ಸುಸ್ಥಿರ ಬದುಕಿಗೆಬೇಕು ಸಮಗ್ರ ಕೃಷಿ ಪದ್ಧತಿಯ ಅನುಷ್ಠಾನ
.ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ) ಯಲ್ಲಿನವೆಂಬರ್ 16 ರಿಂದ 19 ರವರೆಗೆ ನಾಲ್ಕು ದಿನಗಳಕಾಲ ನಡೆದ ಕೃಷಿ ಮೇಳ ನಡೆಯಿತು. ಕೃಷಿ ಮೇಳದಲ್ಲಿ ನಮ್ಮ ಗಮನ ಸೆಳೆದಿದ್ದು ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯ ತಾಕುಗಳು. ಸಣ್ಣ ಹಿಡುವಳಿದಾರರು ಒಂದೆರಡು ಎಕರೆ ಜಮೀನು ಇರುವ ಕೃಷಿಕರು ಹೇಗೆ ಸಮಗ್ರ ಕೃಷಿಯನ್ನು ಅನುಷ್ಠಾನ ಮಾಡಿಕೊಳ್ಳಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದು ನೋಡಿ ಕಲಿಯುವ ರೈತನಿಗೆ ಸಾಕಷ್ಟು ಮಾಹಿತಿಗಳನ್ನು ನಿಂತಲೆ ಒದಗಿಸುವಂತಿತ್ತು. ಜಮೀನಿನ ಒಂದು ಮೂಲೆಯಲ್ಲಿ ಕೃಷಿ ಹೊಂಡ, ಅದರ ಮೇಲೆಯೇ ಕೋಳಿ ಸಾಕಾಣಿಕೆ ಕೇಜ್ ನಿಮರ್ಾಣ, ಪ್ರತಿ ಹತ್ತು ಇಪ್ಪತ್ತು ಗುಂಟೆಯಲ್ಲಿ ದನಕರುಗಳಿಗೆ ಮೇವು ಒಂದು ಕಡೆ, ಆಹಾರ ಧಾನ್ಯಗಳು,ಕಾಳುಗಳು,ಬತ್ತ,ತರಕಾರಿ,ಅರಣ್ಯಧಾರಿತ ಕೃಷಿ,ಪಶುಸಂಗೋಪನೆ, ಮಳೆಯಾಶ್ರಿತ ಬೆಳೆಗಳು, ಹನಿ ನೀರಾವರಿಯ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳ ಬುದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲಾಗಿತ್ತು. ಜಿಕೆವಿಕೆ ಕೇಂದ್ರಗಳಿಗೆ ರೈತರು ಭೇಟಿ ನೀಡುವ ಮೂಲಕ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ಪಡೆಯುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು.
=========================================
# ಜಿಕೆವಿಕೆ ಕೃಷಿಮೇಳದಲ್ಲಿ ಪ್ರಾತ್ಯಕ್ಷಿಕೆ # ತಾಂತ್ರಿಕತೆ,ಸಂಶೋಧನೆಗಳ ಮಾಹಿತಿ
ರೈತನ ಆದಾಯ ದ್ವಿಗುಣಗೊಳ್ಳಬೇಕು. ರೈತ ಸ್ವಾವಲಂಭಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು.ಅದಕ್ಕಾಗಿ ಸಮಗ್ರ ಕೃಷಿ ಪದ್ಧತಿಯನ್ನು ತನ್ನ ಜಮೀನಿನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ಹಾಗಂತ ಎಲ್ಲರೂ ಹೇಳುತ್ತಾ ಬಂದಿದ್ದಾರೆ.ಆದರೆ ಅದು ಎಷ್ಟರ ಮಟ್ಟಿಗೆ ಗ್ರಾಮಗಳಲ್ಲಿ ಅನುಷ್ಠಾನವಾಗಿದೆ ಎಂದು ನೋಡಿದರೆ ನಿರಾಸೆಯಾಗುವುದು ನಿಶ್ಚಿತ. ಇಂತಹ ನಿರಾಶವಾದದ ನಡುವೆಯೂ ಅಲ್ಲಲ್ಲಿ ಬೆರಳೆಣಿಕೆಯಷ್ಟು ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅನುಷ್ಠಾನ ಮಾಡಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿರುವ ಉದಾಹರಣೆಗಳು ಇವೆ. ಅಂತಹ ಒಂದೆರಡು ಮಾದರಿಗಳನ್ನು ನಿಮಗೆ ಹೇಳಬೇಕು.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಎನ್.ಮಂಜುನಾಥ್ ಮತ್ತು ಮೈಸೂರು ತಾಲೂಕು ಲಕ್ಷ್ಮೀಪುರದ ಕೆಂಚೇಗೌಡ ಅವರು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಸಂಸ್ಥೆಯ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ತಮ್ಮ ಆದಾಯವನ್ನು ದ್ವಿಗುಣ ಗೊಳಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ತನ್ನ ಆಡಳಿತ ವ್ಯಾಪ್ತಿಗೆ ಬರುವ 13 ಜಿಲ್ಲೆಗಳಲ್ಲಿ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ (2011 ರಿಂದ 2014) 25 ಸಾವಿರ ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆ ಗಳನ್ನು ಮಾಡಿ, ಕೃಷಿ ಉತ್ಪಾದನೆ ಮತ್ತು ವರಮಾನವನ್ನು ಹೆಚ್ಚಿಸಲು ನೆರವಾಗಿದೆ.
ಯೋಜನೆಯ ಮೂಲಕ ಅವಶ್ಯಕ ಪರಿಕರಗಳಿಗಾಗಿ ಆಥರ್ಿಕ ನೆರವು ಮತ್ತು ಸೂಕ್ತ ತಾಂತ್ರಿಕ ಮಾರ್ಗದರ್ಶನ ನೀಡಿ ರೈತರನ್ನು ಸ್ವಾವಲಂಭಿಯನ್ನಾಗಿ ಮಾಡಲು ಕೃಷಿ ವಿಜ್ಞಾನ ಕೇಂದ್ರಗಳು ಮುಂದಾಗಿರುವುದು ಸರಿ. ಆದರೆ ಇಂತಹ ಕೃಷಿ ವಿಜ್ಞಾನ ಕೇಂದ್ರಗಳ ನೆರವು, ಸಲಹೆ ಮತ್ತು ಮಾರ್ಗದರ್ಶನವನ್ನು ಎಷ್ಟು ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡಲು ಹೋದರೆ ನಿರಾಸೆಯಾಗುತ್ತದೆ. ಜಿಕೆವಿಕೆ ಕೇಂದ್ರಗಳು ರೈತರನ್ನು ತಲುಪಲು ವಿಫಲವಾಗಿವೆಯೊ ಅಥವಾ ರೈತರಿಗೆ ಜಿಕೆವಿಕೆಯಿಂದ ದೊರೆಯುವ ಸೌಲಭ್ಯ, ಮಾಹಿತಿಗಳ ಬಗ್ಗೆ ಅರಿವಿಲ್ಲವೊ ಎನ್ನುವುದು ಗೊತ್ತಾಗುತ್ತಿಲ್ಲ. ರೈತರು ಮತ್ತು ಜಿಕೆವಿಕೆ ನಡುವೆ ಉತ್ತಮ ಸಂಪರ್ಕವನ್ನು ಬೆಸೆದರೆ ಕೃಷಿಕ್ಷೇತ್ರಕ್ಕೆ, ರೈತರಿಗೆ ಲಾಭವಾಗುವುದಂತೂ ನಿಶ್ಚಿತ.ಇಂತಹ ಕೆಲಸಗಳನ್ನು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವ ವಿದ್ಯಾವಂತ ಯುವಕರು ಮಾಡಿದರೆ ಕೃಷಿ ವಲಯದ ಪುನಶ್ಚೇತನಕ್ಕೆ ನೆರವಾದಂತಾಗುತ್ತದೆ.
ಮೈಸೂರು ಜಿಲ್ಲೆಯವರು ಸುತ್ತೂರಿನಲ್ಲಿರುವ ಜಿಕೆವಿಕೆ ಕೇಂದ್ರಕ್ಕೂ ,ಚಾಮರಾಜನಗರ ಜಿಲ್ಲೆಯವರು ಹರದನಹಳ್ಳಿಯಲ್ಲಿರುವ ಜಿಕೆವಿಕೆ ಕೇಂದ್ರಕ್ಕೂ ಹೆಚ್ಚು ಹೆಚ್ಚು ಭೇಟಿ ನೀಡುವ ಮೂಲಕ ಪರಸ್ಪರರೂ ಹೆಚ್ಚು ಕ್ರೀಯಾಶೀಲರಾಗಿ ಇರುವಂತೆ ಮಾಡಿದರೆ ಸಮಗ್ರ ಕೃಷಿ ಪ್ರಾತ್ಯಕ್ಷಿಕೆಯ ತಾಕುಗಳು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ) ಯಲ್ಲಿನವೆಂಬರ್ 16 ರಿಂದ 19 ರವರೆಗೆ ನಾಲ್ಕು ದಿನಗಳಕಾಲ ನಡೆದ ಕೃಷಿ ಮೇಳಕ್ಕೆ ಹೋಗಿ ಬಂದ ಮೇಲೆ ನನ್ನಲ್ಲಿ ಮೂಡಿದ ಸುಸ್ಥಿರ ಕೃಷಿ ಚಿಂತನೆಗಳನ್ನು ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕಳೆದ ನಾಲ್ಕಾರು ವರ್ಷಗಳಿಂದ ನಿರೀಕ್ಷಿತ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತ ಈ ಬಾರಿಯ ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ. ಭರ್ಜರಿ ಮಳೆಗೆ ಹರ್ಷಗೊಂಡಿರುವ ರೈತನ ಮೊಗದಲ್ಲಿ ಮತ್ತಷ್ಟು ಮಂದಹಾಸ ಮೂಡಿಸುನ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ ರೈತರಲ್ಲಿ ಭರವಸೆ ಮೂಡಿಸುವಲ್ಲಿ ಸಫಲವಾಗಿದೆ.
ನೂತನ ತಂತ್ರಜ್ಞಾನ, ಸುಧಾರಿತ ತಳಿಗಳ ಕೃಷಿ ಪ್ರಾತ್ಯಕ್ಷಿಕೆ, ನೀರಿನ ಬಗ್ಗೆ ಅರಿವು, ಜಲಾನಯನ ನಿರ್ವಹಣೆ, ಹೊಸ ತಳಿಗಳ ಬಿಡುಗಡೆ ಜೊತೆಗೆ ಉತ್ತಮ ಸಾಧನೆಮಾಡಿದ ರೈತರಿಗೆ ರಾಜ್ಯ ಮಟ್ಟದ ಪ್ರಶಸ್ತಿಯೂ ಸೇರಿದಂತೆ 144 ಸಾಧಕ ರೈತರನ್ನು ಸನ್ಮಾನ. ಲ್ಲಾ ಪ್ರಶಸ್ತಿ ಹಾಗೂ 69 ತಾಲೂಕುಗಳ ಯುವ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ನೀಡುವ ಮೂಲಕ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ.
ನೂತನ ತಾಂತ್ರಿಕತೆಗಳನ್ನು ಹುಡುಕಿ ಬಂದವರು, ಹನಿ ನೀರಾವರಿ ಬಗ್ಗೆ ಮಾಹಿತಿ ಪಡೆಯಲು ಬಂದವರು, ಸಣ್ಣ ಸಣ್ಣ ಕೃಷಿ ಯಂತ್ರೋಪಕರಣಗಳ ಬಗ್ಗೆ ತಿಳಿದುಕೊಳ್ಳಲು ಬಂದವರು ಜೊತೆಗೆ ಕೃಷಿ ಸಾಹಿತ್ಯ ಪುಸ್ತಕಗಳನ್ನು ಹರಸಿ ಬಂದವರು ಹೀಗೆ ಎಲ್ಲ ಅಭಿರುಚಿಯ ಜನರು ಮೇಳದ ಲಾಭ ಪಡೆದು ಹೋಗಿದ್ದಾರೆ. ಹತ್ತು ಲಕ್ಷಕ್ಕೂ ಹೆಚ್ಚು ರೈತರು ಸಮ್ಮೇಳನದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಕೃಷಿ ಮೇಳದಲ್ಲಿ ನಮ್ಮ ಗಮನ ಸೆಳೆದಿದ್ದು, ರೈತರಿಗೆ ಅತ್ಯುಪಯುಕ್ತವಾದ ವಿಭಾಗ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯ ತಾಕುಗಳು. ಸಣ್ಣ ಹಿಡುವಳಿದಾರರು ಒಂದೆರಡು ಎಕರೆ ಜಮೀನು ಇರುವ ಕೃಷಿಕರು ಹೇಗೆ ಸಮಗ್ರ ಕೃಷಿಯನ್ನು ಅನುಷ್ಠಾನ ಮಾಡಿಕೊಳ್ಳಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದು ನೋಡಿ ಕಲಿಯುವ ರೈತನಿಗೆ ಸಾಕಷ್ಟು ಮಾಹಿತಿಗಳನ್ನು ನಿಂತಲೆ ಒದಗಿಸುವಂತಿತ್ತು.
ಜಮೀನಿನ ಒಂದು ಮೂಲೆಯಲ್ಲಿ ಕೃಷಿ ಹೊಂಡ, ಅದರ ಮೇಲೆಯೇ ಕೋಳಿ ಸಾಕಾಣಿಕೆ ಕೇಜ್ ನಿಮರ್ಾಣ, ಪ್ರತಿ ಹತ್ತು ಇಪ್ಪತ್ತು ಗುಂಟೆಯಲ್ಲಿ ದನಕರುಗಳಿಗೆ ಮೇವು ಒಂದು ಕಡೆ, ಆಹಾರ ಧಾನ್ಯಗಳು,ಕಾಳುಗಳು,ಬತ್ತ,ತರಕಾರಿ,ಅರಣ್ಯಧಾರಿತ ಕೃಷಿ,ಪಶುಸಂಗೋಪನೆ, ಮಳೆಯಾಶ್ರಿತ ಬೆಳೆಗಳು, ಹನಿ ನೀರಾವರಿಯ ಬಗ್ಗೆ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳ ಬುದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲಾಗಿತ್ತು.
ಇಂತಹ ಸಮಗ್ರ ಕೃಷಿ ಪದ್ಧತಿಯ ಲಾಭ ಪಡೆದ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಮಂಜುನಾಥ್ ಅವರ ಬಗ್ಗೆ ಅಲ್ಲೇ ಕುಳಿತು ನಾವು ಸಾಕ್ಷ್ಯಚಿತ್ರವೊಂದನ್ನು ನೋಡಿದೆವು. ಈ ಸಮಗ್ರ ಕೃಷಿಯ ಯೋಜನೆಯ ಪ್ರಾತ್ಯಕ್ಷಿಕೆದಾರರಾಗುವ ಮೊದಲು ತಮಗಿರುವ 3 ಎಕರೆ 12 ಗುಂಟೆ ಜಮೀನಿನಲ್ಲಿ ಅವರು ವಾಷರ್ಿಕ 3.57 ಲಕ್ಷ ರೂಪಾಯಿ ನಿವ್ವಳ ವರಮಾನ ಪಡೆಯುತ್ತಿದ್ದರು.ಪ್ರಾತ್ಯಕ್ಷಿಕೆ ಅಳವಡಿಸಿಕೊಂಡ ಮೂರು ವರ್ಷದ ಅವಧಿಯಲ್ಲಿ ಅವರ ವಾಷರ್ಿಕ ವರಮಾನ 5.22 ಲಕ್ಷ ರೂ. ಹೆಚ್ಚಳವಾಗಿದೆ. ಅಂದರೆ 46.2 ರಷ್ಟು ಆದಾಯ ಹೆಚ್ಚಳವಾಗಿದೆ.
ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ನೀವು ಕೇಳಬಹುದು. ಮೂರು ವರ್ಷಗಳಿಗೂ ಮೊದಲು ಮಂಜುನಾಥ್ ಸಾಂಪ್ರದಾಯಿಕ ರೀತಿಯಲ್ಲಿ ರಾಗಿ,ಬಾಳೆ,ಅರಿಶಿನ ಮತ್ತು ವೀಳ್ಯದೆಲೆ ಬೆಳೆಯುತ್ತಿದ್ದರು. ಎರಡು ಮಿಶ್ರತಳಿಯ ಹಸುಗಳನ್ನು ಸಾಕಿಕೊಂಡಿದ್ದರು. ಸಮಗ್ರ ಕೃಷಿ ಪ್ರಾತ್ಯಕ್ಷಿಕೆ ಆಯ್ಕೆಯಾದ ಮೇಲೆ ಬೆಳೆ ಪದ್ಧತಿಯಲ್ಲಿ ಸುಧಾರಣೆ ಮಾಡಲಾಯಿತು. ಅಧಿಕ ವರಮಾನ ತರುವ ಟೊಮಟೊ,ತಿಂಗಳ ಹುರುಳಿ,ಬದನೆ,ಕೊತ್ತುಂಬರಿ,ಮೆಣಸಿನಕಾಯಿ,ಚೆಂಡು ಹೂವಿನ ಗಿಡಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಏಕ ಬೆಳೆ ಬೆಳೆಯುವ ಬದಲು ಮಿಶ್ರ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡಲಾಯಿತು. ಒಟ್ಟಾರೆ ಆಹಾರ ಬೆಳೆ,ತೋಟಗಾರಿಕಾ ಬೆಳೆ,ಮೇವಿನ ಬೆಳೆ,ಜಾನುವಾರು ಘಟಕ,ಎರೆಹುಳು ಗೊಬ್ಬರ ಘಟಕಗಳನ್ನು ಪ್ರತ್ಯೇಕ ವಿಭಾಗಗಳಾಗಿ ಸಮಗ್ರವಾಗಿ ಮಾಡಿಸಲಾಯಿತು.
ರಸಗೊಬ್ಬರಕ್ಕಾಗಿ ವಾಷರ್ಿಕ 30 ಸಾವಿರ ವೆಚ್ಚಮಾಡುತ್ತಿದ್ದ ಮಂಜುನಾಥ್ ಎರೆಹುಳು ಗೊಬ್ಬರ ಘಟಕ ನಿಮರ್ಾಣದಿಂದ ವಾಷರ್ಿಕ 18 ಟನ್ ಎರೆಗೊಬ್ಬರ ತೆಗೆದು ಹಣ ಉಳಿಸಿದರು. 2013 ರಲ್ಲಿ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪಡೆದ ಮಂಜುನಾಥ್ ತಜ್ಞರ ಮಾರ್ಗದರ್ಶನದಲ್ಲಿ ಸಾಧನೆಮಾಡಿ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮಾದರಿಯಾಗಿದ್ದಾರೆ.
ಅದೇ ರೀತಿ ಲಕ್ಷ್ಮೀಪುರದ ಕೆಂಚೇಗೌಡರು ನಾಲ್ಕು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬತ್ತ,ತೆಂಗು,ಅಜೋಲಾ ಮತ್ತು ಬಹು ವಾಷರ್ಿಕ ಮೇವಿನ ಬೆಳೆ,ಕುರಿ,ಕೋಳಿ ಸಾಕಾಣಿಕೆ ಜೊತೆಗೆ ರೇಷ್ಮೆ ಕೃಷಿಯನ್ನು ಕೈಗೊಳ್ಳುವ ಮೂಲಕ ವಾಷರ್ಿಕ 2.81 ಲಕ್ಷ ರೂ. ಆದಾಯಗಳಿಸುತ್ತಿದ್ದವರು ಪ್ರಾತ್ಯಕ್ಷಿಕೆದಾರರಾದ ನಂತರ ವಾಷರ್ಿಕ 3.54 ಲಕ್ಷ ರೂ. ಆದಾಯಗಳಿಸಿದ್ದಾರೆ.
ನಿಜಕ್ಕೂ ಇಂತಹ ಪ್ರತ್ಯಾಕ್ಷಿಕೆಗಳು ಮಾತ್ರ ರೈತರಿಗೆ ಸರಿಯಾದ ತಿಳಿವಳಿಕೆ ಮತ್ತು ಅರಿವು ಮೂಡಿಸಬಲ್ಲವು. ಜಿಕೆವಿಕೆ ಕೇಂದ್ರಗಳು ರೈತರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಮೂಲಕ ಕೃಷಿ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕ್ರೀಯಾಶೀಲವಾಗಿ ಕೆಲಸಮಾಡಬೇಕು.
ಈ ಬಾರಿ ಕೃಷಿ ಮೇಳದಲ್ಲಿ ಎಂಟು ಹೊಸತಳಿಯ ಬೀಜಗಳನ್ನು ಬಿಡುಗಡೆಮಾಡಲಾಗಿದೆ. ಬರಗಾಲದ ಸಂದಭ್ದಲ್ಲು ಕಡಿಮೆ ನೀರು ಬಳಸಿಕೊಂಡು ಅಧಿಕ ಇಳುವರಿಕೊಡುವ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ಕಬ್ಬು,ಅಲಸಂದೆ,ಜಂಬೂ ನೇರಳೆ,ಮುಸುಕಿನ ಜೋಳ,ತೊಗರಿ ಸೇರಿದಂತೆ ಹೊಸತಳಿಗಳು ಬಿಡುಗಡೆಯಾಗಿವೆ. ಬರುವ ಮುಂಗಾರಿನ ಹಂಗಾಮಿನಲ್ಲಿ ಈ ಭಾಗದ ರೈತರಿಗೆ ಜಿಉಕೆವಿಕೆ ಕೇಂದ್ರಗಳು ತಲುಪುವಂತೆಮಾಡದಿರೆ ಇಂತಹ ಮೇಳಗಳಿಗೆ ಅರ್ಥಬರುತ್ತದೆ.
ದಕ್ಷಿಣ ಭಾರತದಲ್ಲೆ ಅಗ್ರ ಕೃಷಿ ವಿವಿ ಎಂಬ ಹೆಗ್ಗಳಿಕೆ ಪಡೆದಿರುವ ಇದು ದೇಶದ ಪ್ರತಿಷ್ಠಿತ ಕೃಷಿ ವಿವಿಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಅಲ್ಲೇ ಸನಿಹದಲ್ಲಿ ಬಾಗಲ ಕೋಟ ತೋಟಗಾರಿಕ ಕೃಷಿ ವಿಶ್ವ ವಿದ್ಯಾನಿಲಯವೂ ಇದೆ. ಅಲ್ಲಿ ಹುಣಸೆ,ಮಾವು,ಸೀಬೆ,ಸೀತಾಫಲ,ಗೇರು,ಹಲಸು,ಜಂಬೂ ನೇರಳೆ ಸೇರಿದಂತೆ ಹತ್ತಾರು ಮಾದರಿ ತಾಕುಗಳನ್ನು ನಿಮರ್ಾಣ ಮಾಡಲಾಗಿದೆ. ಇದರ ಹಿಂದೆ ಡಾ.ಗುರುಪ್ರಸಾದ್ ಅವರ ಶ್ರಮ ಕೆಲಸಮಾಡಿದೆ. ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ(ಐಐಹೆಚ್ಆರ್ ) ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಮ್ಮ ರೈತರು ಭೇಟಿ ನೀಡುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು.
ಪ್ರತಿ ವರ್ಷ ನಡೆಯುವ ಕೃಷಿ ಮೇಳಗಳಿಗೆ ಜಾತ್ರೆಗಳ ರೀತಿಯಲ್ಲಿ ಹೋಗಿಬಂದರೆ ಪ್ರಯೋಜನವಿಲ್ಲ. ಬೆಂಗಳೂರಿನಲ್ಲಿರುವ ಈ ಕೃಷಿ ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿಟ್ಟು ಕೊಂಡು ನೂತನ ತಾಂತ್ರಿಕತೆ ಮತ್ತು ಸಮಗ್ರ ಕೃಷಿಯ ಜೊತೆಗೆ ಹೊಸದಾಗಿ ಸಂಶೋಧನೆಯಾದ ಮಾವು,ಹಲಸು,ಸೀತಾಫಲ,ಸೀಬೆ ಈ ಎಲ್ಲಾ ಗಿಡಗಳನ್ನು ರಿಯಾಯಿತಿ ದರದಲ್ಲಿ ತಂದು ಜಮೀನುಗಳಲ್ಲಿ ಹಾಕಿ ಬೆಳೆಸಿಕೊಂಡಾಗ ಮಾತ್ರ ರೈತ ಸುಸ್ಥಿರತೆಯ ಕಡೆಗೆ ಹೆಜ್ಜೆ ಹಾಕಬಲ್ಲ. ಕೃಷಿ ಮಾಡುವ ಮುನ್ನಾ ಪೂರ್ವತಯಾರಿ ಮಾಡಿಕೊಂಡು ವಾಷರ್ಿಕ ಬೆಳೆಯೋಜನೆಯೊಂದನ್ನು ಸಿದ್ಧ ಪಡಿಸಿಕೊಂಡು ಕೃಷಿ,ತೋಟಗಾರಿಕೆ ಮತ್ತು ಜಿಕೆವಿಕೆಯ ವಿಸ್ತರಣಾ ಮುಂದಾಳುಗಳು ಮತ್ತು ತಜ್ಞರೊಡನೆ ಚಚರ್ಿಸಿ ಕೃಷಿ ಮಾಡಿದರೆ ಕೃಷಿ ಸುಸ್ಥಿರವೂ,ಲಾಭದಾಯಕವೂ ಆಗುತ್ತದೆ ಎನ್ನುವುದು ಈ ಬಾರಿಯ ಕೃಷಿ ಮೇಳ ನೋಡಿ ಬಂದಾಗ ಅನಿಸಿತು. ಮತ್ಯಾಕೆ ತಡ ನಿಮ್ಮ ಸಮೀಪದ ಸುತ್ತೂರು, ಹರದನಹಳ್ಳಿಯಲ್ಲಿರುವ ಜಿಕೆವಿಕೆ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಸದುಪಯೋಗಪಡಿಸಿಕೊಳ್ಳಿ.ಗ್ರಾಮಗಳ ಅಭಿವೃದ್ಧಿಗೆ ಒಂದಾಗಿ ಮುಂದಾಗಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ