vaddagere.bloogspot.com

ಭಾನುವಾರ, ಆಗಸ್ಟ್ 28, 2016

 ರಸಸಾರ ಕೃಷಿ ಸಾಧಕ ಸುಂದರರಾಮನ್
ಮೊದಲು ನಾವು ನಂತರ ಮಾರುಕಟ್ಟೆ ಎಂದ ಕೃಷಿಋಷಿ
ಸತ್ಯಮಂಗಲ : ಯಾವುದೇ ಕೃಷಿಯ ಯಶಸ್ಸು ಆ ಮಣ್ಣಿನ ಗುಣಲಕ್ಷಣಗಳ ಮೇಲೆ ಅವಲಂಭಿಸಿರುತ್ತದೆ. ಮಣ್ಣು ಜೀವಂತವಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಯೂ ಜೀವಂತವಾಗಿರುತ್ತದೆ. ಆದರೆ ರೈತರು ಜೀವ ಇಲ್ಲದ ರಸಗೊಬ್ಬರಗಳನ್ನು ಮಣ್ಣಿಗೆ ಆಹಾರವಾಗಿ ನೀಡುತ್ತಾ ಭೂಮಿಯನ್ನು ಬರಡುಮಾಡುತ್ತಿದ್ದಾರೆ.ಇದರಿಂದಾಗಿ ಮನುಷ್ಯ ವಿಷಪೂರಿತ ಆಹಾರ ಸೇವಿಸಿ, ನಾನಾ ರೋಗಗಳ ಗೂಡಾಗುತ್ತಿದ್ದಾನೆ. ಪರಿಣಾಮ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ತಮ್ಮ ನಲವತ್ತನೇ ವಯಸ್ಸಿಗೆ ವೃದ್ಧಾಪ್ಯ ಬಂದು,ನಾನಾ ಕಾಯಿಲೆಗಳಿಂದ ನರಳಬೇಕಾಗಿದೆ.
ರೈತರು ಮಣ್ಣು, ಗಿಡ ಮತ್ತು ಸೂರ್ಯನ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಆಗ ನಮ್ಮ ಕೃಷಿಯು ಬದುಕುತ್ತದೆ ನಾವೂ ನೂರಾರು ವರ್ಷ ಆರೋಗ್ಯವಾಗಿ ಬದುಕುತ್ತೇವೆ... ಹೀಗೆ ಸುಂದರ ರಾಮನ್ ಹೇಳುತ್ತಾ ಹೋದರು, ಎದುರಿಗೆ ಕುಳಿತ ರೈತರು ಪ್ರತಿ ವಾಕ್ಯವನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದರು.
ಚಾಮರಾಜನಗರದ ಗಡಿ ಭಾಗದಲ್ಲಿರುವ ಹೆಸರಾಂತ ಸಾವಯವ ಕೃಷಿಕ, ರಸಸಾರ (ದ್ರಾವಣ) ಕೃಷಿಯನ್ನು ಜನಪ್ರಿಯಗೊಳಿಸಿದವರು ಎಸ್.ಆರ್.ಸುಂದರರಾಮನ್. ಸತತ 25 ವರ್ಷಗಳಿಂದ ನಿರಂತರವಾಗಿ ಕೃಷಿಯಲ್ಲಿ ಪ್ರಯೋಗಮಾಡುತ್ತಾ ಅವರು ಕಂಡುಕೊಂಡ ವಿಧಾನಗಳನ್ನು "ಸುಂದರರಾಮನ್ ಎಫೆಕ್ಟ್" ಎಂದು ಕರೆಯಲಾಗುತ್ತದೆ.
ಮೈಸೂರಿನಿಂದ ಸುಮಾರು 180 ಕಿ.ಮೀ.ದೂರದ ಸತ್ಯಮಂಗಲ ಸಮೀಪ ಇರುವ ಸುಂದರರಾಮನ್ ಅವರ ತೋಟ ಕೃಷಿಕರ ಪಾಲಿನ ಪಾಠ ಶಾಲೆ. ಅಲ್ಲಿ ಅವರು ಸಾವಯವ ಸಸ್ಯ ಸಂರಕ್ಷಣೆಗೆ ಕಂಡು ಕೊಂಡಿರುವ ಸರಳ ಸೂತ್ರಗಳು ಜಾರಿಯಾಗಿದ್ದು 10 ಎಕರೆಯ ಸುಂದರ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲಿ ತೆಂಗು, ಕಬ್ಬು,ಅರಿಶಿನ,ತರಕಾರಿ ಬೆಳೆಗಳನ್ನು ಬೆಳೆಯಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಸುಂದರರಾಮನ್ ದೇಶದ ನಾನಾ ಭಾಗಗಳಲ್ಲಿ ಸರಳ ಕೃಷಿಯ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಇಂತಹ ಕೃಷಿ ಋಷಿಯ ಅನುಭವವನ್ನು ತಮ್ಮದಾಗಿಸಿಕೊಳ್ಳುವ ಮಹದಾಸೆಯಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ರೈತರನ್ನೊಳಗೊಂಡ ನಮ್ಮ ತಂಡ ಸುಂದರರಾಮನ್ ಅವರ ತೋಟಕ್ಕೆ ಭೇಟಿ ನೀಡಿತ್ತು. ಅವರು ತಮ್ಮ 73 ವರ್ಷದ ಇಳಿಗಾಲದಲ್ಲೂ ದಣಿವರಿಯದೆ ನಮ್ಮ ಜತೆ ಸತತವಾಗಿ ಬೆಳಗಿನಿಂದ ಸಂಜೆಯವರೆಗೂ ಮಾತನಾಡಿದರು. ಸುಸ್ಥಿರ ಬೇಸಾಯ ಕ್ರಮ , ವಿಷಮುಕ್ತ ಮಣ್ಣಿನ ನಿಮರ್ಾಣ, ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ರೈತರು ಮಾಡಬೇಕಾದ ಸರಳ ವಿಧಾನಗಳನ್ನು ಐದು ಗಂಟೆಗಳಿಗೂ ಹೆಚ್ಚು ಕಾಲ ಬೋಧಿಸಿದರು.
ಆರೋಗ್ಯಕರ ಮಣ್ಣಿನ ನಿಮರ್ಾಣ:  ಯಾವುದೇ ಮಣ್ಣು ಫಲವತ್ತಾಗಿರಬೇಕಾದರೆ ಅಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಹೆಚ್ಚಾಗಿರಬೇಕು. ರಸಾಯನಿಕ ಗೊಬ್ಬರವನ್ನು ನಾವು ಹೆಚ್ಚು ಹೆಚ್ಚು ಬಳುಸುತ್ತಿರುವ ಪರಿಣಾಮ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಸಾವನ್ನಪ್ಪಿ ಮಣ್ಣು ಬರಡಾಗುತ್ತಿದೆ. ಭೂಮಿಯ ಮೇಲೆ ಇರುವ ಆರರಿಂದ ಒಂಭತ್ತು ಇಂಚು ಮಣ್ಣು ಮಾತ್ರ ಜೀವಂತವಾಗಿದ್ದು ಸಸ್ಯಗಳಿಗೆ ಬೇಕಾದ ಸಮಗ್ರ ಪೋಷಕಾಂಶಗಳನ್ನು ಅದು ಒದಗಿಸಿಕೊಡುತ್ತದೆ.
ಆದ್ದರಿಂದ ನಾವು ಈ ಒಂಭತ್ತು ಇಂಚು ಮಣ್ಣನ್ನು ಸದಾ ಜೀವಂತವಾಗಿಟ್ಟುಕೊಳ್ಳವ ನಿಟ್ಟಿನಲ್ಲಿ ನಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಈಗಾದಾಗ  ಭೂಮಿಯ 25 ಅಡಿ ಆಳದ  ಲ್ಲಿರುವ ಎರೆಹುಳುಗಳು ತಮ್ಮ ಕೆಲಸವನ್ನು ಸಲೀಸಾಗಿ ನಿರ್ವಹಿಸಿ ಗಾಳಿಯಾಡುವಂತೆ ಮಾಡಿ ಜೀವಂತ ಮಣ್ಣು ನಿಮರ್ಾಣಮಾಡುತ್ತವೆ.
ಯಾವುದೇ ಬೆಳೆಗಳು ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಸಮಾನವಾಗಿ ಸ್ವೀಕರಿಸುತ್ತವೆ. ಸಾವಯವದಲ್ಲಿ ಬೆಳೆದ ಬೆಳೆ ಶೇ 10 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಂಡರೆ, ರಸಾಯನಿಕದಲ್ಲಿ ಬೆಳೆದ ಸಸ್ಯಗಳು ಶೇ 3 ರಷ್ಟು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಅವಕ್ಕೆ ಸಿದ್ಧ ಆಹಾರ ಸಿಗುವುದರಿಂದ ಅವು ಸೋಮಾರಿಗಳಾಗಿಬಿಡುತ್ತವೆ. ಕಳೆದ 50-60 ವರ್ಷಗಳಿಂದ ನಾವು ಹೀಗೆ ಮಾಡುತ್ತಾ ಬಂದಿದ್ದು ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಪರಿಣಾಮ ಸಸ್ಯಗಳು ಬಿಸಿಲನ್ನು ಬಳಸಿಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಅದಕ್ಕಾಗಿ ನಾವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕೆಲಸವನ್ನು ಮೊದಲು ಮಾಡಬೇಕು. ರಾಸಾಯನಿಕ ಗೊಬ್ಬರ ಬಳಕೆಯನ್ನು ತಕ್ಷಣ ನಿಲ್ಲಿಸಿ, ಸಾವಯವ ಕೃಷಿಗೆ ಮರಳಬೇಕು.
ಕಳೆದು ಹೋಗಿರುವ ಮಣ್ಣಿನ ಫಲವತ್ತತೆಯನ್ನು ಮರಳಿ ತರಲು ದ್ರವ ರೂಪದ (ಜೀವಾಮೃತ ಅಥವಾ ರಸಸಾರ) ಗೊಬ್ಬರಗಳು ಚಮತ್ಕಾರಿಕ ಕೆಲಸಗಳನ್ನು ಮಾಡುತ್ತವೆ. ನಾನು ಮತ್ತು ನನ್ನಂತಹ ಹಲವಾರು ರೈತರ ಅನುಭವದಿಂದ ಕಳೆದ 25 ವರ್ಷಗಳಿಂದ ವಿವಿಧ ಬೆಳೆಗಳ ಮೇಲೆ ಪ್ರಯೋಗಮಾಡುತ್ತಾ, ಸುಧಾರಣೆ ಮಾಡುತ್ತಾ ಅಭಿವೃದ್ಧಿಪಡಿಸಿದ ದ್ರವಣಗಳು ಇವು. ಇವುಗಳಿಗೆ ಆರ್ಕೆ ದ್ರಾವಣ, ಅಮುದಂ ದ್ರಾವಣ, ಪಂಚಗವ್ಯ, ಮೊಟ್ಟೆ ನಿಂಬೆ ರಸದ ಪಾನಕ,ಮಜ್ಜಿಗೆ ದ್ರಾವಣ, ಎಲೆಗಳ ಕಷಾಯ,  ಮೀನು ಬೆಲ್ಲದ ಶರಬತ್ತು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ನಮ್ಮ 25 ವರ್ಷದ ಅನುಭವ ತಕ್ಷಣ ನಿಮಗೆ ಸಿಗುವುದರಿಂದ ನೀವು ನಮಗಿಂತ 25 ವರ್ಷ ಮುಂದೆ ಇದ್ದೀರಿ. ನಮ್ಮ ಅನುಭವದ ಆಧಾರದ ಮೇಲೆ ನೀವು ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ನಿಮದಾಗಿಸಿಕೊಳ್ಳಬಹುದು ಎಂದರು ಸುಂದರ ರಾಮನ್.
ರಸಾಯನಿಕ ತಂದ ಆಪತ್ತು: ಮನುಷ್ಯನ ಸರಾಸರಿ ಆಯಸ್ಸು ಈಗ 60 ರಿಂದ 65 ವರ್ಷಕ್ಕೆ ಬಂದು ನಿಂತಿದೆ. ಇದೇ ರೀತಿ ನಾವು ವಿಷಯುಕ್ತ ಆಹಾರ ಸೇವನೆ ಮಾಡುತ್ತಾ ಹೋದರೆ ಮುಂದೆ 40 ರಿಂದ 45 ವರ್ಷಗಳಿಗೆ ಬಂದು ನಿಲ್ಲುವುದರಲ್ಲಿ ಅನುಮಾನ ಇಲ್ಲ. ಮನುಷ್ಯನನ್ನು 50 ವರ್ಷಕ್ಕೆ ಕೊಲ್ಲಲ್ಲು ನಾವು ಇಂತಹ ವಿಷ ಪದಾರ್ಥಗಳನ್ನು ಬಳಸಿ ವ್ಯವಸಾಯ ಮಾಡಬೇಕೆ ?. ನಮಗ್ಯಾಕೆ ಬೇಕು ಇಂತಹ ಬೇಸಾಯ. ಮುಂದಿನ ಜನಾಂಗದ ಭವಿಷ್ಯ ನೆನೆದರೆ ಭಯವಾಗುತ್ತದೆ. ನಾವು ಕಳೆದ 20 ವರ್ಷಗಳಿಂದ ಏನನ್ನು ಹೊರಗಿನಿಂದ ತಂದು ತಿಂದಿಲ್ಲ.ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೇವೆ. ನಮ್ಮ ಮನೆಯಲ್ಲಿ ಯಾರು ಇಂದಿಗೂ ಆಸ್ಪತ್ರೆಯ ಮೆಟ್ಟಿಲನ್ನು ತುಳಿದಿಲ್ಲ. ಇದಕ್ಕೆಲ್ಲ ಕಾರಣ ನಾವು ಅನುಸರಿಸುತ್ತಿರುವ ರಸಸಾರ ಸಾವಯವ ಕೃಷಿ.
ಅಮೇರಿಕಾ, ಚೀನಾ ದೇಶದಲ್ಲಿ ಮನುಷ್ಯ 135 ವರ್ಷ ಬದುಕಿದ ಜೀವಂತ ಉದಾಹರಣೆಗಳು ನಮ್ಮ ಮುಂದಿವೆ.ಹಾಗಾಗಿ ಯಾರೇ ಕೃಷಿ ಮಾಡಿದರು "ಮೊದಲು ನಾವು ನಂತರ ಮಾರುಕಟ್ಟೆ" ಎಂಬ ತತ್ವವನ್ನು ಧ್ಯೇಯವನ್ನಾಗಿಸಿಕೊಳ್ಳಬೇಕು.
ಅಮೇರಿಕಾದ ರೂಡಲೇ ಸಂಸ್ಥೆಯವರು 80 ವರ್ಷ ರಾಸಾಯನಿಕ ಮತ್ತು ಜೈವಿಕ ಕೃಷಿಯಲ್ಲಿ ಪ್ರಯೋಗಮಾಡಿ (ಆಸಕ್ತರು ಆರ್ಯುಡಿಎಎಲ್ಇ ಇನ್ಸ್ಟಿಟ್ಯೂಟ್ ಎಂಬ ಜಾಲ ತಾಣವನ್ನು ನೋಡಬಹುದು) ಜೈವಿಕ ಕೃಷಿಯಲ್ಲಿ ಮಾತ್ರ ಅಧಿಕ ಇಳುವರಿ ಮತ್ತು ಸತ್ವ ಇದೆ ಎಂಬ ಸಾರ್ವಕಾಲೀಕ ಸತ್ಯವನ್ನು ಕಂಡುಕೊಂಡಿದ್ದಾರೆ. ರಾಸಾಯನಿಕ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಂಡರೆ, ಜೈವಿಕ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಸತ್ವವನ್ನು ಹೆಚ್ಚಿಸಿಕೊಳ್ಳುತ್ತಾ ಅಧಿಕ ಇಳುವರಿ ನೀಡುತ್ತಾ ಹೋದ ಸತ್ಯವನ್ನು ಅವರು ವಿವರಿಸಿದ್ದಾರೆ. ರಾಸಾಯನಿಕ ಬಳಕೆ ಮಾಡುವುದರಿಂದ ಭೂಮಿ ಗಟ್ಟಿಯಾಗಿ ನೀರು ಕುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭೂಮಿಗೆ ಬಿದ್ದ ಮಳೆಯ ನೀರು ಹರಿದು ವ್ಯರ್ಥವಾಗಿ ಸಮುದ್ರವನ್ನು ಸೇರುವುದರಿಂದ ಅಂತರ್ಜಲ ಮಟ್ಟವೂ ಕುಸಿತಕಂಡು ಅಪಾಯ ತಂದುಕೊಳ್ಳುತ್ತಿದ್ದೇವೆ.
ಫಲ ಭಿತ್ತನೆ : ಯಾವುದೇ ಬೆಳೆ ಬೆಳೆಯುವ ಮುನ್ನಾ ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತನೆ ಮಾಡಬೇಕು. ಇದರಿಂದಾಗಿ ಅಗಾಧ ಪರಿಣಾಮ ಉಂಟಾಗುತ್ತದೆ. ಯೂರಿಯಾ ಡಿಎಪಿ ಎನ್ಪಿಕೆ ಹೀಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ನಾವು ಭೂಮಿಗೆ ನೀಡಿದರು ಯಾವುದೇ ಸಸ್ಯ ಮೂರನೇ ಒಂದು ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಉಳಿದದ್ದು ಭೂಮಿಯಲ್ಲೇ ಕರಗಿ ಭೂಮಿಯ ಫಲವತ್ತತೆಯನ್ನು ನಾಶಮಾಡುತ್ತದೆ.
ಏಕದಳ ಮತ್ತು ದ್ವಿದಳ ರೀತಿಯ ನವ ಧಾನ್ಯಗಳನ್ನು ಮಿಶ್ರಣಮಾಡಿಕೊಂಡು ಮುಖ್ಯ ಫಸಲು ಮಾಡುವ 60 ರಿಂದ 70 ದಿನ ಮೊದಲು ಜಮೀನಿಗೆ ಫಲ ಧಾನ್ಯಗಳನ್ನು ಭಿತ್ತಬೇಕು. ಇದರಿಂದಾಗಿ ಮಣ್ಣು ಫಲವತ್ತಾಗಿ, ಆರೋಗ್ಯಕರವಾಗುತ್ತದೆ. ಮಣ್ಣನ್ನು ಫಲವತ್ತು ಮಾಡಿದರೆ ಭೂಮಿಯಲ್ಲಿ ಶೇ 3 ರ ಪ್ರಮಾಣದಲ್ಲಿದ್ದ ಸೂಕ್ಷ್ಮಾಣು ಜೀವಿಗಳು ಶೇ 10 ರಷ್ಟಾಗುತ್ತವೆ. ಮಣ್ಣಿನ ಫಲವತ್ತು ಮಾಡುವುದು ಮತ್ತು ಆರೋಗ್ಯಕರಮಾಡುವುದಷ್ಟೇ ನಮ್ಮ ಕೆಲಸ. ಉಳಿದದ್ದನ್ನು ಪ್ರಕೃತಿ ನೋಡಿಕೊಳ್ಳುತ್ತದೆ.ಇದು ಶಿವನಿಲ್ಲದೆ ಶಕ್ತಿ ಇಲ್ಲ ಶಕ್ತಿ ಇಲ್ಲದೆ ಶಿವನಿಲ್ಲ (ಶಿವನಿಲ್ಲಾಮೆ ಶಕ್ತಿ ಇಲ್ಲೈ ,ಶಕ್ತಿ ಇಲ್ಲಾಮೆ ಶಿವನಿಲ್ಲೈ) ಎನ್ನುವಂತೆ. ಫಲ ಧಾನ್ಯ ಭಿತ್ತನೆ ಮಾಡಿದ 60 ದಿನದ ನಂತರ ಅದನ್ನು ರೋಟವೇಟರ್ ಸಹಾಯದಿಂದ ಮಣ್ಣಿಗೆ ಸೇರಿಸಬೇಕು. ಇದರಿಂದ 10 ಟನ್ಗೂ ಮಿಗಿಲಾಗಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಸೇರಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ಬರಡು ಮಣ್ಣನ್ನು ಆರು ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಫಲವತ್ತು ಮಾಡಬಹುದು.ಮೊದಲು ಭೂಮಿಯನ್ನು ಆಳವಾಗಿ ಉಳುಮೆ ಮಾಡುವುದನ್ನು ನಾವು ನಿಲ್ಲಿಸಬೇಕು. ಸಾಧ್ಯವಾದಷ್ಟು ಮಾನವನ ಹಸ್ತಕ್ಷೇಪವನ್ನು ಕಡಿಮೆ ಮಾಡಿಕೊಂಡರೆ ಸಾವಯವ ಕೃಷಿಯಲ್ಲಿ ಉತ್ತಮ ಪಲಿತಾಂಶ ಕಾಣಬಹುದು.
ದ್ರಾವಣ ಅಥವಾ ರಸ ಸಾರ  :10 ಎಕರೆ ಜಮೀನು ನಿರ್ವಹಿಸಲು ಎರಡು ಜಾನುವಾರು ಸಾಕು. ಇದರಿಂದ ಸಿಗುವ ಗೋಮೂತ್ರ ಮತ್ತು ಸಗಣಿಯನ್ನು ಬಳಸಿ ದ್ರವಣ ಮಾಡಿಕೊಂಡು ಭೂಮಿಗೆ ಕೊಡುತ್ತಾ ಹೋದರೆ ಸೂಕ್ಷ್ಮಾಣು ಜೀವಿಗಳು ಕೋಟ್ಯಾನು ಕೋಟಿಯಾಗಿ ಭೂಮಿ ಫಲವತ್ತಾಗುತ್ತದೆ.
ಇದಕ್ಕಾಗಿ ನಾವು ಹೊರಗಿನಿಂದ ಏನನ್ನು ಹಣ ಕೊಟ್ಟು ತರಬೇಕಾಗಿಲ್ಲ. ಜಮೀನಿನಲ್ಲೇ ಸಿಗುವ ಔಷದೀಯ ಗಿಡಗಳನ್ನು ಸಗಣಿ ಮತ್ತು ಗೋಮೂತ್ರದ ಜತೆ ಬಳಸಿಕೊಂಡು ಎಲ್ಲಾ ರೀತಿಯ ಕೀಟ ಬಾಧೆಗಳಿಗೆ ಕ್ರಿಮಿನಾಶಕ ತಯಾರುಮಾಡಿಕೊಳ್ಳಬಹುದು.
ಎಲ್ಲಾಕ್ಕಿಂತ ಮುಖ್ಯವಾಗಿ ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚು ಮಾಡುವುದರಿಂದ ಅವು ಬಲಿಷ್ಠ ಸೈನಿಕರಂತೆ ಕೆಲಸ ನಿರ್ಮಹಿಸಿ ಗಿಡಗಳಿಗೆ ಬಾಧೆ ತರುವ ಕೀಟಗಳನ್ನು ನಿಯಂತ್ರಿಸುತ್ತವೆ.ರಾಸಾಯನಿಕದಲ್ಲಿ ಕೀಟಗಳನ್ನು ಕೊಲ್ಲುವುದೇ ಮುಖ್ಯವಾದರೆ ನಮ್ಮ ಕೃಷಿ ವಿಧಾನದಲ್ಲಿ ಒಳ್ಳೆಯ ಸೂಕ್ಷ್ಮಾಣು ಜೀವಿಗಳನ್ನು ಬಲಿಷ್ಠಮಾಡುವುದು ಮುಖ್ಯ. ನಮ್ಮಲ್ಲಿ ಕೊಲ್ಲುವ ಮಾತೇ ಇಲ್ಲ. ರಸಾಯನಿಕ ಮತ್ತು ಸಾವಯವ ಕೃಷಿಗೆ ಇರುವ ವ್ಯತ್ಯಾಸ ಇಷ್ಟೆ.
ಹೀಗೆ ಬಾಳೆ, ಅರಿಶಿನ, ಕಬ್ಬು, ತೆಂಗು, ವಿವಿಧ ತರಕಾರಿ ಬೆಳೆಗಳನ್ನು ಕೇವಲ ರಸ ಸಾರವನ್ನು ಬಳಸಿಕೊಂಡು ಬೆಳೆಯುವ ಸರಳ ವಿಧಾನಗಳನ್ನು ಸುಂದರ ರಾಮನ್ ಹೇಳುತ್ತಾ ಹೋದರು. ನಾವು ಮಂತ್ರಮುಗ್ಧರಾಗಿ ವಿಧೇಯ ವಿದ್ಯಾಥರ್ಿಗಳಂತೆ ಕೇಳಿಸಿಕೊಳ್ಳುತ್ತಾ ಹೋದೆವು. ನಿಜಕ್ಕೂ ನಮ್ಮ ಕೃಷಿ ಇಷ್ಟೊಂದು ಸರಳ ಮತ್ತು ಕಡಿಮೆ ಖಚರ್ಿನದ್ದಾಗಿದ್ದು ನಾವ್ಯಾಕೆ ರಾಸಾಯನಿಕ ಗೊಬ್ಬರಕ್ಕಾಗಿ ಲಕ್ಷಾಂತರ ಹಣ ಸುರಿದು ಆರೋಗ್ಯ, ಹಣ ಎರಡನ್ನೂ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಅಬಾಲ ವೃದ್ಧರಾಗುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಿತು. ಸುಂದರರಾಮನ್ ಅವರ ಮಾತು ಕೇಳಿಸಿಕೊಂಡ ಯಾರೇ ಆದರೂ ತಕ್ಷಣದಿಂದಲೇ ರಾಸಾಯನಿಕ ಗೊಬ್ಬರಕ್ಕೆ ವಿದಾಯ ಹೇಳಿ ಪ್ರಕೃತಿಗೆ ಸನಿಹವಾದ ಸಾವಯವ ಕೃಷಿಯತ್ತ ಮುಖ ಮಾಡಿನಿಲ್ಲುವುದು ನಿಶ್ಚಿತ ಅನಿಸಿತು.
ತಮಿಳುನಾಡು, ಕನರ್ಾಟಕ ಸೇರಿದಂತೆ ಹಲವಾರು ಕಡೆ ಸುಂದರರಾಮನ್ ರೂಪಿಸಿದ ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಜಾರಿಮಾಡಿಕೊಂಡು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ತಾಳವಾಡಿಗೆ ಸಮೀಪ ಇರುವ ಕಲ್ಲುಬಂಡಿಪುರದಲ್ಲಿರುವ ಶಕ್ತಿವೇಲು ತಮ್ಮ ಹದಿಮೂರು ಎಕರೆ ಪ್ರದೇಶದಲ್ಲಿ ರಸ ಸಾರ ಬಳಸಿ ಸರಳ ರೀತಿಯಲ್ಲಿ ಕೃಷಿ ಮಾಡುತ್ತಿದ್ದರೆ, ಗುಂಡ್ಲುಪೇಟೆಯ ಕೂಗಳತೆ ದೂರದಲ್ಲಿರುವ ವೀರನಪುರದಲ್ಲಿ ರಾಜು ಎನ್ನುವವರು ಸುಂದರರಾಮನ್ ರೂಪಿಸಿದ ದ್ರವಣಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಬಾಳೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸುಂದರರಾಮನ್ ಅವರ ಶಿಷ್ಯ ಚಾಮರಾಜನಗರ ಜಿಲ್ಲೆಯಲ್ಲಿ ಜೈವಿಕ ಕೃಷಿಯನ್ನು ಮುನ್ನಲೆಗೆ ತರುವ ಕೆಲಸಮಾಡುತ್ತಿರುವ ರಾಜು ಅವರನ್ನು ಮೊ.9448954851 ಸಂಪಕರ್ಿಸಬಹುದು. - ಚಿನ್ನಸ್ವಾಮಿ ವಡ್ಡಗೆರೆ



 ಮಣ್ಣಿನ ಸೆಳೆತಕ್ಕೆ ಮನಸೋತ ಹಸಿರು ಪ್ರೇಮಿ
ನಂಬಿದವರ ಕೈ ಬಿಡಾಕಿಲ್ಲ ಭೂಮತಾಯಿ ಎಂದ ಕೃಷ್ಣರಾವ್
ಚಾಮರಾಜನಗರ : ನಗರ ಜನರ ಹಸಿರು ಪ್ರೀತಿ ಇತ್ತೀಚಿಗೆ ಒಂದು ಫ್ಯಾಶನ್ ಆಗಿದೆ. ಟೆಕ್ಕಿಗಳು, ಹಣವಂತರು ಕೃಷಿಯ ಕಡೆಗೆ ಆಕಷರ್ಿತರಾಗುತ್ತಿದ್ದಾರೆ. ಪರಿಣಾಮ ಹೊಸದಾಗಿ ಕೃಷಿ ಭೂಮಿ ಖರೀದಿಸಿ ಹೊಸ ಹೊಸ ಸಾಧನೆಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ಹಳ್ಳಿಯ ಪಾರಂಪರಿಕ ಕೃಷಿಕೂಡ ಸಾಕಷ್ಟು ಸುಧಾರಣೆಯತ್ತ ಸಾಗುತ್ತಿರುವುದನ್ನು ಕಾಣಬಹುದು.
ಹೊಸದಾಗಿ ಬಂದ ವಿದ್ಯಾವಂತರು ಪರಿಚಯಿಸುತ್ತಿರುವ ಹೊಸಹೊಸ ಪ್ರಯೋಗಗಳು ನಮ್ಮವರಿಗೂ ಮಾದರಿಗಳಾಗುತ್ತಿವೆ. ಮಾರುಕಟ್ಟೆ, ಭಿತ್ತನೆ ಬೀಜ, ತಂತ್ರಜ್ಞಾನಗಳ ಬಳಕೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸುತ್ತಿವೆ.
ಇಂತಹವರ ಸಾಲಿಗೆ ನಿಲ್ಲಬಲ್ಲವರು ಕೃಷ್ಣರಾವ್. ಬಿಡುವಿಲ್ಲದ ಕೆಲಸ.ವ್ಯಾಪಾರ, ಸುತ್ತಾಟದಿಂದ ಉಂಟಾದ ಒತ್ತಡದಿಂದ ಬೇಸತ್ತು ಭೂಮಿಯ ಸೆಳೆತಕ್ಕೆ ಅವರು ಮನಸೋತಿದ್ದಾರೆ.
ಮೂಲತಃ ಕೃಷಿಕರೆ ಆದ ಹುಣಸೂರು ತಾಲೂಕು ರತ್ನಪುರಿಗ್ರಾಮದ ಕೃಷ್ಣರಾವ್ ಓದಿದ್ದು ಭೂಗರ್ಭ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ.ನಂತರ ಅವರು ದೇಶ ವಿದೇಶಗಳಲ್ಲಿ  ಕಲ್ಲು ಗಣಿ ಮಾಕರ್ೇಟಿಂಗ್ಗಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಚೀನಾ,ಜಪಾನ್ ಸೇರಿದಂತೆ ನಾನಾ ದೇಶಗಳಲ್ಲಿ ವ್ಯಾಪಾರ ವಹಿವಾಟು ಮಾಡಿದರು. ಕೊನೆಗೆ ಅವರು ಬಂದು ನಿಂತಿದ್ದು ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಸಮೀಪ ಇರುವ ಕುದೇರು ಮತ್ತು ದೇಮಳ್ಳಿ ನಡುವೆ ಹೊಸದಾಗಿ ಖರೀದಿಸಿದ ತಮ್ಮ ಕರ್ಮಭೂಮಿಯಲ್ಲಿ. ಇಲ್ಲಿ ಎಬಚಗಳ್ಳಿಯ ಮಹೇಶ್ ಎಂಬ ತರುಣನ ಜೊತೆ ಸೇರಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಗೆಳೆಯರು ಪ್ರೀತಿಯಿಂದ ಅವರನ್ನು "ಕಲ್ಲು' ಎಂದೇ ಕರೆಯುತ್ತಾರೆ.
ಉಸಿರುಗಟ್ಟಿಸುವ ನಗರದ ವಾತಾವರಣ,ವೇಗದ ಬದುಕು, ಸದಾ ಏರುಪೇರಾಗುವ ವ್ಯಾಪಾರ ಇದೆಲ್ಲದ್ದರ ಒತ್ತಡದಿಂದ ಪಾರಾಗಲು ಯೋಚಿಸುತ್ತಿದ್ದಾಗ ಹೊಳೆದದ್ದು ಕೃಷಿ. ಭೂಮಿ ತಾಯಿ ನಂಬಿದವರನ್ನ ಎಂದಿಗೂ ಕೈಬಿಡಲ್ಲ ಎಂಬ ನಂಬಿಕೆಯಿಂದ ಕೃಷಿಕನಾಗಿದ್ದೇನೆ ಎಂದರು ಕೃಷ್ಣರಾವ್.
ತನ್ನ ಆಲೋಚನೆಗಳನ್ನು ಭೂಮಿಯಲ್ಲಿ ಸಾಕಾರಗೊಳಿಸಲು ತಮ್ಮನಂತಹ ಆತ್ಮೀಯ ಗೆಳೆಯ ಮಹೇಶ್ ತಮ್ಮ ಜೊತೆ ಕೈಜೋಡಿಸಿದ್ದು ತಮ್ಮ ಕೃಷಿ ಬದುಕಿಗೆ ಸ್ಫೂತರ್ಿಯಾಯಿತು ಎನ್ನುತ್ತಾರೆ. ತಾವು ತಮ್ಮ ಕೆಲಸದ ನಿಮಿತ್ತ ರಾಜ್ಯದ ಎಲ್ಲೆಡೆ ಸುತ್ತಾಡುವಾಗ ಅಲ್ಲಿ ಸಿಗುವ ಬೇರೆ ಬೇರೆ ಹಣ್ಣು ಮತ್ತು ಔಷದೀಯ ಸಸ್ಯಗಳನ್ನು ತೋಟದ ಅಲ್ಲಲ್ಲಿ ಹಾಕಿದ್ದಾರೆ.
ಬೇಳೆ ಕಾಳುಗಳ ಸಂಯೋಜನೆ :  ದೇಮಹಳ್ಳಿ ಸಮೀಪ ತಮ್ಮ ಹದಿಮೂರು ಎಕರೆ ಇರುವ ಜಮೀನಿನಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದು ಮುಖ್ಯವಾಗಿ ಬೇಳೆಕಾಳುಗಳನ್ನು ಬೆಳೆಯುತ್ತಾರೆ. ಸಂಪೂರ್ಣ ಎರೆಮಣ್ಣು ಇರುವ ಇಲ್ಲಿ ಕೊತ್ತಂಬರಿ, ಹೆಸರು. ಉದ್ದು, ಮುಸುಕಿನ ಜೋಳದಂತಹ ದ್ವಿದಳ ದಾನ್ಯಗಳನ್ನು ಬೆಳೆಯುತ್ತಿರುವ ಇವರು ತೋಟದ ಸುತ್ತ ವಿಶೇಷ ತಳಿಯ ಬೇಗ ಕಟಾವಿಗೆ ಬರುವ ತೇಗದ ಮರಗಳನ್ನು ನಾಟಿಮಾಡಿದ್ದಾರೆ. ಅಲ್ಲದೇ ಮಂಡ್ಯ ಸಮೀಪ ಇರುವ ಲೋಕಸರದ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಎಳನೀರು ತಳಿಯ 200 ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಹಾಕಿದ್ದಾರೆ. ಇದಲ್ಲದೆ ಮೂಸಂಬಿ, ಕರಿಬೇವು, ನುಗ್ಗೆ, ನೆಲ್ಲಿ,ನೇರಳೆ,ಅಮಟೆ ,ಅಂಜೂರ ಹೀಗೆ ಮುಂತಾದ ಹಣ್ಣಿನ ಗಿಡಗಳನ್ನು ಹಾಕಿದ್ದು ಸಮಗ್ರ ಕೃಷಿಯ ಕಲ್ಪನೆಯನ್ನು ಸಾಕಾರಮಾಡಿದ್ದಾರೆ.ಕೃಷಿಯ ಬಗ್ಗೆ ಈಗ ತಿಳಿದುಕೊಳ್ಳತೊಡಗಿದ್ದು ಈಗ ಸ್ವಲ್ಪ ರಾಸಾಯನಿಕ ಬಳಸುತ್ತಿದ್ದೇವೆ, ಮುಂದೆ ಸಂಪೂರ್ಣ ಸಾವಯವ ಕೃಷಿಮಾಡಲು ಆಲೋಚಿಸುತ್ತಿದ್ದೇವೆ ಎನ್ನುತ್ತಾರೆ.
ಸಾಮಾನ್ಯವಾಗಿ ರೈತರು ತಮ್ಮ ತೋಟದಲ್ಲಿ ಮುಖ್ಯ ಬೆಳೆ ಮಾಡುವಾಗ ಬೇಲಿಯ ಸುತ್ತಲು ಒಂದಿಂಚು ಜಾಗವನ್ನು ಬಿಡದೆ ಫಸಲು ಹಾಕುತ್ತಾರೆ. ಆದರೆ ಇವರು ಆ ರೀತಿ ಮಾಡದೇ ಅಲ್ಲೂ ಜಾಣ್ಮೆ ಮೆರೆದಿದ್ದಾರೆ. ಬೇಲಿಯ ಬದುವಿನಲ್ಲಿ ಸುಮಾರು ಒಂದು ಮೀಟರ್ನಷ್ಟು ಜಾಗವನ್ನು ಯಾವುದೇ ಮುಖ್ಯ ಬೆಳೆ ಬೆಳೆಯದೇ ತುಪ್ಪದ ಈರೇಕಾಯಿ, ಕುಂಬಳಕಾಯಿ, ಹಾಗಲ ಕಾಯಿ ಹೀಗೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಸಂಯೋಜನೆ ಮಾಡಿದ್ದು ಇದರಿಂದ ಮನೆಗೆ ಬೇಕಾದ ತರಕಾರಿಗಳು ವರ್ಷಪೂತರ್ಿ ಸಿಗುವಂತೆ ಮಾಡಿಕೊಂಡಿದ್ದಾರೆ.
ಬಾಳೆ ಬಾಗಿದಾಗ : ಕುದೇರು ಸಮೀಪ ಹೊಸದಾಗಿ ಆರಂಭವಾಗಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಕೊಗಳತೆ ದೂರದಲ್ಲಿರು ಕೆಂಪು ಮಣ್ಣಿನಿಂದ ಕೂಡಿದ ಮೂರುವರೆ ಎಕರೆಯಲ್ಲಿ ಇವರು ಮಾಡಿರು ಕೃಷಿ ಪ್ರಯೋಗ ಮೊದಲ ನೋಟದಲ್ಲೆ ಗಮನ ಸೆಳೆಯುತ್ತದೆ.
ಚಾಮರಾಜನಗರ ಸಮೀಪ ಎಣ್ಣೆಹೊಳೆಯ ತೋಟವೊಂದರಲ್ಲಿ ತಂದು ಹಾಕಿರುವ ಏಲಕ್ಕಿ ಬಾಳೆ ಕಂದುಗಳು ದಷ್ಟಪುಷ್ಟವಾಗಿದ್ದು ಅಂಗಾಂಶ ಕೃಷಿಯ ಗಿಡಗಳು ನಾಚುವಂತೆ ನಳನಳಿಸುತ್ತಿವೆ.
ಕಳೆದ ವರ್ಷ ನವಂಬರ್ ತಿಂಗಳಿನಲ್ಲಿ ನಾಟಿ ಮಾಡಿರುವ 3400 ಏಲಕ್ಕಿ ಬಾಳೆ ಫಲವತ್ತಾಗಿ ಬಂದಿದ್ದು ಈಗ ಗೊನೆ ಬರಲು ಶುರುವಾಗಿವೆ. ಸರಿಯಾಗಿ ಗೊನೆಗಳು ವರಲಕ್ಷ್ಮಿ ಹಬ್ಬ, ದಸರಾ ಸಮಯದಲ್ಲಿ ಕಟಾವಿಗೆ ಬರುವಂತೆ ಯೋಜನೆಮಾಡಿ ಹಾಕಿದ್ದು ಪ್ರತಿ ಗೊನೆ ಸರಾಸರಿ 15 ಕೆಜಿ ಬರುವಂತಿದ್ದು ಅದರಿಂದ 20 ಲಕ್ಷಕ್ಕೂ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಿದ್ದಾರೆ.
ಸುತ್ತಮುತ್ತ ನೀರಿಗೆ ತೊಂದರೆ ಇದೆ. ಆದರೆ ತಾವು ಹೊಸದಾಗಿ ಖರೀದಿಸಿದ ಈ ಜಮೀನು ಕಳೆದ 20 ವರ್ಷಗಳಿಂದ ವವ್ಯಸಾಯವನ್ನೇ ಮಾಡದೆ ಪಾಳು ಬಿದ್ದಿತ್ತು. ಅಲ್ಲಿ ಜಮೀನು ಕೊಂಡು ಮೊದಲು ನಾವು ಮಾಡಿದ್ದು ನೀರಿಗಾಗಿ ಬೋರ್ವೆಲ್ ಹಾಕಿಸಿದ್ದು. ಎರಡುವರೆ ಇಂಚು ನೀರು ಬಂತು. ಬೋರ್ ಹಾಕುವಾಗ ನೀರಿನ ರಭಸಕ್ಕೆ ಬೆಣಚುಕಲ್ಲೊಂದು ರೊಯ್ಯನೇ ಮೇಲೆ ಹಾರಿ ಕೆಳಗೆ ಬಿತ್ತು. ಆ ಖುಶಿ, ಸಂಭ್ರಮ ನನ್ನ ಜೀವನದಲ್ಲಿ ಎಂದೂ ಮರೆಯಲಾದ ನೆನಪು. ಅದಕ್ಕಾಗಿಯೇ ಆ ಕಲ್ಲನ್ನು ಈಗಲೂ ತಮ್ಮ ಮನೆಯಲ್ಲಿ ಇಟ್ಟಿರುವುದಾಗಿ ಕೃಷ್ಣರಾವ್ ಹೇಳುತ್ತಾರೆ.
ವ್ಯವಸಾಯವನ್ನೇ ಮಾಡದೇ ಪಾಳು ಬಿಟ್ಟಿದ್ದ ಜಮೀನಾಗಿದ್ದರಿಂದ ನಾವು ಇಲ್ಲಿ ಏನೇ ಬೆಳೆದರು ಉತ್ತಮವಾದ ಫಸಲೇ ಬರುತ್ತಿದೆ. ಕೆಂಪು ಮಣ್ಣಿನಿಂದ ಕೂಡಿರುವ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಕೃಷಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ತನ್ನನ್ನು ಹುಣಸೂರಿನಿಂದ ಇಲ್ಲಿಗೆ ಕರೆದುಕೊಂಡು ಬಂತು ಎನ್ನುತ್ತಾರೆ.
ಈಗ ಕೃಷ್ಣರಾವ್ ಚಾಮರಾಜ ನಗರ ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ರೈತರಿಗೆ ತಾವೇ ಭಿತ್ತನೆ ಬೀಜ ಕೊಟ್ಟು ಮತ್ತೆ ಅವರಿಂದ ಬೆಳೆದ ಧಾನ್ಯಗಳನ್ನು ಖರೀದಿ ಮಾಡಿ ಅದಕ್ಕೆ ಸೂಕ್ತ ಮಾರುಕಟ್ಟೆ ರೂಪಿಸುವ ಹೊಸ ಯೋಜನೆಯೊಂದರ ಸಿದ್ಧತೆಯಲ್ಲಿದ್ದಾರೆ.ಜಿಲ್ಲೆಯ ಪರಿಸರ ಸಿರಿಧಾನ್ಯಗಳನ್ನು ಬೆಳೆಯಲು ಸೂಕ್ತವಾಗಿದ್ದು, ನಮ್ಮ ರೈತರು ಹೆಚ್ಚು ಖಚರ್ಿಲ್ಲದೆ ಸಿರಿಧಾನ್ಯ ಬೆಳೆದು ಹೆಚ್ಚು ಲಾಭ ಗಳಿಸಬಹುದು ಎನ್ನುತ್ತಾರೆ.
ಮೂರು ತಿಂಗಳಿಗೆ ಮೂರು ಲಕ್ಷ ಆದಾಯ : ಕಳೆದ ನವೆಂಬರ್ ತಿಂಗಳಿನಲ್ಲಿ ಬಾಳೆ ನಾಟಿ ಮಾಡುವಾಗ ಮಿಶ್ರ ಬೆಳೆಯಾಗಿ ಹಾಕಿದ ಕಲ್ಲಂಗಡಿಯಲ್ಲಿ ಬಂಪರ್ ಬೆಳೆ ತೆಗೆದು ಒಳ್ಳೆಯ ಲಾಭಗಳಿಸಿದ್ದಾರೆ.
ಮೂರುವರೆ ಎಕರೆಯಲ್ಲಿ ಒಟ್ಟು 60 ಟನ್ ಕಲ್ಲಂಗಡಿ ಬಂತು. ಅದರಲ್ಲಿ 48 ಟನ್ ಪ್ರಥಮ ದಜರ್ೆಯವು, 12 ಟನ್ ದ್ವಿತೀಯ ದಜರ್ೆಯ ಹಣ್ಣುಗಳು. ಕಲ್ಲಂಗಡಿ ಬಾಳೆ ಸೇರಿದಂತೆ ಮೂರು ತಿಂಗಳವರೆಗೆ ಒಟ್ಟು ಒಂದು ಲಕ್ಷದ ಅರವತ್ತು ಸಾವಿರ ರೂ ವೆಚ್ಚಮಾಡಲಾಗಿತ್ತು. ಕಲ್ಲಂಗಡಿ ಮಾರಾಟದಿಂದ ನಾಲ್ಕುವರೆ ಲಕ್ಷ ರೂ. ಆದಾಯ ಬಂತು. ಅಲ್ಲಿಗೆ ನಮಗೆ ಖಚರ್ು ಕಳೆದು ಮೂರು ಲಕ್ಷ ರೂ. ಉಳಿತಾಯವಾದಂತಾಯಿತು ಎನ್ನತ್ತಾರೆ ತೋಟದ ನಿರ್ವಹಣೆಯ ಹೊಣೆಹೊತ್ತ ಮಹೇಶ್.
ತಾನು ಕೂಡ ಕೃಷ್ಣರಾವ್ ಅವರ ಸಂಪರ್ಕಕ್ಕೆ ಬರುವ ಮೊದಲು ರಾಜಕೀಯದಲ್ಲಿ ಸಕ್ರೀಯವಾಗಿದ್ದೆ. ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಂತು ಪಂಚಾಯಿತಿ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದೆ. ಕೃಷ್ಣರಾವ್ ಅವರ ಸಂಪರ್ಕ ಸಿಕ್ಕ ಮೇಲೆ ರಾಜಕೀಯದಿಂದ ದೂರ ಸರಿದು ಸಂಪೂರ್ಣ ಕೃಷಿಯನ್ನೇ ಅವಲಂಭಿಸಿರುವುದಾಗಿ ಎಬಚಗಳ್ಳಿಯ ಮಹೇಶ್ ಹೇಳುತ್ತಾರೆ.
ಕೃಷಿಯಿಂದ ಮಾನಸಿಕ ನೆಮ್ಮದಿ ಇದ್ದು ಸದಾ ಹಸಿರಿನ ನಡುವೆ ಇರುವುದರಿಂದ ಆರೋಗ್ಯವಾಗಿದ್ದೇನೆ.ನಮ್ಮ ಯುವಕರು ರಾಜಕೀಯವನ್ನೇ ಪ್ರಧಾನವಾಗಿ ತೆಗೆದುಕೊಂಡು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಕೃಷಿ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಇದು ತಪ್ಪು ಕಲ್ಪನೆ. ಶ್ರದ್ಧೆಯಿಂದ, ಯೋಜನೆ ಹಾಕಿಕೊಂಡು ಕೃಷಿ ಮಾಡಿದರೆ ಎಂದಿಗೂ ನಷ್ಟ ಎಂಬ ಮಾತೇ ಇಲ್ಲ. ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಾರೆ ಮಹೇಶ್. ಆಸಕ್ತರು ಇವರನ್ನು ಮೊ.9743271157 ಸಂಪಕರ್ಿಸಬಹುದು.
ಬಾನೆತ್ತರ ಬೆಳೆವ ತೇಗ
ಚಾಮರಾಜನಗರ : ಕೃಷ್ಣರಾವ್ ಅವರ ತೋಟಕ್ಕೆ ಹೋದವರ ಮೊದಲ ಗಮನ ಸೆಳೆಯುವುದು ತೋಟದ ಸುತ್ತ ಹಾಕಿರುವ ಸಾವಿರಕ್ಕೂ ಹೆಚ್ಚು ತೇಗದ ಗಿಡಗಳು. ಬೆಂಗಳೂರಿನ ಮದರ್ ಬಯೋಟೆಕ್ ಸಂಸ್ಥೆಯಿಂದ ತಂದು ಹಾಕಿರುವ ತೇಗದ ಗಿಡಗಳು ಕೇವಲ ಆರೆ ತಿಂಗಳಲ್ಲಿ ಹತ್ತು ಅಡಿಗೂ ಎತ್ತರ ಬೆಳೆದು, ಅಗಲವಾದ ಎಲೆಗಳಿಂದ ಕೂಡಿವೆ.
ಅಂಗಾಂಶ ಕೃಷಿ ವಿಧಾನದಲ್ಲಿ ಈ ಗಿಡಗಳನ್ನು ಮೂರು ಹಂತಗಳಲ್ಲಿ ಬೆಳೆಸಲಾಗುತ್ತದೆ. ಪ್ರತಿ 30 ದಿನಗಳಂತೆ ಮೂರು ಹಂತಗಳಲ್ಲಿ 90 ದಿನ ಬೆಳೆಸಿದ ಒಂದು ಗಿಡದ ಬೆಲೆ 180 ರಿಂದ 220 ರೂಪಾಯಿ. ಆಯಾಯ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿಯೇ ಲ್ಯಾಬ್ನಲ್ಲಿ ಸಸಿಗಳನ್ನು ಬೆಳೆಸಲಾಗುತ್ತಾದೆ ಎನ್ನುತ್ತಾರೆ ಕೃಷ್ಣರಾವ್.
 ಎರಡು ಅಡಿ ಅಗಲ ಆಳದ ಗುಂಡಿ ತೆಗೆದು ಪ್ರತಿ 7 ಅಡಿಗೆ ಒಂದರಂತೆ ಸಸಿಗಳನ್ನು ನಾಟಿ ಮಾಡಲಾಗಿದೆ. ಹತ್ತು ವರ್ಷಕ್ಕೆ ಸುಮಾರು 25 ಅಡಿಗಳಿಗೂ ಹೆಚ್ಚು ಉದ್ದ ಬೆಳೆಯುವ ಈ ತಳಿಯ ಮರದ ಗತರ್್ ಒಂದು ಮೀಟರ್ಗೂ ಮಿಗಿಲಾಗಿ ಇರುತ್ತದೆ. ಇಂತಹ ಗಿಡಮರಗಳನ್ನು ಜಮೀನಿನ ಬದುಗಳಲ್ಲಿ ನಮ್ಮ ರೈತರು ಬೆಳೆದುಕೊಳ್ಳುವುದರಿಂದ ಸಾಕಷ್ಟು ಆದಾಯಗಳಿಸಬಹುದು. ಅಲ್ಲದೆ ಮುಂದೊಂದು ದಿನ ಪರಿಶಯದ್ಧವಾದ ಗಾಳಿಯನ್ನು ಮಾರಾಟ ಮಾಡುವ ಜಾಲ ಸೃಷ್ಠಿಯಾಗುತ್ತದೆ. ನೀರನ್ನು ಬಾಟಲ್ನಲ್ಲಿ ಮಾರುವಂತೆ ಗಾಳಿಯನ್ನು ಮಾರಾಟಮಾಡುವ ಕಾಲ ಬರುತ್ತದೆ. ಇಂತಹ ಸಂಕಷ್ಟದಿಂದ ಪಾರಾಗಲು ನಮ್ಮ ರೈತರು ಬದುಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿಕೊಳ್ಳುವುದರಿಂದ ಮುಂದೊಂದು ದಿನ ಅವು ಸಾಕಷ್ಟು ಕಾಸು ತರಬಲ್ಲ ಆಸ್ತಿಗಳಾಗುತ್ತವೆ ಎನ್ನುತ್ತಾರೆ ಕೃಷ್ಣರಾವ್. ಆಸಕ್ತರು ಇವರನ್ನು ಮೊ.8762031704 ಸಂಪಕರ್ಿಸಬಹುದು.



 ಗೊಲ್ಲರಹಳ್ಳಿಯಿಂದ ಅಮೇರಿಕಾ 
ತಲುಪಿತು "ಗಣೇಶ" ಸಾಧನೆ
ನಗರ ಬಿಟ್ಟು ಹಳ್ಳಿಯಲ್ಲೇ ನೆಮ್ಮದಿ ಬದುಕು ಕಟ್ಟಿಕೊಂಡ ಸ್ವಾಭಿಮಾನಿ 
ಚೆನ್ನರಾಯಪಟ್ಟಣ : ಎಲ್ಲಿಯಾ ಅಮೇರಿಕಾ ಅದೆಲ್ಲಿಯಾ ಗೊಲ್ಲರಹಳ್ಳಿ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಬೆಳೆದ ಸಾವಯವ ಪದಾರ್ಥಗಳು ಇಂದು ವಿದೇಶದಲ್ಲೂ ಮಾರುಕಟ್ಟೆ ಕಂಡುಕೊಂಡಿವೆ.
ಹೀಗೆ ಈ ಪುಟ್ಟಹಳ್ಳಿಗೂ ಸಾಗರದಾಚೆಯ ಅಮೇರಿಕಾ ದೇಶಕ್ಕೂ ಸೇತುವೆಯಾಗಿ ನಿಂತದ್ದು ಬೆಂಗಳೂರಿನ "ಫಲದ' ಆಗ್ರೋ ಸಂಸ್ಥೆ. ಈ ಸಂಸ್ಥೆಯ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಸಾವಯವ ಕೃಷಿಮಾಡುತ್ತಾ ವಿದೇಶಗಳಿಗೆ ತಾವು ಬೆಳೆಯುತ್ತಿರುವ ಸಂಬಾರ ಪದಾರ್ಥಗಳನ್ನು ಮಾರುತ್ತಿರುವ ಕೆ.ಜಿ.ಗಣೇಶ್ ಅವರ ಸಾಧನೆ ಖಾಸಗಿ ಕಂಪನಿಗಳಲ್ಲಿ ಚಾಕರಿ ಹುಡುಕಿಕೊಂಡು ಅಲೆಯುತ್ತಿರುವ ನಮ್ಮ ಯುವಕರಿಗೆ ಮಾದರಿಯಾಗುವಂತಿದೆ.
ಎಲ್ಲರಂತೆ ನಗರದ ವ್ಯಾಮೋಹಕ್ಕೆ ಸಿಲುಕಿದ ಗಣೇಶ್ 1990 ರಲ್ಲಿ ಮೈಸೂರಿನ ಕನರ್ಾಟಕ ಬಾಲ್ ಬೇರಿಂಗ್ ಕಪರ್ೂರೇಷನ್(ಕೆಬಿಬಿಸಿ) ಕಂಪನಿಯಲ್ಲಿ ನೌಕರಿಗೆ ಸೇರಿಕೊಂಡರು.ಜಾಗತೀಕರಣದ ಪರಿಣಾಮ ಎದುರಿಸಲಾರದ ಕಂಪನಿ 1992ರಲ್ಲಿ ಮುಚ್ಚಿಕೊಂಡಿತು. ಇದರಿಂದ ಕಂಗಲಾದ ಗಣೇಶ್ ಮತ್ತು ಕುಟುಂಬ ನಗರದ ಬದುಕಿಗೆ ವಿದಾಯಹೇಳಿ ನೆಮ್ಮದಿಯನ್ನು ಹರಸಿ ಹೊರಟ್ಟಿದ್ದು ಗೊಲ್ಲರಹಳ್ಳಿಗೆ.
ಹಳ್ಳಿಯಲ್ಲಿ ಈಗ ಇವರು ಮಾಡಿರುವ ಸಾಧನೆ ದೇಶ ವಿದೇಶದ ಕೃಷಿಕರ ಗಮನಸೆಳೆಯುತ್ತಿದೆ. ತಮ್ಮ ಪಾಲಿನ 4 ಎಕರೆ 12 ಗುಂಟೆ ಜಮೀನಿನಲ್ಲಿ ಕೃಷಿ ಬ್ರಂಹಾಡವನ್ನೇ ಗಣೇಶ್ ಸೃಷ್ಠಿಮಾಡಿದ್ದಾರೆ.ಅವರ ತೋಟದಲ್ಲಿ ವಿವಿಧ ಜಾತಿಯ ಅರವತ್ತು ಬಗೆಯ ಫಸಲುಗಳು ಹಸಿರಿನಿಂದ ಬೀಗುತ್ತಿವೆ. ಕಸ್ತೂರಿ,ಒರಿಸ್ಸಾ ಮತ್ತು ಸ್ಥಳೀಯ ತಳಿಯ ಅರಿಶಿನ, ಕವಡೆ ಅರಳು,ಚಿಟ್ಟರಳು,ಮರ ಅರಳು, ಸಣ್ಣ ಈರುಳ್ಳಿ, ಅವರೆ,ರಾಗಿ,300 ಅಡಿಕೆ, 160 ತೆಂಗು,ಮಾವು, ಅಲಸು,ಕಂಗು, ಬಾಳೆ,ಜೇನು,ನೂರಾರು ಕಾಡು ಮರಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಿಮಗೆ ನೆನಪಿರಲಿ ಇಲ್ಲಿ ಯಾವ ನದಿಮೂಲಗಳನ್ನು ನೀರಿಗೆ ಆಶ್ರಯಮಾಡಿಲ್ಲ.ಎರಡು ಬೋರ್ವೆಲ್ನಲ್ಲಿ ಬರುವ ನೀರು ಮಾತ್ರ ಇಷ್ಟಕ್ಕೆಲ್ಲ ಆಧಾರ. ಮಳೆಗಾಲದಲ್ಲಿ ಹೆಚ್ಚು ನೀರು, ಬೇಸಿಗೆ ಕಾಲದಲ್ಲಿ ಅರ್ಧ ಇಂಚು ಬರುವ ನೀರನ್ನೆ ಬೆಳೆಗಳಿಗೆ ಉಣಿಸಲಾಗುತ್ತದೆ. ಆದರೂ ಇಷ್ಟೊಂದು ಬೆಳೆ ವೈವಿಧ್ಯವನ್ನು ಕಾಪಾಡಿಕೊಳ್ಳಲು ಗಣೇಶ್ ಅನುಸರಿಸುತ್ತಿರುವ ಮಾದರಿ ಮಾತ್ರ ವಿಶಿಷ್ಟ ಮತ್ತು ಅನುಕರಣೀಯ.
ಉಪ್ಪ,ಬಟ್ಟೆ,ಮ್ಯಾಚ್ ಬಾಕ್ಸ್ ಮಾತ್ರ ನಾವು ಹೊರಗಿನಿಂದ ತರುತ್ತೇವೆ.ಇನ್ನು ಜೀವನಕ್ಕೆ ಬೇಕಾದ ಎಲ್ಲಾ ಪದಾರ್ಥಗಳನ್ನು ನಾವೇ ಬೆಳೆದುಕೊಳ್ಳುತೇವೆ.ಕಳೆದ 12 ವರ್ಷದಿಂದ ನಮ್ಮ ಮನೆಯಲ್ಲಿ ಯಾರು ಆಸ್ಪತ್ರೆಗೆ ಹೋಗಿಲ್ಲ. ನಮಗ್ಯಾವ ಕಾಯಿಲೆಕಸಾಲೆಗಳು ಬಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವಾಷರ್ಿಕವಾಗಿ ಜಮೀನಿಗೆ ಹತ್ತರಿಂದ 15 ಸಾವಿರ ರೂಪಾಯಿ ಮಾತ್ರ ಖಚರ್ುಮಾಡುವ ಗಣೇಶ್ ವಾಷರ್ಿಕ ಕನಿಷ್ಠ ನಾಲ್ಕರಿಂದ ಐದು ಲಕ್ಷ ರೂ.ಆದಾಯ ಗಳಿಸುತ್ತಾರೆ. ಎಸ್ಎಸ್ಎಲ್ಸಿ ಓದಿ ತಾಂತ್ರಿಕ ಶಿಕ್ಷಣದಲ್ಲಿ ತರಬೇತಿ ಪಡೆದಿರುವ ಇವರು ಪತ್ನಿ ಸುಧಾ ಮತ್ತು ಮಕ್ಕಳಾದ ಜಿ.ಅನುಷಾ,ಜಿ.ಗರೀಶ್ ಅವರೊಂದಿಗೆ ತೋಟದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳಿಬ್ಬರು ಮೈಸೂರು ವಿಶ್ವವಿದ್ಯಾನಿಲಯದಲ್ಲೇ ಎಂ.ಎಸ್ಸಿ ಓದಿ ಕೆಲಕಾಲ ಮಹಾರಾಣಿ ಕಾಲೇಜಿನಲ್ಲಿ ಅರೆಕಾಲೀಕ ಉಪನ್ಯಾಸಕರಾಗಿ ಕೆಲಸಮಾಡಿದ್ದಾರೆ. ಅಷ್ಟರ ಮಟ್ಟಿಗೆ ಗಣೇಶ್ ತಮ್ಮ ರೈತಾಪಿ ಕೆಲಸದ ನಡುವೆಯೂ ಮಕ್ಕಳಿಬ್ಬರನ್ನು ವಿಜ್ಙಾನ ಸ್ನಾತಕೋತ್ತರ ಪದವಿಧರರನ್ನಾಗಿ ಮಾಡಿರುವುದು ಕಡಿಮೆ ಸಾಧನೆಯೇನಲ್ಲ.
ಫಲಕೊಟ್ಟ "ಫಲದಾ': ಆರಂಭದಲ್ಲಿ ಇದು ಬರಗಾಡು. ನಮ್ಮ ತಂದೆ ತಾಯಿ ರಾಗಿ ಜೋಳದಂತಹ ಫಸಲು ಬೆಳೆಯುತ್ತಿದ್ದರು.ನಾನು ಇಲ್ಲಿಗೆ ಬಂದಾಗ ಇಲ್ಲಿಯೂ ಸಾಕಷ್ಟು ನೀರು ಇತ್ತು.ಇದನ್ನು ಬಳಸಿಕೊಂಡು ನಾನು 1992 ರಿಂದ 2004 ರವರೆಗೂ ಎಲ್ಲರಂತೆ ರಾಸಾಯನಿಕ ಕೃಷಿ ಮಾಡಿದೆ.ಜಮೀನಿಗೆ ಕೆರೆಗೋಡು, ಲೋಡುತುಂಬಾ ಸಕರ್ಾರಿ ಗೊಬ್ಬರ ಹೊಡೆಸಿ ಕಬ್ಬು ಬಾಳೆ, ತರಕಾರಿ ಹೀಗೆ ನಾನಾ ಬೆಳೆಗಳನ್ನು ಉತ್ತಮ ಇಳುವರಿಯೊಂದಿಗೆ ಬೆಳೆದೆ. ಮೂರ್ನಾಲ್ಕು ವರ್ಷದಲ್ಲಿ ಕ್ರಮೇಣ ಇಳುವರಿ ಕಡಿಮೆಯಾಗುತ್ತಾ ಬಂತು. ಸಾಲದ ಹೊರೆಯೂ ಏರುತ್ತಾ ಹೋಯ್ತು. ಇದರಿಂದ ಸಹಜವಾಗಿ ನನ್ನ ಪತ್ನಿ ಸುಧಾ ಚಿಂತಾಕ್ರಾಂತಳಾದಳು.ಪೇಟೆಯಲ್ಲಿದ್ದ ನಾವು ವ್ಯವಸಾಯದ ರೀತಿರಿವಾಜು ಅರಿತುಕೊಳ್ಳದೆ ಎಲ್ಲೋ ದಾರಿ ತಪ್ಪುತಿದ್ದೇವೆ ಎನ್ನುವುದನ್ನು ಪತಿಗೆ ಮನವರಿಕೆ ಮಾಡಲು ಮುಂದಾದರು.
ಅದೇ ಸಮಯದಲ್ಲಿ ಬೆಂಗಳೂರಿನ ಫಲದಾ ಆಗ್ಯರ್ಾನಿಕ್ ಸಂಸ್ಥೆಯೊಂದು ಚೆನ್ನರಾಯಪಟ್ಟಣದಲ್ಲಿ ಸಾವಯವ ಕೃಷಿಯ ಬಗ್ಗೆ ಕಾರ್ಯಗಾರವೊಂದನ್ನು ಏರ್ಪಡಿಸಿತ್ತು. ಕಾರ್ಯಾಗಾರದಲ್ಲಿ ಬಾಗವಹಿಸಿದ್ದ ಗಣೇಶ್ ಅವರಿಗೆ ಮುಚ್ಚಿದ್ದ ಕಣ್ಣು ತೆರೆದಂತಾಯಿತು. ಅಲ್ಲಿಂದ ಬಂದವರೆ ರಾಸಾಯನಿಕ ಕೃಷಿಗೆ ಗುಡ್ ಬೈ ಹೇಳಿ ಮರಳಿ ಸಾಂಪ್ರಾದಾಯಿಕ ನಮ್ಮ ನೆಲಮೂಲದ ಕೃಷಿಗೆ ಮರಳಿದರು. ಆರಂಭದಲ್ಲಿ ಸಾವಯವದಲ್ಲಿ ಟೊಮಟೋ ಬೆಳೆದು ಉತ್ತಮ ಆದಾಯ ಪಡೆದರು.
ಫಲದಾ ಆಗ್ರೋ ಸಂಸ್ಥೆಯ ಮಾರ್ಗದರ್ಶನಲ್ಲಿ ಗೊಲ್ಲರಹಳ್ಳಿಯ 56 ಮಂದಿ ರೈತರು 595 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿಮಾಡುತ್ತಿದ್ದಾರೆ.
ಜೀವ ನೀಡಿತು ಜೀವಾಮೃತ : ರಾಸಾಯನಿಕ ಬಳಸಿ ಬೆಳೆಯುತ್ತಿದ್ದಾಗ ಎಕರೆಗೆ 12 ಚೀಲ ಬರುತ್ತಿದ್ದ ಬತ್ತ ಜೀವಾಮೃತ ಬಳಸಿ ಬೆಳೆದಾಗ ಮೊದಲ ವರ್ಷ ಕೇವಲ 5 ಚೀಲ ಬಂತು. ಎರಡನೇ ವರ್ಷದಲ್ಲಿ 8 ಚೀಲ ಈಗ ನಿರಂತರವಾಗಿ 13 ಚೀಲ ಬತ್ತ ಬರುತ್ತಿದ್ದು ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತಿದೆ.
ತಮ್ಮ ನಾಲ್ಕುವರೆ ಎಕರೆ ಜಮೀನಿಗೆ ಜೀವಾಮೃತಕೊಡಲು ಎರಡು ನಾಟಿ ಹಸು ಎರಡು ಹೋರಿ ಸಾಕಿಕೊಂಡಿರುವ ಗಣೇಶ್ ಹೊರಸುಳಿಯನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ತಾವು ಬೆಳೆದ ತರಕಾರಿಯನ್ನು ಕಲ್ಕೆರೆ ಸಂತೆಗೆ ತಾವೇ ಹೋಗಿ ಮಾರಾಟಮಾಡುತ್ತಾರೆ. ಯಾವುದೇ ಬೆಳೆ ಮಾರಾಟಕ್ಕೆ ಮಧ್ಯವತರ್ಿಗಳನ್ನು ಇವರು ನಂಬಿಕೊಂಡಿಲ್ಲ. ಇವರು ಬೆಳೆದ ತರಕಾರಿಗೆ ತುಂಬಾ ಬೇಡಿಕೆ ಇದ್ದು, ಸಂತೆಗೆ ಹೋದ ಅರ್ಧಗಂಟೆಯಲ್ಲಿ ಮೂಟೆ ಮೂಟೆ ತರಕಾರಿ ಖಾಲಿಯಾಗಿಬಿಡುತ್ತದೆ. ಈ ಭಾಗದಲ್ಲಿ ಇವರು ತರಕಾರಿ ಗಣೇಶ್ ಎಂದೇ ಪ್ರಸಿದ್ಧಿಪಡೆದಿದ್ದಾರೆ.
ವಿದೇಶಿ ದಂಪತಿ ಭೇಟಿ:  ಅಮೇರಿಕಾದ ನ್ಯಾ ಚಾಪ್ಟರ್ ಸಂಸ್ಥೆ ಆಯರ್ುವೇದ ಔಷದವನ್ನು ಮಾತ್ರೆ ರೂಪದಲ್ಲಿ ಮಾಡುತ್ತಿದ್ದು,ಅದಕ್ಕಾಗಿ ಗೊಲ್ಲರಹಳ್ಳಿಯ ಶುಂಠಿ. ಅರಿಶಿನ,ತುಳಸಿಯನ್ನು    ಟನ್ಗಟ್ಟಲೆ ಖರೀದಿಸುತ್ತಾರೆ. ಈ ಸಂಸ್ಥೆಯ ನಿದರ್ೇಶಕಿ ಸಾರಾ ನ್ಯಾಮಾಕರ್್, ಉಪಾಧ್ಯಕ್ಷ ಪೀಟರ್ ತೋಟಕ್ಕೆ ಭೇಟಿನೀಡಿ ಗಣೇಶ್ ಅವರ ಕೃಷಿ ವಿಧಾನವನ್ನು ಕಂಡು ಬೆರಗಾಗಿದ್ದಾರೆ.
ಉಳುಮೆ ಇಲ್ಲ : ಮೂರು ಎಕರೆ ಪ್ರದೇಶವನ್ನು ಸಂಪೂರ್ಣ ತೋಟಗಾರಿಕೆ ಮತ್ತು ಸಸ್ಯಕಾಶಿಯಾಗಿ ಪರಿವರ್ತನೆ ಮಾಡಿರುವ ಗಣೇಶ್ ಅಲ್ಲಿ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ್ಬ ಪುಕೊವಕ ಮಾದರಿಯ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಬಾಳೆ, ಜಾಯಿಕಾಯಿ, ಹೆಬ್ಬೇವು ,ತೆಂಗು, ಅಡಿಕೆ ಸೇರಿದಂತೆ ಹತ್ತಾರು ಬೆಳೆಗಳನ್ನು ಸಂಯೋಜನೆ ಮಾಡಿ ಭೂಮಿಯಲ್ಲಿ ಸದಾ ತೇವಾಂಶವನ್ನು ಕಾಪಾಡಿಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಗಣೇಶ್ ಜೀವಾಮೃತವನ್ನು ಪ್ರತಿ ಗಿಡಕ್ಕೂ ತಾವೇ ಸ್ವತಃ ಕೈಯಿಂದ ಸಿಂಪರಣೆ ಮಾಡುತ್ತಾರೆ.
ಭೂಮಿಯನ್ನು ಮಟ್ಟಮಾಡಿಲ್ಲ. ಅದು ಇರುವಂತೆ ಏರುತಗ್ಗುಗಳಲ್ಲೇ ಬೆಳೆ ಮಾಡಿರುವುದು ಇವರ ವೈಶಿಷ್ಟ್ಯ. ಇವರ ತೋಟದಲ್ಲಿರುವ ತಮಿಳುನಾಡು ಮೂಲದ ವಲಜಾ ತಳಿಯ ಮಾವು ಒಂದು ಹಣ್ಣು ಒಂದುಕಾಲು ಕೆಜಿ ಇದ್ದು ಬಲು ರುಚಿಯಾಗಿ ಗಮನಸೆಳೆಯುತ್ತದೆ.
ತೋಟದಲ್ಲಿ ಏಳೆಂಟು ಕಡೆ ಜೇನು ಪೆಟ್ಟಿಗೆ ಇಟ್ಟಿದ್ದು, ಅವರೆಂದು ಜೇನುತುಪ್ಪ ತೆಗೆದಿಲ್ಲ. ಇದರಿಂದಾಗಿ ತೋಟದಲ್ಲಿ ಸರಾಗ ಪರಾಗಸ್ಪರ್ಶ ವೇಗವಾಗಿ ನಡೆದು ಇಳುವರಿ ಹೆಚ್ಚಾಗಿದೆ ಎನ್ನುವುದು ಅವರ ಅನುಭವದ ನುಡಿ. ರಾಸಾಯನಿಕ ಬಳುಸುತ್ತಿದ್ದಾಗ ತಿಪಟೂರ್ಟಾಲ್ ತಳಿಯ ಒಂದು ಸಾವಿರ ತೆಂಗಿನ ಕಾಯಿಯಲ್ಲಿ 130 ಕೆಜಿ ಕೊಬ್ಬರಿ ಸಿಗುತ್ತಿತ್ತು. ಅದೇ ನಾನು ಸಾವಯವ ಕೃಷಿಕನಾದ ನಂತರ ಸಾವಿರ ತೆಂಗಿನಕಾಯಿಗೆ 175 ಕೆಜಿ ಕೊಬ್ಬರಿ ಸಿಗುತಿದೆ. ಇದೇ ಎರಡು ಕೃಷಿಗಿರುವ ವ್ಯತ್ಯಾಸ ಎಂದು ತಾವು ಕಂಡುಕೊಂಡ ಸತ್ಯವನ್ನು ಹೇಳುತ್ತಾರೆ.
ತೋಟದ ಸುತ್ತಾ  ಜಟ್ರೋಪ,ಹೆಬ್ಬೇವು ಹೀಗೆ ನೂರಾರು ಅರಣ್ಯಧಾರಿತ ಮರಗಳನ್ನು ಬೆಳೆಸಿಕೊಂಡಿದ್ದು ಜೀವಂತ ಬೇಲಿ ನಿಮರ್ಾಣ ಮಾಡಿದ್ದಾರೆ.
ರೈತರಿಗೆ ಕಿವಿಮಾತು: ಕೃಷಿಕರಿಗೆ ನಿಮ್ಮ ಸಲಹೆ ಏನು ಎಂದು ಕೇಳಿದರೆ, ಜಮೀನಿನಲ್ಲಿ ಮಳೆನೀರು ಆಚೆ ಹೋಗದಂತೆ ಮಾಡಿ. ಎಷ್ಟೊ ಸಾಧ್ಯವೋ ಅಷ್ಟು ಅರಣ್ಯಕೃಷಿ ಮಾಡಿ. ಜಮೀನು ಕಾಡಾಗಲಿ.ಆಗ ಅಲ್ಲಿ ಜೈವಿಕ ಚಟುವಟಿಕೆಗಲು ನಡೆಯಲು ಶುರುವಾಗುತ್ತವೆ. ರಾಸಾಯನಿಕ ನಿಷಿದ್ಧ. ಒಂದೆರಡು ನಾಟಿ ಹಸುಗಳು ಬೇಕೆಬೇಕು. ಕಾಡಿನಂತಾದ ತೋಟದಲ್ಲಿ ನಿಂಬೆ, ಮೊಸಂಬಿ,ಹೆರಳಿ ರೀತಿಯ ಗಿಡಗಳನ್ನು ಹಾಕಬೇಕು. ಅವು ಹೆಚ್ಚು ಖಚರ್ು ಕೇಳದೆ ಆದಾಯ ತಂದುಕೊಡಬಲ್ಲಂತವು. 8 ವರ್ಷಕ್ಕೆ, 10 ವರ್ಷಕ್ಕೆ, 35 ವರ್ಷಕ್ಕೆ ಹೀಗೆ ಆದಾಯ ತಂದುಕೊಡಬಲ್ಲಂತಹ ಕಾಡುಮರಗಳನ್ನು ಸಂಯೋಜನೆ ಮಾಡಿ ಹಾಕಿ.ಬಿಸಿಲು ಬೀಲುವಲ್ಲಿ ಮಾವು, ಸಪೋಟ,ಅಲ್ಲಲ್ಲಿ ಪಪ್ಪಾಯ, ಜಮ್ಮನೇರಳೆ, ಕರಿಬೇವು ಹಾಕಿಕೊಳ್ಳಿ. ನೆರಳು ಬೀಳುವ ಪ್ರದೇಶದಲ್ಲಿ ನಿಂಬೆ ಮೊಸಂಬಿ ಹಾಕಿಕೊಂಡು ಎಲ್ಲೆಲ್ಲಿ ಜಮೀನಿ ಖಾಲಿ ಕಾಣುತ್ತದೆ ಅಲ್ಲೆಲ್ಲ ಅರಣ್ಯಮಾಡಿ. ಜಮೀನಿನ ಸುತ್ತಾ ತೆಂಗು, ಹೆಬ್ಬೇವು, ಸಿಲ್ವರ್ನಂತಹ ಮರಗಿಡಗಳಿರಲ್ಲಿ. ಈಗ ಒಂದು ನಿಂಬೆಹಣ್ಣಿಗೆ 5 ರೂಪಾಯಿ, ತೆಂಗಿಗೂ ಐದೇ ರೂಪಾಯಿ. ನೆನಪಿರಲಿ ಯಾವುದನ್ನು ನಿರ್ಲಕ್ಷ್ಯಮಾಡದಿರಿ.
ಯಾವುದೇ ನೌಕರಿಗೆ ಸೇರಿಕೊಂಡರೆ ಕಚೇರಿಗೆ ತಡವಾಗಿ ಹೋದರೆ ಆಚೆ ನೂಕುತ್ತಾರೆ. ಇದಲ್ಲದೆ ಬಾಸ್ನ ಕಿರಿಕಿರಿ. ಆದರೆ ಜಮೀನು ನೀವು ಎಷ್ಟೇ ತಡವಾಗಿ ಹೋದರು ಹೊರಗೆ ನೂಕುವುದಿಲ್ಲ.ಯಾರಿಗೂ ಹೆದರಬೇಕಗಿಲ್ಲ. ಅಷ್ಟರ ಮಟ್ಟಿಗೆ ಸ್ವಾಭಿಮಾನದಿಂದ, ಸ್ವಾತಂತ್ರವಾಗಿ ಬಾಳಬಹುದು.ಮುಖ್ಯವಾಗಿ ದುರಭ್ಯಾಸ,ದುಂದುವೆಚ್ಚ ಇರಬಾರದು. ನಾನು ಕಳೆದ ಹದಿಮೂರು ವರ್ಷದಿಂದ ಯಾವ ಮಾತ್ರೆಯನ್ನು ನುಂಗಿಲ್ಲ.ಯಾವ ಆಸ್ಪತ್ರೆಗೂ ಹೋಗಿಲ್ಲ. ಬೇರೆಯವರಿಗೆ ದುಡಿಯುವ ಬದಲು ಇಲ್ಲಿ ನಮಗೆ ನಾವೇ ದುಡಿಯುತ್ತೇವೆ. ಇದಕ್ಕಿಂತ ಸುಖದ ಬದುಕು ಯಾವುದಿದೆ.
ದುಡಿಯುವ ಛಲ, ಶ್ರದ್ಧೆ ಮತ್ತು ಹಸಿರು ಪ್ರೀತಿ ಇದ್ದು ದುರುಭ್ಯಾಸಗಳಿಂದ ದೂರವಿದ್ದರೆ ಕೇವಲ ಮೂರೇ ವರ್ಷದಲ್ಲಿ ತಾವು ಇರುವ ಭೂಮಿಯಲ್ಲಿ ಒಂದು ಸ್ವರ್ಗವನ್ನೇ ಸೃಷ್ಠಿಮಾಡಬಹುದು ಎನ್ನುವ ಗಣೇಶ್ ಉಪ ಕಸುಬಾಗಿ ನಾಟಿಕೋಳಿಗಳನ್ನು ಸಾಕುತ್ತಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಪ್ರತಿ ಸಂಜೆ 6.50 ಕ್ಕೆ ಕೇಶವಮೂತರ್ಿ ನಡೆಸಿಕೊಂಡುವ ಕೃಷಿರಂಗವನ್ನು ತಪ್ಪದೇ ಕೇಳುತ್ತಿರುವುದು,ಕೃಷಿ ಪುಸ್ತಕ ಮತ್ತು ಕಾರ್ಯಾಗಾರಗಳು ತಮ್ಮ ಈ ಕೃಷಿ ಸಾಧನೆಗೆ ಸ್ಫೂತರ್ಿ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆಸಕ್ತರು ಇವರನ್ನು ಮೊಬೈಲ್ 9148805942 ಸಂಪಕರ್ಿಸಬಹುದು



ಕಡಿಮೆ ಖಚರ್ು ಆದಾಯ ಹೆಚ್ಚು
ಕೂಳೆಯಲ್ಲೇ ಬಂಗಾರದಂತ ಬೆಳೆ ತೆಗೆವ ಸಹೋದರರು
ನಂಜನಗೂಡು: ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಒಂದುಕಡೆ,ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹೋರಾಟಮಾಡುವವರು ಮತ್ತೊಂದು ಕಡೆ. ಇದರ ನಡುವೆ ಯಾವುದರ ಗೊಡುವೆಯೂ ಇಲ್ಲದೆ, ಸಾಲದ ಸುಳಿಗೂ ಸಿಲುಕದೆ ಕಡಿಮೆ ಖಚರ್ುಮಾಡಿ ಹೆಚ್ಚು ಆದಾಯಗಳಿಸುತ್ತಿರು ಯುವ ರೈತ ಈ ವಾರದ ಬಂಗಾರದ ಮನುಷ್ಯ.
ಕೃಷಿ ಇಂದು ನೆಮ್ಮದಿ ಮತ್ತು ಹಣ ತರುವ ವಲಯವಾಗಿ ಉಳಿದಿಲ್ಲ.ಬೆಲೆಯ ಏರಿಳಿತ,ಮಳೆಯ ಕಣ್ಣಾಮುಚ್ಚಾಲೆ,ಮಧ್ಯವತರ್ಿಗಳ ಕಾಟ, ಸೂಕ್ತ ಮಾರುಕಟ್ಟೆ ಮತ್ತು ಕಾಮರ್ಿಕರ ಕೊರತೆ ಕೃಷಿ ವಲಯವನು ಹೈರಾಣಗಿಸಿದೆ. ಇದೆಲ್ಲದ್ದರ ಬಗ್ಗೆ ತಲೆಯನ್ನೆ ಕೆಡಿಸಿಕೊಳ್ಳದೆ ಬರುವ ಆದಾಯದಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡ ಕೃಷಿಸಾಧಕ ಎಂ.ಮಹೇಶ್.
ನಂಜನಗೂಡು ತಾಲೂಕು ಅಳಗಂಚಿ ಗ್ರಾಮದ ಮಾಜಿ ಚೇರ್ಮನ್ ಮರಿನಾಯಕ ಮತ್ತು ಚಾಮುಂಡಮ್ಮನವರ ಮಗನಾದ ಮಹೇಶ್ ಹದಿಮೂರು ಎಕರೆ ಪ್ರದೇಶದಲ್ಲಿ ಸಮಗ್ರ ತೋಟಗಾರಿಕೆ ಕೃಷಿ ಮಾಡುತ್ತಿದ್ದಾರೆ.
ಕಬ್ಬು, ಬಾಳೆ,ತೆಂಗು,ಕೋಕೋ,ಹಲಸು,ಕಿತ್ತಳೆ,ಸಪೋಟ,ಸೀಬೆ,ಕರಿಬೇವು,ಮೈಸೂರು ವೀಳ್ಯದೆಲೆ,ಮೆಣಸು,ತಾಳೆ ಹೀಗೆ ಹತ್ತು ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.
ಭೂಮಿತಾಯಿ ಕೊಟ್ಟಷ್ಟೇ ಸಾಕು ಉಳಿದದ್ದೆಲ್ಲ ನಮಗೇಕೆ ಬೇಕು ಎನ್ನುವ ಸುರೇಶ್ ತಾವು ಬೆಳೆದ ಬೆಳೆಗಳ ಮಾರುಕಟ್ಟೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಂಪೂರ್ಣ ಸಾವಯವದಲ್ಲಿ ಬೆಳೆದ ಬಾಳೆಯನ್ನು, ರಾಸಾಯನಿಕವಾಗಿ ಬೆಳೆದ ಬಾಳೆಯ ದರಕ್ಕೆ ನಂಜನಗೂಡಿನ ಬಾಳೆ ಮಂಡಿಯಲ್ಲೇ ಮಾರಿಬಿಡುವ ಇವರು ಕಬ್ಬನ್ನು ಬಣ್ಣಾರಿ ಅಮ್ಮನ್ ಸಕ್ಕರೆ ಕಾಖರ್ಾನೆಗೆ ಕೊಟ್ಟು ಬಿಡುತ್ತಾರೆ.
ವಿಶೇಷವೆಂದರೆ ಇವರು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಯಲ್ಲಿ ಇವರಿಗೆ ಎಂದೂ ಕೂಲಿ ಕಾಮರ್ಿಕರ ಸಮಸ್ಯೆಯೇ ಕಂಡು ಬಂದಿಲ್ಲ. ಹದಿಮೂರು ಎಕರೆ ಪ್ರದೇಶದಲ್ಲೂ ಒಂದಲ್ಲ ಒಂದು ಬೆಳೆ ಸಂಯೋಜನೆ ಮಾಡಿರುವ ಇವರೊಬ್ಬರೇ ಇಡೀ ತೋಟವನ್ನು ನಿರ್ವಹಣೆ ಮಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ತೋಟದ ನಿರ್ವಹಣೆಗೆ ಕಾಮರ್ಿಕರನ್ನು ಅವಲಂಭಿಸಿಲ್ಲ.ಕಬ್ಬು ಕಟಾವು, ಗೊಬ್ಬರ ಹಾಕುವುದು ಇಂತಹ ಮುಖ್ಯ ಕೆಲಸಗಳಿಗೆ ಮಾತ್ರ ಕಾಮರ್ಿಕರನ್ನು ಕರೆದುಕೊಳ್ಳುತ್ತಾರೆ. ಇದಕ್ಕೆಲ್ಲ ಕಾರಣ ಸುರೇಶ್ ಅನುಸರಿಸುತ್ತಿರುವ ಸಾವಯವ ಕೃಷಿ ಪದ್ಧತಿ.
ಇವರ ತೋಟದಲ್ಲಿರುವ ಕಬ್ಬು ಹತ್ತನೇ ಕೂಳೆ ಬೆಳೆ. 2004 ರಲ್ಲಿ ಹಾಕಿದ ಎರಡು ಸಾವಿರ ಏಲಕ್ಕಿ ಬಾಳೆ ಇಂದಿಗೂ ಸಮೃದ್ಧ ಫಸಲು ಕೊಡುತ್ತಲೇ ಇದೆ. ಕಬ್ಬು ಮತ್ತು ಬಾಳೆಯಲ್ಲಿ ಇವರು ಅನುಸರಿಸುತ್ತಿರುವ ವಿಧಾನ ಕೂಲಿ ಕಾಮರ್ಿಕರನ್ನು ಬೇಡುವುದೇ ಇಲ್ಲ.
ಪ್ರತಿ ಎಕರೆಗೆ ಕನಿಷ್ಠ 50 ಟನ್ ಕಬ್ಬಿನ ಇಳುವರಿ ತೆಗೆಯುವ ಇವರು ಪ್ರತಿ ತಿಂಗಳು 30 ರಿಂದ 40 ಬಾಳೆ ಗೊನೆಗಳನ್ನು ಕಡಿದು ಮಾರಾಟಮಾಡುತ್ತಾರೆ. ತೋಟದಲ್ಲಿರುವ ಮೂರು ಹಲಸಿನ ಮರಗಳು ಸಾಕಷ್ಟು ಹಣ್ಣು ಬಿಟ್ಟರು ಅದರ ಮಾರಾಟದ ಬಗ್ಗೆ ಇವರು ಚಿಂತಿಸುವುದೇ ಇಲ್ಲ.
ರಾಸಾಯನಿಕ ಮಾರಕ : ಎಲ್ಲರಂತೆ ಇವರು ಆರಂಭದಲ್ಲಿ ರಾಸಾಯನಿಕ ಕೃಷಿಯ ಮೋಹಕ್ಕೆ ಒಳಗಾದವರೆ. 2000 ದಿಂದ ಸತತವಾಗಿ ಐದು ವರ್ಷ ಸಾಕಷ್ಟು ರಾಸಾಯನಿಕ ಗೊಬ್ಬರ ಬಳಸಿ ಎಕರೆಗೆ 70 ರಿಂದ 80 ಟನ್ ಕಬ್ಬು ಬೆಳೆಯುತ್ತಿದ್ದರು. ಮೊದಲ ಎರಡು ವರ್ಷ ಚೆನ್ನಾಗಿ ಬಂದ ಕಬ್ಬು ಮೂರನೇ ವರ್ಷದಿಂದ ಇಳುವರಿ ಕಡಿಮೆಯಾಗುತ್ತಾ ಬಂತು. ಗೊಣ್ಣೆ ಹುಳಗಳ ಕಾಟ ಮತ್ತು ಭೂಮಿಯ ಫಲವತ್ತತೆ ನಾಶದಿಂದ ನಷ್ಟ ಅನುಭವಿಸುವಂತಾಯಿತು.
ರಾಸಾಯನಿಕ ಬಳಸಿ ಬಾಳೆ ಬೆಳೆಯುತ್ತಿದ್ದ ಪರಿಣಾಮ ತೆಂಗಿನ ಇಳುವರಿಯಲ್ಲೂ ಇಳಿಕೆ ಕಂಡುಬಂತು. ಹಾಗಾಗಿ ಸಹಜವಾಗಿ ವ್ಯವಸಾಯದಲ್ಲಿ ನಷ್ಟ ಉಂಟಾಯಿತು. ಇದೇ ಸಂದರ್ಭದಲ್ಲಿ ಕಡಿಮೆ ಖಚರ್ಿನಿಂದ ಹೆಚ್ಚು ಆದಾಯಗಳಿಸುವ ಕೃಷಿ ಪದ್ಧತಿಯ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿಯೊಂದು ನನ್ನ ಕಣ್ಣು ತೆರೆಸಿತು. 2005 ರಲ್ಲಿ ರಾಸಾಯನಿಕ ಕೃಷಿ ಪದ್ಧತಿಯಿಂದ ಸಾವಯವ ಪದ್ಧತಿಗೆ ಬದಲಾದ ನಾನು ವ್ಯವಸಾಯದಲ್ಲಿ ನಷ್ಟವನ್ನೇ ಕಂಡಿಲ್ಲ ಎಂದು ಹೆಮ್ಮಯಿಂದ ಹೇಳುತ್ತಾರೆ ಸುರೇಶ್.
ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಕೃಷಿಮಾಡಿ ಯಶಸ್ವಿಯಾದ ಬನ್ನೂರು ಕೃಷ್ಣಪ್ಪನವರ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿಯಿಂದ ಪ್ರಭಾವಿತರಾದ ಸುರೇಶ್ ತಕ್ಷಣ ಕೃಷ್ಣಪ್ಪನವರ ತೋಟಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಅವರಿಂದ ಸಾಕಷ್ಟು ಪಾಠ ಹೇಳಿಸಿಕೊಂಡು ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಕೃಷಿ ಮಾಡಲು ಆರಂಭಿಸುತ್ತಾರೆ.
ನಾಲ್ಕುವರೆ ಎಕರೆ ಪ್ರದೇಶದಲ್ಲಿ ಪಾಳೇಕರ್ ಪದ್ಧತಿಯಲ್ಲಿ ಕಬ್ಬು ಬೆಳೆದಿರುವ ಸುರೇಶ್ ತಮ್ಮದು ಈಗ ಹತ್ತನೇ ಕೂಳೆಬೆಳೆ. ಬಣ್ಣಾರಿ ಅಮ್ಮನ್ ಕಾಖರ್ಾನೆಯವರು ಪ್ರತಿ ಟನ್ ಕಬ್ಬಿಗೆ 2349 ರೂ.ನಂತೆ ಖರೀದಿ ಮಾಡುತ್ತಾರೆ. ಪ್ರತಿ ಎಕರೆಗೆ ವಾಷರ್ಿಕ ಕೇವಲ ಮೂವತ್ತು ಸಾವಿರ ರೂ ಖಚರ್ುಮಾಡಿ ಒಂದೂವರೆ ಲಕ್ಷ ರೂಪಾಯಿ ಆದಾಯಗಳಿಸುತ್ತಿರುವುದಾಗಿ ಸುರೇಶ್ ಹೇಳುತ್ತಾರೆ.
ಹದಿಮೂರು ಎಕರೆಗೆ ಒಂದೇ ಹಸು : ಬನ್ನೂರು ಕೃಷ್ಣಪ್ಪನವರ ಪಾಠ ಕೇಳಿದ ಸುರೇಶ್ ನಂತರ ಚಾಮರಾಜನಗರ ಮತ್ತು ಸುತ್ತೂರಿನಲ್ಲಿ ನಡೆದ ಸುಭಾಷ್ ಪಾಳೇಕರ್ರವರ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ ಸಾಕಷ್ಟು ಕಲಿತುಕೊಳ್ಳುತ್ತಾರೆ.
2005ರಲ್ಲಿ 8 ಅಡಿ ಸಾಲು ಕಬ್ಬು ನಾಟಿ ಮಾಡಿ ಮಿಶ್ರ ಬೆಳೆಯಾಗಿ ಹಸರು, ಅಲಸಂದೆ ಬೆಳೆದುಕೊಂಡರು. ತಿಂಗಳಿಗೆ ಒಂದು ಬಾರಿ ಜೀವಾಮೃತ ಸಿಂಪರಣೆ ಮಾಡುತ್ತಾ, ಹನಿ ನೀರಾವರಿಯ ಮೂಲಕ ಕಬ್ಬಿಗೆ ನೀರು ಕೊಡುತ್ತಿದ್ದರು. ನಾಲ್ಕುವರೆ ಎಕರೆ ಕಬ್ಬು ಬೆಳೆಯುವ ಮುನ್ನಾ ಆರಂಭದಲ್ಲಿ 70 ಟನ್ ಕೊಟ್ಟಿಗೆ ಗೊಬ್ಬರ ಕೊಟ್ಟದ್ದ ಪರಿಣಾಮ ಇಳುವರಿಯಲ್ಲಿ ಅಂತಹ ವ್ಯತ್ಯಾಸವೇನು ಆಗಲಿಲ್ಲ.ಈಗಲೂ 50 ರಿಂದ 60 ಟನ್ ಇಳುವರಿ ಬರುತ್ತಲೇ ಇದೆ. ಬೇಕಾದರೆ ನೀವು ಕಾಖರ್ಾನೆಯ ಕಂಪ್ಯೂಟರ್ನಲ್ಲಿ ಪರೀಕ್ಷಿಸಿಕೊಳ್ಳಬಹುದು ಎಂದು ದೃಢವಾಗಿ ಹೇಳುತ್ತಾರೆ.
ಮೂರು ವರ್ಷ ಜೀವಾಮೃತ ನೀಡಿದ ಸುರೇಶ್ ನಂತರ ಇದನ್ನು ನಿಲ್ಲಿಸಿದ್ದಾರೆ. ಕಬ್ಬು ಕಟಾವು ಮಾಡಿದ ನಂತರ ಕೊಟ್ಟಿಗೆ ಗೊಬ್ಬರವನ್ನು ಒಂದು ಸಾರಿ ಕೊಡುವುದನ್ನು ಬಿಟ್ಟರೆ ಮತ್ತೇನನ್ನು ಇವರು ನೀಡುವುದಿಲ್ಲ. ಹನಿ ನೀರಾವರಿ ಅಳವಡಿಸಿರುವುದರಿಂದ ಕಟಾವು ಮಾಡಿದ ಮೊದಲ ತಿಂಗಳು ಮಾತ್ರ ಕಬ್ಬಿನ ತಾಕಿನಲ್ಲಿ ಆಳುಗಳ ಕೆಲಸ ನಂತರ ನಾವು ನೀರು ಬಿಡುವುದನ್ನು ಗಮನಿಸುವುದು ಬಿಟ್ಟರೇ ಮಾತ್ಯಾವ ಕೆಲಸವನ್ನು ಅಲ್ಲಿ ಮಾಡುವುದಿಲ್ಲ. ಕಬ್ಬಿನ ತರಗನ್ನೇ ಮಣ್ಣಿಗೆ ಮುಚ್ಚಿಗೆ ಮಾಡಿರುವುದಿಂದ ನಮ್ಮಲ್ಲಿ ನೀರಿನ ಅಭಾವ ಇಲ್ಲದಿದ್ದರು ನಾವು ನೀರನ್ನು ಮಿತವಾಗಿಯೇ ಬಳಸಿ ಸದಾ ಮಣ್ಣಿನ ತೇವಾಂಶ ಕಾಪಾಡಿಕೊಳ್ಳುತ್ತೇವೆ ಎನ್ನುತ್ತಾರೆ.
ಹಾಗಾಗಿ ನಮಗೆ ಕಾಖರ್ಾನೆಯವರು ಕೆಲವೊಮ್ಮೆ ಕಬ್ಬು ಕಟಾವು ಮಾಡಿಕೊಳ್ಳಲು 18 ತಿಂಗಳು ತೆಗೆದುಕೊಂಡರು ನಷ್ಟ ಉಂಟಾಗಿಲ್ಲ ಎನ್ನುತ್ತಾರೆ.
ಬಾಳು ಬೆಳಗಿದ ಬಾಳೆ : ನಾಲ್ಕು ಎಕರೆ ಪ್ರದೇಶದಲ್ಲಿ 250 ತೆಂಗಿನ ಮರಗಳಿದ್ದು ಅದರ ನಡುವೆ ಮಿಶ್ರ ಬೆಳೆಯಾಗಿ ಹಾಕಿರುವ ಬಾಳೆ 2004 ರಲ್ಲಿ ಹಾಕಿದ್ದು ಮೊದಲ ವರ್ಷ ರಾಸಾಯನಿಕ ಬಳಸಿ ಬೆಳೆಯಲಾಯಿತು.ನಂತರ ಅದನ್ನೇ ಸಾವಯವ ತೋಟವಾಗಿ ಪರಿವರ್ತನೆ ಮಾಡಲಾಯಿತು.ಆರಂಭದಲ್ಲಿ 2000 ಬಾಳೆ ಇತ್ತು. ಈಗ ಸುಮಾರು 1500 ಸದೃಢವಾದ ಬಾಳೆ ಇದೆ. ಅಲ್ಲಲ್ಲಿ ನಂಜನಗೂಡಿನ ರಸಬಾಳೆಯೂ ಇದೆ.
ಇದಕ್ಕೂ ಆರಂಭದ ಮೂರು ವರ್ಷ ಕೊಟ್ಟಿಗೆ ಗೊಬ್ಬರದ ಜತೆ ಜೀವಾಮೃತ ನೀಡಿದೆ. ನಂತರ ಶೂನ್ಯ ಬಂಡಾವಳ ಕೃಷಿ. ಏನನ್ನು ನೀಡುತ್ತಿಲ್ಲ. ಪ್ರತಿ ತಿಂಗಳು ತೋಟದಿಂದ 35 ರಿಂದ 40 ಗೊನೆಗಳನ್ನು ಮಾತ್ರ ಕಟಾವು ಮಾಡಿಕೊಳ್ಳುವುದನ್ನು ಬಿಟ್ಟರೆ ಅಲ್ಲೂ ನಮ್ಮದೇನು ಕೆಲಸವಿಲ್ಲ. ಉಳುಮೆಯೂ ಇಲ್ಲ ಯಾವ ಗೊಬ್ಬರವೂ ಇಲ್ಲ.ಖಚರ್ಿಲ್ಲ ಆದಾಯ ಮಾತ್ರ ಜೇಬುಸೇರುತ್ತದೆ.ನಮ್ಮ ಬಾಳೆಯ ಗೊನೆಗಳು ಕನಿಷ್ಠ 12 ರಿಂದ 15 ಕೆಜಿ ತೂಗುತ್ತವೆ. 12 ವರ್ಷದ ಕೂಳೆ ಬಾಳೆ ನಿರಂತರ ಆದಾಯ ತಂದುಕೊಡುತ್ತಿದೆ ಎನ್ನುತ್ತಾರೆ ಸುರೇಶ್.
ತೆಂಗಿನ ನಡುವೆ ಬಾಳೆಯನ್ನು ಮಿಶ್ರ ಬೆಳೆಯಾಗಿ ಬೆಳೆದಿರುವುದರಿಂದ ತೆಂಗಿನಿಂದ ಉತ್ತಮ ಇಳುವರಿ ಬರುತ್ತಿದೆ. ಎಳನೀರಿಗೆ ಹೆಚ್ಚು ಮಾರಾಟ ಮಾಡಲಾಗುತ್ತಿದ್ದು ಒಂದು ಎಳನೀರಿಗೆ 11 ರೂ.ನೀಡಿ ತೋಟಕ್ಕೆ ಬಂದು ಕೊಯ್ಲು ಮಾಡಿಕೊಂಡು ಹೋಗುತ್ತಾರೆ. ಹೆಚ್ಚಾಗಿ ಕಬ್ಬು, ಬಾಳೆ ಮತ್ತು ಮೆಣಸು ಬೆಳೆಗಳ ಆದಾಯದಿಂದಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಸುರೇಶ್ ಅಲಸು, ಕಿತ್ತಳೆ, ಸಪೋಟ ಮತ್ತಿತರ ಬೆಳೆಗಳ ಮಾರಾಟದ ಬಗ್ಗೆ ತಲೆಕೆಡಿಸಿಕೊಂಡತೆ ಕಂಡುಬರುವುದಿಲ್ಲ. ನಮ್ಮದು ಖಚರ್ು ಕಡಿಮೆ ಬಂದದ್ದೆಲ್ಲ ಆದಾಯ ಎನ್ನುವ ಸುರೇಶ್ ಭೂಮ್ತಾಯಿ ಕೊಟ್ಟಿದ್ದೇ ಸಾಕು ಉಳಿದದ್ದು ನಮಗೇಕೆ ಬೇಕು ಎನ್ನುವಾಗ, ಪ್ರತಿ ಗಿಡಮರಗಳನ್ನು ಹಣದ ಲೆಕ್ಕದಲ್ಲಿ ನೋಡುವವರ ನಡುವೆ ಕೃಷಿಸಂತನಂತೆ ಕಾಣುತ್ತಾರೆ. ಹೆಚ್ಚಿನ ಮಾಹಿತಿಗೆ 9916586800 ಸಂಪಕರ್ಿಸಬಹುದು.                      
ತಾಳೆಯಲ್ಲೂ ರಾಜ್ಯಕ್ಕೆ ಮೊದಲು
ಕಬ್ಬು ಮತ್ತು ಬಾಳೆಯ ಜತೆಗೆ ಮತ್ತೊಂದು ಪ್ರಮುಖ ಬೆಳೆಯಾಗಿ ತಾಳೆಯನ್ನು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮರಿನಾಯಕರ ಮಕ್ಕಳು 2005 ರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಮೂರು ಎಕರೆಯಲ್ಲಿ 156 ತಾಳೆ ಗಿಡ ಇದೆ. 1995 ರಲ್ಲಿ ಈ ಗಿಡಗಳನ್ನು ಹಾಕಲಾಗಿದೆ. ಆರಂಭದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಗಿಡಗಳು ಸೊರಗಿದ್ದವು. ಆಗ ತಾನೇ ಡಿಪ್ಲಮೋ ಇನ್ ಎಂಜಿನಿಯರ್ ಪದವಿ ಮುಗಿಸಿ ಅಳಗಂಚಿಗೆ ಹೋದ ಸುರೇಶ್ ಅವರ ಸಹೋದರ ಶಾಂತರಾಜು ತಾಳೆ ಬೆಳೆಯ ನಿರ್ವಹಣೆಯ ಜವಬ್ದಾರಿ ತೆಗೆದುಕೊಳ್ಳುತ್ತಾರೆ.
ಆಗ ತಾಳೆ ಬೆಳೆಯ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಜಂಟಿ ನಿದರ್ೇಶಕರಾಗಿ ನಿವೃತ್ತರಾಗಿದ್ದ ಗುರುಸ್ವಾಮಿಯವರು ಫಾಮ್ ಟೆಕ್ನ ಪರವಾಗಿ ಮೈಸೂರು- ಚಾಮರಾಜನಗರ ಜಿಲ್ಲೆಯ ಜವಾಬ್ದಾರಿವಹಿಸಿಕೊಂಡಿದ್ದರು. ಅವರ ಮಾರ್ಗದರ್ಶನಲ್ಲಿ ನಾವು ಪ್ರಶಸ್ತಿ ತೆಗೆದುಕೊಳ್ಳುವ ಮಟ್ಟಕ್ಕೆ ಸಾಧನೆ ಮಾಡಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು ಶಾಂತರಾಜು.
ತಾಳೆಗೆ ಸಂಬಂದ ಪಟ್ಟ ಮಾಹಿತಿಗಳನ್ನೆಲ್ಲ ಇಂಟರ್ನೆಟ್ ಮತ್ತು ಪುಸ್ತಕಗಳಿಂದ ಕಲೆಹಾಕಿ ತಾಳೆಯ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಲೇ ಬೇಕೆಂದು ಹೊರಟ ಇವರು ಒಳ್ಳೆಯ ಆದಾಯಗಳಿಸುವ ಮೂಲಕ ಸುತ್ತಮತ್ತಲ ಜನರ ಮೆಚ್ಚುಗೆಗೂ ಪಾತ್ರರಾದರು.
ಮೊದಲ ವರ್ಷ 57 ಗಿಡದಲ್ಲಿ ಕೇವಲ 4 ರಿಂದ 5 ಟನ್ ತಾಳೆಹಣ್ಣು ಇಳುವರಿ ಬಂತು. ಮಾರನೇ ವರ್ಷ ಅಷ್ಟೇ ಗಿಡದಲ್ಲಿ 10 ಟನ್ ಇಳುವರಿ ಬಂತು. ಇದನ್ನು ಕಂಡು ಇಂಡೋನೇಷಿಯಾ, ಹಾಲೆಂಡ್ನ ರೈತರು ನಮ್ಮ ತೋಟಕ್ಕೆ ಬಂದು ಪ್ರಾತ್ಯಕ್ಷಿಕೆ ಮಾಡಿದರು.
ತಾಳೆಯ ನಡುವೆ ಕೋಕೋ ಮತ್ತು ಮೆಣಸನ್ನು ಮಿಶ್ರ ಬೆಳೆಯಾಗಿ ಮಾಡಲಾಗಿದೆ. ಮಳೆ ನೀರು ಸಂಗ್ರಹಿಸಲು ಮೂರು ತಾಳೆಗಿಡದ ನಡುವೆ ಗುಂಡಿ ತೆಗೆಯಲಾಗಿದೆ. ಆ ಮೂಲಕ ಮಳೆ ನೀರು ಸಂಗ್ರಹಣೆಗೂ ಆದ್ಯತೆ ನೀಡಿದ್ದೇವೆ .
ತಾಳೆ ಬೆಳೆಯುವವರಿಗೆ ಇಲಾಖೆಯಿಂದಲೇ ವರ್ಷಕ್ಕೆ ನಾಲ್ಕು ಬಾರಿ ಗೊಬ್ಬರ, ಬೇವಿನ ಹಿಂಡಿಯನ್ನು ಉಚಿತವಾಗಿ ಕೊಡುತ್ತಾರೆ. ಸಧ್ಯ ಪ್ರತಿ ಟನ್ಗೆ 8500 ರೂ. ನೀಡಿ ಖರೀದಿಸಲಾಗುತ್ತಿದೆ. ಒಂದು ಬಾರಿ ಗಿಡ ಹಾಕಿದರೆ 150 ವರ್ಷದ ವರೆಗೂ ಬೆಳೆ ತೆಗೆಯುತ್ತಾ ಹೋಗಬಹುದು. ಗಿಡವೊಂದಕ್ಕೆ ಪ್ರತಿ ದಿನ 250 ಲೀಟರ್ ನೀರು ಬೇಕಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ಮಣ್ಣಿಗೆ ಹೊಂದಿಕೆ ಮಾಡಿಕೊಂಡು ತೇವಾಂಶ ಕಾಪಾಡಿಕೊಂಡರೆ ಕಡಿಮೆ ನೀರು ಇರುವ ಪ್ರದೇಶದಲ್ಲಿ ಬೆಳೆಯಬಹುದು.
ಕಡಿಮೆ ನಿರ್ವಹಣೆ ಬೇಡುವ ತಾಳೆ ಹೆಚ್ಚು ಆದಾಯ ತರುವ ಬಂಗಾರದಂತಹ ಬೆಳೆ. ರೈತರು ಇದನ್ನು ಬೆಳೆಯಲು ಮುಂದಾಗಬೇಕು ಎನ್ನುತ್ತಾರೆ ಶಾಂತರಾಜು.




ಶನಿವಾರ, ಆಗಸ್ಟ್ 27, 2016


ರೇಷ್ಮೆಕೃಷಿಯಲ್ಲಿ ನವೀನ ತಂತ್ರಜ್ಞಾನಗಳ ಆವಿಷ್ಕಾರ

* ಸ್ವಾವಲಂಬನೆಯತ್ತ ಮುಖಮಾಡಿದ ಬರದ ನಾಡು
* ಸವಲತ್ತುಗಳೇ ಇಲ್ಲದ ಕಡೆ ಸಾಧಕರಾದರೈತರು !

ಚಾಮರಾಜನಗರ : ಭೀಕರ ಬರ,ಕುಸಿದ ಅಂತರ್ಜಲ ಮಟ್ಟ,ವಿದ್ಯುತ್ ಕಣ್ಣಾ ಮುಚ್ಚಾಲೆ,ಕೂಲಿ ಕಾಮರ್ಿಕರ ಸಮಸ್ಯೆಗಳು ಕಳೆದ ಐದಾರು ವರ್ಷಗಳಿಂದ ಚಾಮರಾಜನಗರ ಜಿಲ್ಲೆ ಸೇರಿದಂತೆ ಕೋಲಾರ, ಚಿತ್ರದುರ್ಗ ಮತ್ತಿತರ ಜಿಲ್ಲೆಗಳ ರೈತರನ್ನು ಬೆಂಬಿಡದೆ ಕಾಡುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಸದಾ ಸೆಣಸಾಡುವ ಬುದ್ಧಿವಂತ ರೈತರು ತಮ್ಮ ನೆಲಮೂಲದ ದೇಸಿ ಜ್ಞಾನವನ್ನು ಬಳಸಿ ಅಲ್ಲಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಕಂಡುಕೊಂಡಿದ್ದಾರೆ.
ಕೋಲಾರದ ನೆನಮನಹಳ್ಳಿಯ ಚಂದ್ರಶೇಖರ್, ಹೆಗ್ಗವಾಡಿಪುರದ ಶಿವಕುಮಾರ್ ಮಳೆಯ ಆಶ್ರಯದಲ್ಲೆ ಹಣ್ಣಿನ ತೋಟವನ್ನು ಕಟ್ಟಿ ಯಶಸ್ಸು ಪಡೆದ ಯಶೋಗಾಥೆಯನ್ನು ನೀವು ಕೇಳಿದ್ದೀರಿ. ಇದಕ್ಕೂ ಮಿಗಿಲಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಚಾಮರಾಜನಗರದಲ್ಲಿರುವ ಕೇಂದ್ರಿಯ ರೇಷ್ಮೆ ಸಂಶೋಧನಾ ಸಂಸ್ಥೆ (ಸಿಎಸ್ಆರ್ಐಆರ್ಟಿ) ಈ ಭಾಗದಲ್ಲಿ ಸದ್ದಿಲ್ಲದೆ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದೆ.
ಎಂತಹ ಬರಪೀಡಿತ ಪ್ರದೇಶದಲ್ಲೂ ವಿದ್ಯುತ್ ಹಂಗಿಲ್ಲದೆ, ರಾಸಾಯನಿಕ ಗೊಬ್ಬರಗಳ ಹೊರೆ ಇಲ್ಲದೆ, ಹೆಚ್ಚಿನ ಕೂಲಿ ಕಾಮರ್ಿಕರ ಅಗತ್ಯವಿಲ್ಲದೆ ರೈತ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನೂತನ ತಂತ್ರಜ್ಞಾನಗಳನ್ನು ರೇಷ್ಮೆ ಕೃಷಿಯಲ್ಲಿ ಆವಿಷ್ಕಾರ ಮಾಡುವ ಮೂಲಕ ದಿಕ್ಕುಕಾಣದೆ ಬಳಲುತಿದ್ದ ರೈತರ ಪಾಲಿಗೆ ಸಂಸ್ಥೆ ಸಂಜೀವಿನಿಯಾಗಿದೆ.
ಜಿಲ್ಲೆಯ ರೇಷ್ಮೆ ಸಂಶೋಧನಾ ಸಂಸ್ಥೆಯ ಜಂಟಿ ನಿದರ್ೇಶಕ ಡಾ. ಕೆ.ಶ್ರೀಕಂಠಸ್ವಾಮಿ ಮತ್ತು ಮೈಸೂರು ಕೇಂದ್ರಿಯ ತರಬೇತಿ ಸಂಸ್ಥೆಯ ನಿದರ್ೇಶಕರಾದ ಡಾ.ಸಿವ ಪ್ರಸಾದ್ ಇವರು ಜಂಟಿಯಾಗಿ ರೂಪಿಸಿರುವ ಡ್ರಮ್ಕಿಟ್ ಮತ್ತು ಚಾರ್ಕೋಲ್ ವಿತ್ ಪೈಪ್ ಆಧರಿತ ಬಯೋಚಾರ್ ಬೇಸಾಯ ರೇಷ್ಮೆ ಕೃಷಿ ನೂರಾರು ರೈತರ ಬಾಳಿಗೆ ಬೆಳಕಾಗಿದೆ.
ಚಾಮರಾಜನಗರದ ಕೇಂದ್ರಿಯ ರೇಷ್ಮೆ ಸಂಶೋಧನಾಲಯದಲ್ಲಿರುವ 14 ಎಕರೆ ಜಮೀನು ಹಸಿರಿನಿಂದ ನಳನಳಿಸುತ್ತಿದ್ದು ಈ ನೂತನ ತಂತ್ರಜ್ಞಾನವನ್ನು ಅಳವಡಿಸಿ ಇಲ್ಲಿ ಬೆಳೆಯಲಾಗಿರುವ ರೇಷ್ಮೆ ತೋಟದ ಪ್ರಾತ್ಯಕ್ಷಿಕೆಯನ್ನು ನೋಡಿ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಲು ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ ಸೇರಿದಂತೆ ನಾನಾ ರಾಜ್ಯಗಳ ರೈತರು ಬಂದು ಹೋಗುತ್ತಿದ್ದಾರೆ.
ಇದೆಲ್ಲದ್ದರ ಸಾಧನೆಯ ಹಿಂದಿನ ರೂವಾರಿ ರೇಷ್ಮೆ ಕೃಷಿ ವಿಜ್ಞಾನಿ ಡಾ.ಶ್ರೀಕಂಠಸ್ವಾಮಿ. ಭೀಕರ ಬರದಿಂದ ತತ್ತರಿಸಿರುವ ಜಿಲ್ಲೆಯ ಜನರ ವಲಸೆಯನ್ನು ತಪ್ಪಿಸಿ ಮತ್ತೆ ಅವರಲ್ಲಿ ಕೃಷಿ ಪ್ರೀತಿಯನ್ನು ಬೆಳೆಸುವ ಮೂಲಕ ರೈತರನ್ನು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುವುದೆ ನಮ್ಮ ಮುಖ್ಯ ಉದ್ದೇಶ ಮತ್ತು ಗುರಿ ಎನ್ನುವುದು ಅವರ ಮಂತ್ರ.
ಇಂದಿನ ಕೃಷಿ ಲ್ಯಾಬ್ ಟು ಲ್ಯಾಂಡ್ ಆದ ಪರಿಣಾಮ ರೈತ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ನಮ್ಮದು ಲ್ಯಾಂಡ್ ಟು ಲ್ಯಾಬ್ ಎಂಬ ತತ್ವ. ರೈತರು ತಮ್ಮ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ನಾವು ಮತ್ತೆ ಸಾವಿರಾರು ರೈತರಿಗೆ ಹಂಚುವ ಮೂಲಕ ಕೃಷಿಯಿಂದ ವಿಮುಖರಾಗುತ್ತಿದ್ದ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ರೇಷ್ಮೆ ಇತಿಹಾಸ :  18 ನೇ ಶತಮಾನದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಪರಿಚಯಿಸಿದ ಕೀತರ್ಿ ಟಿಪ್ಪು ಸುಲ್ತಾನ್ಗೆ ಸಲ್ಲುತ್ತದೆ. ಪಶ್ಚಿಮ ಬಂಗಾಳದಿಂದ ರಾಜ್ಯಕ್ಕೆ ಬಂದ ರೇಷ್ಮೆಗೆ ಚಾಮರಾಜನಗರ ಜಿಲ್ಲೆ ಸೂಕ್ತ ವಾತಾವರಣವನ್ನು ಕಲ್ಪಿಸಿತ್ತು. ಅಧಿಕ ಉಷ್ಣಾಂಶ, ಕಡಿಮೆ ಮಳೆ,ಕುಸಿದ ಅಂತರ್ಜಲ ಮಟ್ಟ ಇಂತಹ ಸಮಸ್ಯೆಗಳ ಸುಳಿಗೆ ಸಿಲುಕಿದ ರೇಷ್ಮೆ ಜಿಲ್ಲೆಯಲ್ಲಿ ಅವನತಿಯ ಅಂಚಿಗೆ ತಲುಪಿತು.
ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ರೇಷ್ಮೆ ಈಗ ಕೇವಲ ಮೂರು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಯಿತು. ಅನಿಶ್ಚತ ವಿದ್ಯುತ್, ಅಧಿಕ ಉಷ್ಣಾಂಶ, ಪುನಾರವರ್ತನೆಗೊಂಡ ಬರ, ನೀರು ಮತ್ತು ಮಣ್ಣಿನ ಸಂರಕ್ಷಣೆಯ ಕೊರತೆಯಿಂದಾಗಿ ಮಣ್ಣಿನಲ್ಲಿ ಸಾವಯವ ಇಂಗಾಲದ ಕೊರತೆ ಉಂಟಾಗಿ ರೇಷ್ಮೆ ಬೆಳೆಯಲು ಅನಾನುಕೂಲ ವಾತಾವರಣ ನಿಮರ್ಾಣವಾಗಿ ರೈತರು ರೇಷ್ಮೆ ಕೃಷಿಯಿಂದ ದೂರದರು.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ರೈತರ ಹೃದಯ ಮುಟ್ಟುವ ನವೀನ ತಂತ್ರಜ್ಞಾನವನ್ನು ನೀಡಿದ್ದೇವೆ. ಇದರಿಂದ ಕೇವಲ ಒಂದು ಎಕರೆ ಜಮೀನು ಹೊಂದಿರುವ ರೈತನು ವಾಷರ್ಿಕ ಒಂದೂವರೆ ಲಕ್ಷ ರೂಪಾಯಿಯಿಂದ ಎರಡು ಲಕ್ಷ ರೂ. ಆದಾಯಗಳಿಸಿ ನೆಮ್ಮದಿಯಿಂದ ಬದುಕಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದೇವೆ ಎನ್ನುತ್ತಾರೆ ಡಾ.ಕೆ.ಶ್ರೀಕಂಠಸ್ವಾಮಿ.
ಜಿಲ್ಲೆಯ ಬಹುತೇಕ ರೇಷ್ಮೆ ತೋಟಗಳು ಒಣಗಿ ಹೋಗಿದ್ದವು. ಜಿಲ್ಲೆಯ ಗ್ರಾಮೀಣ ಭಾಗದ ಜನರು ಹಸಿವು ನೀಗಿಸಿಕೊಳ್ಳಲು ವಲಸೆ ಆರಂಭಿಸಿದ್ದರು.ಬೋರ್ವೆಲ್ಗಳು ಬತ್ತಿ ಹೋಗಿದ್ದವು.ಮಳೆಯ ಕೊರತೆ ಮತ್ತು ವಿದ್ಯುತ್ ಕಣ್ಣಾ ಮುಚ್ಚಾಲೆ ಜನರನ್ನು ಕೃಷಿಯಿಂದ ದೂರ ನಡೆಯುವಂತೆ ಮಾಡಿತ್ತು.ಇಂತಹ ಕಠಿಣ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸದ ನಾವು ರೈತರಿಗೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ನಿಶ್ಚಿತ ಆದಾಯ ಬರುವಂತೆ ಮಾಡಿದ್ದು ನಮಗೆ ತೃಪ್ತಿ ತಂದಿದೆ.ನಾವು ತೆಗೆದುಕೊಳ್ಳುವ ಸಂಬಳಕ್ಕೆ ನ್ಯಾಯ ಒದಗಿಸಿದ ನೆಮ್ಮದಿ ನಮಗೆ ದಕ್ಕಿದೆ ಎಂದು ಶ್ರೀಕಂಠಸ್ವಾಮಿ ಹೆಮ್ಮೆಯಿಂದ ಹೇಳುತ್ತಾರೆ.
ಏನಿದು ಡ್ರಮ್ ಕಿಟ್: ಒಣ ಬೇಸಾಯ ಪ್ರದೇಶದಲ್ಲಿ ಅರ್ಧ ಇಂಚು ನೀರು ಬರುವ ಬೋರ್ವೆಲ್ ಹೊಂದಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ತಂತ್ರಜ್ಞಾನವೇ ಡ್ರಮ್ ಕಿಟ್ ಟೆಕ್ನಾಲಜಿ. ಬೋರ್ವೆಲ್ನಲ್ಲಿ ದಿನಕ್ಕೆ ಒಂದು ಸಾವಿರ ಲೀಟರ್ ನೀರು ಸಿಗುವಂತಿದ್ದರೆ ಒಂದು ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿಯನ್ನು ಸುಲಭವಾಗಿ ಕೈಗೊಳ್ಳಬಹುದು.
ಒಂದು ಸಾವಿರದ ಲೀಟರ್ ನೀರು ಸಂಗ್ರಹಿಸುವ ಡ್ರಮ್ಗೆ ನೀರು ತುಂಬಿಸಿಕೊಳ್ಳಬೇಕು.ಬೆಳಗಿನ ಜಾವ ಅಥವಾ ಸಂಜೆ ಸಮಯದಲ್ಲಿ ಅಲ್ಲಿಂದ ಹನಿ ನೀರಾವರಿ ಮೂಲಕ ಗಿಡದ ಬುಡಕ್ಕೆ ನೀರುಣಿಸಬೇಕು.ಇದರಿಂದ ನೀರು ಮತ್ತು ಶ್ರಮ ಎರಡು ಕಡಿಮೆಯಾಗುತ್ತದೆ.ಗಿಡಗಳು ಸಮೃದ್ಧವಾಗಿ ಬೆಳೆಯುತ್ತವೆ.
ಗಿಡವನ್ನು ಮರವಾಗಿ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಎಕರೆಗೆ 8 ಮತ್ತೆ 8 ಅಡಿ ಅಂತರ ಬರುವಂತೆ 680 ಗಿಡಗಳನ್ನು ಬೆಳೆಸಿಕೊಂಡು ವಾಷರ್ಿಕ ನಾಲ್ಕರಿಂದ ಐದು ಬೆಳೆಯನ್ನು ತೆಗೆಯಬಹುದು.
ಒಣ ಬೇಸಾಯಕ್ಕೆಂದೆ ಅಭಿವೃದ್ಧಿಪಡಿಸಿದ ಎಸ್ 13, ಎಜಿಬಿ 8,ಎಂಎಸ್ಜಿ 2, ಆರ್ಸಿ 1, ಆರ್ಸಿ 2 ನಂತಹ ತಳಿಗಳನ್ನು ಆಯ್ಕೆಮಾಡಿಕೊಳ್ಳಬೇಕು. ನಂತರ ಆರು ತಿಂಗಳಕಾಲ ಜಮೀನಿನಲ್ಲಿ ಬೆಳೆಸಿದರೆ ಮೊದಲ ಬಾರಿಗೆ 50 ಮೊಟ್ಟೆ, ಎರಡನೇ ಬೆಳೆಯಲ್ಲಿ 75 ಹಾಗೂ ಮೂರನೆ ಬೆಳೆಯಿಂದ 100 ಕ್ಕೂ ಹೆಚ್ಚು ಮೊಟ್ಟೆಯನ್ನು ನಿರ್ವಹಣೆ ಮಾಡಬಹುದು.
ಪ್ರತಿ ಕಟಾವಿನ ನಂತರವು ಕಾಂಡದ ಅಭಿವೃದ್ಧಿ ದ್ವಿಗುಣವಾಗಿ ಒಂದು ಮರದಿಂದ ಕನಿಷ್ಠ 5 ರಿಂದ 8 ಕೆಜಿ ಗುಣ ಮಟ್ಟದ ಸೊಪ್ಪು ದೊರೆಯುತ್ತದೆ.ಆಗ 680 ಗಿಡದಿಂದ 250 ಮೊಟ್ಟೆ ಸಾಕಬಹುದು.ಇದರಿಂದ 200 ಕೆಜಿ ಗೂಡು ಉತ್ಪಾದನೆ ಮಾಡಬಹುದು.ವಾಷರ್ಿಕ ಒಂದು ಎಕರೆ ಪ್ರದೇಶದಲ್ಲಿ ನಾಲ್ಕು ಬೆಳೆ ತೆಗೆಯಬಹುದು. ಅಂದರೆ 800 ಕೆಜಿ ಗೂಡು ಉತ್ಪಾದಿಸಬಹುದು.ಪ್ರತಿ ಕೆಜಿಗೆ ಸರಾಸರಿ 300 ರೂ.ಆದರೂ ಎರಡು ಲಕ್ಷಕ್ಕೂ ಹೆಚ್ಚು ಆದಾಯಗಳಿಸಬಹುದು ಎಂದು ನಿಖರವಾಗಿ ಶ್ರೀಕಂಠಸ್ವಾಮಿ ಲೆಕ್ಕನೀಡುತ್ತಾರೆ.
ಬಯೋಚಾರ್ ಬೇಸಾಯ: ಕೆಲ ಭಾಗಗಳಲ್ಲಿ ಸಣ್ಣ ಹಿಡುವಳಿ ರೈತರ ಸಂಖ್ಯೆ ಹೆಚ್ಚಾಗಿದ್ದು ಬೋರ್ವೆಲ್ ಸಹ ಹೊಂದಿರುವುದಿಲ್ಲ. ಅಂತಹ ರೈತರಿಗಾಗಿಯೇ ರೂಪಿಸಿದ ತಂತ್ರಜ್ಞಾನ ಚಾರ್ಕೋಲ್ ವಿತ್ ಪೈಪ್ ಎಂಬ ಬಯೋಚಾರ್ ಬೇಸಾಯ ವಿಧಾನ. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಬಹುತೇಕ ರೈತರು ಕೊಳವೆ ಬಾವಿಯನ್ನು ಹೊಂದಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಸಿಗುವ ಕಡಿಮೆ ನೀರನ್ನೇ ಬಳಸಿಕೊಂಡು ರೇಷ್ಮೆ ಕೃಷಿ ಮಾಡುವ ಮೂಲಕ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ಭೂಮಿ ಹೇಗೆ ಇರಲಿ,ಕಡಿಮೆ ನೀರು ಬಳಸಿಕೊಂಡು ಉತ್ತಮ ಗುಣಮಟ್ಟದ ಸೊಪ್ಪನ್ನು ಉತ್ಪಾದಿಸಿ ಆದಾಯಗಳಿಸಬಹುದು. 8 ಮತ್ತು 8 ಅಂತರದಲ್ಲಿ 680 ಗುಂಡಿ ಹೊಡೆಯಬೇಕು.ನಂತರ ಉತ್ತಮ ಗುನ ಮಟ್ಟದ ರೇಷ್ಮೆ ಕಡ್ಡಿಗಳನ್ನು ನಾಟಿಮಾಡಬೇಕು. ಗಿಡದಿಂದ ಅರ್ಧ ಅಡಿ ಅಂತರದಲ್ಲಿ ಮತ್ತೆ ಗುಂಡಿ ತೆಗೆಯಬೇಕು. ನಂತರ ಮೂರು ಇಂಚು ವ್ಯಾಸ ಇರುವ ಕಡಿಮೆ ದಜರ್ೆಯ ಪೈಪ್ ಅನ್ನು ತೆಗೆದುಕೊಂಡು ಒಂದುವರೆ ಅಡಿಗೆ ಕಟ್ ಮಾಡಿಕೊಳ್ಳಬೇಕು.ಅದರ ಸುತ್ತ ಅರ್ಧ ಅಡಿಯಲ್ಲಿ ಸಣ್ಣ ಸಣ್ಣ ರಂಧ್ರಮಾಡಿಕೊಳ್ಳಬೇಕು.ಅದನ್ನು ಗುಂಡಿಯಲ್ಲಿಟ್ಟು ಅರ್ಧ ಕೆಜಿ ಇದ್ದಿಲು ಅರ್ಧ ಕೆಜಿ ಮರಳು ಮತ್ತು ತೆಂಗಿನ ನಾರನ್ನು ಹಾಕಿ ಮುಚ್ಚಬೇಕು.
ನಂತರ ಬೇಸಿಗೆ ಕಾಲದಲ್ಲಿ ಹದಿನೈದು ದಿನಕೊಮ್ಮೆ ಪ್ರತಿ ಗಿಡಕ್ಕೆ ಎರಡರಿಂದ ಮೂರು ಲೀಟರ್ ನೀರು ಕೊಟ್ಟರೆ ಸಾಕು.ಮಳೆಗಾಲದಲ್ಲಿ ಬೇಕಿಲ್ಲ. ಇದರಿಂದ ಭೂಮಿಯಲ್ಲಿ ಇಂಗಾಲದ ಅಂಶ ಹೆಚ್ಚಾಗಿ ಭೂಮಿಯಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ನೀರು ಆವಿಯುಗುವುದು ತಪ್ಪುತ್ತದೆ.ಕಳೆ ಬೆಳೆಯುವುದು ನಿಯಂತ್ರಣವಾಗಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ದೊರೆಯುತ್ತದೆ. ತಿಂಗಳಿಗೆ 600 ರೂ.ಖಚರ್ು ಮಾಡಿದರೆ 200 ಮೊಟ್ಟೆ ಸಾಕಬಹುದು.ಶೇ 40 ಉಷ್ಣಾಂಶವಿದ್ದರೂ ಸುಲಭವಾಗಿ ನಿಭಾಯಿಸಬಹುದು.ಈಗಾಗಲೇ ಜಿಲ್ಲೆಯ ನೂರಾರು ರೈತರು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೇಷ್ಮೆ ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಶ್ರೀಕಂಠಸ್ವಾಮಿ ಹೇಳುತ್ತಾರೆ.
ಈ ತಂತ್ರಜ್ಞಾನಗಳಿಗೆ ಸಂಬಂಧಪಟ್ಟಂತೆ ಡಾ. ಕೆ.ಶ್ರೀಕಂಠಸ್ವಾಮಿಯವರು ಈಗಾಗಲೇ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಮಾಡಿಸಿದ್ದು ತಜ್ಞರ ಪ್ರಶಂಸೆಗೂ ಪಾತ್ರರಾಗಿದ್ದಾರೆ.ಪಾಂಡಿಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ರೈತರ ಸಾಧನೆಗಳ ಒಳಗೊಂಡ ಪವರ್ ಪಾಯಿಂಟ್ ಪ್ರಬಂಧ ಮಂಡಿಸಿದ್ದು ಥೈಲ್ಯಾಂಡ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತರಾಷ್ಟ್ರೀಯ ರೇಷ್ಮೆ ಕಾಂಗ್ರೇಸ್ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಮನ್ನಣೆ ಪಡೆದುಕೊಂಡಿದ್ದಾರೆ.
ತಂತ್ರಜ್ಞಾನದ ಪ್ರಯೋಜನ : ಮೇಲಿನ ತಂತ್ರಜ್ಞಾನವನ್ನು ಬಳಸಿಕೊಂಡು ರೇಷ್ಮೆ ಕೃಷಿ ಮಾಡುತ್ತಿರುವುದರಿಂದ ವಲಸೆ ತಪ್ಪಿದೆ. ಜೀವನ ಮಟ್ಟ ಸುಧಾರಣೆಯಾಗಿದೆ.ಎಲ್ಲಕ್ಕಿಂತ ಹೆಚ್ಚಾಗಿ ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಮಾಣ ಜಾಸ್ತಿಯಾಗಿದೆ. ಗಿಡದಲ್ಲಿ ಅಧಿಕ ರೆಂಬೆಗಳು ಚಿಗುರೊಡೆದು, ಎಲೆಗಳು ಅಗಲವಾಗಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ದೊರೆಯುತ್ತಿದೆ.ಪಾರಂಪರಿಕ ಜೋಡಿ ಸಾಲು ರೇಷ್ಮೆ ಕೃಷಿಗೆ ಹೋಲಿಸಿದರೆ ಈ ಪದ್ಧತಿ ನಿರ್ವಹಣೆ ಸುಲಭ ಮತ್ತು ಸರಳ. ಮುಖ್ಯವಾಗಿ ಇವೆಲ್ಲವೂ ಪರಿಸರ ಸ್ನೇಹಿ ತಂತ್ರಜ್ಞಾನಗಳಾಗಿವೆ.
ಮಣ್ಣಿನಲ್ಲಿರುವ ಸಾವಯವ ಇಂಗಾಲ ಮತ್ತು ಸಾರಜನಕವನ್ನು ಅಭಿವೃದ್ಧಿಪಡಿಸಲು ಜಮೀನಿನನ ಸುತ್ತ 200 ಗ್ಲಿರಿಸೀಡಿಯಾ ಗಿಡಗಳನ್ನು ಹಾಕಿಕೊಂಡರೆ ಸಾಕು. ನಾಲ್ಕು ತಿಂಗಳಿಗೆ ಒಂದು ಬಾಡಿ ಈ ಗಿಡಗಳನ್ನು ಕತ್ತರಿಸಿ ರೇಷ್ಮೆಗಿಡಗಳ ಬುಡಕ್ಕೆ ಹಾಕಿದರೆ ಭೂಮಿ ಫಲವತ್ತತೆ ಆಗುವುದರೊಂದಿಗೆ ಉತ್ಕೃಷ್ಠ ದಜರ್ೆಯ ಹಿಪ್ಪುನೇರಳೆ ಸೊಪ್ಪು ಸಿಗುತ್ತದೆ.
ರಾಜ್ಯ ಸಕರ್ಾರದ ರೇಷ್ಮೆ ಇಲಾಖೆ ಆಯುಕ್ತ ಸತೀಶ್ ಅವರು ಮರಗಡ್ಡಿ ರೇಷ್ಮೆ ಬೆಳೆಯ ಬಗ್ಗೆ ಆದ್ಯತೆ ನೀಡಿ ಇತ್ತೀಚಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಾಗಾರವೊಂದನ್ನು ಮಾಡಿದ್ದಾರೆ.
ಈಗ ಮಳೆಗಾಲ ಆರಂಭವಾಗಿದ್ದು ರೇಷ್ಮೆ ಗಿಡಗಳನ್ನು ನಾಟಿಮಾಡಲು ಜುಲೈನಿಂದ ಅಗಸ್ಟ್ವರೆಗೂ ಸೂಕ್ತವಾದ ಕಾಲವಾಗಿದೆ. ರೈತರು ರೇಷ್ಮೆ ಕೃಷಿಗೆ ಮರಳುವ ಮೂಲಕ ನೆಮ್ಮದಿಯ ಜೀವನ ಕಂಡುಕೊಳ್ಳಬೇಕು.ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ. ರೈತರು ಶೇ 20 ರಷ್ಟು ವೆಚ್ಚ ಭರಿಸಿದರೆ ಇಲಾಖೆ ಶೇ 80 ರಷ್ಟು ವೆಚ್ಚ ಭರಿಸುವ ಮೂಲಕ ಈ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ಹೇಳುತ್ತಾರೆ.ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಕೆ.ಶ್ರೀಕಂಠಸ್ವಾಮಿ ಅವರನ್ನು 9611319598 ಸಂಪಕರ್ಿಸಬಹುದು.
ಬಾಳು ಬೆಳಗಿತು...
ತಿ.ನರಸೀಪುರ : ನಮಗೆ ಎರಡು ಎಕರೆ ಜಮೀನು ಇದ್ದು, ಇರುವ ಒಂದು ಬೋರ್ವೆಲ್ನಿಂದ ದಿನಕ್ಕೆ ಒಂದೆರಡು ಗಂಟೆಗಳ ಕಾಲ ಅರ್ಧ ಇಂಚು ನೀರು ಮಾತ್ರ ಬರುತ್ತಿತ್ತು. ನಾನಾ ತರಕಾರಿ ಬೆಳೆಗಳನ್ನು ಬೆಳೆದು ನಾವು ಕೈ ಸುಟ್ಟುಕೊಂಡು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದೆವು. ನಮಗೆ ಬೇರೆ ದಾರಿಯೆ ಕಾಣದೆ ಊರು ಬಿಟ್ಟು ಪಟ್ಟಣ್ಣ ಸೇರಿಕೊಳ್ಳಲು ತೀಮಾನಿಸಿದ್ದೆ. ಇಂತಹ ಸಂಕಷ್ಟ ಕಾಲದಲ್ಲಿ ನಮ್ಮ ಬಾಳಿನ ಬೆಳಕಾಗಿ ಬಂತು ರೇಷ್ಮೆ ಕೃಷಿ. ಇದರಿಂದ ನಮ್ಮ ಬಾಳು ಬಂಗಾರವಾಯಿತು...
ತೀ.ನರಸೀಪುರ ತಾಲೂಕು ತುಮ್ಮಲ ಗ್ರಾಮದ ಪ್ರಗತಿ ಪರ ರೈತನಾಗಿ ಇಂದು ಗುರುತಿಸಿಕೊಂಡಿದ್ದೇನೆ. ಒಂದು ಎಕರೆ ಪ್ರದೇಶದಲ್ಲಿ ಮರಗಡ್ಡಿ ರೇಷ್ಮೆಯನ್ನು ಡ್ರಮ್ ಕಿಟ್ ತಾಂತ್ರಿಕತೆ ಅಳವಡಿಸಿಕೊಂಡು ಬೆಳೆಯುತ್ತಿದ್ದು 250 ಮೊಟ್ಟೆ ಸಾಕಾಣಿಕೆ ಮಾಡಿ ವಾಷರ್ಿಕ ನಾಲ್ಕು ಬೆಳೆ ತೆಗೆಯುತ್ತೇನೆ. ಒಂದುವರೆಯಿಂದ ಎರಡು ಲಕ್ಷ ರೂ. ಆದಾಯಗಳಿಸುತ್ತಿದ್ದೇನೆ. ರೇಷ್ಮೆ ಅಲ್ಲದೆ ಅಂತರ ಬೇಸಾಯವಾಗಿ ದ್ವಿ ದಳ ಧಾನ್ಯ, ರಾಗಿ ಮತ್ತಿತರರ ಆಹಾರ ಧಾನ್ಯಗಳನ್ನು ಬೆಳೆದುಕೊಂಡು ನೆಮ್ಮದಿಯಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇನೆ ಎನ್ನುತ್ತಾರೆ ಪ್ರಗತಿಪರ ರೇಷ್ಮೆ ಕೃಷಿಕ ಮಹದೇವಸ್ವಾಮಿ ಮೊ.9341985996
ಸ್ವಾವಲಂಬನೆ ಸಾಧಿಸಿದೆವು...
ಹನೂರು : ಚಂಗಂಡಿ ಅರಣ್ಯ ಪ್ರದೇಶಕ್ಕೆ ಸೇರಿದ ಗಡಿ ಗ್ರಾಮ ದಂಟ್ಟಳ್ಳಿ. ಇಲ್ಲಿಗೆ ಯಾವುದೇ ಸಕರ್ಾರಿ ಅಧಿಕಾರಿಗಳು ಬರುವ ಶ್ರಮ ತೆಗೆದುಕೊಳ್ಳುವುದಿಲ್ಲ. ಇಂತಹ ಕಾಂಡಚಿನ ಗ್ರಾಮದಲ್ಲಿ ನಾವು ಇಂದು ರೇಷ್ಮೆ ಬೆಳೆಯುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಕೇದ್ರ ರೇಷ್ಮೆ ಇಲಾಖೆಯ ಶ್ರೀಕಂಠಸ್ವಾಮಿ.
ವಿದ್ಯತ್ ಕಣ್ಣಾಮುಚ್ಚಾಲೆ. ಕಡಿಮೆ ನೀರು ನಮ್ಮನ್ನು ಕಂಗಾಲಾಗಿಸಿತ್ತು. ಈ ಸಮಯದಲ್ಲಿ ಇಲಾಖೆಯ ನವೀನ ತಾಂತ್ರಿಕತೆಗಳು ನಮ್ಮಗೆ ವರದಾನವಾದವು. ಜಮೀನು ಬಿಟ್ಟು ಬೆಂಗಳೂರಿನತ್ತ ಮುಖ ಮಾಡಿದ್ದ ನನ್ನ ಮಕ್ಕಳಾದ ಮಹದೇವಸ್ವಾಮಿ ಮತ್ತು ಶಿವಶಂಕರಸ್ವಾಮಿ ಇಂದು ರೇಷ್ಮೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ. ನಾವು ಎರಡು ಎಕರೆ ಪ್ರದೇಶದಲ್ಲಿ ಡ್ರಮ್ ಕಿಟ್ ತಾಂತ್ರಿಕತೆ ಬಳಸಿ ರೇಷ್ಮೆ ಬೆಳೆಯುತ್ತಿದ್ದೇವೆ.
ಆರಂಭದಲ್ಲಿ ಒಂದು ಎಕರೆಯಲ್ಲಿ ರೇಷ್ಮೆ ಮರಗಡ್ಡಿ ಹಾಕಿ ಒಂಭತ್ತನೇ ತಿಂಗಳಿಗೆ ಗುಣ ಮಟ್ಟದ ಸೊಪ್ಪು ಬೆಳೆದು ನೂರು ಮೊಟ್ಟೆ ಸಾಕಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಗೆ ಗೂಡು ಮಾರಾಟ ಮಾಡಿದ್ದೆ.ಅಂತರ ಬೇಸಾಯದಲ್ಲಿ ಶೇಂಗಾವನ್ನು ಬೆಳೆದು ಆದಾಯಗಳಿಸಿದ್ದೆ ಎಂದು ಸಿದ್ದಪ್ಪ ನೆನಪಿಸಿಕೊಳ್ಳುತ್ತಾರೆ.  ಆಸಕ್ತರು ಅವರ ಮಗ ಮಹದೇವಸ್ವಾಮಿ 9141685306 ಸಂಪಕರ್ಿಸಿ.
ಅಂದು ಮಿಠಾಯಿ ಅಂಗಡಿ ದಿನಗೂಲಿ ಇಂದು ಪ್ರಗತಿಪರ ರೈತ
ನಂಜನಗೂಡು : ಮೈಸೂರಿನ ಮಿಠಾಯಿ ಅಂಗಡಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಸ್ವಾವಲಂಭಿ ರೇಷ್ಮೆ ಕೃಷಿಕನಾಗುವ ಮೂಲಕ ಸುತ್ತ ಮತ್ತಲಿನ ಜನರ ಅಚ್ಚರಿಗೆ ಕಾರಣವಾಗಿದ್ದಾನೆ.
ಅವನೆ ನಂಜನಗೂಡು ತಾಲೂಕಿನ ಕಾರ್ಯ ಸಮೀಪ ಇರುವ ಚಿನ್ನಂಬಳ್ಳಿ ಎಂಬ ಗ್ರಾಮದ ಗುರುಸಿದ್ದಪ್ಪನವರ ಸುಪುತ್ರ ಮಹೇಶ್. ಇರುವ ಎರಡು ಎಕರೆ ಜಮೀನಿನಲ್ಲದ್ದ ಕೊಳವೆ ಬಾವಿಯಲ್ಲಿ ಅಂತರ್ಜಲ ಬತ್ತಿ ಹೋಗಿ ಬರುವ ಅಲ್ಪ ಸ್ವಲ್ಪ ನೀರಿನಲ್ಲಿ ವ್ಯವಸಾಯ ಮಾಡಲಾಗದೆ ಈತ ಮಿಠಾಯಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆಕಸ್ಮಿಕವಾಗಿ ಡಾ.ಕೆ.ಶ್ರೀಕಂಠಸ್ವಾಮಿಯವರ ಕಣ್ಣಿಗೆ ಬಿದ್ದ. ಯಾರು ಯಾವ ಊರು ಎಂದು ಅವರು ವಿಚಾರಿಸಲಾಗಿ ತನ್ನ ಗೋಳಿನ ಕತೆಯನ್ನೆಲ್ಲ ಹೇಳಿಕೊಂಡ.
ಆತನ ಮಗ್ಧತೆಗೆ ಮಾರು ಹೋದ ಶ್ರೀಕಂಠಸ್ವಾಮಿ ತಾನು ಹೇಳಿದಂತೆ ಕೇಳಿದರೆ ನಿನ್ನ ಜಮೀನಿನಲ್ಲೇ ವಾಷರ್ಿಕ ಎರಡು ಲಕ್ಷ ರೂ. ಆದಾಯ ಬರುವಂತೆ ಮಾಡುತ್ತೇನೆ ಎಂದರು. ಹುಡುಹ ಒಪ್ಪಿ ದಿನಗೂಲಿ ನೌಕರಿ ಬಿಟ್ಟು ಮರಳಿ ಗೂಡಿಗೆ ಬಂದ. ನಂತರ ಡ್ರಮ್ ಕಿಟ್ ತಾಂತ್ರಿಕತೆ ಬಳಸಿಕೊಂಡು ಎರಡು ಎಕರೆ ಪ್ರದೇಶದಲ್ಲಿ ಈಗ ರೇಷ್ಮೆ ಕೃಷಿ ಮಾಡುತ್ತಿದ್ದು ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದಾನೆ.
ಕಳೆದ ಐದಾರು ತಿಂಗಳ ಹಿಂದೆ ಒಂದೆರಡು ಬಾರಿ ಕೆಜಿ ರೇಷ್ಮೆ ಗೂಡಿಗೆ 100 ರಿಂದ 150 ರೂ. ಬಂತು. ಆಗ ಸಿಟ್ಟಾದ ಕೆಲ ರೈತರು ತಮ್ಮ ರೇಷ್ಮೆ ಕಡ್ಡಿಯನ್ನೆ ಕಿತ್ತು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಈಗ ಜನವರಿಯಿಂದ ಪ್ರತಿ ಕೆಜಿ ಗೂಡಿಗೆ 350 ರಿಂದ 450 ರೂ. ವರೆಗೆ ದರ ಇದ್ದು ಇಳಿಮುಖವಾಗೇ ಇಲ್ಲ. ಹಾಗಾಗಿ ರೇಷ್ಮೆ ಕೃಷಿ ಲಾಭದಾಯಕವಾಗೆ ಇದೆ ಎನ್ನುವುದು ಮಹೇಶನ ವಾದ.
ದಿನ 90 ಆದಾಯ ಅಧಿಕ :  ರೇಷ್ಮೆ ಕೃಷಿಯ ಜೊತೆ ಹೈನುಗಾರಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮಹೇಶ 90 ದಿನದಲ್ಲಿ ಸುಲಭವಾಗಿ ಲಕ್ಷಾಂತರ ಆದಾಯ ಕಂಡುಕೊಳ್ಳುವ ಮತ್ತೊಂದು ಉಪಾಯವನ್ನು ಕಂಡುಕೊಂಡಿದ್ದಾನೆ. ಅದೆ ಕುರಿ ಸಾಕಾಣಿಕೆ. ಬಕ್ರೀದ್ ಮತ್ತು ರಂಜನ್ ಹಬ್ಬಗಳು ಬರುವ 90 ದಿನ ಮುಂಚಿತವಾಗಿ ಉತ್ತಮ ತಳಿಯ ನಾಲ್ಕು ಕುರಿಮರಿಗಳನ್ನು ಖರೀದಿಸುವ ಈತ ಅವುಗಳನ್ನು ಕಟ್ಟಿ ಮೇಹಿಸುವ ಸರಳ ವಿಧಾನದಲ್ಲಿ 90 ದಿನ ಜೋಪಾನವಾಗಿ ಸಾಕಿ ಅತ್ಯಧಿಕ ದರಕ್ಕೆ ಮಾರಾಟ ಮಾಡಿ ಆದಾಯವನ್ನು ಗಳಿಸುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಮಹೇಶ ಸಾಕಿದ ಕುರಿಗಳಿಗೆ ಬೇಡಿಕೆ ಇದ್ದು ಹಬ್ಬದ ಸಮಯದಲ್ಲಿ ಜಮೀನಿಗೆ ಬಂದು ಖರೀದಿಸುತ್ತಾರೆ. ಇತ್ತೀಚಿಗೆ ಸುತ್ತೂರು ಶಿವರಾತ್ರೇಶ್ವರ ಜಾತ್ರೆಯಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ಮಹೇಶ ಸಾಕಿದ್ದ ಬಂಡೂರು ಕುರಿಗಳು ಎಲ್ಲರ ಆಕರ್ಷಣೆಯಾಗಿದ್ದವು. ಆಸಕ್ತರು 8152917184 ಸಂಪಕರ್ಿಸಬಹುದು.                                                                       -ಚಿನ್ನಸ್ವಾಮಿ ವಡ್ಡಗೆರೆ


 ರೇಷ್ಮೆಯಲ್ಲಿ ಯಶಸ್ಸು ಕಂಡ "ಚಂದ್ರ' ಕಾಂತ

ಮೈಸೂರು : ಸಕರ್ಾರಿ ನೌಕರಿ.ಕೈ ತುಂಬಾ ಸಂಬಳ.ಮಡದಿ ಎಂ.ಬಿ.ಸರಸ್ವತಿ ಬಿಎಸ್ಎನ್ಎಲ್ನ ಹಿರಿಯ ವಿಭಾಗೀಯ ಅಧೀಕ್ಷಕರಾಗಿ ನಿವೃತ್ತರಾಗಿದ್ದಾರೆ. ಇಬ್ಬರು ಮಕ್ಕಳಾದ ಚಿರಂತನ್, ಮಿಥುನ್ ಸೊಸೆಯರಾದ ಸ್ನೇಹಾ,ನಮ್ರತಾ ಸಾಫ್ಟವೇರ್ ಎಂಜಿನಿಯರ್ಗಳು. ಕುಳಿತು ಉಣ್ಣಬಹುದಾದ ಸಂಪತ್ತು ಇರುವ ಸುಖಿ ಕುಟುಂಬ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ಎಂದು ನಿಮಗೆ   ಅನಿಸುತ್ತಿರಬಹುದು.

ಆದರೆ ಅವರಿಗಿದ್ದ ಕೃಷಿ ಮತ್ತು ಹಸಿರು ಪ್ರೀತಿ ನಿವೃತ್ತಿ ನಂತರವೂ ಅವರನ್ನು ಸೋಮಾರಿಯಾಗಿ ಕುಳಿತುಕೊಳ್ಳಲು ಬಿಡಲಿಲ್ಲ. ರೇಷ್ಮೆ ಕೃಷಿ ಮಾಡುತ್ತಾ ತಮ್ಮ ಸುತ್ತಮುತ್ತಲಿನ ರೈತರಿಗೆ ರೇಷ್ಮೆ ಬೆಳೆಯಲು ಸಲಹೆ, ಮಾರ್ಗದರ್ಶನ ನೀಡುತ್ತಾ, ವರ್ಷಪೂತರ್ಿ ಎಂಟತ್ತು ಜನರಿಗೆ ನೌಕರಿ ನೀಡಿ ಕಾಯಕದಲ್ಲೇ ನೆಮ್ಮದಿ ಕಂಡುಕೊಂಡ ಕಾಯಕಜೀವಿಯೊಬ್ಬರ ಬಗ್ಗೆ ನಿಮಗೆ ಹೇಳಲೇ ಬೇಕು.
ಅವರೇ ಈ ವಾರದ ಬಂಗಾರದ ಮನುಷ್ಯ ಡಾ.ಚಂದ್ರಕಾಂತ್.
ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ಕೆಲಸಮಾಡಿ 2013 ರಲ್ಲಿ ನಿವೃತ್ತಿಹೊಂದಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮದವರು. ತಂದೆ ನಿವೃತ್ತ ಶಾಲಾ ಶಿಕ್ಷಕ ಕೆ.ಎಚ್.ಶಾಂತವೀರಯ್ಯ, ತಾಯಿ ಜೆಎಸ್ಎಸ್ ಪ್ರಶಿಕ್ಷಣ ಕಾಲೇಜಿನಲ್ಲಿ ಉಪ ಪ್ರಾಶುಪಾಲರಾಗಿದ್ದ ಕೆ.ಎಂ.ಗೌರಮ್ಮ. ಮಡಿಕೇರಿಯ ಕೇಂದ್ರಿಯ ಶಾಲೆಯಲ್ಲಿ ಒಂಭತ್ತನೆ ತರಗತಿವರೆಗೆ ಓದು. ನಂತರ ಮೈಸೂರಿನ ಮರಿಮಲ್ಲಪ್ಪ, ಯುವರಾಜ ಕಾಲೇಜು ಮತ್ತು ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ. ನಂತರ ಮರಿಮಲ್ಲಪ್ಪ ಕಾಲೇಜಿನಲ್ಲಿ ಐದುವರ್ಷ ಅರೆಕಾಲೀಕ  ಉಪನ್ಯಾಸಕ. ಈ ನಡುವೆ ನೌಕರಿ ಕಾಯಂ ಆಗದ್ದಕ್ಕೆ ಬೇಸರ. ಅದೇ ಸಮಯದಲ್ಲಿ ಕೇಂದ್ರೀಯ ರೇಷ್ಮೆ ಸಂಸ್ಥೆಯಿಂದ ಸಂದರ್ಶನಕ್ಕೆ ಕರೆ. ಬಿಹಾರ ರಾಜ್ಯ(ಈಗಿನ ರಾಂಚಿ)ದಲ್ಲಿ ಮೊದಲ ನೌಕರಿ ಆರಂಭ. ಅಲ್ಲಿ ಮೂರು ವರ್ಷ ಸೇವೆ. ನಂತರ ಚಾಮರಾಜನಗರದ ಭಿತ್ತನೆ ಕೋಠಿ,ನಾಗಮಂಗಲ,ಮೈಸೂರು,ಕೋಲಾರ,ಕೆ.ಆರ್.ಪೇಟೆ, ಮಳವಳ್ಳಿ ಹೀಗೆ ನಾನಾ ಕಡೆ ಉದ್ಯೋಗ. ಮೂರು ತಿಂಗಳು ಜಪಾನ್ ದೇಶದಲ್ಲಿ ರೇಷ್ಮೆ ಕೃಷಿ ಬಗ್ಗೆಯೇ ಹೆಚ್ಚಿನ ಸಂಶೋಧನೆ. 
ಹೋದಲೆಲ್ಲ ರೈತರಿಗೆ ರೇಷ್ಮೆ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ. ಹೀಗೆ ರೈತರೊಂದಿಗೆ ರೇಷ್ಮೆ ತರುವ ಆದಾಯದ ಬಗ್ಗೆ ಮಾತನಾಡುತ್ತಿರುವಾಗಲೇ,ನಾನೇ ಏಕೆ ರೇಷ್ಮೆ ಕೃಷಿ ಮಾಡಬಾರದು ಎಂಬ ಭಾವನೆ. ಆದರೆ ಚಂದ್ರಕಾಂತ್ ರೈತ ಕುಟುಂಬದಿಂದ ಬಂದಿರಲಿಲ್ಲ. ಆಗಾಗಿ ಅವರಿಗೆ ಜಮೀನು ಕೊಳ್ಳಲು ಆರ್ಟಿಸಿ ಇಲ್ಲದೆ ಕಾನೂನಿನ ತೊಡಕುಂಟಾಯಿತು.ಆದರೆ ರೇಷ್ಮೆ ಕೃಷಿ ಮಾಡಬೇಕೆಂಬ ಅವರ ಆಸೆಗೆ ಇದು ಅಡ್ಡಿಯಾಗಲೇ ಇಲ್ಲ.
ನೌಕರಿಯಿಂದ ನಿವೃತ್ತಿಯಾದ ನಂತರ ಸಮಯವನ್ನು ವ್ಯರ್ಥ ಮಾಡದೆ ಮೂರು ತಿಂಗಳು ಗುತ್ತಿಗೆಮಾಡಲು ಜಮೀನುಗಳನ್ನು ಹುಡುಕಿಕೊಂಡು ಸಾವಿರಾರು ಕಿ,ಮೀ, ದೂರ ಅಲೆದಾಟ. ಕೊನೆಗೆ ಮೈಸೂರು ಸಮೀಪ ಬಿದರಗೂಡು ಎಂಬಲ್ಲಿ ಐದು ಎಕರೆ ಜಮೀನನ್ನು ಐದು ವರ್ಷಕ್ಕೆ ಆರು ಲಕ್ಷ ರೂಪಾಯಿ ನೀಡಿ ಏಪ್ರಿಲ್ 2013 ರಲ್ಲಿ ಗುತ್ತಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅಲ್ಲಿ ನೀರಿಗೆ ಬರವಿರಲಿಲ್ಲ. ಒಂದು ಬೋರ್ವೆಲ್ ಇದ್ದ ನೀರಾವರಿ ಜಮೀನು ಅದು.
ಕಾಯಕ ಆರಂಭ : ಇಲ್ಲಿಂದ ಚಂದ್ರಕಾಂತ್ ಅವರ ರೇಷ್ಮೆ ಕೃಷಿ ಆರಂಭ. ಮೇ ತಿಂಗಳಲ್ಲಿ ಶ್ರೀರಾಂಪುರದಲ್ಲಿರುವ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ಕಡ್ಡಿಗಳನ್ನು ತಂದು ನಾಲ್ಕು ಎಕರೆಗೆ ನಾಟಿ ಮಾಡಿಸಿದರು.ಆಗ ಬೇಸಿಗೆಕಾಲ. ಆದರೂ ಪಂಪ್ಸೆಟ್ ಸಹಾಯದಿಂದ ನೀರು ನಿರ್ವಹಣೆ ಮಾಡಿಕೊಳ್ಳಬಹುದು ಎಂಬ ನಂಬಿಕೆಯ ಮೇಲೆ ರೇಷ್ಮೆಕಡ್ಡಿಯನ್ನು ನಾಟಿ ಮಾಡಿಸಿದ್ದರು. ಪಂಪ್ಸೆಟ್ ಕೆಟ್ಟು ದುರಸ್ಥಿ ಆಗುವುದು ತಡವಾಯಿತು. ಬಿಸಿಲಿಗೆ ಕಡ್ಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಚಿಗುರಲೇ ಇಲ್ಲ. ಒಣಗಿಹೋದವು.
ಆದರೂ ಛಲಬಿಡದೆ ಮತ್ತೆ ಹೊಸದಾಗಿ ಗುರುಸ್ವಾಮಿ ಅವರ ನರ್ಸರಿಯಿಂದ ಪ್ರತಿ ಗಿಡಕ್ಕೆ ಎರಡು ರೂಪಾಯಿ ನೀಡಿ ಸಸಿಗಳನ್ನು ತಂದು ಜುಲೈ ತಿಂಗಳಿನಲ್ಲಿ  ಎರಡು ಎಕರೆಗೆ ನಾಟಿ ಮಾಡಿದರು.ಮತ್ತೆರಡು ಎಕರೆಯಲ್ಲಿ ಸಾವಿರ ಏಲಕ್ಕಿ ಬಾಳೆ, ಸಾವಿರ ಪಚ್ಚಬಾಳೆ  ಒಟ್ಟು ಎರಡು ಸಾವಿರ ಬಾಳೆ ನೆಟ್ಟರು. ಆದರೆ ಇದು ಅವರಿಗೆ ಅಷ್ಟೊಂದು ಲಾಭ ತರುವ ಬೆಳೆಯಾಗಿ ಕಾಣಲಿಲ್ಲ. ಎರಡು ಬೆಳೆ ತೆಗೆದುಕೊಂಡ ನಂತರ ಮತ್ತೆ ಎರಡು ಎಕರೆಗೆ ರೇಷ್ಮೆ ಕಡ್ಡಿಗಳನ್ನೆ ನಾಟಿ ಮಾಡಿ ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ ಭಿತ್ತನೆ ಗೂಡು ರೇಷ್ಮೆ ಕೃಷಿ ಮಾಡುತ್ತಾ ಬಂದಿದ್ದಾರೆ.
ಪ್ರತಿ ತಿಂಗಳು 350 ರಿಂದ 500 ಮೊಟ್ಟೆ ನಿರ್ವಹಣೆಮಾಡುವ ಚಂದ್ರಕಾಂತ್ ಕನಿಷ್ಟ 120 ರಿಂದ 150 ಕೆಜಿ ಗೂಡು ತೂಗುತ್ತಾರೆ.ಮೊದಲೆ ಮಾಡಿಕೊಂಡ ಒಪ್ಪಂದದಂತೆ ರಾಷ್ಟ್ರೀಯ ರೇಷ್ಮೆ ಭಿತ್ತನೆ ಸಂಸ್ಥೆ (ಎನ್ಎಸ್ಎಸ್ಒ) ಪ್ರತಿ ಕೆ.ಜಿ.ಗೂಡಿಗೆ 750 ದರ ನೀಡಿ ಖರೀದಿಸುತ್ತದೆ.ಪ್ರತಿ ತಿಂಗಲು 120 ಕೆಜಿ ಗೂಡು ಉತ್ಪಾದಿಸಿದರೆ 750 ರೂ ನಂತೆ 90 ಸಾವಿರ ಆದಾಯನಿಶ್ಚಿತ.ಕೆಲವೊಮ್ಮೆ ಗೂಡಿನ ದರ ಹೆಚ್ಚಳವಾಗುವುದು ಉಂಟು.ಆಗ ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಕಳೆದ ತಿಂಗಳು ಬೆಳಗಾಂನ ರೈತರೊಬ್ಬರು ಸಿಎಸ್ಆರ್ 2 (ಹೆಣ್ಣು) ಮತ್ತು ಮೈಸೂರು ಭಿತ್ತನೆ ತಳಿ (ಗಂಡು) ಮಿಶ್ರತಳಿಯ 400 ಮೊಟ್ಟೆ ಸಾಕಾಣಿಕೆಮಾಡಿ 50 ಕೆಜಿ ಗೂಡು ಬಳೆದು ಪ್ರತಿ ಕೆಜಿಗೆ 4500 ರೂ.ಗೆ ಮಾರಾಟನಾಡಿ ಎರಡು ಲಕ್ಷದ ಇಪ್ಪತ್ತೈದು ಸಾವಿರ ಆದಾಯಗಳಿಸಿದ್ದಾರೆ.ಒಂದೇ ತಿಂಗಳಲ್ಲಿ 40 ಸಾವಿರ ಖಚ್ಚರ್ು ತೆಗೆದರು 1 ಲಕ್ಷದ 85 ಸಾವಿರ ಆದಾಯ ಯಾವ ಬೆಳೆಯಿಂದ ಬರಲುಸಾಧ್ಯ ಹೇಳಿ ಎಂದು ಚಂದ್ರಕಾಂತ್ ನಮ್ಮನ್ನೇ ಪ್ರಶ್ನಿಸುತ್ತಾರೆ.
ಕಾಮರ್ಿಕರ ಸಮಸ್ಯೆ ಇಲ್ಲ: ನಮಗೆ ಬಿದರಗೂಡು ಸುತ್ತಮುತ್ತ ಕೂಲಿ ಕಾಮರ್ಿಕರ ಸಮಸ್ಯೆ ಅಷ್ಟಾಗಿ ಇಲ್ಲ. ಕಾರಣ ತಮಿಳುನಾಡು ಮೂಲದ ಸಣ್ಣ ಸಣ್ಣ ಹಣಕಾಸು ಸಂಸ್ಥೆಗಳು ಇಲ್ಲಿ ಸ್ವ ಸಹಾಯ ಗುಂಪಗಳನ್ನು ಮಾಡಿಕೊಂಡು ಕಿರುಸಾಲ ಯೋಜನೆಯಡಿ ಸಾಲನೀಡುತ್ತಾರೆ. ಸಂಘದ ಮೂಲಕ ಸಾಲ ತೆಗೆದುಕೊಂಡವರು ತಪ್ಪದೆ ಪ್ರತಿವಾರ ಕಂತು ಕಟ್ಟಲೇ ಬೇಕು. ಇಲ್ಲದಿದ್ದರೆ ಸಂಘದ ಎಲ್ಲಾ ಸದಸ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಏಕೆಂದರೆ ಸಾಲಕ್ಕೆ ಸಂಘ ಜಾಮೀನುನೀಡಿರುತ್ತದೆ.
ಹಾಗಾಗಿ ಇಲ್ಲಿ ಕಾಮರ್ಿಕರು ಪ್ರಾಮಾಣಿಕವಾಗಿ ದುಡಿಯುತ್ತಾರೆ.ನಮ್ಮ ತೋಟದಲ್ಲೇ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಂಟು ಮಂದಿ ಕೆಲಸಕ್ಕೆ ಬರುತಿದ್ದಾರೆ. ನಾವು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದಂತಾಗಿದೆ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ 9663880880 ಅಥವಾ 9448601990 ಸಂಪಕರ್ಿಸಬಹುದು.

ರೇಷ್ಮೆ ಬೆಳೆಗಾರರಿಗೆ ಸಲಹೆ

ಎರಡು ಎಕರೆ ಪ್ರದೇಶದಲ್ಲಿ ಗುಣಮಟ್ಟದು ಹಿಪ್ಪುನೇರಳೆ ಸೊಪ್ಪು ಬೆಳೆದುಕೊಂಡರೆ ಪ್ರತಿ ತಿಂಗಳು ಖಚ್ಚರ್ುವೆಚ್ಚ ಕಳೆದು ಕನಿಷ್ಠ 30 ಸಾವಿರ ರೂಪಾಯಿ ಆದಾಯಗಳಿಸಬಹುದು. ಗಿಡಗಳನ್ನು ನಾಟಿ ಮಾಡಿದ ಆರು ತಿಂಗಳ ನಂತರ ಹುಳ ಸಾಕಾಣಿಕೆ ಮಾಡಬಹುದು.
ಒಂದು ಎಕರೆ ಪ್ರದೇಶದ ತೋಟದಲ್ಲಿ 200 ಮೊಟ್ಟೆ ಸಾಕಬಹುದು. ಡಬ್ಬಲ್ ಹೈಬ್ರಿಡ್ 100 ಮೊಟ್ಟೆಗೆ 100 ರಿಂದ 120 ಕೆಜಿ ಗೂಡು ಉತ್ಪಾದನೆ ಮಾಡಬಹುದು. 200 ಮೊಟ್ಟೆಗೆ 150 ಕೆಜಿ ಗೂಡು ಬಂದರು ಪ್ರತಿ ತಿಂಗಳು ಸರಾಸರಿ ಕೆಜಿಗೆ 300 ರೂ ಅಂದುಕೊಂಡರು 45 ಸಾವಿರ ಆದಾಯ ನಿಶ್ಚಿತ. ಗಿಡನಾಟಿ ಮಾಡಿದ ಮೂರು ವರ್ಷದ ನಂತರ ಗಿಡಗಳಿಂದ ಉತ್ಕೃಷ್ಟ ಗುಣಮಟ್ಟದ ಸೊಪ್ಪು ನಮಗೆ ದೊರೆಯುತ್ತದೆ. ಆಗ ಇನ್ನೂ ಹೆಚ್ಚಿನ ಲಾಭ ಬರುತ್ತದೆ.
ಸೆಪ್ಟೇಂಬರ್ನಿಂದ ಜನವರಿ ತಿಂಗಳವರೆಗೆ ಬೈವೊಲ್ಟನ್ ತಳಿ ಸಾಕಲು ಸೂಕ್ತ ಕಾಲ. ಜಪಾನ್ ವಿಜ್ಞಾನಿಯೊಬ್ಬರ ಪ್ರಕಾರ ಶೇ 35 ಸೊಪ್ಪಿನ ನಿರ್ವಹಣೆ,ಶೇ35 ವಾತವರಣ, ಶೇ12 ಸೋಂಕು ನಿವಾರಣೆ ಹಾಗೂ ಕೇವಲ ಶೇ 5 ನಿರ್ವಹಣೆಗೆ ನಾವು ಗಮನಹರಿಸಿದರೆ ಉತ್ತಮ ಗುಣಮಟ್ಟದ ಗೂಡು ಉತ್ಪಾದಿಸಬಹದು. ಉತ್ತಮ ಗುಣಮಟ್ಟದ ಸೊಪ್ಪು, ಸೂಕ್ತ ನಿರ್ವಹಣೆ ಮತ್ತು ವಾತಾವರಣ, ಕಾಲಕಾಲಕ್ಕೆ ಸೋಂಕು ನಿವಾರಣೆ ದ್ರವಕ ಸಿಂಪರಣೆ ಇಷ್ಟನ್ನು ಸೂಕ್ತವಾಗಿ ನಿಭಾಯಿಸಿಕೊಂಡರೆ ಯಾವುದೇ ತೊಂದರೆ ಬರುವುದಿಲ್ಲ. ಕಡಿಮೆ ವೆಚ್ಚದಲ್ಲಿ 20* 50 ಅಡಿಯ ಹುಳು ಸಾಕಾಣಿಕೆ ಮನೆ ನಿಮರ್ಾಣ ಮಾಡಿಕೊಂಡರೆ ಉಳಿದ ವ್ಯವಸ್ಥೆ ಸುಲಭ. ಇಲಾಖೆಯಿಂದ ಸಾಕಷ್ಟು ಸಹಾಯ ಧನದ ಸೌಲಭ್ಯ ಇದ್ದು ಆಸಕ್ತ ರೈತರು ಅದನ್ನು ಬಳಸಿಕೊಳ್ಳಬಹುದು.
ಮನೆಯಲ್ಲಿ ಮೂರು ಮಂದಿ ಇದ್ದರೆ ಸಾಕು. ಗೂಡು ಬಿಡಿಸುವ ಸಮಯದಲ್ಲಿ ಮತ್ತೆ ಮೂರು ಹೆಣ್ಣಾಳುಗಳನ್ನು ಕರೆದುಕೊಂಡರೆ ಒಂದು ಬೆಳೆಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಬೇರೆ ತರಕಾರಿ ಬೆಳೆಗಳಂತೆ ಕಳೆ ನಿರ್ವಹಣೆ, ಕ್ರೀಮಿನಾಶಕ ಸಿಂಪರಣೆ ಮಾಡುವಂತಿಲ್ಲ. ರೇಷ್ಮೆಯಿಂದ ಬರುವ ತ್ಯಾಜ್ಯಗಳನ್ನೇ ಸೊಪ್ಪು ಬೆಳೆಯಲು ಬಳಸಿಕೊಂಡು ಸುಲಭವಾಗಿ ಸಾವಯವ ಕೃಷಿಗೂ ಜಮೀನನ್ನು ಸಿದ್ಧಮಾಡಿಕೊಳ್ಳಬಹುದು ಎನ್ನುತ್ತಾರೆ ಚಂದ್ರಕಾಂತ್.
ಇನ್ನೆರಡು ವರ್ಷಕ್ಕೆ ತಮ್ಮ ಗುತ್ತಿಗೆ ಅವಧಿ ಮುಗಿಯುತ್ತಾ ಬಂದಿದ್ದು ಮತ್ತೆ ಒಂದುವರ್ಷ ಗುತ್ತಿಗೆ ನವೀಕರಣ ಮಾಡಿಕೊಳ್ಳುವ ಯೋಜನೆ ಇದೆ. ಸಧ್ಯಕ್ಕೆ ಇಲ್ಲೇ ಸಮೀಪ ಎರಡು ಎಕರೆ ಜಮೀನನ್ನು ನೋಡಿದ್ದು ಅದನ್ನು ತಮ್ಮ ಭಾವ ಮಲೆಯೂರು ಗುರುಸ್ವಾಮಿಯವರ ಹೆಸರಿನಲ್ಲಿ ಖರೀದಿಸಿ ಸಂಪೂರ್ಣ ವ್ಯವಸಾಯದಲ್ಲೇ ತೊಡಗಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ನಷ್ಟಕ್ಕೆ ಕಾರಣಗಳು: ಸಾಮಾನ್ಯವಾಗಿ ನಮ್ಮ ರೈತರು ರೇಷ್ಮೆ ಸಾಕಾಣಿಕೆ ಜೊತೆಗೆ ತರಕಾರಿ, ಹೈನುಗಾರಿಕೆ, ಕುರಿ ಸಾಕಾಣಿಕೆ ಹೀಗೆ ನಾನಾ ಕೆಲಸಗಳಲ್ಲೂ ತೊಡಗಿಕೊಂಡಿತರುತ್ತಾರೆ. ರೇಷ್ಮೆಗೆ ಅಷ್ಟಾಗಿ ಗಮನ ನೀಡುತ್ತಿರುವುದಿಲ್ಲ. ತರಕಾರಿಯಲ್ಲಿ ದಿಢೀರ್ ಸಿಗುವ ಬೆಲೆಯ ಹುಚ್ಚು ಕುದುರೆ ಏರಿ ಸಾವಿರಾರು ರೂ ಖಚ್ಚರ್ುಮಾಡಿ ರಾಸಾಯನಿಕ ಗೊಬ್ಬರ ಸುರಿದು, ಕ್ರಿಮಿನಾಶಕ ಹೊಡೆದು ರೇಟು ಸಿಗದಿದ್ದರೆ ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಾರೆ.
ಕೋಲಾರದ ಸುತ್ತಮುತ್ತಲಿನ ರೈತರು ಆಲುಗಡ್ಡೆಯಲ್ಲಿ ಆದ ನಷ್ಟವನ್ನು ರೇಷ್ಮೆಯಲ್ಲಿ ತುಂಬುಕೊಳ್ಳುತ್ತಿರುವುದನ್ನು ಈಗಲೂ ಕಾಣಬುಹುದು. ಹೆಚ್ಚು ಜನರಿದ್ದರೆ ಬೇರೆ ಬೇರೆ ಉಪ ಕಸುಬಿನಲ್ಲಿ ತೊಡಗಿಕೊಂಡರೆ ತಪ್ಪಿಲ್ಲ. ಆದರೆ ಮನೆಯಲ್ಲಿ ಮೂರ್ನಾಲ್ಕು ಜನರಿರುವವರು ಹೀಗೆ ಮಾಡಬಾರದು.ನಮ್ಮ ಜಮೀನಿನ ಸುತ್ತ ಮುತ್ತ ಹೀಗೆ ಕಷ್ಟಕ್ಕೆ ಸಿಲುಕಿದವರ ದೊಡ್ಡ ಸಂಖ್ಯೆಯ ಜನರೆ ಇದ್ದಾರೆ ಎನ್ನುತ್ತಾರೆ ಚಂದ್ರಕಾಂತ್.
 ತರಕಾರಿಗೆ ಬೈ ರೇಷ್ಮೆಗೆ ಜೈ
ಬಿದರಗೂಡಿನ ಲಿಂಗಣ್ಣ ಅವರು ಮೊದಲು ತಮಗಿರುವ ಎರಡು ಎಕರೆ ಪ್ರದೇಶದಲ್ಲಿ ಟೊಮೋಟೊ ಮತ್ತಿತರ ತರಕಾರಿ ಬೆಳೆ ಬೆಳೆಯುತ್ತಿದ್ದರು. ಕ್ರಿಮಿನಾಶಕ ಸಿಂಪರಣೆಯಿಂದ ಆರೋಗ್ಯ ಪದೇಪದೇ ಹದಗೆಡುತ್ತಿತ್ತು. ಜತೆಗೆ ಟೊಮೋಟೊ ದರ ಏರಿಳಿತದಿಂದ ಸಾಲದ ಸುಳಿಯಲ್ಲೂ ಸಿಲುಕಿಕೊಂಡಿದ್ದರು.
ಚಂದ್ರಕಾಂತ್ ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಟೊಮೋಟೊ ಬಿಟ್ಟು ಒಂದುವರೆ ವರ್ಷದಿಂದ ರೇಷ್ಮೆ ಬೆಳೆಯಲು ಆರಂಭಿಸಿದರು. ಈಗ ಪ್ರತಿ ತಿಂಗಳು ಕನಿಷ್ಟ 25 ಸಾವಿರ ರೂ. ಆದಾಯ ಕಾಣುವಂತಾಗಿದ್ದು ನೆಮ್ಮದಿಯಿಂದ ಆರೋಗ್ಯವಾಗಿದ್ದೇವೆ ಎನ್ನುತ್ತಾರೆ ಲಿಂಗಣ್ಣನ ಮಕ್ಕಳಾದ ಮಂಜು ಮತ್ತು ಮಹೇಶ.
 ಈಗ ನಾವು ತರಕಾರಿ ಬೆಳೆಯುತ್ತಿದ್ದಾಗ ಮಾಡಿದ ಸಾಲವನ್ನು ತೀರಿಸಿ. ಪಕ್ಕದಲ್ಲೇ ಎರಡು ಗುಂಟೆ ಜಮೀನು ಖರೀದಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ನಾಲ್ಕುವರೆ ಲಕ್ಷ ರೂ. ವೆಚ್ಚಮಾಡಿ ರೇಷ್ಮೆ ಮನೆ ನಿಮರ್ಾಣ ಮಾಡಿಕೊಂಡಿದ್ದು ಇಲಾಖೆಯಿಂದ ಒಂದು ಲಕ್ಷ ರೂ ಸಹಾಯ ಧನ ಕೊಟ್ಟರು. ಅದರ ಸಾಲವು ತೀರುತ್ತಾ ಬಂದಿದೆ. 
ನಮ್ಮ ಮನೆಯಲ್ಲಿರುವ ನಾಲ್ಕು ಜನರೇ 200 ಬೈವೋಲ್ಟನ್ ತಳಿಯ ಮೊಟ್ಟೆ ನಿರ್ವಹಣೆಮಾಡುತ್ತೇವೆ. ಗೂಡು ಬಿಡಿಸುವ ಕಾಲದಲ್ಲಿ 5 ಜನರನ್ನು ಕೆಲಸಕ್ಕೆ ಕರೆದುಕೊಳ್ಳುತ್ತೇವೆ. ಹಾಗಾಗಿ ನಮಗೆ ಈ ಕೃಷಿಯಲ್ಲಿ ಕೂಲಿ ಕಾಮರ್ಿಕರ ಸಮಸ್ಯೆ ಉಂಟಾಗುವುದೇ ಇಲ್ಲ ಎನ್ನುತ್ತಾರೆ. ಮಧ್ಯ ಒಂದೆರಡು ತಿಂಗಳು ಗೂಡಿನ ದರ 150 ರೂಗೆ ಕುಸಿತ ಕಂಡಿತ್ತು. ಆಗಲೂ ನಮಗೆ ನಷ್ಟವೇನು ಆಗಿಲ್ಲ. ಲಾಭ ಕಡಿಮೆ ಬಂತು ಅಷ್ಟೆ. ಈಗ ಪ್ರತಿ ಕೆಜಿ ಗೂಡಿಗೆ 450 ರೂ. ಇದೆ. ಸಣ್ಣ ಹಿಡುವಳಿ ರೈತರಿಗೆ ರೇಷ್ಮೆ ಸಾಕಾಣಿಕೆಯೇ ಸರಿಯಾದ ಉದ್ಯೋಗ ಎನ್ನುವುದು ಅವರ ಅನುಭವದ ಮಾತು



ಮಂಗಳವಾರ, ಆಗಸ್ಟ್ 23, 2016

 ಜೀವ ಚೈತನ್ಯ ಕೃಷಿ ಸಾಧಕ ಪಾಪಣ್ಣ

ಇದು ವೃತ್ತಿನಿರತ ರಾಜಕಾರಣಿಯೊಬ್ಬ ಹಸಿರು ಪ್ರೇಮಿಯಾಗಿ ಬದಲಾದ ಅಚ್ಚರಿ !

ಮೈಸೂರು : ಎರಡು ದಶಕಗಳಿಗೂ ಹೆಚ್ಚುಕಾಲ ಸಕ್ರೀಯ ರಾಜಕಾರಣದಲ್ಲಿದ್ದ ನಾಯಕರೊಬ್ಬರು ಇದ್ದಕ್ಕಿದ್ದಂತೆ ರಾಜಕೀಯದಿಂದ ದೂರ ಸರಿದು ಪರಿಸರ ಚಕ್ರವತರ್ಿಯಾದರು. ತಮ್ಮದೇ ಹಸಿರು ಸಾಮ್ರಾಜ್ಯ ರೂಪಿಸಿ ಬಂಗಾರದ ಮನುಷ್ಯನಾದರು. ಕರುನಾಡಲ್ಲದೆ ವಿದೇಶಿ ರೈತರಿಗೂ ಮಾದರಿಯಾದರು. ಅವರೇ ಹುಣಸೂರಿನ ಮಾಜಿ ಶಾಸಕ ವಿ.ಪಾಪಣ್ಣ.
ಸದಾ ಹಸಿರು ಸಿರಿಯ ನಡುವೆ ಇರುವ ಪಾಪಣ್ಣ ತಮ್ಮ ಎಂಬತ್ತೊಂದನೇ ವಯಸ್ಸಿನಲ್ಲೂ ಲವಲವಿಕೆಯಿಂದ ತೋಟದ ತುಂಬಾ ತಿರುಗಾಡುತ್ತಾ ಬಂದವರಿಗೆ ಕೃಷಿಪಾಠ ಮಾಡುತ್ತಾರೆ.
ಸಾಮಾನ್ಯವಾಗಿ ರಾಜಕೀಯ ಅಖಾಡ ಪ್ರವೇಶಿಸಿದವರು ಮತ್ತೆ ತಿರುಗಿ ಬಂದು ಕೃಷಿಯನ್ನು ಅಪ್ಪಿಕೊಂಡದ್ದು ಕಡಿಮೆ. ಈಗಿರುವಾಗ ಪಾಪಣ್ಣ 1987ರಲ್ಲಿ ಜಿಲ್ಲಾಪಂಚಾಯಿತಿ ಚುನಾವಣೆಗೆ ನಿಲ್ಲುವ ಮೂಲಕ ರಾಜಕೀಯ ಪ್ರವೇಶಿಸಿ ಸೋತು, ಹುಣಸೂರು ಕ್ಷೇತ್ರದಿಂದ ವಿಧಾನ ಸಭೆಗೆ ನಿಲ್ಲುವ ಮೂಲಕ ಗೆದ್ದು ಶಾಸಕರಾಗಿ ಮತ್ತೆ ಸೋತು ಚುನಾವಣಾ ರಾಜಕೀಯದಿಂದ ದೂರ ಸರಿದು ಮಾದರಿ ಕೃಷಿಕರಾಗಿದ್ದು ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ.
ಪಾಪಣ್ಣನವರ ಎದುರು ಕುಳಿತು ಅವರ ಮಾತು ಕೇಳುತ್ತಿದ್ದರೆ ಪರಿಸರದ ಎಲ್ಲ ಸೂಕ್ಷ್ಮಗಳು ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತಾ ಹೋಗುತ್ತವೆ.ಮಣ್ಣಿಗೆ ಬೇಕಾದ ಪೋಷಕಾಂಶಗಳು,ಲವಣಗಳು,ಪರಿಸರದೊಂದೆಗೆ ಮುನುಷ್ಯ,ಪ್ರಾಣಿಪಕ್ಷಿಗಳ ಸಂಬಂಧ ಹೀಗೆ ದಿನಗಟ್ಟಳೆ ಮಾತನಾಡಬಲ್ಲ ಜ್ಞಾನವನ್ನು ತಮ್ಮ ಅನುಭವದ ಮೂಲಕ ಹೇಳುವ ಪಾಪಣ್ಣ ಸಂತೆಕೆರೆ ಕೋಡಿಯ ಮಣ್ಣಿನಲ್ಲಿ  ಚಿನ್ನದಂತ ಬೆಳೆ ತೆಗೆಯುತ್ತಿದ್ದಾರೆ.
ಮುವತ್ತು ವರ್ಷಗಳಿಂದ ಉಳುಮೆಯನ್ನೇ ಕಾಣದ  ಮೂವತ್ತು ಎಕರೆ ತೋಟದಲ್ಲಿ ನೂರಾರು ಸಸ್ಯ ಪ್ರಬೇಧಗಳು ಹಸಿರಿನಿಂದ ನಳನಳಿಸುತ್ತಿವೆ. ಸಾಮಾನ್ಯವಾಗಿ ಆರೋಗ್ಯವಂತ ತೆಂಗಿನ ಮರವೊಂದು ವಾಷರ್ಿಕ ನೂರೈವತ್ತರಿಂದ ಇನ್ನೂರು ತೆಂಗಿನ ಕಾಯಿ ಬಿಟ್ಟರೆ ಇಲ್ಲಿರುವ ಒಂದೊಂದು ಮರವು ವಾಷರ್ಿಕ ಐದನೂರು ತೆಂಗಿನ ಕಾಯಿಗಳನ್ನು ಬಿಡುವ ಮೂಲಕ ಅಚ್ಚರಿ ಮೂಡಿಸಿವೆ. ಅಡಿಕೆ ಮರಗಳಂತೂ ಕಾಯಿಯ ಭಾರಕ್ಕೆ ಬಾಗಿ ನಿಂತಿವೆ. ಬಟರ್ ಪ್ರೂಟ್, ನಿಂಬೆ, ಜಾಯಿಕಾಯಿ ಗಿಡಗಳು ಎಲೆಗಿಂತ ಹಣ್ಣುಗಳನ್ನೇ ಗಿಡದ ತುಂಬೆಲ್ಲಾ ಹೊದ್ದು ಕಂಪು ಬೀರುತ್ತಿವೆ.
ಇದಕ್ಕೆಲ್ಲ ಮುಖ್ಯ ಕಾರಣ ಮಳೆನೀರು ಕೊಯ್ಲು.ಗಿಡಗಳಿಗೆ ಜೀವಾಮೃತ ಮತ್ತು ಎರೆ ಗೊಬ್ಬರ ಬಳಕೆ. ಮಣ್ಣಿಗೆ ಮುಚ್ಚುಗೆಯಾಗಿ ಕೃಷಿ ತ್ಯಾಜ್ಯಗಳ ಸಮರ್ಥ ಬಳಕೆ.ಇವು ಪಾಪಣ್ಣನವರ ತೋಟವನ್ನು ಸಮೃದ್ಧ ಜೀವ ಚೈತನ್ಯ ಕಾಡನ್ನಾಗಿ ಪರಿವತರ್ಿಸಿವೆ.
ಇಡೀ ತೋಟದಲ್ಲಿ ಎಲ್ಲೇ ಭೂಮಿಯನ್ನು ಅಗೆದರೆ ಸಿಗುವುದು ಮಣ್ಣಲ್ಲ ಎರೆಗೊಬ್ಬರ. ಭೂಮಿಯಿಂದ ಸುಮಾರು ಮೂರು ಅಡಿಗಳವರೆಗೂ ಮಣ್ಣು ಎರೆಗೊಬ್ಬರವಾಗಿ ರೂಪಾಂತರಗೊಂಡಿದೆ. ಈ ಸಾಧನೆಗಾಗಿಯೇ ಸ್ವಿಡ್ಜರ್ಲ್ಯಾಂಡ್ನ ಐಎಂಒ ಸಂಸ್ಥೆ ಪಾಪಣ್ಣನವರ ತೋಟಕ್ಕೆ ಜೀವ ಚೈತನ್ಯ ಕೃಷಿ ತೋಟ ಎಂದು ಮಾನ್ಯತೆ ನೀಡಿದೆ.30 ಎಕರೆ ಪ್ರದೇಶದಲ್ಲಿ ವಿಸ್ತರಿಕೊಂಡಿರುವ ತೋಟದಲ್ಲಿ ಬಹುತೇಕ ಜಾಗವನ್ನು ತೆಂಗು ಮತ್ತು ಅಡಿಕೆ ಆವರಿಸಿಕೊಂಡಿದ್ದರೆ. ಉಳಿದಂತೆ ಕಾಡು ಬಾಳೆ, ಪೂಜಾ,ಏಲಕ್ಕಿ,ಕಪರ್ೂರವಳ್ಳಿ,ದಿಂಡಿಗಲ್ ಹೀಗೆ ನಾನಾ ತಳಿಯ ಬಾಳೆಗಳು ಮುಗಿಲೆತ್ತರಕ್ಕೆ ಬೆಳೆದು ಬಾಗಿ ಬೀಗುತ್ತಿವೆ. ಜಾಯ್ ಕಾಯಿ,ನಿಂಬೆ,ಪಪ್ಪಾಯಿ, ಮಲ್ಲಿಕಾ ಮಾವು, ಸಪೋಟ,ನುಗ್ಗೆ, ಮೆಣಸು, ಅಗರ್, ಗಮ್ಲೆಸ್ ಹಲಸು ಹೀಗೆ ನಾನಾ ರೀತಿಯ ಸಸ್ಯ ಪ್ರಭೇದಗಳಿವೆ. ತೋಟದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಬೆಳೆ ಕೊಯ್ಲಿಗೆ ಬಂದು ನಿರಂತರ ಆದಾಯ ತಂದುಕೊಡುತ್ತಿವೆ.
ಸಹಜ ಸಾಗುವಳಿ, ಅಡಿಕೆ ಪತ್ರಿಕೆ,ಸಿರಿ ಸಮೃದ್ಧಿ, ಸುಜಾತ, ಶರದ್ ಕೃಷಿ, ಲೀಸಾ ಹೀಗೆ ರಾಜ್ಯದಲ್ಲಿ ಪ್ರಕಟವಾಗುವ ಬಹುತೇಕ ಎಲ್ಲಾ ಕೃಷಿ ಪತ್ರಿಕೆಗಳಿಗೂ ಅಜೀವಾ ಚಂದಾದರರಾಗಿರುವ    ಪಾಪಣ್ಣ ಮಾಧ್ಯಮದಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ತಪ್ಪದೇ ಓದುತ್ತಾರೆ. ಅದರಲ್ಲಿ ತಮಗೆ ಬೇಕಾದ ಮಾಹಿತಿ ಮತ್ತು ತಂತ್ರಜ್ಞಾನವನ್ನು ತಮ್ಮ ತೋಟದಲ್ಲಿ ಜಾರಿ ಮಾಡುತ್ತಾರೆ. ಇದಲ್ಲದೆ ತಿಪಟೂರು ಭೈಫ್ ಸಂಸ್ಥೆಯ ಮನುತೇಜ್ ದೇಸಾಯಿ, ಅರಸೀಕೆರೆ ತಾಲೂಕು ಮಾರಗೋಡನಹಳ್ಳಿಯ ಸದಾಶಿವಪ್ಪ ಮತ್ತು ಮೈಸೂರಿನ ಡಿ.ಶಿವಲಿಂಗು ಅವರ ಸಲಹೆ ಮತ್ತು ಮಾರ್ಗದರ್ಶನ ತಮ್ಮ ಕೃಷಿ ಸಾಧನೆಗೆ ನೆರವಾಯಿತು ಎಂದು ಸ್ಮರಿಸಿಕೊಳ್ಳುತ್ತಾರೆ.
ಪ್ರತಿವರ್ಷ ಹದಿನೈದು ದಿನಗಳು ವಿವಿಧ ರಾಜ್ಯಗಳಿಗೆ ಕೃಷಿ ಪ್ರವಾಸ ಕೈಗೊಳ್ಳುವ ಪಾಪಣ್ಣ ನಮ್ಮ ನಾಡಿನಲ್ಲಿಲ್ಲಿರುವ ಅತ್ಯತ್ತಮ ನರ್ಸರಿಗಳ ಪಟ್ಟಿಯನ್ನೇ ಕೊಡುತ್ತಾರೆ. ಅಲ್ಲಿಂದ ನಾನಾ ರೀತಿಯ ಗಿಡಗಳನ್ನು ತಂದು ಬೆಳೆಸುತ್ತಿದ್ದಾರೆ.
ತಮ್ಮ ತೋಟದಲ್ಲಿ ಮಳೆಗಾಲದಲ್ಲಿ ಎರಡು ತಿಂಗಳು ಮಾತ್ರ ಹೆಚ್ಚಿನ ಆಳುಗಳು ಕೆಲಸಮಾಡುತ್ತಾರೆ. ಗಿಡಗಳಿಗೆ ಎರೆಗೊಬ್ಬರ ಹಾಕುವುದು. ಗಿಡಗಳನ್ನು ಸವರುವುದು.ಕೃಷಿ ತ್ಯಾಜ್ಯ ಸಂಗ್ರಹಣೆ ಮತ್ತಿತರ ಕೆಲಸಗಳಿಗೆ ವಾಷರ್ಿಕ ಎರಡು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಉಳಿದಂತೆ ವರ್ಷವಿಡಿ ಇಬ್ಬರು ಆಳುಗಳು ಮೇಕೆ ಕುರಿ ಸಾಕಾಣಿಕೆ ಜತೆಗೆ ತೋಟವನ್ನು ನಿರ್ವಹಣೆಮಾಡುತ್ತಾರೆ. 1986 ರಿಂದ ಇಲ್ಲಿಯವರೆಗೂ ಭೂಮಿಯನ್ನು ಉಳುಮೆಮಾಡಿಲ್ಲ. ಪ್ರಕೃತಿಯಲ್ಲಿ ಬದುಕಲು ಪ್ರತಿಯೊಂದು ಜೀವಿಗೂ ಹಕ್ಕಿದ್ದು, ಯಾವುದೇ ಕೀಟಗಳನ್ನು ನಾವು ಕ್ರಿಮಿನಾಶಕ ಸಿಂಪಡಿಸಿ ಕೊಲ್ಲುವುದಿಲ್ಲ. ಇಲಿಗಳಿಗೆ ಗೆಣಸು, ಪಕ್ಷಿಗಳಿಗೆ ಪಪ್ಪಾಯಿ ಹಾಕಿದ್ದೇವೆ. ಪರಿಸರದಲ್ಲಿ ಒಂದಕ್ಕೊಂದು ಪೂರಕ ಚಟುವಟಿಕೆಗಳು ನಡೆಯುತ್ತಿರುತ್ತವೆ ಅದಕ್ಕೆ ನಾವು ಅಡ್ಡಿ ಪಡಿಸಬಾರದು ಎಂಬ ಪಾಪಣ್ಣ ಜಪಾನಿನ ಸಹಜ ಕೃಷಿಕ ಮಸನೊಬ್ಬ ಪುಕೊವಕೊ ಕುರಿತು ಮಾತನಾಡಲು ಶುರುಮಾಡಿಬಿಡುತ್ತಾರೆ.
ಭೂಮಿಯನ್ನು ಆಳವಾಗಿ ಉಳುಮೆ ಮಾಡಬಾರದು.ಅದೊಂದು ಅವೈಜ್ಞಾನಿಕ ಪದ್ಧತಿ.ಬೇಕಾದರೆ ರೋಟೊವೇಟರ್ನಿಂದ ತ್ಯಾಜ್ಯವನ್ನು ಭೂಮಿಗೆ ಸೇರಿಸಬಹುದು.ಭೂಮಿಯನ್ನು ಸಾಧ್ಯವಾದಷ್ಟು ಫಲವತ್ತತೆ ಮಾಡುವುದಷ್ಟೇ ನಮ್ಮ ಕೆಲಸ. ಉಳಿದಂತೆ ಭೂಮಿತಾಯಿಯೇ ನಮಗೆ ಸಕಲವನ್ನೂ ಕೊಡುತ್ತಾ ಹೋಗುತ್ತಾಳೆ ಎನ್ನುವುದು ಅವರ ಅನುಭವ.
ತೋಟದಲ್ಲಿ ಮಳೆ ನೀರು ಕೊಯ್ಲಿಗೆ 53 ಕಡೆ ಟ್ರಂಚ್ ಕಮ್ ಬಂಡ್ ಪದ್ಧತಿ ಮಾಡಲಾಗಿದೆ.23 ಬಯೋಡೈಜೆಸ್ಟರ್ ಮಾಡಿಕೊಳ್ಳಲಾಗಿದೆ.ಎರೆಹುಳು ಗೊಬ್ಬರ ಘಟಕವನ್ನು ನಿರ್ವಹಿಸಲಾಗುತ್ತಿದೆ.ಈ ಪ್ರದೇಶ ಮಿನಿ ಮಲೆನಾಡಿನಂತಿದ್ದರೂ ಪಾಪಣ್ಣ ಅವರ ತೋಟದ ಸುತ್ತಮತ್ತ 150 ಮೀಟರ್ ಅಂತರದಲ್ಲಿರುವ ಬೋರ್ವೆಲ್ಗಳಲ್ಲಿ ಸಾವಿರಾರು ಅಡಿಗಳಿಂದ ನೀರನ್ನು ತೆಗೆದು ಕೃಷಿ ಮಾಡಲಾಗುತ್ತಿದೆ. ಆದರೆ ಇವರ ತೋಟದಲ್ಲಿರುವ ಮೂರು ಬೋರ್ವೆಲ್ಗಲು ಕೇವಲ ನಲವತ್ತು ಅಡಿಯಿಂದ ನೀರನ್ನು ಪಂಪ್ ಮಾಡುತ್ತವೆ. ಸ್ಪಿಂಕ್ಲರ್ ಮೂಲಕ ನೀರು ಕೊಡಲಾಗುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ಮಳೆನೀರು ಕೊಯ್ಲು ಎನ್ನುವ ಪಾಪಣ್ಣ ಬೋರ್ವೆಲ್ಗಳಿಂದಲ್ಲೂ ನಾವು ನೀರನ್ನು ಕಡಿಮೆ ಬಳಸಿಕೊಳ್ಳುತ್ತಿದ್ದು ತಮ್ಮ ತೋಟದಲ್ಲಿ ಭೂಮಿಯ ಆಳದಲ್ಲಿರುವ ಕಠಿಣ ಶಿಲೆಗಳು ಮೃದುಶಿಲೆಗಳಾಗಿ ಪರಿವರ್ತನೆಯಾಗಿಬಿಟ್ಟಿವೆ. ಅದರಿಂದಾಗಿಯೇ ಹೊರಗಡೆಗಿಂತ ತಮ್ಮ ತೋಟದ ವಾತವಾರಣ ತಂಪಿನಿಂದ ಕೂಡಿದ್ದು ಹಿತವಾಗಿದೆ ಎನ್ನುತ್ತಾರೆ.
ಪಾಥರ್ೇನಿಯಂ ಸೇರಿದಂತೆ ತೋಟದಲ್ಲಿ ಸಿಗುವ ಎಲ್ಲಾ ರೀತಿಯ ಕೃಷಿ ತ್ಯಾಜ್ಯಗಳನ್ನು ಮರಳಿ ಮಣ್ಣಿಗೆ ಸೇರಿಸುವ ಮೂಲಕ ಎರೆಹುಳುಗಳನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ಹೆಚ್ಚಿಸಲಾಗಿದೆ. ಇವುಗಳಿಗೆ ಭೂಮಿಯನ್ನು ಉಳುಮೆ ಮಾಡುವ ಕೆಲಸವಹಿಸಿ ನಿಶ್ಚಿಂತೆಯಿಂದ ಇದ್ದೇನೆ ಎನ್ನುವ ಪಾಪಣ್ಣ ಪರಿಸರವಾದಿಗಳೆಲ್ಲ ಕಾಂಕ್ರೀಟ್ ಕಾಡು ಸೇರಿಕೊಂಡರೆ ನಮ್ಮ ಪರಿಸರ ಉಳಿಯುವುದಾದರು ಹೇಗೆ ಎಂದು ಕೇಳುತ್ತಾರೆ.
ಸಿಸರ್ಿ, ಸಿದ್ದಾಪುರ,ಶ್ರೀ ಪಡ್ರೆಯವರ ತೋಟ, ಸಹ್ಯಾದ್ರಿ ನರ್ಸರಿ,ಶ್ರೀಧರ ಆಶ್ರಮ ಹೀಗೆ ರಾಜ್ಯದ ನಾನಾ ಭಾಗಗಳಿಗೆ ಕೃಷಿ ಪ್ರವಾಸ ಹೋಗಿ ಬಂದಿರುವ ಪಾಪಣ್ಣ ತಮ್ಮ ತೋಟದಲ್ಲಿ ಪರಸ್ಪರ ಹೋಂದಾಣಿಕೆಯಾಗಬಲ್ಲಂತ ಮರಗಿಡಳನ್ನು ಮಾತ್ರ ಹಾಕಲಾಗಿದೆ. ಯಾವುದೇ ಒಂದು ವಿದೇಶಿ ಗಿಡಗಳನ್ನು ಹಾಕಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ. ತಂಬಾಕು ಮಂಡಳಿಯವರು ಕೇಳಿದರೆ ನಿಕೋಟಿನ್ ಮುಕ್ತ ತಂಬಾಕು ಬೆಳೆದು ಕೊಡುವುದಾಗಿ ಸವಾಲು ಹಾಕುವ ಪಾಪಣ್ಣ ಸದ್ಯ 500 ರೆಡ್ಲೇಡಿ ಪಪ್ಪಾಯ ಗಿಡಗಳನ್ನು ಯಾವುದೇ ರಾಸಾಯನಿಕ ಸಿಂಪಡಿಸದೆ ನೇಸಗರ್ಿಕ ಪದ್ಧತಿಯಲ್ಲಿ ಬೆಳೆಯುವ ಪ್ರಯೋಗದಲ್ಲಿದ್ದಾರೆ.
ಕೃಷಿ ವಿಜ್ಞಾನಿಗಳಿಗೆ ಸಾವಯವ ಪಾಠ ಮಾಡುವ ಪಾಪಣ್ಣ ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಭಿವೃದ್ಧಿ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆಯವರು ಕರೆದು ತರುವ ರೈತರ ಗುಂಪುಗಳಿಗೂ ಸಹಜ ಕೃಷಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಾರೆ.ರಾಜ್ಯದ ನಾನಾ ಭಾಗದ ರೈತರು ಇವರ ತೋಟಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಆಸಕ್ತರು ದೂ. 8762356042,  9900166256 ಸಂಪಕರ್ಿಸಬಹುದು.
=========================================

ಕೋಟಿ ಆದಾಯ ತರುವ ಅಗರ್

ಇದರ ಹೆಸರು ಅಗರ್ ವುಡ್ ಅಂತ. ಇದನ್ನು ಶೃಂಗೇರಿಯ ವನದುರ್ಗ ಅಗರ್ ಇಂಡಸ್ಟ್ರೀಸ್ನ ಛೇರ್ಮನ್ ಮಲ್ಲಪ್ಪ ಹೆಗಡ ಫಾರಂನಿಂದ ತಂದು ಹಾಕಿದ್ದೇನೆ. ಗಿಡ 10 ವರ್ಷದ ಮರವಾಗಿ ಬೆಳೆದಾದ ಒಂದು ರೀತಿಯ ದ್ರವವನ್ನು ಮರಕ್ಕೆ ಇಂಜೆಕ್ಟ್ ಮಾಡುವ ಮೂಲಕ ಸೇರಿಸಲಾಗುತ್ತದೆ. ಇಡೀ ಮರವೆಲ್ಲ ಶ್ರೀಗಂಧದ ಕಂಪಿನಿಂದ ಸುವಾಸನೆ ಬೀರುತ್ತದೆ.ನಂತರ ಆರು ತಿಂಗಳಿಗೆ ಮರ ಕಡಿಯಬಹುದು. ಒಂದು ಮರ ಲಕ್ಷಾಂತರ ಬೆಲೆ ಬಾಳುತ್ತದೆ. ಈ ಮರದಿಂದ ತೆಗೆಯಲಾಗುವ ಎಣ್ಣೆಗೆ ಅಪಾರ ಹಣ ನೀಡಲಾಗುತ್ತದೆ. ಇದನ್ನು ಅರಬ್ ದೇಶ ಸೇರಿದಂತೆ ಅಮೇರಿಕಾ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಪ್ರತಿ ಗಿಡಕ್ಕೆ 53 ರೂಪಾಯಿ ಕೊಟ್ಟು 250 ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆಸುತ್ತಿರುವುದಾಗಿ ಪಾಪಣ್ಣ ಹೇಳುತ್ತಾರೆ.
ಕೃಷಿಯಲ್ಲಿ ಸಿಗುವ ನಿಗಧಿತ ಆದಾಯದ ಬಗ್ಗೆ ವಿರೋಧ ವ್ಯಕ್ತಪಡಿಸುವ ಪಾಪಣ್ಣ ತಮ್ಮ ತೋಟದ ಸುತ್ತಾ ಹಾಕಿದ್ದ ಅಕೆಶಿಯಾ, ಐಟಿಸಿ ಕ್ಲೋನ್, ಹೆಬ್ಬೇವಿನ ಕೆಲವು ಮರಗಳನ್ನು ಇತ್ತೀಚಿಗೆ ಮಾರಾಟ ಮಾಡಿದೆವು. ಅದರಿಂದ ನಾಲ್ಕುವರೆ ಲಕ್ಷ ಆದಾಯ ಬಂತು. ಅದರಲ್ಲೇ 25 ಸಾವಿರ ಕೊಟ್ಟು ಒಂದು ಪವರ್ ಟಿಲ್ಲರ್ ಹಾಗೂ 75 ಸಾವಿರ ಕೊಟ್ಟು ಒಂದು ಜನರೇಟರ್ ತಂದೆವು. ಇದು ಕೃಷಿ ಚಟುವಟಿಕೆಗಾಗಿಯೇ ತಂದದ್ದು. ಇದರಲ್ಲಿ ಯಾವುದು ಆದಾಯ, ಯಾವುದು ವೆಚ್ಚ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ.
ಪರಿಸರ ಪೂರಕ ಕೃಷಿ ಚಟುವಟಿಕೆಯಿಂದ ಖಂಡಿತಾ ನಷ್ಟವಂತು ಆಗುವುದಿಲ್ಲ. ನಮ್ಮ ತೋಟದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಬೆಳೆ ಕೊಯ್ಲಿಗೆ ಬರುತ್ತಲೇ ಇರುತ್ತದೆ. ಅದರಿಂದ ಸಾಕಷ್ಟು ಆದಾಯ ಇದ್ದೆ ಇದೆ.ಯಾವುದೋ ಒಂದು ಬೆಳೆ ಬೆಳೆದು ಲಕ್ಷಾಂತರ ಆದಾಯಗಳಿಸಿಬಿಟ್ಟು, ಮುಂದಿನ ವರ್ಷದಿಂದ ಯಾವುದೇ ಆದಾಯವಿಲ್ಲದೇ ನರಳುವ ಕೃಷಿ ನಮಗೆ ಬೇಡ.ತೋಟವನ್ನು ನಿತ್ಯ ಆದಾಯ ಬರುವಂತೆ ರೂಪಿಸಿಕೊಳ್ಳಬೇಕು ಎಂದು ಪ್ರಯೋಗಶೀಲ ರೈತರಿಗೆ ಪಾಪಣ್ಣ ಸಲಹೆ  ನೀಡುತ್ತಾರೆ