ಹಳೆಯ ಬೇರುಗಳ ನೆನಪಿಗೆ ಕಟ್ಟಿದ "ಜೇನು ಗೂಡು"
# ಇದು ನಿವೃತ್ತ ಅಧಿಕಾರಿಯ ಯಶೋಗಾಥೆ # ಗಾಣಾಳು ಗುಡ್ಡದ ವನಸಿರಿ .
ಹಕ್ಕಿಯೊಂದು ಸುಂದರ ಗೂಡು ಕಟ್ಟಿ ತನ್ನ ಸಂಗಾತಿಯನ್ನು ಕರೆಯುತ್ತದೆ.ಹಾಗೆಯೇ ನಾವೂ ನಮ್ಮ ಮಕ್ಕಳು ಎಂದಿಗೂ ಗ್ರಾಮೀಣ ಬದುಕಿನ ಬೇರನ್ನು ಮರೆಯಬಾರದು.ನೆಲದಲ್ಲಿ ಕಾಲೂರಿ ಆಕಾಶಕ್ಕೆ ಹಾರುವ ಕನಸು ಕಾಣಬೇಕು ಎಂಬ ದೃಷ್ಠಿಯಿಂದ ಈ "ಜೇನುಗೂಡು" ಕಟ್ಟಿದೆವು. ನಮ್ಮ ಮಕ್ಕಳು ಇಲ್ಲಿಗೆ ಪ್ರೀತಿಯಿಂದ ಬರುತ್ತಾರೆ. ಆಕರ್ಾ,ಸಾಮೆ,ನವಣೆಯಂತಹ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಬಂಜರು ಭೂಮಿ ಇಂದು ಸುಭಾಷ್ ಪಾಳೇಕರ್ ಅವರ ಪ್ರೇರಣೆಯಿಂದ, ಕಾಯಕ ನಿಷ್ಠೆಯಿಂದ ಹಸಿರುವನವಾಗಿದೆ.ತೆಂಗು,ಮಾವು,ಸಪೋಟ,ಸೀಬೆ,ನಿಂಬೆ,ಇರಳೆ,ಕಂಚಿರಿಳೆ,ನೆಲ್ಲಿ ಹಣ್ಣುಹೂ ಕಾಯಿಬಿಟ್ಟು ತೂಗುತ್ತಿದ್ದರೆ, ತೋಟದ ಸುತ್ತಾ ಹಾಕಿರುವ ಮಹಾಗನಿ,ತೇಗ,ಸಿಲ್ವರ್ ಓಕ್ ಎಲ್ಲಾ ಆಕಾಶದ ಕಡೆಗೆ ಮುಖಮಾಡಿ ನಿಂತಿವೆ. ಅಲ್ಲೀಗ ಬಂಡೂರು ಕುರಿಗಳು,ಮೇಕೆಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.ಇದು ನಿವೃತ್ತ ಜಿಲ್ಲಾ ಖಜನಾಧಿಕಾರಿಯೊಬ್ಬರು ಕೃಷಿ ಯಶೋಗಾಥೆ.====================================================
ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ
ಹೊನ್ನಿರಲು ಮೆಚ್ಚಿನಡೆವ ಸತಿಯಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಙ !!
ಅದೊಂದು ಸುಂದರ ಸಂಸಾರ. ಅದರ ಹಿನ್ನೆಲೆಗಿದೆ ಕೃಷಿಮೂಲದಿಂದ ಬಂದ ಸಂಸ್ಕಾರ.ತಲೆಮಾರಿನಿಂದ ತಲೆಮಾರಿಗೆ ಸಭ್ಯ ಸಂಸ್ಕೃತಿ,ಸದಭಿರುಚಿಯನ್ನು ದಾಟಿಸುವುದೆಂದರೆ ಇದೆ ಇರಬೇಕು.ಕಾಡಿನಂತಹ ಹಸಿರು ತೋಟದಲ್ಲಿ ಕುಳಿತು ತೋಟಕಟ್ಟಿದ ಪರಿ ಮತ್ತು ಜೀವನ ಪಯಣವನ್ನು ಕೇಳಿಸಿಕೊಳ್ಳುತ್ತಾ ಕುಳಿತವನಿಗೆ ಅನಿಸಿದ್ದು ಹೀಗೆ.
ದೇಶಕ್ಕೆ ಸ್ವಾತಂತ್ರ ಬಂದ ದಶಕದ ನಂತರ ಹುಟ್ಟಿ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡ ಬಹುತೇಕ ತಲೆಮಾರಿನ ಹಿರಿಯರ ಬದುಕು ಹೀಗೇ ಇರಬಹುದು.ಅಂತಹ ಅದೃಷ್ಟ ಈಗಿನ ತಲೆಮಾರಿಗೆ ಇಲ್ಲ.ಭೂಮಿ ಮೇಲಿನ ಪ್ರೀತಿ,ಕೃಷಿ ಕೆಲಸದ ಮೇಲಿನ ಶ್ರದ್ಧೆ,ನೈತಿಕ ಪ್ರಜ್ಞೆಯ ಅಡಿಯಲ್ಲಿ ಕಟ್ಟಿದ "ಜೇನು ಗೂಡಿನ" ಮಾಲೀಕನ ಕಥಾನಕ ಇದು.
ಅವರ ಹೆಸರು ನಿಂಗಯ್ಯ.ಅವರಿಗೀಗಾ ಅರವತ್ತನಾಲ್ಕರ ಹರಯ.ಮೈಸೂರಿನಲ್ಲಿ ಜಿಲ್ಲಾ ಖಜಾನಾಧಿಕಾರಿಯಾಗಿ ನಿವೃತ್ತರಾಗಿರುವ ನಿಂಗಯ್ಯ ಸಕರ್ಾರಿ ಕೆಲಸದಲ್ಲಿದ್ದೂ ಬಿಡುವಿನ ವೇಳೆಯಲ್ಲಿ ಕಟ್ಟಿದ ಕಾಡುಕೃಷಿಯ ತೋಟದ ಹೆಸರು "ಜೇನು ಗೂಡು".
ಪತ್ನಿ ನ್ಯಾಯಾಲಯದಲ್ಲಿ ನೌಕರಿಯಲ್ಲಿದ್ದು ಈಗ ಸ್ವಯಂನಿವೃತ್ತಿ ಪಡೆದು ಮೈಸೂರಿನ ಮಾನಸಿ ನಗರದಲ್ಲಿರುವ ಮನೆಯ ಮುಂದೆ ನರ್ಸರಿ ಮಾಡಿಕೊಂಡು ಪತಿಯ ಎಲ್ಲಾ ಕೆಲಸಗಳಿಗೂ ಸಾಥ್ ನೀಡುತ್ತಾ ಹಸಿರನ್ನೇ ಉಸಿರಾಡುತ್ತಾ ನೆಮ್ಮದಿಯಾಗಿದ್ದಾರೆ.
"ಮಗ ಅಜಯನ್ ಎಂಬಿಬಿಎಸ್ ಎಂಡಿ,ಮಗಳು ಅಮೂಲ್ಯ ಎಂಬಿಬಿಎಸ್ ಎಂಡಿ. ಅವರೆಲ್ಲಾ ಮೆರಿಟ್ ಆಧಾರದ ಮೇಲೆ ಕಾಲೇಜು ಪ್ರವೇಶಪಡೆದು ಪದವಿ ಮುಗಿಸಿದವರು. ಯಾವುದೇ ಡೊನೇಷನ್ ಕೊಟ್ಟು ಮಕ್ಕಳನ್ನು ಓದಿಸಲಿಲ್ಲ. ಅಷ್ಟೊಂದು ಹಣವೂ ನಮ್ಮ ಬಳಿ ಇರಲಿಲ್ಲ.ಸೊಸೆಯೂ ವೈದ್ಯ,ಅಳಿಯನೂ ಸಾಫ್ಟ್ವೇರ್ ಇಂಜಿನಿಯರ್.ಆಗಾಗಿ ಕೆಲಸದಿಂದ ನಿವೃತ್ತರಾದ ಮೇಲೆ ಪತಿಪತ್ನಿ ಇಬ್ಬರೂ "ಜೇನು ಗೂಡಿ"ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾ ಹಸಿರಿನ ನಡುವೆ ಆನಂದವಾಗಿದ್ದೇವೆ ಎನ್ನುತ್ತಾರೆ ನಿಂಗಯ್ಯ.
ಹಕ್ಕಿಯೊಂದು ಸುಂದರವಾದ ಗೂಡು ಕಟ್ಟಿ ತನ್ನ ಸಂಸಾರವನ್ನು ಕರೆದು ಪೋಷಣೆ ಮಾಡುತ್ತದೆ.ಹಾಗೆಯೇ ನಾವೂ ನಮ್ಮ ಮಕ್ಕಳು ಎಂದಿಗೂ ಗ್ರಾಮೀಣ ಬದುಕಿನ ಬೇರನ್ನು ಮರೆಯಬಾರದು.ನೆಲದಲ್ಲಿ ಕಾಲೂರಿ ಆಕಾಶಕ್ಕೆ ಹಾರುವ ಕನಸು ಕಾಣಬೇಕು ಎಂಬ ದೃಷ್ಠಿಯಿಂದ ಈ "ಜೇನುಗೂಡು" ಕಟ್ಟಿದೆವು ಎನ್ನುವಾಗ ನಿಂಗಯ್ಯನವರ ಮೊಗದಲ್ಲಿ ಆತ್ಮತೃಪ್ತಿಯ ಭಾವ ಮೂಡಿ ಮರೆಯಾಗುತ್ತದೆ.
ಆಕರ್ಾ,ಸಾಮೆ,ನವಣೆಯಂತಹ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ಬಂಜರು ಭೂಮಿ ಇಂದು ಸುಭಾಷ್ ಪಾಳೇಕರ್ ಅವರ ಪ್ರೇರಣೆಯಿಂದ, ನಿಂಗಯ್ಯನವರ ಕಾಯಕ ನಿಷ್ಠೆಯಿಂದ ಹಸಿರುವನವಾಗಿ ನಳನಳಿಸುತ್ತಿದೆ.ತೆಂಗು,ಮಾವು,ಸಪೋಟ,ಸೀಬೆ,ನಿಂಬೆ,ಇರಳೆ,ಕಂಚಿರಿಳೆ,ನೆಲ್ಲಿ ಹಣ್ಣುಹೂ ಕಾಯಿಬಿಟ್ಟು ತೂಗುತ್ತಿದ್ದರೆ, ತೋಟದ ಸುತ್ತಾ ಹಾಕಿರುವ ಮಹಾಗನಿ,ತೇಗ,ಸಿಲ್ವರ್ ಓಕ್ ಎಲ್ಲಾ ಆಕಾಶದ ಕಡೆಗೆ ಮುಖಮಾಡಿ ಬೆಳೆದು ನಿಂತಿವೆ. ಅಲ್ಲೀಗ 25 ಬಂಡೂರು ಕುರಿಗಳು, 25 ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ತೋಟ ನೋಡಿಕೊಳ್ಳಲು ಸಂಸಾರವೊಂದು ಅಲ್ಲೇ ವಾಸವಾಗಿದೆ. ಬೆಳೆದು ನಿಂತ ಮಗುವಿಗೆ ಒಂದು ಹೆಸರಿಡಬೇಕಲ್ಲಾ ಅದಕ್ಕೆ ನನ್ನ ಮಗ ಈ ತೋಟಕ್ಕೆ "ಜೇನುಗೂಡು" ಅಂತ ನಾಮಕರಣ ಮಾಡಿದ್ದಾನೆ ನೋಡಿ! ಎಂದು ಮುಗ್ಧವಾಗಿ ನಗುತ್ತಾರೆ ನಿಂಗಯ್ಯ.
ಅಂದಹಾಗೆ ಈ "ಜೇನುಗೂಡು" ಇರುವುದು ಹಲಗೂರು ಹೋಬಳಿ ಗಾಣಾಳು ಎಂಬ ಪುಟ್ಟ ಗ್ರಾಮದಲ್ಲಿ.ಬೆಂಗಳೂರಿನಿಂದ ಬಂದರೆ ಕನಕಪುರ,ಸಾತನೂರು,ಹಲಗೂರು ಸಮೀಪ. ಮೈಸೂರು-ಮತ್ತತಿ ಕಡೆಯಿಂದ ಹೋದರೆ ಮುತ್ತತ್ತಿ ಬಳಿ ಎಡಕ್ಕೆ ತಿರುಗಿದರೆ ಗಾಣಾಳು "ಜೇನುಗೂಡು" ಸಿಗುತ್ತದೆ. ತೋಟದ ಸುತ್ತ ಬೆಟ್ಟಗುಡ್ಡಗಳು, ಬಲಭಾಗದಲ್ಲಿ ಶಿಂಷಾ, ಎಡ ಭಾಗದಲ್ಲಿ ಕಾವೇರಿ ಹರಿಯುತ್ತಾಳೆ. ಪೂರ್ವದಲ್ಲಿ ಗಾಣಾಳು ಗುಡ್ಡ ಇದೆ. ಗಗನಚುಕ್ಕಿ,ಬರಚುಕ್ಕಿ,ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ,ಏಟ್ರೀಯಾ ಪವರ್ ಸ್ಟೇಷನ್, ಸಣ್ಣ ಜಲಪಾತಗಳು ಕಣ್ಮನ ಸೆಳೆಯುತ್ತವೆ. ಮಳೆಗಾಲದಲ್ಲಿ ಧರೆಯ ಮೇಲಿನ ಸ್ವರ್ಗದಂತೆ ಕಾಣುವ "ಜೇನುಗೂಡು" ನಿವೃತ್ತ ನೌಕರನ ಜೀವನ ಸಾರ್ಥಕದ ಸಾಕ್ಷಿಯಾಗಿ ಕಾಣುತ್ತದೆ.
ಬಾಲ್ಯದ ನೆನಪು : "ನಮ್ಮ ಮೂಲ ಕಸುಬು ಬೇಸಾಯ, ಜೊತೆಗೆ ಕುರಿ ಸಾಕಾಣಿಕೆ.ತಂದೆ ಅಪ್ಪೇಗೌಡ,ತಾಯಿ ಮಲ್ಲಮ್ಮ.ನಾವು ಎಂಟು ಜನ ಮಕ್ಕಳು.ನಾಲ್ವರು ಗಂಡು,ನಾಲ್ವರು ಹೆಣ್ಣು.ನನ್ನ ತಮ್ಮನೊಬ್ಬ ಹುಚ್ಚುನಾಯಿ ಕಡಿದು ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ.ಆ ನೋವು ಈಗಲೂ ನನ್ನನ್ನು ಕಾಡುತ್ತದೆ.ನಮ್ಮ ತಂದೆ ಸದಾ ಹೊಲದಲ್ಲಿ ದುಡಿಯುತ್ತಲೇ ಇದ್ದ ಕಷ್ಟಜೀವಿ.ಮೂರುವರೆ ಎಕರೆ ಜಮೀನು ಇತ್ತು. ದುಡಿದು ದುಡಿದು ಬಂದ ಹಣದಿಂದ ಅದನ್ನು ಮೂವತ್ತು ಎಕರೆ ಮಾಡಿ ಮಕ್ಕಳಿಗೆ ಬಿಟ್ಟುಹೋದ ಕಷ್ಟ ಜೀವಿ" ಎನ್ನುತ್ತಾ ಭಾವುಕರಾದರು ನಿಂಗಯ್ಯ.
1953 ರಲ್ಲಿ ಮಾರಿಗುಡಿಯಲ್ಲಿ ನಡೆಸುತ್ತಿದ್ದ ಶಾಲೆಗೆ ಸೇರಿದ್ದಾಗಿ ಹೇಳುವ ನಿಂಗಯ್ಯ ಆಗ ತಾನೇ ಚಾಕಲೇಟ್ ಹಳ್ಳಿಗೆ ಬಂದಿತ್ತು ಎಂದು ನೆನಪಿಸಿಕೊಂಡರು. ಪ್ರಾಥಮಿಕ ಶಾಲೆಯಲ್ಲಿ ಎಸ್.ಟಿ.ತಿಮ್ಮಪ್ಪಯ್ಯನಂತಹವರು ಶಿಕ್ಷಕರಾಗಿದ್ದು,ಕಾಲೇಜು ದಿನಗಳಲ್ಲಿ ನಾಗರಾಜೇಗೌಡನಂತವನ್ನು ಪ್ರಾಣಸ್ನೇಹಿತನಾಗಿ ಸಿಕ್ಕಿದ್ದನ್ನು ಜೀವನದಲ್ಲಿ ಮರೆಯಲಾರೆ ಎನ್ನುತ್ತಾರೆ.
"1973 ರಲ್ಲಿ ಕನಕಪುರದ ರೂರಲ್ ಕಾಲೇಜಿನಲ್ಲಿ ಪದವಿ ಮುಗಿಸಿದೆ.ನೌಕರಿ ಇಲ್ಲದೆ ಹೊಲದಲ್ಲಿ ದುಡಿಯಲು ಬಂದೆ.ಬಂಗಾರದ ಮನುಷ್ಯ ಸಿನಿಮಾವನ್ನು ಮೂರು ಭಾರಿ ನೋಡಿದ್ದೆ.ಆ ಸಿನಿಮಾ ಎಷ್ಟರ ಮಟ್ಟಿಗೆ ನನ್ನ ಮೇಲೆ ಪ್ರಭಾವ ಬೀರಿತ್ತು ಎಂದರೆ ನೀವು ಕುಳಿತಿರುವ ಈ ತೋಟವೇ ಅದಕ್ಕೆ ಸಾಕ್ಷಿ" ಎಂದು ಕಣ್ಣರಳಿಸುತ್ತಾರೆ.
ತಂದೆ ಮರಣದ ನಂತರ ಆಸ್ತಿ ಪಾಲಾಗುವ ಸಂದರ್ಭದಲ್ಲಿ ತಾನು ಶಿಕ್ಷಣ ಪಡೆದು ಸರಕಾರಿ ನೌಕರಿಯಲ್ಲಿದ್ದ ಕಾರಣಕ್ಕೆ ಈ ಬಂಜರು ಭೂಮಿ ನನ್ನ ಪಾಲಿಗೆ ಬಂತು.ಆರಂಭದಲ್ಲಿ ಇಲ್ಲಿ ನೀಲಗಿರಿ ಹಾಕಿದ್ದೆ.ಒಂದೆರಡು ಕೊಳವೆ ಬಾವಿ ತೆಗಿಸಿ ನೀರು ಸಿಕ್ಕದೆ ಕೃಷಿಯೇ ಬೇಸರವಾಯಿತು.ಸಾಲದ್ದಕ್ಕೆ ಆನೆ,ಚಿರತೆ,ಜಿಂಕೆ,ನವಿಲು,ಹಂದಿಯಂತಹ ಕಾಡು ಪ್ರಾಣಿಗಳ ಕಾಟವೂ ಇತ್ತು.ಹಾಗಾಗಿ ಮರ ಆಧಾರಿತ ಬೇಸಾಯ ಮಾಡಲು ಮುಂದಾದೆ ಎನ್ನುತ್ತಾರೆ.
ಪಾಳೇಕರ್ ಪ್ರೇರಣೆ : ಇದೆ ಸಂದರ್ಭದಲ್ಲಿ ಸುತ್ತೂರಿನಲ್ಲಿ ನಡೆದ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳದ ನೈಸಗರ್ಿಕ ಕೃಷಿ ಶಿಬಿರಕ್ಕೆ ಹೋದೆ. ಅವರ ಪಾಠ ಕೇಳುತ್ತಿದ್ದ ನನಗೆ "ನಾವಂತೂ ಗಾಂಧಿ ಮಹಾತ್ಮನ್ನಾ ನೋಡಿಲ್ಲ.ನಮಗೆ ಪಾಠ ಹೇಳಲು ಮತ್ತೊಬ್ಬ ಗಾಂಧಿ ಮಹಾತ್ಮ ಬಂದವರೆ ಅನಿಸಿ ಅಂದೇ ಜೀವಾಮೃತ ಬಳಸಿ ಬೇಸಾಯ ಮಾಡಲು ನಿರ್ಧರಿಸಿ ಬಿಟ್ಟೆ" ಎಂದು ತಮ್ಮ ಕೃಷಿ ಪದ್ಧತಿಯ ಸುದೀರ್ಘ ಇತಿಹಾಸವನ್ನು ಹೇಳುತ್ತಾ ಹೋದರು.
2008 ರಲ್ಲಿ ಜೀವಾಮೃತ ಬಳಸಿ ಬೆಳೆದ ಮೂಲಂಗಿ,ಟೊಮಟೊ,ಈರುಳ್ಳಿ ಜೊತೆಗೆ ಬಾಳೆಯ ಇಳುವರಿಯ ಬಗ್ಗೆ ಕಣ್ಣರಳಿಸಿ ಹೇಳುವ ನಿಂಗಯ್ಯ ಅತಿ ಹೆಚ್ಚು ಹಣ ಖಚರ್ುಮಾಡದೇ ಎರಡು ಲಕ್ಷ ರೂಪಾಯಿ ಆದಾಯ ಬಂದ ಸಂಭ್ರಮವನ್ನು ಮನದುಂಬಿ ಹೇಳುತ್ತಾರೆ.
ಮನೆಗೆ ಬೇಕಾದ ಹಣ್ಣು ತರಕಾರಿ,ಸಿರಿಧಾನ್ಯಗಳನ್ನು ತೋಟದಲ್ಲಿ ವಿಷಮುಕ್ತವಾಗಿ ಬೆಳೆದುಕೊಳ್ಳುವ ನಿಂಗಯ್ಯ ತಾವು ಬೆಳೆದ ಹಣ್ಣುಹಂಪಲನ್ನು ನೆರೆಹೊರೆಯವರಿಗೂ ಹಂಚುವುದರಲ್ಲಿ ತೃಪ್ತಿ ಕಾಣುತ್ತಾರೆ.
ಆಗ ತಮಗೆ ಹಿರಿಯ ಅಧಿಕಾರಿಯಾಗಿದ್ದ ಪುಟ್ಟೇಗೌಡ ಅವರನ್ನು ಒಮ್ಮೆ "ಸಾರ್ ನನ್ನಗೊಂದಿಷ್ಟು ಜಮೀನು ಇದೆ.ಕೃಷಿ ಮಾಡಬೇಕೆಂದು ಆಸೆ.ಆದರೆ ಸರಕಾರಿ ನೌಕರಿಯಲಿದ್ದು ಮಾಡುವುದು ಹೇಗೆ ಎಂದು ಕೇಳಿದಾಗ ವಾರಕ್ಕೊಮ್ಮೆ ರಜಾ ದಿನಗಳಲ್ಲಿ ಹೋಗಿ ಗಿಡಮರಗಳನ್ನು ಬೆಳೆಸಿ ಅವು ನಿಮ್ಮ ನಿವೃತ್ತಿಯ ಕಾಲಕ್ಕೆ ದೊಡ್ಡ ಮರಗಳಾಗಿ ಫಲಕೊಡುತ್ತವೆ ಎಂದರು.ಸ್ವತಃ ಅವರೇ ದೊಡ್ಡ ಕೃಷಿಕರಾಗಿ ಪ್ರಶಸ್ತಿಯನ್ನು ಪಡೆದಿದ್ದರು.ಅವರ ಮಾರ್ಗದರ್ಶನದಂತೆ ಅಂದು ಹಾಕಿದ್ದ ಮರಗಿಡಗಳು ಈಗ ಹಣ್ಣು ಕೊಡುತ್ತಿವೆ. ನನ್ನ ಸಂಬಳದಲ್ಲಿ ಉಳಿತಾಯ ಮಾಡಿದ ಹಣದಲ್ಲಿ ತೋಟ ಕಟ್ಟಿದೆ. ಅದಕ್ಕಾಗಿ ಯಾವ ಸಾಲವನ್ನು ಮಾಡಲಿಲ್ಲ.ಈಗ ಆತ್ಮ ತೃಪ್ತಿ ಇದೆ.ನನ್ನ ಮಕ್ಕಳು ಆಗಾಗ ತೋಟಕ್ಕೆ ಬಂದು ಉಳಿದುಕೊಳ್ಳುತ್ತಾರೆ.ಆಗ ಜನ್ಮ ಸಾರ್ಥಕ ಎನಿಸುತ್ತದೆ.ಬೇಸರವಾದಾಗ ಎಲ್ಲೂ ಸಿಗದ ನೆಮ್ಮದಿ "ಜೇನುಗೂಡಿ"ನಲ್ಲಿ ಸಿಗುತ್ತದೆ " ಎಂದು ಮೌನವಾಗುತ್ತಾರೆ.
ಮೈಸೂರಿನ ಸರಕಾರಿ ನೌಕರರ ಬಡಾವಣೆ ಮಾನಸಿನಗರದಲ್ಲಿರುವ ಮನೆಯ ಮುಂದೆ "ಮಂಜು ನರ್ಸರಿ" ಮಾಡಿಕೊಂಡು ಅಲಂಕಾರಿಕ ಗಿಡಗಳು,ಹಣ್ಣಿನ,ಹೂವಿನ ಮತ್ತು ಔಷದೀಯ ಗಿಡಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತಾರೆ.ನಿವೃತ್ತರಾದ ನಂತರ ಪತ್ನಿಯೊಂದಿದೆ ಸದಾ ಹಸಿರು ಧ್ಯಾನಮಾಡುತ್ತಾ ಕ್ರೀಯಾಶೀಲವಾಗಿರುವ ನಿಂಗಯ್ಯನವರ ಸದಭಿರುಚಿ ಮತ್ತು ಆಸಕ್ತಿ ಅವರ ಕುಟುಂಬ ನೈತಿಕ ತಳಹದಿಯ ಮೇಲೆ ನಿಲ್ಲಲ್ಲು ಕಾರಣವಾಗಿದೆ.
ವಾರಕ್ಕೆ ಎರಡು ಬಾರಿ ಗಾಣಾಳು "ಜೇನು ಗೂಡು"ತೋಟಕ್ಕೆ ಹೋಗದೆ ಇದ್ದರೆ ತೋಟ ಕನಸಿನಲ್ಲಿ ಬಂದು ಬಿಡುತ್ತದೆ ಎನ್ನುವ ನಿಂಗಯ್ಯ ಸಾಗಿಬಂದ ಹಾದಿ ಕಲ್ಲುಮಳ್ಳಿನದು.ಜೀವನದಲ್ಲಿ ಎದುರಾದ ಸಂಕಷ್ಟಗಳು,ನೋವುಗಳನ್ನು ನೀಗಿಕೊಂಡು ಹಸಿರು ಬದುಕು ಕಟ್ಟಿಕೊಂಡ ನಿಂಗಯ್ಯ ಅಪ್ಪಟ ಬಂಗಾರದ ಮನುಷ್ಯನಂತೆ ಕಾಣುತ್ತಾರೆ. ಹೆಚ್ಚಿನ ಮಾಹಿತಿಗೆ ನಿಂಗಯ್ಯ 9449048163 ಸಂಪಕರ್ಿಸಿ