vaddagere.bloogspot.com

ಭಾನುವಾರ, ಡಿಸೆಂಬರ್ 4, 2016

ಕೃಷಿಯಲ್ಲೂ ಸೌಂದರ್ಯ ಪ್ರಜ್ಞೆ ಮೆರೆದ ಕೊಪ್ಪಲಿನ ಹುಡುಗ
 ಒಂದೇ ಎಕರೆಯಲ್ಲಿ ಸಮಗ್ರ ಬೇಸಾಯ # ಸಣ್ಣ ರೈತರಿಗೆ ಮಾದರಿಯಾದ ಸುರೇಶ
ಮೈಸೂರು : ಒಂದು ಎಕರೆ ಹದಿನೆಂಟು ಗುಂಟೆ ಪ್ರದೇಶ. ಅಲ್ಲೊಂದು ಮೀನು ಸಾಕಾಣಿಕೆ ಸಣ್ಣಕೆರೆ ಹಾಗೂ ವಾಸದ ಮನೆ. ರಸ್ತೆ ಸೇರಿ ಇದಕ್ಕಾಗಿ ಸುಮಾರು ಹದಿನೆಂಟು ಗುಂಟೆ ಪದೇಶ ಬಳಕೆಯಾಗಿದೆ. ವ್ಯವಸಾಯ ಉದ್ದೇಶಕ್ಕಾಗಿ ಉಳಿದಿರುವುದು ಕೇವಲ ಒಂದು ಎಕರೆ ಪ್ರದೇಶ. ಅಲ್ಲಿ ಅಚ್ಚರಿ ಪಡುವಂತೆ ಬೆಳೆದು ನಿಂತಿರುವ 50 ತೆಂಗು, 35 ಸಪೋಟ,17 ಮಾವು,150 ಅಡಿಕೆ, ಲಿಚ್ಚಿ 3, ಜಂಬೂ ನೇರಳೆ 6, ಬೆಟ್ಟದ ನೆಲ್ಲಿ ,ಕಿರುನೆಲ್ಲಿ,ಚಿರ್ನೆಲ್ಲಿ,ಪನ್ನೆರಳೆ ,ಸೀಬೆ ತಲಾ 2, ಮೊಸಂಬಿ,ಕಿತ್ತಳೆ,ಬಾದಾಮಿ,ಈರಳೆಕಾಯಿ,ಚಕೋತ್ತ ತಲಾ 1 ಅಲ್ಲದೆ ಕಾಳು ಮೆಣಸು 60, ಕಾಡು ಸಪೋಟ 3, ಚಕ್ಕೆ 5, ಹಾಲ್ ಫನ್ 5, ನುಗ್ಗೆ 10, ಜಿ9 ಬಾಳೆ 200, ಹಲಸು 5. 300 ನಾಟಿ ಕೋಳಿ, 2000 ಮೀನು, ಹತ್ತು ಲವ್ ಬಡ್ಸರ್್,15 ಪಾರಿವಾಳ.
ಇಷ್ಟೆಲ್ಲಾ ಒಂದು ಎಕರೆ ಪ್ರದೇಶದಲ್ಲಿ ಇರಲು ಸಾಧ್ಯವೆ !. ಹೌದು ಸಾಧ್ಯ. ಇದು ನಿಮಗೆ ಅಚ್ಚರಿ ಅನಿಸಬಹುದು. ಇದೆಲ್ಲವನ್ನು ಸಾಧಿಸಿ ತೋರಿಸಿದ್ದಾನೆ ಮೈಸೂರಿನ ಕೆ.ಜಿ.ಕೊಪ್ಪಲಿನ ಯುವಕ ಎಸ್.ಸುರೇಶ್. ಸುಸ್ಥಿರ, ಸಮಗ್ರ ಬೇಸಾಯ ಪದ್ಧತಿ ಅಳವಡಿಕೊಂಡು ಮಾರುಕಟ್ಟೆ ಮತ್ತು ಬೆಳೆ ವೈವಿಧ್ಯತೆಯಲ್ಲಿ ಸಮನ್ವಯತೆ ಸಾಧಿಸುವ ಮೂಲಕ ಸುರೇಶ್ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.
ಎರಡು ಎಕರೆ ಭೂಮಿ ಹೊಂದಿರುವ ರೈತರು ತಮಗಿರುವ ಕಡಿಮೆ ಭೂಮಿಯಲ್ಲಿ ಏನು ಬೆಳೆಯಲು ಆಗುವುದಿಲ್ಲ. ಐದೋ, ಹತ್ತೋ ಎಕರೆ ಭೂಮಿ ಇದ್ದರೆ ಕೃಷಿ ಮಾಡಬಹುದಿತ್ತು ಎಂದುಕೊಂಡು ತಮಗಿರು ಕಡಿಮೆ ಜಮೀನನ್ನು ಬಿಟ್ಟು ಕೂಲಿಗಳಾಗಿ ನಗರದ ಪಾಲಾಗಿರುವುದನ್ನು ಕಾಣುತ್ತೇವೆ. ಅಂತಹ ರೈತ ಮಿತ್ರರು ಸುರೇಶ್ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ನಗರದಲ್ಲಿ ಹುಟ್ಟಿ, ಎಸ್ಸೆಸ್ಎಲ್ಸಿ ಫೇಲಾಗಿ ಹಳ್ಳಿಯಲ್ಲಿ ಸುಂದರವಾದ ತೋಟ ಕಟ್ಟಿರುವ ಈತನ ಜಾಣ್ಮೆ ಕೃಷಿ ವಿಜ್ಞಾನಿಗಳು, ವಿದ್ಯಾವಂತ ಯುವಕರಿಗೆ ಪಾಠ ಶಾಲೆಯಂತಿದೆ.
ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ಹಾದಿಯಲ್ಲಿ ಬೆಳಗೊಳ ಪಂಪ್ಹೌಸ್ ಸಿಗುತ್ತದೆ. ಸ್ವಲ್ಪ ಮುಂದೆ ಸಾಗಿದರೆ ಹೊಸಹಳ್ಳಿ ಗೇಟ್ . ಅಲ್ಲಿ ಎಡಕ್ಕೆ ತಿರುಗಿದರೆ ಕಾರೇಕುರ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆ ಇದೆ. ಕಾರೇಕುರದ ಬಸವನಗುಡಿ ರಸ್ತೆಯಲ್ಲಿ ಹೋದರೆ "ನಿಷಿಕಾಂತ್ ಫಾರಂ ಹೌಸ್ " ಎಂಬ ಒಂದು ಎಕರೆ ಹದಿನೆಂಟು ಗುಂಟೆಯಲ್ಲಿ ಕೆ.ಜಿ.ಕೊಪ್ಪಲಿನ ಉತ್ಸಾಹಿ ಯುವಕ ಸುರೇಶ್ ಕಟ್ಟಿದ ಹತ್ತಾರು ಸಸ್ಯ ವೈವಿಧ್ಯಗಳ ಸಾವಯವ ತೋಟ ಸಿಗುತ್ತದೆ. 
"ನಿಷಿಕಾಂತ್ ಫಾರಂ ಹೌಸ್ "ನ ದೊಡ್ಡ ಗೇಟನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಯಾವುದೋ ರೆಸಾಟರ್್ಗೆ ಬಂದ ಅನುಭವ. ತೋಟದಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ನಂತಹ ಕಸ ಕಾಣಲು ಸಾಧ್ಯವಿಲ್ಲ. ಜಮೀನಿನಲ್ಲಿ ಬಿದ್ದ ಕಸವನ್ನು ಹಾಕಲು ಒಂದು ಡಬ್ಬವನ್ನು ಇಟ್ಟಿದ್ದಾರೆ.ಸುತ್ತಲೂ ಭತ್ತದ ಗದ್ದೆಗಳು. ಹಸಿರು ಹೊದ್ದ ಬಟಾ ಬಯಲು.ನಡುವೆ  ದ್ವೀಪದಂತೆ ಹತ್ತಾರು ತಳಿಯ ಗಿಡಮರಗಳಿರುವ ಹಸಿರು ತೋಟ ಗಮನಸೆಳೆಯುತ್ತದೆ. ರೈತನಿಗೆ ಸೌಂದರ್ಯ ಪ್ರಜ್ಞೆ ಮತ್ತು ಮಾರುಕಟ್ಟೆ ಜ್ಞಾನ ಎರಡೂ ಸಮಾನವಾಗಿದ್ದರೆ,ಚಮತ್ಕಾರವನ್ನು ಸಾಧಿಸಬಹುದು ಎನ್ನುವುದನ್ನು ಸುರೇಶ್ ಸಾಧಿಸಿ ತೋರಿಸಿದ್ದಾರೆ.
ಮೈಸೂರಿನಲ್ಲಿ ಭೇಟಿಯಾಗಿದ್ದ "ಆ ದಿನಗಳು" ಮತ್ತು " ಮೈನಾ" ಖ್ಯಾತಿಯ ನಟ ಚೇತನ್ ಅಹಿಂಸಾ ನನ್ನೊಂದಿಗೆ ಮಾತನಾಡುತ್ತಾ ರೈತರ ಆತ್ಮಹತ್ಯೆ, ಸಂಕಷ್ಟದ ಬದುಕಿನ ಬಗ್ಗೆ ಮಾತನಾಡುತ್ತಿದ್ದರು. ನಮ್ಮಲ್ಲಿ ಒಂದು, ಎರಡು ಎಕರೆ ಭೂಮಿ ಹೊಂದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತಹ ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಹ ಸಕ್ಸಸ್ ಸ್ಟೋರಿಗಳನ್ನು ಮಾಧ್ಯಮಗಳು ಬೆಳಕಿಗೆತರುವ ಮೂಲಕ ಯುವಕರಿಗೆ ಸ್ಫೂತರ್ಿ ತುಂಬಬೇಕು.ಯುವಕರು ಹಳ್ಳಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಾನೂ ನಿಮ್ಮ ಜೊತೆ ಇರುತ್ತೇನೆ.ಹಳ್ಳಿಗಳ ಅಭಿವೃದ್ಧಿಗೆ ನಾವು ಕೆಲಸಮಾಡೋಣ ಎಂದು ಹೇಳುತ್ತಿದ್ದರು.
ಅದೇ ಸಮಯದಲ್ಲಿ ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ, ಗೆಳೆಯರಾದ ಬಿ.ಎಸ್.ಹರೀಶ್ ಅವರು, ಒಂದು ಎಕರೆ ತೋಟದ ಅಚ್ಚರಿಯ ಬಗ್ಗೆ ತಿಳಿಸಿ, ನಮ್ಮನ್ನೂ ಅಲ್ಲಿಗೆ ಹೋಗಿ ಬರುವಂತೆ ಹೇಳಿದರು. ನಮ್ಮ ಕೃಷಿ ತಂಡ ತಡಮಾಡದೆ ಅಲ್ಲಿಗೆ ಭೇಟಿ ನೀಡಿತು. ಕೆ.ಜಿ.ಕೊಪ್ಪಲಿನ ಸಿ.ಸಿದ್ದೇಗೌಡರ ಮಗ ಸುರೇಶ್ ಕಾರೇಕುರಲ್ಲಿ ಕಟ್ಟಿದ ತೋಟ ನೋಡಿದ ನಮಗೆ ಆತನೆ ನಮ್ಮ ಯುವಕರ ಆದರ್ಶ ಮತ್ತು ಕನಸು ಅಂತ ಅನಿಸಿತು.
ಸುರೇಶ್ ಕೆ.ಜಿ.ಕೊಪ್ಪಲಿನಲ್ಲಿ ವಾಸವಾಗಿದ್ದರೂ ನಗರದ ಆಕರ್ಷಣೆಗೆ ಒಳಗಾಗಿಲ್ಲ.ಗ್ರಾಮೀಣ ಸೊಗಡನ್ನೂ ಬಿಟ್ಟಿಲ್ಲ.ಬಾಲ್ಯದ ನೆನಪುಗಳನ್ನು ಬಿಡದೆ ಕಟ್ಟಿದ ತೋಟವೇ ಸುರೇಶನ ವ್ಯಕ್ತಿತ್ವವನ್ನು ಹೇಳುತ್ತದೆ. ಈತ ಕಾಲೇಜು ಮೆಟ್ಟಿಲು ಹತ್ತಿಲ್ಲ. ಆದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳು ಎಲ್ಲಾ ರೀತಿಯ ಶಿಕ್ಷಣದ ತರಬೇತಿಯನ್ನೂ ಪಡೆದಿದ್ದಾನೆ. ಕೋಳಿ,ಕುರಿ,ಮೀನು ಸಾಕಾಣಿಕೆಯಿಂದ ಹಿಡಿದು ಉದ್ಯಮಶೀಲತಾ ತರಬೇತಿ ಪಡೆದಿದ್ದಾರೆ. ಈತನ ಜ್ಞಾನದ ಮಟ್ಟ ಯಾವ ಕೃಷಿ ವಿಜ್ಞಾನಿ ಮತ್ತು ಎಂಜಿನೀಯರ್ಗೂ ಕಡಿಮೆ ಇಲ್ಲ. ತೋಟದ ಸುತ್ತ ಬದುವಿನಲ್ಲಿ ಸರಾಗ ತಿರುಗಾಟಕ್ಕೆ ಸಿಮೆಂಟ್ ಇಟ್ಟಿಗೆಯಲ್ಲಿ ಇಬ್ಬರು ನಡೆದಾಡಬಹುದಾದಷ್ಟು ಕೃತಕವಾದ ಬದು ನಿಮರ್ಾಣ ಮಾಡಿಕೊಂಡಿದ್ದಾರೆ. ಗೇಟ್ನಿಂದ ಮನೆಗೆ ಹೋಗುವ ಹಾದಿಯಲ್ಲಿ ಹತ್ತಾರು ಅಲಂಕಾರಿಕ ಹೂವಿನ ಗಿಡಗಳನ್ನೂ ಹಾಕಿದ್ದಾರೆ. ಇವೆಲ್ಲ ತೋಟದ ಸೌಂದರ್ಯವನ್ನು ಹೆಚ್ಚಿಸಿವೆ.
ಹೆಣ್ಣುಕೊಟ್ಟ ಸೋದರಮಾವನವರೇ ನನ್ನ ಕೃಷಿ ಗುರು ಎಂದು ಹೇಳುವ ಸುರೇಶ್ ಕಳೆದ ಆರು ವರ್ಷದಲ್ಲಿ ಕಾರೇಕುರದಲ್ಲಿ ಭೂಮಿ ಖರೀದಿಸಿದ ಸಮಯದಿಂದ ಇಲ್ಲಿಯವರೆಗೆ ತೋಟ ಕಟ್ಟಲು ಆದ ಖಚರ್ು ಮತ್ತು ಬಂದ ಆದಾಯ ಎಲ್ಲವನ್ನೂ ಕಡತದಲ್ಲಿ ದಾಖಲಿಸಿ ಇಟ್ಟುಕೊಂಡಿದ್ದಾರೆ. ಆ ಕಡತವನ್ನು ನೋಡುತ್ತಿದ್ದರೆ ಅವರ ಇಂತಹ ಶಿಸ್ತು ಮತ್ತು ಲೆಕ್ಕಚಾರವೇ ಯಶಸ್ಸಿನ ಗುಟ್ಟು ಅನಿಸಿಸುತ್ತದೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ 2015 ರಲ್ಲಿ ಸುರೇಶ್ ಅವರಿಗೆ ತಾಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ ನೀಡಿದೆ. ದಸರಾ ಫಲಪುಷ್ಪ ಪ್ರದರ್ಶನ 2015 ರಲ್ಲಿ  ಸಮಗ್ರ ಬೇಸಾಯಕ್ಕಾಗಿ ದ್ವಿತೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೋಳಿ ಸಾಕಾಣಿಕೆ ತರಬೇತಿ. ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ತರಬೇತಿ. ಕೃಷಿ ತಂತ್ರಜ್ಞಾನ ನಿರ್ವಹಣ ಸಂಸ್ಥೆಯಿಂದ ಪಶುಪಾಲನೆ ಲಾಭದಾಯಕ ಆಹಾರ ಪೂರೈಕೆಯಲ್ಲಿ ತರಬೇತಿ ಪಡೆದಿರುವ ಸುರೇಶ್ ಒಬ್ಬ ಯಶಸ್ವಿ ಕೃಷಿಕನಿಗೆ ಎಂತಹ ಶಿಕ್ಷಣ ಬೇಕು ಎನ್ನುವುದಕ್ಕೆ ಜೀವಂತ ನಿದರ್ಶನವಾಗಿ ನಿಲ್ಲುತ್ತಾರೆ.
ಸಮಗ್ರ ಬೇಸಾಯ : ಕೊಪ್ಪಲಿನ ಸುರೇಶ್ ಅವರ ಕುಟುಂಬಕ್ಕೆ ಮೈಸೂರಿನ ಬೋಗಾದಿ ರಸ್ತೆಯಲ್ಲಿ ತೆಂಗಿನ ತೋಟ ಇತ್ತು. ಮುಡಾ ಅವರ ಭೂಮಿಯನ್ನು ವಶಪಡಿಸಿಕೊಂಡು ಪರಿಹಾರ ನೀಡಿತು. ಆ ಪರಿಹಾರದ ಹಣದಲ್ಲಿ ಕಾರೇಕುರದಲ್ಲಿ ಬಂಜರು ಭೂಮಿ ಖರೀದಿಸಿದ ಸುರೇಶ್ ಅದನ್ನು ಈಗ ನಂದನವನವನ್ನಾಗಿ ರೂಪಿಸಿ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡು ನೆಮ್ಮದಿಯ ಸರಳ, ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ  ಕೃಷಿ ಬೆಳೆಯ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಸಂಯೋಜನೆ ಮಾಡಿಕೊಂಡಿದ್ದಾರೆ. ಆಯಾಯ ಕಾಲಕ್ಕೆ ತಕ್ಕ ಬೆಳೆಗಳಿಂದ ಆದಾಯ ಪಡೆಯುವ ಸಲುವಾಗಿ ಕಳೆದ ನಾಲ್ಕು ವರ್ಷಗಳಿಂದ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಆರಂಭದಲ್ಲಿ ಟೊಮಟೋ, ಮೆಣಸಿನಕಾಯಿ, ಕಲ್ಲಂಗಡಿಯನ್ನು ಬೆಳೆದೆ. ಈಗ ಈರನಗೆರೆ ಬದನೆಕಾಯಿ ಬೆಳೆಯಲಾಗಿದ್ದು, ತೋಟದ ಬದುವಿನಲ್ಲಿ ಹಾಕಲಾಗಿರುವ ತೊಂಡೆಗಿಡಗಳು ಸಾಕಷ್ಟು ಆದಾಯ ತರುವ ಬೆಳೆಗಳಾಗಿವೆ ಎನ್ನುತ್ತಾರೆ.
ತೊಂಡೆ ಕಾಯಿಯನ್ನು ನೇಸರ ಸಾವಯವ ಮಾರಾಟ ಮಳಿಗೆಗೆ ಕೊಡುತ್ತೇನೆ.ಕೋಳಿ, ಮೀನು ಮತ್ತು ತರಕಾರಿಗಳನ್ನು ತೋಟಕ್ಕೆ ಬಂದು ಖರೀದಿಸುತ್ತಾರೆ. ಬಾಳೆ ನಾಲ್ಕನೇ ಕೂಳೆ ಬೆಳೆ. ಹಣ್ಣಿನ ಬೆಳೆಗಳು ಈಗ ಫಸಲು ಕೊಡಲು ಆರಂಭಿಸಿವೆ.ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ನಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ.
ಆರಂಭದಲ್ಲಿ ತಾನು ಎಲ್ಲರಂತೆ ರಾಸಾಯನಿಕ ಕೃಷಿಯನ್ನೆ ಮಾಡುತ್ತಿದ್ದೆ. ನಂತರ ಮೈಸೂರಿನ ಕಲಾಮಂದಿರದಲ್ಲಿ ನಡೆದ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ನಂತರ ಭೂಮಿಗೆ ವಿಷ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿ ಫಲವತ್ತತೆಯೂ ಹೆಚ್ಚಾಗಿ, ಕಳೆ ಬೆಳೆಯುವುದನ್ನು ತಡೆಗಟ್ಟಬಹುದು,ಒಣ ತ್ಯಾಜ್ಯ ಬಳಸುವುದರಿಂದ ತೇವಾಂಶ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಸುರೇಶ್ ಅವರ ಅನುಭವದ ಮಾತು.
ಅರಣ್ಯ ಕೃಷಿ : ತೋಟದ ಖಾಲಿ ಜಾಗವನ್ನು ಸದ್ಭಳಕೆ ಮಾಡಿಕೊಳ್ಳು ಉದ್ದೇಶದಿಂದ ಅರಣ್ಯ ಕೃಷಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಮರಗಳು ಕಷ್ಟಕಾಲದಲ್ಲಿ ಒದಗಿಬರುತ್ತವೆ. ದೀಘರ್ಾವಧಿಯಲ್ಲಿ ಹಣ ತರುವ ಮೂಲಗಳಾಗಿವೆ. ಅಲ್ಲದೆ ಬದುಗಳಲ್ಲಿ ಮರ ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು. ತೇಗ, ಸಿಲ್ವರ್ಓಕ್, ಹರ್ಕ್ಯುಲಸ್ ಮತ್ತು ಬೇವಿನ ಮರಗಳು ತೋಟದ ಸುತ್ತಾ ಇದ್ದು ಅತಿಯಾದ ಗಾಳಿಯಿಂದ ತೋಟಗಾರಿಕಾ ಬೆಳೆಗಳಿಗೆ ರಕ್ಷಣೆ ನೀಡುತ್ತವೆ ಎನ್ನುತ್ತಾರೆ ಸುರೇಶ್.
ಮೀನುಗಾರಿಕೆ : ಬಾಲ್ಯದ ನೆನಪುಗಳು ಬಿಡದೆ ಕಾಡುತ್ತಿದ್ದವು. ಕೆರೆಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಆದ್ದರಿಂದ ತೋಟದಲ್ಲಿ ಮೀನು ಸಾಕಾಣಿಕೆ ಆರಂಭಿಸಿದೆ. 30 ಕುಂಟೆ ಪ್ರದೇಶದಲ್ಲಿ 100/ 200 ಉದ್ದ ಹಾಗೂ 5 ಅಡಿ ಆಳ ಅಳತೆಯ ಕೃತಕ ಕೆರೆ ನಿಮರ್ಾಣ ಮಾಡಿಕೊಂಡಿದ್ದೇನೆ. ಕಾಟ್ಲಾ, ರೇಹೋ, ಕಾಮನ್ ಕಾಕರ್ೂ ಎಂಬ ಹೈಬ್ರೀಡ್ ತಳಿಯ ಮೀನುಗಳನ್ನು ಸಾಕುತ್ತೇನೆ.ಅವುಗಳಿಗೆ ಆಹಾರವಾಗಿ ಕಡ್ಲೆ ಹಿಂಡಿ, ಅಕ್ಕಿ ತೌಡು ಕೊಡುತ್ತೇನೆ. ಆಹಾರದ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಮೀನಿನ ಕೊಳದ ಮೇಲೆ ನಾಟಿ ಕೋಳಿ ಶೆಡ್ ನಿಮರ್ಾಣ ಮಾಡಿಕೊಂಡಿದ್ದೇನೆ. ಕೋಳಿ ಹಿಕ್ಕೆ ನೇರವಾಗಿ ಕೆರೆಗೆ ಬೀಳುತ್ತದೆ. ಇದರಲ್ಲಿ ವಾಷರ್ಿಕ 2000 ಮೀನು ಮರಿಗಳನ್ನು ಸಾಕುತ್ತೇನೆ. 1 ರಿಂದ 2 ಕೆಜಿವರೆಗೆ ಪ್ರತಿ ಮೀನುಗಳು ಬೆಳೆಯುತ್ತವೆ. ನಾಟಿ ಕೋಳಿಯ ಹಿಕ್ಕೆ  ನೀರಿನಲ್ಲಿ (ಪಿಎಚ್) ರಸಸಾರವನ್ನು ಕಾಪಾಡುತ್ತದೆ.
ಇದೆ ನೀರನ್ನು 5 ಎಚ್ಪಿ ಪಂಪ್ ಮೂಲಕ ಮೂರು ತಿಂಗಳಿಗೆ ಒಮ್ಮೆ ತೋಟಕ್ಕೆ ಹಾಯಿಸುತ್ತೇನೆ. ಇದರಿಂದ ಫಸಲು ಸಮೃದ್ಧಿಯಾಗಿ ಬರುತ್ತದೆ. ಕೋಳಿ ಹಿಕ್ಕೆಯಿಂದ ಖಚರ್ು ಕಡಿಮೆಯಾಗಿದ್ದು ತೌಡು ಹಿಂಡಿಗೆ ವಾಷರ್ಿಕ 39,100 ರೂ ಖಚರ್ು ಬರುತ್ತದೆ. ಮೀನುಗಳು ಸರಾಸರಿ 1.5 ಕೆಜಿ ಬೆಳೆದು ವಾಷರ್ಿಕ 1,26,000 ರೂ ಆದಾಯ ತಂದುಕೊಡುತ್ತವೆ. ಖಚರ್ು ಕಳೆದು 87 ಸಾವಿರ ಆದಾಯ ಬರುತ್ತದೆ.
ಕೋಳಿಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಎರಡೂ ಪರಸ್ಪರ ಅವಲಂಭಿತ ಪೂರಕ ಉಪಕಸುಬುಗಳು. ಮೀನು ಸಾಕಾಣಿಕೆ ಆರಂಭಿಸಿದಾಗ ಕೆರೆ ನಿಮರ್ಿಸಿದ ಜಾಗದಲ್ಲಿ ಉಳಿಕೆ ಜಾಗವನ್ನು ಸದುಪಯೋಗಮಾಡಿಕೊಳ್ಳಲು ಕೋಳಿ ಸಾಕಾಣಿಕೆಗೆ ಪ್ಲಾನ್ ಮಾಡಿದೆ. ಕೆರೆಯ ಮೇಲ್ಭಾಗದಲ್ಲಿ 15/ 15 ಅಳತೆಯ ಕಬ್ಬಿಣದ ಮೆಶ್ ನಿಮರ್ಾಣಮಾಡಿದ್ದೇನೆ. ಇದರಲ್ಲಿ 300 ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ. ವರ್ಷಕ್ಕೆ ಮೂರು ಬ್ಯಾಚ್ ಕೋಳಿ ಸಾಕುತ್ತೇನೆ. ಪ್ರತಿ ಬ್ಯಾಚುಗಳಲ್ಲಿ  62,000 ರೂ ಆದಾಯ ಇದೆ. ಖಚರ್ು ಕಳೆದು ವಾಷರ್ಿಕ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಸಿಗುತ್ತದೆ.
ಪಕ್ಷಿ ಸಾಕಾಣಿಕೆ : ಪಕ್ಷಿಗಳನ್ನು ಸಾಕುವುದು ನನ್ನ ಮೆಚ್ಚಿನ ಹವ್ಯಾಸ. ಬಾಲ್ಯದಿಂದಲ್ಲೂ ಕುರಿ ಕೋಳಿಗಳ ಜೊತೆ ಬೆಳೆದವರು ನಾವು. ಹಾಗಾಗಿ ಪಕ್ಷಿಗಳನ್ನು ಕಂಡರೆ ನನಗೆ ತುಂಬಾ ಪ್ರೀತಿ. ಸಮಗ್ರ ಕೃಷಿ ಪದ್ಧತಿಯ ಒಂದು ಭಾಗವಾಗಿಯೇ ನಾನು ಪಕ್ಷಿಗಳನ್ನು ಸಾಕುತ್ತಾ ಅದರಿಂದಲ್ಲೂ ಆದಾಯ ಗಳಿಸುತ್ತಿದ್ದೇನೆ. ಈಗ ನಮ್ಮಲ್ಲಿ 10 ಲವ್ ಬಡ್ಸರ್್, 15 ಪಾರಿವಾಳಗಳು ಇವೆ. ಮೊಲ ಸಾಕಾಣಿಕೆಗೂ ಪ್ಲಾನ್ ಮಾಡಿದ್ದೇನೆ.
ಲವ್ ಬಡ್ಸರ್್ಗೆ ನವಣೆ, ಸೂರ್ಯಕಾಂತಿ ಬೀಜ,ಭತ್ತವನ್ನು ಆಹಾರವಾಗಿ ನೀಡುತ್ತೇನೆ.ಲವ್ಬಡ್ಸರ್್ ಮೂರು ತಿಂಗಳಿಗೆ ಎರಡರಿಂದ ನಾಲ್ಕು ಮೊಟ್ಟೆಗಳನ್ನು ಇಡುತ್ತವೆ. ಒಂದು ಜೊತೆ ಪಾರಿವಾಳ ಮೂರು ತಿಂಗಳಲ್ಲಿ 2 ಮೊಟ್ಟೆ ಇಟ್ಟು ಮರಿಮಾಡುತ್ತವೆ.ಒಂದು ಜೊತೆ ಲವ್ಬಡ್ಸರ್್ಗೆ 200 ರಿಂದ 300 ರೂ.ಗೆ ಮಾರಾಟ ಮಾಡಿದರೆ, ಒಂದು ಜೊತೆ ಪಾರಿವಾಳಗಳನ್ನು 300 ರಿಂದ 400 ರೂ.ಗೆ ಮಾರಾಟಮಾಡುತ್ತೇನೆ ಎನ್ನುವ ಮೂಲಕ ತಮ್ಮ ಹವ್ಯಾಸಗಳನ್ನು ಹಣ ಸಂಪಾದನೆಯ ಮಾರ್ಗವಾಗಿ ಮಾಡಿಕೊಂಡು ಸಂತಸ ಕಾಣುತ್ತಿದ್ದಾರೆ.
ಯಂತ್ರೋಪಕರಣ : ತೋಟದಲ್ಲಿ ಇರುವ ಯಂತ್ರೋಪಕರಣಗಳು ಮತ್ತು ಬಳಸುವ ವಿಧಾನವನ್ನು ಬರೆದು ಇಟ್ಟುಕೊಂಡಿರುವ ಸುರೇಶ್ ತಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸೌಂದರ್ಯ ಪ್ರಜ್ಞೆ ಮತ್ತು ಶಿಸ್ತನ್ನು ಕಾಪಾಡಿಕೊಂಡಿದ್ದಾರೆ. ಕಳೆ ತೆಗೆಯುವ ಯಂತ್ರ. ರಸದ್ರವಣ ಸಿಂಪಡಿಸಲು ಸ್ಪ್ರೈಯರ್ . ಎರೆಹುಳ್ಳು ಘಟಕ ಇದೆ. ಮೀನುಮರಿಗಳಿಗೆ ಆಹಾರವಾಗಿ ಅಜೋಲ ಬೆಳೆದುಕೊಳ್ಳಲಾಗುತ್ತದೆ. ಮುಂದೆ ಸಣ್ಣ ಹೋರಿ ಕರುಗಳನ್ನು ಖರೀದಿಸಿ ಎರಡು ವರ್ಷ ಬೆಳೆಸಿ ಮಾರುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಆಶ್ಚರ್ಯ ಎಂದರೆ ತೋಟದ ನಿರ್ವಹಣೆಗೆ ಯಾವುದೇ ಆಳುಕಾಳುಗಳನ್ನು ಅವಲಂಭಿಸದೆ ಸ್ವತಃ ತಾವೇ ತೋಟ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಿರುವುದು ಅವರ ಕೃಷಿ ಪ್ರೀತಿಗೆ ಸಾಕ್ಷಿಯಾಗಿದೆ.
ತೋಟಕ್ಕೆ ಆರು ತಿಂಗಳು ನಾಲೆ ನೀರು ಸಿಗುತ್ತದೆ. ಉಳಿದ ಆರು ತಿಂಗಳು ಬೋರವೆಲ್ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಲಾಗುತ್ತದೆ. ಒಂದು ಬೋರ್ವೆಲ್ ಇದೆ. ಇದಕ್ಕೆ 5 ಎಚ್ಪಿ ಮೋಟರ್ ಹಾಕಿದ್ದು ಒಂದೂವರೆ ಇಂಚು ನೀರು ಬರುತ್ತದೆ. ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ನೀರು ಪೂರೈಸಲಾಗುತ್ತದೆ.ಈ ಪ್ರದೇಶ ಅರೆ ನೀರಾವರಿ ಖುಷ್ಕಿ ವಲಯವಾಗಿರುವುದರಿಂದ ಅಲ್ಲಿ ಸಿಗುವ ಸೌಲಭ್ಯಗಳನ್ನೇ ಸಮರ್ಥವಾಗಿ ಬಳಸಿಕೊಂಡು ತೋಟ ಕಟ್ಟಿರುವ ಸುರೇಶ್ ಅವರ ಜಾಣ್ಮೆ ಮತ್ತು ಸೌಂದರ್ಯ ಪ್ರಜ್ಞೆ ನಾಡಿನ ಯುವಕರಿಗೆ ಮಾದರಿಯಾಗುವಂತಿದೆ. ಆಸಕ್ತರು ಸುರೇಶ್ ಅವರನ್ನು  9880507318 ಸಂಪಕರ್ಿಸಬಹುದು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ