ದೇಶಭಕ್ತ "ಶ್ರೀರಾಮ" ಕನ್ನೇನಹಳ್ಳಿ ಮಣ್ಣಿನ ಮಗ
ಮೈಸೂರು : "ಮಣ್ಣು ಮತ್ತು ನೀರು ಸುಸ್ಥಿರ ಕೃಷಿಯ ಜೀವಾಳ. ಫಲವತ್ತಾದ ಮಣ್ಣು ಮತ್ತು ನೀರು ಇರುವ ಕಡೆ ಕೃಷಿಯ ಎಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ತೋಟ ಕಟ್ಟುವ ಮೊದಲು ಕೃಷಿಗೆ ಬೇಕಾದ ಸೂಕ್ತ ಜಮೀನು ಆಯ್ಕೆ ಮಾಡಿಕೊಲ್ಳುವುದರಲ್ಲಿ ಕೃಷಿಕನ ಸೋಲು, ಗೆಲುವು ನಿಧರ್ಾರವಾಗುತ್ತದೆ" ಎನ್ನುತ್ತಾರೆ ಕೃಷಿಕ ಇ.ಆರ್.ಶ್ರೀರಾಮನ್.
ಎತ್ತ ನೋಡಿದರೂ ಹಸಿರು.ಬಾಗಿ ಬಳುಕುವ ಅಡಿಕೆ, ಬಾಳೆ,ತೆಂಗು,ಮೆಣಸು. ಮಲೆನಾಡು ನೆನಪಿಸುವ ಗಿಡಮರಗಳು. ತೋಟ ನೋಡಲು ಹೋದವರಿಗೆ ಎಲ್ಲಿಂದ ಒಳಗೆ ಹೋಗಬೇಕು, ಎಲ್ಲಿಂದ ಆಚೆ ಬರಬೇಕು ಎನ್ನುವುದು ಗೊತ್ತೆ ಆಗುವುದಿಲ್ಲ. ಅಂತಹ ದಟ್ಟ ಕಾಡಿನಂತಹ ತೋಟ ಅದು. ಅಪ್ಪಟ ಮಲೆನಾಡು. ಇಂತಹ ಒಂದು ದಟ್ಟ ಹಸಿರು (ಹೈಡೆನ್ಸಿಟಿ) ಸಾಂದ್ರ ಪದ್ಧತಿಯಲ್ಲಿ ತೋಟ ಕಟ್ಟಿದ ಸಾಧಕ ಈಶ್ವರಹಳ್ಳಿ ರಂಗನಾಥ ಅಯ್ಯಂಗಾರ್ ಶ್ರೀರಾಮನ್.
ಚಿಕ್ಕಮಗಳೂರು ಜಿಲ್ಲೆಯ ಲಕ್ಕೆ ಹೋಬಳಿಯ ಈಶ್ವರಹಳ್ಳಿ ಶ್ಯಾನುಭೋಗ ರಂಗನಾಥ್ ಅಯ್ಯಂಗಾರ್ ಅವರ ಪುತ್ರ ಇ.ಆರ್.ಶ್ರೀರಾಮನ್ ಓದಿದ್ದು ಎಸ್ಎಸ್ಎಲ್ಸಿ .ಕೃಷಿಯಿಂದ ನಿಮ್ಮ ವಾಷರ್ಿಕ ವರಮಾನ ಎಷ್ಟು? ಎಂದು ಕೇಳಿದರೆ ಸಾಫ್ಟ್ವೇರ್ ಎಂಜಿಯರ್ಗಿಂತ ಹೆಚ್ಚು ಎಂದು ಕೇಳಿದವರೇ ಆಶ್ಚರ್ಯಚಕಿತರಾಗುವಂತೆ ಮಾಡುತ್ತಾರೆ.
ತೋಟದಿಂದಲ್ಲೆ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿರುವ ಶ್ರೀರಾಮನ್, ಪತ್ನಿ ಕಮಲ ಅವರೊಂದಿಗೆ ತೋಟದ ಮನೆಯಲ್ಲೆ ವಾಸವಾಗಿದ್ದಾರೆ. ಅವರ ಮಗಳು ಅಮೇರಿಕಾದಲ್ಲಿದ್ದರೆ,ಮಗ ಮೆಡಿಕಲ್ ಟ್ರನ್ಸಿಸ್ಟರ್ ಕೆಲಸಮಾಡುತ್ತಾ ಮೈಸೂರಿನಲ್ಲಿದ್ದಾನೆ. ತೋಟ ಕಟ್ಟುವ ಬಗೆ ಸ್ವಾನುಭವದಿಂದ ಅವರು ಗಳಿಸಿದ ಅಸಾಧಾರಣ ಜ್ಞಾನ ಕಡಿಮೆ ಏನಲ್ಲಾ.
ನೈಸಗರ್ಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್, ಶ್ರೀರಾಮನ್ ಅವರ ತೋಟಕ್ಕೆ ಭೇಟಿನೀಡಿ "ರಾಮಣ್ಣ ನಿನ್ನ ತೋಟದಲ್ಲಿ ಎಲ್ಲವನ್ನೂ ನೀನೆ ಮಾಡಿದ್ದೀಯಲ್ಲಪ್ಪಾ,ನಿನಗೆ ಹೇಳುವುದು ಮತ್ತೇನು ಇಲ್ಲಾ" ಅಂತ ಹೇಳಿದ್ದರಂತೆ. ಬನ್ನೂರು ಕೃಷ್ಣಪ್ಪ ರಾಮಣ್ಣನವರ ತೋಟ ನೋಡಿ ಸಂತೋಷಪಟ್ಟಿದ್ದರಂತೆ.ತೋಟಗಾರಿಕೆ ಇಲಾಖೆಯ ಜಂಟಿ ನಿದರ್ೇಶಕರಾಗಿದ್ದ ವಿಷಕಂಠ, ಆಕಾಶವಾಣಿಯ ಕೇಶವಮೂತರ್ಿ ಸೇರಿದಂತೆ ನಾನಾ ಭಾಗಗಳ ಜನ ತೋಟಕ್ಕೆ ಭೇಟಿ ನೀಡಿ ಸಂತಸ ಪಟ್ಟು ಸಲಹೆ ನೀಡಿದ್ದಾರೆ. ಮಾರ್ಗದರ್ಶನ ಪಡೆದು ಹೋಗಿದ್ದಾರೆ ಎಂದು ರಾಮಣ್ಣ ನೆನಪಿಸಿಕೊಳ್ಳುತ್ತಾರೆ.
ಮೈಸೂರು ಎಚ್.ಡಿ.ಕೋಟೆ ರಸ್ತೆಯಲ್ಲಿ ಕರಿಗಳ ಗೇಟ್ ಬಳಿ (16ನೇ ಮೈಲಿ ಕಲ್ಲು) ಬಲಕ್ಕೆ ತಿರುಗಿ 2.5 ಕಿ.ಮೀ ಕ್ರಮಿಸಿದರೆ ಕೆ.ಕನ್ನೇನಹಳ್ಳಿ ಬರುತ್ತದೆ. ಅಲ್ಲೇ ದೊಡ್ಡಕೆರೆಯ ಮೊಗ್ಗಲಲ್ಲೆ ಸದಾ ಹಸಿರಾಗಿರುವಂತೆ ಯೋಜಿಸಿ,ಯೋಚಿಸಿ ಕಟ್ಟಿದ ಶ್ರೀರಾಮನ್ ಅವರ ಹಸಿರು ತೋಟ ಇದೆ.
ಎಂಟು ಎಕರೆ ಪ್ರದೇಶದಲ್ಲಿ 6500 ಅಡಿಕೆ, ಮೆಣಸು, 500 ತೆಂಗು, 70 ಮಾವು, 1000 ಕೊಕೊ, ಸಾವಿರಾರು ಬಾಳೆ,ಸೀಬೆ,ಸಪೋಟ,ನಿಂಬೆ,ಮೂಸಂಬಿ, ಹಲಸು, ಬಿದಿರು ಹೀಗೆ ನಾನಾ ತಳಿಯ ಮರಗಿಡಗಳು ಒಂದರ ಪಕ್ಕದಲ್ಲಿ ಮತ್ತೊಂದು ಸಹಬಾಳ್ವೆ ನಡೆಸುವಂತೆ ಹೆಚ್ಚು ಸಾಂದ್ರತೆ (ಹೈಡೆನ್ಸಿಟಿ) ಬೇಸಾಯ ಪದ್ಧತಿಯಲ್ಲಿ ಬೆಳೆದು ನಿಂತಿವೆ.
ನಾವು ತೋಟಕ್ಕೆ ಭೇಟಿ ನೀಡಿದಾಗ ಮನೆಯ ಸುತ್ತಮತ್ತ ಗುಡ್ಡೆಹಾಕಿದ ತೆಂಗಿನ ಕೊಬ್ಬರಿ ಕಾಯಿ ಮಾರಾಟ ಮಾಡಿದರೆ ಹತ್ತು ಲಕ್ಷಕ್ಕೂ ಹೆಚ್ಚು ಹಣ ಬಂದರೆ, ತೋಟದಲ್ಲಿ ಬಿದ್ದಿರುವ ತೆಂಗಿನ ಕೊಬ್ಬರಿ ಕಾಯಿಗಳನ್ನು ಎತ್ತಿ ಮಾರಿದರೂ ಲಕ್ಷ ರೂಪಾಯಿಗೂ ಹೆಚ್ಚು ಹಣ ಸಿಗುವ ಸ್ಥಿತಿ ಇತ್ತು. ಲಕ್ಷಾಂತರ ರೂಪಾಯಿ ಹಣ ಮನೆಯ ಎದುರೆ ಬಯಲಿನಲ್ಲಿ ಬಿದ್ದಿತ್ತು. ಲಕ್ಷ ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿಡುವ ನೌಕರರ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನವನ್ನು ಬಯಲಿನಲ್ಲೆ ಸುರಿದ ಮಣ್ಣಿನ ಮಗನನ್ನು ನೋಡಿ ಆಶ್ಚರ್ಯವಾಯಿತು. ತೆಂಗಿನ ಮರಗಳಿದ್ದು ಕಾಯಿ ಖರೀದಿಸಿ ತರುವ, ಜಮೀನಿದ್ದರೂ ಪಟ್ಟಣದಿಂದ ತರಕಾರಿ,ಸೊಪ್ಪು ಕೊಂಡು ತರುವ ರೈತರಿಗಿಂತ ರಾಮಣ್ಣ ನಮಗೆ ಭಿನ್ನವಾಗಿ ಕಂಡರು.
ಪ್ರತಿಯೊಂದು ಅಡಿಕೆ ಮರ ಸಮೃದ್ಧ ಅಡಿಕೆ ಗೊಂಚಲು ಬಿಟ್ಟಿದೆ.ಒಂದು ಮರ ಕನಿಷ್ಠ 10 ಕೆಜಿ ವರೆಗೆ ಕಾಯಿ ಸಿಗುವಂತಿದೆ. ತೆಂಗಿನ ಕಾಯಿಗಳಂತೂ ಬಿದ್ದಲ್ಲೆ ಗಿಡವಾಗಿವೆ. ರೈತರು ಈ ಗಿಡಗಳನ್ನೇ ಖರೀದಿಸುತ್ತಾರೆ. ಐದು ವರ್ಷ ಪುಟ್ಟಬಾಳೆಯನ್ನು ಪ್ರತಿ ಗೊನೆ 15 ಕೆಜಿ ಬರುವಂತೆ ಸಾವಯವ ಪದ್ಧತಿಯಲ್ಲಿ ಬೆಳೆದರು. ನಂತರ ಜಾಣ್ಮೆ ಉಪಯೋಗಿಸಿ ಒಂದು ಜಾಗದಲ್ಲಿ ಐದರಿಂದ ಹತ್ತು ಬುಡ ಬರುವಂತೆ ಬಾಳೆ ಬೆಳೆಸಿದರು.ಇದರಿಂದ ಯಾವುದೆ ಗೊಬ್ಬರ ಕೊಡದೆ ಪ್ರತಿ ಗೊನೆ ಆರು ಕೆಜಿ ಬಂದರೂ ಹತ್ತು ಗಿಡದಿಂದ 60 ಕೆಜಿ ಇಳುವರಿ ಬಂತು ಎನ್ನುತ್ತಾರೆ.
ಅಪ್ಪಟ ಕೃಷಿಕ ಶ್ರೀರಾಮನ್, ಮೇಲ್ನೋಟಕ್ಕೆ ಹುಂಬ ಮತ್ತು ಒರಟರಂತೆ ಕಂಡರು ತಾಯಿ ಕರುಳಿನ ಮನುಷ್ಯ. ಜೀವನ ನಿರ್ವಹಣೆಗೆ ಷೇರುಪೇಟೆ, ಗುಜರಿ ಸಾಮಾನು ಮಾರಾಟ, ಪ್ರಾವಿಷನ್ ಸ್ಟೋರ್ ,ಟ್ರಾವೆಲ್ ಏಜೆನ್ಸಿ ಹೀಗೆ ನಾನಾ ಕಸುಬುಗಳನ್ನು ಮಾಡಿದ ದೇಶಭಕ್ತ. ಅಂತಿಮವಾಗಿ ಮರಳಿ ಮಣ್ಣಿನ ಕಡೆ ನಡೆದು ಕೃಷಿಕನಾದ ಜೀವನ ಪಯಣವೆ ಸಹಾಸಗಾಥೆಯಂತಿದೆ.
ಆರ್ಎಸ್ಎಸ್ ಹುರಿಯಾಳು : ಮೈಸೂರು ರಾಮಣ್ಣ ಎಂದೆ ಪರಿಚಿತರಾಗಿರುವ ಶ್ರೀರಾಮನ್ ಊರಿನಲ್ಲಿದ್ದಾಗ ಆರ್ಎಸ್ಎಸ್ ಕಟ್ಟಾಳು. ಶ್ರೀರಾಮ ಸೇನೆ, ದತ್ತಪೀಠ ,ಸಂಘಟ, ಚಳವಳಿ,ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲ್ಲೂ ಹುಚ್ಚು ಕಲ್ಪನೆಗೆಳ ಬೆನ್ನೇರಿಹೊರಡುತ್ತಿದ್ದ ಇವರು 1985 ರಲ್ಲಿಯೆ ಈಶ್ವರಹಳ್ಳಿಯಲ್ಲಿ ಸಾವಯವ ಕೃಷಿ ಆರಂಭಿಸಿದ್ದರು. ಏನೇ ಮಾಡಿ ದರೂ ಇತರರಿಗಿಂತ ಭಿನ್ನವಾಗಿರಬೇಕು. ಸಮಾಜಕ್ಕೆ ಮಾದರಿಯಾಗುವಂತಿರಬೇಕು. ನೆಲದ ಮಣ್ಣಿಗೆ, ದೇಶಕ್ಕೆ ಕೊಡುಗೆ ನೀಡುವಂತಿರಬೇಕು ಎಂಬ ಆದರ್ಶ ಜೀವನಕ್ಕೆ ತಮ್ಮನ್ನು ಅಪರ್ಿಸಿಕೊಂಡವರು.
ರಸಾಯನಿಕ ಕೃಷಿ ಅಥವಾ ಸಾವಯವ ಕೃಷಿ ಮಾಡಬೇಕೆ ಎಂಬ ಗೊಂದಲದಲ್ಲೆ ಕೃಷಿಯಲ್ಲಿ ಅಪಾರ ನಷ್ಟ ಅನುಭವಿಸಿದರು. ಉರುಳಿ,ಅವರೆ,ಜೋಳ,ಎಳ್ಳು ಬೆಳೆಯುತ್ತಿದ್ದ ಭೂಮಿಯಲ್ಲಿ ರಾಸಾಯನಿಕ ಬಳಸಿ ಕಬ್ಬು,ಹತ್ತಿ ಬೆಳೆದರು. ನಂತರ ಕೃಷಿಯಲ್ಲಿ ನಷ್ಟವಾದಾಗ ಊರನ್ನೆ ಬಿಟ್ಟು ಮೈಸೂರಿಗೆ ಬಂದರು.
ವ್ಯವಸಾಯದ ಸಹವಾಸ ಸಾಕು ಅಂತ ಊರು ಬಿಟ್ಟು ಅರಮನೆ ನಗರಿಗೆ ಬಂದ ರಾಮಣ್ಣ ಷೇರು ಪೇಟೆಯಲ್ಲಿ ಹಣ ತೊಡಗಿಸಿ ನಷ್ಟ ಅನುಭವಿಸಿ ಬೀದಿಗೆ ಬಿದ್ದರು. ನಂತರ ಸರಸ್ವತಿಪುರಂನ 6 ನೇ ಮೇನ್ನಲ್ಲಿ ಪ್ರಾವಿಷನ್ ಸ್ಟೋರ್ ಹಾಕಿದರು. ಹೆಳೆ ಸೈಕಲ್, ಕಾರು ಅಂತ ಗುಜರಿ ವ್ಯಾಪಾರವನ್ನೂ ಮಾಡಿದರು. ಟ್ರಾವೆಲ್ ಏಜೆನ್ಸಿಯನ್ನು ಮಾಡಿದರು. ಹಾರುವ ಹಕ್ಕಿಯನ್ನು ಪಂಜರದಲ್ಲಿಟ್ಟಂತೆ ಆಗಿತ್ತು ಆಗ ನನ್ನ ಜೀವನ ಎನ್ನುವ ರಾಮಣ್ಣ ಅದೆಲ್ಲವನ್ನು ಬಿಟ್ಟು ಮತ್ತೆ ಮರಳಿ ಮಣ್ಣಿಗೆ ಬರಲು ನಿರ್ಧರಿಸಿಬಿಟ್ಟರು. ರಕ್ತಗತವಾಗಿ ಬಂದಿದ್ದ ಬೇಸಾಯ ಮಾಡುವ ಹಂಬಲ ಕೊನೆಗೆ ನಾನು ಇಲ್ಲಿ ಒಂದುಕಡೆ ನೆಲೆನಿಲ್ಲುವಂತೆ ಮಾಡಿತು ಎನ್ನುತ್ತಾರೆ.
ಭೂಮಿ ಖರೀದಿಗೂ ಸಿದ್ಧತೆ ಬೇಕು : ಯಾವುದೆ ಜಮೀನು ಖರೀದಿಸುವ ಮುನ್ನಾ ಸಾಕಷ್ಟು ಹೋಂವಕರ್್ ಮಾಡಿಕೊಳ್ಳಬೇಕು. ಮಣ್ಣಿನ ಗುಣ. ನೀರಿನ ಲಭ್ಯತೆ.ವ್ಯವಸಾಯಕ್ಕೆ ಸೂಕ್ತ ವಾತವರಣ ಇದೆಯೆ ಇದೆಲ್ಲವನ್ನು ನೋಡಿ ನಂತರ ಬೇಸಾಯ ಮಾಡಲು ಮುಂದಾಗಬೇಕು ಎನ್ನುವ ರಾಮಣ್ಣ ಮೂರು ವರ್ಷ ಮಳೆ ಹೋದರೂ ಬೇಸಾಯಕ್ಕೆ ತೋದರೆಯಾಗದಂತಹ ಕಡೆ ತಾವು ಜಮೀನು ಖರೀದಿಸಿದ್ದಾಗಿ ಹೇಳುತ್ತಾರೆ.
2000 ಇಸವಿಯಲ್ಲಿ ಕೆ.ಕನ್ನೆನಹಳ್ಳಿಯ ದೊಡ್ಡಕೆರೆ ಕೆಳಗಡೆಗೆ ಎಂಟು ಎಕರೆ ಜಮೀನು ಖರೀದಿಸುತ್ತಾರೆ. ಆಗ ಅಲ್ಲಿ ಜೊಂಡು ಬೆಳೆದುಕೊಂಡು, ಜೌಳು ಮಣ್ಣು ತುಂಬಿಕೊಂಡು ಇದನ್ನು ದೆವ್ವದ ಭೂಮಿ ಅಂತ ಜನ ಕರೆಯುತ್ತಿದ್ದರು. ಇಫರ್ು ಜಲಪಾತದಿಂದ ಹರಿದು ಬರುವ ನೀರು ಲಕ್ಷಣ ತೀರ್ಥ ಸೇರುತ್ತದೆ. ಆ ನದಿಗೆ ಹನಗೋಡು ಸಮೀಪ ಒಡ್ಡು ಕಟ್ಟಲಾಗಿದೆ. ಅಲ್ಲಿಂದ 42 ಕೆರೆಗಳಿಗೆ ನೀರು ಬರುತ್ತದೆ.ಅದರಲ್ಲಿ ನಮ್ಮ ಈ ದೊಡ್ಡಕೆರೆಯೂ ಒಂದು. ಐದು ವರ್ಷ ಮಳೆ ನಿಂತರೂ ನಮಗೆ ನೀರಿನ ತೊಂದರೆ ಇಲ್ಲ.ಹಾಗಾಗಿ ನಾನು ಇದೆ ಜಾಗವನ್ನು ತೋಟಮಾಡಲು ಆರಿಸಿಕೊಂಡೆ ಎಂದು ಹೇಳುವಾಗ ಭವಿಷ್ಯದ ಬಗ್ಗೆ ಸ್ಪಷ್ಟ ಚಿಂತನೆ ಇರುವ ರೈತನಂತೆ ರಾಮಣ್ಣ ಕಾಣುತ್ತಾರೆ.
ದೆವ್ವದ ಭೂಮಿ ಅಂತ ಕರೆಯುತ್ತಿದ್ದ ಜಮೀನು ಖರೀದಿಸಿದಾಗ ಇಲ್ಲಿನ ಜನ "ಬ್ರಾಹ್ಮಣನಿಗ್ಯಾಕೆ ಬೇಸಾಯ" ಅಂತ ಲೇವಡಿ ಮಾಡಿದ್ದರೂ. ಐದು ವರ್ಷ ಬಿಟ್ಟು ಬಂದು ನೋಡಿ ಆಗ ಇಲ್ಲಿ ಏನು ಮಾಡಬಹುದು ಅಂತ ತೋರಿಸುತ್ತೇನೆ ಎಂದು ಹೇಳಿದ್ದೆ ಎಂದು ಆಗಿನ ದಿನಗಳನ್ನು ರಾಮಣ್ಣ ನೆನಪಿಸಿಕೊಂಡರು.
ಭೂಮಿ ಸಿದ್ಧತೆ : ಎಂಟು ಎಕರೆ ಭೂಮಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡೆ. ಬಾರ್ಡರ್ನಲ್ಲಿ 12 ಅಡಿಗೆ ಒಂದು ತೆಂಗು,ತೆಂಗಿನ ಮಧ್ಯದಲ್ಲಿ ಒಂದು ಮಾವು, ಕೊಕೊ ಹಾಕಿದೆ. ನಡುವೆ ಪ್ರತಿ ಹತ್ತು ಅಡಿ ಅಂತರದಲ್ಲಿ ಒಂದು ಮೀಟರ್ ಆಳ,ಒಂದು ಮೀಟರ್ ಅಗಲ ಬರುವಂತೆ (ಟ್ರಂಚ್/ಕಾಲುವೆ)ಗುಂಡಿ ತೆಗೆಸಿದೆ. ಭೂಮಿಗೆ ನೈಟ್ರೋಜನ್ ಫಿಕ್ಸ್ ಮಾಡಲು ಏಕದಳ ದ್ವಿದಳ ಧಾನ್ಯಗಳನ್ನು ಭಿತ್ತಿ ನಂತರ ಬಾಳೆ ಗುಂಡಿ ತೆಗೆದು ಕೋಳಿ ಗೊಬ್ಬರಹಾಕಿ ಬಾಳೆ ನಾಟಿ ಮಾಡಿದೆ. ಮೂರು ತಿಂಗಳ ನಂತರ ಅಡಿಕೆ ಮತ್ತು ತೆಂಗು ಹಾಕಿದೆ. ನಾಲ್ಕು ಅಡಿಕೆ ಮರದ ಮಧ್ಯ ಒಂದು ಮರ ಹರಳು, ಆಲುವಾಣ,ಜಟ್ರೋಪ,ಗ್ಲಿರಿಸೀಡಿಯಾ ಹಾಕಿದೆ.
ನಂತರ ನಮ್ಮ ಸಮೀಪದಲ್ಲೇ ಸಿಗುತ್ತಿದ್ದ ಕಬ್ಬಿನ ತರಗನ್ನು ತಂದು ಇಡೀ ತೋಟಕ್ಕೆ ಹೊದಿಕೆಯಾಗಿ ಹಾಸಿದೆ.ತೋಟದ ತುಂಬ ವೆಲ್ವೆಟ್ ಬೀನ್ಸ್ ಹಾಕಿಬಿಟ್ಟೆ. ಇದರಿಂದ ನಮ್ಮ ಭೂಮಿಯಲ್ಲಿ ಹ್ಯೂಮಸ್ ನಿಮರ್ಾಣವಾಗುವಂತೆ ಮಾಡಿ, ಎರೆಹುಳುಗಳು ಹೆಚ್ಚಾಗುವಂತೆ ಮಾಡಿಬಿಟ್ಟೆ ಎನ್ನುತ್ತಾರೆ ರಾಮಣ್ಣ.
ಮಧ್ಯೆ 500 ಹೆಬ್ಬೇವು,200 ಸಿಲ್ವರ್ ಬೇರೆ ಹಾಕಿದ್ದೆ. ನೀರಿಗೆ ಕೊರತೆ ಇರಲಿಲ್ಲ ಬಾಳೆ ಚೆನ್ನಾಗಿ ಬಂತು ಸಾಕಷ್ಟು ಆದಾಯವೂ ಬಂತು. ಜೊತೆಗೆ ಬೇರೆಗಿಡಗಳೆಲ್ಲಾ ಬಾಳೆಯ ನಡುವೆ ಚೆನ್ನಾಗಿ ಬಂದವು. ಚಿನ್ನದ ಬೆಳೆ ಅಂತ ಕರೆಯುತ್ತಿದ್ದ ವೆನ್ನಿಲ್ಲಾವನ್ನು ಹಾಕಿ ಕೈಸುಟ್ಟುಕೊಂಡೆ.ಹತ್ತು ಲೋಡ್ ಮಂಗಳೂರು ಸೌತೆ ಬೆಳೆದು ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆಯೂ ಬರಲಿಲ್ಲ. ಸಾಕಾಷ್ಟು ನಷ್ಟ ಆಯಿತು. ಆರಂಭದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುತ್ತಿದ್ದೆ. ಈಗ ಸಂಪೂರ್ಣ ನಿಲ್ಲಿಸಿದ್ದೇನೆ. ನನ್ನ ತೋಟ ಈಗ ಸಂಪೂರ್ಣ ಮಳೆ ಆಶ್ರಯದಲ್ಲೆ ಅಚ್ಚ ಹಸಿರಾಗಿದೆ. ಬೋರ್ವೆಲ್ ಅನ್ನು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಿಸುತ್ತಿದ್ದೇವೆ ಎನ್ನುತ್ತಾರೆ.
ಪಾಳೇಕರ್ ಪದ್ಧತಿ : ಒಮ್ಮೆ ಆರ್.ಸ್ವಾಮಿ ಆನಂದ್ ನಮ್ಮ ತೋಟಕ್ಕೆ ಬಂದವರು "ರಾಮಣ್ಣ ಒಂದು ನಾಟಿ ಹಸು ಇದ್ರೆ ಇಪ್ಪತ್ತು ಎಕರೆ ಕೃಷಿ ಮಾಡಬಹುದು. ಸುಭಾಷ್ ಪಾಳೇಕರ್ ಎಂಬ ಕೃಷಿ ಬ್ರಹ್ಮ ಮೈಸೂರಿಗೆ ಬಂದು ಕಾರ್ಯಾಗಾರ ಮಾಡ್ತಾರೆ ನೀವೂ ಭಾಗವಹಿಸಿ " ಎಂದರು. ನಾನು 2009-10 ರಲ್ಲಿ ನಡೆದ ಪಾಳೇಕರ್ ಕಾರ್ಯಾಗಾರದಲ್ಲಿ ಭಾಗವಹಿಸಿ ಸಾಕಷ್ಟು ಕಲಿತುಕೊಂಡೆ. 2010 ರಲ್ಲಿ ಒಂದು ಹಳ್ಳಿಕಾರ್ ನಾಟಿ ಹಸು ತಂದೆ. ಈಗ ಅವುಗಳ ಸಂಖ್ಯೆ ಎಂಟಾಗಿದೆ. ಜೀವಾಮೃತ ನಿಜಕ್ಕೂ ಭೂಮಿಯಲ್ಲಿ ಮ್ಯಾಜಿಕ್ ರೀತಿ ಕೆಲಸಮಾಡುತ್ತೆ. ಮೂರ್ನಾಲ್ಕು ವರ್ಷ ಜೀವಾಮೃತ ಬಳಸಿದೆ. ಈಗ ಏನನ್ನು ಬಳಸುತ್ತಿಲ್ಲ. ಸ್ವಲ್ಪ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ ಅಷ್ಟೇ ಎನ್ನುತ್ತಾರೆ ರಾಮಣ್ಣ.
ಜೀವಾಮೃತದ ವಿಷಯದಲ್ಲಿ ಸ್ವಾಮಿ ಆನಂದ್ ನನ್ನ ಗುರು ಎಂದು ಹೇಳುವ ರಾಮಣ್ಣ ಯಾವಯಾವ ಗಿಡಗಳಿಗೆ ಎಷ್ಟು ಕ್ಯಾಂಡಲ್ ಬಲ್ಪ್ ಶಾಖ ಬೇಕು ಎನ್ನುವುದನ್ನ ಕಲಿಸಿಕೊಟ್ಟವರು ಸುಭಾಷ್ ಪಾಳೇಕರ್. ಕೃಷಿ ಮಾಡಲು ನಾಟಿ ಹಸು ಬೇಕೆ ಬೇಕು ಎನ್ನುವ ಇವರು ಹಾಲನ್ನು ಡೈರಿಗೆ ಕೊಡುವುದರಿಂದ ಪ್ರತಿ ತಿಂಗಳು 2000 ಬಂದರೆ ಮನೆಗೆ 2 ಲೀಟರ್ ಬಳಸುವುದರಿಂದ 1800 ಉಳಿತಾಯವಾದಂತಾಗುತ್ತದೆ. ತೋಟದ ಒಳಗೆ ದನಗಳನ್ನು ಕಟ್ಟಿ ಮೇಯಿಸುವುದರಿಂದ ನಮಗೆ ಇತರೆ ಖಚರ್ುಗಳು ಬರುವುದಿಲ್ಲ. ತೋಟದಲ್ಲೇ ದನಗಳ ಸಗಣಿ, ಗಂಜಲ ಬೀಳುವುದರಿಂದ ಗಿಡಗಳಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ.
ಮಾರುಕಟ್ಟೆ : ಆರಂಭದಲ್ಲಿ ತಾನು ಬೆಳೆದ ಉತ್ಪನ್ನಗಳನ್ನು ನೈಸಗರ್ಿಕ ಮಾರಾಟ ಮಳಿಗೆಗೆ ತಂದು ಕೊಡುತ್ತಿದ್ದೆ. ಬೀದಿ ಬೀದಿ ತಿರುಗಿ ಮಾರಾಟ ಮಾಡಿದೆ. ಲಾಭದಾಯಕ ಎನಿಸಲಿಲ್ಲ. ಈಗ ಮನೆ ಬಾಗಿಲ್ಲಲ್ಲೆ ಮಾರಾಟ ಮಾಡಿಬಿಡುತ್ತೇನೆ. ಇದರಿಂದ ಸಾಗಾಣಿಕೆ ವೆಚ್ಚ ಉಳಿದಂತೆಯೂ ಆಗಿದೆ. ಸ್ಥಳದಲ್ಲೆ ಹಣಕೊಟ್ಟು ಖರೀಸುವಂತವರೂ ಸಿಕ್ಕಂತಾಗಿದೆ ಎನ್ನುತ್ತಾರೆ.
ವ್ಯವಸಾಯ ಮಾಡಬೇಕು ಎನ್ನುವವರು, ಜಮೀನಿನಲ್ಲೆ ಮನೆ ಮಾಡಿಕೊಂಡು ಇರಬೇಕು.ದುಶ್ಚಟಗಳಿಂದ ದೂರವಿರಬೇಕು. ನಾಟಿ ಹಸು ಸಾಕಬೇಕು. ವಿಜ್ಞಾನ ಮತ್ತು ಅನುಭವವನ್ನು ಸೇರಿಸಿಕೊಂಡು ವ್ಯವಸಾಯ ಮಾಡಿದರೆ ಆರೋಗ್ಯ ಸುಧಾರಿಸುತ್ತದೆ ಕೃಷಿಯೂ ಲಾಭದಾಯಕ ಆಗುತ್ತದೆ ಎಂದು ಸಲಹೆ ನೀಡುತ್ತಾರೆ. ನಮ್ಮ ಸುತ್ತಲಿನ ರೈತರಿಗೆ ರಾಸಾಯನಿಕ ದುಷ್ಪರಿಣಾಮದ ಬಗ್ಗೆ ಎಷ್ಟೆ ತಿಳಿ ಹೇಳಿದರೂ ತಲೆಗೆ ಹೋಗಲಿಲ್ಲ. ಈಗ ರಾಸಾಯನಿಕ ಬಳಸುವುದರಿಂದ ಆಗುವ ಅನಾಹುತಗಳು ಗೊತ್ತಾದ ಮೇಲೆ ಎರಡು ವರ್ಷಗಳಿಂದ ಸುತ್ತಲಿನ ರೈತರು ನೈಸಗರ್ಿಕ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀರಾಮನ್ ಅವರನ್ನು ಮೊ. 9902651417 ಸಂಪಕರ್ಿಸಬಹುದು