ರೇಷ್ಮೆಯಲ್ಲಿ ಯಶಸ್ಸು ಕಂಡ "ಚಂದ್ರ' ಕಾಂತ
ಮೈಸೂರು : ಸಕರ್ಾರಿ ನೌಕರಿ.ಕೈ ತುಂಬಾ ಸಂಬಳ.ಮಡದಿ ಎಂ.ಬಿ.ಸರಸ್ವತಿ ಬಿಎಸ್ಎನ್ಎಲ್ನ ಹಿರಿಯ ವಿಭಾಗೀಯ ಅಧೀಕ್ಷಕರಾಗಿ ನಿವೃತ್ತರಾಗಿದ್ದಾರೆ. ಇಬ್ಬರು ಮಕ್ಕಳಾದ ಚಿರಂತನ್, ಮಿಥುನ್ ಸೊಸೆಯರಾದ ಸ್ನೇಹಾ,ನಮ್ರತಾ ಸಾಫ್ಟವೇರ್ ಎಂಜಿನಿಯರ್ಗಳು. ಕುಳಿತು ಉಣ್ಣಬಹುದಾದ ಸಂಪತ್ತು ಇರುವ ಸುಖಿ ಕುಟುಂಬ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ಎಂದು ನಿಮಗೆ ಅನಿಸುತ್ತಿರಬಹುದು.
ಆದರೆ ಅವರಿಗಿದ್ದ ಕೃಷಿ ಮತ್ತು ಹಸಿರು ಪ್ರೀತಿ ನಿವೃತ್ತಿ ನಂತರವೂ ಅವರನ್ನು ಸೋಮಾರಿಯಾಗಿ ಕುಳಿತುಕೊಳ್ಳಲು ಬಿಡಲಿಲ್ಲ. ರೇಷ್ಮೆ ಕೃಷಿ ಮಾಡುತ್ತಾ ತಮ್ಮ ಸುತ್ತಮುತ್ತಲಿನ ರೈತರಿಗೆ ರೇಷ್ಮೆ ಬೆಳೆಯಲು ಸಲಹೆ, ಮಾರ್ಗದರ್ಶನ ನೀಡುತ್ತಾ, ವರ್ಷಪೂತರ್ಿ ಎಂಟತ್ತು ಜನರಿಗೆ ನೌಕರಿ ನೀಡಿ ಕಾಯಕದಲ್ಲೇ ನೆಮ್ಮದಿ ಕಂಡುಕೊಂಡ ಕಾಯಕಜೀವಿಯೊಬ್ಬರ ಬಗ್ಗೆ ನಿಮಗೆ ಹೇಳಲೇ ಬೇಕು.
ಅವರೇ ಈ ವಾರದ ಬಂಗಾರದ ಮನುಷ್ಯ ಡಾ.ಚಂದ್ರಕಾಂತ್.
ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ಕೆಲಸಮಾಡಿ 2013 ರಲ್ಲಿ ನಿವೃತ್ತಿಹೊಂದಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮದವರು. ತಂದೆ ನಿವೃತ್ತ ಶಾಲಾ ಶಿಕ್ಷಕ ಕೆ.ಎಚ್.ಶಾಂತವೀರಯ್ಯ, ತಾಯಿ ಜೆಎಸ್ಎಸ್ ಪ್ರಶಿಕ್ಷಣ ಕಾಲೇಜಿನಲ್ಲಿ ಉಪ ಪ್ರಾಶುಪಾಲರಾಗಿದ್ದ ಕೆ.ಎಂ.ಗೌರಮ್ಮ. ಮಡಿಕೇರಿಯ ಕೇಂದ್ರಿಯ ಶಾಲೆಯಲ್ಲಿ ಒಂಭತ್ತನೆ ತರಗತಿವರೆಗೆ ಓದು. ನಂತರ ಮೈಸೂರಿನ ಮರಿಮಲ್ಲಪ್ಪ, ಯುವರಾಜ ಕಾಲೇಜು ಮತ್ತು ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ. ನಂತರ ಮರಿಮಲ್ಲಪ್ಪ ಕಾಲೇಜಿನಲ್ಲಿ ಐದುವರ್ಷ ಅರೆಕಾಲೀಕ ಉಪನ್ಯಾಸಕ. ಈ ನಡುವೆ ನೌಕರಿ ಕಾಯಂ ಆಗದ್ದಕ್ಕೆ ಬೇಸರ. ಅದೇ ಸಮಯದಲ್ಲಿ ಕೇಂದ್ರೀಯ ರೇಷ್ಮೆ ಸಂಸ್ಥೆಯಿಂದ ಸಂದರ್ಶನಕ್ಕೆ ಕರೆ. ಬಿಹಾರ ರಾಜ್ಯ(ಈಗಿನ ರಾಂಚಿ)ದಲ್ಲಿ ಮೊದಲ ನೌಕರಿ ಆರಂಭ. ಅಲ್ಲಿ ಮೂರು ವರ್ಷ ಸೇವೆ. ನಂತರ ಚಾಮರಾಜನಗರದ ಭಿತ್ತನೆ ಕೋಠಿ,ನಾಗಮಂಗಲ,ಮೈಸೂರು,ಕೋಲಾರ,ಕೆ.ಆರ್.ಪೇಟೆ, ಮಳವಳ್ಳಿ ಹೀಗೆ ನಾನಾ ಕಡೆ ಉದ್ಯೋಗ. ಮೂರು ತಿಂಗಳು ಜಪಾನ್ ದೇಶದಲ್ಲಿ ರೇಷ್ಮೆ ಕೃಷಿ ಬಗ್ಗೆಯೇ ಹೆಚ್ಚಿನ ಸಂಶೋಧನೆ.
ಹೋದಲೆಲ್ಲ ರೈತರಿಗೆ ರೇಷ್ಮೆ ಕೃಷಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ. ಹೀಗೆ ರೈತರೊಂದಿಗೆ ರೇಷ್ಮೆ ತರುವ ಆದಾಯದ ಬಗ್ಗೆ ಮಾತನಾಡುತ್ತಿರುವಾಗಲೇ,ನಾನೇ ಏಕೆ ರೇಷ್ಮೆ ಕೃಷಿ ಮಾಡಬಾರದು ಎಂಬ ಭಾವನೆ. ಆದರೆ ಚಂದ್ರಕಾಂತ್ ರೈತ ಕುಟುಂಬದಿಂದ ಬಂದಿರಲಿಲ್ಲ. ಆಗಾಗಿ ಅವರಿಗೆ ಜಮೀನು ಕೊಳ್ಳಲು ಆರ್ಟಿಸಿ ಇಲ್ಲದೆ ಕಾನೂನಿನ ತೊಡಕುಂಟಾಯಿತು.ಆದರೆ ರೇಷ್ಮೆ ಕೃಷಿ ಮಾಡಬೇಕೆಂಬ ಅವರ ಆಸೆಗೆ ಇದು ಅಡ್ಡಿಯಾಗಲೇ ಇಲ್ಲ.
ನೌಕರಿಯಿಂದ ನಿವೃತ್ತಿಯಾದ ನಂತರ ಸಮಯವನ್ನು ವ್ಯರ್ಥ ಮಾಡದೆ ಮೂರು ತಿಂಗಳು ಗುತ್ತಿಗೆಮಾಡಲು ಜಮೀನುಗಳನ್ನು ಹುಡುಕಿಕೊಂಡು ಸಾವಿರಾರು ಕಿ,ಮೀ, ದೂರ ಅಲೆದಾಟ. ಕೊನೆಗೆ ಮೈಸೂರು ಸಮೀಪ ಬಿದರಗೂಡು ಎಂಬಲ್ಲಿ ಐದು ಎಕರೆ ಜಮೀನನ್ನು ಐದು ವರ್ಷಕ್ಕೆ ಆರು ಲಕ್ಷ ರೂಪಾಯಿ ನೀಡಿ ಏಪ್ರಿಲ್ 2013 ರಲ್ಲಿ ಗುತ್ತಿಗೆ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅಲ್ಲಿ ನೀರಿಗೆ ಬರವಿರಲಿಲ್ಲ. ಒಂದು ಬೋರ್ವೆಲ್ ಇದ್ದ ನೀರಾವರಿ ಜಮೀನು ಅದು.
ಕಾಯಕ ಆರಂಭ : ಇಲ್ಲಿಂದ ಚಂದ್ರಕಾಂತ್ ಅವರ ರೇಷ್ಮೆ ಕೃಷಿ ಆರಂಭ. ಮೇ ತಿಂಗಳಲ್ಲಿ ಶ್ರೀರಾಂಪುರದಲ್ಲಿರುವ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ಕಡ್ಡಿಗಳನ್ನು ತಂದು ನಾಲ್ಕು ಎಕರೆಗೆ ನಾಟಿ ಮಾಡಿಸಿದರು.ಆಗ ಬೇಸಿಗೆಕಾಲ. ಆದರೂ ಪಂಪ್ಸೆಟ್ ಸಹಾಯದಿಂದ ನೀರು ನಿರ್ವಹಣೆ ಮಾಡಿಕೊಳ್ಳಬಹುದು ಎಂಬ ನಂಬಿಕೆಯ ಮೇಲೆ ರೇಷ್ಮೆಕಡ್ಡಿಯನ್ನು ನಾಟಿ ಮಾಡಿಸಿದ್ದರು. ಪಂಪ್ಸೆಟ್ ಕೆಟ್ಟು ದುರಸ್ಥಿ ಆಗುವುದು ತಡವಾಯಿತು. ಬಿಸಿಲಿಗೆ ಕಡ್ಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಚಿಗುರಲೇ ಇಲ್ಲ. ಒಣಗಿಹೋದವು.
ಆದರೂ ಛಲಬಿಡದೆ ಮತ್ತೆ ಹೊಸದಾಗಿ ಗುರುಸ್ವಾಮಿ ಅವರ ನರ್ಸರಿಯಿಂದ ಪ್ರತಿ ಗಿಡಕ್ಕೆ ಎರಡು ರೂಪಾಯಿ ನೀಡಿ ಸಸಿಗಳನ್ನು ತಂದು ಜುಲೈ ತಿಂಗಳಿನಲ್ಲಿ ಎರಡು ಎಕರೆಗೆ ನಾಟಿ ಮಾಡಿದರು.ಮತ್ತೆರಡು ಎಕರೆಯಲ್ಲಿ ಸಾವಿರ ಏಲಕ್ಕಿ ಬಾಳೆ, ಸಾವಿರ ಪಚ್ಚಬಾಳೆ ಒಟ್ಟು ಎರಡು ಸಾವಿರ ಬಾಳೆ ನೆಟ್ಟರು. ಆದರೆ ಇದು ಅವರಿಗೆ ಅಷ್ಟೊಂದು ಲಾಭ ತರುವ ಬೆಳೆಯಾಗಿ ಕಾಣಲಿಲ್ಲ. ಎರಡು ಬೆಳೆ ತೆಗೆದುಕೊಂಡ ನಂತರ ಮತ್ತೆ ಎರಡು ಎಕರೆಗೆ ರೇಷ್ಮೆ ಕಡ್ಡಿಗಳನ್ನೆ ನಾಟಿ ಮಾಡಿ ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ ಭಿತ್ತನೆ ಗೂಡು ರೇಷ್ಮೆ ಕೃಷಿ ಮಾಡುತ್ತಾ ಬಂದಿದ್ದಾರೆ.
ಪ್ರತಿ ತಿಂಗಳು 350 ರಿಂದ 500 ಮೊಟ್ಟೆ ನಿರ್ವಹಣೆಮಾಡುವ ಚಂದ್ರಕಾಂತ್ ಕನಿಷ್ಟ 120 ರಿಂದ 150 ಕೆಜಿ ಗೂಡು ತೂಗುತ್ತಾರೆ.ಮೊದಲೆ ಮಾಡಿಕೊಂಡ ಒಪ್ಪಂದದಂತೆ ರಾಷ್ಟ್ರೀಯ ರೇಷ್ಮೆ ಭಿತ್ತನೆ ಸಂಸ್ಥೆ (ಎನ್ಎಸ್ಎಸ್ಒ) ಪ್ರತಿ ಕೆ.ಜಿ.ಗೂಡಿಗೆ 750 ದರ ನೀಡಿ ಖರೀದಿಸುತ್ತದೆ.ಪ್ರತಿ ತಿಂಗಲು 120 ಕೆಜಿ ಗೂಡು ಉತ್ಪಾದಿಸಿದರೆ 750 ರೂ ನಂತೆ 90 ಸಾವಿರ ಆದಾಯನಿಶ್ಚಿತ.ಕೆಲವೊಮ್ಮೆ ಗೂಡಿನ ದರ ಹೆಚ್ಚಳವಾಗುವುದು ಉಂಟು.ಆಗ ಹೆಚ್ಚಿನ ಲಾಭ ನಿರೀಕ್ಷಿಸಬಹುದು.
ಕಳೆದ ತಿಂಗಳು ಬೆಳಗಾಂನ ರೈತರೊಬ್ಬರು ಸಿಎಸ್ಆರ್ 2 (ಹೆಣ್ಣು) ಮತ್ತು ಮೈಸೂರು ಭಿತ್ತನೆ ತಳಿ (ಗಂಡು) ಮಿಶ್ರತಳಿಯ 400 ಮೊಟ್ಟೆ ಸಾಕಾಣಿಕೆಮಾಡಿ 50 ಕೆಜಿ ಗೂಡು ಬಳೆದು ಪ್ರತಿ ಕೆಜಿಗೆ 4500 ರೂ.ಗೆ ಮಾರಾಟನಾಡಿ ಎರಡು ಲಕ್ಷದ ಇಪ್ಪತ್ತೈದು ಸಾವಿರ ಆದಾಯಗಳಿಸಿದ್ದಾರೆ.ಒಂದೇ ತಿಂಗಳಲ್ಲಿ 40 ಸಾವಿರ ಖಚ್ಚರ್ು ತೆಗೆದರು 1 ಲಕ್ಷದ 85 ಸಾವಿರ ಆದಾಯ ಯಾವ ಬೆಳೆಯಿಂದ ಬರಲುಸಾಧ್ಯ ಹೇಳಿ ಎಂದು ಚಂದ್ರಕಾಂತ್ ನಮ್ಮನ್ನೇ ಪ್ರಶ್ನಿಸುತ್ತಾರೆ.
ಕಾಮರ್ಿಕರ ಸಮಸ್ಯೆ ಇಲ್ಲ: ನಮಗೆ ಬಿದರಗೂಡು ಸುತ್ತಮುತ್ತ ಕೂಲಿ ಕಾಮರ್ಿಕರ ಸಮಸ್ಯೆ ಅಷ್ಟಾಗಿ ಇಲ್ಲ. ಕಾರಣ ತಮಿಳುನಾಡು ಮೂಲದ ಸಣ್ಣ ಸಣ್ಣ ಹಣಕಾಸು ಸಂಸ್ಥೆಗಳು ಇಲ್ಲಿ ಸ್ವ ಸಹಾಯ ಗುಂಪಗಳನ್ನು ಮಾಡಿಕೊಂಡು ಕಿರುಸಾಲ ಯೋಜನೆಯಡಿ ಸಾಲನೀಡುತ್ತಾರೆ. ಸಂಘದ ಮೂಲಕ ಸಾಲ ತೆಗೆದುಕೊಂಡವರು ತಪ್ಪದೆ ಪ್ರತಿವಾರ ಕಂತು ಕಟ್ಟಲೇ ಬೇಕು. ಇಲ್ಲದಿದ್ದರೆ ಸಂಘದ ಎಲ್ಲಾ ಸದಸ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಏಕೆಂದರೆ ಸಾಲಕ್ಕೆ ಸಂಘ ಜಾಮೀನುನೀಡಿರುತ್ತದೆ.
ಹಾಗಾಗಿ ಇಲ್ಲಿ ಕಾಮರ್ಿಕರು ಪ್ರಾಮಾಣಿಕವಾಗಿ ದುಡಿಯುತ್ತಾರೆ.ನಮ್ಮ ತೋಟದಲ್ಲೇ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಂಟು ಮಂದಿ ಕೆಲಸಕ್ಕೆ ಬರುತಿದ್ದಾರೆ. ನಾವು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದಂತಾಗಿದೆ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ 9663880880 ಅಥವಾ 9448601990 ಸಂಪಕರ್ಿಸಬಹುದು.
ರೇಷ್ಮೆ ಬೆಳೆಗಾರರಿಗೆ ಸಲಹೆ
ಎರಡು ಎಕರೆ ಪ್ರದೇಶದಲ್ಲಿ ಗುಣಮಟ್ಟದು ಹಿಪ್ಪುನೇರಳೆ ಸೊಪ್ಪು ಬೆಳೆದುಕೊಂಡರೆ ಪ್ರತಿ ತಿಂಗಳು ಖಚ್ಚರ್ುವೆಚ್ಚ ಕಳೆದು ಕನಿಷ್ಠ 30 ಸಾವಿರ ರೂಪಾಯಿ ಆದಾಯಗಳಿಸಬಹುದು. ಗಿಡಗಳನ್ನು ನಾಟಿ ಮಾಡಿದ ಆರು ತಿಂಗಳ ನಂತರ ಹುಳ ಸಾಕಾಣಿಕೆ ಮಾಡಬಹುದು.
ಒಂದು ಎಕರೆ ಪ್ರದೇಶದ ತೋಟದಲ್ಲಿ 200 ಮೊಟ್ಟೆ ಸಾಕಬಹುದು. ಡಬ್ಬಲ್ ಹೈಬ್ರಿಡ್ 100 ಮೊಟ್ಟೆಗೆ 100 ರಿಂದ 120 ಕೆಜಿ ಗೂಡು ಉತ್ಪಾದನೆ ಮಾಡಬಹುದು. 200 ಮೊಟ್ಟೆಗೆ 150 ಕೆಜಿ ಗೂಡು ಬಂದರು ಪ್ರತಿ ತಿಂಗಳು ಸರಾಸರಿ ಕೆಜಿಗೆ 300 ರೂ ಅಂದುಕೊಂಡರು 45 ಸಾವಿರ ಆದಾಯ ನಿಶ್ಚಿತ. ಗಿಡನಾಟಿ ಮಾಡಿದ ಮೂರು ವರ್ಷದ ನಂತರ ಗಿಡಗಳಿಂದ ಉತ್ಕೃಷ್ಟ ಗುಣಮಟ್ಟದ ಸೊಪ್ಪು ನಮಗೆ ದೊರೆಯುತ್ತದೆ. ಆಗ ಇನ್ನೂ ಹೆಚ್ಚಿನ ಲಾಭ ಬರುತ್ತದೆ.
ಸೆಪ್ಟೇಂಬರ್ನಿಂದ ಜನವರಿ ತಿಂಗಳವರೆಗೆ ಬೈವೊಲ್ಟನ್ ತಳಿ ಸಾಕಲು ಸೂಕ್ತ ಕಾಲ. ಜಪಾನ್ ವಿಜ್ಞಾನಿಯೊಬ್ಬರ ಪ್ರಕಾರ ಶೇ 35 ಸೊಪ್ಪಿನ ನಿರ್ವಹಣೆ,ಶೇ35 ವಾತವರಣ, ಶೇ12 ಸೋಂಕು ನಿವಾರಣೆ ಹಾಗೂ ಕೇವಲ ಶೇ 5 ನಿರ್ವಹಣೆಗೆ ನಾವು ಗಮನಹರಿಸಿದರೆ ಉತ್ತಮ ಗುಣಮಟ್ಟದ ಗೂಡು ಉತ್ಪಾದಿಸಬಹದು. ಉತ್ತಮ ಗುಣಮಟ್ಟದ ಸೊಪ್ಪು, ಸೂಕ್ತ ನಿರ್ವಹಣೆ ಮತ್ತು ವಾತಾವರಣ, ಕಾಲಕಾಲಕ್ಕೆ ಸೋಂಕು ನಿವಾರಣೆ ದ್ರವಕ ಸಿಂಪರಣೆ ಇಷ್ಟನ್ನು ಸೂಕ್ತವಾಗಿ ನಿಭಾಯಿಸಿಕೊಂಡರೆ ಯಾವುದೇ ತೊಂದರೆ ಬರುವುದಿಲ್ಲ. ಕಡಿಮೆ ವೆಚ್ಚದಲ್ಲಿ 20* 50 ಅಡಿಯ ಹುಳು ಸಾಕಾಣಿಕೆ ಮನೆ ನಿಮರ್ಾಣ ಮಾಡಿಕೊಂಡರೆ ಉಳಿದ ವ್ಯವಸ್ಥೆ ಸುಲಭ. ಇಲಾಖೆಯಿಂದ ಸಾಕಷ್ಟು ಸಹಾಯ ಧನದ ಸೌಲಭ್ಯ ಇದ್ದು ಆಸಕ್ತ ರೈತರು ಅದನ್ನು ಬಳಸಿಕೊಳ್ಳಬಹುದು.
ಮನೆಯಲ್ಲಿ ಮೂರು ಮಂದಿ ಇದ್ದರೆ ಸಾಕು. ಗೂಡು ಬಿಡಿಸುವ ಸಮಯದಲ್ಲಿ ಮತ್ತೆ ಮೂರು ಹೆಣ್ಣಾಳುಗಳನ್ನು ಕರೆದುಕೊಂಡರೆ ಒಂದು ಬೆಳೆಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಬೇರೆ ತರಕಾರಿ ಬೆಳೆಗಳಂತೆ ಕಳೆ ನಿರ್ವಹಣೆ, ಕ್ರೀಮಿನಾಶಕ ಸಿಂಪರಣೆ ಮಾಡುವಂತಿಲ್ಲ. ರೇಷ್ಮೆಯಿಂದ ಬರುವ ತ್ಯಾಜ್ಯಗಳನ್ನೇ ಸೊಪ್ಪು ಬೆಳೆಯಲು ಬಳಸಿಕೊಂಡು ಸುಲಭವಾಗಿ ಸಾವಯವ ಕೃಷಿಗೂ ಜಮೀನನ್ನು ಸಿದ್ಧಮಾಡಿಕೊಳ್ಳಬಹುದು ಎನ್ನುತ್ತಾರೆ ಚಂದ್ರಕಾಂತ್.
ಇನ್ನೆರಡು ವರ್ಷಕ್ಕೆ ತಮ್ಮ ಗುತ್ತಿಗೆ ಅವಧಿ ಮುಗಿಯುತ್ತಾ ಬಂದಿದ್ದು ಮತ್ತೆ ಒಂದುವರ್ಷ ಗುತ್ತಿಗೆ ನವೀಕರಣ ಮಾಡಿಕೊಳ್ಳುವ ಯೋಜನೆ ಇದೆ. ಸಧ್ಯಕ್ಕೆ ಇಲ್ಲೇ ಸಮೀಪ ಎರಡು ಎಕರೆ ಜಮೀನನ್ನು ನೋಡಿದ್ದು ಅದನ್ನು ತಮ್ಮ ಭಾವ ಮಲೆಯೂರು ಗುರುಸ್ವಾಮಿಯವರ ಹೆಸರಿನಲ್ಲಿ ಖರೀದಿಸಿ ಸಂಪೂರ್ಣ ವ್ಯವಸಾಯದಲ್ಲೇ ತೊಡಗಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ನಷ್ಟಕ್ಕೆ ಕಾರಣಗಳು: ಸಾಮಾನ್ಯವಾಗಿ ನಮ್ಮ ರೈತರು ರೇಷ್ಮೆ ಸಾಕಾಣಿಕೆ ಜೊತೆಗೆ ತರಕಾರಿ, ಹೈನುಗಾರಿಕೆ, ಕುರಿ ಸಾಕಾಣಿಕೆ ಹೀಗೆ ನಾನಾ ಕೆಲಸಗಳಲ್ಲೂ ತೊಡಗಿಕೊಂಡಿತರುತ್ತಾರೆ. ರೇಷ್ಮೆಗೆ ಅಷ್ಟಾಗಿ ಗಮನ ನೀಡುತ್ತಿರುವುದಿಲ್ಲ. ತರಕಾರಿಯಲ್ಲಿ ದಿಢೀರ್ ಸಿಗುವ ಬೆಲೆಯ ಹುಚ್ಚು ಕುದುರೆ ಏರಿ ಸಾವಿರಾರು ರೂ ಖಚ್ಚರ್ುಮಾಡಿ ರಾಸಾಯನಿಕ ಗೊಬ್ಬರ ಸುರಿದು, ಕ್ರಿಮಿನಾಶಕ ಹೊಡೆದು ರೇಟು ಸಿಗದಿದ್ದರೆ ಸಾಲದ ಸುಳಿಗೆ ಸಿಲುಕಿಕೊಳ್ಳುತ್ತಾರೆ.
ಕೋಲಾರದ ಸುತ್ತಮುತ್ತಲಿನ ರೈತರು ಆಲುಗಡ್ಡೆಯಲ್ಲಿ ಆದ ನಷ್ಟವನ್ನು ರೇಷ್ಮೆಯಲ್ಲಿ ತುಂಬುಕೊಳ್ಳುತ್ತಿರುವುದನ್ನು ಈಗಲೂ ಕಾಣಬುಹುದು. ಹೆಚ್ಚು ಜನರಿದ್ದರೆ ಬೇರೆ ಬೇರೆ ಉಪ ಕಸುಬಿನಲ್ಲಿ ತೊಡಗಿಕೊಂಡರೆ ತಪ್ಪಿಲ್ಲ. ಆದರೆ ಮನೆಯಲ್ಲಿ ಮೂರ್ನಾಲ್ಕು ಜನರಿರುವವರು ಹೀಗೆ ಮಾಡಬಾರದು.ನಮ್ಮ ಜಮೀನಿನ ಸುತ್ತ ಮುತ್ತ ಹೀಗೆ ಕಷ್ಟಕ್ಕೆ ಸಿಲುಕಿದವರ ದೊಡ್ಡ ಸಂಖ್ಯೆಯ ಜನರೆ ಇದ್ದಾರೆ ಎನ್ನುತ್ತಾರೆ ಚಂದ್ರಕಾಂತ್.
ತರಕಾರಿಗೆ ಬೈ ರೇಷ್ಮೆಗೆ ಜೈ
ಬಿದರಗೂಡಿನ ಲಿಂಗಣ್ಣ ಅವರು ಮೊದಲು ತಮಗಿರುವ ಎರಡು ಎಕರೆ ಪ್ರದೇಶದಲ್ಲಿ ಟೊಮೋಟೊ ಮತ್ತಿತರ ತರಕಾರಿ ಬೆಳೆ ಬೆಳೆಯುತ್ತಿದ್ದರು. ಕ್ರಿಮಿನಾಶಕ ಸಿಂಪರಣೆಯಿಂದ ಆರೋಗ್ಯ ಪದೇಪದೇ ಹದಗೆಡುತ್ತಿತ್ತು. ಜತೆಗೆ ಟೊಮೋಟೊ ದರ ಏರಿಳಿತದಿಂದ ಸಾಲದ ಸುಳಿಯಲ್ಲೂ ಸಿಲುಕಿಕೊಂಡಿದ್ದರು.
ಚಂದ್ರಕಾಂತ್ ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಟೊಮೋಟೊ ಬಿಟ್ಟು ಒಂದುವರೆ ವರ್ಷದಿಂದ ರೇಷ್ಮೆ ಬೆಳೆಯಲು ಆರಂಭಿಸಿದರು. ಈಗ ಪ್ರತಿ ತಿಂಗಳು ಕನಿಷ್ಟ 25 ಸಾವಿರ ರೂ. ಆದಾಯ ಕಾಣುವಂತಾಗಿದ್ದು ನೆಮ್ಮದಿಯಿಂದ ಆರೋಗ್ಯವಾಗಿದ್ದೇವೆ ಎನ್ನುತ್ತಾರೆ ಲಿಂಗಣ್ಣನ ಮಕ್ಕಳಾದ ಮಂಜು ಮತ್ತು ಮಹೇಶ.
ಈಗ ನಾವು ತರಕಾರಿ ಬೆಳೆಯುತ್ತಿದ್ದಾಗ ಮಾಡಿದ ಸಾಲವನ್ನು ತೀರಿಸಿ. ಪಕ್ಕದಲ್ಲೇ ಎರಡು ಗುಂಟೆ ಜಮೀನು ಖರೀದಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ನಾಲ್ಕುವರೆ ಲಕ್ಷ ರೂ. ವೆಚ್ಚಮಾಡಿ ರೇಷ್ಮೆ ಮನೆ ನಿಮರ್ಾಣ ಮಾಡಿಕೊಂಡಿದ್ದು ಇಲಾಖೆಯಿಂದ ಒಂದು ಲಕ್ಷ ರೂ ಸಹಾಯ ಧನ ಕೊಟ್ಟರು. ಅದರ ಸಾಲವು ತೀರುತ್ತಾ ಬಂದಿದೆ.
ನಮ್ಮ ಮನೆಯಲ್ಲಿರುವ ನಾಲ್ಕು ಜನರೇ 200 ಬೈವೋಲ್ಟನ್ ತಳಿಯ ಮೊಟ್ಟೆ ನಿರ್ವಹಣೆಮಾಡುತ್ತೇವೆ. ಗೂಡು ಬಿಡಿಸುವ ಕಾಲದಲ್ಲಿ 5 ಜನರನ್ನು ಕೆಲಸಕ್ಕೆ ಕರೆದುಕೊಳ್ಳುತ್ತೇವೆ. ಹಾಗಾಗಿ ನಮಗೆ ಈ ಕೃಷಿಯಲ್ಲಿ ಕೂಲಿ ಕಾಮರ್ಿಕರ ಸಮಸ್ಯೆ ಉಂಟಾಗುವುದೇ ಇಲ್ಲ ಎನ್ನುತ್ತಾರೆ. ಮಧ್ಯ ಒಂದೆರಡು ತಿಂಗಳು ಗೂಡಿನ ದರ 150 ರೂಗೆ ಕುಸಿತ ಕಂಡಿತ್ತು. ಆಗಲೂ ನಮಗೆ ನಷ್ಟವೇನು ಆಗಿಲ್ಲ. ಲಾಭ ಕಡಿಮೆ ಬಂತು ಅಷ್ಟೆ. ಈಗ ಪ್ರತಿ ಕೆಜಿ ಗೂಡಿಗೆ 450 ರೂ. ಇದೆ. ಸಣ್ಣ ಹಿಡುವಳಿ ರೈತರಿಗೆ ರೇಷ್ಮೆ ಸಾಕಾಣಿಕೆಯೇ ಸರಿಯಾದ ಉದ್ಯೋಗ ಎನ್ನುವುದು ಅವರ ಅನುಭವದ ಮಾತು
great sir
ಪ್ರತ್ಯುತ್ತರಅಳಿಸಿ