಹಾಡಿಗಳಲ್ಲಿ ಮಕ್ಕಳ ಕಲರವ !.
ಆದಿವಾಸಿ ಶಿವಣ್ಣ ಮತ್ತು ಐದಾರು ಹುಡುಗರು ನಮ್ಮನ್ನು ನೇರ ಕಾಳು ಮೆಣಸಿನ ತೋಟಕ್ಕೆ ಕರೆದುಕೊಂಡು ಹೋದರು.ಇದುವರೆಗೂ ಅಡಿಕೆ,ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕಾಳು ಮೆಣಸು ನೋಡಿದ್ದ ನಮಗೆ ಇಲ್ಲಿ ವಿವಿಧ ಮರಗಳ ಮೇಲೆ ಬರಿ ಕಾಳು ಮೆಣಸಿನ ಬಳ್ಳಿಗಳೆ ಹಬ್ಬಿನಿಂತಿರುವುದುನ್ನು ನೋಡಿ ಆಶ್ಚರ್ಯವಾಯಿತು.ಅದರಲ್ಲೂ ಗ್ಲಿರಿಸೀಡಿಯಾ ಮರಗಳ ಮೇಲೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದ ಶಿವಣ್ಣನ ಜಾಣ್ಮೆನೋಡಿ ಬೆರಗಾಯಿತು.
ಮೂವತ್ತು ವರ್ಷಗಳಿಂದ ಹೊಸಹಳ್ಳಿ ಹಾಡಿಯ ಮೂರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಶಿವಣ್ಣ ಒಂದೂವರೆ ಎಕರೆಯಲ್ಲಿ ಕಾಳು ಮೆಣಸು,ಒಂದು ಎಕರೆಯಲ್ಲಿ ಏಲಕ್ಕಿ ಬಾಳೆ ಉಳಿದ ಪ್ರದೇಶದಲ್ಲಿ ರಾಗಿ ಭಿತ್ತನೆ ಮಾಡಿದ್ದರು. ಒಂದು ಬೋರ್ವೆಲ್ ವ್ಯವಸ್ಥೆ ಇದ್ದು ನೀರು ಚೆನ್ನಾಗಿದೆ.ತೋಟಕ್ಕೆಲ್ಲಾ ಸ್ಪಿಂಕ್ಲರ್ ಮೂಲಕ ನೀರು ಕೊಡುತ್ತಾರೆ.ಕಾಳು ಮೆಣಸನ್ನು ಮಾತ್ರ ಸಂಪೂರ್ಣ ನೈಸಗರ್ಿಕ ಪದ್ಧತಿಯಲ್ಲಿ ಬೆಳೆಯುವ ಶಿವಣ್ಣ ಬಾಳೆಗೆ ಸ್ವಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರವನ್ನೂ ಬಳಸುತ್ತಾರೆ.
ತೋಟದಲ್ಲಿ ಕರಿ ಮುಂಡ ಮತ್ತು ಜೀರಿಗೆ ಮುಂಡ ಎಂಬ ಎರಡು ತಳಿಯ ಮೆಣಸು ಬಳ್ಳಿಗಳು ಇದ್ದು ಕಳೆದ ಮೂವತ್ತು ವರ್ಷಗಳಿಂದ ರೋಗಬಾಧೆಗೆ ತುತ್ತಾಗಿಲ್ಲ ಎನ್ನುವುದು ವಿಶೇಷ. ಸಣ್ಣಪುಟ್ಟ ರೋಗಬಾಧೆಗೆ ತುತ್ತಾದರೆ ಸುಣ್ಣದ ತಿಳಿ ನೀರಿಗೆ ದನದ ಸಗಣಿ ಮಿಶ್ರಣ ಮಾಡಿಕೊಂಡು ಕಲಸಿ ಬಳ್ಳಿಯ ಬುಡಕ್ಕೆ ಹಾಕುವುದಾಗಿ ಹೇಳುವ ಶಿವಣ್ಣ ಇದುವರೆಗೂ ಎಲೆಗಳಿಗೆ ಯಾವ ಔಷಧಿಯನ್ನು ಸಿಂಪರಣೆ ಮಾಡಿಲ್ಲ ಎನ್ನುತ್ತಾರೆ.
ಇದನ್ನು ಮತ್ತೊಬ್ಬ ಸಾವಯವ ರೈತ ಶಿವನಂಜಯ್ಯ ಬಾಳೆಕಾಯಿಯವರಿಗೆ ಅಲ್ಲಿಂದಲೇ ದೂರವಾಣಿ ಮಾಡಿ ತಿಳಿಸಿದಾಗ,ಕರಿ ಮುಂಡ ಮತ್ತು ಜೀರಿಗೆ ಮುಂಡ ತಳಿಯ ರೋಗರಹಿತ ಕಾಳಯ ಮೆಣಸಿನ ಬಳ್ಳಿಗಳು ಸಿಗುವುದೆ ಅಪರೂಪ ಬರುವ ಮಾಚರ್್ ತಿಂಗಳಲ್ಲಿ ಆ ಬಳ್ಳಿಗಳನ್ನು ಪ್ಯಾಕೆಟ್ಗೆ ಹಾಕಿ ನರ್ಸರಿಮಾಡಲು ಹೇಳಿ. ಆ ತಳಿಗಳನ್ನು ನಾವೆಲ್ಲ ಉಳಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು. ನರ್ಸರಿಯಲ್ಲಿ ಈ ಬಳ್ಳಿಗಳನ್ನು ಬೆಳೆಸಿ ಆಸಕ್ತರಿಗೆ ಕೊಡುವ ಮೂಲಕ ತಳಿಯನ್ನು ಉಳಿಸಿ ಕಾಪಾಡಿಕೊಳ್ಳಲು ಶಿವಣ್ಣ ಅವರನ್ನು ಒಪ್ಪಿಸಿದೆವು.
ಪ್ರತಿವರ್ಷ ಕನಿಷ್ಠ ಮೂರರಿಂದ ನಾಲ್ಕು ಕ್ವಿಂಟಾಲ್ ಕಾಳು ಮೆಣಸಿನ ಇಳುವರಿ ಪಡೆಯುವ ಶಿವಣ್ಣ ಫಸಲು ಚೆನ್ನಾಗಿ ಬಂದಾಗ ಏಳು ಕ್ವಿಂಟಾಲ್ ಮಾರಾಟ ಮಾಡಿದ ಉದಾಹರಣೆಗಳು ಇವೆ.ಕೇರಳದ ವ್ಯಾಪಾರಿಗಳು ಇಲ್ಲಿಗೆ ಬಂದು ಖರೀದಿ ಮಾಡುತ್ತಾರೆ. ಕೆಲವೊಮ್ಮೆ ಮೈಸೂರು ಅಥವಾ ಮಾನಂದವಾಡಿಗೆ ನಾವೇ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಶಿವಣ್ಣ ಹೇಳುತ್ತಾರೆ.
"ವರ್ಷಕ್ಕೆ ಬೇಸಾಯದ ಖಚರ್ು ಅಂತ ಲಕ್ಷ ರೂಪಾಯಿ ತೋಟಕ್ಕೆ ವೆಚ್ಚ ಮಾಡುತ್ತೇನೆ. ಮನೆಮಂದಿ ಸೇರಿ ದುಡಿಯುತ್ತೇವೆ.ಅಗತ್ಯ ಬಿದ್ದರೆ ಕೂಲಿ ಆಳುಗಳನ್ನು ಕರೆದುಕೊಳ್ಳುತ್ತೇವೆ. ಈ ವರ್ಷ ಪ್ರತಿ ಕೆ.ಜಿ.ಮೆಣಸಿಗೆ 250 ರೂಪಾಯಿ ಇದ್ದು ಇದೆ ದರಕ್ಕೆ ಮಾರಾಟವಾದರು ಕಾಳು ಮೆಣಸಿನಿಂದ ಎರಡು ಲಕ್ಷ ಆದಾಯ ಗ್ಯಾರಂಟಿ.ರಾಗಿ,ಬಾಳೆಯಿಂದಲ್ಲೂ ಒಂದಷ್ಟು ದುಡ್ಡು ಬಂದೆ ಬರುತ್ತದೆ" ಎನ್ನುತ್ತಾರೆ.
ಕಾಡಂಚಿನಲ್ಲಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಇಲ್ಲವೆ ಎಂದು ಕೇಳಿದರೆ ಆನೆಗಳು ಬರುತ್ತವೆ.ರಾತ್ರಿ ಹುಲಿಯೊಂದು ಇಲ್ಲೆ ಬಂದು ನೀರು ಕುಡಿದುಕೊಂಡು ಹೋಗಿದೆ ನೋಡಿ ಎಂದು ಹುಲಿಯ ಹೆಜ್ಜೆಗುರುತನ್ನು ತೋರಿಸಿದರು. ಕಾಡುಪ್ರಾಣಿಗಳು ನಮಗೇನು ಮಾಡುವುದಿಲ್ಲ.ನಾವು ಅವುಗಳಿಗೆ ತೊಂದರೆ ಕೊಡಬಾರದು ಎಂದು ಹೇಳುತ್ತಾ ತಮ್ಮ ಗತಕಾಲದ ಕಾಡಿನ ನೆನಪುಗಳು,ಪ್ರಾಣಿಗಳೊಂದಿಗಿನ ಒಡನಾಟ ಎಲ್ಲವನ್ನು ಹೇಳುತ್ತಾ ಖಿನ್ನರಾಗುತ್ತಾರೆ.ನಾಡಿಗೆ ಹೊಂದಿಕೊಳ್ಳಲಾಗದ, ಕಾಡಿನ ನಂಟನ್ನು ಬಿಟ್ಟಿರಲಾರದ ನೋವು ಅವರ ಮಾತಿನಲ್ಲಿ ಇಣುಕುತ್ತದೆ.
ಮೆಣಸು ಬೆಳೆಯುವ ಆಲೋಚನೆ ನಿಮಗೆ ಹೇಗೆ ಬಂತು ಎಂದರೆ ಮೂವತ್ತು ವರ್ಷಗಳ ಹಿಂದೆ ಮಾನಂದವಾಡಿಯಲ್ಲಿ ಯಾರೋ ಮೆಣಸು ಬೆಳೆದಿದ್ದನ್ನು ನೋಡಿ ಇಪ್ಪತ್ತು ಪ್ಯಾಕೆಟ್ಗಳನ್ನು ತಂದು ಪ್ರಯೋಗಮಾಡಿದೆ. ಅದೇ ಎಲ್ಲವನ್ನು ಕಲಿಸುತ್ತಾ ಹೋಯಿತು. ಅದನ್ನು ಬಿಟ್ಟರೆ ಬೇರೆಲ್ಲಿಯೂ ಹೋಗಿ ಕಲಿತಿಲ್ಲ ಎಂದು ನಗುತ್ತಾರೆ.
ಒಂದು ಅಡಿ ಆಳ.ಒಂದು ಅಡಿ ಅಗಲವಾದ ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ಹಾಕಿ ಗ್ಲಿರಿಸೀಡಿಯಾ ಅಥವಾ ಬೇರೆ ಯಾವುದಾದರೂ ಮರದ ಸಸಿಗಳ ಜೊತೆಗೆ ಮೆಣಸಿನ ಬಳ್ಳಿಗಳನ್ನು ಹಾಕಿಬಿಡುತ್ತಾರೆ.ಗಿಡ ಬೆಳೆದಂತೆಲ್ಲಾ ಮೆಣಸು ಬಳ್ಳಿಯೂ ಹಬ್ಬಿಕೊಂಡು ಹೋಗುತ್ತದೆ. ಸಸಿ ನೆಡುವಾಗ ಸಸಿಯನ್ನು ಬಿಸಿಲಿನಿಂದ ಮರೆಮಾಡಲು ತೇಗದ ಎಲೆಗಳನ್ನು ಇಪ್ಪತ್ತು ದಿನಗಳವರೆಗೆ ಮುಚ್ಚಲಾಗುತ್ತದೆ.ಸಸಿ ಚೆನ್ನಾಗಿ ಬೇರುಕೊಟ್ಟು ಬೆಳೆದುಕೊಳ್ಳುತ್ತದೆ ಎನ್ನುತ್ತಾರೆ ಶಿವಣ್ಣ. ಹೆಚ್ಚಿನ ಮಾಹಿತಿಗೆ ಶಿವಣ್ಣ ದೂ.8861992438 ಅಥವಾ 9880487396 ಸಂಪಕರ್ಿಸಿಬಹುದು.