vaddagere.bloogspot.com

ಶನಿವಾರ, ಆಗಸ್ಟ್ 13, 2016

ಹಸಿರು ಮನೆಯಿಂದ ಹಸನಾದ ಬದುಕು

ಬೇಸಿಗೆ ಕಾಲ ಬರುತ್ತಿದ್ದಂತೆ ತರಕಾರಿ ದರಗಳು ಗಗನಕ್ಕೇರುತ್ತವೆ. ಬಿರು ಬಿಸಿಲಿನ ತಾಪ ಸಹಿಸಿಕೊಂಡು ತರಕಾರಿ ಬೆಳೆಯುವುದು ರೈತರಿಗೆ ಕಷ್ಟದ ಕೆಲಸ. ಸಾಮಾನ್ಯವಾಗಿ ಜೂನ್ನಲ್ಲಿ ಟೊಮಟೋ ಮತ್ತು ಮಣಸಿಕಾಯಿ ಮತ್ತಿತರರ ತರಕಾರಿಗಳ ದರ ಕೆಜಿಗೆ ನೂರು ರೂಪಾಯಿ ತಲುಪಿದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇಂತಹ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ರೈತರು ಜಾಣ್ಮೆ ಬಳಸಿ ತಮ್ಮದೆ ತಂತ್ರಜ್ಞಾನವನ್ನು ಬಳಸಿಕೊಂಡು ತರಕಾರಿ ಬೆಳೆದು ಕಾಸು ಮಾಡಿಕೊಳ್ಳುತ್ತಾರೆ. ಹೀಗೆ ಕೋಲಾರ ಜಿಲ್ಲೆಯ ನೆನಮನಹಳ್ಳಿಗೆ ಹೋಗಿ ಬರುವ ದಾರಿಯಲ್ಲಿ ಕಂಡ ಕ್ಯಾಪ್ಸಿಕಂ ತೋಟ ನಮ್ಮ ಗಮನಸೆಳೆಯಿತು. ಕೂತಹಲಗೊಂಡ ನಾವು ಅಲ್ಲಿ ಹೋಗಿ ನೋಡಿದಾಗ ಅಲ್ಲಿ ನಮಗೆ ಅಚ್ಚರಿ ಕಾದಿತ್ತು. ಲಕ್ಷಾಂತರ ರೂಪಾಯಿ ಖಚರ್ುಮಾಡಿ ಪಾಲಿಹೌಸ್ ನಿಮರ್ಾಣ ಮಾಡಿಕೊಳ್ಳಲು ಆಗದ ರೈತರು ಕಡಿಮೆ ಖಚರ್ಿನಲ್ಲಿ ಗ್ರೀನ್ಶೇಡ್ ನೆಟ್ಗಳನ್ನು ಬಳಸಿಕೊಂಡು ತರಕಾರಿ ಬೆಳೆಯುತ್ತಿರುವುದು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿತ್ತು.


ಕೋಲಾರ : ಬೇಸಿಗೆ ಕಾಲದಲ್ಲಿ ತರಕಾರಿ ಬೆಳೆ ಬೆಳೆಯುವುದು ರೈತರಿಗೆ ದೊಡ್ಡ ಸವಾಲು. ಕುಸಿದ ಅಂತರ್ಜಲ ತಂದ ನೀರಿನ ಸಮಸ್ಯೆ, ಹೆಚ್ಚುತ್ತಿರುವ ತಾಪಮಾನ ರೈತನ ಬದುಕನ್ನು ಹೈರಾಣಗಿಸಿದೆ. 

ಬೇಸಿಲಿನ ತಾಪಕ್ಕೆ ಹೈದರಬಾದ್ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ನೂರಾರು ಜನ ಸವನ್ನಾಪ್ಪುತ್ತಿರುವುದು ವರದಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಹೊಲದಲ್ಲಿ ಬೆಳೆದ ತರಕಾರಿ ಗಿಡಗಳಾದರೂ ಬಿಸಿಲಿನ ತಾಪವನ್ನು ತಡೆದುಕೊಂಡು ತಾವು ಬದುಕಿ ರೈತನನ್ನು ಬದಕಿಸುವ ತಂತ್ರಜ್ಞಾನ ಇಂದು ನಮಗೆ ಬೇಕಾಗಿದೆ.
ಆಥರ್ಿಕವಾಗಿ ಸಬಲರಾಗಿರುವ ರೈತರು ಎಂತಹ ಬಿರು ಬೇಸಿಗೆ ಕಾಲದಲ್ಲೂ ತರಕಾರಿ ಬೆಳೆಗಳನ್ನು ಬೆಳೆಯಲು ಪಾಲಿಹೌಸ್ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿ ಪಡೆಯುತ್ತಾರೆ. ಪಾಲಿಹೌಸ್ ನಿಮರ್ಾಣಕ್ಕೆ ಸರಕಾರದಿಂದ ಸಹಾಯಧನ ಸಿಕ್ಕರೂ, ಮಧ್ಯಮವರ್ಗದ ರೈತರಿಗೆ ಈ ತಂತ್ರಜ್ಞಾನದ ಬಳಕೆ ಕಷ್ಟಸಾಧ್ಯ. ಇತ್ತೀಚೆಗೆ ಎಲ್ಲೆಡೆ ಪಾಲಿಹೌಸ್ ನಿಮರ್ಾಣ ಮಾಡಿಕೊಡುವ ಖಾಸಗಿ ಏಜೆನ್ಸಿಗಳು ಎಲ್ಲೆಡೆ ಹುಟ್ಟಿಕೊಂಡು ನೂತನ ತಂತ್ರಜ್ಞಾನವನ್ನು ಕೃಷಿಕನ ಮನೆಯ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿವೆ.
ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿಮರ್ಾಣಮಾಡಲು ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಇದರಲ್ಲಿ ರೈತನ ಪಾಲು ಶೇ 50 ರಷ್ಟಾದರೆ ಸಹಾಯಧನ ಶೇ 50 ರಷ್ಟು ಸಿಗುತ್ತದೆ. ಅಂದಾಜು ಒಂದು ಎಕರೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತ ಹತ್ತರಿಂದ ಹನ್ನೆರಡು ಲಕ್ಷ ರೂಪಾಯಿಗಳನ್ನು ತನ್ನ ಕೈಯಿಂದ ಭರಿಸಬೇಕಾಗುತ್ತದೆ.
ಬೆಳೆಗಳನ್ನು ಬಿಸಿಲಿನ ತಾಪದಿಂದ ರಕ್ಷಿಸಿಕೊಂಡು, ಕೀಟಬಾಧೆ ತಡೆದು, ಅಲ್ಪ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಂಡು ಉತ್ತಮ ಇಳುವರಿ ಪಡೆದು ಹೆಚ್ಚಿನ ಲಾಭ ಗಳಿಸಲು ಕೋಲಾರ ಜಿಲ್ಲೆಯ ಸುತ್ತಾಮುತ್ತ ರೈತರು ಹೊಸ ಕಂಡುಕೊಂಡಿದ್ದಾರೆ.ಇದಕ್ಕಾಗಿ ಅವರು ಮಾಡುತ್ತಿರುವ ವೆಚ್ಚ  ಕೇವಲ ಒಂದು ಲಕ್ಷ ರೂಪಾಯಿಗಳು ಮಾತ್ರ.
ಪಾಲಿಹೌಸ್ ಬದಲು ಶೇಡ್ ನೆಟ್ ಬಳಕೆ : ಒಂದು ಎಕರೆ ಪ್ರದೇಶದಲ್ಲಿ ಶೇಕಡಾ 50 ರಷ್ಟು ಸಹಾಯಧನವೂ ಸೇರಿದಂತೆ ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚ ಭರಿಸಲಾಗದ ರೈತರು ಕಂಡು ಕೊಂಡಿರುವ ಈ ನೂತನ ವಿಧಾನ ಮಧ್ಯಮ ವರ್ಗದ ರೈತರಿಗೆ ನೆರವಾಗಬಲ್ಲದು. ಇದಕ್ಕೆ ತಗುಲುವ ವೆಚ್ಚ ಎಂಭತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ.ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಒಂದು ಎಕರೆಗೆ 800 ಸ್ಕ್ವೈರ್ ಮೀಟರ್ ಆಗುತ್ತದೆ. ಈ ಅಂತರದಲ್ಲಿ ಸುಸಜ್ಜಿತವಾದ ಪಾಲಿಹೌಸ್ ಬದಲು ಗ್ರೀನ್ ಶೇಡ್ನೆಟ್ಗಳನ್ನು ನಿಮರ್ಾಣಮಾಡಿಕೊಳ್ಳಬೇಕು.
ಇದಕ್ಕಾಗಿ ಮೊದಲ ಹಂತವಾಗಿ ಜಮೀನನ್ನು ಹದಮಾಡಿಕೊಳ್ಳಬೇಕು. ನಂತರ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಮಲ್ಚಿಂಗ್ ಶೀಟ್ ಹಾಕಿ  ಸಣ್ಣ ಸಣ್ಣ ಬದುಗಳನ್ನು ನಿಮರ್ಿಸಿಕೊಳ್ಳಬೇಕು. ನಂತರ ಈ ಶೇಡ್ನೆಟ್ಗಳನ್ನು ಹಾಕಲು ಅನುಕೂಲವಾಗುವಂತೆ ಒಂದು ಎಕರೆ ಪ್ರದೇಶದ ಒಳಗೆ ಮರದ ಕಡ್ಡಿಗಳನ್ನು ನೆಡಬೇಕು. ಅಲ್ಲದೆ ಜಮೀನಿನ ಸುತ್ತಲೂ ಕೋಟೆಯಂತೆ ಗ್ರೀನ್ಶೇಡ್ ನೆಟ್ಗಳನ್ನು ಕಟ್ಟಬೇಕು. ನಂತರವಷ್ಟೇ ಗಿಡ ನಾಟಿ ಕೆಲಸ ಆರಂಭಿಸಬೇಕಾಗುತ್ತದೆ.
ಹೀಗೆ ಮಾಡುವುದರಿಂದ ತರಕಾರಿ ಗಿಡಗಳು ಶೇ 50 ರಷ್ಟು ಬಿಸಿಲು ಮತ್ತು ಶೇಕಡಾ 50 ರಷ್ಟು ನರೆಳಿನ ಸಂಯೋಜನೆಯಲ್ಲಿ, ಕಡಿಮೆ ನೀರನ್ನು ಬಳಸಿಕೊಂಡು, ಕ್ರೀಮಿಕೀಟಗಳ ನಿಯಂತ್ರಿಸಿ ಸಮೃದ್ಧವಾದ ಫಸಲು ತೆಗೆದು ಉತ್ತಮ ಇಳುವರಿಯನ್ನು ನಿರೀಕ್ಷೆಮಾಡಬಹುದು. ಈ ತಂತ್ರಜ್ಞಾನದಲ್ಲಿ ಟೋಮೊಟೊ, ದೊಣ್ಣೆ ಮೆಣಸಿನಕಾಯಿ, ನವಿಲು ಕೋಸು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯಬಹುದು.
ಬಂಪರ್ ಫಸಲಿನಿಂದ ಹೆಚ್ಚು ಆದಾಯ: ಕೋಲಾರ ಜಿಲ್ಲೆ ಮಣಿಘಟ್ಟ ರಸ್ತೆಯಲ್ಲಿಬರುವ ಕಾಮಧೇನು ಹಳ್ಳಿಯ  ರೈತ ಸಹೋದರರು ಒಂದು ಎಕರೆ ಪ್ರದೇಶದಲ್ಲಿ ಗ್ರೀನ್ಶೇಡ್ನೆಟ್ ಬಳಕೆಮಾಡಿಕೊಂಡು ಬೆಳೆದ ದೊಣ್ಣೆ ಮೆಣಸಿನಕಾಯಿಯಿಂದ ಆರೇ ತಿಂಗಳಲ್ಲಿ ಏಳು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.(ಇದರಲ್ಲಿ ಬೆಳೆ ಬೆಳೆಯಲು ಅವರು ಮಾಡಿದ ಎರಡುವರೆ ಲಕ್ಷ ರೂಪಾಯಿ ವೆಚ್ಚವೂ ಸೇರಿದೆ).
ಕಾಮಧೇನು ಹಳ್ಳಿಯ ರಮೇಶ್ ಮತ್ತು ಶ್ರೀನಿವಾಸ್ ಸಹೋದರರು ಕಂಡುಕೊಂಡ ಕೃಷಿ ಅನುಭವದಲ್ಲಿ ಅಲ್ಪಸ್ವಲ್ಪ ಬುದ್ದಿವಂತಿಕೆ ಬಳಸಿ ವ್ಯವಸಾಯ ಮಾಡಿದ್ದೆ ಆದಲ್ಲಿ ಲಾಭ ನಿಶ್ಚಿತ. ನಷ್ಟವಂತೂ ದೂರದ ಮಾತು. ಇವರು ಇದೇ ತಂತ್ರಜ್ಞಾನವನ್ನು ಬಳಸಿ ಎರಡು ಎಕರೆ ಪ್ರದೇಶದಲ್ಲಿ  ತರಕಾರಿ ಬೇಸಾಯ ಮಾಡುತ್ತಿದ್ದು  ಖಚರ್ುವೆಚ್ಚವನ್ನು ಕಳೆದು ವಾಷರ್ಿಕ ಐದು ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.ಈ ಹಂಗಾಮಿನಲ್ಲಿ ಅಂದರೆ ಜನವರಿಯಿಂದ ಇಲ್ಲಿಯವರೆಗೆ ಒಂದು ಎಕರೆ ಪ್ರದೇಶದಲ್ಲಿ ದೊಣ್ಣೆ ಮೆಣಸಿನಕಾಯಿ ಬೆಳೆದು ನಾಲ್ಕು ಲಕ್ಷ ರೂಪಾಯಿಗಳಿಸಿದ್ದಾರೆ.
ನಾಟಿ ವಿಧಾನ : ಒಂದು ಎಕರೆಗೆ, ಗಿಡಕ್ಕೆ ಒಂದು ರೂಪಾಯಿಯಂತೆ ಹದಿನೇಳು ಸಾವಿರ ಇಂದ್ರ ತಳಿಯ ಗಿಡಗಳನ್ನು 4 * ಒಂದುವರೆ ಅಡಿ ಅಂತರದಲ್ಲಿ ನಾಟಿ ಮಾಡಿದರು. ವಾರಕ್ಕೆ ಒಂದು ಬಾರಿ ನೀರು ಕೊಡುವ ಇವರು ಕೊಟ್ಟಿಗೆ ಗೊಬ್ಬರದ ಜತೆಗೆ ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ. ಹನಿ ನೀರಾವರಿಯಲ್ಲಿ ರಸಾವರಿ ಗೊಬ್ಬರವನ್ನು ಕೊಡುತ್ತಾರೆ. ಒಂದು ಬಾರಿ ಗಿಡಹಾಕಿದರೆ 15 ರಿಂದ 18 ಬಾರಿ ಕಾಯಿ ಕೊಯ್ಲು ಮಾಡಲಾಗುತ್ತದೆ. ಪ್ರತಿ ಬಾರಿಯೂ ಒಂದು ಕೊಯ್ಲಿಗೆ ಸರಾಸರಿ ಆರು ಟನ್ ಇಳುವರಿ ಸಿಗುತ್ತದೆ. ಒಂದು ಕೆಜಿಗೆ ಕನಿಷ್ಟ 20 ರೂನಿಂದ ಗರಿಷ್ಠ 60 ರೂಪಾಯಿಯ ವರೆಗೂ ಕ್ಯಾಪ್ಸಿಕಮ್ ಮಾರಾಟಮಾಡಲಾಗಿದೆ.
ಒಂದು ಬಾರಿ ಹೀಗೆ ಗ್ರೀನ್ಶೇಡ್ನೆಟ್ ಬಳಸಿ, ಮಲ್ಚಿಂಗ್ ಶೀಟ್ ಹಾಕಿ ಕ್ಯಾಪ್ಸಿಕಮ್ ಬೆಳೆದ ನಂತರ ಅದೇ ಜಾಗದಲ್ಲಿ ಟೋಮೊಟೊ ನಾಟಿ ಮಾಡಿಕೊಳ್ಳಲಾಗುತ್ತದೆ. ಆ ಮೂಲಕ ಒಂದೇ ಬಾರಿ ಹಾಕಿದ ಮಲ್ಚಿಂಗ್ ಶೀಟ್ನಲ್ಲಿ ಎರಡು ಬೆಳೆಗಳನ್ನು ತೆಗೆದುಕೊಳ್ಳಬಹುದು .ಈ ಮಾದರಿಯ ನೆಟ್ಹೌಸ್ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದು. ನಾವು ಹೇಗೆ ಬಳಸಿದರೂ ಕನಿಷ್ಟ ಮೂರು ವರ್ಷದವರೆಗೂ ಈ ನೆಟ್ಗಳನ್ನು ಬಳಸಿ ನಂತರ ಬೀಸಾಡಬಹುದು ಎನ್ನುತ್ತಾರೆ ರಮೇಶ್. ಈ ತಂತ್ರಜ್ಞಾನದ ಬಳಕೆಯಿಂದ ಯಾವುದೇ ತರಕಾರಿ ಬಿಸಿಲಿನ ತಾಪಕ್ಕೆ ಸಿಲುಕಿ ಬಿಳಿ ಬಣ್ಣಕ್ಕೆ ಬರುವುದಿಲ್ಲ.ರೋಗದ ನಿಯಂತ್ರಣವಾಗುತ್ತದೆ. ಕಾಯಿ ಹಸಿರಾಗಿ ತಾಜಾ ಆಗಿದ್ದು ದಪ್ಪವಾಗಿರುತ್ತವೆ. ಇದರಿಂದಾಗಿ ಇವರ ತರಕಾರಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯೂ ಇರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಮೇಶ್ 9591674296 ಅವರನ್ನು ಸಂಪಕರ್ಿಸಬಹುದು.
=============================

ಗುರುವಾರ, ಆಗಸ್ಟ್ 11, 2016

ಬರದ ನಾಡಿನ ಬಂಗಾರದ ಮನುಷ್ಯ  ಚಂದ್ರಶೇಖರ್ 

ಬರದ ನಾಡಿನಲ್ಲಿ ಬಂಗಾರದ ಬೆಳೆ ತೆಗೆಯುವ ಮೂಲಕ ಸಾವಿರಾರು ಕೃಷಿಕರ ಬಾಳಿಗೆ ಬೆಳಕಾದ ಯಶಸ್ವಿ ಸಾವಯವ ರೈತನ ಸಾಹಸಗಾಥೆ ಇದು. ಕೇವಲ 30 ಗುಂಟೆ ಜಮೀನಿನಲ್ಲಿ ಮಳೆಯಾಶ್ರಯದಲ್ಲಿ 500 ಪಪ್ಪಾಯ ಜತೆಗೆ ಮಿಶ್ರ ಬೆಳೆಯಾಗಿ 300 ಮಾವು, 300 ನುಗ್ಗೆ, ರೇಷ್ಮೆ ಕೃಷಿಯನ್ನು ಮಾಡುವ ಮೂಲಕ ಕೋಲಾರ ಜಿಲ್ಲೆಯ ನೆನಮನೆ ಗ್ರಾಮದ ಚಂದ್ರಶೇಖರ್ ಮಾದರಿಯಾಗಿದ್ದಾರೆ. ಒಣ ಬೇಸಾಯದಲ್ಲಿ ಇವರು ಮಾಡಿರುವ ಸಾಧನೆ ಅನುಕರಣೀಯ.
ರಾಜ್ಯ ಸಕರ್ಾರ ನೀಡುವ ಕೃಷಿ ಪಂಡಿತ ,ಮಂಡ್ಯದ ಮಾದೇಗೌಡ ಪ್ರತಿಷ್ಠಾನ ನೀಡುವ ಕೃಷಿತಜ್ಞ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.
ಕೋಲಾರ ಜಿಲ್ಲೆ ವಾಷರ್ಿಕ ಸರಾಸರಿ 250 ರಿಂದ 300 ಮಿಲಿ ಲೀಟರ್ ಮಳೆ ಬೀಳುವ ಒಣ ಭೂಮಿ ಹೊಂದಿರುವ ಪ್ರದೇಶ. ಅಲ್ಲಿ ಸಾವಿರಾರು ಅಡಿ ಭೂಮಿ ಕೊರೆದರು ನೀರು ಸಿಗದ ಪರಿಸ್ಥಿತಿ. ಇಂತಹ ಬಿರು ಬಿಸಿಲಿನ ನಾಡಿನಲ್ಲಿ ಬೇಸಿಗೆಯಲ್ಲೂ ಚಂದ್ರಶೇಖರ್ ಅವರ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲಿ ಯಾವುದೇ ನೀರಾವರಿಯ ಸೌಲಭ್ಯವಿಲ್ಲ. ಬೋರ್ವೆಲ್ನ ಹಂಗೂ ಇಲ್ಲ ಆದರೂ ತೋಟ ಹಸಿರಾಗಿದೆ.ಕೇವಲ ಮಳೆ ಆಶ್ರಯದಲ್ಲಿ ಹೊಸ ತಂತ್ರಜ್ಞಾನವನ್ನು ಕಂಡುಕೊಂಡ ನಿಷ್ಠಾವಂತ ರೈತನೊಬ್ಬ ತನಗೆ ತಿಳಿದ ನೆಲಮೂಲದ ಜ್ಙಾನವನ್ನು ಆಧರಿಸಿ ಕಟ್ಟಿದ ತೋಟ ಅದು.
ದಕ್ಷ ಜಿಲ್ಲಾದಿಕಾರಿಯೆಂದೇ ಹೆಸರು ಮಾಡಿ ಅಕಾಲಿಕ ಮರಣಕ್ಕೆ ತುತ್ತಾದ ಡಿ.ಕೆ.ರವಿ ತಮ್ಮ ಬಿಡುವಿನ ವೇಳೆಯಲ್ಲಿ ಈ ತೋಟಕ್ಕೆ ಆಗಾಗ ಭೇಟಿ ನೀಡಿ ಹಲವು ರೈತ ತಂಡಗಳಿಗೆ ಈ ಮಾದರಿಯ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ದೇಶ, ವಿದೇಶದ ನೂರಾರು ಗಣ್ಯರು ರೈತರು ಬೇಟಿನೀಡಿ ಚಂದ್ರಶೇಖರ್ ಮಾಡಿದ ಸಾಧನೆಯನ್ನು ಕಂಡು ಬೆರಗಾಗಿದ್ದಾರೆ.
ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಇಂತಹ ಸಾಧನೆ ಮಾಡಿರುವ ನೂರಾರು ರೈತರನ್ನು ನಾವು ಭೇಟಿಯಾದೆವು.ಪ್ರತಿಯೊಬ್ಬ ರೈತನ್ನು ನಮ್ಮ ಕಣ್ಣಿಗೆ ಒಬ್ಬೊಬ್ಬ ಕೃಷಿ ವಿಜ್ಙಾನಿಯಂತೆ ಕಂಡ.ತಾವೇ ಸ್ವತಃ ಕಂಡುಕೊಂಡ ಕಡಿಮೆ ಖಚರ್ಿನ ತಂತ್ರಜ್ಞಾನವನ್ನು ಬಳಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿರುವ ರೈತರು ಅಲ್ಲಲ್ಲಿ ನಮಗೆ ಕಂಡರು. ಸಮಗ್ರ ಸಾವಯವ ಒಣ ಬೇಸಾಯ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸಿ ಬಂಜರು ಭೂಮಿಯಲ್ಲೂ ಉತ್ತಮ ಫಸಲು ತೆಗೆದು ಬರದ ಛಾಯೆಗೆ ಸವಾಲೊಡ್ಡಿ ಯಶಸ್ವಿಯಾದವರು ಅಲ್ಲಿದ್ದಾರೆ.
ವಾಷರ್ಿಕ ಸರಾಸರಿ 650 ರಿಂದ 700 ಮಿಲಿ ಲೀಟರ್ ಮಳೆ ಬೀಳುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರು ಮಾತ್ರ ಯಾಕೆ ಸಂಕಷ್ಟದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಣಸೂರಿನ ಕೇಂದ್ರ ತಂಬಾಕು ಮಂಡಳಿಯಲ್ಲಿ ಹಿರಿಯ ಕೃಷಿ ವಿಜ್ಞಾನಿಯಾಗಿರುವ ಮಹಾದೇವಸ್ವಾಮಿ ಮತ್ತು ಮೈಸೂರು ತಾಲೂಕು ಸಾವಯವ ಕೃಷಿಕ ಎಂ.ಕೆ.ಜಗದೀಶ್ ಕುಮಾರ್ಗೌಡ ಅವರೊಂದಿಗೆ ನಮ್ಮ ತಂಡ ಬರದ ನಾಡಿನ ಯಶಸ್ವಿ ಸಾವಯವ ಕೃಷಿಕ ಎನ್.ಆರ್.ಚಂದ್ರಶೇಖರ್ ಅವರನ್ನು ಹುಡುಕಿಕೊಂಡು ಕೋಲಾರ ಜಿಲ್ಲೆಯ ನೆನಮನೆಯತ್ತ ಹೊರಟಿತು. ನಿಜಕ್ಕೂ ಅಲ್ಲಿ ಅವರು ತಮ್ಮ 30 ಗುಂಟೆ ಜಮೀನಿನಲ್ಲಿ ಮಾಡಿರುವ ಸಾಧನೆ ನಮಗೆ ಅಚ್ಚರಿ ಉಂಟುಮಾಡಿತು.
ಕುಸಿಯುತ್ತಿರುವ ಅಂತರ್ಜಲ ಮಟ್ಟ. ಅಕಾಲಿಕ ಮಳೆ. ಭೂಮಿಯನ್ನು ಬಂಜರು ಮಾಡುತ್ತಿರುವ ರಾಸಾಯನಿಕ ಗೊಬ್ಬರ, ಕ್ರಿಮಿವಾಶಕಗಳಂತಹ ನಿಧಾನಗತಿಯ ವಿಷಕಾರಕಗಳು ರೈತರನ್ನು ಸಾಲದ ಶೂಲಕ್ಕೆ ನೂಕುತ್ತಿರುವ ಸಂಕಷ್ಟ ಕಾಲದಲ್ಲಿ ಚಂದ್ರಶೇಖರ್ ನಮ್ಮ ಕಣ್ಣಿಗೆ ಭರವಸೆಯ ಬೆಳಕಾಗಿ ಕಂಡರು. ಅವರು ಅನುಸರಿಸುತ್ತಿರುವ ಮಾದರಿ ತುಂಡು ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರ ಬದುಕಿಗೆ ದಾರಿ ದೀಪವಾಗಿ ಕಂಡಿತು.
.ಚಂದ್ರಶೇಖರ್ ತಮ್ಮ ಬೇಸಾಯ ಕ್ರಮದಲ್ಲಿ ಕೇವಲ ಮಳೆಯನ್ನೇ ನಂಬಿ ಹೊರಸುಳಿಗಳ ಹಂಗಿಲ್ಲದೆ. ಕೃಷಿ ತ್ಯಾಜ್ಯ, ಎರೆ ಗೊಬ್ಬರ, ಬಯೋಡೈಜೆಸ್ಟರ್ ನಂತಹ ಕಡಿಮೆ ವೆಚ್ಚದ ತಂತ್ರಜ್ಞಾವನ್ನು ಬಳಸಿಕೊಂಡು ಅಪೂರ್ವ ಸಾಧನೆ ಮಾಡಿದ್ದಾರೆ.ಏಳನೇ ತರಗತಿವರೆಗೆ ಓದಿರುವ ಇವರು ವೈಜ್ಞಾನಿಕ ರೀತಿಯಲ್ಲಿ ಒಣ ಬೇಸಾಯ ಮಾಡುತ್ತಿದ್ದಾರೆ.ಮಾವು, ನುಗ್ಗೆ,ಪಪ್ಪಾಯ, ರೇಷ್ಮೆ,ರಾಗಿ, ನೆಲಗಡಲೆ,ಅವರೆ, ತೊಗರಿ ಇತ್ಯಾದಿ ಬೆಳೆ ಬೆಳೆಯುವ ಮೂಲಕ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಆರಂಭದಲ್ಲಿ ಚಂದ್ರಶೇಖರ್ ಕೂಡ  ಸಾವಿರಾರು ಅಡಿಗಳವರೆಗೆ ಎಂಟು ಹತ್ತು ಬೋರ್ವೆಲ್ ಕೊರೆಸಿ ಹನಿ ನೀರು ಸಿಗದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು.ನಂತರ ತಮಗೆ ತಿಳಿದ ನೆಲಮೂಲದ ದೇಸಿ ಜ್ಞಾನವನ್ನೇ ಆಧರಿಸಿ ಹೊಸ ಕೃಷಿ ವಿಧಾನವನ್ನು ಕಂಡುಕೊಂಡರು. ತಮ್ಮ ಈ ಸಾಧನೆಗೂ ಮುನ್ನಾ ಇವರು ಯಾವುದೇ ಕೃಷಿ ವಿಶ್ವ ವಿದ್ಯಾನಿಲಯವನ್ನಾಗಲಿ, ಕೃಷಿ ವಿಜ್ಞಾನಿಯನ್ನಾಗಲಿ,ಯಶಸ್ವಿ ರೈತರನ್ನಾಗಲಿ ಹುಡುಕಿಕೊಂಡು ಹೋದವರಲ್ಲ.ಇವರ ಸಾಧನೆಯನ್ನು ಕಂಡು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸೇರಿದಂತೆ ದೇಶ ವಿದೇಶದ ನೂರಾರು ರೈತರು ಒಣ ಬೇಸಾಯದಲ್ಲಿ ಮಾಡಿರುವ ಸಾಧನೆಯನ್ನು ನೋಡಲು ಇವರ ತೋಟಕ್ಕೆ ಬಂದಿದ್ದಾರೆ. ಹೊಟ್ಟೆ ಪಾಡಿಗೆ ಮಾಡಿದ್ದು ಇಂದು ನನಗೆ ಇಷ್ಟೊಂದು ಖ್ಯಾತಿಯನ್ನು ತಂದು ಕೊಟ್ಟಿದೆ. ನನ್ನನ್ನು ವಿದೇಶಗಳವರೆಗೂ ಕರೆದುಕೊಂಡು ಹೋಗಿದೆ ಎನ್ನುವ ಚಂದ್ರಶೇಖರ್ ಅತ್ಯಂತ ಸರಳ ಮತ್ತು ವಿನಯಶೀಲರಂತೆ ಕಾಣುತ್ತಾರೆ.
ಇವರ ಕೃಷಿ ಪದ್ಧತಿ ನಿಜಕ್ಕೂ ನಮ್ಮ ಭಾಗದ ರೈತರಿಗೆ ವರದಾನ. 2010 ರಲ್ಲಿ ರಾಸಾಯನಿಕ ಕೃಷಿಗೆ ವಿದಾಯ ಹೇಳಿದ ಚಂದ್ರಶೇಖರ್ ಆರು ವರ್ಷಗಳಲ್ಲಿ ತಮ್ಮ 3.16 ಎಕರೆ ಪ್ರದೇಶವನ್ನು ಸಂಪೂರ್ಣ ಸಾವಯವ ಭೂಮಿಯಾಗಿ ಬದಲಿಸಿದ್ದಾರೆ. ಬರದ ನಾಡಿನಲ್ಲಿ ನೀರು ಬತ್ತಿದರೂ ಧೃತಿಗೆಡದೆ ಯಶಸ್ವಿ ಸಾವಯವ ಕೃಷಿಕನಾಗಿ ರೂಪುಗೊಂಡಿದ್ದಾರೆ.
ಗ್ರಾಮದ ಅಂಚಿನಲ್ಲೇ ಇರುವ 30 ಗುಂಟೆ ಜಮೀನಿನಲ್ಲಿ ಇವರು ಮಾಡಿರುವ ಸಾಧನೆ ಅಪೂರ್ವ. ಇವರ ತೋಟ ಕೃಷಿ ತಂತ್ರಜ್ಞರಿಗೆ ಒಂದು ಪ್ರಯೋಗಾಲಯದಂತಿದೆ. ಸಾವಯವ ಕೃಷಿ ಕೈಗೊಳ್ಳುವ ಮೊದಲ ಹಂತದಲ್ಲಿ ತಮ್ಮ ಜಮೀನಿಗೆ ಮಣ್ಣಿನ ಆರೋಗ್ಯ ರಕ್ಷಕ ಸೆಣಬು ಸೇರಿದಂತೆ ಉರುಳಿ, ಅಲಸಂದೆಯನ್ನು ಮುಂಗಾರು ಮೊದಲ ಮಳೆ (ಮೇ ಜೂನ್ ತಿಂಗಳು) ಬಿದ್ದ ಸಮಯದಲ್ಲಿ ಭಿತ್ತಿದ್ದರು. ಇದರೊಂದಿಗೆ 500 ಪಪ್ಪಾಯ ಗಿಡಗಳನ್ನು ಅದೇ ಜಮೀನಿನಲ್ಲಿ ನಾಟಿ ಮಾಡಲಾಯಿತು. ಎರಡನೇ ಹಂತವಾಗಿ 45 ರಿಂದ 60 ದಿನಗಳು ಕಳೆದ ನಂತರ ಪಪ್ಪಾಯ ಗಿಡಗಳನ್ನು ಉಳಿಸಿಕೊಂಡು ಸೆಣಬು,ಉರುಳಿ, ಅಲಸಂದೆ ಗಿಡಗಳನ್ನು ಭೂಮಿಗೆ ಸೇರಿಸುವ ಮೂಲಕ ತೇವಾಂಶ ಆರದಂತೆ ಮಣ್ಣಿಗೆ ಹೊದಿಕೆಯಾಗಿ ಮಾಡಿದರು. ಯಾವುದೇ ರಾಸಾಯನಿಕ ಬಳಸದೆ ಜೀವಾಮೃತ, ಕೊಟ್ಟಿಗೆ ಗೊಬ್ಬರ ಮಾತ್ರ ನೀಡಿ 12 ಟನ್ ಪಪ್ಪಾಯ ಇಳುವರಿ ಪಡೆದುಕೊಂಡರು.
ನಂತರ ಪಪ್ಪಾಯ ಜೊತೆಗೆ ಮಿಶ್ರ ಬೆಳೆಯಾಗಿ 12 ಅಡಿಗೆ ಒಂದರಂತೆ ತ್ರಿಕೋನಕಾರದಲ್ಲಿ 300 ಬೆನಿಶನ್ ಮಾವು ಹಾಗೂ ಪಿಕೆಎಂ ಒನ್ ತಳಿಯ 300 ನುಗ್ಗೆ ಗಿಡಗಳನ್ನು ನಾಟಿ ಮಾಡಿದರು. ಪಪ್ಪಾಯ ಮುಗಿಯುವದರೊಳಗೆ ನುಗ್ಗೆಯಿಂದ ಒಳ್ಳೆಯ ಆದಾಯ ಬರಲು ಆರಂಭವಾಗಿತ್ತು. ಪಪ್ಪಾಯ ಗಿಡದಿಂದ ಸಾಕಷ್ಟು ಆದಾಯ ಗಳಿಸಿಕೊಂಡ ನಂತರ ಅದನ್ನು ತೆಗೆದು ಮತ್ತೆ ಮಾವು,ನುಗ್ಗೆ ನಡುವೆ ಮಿಶ್ರ ಬೆಳೆಯಾಗಿ ನೂರು ಮೊಟ್ಟೆ ಸಾಕುವಷ್ಟು ರೇಷ್ಮೆ ಗಿಡಗಳನ್ನು ನಾಟಿಮಾಡಿದ್ದಾರೆ. ಈ ಹಂತಕ್ಕೆ ತೋಟ ಬರುವ ವೇಳೆಗಾಗಲೇ ಸಾವಯವ ಪದ್ಧತಿಯಲ್ಲಿ ಆರಂಭವಾದ ತೋಟ ಪುಕೋವಕೊ ಅವರ ನೈಸಗರ್ಿಕ ಕೃಷಿ ಪದ್ಧತಿಯ ತೋಟವಾಗಿ ರೂಪಾಂತರಗೊಂಡಿದೆ.
ಇದೆಲ್ಲವನ್ನು ಕೇವಲ ಮಳೆಯ ಆಶ್ರಯದಲ್ಲಿ ಬೆಳೆಯಲು ಸಾಧ್ಯವೇ ಎನ್ನುವ ಅನುಮಾನ ನಿಮಗೆ ಇಷ್ಟರಲ್ಲಾಗಲೇ ಬಂದಿರುವುದು ಸಹಜ. ಅಲ್ಲೇ ಚಂದ್ರಶೇಖರ್ ಅವರ ಜಾಣ್ಮೆ ಕೆಲಸಮಾಡಿರುವುದು.
ಪಪ್ಪಾಯ ಹಾಕುವ ಸಂದರ್ಭದಲ್ಲಿ ಅವರು ತಮ್ಮ 30 ಗುಂಟೆ ಜಮೀನಿನಲ್ಲಿ 50 ಸಣ್ಣ ಸಣ್ಣ ಮಳೆ ನೀರು ಸಂಗ್ರಹಕ್ಕೆ ಹಿಂಗು ಗುಂಡಿಗಳನ್ನು ಮಾಡಿಕೊಳ್ಳುತ್ತಾರೆ.ಇದರಿಂದಾಗಿ ಭೂಮಿಗೆ ಬಿದ್ದ ಮಳೆಯ ನೀರು ಅಲ್ಲೆ ಹಿಂಗಿ ತಂಪಾದ ವಾತಾವರಣವನ್ನು ನಿಮರ್ಾಣ ಮಾಡಿರುತ್ತದೆ. ಇದಲ್ಲದೆ ಜಮೀನಿನ ಮೂಲೆಯಲ್ಲಿ 7 * 50 * 12 ಅಡಿ ಅಗಲದ ಕೃಷಿ ಹೊಂಡವನ್ನು ನಿಮರ್ಾಣ ಮಾಡಿಕೊಂಡು ನೀರನ್ನು ಸಂಗ್ರಹಣೆ ಮಾಡಿಕೊಳ್ಳುತ್ತಾರೆ.ಇದನ್ನು ಮಳೆಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದಂತೆ ಗಿಡಗಳಿಗೆ ಬಳಸಿಕೊಳ್ಳುತ್ತಾರೆ.
ಈ ನೀರನ್ನು ಬಳಸಿಕೊಳ್ಳುವಾಗ ಇವರು ಮಾಡಿಕೊಂಡಿರುವ ತಂತ್ರಜ್ಞಾನವೇ ಅವರ ಇಡೀ ತೋಟವನ್ನು ಬೇಸಿಗೆಯ ಬೇಗೆಯಲ್ಲೂ ಹಸಿರಾಗಿರುವಂತೆ ಮಾಡಿರುವುದು. ಪಪ್ಪಾಯ, ಮಾವು ಮತ್ತು ನುಗ್ಗೆ ಗಿಡಗಳಿಗೆ ಬೇಸಗೆಯಲ್ಲಿ ಇವರು ನೀರುಣಿಸಲು ಕಂಡುಕೊಂಡ ಸರಳ ಉಪಾಯ ಇಂದು ಎಲ್ಲರ ಗಮನ ಸೆಳೆಯುತ್ತಿದೆ.
ಪ್ರತಿ ಗಿಡದ ಬೇರಿನ ಸಮೀಪದಲ್ಲಿ ಅರ್ಧ ಅಡಿಯಷ್ಟು ಗುಂಡಿ ತೆಗೆಯಲಾಗಿದೆ.ಅಲ್ಲಿಗೆ ಅರ್ಧ ಲೀಟರ್ ನೀರಿನ ಬಾಟಲಿಯ ಹಿಂಭಾಗವನ್ನು ಓಪನ್ ಮಾಡಿ ಮುಚ್ಚಳದಲ್ಲಿ ಒಂದು ಸಣ್ಣ ರಂಧ್ರ್ರಮಾಡಿ ಊಳಬೇಕು. ನಾಲ್ಕು ಐದು ದಿನಗಳಿಗೊಮ್ಮ ಆ ಬಾಟಲ್ ಮೂಲಕ ಪ್ರತಿ ಒಂದು ಗಿಡದ ಬೇರಿಗೆ ಅರ್ಧ ಲೀಟರ್ ನೀರು ಕೊಡಲಾಗುತ್ತದೆ. ಒಂದುವಾರ ನೀರು ಕೊಟ್ಟರೆ ಮತ್ತೊಂದು ವಾರ ಜೀವಾಮೃತ ಹೀಗೆ ಬದಲಿಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ರೈತರು ಒಂದು ಗಿಡಕ್ಕೆ ಎರಡರಿಂದ ಮೂರು ಕೊಡ ನೀರನ್ನು ಕೊಡುತ್ತಾರೆ. ಆದರೆ ಚಂದ್ರಶೇಖರ್ 13 ಲೀಟರ್ ನೀರು ಹಿಡಿಯುವ ಒಂದು ಕೊಡದ ನೀರನ್ನು 26 ಗಿಡಗಳಿಗೆ ಕೊಡುತ್ತಾರೆ. ಇಲ್ಲೂ ಇವರು ನೀರಿನ ಮಿತ ಬಳಕೆಯನ್ನು ಮಾಡುವ ಮೂಲಕ ಬರದ ನಾಡಿನಲ್ಲಿ ಪ್ರತಿ ಹನಿ ನೀರಿನ ಮೌಲ್ಯ ಎಷ್ಟೊಂದು ಮಹತ್ವ ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಇದಲ್ಲದೆ ಮಣ್ಣಿಗೆ ಮುಚ್ಚುಗೆ ಮಾಡುವ ಮೂಲಕ ತೇವಾಂಶ ಕಾಪಾಡಿಕೊಳ್ಳಲು ತೋಟದ ಸುತ್ತಲೂ ಗ್ಲಿರಿಸಿಡಿಯಾ, ಅಗಸೆ ಮತ್ತಿತರ ಗೊಬ್ಬರದ ಗಿಡಗಳನ್ನು ಬೆಳೆಯುವ ಮೂಲಕ ಅರಣ್ಯಧಾರಿತ ಕೃಷಿಗೂ ಆದ್ಯತೆ ನೀಡಿದ್ದಾರೆ. ನಿಜಕ್ಕೂ 30 ಗುಂಟೆ ಪ್ರದೇಶದಲ್ಲಿ ಏಳು ಮಿಶ್ರ ಬೆಳೆ ಬೆಳೆಯುವ ಮೂಲಕ ಚಂದ್ರಶೇಖರ್ ಅಪೂರ್ವವಾದ ಸಾಧನೆಯನ್ನೆ ಮಾಡಿ ಬರದ ನಾಡಿನ ರೈತರ ಬೇಸಾಯಕ್ಕೆ ಬೆಳಕಾಗಿದ್ದಾರೆ. ಆಸಕ್ತರು ಅವರನ್ನು ದೂರವಾಣಿ 9448342803 ಸಂಪಕರ್ಿಸಿ ಮಾತನಾಡಬಹುದು.