vaddagere.bloogspot.com

ಶನಿವಾರ, ಆಗಸ್ಟ್ 13, 2016

ಹಸಿರು ಮನೆಯಿಂದ ಹಸನಾದ ಬದುಕು

ಬೇಸಿಗೆ ಕಾಲ ಬರುತ್ತಿದ್ದಂತೆ ತರಕಾರಿ ದರಗಳು ಗಗನಕ್ಕೇರುತ್ತವೆ. ಬಿರು ಬಿಸಿಲಿನ ತಾಪ ಸಹಿಸಿಕೊಂಡು ತರಕಾರಿ ಬೆಳೆಯುವುದು ರೈತರಿಗೆ ಕಷ್ಟದ ಕೆಲಸ. ಸಾಮಾನ್ಯವಾಗಿ ಜೂನ್ನಲ್ಲಿ ಟೊಮಟೋ ಮತ್ತು ಮಣಸಿಕಾಯಿ ಮತ್ತಿತರರ ತರಕಾರಿಗಳ ದರ ಕೆಜಿಗೆ ನೂರು ರೂಪಾಯಿ ತಲುಪಿದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇಂತಹ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ರೈತರು ಜಾಣ್ಮೆ ಬಳಸಿ ತಮ್ಮದೆ ತಂತ್ರಜ್ಞಾನವನ್ನು ಬಳಸಿಕೊಂಡು ತರಕಾರಿ ಬೆಳೆದು ಕಾಸು ಮಾಡಿಕೊಳ್ಳುತ್ತಾರೆ. ಹೀಗೆ ಕೋಲಾರ ಜಿಲ್ಲೆಯ ನೆನಮನಹಳ್ಳಿಗೆ ಹೋಗಿ ಬರುವ ದಾರಿಯಲ್ಲಿ ಕಂಡ ಕ್ಯಾಪ್ಸಿಕಂ ತೋಟ ನಮ್ಮ ಗಮನಸೆಳೆಯಿತು. ಕೂತಹಲಗೊಂಡ ನಾವು ಅಲ್ಲಿ ಹೋಗಿ ನೋಡಿದಾಗ ಅಲ್ಲಿ ನಮಗೆ ಅಚ್ಚರಿ ಕಾದಿತ್ತು. ಲಕ್ಷಾಂತರ ರೂಪಾಯಿ ಖಚರ್ುಮಾಡಿ ಪಾಲಿಹೌಸ್ ನಿಮರ್ಾಣ ಮಾಡಿಕೊಳ್ಳಲು ಆಗದ ರೈತರು ಕಡಿಮೆ ಖಚರ್ಿನಲ್ಲಿ ಗ್ರೀನ್ಶೇಡ್ ನೆಟ್ಗಳನ್ನು ಬಳಸಿಕೊಂಡು ತರಕಾರಿ ಬೆಳೆಯುತ್ತಿರುವುದು ಅವರ ಬುದ್ಧಿವಂತಿಕೆಗೆ ಸಾಕ್ಷಿಯಾಗಿತ್ತು.


ಕೋಲಾರ : ಬೇಸಿಗೆ ಕಾಲದಲ್ಲಿ ತರಕಾರಿ ಬೆಳೆ ಬೆಳೆಯುವುದು ರೈತರಿಗೆ ದೊಡ್ಡ ಸವಾಲು. ಕುಸಿದ ಅಂತರ್ಜಲ ತಂದ ನೀರಿನ ಸಮಸ್ಯೆ, ಹೆಚ್ಚುತ್ತಿರುವ ತಾಪಮಾನ ರೈತನ ಬದುಕನ್ನು ಹೈರಾಣಗಿಸಿದೆ. 

ಬೇಸಿಲಿನ ತಾಪಕ್ಕೆ ಹೈದರಬಾದ್ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ನೂರಾರು ಜನ ಸವನ್ನಾಪ್ಪುತ್ತಿರುವುದು ವರದಿಯಾಗಿದೆ. ಇಂತಹ ಸನ್ನಿವೇಶದಲ್ಲಿ ಹೊಲದಲ್ಲಿ ಬೆಳೆದ ತರಕಾರಿ ಗಿಡಗಳಾದರೂ ಬಿಸಿಲಿನ ತಾಪವನ್ನು ತಡೆದುಕೊಂಡು ತಾವು ಬದುಕಿ ರೈತನನ್ನು ಬದಕಿಸುವ ತಂತ್ರಜ್ಞಾನ ಇಂದು ನಮಗೆ ಬೇಕಾಗಿದೆ.
ಆಥರ್ಿಕವಾಗಿ ಸಬಲರಾಗಿರುವ ರೈತರು ಎಂತಹ ಬಿರು ಬೇಸಿಗೆ ಕಾಲದಲ್ಲೂ ತರಕಾರಿ ಬೆಳೆಗಳನ್ನು ಬೆಳೆಯಲು ಪಾಲಿಹೌಸ್ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಇಳುವರಿ ಪಡೆಯುತ್ತಾರೆ. ಪಾಲಿಹೌಸ್ ನಿಮರ್ಾಣಕ್ಕೆ ಸರಕಾರದಿಂದ ಸಹಾಯಧನ ಸಿಕ್ಕರೂ, ಮಧ್ಯಮವರ್ಗದ ರೈತರಿಗೆ ಈ ತಂತ್ರಜ್ಞಾನದ ಬಳಕೆ ಕಷ್ಟಸಾಧ್ಯ. ಇತ್ತೀಚೆಗೆ ಎಲ್ಲೆಡೆ ಪಾಲಿಹೌಸ್ ನಿಮರ್ಾಣ ಮಾಡಿಕೊಡುವ ಖಾಸಗಿ ಏಜೆನ್ಸಿಗಳು ಎಲ್ಲೆಡೆ ಹುಟ್ಟಿಕೊಂಡು ನೂತನ ತಂತ್ರಜ್ಞಾನವನ್ನು ಕೃಷಿಕನ ಮನೆಯ ಬಾಗಿಲಿಗೆ ತೆಗೆದುಕೊಂಡು ಹೋಗುತ್ತಿವೆ.
ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿಮರ್ಾಣಮಾಡಲು ಇಪ್ಪತ್ತರಿಂದ ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಇದರಲ್ಲಿ ರೈತನ ಪಾಲು ಶೇ 50 ರಷ್ಟಾದರೆ ಸಹಾಯಧನ ಶೇ 50 ರಷ್ಟು ಸಿಗುತ್ತದೆ. ಅಂದಾಜು ಒಂದು ಎಕರೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತ ಹತ್ತರಿಂದ ಹನ್ನೆರಡು ಲಕ್ಷ ರೂಪಾಯಿಗಳನ್ನು ತನ್ನ ಕೈಯಿಂದ ಭರಿಸಬೇಕಾಗುತ್ತದೆ.
ಬೆಳೆಗಳನ್ನು ಬಿಸಿಲಿನ ತಾಪದಿಂದ ರಕ್ಷಿಸಿಕೊಂಡು, ಕೀಟಬಾಧೆ ತಡೆದು, ಅಲ್ಪ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಂಡು ಉತ್ತಮ ಇಳುವರಿ ಪಡೆದು ಹೆಚ್ಚಿನ ಲಾಭ ಗಳಿಸಲು ಕೋಲಾರ ಜಿಲ್ಲೆಯ ಸುತ್ತಾಮುತ್ತ ರೈತರು ಹೊಸ ಕಂಡುಕೊಂಡಿದ್ದಾರೆ.ಇದಕ್ಕಾಗಿ ಅವರು ಮಾಡುತ್ತಿರುವ ವೆಚ್ಚ  ಕೇವಲ ಒಂದು ಲಕ್ಷ ರೂಪಾಯಿಗಳು ಮಾತ್ರ.
ಪಾಲಿಹೌಸ್ ಬದಲು ಶೇಡ್ ನೆಟ್ ಬಳಕೆ : ಒಂದು ಎಕರೆ ಪ್ರದೇಶದಲ್ಲಿ ಶೇಕಡಾ 50 ರಷ್ಟು ಸಹಾಯಧನವೂ ಸೇರಿದಂತೆ ಇಪ್ಪತ್ತೈದು ಲಕ್ಷ ರೂಪಾಯಿ ವೆಚ್ಚ ಭರಿಸಲಾಗದ ರೈತರು ಕಂಡು ಕೊಂಡಿರುವ ಈ ನೂತನ ವಿಧಾನ ಮಧ್ಯಮ ವರ್ಗದ ರೈತರಿಗೆ ನೆರವಾಗಬಲ್ಲದು. ಇದಕ್ಕೆ ತಗುಲುವ ವೆಚ್ಚ ಎಂಭತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ.ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಒಂದು ಎಕರೆಗೆ 800 ಸ್ಕ್ವೈರ್ ಮೀಟರ್ ಆಗುತ್ತದೆ. ಈ ಅಂತರದಲ್ಲಿ ಸುಸಜ್ಜಿತವಾದ ಪಾಲಿಹೌಸ್ ಬದಲು ಗ್ರೀನ್ ಶೇಡ್ನೆಟ್ಗಳನ್ನು ನಿಮರ್ಾಣಮಾಡಿಕೊಳ್ಳಬೇಕು.
ಇದಕ್ಕಾಗಿ ಮೊದಲ ಹಂತವಾಗಿ ಜಮೀನನ್ನು ಹದಮಾಡಿಕೊಳ್ಳಬೇಕು. ನಂತರ ಅಲ್ಲಿ ಬೆಳೆಯುವ ಬೆಳೆಗಳಿಗೆ ಅನುಗುಣವಾಗಿ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ಮಲ್ಚಿಂಗ್ ಶೀಟ್ ಹಾಕಿ  ಸಣ್ಣ ಸಣ್ಣ ಬದುಗಳನ್ನು ನಿಮರ್ಿಸಿಕೊಳ್ಳಬೇಕು. ನಂತರ ಈ ಶೇಡ್ನೆಟ್ಗಳನ್ನು ಹಾಕಲು ಅನುಕೂಲವಾಗುವಂತೆ ಒಂದು ಎಕರೆ ಪ್ರದೇಶದ ಒಳಗೆ ಮರದ ಕಡ್ಡಿಗಳನ್ನು ನೆಡಬೇಕು. ಅಲ್ಲದೆ ಜಮೀನಿನ ಸುತ್ತಲೂ ಕೋಟೆಯಂತೆ ಗ್ರೀನ್ಶೇಡ್ ನೆಟ್ಗಳನ್ನು ಕಟ್ಟಬೇಕು. ನಂತರವಷ್ಟೇ ಗಿಡ ನಾಟಿ ಕೆಲಸ ಆರಂಭಿಸಬೇಕಾಗುತ್ತದೆ.
ಹೀಗೆ ಮಾಡುವುದರಿಂದ ತರಕಾರಿ ಗಿಡಗಳು ಶೇ 50 ರಷ್ಟು ಬಿಸಿಲು ಮತ್ತು ಶೇಕಡಾ 50 ರಷ್ಟು ನರೆಳಿನ ಸಂಯೋಜನೆಯಲ್ಲಿ, ಕಡಿಮೆ ನೀರನ್ನು ಬಳಸಿಕೊಂಡು, ಕ್ರೀಮಿಕೀಟಗಳ ನಿಯಂತ್ರಿಸಿ ಸಮೃದ್ಧವಾದ ಫಸಲು ತೆಗೆದು ಉತ್ತಮ ಇಳುವರಿಯನ್ನು ನಿರೀಕ್ಷೆಮಾಡಬಹುದು. ಈ ತಂತ್ರಜ್ಞಾನದಲ್ಲಿ ಟೋಮೊಟೊ, ದೊಣ್ಣೆ ಮೆಣಸಿನಕಾಯಿ, ನವಿಲು ಕೋಸು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯಬಹುದು.
ಬಂಪರ್ ಫಸಲಿನಿಂದ ಹೆಚ್ಚು ಆದಾಯ: ಕೋಲಾರ ಜಿಲ್ಲೆ ಮಣಿಘಟ್ಟ ರಸ್ತೆಯಲ್ಲಿಬರುವ ಕಾಮಧೇನು ಹಳ್ಳಿಯ  ರೈತ ಸಹೋದರರು ಒಂದು ಎಕರೆ ಪ್ರದೇಶದಲ್ಲಿ ಗ್ರೀನ್ಶೇಡ್ನೆಟ್ ಬಳಕೆಮಾಡಿಕೊಂಡು ಬೆಳೆದ ದೊಣ್ಣೆ ಮೆಣಸಿನಕಾಯಿಯಿಂದ ಆರೇ ತಿಂಗಳಲ್ಲಿ ಏಳು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.(ಇದರಲ್ಲಿ ಬೆಳೆ ಬೆಳೆಯಲು ಅವರು ಮಾಡಿದ ಎರಡುವರೆ ಲಕ್ಷ ರೂಪಾಯಿ ವೆಚ್ಚವೂ ಸೇರಿದೆ).
ಕಾಮಧೇನು ಹಳ್ಳಿಯ ರಮೇಶ್ ಮತ್ತು ಶ್ರೀನಿವಾಸ್ ಸಹೋದರರು ಕಂಡುಕೊಂಡ ಕೃಷಿ ಅನುಭವದಲ್ಲಿ ಅಲ್ಪಸ್ವಲ್ಪ ಬುದ್ದಿವಂತಿಕೆ ಬಳಸಿ ವ್ಯವಸಾಯ ಮಾಡಿದ್ದೆ ಆದಲ್ಲಿ ಲಾಭ ನಿಶ್ಚಿತ. ನಷ್ಟವಂತೂ ದೂರದ ಮಾತು. ಇವರು ಇದೇ ತಂತ್ರಜ್ಞಾನವನ್ನು ಬಳಸಿ ಎರಡು ಎಕರೆ ಪ್ರದೇಶದಲ್ಲಿ  ತರಕಾರಿ ಬೇಸಾಯ ಮಾಡುತ್ತಿದ್ದು  ಖಚರ್ುವೆಚ್ಚವನ್ನು ಕಳೆದು ವಾಷರ್ಿಕ ಐದು ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.ಈ ಹಂಗಾಮಿನಲ್ಲಿ ಅಂದರೆ ಜನವರಿಯಿಂದ ಇಲ್ಲಿಯವರೆಗೆ ಒಂದು ಎಕರೆ ಪ್ರದೇಶದಲ್ಲಿ ದೊಣ್ಣೆ ಮೆಣಸಿನಕಾಯಿ ಬೆಳೆದು ನಾಲ್ಕು ಲಕ್ಷ ರೂಪಾಯಿಗಳಿಸಿದ್ದಾರೆ.
ನಾಟಿ ವಿಧಾನ : ಒಂದು ಎಕರೆಗೆ, ಗಿಡಕ್ಕೆ ಒಂದು ರೂಪಾಯಿಯಂತೆ ಹದಿನೇಳು ಸಾವಿರ ಇಂದ್ರ ತಳಿಯ ಗಿಡಗಳನ್ನು 4 * ಒಂದುವರೆ ಅಡಿ ಅಂತರದಲ್ಲಿ ನಾಟಿ ಮಾಡಿದರು. ವಾರಕ್ಕೆ ಒಂದು ಬಾರಿ ನೀರು ಕೊಡುವ ಇವರು ಕೊಟ್ಟಿಗೆ ಗೊಬ್ಬರದ ಜತೆಗೆ ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಾರೆ. ಹನಿ ನೀರಾವರಿಯಲ್ಲಿ ರಸಾವರಿ ಗೊಬ್ಬರವನ್ನು ಕೊಡುತ್ತಾರೆ. ಒಂದು ಬಾರಿ ಗಿಡಹಾಕಿದರೆ 15 ರಿಂದ 18 ಬಾರಿ ಕಾಯಿ ಕೊಯ್ಲು ಮಾಡಲಾಗುತ್ತದೆ. ಪ್ರತಿ ಬಾರಿಯೂ ಒಂದು ಕೊಯ್ಲಿಗೆ ಸರಾಸರಿ ಆರು ಟನ್ ಇಳುವರಿ ಸಿಗುತ್ತದೆ. ಒಂದು ಕೆಜಿಗೆ ಕನಿಷ್ಟ 20 ರೂನಿಂದ ಗರಿಷ್ಠ 60 ರೂಪಾಯಿಯ ವರೆಗೂ ಕ್ಯಾಪ್ಸಿಕಮ್ ಮಾರಾಟಮಾಡಲಾಗಿದೆ.
ಒಂದು ಬಾರಿ ಹೀಗೆ ಗ್ರೀನ್ಶೇಡ್ನೆಟ್ ಬಳಸಿ, ಮಲ್ಚಿಂಗ್ ಶೀಟ್ ಹಾಕಿ ಕ್ಯಾಪ್ಸಿಕಮ್ ಬೆಳೆದ ನಂತರ ಅದೇ ಜಾಗದಲ್ಲಿ ಟೋಮೊಟೊ ನಾಟಿ ಮಾಡಿಕೊಳ್ಳಲಾಗುತ್ತದೆ. ಆ ಮೂಲಕ ಒಂದೇ ಬಾರಿ ಹಾಕಿದ ಮಲ್ಚಿಂಗ್ ಶೀಟ್ನಲ್ಲಿ ಎರಡು ಬೆಳೆಗಳನ್ನು ತೆಗೆದುಕೊಳ್ಳಬಹುದು .ಈ ಮಾದರಿಯ ನೆಟ್ಹೌಸ್ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದು. ನಾವು ಹೇಗೆ ಬಳಸಿದರೂ ಕನಿಷ್ಟ ಮೂರು ವರ್ಷದವರೆಗೂ ಈ ನೆಟ್ಗಳನ್ನು ಬಳಸಿ ನಂತರ ಬೀಸಾಡಬಹುದು ಎನ್ನುತ್ತಾರೆ ರಮೇಶ್. ಈ ತಂತ್ರಜ್ಞಾನದ ಬಳಕೆಯಿಂದ ಯಾವುದೇ ತರಕಾರಿ ಬಿಸಿಲಿನ ತಾಪಕ್ಕೆ ಸಿಲುಕಿ ಬಿಳಿ ಬಣ್ಣಕ್ಕೆ ಬರುವುದಿಲ್ಲ.ರೋಗದ ನಿಯಂತ್ರಣವಾಗುತ್ತದೆ. ಕಾಯಿ ಹಸಿರಾಗಿ ತಾಜಾ ಆಗಿದ್ದು ದಪ್ಪವಾಗಿರುತ್ತವೆ. ಇದರಿಂದಾಗಿ ಇವರ ತರಕಾರಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯೂ ಇರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಮೇಶ್ 9591674296 ಅವರನ್ನು ಸಂಪಕರ್ಿಸಬಹುದು.
=============================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ