vaddagere.bloogspot.com

ಭಾನುವಾರ, ಡಿಸೆಂಬರ್ 11, 2016

ಸಿಲ್ಕ್ "ಸಿರಿ" ನಾಗಭೂಷಣ: ರೈತರಿಗೆ ಘನತೆ ತಂದ ಕೃಷಿಕ 
ಮೈಸೂರು : ಬಡತನ,ಸೋಲು,ಅಪಮಾನಗಳನ್ನೇ ಸವಾಲಾಗಿ ಸ್ವೀಕರಿಸಿ "ಸಿರಿಕಲ್ಚರ್" ನಿಂದ "ಸಿರಿವಂತ"ರಾದ ಯಶಸ್ವಿ ರೈತರೊಬ್ಬರ ಕಥಾನಕ ಇದು.
ಹದಿನೈದು ವರ್ಷಗಳ ಹಿಂದೆ ಹತ್ತು ರೂಪಾಯಿ ದಿನಗೂಲಿ ನೌಕರರಾಗಿದ್ದ ಕೆ.ಬಿ.ನಾಗಭೂಷಣ್ ಅವರನ್ನು ಕೆಲಸದ ಮೇಲಿನ ಶ್ರದ್ಧೆ,ಶಿಸ್ತು ಮತ್ತು ಕೃಷಿ ಅನುಭವ ಮಾದರಿ ರೈತರನ್ನಾಗಿ ರೂಪಿಸಿದೆ.
"ರಾಜಕಾರಣಿಯ ಮಗ ರಾಜಕಾರಣಿಯಾಗುತ್ತಾನೆ. ಅಧಿಕಾರಿಯ ಮಗ ಅಧಿಕಾರಿಯಾಗುತ್ತಾನೆ. ರೈತನ ಮಗ ಯಾಕೆ ರೈತನಾಗಬಾರದು?" ಎಂದು ಕೇಳುವ ನಾಗಭೂಷಣ ತಮ್ಮ ಮಗ ಕಿರಣ್ ಅವರನ್ನು ಮಾದರಿ ರೈತನನ್ನಾಗಿಸಿ ರೈತ ಬದುಕಿಗೆ ಘನತೆ ಗೌರವವನ್ನು ತಂದುಕೊಟ್ಟ ಕೃಷಿಕ.
ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುವ ಹಾದಿಯಲ್ಲಿ ಬರುವ ಚಿಕ್ಕಳ್ಳಿ ಸಮೀಪ ಮೊಸಂಬಾಯನಹಳ್ಳಿ ರಸ್ತೆಯಲ್ಲಿ "ಕಿರಣ್ ಸಿರಿ ಫಾರಂ" ಘಟಕ ಒಂದು. ಮೇಗಳಾಪುರದ ಸಮೀಪ "ಕಿರಣ್ ಸಿರಿ ಫಾರಂ" ಘಟಕ ಎರಡು.ದುದ್ದಗೆರೆ ಬಳಿ ಮತ್ತೊಂದು ತೋಟಗಾರಿಕೆ ಬೇಸಾಯ ಮಾಡಲು "ಕಡ್ಲೆ ಮನೆ ತೋಟ" ಎಂಬ ಘಟಕ ಮೂರು. ಹೀಗೆ ಮೂರು ಮಾದರಿ ತೋಟಗಳನ್ನು ರೂಪಿಸುವ ಮೂಲಕ ರೇಷ್ಮೆ ಕೃಷಿಯಲ್ಲಿ ಹೆಚ್ಚು ಆದಾಯಗಳಿಸಿ "ಸಿಲ್ಕ್" ನಾಗಭೂಷಣ್ ಎಂದೇ ಚಿರಪರಿಚಿತರಾಗಿದ್ದಾರೆ.
ಮಗ ಕಿರಣ್ ಎಂಬಿಎ,ಬಿಬಿಎಂ,ಬಿಇ ಓದಿಕೊಂಡು ರೇಷ್ಮೆ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.ಇನ್ಫ್ಪೋಸಿಸ್ನಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಸೊಸೆ ಮದುವೆ ನಂತರ ಕೆಲಸಕ್ಕೆ ಗುಡ್ ಬೈ ಹೇಳಿ ಪತಿ ಕಿರಣ್ ಅವರ ಕೃಷಿಗೆ ಸಾಥ್ ನೀಡುತ್ತಾರೆ. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣುಕೊಡಲು ಯಾರು ಮುಂದೆ ಬರುವುದಿಲ್ಲ ಎಂಬ ಮಾತನ್ನೇ ಕೇಳುತ್ತಿದ್ದ ನಮಗೆ ನಾಗಭೂಷಣ್ ಅವರ ಸಂಸಾರವನ್ನು ನೋಡಿ ಅಚ್ಚರಿ ಮತ್ತು ರೈತ ಬದುಕಿನ ಬಗ್ಗೆ ಹೆಮ್ಮೆ ಅನಿಸಿತು.
ಎಸ್ಸೆಸ್ಸೆಲ್ಸಿ ಫೇಲಾದ ನಾಗಭೂಷಣ್ ಕಾಖರ್ಾನೆಯೊಂದರಲ್ಲಿ ನೌಕರರಾಗಿ, ಟ್ರಾವೆಲ್ ಏಜೆನ್ಸಿ ನಡೆಸಿ, ನಂತರ ಅದರಿಂದ ಬಂದ ಲಾಭದ ಹಣದಲ್ಲಿ ಜಮೀನು ಖರೀದಿಸಿ ರೇಷ್ಮೆ ಕೃಷಿಕರಾಗಿ ಬೆಳೆದು ಬಂದ ಜೀವನ ಪಯಣವೇ ಎಂತಹವರಿಗೂ ಸ್ಪೂತರ್ಿ ನೀಡುವ ಮೂಲಕ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುತ್ತದೆ.
"ವಿಧ್ಯಾಭ್ಯಾಸ ಕಡಿಮೆ.ಆದರೆ ಸೆಂಟ್ರಲ್ ಸಿಲ್ಕ್ ಬೋರ್ಡನವರು ನನ್ನನ್ನು ಡಾ.ನಾಗಭೂಷಣ್ ಎಂದು ಕರೆಯುತ್ತಾರೆ" ಎನ್ನುವ ಇವರನ್ನು ರೇಷ್ಮೆಕೃಷಿಯಲ್ಲಿನ ಅನುಭವ ಕೃಷಿವಿಜ್ಞಾನಿಯನ್ನಾಗಿ ರೂಪಿಸಿದೆ.
ಅವರದೇ ಮಾತುಗಳಲ್ಲಿ ಅವರ ಜೀವನಾನುಭವಗಳನ್ನು ಕೇಳಿ...
ವಲಸೆ ಬಂದವರು : " ನಾವು ಮೂಲತಃ ಕೊಡಗಿನ ಸೋಮವಾರಪೇಟೆ ನಿವಾಸಿಗಳು. ನಮ್ಮ ತಾತ ಮುತ್ತಾತಂದಿರು ಸಂತೆ ಸಂತೆಗೆ ಹೋಗಿ ಕಡ್ಲೆ ವ್ಯಾಪಾರ ಮಾಡಿಕೊಂಡು ಬೆಳೆದವರು. ಸ್ವಾತಂತ್ರ ಬಂದ ಕಾಲದಲ್ಲಿ ತಾತ 150 ಎಕರೆ ಕಾಫಿ ತೋಟದ ಮಾಲೀಕರಾಗಿದ್ದರು. ನಮ್ಮ ತಂದೆ ನಮ್ಮ ತಾತನಿಗೆ ಒಬ್ಬನೆ ಮಗ. ನಮ್ಮ ತಂದೆಗೆ ಇದ್ದ ದುರಭ್ಯಾಸದ ಫಲವಾಗಿ ಆಸ್ತಿಯನ್ನೆಲ್ಲ ಕಳೆದುಕೊಂಡರು.ಆಗ ನಾವು ಅಕ್ಷರ ಸಹ ಬೀದಿಗೆ ಬಿದ್ದೆವು. ನಂತರ ಹೊಟ್ಟೆ ಪಾಡಿಗಾಗಿ  1971 ರಲ್ಲಿ ಮೈಸೂರಿಗೆ ಬಂದು ನೆಲೆ ನಿಂತೆವು"  ಜೀವನದಲ್ಲಿ  ಹಲವಾರು ಕಷ್ಟ ನಷ್ಟ ಅನುಭವಿಸಿ ಮೇಲೆ ಬಂದವರು ನಾವು. ನಮ್ಮ ತಂದೆಗೆ ಏಳೆಂಟು ಜನ ಮಕ್ಕಳು. ನಾನು ನಾಲ್ಕನೇ ಕ್ಲಾಸ್ ಓದುವಾಗಲೇ ನಮ್ಮ ತಂದೆ ಸತ್ತುಹೋದರು. ನಂತರ ನಮ್ಮ ಅಣ್ಣ ನಮ್ಮೆಲ್ಲರನ್ನು ಸಾಕಿ ಸಲುಹಿದರು.
ವಿಧ್ಯಾಭ್ಯಾಸ ಎಸ್ಸ್ಸ್ಸೆಲ್ಸಿ ಅಷ್ಟೆ. ಮುಂದೆ ಓದಲಿಲ್ಲ. ಆದರೆ ಯಾವುದೆ ಸಿರಿಕಲ್ಚರ್ನಲ್ಲಿ ಪದವಿ ಪಡೆದವರಿಗಿಂತ ಹೆಚ್ಚು ತಿಳುವಳಿಕೆ ಇದೆ. ಎಲ್ಲವೂ ಪ್ರಾಕ್ಟಿಕಲ್ ಆಗಿ ಬಂದ ಜ್ಞಾನ. 1971 ರಲ್ಲಿ ಮೈಸೂರಿಗೆ ಬಂದು ಶಾಲೆಗೆ ಸೇರಿದೆ. ಎಸ್ಸೆಎಸ್ಸೆಲ್ಸಿಯಲ್ಲಿ ಎರಡು ಸಬ್ಜೆಕ್ಟ್ ಫೇಲ್ ಆದೆ. ಆವಾಗ ನಮ್ಮಣ್ಣ ನನ್ನನ್ನು ಹೊಡೆದು ಮೂರು ದಿನ ಊಟಕೊಡ್ದೆ ಮನೆಯಿಂದ ಆಚೆ ಇಟ್ಟಿದ್ದರು.ಕೊನೆಗೆ ಬೇರೆ ದಾರಿ ಕಾಣದೆ ಯಾರ್ಯಾರನೋ ಕೈಕಾಲು ಹಿಡಿದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. 150 ರೂಪಾಯಿ ತಿಂಗಳ ಸಂಬಳದಲ್ಲಿ ಮೂರು ವರ್ಷ ಕೆಲಸ ಮಾಡಿದೆ.
ಬಸ್ ಏಜೆಂಟ್ : ಇದೇ ಸಂದರ್ಭದಲ್ಲಿ ನಮ್ಮಣ್ಣ ಬಸ್ ಏಜೆಂಟ್ ಆಗಿದ್ದರು.  ಬಸ್ ಓನರ್ ಹತ್ರ ಹೋಗಿ ನನಗೂ ಬಸ್ ಏಜೆಂಟ್ ಕೆಲಸ ಕೊಡಿ. ಫ್ಯಾಕ್ಟರಿ ಕೆಲಸ ಮಾಡಕ್ಕೆ ಆಗಲ್ಲ ಅಂತ ಕೇಳಕೊಂಡೆ. ಆಗ ಅವರು ಆಯ್ತು ದಿನಕ್ಕೆ ಹತ್ತ್ ರೂಪಾಯಿ ಸಂಬಳ ಕೊಡ್ತಿನಿ ಅಂದ್ರು. ತಿಂಗಳಿಗೆ 300 ರೂಪಾಯಿ ಸಂಬಳಕ್ಕೆ ಬಸ್ ಏಜೆಂಟ್ ಕೆಲಸಕ್ಕೆ ಸೇರಿಕೊಂಡೆ.
ಅಲ್ಲಿಂದ ನನ್ನ ನಿಜವಾದ ಜೀವನದ ಜನರ್ಿ ಆರಂಭವಾಯ್ತು. 1978-79 ರ ಸಮಯ ಅದು. ನನ್ನ ಕೆಲಸ ನೋಡಿದ ಟೋರಿಸ್ಟ್ಗಳು ನನಗೆ ಒಂದು,ಎರಡ್ ರೂಪಾಯಿ ಟಿಫ್ಸ್ ಕೊಡ್ತಾ ಇದ್ರು. ಆ ದುಡ್ಡನ್ನೆಲ್ಲಾ ಕೂಡಿಡುತ್ತಾ ಬಂದೆ. ಬಸ್ ಓನರ್ ನನ್ನ ಶ್ರಮ ನೋಡಿ ಸಂಬಳ ಜಾಸ್ತಿ ಮಾಡ್ತ ಬಂದ್ರು. ನಂತರದ ದಿನಗಳಲ್ಲಿ ನಾನು ಅದೇ ಕಂಪನಿಯಲ್ಲಿ ಮ್ಯಾನೇಜರ್ ಆದೆ. ನಂತರ ಅದೇ ಕಂಪನಿ ಓನರ್ ಕೂಡ ಆದೆ. "ಶೇಖರ್ ಲೈನ್ ಟೂರಿಸ್ಟ್ ಕಂಪನಿ" ಅಂತ ಮೈಸೂರಿನ ಗಾಂಧಿ ಸ್ಕ್ವೈರ್ನಲ್ಲಿ ಈಗಲೂ ಇದೆ. ಹಿಂದೆ ಕೆ.ವಿ.ಮೋಟಾರ್ ಸವರ್ಿಸ್ ಅಂತ ಇತ್ತು. ಮುಂದೆ ನಾನು ಅದೇ ಕೆವಿ ಮೋಟಾರ್ ಸವರ್ಿಸ್ನ ಮಾಲೀಕನೂ ಆದೆ. ಸುಖ ಅನ್ನೋದು ಆಗ ನನಗೆ ಮರೀಚಿಕೆ ಆಗಿತ್ತು.
ನಾನು ಟ್ರಾವೆಲ್ ಏಜೆನ್ಸಿಲಿ ಇದ್ದಾಗ, ನನ್ನ ಫೀಲ್ಡ್ ಸರಿ ಇಲ್ಲ. ನನ್ನ ಮಗ ನನ್ನ ವೃತ್ತಿ ಮಾಡುವುದು ಬೇಡ. ವ್ಯವಸಾಯ ಮಾಡಲಿ ಅಂತ 2000 ನೇ ಇಸವಿಯಲ್ಲಿ ಈ ಜಮೀನು ಖರೀದಿಸಿದೆ. ಇದೇ "ಕಿರಣ್ ಸಿರಿ ಫಾರಂ" ಯುನಿಟ್ ಒನ್. ಆದರೆ ನನ್ನ ಮಗ ಕಿರಣ ಮೊದಲು ನನ್ನ ಹಾಗೆ ಓದಿನಲ್ಲಿ ದಡ್ಡನಾಗಿದ್ದ. ಎಸ್ಸೆಸ್ಸೆಲ್ಸಿ ಫೇಲಾಗ್ತಾನೆ ಅವನಿಗೆ ಕೋಳಿ ಫಾರಂ ಹಾಕಿಕೊಡೋಣ ಅಂತ ಇಲ್ಲಿ ಐದು ಎಕರೆ ಜಮೀನು ಖರೀದಿ ಮಾಡಿದ್ದೆ. ಆದರೆ ಎಸ್ಸೆಸೆಲ್ಸಿ ಪಾಸಾಗಿಬಿಟ್ಟ. ನನಗೆ ಬಹಳಾ ಬೇಜಾರಾಯ್ತು. ಕೋಳಿಫಾರಂ ಮಾಡೋಣ ಅಂತ ಜಮೀನು ಖರೀದಿಸಲು ಬಡ್ಡಿ ಸಾಲ ತೆಗೆದುಕೊಂಡಿದ್ದೆ. ಜಮೀನು ಮಾರಾಟಕ್ಕೆ ಇಟ್ಟೆ ಯಾರು ತಗೆದುಕೊಳ್ಳಲು ಮುಂದೆ ಬರಲಿಲ್ಲ. ನಂತರ ಎರಡು ವರ್ಷ ಜಮೀನನ್ನು ಖಾಲಿ ಬಿಟ್ಟೆ. ನಂತರ ಪಿಯುಸಿ ಫೇಲಾದ. ನನಗೆ ತುಂಬಾ ಸಂತೋಷ ಆಯ್ತು. ತುಂಬು ಹೃದಯದಿಂದ ವೆಲ್ಕಮ್ ಮಾಡ್ದೆ.
ಸಿರಿತನ ತಂದ ಸಿರಿಕಲ್ಚರ್ : ನನಗಿಂತ ಜಾಸ್ತಿ ಓದಿದ್ದೀಯಾ ಬಾ ಅಂತ ನನ್ನ ಮಗ ಕಿರಣ್ನನ್ನು ಪ್ರೀತಿಯಿಂದ ಸ್ವಾಗತಿಸಿದೆ. ಕೋಳಿಫಾರಂ ಮಾಡುವ ಮೊದಲು ನಾಲ್ಕಾರು ತೋಟಗಳಿಗೆ ಹೋಗಿ ರೈತರ ಅನುಭವ ಕೇಳಿದೆ. ಎಲ್ಲರೂ ತಮ್ಮ ಕಷ್ಟಗಳನ್ನೇ ಹೇಳಿಕೊಂಡರು. ಆಗ ನೂರೆಂಟು ರೋಗ ಬಂದು ಕೋಳಿ ಮರಿಗಳೆಲ್ಲಾ ಸಾಯ್ತಾ ಇದ್ವು. ಕೋಳಿಫಾರಂಗಿಂತ ಸಿರಿಕಲ್ಚರ್ ಮಾಡಿ ಅಂತ ಹಲವರು ಸಲಹೆ ನೀಡಿದ್ರು. ತಿಂಗಳಿಗೆ  ಎಂಟಂತ್ತು ಸಾವಿರ ರೂಪಾಯಿ ಸಿಗುತ್ತೆ ರೇಷ್ಮೆ ಕೃಷಿ ಮಾಡಿ ಅಂದ್ರು. 
ಅದು 2002 ನೇ ಇಸವಿ. ಜಮೀನಿನಲ್ಲಿ ಐದು ತಿಂಗಳು ಶ್ರಮಪಟ್ಟು ಕೆಲಸ ಮಾಡಿ ರೇಷ್ಮೆ ಕಡ್ಡಿ ನಾಟಿ ಮಾಡಿದೆವು. ಪಿಯುಸಿ ಫೇಲಾಗಿದ್ದ ಮಗನಿಗೆ ಜಮೀನಿನ ಕೆಲಸ ಕಷ್ಟ ಅಂತ ಗೊತ್ತಾಗೋಯ್ತು. ನಂತರ ಪಿಯುಸಿ ಪಾಸ್ ಮಾಡಿ ಬಿಬಿಎಂ, ಎಂಬಿಎ,ಬಿಇ ಮಾಡಿದ. ಕೆಲಕಾಲ ನೌಕರಿಗೂ ಹೋಗಿದ್ದ ಅದಕ್ಕಿಂತ ಕೃಷಿನೇ ಮೇಲೂ ಅಂತ ಈಗ ಅವನೇ ರೇಷ್ಮೆ ನೋಡಿಕೊಳ್ಳುತ್ತಿದ್ದಾನೆ.
ಅನುಭವ ಕಲಿಸಿತು ಪಾಠ : ರೇಷ್ಮೆ ಕೃಷಿ ಮಾಡ್ದಾಗ ನಮಗೆ ಏನೇನೂ ಅನುಭವ ಇರಲಿಲ್ಲಾ. ರೇಷ್ಮೆ ಕಡ್ಡಿ ಹಾಕಿ ಐದು ತಿಂಗಳಾದ ಮೇಲೆ ಜಮೀನಿಗೆ ಬಂದ ರೇಷ್ಮೆ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ವರನಾಗಭೂಷಣ ಅವರು "ಇದು ಕಲ್ಲು ಭೂಮಿ ಇಲ್ಲಿ ರೇಷ್ಮೆ ಬೆಳೆಯೋದು ಕಷ್ಟ ನಿನಗೆ ಬುದ್ದಿ ಇಲ್ಲ" ಅಂತ ಹೇಳಿ ಹೋದರು.ಇದನ್ನೇ ನಾನು ಚಾಲೇಂಜಿಂಗ್ ಆಗಿ ತೆಗೆದುಕೊಂಡೆ. ಕೃಷಿ ಮಾಡುವುದು ನನಗೆ ಅನಿವಾರ್ಯ ಕೂಡ ಆಗಿತ್ತು. ರೇಷ್ಮೆ ಬೆಳೆದು ತೋರಿಸಿದೆ. ಎರಡು ವರ್ಷ 2005-06 ವರೆಗೂ ಹೈಬ್ರಿಡ್ ಬೆಳೆ ಬೆಳೆದೆ.ಮೊದಲ ಸಲ ನನಗೆ ಆರು ಸಾವಿರ ರೂಪಾಯಿ ಆದಾಯ ಬಂದಿತ್ತು. ಅದರಿಂದ ನನಗಾದ ಖುಷಿ ಅಷ್ಟಿಷ್ಟಲ್ಲಾ.
ನಂತರ ಹಿಂತಿರುಗಿ ನೋಡಲೆ ಇಲ್ಲ. ಎರಡು ವರ್ಷ ಹೈಬ್ರಿಡ್ ಮಾಡ್ದೆ. ಶ್ರಮ ಪಟ್ಟು ಮಾಡ್ದೆ. ರೇಷ್ಮೆ ಮಾರುಕಟ್ಟೆಗೆ ನನ್ನ ಗೂಡು ಹೋದರೆ. ಅಲ್ಲಿ ಚೆಕ್ ಮಾಡೋರು. ರ್ಯಾಂಡಿಟಾ ಚೆಕ್ ಅಂತ. ಅಂದ್ರೆ ಒಂದು ಗೂಡಿನಲ್ಲಿ ಎಷ್ಟು ನೂಲು ಇದೆ ಅಂತ. ನನಗೆ ರೆಟಲ್ಲು ಫಸ್ಟ್ ಕೊಡೋರು. ಪ್ರತಿಯೊಂದು ಸಟರ್್ಫಿಕೇಟ್ಗಳನ್ನು ಇಡ್ತಾ ಬಂದೆ. ಎರಡು ವರ್ಷದ ನಂತರ ಕೇಂದ್ರ ರೇಷ್ಮೆ ಮಂಡಳಿಯವರು ನಮ್ಮ ತೋಟಕ್ಕೆ ಭೇಟಿ ನೀಡಿದರು. ಸೀಡ್ ಮಾಡು ಸಹಾಯ ಮಾಡ್ತೀವಿ ಅಂದ್ರು. ಆಗ ನನಗೆ ಸೀಡ್ ಅಂದ್ರೆ ಏನೂ ಅಂತನೂ ಗೊತ್ತಿರಲಿಲ್ಲ. ಆಗ ಸೀಡ್ ಕಕೂನ್ಗೆ ಕೆ.ಜಿ.ಗೆ 350 ರೂಪಾಯಿ ಕೊಡ್ತಾ ಇದ್ರು. ಈಗ 800 ರೂ.ಗೆ ಕೊಡ್ತಾ ಇದ್ದಾರೆ.
ನೈಸಗರ್ಿಕ ಕೃಷಿಯತ್ತ ಒಲವು : ಆರಂಭದಲ್ಲಿ ರೇಷ್ಮೆ ಕೃಷಿ ಶುರು ಮಾಡ್ದಾಗ ರಾಸಾಯನಿಕ ಪದ್ಧತಿಯಲ್ಲೇ ಬೆಳಿತಾ ಇದ್ವಿ.  ನೈಸಗರ್ಿಕ ಕೃಷಿ ಆರಂಭಿಸಿ ಆರು ವರ್ಷ ಆಯ್ತು.ನಾನು ಬೇರೆ ಬೇರೆ ರೈತರ ತೋಟಗಳಿಗೂ ಬೇಟಿ ಮಡ್ತಾ ಇದ್ದೆ. ಹಸು ಕಟ್ಟಿ ಕೊಟ್ಟಿಗೆ ತೋಳ್ದ ನೀರನ್ನು ರೇಷ್ಮೆ ತೋಟಕ್ಕೆ ಬಿಡ್ತಾ ಇದ್ದೆ. ಅಲ್ಲಿ ಸೊಪ್ಪು ಬಹಳ ದಟ್ಟವಾಗಿ ಹಸಿರಾಗಿ ಬೆಳಿತಾ ಇತ್ತು. ರಾಸಾಯನಿಕ ಗೊಬ್ಬರ ಹಾಕಿದ ಕಡೆ ಸೊಪ್ಪು ಕಲರ್ರೇ ಇರ್ತಾ ಇರಲಿಲ್ಲಾ. ಅದನ್ನು ಗಮನಿಸಿದಾಗ ನನಗೆ ನೈಸಗರ್ಿಕ ಕೃಷಿಯ ಮಹತ್ವ ಅರ್ಥ ಆಯ್ತು.
ಬಯೋಡೈಜಸ್ಟರ್ : ನಾಲ್ಕಾರು ಕಡೆ ಹೋಗಿ ನೋಡಿ ಬಂದ ಮೇಲೆ ಬೇರೆ ಬೇರೆ ಅನುಭವ ಆಯ್ತು. ನೈಸಗರ್ಿಕ ಕೃಷಿ ಮಾಡಲು ಜೀವಾಮೃತ ಎಷ್ಟು ಮಹತ್ವ ಅಂತ ಗೊತ್ತಾಯ್ತು. ಬಯೋಡೈಜಸ್ಟರ್ ಕಟ್ಟಿಕೊಂಡೆವು. ಇದೊಂದು ತುಂಬಾ ವೈಜ್ಞಾನಿಕವಾದ ಪದ್ಧತಿಯಲ್ಲಿ ಕಟ್ಟಿರುವ ಬಯೋಡೈಸ್ಟರ್ ತೊಟ್ಟಿ. 21 ಅಡಿ ಉದ್ದ, 14 ಅಡಿ ಅಗಲ, 15 ಅಡಿ ಆಳ ಇದು ಡೈಜಸ್ಟರ್ ತೊಟ್ಟಿ. ಇನ್ನೊಂದು ರಸಸಾರ (ಜ್ಯೂಸ್) ಸಂಗ್ರಹಣ ತೊಟ್ಟಿ. ಇದು 18 ಅಡಿ ಆಳ, ಐದು ಅಡಿ ಅಗಲ, 14 ಅಡಿ ಉದ್ದ ಇದೆ. ದೊಡ್ಡ ತೊಟ್ಟಿಗೆ ಪೈಪ್ ಲೈನ್ ಕೊಟ್ಟು ಆ ರಸಸಾರವನ್ನು ಸಣ್ಣ ತೊಟ್ಟಿಗೆ ಬರುವಂತೆ ಮಾಡಿದ್ದೇವೆ. ಇಲ್ಲಿ ಸಂಗ್ರಹವಾದ ರಸಸಾರವನ್ನು ಮೋಟರ್ ಇಟ್ಟು ಡ್ರಿಪ್ ಮೂಲಕ ಗಿಡಗಳಿಗೆ ಕೊಡುತ್ತೇವೆ.
ರೇರಿಂಗ್ ಹೌಸ್ : ಸಿದ್ದಾರ್ಥ ಲೇಔಟ್ನ ಕೆನರಾ ಬ್ಯಾಂಕ್ ಅವರು ಎರಡು ಲಕ್ಷ ರೂ ಸಾಲ ಕೊಟ್ಟಿದ್ದರು. ಆ ಹಣದ ಜೊತೆ ನನ್ನದು ಸ್ವಲ್ಪ ಹಣ ಹಾಕಿ ಮೊದಲ ರೇರಿಂಗ್ ಹೌಸ್ ಕಟ್ಟಿದೆ. 60 ಅಡಿ ಉದ್ದ 21 ಅಡಿ ಅಗಲ.  ಆಂಟಿ ಚೇಂಬರ್ 15 ಅಡಿ ಉದ್ದ 21 ಅಡಿ ಅಗಲ. ಮೊದಲ ರೇರಿಂಗ್ ಹೌಸ್ ಉದ್ಘಾಟನೆಗೆ ಸಿಎಸ್ಆರ್ಎನ್ಟಿ ಡೈರೆಕ್ಟರ್ ಶಂಕರ್ ದಂಡಿನ ಬಂದಿದ್ದರು.
ನಂತರ ರೇಷ್ಮೆಯಲ್ಲಿ ಒಳ್ಳೆಯ ಆದಾಯ ಬರಲು ಶುರುವಾಯ್ತು. ಹಣ ಸಂಪಾದನೆ ಮಾಡ್ದೆ. 2010 ರಲ್ಲಿ ಇನ್ನೊಂದು ರೇರಿಂಗ್ ಹೌಸ್ ಕಟ್ಟಿದೆ.ಅದು 70 ಅಡಿ ಉದ್ದ 24 ಅಡಿ ಅಗಲ 18 ಅಡಿ ಎತ್ತರ. ಅದಕ್ಕೆ 10 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಅದನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದ್ರು. ಈ ಥರ ನನ್ನ ಸಿರಿಕಲ್ಚರ್ ಜನರ್ಿ ಆರಂಭವಾಯ್ತು.
ಯುನಿಟ್ ಒಂದರಲ್ಲಿ ನನಗೆ ತಿಂಗಳಿಗೆ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ಬರಲು ಶುರುವಾಯ್ತು. ಐದು ಎಕರೆ ಜಮೀನಿನಲ್ಲಿ ಮೂರುವರೆ ಎಕರೆ ಮಾತ್ರ ರೇಷ್ಮೆ ಕಡ್ಡಿ ಇದೆ. ಇದೆ ಹಣದಲ್ಲಿ ಮೇಗಳಾಪುರದ ಹತ್ತಿರ ಮತ್ತೆ ಏಳು ಎಕರೆ ಜಮೀನು ಖರೀದಿಸಿದೆ. ಅದನ್ನು ಯುನಿಟ್ 2 ಅಂತ ಕರೆದು ಅಲ್ಲೂ ರೇಷ್ಮೆ ಮಾಡ್ತಾಇದ್ದೀನಿ. ಅದು 100 ಅಡಿ ಉದ್ದ, 24 ಅಡಿ ಅಗಲ ಇದೆ.ಅದನ್ನು ವೈಜ್ಞಾನಿಕ ಪದ್ಧತಿಯಲ್ಲಿ ಕಟ್ಟಲಾಗಿದ್ದು 400 ಮೊಟ್ಟೆ ಮೇಯಿಸಬಹುದು. ಅಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಅಂತರದಲ್ಲಿ ಮೂರು ಭಾಗಗಳಾಗಿ ರೇಷ್ಮೆ ಕಡ್ಡಿ ಹಾಕಿದ್ದೇನೆ.       ರೇಷ್ಮೆಗೆ ಭವಿಷ್ಯ ಇದೆ : ರೈತರು ಒಂದು ವರ್ಷದ ಹಿಂದೆ ದರ ಕಡಿಮೆ ಆಯ್ತು ಅಂತ ರೇಷ್ಮೆ ಕಡ್ಡಿ ಕಿತ್ತಾಕಿ ಸುದ್ದಿಯಾದರು.ಅದು ಗೂಡಿನ ದರ ಇಳಿತು ಅಂತ ಅಲ್ಲಾ . ರೇಷ್ಮೆ ಗೂಡಿನ ದರ ವರ್ಷದಲ್ಲಿ ಒಂದೆರಡು ಬಾರಿ ಕಡಿಮೆ ಆಗುತ್ತೆ ನಿಜ. 10 ಬೆಳೆಯಲ್ಲಿ ಒಂದೆರಡು ಸಲ ಗೂಡಿನ ದರ ಕಡಿಮೆ ಆದರೆ ತೊಂದರೆ ಆಗಲ್ಲ.
ರೇಷ್ಮೆ ಕಡ್ಡಿ ಕಿತ್ತು ಹಾಕಿದರೆ ಮತ್ತೆ ಅದನ್ನು ಬೆಳೆಸಲು ಆರು ತಿಂಗಳು ಬೇಕು. ಎರಡು ವರ್ಷದಲ್ಲಿ ಒಂದೇ ಸಾರಿ ರೇಟ್ ಕಡಿಮೆ ಆಗಿದ್ದು. ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದ ತಕ್ಷಣ ಹರಜಾಗುತ್ತೆ. ಐದು-ಹತ್ತು ರೂಪಾಯಿ ದರ ಕಡಿಮೆ ಆಗಬಹುದು. ಆದರೆ ತಕ್ಷಣ ಕೈಗೆ ಹಣ ಬರುತ್ತೆ. ಅದೆ ಕಬ್ಬು ಬೆಳೆದರೆ, 15 ತಿಂಗಳು ಕಾಯಬೇಕು. ಕಬ್ಬು ಬೆಳೆದ ರೈತ ಅದರ ತೂಕವನ್ನು ನೋಡಂಗಿಲ್ಲ. ಅವರು ಹಾಕಿದ್ದೆ ತೂಕ. ಮೂರು ತಿಂಗಳು ಬಿಟ್ಟು ಹಣ ಕೊಡ್ತಾರೆ. ತೋಟಗಾರಿಕೆ , ತರಕಾರಿ ಬೆಳೆಯಲ್ಲಿ ಮೂರು ತಿಂಗಳಿಗೆ, ಆರು ತಿಂಗಳಿಗೆ ಒಂದು ಸಾರಿ ಹಣ ಬರುತ್ತೆ. ಅದಕ್ಕಿಂತ ಇದು ಬೆಟರ್ ಅನ್ನುವುದು ನನ್ನ ಅನುಭವ. ಪ್ರತಿ ತಿಂಗಳು ಹಣ. ನಮ್ಮ ಕಣ್ಣಮುಂದೆ ತೂಕ. ತಕ್ಷಣ ಹಣ. ಅಲ್ಲೆ ಡ್ರಾ ಅಲ್ಲೆ ಬಹುಮಾನ.
ಮುಂದಿನ ವರ್ಷಗಳಲ್ಲಿ ರೇಷ್ಮೆಕೃಷಿಗೆ ಉತ್ತಮ ಭವಿಷ್ಯ ಇದೆ. ಅಂದು ರೇಷ್ಮೆ ವ್ಯವಸಾಯ ಕಷ್ಟ ಇತ್ತು.ಹಣಕ್ಕೂ ಕೊರತೆ ಇತ್ತು ಆದರೂ ರೇಷ್ಮೆ ಬೆಳಿತಾ ಇದ್ರು. ಸೀರೆ, ಬಟ್ಟೆಗಷ್ಟೇ ರೇಷ್ಮೆ ಉಪಯೋಗಿಸ್ತಾ ಇದ್ರು. ಇಂದು ಅದೇ ರೇಷ್ಮೆ ನಾವು ಓಡಿಸುವ ವಾಹನದ ಪ್ರತಿ ಚಕ್ರದಲ್ಲೂ ಇದೆ. ವಾಹನದ ಚಕ್ರಗಳಲ್ಲಿ ರಬ್ಬರ್ ಜೊತೆ ತಂತಿ ಬಳಸುವ ಬದಲು  ಸಿಲಿಕಾನ್ ದಾರ ಬಳಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಒಲಿಗೆ ಹಾಕಲು ಸಿಲಿಕಾನ್ ಥ್ರೆಡ್. ಮೊಬೈಲ್, ಟಿವಿ, ಕೇಬಲ್ ಎಲ್ಲಾದರಲ್ಲೂ ಸಿಲಿಕಾನ್ ಥ್ರೆಡ್ ಬಳಕೆಯಾಗುತ್ತಿದೆ. ಹಾಗಾಗಿ ರೇಷ್ಮೆ ಬೆಳೆಯಲು ಯಾರು ಹೆದರಬೇಕಾಗಿಲ್ಲಾ. ಮುಂದೆಯೂ ತಂತ್ರಜ್ಞಾನಗಳ ಬಳಕೆಯಲ್ಲಿ ರೇಷ್ಮೆಯ ಉಪಯೋಗ ಹೆಚ್ಚಾಗಲಿದೆ.
ಊಜಿ ನೊಣ ನಿಯಂತ್ರಣ : ರೇಷ್ಮೆ ಕೃಷಿಯಲ್ಲಿ ಊಜಿ ನೊಣ ನಿಯಂತ್ರಣ ಮುಖ್ಯ. ಇದಕ್ಕಾಗಿ ಇಲಾಖೆಯವರು ಊಜಿ ಟ್ರ್ಯಾಪ್, ಊಜಿ ಟ್ಯಾಬ್ಲೆಟ್ ಅಂತ ಮಾಡಿದ್ದಾರೆ. ಆದರೆ ನಾವು ಸ್ಥಳೀಯವಾಗಿ ನಮ್ಮದೆ ತಂತ್ರಜ್ಞಾನ ಬಳಸಿ ಊಜಿ ನಿಯಂತ್ರಣ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಒಂದು ಹಳೆ ಬಕೆಟ್ ಸಾಕು. ಒಂದು ಲೀಟರ್ ಮೊಸರು, 4 ಅಚ್ಚು ಬೆಲ್ಲ, ಸ್ವಲ್ಪ ನೀರು, ಕೊಳೆತ ಬಾಳೆ, ಕಿತ್ತಳೆ, ಸೇಬು, ಪಪ್ಪಾಯ ಹಾಕಿ  ಕಡ್ಡಿಯಲ್ಲಿ ತಿರುಗಿಸಿದರೆ ಮೂರು ನಾಲ್ಕು ದಿನದಲ್ಲಿ  ಡೀಕಾಂಪೋಸ್ ಆಗಿ ವಾಸನೆ ಬರುತ್ತೆ. ಅದು ಗಾಳಿಯಲ್ಲಿ ಬೆರೆತು ಊಜಿ ನೊಣ ಆ ವಾಸನೆಗೆ ತಿನ್ನಲು ಬಂದು ಈ ಬಕೆಟ್ನಲ್ಲಿ ಬಿದ್ದು ಸಾಯುತ್ತವೆ.
"ಪ್ರತಿ ಬೆಳೆ ಆದಗಲೂ ರೇರಿಂಗ್ ಹೌಸ್ಅನ್ನು ತುಂಬಾ ಸ್ವಚ್ಚತೆಯಾಗಿ ಇಡಬೇಕು. ತಕ್ಷಣ ಬೆಡ್ ಕ್ಲೀನ್ ಮಾಡಬೇಕು. ಯಾಕೆಂದರೆ ಹುಳು ಸತ್ತು ಹೋಗಿರುತ್ತೆ, ಊಜಿ ನೊಣ ಒಡೆದು ರೋಗ ಹರಡುತ್ತೆ ಪಿಕ್ಕೆಯಲ್ಲಿರುವ ಬ್ಯಾಕ್ಟೇರಿಯಾ ಸಂದಿಗೆಲ್ಲಾ ಸೇರಿಕೊಂಡು ಕೊಟ್ಯಾಂತರ ಸಂಖ್ಯೆಯಲ್ಲಿ ರೋಗಾಣುಗಳು ಹೆಚ್ಚಳವಾಗಿ ಬಿಡುತ್ತವೆ. ಅದಕ್ಕಾಗಿ ತಕ್ಷಣ ಕಸವನ್ನೆಲ್ಲಾ ತೆಗೆದು ಬಿಸಿಲಿಗೆ ಹಾಕಬೇಕು. ಇಲ್ಲ ಗುಂಡಿ ತೆಗೆದು ಮಣ್ಣಿನಲ್ಲಿ ಮುಚ್ಚಬೇಕು. ಬ್ಲೀಚಿಂಗ್ ಪೌಡರ್, ಸುಣ್ಣ ,ಸ್ಯಾನಿಟೆಕ್ ಕೆಮಿಕಲ್ನಲ್ಲಿ ಹುಳು ಸಾಕಾಣಿಕೆ ಮನೆಯನ್ನು ತೊಳೆಯಬೇಕು. ಇದನ್ನೆಲ್ಲ ವಿಜ್ಞಾನಿಗಳನ್ನು ಕೇಳಿಕೊಂಡೆ ಮಾಡಬೇಕು. ಮನೆಯ ಅಳತೆಗೆ ಎಷ್ಟು ಕೆಜಿ ಔಷದ ಹಾಕಬೇಕು ಅಂತ. ಒಂದು ರ್ಯಾಕ್ನಿಂದ ಇನ್ನೊಂದು ರ್ಯಾಕ್ಗೆ ಕನಿಷ್ಟ ಎರಡು ಅಡಿ ಇದ್ದರೆ ಉತ್ತಮ.  ಯಂತ್ರೋಪಕರಣ ಇಲ್ಲದೆ ರೇಷ್ಮೆ ಕೃಷಿ ಬೇಡ. ಆಳುಗಳ ಮೇಲೆ ಅವಲಂಭಿತರಾಗಬಾರದು. ಎಕರೆಗೆ 1500 ಕಡ್ಡಿ ಹಾಕಿದರೆ ಸಾಕು. 200 ಮೊಟ್ಟೆ ಸಾಕಾಣಿಕೆ ಮಾಡಬಹುದು.
ಪ್ರತಿ ತಿಂಗಳು ಯಾವ ಸಾಫ್ಟ್ವೇರ್ ಉದ್ಯೋಗಿಯೂ ಪಡೆಯದ ಸಂಬಳವನ್ನು ಸಂಪಾದನೆ ಮಾಡಬಹುದು. ಯುವಕರು ರೇಷ್ಮೆ ಕೃಷಿಗೆ ಬರುತ್ತಿದ್ದಾರೆ. ನಮ್ಮ ತೋಟ ನೋಡಲು ಪ್ರತಿ ತಿಂಗಳು ಮೂರ್ನಾಲ್ಕು ತಂಡಗಳಲ್ಲಿ ಬರುತ್ತಾರೆ. ರಾಜ್ಯ ಮತ್ತು ಕೇಂದ್ರ ರೇಷ್ಮೆ ಇಲಾಖೆಯವರು ಕರೆದುಕೊಂಡು ಬಂದು ನಮ್ಮ ರೇಷ್ಮೆಕೃಷಿ ವಿಧಾನವನ್ನು ತೋರಿಸುತ್ತಾರೆ. ರೇಷ್ಮೆಕೃಷಿ ಸಮಾಜದಲ್ಲಿ ನನ್ನನ್ನು ಒಬ್ಬ ಗಣ್ಯವ್ಯಕ್ತಿಯನ್ನಾಗಿ ಮಾಡಿದೆ" ಎಂದು ನಾಗಭೂಷಣ್ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಹೆಚ್ಚಿನ ಮಾಹಿತಿಗೆ 7353593007 ಅಥವಾ 9945614007 ಸಂಪಕರ್ಿಸಬಹುದು.




ಭಾನುವಾರ, ಡಿಸೆಂಬರ್ 4, 2016

ಕೃಷಿಯಲ್ಲೂ ಸೌಂದರ್ಯ ಪ್ರಜ್ಞೆ ಮೆರೆದ ಕೊಪ್ಪಲಿನ ಹುಡುಗ
 ಒಂದೇ ಎಕರೆಯಲ್ಲಿ ಸಮಗ್ರ ಬೇಸಾಯ # ಸಣ್ಣ ರೈತರಿಗೆ ಮಾದರಿಯಾದ ಸುರೇಶ
ಮೈಸೂರು : ಒಂದು ಎಕರೆ ಹದಿನೆಂಟು ಗುಂಟೆ ಪ್ರದೇಶ. ಅಲ್ಲೊಂದು ಮೀನು ಸಾಕಾಣಿಕೆ ಸಣ್ಣಕೆರೆ ಹಾಗೂ ವಾಸದ ಮನೆ. ರಸ್ತೆ ಸೇರಿ ಇದಕ್ಕಾಗಿ ಸುಮಾರು ಹದಿನೆಂಟು ಗುಂಟೆ ಪದೇಶ ಬಳಕೆಯಾಗಿದೆ. ವ್ಯವಸಾಯ ಉದ್ದೇಶಕ್ಕಾಗಿ ಉಳಿದಿರುವುದು ಕೇವಲ ಒಂದು ಎಕರೆ ಪ್ರದೇಶ. ಅಲ್ಲಿ ಅಚ್ಚರಿ ಪಡುವಂತೆ ಬೆಳೆದು ನಿಂತಿರುವ 50 ತೆಂಗು, 35 ಸಪೋಟ,17 ಮಾವು,150 ಅಡಿಕೆ, ಲಿಚ್ಚಿ 3, ಜಂಬೂ ನೇರಳೆ 6, ಬೆಟ್ಟದ ನೆಲ್ಲಿ ,ಕಿರುನೆಲ್ಲಿ,ಚಿರ್ನೆಲ್ಲಿ,ಪನ್ನೆರಳೆ ,ಸೀಬೆ ತಲಾ 2, ಮೊಸಂಬಿ,ಕಿತ್ತಳೆ,ಬಾದಾಮಿ,ಈರಳೆಕಾಯಿ,ಚಕೋತ್ತ ತಲಾ 1 ಅಲ್ಲದೆ ಕಾಳು ಮೆಣಸು 60, ಕಾಡು ಸಪೋಟ 3, ಚಕ್ಕೆ 5, ಹಾಲ್ ಫನ್ 5, ನುಗ್ಗೆ 10, ಜಿ9 ಬಾಳೆ 200, ಹಲಸು 5. 300 ನಾಟಿ ಕೋಳಿ, 2000 ಮೀನು, ಹತ್ತು ಲವ್ ಬಡ್ಸರ್್,15 ಪಾರಿವಾಳ.
ಇಷ್ಟೆಲ್ಲಾ ಒಂದು ಎಕರೆ ಪ್ರದೇಶದಲ್ಲಿ ಇರಲು ಸಾಧ್ಯವೆ !. ಹೌದು ಸಾಧ್ಯ. ಇದು ನಿಮಗೆ ಅಚ್ಚರಿ ಅನಿಸಬಹುದು. ಇದೆಲ್ಲವನ್ನು ಸಾಧಿಸಿ ತೋರಿಸಿದ್ದಾನೆ ಮೈಸೂರಿನ ಕೆ.ಜಿ.ಕೊಪ್ಪಲಿನ ಯುವಕ ಎಸ್.ಸುರೇಶ್. ಸುಸ್ಥಿರ, ಸಮಗ್ರ ಬೇಸಾಯ ಪದ್ಧತಿ ಅಳವಡಿಕೊಂಡು ಮಾರುಕಟ್ಟೆ ಮತ್ತು ಬೆಳೆ ವೈವಿಧ್ಯತೆಯಲ್ಲಿ ಸಮನ್ವಯತೆ ಸಾಧಿಸುವ ಮೂಲಕ ಸುರೇಶ್ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.
ಎರಡು ಎಕರೆ ಭೂಮಿ ಹೊಂದಿರುವ ರೈತರು ತಮಗಿರುವ ಕಡಿಮೆ ಭೂಮಿಯಲ್ಲಿ ಏನು ಬೆಳೆಯಲು ಆಗುವುದಿಲ್ಲ. ಐದೋ, ಹತ್ತೋ ಎಕರೆ ಭೂಮಿ ಇದ್ದರೆ ಕೃಷಿ ಮಾಡಬಹುದಿತ್ತು ಎಂದುಕೊಂಡು ತಮಗಿರು ಕಡಿಮೆ ಜಮೀನನ್ನು ಬಿಟ್ಟು ಕೂಲಿಗಳಾಗಿ ನಗರದ ಪಾಲಾಗಿರುವುದನ್ನು ಕಾಣುತ್ತೇವೆ. ಅಂತಹ ರೈತ ಮಿತ್ರರು ಸುರೇಶ್ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ನಗರದಲ್ಲಿ ಹುಟ್ಟಿ, ಎಸ್ಸೆಸ್ಎಲ್ಸಿ ಫೇಲಾಗಿ ಹಳ್ಳಿಯಲ್ಲಿ ಸುಂದರವಾದ ತೋಟ ಕಟ್ಟಿರುವ ಈತನ ಜಾಣ್ಮೆ ಕೃಷಿ ವಿಜ್ಞಾನಿಗಳು, ವಿದ್ಯಾವಂತ ಯುವಕರಿಗೆ ಪಾಠ ಶಾಲೆಯಂತಿದೆ.
ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಹೋಗುವ ಹಾದಿಯಲ್ಲಿ ಬೆಳಗೊಳ ಪಂಪ್ಹೌಸ್ ಸಿಗುತ್ತದೆ. ಸ್ವಲ್ಪ ಮುಂದೆ ಸಾಗಿದರೆ ಹೊಸಹಳ್ಳಿ ಗೇಟ್ . ಅಲ್ಲಿ ಎಡಕ್ಕೆ ತಿರುಗಿದರೆ ಕಾರೇಕುರ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆ ಇದೆ. ಕಾರೇಕುರದ ಬಸವನಗುಡಿ ರಸ್ತೆಯಲ್ಲಿ ಹೋದರೆ "ನಿಷಿಕಾಂತ್ ಫಾರಂ ಹೌಸ್ " ಎಂಬ ಒಂದು ಎಕರೆ ಹದಿನೆಂಟು ಗುಂಟೆಯಲ್ಲಿ ಕೆ.ಜಿ.ಕೊಪ್ಪಲಿನ ಉತ್ಸಾಹಿ ಯುವಕ ಸುರೇಶ್ ಕಟ್ಟಿದ ಹತ್ತಾರು ಸಸ್ಯ ವೈವಿಧ್ಯಗಳ ಸಾವಯವ ತೋಟ ಸಿಗುತ್ತದೆ. 
"ನಿಷಿಕಾಂತ್ ಫಾರಂ ಹೌಸ್ "ನ ದೊಡ್ಡ ಗೇಟನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಯಾವುದೋ ರೆಸಾಟರ್್ಗೆ ಬಂದ ಅನುಭವ. ತೋಟದಲ್ಲಿ ಪ್ಲಾಸ್ಟಿಕ್ ಮತ್ತು ಪೇಪರ್ನಂತಹ ಕಸ ಕಾಣಲು ಸಾಧ್ಯವಿಲ್ಲ. ಜಮೀನಿನಲ್ಲಿ ಬಿದ್ದ ಕಸವನ್ನು ಹಾಕಲು ಒಂದು ಡಬ್ಬವನ್ನು ಇಟ್ಟಿದ್ದಾರೆ.ಸುತ್ತಲೂ ಭತ್ತದ ಗದ್ದೆಗಳು. ಹಸಿರು ಹೊದ್ದ ಬಟಾ ಬಯಲು.ನಡುವೆ  ದ್ವೀಪದಂತೆ ಹತ್ತಾರು ತಳಿಯ ಗಿಡಮರಗಳಿರುವ ಹಸಿರು ತೋಟ ಗಮನಸೆಳೆಯುತ್ತದೆ. ರೈತನಿಗೆ ಸೌಂದರ್ಯ ಪ್ರಜ್ಞೆ ಮತ್ತು ಮಾರುಕಟ್ಟೆ ಜ್ಞಾನ ಎರಡೂ ಸಮಾನವಾಗಿದ್ದರೆ,ಚಮತ್ಕಾರವನ್ನು ಸಾಧಿಸಬಹುದು ಎನ್ನುವುದನ್ನು ಸುರೇಶ್ ಸಾಧಿಸಿ ತೋರಿಸಿದ್ದಾರೆ.
ಮೈಸೂರಿನಲ್ಲಿ ಭೇಟಿಯಾಗಿದ್ದ "ಆ ದಿನಗಳು" ಮತ್ತು " ಮೈನಾ" ಖ್ಯಾತಿಯ ನಟ ಚೇತನ್ ಅಹಿಂಸಾ ನನ್ನೊಂದಿಗೆ ಮಾತನಾಡುತ್ತಾ ರೈತರ ಆತ್ಮಹತ್ಯೆ, ಸಂಕಷ್ಟದ ಬದುಕಿನ ಬಗ್ಗೆ ಮಾತನಾಡುತ್ತಿದ್ದರು. ನಮ್ಮಲ್ಲಿ ಒಂದು, ಎರಡು ಎಕರೆ ಭೂಮಿ ಹೊಂದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತಹ ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಹ ಸಕ್ಸಸ್ ಸ್ಟೋರಿಗಳನ್ನು ಮಾಧ್ಯಮಗಳು ಬೆಳಕಿಗೆತರುವ ಮೂಲಕ ಯುವಕರಿಗೆ ಸ್ಫೂತರ್ಿ ತುಂಬಬೇಕು.ಯುವಕರು ಹಳ್ಳಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಾನೂ ನಿಮ್ಮ ಜೊತೆ ಇರುತ್ತೇನೆ.ಹಳ್ಳಿಗಳ ಅಭಿವೃದ್ಧಿಗೆ ನಾವು ಕೆಲಸಮಾಡೋಣ ಎಂದು ಹೇಳುತ್ತಿದ್ದರು.
ಅದೇ ಸಮಯದಲ್ಲಿ ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ, ಗೆಳೆಯರಾದ ಬಿ.ಎಸ್.ಹರೀಶ್ ಅವರು, ಒಂದು ಎಕರೆ ತೋಟದ ಅಚ್ಚರಿಯ ಬಗ್ಗೆ ತಿಳಿಸಿ, ನಮ್ಮನ್ನೂ ಅಲ್ಲಿಗೆ ಹೋಗಿ ಬರುವಂತೆ ಹೇಳಿದರು. ನಮ್ಮ ಕೃಷಿ ತಂಡ ತಡಮಾಡದೆ ಅಲ್ಲಿಗೆ ಭೇಟಿ ನೀಡಿತು. ಕೆ.ಜಿ.ಕೊಪ್ಪಲಿನ ಸಿ.ಸಿದ್ದೇಗೌಡರ ಮಗ ಸುರೇಶ್ ಕಾರೇಕುರಲ್ಲಿ ಕಟ್ಟಿದ ತೋಟ ನೋಡಿದ ನಮಗೆ ಆತನೆ ನಮ್ಮ ಯುವಕರ ಆದರ್ಶ ಮತ್ತು ಕನಸು ಅಂತ ಅನಿಸಿತು.
ಸುರೇಶ್ ಕೆ.ಜಿ.ಕೊಪ್ಪಲಿನಲ್ಲಿ ವಾಸವಾಗಿದ್ದರೂ ನಗರದ ಆಕರ್ಷಣೆಗೆ ಒಳಗಾಗಿಲ್ಲ.ಗ್ರಾಮೀಣ ಸೊಗಡನ್ನೂ ಬಿಟ್ಟಿಲ್ಲ.ಬಾಲ್ಯದ ನೆನಪುಗಳನ್ನು ಬಿಡದೆ ಕಟ್ಟಿದ ತೋಟವೇ ಸುರೇಶನ ವ್ಯಕ್ತಿತ್ವವನ್ನು ಹೇಳುತ್ತದೆ. ಈತ ಕಾಲೇಜು ಮೆಟ್ಟಿಲು ಹತ್ತಿಲ್ಲ. ಆದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳು ಎಲ್ಲಾ ರೀತಿಯ ಶಿಕ್ಷಣದ ತರಬೇತಿಯನ್ನೂ ಪಡೆದಿದ್ದಾನೆ. ಕೋಳಿ,ಕುರಿ,ಮೀನು ಸಾಕಾಣಿಕೆಯಿಂದ ಹಿಡಿದು ಉದ್ಯಮಶೀಲತಾ ತರಬೇತಿ ಪಡೆದಿದ್ದಾರೆ. ಈತನ ಜ್ಞಾನದ ಮಟ್ಟ ಯಾವ ಕೃಷಿ ವಿಜ್ಞಾನಿ ಮತ್ತು ಎಂಜಿನೀಯರ್ಗೂ ಕಡಿಮೆ ಇಲ್ಲ. ತೋಟದ ಸುತ್ತ ಬದುವಿನಲ್ಲಿ ಸರಾಗ ತಿರುಗಾಟಕ್ಕೆ ಸಿಮೆಂಟ್ ಇಟ್ಟಿಗೆಯಲ್ಲಿ ಇಬ್ಬರು ನಡೆದಾಡಬಹುದಾದಷ್ಟು ಕೃತಕವಾದ ಬದು ನಿಮರ್ಾಣ ಮಾಡಿಕೊಂಡಿದ್ದಾರೆ. ಗೇಟ್ನಿಂದ ಮನೆಗೆ ಹೋಗುವ ಹಾದಿಯಲ್ಲಿ ಹತ್ತಾರು ಅಲಂಕಾರಿಕ ಹೂವಿನ ಗಿಡಗಳನ್ನೂ ಹಾಕಿದ್ದಾರೆ. ಇವೆಲ್ಲ ತೋಟದ ಸೌಂದರ್ಯವನ್ನು ಹೆಚ್ಚಿಸಿವೆ.
ಹೆಣ್ಣುಕೊಟ್ಟ ಸೋದರಮಾವನವರೇ ನನ್ನ ಕೃಷಿ ಗುರು ಎಂದು ಹೇಳುವ ಸುರೇಶ್ ಕಳೆದ ಆರು ವರ್ಷದಲ್ಲಿ ಕಾರೇಕುರದಲ್ಲಿ ಭೂಮಿ ಖರೀದಿಸಿದ ಸಮಯದಿಂದ ಇಲ್ಲಿಯವರೆಗೆ ತೋಟ ಕಟ್ಟಲು ಆದ ಖಚರ್ು ಮತ್ತು ಬಂದ ಆದಾಯ ಎಲ್ಲವನ್ನೂ ಕಡತದಲ್ಲಿ ದಾಖಲಿಸಿ ಇಟ್ಟುಕೊಂಡಿದ್ದಾರೆ. ಆ ಕಡತವನ್ನು ನೋಡುತ್ತಿದ್ದರೆ ಅವರ ಇಂತಹ ಶಿಸ್ತು ಮತ್ತು ಲೆಕ್ಕಚಾರವೇ ಯಶಸ್ಸಿನ ಗುಟ್ಟು ಅನಿಸಿಸುತ್ತದೆ.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ 2015 ರಲ್ಲಿ ಸುರೇಶ್ ಅವರಿಗೆ ತಾಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ ನೀಡಿದೆ. ದಸರಾ ಫಲಪುಷ್ಪ ಪ್ರದರ್ಶನ 2015 ರಲ್ಲಿ  ಸಮಗ್ರ ಬೇಸಾಯಕ್ಕಾಗಿ ದ್ವಿತೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೋಳಿ ಸಾಕಾಣಿಕೆ ತರಬೇತಿ. ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ತರಬೇತಿ. ಕೃಷಿ ತಂತ್ರಜ್ಞಾನ ನಿರ್ವಹಣ ಸಂಸ್ಥೆಯಿಂದ ಪಶುಪಾಲನೆ ಲಾಭದಾಯಕ ಆಹಾರ ಪೂರೈಕೆಯಲ್ಲಿ ತರಬೇತಿ ಪಡೆದಿರುವ ಸುರೇಶ್ ಒಬ್ಬ ಯಶಸ್ವಿ ಕೃಷಿಕನಿಗೆ ಎಂತಹ ಶಿಕ್ಷಣ ಬೇಕು ಎನ್ನುವುದಕ್ಕೆ ಜೀವಂತ ನಿದರ್ಶನವಾಗಿ ನಿಲ್ಲುತ್ತಾರೆ.
ಸಮಗ್ರ ಬೇಸಾಯ : ಕೊಪ್ಪಲಿನ ಸುರೇಶ್ ಅವರ ಕುಟುಂಬಕ್ಕೆ ಮೈಸೂರಿನ ಬೋಗಾದಿ ರಸ್ತೆಯಲ್ಲಿ ತೆಂಗಿನ ತೋಟ ಇತ್ತು. ಮುಡಾ ಅವರ ಭೂಮಿಯನ್ನು ವಶಪಡಿಸಿಕೊಂಡು ಪರಿಹಾರ ನೀಡಿತು. ಆ ಪರಿಹಾರದ ಹಣದಲ್ಲಿ ಕಾರೇಕುರದಲ್ಲಿ ಬಂಜರು ಭೂಮಿ ಖರೀದಿಸಿದ ಸುರೇಶ್ ಅದನ್ನು ಈಗ ನಂದನವನವನ್ನಾಗಿ ರೂಪಿಸಿ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡು ನೆಮ್ಮದಿಯ ಸರಳ, ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ  ಕೃಷಿ ಬೆಳೆಯ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಸಂಯೋಜನೆ ಮಾಡಿಕೊಂಡಿದ್ದಾರೆ. ಆಯಾಯ ಕಾಲಕ್ಕೆ ತಕ್ಕ ಬೆಳೆಗಳಿಂದ ಆದಾಯ ಪಡೆಯುವ ಸಲುವಾಗಿ ಕಳೆದ ನಾಲ್ಕು ವರ್ಷಗಳಿಂದ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಆರಂಭದಲ್ಲಿ ಟೊಮಟೋ, ಮೆಣಸಿನಕಾಯಿ, ಕಲ್ಲಂಗಡಿಯನ್ನು ಬೆಳೆದೆ. ಈಗ ಈರನಗೆರೆ ಬದನೆಕಾಯಿ ಬೆಳೆಯಲಾಗಿದ್ದು, ತೋಟದ ಬದುವಿನಲ್ಲಿ ಹಾಕಲಾಗಿರುವ ತೊಂಡೆಗಿಡಗಳು ಸಾಕಷ್ಟು ಆದಾಯ ತರುವ ಬೆಳೆಗಳಾಗಿವೆ ಎನ್ನುತ್ತಾರೆ.
ತೊಂಡೆ ಕಾಯಿಯನ್ನು ನೇಸರ ಸಾವಯವ ಮಾರಾಟ ಮಳಿಗೆಗೆ ಕೊಡುತ್ತೇನೆ.ಕೋಳಿ, ಮೀನು ಮತ್ತು ತರಕಾರಿಗಳನ್ನು ತೋಟಕ್ಕೆ ಬಂದು ಖರೀದಿಸುತ್ತಾರೆ. ಬಾಳೆ ನಾಲ್ಕನೇ ಕೂಳೆ ಬೆಳೆ. ಹಣ್ಣಿನ ಬೆಳೆಗಳು ಈಗ ಫಸಲು ಕೊಡಲು ಆರಂಭಿಸಿವೆ.ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ನಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ.
ಆರಂಭದಲ್ಲಿ ತಾನು ಎಲ್ಲರಂತೆ ರಾಸಾಯನಿಕ ಕೃಷಿಯನ್ನೆ ಮಾಡುತ್ತಿದ್ದೆ. ನಂತರ ಮೈಸೂರಿನ ಕಲಾಮಂದಿರದಲ್ಲಿ ನಡೆದ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ನಂತರ ಭೂಮಿಗೆ ವಿಷ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಮಣ್ಣಿ ಫಲವತ್ತತೆಯೂ ಹೆಚ್ಚಾಗಿ, ಕಳೆ ಬೆಳೆಯುವುದನ್ನು ತಡೆಗಟ್ಟಬಹುದು,ಒಣ ತ್ಯಾಜ್ಯ ಬಳಸುವುದರಿಂದ ತೇವಾಂಶ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಸುರೇಶ್ ಅವರ ಅನುಭವದ ಮಾತು.
ಅರಣ್ಯ ಕೃಷಿ : ತೋಟದ ಖಾಲಿ ಜಾಗವನ್ನು ಸದ್ಭಳಕೆ ಮಾಡಿಕೊಳ್ಳು ಉದ್ದೇಶದಿಂದ ಅರಣ್ಯ ಕೃಷಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಮರಗಳು ಕಷ್ಟಕಾಲದಲ್ಲಿ ಒದಗಿಬರುತ್ತವೆ. ದೀಘರ್ಾವಧಿಯಲ್ಲಿ ಹಣ ತರುವ ಮೂಲಗಳಾಗಿವೆ. ಅಲ್ಲದೆ ಬದುಗಳಲ್ಲಿ ಮರ ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು. ತೇಗ, ಸಿಲ್ವರ್ಓಕ್, ಹರ್ಕ್ಯುಲಸ್ ಮತ್ತು ಬೇವಿನ ಮರಗಳು ತೋಟದ ಸುತ್ತಾ ಇದ್ದು ಅತಿಯಾದ ಗಾಳಿಯಿಂದ ತೋಟಗಾರಿಕಾ ಬೆಳೆಗಳಿಗೆ ರಕ್ಷಣೆ ನೀಡುತ್ತವೆ ಎನ್ನುತ್ತಾರೆ ಸುರೇಶ್.
ಮೀನುಗಾರಿಕೆ : ಬಾಲ್ಯದ ನೆನಪುಗಳು ಬಿಡದೆ ಕಾಡುತ್ತಿದ್ದವು. ಕೆರೆಯಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಆದ್ದರಿಂದ ತೋಟದಲ್ಲಿ ಮೀನು ಸಾಕಾಣಿಕೆ ಆರಂಭಿಸಿದೆ. 30 ಕುಂಟೆ ಪ್ರದೇಶದಲ್ಲಿ 100/ 200 ಉದ್ದ ಹಾಗೂ 5 ಅಡಿ ಆಳ ಅಳತೆಯ ಕೃತಕ ಕೆರೆ ನಿಮರ್ಾಣ ಮಾಡಿಕೊಂಡಿದ್ದೇನೆ. ಕಾಟ್ಲಾ, ರೇಹೋ, ಕಾಮನ್ ಕಾಕರ್ೂ ಎಂಬ ಹೈಬ್ರೀಡ್ ತಳಿಯ ಮೀನುಗಳನ್ನು ಸಾಕುತ್ತೇನೆ.ಅವುಗಳಿಗೆ ಆಹಾರವಾಗಿ ಕಡ್ಲೆ ಹಿಂಡಿ, ಅಕ್ಕಿ ತೌಡು ಕೊಡುತ್ತೇನೆ. ಆಹಾರದ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಮೀನಿನ ಕೊಳದ ಮೇಲೆ ನಾಟಿ ಕೋಳಿ ಶೆಡ್ ನಿಮರ್ಾಣ ಮಾಡಿಕೊಂಡಿದ್ದೇನೆ. ಕೋಳಿ ಹಿಕ್ಕೆ ನೇರವಾಗಿ ಕೆರೆಗೆ ಬೀಳುತ್ತದೆ. ಇದರಲ್ಲಿ ವಾಷರ್ಿಕ 2000 ಮೀನು ಮರಿಗಳನ್ನು ಸಾಕುತ್ತೇನೆ. 1 ರಿಂದ 2 ಕೆಜಿವರೆಗೆ ಪ್ರತಿ ಮೀನುಗಳು ಬೆಳೆಯುತ್ತವೆ. ನಾಟಿ ಕೋಳಿಯ ಹಿಕ್ಕೆ  ನೀರಿನಲ್ಲಿ (ಪಿಎಚ್) ರಸಸಾರವನ್ನು ಕಾಪಾಡುತ್ತದೆ.
ಇದೆ ನೀರನ್ನು 5 ಎಚ್ಪಿ ಪಂಪ್ ಮೂಲಕ ಮೂರು ತಿಂಗಳಿಗೆ ಒಮ್ಮೆ ತೋಟಕ್ಕೆ ಹಾಯಿಸುತ್ತೇನೆ. ಇದರಿಂದ ಫಸಲು ಸಮೃದ್ಧಿಯಾಗಿ ಬರುತ್ತದೆ. ಕೋಳಿ ಹಿಕ್ಕೆಯಿಂದ ಖಚರ್ು ಕಡಿಮೆಯಾಗಿದ್ದು ತೌಡು ಹಿಂಡಿಗೆ ವಾಷರ್ಿಕ 39,100 ರೂ ಖಚರ್ು ಬರುತ್ತದೆ. ಮೀನುಗಳು ಸರಾಸರಿ 1.5 ಕೆಜಿ ಬೆಳೆದು ವಾಷರ್ಿಕ 1,26,000 ರೂ ಆದಾಯ ತಂದುಕೊಡುತ್ತವೆ. ಖಚರ್ು ಕಳೆದು 87 ಸಾವಿರ ಆದಾಯ ಬರುತ್ತದೆ.
ಕೋಳಿಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಎರಡೂ ಪರಸ್ಪರ ಅವಲಂಭಿತ ಪೂರಕ ಉಪಕಸುಬುಗಳು. ಮೀನು ಸಾಕಾಣಿಕೆ ಆರಂಭಿಸಿದಾಗ ಕೆರೆ ನಿಮರ್ಿಸಿದ ಜಾಗದಲ್ಲಿ ಉಳಿಕೆ ಜಾಗವನ್ನು ಸದುಪಯೋಗಮಾಡಿಕೊಳ್ಳಲು ಕೋಳಿ ಸಾಕಾಣಿಕೆಗೆ ಪ್ಲಾನ್ ಮಾಡಿದೆ. ಕೆರೆಯ ಮೇಲ್ಭಾಗದಲ್ಲಿ 15/ 15 ಅಳತೆಯ ಕಬ್ಬಿಣದ ಮೆಶ್ ನಿಮರ್ಾಣಮಾಡಿದ್ದೇನೆ. ಇದರಲ್ಲಿ 300 ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದೇನೆ. ವರ್ಷಕ್ಕೆ ಮೂರು ಬ್ಯಾಚ್ ಕೋಳಿ ಸಾಕುತ್ತೇನೆ. ಪ್ರತಿ ಬ್ಯಾಚುಗಳಲ್ಲಿ  62,000 ರೂ ಆದಾಯ ಇದೆ. ಖಚರ್ು ಕಳೆದು ವಾಷರ್ಿಕ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯ ಸಿಗುತ್ತದೆ.
ಪಕ್ಷಿ ಸಾಕಾಣಿಕೆ : ಪಕ್ಷಿಗಳನ್ನು ಸಾಕುವುದು ನನ್ನ ಮೆಚ್ಚಿನ ಹವ್ಯಾಸ. ಬಾಲ್ಯದಿಂದಲ್ಲೂ ಕುರಿ ಕೋಳಿಗಳ ಜೊತೆ ಬೆಳೆದವರು ನಾವು. ಹಾಗಾಗಿ ಪಕ್ಷಿಗಳನ್ನು ಕಂಡರೆ ನನಗೆ ತುಂಬಾ ಪ್ರೀತಿ. ಸಮಗ್ರ ಕೃಷಿ ಪದ್ಧತಿಯ ಒಂದು ಭಾಗವಾಗಿಯೇ ನಾನು ಪಕ್ಷಿಗಳನ್ನು ಸಾಕುತ್ತಾ ಅದರಿಂದಲ್ಲೂ ಆದಾಯ ಗಳಿಸುತ್ತಿದ್ದೇನೆ. ಈಗ ನಮ್ಮಲ್ಲಿ 10 ಲವ್ ಬಡ್ಸರ್್, 15 ಪಾರಿವಾಳಗಳು ಇವೆ. ಮೊಲ ಸಾಕಾಣಿಕೆಗೂ ಪ್ಲಾನ್ ಮಾಡಿದ್ದೇನೆ.
ಲವ್ ಬಡ್ಸರ್್ಗೆ ನವಣೆ, ಸೂರ್ಯಕಾಂತಿ ಬೀಜ,ಭತ್ತವನ್ನು ಆಹಾರವಾಗಿ ನೀಡುತ್ತೇನೆ.ಲವ್ಬಡ್ಸರ್್ ಮೂರು ತಿಂಗಳಿಗೆ ಎರಡರಿಂದ ನಾಲ್ಕು ಮೊಟ್ಟೆಗಳನ್ನು ಇಡುತ್ತವೆ. ಒಂದು ಜೊತೆ ಪಾರಿವಾಳ ಮೂರು ತಿಂಗಳಲ್ಲಿ 2 ಮೊಟ್ಟೆ ಇಟ್ಟು ಮರಿಮಾಡುತ್ತವೆ.ಒಂದು ಜೊತೆ ಲವ್ಬಡ್ಸರ್್ಗೆ 200 ರಿಂದ 300 ರೂ.ಗೆ ಮಾರಾಟ ಮಾಡಿದರೆ, ಒಂದು ಜೊತೆ ಪಾರಿವಾಳಗಳನ್ನು 300 ರಿಂದ 400 ರೂ.ಗೆ ಮಾರಾಟಮಾಡುತ್ತೇನೆ ಎನ್ನುವ ಮೂಲಕ ತಮ್ಮ ಹವ್ಯಾಸಗಳನ್ನು ಹಣ ಸಂಪಾದನೆಯ ಮಾರ್ಗವಾಗಿ ಮಾಡಿಕೊಂಡು ಸಂತಸ ಕಾಣುತ್ತಿದ್ದಾರೆ.
ಯಂತ್ರೋಪಕರಣ : ತೋಟದಲ್ಲಿ ಇರುವ ಯಂತ್ರೋಪಕರಣಗಳು ಮತ್ತು ಬಳಸುವ ವಿಧಾನವನ್ನು ಬರೆದು ಇಟ್ಟುಕೊಂಡಿರುವ ಸುರೇಶ್ ತಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸೌಂದರ್ಯ ಪ್ರಜ್ಞೆ ಮತ್ತು ಶಿಸ್ತನ್ನು ಕಾಪಾಡಿಕೊಂಡಿದ್ದಾರೆ. ಕಳೆ ತೆಗೆಯುವ ಯಂತ್ರ. ರಸದ್ರವಣ ಸಿಂಪಡಿಸಲು ಸ್ಪ್ರೈಯರ್ . ಎರೆಹುಳ್ಳು ಘಟಕ ಇದೆ. ಮೀನುಮರಿಗಳಿಗೆ ಆಹಾರವಾಗಿ ಅಜೋಲ ಬೆಳೆದುಕೊಳ್ಳಲಾಗುತ್ತದೆ. ಮುಂದೆ ಸಣ್ಣ ಹೋರಿ ಕರುಗಳನ್ನು ಖರೀದಿಸಿ ಎರಡು ವರ್ಷ ಬೆಳೆಸಿ ಮಾರುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಆಶ್ಚರ್ಯ ಎಂದರೆ ತೋಟದ ನಿರ್ವಹಣೆಗೆ ಯಾವುದೇ ಆಳುಕಾಳುಗಳನ್ನು ಅವಲಂಭಿಸದೆ ಸ್ವತಃ ತಾವೇ ತೋಟ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಿರುವುದು ಅವರ ಕೃಷಿ ಪ್ರೀತಿಗೆ ಸಾಕ್ಷಿಯಾಗಿದೆ.
ತೋಟಕ್ಕೆ ಆರು ತಿಂಗಳು ನಾಲೆ ನೀರು ಸಿಗುತ್ತದೆ. ಉಳಿದ ಆರು ತಿಂಗಳು ಬೋರವೆಲ್ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಲಾಗುತ್ತದೆ. ಒಂದು ಬೋರ್ವೆಲ್ ಇದೆ. ಇದಕ್ಕೆ 5 ಎಚ್ಪಿ ಮೋಟರ್ ಹಾಕಿದ್ದು ಒಂದೂವರೆ ಇಂಚು ನೀರು ಬರುತ್ತದೆ. ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ನೀರು ಪೂರೈಸಲಾಗುತ್ತದೆ.ಈ ಪ್ರದೇಶ ಅರೆ ನೀರಾವರಿ ಖುಷ್ಕಿ ವಲಯವಾಗಿರುವುದರಿಂದ ಅಲ್ಲಿ ಸಿಗುವ ಸೌಲಭ್ಯಗಳನ್ನೇ ಸಮರ್ಥವಾಗಿ ಬಳಸಿಕೊಂಡು ತೋಟ ಕಟ್ಟಿರುವ ಸುರೇಶ್ ಅವರ ಜಾಣ್ಮೆ ಮತ್ತು ಸೌಂದರ್ಯ ಪ್ರಜ್ಞೆ ನಾಡಿನ ಯುವಕರಿಗೆ ಮಾದರಿಯಾಗುವಂತಿದೆ. ಆಸಕ್ತರು ಸುರೇಶ್ ಅವರನ್ನು  9880507318 ಸಂಪಕರ್ಿಸಬಹುದು.





ಶುಕ್ರವಾರ, ನವೆಂಬರ್ 18, 2016

ಕಣಗಾಲು ಕೃಷ್ಣಮೂತರ್ಿಗೆ ಗೌರವ ತಂದ ಪಾಳೇಕರ್ ಕೃಷಿ
"ಆಗ  ಪೀಡಿಸುತ್ತಿದ್ದ ಬ್ಯಾಂಕಿನವರು ಈಗ ಚೇರು ಕೊಟ್ಟು ಗೌರವಿಸುತ್ತಾರೆ"
ಮೈಸೂರು : "ಏಳು ವರ್ಷಗಳ ಹಿಂದೆ ಸಾಲಕೊಟ್ಟ ಬ್ಯಾಂಕಿನವರ ಮುಂದೆ ನಾನು ನಡು ಬಗ್ಗಿಸಿ ಕೈಮುಗಿದು ನಿಲ್ಲುತ್ತಿದ್ದೆ. ಇಂದು ಅದೆ ಬ್ಯಾಂಕಿನವರು ನಾನು ಬ್ಯಾಂಕಿಗೆ ಹೋದರೆ ಖುಚರ್ಿ ಕೊಟ್ಟು ಕುಳ್ಳಿರಿಸಿ ಟೀ ಕೊಟ್ಟು, ಗೌರವ ಭಾವನೆಯಿಂದ ಕಂಡು ಕಳುಹಿಸುತ್ತಾರೆ". ಇದು ನೈಸಗರ್ಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿಯ ಏಫೆಕ್ಟ್ ಎಂದರು ಕಣಗಾಲಿನ ಕೃಷ್ಣಮೂತರ್ಿಗಳು.

ಸಂಪೂರ್ಣವಾಗಿ ಶೂನ್ಯಬಂಡವಾಳ ನೈಸಗರ್ಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವ ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮದ ಕೃಷ್ಣಮೂತರ್ಿ ಅವರ ಜೀವನ ಪಯಣವೆ ಒಂದು ರೋಚಕ ಅನುಭವ. ಯುರೋಪ್, ಏಷ್ಯಾ ಖಂಡ ಸೇರಿದಂತೆ ಆರು ಖಂಡಗಳ ಹತ್ತಾರು ದೇಶಗಳನ್ನು ಸುತ್ತಿಬಂದಿರುವ ಕೃಷ್ಣಮೂತರ್ಿ ಅವರು ಹಡಗಿನಲ್ಲಿ (ಎರೋನಾಟಿಕ್) ಎಂಜಿನಿಯರ್ ಆಗಿದ್ದವರು. ಖ್ಯಾತ ಸಿನಿಮಾ ನಿದರ್ೇಶಕ ಪುಟ್ಟಣಕಣಗಾಲ್ ಅವರ ಆತ್ಮೀಯ . ಅಪಾರವಾದ ಜೀವನ ಪ್ರೀತಿ ಮತ್ತು ಹಾಸ್ಯ ಪ್ರಜ್ಞೆ ಇರುವ ಇವರು ಈಗ ಕಣಗಾಲಿನಲ್ಲಿ ನೈಸಗರ್ಿಕ ಕೃಷಿಮಾಡುತ್ತಾ ನೈಜ ಮಣ್ಣಿನ ಮಗನಾಗಿದ್ದಾರೆ. ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿ ಬಂದಿವೆ.
ತಮ್ಮ ಹದಿನೆಂಟು ಎಕರೆ ಪ್ರದೇಶದಲ್ಲಿ ಶೂನ್ಯ ಬಂಡವಾಳ ಕೃಷಿ ಮಾಡುತ್ತಿರುವ ಕೃಷ್ಣಮೂತರ್ಿ ಆರು ಎಕರೆಯಲ್ಲಿ 150 ತೆಂಗು, 1200 ಅಡಿಕೆ, ಟೀಕ್, 2000 ಗ್ಲಿರಿಸೀಡಿಯಾ, ಬಾಳೆ ಬೆಳೆದರೆ, ಎರಡೂವರೆ ಎಕರೆಯಲ್ಲಿ ಭತ್ತ, ಉಳಿದ ಕಡೆ ಮಾವು, ಗೋಡಂಬಿ, ಬನಾರಸ್ ನೆಲ್ಲಿ,ಅಪ್ಪೆಮಿಡಿ ಮಾವು ಹೀಗೆ ಮನೆಗೆ ಬೇಕಾದ ವಿವಿಧ ಬಗೆಯ ಹಣ್ಣುಗಳನ್ನು ಸಂಪೂರ್ಣ ವಿಷಮುಕ್ತವಾಗಿ ಬೆಳೆಯುತ್ತಿದ್ದಾರೆ.
ಪಾಳೇಕರ್ ಕೃಷಿ ಪದ್ಧತಿಯ ಬಂದ ಮೇಲೆ ಭೂಮಿ ಉಳುಮೆ ನಿಲ್ಲಿಸಿದ್ದಾರೆ, ಹೊರಗಿನಿಂದ ಯಾವುದೆ ಗೊಬ್ಬರಗೋಡನ್ನಾಗಲಿ ತರುವುದನ್ನು ನಿಲ್ಲಿಸಿದ್ದಾರೆ.ಬೀಜಾಮೃತ,ಜೀವಾಮೃತ, ಹೊದಿಕೆ, ಮಣ್ಣಿನ ತೇವಾಂಶ ಕಾಪಾಡಿಕೊಳ್ಳುವ ಮೂಲಕ ಕಡಿಮೆ ಖಚರ್ಿನಲ್ಲಿ ಹೆಚ್ಚು ಲಾಭಪಡೆದು ಉತ್ತಮ ಆದಾಯಗಳಿಸುತ್ತಾ ಬಂಗಾರದ ಮನುಷ್ಯನಾಗಿದ್ದಾರೆ.
ಪತ್ನಿ ಕುಸುಮ ಹಾಗೂ ಮಕ್ಕಳಾದ ಸಂದೀಪ್,ಸನತ್,ಸವಿತಾ, ಸಹನಾ ಸೇರಿದಂತೆ ನಮ್ಮ ಮನೆಯ ಎಲ್ಲರೂ ಪಾಸ್ಪೋಟರ್್ ಹೊಂದಿದ್ದೇವೆ ಎನ್ನುವ ಕೃಷ್ಣಮೂತರ್ಿಗಳ ಹಸಿರು ಪ್ರೀತಿ ಅವರನ್ನು ಹಳ್ಳಿಯಲ್ಲೇ ಇರುವಂತೆಮಾಡಿದೆ. ಕಣಗಾಲಿನಲ್ಲಿ ಕಿಟ್ಟಯ್ಯನೋರು ಎಂದೆ ಹೆಸರಾದ ಕೃಷ್ಣಮೂತರ್ಿ ತಮ್ಮ 74 ನೇ ಇಳಿವಯಸ್ಸಿನಲ್ಲೂ ಅದೆ ಗ್ರಾಮದ ಇನ್ನೊಬ್ಬ ನೈಸಗರ್ಿಕ ಕೃಷಿಕ ಬಾಲ್ಯದ ಗೆಳೆಯ ಕುಳ್ಳೆಗೌಡರೊಂದಿಗೆ ರಾಜ್ಯದ ನಾನಾ ಭಾಗದಲ್ಲಿರುವ ನೈಸಗರ್ಿಕ ಕೃಷಿಯ ತೋಟಗಳಿಗೆ ಭೇಟಿ ನೀಡುತ್ತಾ,ಕೃಷಿಯ ಬಗ್ಗೆ ಕಲಿಯುತ್ತಾ, ಪರಸ್ಪರ ಹಾಸ್ಯ, ಗೇಲಿ ಮಾಡಿಕೊಳ್ಳುತ್ತಾ ಹಳ್ಳಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.ಇಂತಹ ಹಿರಿಯ ಜೀವಗಳ ಹಸಿರು ಪ್ರೀತಿಗೆ ಅವರು ಕಟ್ಟಿರುವ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿಯ ತೋಟಗಳೆ ಸಾಕ್ಷಿಯಾಗಿವೆ.
ದ.ಕನ್ನಡ, ಚಿಕ್ಕಮಗಳೂರು,ಶಿರಸಿಯ ಕಡೆ ಅತ್ತ್ಯುತ್ತಮ ಮಾದರಿ ತೋಟಗಳಿದ್ದು, ತೀರ್ಥಹಳ್ಳಿಯ ಪುರುಷೋತ್ತಮ ರಾಯರು, ಉಡುಪಿಯ ಶಂಕರ ಹೆಗಡೆ ಸೇರಿದಂತೆ ನಾನಾ ತೋಟಗಳಿಗೆ ಹೋಗಿ ಬಂದಿದ್ದೇವೆ ಎನ್ನುವ ಈ ಬಾಲ್ಯದ ಗೆಳೆಯರಿಗೆ ಇಳಿವಯಸ್ಸಿನಲ್ಲೂ ಇರುವ ಹಸಿರು ಪ್ರೀತಿ ಯುವಕರನ್ನೇ ನಾಚಿಸುವಂತಿದೆ.
ಅರಸು ಕಾಯಿದೆ ತಂದ ಆಪತ್ತು: ಕೃಷ್ಣಮೂತರ್ಿ ಅವರು ಎರೋನಾಟಿಕ್ ಎಂಜಿನೀಯರ್ ಆಗಿ 18 ವರ್ಷಗಳಿಗೂ ಹೆಚ್ಚು ಕಾಲ ದೇಶ ವಿದೇಶಗಳನ್ನು ಸುತ್ತುತ್ತಾ ನೌಕರಿ ಮಾಡಿಕೊಂಡಿದ್ದವರು. ದೇವರಾಜು ಅರಸು ಉಳುವವನಿಗೆ ಭೂಮಿ ಕಾಯಿದೆ ಜಾರಿಗೆ ತಂದಾಗ ಕಣಗಾಲಿನಲ್ಲಿರುವ ತಮ್ಮ ಪಿತ್ರಾಜರ್ಿತ ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಕೃಷಿಯನ್ನು ಅಪ್ಪಿಕೊಂಡರು. ಪತ್ನಿಯೊಂದಿಗೆ ಹಳ್ಳಿಯಲ್ಲೆ ಉಳಿದುಕೊಂಡರು.
ಕೃಷಿಯ ಬಗ್ಗೆ ಆಳವಾದ ತಿಳಿವಳಿಕೆ ಇಲ್ಲದ ಕಾರಣ ಆರಂಭದಲ್ಲಿ ಕೈ ಸುಟ್ಟುಕೊಂಡರು. ರಾಸಾಯನಿಕ ಕೃಷಿಮಾಡಿ ಮೈತುಂಬಾ ಸಾಲಮಾಡಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸಿದರು. ಆದರೂ ಭೂಮಿಯನ್ನು ಉಳಿಸಿಕೊಳ್ಳಲೆ ಬೇಕು ಎಂದು ಪಣತೊಟ್ಟು ಪಟ್ಟಣದ ವ್ಯಾಮೋಹವನ್ನು ತೊರೆದು ಹಳ್ಳಿಯಲ್ಲೆ ನೆಲೆನಿಂತ ಕೃಷ್ಣಮೂತರ್ಿ ರೈತ ಸಮುದಾಯದ ಹೆಮ್ಮೆಯ ಮಗನಾಗಿ,ನೈಸಗರ್ಿಕ ಕೃಷಿಯ ಸಾಧಕನಾಗಿ ಯುವ ಜನಾಂಗಕ್ಕೆ ಮಾದರಿಯಾಗುವಂತೆ ಬೆಳೆದಿದ್ದಾರೆ.
ರಾಸಾಯನಿಕ ತಂದ ಆಪತ್ತು : ಮೊದಲು ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ಬ್ಯಾಂಕಿನಲ್ಲಿ 7.5 ಲಕ್ಷ ರೂಪಾಯಿ ಸಾಲಗಾರನಾಗಿದ್ದೆ. ಬ್ಯಾಂಕಿನವರು ಸಾಲ ವಸೂಲಿಗೆ ಮನೆಗೆ ಬಂದರೆ ಸಾಲತೀರಿಸಲು ಕಾಲವಕಾಶ ಕೇಳಿ ಕೈ ಮುಗಿದು ನಿಲ್ಲುವ ಪರಿಸ್ಥಿತಿ ಇತ್ತು. ಸಾವಿರಾರು ರೂಪಾಯಿ ಕೊಟ್ಟು ಅಂಗಡಿಯಿಂದ ತಂದ ಗೊಬ್ಬರ ಔಷಧಿಗೆ ನಾವು ಬೆಳೆದ ಉತ್ಪನ್ನಗಳು ಸಮವಾಗುತ್ತಿರಲಿಲ್ಲ. ಸಾಲ ಏರುತ್ತಲೇ ಹೋಗುತಿತ್ತು.ಬಸ್ಸ್ ಚಾಜರ್್ಗೂ ಒದ್ದಾಟ, ಖಚರ್ು ಜಾಸ್ತಿ ಆದಾಯ ಕಡಿಮೆ ಎಂಬ ಪರಿಸ್ಥಿತಿ. ಇಂತಹ ಸಮಯದಲ್ಲಿ ಸುಭಾಷ್ ಪಾಳೇಕರ್ ನಮ್ಮ ಪಾಲಿನ ದೈವವಾಗಿ ಬಂದರು ಎಂದು 74 ವರ್ಷದ ಯುವಕೃಷಿಕ ಕೃಷ್ಣಮೂತರ್ಿ ನೆನಪಿಸಿಕೊಂಡರು.
ಪತ್ರಿಕೆಗಳಲ್ಲಿ ನೈಸಗರ್ಿಕ ಕೃಷಿಕರ ಯಶೋಗಾಥೆಗಳನ್ನು ಓದುತ್ತಿದ್ದವು. ಇದೆ ಸಮಯದಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಪಾಳೇಕರ್ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು. ನಾವು ಹೋಗಿ ಬಾಗವಹಿಸಿದೆವು. ಅದು ನಮ್ಮ ಅದೃಷ್ಟವನ್ನೆ ಬದಲಿಸಿತು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಪಾಳೇಕರ್ ಕೃಷಿ ತರಬೇತಿ ಎಲ್ಲೆ ನಡೆದರೂ ಹೋಗುತ್ತೇವೆ. ಹೊಂಡರಬಾಳಿನಲ್ಲಿರುವ ಅಮೃತ ಭೂಮಿಯಲ್ಲಿ ನಡೆದ ಕಾರ್ಯಾಗಾರದಲ್ಲೂ ಭಾಗವಹಿಸಿದ್ದೆವು.
ಪಾಳೇಕರ್ ಪದ್ಧತಿಯ ಕೃಷಿಯನ್ನು ಜಾರಿಗೆ ತಂದ ಮೇಲೆ ಬ್ಯಾಂಕಿನವರ ಸಾಲವೂ ತೀರಿತು. ಅದೇ ಬ್ಯಾಂಕಿನಲ್ಲಿ ನಾವು ದುಡಿದು ಸಂಪಾದಿಸಿದ ಹಣವನ್ನು ಡೆಫಾಸಿಟ್ ಮಾಡುವ ಸ್ಥಿತಿಗೂ ಬಂದೆವು.ರಾಸಾಯನಿಕ ಕೃಷಿಕರಾಗಿದ್ದಾಗ ಸಾಲಗಾರರಾಗಿ ಬ್ಯಾಂಕಿನವರ ಮುಂದೆ ಕೈ ಮುಗಿದು ನಿಲ್ಲುತಿದ್ದೆವು, ಇಂದು ನೈಸಗರ್ಿಕ ಕೃಷಿಕರಾಗಿ ಅದೇ ಬ್ಯಾಂಕಿನವರು ಗೌರವಿಸುವ ಮಟ್ಟಕ್ಕೆ,ಸ್ವಾಭಿಮಾನದಿಂದ ತಲೆ ಎತ್ತಿ ಬದುಕುತ್ತಿದ್ದೇವೆ ಎಂದರು.
ವಿವಿಧ ಸಬ್ಸಿಡಿ, ಭಿತ್ತನೆ ಬೀಜ ಅಂತ ಕೃಷಿ ಇಲಾಖೆಗೆ ಹೋಗುತ್ತಿದ್ದೆವು. ಈಗ ಕೃಷಿ ಇಲಾಖೆಯತ್ತ ತಲೆ ಹಾಕುವುದಿಲ್ಲ. ದೇಸಿ ಬೀಜ, ಒಂದು ನಾಟಿ ಹಸು ಸ್ವಾಭಿಮಾನದ ಬದುಕು ಕಲಿಸಿದೆ. ನಮಗೆ ಯಾವುದೆ ಸರಕಾರಿ ಸವಲತ್ತು ಬೇಕಾಗಿಲ್ಲ ನಾವು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ಸಾಕು ಎನ್ನುತ್ತಾರೆ.
ಆದಾಯ : ವಾಷರ್ಿಕ 150 ಕ್ವಿಂಟಾಲ್ ಅಡಿಕೆ, ಎರಡು ಬಾರಿ ಕೊಬ್ಬರಿ ಮಾರಾಟ, ಕೊಕೊ ಮಾರಾಟದಿಂದ ಆರು ಲಕ್ಷಕ್ಕೂ ಅಧಿಕ ಆದಾಯ ಪಡೆಯುತ್ತಿದ್ದೇನೆ. ಇದಕ್ಕಾಗಿ ಮಾಡುವ ವೆಚ್ಚ ವರ್ಷಕ್ಕೆ ಎಲ್ಲಾ ಸೇರಿ ಐವತ್ತು ಸಾವಿರವನ್ನೂ ದಾಟುವುದಿಲ್ಲ. ಪ್ರತಿವರ್ಷ ವೀಡ್ಕಟರ್ನಲ್ಲಿ ಕಳೆ ತೆಗಿಸಿ ಅಲ್ಲೆ ಹೊದಿಕೆ ಮಾಡಲು 10 ಸಾವಿರ, ಜೀವಾಮೃತ ತಯಾರಿಗೆ ಒಂದೆರಡು ಸಾವಿರ, ಆಳುಕಾಳು ಅಂತ ಸಣ್ಣಪುಟ್ಟ ಖಚರ್ು ಬೆಟ್ಟರೆ ಕೃಷಿಗೆ ಬೇರೇನೂ ಬೇಕಿಲ್ಲಾ.ಕುರಿ,ಕೋಳಿ,ಮೇಕೆ ಏನನ್ನೂ ಸಾಕಿಲ್ಲ. ಒಂದೆರಡು ಹಳ್ಳಿಕಾರ್ ಹಸುಗಳಿವೆ. ಹಸುಗಳಿಂದಲ್ಲೂ ನಾವು ಹೆಚ್ಚು ಹಾಲು ಕರೆಯುವುದಿಲ್ಲ. ನಮಗೆ ಬೇಕಾದ ಸ್ವಲ್ಪ ಪ್ರಮಾಣದ ಹಾಲನ್ನು ಕರೆದುಕೊಂಡು ಉಳಿದ ಹಾಲನ್ನು ಅದರ ಕರುವಿಗೆ ಕುಡಿಸುತ್ತೇವೆ. ಅದರಿಂದಾಗಿಯೆ ನಮ್ಮ ಕರುಗಳನ್ನು ಒಂದೆ ವರ್ಷಕ್ಕೆ 18 ರಿಂದ 20 ಸಾವಿರ ರೂಪಾಯಿಕೊಟ್ಟು ಖರೀದಿಸುತ್ತಾರೆ. ಹಾಲಿನ ಆದಾಯ ಕರುವಿನಲ್ಲಿ ಬಂತು ಎಂದು ಲೆಕ್ಕಚಾರ ನೀಡುತ್ತಾರೆ.
ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ವರ್ಷಕ್ಕೆ ನಾಲ್ಕು ಲಕ್ಷ ರೂ. ಖಚರ್ಾಗಿ ಆದಾಯವೆ ಬರುತ್ತಿರಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದೆ ಹೋದರೆ ರೈತರಿಗೆ ಉಳಿಗಾಲ ಇಲ್ಲ.ಸರಕಾರ, ಸಂಘಸಂಸ್ಥೆಗಳನ್ನು ನಂಬಿ ಕೂರದೆ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ.
ನೀರಿನ ಮಿತ ಬಳಕೆ : ತೋಟದಲ್ಲಿ ನೀರನ್ನು ಮಿತವಾಗಿ ಬಳಸುವ ತಂತ್ರಜ್ಞಾನ ಕಂಡುಕೊಂಡಿದ್ದಾರೆ. ಆರು ಎಕರೆ ಅಡಿಕೆ, ತೆಂಗಿನ ತೋಟಕ್ಕೆ ನೀರು ಕೊಡುವುದನ್ನೆ ಕೈಬಿಟ್ಟಿರುವ ಕೃಷ್ಣಮೂತರ್ಿ ಭೂಮಿಯಲ್ಲಿ ತೇವಾಂಶ ಕಾಪಾಡಿಕೊಳ್ಳಲು (ಮಲ್ಚಿಂಗ್) ಹೊದಿಕೆಗೆ ಮೊರೆಹೋಗಿದ್ದಾರೆ.ಗ್ಲಿರಿಸೀಡಿಯಾ, ನೆಲದ ಮೇಲೆ ಬೆಳೆಯುವ ಕಳೆ ಹುಲ್ಲುಗಳಿಂದ ಜೀವಂತ ಹೊದಿಕೆ ಮಾಡುತ್ತಾರೆ. ಆರಂಭದಲ್ಲಿ ಪ್ರತಿ ತಿಂಗಳು ಭೂಮಿಗೆ ಜೀವಾಮೃತ ಚೆಲ್ಲುತ್ತಿದ್ದರು. ಈಗ ಮೂರು ತಿಂಗಳಿಗೆ ಒಮ್ಮೆ ಮಾತ್ರ ಜೀವಾಮೃತ ಚೆಲ್ಲುತ್ತಾರೆ.
ಒಂದು ಬಾರಿ ಭತ್ತದ ಗದ್ದೆಗೆ ನೀರು ಕಟ್ಟಿದರೆ ಅದು ಬರಿದಾಗುವವರೆಗೆ ನೀರು ಬಿಡುವುದಿಲ್ಲ. ನೀರು ಖಾಲಿ ಹಾಗಿ ಮಣ್ಣಿನಲ್ಲಿ ಗಾಳಿ ಆಡಲು ಅವಕಾಶ ಕಲ್ಪಿಸಿ ನಂತರ ಮತ್ತೆ ನೀರು ಬಿಡುತ್ತಾರೆ, ಇದಕ್ಕೆ ಕಟ್ನೀರು ಎಂದು ಕರೆಯಲಾಗುತ್ತದೆ.ಜೀವಾಮೃತ, ಉಳಿ ಮಜ್ಜಿಗೆ ಸಿಂಪರಣೆ ಮಾಡಿ ಎಕರೆಗೆ 15 ರಿಂದ 18 ಕ್ವಿಂಟಾಲ್ ರಾಜಮುಡಿ ಭತ್ತ ಬೆಳೆಯುವ ಕೃಷ್ಣಮೂತರ್ಿ, ಭತ್ತದ ಹುಲ್ಲ ಎತ್ತರವಾಗಿ ಬೆಳೆಯುವುದರಿಂದ ದನಕರುಗಳಿಗೂ ಸಮೃದ್ಧ ಮೇವು ಸಿಕ್ಕಂತಾಗುತ್ತದೆ ಎಂದರು.
ಅಡಿಕೆ ಗಿಡಗಳನ್ನು ನರ್ಸರಿಯಲ್ಲಿ ಬೆಳೆಸಿ ತೋಟದಲ್ಲಿ ಹಾಕುವುದಕ್ಕಿಂತ ಅಡಿಕೆ ಗೋಟನ್ನೆ ತಂದು ಭೂಮಿಯಲ್ಲಿ ಹಾಕಿ ಬೆಳೆಸಿದರೆ ಉತ್ತಮವಾಗಿರುತ್ತದೆ. ಗಿಡ ವಾತವರಣಕ್ಕೆ ಹೊಂದಿಕೊಂಡು ಬೆಳೆಯುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿರುತ್ತದೆ. ಯಾವುದೆ ಗಿಡವನ್ನು ಇದೆ ರೀತಿ ಬೆಳೆಸುವುದು ಉತ್ತಮ ಎನ್ನುವುದನ್ನು ಅನುಭವದಿಂದ ಕಂಡುಕೊಂಡಿರುವುದಾಗಿ ಹೇಕುತ್ತಾರೆ.
ಮಾವು,ಗೋಡಂಬಿ,ಅಪ್ಪೆ ಮಿಡಿ ಮಾವು ಬೆಳೆದಿರುವ ತೋಟಕ್ಕೂ ವಾರಕ್ಕೆ ಎರಡು ಬಾರಿ ನೀರು ನೀಡುತ್ತೇನೆ. ಯಾಕೆಂದರೆ ನಮ್ಮಲ್ಲಿ ಬೋರ್ವೆಲ್ ಇಲ್ಲ. ನಾಲೆಯಿಂದ ಡಿಸೇಲ್ ಮೋಟಾರ್ನಿಂದ ನೀರು ಎತ್ತಬೇಕು. ಅದಕ್ಕಾಗಿ ಹೆಚ್ಚು ಹಣ ಕಳೆದುಕೊಳ್ಳಲು ಸಿದ್ಧನಿಲ್ಲ ಎನ್ನುತ್ತಾರೆ.
ಕೃಷಿ ಅನಿವಾರ್ಯ : ಆರೋಗ್ಯಕ್ಕೆ. ಖುಷಿಗೆ. ನೆಮ್ಮದಿಗೆ ಕೃಷಿ ಅನಿವಾರ್ಯವಾದ ಕಸುಬು. ಮುಂದಿನ ಹತ್ತು ವರ್ಷದಲ್ಲಿ ತಂತ್ರಜ್ಞಾನವಲಯದಲ್ಲಿ ಬರೀ ಬದಲಾವಣೆಯ ಗಾಳಿ ಬೀಸಲಿದೆ. ಆಗ ಎಲ್ಲಾ ಕೆಲಸವನ್ನು ಯಂತ್ರಗಳೆ ಮಾಡಲಿದ್ದು, ಏಟಿಬಿಟಿ ಬೆನ್ನತ್ತಿರುವ ಯುವಜನಾಂಗ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಗ್ಯಾರಂಟಿ. ಈಗಿನಿಂದಲೆ ಮುನ್ನೆಚ್ಚರಿಕೆ ಕ್ರಮವಾಗಿ ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡವರು ಮಾತ್ರ ಸೇಫ್. ರೈತರು ಏಕ ಬೆಳೆ ಪದ್ಧತಿಯನ್ನು ಕೈಬಿಟ್ಟು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಹೆಚ್ಚು ಗುಡನರಗಳನ್ನು ಬೆಳೆಸಿಕೊಳ್ಳಬೇಕು. ನಾವೆ ಬೆಳೆಸಿದ ತೇಗದ ಮರಗಳು ಈಗ ನಮಗೆ ಫೆನ್ಷನ್ನಂತೆ ಹಣ ತಂದುಕೊಡುತ್ತಿವೆ. ಪ್ರತಿ ಮರ 50 ಸಾವಿರ ರೂ.ಬೆಲೆಬಾಳುತ್ತಿದೆ ಎಂದು ಬೇಲಿಯ ಸುತ್ತ ಇದ್ದ ಟೀಕ್ ಮರಗಳತ್ತ ಕೈಮಾಡಿದರು.
ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ 1957 ರಲ್ಲಿ ರಾಷ್ಟ್ರಕವಿ ಕುವೆಂಪು, ಎಫ್.ಕೆ.ಇರಾನಿ ಮತ್ತಿತರರ ಗಣ್ಯರ ಮನೆಗೆ ಪೇಪರ್ ಹಾಕುತ್ತಿದ್ದ ಹುಡುಗನೊಬ್ಬ ಈ ಮಟ್ಟಕ್ಕೆ ಬೆಳೆದ ಪರಿಯೆ ನಮ್ಮಗೊಂದು ಅಚ್ಚರಿಯಂತೆ ಕಂಡಿತು. ಬಿ.ಆರ್.ಪಂತುಲು ಅವರಿಗೆ ಕಾರ್ ಡ್ರೈವರ್ ಆಗಿ ಬೆಳ್ಳಿಮೋಡ ಸಿನಿಮಾ ನಿದರ್ೇಶನ ಮಾಡುವವರೆಗೆ 20 ವರ್ಷಗಳಿಗೂ ಹೆಚ್ಚು ಕಾಲ ಪುಟ್ಟಣ್ಣ ಕಣಗಾಲ್ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದಾಗಿ ಹೇಳುವ ಕೃಷ್ಣಮೂತರ್ಿ, ಪುಟ್ಟಣ್ಣ ಕಣಗಾಲ್ ಒಬ್ಬ ಜೀನಿಯಸ್ ಎಂದು ಹೇಳಿ ಅವರ ಜೊತೆಗಿನ ತಮ್ಮ ಆ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು.
ಸಂಪೂರ್ಣ ಶೂನ್ಯ ಬಂಡವಾಳದ ನಿರ್ವಹಣೆಯ ಉತ್ತಮ ಆದಾಯ ಬರುತ್ತಿರುವ ತೋಟ ನೋಟಬೇಕೆಂಬ ಕೃಷಿಕರು ಹೆಚ್ಚಿನ ಮಾಹಿತಿಗೆ ಕೃಷ್ಣಮೂತರ್ಿ 9449942806- 9591230259 ಅವರನ್ನು ಸಂಪಕರ್ಿಸಬಹುದು.





  
ಕರಳು ಮಣ್ಣಿಗೆ ಜೀವಕೊಟ್ಟ ಕೃಷಿಸಂತ  ಕುಳ್ಳೆಗೌಡರು
ರೈತರ ಪಾಲಿನ ಸದ್ಗುರು ಸುಭಾಷ್ ಪಾಳೇಕರ್ ಎಂದ ನೈಸಗರ್ಿಕ ಕೃಷಿಕ
ಪಿರಿಯಾಪಟ್ಟಣ : ಇದು ಎಗ್ ಪ್ರೂಟ್, ಅಲ್ನೋಡಿ ಡ್ರ್ಯಾಗನ್ ಪ್ರೂಟ್, ಲೀಚಿ ಮರ, ವುಡ್ ಆಫಲ್ ಇವೆಲ್ಲಾ ವಿದೇಶಿ ಹಣ್ಣಿನ ಗಿಡಗಳು. ಬಾರ್ಡರ್ನಲ್ಲಿ ಕಿತ್ತಳೆ, ಜಮ್ಮುನೇರಳೆ, ಐದಾರು ತಳಿಯ ಹಲಸು,ಲವಂಗ, ಆಲ್ ಸ್ಪೈಸಿಸ್,ಚಕ್ಕೋತ,ದಾಳಿಂಬೆ, ಸೀತಾಫಲ,ರಾಮಫಲ,ಬಟರ್ ಪ್ರೂಟ್ ಮತ್ತಿತರ ಹಣ್ಣಿನ ಗಿಡಗಳಿವೆ. ಇವೆಲ್ಲಾ ಮನೆ ಬಳಕೆಗೆ ಮಾತ್ರ. ಮಾರಾಟಕ್ಕಲ್ಲಾ. ಅಡಿಕೆ, ತೆಂಗು,ಮೆಣಸು, ಕೋಕೋ,ಜಾಯಿಕಾಯಿ ಮಾತ್ರ ಕಮಷರ್ಿಯಲ್ ಎನ್ನುತ್ತಾ ಪ್ರತಿ ಗಿಡಮರಗಳ ಬಗ್ಗೆ ವಿವರವಾಗಿ ಹೇಳುತ್ತಾ ತೋಟದ ಒಳಗೆ ನಮ್ಮನ್ನು ನಿಧಾನವಾಗಿ ಕರೆದುಕೊಂಡು ಹೋದರು 72 ವರ್ಷದ ಹಿರಿಯ ಜೀವ ನೈಸಗರ್ಿಕ ಕೃಷಿಕ ಕುಳ್ಳೆಗೌಡರು.

ಅವರ ಪ್ರೀತಿಯ ಜರ್ಮನ್ ಶೆಪಡರ್್ ನಾಯಿಗಳೆರಡು ನಮ್ಮೊಂದಿಗೆ ತೋಟವನ್ನು ಸುತ್ತುತ್ತಾ ಹಿರಿಯ ಜೀವದ ಕಾವಲುಗಾರರಂತೆ, ನಂಬಿಕೆಯ ಭಂಟರಂತೆ ಓಡಾಡುತ್ತಿದ್ದರೆ, ಹುಳ್ಳೆಗೌಡರು "ಸ್ನೇಹಿತರು ನಮಗೆ ನಾಯಿಗಳನ್ನು ತಂದು ಕೊಡುತ್ತಾರೆ.ನಾವು ಸಾಕುತ್ತೇವೆ. ಹಣಕೊಟ್ಟು ನಾಯಿಗಳನ್ನು ಕೊಂಡಿಲ್ಲ.ಐದಾರು ನಾಯಿಗಳಿದ್ದವು ಕೆಲವು ಸತ್ತು ಇವೆರಡು ಉಳಿದುಕೊಂಡಿವೆ. ಮನೆಯವರೆಲ್ಲರಿಗೂ ಇವುಗಳನ್ನು ಕಂಡರೆ ಬಲು ಪ್ರೀತಿ. ಅವೆ ನಮ್ಮ ಮತ್ತು ತೋಟದ ಕಾವಲುಗಾರರು" ಎಂದರು.
ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದ ಕುಳ್ಳೆಗೌಡರು ಕಳೆದ ಹದಿನಾರು ವರ್ಷಗಳಿಂದಲೂ ತಮ್ಮ ಏಳು ಎಕರೆ ಪ್ರದೇಶದಲ್ಲಿ ಶೂನ್ಯ ಬಂಡವಾಳ ಕೃಷಿ ಮಾಡುತ್ತಿದ್ದಾರೆ. ಖ್ಯಾತ ಸಿನಿಮಾ ನಿದರ್ೇಶಕ ಪುಟ್ಟಣ ಕಣಗಾಲ್ ಅವರಿಂದ ಪ್ರಸಿದ್ಧಿಗೆ ಬಂದ ಕಣಗಾಲಿಗೆ ಹೋಗಿ ಇಬ್ಬರು ಬಾಲ್ಯದ ಗೆಳೆಯರು, ನೈಸಗರ್ಿಕ ಕೃಷಿಕರೂ ಆದ ಕುಳ್ಳೆಗೌಡ ಮತ್ತು ಕೃಷ್ಣಮೂತರ್ಿ ಎಂಬ ಹಿರಿಯ ಜೀವಗಳನ್ನು ನಾವು ಕಾಣದೆ ಹೋಗಿದ್ದರೆ ಜೀವನದಲ್ಲಿ ಮುಖ್ಯವಾದ ಏನನ್ನೋ ಮಿಸ್ ಮಾಡಿಕೊಂಡಂತಾಗುತ್ತಿತ್ತು.

ಪತ್ನಿ, ಮಕ್ಕಳಾದ ಡಾ.ಹರ್ಷ,ದೊರೆ ಮತ್ತು ಸೊಸೆ,ಮೊಮ್ಮಕ್ಕಳೊಂದಿಗೆ ತೋಟದ ಹಸಿರು ಸಿರಿಯ ನಡುವೆ ಇರುವ ಕುಳ್ಳೆಗೌಡರು ತಮ್ಮನು ಇಡಿಯಾಗಿ ಕೃಷಿಸಂತನಂತೆ ಮಣ್ಣಿಗೆ ಅಪರ್ಿಸಿಕೊಂಡು ಬದುಕುತ್ತಿದ್ದಾರೆ. ನಾವು ಅವರನ್ನು ಮಾತನಾಡಿಸಿಕೊಂಡು ತೋಟದಿಂದ ಬರುವಷ್ಟರಲ್ಲಿ ಊರಿನಲ್ಲಿ ಪೋಲಿಸ್ ವ್ಯಾನೊಂದು ಬಂದು ನಿಂತಿತ್ತು. ಈ ಬಗ್ಗೆ ಕೃಷ್ಣಮೂತರ್ಿ ಅವರನ್ನು ಕೇಳಿದಾಗ "ಕಳೆದ ಮೂರ್ನಾಲ್ಕು ದಿಗಳಿಂದ ಇದ್ದಕ್ಕಿದಂತೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಯಾರು, ಯಾವ ಕಡೆಯಿಂದ ಕಲ್ಲು ಎಸೆಯುತ್ತಾರೆ ಎನ್ನುವುದೆ ಗೊತ್ತಾಗುತ್ತಿಲ್ಲ. ಅದಕ್ಕಾಗಿ ಪೋಲಿಸ್ ವ್ಯಾನ್ ಬಂದಿದೆ" ಎಂದು ನಿರ್ಲಪ್ತವಾಗಿ ಹೇಳಿ ಮತ್ತೆ ಗೆಳೆತನ, ಕೃಷಿ ಅನುಭವದ ಕಡೆಗೆ ಮಾತು ತಿರುಗಿಸಿದರು.
ಪಾಲಿಗೆ ಬಂದದ್ದು ಪಂಚಾಮೃತ : "ಇದು ಕರಳು ಭೂಮಿ. ಇಲ್ಲಿ ಏನೂ ಬೆಳೆಯುತ್ತಿರಲಿಲ್ಲ.ಹಾಗಾಗಿ ಈ ಜಮೀನನ್ನು ಖಾಲಿ ಬಿಟ್ಟಿದ್ದರು. 1983 ರಲ್ಲಿ ನಮ್ಮ ತಂದೆ ಮಕ್ಕಳಿಗೆ ಜಮೀನು ಪಾಲು ಮಾಡುವಾಗ ಈ ಕರಳು ಭೂಮಿಯನ್ನು ನನ್ನ ಪಾಲಿಗೆ ಕೊಟ್ಟರು. ಯಾಕೆಂದರೆ ನಾನು ಓದಿ ಸಕರ್ಾರಿ ನೌಕರಿಯಲ್ಲಿ ಇದ್ದೆನಲ್ಲಾ" ಅದಕ್ಕೆ ನೋಡಿ ಅಂತ ನಮ್ಮ ಮುಖವನ್ನೊಮ್ಮ ನೋಡಿದರು ಕುಳ್ಳೆಗೌಡರು. ಏನೂ ಬೆಳೆಯದ ಕರಳು ಭೂಮಿಯನ್ನೆ ಹಸಿರುವನವಾಗಿ ಪರಿವತರ್ಿಸಿದ ಅವರ ಶ್ರಮ,ತಾಳ್ಮೆ, ಸಹನೆ,ಶ್ರದ್ಧೆ ಎಲ್ಲವೂ ಆ ನೋಟದಲ್ಲಿ ಬೆರೆತುಕೊಂಡಿರುವಂತೆ ನಮಗೆ ಕಂಡಿತು.
ನೀರಾವರಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾದ ನಂತರ ತಮ್ಮ ಇಡೀ ಬದುಕನ್ನೆ ಭೂಮಿಗೆ ಅಪರ್ಿಸಿಕೊಂಡಿರುವ ಕುಳ್ಳೆಗೌಡರ ಬದುಕು ಅತ್ಯಂತ ಸರಳ ಮತ್ತು ಪ್ರಾಮಾಣಿಕತೆ ಯಿಂದ ಕೂಡಿದ್ದು ಎಂದು ಮೊದಲೆಕೇಳಿ ತಿಳಿದುಕೊಂಡಿದ್ದ ನಮಗೆ ತೋಟದಲ್ಲಿ ಅವರನ್ನು ಕಣ್ಣಾರೆ ಕಂಡಾಗ ಕೃಷಿತಪಸ್ವಿಯ ಬೇಟಿಯಿಂದ ಧನ್ಯರಾದಂತೆ ಅನಿಸಿತು.
ತೋಟದಲ್ಲಿ ಆಳು ಕಾಳಿಗೆ ಅಂತ ವಾಷರ್ಿಕ ಅರವತ್ತೈದ ರಿಂದ ಎಪ್ಪತ್ತೈದು ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಎಂಟರಿಂದ ಹತ್ತು ಲಕ್ಷ ರೂಪಾಯಿವರಗೆ ಆದಾಯವಿದೆ ಎಂದರು.
"ಡಿಪಾರ್ಟಮೆಂಟ್ನಲ್ಲಿದ್ದಾಗ ನಾನು ಸ್ವಾಭಿಮಾನ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡಿದೆ. ಹಾರಂಗಿ ಅಣೆಕಟ್ಟು ಕಟ್ಟುವಾಗ ಆರಂಭದಿಂದ ಎಂಡ್ವರೆಗೂ ಇದ್ದೆ. ನಾವೇನಾದರೂ ಹಣದ ಹುಚ್ಚಿಗೆ ಬಿದ್ದು ಭ್ರಷ್ಟಚಾರ ಅಂತ ಮಾಡಿದ್ರೆ ಸಿಟಿಗೆ ಹೋಗಿ ಬಿಡುತ್ತಿದ್ದನೇನೊ, ಗೊತ್ತಿಲ್ಲ. ಪ್ರಾಮಾಣಿಕವಾಗಿ ಜೀವನ ಮಾಡಿದ್ದರಿಂದಲೇ ನಿವೃತ್ತನಾದ ನಂತರ ಹಳ್ಳಿಯಲ್ಲೆ ಉಳಿದು ಕೊಂಡು ವ್ಯವಸಾಯ ಮಾಡುವುದು ಅನಿವಾರ್ಯವಾಯಿತು " ಎಂದು ಯಾವುದೇ ಬೇಸರವಿಲ್ಲದ ತಣ್ಣನೆಯ ದನಿಯಲ್ಲಿ ಕುಳ್ಳೆಗೌಡರು ಹೇಳಿ ನಕ್ಕರು.
ಪುಕೊವಕೊ ಪ್ರಭಾವ : ಬಾಲ್ಯದಿಂದಲ್ಲೂ ಸಾಹಿತ್ಯ ಆಸಕ್ತಿ ಇರುವ ಕುಳ್ಳೆಗೌಡರು ತೋಟದ ಮನೆ ಲೈಬ್ರರಿಯಲ್ಲಿ ಸಾವಿರಾರು ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮತ್ತು ಶಿವರಾಮ ಕಾರಂತರ ಸಾಹಿತ್ಯ ಪ್ರೇಮಿಯಾಗಿರುವ ಇವರು ಕನ್ನಡದ ಮುಖ್ಯ ಕವಿ ಲೇಖಕರ ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಎಲೆಮರೆಯ ಕಾಯಿಯಂತೆ ಯಾವ ಪ್ರಚಾರ,ಕೀತರ್ಿಯನ್ನು ಬಯಸದೆ ಹಸಿರಿನ ನಡುವೆ ತಣ್ಣಗೆ ಬದುಕುತ್ತಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಮತ್ತು ನರೇಂದ್ರ ರೈ ದೆರ್ಲ ಅವರ "ಸಹಜ ಕೃಷಿ" ಪುಸ್ತಕ ಓದಿ ಪ್ರಭಾವಿತರಾದ ಕುಳ್ಳೆಗೌಡರು ನಂತರ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ ಪುಕೊವಕೊ ಅವರ " ದ ನೇಚುರಲ್ ವೇ ಆಫ್ ಪಾಮರ್ಿಂಗ್" ಪುಸ್ತಕವನ್ನು ಓದಿ ನೈಸಗರ್ಿಕ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡವರು.
ನಿರಂತರ ಶ್ರಮ : ಜಮೀನು ನನ್ನ ಪಾಲಿಗೆ ಬಂದಾಗ ಕೃಷಿ ಬಗ್ಗೆ ನನಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ಸಹಜ ಕೃಷಿ ಪುಸ್ತಕ ಓದಿಕೊಂಡಿದ್ದರ ಆಧಾರದ ಮೇಲೆ 1983 ರಲ್ಲಿ ಮೊದಲು ಕರಳು ಭೂಮಿ ಜಮೀನಿನಲ್ಲಿ ಕಾಲುವೆ ಒಡೆಸಿದೆ. ಸಾವಯವ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಳಮಾಡಲು ಸೆಣಬು, ದ್ವಿದಳ ದಾನ್ಯ ಭಿತ್ತಿ ಮಲ್ಚಿಂಗ್ ಮಾಡಿದೆ. ಒಂದು ಬಾರಿ ಹತ್ತು ಸಾವಿರ ರೂಪಾಯಿಕೊಟ್ಟು ಭತ್ತದ ಹುಲ್ಲು ಖರೀದಿಸಿ ಜಮೀನಿನ ತುಂಬೆಲ್ಲಾ ಹೊದಿಕೆಯಾಗಿ ಹಾಸಿಬಿಟ್ಟಿದ್ದೆ. ಇದೆಲ್ಲದ್ದ ಜೊತೆಜೊತೆಯಲ್ಲಿ ತೆಂಗು, ಅಡಿಕೆ ಪೈರು ನಾಟಿ ಮಾಡುತ್ತಾ ಬಂದೆ. ಕರಳು ಭೂಮಿ ಹೋಗಿ ಫಲವತ್ತಾದ ಭೂಮಿಯಾಗಲು ಐದು ವರ್ಷ ಬೇಕಾಯಿತು. ಈಗ ನೀವು ನೋಡುತ್ತಿರುವ ತೋಟ 20 ವರ್ಷ ಹಳೆಯದು. ಅಡಿಕೆ ಸರಿಯಾಗಿ ಬಾರದೆ ಐದು ಬಾರಿ ಅಡಿಕೆ ನೆಟ್ಟಿದ್ದೆ ಎಂದು ಕುಳ್ಳೆಗೌಡರು ಹಳೆಯ ನೆನಪಿಗೆ ಜಾರಿದರು.
ಎರಡೂವರೆ ಎಕರೆಯಲ್ಲಿ 2000 ಕ್ಕೂ ಹೆಚ್ಚು ಅಡಿಕೆ ಮರಗಳಿವೆ. ಮಧ್ಯದಲ್ಲಿ 170 ತೆಂಗು ಇದೆ. ನಮ್ಮ ತೋಟದ ವಿಶೇಷವೆಂದರೆ ತೆಂಗು ಮತ್ತು ಅಡಿಕೆ ಎರಡೂ ಮರಗಳಿಗೂ ಮೆಣಸನ್ನು ಹಬ್ಬಿಸಿದ್ದೇವೆ. ಪಣಿಯೂರು 1,3,5 ಮತ್ತು ಶ್ರೀಕರ,ಶುಭಕರ,ಕರಿಮುಂಡ ಎಂಬ ಆರು ವಿವಿಧ ತಳಿಯ ಮೆಣಸು ಇದೆ. ನಡುವೆ ಕೋಕೋ, ಕಾಫಿ, ನಿಂಬೆ ಎಲ್ಲವೂ ಇದೆ ಎಂದರು.
ಉಳುಮೆ ಮಾಡುವುದಿಲ್ಲ :  ತೋಟವನ್ನು ಉಳುಮೆ ಮಾಡುವುದಾಗಲಿ, ಕಳೆ ಗಿಡ ತೆಗೆಯುವುದನ್ನಾಗಲಿ ನಾವು ಮಾಡುವುದಿಲ್ಲ. 2000 ಇಸವಿಯಿಂದಲೂ ರಾಸಾಯನಿಕ ಗೊಬ್ಬರ ಬಳಸಿಲ್ಲ.1987 ರಲ್ಲಿ ಒಮ್ಮೆ ತೋಟವನ್ನು ಅಗೆತ ಮಾಡಿಸಿದ್ದೆ. 1998 ರಲ್ಲಿ ಒಮ್ಮೆ 55 ಟ್ರ್ಯಾಕ್ಟರ್ ಗೊಬ್ಬರ ಹಾಕಿಸಿದ್ದೆ. ನಂತರ ಪುಕೊವಕೊ ಓದಿದ ಮೇಲೆ ಅದನ್ನೆಲ್ಲಾ ನಿಲ್ಲಿಸಿಬಿಟ್ಟೆ.ಕರಷಿಯನ್ನು ಪ್ರಕೃತಿಗೆ ಬಿಟ್ಟು ಸುಮ್ಮನಾದೆ. ಸಾಲದ್ದಕ್ಕೆ ಆಗಲೇ ಲೇಬರ್ ಸಮಸ್ಯೆ ಕಾಣಿಸಿಕೊಂಡಿತ್ತು. ನಮ್ಮಿಂದ ಗೊಬ್ಬರಕ್ಕಾಗಿ ಹಣ ಪಡೆದವರೂ ಮೋಸಮಾಡತೊಡಗಿದರು. ಕಾಸು ಕೇಡು ತಲೆಯೂ ಬೋಳು ಎಂಬ ಗಾದೆಯ ಮಾತಿನಂತಾಯಿತು ನಮ್ಮ ಪರಿಸ್ಥಿತಿ.ಅದಕ್ಕಾಗಿ ನ್ಯಾಚುರಲ್ ಪಾಮರ್ಿಂಗ್ಗೆ ಪೂರ ಗಮನಕೊಟ್ಟೆ ಎಂದರು ಕುಳ್ಳೆಗೌಡರು.
ವರ್ಷಕ್ಕೆ ಒಮ್ಮೆ ತೋಟದಲ್ಲಿ ಬೆಳೆಯುವ ಕಳೆ ಗಿಡಗಳನ್ನು ಅವು ಸ್ವಲ್ಪ ಬಲಿತಾಗ ವೀಡ್ ವೈರ್ ಕಟರ್ನಿಂದ ಕತ್ತರಿಸಿ ಭೂಮಿಗೆ ಹೊದಿಕೆ ಮಾಡುವುದನ್ನು ಬಿಟ್ಟರೆ ಮತ್ತೆ ಏನನ್ನೂ ಮಾಡುವುದಿಲ್ಲ. ಆರಂಭದಲ್ಲಿ ತಿಂಗಳಿಗೆ ಒಂದು ಬಾರಿ ಜೀವಾಮೃತ ಕೊಡುತ್ತಿದ್ದೆವು, ಈಗ ಮೂರು ತಿಂಗಳಿಗೆ ಒಮ್ಮೆ ಮಾತ್ರ ಜೀವಾಮೃತ ನೀಡುತ್ತೇವೆ. ಅದಕ್ಕಾಗಿಯೆ ನಾಟಿ ಹಸುಗಳನ್ನು ಸಾಕೊಕೊಂಡಿದ್ದೇವೆ ಎಂದರು.
ಮನೆಗೆ ಬೇಕಾದ ರಾಗಿ,ತರಕಾರಿ,ಸೊಪ್ಪು ಎಲ್ಲವನ್ನು ನೈಸಗರ್ಿಕ ಕೃಷಿಯಲ್ಲೆ ಬೆಳೆದುಕೊಳ್ಳುವ ಇವರು ನಗರ ಸಂಪರ್ಕದಿಂದ ಸಂಪೂರ್ಣ ದೂರವೆ ಉಳಿದು ಹಸಿರಿನ ನಡುವೆ ಬದುಕು ಕಟ್ಟಿಕೊಂಡಿದ್ದಾರೆ.
ಪಾಳೇಕರ್ ಕೃಷಿಯ ಬಗ್ಗೆ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಓದಿ ಮೈಸೂರು ಮತ್ತು ಚಾಮರಾಜನಗರದ ಅಮೃತ ಭೂಮಿಯಲ್ಲಿ ನಡೆದ ಶೂನ್ಯ ಬಂಡವಾಳ ಕೃಷಿ ಕಾರ್ಯಾಗಾರದಲ್ಲಿ ಬಾಲ್ಯದ ಗೆಳೆಯ ಕೃಷ್ಣಮೂತರ್ಿ ಅವರರೊಂದಿಗೆ ಹೋಗಿ ಭಾಗವಹಿಸಿದ್ದೆ. ಪಾಳೇಕರ್ ರೈತರ ಪಾಲಿನ ದೇವರು. ರೈತರು ಮಕ್ಕಿ ಕಾಮಕ್ಕಿಯಂತೆ ಕೃಷಿ ಮಾಡದೆ ತಮ್ಮ ಭೂಮಿಗೆ ತಾವೆ ಡಾಕ್ಟರ್ ಆಗಿ ಕೆಲಸ ಮಾಡಬೇಕು. ತೋಟದಲ್ಲಿ ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ.
ಮಾರುಕಟ್ಟೆ : ತೋಟದಲ್ಲಿ ಬೆಳೆದ ಕೋಕೋವನ್ನು ಒಣಗಿಸಿ ಇಟ್ಟುಕೊಳ್ಳಬಹುದು. ಉತ್ತಮ ದರ ಬಂಗಾಗ ಮಾರಾಟಮಾಡಬಹುದು. ಪುತ್ತೂರು ಮಾರುಕಟ್ಟೆಯಲ್ಲಿ ಕೋಕೋ ಮಾರಾಟಮಾಡುತ್ತೇವೆ. 170 ತೆಂಗಿನ ಮರದಿಂದ ವಾಷರ್ಿಕ 15,000 ಕೊಬ್ಬರಿ ಸಿಗುತ್ತದೆ. ಕಾಯಿ,ಎಳನೀರು ಮಾರಾಟ ಮಾಡುವುದಿಲ್ಲ.ತಿಪಟೂರು ತೆಂಗು ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟ ಮಾಡುತ್ತೇವೆ. ಗ್ರಾಹಕರು,ವ್ಯಾಪಾರಿಗಳು ತೋಟದ ಬಳಿಯೆ ಬಂದು ನಮ್ಮ ನೈಸಗರ್ಿಕ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ.ನಮಗೆ ಎಂದೂ ಮಾರಾಟದ ಸಮಸ್ಯೆ ಭಾದಿಸಿಲ್ಲ ಎಂದು ಕುಳ್ಳೆಗೌಡರು ಹೇಳಿದರು.
ನಮ್ಮ ಸುತ್ತಮುತ್ತಲಿನ ರೈತರಿಗೆ ಸಮಗ್ರ ನೈಸಗರ್ಿಕ ಕೃಷಿ ಅಳವಡಿಸಿಕೊಳ್ಳಲು ಎಷ್ಟೇ ಹೇಳಿದರು ಅರ್ಥವಾಗುತ್ತಿಲ್ಲ. ಇತ್ತೀಚೆಗೆ ನಮ್ಮನ್ನು ನೋಡಿದ ಕೆಲವರು ಪಾಳೇಕರ್ ಕೃಷಿ ಮಾಡಲು ಮುಂದಾಗಿದ್ದಾರೆ.ಅಂತಹವರಿಗೆ ನಾನೆ ಹೋಗಿ ಉಚಿತವಾಗಿ ಸಲಹೆ,ಮಾರ್ಗದರ್ಶನ ಮಾಡಿದ್ದೇನೆ.ತೋಟದಲ್ಲಿ ಸ್ಪಿಂಕ್ಲರ್ ಅಳವಡಿಸಿಕೊಳ್ಳಲು ನಾನೆ ಡಿಸೈನ್ ಮಾಡಿಕೊಟ್ಟಿದ್ದೇನೆ. ಹೊಗೆಸೊಪ್ಪು ಬೆಳೆದು ರೈತರು ಕಾಡನ್ನು ನಾಶಮಾಡುತ್ತಿದ್ದಾರೆ, ಇಂತಹ ಪರಿಸ್ಥಿತಿ ಇರುವುದರಿಂದಲೆ ಮಳೆಯೂ ಕಡಿಮೆಯಾಗಿದೆ.ಮೂರು ವರ್ಷಗಳಿಂದ ಮಳೆಯಾಗದ ಪರಿಣಾಮ ತೋಟಗಳೆಲ್ಲ ಒಣಗುತ್ತಿವೆ. ನಮ್ಮದು ನೈಸಗರ್ಿಕ ತೋಟವಾದ್ದರಿಂದ ಇನ್ನೂ ಹಸಿರಾಗಿದೆ. ಇನ್ನೆರಡು ವರ್ಷ ಮಳೆಯಾಗದಿದ್ದರೆ ನಮ್ಮ ತೋಟಗಳನ್ನೂ ಉಳಿಸಿಕೊಳ್ಳುವುದು ಕಷ್ಟ ಎನ್ನುವುದು ಇವರ ಆತಂಕ. ಆಸಕ್ತರು ಕುಳ್ಳೆಗೌಡರನ್ನು 9448958503 ಸಂಪಕರ್ಿಸಬಹುದು.



ಶನಿವಾರ, ನವೆಂಬರ್ 12, 2016

ಅನ್ನದ ಬಟ್ಟಲು ಈ ತದ್ರೂಪಿ ಕಾಡು :ದೊಡ್ಡಮಗ್ಗೆಯ ಸಹ್ಯಾದ್ರಿ
ಹಾಸನ : ಮಳೆಯ ಕಾಡುಗಳು ಕಣ್ಮರೆಯಾಗುತ್ತಿವೆ. ಮೋಡಗಳನ್ನು ತಡೆದು ಮಳೆ ಸುರಿಸಬೇಕಿದ್ದ ಮರಗಳನ್ನು ಕಡಿದು ಬಯಲುಮಾಡಿದ ಪರಿಣಾಮ ಮತ್ತೆ ಮತ್ತೆ ಭೀಕರ ಬರಗಾಲ ಎದುರಾಗಿ ನಿಂತನೆಲವೇ ಬೆಂಕಿಯ ಚೆಂಡಂತಾದ ಅನುಭವ.

ಬಿಸಿ ಪ್ರಳಯದ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಲೆ ಬಂದಿದ್ದಾರೆ. ಅರಣ್ಯಗಳನ್ನು ಹೇರಳವಾಗಿ ಬೆಳೆಸಬೇಕು ಎಂದು ತಜ್ಞರು ಹೇಳುತ್ತಾರೆ. ಆಹಾರದ ಅಭಾವ ಒಂದೆಡೆ. ಅರಣ್ಯಗಳನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಮತ್ತೊಂದೆಡೆ.ಇಂತಹ ಅಡಕತ್ತರಿಯ ನಡುವೆ ಬದುಕು ಸಿಲುಕಿದೆ. ಇಂತಹ ಸವಾಲನ್ನು ಎದುರಿಸಿ ಬಯಲು ಪ್ರದೇಶದಲ್ಲಿ ಬೃಹತ್ ಕಾಡು ಬೆಳೆಸಿ ಅನ್ನದ ಬಟ್ಟಲಾಗಿಸಿದ "ಬಂಗಾರದ ಮನುಷ್ಯ" ದೊಡ್ಡಮಗ್ಗೆಯ ಎಂ.ಸಿ.ರಂಗಸ್ವಾಮಿ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಎಂಬ ಬಯಲು ನಾಡಿನಲ್ಲಿ ಅವರು ಸೃಷ್ಠಿಸಿದ ಹಸಿರು ಕಾನನ ನಿತ್ಯಹರಿದ್ವರ್ಣ ಕಾಡನ್ನು ನೆನಪಿಗೆ ತರುತ್ತದೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ(1978-79) ಬಿಎ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಕೃಷಿಯನ್ನೆ ಮಾಡಬೇಕೆಂಬ ಕನಸುಕಂಡ ರಂಗಸ್ವಾಮಿ ಐದುನೂರು ಎಕರೆ ಪ್ರದೇಶದಲ್ಲಿ ತದ್ರೂಪಿ ಕಾಡು ಬೆಳೆಸುವ ಮೂಲಕ ಕಂಡ ಕನಸನ್ನು ಸಾಕಾರಮಾಡಿಕೊಂಡಿದ್ದಾರೆ.

" ಓದುವಾಗಲೇ ತಾನೊಬ್ಬ ದೊಡ್ಡ ಕೃಷಿಕನಾಗಬೇಕು. ತಮ್ಮಂದಿರ ಉನ್ನತ ವ್ಯಾಸಂಗಕ್ಕೆ ನೆರವಾಗಬೇಕು ಎಂದುಕೊಂಡಿದ್ದೆ.ಅದನ್ನು ಸಾಕಾರಮಾಡಿಕೊಂಡ ತೃಪ್ತಿ ನನ್ನದು" ಎಂದು ಹೇಳುವಾಗ ರಂಗಸ್ವಾಮಿ ಅಂದುಕೊಂಡದ್ದನ್ನು ಸಾಧಿಸುವ ಛಲಗಾರನಂತೆ ಕಾಣುತ್ತಾರೆ.
ಎಂ.ಜೆ.ತಿಮ್ಮೇಗೌಡ ಮತ್ತು ಲಕ್ಷಮ್ಮ ದಂಪತಿಯ ನಾಲ್ವರು ಪುತ್ರರಲ್ಲಿ ರಂಗಸ್ವಾಮಿ ಹಿರಿಯ. ಒಬ್ಬ ಸಹೋದರ ಮೈಸೂರಿನ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿರುವ ಡಾ.ರಾಮೇಗೌಡ. ಮತ್ತಿಬ್ಬರು ಕೃಷ್ಣೇಗೌಡ, ನಾಗರಾಜು ಎಂಬ ಸಹೋದರರು ವ್ಯವಹಾರ ನೋಡಿಕೊಳ್ಳುತ್ತಾರೆ.
ರಂಗಸ್ವಾಮಿ ಪುತ್ರನೊಬ್ಬ ಐಆರ್ಎಸ್ ಮಾಡಿಕೊಂಡು ಕಸ್ಟಮ್ಸ್ನಲ್ಲಿ ಉನ್ನತ ಅಧಿಕಾರಿಯಾಗಿದ್ದಾರೆ, ಮತ್ತೊಬ್ಬ ಲಂಡನ್ನಲ್ಲಿ ಎಂಬಿಎ ಮಾಡಿಕೊಂಡು ತೆಲಂಗಾಣದಲ್ಲಿ ಕಂಪನಿಯೊಂದಕ್ಕೆ ಅಡ್ವೈಸರ್ ಆಗಿ ಕೆಲಸಮಾಡುತ್ತಿದ್ದಾರೆ. ಹೀಗೆ ಮನೆಯವರೆಲ್ಲ ಉನ್ನತ ವ್ಯಾಸಂಗಮಾಡಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೂ ಅವರ ಹಸಿರು ಪ್ರೀತಿ ಬೆಟ್ಟದಷ್ಟಿದೆ. ನಿರಂತರ ಹೋರಾಟದ ಬದುಕು ನಮ್ಮದು ಎಂಬ ರಂಗಸ್ವಾಮಿ ಅವರಿಗೆ ಸರಳತೆ,ಸಜ್ಜನಿಕೆಯಂತೂ ಹುಟ್ಟಿನಿಂದಲೆ ಬಂದಿದೆ.
ನೈಸಗರ್ಿಕ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು,ನೂರು ಎಕರೆ ಪ್ರದೇಶದಲ್ಲಿ ಅರವತ್ತು ಸಾವಿರ ಅಡಿಕೆಮರ, 2000 ತೆಂಗು, ಐವತ್ತು ಎಕರೆಯಲ್ಲಿ ತಾಳೆ,ಮೂವತ್ತೈದು ಎಕರೆಯಲ್ಲಿ ಏಲಕ್ಕಿ, ನಲವತ್ತು ಸಾವಿರ ಶ್ರೀಗಂಧ,ಐವತ್ತು ಸಾವಿರ ಹೆಬ್ಬೇವು, ಹತ್ತು ಸಾವಿರಕ್ಕೂ ಹೆಚ್ಚು ತೇಗ, ಮೆಣಸು,ಅಗರ್ ವುಡ್, ಲವಂಗ. ಜಾಯಿಕಾಯಿ, ಮಾವು,ಸಪೋಟ,ಮೂಸಂಬಿ,ನಿಂಬೆ,ಹಲಸು,ನೇರಳೆ,ಚಕ್ಕೆ ಹೀಗೆ ಹತ್ತು ಹಲವು ಬಗೆಯ ಸಾಂಬಾರ ಮತ್ತು ಹಣ್ಣಿನ ಗಿಡಗಳು ಈ ತದ್ರೂಪಿ ಕಾಡಿನಲ್ಲಿ ಬೆಳೆಯಲಾಗಿದೆ.
ಪಶುಪಾಲನೆಯಲ್ಲೂ ಸಾಧನೆ ಮಾಡಿದ್ದು, 180 ಹಸುಗಳು, 50 ಎಮ್ಮೆಗಳು, 200 ಕ್ಕೂ ಹೆಚ್ಚು ಕುರಿಗಳು , ಮೀನು ಸಾಕಾಣಿಕೆ ಎಲ್ಲಾ ಸೇರಿ ಸಮಗ್ರ, ಸುಸ್ಥಿರ ಕಾಡುಕೃಷಿಗೆ ಒಂದಕ್ಕೊಂದು ಪೂರಕವಾಗಿ ಆಥರ್ಿಕ ಸದೃಢತೆಗೆ ಸಹಕಾರಿಯಾಗಿವೆ. ಐದುನೂರು ಎಕರೆಯಲ್ಲಿ  ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಇದೆ, ಗ್ರಾನೈಟ್ ಫ್ಯಾಕ್ಟರಿ ಇದೆ. ಇದೆಲ್ಲಾವನ್ನು ಸರಿದೂಗಿಸಲೆಂಬಂತೆ ಲಕ್ಷಾಂತರ ಗಿಡಮರಗಳನ್ನು ಬೆಳೆಸಲಾಗಿದೆ. ಇದೆಲ್ಲವನ್ನು ನಿಭಾಹಿಸಲು ಆರು ಬೃಹತ್ ಕೆರೆಗಳನ್ನು ನಿಮರ್ಾಣ ಮಾಡಲಾಗಿದೆ. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟಲಾಗಿದೆ.ತೆರೆದ ಬಾವಿಗಳು ಇವೆ. ನಲವತ್ತು ಬೋರ್ವೆಲ್ಗಳಿವೆ. ಐದುನೂರು ಎಕರೆಯಲ್ಲಿ ಎಲ್ಲೂ ಜಮೀನನ್ನು ಖಾಲಿ ಬಿಡದೆ ಎಲ್ಲವನ್ನೂ ಯೋಜಿಸಿ, ಚಿಂತಿಸಿ ನೆಡಲಾಗಿದೆ. ನೂರಕ್ಕೂ ಹೆಚ್ಚು ಎರೆಗೊಬ್ಬರ ಘಟಕಗಳನ್ನು ನಿಮರ್ಾಣಮಾಡಿಕೊಂಡಿದ್ದಾರೆ.
ಗಿಡಮರಗಳಿಗೆ ಹನಿ ನೀರಾವರಿ, ಸ್ಪಿಂಕ್ಲರ್ ವಿಧಾನದಲ್ಲಿ ನೀರು ಕೊಡಲಾಗುತ್ತದೆ.ಅದಕ್ಕಾಗಿ ಅಲ್ಲಲ್ಲಿ ಬೈಹತ್ ಜನರೇಟರ್ ಇವೆ.ವಿದ್ಯುತ್ಗಾಗಿ ಪ್ರತ್ಯೇಕ ಎಂಯು ಸ್ಟೇಷನ್ ಮಾಡಿಕೊಂಡು ಎಕ್ಸ್ಪ್ರೆಸ್ ಲೇನ್ ಮೂಲಕ ಸಫರೇಟ್ ಫೀಡರ್ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಪ್ರತಿದಿನ ಇನ್ನೂರಕ್ಕೂ ಹೆಚ್ಚು ಕಾಮರ್ಿಕರು ಕೆಲಸಮಾಡುತ್ತಾರೆ. ಹಣವಿದ್ದವರು ಹಸಿರು ಪ್ರೀತಿಗೆ ಒಲಿದರೆ ಎಂತಹ ಬೆಂಗಾಡಿನಲ್ಲೂ ಸಹ್ಯಾದ್ರಿಯನ್ನೇ ಸೃಷ್ಠಿಸಬಹುದು ಎನ್ನುವುದಕ್ಕೆ ರಂಗಸ್ವಾಮಿ ಸಾಕ್ಷಿಯಾಗಿದ್ದಾರೆ.
ಇದಕ್ಕಾಗಿ ಅವರಿಗೆ ಕನರ್ಾಟಕ ಪಶುವೈದ್ಯಕೀಯ,ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ 2009ರಲ್ಲಿ ನಡೆದ ಜಾನುವಾರು,ಕುಕ್ಕುಟ,ಮತ್ಸ್ಯಮೇಳದಲ್ಲಿ ಕೃಷಿ ಸಾಧನೆ ಗುರುತಿಸಿ ಅಭಿನಂಧಿಸಿದೆ.2011 ರಲ್ಲಿ ನ್ಯಾಷನಲ್ ಡೈರಿ ಫಾರ್ಮರ್ ಆವಾಡರ್್, ಎರಡು ಬಾರಿ ಕೇಂದ್ರ ತಂಬಾಕು ಮಂಡಳಿ ರಂಗಸ್ವಾಮಿ ಅವರನ್ನು ಗೌರವಿಸಿದೆ. ಬೆಂಗಳೂರಿನ ಫಲದಾ ಆಗ್ಯರ್ಾನಿಕ್ ಸಂಸ್ಥೆಯವರು ಏಲಕ್ಕಿ ತೋಟಕ್ಕೆ ಸಾವಯವ ದೃಢೀಕರಣ ನೀಡಿದ್ದಾರೆ.
ಮಲೆನಾಡು ಪಶ್ಚಿಮ ಘಟ್ಟದವರಿಗೆ ಕಾಡು ಬೆಳೆಸುವುದು ಹೊಸದಲ್ಲ.ಅಲ್ಲಿ ಸಾವಿರಾರು ಎಕರೆಯುಳ್ಳ ಕಾಫಿ ಫ್ಲಾಂಟರ್ ಇರಬಹುದು. ಮರಗಳು ನ್ಯಾಚುರಲ್ ಆಗಿ ಬೆಳೆಯುತ್ತವೆ. ಸಿಲ್ವರ್, ರಬ್ಬರ್, ಅಕೇಶಿಯಾದಂತಹ ಏಕ ಸಸ್ಯ ಜಾತಿಗಳನ್ನು ಬೆಳೆಯಲಾಗುತ್ತದೆ. ಸಮವಸ್ತ್ರಧರಿಸಿ ಕವಾಯತು ಮಾಡುತ್ತಿರುವ ಹಸಿರು ಸೇನೆಯಂತೆ ಕಾಣುತ್ತದೆ. ಆದರೆ ರಂಗಸ್ವಾಮಿ ಅವರು ಬಯಲುನಾಡಿನಲ್ಲಿ ಎಲ್ಲಾ ರೀತಿಯ ಸಸ್ಯವರ್ಗಗಳನ್ನು ಬೆಳೆಯುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ನವಿಲುಗಳು,ಚಿಟ್ಟೆಗಳು,ಬಣ್ಣ ಬಣ್ಣದ ಹಕ್ಕಿಗಳು, ನೂರಾರು ಬಗೆಯ ಕೀಟಗಳು ಎಲ್ಲವೂ ಇಲ್ಲಿ ಮನೆಮಾಡಿಕೊಂಡಿವೆ.
ಮನುಷ್ಯನ ಹಸ್ತಕ್ಷೇಪವಿಲ್ಲದೆ ನೈಸಗರ್ಿಕ ಕಾಡೊಂದು ಸೃಷ್ಠಿಯಾಗಲು ಕನಿಷ್ಠ 50 ರಿಂದ 100 ವರ್ಷಬೇಕು. ಅನಲಾಗ್ ಫಾರೆಸ್ಟ್ ಎಂದು ಕರೆಯುವ ತದ್ರೂಪಿ ಕಾಡು ಸೃಷ್ಠಿಯಾಲು ಐದಾರು ವರ್ಷಗಳು ಸಾಕು.ಅಂತಹ ಒಂದು ವಿಸ್ಮಯ ಇಲ್ಲಿ ಸಾಕಾರಗೊಂಡಿದೆ.
ಕಾವೇರಿ ನೀರಿಗಾಗಿ ಕದನ ಶುರುವಾಗಿರುವ ಸಂದರ್ಭದಲ್ಲಿ ಸಾಹಿತಿ, ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ದೇವನೂರ ಮಹಾದೇವ ಕನ್ನಡ ಪ್ರಭ ಪತ್ರಿಕೆಯಲ್ಲಿ ಲೇಖನ ಬರೆಯುತ್ತಾ "ಹಣ ಇದ್ದವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಭೂಮಿ ಖರೀದಿಸಿ ಅಲ್ಲಿ ಕಾಡು ಬೆಳೆಸಿದರೆ ಆ ನದಿಗೂ ಒಳ್ಳೆಯದು ಹಾಗೂ ಅವರ ಕೊನೆಗಾಲಕ್ಕೂ ಬರುತ್ತದೆ.ಹಾಗೆಯೇ ಪ್ರಜ್ಞಾವಂತ ಶಿಕ್ಷಕರು ವಿದ್ಯಾಥರ್ಿಗಳಿಂದ ಗಿಡ ಬೆಳೆಸಿ ಮರವಾಗಿಸಿದರೆ ಈ ಕಾರ್ಯ ಸಮೂಹಿಕವಾಗಿ ದೊಡ್ಡದಾಗುತ್ತದೆ" ಎಂದು ಬರೆದಿದ್ದರು. ರಂಗಸ್ವಾಮಿ ಅವರನ್ನು ಕಂಡ ನಮಗೆ ಮಹಾದೇವ ಅವರ ಮಾತುಗಳು ನೆನಪಾಗಿ, ಹಣವಿದ್ದವರೆಲ್ಲಾ ಹೀಗೆ ಮಾಡಿಬಿಟ್ಟರೆ ಅರಣ್ಯ ಇಲಾಖೆಯವರಿಗೆ ಕೆಲಸವೇ ಇರುವುದಿಲ್ಲಾ, ಪರಿಸರ ಸಮತೋಲನ ಸಾಧಿಸುವುದು ಎಷ್ಟೊಂದು ಸುಲಭ ಎನಿಸಿತು.
ತದ್ರೂಪಿ ಕಾಡು : "ಅನಲಾಗ್ ಫಾರೆಸ್ಟ್ ಅಂದರೆ ಕಾಡುತೋಟ. ಶ್ರೀಲಂಕಾ ದೇಶದ ತೋಟಗಾರಿಕೆಯಲ್ಲಿ ಕಳೆದ ಎರಡು ದಶಕಗಳಿಂದ ಸಾಕಾರಗೊಂಡಿರುವ ಹೊಸ ಕಲ್ಪನೆ. ಜಗತ್ತಿನಾದ್ಯಂತ ಹೆಸರು ಮಾಡಿದೆ. ಸುಸ್ಥಿರ ಕೃಷಿಯ ನಿಸರ್ಗ ಸಂಧಾನ.ಕಾಡು ಉಳಿಯಬೇಕು ,ಕೃಷಿಯೂ ಗೆಲ್ಲಬೇಕು ಎನ್ನುವುದು ನಿಸರ್ಗ ಸಂಧಾನ. ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳುವುದರ ಜೊತೆಗೆ ಜೀವ ವೈವಿಧ್ಯಗಳಿಗೂ ಬದುಕಲು ಬಿಡುವುದು. ಬೆಂಗಾಡಿನಲ್ಲಿ ಹಸಿರು ಸಿರಿ ಬೆಳೆಸಬೇಕು. ಶ್ರೀಲಂಕಾದ 22 ಹಳ್ಳಿಯ ರೈತರು 600 ಎಕರೆಯಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.ಕಾಡಿನ ಮಾದರಿಯನ್ನು ಅನುಕರಣೆಮಾಡಿ ಕೃಷಿಯಲ್ಲಿ ಸಾಕಷ್ಟು ಸಸ್ಯ ವೈವಿಧ್ಯಬೆಳೆಸಿ, ಆಥರ್ಿಕ ಭದ್ರತೆಯನ್ನು ಸಾಧಿಸಿದ್ದಾರೆ" ಎಂದು ಪರಿಸಿರ ತಜ್ಞ ಶಿವಾನಂದ ಕಳವೆ ಹೇಳುತ್ತಾರೆ.
ಭಾರತ ಸಸ್ಯ ಮತ್ತು ಅರಣ್ಯಗಳ ಜೀವಸಿರಿ. ಆಹಾರ ಮತ್ತು ಅರಣ್ಯ ಎರಡೂ ವಿಷಯಗಳಲ್ಲಿ ಸಮನ್ವಯತೆ ಸಾಧಿಸಿ ರಂಗರಾಜು ಅವರು ಕಟ್ಟಿರುವ ಕಾಡುಕೃಷಿ ತೋಟ ನಮ್ಮ ರೈತರು ಮತ್ತು ಅರಣ್ಯ ಇಲಾಖೆಯ ಕಣ್ಣು ತೆರೆಸಬೇಕು.
ತಂಬಾಕು ಬಿಟ್ಟು ಮರ ಬೆಳೆಸಿದರು : 1995 ರಲ್ಲಿ 150 ಎಕರೆ ಪ್ರದೇಶದಲ್ಲಿ ಎಂಭತ್ತು ಸಾವಿರ ಕೆಜಿ ತಂಬಾಕು ಬೆಳೆದು ಸಾಧನೆ ಮಾಡಿದ್ದರು ರಂಗರಾಜು. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮರಸುಡುವುದು ಸಾಕು ಎಂದು ತೀಮಾನರ್ಿಸಿ ಸಾವಿರ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟರು.
ಸಸಿನೆಟ್ಟ ಮೂರ್ನಾಲ್ಕು ವರ್ಷ ಅವುಗಳನ್ನು ಕಾಪಾಡಿಕೊಂಡರೆ ನಂತರ ಅವು ಹೆಮ್ಮರಗಳಾಗಿ ಬೆಳೆಯುತ್ತವೆ. ಏನನ್ನೂ ಕೇಳುವುದಿಲ್ಲ.ದೀರ್ಘಕಾಲದಲ್ಲಿ ಅವೆ ಆದಾಯದ ಮೂಲಗಳಾಗುತ್ತವೆ. ನಮ್ಮ ಒಂದೊಂದು ಟೀಕ್ ಮರ ಈಗ 50 ಸಾವಿರ ರೂ.ಬೆಲೆಬಾಳುತ್ತದೆ. ಇದರೊಂದಿಗೆ ಪಶುಸಂಗೋಪನೆ ಮಾಡಿಕೊಂಡರೆ ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕಬಹುದು.ಈಗ ಆಳು ಕಾಳಿನ ಸಮಸ್ಯೆ ಇರುವುದರಿಂದ ಮರ ಬೆಳೆಸುವುದೊಂದೆ ನಮ್ಮಗಿರುವ ಪಯರ್ಾಯ ಮಾರ್ಗ ಎನ್ನುತ್ತಾರೆ ರಂಗಸ್ವಾಮಿ.
ಕಲ್ಲುಗಣಿ ಮಾಡುತ್ತಿರುವ ಪ್ರದೇಶದ ಸುತ್ತಮತ್ತಲಿನ ರೈತರ ಜಮೀನು ಖರೀದಿಸಿರುವ ರಂಗಸ್ವಾಮಿ ಅದನ್ನು ಸಂಪೂರ್ಣ ಗ್ರೀನ್ ಬೆಲ್ಟ್ಆಗಿ ಪರಿವತರ್ಿಸಿದ್ದಾರೆ. ಜಮೀನು ಖರೀದಿಸುವ ರೈತರ ಪುನರ್ವಸತಿಗೂ ವ್ಯವಸ್ಥೆಮಾಡಿ, ಅಂತಹ ರೈತರಿಗೆ ಪಯರ್ಾಯವಾಗಿ ಪ್ರತಿ ಎಕರೆಗೆ ಬದಲಾಗಿ ಬೇರೆ ಕಡೆ ಎರಡು, ಮೂರು ಎಕರೆ ಜಮೀನನ್ನು ಕೊಟ್ಟಿದ್ದಾರೆ. ಕಲ್ಲು ಗಣಿ ಸುತ್ತ ಈಗ ಎರಡೇ ವರ್ಷದಲ್ಲಿ ದೊಡ್ಡ ಕಾಡೊಂದು ತಲೆ ಎತ್ತಿ ನಿಂತಿದೆ.
ತಂಬಾಕು ಬೆಳೆಗೆ ಪಯರ್ಾಯ ಮಾರ್ಗಗಳನ್ನು ಹುಡುಕುತ್ತಿರುವ ಅಧಿಕಾರಿಗಳು ಈಗ ರಂಗಸ್ವಾಮಿ ಅವರ ಕಾಡುಕೃಷಿ ತೋಟಕ್ಕೆ ರೈತರನ್ನು ಕರೆದುಕೊಂಡು ಬಂದು ಅವರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಆಗ್ರೋ ಫಾರೆಸ್ಟ್ ಕಮಿಟಿಯವರು ಬರುತ್ತಿರುತ್ತಾರೆ.
ಅರಣ್ಯ ಇಲಾಖೆಯವರನ್ನ ನಂಬಿ ಸುಮ್ಮನ್ನೆ ನಾವು ಕೂರಬಾರದು.ಯಾವುದೆ ಪ್ರಚಾರವನ್ನೂ ಬಯಸುವುದು ಬೇಡ.ನಮ್ಮಷ್ಟಕ್ಕೆ ನಾವು ಗಿಡಮರಗಳನ್ನು ಬೆಳೆಸುತ್ತಾ ಹೋಗಬೇಕು. ಇದಕ್ಕಾಗಿ ಹಳಬರನ್ನು ನಂಬಿ ಕುಳಿತುಕೊಳ್ಳಬಾರದು, ಹೊಸತಲೆಮಾರಿನ ವಿದ್ಯಾವಂತ ಯುವಕರಿಗೆ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದನ್ನು ನಾವು ಕಲಿಸಬೇಕು. ಕಾಡು ಬೆಳೆದರೆ ನಾಡು ಬೆಳೆಯುತ್ತದೆ ಎನ್ನುವುದು ರಂಗಸ್ವಾಮಿಯವರ ಅನುಭವದ ಮಾತು.
ಬೆಸ್ಟ್ ಡೈರಿ ಫಾರಂ :180 ಹಸು,50 ಎಮ್ಮೆ ಸಾಕಿರುವ ರಂಗಸ್ವಾಮಿ ಅವರು ಪ್ರತಿದಿನ 400 ಲೀಟರ್ ಹಾಲು ಉತ್ಪಾದಿಸುತ್ತಾರೆ. ತಿರುಮಲ ಡೈರಿ ಎಂಬ ಖಾಸಗಿ ಡೈರಿಯವರು ತೋಟದ ಬಳಿಯೆ ಬಂದು ಪ್ರತಿ ಲೀಟರ್ ಹಾಲಿಗೆ ಮಾರುಕಟ್ಟೆ ದರಕ್ಕಿಂತ  2 ರೂ ಹೆಚ್ಚಿಗೆ ಕೊಟ್ಟು ಖರೀದಿಸುತ್ತಾರೆ. ಪಶುಪಾಲನೆಗೆ 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವಿನ ಹುಲ್ಲು ಮತ್ತು ಮುಸುಕಿನ ಜೋಳ ಬೆಳೆದುಕೊಂಡಿದ್ದಾರೆ. ಪ್ರತಿ ದಿನ ಒಂದು ಲೋಡ್ ಟ್ರ್ಯಾಕ್ಟರ್ ಹುಲ್ಲು ದನಗಳಿಗೆ ಬೇಕಾಗುತ್ತದೆ. ದನಗಳ ತಿರುಗಾಟಕ್ಕೆ ಒಂದೆರಡು ಎಕರೆಯ ಸುತ್ತಾ ಬೇಲಿನಿಮರ್ಾಣ ಮಾಡಿ ವ್ಯವಸ್ಥೆ ಕಲ್ಪಿಸಲಾಗಿದೆ.
ದನಗಳಿಂದ ಬರುವ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ಸ್ಥಾಪಿಸಿಕೊಂಡಿದ್ದು ಅದರಿಂದ ದೊರೆಯುವ ಸ್ಲರಿಯನ್ನು ಗಂಜಲ ಮತ್ತು ಅಡಿಕೆ ಸಿಪ್ಪೆಯ ಜೊತೆ ಮಿಕ್ಸ್ ಮಾಡಿ ಕೊಳೆಸಿ ತೋಟಕ್ಕೆ ಬಳಸುತ್ತಾರೆ. ಅತ್ಯುತ್ತಮ ಡೈರಿ ನಿರ್ವಹಣೆಗಾಗಿ 2011 ರಲ್ಲಿ ರಾಷ್ಟ್ರೀಯ ಡೈರಿ ಆವಾಡರ್್ ರಂಗಸ್ವಾಮಿ ಅವರಿಗೆ ಸಂದಿದೆ.
ಬ್ರೆಜಿಲ್ ಮಾದರಿ ಕಾಫಿ: ತಾಳೆ ಗಿಡಗಳನ್ನು ಹಾಕಿ ಐದಾರು ವರ್ಷಗಳು ಆಗಿದೆ. ಇಳುವರಿ ಕಡಿಮೆಯಾಗಿ ಆದಾಯ ಕಡಿಮೆ ಇದೆ. ಅದಕ್ಕಾಗಿ ಎರಡು ತಾಳೆಗಿಡಗಳ ನಡುವೆ ಕಾಫಿಗಿಡಗಳನ್ನು ಹಾಕಲು ಯೋಚಿಸುತ್ತಿದ್ದೇವೆ.
ಬ್ರೆಜಿಲ್ ಮಾದರಿಯಲ್ಲಿ ರೋಬಸ್ಟಾ ಕಾಫಿ ಗಿಡಗಳನ್ನು ಹಾಕಲು ಸಿದ್ಧತೆಮಾಡಿಕೊಂಡಿದ್ದೇವೆ. ಸಾಲಿನಿಂದ ಸಾಲಿಗೆ 14 ಅಡಿ, ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಗಿಡಗಳನ್ನು ಹಾಕಿದರೆ ತೋಟದಲ್ಲಿ ವಾಹನ ಓಡಾಡಲು, ಯಂತ್ರಗಳಿಂದ ಕೆಲಸಮಾಡಲು, ಕೊಯ್ಲುಮಾಡಲು ಅನುಕೂಲವಾಗುತ್ತದೆ ಎಂದು ಹೇಳುವಾಗ ರಂಗಸ್ವಾಮಿಯವರ ಕೃಷಿಯ ಜ್ಞಾನ,ತೋಟದಲ್ಲಿ ಏನೇ ಮಾಡಬೇಕಾದರೂ ಚಿಂತಿಸಿ, ಯೋಜಿಸಿ ಮಾಡುವುದು ಎದ್ದು ಕಾಣುತ್ತಿತ್ತು.
ಮಾರುಕಟ್ಟೆಗೆ ಹೋಗುವುದಿಲ್ಲ : ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮೆಣಸು, ಏಲಕ್ಕಿ, ಕೋಕೋ,ಅಡಿಕೆ,ತೆಂಗು, ಕಾಫಿ ಮತ್ತಿತರ ಬೆಳೆಗಳನ್ನು ಬೆಳೆಯುವ ರಂಗಸ್ವಾಮಿ ಎಂದೂ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದಿಲ್ಲ.
ಬೆಂಗಳೂರಿನ ನೈಸಗರ್ಿಕ ಫಲದಾ ಸಂಸ್ಥೆಯವರು ಮತ್ತು ಬೇರೆ ವ್ಯಾಪಾರಿಗಳು ತೋಟಕ್ಕೆ ಬಂದು ಮಾಲನ್ನು ಖರೀದಿಸುತ್ತಾರೆ. ಒಳ್ಳೆಯ ಪದಾರ್ಥ ನಮ್ಮ ಬಳಿ ಇದೆ ಅಂತ ಗೊತ್ತಾದರೆ ವ್ಯಾಪಾರಸ್ಥರು ನಮ್ಮ ಬಳಿಯೆ ಬರುತ್ತಾರೆ ಎನ್ನುವುದು ರಂಗಸ್ವಾಮಿ ಅವರು ಕಂಡುಕೊಂಡಿರುವ ಸತ್ಯ.
ಅಡಿಕೆ, ತೆಂಗು,ಮೆಣಸು ಮತ್ತಿತರ ಗಿಡಗಳನ್ನು ತಾವೇ ಸ್ವತಃ ನರ್ಸರಿ ಮಾಡಿಕೊಳ್ಳುವ ಇವರು ಅಪರೂಪದ ಗಿಡಗಳನ್ನು ಮಾತ್ರ ಹೊರಗಿನಿಂದ ತರುತ್ತಾರೆ. ನಾವು ತೋಟಕ್ಕೆ ಹೋಗಿದ್ದಾಗ ಸಾವಿರಾರು ರಕ್ತ ಚಂದನ ಗಿಡಗಳನ್ನು ನೆಡಲು ತಯಾರಿ ನಡೆದಿತ್ತು. ಐದುನೂರು ಎಕರೆ ಪ್ರದೇಶವನ್ನು ಜೀಪಿನಲ್ಲಿ ಸುತ್ತಾಡುತ್ತಾ ಪ್ರತಿ ಗಿಡಮರಗಳ ಬಗ್ಗೆಯೂ ಅಕ್ಕರೆಯಿಂದ ವಿವರಣೆ ನೀಡಿದ ರಂಗಸ್ವಾಮಿ ಅವರ ಕೃಷಿ ಪ್ರೀತಿ ಮತ್ತು ಅವರ ಸರಳತೆ,ಸಜ್ಜನಿಕೆ ತದ್ರೂಪಿ ಕಾಡು ಬಿಟ್ಟು ಹೊರಬಂದರೂ ನಮ್ಮನ್ನು ಬಿಡದೆ ಬಹು ಕಾಲದವರೆಗೂ ಕಾಡುತ್ತಲೆ ಇತ್ತು. ರಸ್ತೆಯನ್ನು ದಾಟಿದ ನಮ್ಮ ಕಾರು ಗ್ರಾಮಗಳನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ "ಗಿಡ ಮರ ಬೆಳಸಿ ಕಾಡು ಉಳಿಸಿ "ಎಂಬ ಕೃಷಿ ಮತ್ತು ಅರಣ್ಯ ಇಲಾಖೆಯ ಗೋಡೆ ಬರಹಗಳು ಕಣ್ಣಮುಂದೆ ಹಾದುಹೋದವು.ಪರಿಸರವಾದಿಗಳ ಭೀರಕ ಭಾಷಣಗಳು ನೆನಪಾದವು.ಯಾವುದೆ ಪ್ರಚಾರ,ಸನ್ಮಾನ, ಗೌರವಗಳಿಂದ ದೂರವೆ ಉಳಿದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಗಿಡಮರ ಬೆಳೆಸುತ್ತಿರುವ ರಂಗಸ್ವಾಮಿ ಅಂತವರ ಸಂತತಿ ಹೆಚ್ಚಾಗಲಿ. ನಾಡಿನ ಯುವಕರು ತದ್ರೂಪಿ ಕಾಡು ಬೆಳೆಸಲು ಮುಂದಾಗಲಿ ಎಂದುಕೊಂಡು ಭವ್ಯವಾದ ವನಸಿರಿಯನ್ನು ನೋಡಿದ ತೃಪ್ತಿಯೊಂದಿಗೆ ಹೊರಬಂದೆವು. ಆಸಕ್ತರು ರಂಗಸ್ವಾಮಿ 9980126555 ಸಂಪಕರ್ಿಸಬಹುದು.






ಶನಿವಾರ, ನವೆಂಬರ್ 5, 2016

"ಪಂಚವಟಿ"ಯ ಆದರ್ಶದ ಬದುಕು : ಕೃಷಿಯಲ್ಲೆ ಖುಷಿ
ಸಾವಯವ ಕೃಷಿಗೆ ಜೈ, ನೌಕರಿಗೆ ಬೈ ಎಂದ  ಸಾಫ್ಟ್ವೇರ್ ಉದ್ಯೋಗಿ ಮಧು 
ಎಚ್.ಡಿ.ಕೋಟೆ : ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದಾಗ ಉಂಟಾಗುತ್ತಿದ್ದ ಆಥರ್ಿಕ ಕುಸಿತ ಆಗಾಗ ನಿದ್ದೆಗೆಡಿಸುತ್ತಿತ್ತು. ಏನಾದರೂ ಪರ್ಮನೆಂಟ್ ಕೆಲಸ ಇರುವ ಉದ್ಯೋಗ ಮಾಡಬೇಕು ಅಂತ ಆಲೋಚಿಸುತ್ತಿದ್ದೆ. ಆರೋಗ್ಯ, ನೆಮ್ಮದಿ, ವಿರಾಮ ಸಿಗುವಂತಹ ಕೆಲಸ ಅಂತ ಇದ್ರೆ ಅದು ಕೃಷಿ ಅನಿಸಿತು. ಹಾಗಾಗಿ ಇಷ್ಟಪಟ್ಟು, ತುಂಬಾ ಪ್ರೀತಿಯಿಂದ ಕೃಷಿ ಮಾಡುತ್ತಾ ಖುಷಿಯಾಗಿ ಹಸಿರಿನ ನಡುವೆ ನೆಮ್ಮದಿಯಾಗಿದ್ದೇನೆ ಎಂದರು ಸಾಫ್ಟ್ವೇರ್ ಕಂಪನಿಯ ಮಾಜಿ ಉದ್ಯೋಗಿ, ಹಾಲಿ ಪುಲ್ ಟೈಂ ಕೃಷಿಕ ಎಸ್.ಮಧು ಅಯ್ಯಂಗಾರ್.
ಸಂತೆಸರಗೂರಿನ ಶ್ರೀನಿವಾಸ ಅಯ್ಯಂಗಾರ್ ಮತ್ತು ಸರೋಜ ಅವರ ಮಗನಾದ ಮಧು ಹದಿನೈದು ವರ್ಷಗಳ ಕಾಲ ವಿಪ್ರೋ,ಮೈಂಡ್ ಟ್ರೀ,ಎಚ್ಸಿಎಲ್ ಕಂಪೆನಿಗಳಲ್ಲಿ ಲಂಡನ್, ಅಮೇರಿಕಾ,ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಕಡೆ ಕೆಲಸ ಮಾಡಿದ್ದಾರೆ. ಎಲ್ಲವನ್ನೂ ಸುತ್ತಿ ಕೊನೆಗೆ ಅವರು ಕಂಡುಕೊಂಡದ್ದು ಮಣ್ಣಿನಲ್ಲಿ ಸುಖವಿದೆ ಎಂಬ ಸರಳ ಸತ್ಯ. ಹಾಗಾಗಿಯೆ ಅವರು ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಸಂಬಳ ತಂದುಕೊಡುತಿದ್ದ ಉದ್ಯೋಗವನ್ನು ಬಿಟ್ಟು ಎಚ್.ಡಿ.ಕೋಟೆ ತಾಲೂಕಿನ ಚಿಕ್ಕ ಕೆರೆಯೂರು ಎಂಬ ಹಳ್ಳಿಯಲ್ಲಿರುವ "ಪಂಚವಟಿ" ಎಂಬ ಸಸ್ಯಕಾಶಿಯ ನಡುವೆ ಮೆಚ್ಚಿನ ಮಡದಿ ಶ್ರೀ ವಿದ್ಯಾ,ಮುದ್ದಿನ ಮಗಳು ವೈಷ್ಣವಿ ಜೊತೆ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ತಮ್ಮನ್ನು ಭೇಟಿ ಮಾಡಲು ಬರುವ ಸಮಾನ ಮನಸ್ಕ ಗೆಳೆಯರ ಜೊತೆ ಚಚರ್ಿಸುತ್ತಾ, ತಮಾಷೆ ಮಾಡುತ್ತಾ, ಗೇಲಿ ಮಾಡುತ್ತಾ ನೂರಾರು ವೈವಿಧ್ಯಮಯ ಗಿಡಗಳೊಂದಿಗೆ ಮಾತನಾಡುತ್ತಾ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಪಂಚವಟಿಯಲ್ಲಿರುವ ಅವರ ಮನೆ, ಜೀವನ ಶೈಲಿ ಸರಳತೆಯ ಬಗ್ಗೆ ಮಾತನಾಡುವ ಚಿಂತಕರಿಗಿಂತ ಅವರನ್ನು ಭಿನ್ನವಾಗಿಸಿದೆ. "ಪಂಚವಟಿ" ಎಂಬ ಫೇಸ್ ಬುಕ್ ಪೇಜ್ನಲ್ಲಿಯೂ ಅವರ ತೋಟದ ಮಾಹಿತಿಗಳ ಅಫ್ಡೆಟ್ ನೋಡಬಹುದು.
ನಗರದಿಂದ ಹಳ್ಳಿಗೆ ವಾರಕ್ಕೊಮ್ಮೆ ಹೋಗಿ ವ್ಯವಸಾಯ ಮಾಡಿಸುವವರು ತುಂಬಾ ಜನ ಇದ್ದಾರೆ. ಆದರೆ ಇವರು ಹಳ್ಳಿಯಿಂದ ನಗರಕ್ಕೆ ವಾರಕ್ಕೊಮ್ಮೆ ತಂದೆ ತಾಯಿ ನೋಡಲು ಬಂದು ಹೋಗುತ್ತಾರೆ. ಹಳ್ಳಿಯಲ್ಲೆ ಟಿವಿ ಇದೆ. ಫ್ರಿಜ್ ಇದೆ,ಫೋನ್,ಇಂಟರ್ನೆಟ್ ಇದೆ, ವಿದ್ಯುತ್ ಮೊದಲಿಗಿಂತ ಇಂಪ್ರೋ ಆಗಿದೆ ಮತ್ಯಾಕೆ ನಗರದಿಂದ ಹಳ್ಳಿಗೆ ಅಲೆಯಬೇಕು.ಇಲ್ಲೆ ಇದ್ದರೆ ಆಗದೆ ಎನ್ನುವ ಮೂಲಕ ಪೇಟೆ ರುಚಿ ಹತ್ತಿಸಿಕೊಂಡಿರುವ ನಮ್ಮ ಹಳ್ಳಿ ಹುಡುಗರ ನಡುವೆ ವಿಭಿನ್ನವಾಗಿ ಕಾಣುತ್ತಾರೆ.
"ಪಂಚವಟಿ"ಯಲ್ಲಿ ಬೇಲಿಯ ಹೂವುಗಳಿವೆ, ಕಾಡಿನ ಗಿಡಗಳಿವೆ, ಚರಂಡಿಯಲ್ಲಿ ಬೆಳೆಯುವ ಕಣ್ಮನ ಸೆಳೆಯುವ ಸಸ್ಯಗಳಿವೆ. ಇದನ್ನೆಲ್ಲಾ ಸುಮ್ಮನೆ ನೋಡಲು ಸುಂದರವಾಗಿ ಕಂಡದ್ದಕ್ಕೆ ತಂದು ಹಾಕಿದ್ದೇನೆ ಎಂದು ನಕ್ಕರು ಮಧು, ಆ ನಗುವಿನಲ್ಲೆ ಪರಿಸರದ ನೂರಾರು ಸೂಕ್ಷ್ಮಗಳನ್ನು ಅವರು ನಮಗೆ ವಿವರಿಸುತ್ತಿರುವಂತೆ ಕಂಡಿತು.
ಅವರ ತೋಟದಲ್ಲೀಗ  ಮಲ್ಲಿಕಾ ಸೇರಿದಂತೆ ಹದಿನೈದು ವಿವಿಧ ತಳಿಯ ಮಾವು, ಅಪ್ಪೆ ಮಿಡಿ, 18 ವಿವಿಧ ತಳಿಯ 30 ಹಲಸಿನ ಗಿಡಗಳು, ಏಳು ಬಗೆಯ ನಿಂಬೆ ಗಿಡಗಳು, ದಾಳಿಂಬೆ, ಬೆಟ್ಟದ ನೆಲ್ಲಿ, ನೇರಳೆ, ಬಟರ್ ಪ್ರೂಟ್,ಕೋಕೋ,ಕಾಫಿ,ಅಡಿಕೆ, ಪಪ್ಪಾಯ, 70 ತೆಂಗು ಹೀಗೆ ಹತ್ತು ಹಲವು ವಿವಿಧ ತಳಿಯ ಹಣ್ಣಿನ ಮರಗಿಡಗಳು ಹಸಿರು ಹೊದ್ದು, ಹೂ ಕಾಯಿ ಬಿಟ್ಟು ನಗುತ್ತಿವೆ. ಏಕ ಬೆಳೆ ಬೆಳೆಯುವವರ ನಡುವೆ ಸಸ್ಯ ವೈವಿಧ್ಯತೆಗೆ ಆದ್ಯತೆ ಕೊಟ್ಟಿರುವ ಮಧು ಪ್ರಯೋಗಶೀಲ ರೈತನಂತೆ ಕಾಣುತ್ತಾರೆ.
ಅಮೇರಿಕಾ ಟು ಚಿಕ್ಕ ಕೆರೆಯೂರ್ : 2009 ರಲ್ಲಿ ಅಮೇರಿಕಾದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಾಗ ಆಥರ್ಿಕ ಕುಸಿತ (ರಿಸೇಷನ್) ಕಾಣಿಸಿಕೊಂಡಿತು. ಆಗ ಅಮೇರಿಕಾ ಬಿಟ್ಟು ಬೆಂಗಳೂರಿಗೆ ಬಂದೆ. ಫರ್ಮನೆಂಟ್ ಕೆಲಸ ಅಂತ ಏನಾದರೂ ಮಾಡಬೇಕು ಅಂತ ಮನಸ್ಸು ಹೇಳುತ್ತಿತ್ತು. ಏನೂ ಕೆಲಸ ಮಾಡದೆ ಇರಲು ಸಾಧ್ಯವಾಗುತಿರಲಿಲ್ಲ.ಆಗ ಹೊಳೆದದ್ದು ಬೇಸಾಯ ಎಂಬ ನಿತ್ಯ, ನಿರಂತರ, ಪ್ರಯೋಗಶೀಲವಾಗಿ ತೊಡಗಿಸಿಕೊಳ್ಳಬಹುದಾದ ಕೃಷಿ ಕೆಲಸ. ಅಪ್ಪನಿಗೂ ಅದು ಇಷ್ಟದ ಕೆಲಸವಾಗಿತ್ತು ಆಗಾಗಿ 2010 ರಲ್ಲಿ "ಪಂಚವಟಿ" ಎಂಬ ಹೆಸರಿನಿಂದ ಕರೆಯುವ ಈ ನಾಲ್ಕುವರೆ ಎಕರೆ ಭೂಮಿಯನ್ನು ಖರೀದಿಮಾಡಿದೆವು.
ಮರ್ನಾಲ್ಕು ವರ್ಷಗಳ ಕಾಲ ಬೆಂಗಳೂರಿನಿಂದಲೆ ವಾರಕ್ಕೊಮ್ಮೆ ಜಮೀನಿಗೆ ಬಂದು ಕೃಷಿ ಕೆಲಸ ಮಾಡಿ ಹೋಗುತ್ತಿದ್ದೆ. ತದನಂತರ 2013 ರಲ್ಲಿ ಸಾಫ್ಟ್ವೇರ್ ಕಂಪನಿ ಕೆಲಸಕ್ಕೆ ಸಂಪೂರ್ಣ ಗುಡ್ ಬೈ ಹೇಳಿ ಪುಲ್ ಟೈಂ ಕೃಷಿಕನಾಗಿ ಇಲ್ಲೆ ಉಳಿದುಕೊಂಡು ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಮಧು.
ಕೃಷಿಯಲ್ಲಿ ದಿಢೀರ್ ಹಣ ಕಾಣಬೇಕು ಅಂದ್ರೆ ಸ್ವಲ್ಪ ಕಷ್ಟ. ಅದಕ್ಕಾಗಿ ಕಾಯುವ ತಾಳ್ಮೆ ಇರಬೇಕು. ಕೃಷಿಯಲ್ಲಿ ಡೈರೆಕ್ಟ್ ಬೆನಿಫಿಟ್ಗಳಿಗಿಂತ ಹೆಚ್ಚಾಗಿ ಇಂಡೈರೆಕ್ಟ್ ಬೆನಿಫಿಟ್ಗಳು ಸಾಕಷ್ಟಿವೆ. ಸಾಕಷ್ಟು ಸಮಯ ಸಿಗುತ್ತದೆ. ಒತ್ತಡ ಅಂತೂ ಇಲ್ಲವೆ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಇದ್ದೆ ಇದೆ. ಕುಟುಂಬದ ಜೊತೆ ಹೆಚ್ಚು ಹೆಚ್ಚು ಕಾಲಕಳೆಯಬಹುದು. ಪ್ರತಿದಿನದ ಓಡಾಟ, ಧಾವಂತ ಇರುವುದಿಲ್ಲ. ಒಳ್ಳೆಯ ಗಾಳಿ, ನೀರು, ನಿಶ್ಯಬ್ಧ ಎಲ್ಲವೂ ದಾರಾಳವಾಗಿ ಸಿಗುತ್ತವೆ. ಹಿಂದೆಲ್ಲ ಇವು "ಟೇಕನ್ ಫಾರ್ ಗ್ರಾಂಟೆಡ್" ಥರ ಆಗಿತ್ತು. ಈಗ ಹಣ ಕೊಟ್ಟು ಖರೀದಿಸಬೇಕಾದ ಸರಕುಗಳಾಗಿಬಿಟ್ಟಿವೆ ಎಂದು ಕೃಷಿಯಿಂದ ಆಗಬಹುದಾದ ಪ್ರಯೋಜನಗಳ ಬಗ್ಗೆ ಪಟ್ಟಿಕೊಡುತ್ತಾರೆ.
ಪ್ರತಿಯೊಬ್ಬರಿಗೂ ಒತ್ತಡದ ಬದುಕು ಸಾಕಾಗಿರುತ್ತದೆ. ನೆಮ್ಮದಿಯ, ಸರಳ ಜೀವನ ಬೇಕಾಗಿರುತ್ತದೆ.ಬಹುಶಃ ಒತ್ತಡ ರೀಚ್ ಆದ ಮೇಲೆ ಈ ರೀತಿಯ ಕೃಷಿ ಖುಷಿ ಬದುಕಿನ ಬಗ್ಗೆ ಆಲೋಚಿಸಿ ಮರಳಿ ಮಣ್ಣಿನ ಸೆಳೆತಕ್ಕೆ ಒಳಗಾಗಬಹುದು ಎನ್ನುವುದು ಮಧು ಅವರ ನುಡಿ.
ಹಸಿರು ಕಾಡಾದ ಬಯಲು : 2011 ರಲ್ಲಿ ಜಮೀನು ಖರೀದಿಸಿದಾಗ ಇದೊಂದು ಬಯಲು ಪ್ರದೇಶ. ಇಲ್ಲಿ ಯಾವುದೆ ಗಿಡಮರಗಳು ಇರಲಿಲ್ಲ. ಒಂದು ಬೋರ್ವೆಲ್ ಇತ್ತು.ಮೊದಲ ಒಂದು ವರ್ಷ ಸವರ್ೇ, ಬೇಲಿ ಹಾಕಿಸುವುದರಲ್ಲೆ ಕಳೆದು ಹೋಯ್ತು. 2011 ರಲ್ಲಿ 1000 ಅಂಗಾಂಶ ಕೃಷಿಯ ಜಿ9 ತಳಿಯ ಪಚ್ಚಬಾಳೆ ಹಾಕಿದೆ. ಈಗಲೂ ಅದೇ ಪಚ್ಚಬಾಳೆ ಗಿಡಗಳೆ ತೋಟದಲ್ಲಿರುವುದು.ಆರು ವರ್ಷದ ಕೂಳೆ ಬೆಳೆ ಇನ್ನೂ ಗೊನೆ ಬರುತ್ತಿದೆ. 2012 ರಲ್ಲಿ ಮತ್ತೆ 1000 ಏಲಕ್ಕಿ ಬಾಳೆ, ಸ್ವಲ್ಪ ನಂಜನಗೂಡು ರಸಬಾಳೆ ಹಾಕಿದೆ. ಮಧ್ಯೆ ನುಗ್ಗೆ ಹಾಕಿದ್ದೆ. ಮೂರು ವರ್ಷ ಬೆಳೆದೆ. ಒಳ್ಳೆಯ ಆದಾಯವೂ ಬಂತು. ನಂತರ ಏಲಕ್ಕಿ ಮತ್ತು ರಸಬಾಳೆಯನ್ನು ತೆಗೆದುಬಿಟ್ಟೆ. ರಸಬಾಳೆಯನ್ನು ಪ್ರತಿ ಎರಡು ವರ್ಷಕ್ಕೆ ಒಂದು ಸಲ ಜಾಗ ಬದಲಿಸಿ ಹಾಕಬೇಕಂತೆ, ಆಗ ಅದು ನನಗೆ ಗೊತ್ತಿರಲಿಲ್ಲ. ಬಾಳೆ ತೋಟದಲ್ಲಿ ಹಾಕಿದ್ದ ನುಗ್ಗೆಗಿಡಗಳು ಮಾತ್ರ ಮರವಾಗಿ ಈಗಲೂ ಇರುವುದನ್ನು ನೀವು ಕಾಣಬಹುದು.
ಉಳುಮೆ ಇಲ್ಲ : ಬಾಳೆ ಹಾಕಿದ ಸಮಯದಲ್ಲಿ ಗಿಡಗಳಿಗೆ ನೀರು ಕೊಡಲು ಸ್ಪಿಂಕ್ಲರ್ ಅಳವಡಿಸಿಕೊಂಡಿದ್ದೆ.ಸಾವಯವ ಮತ್ತು ನೈಸಗರ್ಿಕ ಕೃಷಿ ಮಾಡುವವರು ಸ್ಪಿಂಕ್ಲರ್ ಅಳವಡಿಸಿಕೊಳ್ಳುವುದೆ ಉತ್ತಮ. ಜೊತೆಗೆ ಬಾಳೆಯ ತೋಟದಲ್ಲಿ 12 ಅಡಿಗೆ ಒಂದು ಟ್ರಂಚ್ ತೆಗೆದಿದ್ದೆವು. ಇಲ್ಲಿನ ಟ್ರಂಚ್ ಕೆಲಸ ನಾನು ಮತ್ತು ತೋಟದಲ್ಲಿ ನನ್ನೊಂದಿಗೆ ಕೆಲಸಮಾಡುವ ಶಿವರಾಜು ಇಬ್ಬರೆ ಸೇರಿ ಮಾಡಿದ್ದು. ಎದುರು ಕಾಣುವ ತೋಟ ಶಿವರಾಜು ಅವರದ್ದೆ, ನಮಗೆ ಅಗತ್ಯ ಬಿದ್ದಾಗ ಅವರು ನಮ್ಮ ತೋಟದಲ್ಲೂ ಬಂದು ಕೆಲಸ ಮಾಡಿಕೊಡುತ್ತಾರೆ. ಕೂಲಿ ಆಳನ್ನಾಗಲಿ, ಯಂತ್ರವನ್ನಾಗಲಿ ನಾವು ಬಳಸಿ ಕೆಲಸಮಾಡಲಿಲ್ಲ ಎಂದು ನಮ್ಮ ಮುಖವನ್ನೊಮ್ಮೆ ಹುಸಿನಗೆಯೊಂದಿಗೆ ನೋಡಿದರು ಮಧು. ಸಣ್ಣಪುಟ್ಟ ತೋಟದ ಕೆಲಸಗಳಿಗೂ ಆಳಿನ ಮೊರೆ ಹೋಗುವ ನಮ್ಮ ರೈತರ ನಡುವೆ ಈ ಮಾಜಿ ಸಾಫ್ಟ್ವೇರ್ ಉದ್ಯೋಗಿಯ ಹುಸಿನಗೆ ಬದುಕಿನ ಸರಳ ಸತ್ಯಗಳನ್ನು ನಮಗೆ ಹೇಳುತ್ತಿರುವಂತೆ ಕಂಡಿತು.
2013 ರಿಂದ ಬಾಳೆಯ ತೋಟದ ನಡುವೆ ಅಲ್ಲಲ್ಲಿ ತೆಂಗು ,ನಿಂಬೆ, ಮಾವು, ನೇರಳೆ, ಹಲಸು ಮತ್ತಿತರ ಹಣ್ಣಿನ ಗಿಡಗಳನ್ನು ಹಾಕಿದೆವು. ಬಾಳೆ ಹಾಕಿದ ನಂತರ ತೋಟವನ್ನು ಉಳುಮೆ ಮಾಡಿಲ್ಲ. ಕಳೆ ಕೀಳುವುದಿಲ್ಲ. ತೋಟದಲ್ಲಿ ಬರುವ ಕಳೆ ಗಿಡಗಳನ್ನು ಕೊಚ್ಚಿ ಭೂಮಿಗೆ ಹೊದಿಕೆಯಾಗಿ ಮಾಡಲಾಗುತ್ತದೆ. ಇದರಿಂದ ಭೂಮಿಯಲ್ಲಿ ತೇವಾಂಶ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದರು.
ಜೀವಾಮೃತ ಎಂಬ ಮ್ಯಾಜಿಕ್ : ತೋಟ ಕಟ್ಟುವ ಮೊದಲು ಮಧು ಕಟ್ಟೆಮಳಲವಾಡಿಯ ಎ.ಪಿ.ಚಂದ್ರಶೇಖರ್ ಅವರ ಇಂದ್ರಪ್ರಸ್ಥ, ಪಿರಿಯಾಪಟ್ಟಣದ ಕುಳ್ಳೇಗೌಡ ಅವರ ನೈಸಗರ್ಿಕ ತೋಟಗಳಿಗೆ ಭೇಟಿ ನೀಡಿ ಅವರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದಿದ್ದಾರೆ. ಆ ತೋಟಗಳಿಂದ ಸ್ಪೂತರ್ಿ ಪಡೆದು ಹೊಸ ಮಾದರಿಯ ತೋಟವನ್ನೆ ಕಟ್ಟಿದ್ದಾರೆ.ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿ ಬಳಸಿಕೊಂಡಿದ್ದಾರೆ.
ಇಲ್ಲಿ ಮಧು ಜಮೀನು ಖರೀದಿಸುವ ಮೊದಲು ರಾಸಾಯನಿಕ ಕೃಷಿಯನ್ನೆ ಮಾಡಲಾಗುತ್ತಿತ್ತು. ಇವರು ಖರೀದಿಸಿದ ನಂತರ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆರಂಭದ ಮೂರು ವರ್ಷ ಜೀವಾಮೃತವನ್ನು ನೀಡಲಾಗಿದೆ. ಅದಕ್ಕಾಗಿ ತೋಟದ ಅಲ್ಲಲ್ಲಿ 250 ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ಡ್ರಮ್ ಇಟ್ಟು ಜೀವಾಮೃತ ತಯಾರಿಸಿಕೊಂಡು ಹದಿನೈದು ದಿನಕ್ಕೆ ಒಮ್ಮೆ ಭೂಮಿಗೆ ಚೆಲ್ಲಿ ನಂತರ ಸ್ಪಿಂಕ್ಲರ್ನಲ್ಲಿ ನೀರು ಕೊಡಲಾಗುತ್ತಿತ್ತು.
ಈಗ ಜೀವಾಮೃತವನ್ನು ನಿಲ್ಲಿಸಲಾಗಿದೆ. ಇಡೀ ತೋಟ ಹಸಿರು ಕಾಡಿನಂತೆ ಕಾಣುತ್ತದೆ,ಯಾವ ಕೃಷಿ ತ್ಯಾಜವನ್ನು ಜಮೀನಿನಿಂದ ಹೊರಗೆ ಹಾಕುವುದಿಲ್ಲ ಅದು ಅಲ್ಲೆ ಗೊಬ್ಬರವಾಗಿ ಕೊಳೆಯುತ್ತದೆ. ಭುಮಿಯಲ್ಲಿ ಎರೆಹುಳುವಿನ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ ಭೂಮಿ ಹಾಸಿಗೆಯಂತಾಗಿದೆ.ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದು ಸಗಣಿ, ಗಂಜಲವನ್ನು ಕೃಷಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಅರ್ಧ ಎಕರೆ ಪ್ರದೇಶವನ್ನು ಮಾತ್ರ ಉಳುಮೆ ಮಾಡಲಾಗುತ್ತದೆ. ಅಲ್ಲಿಂದ ಮನೆಗೆ ಬೇಕಾದ ರಾಗಿ, ಸಜ್ಜೆ, ಅರಿಶಿನ, ತರಕಾರಿ ಥರದ ಬೆಳೆಗಳನ್ನು ಬೆಳೆದುಕೊಳ್ಳುತ್ತಾರೆ.
ಮಾರುಕಟ್ಟೆ ಹೇಗೆ? : ನಾವು ನೈಸಗರ್ಿಕವಾಗಿ ಬೆಳೆದ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಗೆಳೆಯರಿಗೆ, ಗೊತ್ತಿರುವ ಮನೆಗಳಿಗೆ ಮಾರಾಟ ಮಾಡುತ್ತೇವೆ. ಅಲ್ಲದೆ ಹೆಚ್ಚಿಗೆ ಬೆಳೆದು ಮಾರುಕಟ್ಟೆ ಸಮಸ್ಯೆ ಸುಳಿಗೆ ಸಿಲುಕಬಾರದು ಎಂಬ ದೃಷ್ಠಿಯಿಂದ ಯಾವುದನ್ನು ದೊಡ್ಡ ಪ್ರಮಾಣದಲ್ಲಿ ನಾವು ಹಾಕಿಕೊಂಡಿಲ್ಲ. ಎಲ್ಲಾ ರೀತಿಯ ಹಣ್ಣಿನ ಗಿಡಗಳನ್ನು ಕಡಿಮೆ ಸಂಖ್ಯೆಯಲ್ಲಿ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ಮಧು.
ನಾಲ್ಕುವರೆ ಎಕರೆ ಪ್ರದೇಶದ ತೋಟವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿಕೊಂಡಿದ್ದೇವೆ. ಮೊದಲ ಪ್ಲಾಟ್ನಲ್ಲಿ ಮಳೆ ಆಶ್ರಯದಲ್ಲಿ ಬೆಳೆಯುವ, ಹದಿನೈದು ಇಪ್ಪತ್ತು ದಿನಕ್ಕೆ ಒಮ್ಮೆ ಮಾತ್ರ ನೀರು ಬೇಡುವ ಮಾವು, ನೆಲ್ಲಿ,ದಾಳಿಂಬೆ,ಸೀತಾಫಲ,ನೇರಳೆ ಅಂತಹ ಒಣಭೂಮಿ ತೋಟಗಾರಿಕಾ ಬೆಳೆ ಹಾಕಿದ್ದೇವೆ.
ಎರಡನೇ ಪ್ಲಾಟ್ನಲ್ಲಿ ವಾರಕ್ಕೆ ಒಮ್ಮೆ ನೀರು ಕೇಳುವ ನಿಂಬೆ,ಸೀಬೆ, ದಿವಿ ಹಲಸು,ಅಮಟೆ ಕಾಯಿ ಮತ್ತಿತರ ಗಿಡಗಳಿವೆ. ಮೂರನೆ ಪ್ಲಾಟ್ನಲ್ಲಿ ಬಾಳೆಜೊತೆ ಕಿತ್ತಳೆ,ಮೊಸಂಬಿ,ತೆಂಗು,ಈರಳೆ,ಕಾಫಿ,ಕೊಕೊ ಇದೆ. ಇವುಗಳಿಗೆ ಆಗಾಗ ನೀರು ಕೊಡುತ್ತೇವೆ. ಮೊನ್ನೆ ಅರ್ಧಗಂಟೆ ಸಾಧಾರಣ ಮಳೆ ಆಯಿತು ಹದಿನೈದು ದಿನ ಯಾವ ಗಿಡಗಳಿಗೂ ನೀರು ಕೊಡಬೇಕಾಗಿಲ್ಲ ಎನ್ನುತ್ತಾರೆ.
ಮೈಸೂರು ಮಾದಪುರ ರಸ್ತೆಯಲ್ಲಿ ಬಲಕ್ಕೆ ತಿರುಗಿದರೆ ನಾಲ್ಕುವರೆ ಕಿ.ಮೀ ಕ್ರಮಿಸಿದರೆ ಚಿಕ್ಕ ಕೆರೆಯೂರು ಸಿಗುತ್ತದೆ. ಗದ್ದಿಗೆ ಕಡೆಯಿಂದ ಎಚ್.ಡಿ.ಕೋಟೆ ಕಡೆಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ.ಕ್ರಮಿಸಿದರೆ "ಪಂಚವಟಿ" ತೋಟ ಸಿಗುತ್ತದೆ, ಆಸಕ್ತರು ಎಸ್.ಮಧು ಅಯ್ಯಂಗಾರ್ ಅವರನ್ನು 9972047284 ಸಂಪಕರ್ಿಸಬಹುದು.






ಭಾನುವಾರ, ಅಕ್ಟೋಬರ್ 30, 2016

ಗುಡ್ಡದ ತಪ್ಪಲಿನ "ಬಿಲ್ವ ಫಾರಂ' ತೋಟಕಟ್ಟಿದ ಕನಸುಗಾರ
ಚಾಮರಾಜನಗರ ಜಿಲ್ಲೆಯಲ್ಲಿ ದಾಳಿಂಬೆ ಬೆಳೆದ ಉತ್ಸಾಹಿ ಯುವಕರು
ಚಾಮರಾಜನಗರ : ಪ್ರಯೋಗಶೀಲ ಮನಸ್ಸು ಮತ್ತು ಕೃಷಿ ಕಾಳಜಿ ಇರುವ ಯುವಕರ ತಂಡವೊಂದು ಮನಸ್ಸು ಮಾಡಿದರೆ ಬರದಲ್ಲೂ ಬದುಕಬಹುದು ಎನ್ನುವುದನ್ನು ಸಾಧಿಸಿ ತೋರಿಸಿದೆ. ಚಾಮರಾಜನಗರ ತಾಲೂಕಿನಲ್ಲಿ ದಾಳಿಂಬೆ ಬೆಳೆದು ಯಶಸ್ವಿಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಮಳೆ ಇಲ್ಲ. ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆ. ಮಳೆಯನ್ನೆ ನಂಬಿ ಬೇಸಾಯ ಮಾಡುವ ಜಿಲ್ಲೆಯ ರೈತರು ಕೃಷಿಯಿಂದ ವಿಮುಖರಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಇಂತಹ ದಿಕ್ಕೆಟ್ಟ ಪರಿಸ್ಥಿತಿಯ ನಡುವೆಯೂ ಬೋರ್ವೆಲ್ನಲ್ಲಿ ಬರುತ್ತಿರುವ ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಹೊಸ ಪ್ರಯೋಗಕ್ಕೆ ಮುಂದಾದ ಯುವ ರೈತ ಮಿತ್ರರು ಬಿಸಿಲ ನಾಡಿನಲ್ಲಿ ದಾಳಿಂಬೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಬಿಲ್ವಮಹೇಶ್, ಯರಗನಹಳ್ಳಿಯ ಮಲ್ಲೇಶ್, ಅರಕಲವಾಡಿಯ ಮಹೇಶ್, ವಡಗಲ್ಪುರದ ಹುಂಡಿಯ ಶಿವಕುಮಾರ್ ಮತ್ತು ವೃಷಬೇಂದ್ರ ಎಂಬ ಉತ್ಸಾಹಿ ಯುವಕರು ದಾಳಿಂಬೆ ಕೃಷಿಯಲ್ಲಿ ಪ್ರಯೋಗಶೀಲತೆ ಮೆರೆದು ಜಿಲ್ಲೆಗೆ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹುರುಳಿ,ಶೇಂಗಾ,ರಾಗಿ, ಜೋಳ ಮತ್ತಿತರ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಇಲ್ಲಿನ ರೈತರು ತಮಿಳುನಾಡು ರೈತರರಿಂದ ಪ್ರಭಾವಿತರಾಗಿ ವಾಣಿಜ್ಯ ಬೆಳೆಗಳಾದ ಬಾಳೆ,ಅರಿಶಿನ,ಸಾಂಬಾರ್ ಈರುಳ್ಳಿ ಬೆಳೆಯ ತೊಡಗಿದರು. ಸಂಪ್ರಾದಾಯಿಕ ಬೆಳೆಗಳಿಗೆ ವಿದಾಯ ಹೇಳಿ ವಾಣಿಜ್ಯ ಬೆಳೆಗಳನ್ನು ಅಪ್ಪಿಕೊಂಡರು. ಬೆಲೆಯ ಏರಿಳಿತ, ಮಳೆಯ ಕೊರತೆಯ ಪರಿಣಾಮ ನಷ್ಟ ಅನುಭವಿಸಿದರು. ಈ ನಡುವೆ ಟೊಮೊಟೊ,ದಪ್ಪ ಮೆಣಸಿನಕಾಯಿ,ಕಲ್ಲಂಗಡಿಯಂತಹ ಅಲ್ಪಾವಧಿ ತರಕಾರಿ ಮತ್ತು ಹಣ್ಣಿನ ಬೆಳೆಗಳು ರೈತರ ಕೈ ಹಿಡಿದವಾದರೂ ಅವು ಕೈಕೊಟ್ಟವು. ಮಾರುಕಟ್ಟೆಯ ಹಾವು ಏಣಿ ಆಟದಲ್ಲಿ ಆಥರ್ಿಕವಾಗಿ ಮೇಲಕ್ಕೇರಿದ ರೈತರು ಸರ್ರನೇ ಕೆಳಗಿಳಿದು ಸಂಕಷ್ಟದಲ್ಲಿ ಸಿಲುಕಿಕೊಳ್ಳುವಂತಾಯಿತು.
ಕೃಷಿಯಿಂದ ಸಾಕಾಷ್ಟು ನಷ್ಟ ಅನುಭವಿಸಿರುವ ಬಹುತೇಕ ರೈತರು ಜಮೀನು ಮಾರಾಟ ಮಾಡುವ ಇಲ್ಲಾ ಪಾಳು ಬಿಡುವ ಹಂತ ತಲುಪಿದರು. ಇಂತಹ ಸಂಕಷ್ಟದ ಸ್ಥಿಯಲ್ಲಿ ತಾಲೂಕಿನ ಯುವಕರ ತಂಡ ಮತ್ತೊಂದು ಬಿಸಲನಾಡು ಚಿತ್ರದುರ್ಗ ಜಿಲ್ಲೆಯ ಕಡೆಗೆ ಕೃಷಿ ಅಧ್ಯಯನ ಪ್ರವಾಸ ಹೊರಟಿತು. ಅಲ್ಲಿನ ರೈತರು ದಾಳಿಂಬೆ ಬೆಳೆದು ಯಶಸ್ವಿಯಾದ ಯಶೋಗಾಥೆಗಳನ್ನು ನೋಡಿ,ಅಲ್ಲಿನ ತೋಟದ ಮಾಲೀಕರನ್ನು ಕಂಡು ಮಾತನಾಡಿಸಿ,ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಚಾಮರಾಜನಗರ ತಾಲೂಕಿನಲ್ಲೂ ದಾಳಿಂಬೆ ಬೆಳೆದು ಯಶಸ್ವಿಯಾಗಿದೆ. ಈ ತಂಡದಲ್ಲಿ ಒಬ್ಬರಾದ ಯುವ ಉತ್ಸಾಹಿ ಕೃಷಿಕ ಬಿಲ್ವಮಹೇಶ್ ಈ ವಾರದ ಬಂಗಾರದ ಮನುಷ್ಯ. ಅವರು ಕಟ್ಟಿದ "ಬಿಲ್ವ ಫಾರಂ" ಎಂಬ ಹಸಿರು ತೋಟದ ಬಗ್ಗೆ ನಿಮಗೆ ಹೇಳಬೇಕು.
ಶಿವಶಂಕರ್ ಮತ್ತು ಸುರೇಶ್ ಎಂಬ ಗೆಳೆಯರೊಡಗೂಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಪ್ರವಾಸಮಾಡಿದ ಮಹೇಶ್ ಧೈರ್ಯಮಾಡಿ ದಾಳಿಂಬೆ ಬೆಳೆಯಲು ಮುಂದಾದರು. ಇವರನ್ನು ನೋಡಿದ ಗೆಳೆಯರು ದಾಳಿಂಬೆ ಬೆಳೆಯಲು ಆರಂಭಿಸಿದರು.
ಈಗ ದಾಳಿಂಬೆ ಫಸಲು ಬರಲು ಶುರುವಾಗಿದೆ. ಮೊದಲ ಕೊಯ್ಲಿನಲ್ಲೆ ದಾಳಿಂಬೆ ನಾಟಿ ಮತ್ತು ಬೇಸಾಯಕ್ಕೆ ಮಾಡಿದ ಖಚರ್ು ಬಹುತೇಕ ಬಂದಿದೆ ಎನ್ನುತ್ತಾರೆ ಮಹೇಶ್. ಈ ವರ್ಷ ವೃಷಬೇಂದ್ರ 23 ಟನ್, ಶಿವಕುಮಾರ್ 13 ಟನ್, ಮಹೇಶ್ 6 ಟನ್, ಮಲ್ಲೇಶ್ 12 ಟನ್ ಹಾಗೂ ಬಿಲ್ವ ಮಹೇಶ್ 5 ಟನ್ ದಾಳಿಂಬೆ ಇಳುವರಿ ಪಡೆದಿದ್ದಾರೆ. ಮೊದಲ ಕ್ವಾಲಿಟಿ ಹಣ್ಣುಗಳನ್ನು ಕೆಜಿಗೆ 60 ರೂ., ಎರಡನೇ ಕ್ವಾಲಿಟಿ ಹಣ್ಣುಗಳನ್ನು ಕೆಜಿಗೆ 30 ರೂಪಾಯಿಯಂತೆ ಮಾರಾಟವಾಗಿದೆ.
ಜಿಲ್ಲೆಯ ವಾತಾವರಣ ದಾಳಿಂಬೆ ಬೆಳೆಯಲು ಸೂಕ್ತವಾಗಿದ್ದು, ತಮ್ಮ ಅನುಭವದ ಪ್ರಕಾರ ರೈತರು ಹನಿ ನೀರಾವರಿ ಮೂಲಕ ಕಡಿಮೆ ನೀರಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ದಾಳಿಂಬೆ ಕೃಷಿ ಮಾಡಿದರೆ ಉತ್ತಮ ಆದಾಯ ನಿಶ್ಚಿತವಾಗಿ ಬರುತ್ತದೆ ಎಂದು ಮಹೇಶ್ ಹೇಳುತ್ತಾರೆ. ರಾಸಾಯನಿಕ ಕೃಷಿ ಮಾಡಿದರೆ ಖಚರ್ು ಹೆಚ್ಚು. ಆದಾಯ ಇದ್ದರೂ ಆರಂಭದ ಖರ್ಚನ್ನು ಸಣ್ಣ ರೈತರು ತಡೆದುಕೊಳ್ಳುವುದು ಕಷ್ಟ. ಆದ್ದರಿಂದ ನೈಸಗರ್ಿಕ ರೀತಿಯಲ್ಲಿ ದಾಳಿಂಬೆ ಬೆಳೆಯಲು ರೈತರು ಮುಂದಾಗಬೇಕು. ಆಗ ಖಚರ್ು ಕಡಿಮೆ ಆದಾಯವೂ ಗ್ಯಾರಂಟಿ ಎಂದು ಸಲಹೆ ನೀಡುತ್ತಾರೆ.
ಕಲ್ಲರಳಿ ಹೂವಾದ ಪರಿ : ಅದೊಂದು ಕಲ್ಲುಗುಡ್ಡ ಕುರುಚಲು ಗಿಡಗಳೆ ತುಂಬಿರುವ ಬೆಟ್ಟ. ಅದರ ಹೆಸರು ಎಡಬೆಟ್ಟ. ಸಮೀಪದಲ್ಲೆ ಸಕರ್ಾರಿ ವೈದ್ಯಕೀಯ ಕಾಲೇಜು ಇದೆ. ಗುಡ್ಡದಲ್ಲಿ ಆಗಾಗ ಚಿರತೆ, ಕರಡಿ, ಕಾಡುಹಂದಿಗಳಂತಹ ವನ್ಯಪ್ರಾಣಿಳು ಕಾಣಿಸಿಕೊಳ್ಳುತ್ತವೆ. ಇಂತಹ ಗುಡ್ಡದ ತಪ್ಪಲಿನಲ್ಲಿ ಹಳ್ಳ ಕೊರಕಲನ್ನೆಲ್ಲ ಮುಚ್ಚಿ, ಸಾಧ್ಯವಾದಷ್ಟು ಸಮತಟ್ಟಾಗಿ ಮಾಡಿಕೊಂಡು ಕಳೆದ ಒಂಭತ್ತು ವರ್ಷಗಳಿಂದ ಕೃಷಿಮಾಡುತ್ತಾ ಗುಡ್ಡವನ್ನು ಹಸಿರೀಕರಣ ಮಾಡಿರುವ ಮಹೇಶನ ಸಾಹಸ ಎಂತಹವರಲ್ಲೂ ಅಚ್ಚರಿ ಮೂಡಿಸುತ್ತದೆ.
ಎಡಬೆಟ್ಟದ ಬುಡದಲ್ಲಿ ಕಾಶ್ಮಿರದ ಸೇಬು ಬೆಳೆಯುವ ಈ ಹುಡುಗನ ಆಸಕ್ತಿ ಕೃಷಿ ಮೇಲಿನ ಪ್ರೀತಿ ಮತ್ತು ಬದ್ಧತೆಗೆ ಸಾಕ್ಷಿಯಂತಿದೆ. ಕಾಡು ಗಿಡಗಳು ಬೆಳೆಯಲು ಕಷ್ಟಸಾಧ್ಯವಾಗಿರುವ ಭೂಮಿಯಲ್ಲೀಗ ಮಂಡ್ಯದ ಲೋಕಸರದಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಯಿಂದ ತಂದು ಹಾಕಿರುವ 400 ಎಳನೀರು ತೆಂಗು, ತಿಪಟೂರು ಟಾಲ್ ತಳಿಯ 200 ತೆಂಗು , ಜೈನ್ ಇರಿಗೇಷನ್ ಕಂಪನಿಯವರು ಕೊಯಮತ್ತೂರು ಸಮೀಪ ಮಾಡಿರುವ ಅಂಗಾಂಶ ಕೃಷಿ ನರ್ಸರಿಯಿಂದ ತಂದು ಹಾಕಿರುವ 900 ದಾಳಿಂಬೆ, ಅಂಜೂರ,ದ್ರಾಕ್ಷಿ, ಬೆಟ್ಟದನೆಲ್ಲಿ,ಕಾಶ್ಮಿರದ ಸೇಬು, ನೇರಳೆ,ವಾಟರ್ ಆಫಲ್,ಗಜನಿಂಬೆ,ಹಲಸು,ಬಿದಿರು, ಅಮಟೆಕಾಯಿ, ಮೂಸಂಬಿ,ಕಿತ್ತಳೆ, ಸಂಪಿಗೆ, ಫ್ಯಾಶನ್ ಜ್ಯೂಸ್ ಪ್ರೂಟ್, ನುಗ್ಗೆ, ಪಪ್ಪಾಯ ಇಂತಹ ನೂರಾರು ಹಣ್ಣಿನ ಗಿಡಗಳಿವೆ. ಆರು ಮತ್ತು ಎಂಟು ಅಡಿ ಅಂತರದಲ್ಲಿ 100 ಬಾದಾಮಿ ಮಾವಿನ ಗಿಡಗಳನ್ನು ಹಾಕಿದ್ದು ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ನೆಡಲಾಗಿದೆ.
ಕೃಷಿ ಅಂದ್ರೆ ಇಷ್ಟ : ಕಮರವಾಡಿಯ ನಿವೃತ್ತ ಶಿಕ್ಷಕ ಎಂ.ಗುರುಮಲ್ಲಪ್ಪ ಮತ್ತು ಮುನಿಂದ್ರಮ್ಮ ಅವರ ಮಗನಾದ ಮಹೇಶ್ ಓದಿದ್ದು ಡಿ.ಫಾಮರ್ಾ. ದೂರ ಶಿಕ್ಷಣದಲ್ಲಿ ಎಂ.ಎ.ಸಮಾಜ ಶಾಸ್ತ್ರಪದವಿ. ಸ್ವಲ್ಪಕಾಲ ಗಣಿ ಉದ್ಯಮದಲ್ಲೂ ತೊಡಗಿಸಿಕೊಂಡು ಕರಿಕಲ್ಲು ವ್ಯಾಪಾರ ಮಾಡಿದರು. ನಂತರ ಸಕರ್ಾರದ ಪಾಲಿಸಿಗಳಿಂದ ಜಿಲ್ಲೆಯಲ್ಲಿ ಗಣಿ ಉದ್ಯಮಕ್ಕೆ ತೊಂದರೆಯಾಯಿತು. ಇದರಿಂದಾಗಿ ಅದನ್ನು ಬಿಟ್ಟು ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಪ್ರಧಾನವಾಗಿ ಕೃಷಿ ಮಾಡಲು ಮುಂದಾದೆ ಎನ್ನುತ್ತಾರೆ.
 ನಮ್ಮದು ಮೂಲತಃ ಕೃಷಿಕರ ಕುಟುಂಬ. ಕಮರವಾಡಿಯಲ್ಲಿ ನಮಗೆ ಪಿತ್ರಾಜರ್ಿತವಾಗಿ ಬಂದ ಸ್ವಲ್ಪ ಜಮೀನು ಇತ್ತು. ಆದರೆ ಅಲ್ಲಿ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಚಾಮರಾಜನಗರ ಸಮೀಪ ಉತ್ತುವಳ್ಳಿಯ ಎಡಬೆಟ್ಟದ ಬುಡದಲ್ಲಿ 2007 ರಲ್ಲಿ 9.5 ಎಕರೆ ಕಲ್ಲುಮಂಟಿ ಭೂಮಿ ಖರೀದಿಸಿ ತೋಟಕಟ್ಟಲು ಮುಂದಾದೆ. ಇದಲ್ಲದೆ ಮೈಸೂರು ತಾಲೂಕು ಆಯರಹಳ್ಳಿಯಲ್ಲೂ ಅಡಿಕೆ ತೋಟ ಮಾಡುತ್ತಿದ್ದೇನೆ. ಯಳಳಮದೂರು ತಾಲೂಕು ಕೆಸ್ತೂರಿನಲ್ಲೂ ಜಮೀನು ಇದೆ. ಎಂತದ್ದೆ ಚಿಂತೆ ಇದ್ದರೂ ಎಡಬೆಟ್ಟದ ತೋಟಕ್ಕೆ ಬಂದರೆ ಎಲ್ಲವೂ ದೂರಾಗಿ ನೆಮ್ಮದಿಯಿಂದ ಆಯಾಗಿ ಇದ್ದು ಬಿಡುತ್ತೇನೆ. ಕೃಷಿಯನ್ನು ಒಂದು ಉದ್ಯಮ ಎಂಬಂತೆ ನಾನು ನೋಡುತ್ತೇನೆ, ಹಾಗಾಗಿ ಕೃಷಿಯಿಂದ ನಷ್ಟ ಅನುಭವಿಸಿಲ್ಲ.ಬೇಸಾಯಕ್ಕೆ ಹಣ ಹಾಕಿ ಹಣ ಮಾಡಿದ್ದೇನೆ.ಕೃಷಿಯನ್ನೆ ನಂಬಿ ಶ್ರದ್ಧೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಬೇಸಾಯಮಾಡಿದರೆ ಖಂಡಿತಾ ನಷ್ಟವಾಗುವುದಿಲ್ಲ ಎನ್ನುವ ಮಹೇಶ್ ತಮ್ಮ ಹಲವಾರು ಕೆಲಸಗಳ ನಡುವೆಯೂ ಬೇಸಾಯ ಮಾಡಿಸುತ್ತಾರೆ. ಕೃಷಿಯನ್ನೆ ನಂಬಿ ತೋಟದಲ್ಲೆ ಇದ್ದು ಬೇಸಾಯ ಮಾಡುತ್ತಾ ಕೃಷಿ ಕಷ್ಟ ಎನ್ನುವವರ ನಡುವೆ ಮಹೇಶ್ ಭಿನ್ನವಾಗಿ ಕಾಣುತ್ತಾರೆ.
ತರಕಾರಿ ಬೆಳೆದು ಗೆದ್ದೆ : ಭೂಮಿ ತೆಗೆದುಕೊಂಡ ಆರಂಭದಲ್ಲಿ ಎಡರು ಬೋರ್ವೆಲ್ ತೆಗಿಸಿದೆ. ಎರಡಿಂಚು ನೀರು ಬಂತು. ಹನಿ ನೀರಾವರಿ ಅಳವಡಿಸಿಕೊಂಡು ಮೊದಲ ಬಾರಿಗೆ ಗುಡ್ಡದ ಭೂಮಿಯಲ್ಲಿ ಭಜ್ಜಿ ಮೆಣಸಿನಕಾಯಿ, ಟೊಮಟೋ, ಕಲ್ಲಂಗಡಿ, ಪಪ್ಪಾಯದಂತಹ ವಾಣಿಜ್ಯ ಬೆಳಡಗಳನ್ನು ಮಾಡಿ ಆದಾಯಗಳಿಸಿದ್ದಾರೆ.
ಟೊಮಟೋ ಆಗ ಕೇವಲ ಕೆಜಿಗೆ 3 ರೂ ನಂತೆ ಹೋದರು ನನಗೆ ನಷ್ಟವಾಗಲಿಲ್ಲ. ಪ್ರತಿ ದಿನ ಕೊಯಮತ್ತೂರಿಗೆ ನಮ್ಮ ತೋಟದಿಂದ ಒಂದು ಲೋಡ್ ಅಂದ್ರೆ 350 ಕ್ರೇಟ್ ಟೊಮಟೋ ಕಳುಹಿಸುತ್ತಿದ್ದೆ. ಅದರಿಂದ ಆರು ಲಕ್ಷ ಆದಾಯ ಬಂದಿತ್ತು ಎಂದು ನೆನಪುಮಾಡಿಕೊಳ್ಳುತ್ತಾರೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಮಹಾದೇವಸ್ವಾಮಿ ಅವರ ಸಲಹೆ ಮತ್ತು ಮಾರ್ಗದರ್ಶನಗಳು ತೋಟ ಕಟ್ಟಲು ನೆರವಿಗೆ ಬಂತು ಎಂದು ನೆನಪು ಮಾಡಿಕೊಳ್ಳತ್ತಾರೆ.
ದಾಳಿಂಬೆಯಲ್ಲಿ ಪ್ರಯೋಗ : ಚಿತ್ರದುರ್ಗದಲ್ಲಿ ಪ್ರವಾಸ ಮಾಡುತ್ತಿದ್ದಾಗ ಚಳ್ಳಕೆರೆಯ ನಿವೃತ್ತ ಶಿಕ್ಷಕ ಚೆನ್ನಮಲ್ಲರೆಡ್ಡಿ ಎಂಬುವವರು ನಾಲ್ಕು ಎಕರೆ ದಾಳಿಂಬೆ ಬೆಳೆದು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದರು. ಒಂದು ವರ್ಷ 10 ಕೆಜಿಯ 16 ಸಾವಿರ ಬಾಕ್ಸ್ ದಾಳಿಂಬೆ ಹಣ್ಣನ್ನು ಪ್ರತಿ ಬಾಕ್ಸ್ಗೆ 1100 ರೂ,ನಂತೆ ಕೊಟ್ಟಿದ್ದರು. ಒಂದು ಸಾರಿ ದಾಳಿಂಬೆ ಗಿಡ ನೆಟ್ಟರೆ ಹತ್ತು ಹದಿನೈದು ವರ್ಷದವರೆಗೂ ಫಸಲು ಬರುತ್ತದೆ. ಬೇಡ ಎಂದರೂ ಐದು ವರ್ಷ ದಾಳಿಂಬೆ ಬೇಸಾಯಮಾಡಿದರೂ ಸಾಕು.ಉತ್ತಮ ಆದಾಯಗಳಿಸಬಹುದು ಎನ್ನುತ್ತಾರೆ.
ಈಗ ಹಲವಾರು ನೈಸಗರ್ಿಕ ಕೃಷಿಯ ತೋಟಗಳನ್ನು ನೋಡಿ ಬಂದಿದ್ದು ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ಹೇಳುತ್ತಾರೆ. ರಾಸಾಯನಿಕದಲ್ಲಿ ದಾಳಿಂಬೆ ಬೆಳೆಯುವುದು ಸಣ್ಣಪುಟ್ಟ ರೈತರಿಗೆ ಕಷ್ಟ. ಹೆಚ್ಚು ಹಣ ತೊಡಗಿಸಬೇಕು ಹೆಚ್ಚು ಲಾಭ ಪಡೆಯಬೇಕು ವ್ಯತ್ಯಾಸವಾದರೆ ನಷ್ಟ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.ಹಾಗಾಗಿ ಕಡಿಮೆ ಬಂಡವಾಳ ಇರುವವರು ದಾಳಿಂಬೆ ಕೃಷಿ ಮಾಡುವುದು ಕಷ್ಟ ಎನ್ನುತ್ತಾರೆ.
ಸಾಮಾಜಿಕ ಜಾಲ ತಾಣದ ನೆರವು : ಕೃಷಿ ಪ್ರಯೋಗಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಮಹೇಶ್ ಫೇಸ್ಬುಕ್, ವಾಟ್ಸ್ಆಫ್ ನಂತಹ ಜಾಲತಾಣಗಳಿಂದ ಹಲವಾರು ಪ್ರಗತಿಪರ ಕೃಷಿಕರು ಪರಿಚಯವಾಗಿರುವುದಾಗಿ ಹೇಳುತ್ತಾರೆ. ತಾನು ಕಾಶ್ಮಿರದ ಸೇಬು ಬೆಳೆಯಲು ಇದೆ ಕಾರಣ. ಒಮ್ಮೆ ತುಮಕೂರಿನ ಬಳಿ ಸೇಬು ಬೆಳೆದಿರುವ ಬಗ್ಗೆ ಮಾಹಿತಿ ನೋಡಿದೆ.ನಂತರ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾದ ಮಂಗಳೂರಿನ ಕೃಷ್ಣಶೆಟ್ಟಿ ಎಂಬುವವರು ಸೇಬು ಕೃಷಿ ಮಾಡುತ್ತಿರುವುದನ್ನು ತಿಳಿದುಕೊಂಡೆ. ಅವರ ಮೂಲಕ ಹಿಮಾಚಲ ಪ್ರದೇಶದಿಂದ ಒಂದು ಗಿಡಕ್ಕೆ 110 ರೂ.ನಂತೆ ನೂರು ಸೇಬು ಗಿಡ ತರಿಸಿಹಾಕಿದೆ ಎನ್ನುತ್ತಾರೆ. ಗಿಡಗಳು ಚೆನ್ನಾಗಿದ್ದು ಒಮ್ಮೆ ಹೂ ಕೂಡ ಬಿಟ್ಟಿದ್ದವು. ಸೇಬಿಗೆ ಶೀತ ವಾತಾವರಣ ಅಗತ್ಯ. ನಮಗಿಂತ ಕೊಡಗಿನಲ್ಲಿ ಬೆಳೆಯಬಹುದು ಎನ್ನುವುದು ಅವರ ಅಭಿಪ್ರಾಯ.
ತೋಟದ ಸಂಪೂರ್ಣ ಹೊಣೆ ಮಾದೇವ ಅವರದು. ಮಾದೇವ ಇಲ್ಲೆ ಇದ್ದು ನೋಡಿಕೊಳ್ಳುತ್ತಾರೆ.ನಾನೂ ಕೂಡ ಪ್ರತಿ ದಿನ ತೋಟಕ್ಕೆ ಬಂದು ಹೋಗುತ್ತೇನೆ. ತೋಟದಲ್ಲಿ ಒಂದು ಮುದೊಳು ಮತ್ತು ಒಂದು ಡಾಬರ್ಮನ್ ನಾಯಿ ಸಾಕಿಕೊಂಡಿದ್ದೆವು. ಚಿರತೆ ಬಂದು ಎರಡೂ ನಾಯಿಗಳನ್ನು ಎತ್ತುಕೊಂಡು ಹೋಯಿತು. ಹಾಗಾಗಿ ಈಗ ನಾಯಿ ಸಾಕುತ್ತಿಲ್ಲ ಎನ್ನುತ್ತಾರೆ.
ಚಾಮರಾಜನಗದಿಂದ ತೆರಕಣಾಂಬಿಗೆ ಹೋಗುವ ರಸ್ತೆಯಲ್ಲಿ 3.5 ಕಿ.ಮೀ ಕ್ರಮಿಸಿದರೆ ಉತ್ತುವಳ್ಳಿ ಸಮೀಪ ಎಡಬೆಟ್ಟ ಇದೆ. ಅಲ್ಲಿ ಬಿಟ್ಟದ ತಪ್ಪಲಿಗೆ "ಬಿಲ್ವ ಫಾರಂ" ಎಂಬ ಸಸ್ಯಕಾಶಿ ಇದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಮಹೇಶ್ 9448052478 ಸಂಪಕರ್ಿಸಬಹುದು.