vaddagere.bloogspot.com

ಭಾನುವಾರ, ಮಾರ್ಚ್ 25, 2018

ಹೊಸ ತಲೆಮಾರಿನ  ಕನಸು  `ಪನ್ ಪನ್ ಸೆಂಟರ್'         ಪ್ರಕೃತಿ ಮಡಿಲಲ್ಲಿ ಜಾನ್ ಜಾನ್ದಾಯ್  ಹೇಳಿದ ಸ್ವಾವಲಂಬಿ ಜೀವನದಪಾಠ
`ಪನ್ ಪನ್ ಸೆಂಟರ್' ಎಂಬ ಹೆಸರು ಈಗ ಹೊಸ ತಲೆಮಾರಿನ ಯುವಕರಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ಇದು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ ಸುಸ್ಥಿರ,ಸ್ವಾವಲಂಬನೆಯ ಕೃಷಿ ಕಲಿಸುವ ಕೇಂದ್ರ. 2003ರಲ್ಲಿ ಜಾನ್ ಜಾನ್ದಾಯ್ ಮತ್ತು ಪೆಗ್ಗಿ ರೀಂಟ್ಸ್ ಅವರಿಂದ ಸ್ಥಾಪನೆಯಾದ ಕೇಂದ್ರ `ಲೈಫ್ ಇಸ್ ಈಜಿ ; ವೈ ಡು ವೀ ಮೇಕ್ ಇಟ್ ಸೊ ಹಾಡರ್್' ಎನ್ನುವ ಸರಳ ವಿಚಾರಧಾರೆಳಿಂದ ಗಮನಸೆಳೆದಿದೆ. " ಹಣವನ್ನು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಒಂದು ಸಾಧನವಾಗಿ (ಟೂಲ್) ಬಳಸಿ. ಹಣವೊಂದೇ ನಿಮಗೆ ಆರೋಗ್ಯ,ನೆಮ್ಮದಿ,ರಕ್ಷಣೆ ತಂದು ಕೊಡಲಾರದು. ಮರ ಗಿಡ ಪ್ರಕೃತಿಯಿಂದ ಮಾತ್ರ ರಕ್ಷಣೆ,ನೆಮ್ಮದಿ ನಿರೀಕ್ಷೆ ಮಾಡಬಹುದು. ಪ್ರಾಕೃತಿಕ ಸಂಪನ್ಮೂಲಗಳು ನಿಮಗೆ ಹೆಚ್ಚು ರಕ್ಷಣೆ ನೀಡಬಲ್ಲವು. ನೀವು ಸಂಪಾದಿಸುವ ಹಣವನ್ನು ಹೆಚ್ಚಾಗಿ ಜ್ಞಾನಾರ್ಜನೆಗೆ ಬಳಸಿ. ಸದಾ ಹಣದ ಹಿಂದೆ ಓಡಬೇಡಿ.ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸಿ.ಹೆಚ್ಚು ಹಣವಿದ್ದರೆ ಬ್ಯಾಂಕ್ನಲ್ಲಿ ಠೇವಣಿ ಹಿಡುವಬದಲು ಒಂದೆರಡು ಎಕರೆ ಜಮೀನು ಖರೀದಿಸಿ.ವಿಷಮುಕ್ತ ಆಹಾರ ಬೆಳೆಯಿರಿ.ಮರಗಿಡಗಳನ್ನು ನೆಡಿ,ಪ್ರಕೃತಿಯೊಂದಿಗೆ ಸರಳವಾಗಿ ಬದುಕಿ.ನೀವು ನೆಟ್ಟ ಸಸಿಗಳೆ ಮುಂದೆ ಹೆಮ್ಮರವಾಗಿ ಬೆಳೆದು ಬ್ಯಾಂಕ್ ಬಡ್ಡಿದರಕ್ಕಿಂತಲ್ಲೂ ಹೆಚ್ಚಿನ ಆದಾಯ ತಂದುಕೊಡುತ್ತವೆ.ಪರಿಸರಕ್ಕೂ ಕೊಡುಗೆ ನೀಡಿದಂತಾಗುತ್ತದೆ" ಎಂದು ಹೇಳುವ ಜಾನ್ದಾಯ್ ಮಾತುಗಳು ಗಾಂಧಿ ವಿಚಾರಧಾರೆಗಳಂತೆ ಕೇಳಿಸುತ್ತವೆ. ಥೈಲ್ಯಾಂಡ್ ದೇಶಕ್ಕೆ ಕೃಷಿ ಅಧ್ಯಯನ ಪ್ರವಾಸಕ್ಕೆ ಹೋಗಿಬಂದ ಅಂಕಣಕಾರನ ಅನುಭವಗಳು ಇಲ್ಲಿವೆ. 
----------------------------------------------------
`ಜೀವನ ಬಲು ಸುಲಭ ; ಮತ್ಯಾಕೆ ಅದನ್ನು ಕಠಿಣಮಾಡಿಕೊಳ್ಳುತೀರಿ ಹುಚ್ಚಪ್ಪಗಳಿರಾ !'. ಹೌದು ಹಾಗಂತ ಕೇಳಿದ್ದು ಪನ್ ಪನ್ ಸೆಂಟರ್ನ ಜಾನ್ ಜಾನ್ದಾಯ್. ಈಶಾನ್ಯ ಥೈಲ್ಯಾಂಡಿನ ಚಾಂಗ್ ಮಾಯಿ ಪ್ರಾಂತ್ಯದಲ್ಲಿರುವ ಮೆಜೋ ಎಂಬ ಪುಟ್ಟಹಳ್ಳಿಯಲ್ಲಿ ಸಹಜ ಕೃಷಿಕರಾಗಿರುವ ಜಾನ್ದಾಯ್ ತಮ್ಮ ಒತ್ತಡ ರಹಿತ,ಸುಸ್ಥಿರ ಬದುಕಿನ ಜೀವನಶೈಲಿಯಿಂದಾಗಿ ಜಗತ್ತಿನ ಗಮನಸೆಳೆದಿದ್ದಾರೆ.
ಪನ್ ಪನ್ ಸೆಂಟರ್ ಎಂಬ ಇಪ್ಪತ್ತು ಎಕರೆ ಪ್ರದೇಶದಲ್ಲಿ ಕೃಷಿ ಪ್ರಯೋಗನಿರತರಾಗಿರುವ ಜಾನ್ದಾಯ್ ತಮ್ಮ ಸರಳ ಒತ್ತಡರಹಿತ ಬದುಕಿನಿಂದಲೇ ಇಷ್ಟವಾಗುತ್ತಾರೆ.
`ಒಂದು ಹುಲ್ಲಿನ ಕ್ರಾಂತಿ' ಯ ಜಪಾನಿನ್ನ ಮಸನೊಬ ಫೊಕಾವಕ ಸಹಜ ಕೃಷಿಗೆ ಹೊಸ ತಿರುವು ನೀಡಿದಂತೆ ಒತ್ತಡ ರಹಿತ ಬದುಕಿಗೆ ಸರಳ ಸೂತ್ರಗಳನ್ನು ಹೇಳುವ ಮೂಲಕ ಸಂಚಲನ ಸೃಷ್ಠಿಸಿರುವ ಜಾನ್ದಾಯ್ ಅತಹದೊಂದು ಜೀವನ ಕ್ರಮದಿಂದಲೇ ಎಲ್ಲರ ಗಮನಸೆಳೆದಿದ್ದಾರೆ. ಮಣ್ಣಿನ ಮನೆಗಳ ನಿಮರ್ಾಣದಲ್ಲೂ ಪರಿಣತರಾಗಿರುವ ಇವರನ್ನು ಪ್ರೀತಿಯಿಂದ ಜೋ ಎಂದೇ ಕರೆಯಲಾಗುತ್ತದೆ.
ಇಂಟರ್ನೆಟ್ ಯುಟ್ಯೂಬ್ಗಳಲ್ಲಿ, ಟೆಡ್ (ಟಿಇಡಿ) ಟಾಕ್ಸ್ನಲ್ಲಿ ಜೋ ಅವರ ವಿಚಾರಧಾರೆಗಳಿಗೆ ಲಕ್ಷಾಂತರ ಮಂದಿ ಮಾರು ಹೋಗಿದ್ದಾರೆ. ಅವರಂತೆ ನಾವೂ ಯಾಕೆ ಒತ್ತಡರಹಿತ ಬದುಕು ಕಟ್ಟಿಕೊಳ್ಳಬಾರದು ಅನಿಸಿ ಸಹಜ ಕೃಷಿಯತ್ತ ಮುಖಮಾಡಿದ್ದಾರೆ. ಹೊಸ ತಲೆಮಾರಿನ ಯುವಕರಂತೂ ಜೋ ಅವರನ್ನು ಒಮ್ಮೆ ಭೇಟಿಮಾಡಿದರೆ ತಮ್ಮ ಜೀವನ ಸಾರ್ಥಕ ಎಂದೇ ಭಾವಿಸುತ್ತಾರೆ. ಅಷ್ಟರ ಮಟ್ಟಿಗೆ ಜೋ ಅವರ ಕೀತರ್ಿ ಹಬ್ಬಿದೆ. ಜೋ ಅವರಿಗೆ ಕೃಷಿ ಎಂದರೆ ಹೊಟ್ಟೆಪಾಡಿನ ವೃತ್ತಿಯಲ್ಲ,ಅದೊಂದು ಸಂಸ್ಕೃತಿ, ಜೀವನ ಧರ್ಮ.ನಿಸರ್ಗ ಧರ್ಮವನ್ನು ಗೌರವಿಸುತ್ತಲೇ ಸಹಜ ಸುಂದರ ಒತ್ತಡರಹಿತ ಬದುಕು ಕಟ್ಟಿಕೊಳ್ಳುವ ಕಾಯಕ.
ಇಂತಹ ಒಬ್ಬ ಅಪರೂಪದ ದಾರ್ಶನಿಕ,ಸಹಜ ಕೃಷಿಕ, ತಂಪಾದ ಮಣ್ಣಿನ ಮನೆಗಳನ್ನು ನಿಮರ್ಿಸುವ ಕಲೆಗಾರನನ್ನು ಥೈಲ್ಯಾಂಡ್ ದೇಶದ ಚಾಂಗ್ ಮಾಯಿ ನಗರದ ಸಮೀಪವಿರುವ `ಪನ್ ಪನ್ ಸೆಂಟರ್' ನಲ್ಲಿ ಭೇಟಿಮಾಡಿ ಇಡಿ ದಿನ ಅವರೊಂದಿಗಿದ್ದು ಅವರ ಜೀವನಾನುಭವಗಳನ್ನು ಕೇಳಿಸಿಕೊಳ್ಳುವ,ಸಂವಾದ ನಡೆಸುವ ಸುವರ್ಣ ಅವಕಾಶವೊಂದು ನನಗೆ ಒದಗಿಬಂದಿತ್ತು.
ವಿದೇಶ ಪ್ರವಾಸಗಳು ಹಲವು ಪಾಠ ಕಲಿಸುತ್ತವೆ.ಅಲ್ಲಿನ ಸಂಸ್ಕೃತಿ,ಆಹಾರ,ಜನರ ವರ್ತನೆ,ಬದುಕುವ ಕಲೆ ಪ್ರತಿಯೊಂದು ಅಚ್ಚರಿ !.ಈ ಬಾರಿ ಹನ್ನೆರಡು ಮಂದಿ ರೈತ ತಂಡದೊಂದಿಗೆ ನಾನು ಹೋಗಿ ಬಂದದ್ದು `ಪ್ಯಾರಡೈಸ್ ಆಫ್ ಅಥರ್್ ' ಎಂದೇ ಕರೆಯುವ ಥೈಲ್ಯಾಂಡ್ ದೇಶಕ್ಕೆ. ಹತ್ತು ದಿನಗಳ ಈ ಅರ್ಥಪೂರ್ಣ ಪ್ರವಾಸಕ್ಕೆ ಕಾರಣವಾದವರು `ಸಹಜ ಸಮೃದ್ಧ' ಸಾವಯವ ಕೃಷಿ ಬಳಗದ ಕೃಷ್ಣಪ್ರಸಾದ್ ಮತ್ತು ಗ್ರೀನ್ ನೆಟ್ ಆಗ್ಯರ್ಾನಿಕ್ ಸೆಂಟರ್ನ ಮೈಕೆಲ್.ನಮ್ಮವರೇ ಆದ ಬೆಳವಲ ಫೌಂಡೇಷನ್ ಸಂಸ್ಥಾಪಕ ರಾಮಕೃಷ್ಣಪ್ಪ.
ಥೈಲ್ಯಾಂಡ್ಗೆ ಹೋಗುತ್ತಿದ್ದೇನೆ ಎಂದಾಗ ಗೆಳೆಯರು ನಕ್ಕರು. ಥೈಲ್ಯಾಂಡ್ ಎಂದರೆ ಥೈ, ಮಸಾಜ್, ರಿಲ್ಯಾಕ್ಸ್ ಎಂಬ ಗೂಡಾರ್ಥಗಳು ಅವರ ಕಿರುನಗೆಯಲ್ಲಿ ಬೆರತಿದ್ದವು. ಸಹಜ ಸಮೃದ್ಧ ಬಳಗದ ಜೊತೆ ಕೃಷಿ ಅಧ್ಯಯನ ಪ್ರವಾಸ ಹೋಗುತ್ತಿರುವುದರಿಂದ ಅದೆಲ್ಲಕ್ಕಿಂತ ಭಿನ್ನವಾದ ಬದುಕನ್ನು ನೋಡುವ ಅವಕಾಶ ಸಿಗುವುದು ಗ್ಯಾರಂಟಿ ಎಂಬ ನಂಬಿಕೆಯಂತೂ ನನಗಿತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ. ವಿದೇಶಕ್ಕೆ ಹೋದವರಿಗೆ ಹಳ್ಳಿಗಳಿಗೆ ಹೋಗುವ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೊ ಗೊತ್ತಿಲ್ಲ. ಎಲ್ಲಾ ಮುಂದುವರಿದ ದೇಶಗಳಲ್ಲೂ ಅದೇ ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಸ್ತೆಗಳು, ಗ್ಲಾಸ್ ಹೌಸ್ಗಳು, ಕಣ್ಣಿಗೆ ಮುದನೀರುವ ರಮ್ಯ ಮನೋಹರ ಚಿತ್ರಣ. ಇದಕ್ಕಿಂತ ಭಿನ್ನವಾಗಿ ಆ ದೇಶದ ಹಳ್ಳಿಗಳ ರೈತರ ಮನೆಗಳಲ್ಲಿ ಉಳಿದುಕೊಂಡು ಅವರ ಬದುಕನ್ನು ಹತ್ತಿರದಿಂದ ನೋಡುವ ಅವರೊಂದಿಗೆ ಮಾತನಾಡುವ ಅನುಭವವೆ ಬೇರೆ. ಕೃಷಿ ,ಬೀಜ ಸಂರಕ್ಷಣೆ,ಮಾರುಕಟ್ಟೆ,ಭೂ ಒಡೆತನ,ಕೌಟಂಬಿಕ ಸಂಬಂಧ ಈ ಎಲ್ಲದ್ದರ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರಕಿತು.
ಕಾಂಬೋಡಿಯಾ ಮತ್ತು ಬಮರ್ಾ ದೇಶಕ್ಕೆ ಸನಿಹದಲ್ಲೇ ಇರುವ ಥೈಲ್ಯಾಂಡ್ ಭಾರತ ದೇಶದ ಸಿಕ್ಕಿಂಗೂ ತುಸು ದೂರದಲ್ಲೇ ಇದೆ. ಮಲೆನಾಡು,ಅರೆಮಲೆನಾಡು,ಒಣಭೂಮಿಗೆ ಸೇರಿದ ಮೂರು ರೀತಿಯ ಹವಾಮಾನವಿರುವ ಪ್ರದೇಶಗಳಿಂದ ಕೂಡಿದೆ.ಒಂದು ಭಾಗದಲ್ಲಿ ಅಕ್ಕಿ,ಬತ್ತ,ಕಬ್ಬು ಬೆಳೆದರೆ ಮತ್ತೊಂದು ಭಾಗದಲ್ಲಿ ತೋಟಗಾರಿಕೆ,ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಚನ್ನೈನಂತೆ ಹವಾಮಾನ ಹೊಂದಿರುವ ಚಾಂಗ್ ಮಾಯಿಯಲ್ಲಿ ಆಗಾಗ ದಿಢೀರ್ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳ್ಳುವುದು ಉಂಟು.
ಥೈಲ್ಯಾಂಡ್ ದೇಶದಲ್ಲೂ ರಾಸಾಯನಿಕ ಕೃಷಿಯ ದುಷ್ಪಾರಿಣಾಮಗಳ ಬಗ್ಗೆ ಜನರಿಗೆ ಅರಿವಾಗತೊಡಗಿದೆ. ಅತಿಯಾದ ರಾಸಾಯನಿಕ ಬಳಕೆಯಿಂದ ಅಡುಗೆ ಮನೆಯ ಆಹಾರ ಉತ್ಪನ್ನಗಳು ವಿಷಕಾರಿಯಾಗುತ್ತಿರುವುದು ಗೊತ್ತಾಗಿದೆ. 80 ರ ದಶಕದಿಂದ ಈಚೆಗೆ ಅಲ್ಲಿಯೂ ಸಾವಯವ ಕೃಷಿ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಎನ್ಜಿಒಗಳು, ರೈತರ ಸಹಾಕಾರ ಸಂಸ್ಥೆಗಳು ದೇಸಿ ಬೀಜೋತ್ಪಾದನೆ,ಸಾವಯವ ಕೃಷಿಗೆ ಪ್ರೋತ್ಸಾಹನೀಡುತ್ತಾ ಒಂದು ಚಳವಳಿಯಾಗಿ ರೂಪಿಸುತ್ತಿವೆ.
ಥೈಲ್ಯಾಂಡ್ನ ಸಾವಯವ ರೈತ ಮಾರುಕಟ್ಟೆಗಳು,ಮೌಲ್ಯವರ್ಧನೆ,ಸುಸ್ಥಿರ ವಾಹಿವಾಟನ್ನು ಕುರಿತು ಅಧ್ಯಯನಮಾಡಲು ಹತ್ತು ದಿನಗಳ ಕಾಲ ನಾವು ಚಾಂಗ್ಮಾಯಿ,ಬ್ಯಾಂಕಾಕ್,ಪಟ್ಟಾಯ ಮತ್ತು ಮೆಜೋ, ಮೇಥಾ ಎಂಬ ಹಳ್ಳಿಗಳಲ್ಲಿ ರೈತರ ತಾಕುಗಳು,ಮಾರುಕಟ್ಟೆಗಳಲ್ಲಿ ಸುತ್ತಾಡಿ ಕಲಿತ ಪಾಠಗಳು ಹಲವು.
ಅಲ್ಲಿನ ರೈತರ ಮನೆಗಳಲ್ಲಿ ಉಳಿದುಕೊಂಡಿದ್ದು,ಅವರ ತೋಟಗಳಲ್ಲಿ ಸುತ್ತಾಡಿದ್ದು,ಸಾವಯವ ಕೃಷಿಯ ಬಗ್ಗೆ ಅವರ ಬದ್ಧತೆ,ದೇಸಿ ಬೀಜ ಸಂರಕ್ಷಣೆಯಲ್ಲಿ ಅವರ ಕಾಳಜಿ,ಜೀವನದ ಬಗ್ಗೆ ಅವರ ಧೋರಣೆ ಪ್ರತಿಯೊಂದು ಮಹಾತ್ಮ ಗಾಂಧಿ ಪ್ರಣೀತ ಅರ್ಥಶಾಸ್ತ್ರದಿಂದ ಪ್ರೇರಣೆ ಪಡೆದಂತೆ ಇವೆ.ಸರಳತೆಯಲ್ಲಿ ಸೌಂದರ್ಯ ಕಂಡುಕೊಂಡ ಅವರ ಜೀವನ ದೃಷ್ಠಿ ನೋಡಿ ಗಾಂಧಿ ನಾಡಿನಲ್ಲಿ ಹುಟ್ಟಿದ ನಾವೇ ಕ್ಷಣನಾಚುವಂತಾಯಿತು.
ಮೇಥಾ ಎಂಬ ಸಾವಯವ ಗ್ರಾಮದಲ್ಲಿ ಭೇಟಿಯಾದ ಮಥನಾ ಎಂಬ ಹೆಣ್ಣುಮಗಳು ದೇಸಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡ ಪರಿ, ಅವರ ಕುಟುಂಬ ಸಮಗ್ರ ಕೃಷಿಯಲ್ಲಿ ಕಂಡುಕೊಂಡ ನೆಮ್ಮದಿ, ರೈತ ಸಮುದಾಯ ಒಗ್ಗಟ್ಟಾಗಿ ದುಡಿದರೆ ಹೇಗೆ ಆಥರ್ಿಕವಾಗಿ ಸಬಲರಾಗಬಹುದು ಎನ್ನುವುದಕ್ಕೆ ಸಾಕ್ಷಿಯಾದ  `ಮೇಥಾ ಕೆಫೆ' ರೆಸ್ಟೋರೆಂಟ್, ಬ್ಯಾಂಕಾಕ್ನಲ್ಲಿ ದುಡಿದು ಸಾಕಷ್ಟು ಹಣಗಳಿಸಿದರೂ ನೆಮ್ಮದಿ ಕಾಣದೆ ಮೆಜೋ ಹಳ್ಳಿಗೆ ಬಂದು `ಅಥರ್್ ಹೋಂ' ಎಂಬ ಚೆಂದದ ರೆಸಾಟರ್್ ಕಟ್ಟಿಕೊಂಡು ಪ್ರಕೃತಿಯ ಜೊತೆ ಒಂದಾಗಿ ಫಮರ್ಾಕಲ್ಚರ್ ಪಾಠ ಕಲಿಸುವ ತೊಂಗಾಬಾಯ್ ಎಂಬ ಹೆಣ್ಣುಮಗಳ ಹಸಿರು ಪ್ರೀತಿ ಇವೆಲ್ಲ ಹೊಸ ಆಲೋಚನೆಗಳಿಗೆ ಕಾರಣವಾದವು.
ಕಳೆದ ಒಂದು ವರ್ಷದಿಂದ ಕೃಷಿಯ ವಿಭಿನ್ನ ಸಾಧ್ಯತೆಗಳನ್ನು ಹುಡುಕಿಕೊಂಡು ಅಲೆಯುತ್ತಿರುವ ನನಗೆ ಜಾನ್ ಜಾನ್ದಾಯ್ ಅವರನ್ನು ಭೇಟಿಮಾಡಿ ಅವರ ಮಾತುಗಳನ್ನು ಕೇಳಿಸಿಕೊಂಡಾಗ `ಕೃಷಿಗಿಂತ ಶ್ರೇಷ್ಠವಾದ ವೃತ್ತಿ ಬೇರೊಂದಿಲ್ಲ.ಸ್ವಾವಲಂಬನೆ,ಸ್ವಾತಂತ್ರ,ಆರೋಗ್ಯ,ನೆಮ್ಮದಿಯ ಕನಸು ಕಾಣುವವರಿಗೆ, ಸೃಜನಶೀಲತೆಗೆ ಸಾಣಿಹಿಡಿಯಲು ಬಯಸುವವರಿಗೆ ಕೃಷಿ ಬಿಟ್ಟರೆ ಬೇರೆ ಯಾವ ವೃತ್ತಿಯಿಂದಲ್ಲೂ ಸಾಧ್ಯವಿಲ್ಲ' ಎನಿಸಿತು.
ಪನ್ ಪನ್ ಸೆಂಟರ್ : ಉಣಲು ವಿಷಮುಕ್ತ ಆಹಾರ,ವಾಸಕ್ಕೆ ತಂಪಾದ ಮಣ್ಣಿನ ಮನೆ,ಸುತ್ತಲ್ಲೂ ಹಸಿರು ತುಂಬಿದ ಮರಗಿಡಗಳು,ತೋಟದ ಸಣ್ಣ ಸಣ್ಣ ತಾಕುಗಳಲ್ಲಿ ಅಡುಗೆ ಮನೆಗೆ ಬೇಕಾದ ಸಾವಯವದಲ್ಲಿ ಬೆಳೆದ ವಿವಿಧ ಬಗೆಯ ಸೊಪ್ಪು ತರಕಾರಿಗಳು.ದಿನದಲ್ಲಿ ಒಂದೆರಡು ಗಂಟೆ ಮಾತ್ರ ಕೃಷಿ ಕೆಲಸಕ್ಕೆ ಮೀಸಲು.ಉಳಿದ ಸಮಯದಲ್ಲಿ ದೇಸಿ ಬೀಜೋತ್ಪೋದಾನೆ,ಸಂಗೀತ ಆಸ್ವಾದನೆ,ಪುಸ್ತಕ ಓದು,ಕರಕುಶಲ ಕೆಲಸ,ಫೋಟೊಗ್ರಫಿ... ಹೀಗೆ ತಮಗಿಷ್ಟವಾದ ಸೃಜನಶೀಲ ಚಟುವಟಿಕೆಗಳಲ್ಲಿ ನಿರತವಾಗಿರುವ ಜನ. ಒಟ್ಟಿನಲ್ಲಿ ಅವರದು ಒತ್ತಡ ರಹಿತ,ಸ್ವಾವಲಂಬನೆಯ ಸ್ವಾತಂತ್ರ ಬದುಕು. ಇಂತಹ ಸುಂದರ ಬದುಕು ಯಾರಿಗೆ ತಾನೇ ಬೇಡ ಹೇಳಿ. ಇಂತಹ ಬದಕನ್ನು ತಮ್ಮದಾಗಿಸಿಕೊಳ್ಳಲು ಎಲ್ಲರಿಗೂ ಆಸೆ ಇರುತ್ತದೆ.
ಭಾರತ ಸೇರಿದಂತೆ ಅಮೇರಿಕಾ,ಜಪಾನ್,ಚೀನಾ,ರಷ್ಯಾ ಮುಂತಾದ ದೇಶಗಳ ಹೊಸ ತಲೆಮಾರಿನ ಯುವಕರು ಇಂತಹ ಒತ್ತಡರಹಿತ ಸುಂದರ ಬದುಕಿನ ಕನಸು ಹೊತ್ತು ಕೃಷಿಯತ್ತ ಮುಖಮಾಡುತ್ತಿದ್ದಾರೆ. ಇಂತಹ ಹೊಸ ತಲೆಮಾರಿನ ಯುವಕರ ಆದರ್ಶ,ಸ್ಫೂತರ್ಿ ಜೋ . ತಮ್ಮ ಪತ್ನಿ ಪೆಗ್ಗಿ ರೀಂಟ್ಸ್ ಮತ್ತು ಮಕ್ಕಳೊಂದಿಗೆ  ಬೆಟ್ಟಕಣಿವೆಗಳ ನಡುವೆ ಪ್ರಕೃತಿಯ ಮಡಿಲಲ್ಲಿ ಸಾವಯವ ಕೃಷಿ,ಮಣ್ಣಿನ ಮನೆಗಳ ನಿಮರ್ಾಣ,ದೇಸಿ ಬೀಜೋತ್ಪಾದನೆ ಸೇರಿದಂತೆ ಹಲವು ಸದಭಿರುಚಿಯ ಸೃಜನಶೀಲ ಚಟುವಟಿಕೆಗಳಲ್ಲಿ ಪನ್ ಪನ್ ಸೆಂಟರ್ ಎಂಬ ಕೃಷಿ ಪ್ರಯೋಗಶಾಲೆಯಲ್ಲಿದ್ದಾರೆ.
ಇವರನ್ನು ಕಂಡಾಗ ನನಗೆ ಎಚ್ಡಿ ಕೋಟೆಯ ಸಾವಯವ ಕೃಷಿಕ ವಿವೇಕ್ ಕಾರ್ಯಪ್ಪ,ಜೂಲಿ ಕಾರ್ಯಪ್ಪ ದಂಪತಿ ನೆನಪಾದರು. ಶಿವನಂಜಯ್ಯ ಬಾಳೆಕಾಯಿ, ಹೊಸಹಳ್ಳಿಯ ಕುಳ್ಳೇಗೌಡ, ದೇವಗಳ್ಳಿಯ ಶಂಕರೇಗೌಡ ಎಲ್ಲರೂ ಕಣ್ಣಮುಂದೆ ಮೆರವಣಿಗೆ ಹೊರಟರು. ನಮ್ಮವರೆಲ್ಲ ವ್ಯಯಕ್ತಿಕವಾಗಿ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿ ಸರಳವಾಗಿ ಬದುಕುತ್ತಿದ್ದರೆ ಜೋ ಉದಾತ್ತ ಬದುಕೊಂದನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸದಲ್ಲಿ ನಿರತನಾಗಿರುವ ಯೋಗಿಯಂತೆ ಕಾಣುತ್ತಾರೆ.  
ಭ್ರಮೆಯ ಬೆನ್ನೇರಿ : ಮೂಲತಃ ಕೃಷಿ ಕುಟುಂಬದಿಂದಲೇ ಬಂದ ಜೋ ಬಾಲ್ಯದಲ್ಲಿ ಸಂತೋಷವಾಗಿಯೇ ಇದ್ದರೂ,ಹಿರಿಯರು ಮನೆಗೆ ಬೇಕಾದ ವೈವಿಧ್ಯಮಯ ಆಹಾರವನ್ನು ಬೆಳೆಯುತ್ತಿದ್ದರು.ಬೀಜ,ಗೊಬ್ಬರದಲ್ಲಿ ಸ್ವಾವಲಂಭಿಗಳಾಗಿದ್ದರು. ಹಳ್ಳಿಗಳಿಗೆ ಟಿವಿಗಳು ಬಂದ ಮೇಲೆ "ರೈತರನ್ನು ನೀನು ಬಡವ.ನಿನ್ನ ಬಳಿ ಆಸೆಗಳನ್ನು ಪೂರೈಸಿಕೊಳ್ಳುವಷ್ಟು ಹಣ ಇಲ್ಲ.ನಗರಗಳಿಗೆ ಹೋಗಿ ದುಡಿದು ಹಣ ಸಂಪಾದಿಸಿ ಶ್ರೀಮಂತನಾಗು. ಆಸೆಗಳನ್ನು ತೀರಿಸಿಕೊ' ಎಂದು ಹೇಳತೊಡಗಿದವು.
ಟಿವಿ ಮಾಧ್ಯಮಗಳು ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದು ನಂಬಿದ ಜೋ ಹಳ್ಳಿಬಿಟ್ಟು ಬ್ಯಾಂಕಾಕ್ ನಗರಕ್ಕೆ ಹೋಗಿ,ವಿದ್ಯಾಭ್ಯಾಸ ಮಾಡಿ ಖಾಸಗಿ ಕಂಪನಿ ಸೇರಿ ಏಳು ವರ್ಷ ದುಡಿದರು.ಎಷ್ಟೇ ಹಣ ಸಂಪಾದಿಸಿದರು ನೆಮ್ಮದಿ ಮಾತ್ರ ಸಿಗಲಿಲ್ಲ. ಮಾಧ್ಯಮಗಳು ಹೇಳುತ್ತಿರುವುದು ಭ್ರಮೆ,ಸುಳ್ಳುಗಳ ಕಂತೆ ಎನ್ನುವುದು ಗೊತ್ತಾಯಿತು. ನಗರದ್ದು ಒತ್ತಡದ ಬದುಕು.ಮಾನವೀಯತೆ,ಕರುಣೆಗಳಿಗೆ ಅಲ್ಲಿ ಜಾಗವಿಲ್ಲ.ಪರಸ್ಪರ ಒಬ್ಬರನ್ನೊಬ್ಬರು ನಂಬಲಾಗದ ಸ್ಥಿತಿ. ತಿನ್ನುವ ಆಹಾರ ಕೂಡ ವಿಷ.ಸ್ವಾತಂತ್ರವಿಲ್ಲದ ಸದಾ ಒತ್ತಡದಲ್ಲೇ ಬೇರೆಯವರ ಆಸೆಪೂರೈಸಲು ಗುಲಾಮರಾಗಿ ದುಡಿಯಬೇಕಾದ ಪರಾವಲಂಭಿ ಬದುಕು. ಇದರಿಂದ ಪಾರಾಗಿ ಸ್ವಾಂತಂತ್ರವಾಗಿ ಜೀವಿಸಲು ನಿರ್ಧರಿಸಿದ ಜೋ ಮರಳಿ ಹಳ್ಳಿಗೆ ಬಂದರು. ಅಂತಹ ಒಂದು ನಿಧರ್ಾರ ಜೋ ಅವರನ್ನು ಹೊಸ ತಲೆಮಾರಿನ ಯುವಕರ ರೋಲ್ ಮಾಡೆಲ್ ಆಗಿಸಿದೆ. ಪ್ರಪಂಚದ ವಿವಿಧ ದೇಶಗಳ ಜನ ಈಗ ಜೋ ಅವರ ವಿಚಾರಧಾರೆಗಳನ್ನು ಕೇಳಲು,ಸುಸ್ಥಿರ ಬದುಕಿನ ಬಗ್ಗೆ ತರಬೇತಿ ಪಡೆಯಲು ಥೈಲ್ಯಾಂಡ್ ದೇಶದ ಮೆಜೋ ಎಂಬ ಪುಟ್ಟ ಹಳ್ಳಿಯಲ್ಲಿರುವ `ಪನ್ ಪನ್ ಸೆಂಟರ್' ಅನ್ನು ಗೂಗಲ್ನಲ್ಲಿ ಹುಡುಕಿ ಹೋಗುತ್ತಾರೆ.
1997 ರಲ್ಲಿ ಕೃಷಿಕನಾಗಲು ನಿರ್ಧರಿಸಿ ಮೆಜೋಹಳ್ಳಿಗೆ ಜೋ ಕಾಲಿಟ್ಟಾಗ ಅದೊಂದು ಮರಗಿಡಗಳಿಲ್ಲದ ಬೆಂಗಾಡು ಪ್ರದೇಶ. "ಸಮಾಜ ಹೇಳಿದಂತೆ ನಾನು ಕೇಳಬೇಕಿಲ್ಲ. ನನ್ನ ಇಚ್ಛೆ ಬಂದಂತೆ ಬದುಕುವ ಸ್ವಾತಂತ್ರ ನನಗಿದೆ. ಯಾವುದು ಬೇಕು,ಯಾವುದು ಬೇಡ ಎನ್ನುವ ಆಯ್ಕೆಯ ಸ್ವಾತಂತ್ರ್ಯ ನನ್ನದೇ ಆಗಿರಬೇಕು" ಎಂಬ ನಿಧರ್ಾರದೊಂದಿಗೆ ಹಳ್ಳಿಗೆ ಮರಳಿದ ಜೋ ಕೃಷಿ ಆರಂಭಿಸಿದಾಗ ಅಲ್ಲಿನ ಜನ ಅವರನ್ನು ಅರೆಹುಚ್ಚ ಎಂದರು. ಮೊದಲ ದಿನ ತಮ್ಮ ಕನಸಿನ ಜಮೀನಿನಲ್ಲಿ ಒಬ್ಬರೇ ಇಡೀ ರಾತ್ರಿ ಕಳೆದರು. ಎರಡನೇ ದಿನ ಆಕರ್ಿಟ್ಯಕ್ಟ್ ಒಬ್ಬ ಆರು ತಿಂಗಳು ನಿನ್ನ ಜೊತೆ ನಾನೂ ಕೆಲಸಮಾಡುತ್ತೇನೆ ಎಂದು ಜೊತೆಯಾದ.ತಮಾಶೆ ಎಂದರೆ ಹಾಗೆ ಆರು ತಿಂಗಳು ಇರಲು ಬಂದ ಆಕರ್ಿಟೆಕ್ಟ್ ಇಂದಿಗೂ ಜೋ ಅವರೊಂದಿಗೆ ಪನ್ ಪನ್ ಸೆಂಟರ್ನ ಒಬ್ಬ ಸದಸ್ಯನಾಗಿ ಇದ್ದಾನೆ.ಈಗ ಅಲ್ಲಿ 60 ಕುಟುಂಬಗಳು ಸಹಕಾರಿ ತತ್ವದಡಿ ಸಮುದಾಯ  ಆಧರಿತ ಕೃಷಿ ಮಾಡುತ್ತಾ ಆನಂದವಾಗಿದ್ದಾರೆ. ಅರವತ್ತು ಕುಟುಂಬಗಖಿಗೂ ಒಂದೇ ಅಡುಗೆ ಮನೆ. ಸರ್ವರಿಗೂ ಸಮಬಾಳು,ಸಮಪಾಲು. ಪ್ರತಿನಿತ್ಯ ಒಂದೆರಡು ಗಂಟೆಗಳ ಕಾಲ ಕೃಷಿ ಕೆಲಸಮಾಡುವ ಅವರು ವಿರಾಮ ಕಾಲವನ್ನು ತಮ್ಮಿಚ್ಛೆಯಂತೆ ಕಳೆಯುತ್ತಾರೆ. 
ಸಹಜ ಕೃಷಿ, ದೇಸಿ ಬೀಜೋತ್ಪಾದನೆ,ಮಣ್ಣಿನ ಮನೆಗಳ ನಿಮರ್ಾಣ ಕಲೆ ಕಲಿಸುವ ತರಬೇತಿ ಶಿಬಿರಗಳು 2002 ರಿಂದ ನಡೆಯುತ್ತಿದ್ದು 2003 ರಲ್ಲಿ ಪನ್ ಪನ್ ಸೆಂಟರ್ ಆರಂಭಿಸಲಾಗಿದೆ. ತಿಂಗಳಿಗೆ ಪನ್ ಪನ್ ಸೆಂಟರ್ನಲ್ಲಿ ಎರಡು ತರಬೇತಿ ಶಿಬಿರಗಳು ನಡೆಯುತ್ತವೆ.ಕನಿಷ್ಠ 60 ಮಂದಿ ಭಾಗವಹಿಸಿ ಸುಸ್ಥಿರ ಸ್ವಾವಲಂಬನೆಯ ಖುಷಿಯ ಕೃಷಿ ಸಂಸ್ಕೃತಿ ಕಲಿಯುತ್ತಾರೆ.
ಮಾರುಕಟ್ಟೆ ಸೃಷ್ಠಿ : ಭಾರತ ದೇಶದಂತೆ ರೈತರು ಬೆಳೆದ ಉತ್ಪನ್ನಗಳಿಗೆ ಥೈಲ್ಯಾಂಡ್ನಲ್ಲೂ ಮಾರುಕಟ್ಟೆಯ ಸಮಸ್ಯೆ ಇದ್ದೇ ಇದೆ.ಅದಕ್ಕೆ ಅವರು ಫಾರ್ಮರ್ ಮಾಕರ್ೆಟ್ ಎಂಬ ಸಮುದಾಯ ಆಧರಿತ ಸಣ್ಣ ಸಣ್ಣ ಸಾವಯವ ಮಾರುಕಟ್ಟೆಗಳನ್ನು ನಡೆಸುವ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಪನ್ ಪನ್ ಸೆಂಟರ್ ವತಿಯಿಂದ ಕಂಪನಿಯೊಂದನ್ನು ಶುರುಮಾಡಲಾಗಿದೆ. ರೈತರು,ಗ್ರಾಹಕರು,ಮಾರಾಟಗಾರರು,ಮೌಲ್ಯವರ್ಧನೆ ಮಾಡುವ ಕೈಗಾರಿಕೋದ್ಯಮಿಗಳು ಈ ಕಂಪನಿಗೆ ಷೇರುದಾರರು. ಸಹಕಾರ ತತ್ವದಡಿ ಕೆಲಸ ನಿರ್ವಹಿಸುವ ಈ ಕಂಪನಿ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುತ್ತದೆ.ಸೆಂಟರ್ನಿಂದ ಚಾಂಗ್ಮಾಯಿ ನಗರದಲ್ಲಿ ಪನ್ ಪನ್ ಆಗ್ಯರ್ಾನಿಕ್ ರೆಸ್ಟೋರೆಂಟ್ ಕೂಡ ಇದೆ.
ಇಲ್ಲಿನ ರೈತರು ಮೊದಲು ತಮಗೆ ಬೇಕಾದ ವಿಷಮುಕ್ತ ಆಹಾರವನ್ನು ಬೆಳೆದುಕೊಳ್ಳಲು,ದೇಸಿ ಬೀಜೋತ್ಪಾದನೆ ಮಾಡಲು ಆದ್ಯತೆ ನೀಡುತ್ತಾರೆ. ಹೆಚ್ಚಾದ ಉತ್ಪನ್ನವನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಇರುವ ಭೂಮಿಯನ್ನು ವಿಭಾಗಮಡಿಕೊಂಡು ವಾಷರ್ಿಕವಾಗಿ ಹಣ ತರುವ ತೋಟಗಾರಿಕಾ ಹಣ್ಣಿನ ಬೆಳೆಗಳನ್ನು ಬೆಳೆಯಲು,ಅರಣ್ಯಧಾರಿತ ಬೇಸಾಯ ಮಾಡಲು ಮೀಸಲಿಟ್ಟರೆ ಕಡಿಮೆ ಪ್ರದೇಶದಲ್ಲಿ ವೈವಿಧ್ಯಮಯ ವಿವಿಧ ತರಕಾರಿ ಬೆಳೆದು ಪ್ರತಿವಾರ ಆದಾಯ ಬರುವಂತೆ ಬೆಳೆ ಪದ್ಧತಿ ರೂಢಿಸಿಕೊಂಡಿದ್ದಾರೆ.
ಪನ್ ಪನ್ ಸೆಂಟರ್ನಲ್ಲಿ ನಡೆಯುವ ತರಬೇತಿ ಶಿಬಿರಗಳಲ್ಲಿ ರೈತರಷ್ಟೇ ಅಲ್ಲದೆ ಬ್ಯಾಂಕಾಕ್,ಚಾಂಗ್ಮಾಯಿ ನಗರದ ಶ್ರೀಮಂತ ವರ್ಗದ ಗ್ರಾಹಕರು ಭಾಗವಹಿಸಿ ತಾವು ಸೇವಿಸುವ ಆಹಾರದ ಗುಣಮಟ್ಟದ ಆಹಾರದ ಉತ್ಪಾದನೆ ಬಗ್ಗೆ ತಿಳಿದುಕೊಳ್ಳುತ್ತಾರೆ.ಅವರೂ ಕಂಪನಿಯ ಷೇರುದಾರರಾಗಿದ್ದಾರೆ.
ಮರಗಿಡ ಬೆಳೆಸಿ : "ಹಣವನ್ನು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವ ಒಂದು ಸಾಧನದಂತೆ (ಟೂಲ್) ಬಳಸಿ. ಹಣ ನಿಮಗೆ ಆರೋಗ್ಯ,ನೆಮ್ಮದಿ,ರಕ್ಷಣೆ ತಂದು ಕೊಡಲಾರದು.ಮರಗಿಡ ಪ್ರಕೃತಿಯಿಂದ ಅಂತಹದ್ದನ್ನು ನಿರೀಕ್ಷೆ ಮಾಡಬಹುದು.ಪ್ರಾಕೃತಿಕ ಸಂಪನ್ಮೂಲಗಳು ಎಲ್ಲದಕ್ಕಿಂತ ಹೆಚ್ಚು ರಕ್ಷಣೆ ನೀಡುತ್ತವೆ. ನಿಮ್ಮಲ್ಲಿ ಹೆಚ್ಚು ಹಣವಿದ್ದರೆ ಅದನ್ನು ಬ್ಯಾಂಕ್ನಲ್ಲಿ ಠೇವಣಿ ಇಡಬೇಡಿ. ಒಂದೆರಡು ಎಕರೆ ಜಮೀನು ಖರೀದಿಸಿ.ವಿಷಮುಕ್ತ ಆಹಾರ ಬೆಳೆಯಿರಿ.ಮರಗಿಡ ನೆಡಿ.ಅವುಗಳೆ ಮುಂದೆ ಹೆಮ್ಮರವಾಗಿ ಬೆಳೆದು ಬ್ಯಾಂಕ್ ಬಡ್ಡಿದರಕ್ಕಿಂತಲ್ಲೂ ಹೆಚ್ಚಿನ ಆದಾಯ ತಂದುಕೊಡುತ್ತವೆ.ಸಂಪಾದಿಸುವ ಹಣವನ್ನು ಹೆಚ್ಚಾಗಿ ಜ್ಞಾನಾರ್ಜನೆಗೆ ಖಚರ್ುಮಾಡಿ. ಹಣದ ಹಿಂದೆ ಓಡಬೇಡಿ.ಸರಳವಾಗಿ ಬದುಕಿ ಉದಾತ್ತವಾಗಿ ಚಿಂತಿಸಿ" ಎಂದು ಹೇಳುವ ಜೋ ಮಾತುಗಳು ಗಾಂಧಿ ವಿಚಾರಧಾರೆಗೆ ಹತ್ತಿರವಾಗಿವೆ.
ಮಣ್ಣಿನ ಮನೆಗಳ ನಿಮರ್ಾಣ : ಈಶಾನ್ಯ ಥೈಲ್ಯಾಂಡ್ನಲ್ಲಿ ಮೊದಲ ಬಾರಿಗೆ ಸರಳ,ಸುಲಭ ಮತ್ತು ಕಡಿಮೆ ವೆಚ್ಚದ ಆಕರ್ಷಕ ಮಣ್ಣಿನ ಮನೆಗಳ ನಿಮರ್ಾಣವನ್ನು ಆರಂಭಿಸಿದ ಜೋ ಈಗ ಮಣ್ಣಿನ ಮನೆಗಳ ಬಿಲ್ಡರ್ ಎಂದೇ ಪ್ರಖ್ಯಾತರಾಗಿದ್ದಾರೆ. ಬಿಸಿಲಿನಲ್ಲಿ ತಂಪಾಗಿರುವ,ಚಳಿಗಾಲದಲ್ಲಿ ಬೆಚ್ಚಾಗಿಡುವ ಆಕರ್ಷಕ ಮಣ್ಣಿನ ಮನೆಗಳ ನಿಮರ್ಾಣ ಈಗ ಅಲ್ಲಿ ಜನಪ್ರೀಯವಾಗಿದೆ.
ಅಂದಹಾಗೆ ಜೋ ಇದೇ ಏಪ್ರಿಲ್ ತಿಂಗಳ ಹದಿನೈದನೇ ತಾರೀಖಿನಿಂದ ಮೂರು ದಿನಗಳ ಕಾಲ ಇಲ್ಲಿನ ರೈತರ ಬದುಕು ಮತ್ತು ಕೃಷಿಯ ಬಗ್ಗೆ ತಿಳಿದುಕೊಳ್ಳಲು ಮೈಸೂರಿಗೆ ಬರುವುದಾಗಿ ತಿಳಿಸಿದ್ದಾರೆ. ಜೋ ಬಂದಾಗ  ಇಲ್ಲಿನ ರೈತರೊಂದಿಗೆ ಅರ್ಥಪೂರ್ಣವಾದ ಸಂವಾದ ಮತ್ತು ಬೀಜಮೇಳ ನಡೆಸುವ ಬಗ್ಗೆ ಸಹಜ ಸಮೃದ್ಧ ಬಳಗದ ಕೃಷ್ಣಪ್ರಸಾದ್ ಆಲೋಚನೆ ಮಾಡುತ್ತಿದ್ದಾರೆ.
ಜೋ ಅವರ ಜೀವನ ಶೈಲಿಯಿಂದ ಪ್ರೇರಣೆಪಡೆದು ಮೆಜೋ ಹಳ್ಳಿಯಲ್ಲೇ ಎರಡು ಎಕರೆ ಪ್ರದೇಶದಲ್ಲಿ `ಅಥರ್್ಹೋಂ' ಎಂಬ ಪರಿಸರಪೂರಕ ರೆಸಾಟರ್್ ನಿಮರ್ಾಣ ಮಾಡಿರುವ ತೊಂಗಬಾಯ್ ಎಂಬ ಮಹಿಳೆ ಕೂಡ ಅಲ್ಲೀಗ ಹೊಸ ತಲೆಮಾರಿನ `ಐಕಾನ್' ಆಗಿದ್ದಾರೆ. 
ಸಂಪೂರ್ಣ ಮಣ್ಣಿನ ಮನೆಗಳಿಂದಲೇ ಕೂಡಿರುವ `ಅಥರ್್ಹೋಂ' ನಲ್ಲಿ ಅತಿಥಿಗಳಿಗೆ ಸಾವಯವ ಕೃಷಿ,ಫಮರ್ಾಕಲ್ವರ್ ಕುರಿತು ಪರಿಚಯಿಸುವ ಉಪನ್ಯಾಸಗಳು,ತರಬೇತಿಗಳು ನಡೆಯುತ್ತವೆ. ಥೈಲ್ಯಾಂಡಿನ ಹೊಸ ತಲೆಮಾರಿನ ಐಟಿಬಿಟಿ ಯುವಕರು,ಯುವತಿಯರು ಹೆಚ್ಚಾಗಿ ಜೋ ಅವರ ಚಿಂತನೆಗಳಿಗೆ ಮಾರುಹೋಗಿ ಮರಳಿ ಹಳ್ಳಿಗೆ ಬಂದು ಕೃಷಿಕರಾಗುತ್ತಿರುವುದು ಆ ದೇಶದಲ್ಲಿ ಸಂಚಲನ ಉಂಟುಮಾಡಿದೆ. ಒತ್ತಡರಹಿತ. ಆರೋಗ್ಯಕರ ಬದುಕಿಗೆ ಕೃಷಿ ಶ್ರೇಷ್ಠ ವೃತ್ತಿ ಎಂಬ ಮನೋಭಾವ ಬೆಳೆಯುತ್ತಿದೆ.ಅದೊಂದು ಚಳವಳಿಯಾಗಿ ರೂಪುಗೊಳ್ಳುತ್ತಿದೆ.

ಸೋಮವಾರ, ಫೆಬ್ರವರಿ 5, 2018

 ರೈತರಿಗೆ ಸ್ವಾಭಿಮಾನ ಕಲಿಸಿದ `ಹಸಿರು ಸೇನಾನಿ'ಯಸ್ಮರಣೆ

# ಜನತಾ ವಿಶ್ವವಿದ್ಯಾನಿಲಯದ ಮಹಾಗುರು # ರಾಜಕೀಯ,ಸಾಂಸ್ಕೃತಿಕ ಪ್ರಜ್ಞೆ ರೂಪಿಸಿದ ಪ್ರೊಫೆಸರ್

2014 ಫೆಬ್ರವರಿ 3. ರೈತ ಚೇತನಾ, ಹಸಿರು ಸೇನಾನಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಣ್ಮರೆಯಾದ ದಿನ.ಅವರು  ನಮ್ಮನಗಲಿ ಹದಿನಾಲ್ಕು ವರ್ಷಗಳಾದವು.ಪ್ರೊಫೆಸರ್ ಅವರಂತಹ ಪ್ರಖರ ರೈತಪರ ಚಿಂತಕ,ಹೋರಾಟಗಾರ ಮತ್ತೊಬ್ಬ ಬರಲಿಲ್ಲ. ಆದರೆ ಅವರ ರೈತಪರ ಚಿಂತನೆಗಳು,ಅವರು ಹಾಕಿಕೊಟ್ಟ ಹೋರಾಟದ ಮಾರ್ಗ,ರೈತ ಸಮುದಾಯಕ್ಕೆ ಕಲಿಸಿದ ಸ್ವಾಭಿಮಾನದ ಪಾಠ,ಜಾಗತೀಕರಣ ಮತ್ತು ಕುಲಾಂತರಿ ತಳಿಗಳಿಂದ ಭವಿಷ್ಯದಲ್ಲಿ ಕೃಷಿಗೆ ಎದುರಾಗಬಹುದಾದ ಆತಂಕಗಳ ಬಗ್ಗೆ ಅವರಿಗಿದ್ದ ದಾರ್ಶನಿಕ ಮುನ್ನೋಟ ಅವರನ್ನು ಸದಾ ಜೀವಂತವಾಗಿಟ್ಟಿವೆ.
ರೈತ ಎಂದರೆ ಭಾರತ : ಭಾರತ ಎಂದರೆ ರೈತ. ರೈತರು ಸಾಲಗಾರರಲ್ಲ ಸರಕಾರವೇ ಬಾಕಿದಾರ. ರೈತರಿಗೆ ಸಾಲಬೇಡ : ಬೆಳೆಗಳಿಗೆ ನ್ಯಾಯವಾದ ಬೆಲೆ ಬೇಕು.ನಗರದ ಆಡಂಬರದ ಜೀವನ ನಿಲ್ಲಬೇಕು: ಹಳ್ಳಿಗಳ ಅಭಿವೃದ್ಧಿ ಬೇಕು.ದೊಡ್ಡ ಕೈಗಾರಿಕೆ ಸಾಕು : ಗ್ರಾಮ ಕೈಗಾರಿಕೆ ಬೇಕು.ದೊಡ್ಡ ನೀರಾವರಿ ಸಾಕು: ಸಣ್ಣ ನೀರಾವರಿ ಬೇಕು. ಹೀಗೆ ನೂರಾರು ರೈತಪರವಾದ ಘೋಷಣೆಗಳೊಂದಿಗೆ ರೈತರಲ್ಲಿ ಚೈತನ್ಯ ತುಂಬಿ,ಆತ್ಮವಿಶ್ವಾಸ ಮೂಡಿಸಿ,ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದನ್ನು ಕಲಿಸಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಸಂಗಾತಿಗಳು ಹೋರಾಟದ ಹಾದಿಯಲ್ಲಿ ಚೆದುರಿಹೋದದ್ದು ಕನ್ನಡನಾಡಿನ ರೈತರ ದರ್ೌಭಾಗ್ಯ. 
ಈಗಲಾದರೂ ಪ್ರೊ.ಎಂಡಿಎನ್ ಚಿಂತನೆಗಳಿಂದ ರೂಪಗೊಂಡು ರೈತನಾಯಕರಾದವರು ಹೊಸ ಆಲೋಚನೆಗಳೊಂದಿಗೆ, ರೈತಚಳವಳಿಯನ್ನು ರಚನಾತ್ಮಕವಾಗಿ ಮರಳಿಕಟ್ಟುವ,ತಿದ್ದುವ ಕೆಲಸಕ್ಕೆ ಮುಂದಾಗಬೇಕು.
"ನಂಜುಂಡಸ್ವಾಮಿ ಅವರ ಜೊತೆಜೊತೆಗೆ ರೈತಸಂಘ ಕಟ್ಟಿದ ಎನ್.ಡಿ.ಸುಂದರೇಶನ್,ಎಚ್.ಎಸ್.ರುದ್ರಪ್ಪ,ಬಾಬಾಗೌಡ ಪಾಟೀಲ,ಬಸವರಾಜ ತಂಬಾಕೆ,ಶೇಷರೆಡ್ಡಿ,ಕೆ.ಎಸ್.ಪುಟ್ಟಣ್ಣಯ್ಯ,ಕೋಡಿಹಳ್ಳಿ ಚಂದ್ರಶೇಖರ್,ಬಸವರಾಜಪ್ಪ,ಕಡಿದಾಳು ಶಾಮಣ್ಣ,ಕೆ.ಟಿ.ಗಂಗಾಧರ್ ಮುಂತಾದ ನೂರಾರು ನಾಯಕರ,ಲಕ್ಷಾಂತರ ಕಾರ್ಯಕರ್ತರ ಶ್ರಮ ವ್ಯರ್ಥವಾಗಲು ಈ ನಾಡು ಬಿಡಬಾರದು.ಇವತ್ತಿಗೂ ಪ್ರಜ್ಞಾವಂತರನ್ನು,ನಾಯಕತ್ವ ವಹಿಸಬಲ್ಲ ಸೂಕ್ಷ್ಮಜ್ಞರಾದ ತರುಣರನ್ನು ಅಧಿಕಾರ ರಾಜಕಾರಣಕ್ಕಿಂತ ಭಿನ್ನವಾದ ನಿಮರ್ಾಣಾತ್ಮಕ ರಾಜಕರಣದ ಕಡೆ ಸೆಳೆಯುವ ಶಕ್ತಿ ರೈತ ಚಳವಳಿಗೆ ಇದೆ. ನಾಯಕತ್ವದ ಕಾತರವುಳ್ಳ ಯುವಕರನ್ನು ರಾಜಕೀಯ ಪಕ್ಷಗಳ ಭ್ರಷ್ಟ ರಾಜಕಾರಣ ಹಾಗೂ ಕ್ರೂರವಾದ ಕೋಮುವಾದಿ ರಾಜಕಾರಣ ಸುಲಭವಾಗಿ ಸೆಳೆದುಕೊಳ್ಳಬಲ್ಲದು.ಅಂಥ ಯುವಕರನ್ನು ರೈತರ ಹಕ್ಕುಗಳ ಹೋರಾಟದ ಪರ್ಯಾಯ ರಾಜಕಾರಣಕ್ಕೆಳೆದ ನಂಜುಂಡಸ್ವಾಮಿಯವರ ಮಾರ್ಗವನ್ನು ಕನ್ನಡ ನಾಡು ಕಳೆದುಕೊಳ್ಳಬಾರದು.ಆ ಕಾರಣದಿಂದಲೇ ನಂಜುಂಡಸ್ವಾಮಿಯವರ ಅಸಂಖ್ಯಾತ ಬರಹಗಳು,ಭಾಷಣಗಳ ಕೈಪಿಡಿಗಳನ್ನು,ಪುಸ್ತಕಗಳನ್ನು ರೂಪಿಸಿ ಎಲ್ಲರಿಗೂ,ಅದರಲ್ಲೂ ಮುಖ್ಯವಾಗಿ ಗ್ರಾಮಗಳ ವಿದ್ಯಾಥರ್ಿಗಳಿಗೆ,ರೈತರ ಮಕ್ಕಳಿಗೆ ತಲುಪಿಸಬೇಕಾಗಿದೆ" ಎನ್ನುವ ಸಂಸ್ಕೃತಿ ಚಿಂತಕ,ಬರಹಗಾರ ನಟರಾಜ್ ಹುಳಿಯಾರ್ " ಹಸಿರು ಸೇನಾನಿ- ಪ್ರೊ.ಎಂ.ಡಿ.ನಂಜುಂಡಸ್ವಾಮಿ : ಹೋರಾಟ ಮತ್ತು ಚಿಂತನೆ" ಎಂಬ ಪುಸ್ತಕವನ್ನು ಸಂಪಾದಿಸಿಕೊಟ್ಟಿದ್ದಾರೆ. 
ಪಲ್ಲವ ಪ್ರಕಾಶನ ಪ್ರಕಟಿಸಿರುವ `ಹಸಿರು ಸೇನಾನಿ' ಪುಸ್ತಕದಲ್ಲಿ ಪ್ರೊಫೆಸರ್ ಅವರ ವ್ಯಕ್ತಿತ್ವ ಮತ್ತು ಹೋರಾಟ ಕುರಿತು ಅವರ ಒಡನಾಡಿಗಳು,ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದ್ದವರು, ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಸಾಹಿತಿಗಳು ಎಪ್ಪತ್ತರ ದಶಕದ ಚಳವಳಿ,ಹೋರಾಟದ ಬದುಕನ್ನು ದಾಖಲಿಸಿದ್ದಾರೆ. ಸಂದರ್ಶನಗಳು, ಶ್ರದ್ಧಾಂಜಲಿ ಸಭೆಯ ಭಾಷಣಗಳನ್ನು ಒಳಗೊಂಡಿರುವ ಈ ಪುಸ್ತಕ ರೈತಪರ ಚಿಂತಕರಿಗೆ,ಹೋರಾಟಗಾರರಿಗೆ ಕೈದೀವಿಗೆಯಂತಿದೆ.
ಪ್ರೊ.ಎಂಡಿಎನ್ ಅವರ ಬಾಲ್ಯ,ಶಿಕ್ಷಣ,ಹೋರಾಟದ ಜೊತೆಜೊತೆಗೆ ಭವಿಷ್ಯದಲ್ಲಿ ರೈತರು ಎದುರಿಸಬೇಕಾದ ಬಿಕ್ಕಟ್ಟುಗಳು ಹಾಗೂ ಪರಿಹಾರದ ಮಾರ್ಗಗಳನ್ನು ಹೇಳುವ ಹಸಿರು ಸೇನಾನಿಯ ಪ್ರತಿಪುಟದಲ್ಲಿ ರುವ ಚಿಂತನೆಗಳು, ಖಚಿತ ನಿಲುವುಗಳು ಸಿನಿಕ ಸಮಾಜದ ಬಗ್ಗೆ ಆತ್ಮವಿಶ್ವಾಸ ಕಳೆದುಕೊಂಡವರಲ್ಲಿ ನವಚೈತನ್ಯ ಮೂಡಿಸುತ್ತವೆ.
ಪ್ರೊಫೆಸರ್ ನಂಜುಂಡಸ್ವಾಮಿ ಗ್ರಾಮೀಣ ಸಮುದಾಯದಲ್ಲಿ ಆತ್ಮಸ್ಥೈರ್ಯ,ಎದೆಗಾರಿಕೆ ತುಂಬಿದರು.ರಾಜಕಾರಣಿಗಳನ್ನು,ಅಧಿಕಾರಿಗಳನ್ನು ಕಂಡರೆ ವಿಚಿತ್ರ ತಳಮಳದಿಂದ ಹೆದರುತ್ತಿದ್ದ ರೈತರಿಗೆ ಸ್ವಾಭಿಮಾನದ ಪಾಠ ಹೇಳಿಕೊಟ್ಟರು.ದೇಶಕ್ಕೆ ಅನ್ನ ಹಾಕುವ ಧಣಿಗಳು ತಾವೆಂದು ಎದೆ ಸೆಟಿಸಿ ನಿಲ್ಲಬೇಕೆಂದು ಅವರಿಗೆ ಮನದಟ್ಟಾಗುವಂತೆ ಬೋಧಿಸಿದರು.
ಕಾಪರ್ೊರೇಟ್ ಕಂಪನಿಗಳ ತಾಳಕ್ಕೆ ಕುಣಿಯುವ ಕೃಷಿ ವಿಜ್ಞಾನಿಗಳ ಹಸಿರು ಕ್ರಾಂತಿಯ ಸುಳ್ಳು ಸಾಧನೆಯನ್ನು ಬಯಲು ಮಾಡುವ ಪ್ರೊಫೆಸರ್ ಅವರ ಖಚಿತವಾದ ಅಭಿಪ್ರಾಯಗಳನ್ನು ನಾವೆಲ್ಲರೂ ಇಂದು ಅರ್ಥಮಾಡಿಕೊಳ್ಳಬೇಕಿದೆ. 50-60 ರದಶಕದಲ್ಲಿ ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಹಸಿರು ಕ್ರಾಂತಿ ದೇಶಕ್ಕೆ ವರವಾಗಿ ಬಂತಲ್ಲವೆ ಎಂಬ ಪ್ರಶ್ನೆಗೆ ಪ್ರೋಫೆಸರ್ ನೀಡುವ ಉತ್ತರವನ್ನು ಯಾವ ಕೃಷಿ ವಿಜ್ಞಾನಿಯೂ ನೀಡಲಾರ.
"1965 ರಲ್ಲಿ ಹಸಿರು ಕ್ರಾಂತಿಯನ್ನು ಪರಿಚಯಿಸಿದಾಗ ಈ ದೇಶದಲ್ಲಿ ವ್ಯವಸಾಯ ನಡೆಯುತ್ತಿದ್ದ ಭೂಮಿ ಶೇಕಡ 10 ಭಾಗಕ್ಕೆ ಕೂಡ ನೀರಾವರಿ ವ್ಯವಸ್ಥೆ ಇರಲಿಲ್ಲ.ಮಳೆ ನೀರಿನಿಂದ ಬೆಳೆತೆಗೆದ ಶೇ.90 ರಷ್ಟು ರೈತರೇ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾದವರು.ಅದು ಇವತ್ತಿಗೂ ಸತ್ಯ.ಆದರೆ ನದಿ ಪ್ರದೇಶಗಳ ಅಂಕಿ ಅಂಶಗಳನ್ನು ಬಳಸಿ ಇವನ್ನು ಹಸಿರು ಕ್ರಾಂತಿ ಪ್ರದೇಶಗಳೆಂದು ಪ್ರಚಾರ ಮಾಡಲಾಗುತ್ತಿದೆ.ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ದೇಸಿ ಬೀಜಗಳ ಬಳಕೆಮಾಡುತ್ತಾ ಪರ್ಯಾಯ ಹುಡುಕಬೇಕೆ ಹೊರತು ಏಕರೂಪಿ ಸಂಸ್ಕೃತಿಯನ್ನು ಪುನಾರವತರ್ಿಸುವ ಹಾಗೂ ರಾಸಾಯನಿಕ ತೀವ್ರವಾಗಿರುವ ತಂತ್ರಜ್ಞಾನವನ್ನಲ್ಲ" ಎಂಬ ಅವರ ಮಾತುಗಳನ್ನು ಎಂದೆಂದಿಗೂ ರೈತರು ಗಂಭೀರವಾಗಿ ಪರಿಗಣಿಸಬೇಕಾಗಿದೆ.
60-70 ರ ದಶಕದಲ್ಲಿ ಸಮಾಜವಾದಿಗಳ ಪುಟ್ಟ ಗುಂಪಿನ ಮಹಾಗುರುವಾಗಿದ್ದ ಪ್ರೊ.ಎಂಡಿಎನ್ ಕಾನೂನು,ಸಮಾಜ,ಸಂಸ್ಕೃತಿ,ಸಾಹಿತ್ಯ,ಕೃಷಿ,ಆಥರ್ಿಕತೆ ಚಳುವಳಿ ಈ ಎಲ್ಲದ್ದರ ಬಗ್ಗೆ ಖಚಿತ ಅಭಿಪ್ರಾಯಗಳನ್ನು ಹೊಂದಿದ್ದರು. ಎಂಡಿಎನ್ ಅವರ ಜೊತೆಗೆ ಪೂರ್ಣಚಂದ್ರ ತೇಜಸ್ವಿ,ಲಂಕೇಶ್,ಅನಂತಮೂತರ್ಿ ಅವರಂತಹ ಲೇಖಕರಿದ್ದರು.ಅಗ್ರಹಾರ ಕೃಷ್ಣಮೂತರ್ಿ,ಡಿ.ಆರ್.ನಾಗರಾಜ್,ಶೂದ್ರ ಶ್ರೀನಿವಾಸ್ ರವಿವರ್ಮ ಕುಮಾರ್ ಅವರಂತಹ ಮುಂದಿನ ತಲೆಮಾರಿನ ಚಿಂತಕರಿದ್ದರು. ಕೆ.ರಾಮದಾಸ್,ಪ.ಮಲ್ಲೇಶ್,ಬಿ.ಎಂ.ನಾಗರಾಜ್ ಅವರಂತಹ ಕ್ರೀಯಾಶೀಲ ಹೋರಾಟಗಾರರಿದ್ದರು. ತಮ್ಮ ಚಿಂತನೆ,ಮಾತುಕತೆ,ಬೋಧನೆ,ಚಳವಳಿಗಳ ಮೂಲಕ ಪ್ರೊಫೆಸರ್ ಆ ಕಾಲದ ಕೆಲವು ಶ್ರೇಷ್ಠ ವ್ಯಕ್ತಿತ್ವಗಳನ್ನು ರೂಪಿಸಿದ್ದರು.
1965 ರಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಲೆವಿ ಧಾನ್ಯ ಕೊಡಲು ನಿರಾಕರಿಸುವ ಮೂಲಕ ಏಕವ್ಯಕ್ತಿ ಚಳುವಳಿಯಾಗಿ ಆರಂಭವಾದ ಹೋರಾಟ ಮುಂದೆ ವ್ಯಾಪಕ ಸ್ವರೂಪ ಪಡೆದುಕೊಂಡದ್ದು ಈಗ ಇತಿಹಾಸ. "ದಿನನಿತ್ಯದ ಶೋಷಣೆ,ಅನ್ಯಾಯಗಳ ಹಿಂದಿರುವ ಮಾರುಕಟ್ಟೆಯ ಕೈವಾಡವನ್ನು ಅವರು ರೈತರಿಗೆ ಸರಳವಾಗಿ ಹೇಳುತ್ತಿದ್ದರು.ತಮ್ಮ ಚಿಂತನೆಗಳನ್ನು ಎಲ್ಲರಿಗೂ ತಲುಪಿಸುವ ತವಕ,ಚಿಂತನೆಯ ಸ್ಪಷ್ಟತೆಯಿಂದ ಹುಟ್ಟಿದ ಮಾತು,ತಮ್ಮ ಆಲೋಚನೆ ಬಗ್ಗೆ ಅನಗತ್ಯ ಅನುಮಾನವಿಲ್ಲದ ಆತ್ಮವಿಶ್ವಾಸ,ಆಲೋಚನೆಗಳನ್ನು ಸಂಘಟನೆಯೊಳಗೆ ಹಬ್ಬಿಸಿ ಕ್ರೀಯೆಯಾಗಿಸುವ ಬದ್ಧತೆ ಹಾಗೂ ವ್ಯವಧಾನ,ಸಮಾಜದ ಬಗೆಗಿನ ಜವಾಬ್ದಾರಿ ಎಲ್ಲವೂ ಸೇರಿ ಪ್ರೊ.ಎಂಡಿಎನ್ ಮಾರ್ಗ ರೂಪಗೊಂಡಿದೆ" ಎಂಬ ಹಸಿರು ಸೇನಾನಿ ಸಂಪಾದಕ ನಟರಾಜ್ ಹುಳಿಯಾರ್ ಅವರ ಮಾತುಗಳು ಪ್ರೊಫೆಸರ್ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಕಟ್ಟಿಕೊಡುತ್ತವೆ.
ಬಿಟಿ ಹತ್ತಿಯ ದುಷ್ಪರಿಣಾಮಗಳ ಬಗ್ಗೆ ಅವರು ಮಾಡಿದ ಹೋರಾಟ,ನೀಲಗಿರಿ ಬೆಳೆಯುವುದರಿಂದ ಆಗುವ ಅಪಾಯಗಳ ಬಗ್ಗೆ ನೀಡಿದ್ದ ಎಚ್ಚರಿಕೆ,ಜಾಗತೀಕರಣದ ದುಷ್ಪರಿಣಾಮ,ಬೀಜಸ್ವಾತಂತ್ರ್ಯಹರಣ,ನಗರ ಮತ್ತು ಗ್ರಾಮ ಭಾರತದ ಬಗ್ಗೆ ಸರಕಾರಗಳ ತಾರತಮ್ಯ ಇವೆಲ್ಲಾ ದಾರ್ಶನಿಕನೊಬ್ಬ ಮಾತ್ರ ತನ್ನ ಮುಂದಿನ ಜನಾಂಗವನ್ನು ಎಚ್ಚರಿಸಬಲ್ಲ ಮುಂಗಾಣ್ಕೆಯಂತೆ ಕಾಣುತ್ತವೆ.
ಪ್ರೊಫೆಸರ್ ಎಂಡಿಎನ್ 1936 ಫೆಬ್ರವರಿ 13 ರಂದು ಮೈಸೂರಿನಲ್ಲಿ ಹುಟ್ಟಿದರು.ತಂದೆ ಮಹಂತದೇವರು ಆಗಿನ ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರಾಗಿದ್ದರು.ತಾಯಿ ರಾಜಮ್ಮಣ್ಣಿ. ಮೈಸೂರಿನ ಹಾಡರ್್ವೀಕ್ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ.ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್.1954 ರಲ್ಲಿ ಮೈಸೂರು ವಿವಿಯಿಂದ ಬಿಎಸ್ಸಿ ಪದವಿ.1956 ರಲ್ಲಿ ಕಾನೂನು ಪದವಿ.1961 ರಲ್ಲಿ ಕಾನೂನು ವಿವಿಯಿಂದ ಪ್ರಥಮ ದಜರ್ೆಯಲ್ಲಿ ಎಲ್.ಎಲ್.ಎಂ ಪದವಿ.
1961-62 ರಲ್ಲಿ ನೆದರ್ ಲ್ಯಾಂಡಿನ `ಹೇಗ್ ಅಕಾಡೆಮಿ ಆಫ್ ಇಂಟರ್ ನ್ಯಾಷನಲ್ ಲಾ' ಸಂಸ್ಥೆಯಲ್ಲಿ ಫೋಡರ್್ ಫೌಂಡೇಷನ್ ಸ್ಕಾಲರ್ಶಿಫ್ ಪಡೆದು ಪೋಸ್ಟ್ ಮಾಸ್ಟರ್ ಸಂಶೋಧನೆ ಮುಗಿಸಿದರು.ಪಿಎಚ್ಡಿ ಮುಗಿಯುವ ಹಂತದಲ್ಲಿ ಮಾರ್ಗದರ್ಶಕರೊಂದಿಗೆ ಉಂಟಾದ ತಾತ್ವಿಕ ಭಿನ್ನಾಭಿಪ್ರಾಯಗಳಿಂದಾಗಿ ಅಧ್ಯಯನ ಕೈಬಿಟ್ಟು 1965 ರಲ್ಲಿ ಭಾರತಕ್ಕೆ ವಾಪಸ್ ಬಂದರು.
ಭಾರತಕ್ಕೆ ವಾಪಸ್ ಆಗುತ್ತಿದ್ದಂತೆಯೇ ತಮ್ಮ ತಾತ ಪಟೇಲ್ ನಂಜಪ್ಪನವರು ಕೊಟ್ಟಿದ್ದ ಜಮೀನಿನಲ್ಲಿ ಎಂಡಿಎನ್ ವ್ಯವಸಾಯ ಮಾಡಲು ಶುರು ಮಾಡಿದರು.ಅಷ್ಟೊತ್ತಿಗಾಗಲೇ ಗೆಳೆಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಅವರ ಹತ್ತಿರದ ಸಂಬಂಧಿ ಎನ್.ಡಿ.ಸುಂದರೇಶ್ ವ್ಯವಸಾಯ ಶುರುಮಾಡಿದ್ದರು.
ಮೈಸೂರಿನಲ್ಲಿ ಲೆವಿ ಪದ್ಧತಿ ವಿರುದ್ಧ ಎಂಡಿಎನ್ ಹೋರಾಟ ಮಾಡುವ ಮೂಲಕ `ಏಕ ವ್ಯಕ್ತಿ ರೈತ ಚಳುವಳಿ' ಶುರುವಾಯಿತು.ಲೆವಿ ಸಮಸ್ಯೆ ವಿರುದ್ಧ ಚಿಕ್ಕಮಗಳೂರಿನಲ್ಲಿ ತೇಜಸ್ವಿ,ಶಿವಮೊಗ್ಗದಲ್ಲಿ ಸುಂದರೇಶ್ ದನಿ ಎತ್ತಿದರು. ಹೀಗೆ ಒಬ್ಬ ಮನುಷ್ಯನ ರೈತ ಚಳುವಳಿ ಮೂರು ಮನುಷ್ಯರ ರೈತ ಚಳುವಳಿಯಾಗಿ ಮಾಪರ್ಾಡಾಯಿತು.ಇದು ರೈತ ಚಳುವಳಿಯ ಆರಂಭ.
1965 ರಿಂದ 1978 ರವರೆಗೆ ಕಾನೂನು ಪ್ರಾಧ್ಯಾಪಕರಾಗಿದ್ದರು.ಈ ಸಂದರ್ಭದಲ್ಲಿ ನಂಜುಂಡಸ್ವಾಮಿಯವರು ಭಾಗವಹಿಸಲಿದ್ದ ಸಭೆಯ ಕರಪತ್ರದಲ್ಲಿ ಅವರ ಶಿಷ್ಯರಾದ ಲಕ್ಷ್ಮಿಪತಿ ಬಾಬು ಮತ್ತು ರಾ.ನ.ವೆಂಕಟಸ್ವಾಮಿ `ಪ್ರೊ.ನಂಜುಂಡಸ್ವಾಮಿ' ಎಂದು ಮುದ್ರಿಸಿದರು. ಅಂದಿನಿಂದ `ಪ್ರೊಫೆಸರ್' ಎನ್ನುವುದು ನಂಜುಂಡಸ್ವಾಮಿ ಅವರ ಹೆಸರಿನ ಭಾಗವೇ ಆಗಿಬಿಟ್ಟಿತು.
ಸಮಾಜವಾದಿ ಯುವಜನಾ ಸಭಾ,ಕನರ್ಾಟಕ ವಿಚಾರವಾದಿ ಒಕ್ಕೂಟ,ನವ ನಿಮರ್ಾಣ ಕ್ರಾಂತಿ ಚಳುವಳಿ,ಪೆರಿಯಾರ್ ಒಡಗೂಡಿ ಜಾತಿವಿನಾಶ ಚಳುವಳಿ, ಡಾ.ಕವೋರ್ ಜೊತೆಸೇರಿ ಮೂಢನಂಬಿಕೆ ವಿರುದ್ಧ, 1987 ರಲ್ಲಿ ನೆಡದಿರಿ ನೀಲಗಿರಿ ಆಂದೋಲನ ಹಾಗೂ ಅಸಮಾನತೆ, ಅನ್ಯಾಯದ ವಿರುದ್ಧ ದಲಿತರು,ಶೋಷಿತರ ಪರ ಜೀವಿತಾವಧಿಯ ಕೊನೆಯವರೆಗೂ ಹೋರಾಟ ಮಾಡುತ್ತಲೇ ಬಂದವರು ರೈತ ನಾಯಕ ಪ್ರೊ. ನಂಜುಂಡಸ್ವಾಮಿ.
1989 ರಲ್ಲಿ ರೈತಸಂಘದಿಂದ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ಆರಿಸಿಬಂದು ವಿಧಾನ ಸಭೆಯಲ್ಲಿ ಅವರು ಮಾಡಿದ ಭಾಷಣಗಳು ಇಂದಿಗೂ ಮೌಲಿಕವಾಗಿವೆ. ಮೂಢಾತ್ಮವಾಗಿದ್ದ ಹಳ್ಳಿಗಳಿಗೆ ಮಾತು ಕೊಟ್ಟ ಧೀಮಂತ. ಅಧಿಕಾರಿ,ರಾಜಕಾರಣಿಯ ಎದುರು ಬೆನ್ನುಬಾಗಿಸಿ ನಿಲ್ಲುತಿದ್ದ ರೈತನಿಗೆ ನೆಟ್ಟಗೆ ನಿಲ್ಲಿಸಿ ಆತ್ಮ ವಿಶ್ವಾಸ ತುಂಬಿದ ದಾರ್ಶನಿಕ.ಜನತಾ ವಿಶ್ವ ವಿದ್ಯಾನಿಲಯದ ಮಹಾಗುರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭೌತಿಕವಾಗಿ ಕಣ್ಮರೆಯಾಗಿರಬಹುದು. ಆದರೆ ಅವರ ಚಿಂತನೆ, ಆಲೋಚನೆಗಳಿಗೆ ಎಂದಿಗೂ ಸಾವಿಲ್ಲ. ಇಂದಿಗೂ ಪ್ರೊಫೆಸರ್ ನೀಡಿದ ಹಸಿರು ಟವಾಲಿನ ಧೀಕ್ಷೆಯೇ ರೈತರನ್ನು ಕಾಯುತ್ತಿರುವ ಶಕ್ತಿ. ನಾಡಿನ ರೈತರು "ಹಸಿರು ಸೇನಾನಿ"ಯನ್ನು ಅಭ್ಯಾಸಮಾಡುವ ಮೂಲಕ ಹೋರಾಟ, ಚಳವಳಿಯ ಹಾದಿಯನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡರೆ ಪ್ರೊ.ಎಂಡಿಎನ್ ಅವರ ಸ್ಮರಣೆ ಅರ್ಥಪೂರ್ಣವಾಗುತ್ತದೆ.
ಕೊನೆಯ ಮಾತು: ಹಸಿರು ಸೇನಾನಿ ಪುಸ್ತಕದ ಲೇಖನವೊಂದರಲ್ಲಿ ಟಿ.ಎನ್.ಸೀತಾರಾಮ್ ಬರೆಯುತ್ತಾರೆ " ಡಿ.ಆರ್.ನಾಗರಾಜ್,ಲಂಕೇಶ್,ನಂಜುಂಡಸ್ವಾಮಿ ಹೋಗಿಬಿಟ್ಟ ಮೇಲೆ ಒಂದು ರೆಫರೆನ್ಸ್ ಪಾಯಿಂಟೇ ಇಲ್ಲ.ಯಾರು ಈ ಮೂರು ಜನರ ಸ್ಥಾನವನ್ನು ತುಂಬುವವರು?.ಅದರಲ್ಲೂ ನಾವು ಮಡುತ್ತಿರುವುದು ಸರೀನಾ ತಪ್ಪಾ ಅಂತ ತಿಳಿದುಕೊಳ್ಳಬೇಕಾದರೆ ನಂಜುಂಡಸ್ವಾಮಿಯಂತವರು ನಮಗೆ ಹೇಳಿದರೇನೆ ಅದು ಸರಿ ಅಥವಾ ತಪ್ಪು ಅನಿಸೋದು. ಅತಂಹ ರೆಫರೆನ್ಸ್ ಪಾಯಿಂಟು ಇವತ್ತು ನಮಗೆ ಯಾರೂ ಕಾಣಿಸುತ್ತಿಲ್ಲಾ."
ಇಂತಹ ವಿಷಮ ಸನ್ನಿವೇಶದಲ್ಲಿ `ಹಸಿರು ಸೇನಾನಿ'ಯಂತಹ ಪುಸ್ತಕಗಳು ಮಾತ್ರ ಸ್ಥಗಿತಗೊಂಡಿರುವ ಹೋರಾಟ,ಚಳವಳಿ ಮತ್ತು ಜಡವಾಗಿರುವ ನಮ್ಮ ಆಲೋಚನೆಗಳನ್ನು ಬಡಿದೆಬ್ಬಿಸಬಲ್ಲವು 


ಸೋಮವಾರ, ಜನವರಿ 29, 2018

ಜೇನುಕುರುಬ ಸೋಮಣ್ಣನ ಅಲೆಮಾರಿ ಕೃಷಿ ಅನುಭವ ಕಥನ 

# ಆದಿವಾಸಿ ಹೋರಾಟಗಾರನ ವಿಶಿಷ್ಟ ಕಥಾನಕ # ಜೀವನ ಪ್ರೀತಿ ಕಳೆದುಕೊಳ್ಳದ ಕಾಡಿನ ಜನ 

ಭೂ ಒಡೆತನ ಇದ್ದರೂ ಬೇಸಾಯದ ಬಗ್ಗೆ ಪ್ರೀತಿ ಬೆಳಸಿಕೊಳ್ಳದೆ ಬೀದಿಪಾಲಾದವರು ಅನೇಕ ಮಂದಿ. ಹತ್ತಾರು ಎಕರೆ ಜಮೀನು ಇದ್ದರೂ ಅನ್ನದಾತರ ಮಕ್ಕಳು ಬೇಸಾಯ ಮಾಡಲಾಗದೆ ನಗರದಲ್ಲಿ ಕೂಲಿಗಳಾಗಿ ದುಡಿಯುತ್ತಾ ಬದುಕು ಸಾಗಿಸುತ್ತಿದ್ದಾರೆ. ತುಂಡು ಭೂಮಿಗಾಗಿ ಹಂಬಲಿಸಿ ಅದನ್ನು ಪಡೆಯಲಾಗದೆ ಜೀವ ಬಿಟ್ಟ ಚೋಮನಂತಹವರೂ ಇದ್ದ ಸಮಾಜ ನಮ್ಮದು. ಆಧುನಿಕ ಶಿಕ್ಷಣ ಹೊಸ ಅರಿವು ಆಲೋಚನೆ ಮೂಡಿಸುವ ಮೂಲಕ ಬದಲಾವಣೆಗೆ ನಾಂದಿಯಾಡಿದೆ. ಪಿತ್ರಾಜರ್ಿತವಾಗಿ ತುಂಡು ಭೂಮಿಯೂ ಇಲ್ಲದವರೂ ಇಂದು ಭೂ ಒಡೆಯರಾಗಿದ್ದಾರೆ. ಅದಕ್ಕಿಂತಲ್ಲೂ ಭಿನ್ನವಾದ ಕಥಾನಕವೊಂದರ ಬಗ್ಗೆ ನಿಮಗೆ ಹೇಳಬೇಕು.
ಹೋರಾಟದ ಮೂಲಕ ಸಮುದಾಯದ ಬದುಕು ಕಟ್ಟಿ ತಾನೂ ತುಂಡುಭೂಮಿಗೆ ಒಡೆಯನಾಗಿ ಸಮಾಜಕ್ಕೆ ಮಾದರಿಯಾದ ಆದಿವಾಸಿ ಹೋರಾಟಗಾರ, ಜೇನುಕುರುಬರ ಹಿತಚಿಂತಕ, `ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ' ಜೇನುಕುರುಬರ ಸೋಮಣ್ಣ ತನಗೆ ದಕ್ಕಿದ 31 ಗುಂಟೆ ಜಮೀನಿನಲ್ಲಿ ಮಕ್ಕಳುಮರಿ, ಸಹೋದರರು,ಸಹೋದರಿ ಸೇರಿದಂತೆ ಬಹುದೊಡ್ಡ ಅವಿಭಕ್ತ ಕುಟುಂಬದಲ್ಲಿ ದ್ದುಕೊಂಡು ಐದು ಸಂಸಾರ ಸಾಕಿ ಸೈ ಎನಿಸಿಕೊಂಡಿರುವುದೇ ದೊಡ್ಡ ಸೋಜಿಗದ ಸಂಗತಿ.
ಕೋಟೆ ತಾಲೂಕಿನ ಕಬಿನಿ ಹಿನ್ನಿರಿನಲ್ಲಿ ಬರುವ ಮೊತ್ತ ಎಂಬ ಹಾಡಿಯೊಂದರ ಸಮೀಪ ಈಗಲೂ ಸೋಮಣ್ಣ 31 ಗುಂಟೆ ಜಮೀನಿನಲ್ಲಿ ಬೇಸಾಯ ಮಾಡುತ್ತಾ,ಜೇನುಕುರುಬರ,ಆದಿವಾಸಿಗಳ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾ,ಕಾಡಿನ ಜನರ ಸಂಘಟನೆಗೆ ಬಲ ತುಂಬುತ್ತಿದ್ದಾರೆ.
ಅದು ಎಪ್ಪತರ ದಶಕ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ,ತಾರಕ,ನುಗು ಜಲಾಶಯಗಳು ತಲೆಎತ್ತಲೂ ಆರಂಭಿಸಿದ್ದವು. ಈ ಸಂದರ್ಭದಲ್ಲಿ ಸಾವಿರಾರು ಎಕರೆ ಕಾಡಿನ ಭೂಮಿ ಮುಳುಗಡೆ ಯಾಯಿತು.ಕಾಡಿನಲ್ಲಿ ವಾಸವಾಗಿದ್ದ ಆದಿವಾಸಿಗಳು,ಜೇನುಕುರುಬರನ್ನು ಒಕ್ಕಲೆಬ್ಬಿಸಲಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲ ಆದು. ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದಿತ್ತು.ಆದರೆ ಬಲಾಢ್ಯರ ಸ್ವಾರ್ಥದಿಂದ ಭೂ ಸುಧಾರಣೆ ಕಾಯಿದೆಯನ್ನೇ ದಿಕ್ಕುತಪ್ಪಿಸುವ ಹುನ್ನಾರಗಳು ಆಗ ನಡೆದವು. ಅದೇ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ.ಬಳಿಗಾರ್ ಅವರ ಹಿತಾಸಕ್ತಿಯಿಂದ ಕಾಡಿನಿಂದ ಹೊರ ದೂಡಲ್ಪಟ್ಟ ಆದಿವಾಸಿಗಳಿಗೆ,ಜೇನುಕುರುಬರಿಗೆ ಅಲ್ಪಸ್ವಲ್ಪ ಭೂಮಿ ಸಿಕ್ಕಿತ್ತು. ಆರು ಸಾವಿರ ಎಕರೆ ಭೂಮಿಯನ್ನು ಆದಿವಾಸಿಗಳಿಗೆ ಹಂಚಲಾಯಿತು. ಇಂತಹ ಐತಿಹಾಸಿಕ ಹೆಜ್ಜೆಗುರುತಿನ ಹಿಂದೆ ಜೇನುಕುರುಬ ಸೋಮಣ್ಣನವರ ಶ್ರಮ ಮತ್ತು ಹೋರಾಟ ಇದೆ ಎನ್ನುವುದನ್ನು ಆದಿವಾಸಿಗಳು ಇಂದಿಗೂ ನೆನಪುಮಾಡಿಕೊಳ್ಳುತ್ತಾರೆ.
ಆದಿವಾಸಿಗಳ ಕೃಷಿಯ ಬಗ್ಗೆ ಕುತೂಹಲಮೂಡಿ, ಕಾಡಿನ ಜನ ಕಾಳು ಮೆಣಸು ಬೆಳೆಯುತ್ತಿರುವ ಬಗ್ಗೆ ಕೇಳಿ ಆಶ್ಚರ್ಯವಾಗಿ ಅಂತಹ ಕೃಷಿಕರನ್ನು ಕಾಣಲು ಹೋಗಿದ್ದ ನಮಗೆ ಕೈದೀವಿಗೆಯಂತೆ ಸಿಕ್ಕವರು ಇದೆ ಸೋಮಣ್ಣ. ಆದಿವಾಸಿಗಳ ಒಡನಾಡಿಯಾಗಿರುವ ಸ್ವಾಭಿಮಾನಿ ಸೋಮಣ್ಣನ ಬಗ್ಗೆಯೂ ನಾವು ವಿಚಾರಿಸುತ್ತಾ ಹೋದಂತೆ ನಮ್ಮ ಮುಂದೆ ಇನ್ನೊಂದು ಹೋರಾಟದ ಬದುಕು ಅನಾವರಣಗೊಂಡಿತು.
ಜೇನುಕುರುಬರ ಕುನ್ನಯ್ಯ ಮತ್ತು ಬಸಮ್ಮ ದಂಪತಿಯ ಮಗನಾದ ಸೋಮಣ್ಣ ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ. ಸಂಸಾರದ ತಾಪತ್ರಯದಿಂದಾಗಿ ಮನೆಯವರು ಮಾಡಿದ ಸಾಲ ತೀರಿಸಲೆಂದೇ ಬಾಲ್ಯದಲ್ಲೇ ಜೀತಗಾರನಾದ ಸೋಮಣ್ಣ ದುಡಿದು ಸಾಲತೀರಿಸಿ ತುಂಡು ಭೂಮಿಗೆ ಒಡೆಯನಾಗಿ ಹೋರಾಟಗಾರನಾಗಿ ರೂಪುಗೊಂಡದ್ದು ಒಂದು ಪವಾಡದಂತೆ ಕಾಣುತ್ತದೆ.
ಆದಿವಾಸಿಗಳ ನೋವಿಗೆ ದನಿಯಾಗಿ,ಮೇಧಾ ಪಾಟ್ಕರ್ ಅವರ ನರ್ಮದಾ ಬಚವೋ ಆಂದೋಲನದಲ್ಲಿ ಭಾಗಿಯಾಗಿ,ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು,ಗೋವಾದಲ್ಲಿ ನಡೆದ ಮೀನುಗಾರರ ಪರ ಹೋರಾಟದಲ್ಲೂ ಭಾಗವಹಿಸಿರುವ ಸೋಮಣ್ಣ ವಿದೇಶಗಳಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಆದಿವಾಸಿಗಳ ಹಾಡುಪಾಡನ್ನು ಹೇಳಿ ಹೋರಾಟ ಮತ್ತು ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಸೋಮಣ್ಣ ಅವರನ್ನು ಬಾಲ್ಯ, ಕೃಷಿ ಮತ್ತು ಆದಿವಾಸಿ ಹೋರಾಟದ ಬಗ್ಗೆ ಕೇಳಿದರೆ ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.
70ರ ದಶಕದ ಪಾಡು : "ಕೊಟ್ಟವರಿಗೆ ಯಾವತ್ತೂ ಮೋಸ ಮಾಡಬಾರದು.ಧರ್ಮದ ಮಾರ್ಗದಲ್ಲಿ ನಡೆಯಬೇಕು.ದುಡಿದು ತಿನ್ನಬೇಕು. ಇದು ನಮ್ಮ ತಾಯಿಯಿಂದ ನಮಗೆ ಬಂದ ಆಸ್ತಿ ಮತ್ತು ಬಳುವಳಿ. ಬಾಲ್ಯದಲ್ಲಿ ಗೌಡರ ಮನೆಗೆ ಜೀತಕ್ಕೆ ಸೇರಿಕೊಂಡಾಗ ನನಗೆ ಒಂಭತ್ತು ವರ್ಷ. ವಾಷರ್ಿಕ ಮೂರು ಹೊತ್ತು ಊಟ ಜೊತೆಗೆ ಹದಿನಾರುವರೆ ರೂಪಾಯಿ ಕೂಲಿ.ಆಗ ಜನರಲ್ಲಿ ನಂಬಿಕೆ,ಪ್ರಾಮಾಣಿಕತೆ ಇತ್ತು.ಗೌಡರು ಹಣ ಕೊಡಬೇಕಾದರೆ ಮರದ ಬಳಿ ನಿಂತು. ನಿನಗೆ ನಾನು ಕೊಡುತ್ತಿರುವ ಹಣಕ್ಕೆ ಈ ಮರವೇ ಸಾಕ್ಷಿ. ಕೊಟ್ಟ ಹಣಕ್ಕೆ ನಿಯತ್ತಿನಿಂದ ದುಡಿದು ಸಾಲ ತೀರಿಸಿ ಎಂದು ಹಣ ಕೊಡುತ್ತಿದ್ದರು. ನಾವು ನಿಯತ್ತಿನಿಂದ ದುಡಿದು ಸಾಲ ತೀರಿಸುತ್ತಿದ್ದೆವು" ಎಂದು ತಮ್ಮ ಬಾಲ್ಯದ ನೆನಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ಸೋಮಣ್ಣ.
ಗೌಡರ ಸಾಲ ತೀರಿದ ಮೇಲೆ ತಾಯಿ ಬಸಮ್ಮ ಮಗನಿಗೆ ಹಾಡಿಯ ಸಂಪರ್ಕ ಕಡಿದು ಹೋಗುತ್ತದೆ ಅಂತ ಸೋಮಣ್ಣನನ್ನು ಮತ್ತೆ ಹಾಡಿಗೆ ಕಡೆದುಕೊಂಡು ಹೋಗಿಬಿಡುತ್ತಾರೆ.ಅಲ್ಲಿ ಕುಮರಿ ಬೇಸಾಯ ಮಾಡಿಕೊಂಡು, ಕಾಡಿನ ಸೊಪ್ಪು,ಗೆಣಸು,ಜೇನು ತಿಂದುಕೊಂಡು ಹಸಿವು ನೀಗಿಸಿಕೊಂಡು ಕಾಡುಪ್ರಾಣಿಗಳ ಜೊತೆಗೆ ಬದುಕಿದ ದಿನಗಳನ್ನು ಸುವರ್ಣಯುಗ ಎನ್ನುತ್ತಾರೆ.
ಮೂಲತಃ ಹುಣಸೂರು ತಾಲೂಕಿನ ಕಚ್ಚೇನಹಳ್ಳಿಗೆ ಸೇರಿದ ಕಾಡಿನಲ್ಲಿದ್ದ ಸೋಮಣ್ಣನ ಪೂವರ್ಿಕರು ಅಣ್ಣೂರು ಹೊಸಹಳ್ಳಿ ಹಾಡಿಗೆ ಬಂದು ಗೌಡರ ದನ ಮೇಯಿಸುತ್ತಾ,ಕಾಡು ಕಡಿದು ಎಂಟು ಎಕರೆ ಜಮೀನು ಮಾಡಿ ಬದುಕು ಕಟ್ಟಿಕೊಂಡಿದ್ದರು.
"ಕಟ್ಟಮನ್ನಹಳ್ಳಿ,ಆಲತ್ತೂರು ಹುಂಡಿ ಸುತ್ತಮುತ್ತ ಕಾಲರ ಪ್ಲೇಗು ಬಂದು ಜನರೆಲ್ಲಾ ಸಾವನ್ನಪ್ಪುತ್ತಿದ್ದಾಗ ತಮ್ಮ ತಂದೆ ಕುನ್ನಯ್ಯನ ಮೇಲೆ ಬಲಿಮಾರಿ ದೇವತೆ ಬಂದು ಊರಿನ ಜನರನ್ನು ಉಳಿಸಿದ್ದಕ್ಕಾಗಿ ಆಗ ದೇವರ ಕೊಡಗೆ ಅಂತ ಐದು ಎಕರೆ ಜಮೀನು ಕೊಟ್ಟಿದ್ದರು. ಅದರಲ್ಲೂ ದುಡಿದು ಜೀವನ ಸಾಗಿತು.ಆಗ ನಮಗೆ ಹಣ ಬೇಕಿರಲಿಲ್ಲ.ಪ್ರತಿ ತಿಂಗಳು ಒಂದಲ್ಲ ಒಂದು ಆಹಾರ ಕಾಡಿನಿಂದ ಸಿಗುತ್ತಿತ್ತು.ಮುತ್ತಿಗೆ ಎಲೆಯನ್ನು ಸುತ್ತಿ ಅದರಲ್ಲಿ ಕಾಡಿನ ಸೊಪ್ಪುಗಳನ್ನು ಕೊಯ್ದು,ಮೆಣಸಿನಕಾಯಿ ಚಿವುಟಿ ಬುತ್ತಿಕಟ್ಟಿ ಬೆಂಕಿಯಲ್ಲಿ ಬೇಯಿಸಿ ತಿಂದರೆ ಅದೆ ನಮ್ಮ ಆಹಾರವಾಗುತ್ತಿತ್ತು" ಎಂದು ಬೇಸಾಯದ ತಮ್ಮ ಅಲೆಮಾರಿ ಜೀವನದ ಸೊಬಗನ್ನು ಸೋಮಣ್ಣ ಹೇಳುತ್ತಾ ಹೋಗುತ್ತಾರೆ.ಇಂತಹ ಸಾವಿರಾರು ಕಾಡಿನ ನೆನಪುಗಳು ಅವರಿಗಿವೆ.
ಇಂತಹ ಅಲೆಮಾರಿ ಬದುಕಿನ ಸೋಮಣ್ಣ ಅವರಿಗೆ ಒಂದು ಕಡೆ ನೆಲೆನಿಂತು ತಾನೂ ಕೃಷಿಕನಾಗಬೇಕೆಂಬ ಹಂಬಲ ಹೆಚ್ಚಾಗುತ್ತದೆ. ತನ್ನ ಜನಾಂಗವಾದ ಜೇನುಕುರುಬರ ಜೊತೆ ಸೇರಿಕೊಂಡು ಬೂದನೂರು ಬಳಿ ಎಂಟು ಎಕರೆ ಪ್ರದೇಶದಲ್ಲಿ ಕಾಡುಕಡಿದು ಕೃಷಿಭೂಮಿಮಾಡಿ ರಾಗಿ,ಕಡಲೆ,ಜೋಳ ಸೇರಿದಂತೆ ಎಲ್ಲ ರೀತಿಯ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ. ಅದೇ ಮುಂದೆ ಬುದನೂರು ಹಾಡಿಯಾಗಿ ರೂಪುಗೊಳ್ಳುತ್ತದೆ. ಆ ಹಾಡಿ ರೂಪುಗೊಂಡದ್ದರ ಹಿಂದೆ ತನ್ನ ಶ್ರಮ ಇದೆ ಎಂದು ಸೋಮಣ್ಣ ನೆನಪುಮಾಡಿಕೊಂಡರು.
ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾಡು ಕಡಿದು ಕೃಷಿಮಾಡುತ್ತಲೇ ಅಲೆಮಾರಿಗಳಾಗಿದ್ದ ಜೇನುಕುರುಬರು ಮತ್ತು ಆದಿವಾಸಿಗಳಿಗೆ ಕನರ್ಾಟಕ ಭೂ ಸುಧಾರಣೆ ಕಾಯಿದೆ ಜಾರಿಯಾಗಿ ಸಾಗುವಳಿ ಚೀಟಿ ಕೊಟ್ಟ ನಂತರ ಒಂದು ಕಡೆನಿಂತು ಬೇಸಾಯ ಮಾಡಲು ಸಾಧ್ಯವಾಯಿತು. 70 ದಶಕದಲ್ಲಿ ಸಕ್ರೀಯವಾಗಿದ್ದ ದಲಿತ ಸಂಘಟನೆಗಳು ಕೋಟೆತಾಲೂಕಿನಲ್ಲಿ ಹತ್ತು ಹಲವು ಹೋರಾಟಗಳನ್ನು ರೂಪಿಸಿ ಹಕ್ಕುಗಳನ್ನು ಪಡೆಯುವಲ್ಲಿ ಸಫಲವಾಗಿದ್ದವು. ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಂಪರ್ಕಕ್ಕೆ ಬಂದ ಸೋಮಣ್ಣ ಆದಿವಾಸಿಗಳನ್ನು ಜೋಡಿಸಿಕೊಂಡು ಹೋರಾಟಕ್ಕೆ ಬಲ ತಂದುಕೊಂಡರು. ತಮ್ಮ ಮೂವತ್ತು ವರ್ಷಗಳ ಸುದೀರ್ಘ ಆಯಸ್ಸನ್ನು ಆದಿವಾಸಿಗಳ ಹಕ್ಕಿಗಾಗಿ ಹೋರಾಡಲು,ಕಷ್ಟಗಳಿಗೆ ನೆರವಾಗಲು ಸವೆಸಿರುವ ಸೋಮಣ್ಣನಿಗೆ ಈಗಲೂ ಬೇಸಾಯವೆಂದರೆ ಪ್ರಾಣ. ಮೊತ್ತದಲ್ಲಿ ತನ್ನ ಮಾವ ತನ್ನ ಪಾಲಿಗೆ ಬಂದ 31 ಗುಂಟೆ ಜಮೀನನ್ನು ಅಳಿಯನಿಗೆ ಕೊಡಿ ಎಂದು ಕೊಡಿಸಿದ್ದರ ಫಲವಾಗಿ ಸೋಮಣ್ಣ ಇಂದು ತುಂಡುಭೂಮಿಯ ಒಡೆಯನಾಗಿ ಅಲ್ಲಿ ತರಕಾರಿ,ರಾಗಿ,ಜೋಳ ಬೆಳೆಯುತ್ತಾ ಹೋರಾಟದ ಜೊತೆಜೊತೆಗೆ ಕೃಷಿಯನ್ನೂ ಮಾಡುತ್ತಾ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.
2016 ರಲ್ಲಿ ಇಂತಹ ಜೇನುಕುರುಬ ಸೋಮಣ್ಣ ಅವರಿಗೆ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿ ನಂತರ ಹಿಂಪಡೆದು ಅಪಮಾನ ಮಾಡಿತ್ತು.ಆಗ ಸಂಘಟನೆಗಳೆ ಮುಂದೆನಿಂತು ಹಾಡಿಯಲ್ಲಿ ಸಮಾರಂಭಮಾಡಿ ಸೋಮಣ್ಣ ಅವರಿಗೆ `ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿದ್ದವು. ಸಾಹಿತಿ ದೇವನೂರ ಮಹಾದೇವ ಅವರೇ ಪ್ರಶಸ್ತಿ ಪ್ರಧಾನಮಾಡಿದ್ದರು.
ಬಡತನ,ಜೀತ, ದಾರಿದ್ರ್ಯದ ನಡುವೆಯೂ ತನ್ನ ಜನಾಂಗದ ಹಕ್ಕಿಗಾಗಿ ಮೂರು ದಶಕಗಳಿಗೂ ಹೆಚ್ಚುಕಾಲ ಸುದೀರ್ಘವಾದ ಹೋರಾಟ ಮಾಡಿ ಕೃಷಿಯನ್ನು ಕೈ ಬಿಡದೆ ಸ್ವಾಭಿಮಾನಿಯಾಗಿ ಬದುಕುತ್ತಿರುವ ಸೋಮಣ್ಣ ಅವರಿಗೆ ರಾಜಕೀಯ ಸ್ಥಾನಮಾನಗಳು ಸಿಗಬೇಕಿತ್ತು. ರಾಜಕೀಯ ಅಧಿಕಾರ ಸಿಕ್ಕಿದ್ದರೆ ಆದಿವಾಸಿಗಳಿಗೆ ಮತ್ತಷ್ಟು ಬಲ ಬಂದಂತಾಗುತ್ತಿತ್ತು ಎಂದು ಅವರೊಂದಿಗೆ ಎಲ್ಲಾ ಹೋರಾಟಗಳಲ್ಲಿ ಭಾಗಿಯಾಗಿರುವ ಲೇಖಕ ಕ್ಷೀರಸಾಗರ ಹೇಳುತ್ತಾರೆ.
ಕೋಟೆ,ಬಿಳಿಗಿರಿರಂಗನಬೆಟ್ಟ,ಬೇರಂಬಾಡಿ,ಹಂಗಳ,ದೊಡ್ಡಬರಗಿ ಸುತ್ತಮುತ್ತೆಲ್ಲಾ ಆದಿವಾಸಿಗಳು ಕೃಷಿ ಮಾಡುತ್ತಿರುವ ಪ್ರತಿಯೊಂದು ವಿವರಗಳ ಬಗ್ಗೆಯೂ ಮಾಹಿತಿ ಇರುವ ಸೋಮಣ್ಣ ಆದಿವಾಸಿ ಜನಾಂಗದ ನಿಜವಾದ ಆಸ್ತಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸೋಮಣ್ಣ 9901820972 ಸಂಪಕರ್ಿಸಿ.




ಕಡು ಬಡತನದ ನಡುವೆ ಅರಳಿದ  ಭೀಮನಹಳ್ಳಿಯ `ಭೀಮ'

# ಸ್ವಾಭಿಮಾನಿ ಹೋರಾಟಗಾರನ ಕಥಾನಕ # ಆಸರೆಯಾಯಿತು `ಪುಣ್ಯಭೂಮಿ' 

ಅದು ಎಪ್ಪತ್ತರ ದಶಕ. ತಂದೆ ತಾಯಿಗೆ 12 ಮಂದಿ ಮಕ್ಕಳು.ದೊಡ್ಡ ಕುಟುಂಬ.ಹದಿನೈದು ಎಕರೆ ಜಮೀನು ಇದ್ದರೂ ಕಿತ್ತು ತಿನ್ನುವ ಬಡತನ. ಆದರೂ ಯುವಕನಿಗೆ ಓದಿ ವಿದ್ಯಾವಂತನಾಗಬೇಕೆಂಬ ಹಂಬಲ. ಕಡು ಬಡತನದ ನಡುವೆಯೂ ಕಾಲೇಜು ಮೆಟ್ಟಿಲು ಹತ್ತಿದ ಈ ಯುವಕ ಬಿ.ಕಾಂ.ಪದವಿಧರನಾದ. ಒಂದೆರಡು ವರ್ಷ ಕಾನೂನು ಪದವಿಗೂ ಮಣ್ಣುಹೊತ್ತು ಬಡತನದ ಕಾರಣಕ್ಕೆ ಕಾಲೇಜು ತೊರೆದ. ದಲಿತ ಸಂಘರ್ಷ ಸಮಿತಿಯ ಸಕ್ರೀಯಾ ಕಾರ್ಯಕರ್ತನಾಗಿ,ಭೂ ಮಾಲೀಕತ್ವದ ಹೋರಾಟದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾದ.ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷನೂ ಆಗಿ ಈಗ ಸುಭಾಷ್ ಪಾಳೇಕರ್ ಅವರ ನೈಸಗರ್ಿಕ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಸ್ವಾಭಿಮಾನಿಯೊಬ್ಬರ ಯಶೋಗಾಥೆ ಇದು.
ಈ ಸ್ವಾಭಿಮಾನಿ ರೈತನ ಹೆಸರು ಭೀಮನಹಳ್ಳಿ ಮಹದೇವ್.ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿಯವರು. ತಮ್ಮ ಬಾಲ್ಯದ ದಿನಗಳಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಅಪ್ಪ ತನ್ನ ಮಕ್ಕಳನ್ನು ಜೀತಕ್ಕೆ ಸೇರಿಸಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಾಹದೇವ್ ವ್ಯವಸಾಯ ಮಾಡಿ ತಮ್ಮಂದರಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಮಗಳನ್ನು ಮದುವೆಮಾಡಿ, ಮಗನನ್ನು ಸಾಫ್ಟ್ವೇರ್ ಇಂಜಿನಿಯರ್ ಮಾಡಿದ್ದಾರೆ. ಇನ್ಫ್ಫೋಸಿಸ್ನಲ್ಲಿ ಉದ್ಯೋಗದಲ್ಲಿರುವ ಅವರ ಮಗ ಈಗ ನೆದರ್ಲ್ಯಾಂಡ್ನಲ್ಲಿ ಕೆಲಸಮಾಡುತ್ತಿದ್ದಾನೆ.
ಪತ್ನಿಯೊಂದಿಗೆ ಭೀಮನಹಳ್ಳಿಯಲ್ಲಿರುವ ಮಹದೇವ್ ಮೂರು ಎಕರೆ ಪ್ರದೇಶದಲ್ಲಿ 150 ತೆಂಗು,2500 ಏಲಕ್ಕಿ ಬಾಳೆ,2000 ಸಿಲ್ವರ್,ತೇಗ,ಬೀಟೆ,ಹೊನ್ನೆ,ಸಪೋಟ,ಕಾಫಿ ಎಲ್ಲವನ್ನೂ ಸುಭಾಷ್ ಪಾಳೇಕರ್ ಅವರ ನೈಸಗರ್ಿಕ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದು ಕಳೆದ ಇಪ್ಪತ್ತು ವರ್ಷದಿಂದ ತಮ್ಮ ಭೂಮಿಗೆ ಯಾವುದೆ ರಸಾಯನಿಕಗೊಬ್ಬರವನ್ನೂ ಹಾಕಿಲ್ಲ. ಹೋರಾಟದ ದಿನಗಳಲ್ಲಿ ಸಂಗಾತಿಗಳಾಗಿದ್ದ ಗೆಳೆಯರು ತೋಟಕ್ಕೆ ಬಂದರೆ ಅವರ ನೆನಪಿನಲ್ಲಿ ತೋಟದಲ್ಲೊಂದು ಗಿಡನೆಡುತ್ತಾರೆ.ಅಷ್ಟರಮಟ್ಟಿಗೆ ಅವರು ಪರಿಸರ ಪ್ರೇಮಿ. ನಾವು ಅವರ ತೋಟಕ್ಕೆ ಹೋದ ನೆನಪಿಗೆ ಬುದ್ಧನ ನೆಪದಲ್ಲಿ ಅರಳಿ ಸಸಿಯೊಂದನ್ನು ನೆಟ್ಟು ನೀರೆರೆದು ಬುದ್ಧನ ಕರುಣೆ,ಮಾನವೀಯತೆ,ಅತಃಕರಣ ಎಲ್ಲರಲ್ಲೂ ಮೂಡಲಿ ಎಂದು ಹಾರೈಸಿದರು.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಆದಿವಾಸಿಗಳು ಕಾಳು ಮೆಣಸು ಬೆಳೆಯುತ್ತಿರುವ ಬಗ್ಗೆ ಕೇಳಿದ್ದ ನಾನು,ಕುತೂಹಲಗೊಂಡು ಲೇಖಕರು ಕೃಷಿಕರೂ ಆಗಿರುವ ಕ್ಷೀರಸಾಗರ ಮತ್ತು ಆದಿವಾಸಿ ಬುಡಕಟ್ಟು ಹೋರಾಟಗಾರ ಸೋಮಣ್ಣ,ನಿಸರ್ಗ ಸಿದ್ದರಾಜು ಅವರ ಜೊತೆಗೆ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಮಾರ್ಗಮಧ್ಯದಲ್ಲೇ ಇದ್ದ ಬೀಮನಹಳ್ಳಿ ಮಹದೇವ್ ಅವರ ತೋಟಕ್ಕೂ ಭೇಟಿ ನೀಡಿದ್ದೆ.
ಗಿಡಮರಗಳಿಂದ ತುಂಬಿ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ,ನಡುವೆ ಮಳೆನೀರು ಕೊಯ್ಲು ಹಾಗೂ ಕಾಲುವೆ ನೀರು ತುಂಬಿಸಿಕೊಳ್ಳಲು ಮಾಡಿದ್ದ ದೊಡ್ಡ ಕೃಷಿಹೊಂಡ. ಕೃಷಿಹೊಂಡದ ಮೇಲೆ ಕುಳಿತು ಮಾತನಾಡಲು ಮಟ್ಟಸವಾದ ಜಾಗ. ಸುತ್ತ ಹಸಿರು, ಅದೊಂದು ರಮ್ಯತಾಣ. ಅಲ್ಲಿ ಮಾತಿಗೆ ಕುಳಿತ ಭೀಮನಹಳ್ಳಿ ಮಹದೇವ್ ತಮ್ಮ ಹೋರಾಟದ ಬದುಕು,ಚಳವಳಿ, ಕೃಷಿ ಚಟುವಟಿಕೆಗಳ ಬಗ್ಗೆ ಹೇಳುತ್ತಾ ಹೋದರು...
ಆಸರೆಯಾದ ಪುಣ್ಯಭೂಮಿ : " ಕಡುಬಡತನದ ಕುಟುಂಬ ನಮ್ಮದು.ನಮ್ಮ ತಂದೆತಾಯಿಗೆ ನಾವು ಹನ್ನೆರಡು ಜನ ಮಕ್ಕಳು.ಏಳು ಮಂದಿ ಗಂಡು.ಐವರು ಹೆಣ್ಣು. ಎಲ್ಲಾ ಸೇರಿ ಹದಿನೈದು ಜನರಿದ್ದ ದೊಡ್ಡ ಸಂಸಾರ. ನಾನೇ ಮನೆಗೆ ಹಿರಿಕ. ಊಟಕ್ಕೆ ತೊಂದರೆ. ಹಸಿದು ಮಲಗಿದ ದಿನಗಳೂ ಇವೆ. ಭೀಮನಹಳ್ಳಿಯಲ್ಲೆ ಪ್ರೌಢಶಾಲಾ ಶಿಕ್ಷಣ ಮುಗಿಸಿ ಹುಣಸೂರಿಗೆ ಕಾಲೇಜು ವಿದ್ಯಭ್ಯಾಸಕ್ಕೆ ಸೇರಿಕೊಂಡೆ. ಅಲ್ಲಿ ಶೋಷಿತವರ್ಗದವರಿಗಾಗಿ `ಪುಣ್ಯಭೂಮಿ' ಟ್ರಸ್ಟ್ನವರು ಉಚಿತ ವಿದ್ಯಾಥರ್ಿನಿಲಯವೊಂದನ್ನು ನಡೆಸುತ್ತಿದ್ದರು. ಆ ಹಾಸ್ಟೆಲ್ನಲ್ಲಿ ಇದ್ದುಕೊಂಡು 1976 ರಲ್ಲಿ ನಾನು ಬಿಕಾಂ ಪದವಿ ಪಡೆದುಕೊಂಡೆ.ನಂತರ ಮೈಸೂರಿನ ಜೆಎಸ್ಎಸ್ ಕಾಲೇಜಿಗೆ ಕಾನೂನು ಪದವಿ ಓದಲು ಸೇರಿಕೊಂಡೆ. ಅಲ್ಲಿ ನಮಗೆ ಹಾಸ್ಟೆಲ್ ಸೌಲಭ್ಯ ಇಲ್ಲದ ಕಾರಣ. ಹುಣಸೂರಿನಿಂದ ಬಂದು ಹೋಗುತ್ತಿದೆ.ಎರಡು ವರ್ಷದ ನಂತರ ಊಟಕ್ಕೆ ತೊಂದರೆಯಾಯಿತು.ಕಾಲೇಜು ಬಿಟ್ಟು ವ್ಯವಸಾಯದಲ್ಲಿ ತೊಡಗಿಸಿಕೊಂಡೆ" ಎಂದು ಕಾಲೇಜಿನಿಂದ ಕೃಷಿಗೆ ಬಂದು ನಿಂತ ಜೀವನ ಪಯಣವನ್ನು ಹೇಳಿ ಒಮ್ಮೆ ಆಕಾಶದ ಕಡೆಗೆ ದಿಟ್ಟಿಸಿ ಮೌನ ವಾದರು.
ಇದೆ ಸಮಯದಲ್ಲಿ ಮೈಸೂರಿನಲ್ಲಿ ಹೊಸ ಬದಲಾವಣೆಗೆ ನಾಂದಿಯಾಡಿದ್ದ `ಮಾಕ್ಸರ್ಿಸ್ಟ್ ಸ್ಟಡಿ ಸರ್ಕಲ್' ಎಂಬ ಗೆಳೆಯರ ಗುಂಪು ಸಮಾಜದ ಅಸಮಾನತೆಯ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುತ್ತದೆ. ಈ ಗುಂಪಿನಲ್ಲಿ ಲೇಖಕ ತುಕಾರಾಮ್,ಕ್ಷೀರಸಾಗರ,ಹೊರೆಯಾಲ ದೊರೆಸ್ವಾಮಿ,ರಾಮು ಎಲ್ಲರೂ ಇರುತ್ತಾರೆ. ಈ ತಂಡ ಹುಣಸೂರಿನ ಪುಣ್ಯಭೂಮಿ ಹಾಸ್ಟೆಲ್ಗೆ ಬಂದು ವಿದ್ಯಾಥರ್ಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತದೆ.ಹೊರೆಯಾಲ ದೊರೆಸ್ವಾಮಿ ಅವರು ಬರೆದ ಕೋಲಾಟದ ಹಿನ್ನೆಲೆ ಇದ್ದ ಬೀದಿನಾಟಕವನ್ನು ಅಭಿನಯಿಸಿ ಗಮನಸೆಳೆಯುತ್ತದೆ. ಈ ತಂಡದ ಸಂಪರ್ಕಕ್ಕೆ ಬರುವ ಮಹದೇವ್ 1978 ರಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯ ಸಂಪರ್ಕಕ್ಕೆ ಬಂದು  ಆ ಭಾಗದಲ್ಲಿ ಹೋರಾಟಗಾರರಾಗಿ ರೂಪುಗೊಳ್ಳುತ್ತಾರೆ.
ಸಾಹಿತಿ ದೇವನೂರ ಮಹದೇವ ಅವರು ತಮ್ಮ ಹೆಸರಿನ ಜೊತೆಗೆ ಹುಟ್ಟೂರನ್ನು ಸೇರಿಸಿಕೊಂಡಿದ್ದನ್ನು ನೋಡಿ ಇವರು ಕೂಡ ಭೀಮನಹಳ್ಳಿ ಮಹದೇವ್ (ಭೀಮ) ಆಗುತ್ತಾರೆ. ಪುಣ್ಯಭೂಮಿ ಹಾಸ್ಟೆಲ್ ಹೋರಾಟದ ನೆಲೆಯಾಗಿ,ಕ್ರಾಂತಿಕಾರಿಗಳ ವಿಶ್ವ ವಿದ್ಯಾನಿಲಯವಾಗಿ ಕೆಲಸಮಾಡುತ್ತಿತ್ತು ಎಂದು ಕ್ಷೀರಸಾಗರ ನೆನಪು ಮಾಡಿಕೊಂಡರು.
ಕಾನೂನು ಪದವಿ ಓದುತ್ತಿದ್ದಾಗ ಎರಡನೇ ವರ್ಷಕ್ಕೆ ಯಾಕೆ ಕಾಲೇಜು ಬಿಟ್ಟಿದ್ದು ಎಂದು ಭೀಮ ಅವರನ್ನು ಕೇಳಿದಾಗ... " ಮೈಸೂರಿನಲ್ಲಿ ಆಗ ರಾಮಸ್ವಾಮಿ ನಾಯ್ಕರ್ ಎಂಬ ಹೋರಾಟಗಾರರೊಬ್ಬರು ಇದ್ದರು.ಅವರು ಪ್ರತಿ ತಿಂಗಳು ನನಗೆ ಊಟಕ್ಕೆ ರೇಷನ್ ಕೊಡಿಸುತ್ತಿದ್ದರು. ಅವರಿಗಿದ್ದ ಒಬ್ಬನೇ ಮಗ ಅಪಘಾತದಲ್ಲಿ ತೀರಿಕೊಂಡಾಗ ಅವರು ಕಣ್ಮರೆಯಾದರು. ಎಲ್ಲಿಗೆ ಹೋದರು?, ಏನಾದರೂ?     ಎನ್ನುವುದು ಇಂದಿಗೂ ನಮಗ್ಯಾರಿಗೂ ಗೊತ್ತಾಗಿಲ್ಲ. ಹಾಗಾಗಿ ಊಟಕ್ಕೆ ತೊಂದರೆಯಾಗಿ ಕಾಲೇಜು ಬಿಟ್ಟು ಕೃಷಿಗೆ ಬಂದೆ" ಎಂದು ನಿಟ್ಟುಸಿರು ಬಿಟ್ಟರು.
ದರಿದ್ರ ನಿವಾರಣೆ : "ದಲಿತ ಸಂಘರ್ಷ ಸಮಿತಿಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡೆ. ದಸಂಸದಲ್ಲಿ ಇದ್ದ ಕಾರಣ ಗೆಳೆಯರ ಗುಂಪು ದೊಡ್ಡದಾಯಿತು.ಕೆಲವರು ಕಷ್ಟಕ್ಕೂ ನೆರವಾದರೂ. ಆಗ ಬೆಟ್ಟಯ್ಯ ಕೋಟೆ ಐದನೇ ನಂಬರಿನ ಜೋಳ ಮತ್ತು ರಾಗಿಯನ್ನು ಬೆಳೆದು ಗುಳಿಗೆ ತುಂಬುತ್ತಿದ್ದರು.ಅವರಿಂದ ನಾನು ರಾಗಿ ಜೋಳ ತಂದು ದೊಡ್ಡ ಸಂಸಾರದ ಹಸಿವು ನೀಗಿಸಿದೆ. ಕ್ಷೀರಸಾಗರ ಅವರು ಕೃಷಿ ಕೆಲಸಕ್ಕೆ ಹಣಕಾಸಿನ ಸಹಾಯ ಮಾಡುತ್ತಿದ್ದರು. ಇದೆ ವೇಳೆ 1982 ರಲ್ಲಿ ಮಂಚಯ್ಯನವರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದರು.ಜಮೀನಿನಲ್ಲಿ ಬಾವಿ ತೆಗೆಸಲು 15 ಸಾವಿರ ರೂಪಾಯಿ ಸಾಲಕೊಟ್ಟರು.ತಂದೆ ಮಕ್ಕಳು ಎಲ್ಲಾ ಸೇರಿಕೊಂಡು ತೆರೆದ ಬಾವಿ ತೊಡಿದೆವು. ನೀರು ಸಿಕ್ಕಿತು. ಅದೇ ವರ್ಷ ನಾನು ಆರು ಎಕರೆ ಜಮೀನಿನಲ್ಲಿ ಐದನೇ ನಂಬರಿನ ಜೋಳ ಬೆಳೆದೆ. ಭರ್ಜರಿ ಫಸಲು ಬಂದು ಮೊದಲ ಬಾರಿಗೆ ನಮ್ಮ ದಾರಿದ್ರ್ಯವೆಲ್ಲ ನೀಗಿತು. ಹಸಿವಿನ ಸಮಸ್ಯೆ ನಿವಾರಣೆಯಾಯಿತು.ನಂತರ ಆರು ಪಂಪ್ಸೆಟ್ ಮಾಡಿಸಿ ವಾಣೀಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆದು ಆಥರ್ಿಕವಾಗಿ ಸಬಲರಾದೆವು. ಅಣ್ಣತಮ್ಮಂದಿರೆಲ್ಲಾ ಭಾಗವಾಗಿ ನನ್ನ ಭಾಗಕ್ಕೆ ಮೂರು ಎಕರೆ ತೋಟ ಬಂತು. ಇದೆ ನಾವು ಕುಳಿತಿರುವ ಆ ತೋಟ" ಎಂದು ನಕ್ಕರು.
ಪತ್ರಿಕೆಯಲ್ಲಿ ಬರುತ್ತಿದ್ದ ಕೃಷಿ ಸುದ್ದಿಗಳು ಮತ್ತು ನಮ್ಮ ಭಾಗದಲ್ಲಿ ಆಗತಾನೇ ಬಂದಿದ್ದ ತಮಿಳಿಗರು ಮಾಡುತ್ತಿದ್ದ ಕೃಷಿಯನ್ನು ನೋಡಿ ಸ್ಫೂತರ್ಿ ಮತ್ತು ಪ್ರೇರಣೆ ಪಡೆದು ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾದ ಮಹದೇವ್ ಶ್ರಮವಹಿಸಿ ದುಡಿದರೆ ಕೃಷಿ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ.ಇದಕ್ಕೆ ನನಗಿಂತ ಬೇರೆ ಸಾಕ್ಷಿ ಬೇಕಿಲ್ಲ ಎನ್ನುತ್ತಾರೆ. ಈ ಭಾಗದಲ್ಲಿ ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ. ಇಪ್ಪತ್ತೈದು ವರ್ಷದ ಹಿಂದೆ 200 ತೆಂಗಿನ ಸಸಿ ನೆಟ್ಟಿದ್ದರು. ಅದರಲ್ಲಿ 80 ಉಳಿದು ದೊಡ್ಡ ಮರವಾಗಿ ಫಸಲು ನೀಡುತ್ತಿವೆ.
ಪಾಳೇಕರ್ ಹಾದಿಯಲ್ಲಿ : 2005 ನೇ ಇಸವಿಯಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸುಭಾಷ್ ಪಾಳೇಕರ್ ನೈಸಗರ್ಿಕ ಕೃಷಿ ತರಬೇತಿ ಕಾಯರ್ಾಗಾರದಲ್ಲಿ ಭಾಗವಹಿಸಿದ್ದ ಮಹದೇವ್ ಅಂದಿನಿಂದ ತಾವೂ ನೈಸಗರ್ಿಕ ಕೃಷಿಕರಾಗಿ ಬದಲಾಗಿದ್ದಾರೆ. ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಇವರು ಎಲ್ಲಾ ಸದಸ್ಯರನ್ನು ಶಿಬಿರಕ್ಕೆ ಕರೆದುಕೊಂಡು ಹೋಗಿದ್ದನ್ನು ನೆನಪುಮಾಡಿಕೊಂಡರು. ಸ್ವಾಮಿ ಆನಂದ್ ಅವರನ್ನು ಬಿಟ್ಟರೆ ನಾನೇ ತಾಲೂಕಿನಲ್ಲಿ ನೈಸಗರ್ಿಕ ಕೃಷಿ ಆರಂಭಿಸಿದ ಎರಡನೇಯವನ್ನು ಎಂದು ಹೇಳುವ ಮಹದೇವ್ ಈ ಪದ್ಧತಿ ಆರಂಭದಲ್ಲಿ ಕಷ್ಟ ಎನಿಸಿದರು ಮೂರ್ನಾಲ್ಕು ವರ್ಷದ ನಂತರ ಸುಲಭ ಮತ್ತು ಆರಾಮದಾಯಕ ಎನ್ನುತ್ತಾರೆ.
ತಮ್ಮ ಮೂರು ಎಕರೆ ಜಮೀನಿಗೆ ಆರಂಬದಲ್ಲಿ ಉಳುಮೆ ಮಾಡಿಸಿ ಏಕದಳ,ದ್ವಿದಳ ಧಾನ್ಯಗಳನ್ನು ಭಿತ್ತಿ ಹೂ ಬಿಡುವ ಕಾಲಕ್ಕೆ ಮಣ್ಣಿಗೆ ಸೆರಿಸಿದ್ದು ಬಿಟ್ಟರೆ ಇಪ್ಪತ್ತೈದು ವರ್ಷಗಳಿಂದ ತಮ್ಮ ಭೂಮಿ ಉಳುಮೆ ಕಂಡಿಲ್ಲ. ಈಗ 10 ಮತ್ತು 10 ಅಡಿ ಅಂತರದಲ್ಲಿ ಬಾಳೆಯ ನಡುವೆ ಸಿಲ್ವರ್ ಸಸಿಗಳನ್ನು ನೆಟ್ಟಿದ್ದು ಕಾಳು ಮೆಣಸು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ದಸಂಸ ಸಂಘಟನೆಯ ಸಮಯದಲ್ಲಿ ಒಂದು ಬ್ಯಾಗಿಗೆ ಮೈಯುಜ್ಜುವ ಕಲ್ಲು ಮತ್ತು ಒಂದು ಜೊತೆ ಬಟ್ಟೆ ಹಾಕಿಕೊಂಡು ಮನೆ ಬಿಟ್ಟರೆ ವಾರವಾದರೂ ಮನೆಗೆ ಬರುತ್ತಿರಲಿಲ್ಲ.ಆಗ ನಾವು ಸರಕಾರಿ ಕಚೇರಿಗೆ ಹೋದರೆ ವಿಜಿಲೆನ್ಸ್ ಸ್ವ್ಕಾಡ್ ಬಂದಂತೆ ಅಧಿಕಾರಿಗಳು ಹೆದರುತ್ತಿದ್ದರು. ಈಗ ಭ್ರಷ್ಟತೆ, ಸ್ವಜನ ಪಕ್ಷಪಾತ ಹೆಚ್ಚಾಗಿದ್ದು ಯಾರು ಯಾರಿಗೂ ಗೌರವ ಕೊಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
"ಕಳೆದ ಮೂರು ವರ್ಷದಿಂದ ನಾನೂ ಹೋರಾಟವನ್ನು ಕಡಿಮೆ ಮಾಡಿ ನೆಲದ ಸಂಪರ್ಕಕ್ಕೆ ಬಂದಿದ್ದೇನೆ. ದುಡಿದು ತೋಟಕಟ್ಟುವ ಮೂಲಕ ನಾವು ಕೂಡ ಸಮಾಜಕ್ಕೆ ಮಾದರಿಯಾಗಬೇಕು.ಬರೀ ಹೋರಾಟ ಚಳವಳಿ ಅಂತ ನಿಂತುಕೊಂಡರೆ ಬೋಳೆತನ ಬರುವ ಅಪಾಯವಿರುತ್ತದೆ. ಕ್ಷೀರಸಾಗರ ಅವರಂತಹವರ ತೋಟವನ್ನು ನೋಡಿದಾಗ ನಾವು ಕೂಡ ಯಾವಾಗ ಅಂತಹ ತೋಟ ಮಾಡುವುದು ಅಂತ ಚಡಪಡಿಕೆ ಶುರುವಾಗುತ್ತದೆ. ಅದಕ್ಕಾಗಿ ಈಗ ನೆಲದ ಸಂಪರ್ಕಕ್ಕೆ ಹೆಚ್ಚು ಬಂದಿದ್ದು ಗಿಡಮರಗಳನ್ನು ಬೆಳೆಸುತ್ತಿದ್ದೇನೆ. ಉತ್ತಮ ಗಾಳಿ,ಸ್ವಚ್ಛ ಪರಿಸರದ ನಡುವೆ ಆರೋಗ್ಯವಾಗಿ ನೆಮ್ಮದಿಯಾಗಿದ್ದೇನೆ" ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ಭೀಮನಹಳ್ಳಿ ಮಹದೇವ್ 9008884692 ಸಂಪಕರ್ಿಸಬಹುದು.






ಕಾಳು ಮೆಣಸು ಬೆಳೆದ  ಆದಿವಾಸಿಯ ಕೃಷಿ ಯಶೋಗಾಥೆ

# ಆರ್ಥಿಕ ಸದೃಢತೆಯತ್ತ ಗಿರಿಜನರ ಚಿತ್ತ # ರೈತರಾಗಿಯೂ ಯಶಸ್ಸು ಪಡೆದ ಕಾಡುಜನರು

ಮುಗಿಲಿನ ಕಡೆಗೆ ಮುಖಮಾಡಿ ನಿಂತ ಮರಗಳ ಸಾಲು.ತೇಗ,ಹೊನ್ನೆ,ಬೀಟೆ,ಸಿಲ್ವರ್,ಹಲಸು ಹೆಚ್ಚಾಗಿ ಗ್ಲಿರಿಸೀಡಿಯಾ (ಗೊಬ್ಬರದ ಗಿಡ) ಮರಗಳು.ಪ್ರತಿ ಮರಮರಕ್ಕೂ ಹಬ್ಬಿದ ಕಾಳು ಮೆಣಸಿನ ಬಳ್ಳಿಗಳು. ಕಾಳು ಮೆಣಸಿನ ಅರ್ಧ ತೋಟಕ್ಕೆ ಮೂವತ್ತು ವರ್ಷ ತುಂಬಿದ್ದರೆ. ಇನ್ನರ್ಧ ತೋಟಕ್ಕೆ ಈಗ ಏಳು ವರ್ಷ. ಸಂಪೂರ್ಣ ನೈಸಗರ್ಿಕವಾಗಿ ಬೆಳೆಸಿರುವ ಈ ಕಾಳು ಮೆಣಸಿನ ತೋಟಕ್ಕೆ ಸರಕಾರಿ ಗೊಬ್ಬರ ಬಳಸಿಲ್ಲ.ದನದ ಗೊಬ್ಬರ ಮಾತ್ರ ಬಳಕೆ ಮಾಡಲಾಗಿದೆ. ಸಣ್ಣಪುಟ್ಟ ರೋಗ ಕಾಣಿಸಿಕೊಂಡರೆ ಸುಣ್ಣದ ನೀರಿಗೆ ಸಗಣಿ ಕಲಿಸಿ ಬುಡಕ್ಕೆ ಹಾಕುತ್ತಾರೆ.ಒಂದೂವರೆ ಎಕರೆಯಲ್ಲಿರುವ ಈ ಮೆಣಸಿನ ತೋಟ ಕಟ್ಟಿದ್ದು ಅನುಭವಿ ರೈತನಲ್ಲ ಆದಿವಾಸಿ ಜನಾಂಗದ ಜೇನು ಕುರುಬ ಶಿವಣ್ಣ ಎನ್ನುವುದು ವಿಶೇಷ.
ಹೆಗ್ಗಡದೇವ ಕೋಟೆ ತಾಲೂಕಿಗೆ ಸೇರಿದ ಎನ್.ಬೇಗೂರು ವ್ಯಾಪ್ತಿಗೆ ಸೇರಿರುವ ಹೊಸಹಳ್ಳಿ ಹಾಡಿಯ ಕಾಡಂಚಿನಲ್ಲಿರುವ ಈ ಕಾಳು ಮೆಣಸಿನ ತೋಟ ನಾಗರಿಕ ಜಗತ್ತಿನ ರೈತಾಪಿ ಜನಕ್ಕೆ ಹಲವಾರು ಪಾಠಗಳನ್ನು ಕಲಿಸುತ್ತದೆ. ನಾಡಿನ ರೈತರು ಕೃಷಿಯನ್ನು ಮರೆತು ನಗರ ಸೇರುತ್ತಿರುವ ಈ ಹೊತ್ತಿನಲ್ಲಿ ಕಾಡಿನ ಜನ, ಆದಿವಾಸಿ ಜನಾಂಗಕ್ಕೆ ಸೇರಿದ ಗಿರಿಜನ ಕೃಷಿ ಮಾಡುತ್ತಿದ್ದಾರೆ. ನಿಸರ್ಗದೊಂದಿಗೆ ಬದುಕಿದ ಜೀವಗಳು ನಿಸರ್ಗವನ್ನು ಬಿಟ್ಟು ಇರಲಾರರು ಎನ್ನುವುದನ್ನು ಇದು ತೋರಿಸುತ್ತದೆ.
ಎಪ್ಪತ್ತರ ದಶಕದಲ್ಲಿ ಹೆಗ್ಗಡದೇವನ ಕೋಟೆ ತಾಲೂಕು ಒಂದರಲ್ಲೇ ಮೂರು ಅಣೆಕಟ್ಟುಗಳನ್ನು ಕಟ್ಟಲಾಯಿತು. ಅವು ನುಗು,ತಾರಕ,ಕಬಿನಿ ಅಣೆಕಟ್ಟುಗಳು. ಇದರಲ್ಲಿ ಕಬಿನಿ ದೊಡ್ಡದು.ಇದರೊಂದಿಗೆ ಆದಿವಾಸಿ ಗಿರಿಜನರ ಬದುಕು ಮುಳುಗಡೆಯಾಯಿತು.
ಕಬಿನಿ ಹಿನ್ನೀರು ಚಾಚಿಕೊಂಡಿರುವ 61 ಚ.ಕಿ.ಮೀ ವ್ಯಾಪ್ತೀಯ 14 ಗಿರಿಜನರ ಹಾಡಿಯ ಸಾವಿರ ಕುಟುಂಬಗಳು ಅತಂತ್ರವಾದವು. ಒಟ್ಟು 22 ಹಳ್ಳಿಗಳು ಮುಳುಗಡೆಯಾದವು. ಹಳ್ಳಿಗಳ ಕಂದಾಯ ಭೂಮಿಯ ವಿಸ್ತೀರ್ಣ 9 ಸಾವಿರ ಎಕರೆಗಳು.ಪಯರ್ಾಯವಾಗಿ ಇವರಿಗೆ ಹದಿನಾಲ್ಕುಸಾವಿರ ಎಕರೆ ಪ್ರದೇಶವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಅರಣ್ಯಭೂಮಿಯೂ ಸೇರಿದೆ. ಆದರೆ ಆದಿವಾಸಿಗಳಿಗೆ ಸೇರಬೇಕಿದ್ದ ಭೂಮಿ ನ್ಯಾಯಯುತವಾಗಿ ಸಿಗಲಿಲ್ಲ.ಕೆಲವರಿಗೆ ಮಾತ್ರ ಭೂಮಿ ಮಂಜೂರಾತಿ ಸಿಕ್ಕಿದೆ.ಇವುಗಳೆ ಇಂದು ಹೊಸಹಳ್ಳಿ ಹಾಡಿ,ಅಣ್ಣೂರು ಹಾಡಿ,ಮಂಚೇಗೌಡನ ಹಾಡಿ ಹೀಗೆ ವಿವಿಧ ಹಾಡಿಗಳಲ್ಲಿ ಹಂಚಿ ಹರಿದುಹೋಗಿದೆ.ಅಂತಹ ಒಂದು ಹಾಡಿ ಹೊಸಹಳ್ಳಿ ಹಾಡಿ.
ಮೂಲ ಹುಡುಕುತ್ತಾ...: ಆದಿವಾಸಿಗಳ ಬೇಸಾಯ ಜ್ಞಾನದ ಮೂಲ ಹುಡುಕುತ್ತಾ ಹೋದರೆ ಹಲವು ಕುತೂಹಲಕರ ಸಂಗತಿಗಳು ತೆರೆದುಕೊಳ್ಳುತ್ತವೆ ಎನ್ನುವ ಕ್ಷೀರಸಾಗರ "ಪ್ರಪಂಚದಾದ್ಯಂತ ಆದಿವಾಸಿ ಜನಾಂಗದವರು ಇದ್ದಾರೆ. ಮಂಗೋಲಾಯ್ಡ್,ಟಿಬೆಟ್,ಜಪಾನ್,ಚೀನಾ,ಬರ್ಮ ಆದಿವಾಸಿ ಮತ್ತು ಬುಡಕಟ್ಟು ಜನಾಂಗಗಳಿರುವ ದೇಶಗಳು. ಇಂತಹ ಸಣ್ಣಪುಟ್ಟ ದೇಶಗಳ ವಿರುದ್ಧ ಸತತವಾಗಿ ಮೂವತ್ತು ವರ್ಷಗಳ ಕಾಲ ಹೋರಾಟಮಾಡಿದ ಅಮೇರಿಕಾ ಅವುಗಳನ್ನು ವಸಹತುಗಳನ್ನಾಗಿ ಮಾಡಿಕೊಂಡು ವಶಕ್ಕೆ ಪಡೆಯಲು ನೋಡಿತು. ಕೊನೆಗೂ ವಶಕ್ಕೆ ಪಡೆಯಲು ಆಗಲಿಲ್ಲಾ. ಬಿಟ್ಟು ಹೋದರು. ಇಂಗ್ಲೇಡ್ ಕೂಡ ಹೀಗೆ ಮಾಡಿತು.
ಆದಿವಾಸಿಗಳಿರುವ ಈ ಪುಟ್ಟ ದೇಶಗಳು ಮಿಲ್ಟ್ರಿ ಸೈನ್ಯದ ವಿರುದ್ಧ ಹೋರಾಡಿ ಸ್ವಾಂತಂತ್ರ ರಾಷ್ಟ್ರಗಳಾದ ಮೇಲೆ ಆಥರ್ಿಕವಾಗಿ ಸಬಲರಾಗಲು ಹಲವು ದಾರಿಗಳನ್ನು ಹುಡುಕಿಕೊಂಡವು. ಅದರಲ್ಲಿ ಕಾಳು ಮೆಣಸಿನ ಕೃಷಿಯೂ ಒಂದು.ಸ್ವಾತಂತ್ರ ಸಿಕ್ಕ ಮೇಲೆ ಈ ದೇಶಗಳು ದಿವಾಳಿ ಆಗುತ್ತವೆ ಅಂತ ಎಲ್ಲರೂ ಭಾವಿಸಿದ್ದರು.
ಆದರೆ ಅಲ್ಲಿನ ನಾಯಕರು ಜನಪರವಾದ ಕಮ್ಯೂನ್ (ವಿಕೇಂದ್ರಿಕೃತ) ರೀತಿಯ ಹೋರಾಟ ರೂಪಿಸಿದ್ದರು. ವಾಣಿಜ್ಯ ಬೆಳೆ ಬೆಳೆಯುವ ಮೂಲಕ  ದೇಶವನ್ನು ಆಥರ್ಿಕವಾಗಿ ಸದೃಢಮಾಡುತ್ತಾ ಹೋದರು. ಮುಖ್ಯವಾಗಿ ಅವರು ಆಯ್ಕೆ ಮಾಡಿಕೊಂಡದ್ದು ಕಾಳು ಮೆಣಸು . ಸಿಮೆಂಟ್ ಕಂಬ, ಮರಗಿಡ ನೆಟ್ಟು 100, 500 ಎಕರೆ ಪ್ರದೇಶದಲ್ಲಿ ವ್ಯಾಪಕವಾಗಿ ಕಾಳು ಮೆಣಸು ಬೆಳೆಸಿದರು.
ಬಡತನ ಹೋಗಲಾಡಿಸಲು ಇಂತಹ ಸಣ್ಣ ಸಮುದಾಯಗಳು ಮಾಡಿದ ಪಯರ್ಾಯಗಳನ್ನು ನಾವೂ ಕಂಡುಕೊಳ್ಳಬೇಕು. ನಮ್ಮ ಇಂಡಿಯಾದಂತಹ ದೇಶಗಳಲ್ಲಿ ಸಂಘಟಿತರಾಗಿ ರೈತರು ಯಾಕೆ ಇಂತಹ ಪ್ರಯತ್ನ ಮಾಡ್ತಾ ಇಲ್ಲ ಅಂತ ಯೋಚಿಸುತ್ತಾ ಇದ್ದೆ. ಒಂದು ದಿನ ಕೆಲಸ ನಿಮಿತ್ತ ಹೊಸಹಳ್ಳಿ ಹಾಡಿಗೆ ಹೋಗಬೇಕಾಯಿತು. ಅಲ್ಲಿ ಹೋಗಿ ನೋಡಿದರೆ ಶಿವಣ್ಣ ಈ ರೀತಿಯ ಕೆಲಸ ಮಾಡುತ್ತಿರುವುದನ್ನು ನೋಡಿ ಅಚ್ಚರಿಯಾಯಿತು' ಎನ್ನುತ್ತಾರೆ.
ಆದಿವಾಸಿಗಳಿರುವ ಬೇರೆ ಬೇರೆ ದೇಶದ ಜನರಿಗೂ, ಕೋಟೆಯ ಹಾಡಿಯಲ್ಲಿರುವ ಇವರಿಗೂ ನೇರಸಂಪರ್ಕ ಇಲ್ಲದೆ ಇರಬಹುದು ನಿಜ. ಆದರೆ ಈ ಆದಿವಾಸಿಗಳಿಗೆ, ಆ ಆದಿವಾಸಿಗಳಿಗೂ ಏನೋ ಸಂಬಂಧ ಇದೆ. ಇಬ್ಬರ ಆಲೋಚನೆಗಳು ಒಂದೆ ರೀತಿ ಇವೆ ಅಂತ ಅನಿಸಿತು.
ನಾಡಿನಲ್ಲಿರುವ ನಮ್ಮ ರೈತರೇ ಹೀಗೆ ಆಥರ್ಿಕವಾಗಿ ಸದೃಢವಾಗುವ ಕೃಷಿ ಮಾಡಿಕೊಂಡಿಲ್ಲ. ಆದರೆ ಆದಿವಾಸಿಗಳು ಮಾಡಿದ್ದಾರೆ. ನಾವು ಕೂಡ ಆದಿವಾಸಿಗಳಿಂದ ಕಲಿಯುವುದು ಬಹಳ ಇದೆ. ಕಳೆದು ಹೋಗಿರುವ ಆಥರ್ಿಕತೆಯನ್ನು ಪುನಶ್ಚೇತನಗೊಳಿಸಲು ಈ ರೀತಿಯ ಪ್ರಯತ್ನಗಳು ಆಗಬೇಕು. ಸರಕಾರಗಳು ಈ ದಿಕ್ಕಿನಲ್ಲಿ ಯೋಚಿಸಬೇಕು ಎಂದು ಕ್ಷೀರಸಾಗರ ಹೇಳುತ್ತಾರೆ.
ಹಾಡಿಯತ್ತ ಪಯಣ : ನಾಡಿನ ಜನರೇ ಕೃಷಿಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಆದಿವಾಸಿ ಜನಾಂಗಕ್ಕೆ ಸೇರಿದವರೊಬ್ಬರು ಕಳೆದ ಮೂವತ್ತು ವರ್ಷಗಳಿಂದ ಕಾಡಂಚಿನ ಹಾಡಿಯಲ್ಲಿ ಕಾಳಿ ಮೆಣಸು ಬೆಳೆಯುತ್ತಿದ್ದಾರೆ ಎಂದು ಹೋರಾಟಗಾರ,ಲೇಖಕ ಕ್ಷೀರಸಾಗರ ಹೇಳಿದಾಗ ಮೊದಲು ನಂಬಲಾಗಲಿಲ್ಲ.ಸಾಮಾಜಿಕ ಜಾಲತಾಣದಲ್ಲಿ (ಫೇಸ್ಬುಕ್)ನಲ್ಲಿ ಕ್ಷೀರಸಾಗರ ಕೆಲವು ಪೋಟೊಗಳನ್ನು ಹಾಕಿದ್ದು ನೋಡಿದ ನಮಗೆ ಅವರನ್ನು ಕಾಣುವ ಕುತೂಹಲ ಹೆಚ್ಚಾಯಿತು.
ನಿಸರ್ಗ ಸಿದ್ದರಾಜು ಜೊತೆಗೆ ಆದಿವಾಸಿ ಹೋರಾಟಗಾರ ಜನ ಮೆಚ್ಚಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಮತ್ತು ಕ್ಷೀರಸಾಗರ ನಮ್ಮನ್ನು ಕೋಟೆಯ ಹ್ಯಾಂಡ್ಪೋಸ್ಟ್ ಬಳಿ ಸೇರಿಕೊಂಡರು. ಆದಿವಾಸಿ ಕೃಷಿಯನ್ನು ಹುಡುಕಿಕೊಂಡು ಹೊಸಹಳ್ಳಿ ಹಾಡಿಗೆ ನಮ್ಮ ಕಾರು ಕಚ್ಛಾ ರಸ್ತೆಯಲ್ಲಿ ಏರುತ್ತಾ ಇಳಿಯುತ್ತಾ ಹೋಗಿ ನಿಂತಾಗ ಮಧ್ಯಾಹ್ನ ಹನ್ನೊಂದು ಗಂಟೆ.
ಸಾಮಾನ್ಯವಾಗಿ ಯಾವುದೇ ಹಳ್ಳಿಗೆ ಹೋದರು ಅಲ್ಲಿ ವಯಸ್ಸಿಗೆ ಬಂದ ಯುವಕರು,ಮಕ್ಕಳು ಕಾಣುವುದೇ ಇಲ್ಲ. ಆದರೆ ಇಲ್ಲಿ ಹಾಡಿಯಲ್ಲಿ ಮಕ್ಕಳ ಸೈನ್ಯವೇ ನೆರೆದಿತ್ತು.ಇದನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಹಳ್ಳಿಗಳಲ್ಲಿ ವೃದ್ಧರ ಕಾಲಯಾಪನೆ.ಹಾಡಿಗಳಲ್ಲಿ ಮಕ್ಕಳ ಕಲರವ !.
ಆದಿವಾಸಿ ಶಿವಣ್ಣ ಮತ್ತು ಐದಾರು ಹುಡುಗರು ನಮ್ಮನ್ನು ನೇರ ಕಾಳು ಮೆಣಸಿನ ತೋಟಕ್ಕೆ ಕರೆದುಕೊಂಡು ಹೋದರು.ಇದುವರೆಗೂ ಅಡಿಕೆ,ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕಾಳು ಮೆಣಸು ನೋಡಿದ್ದ ನಮಗೆ ಇಲ್ಲಿ ವಿವಿಧ ಮರಗಳ ಮೇಲೆ ಬರಿ ಕಾಳು ಮೆಣಸಿನ ಬಳ್ಳಿಗಳೆ ಹಬ್ಬಿನಿಂತಿರುವುದುನ್ನು ನೋಡಿ ಆಶ್ಚರ್ಯವಾಯಿತು.ಅದರಲ್ಲೂ ಗ್ಲಿರಿಸೀಡಿಯಾ ಮರಗಳ ಮೇಲೆ ಕಾಳು ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದ ಶಿವಣ್ಣನ ಜಾಣ್ಮೆನೋಡಿ ಬೆರಗಾಯಿತು.
ಮೂವತ್ತು ವರ್ಷಗಳಿಂದ ಹೊಸಹಳ್ಳಿ ಹಾಡಿಯ ಮೂರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಶಿವಣ್ಣ ಒಂದೂವರೆ ಎಕರೆಯಲ್ಲಿ ಕಾಳು ಮೆಣಸು,ಒಂದು ಎಕರೆಯಲ್ಲಿ ಏಲಕ್ಕಿ ಬಾಳೆ ಉಳಿದ ಪ್ರದೇಶದಲ್ಲಿ ರಾಗಿ ಭಿತ್ತನೆ ಮಾಡಿದ್ದರು. ಒಂದು ಬೋರ್ವೆಲ್ ವ್ಯವಸ್ಥೆ ಇದ್ದು ನೀರು ಚೆನ್ನಾಗಿದೆ.ತೋಟಕ್ಕೆಲ್ಲಾ ಸ್ಪಿಂಕ್ಲರ್ ಮೂಲಕ ನೀರು ಕೊಡುತ್ತಾರೆ.ಕಾಳು ಮೆಣಸನ್ನು ಮಾತ್ರ ಸಂಪೂರ್ಣ ನೈಸಗರ್ಿಕ ಪದ್ಧತಿಯಲ್ಲಿ ಬೆಳೆಯುವ ಶಿವಣ್ಣ ಬಾಳೆಗೆ ಸ್ವಲ್ಪ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರವನ್ನೂ ಬಳಸುತ್ತಾರೆ.
ತೋಟದಲ್ಲಿ ಕರಿ ಮುಂಡ ಮತ್ತು ಜೀರಿಗೆ ಮುಂಡ ಎಂಬ ಎರಡು ತಳಿಯ ಮೆಣಸು ಬಳ್ಳಿಗಳು ಇದ್ದು ಕಳೆದ ಮೂವತ್ತು ವರ್ಷಗಳಿಂದ ರೋಗಬಾಧೆಗೆ ತುತ್ತಾಗಿಲ್ಲ ಎನ್ನುವುದು ವಿಶೇಷ. ಸಣ್ಣಪುಟ್ಟ ರೋಗಬಾಧೆಗೆ ತುತ್ತಾದರೆ ಸುಣ್ಣದ ತಿಳಿ ನೀರಿಗೆ ದನದ ಸಗಣಿ ಮಿಶ್ರಣ ಮಾಡಿಕೊಂಡು ಕಲಸಿ ಬಳ್ಳಿಯ ಬುಡಕ್ಕೆ ಹಾಕುವುದಾಗಿ ಹೇಳುವ ಶಿವಣ್ಣ ಇದುವರೆಗೂ ಎಲೆಗಳಿಗೆ ಯಾವ ಔಷಧಿಯನ್ನು ಸಿಂಪರಣೆ ಮಾಡಿಲ್ಲ ಎನ್ನುತ್ತಾರೆ.
ಇದನ್ನು ಮತ್ತೊಬ್ಬ ಸಾವಯವ ರೈತ ಶಿವನಂಜಯ್ಯ ಬಾಳೆಕಾಯಿಯವರಿಗೆ ಅಲ್ಲಿಂದಲೇ ದೂರವಾಣಿ ಮಾಡಿ ತಿಳಿಸಿದಾಗ,ಕರಿ ಮುಂಡ ಮತ್ತು ಜೀರಿಗೆ ಮುಂಡ ತಳಿಯ ರೋಗರಹಿತ ಕಾಳಯ ಮೆಣಸಿನ ಬಳ್ಳಿಗಳು ಸಿಗುವುದೆ ಅಪರೂಪ ಬರುವ ಮಾಚರ್್ ತಿಂಗಳಲ್ಲಿ ಆ ಬಳ್ಳಿಗಳನ್ನು ಪ್ಯಾಕೆಟ್ಗೆ ಹಾಕಿ ನರ್ಸರಿಮಾಡಲು ಹೇಳಿ. ಆ ತಳಿಗಳನ್ನು ನಾವೆಲ್ಲ ಉಳಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು. ನರ್ಸರಿಯಲ್ಲಿ ಈ ಬಳ್ಳಿಗಳನ್ನು ಬೆಳೆಸಿ ಆಸಕ್ತರಿಗೆ ಕೊಡುವ ಮೂಲಕ ತಳಿಯನ್ನು ಉಳಿಸಿ ಕಾಪಾಡಿಕೊಳ್ಳಲು ಶಿವಣ್ಣ ಅವರನ್ನು ಒಪ್ಪಿಸಿದೆವು.
ಪ್ರತಿವರ್ಷ ಕನಿಷ್ಠ ಮೂರರಿಂದ ನಾಲ್ಕು ಕ್ವಿಂಟಾಲ್ ಕಾಳು ಮೆಣಸಿನ ಇಳುವರಿ ಪಡೆಯುವ ಶಿವಣ್ಣ ಫಸಲು ಚೆನ್ನಾಗಿ ಬಂದಾಗ ಏಳು ಕ್ವಿಂಟಾಲ್ ಮಾರಾಟ ಮಾಡಿದ ಉದಾಹರಣೆಗಳು ಇವೆ.ಕೇರಳದ ವ್ಯಾಪಾರಿಗಳು ಇಲ್ಲಿಗೆ ಬಂದು ಖರೀದಿ ಮಾಡುತ್ತಾರೆ. ಕೆಲವೊಮ್ಮೆ ಮೈಸೂರು ಅಥವಾ ಮಾನಂದವಾಡಿಗೆ ನಾವೇ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಶಿವಣ್ಣ ಹೇಳುತ್ತಾರೆ.
"ವರ್ಷಕ್ಕೆ ಬೇಸಾಯದ ಖಚರ್ು ಅಂತ ಲಕ್ಷ ರೂಪಾಯಿ ತೋಟಕ್ಕೆ ವೆಚ್ಚ ಮಾಡುತ್ತೇನೆ. ಮನೆಮಂದಿ ಸೇರಿ ದುಡಿಯುತ್ತೇವೆ.ಅಗತ್ಯ ಬಿದ್ದರೆ ಕೂಲಿ ಆಳುಗಳನ್ನು ಕರೆದುಕೊಳ್ಳುತ್ತೇವೆ. ಈ ವರ್ಷ ಪ್ರತಿ ಕೆ.ಜಿ.ಮೆಣಸಿಗೆ 250 ರೂಪಾಯಿ ಇದ್ದು ಇದೆ ದರಕ್ಕೆ ಮಾರಾಟವಾದರು ಕಾಳು ಮೆಣಸಿನಿಂದ ಎರಡು ಲಕ್ಷ ಆದಾಯ ಗ್ಯಾರಂಟಿ.ರಾಗಿ,ಬಾಳೆಯಿಂದಲ್ಲೂ ಒಂದಷ್ಟು ದುಡ್ಡು ಬಂದೆ ಬರುತ್ತದೆ" ಎನ್ನುತ್ತಾರೆ.
ಕಾಡಂಚಿನಲ್ಲಿರುವುದರಿಂದ ಕಾಡುಪ್ರಾಣಿಗಳ ಹಾವಳಿ ಇಲ್ಲವೆ ಎಂದು ಕೇಳಿದರೆ ಆನೆಗಳು ಬರುತ್ತವೆ.ರಾತ್ರಿ ಹುಲಿಯೊಂದು ಇಲ್ಲೆ ಬಂದು ನೀರು ಕುಡಿದುಕೊಂಡು ಹೋಗಿದೆ ನೋಡಿ ಎಂದು ಹುಲಿಯ ಹೆಜ್ಜೆಗುರುತನ್ನು ತೋರಿಸಿದರು. ಕಾಡುಪ್ರಾಣಿಗಳು ನಮಗೇನು ಮಾಡುವುದಿಲ್ಲ.ನಾವು ಅವುಗಳಿಗೆ ತೊಂದರೆ ಕೊಡಬಾರದು ಎಂದು ಹೇಳುತ್ತಾ ತಮ್ಮ ಗತಕಾಲದ ಕಾಡಿನ ನೆನಪುಗಳು,ಪ್ರಾಣಿಗಳೊಂದಿಗಿನ ಒಡನಾಟ ಎಲ್ಲವನ್ನು ಹೇಳುತ್ತಾ ಖಿನ್ನರಾಗುತ್ತಾರೆ.ನಾಡಿಗೆ ಹೊಂದಿಕೊಳ್ಳಲಾಗದ, ಕಾಡಿನ ನಂಟನ್ನು ಬಿಟ್ಟಿರಲಾರದ ನೋವು ಅವರ ಮಾತಿನಲ್ಲಿ ಇಣುಕುತ್ತದೆ.
ಮೆಣಸು ಬೆಳೆಯುವ ಆಲೋಚನೆ ನಿಮಗೆ ಹೇಗೆ ಬಂತು ಎಂದರೆ ಮೂವತ್ತು ವರ್ಷಗಳ ಹಿಂದೆ ಮಾನಂದವಾಡಿಯಲ್ಲಿ ಯಾರೋ ಮೆಣಸು ಬೆಳೆದಿದ್ದನ್ನು ನೋಡಿ ಇಪ್ಪತ್ತು ಪ್ಯಾಕೆಟ್ಗಳನ್ನು ತಂದು ಪ್ರಯೋಗಮಾಡಿದೆ. ಅದೇ ಎಲ್ಲವನ್ನು ಕಲಿಸುತ್ತಾ ಹೋಯಿತು. ಅದನ್ನು ಬಿಟ್ಟರೆ ಬೇರೆಲ್ಲಿಯೂ ಹೋಗಿ ಕಲಿತಿಲ್ಲ ಎಂದು ನಗುತ್ತಾರೆ.
ಒಂದು ಅಡಿ ಆಳ.ಒಂದು ಅಡಿ ಅಗಲವಾದ ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ಹಾಕಿ ಗ್ಲಿರಿಸೀಡಿಯಾ ಅಥವಾ ಬೇರೆ ಯಾವುದಾದರೂ ಮರದ ಸಸಿಗಳ ಜೊತೆಗೆ ಮೆಣಸಿನ ಬಳ್ಳಿಗಳನ್ನು ಹಾಕಿಬಿಡುತ್ತಾರೆ.ಗಿಡ ಬೆಳೆದಂತೆಲ್ಲಾ ಮೆಣಸು ಬಳ್ಳಿಯೂ ಹಬ್ಬಿಕೊಂಡು ಹೋಗುತ್ತದೆ. ಸಸಿ ನೆಡುವಾಗ ಸಸಿಯನ್ನು ಬಿಸಿಲಿನಿಂದ ಮರೆಮಾಡಲು ತೇಗದ ಎಲೆಗಳನ್ನು ಇಪ್ಪತ್ತು ದಿನಗಳವರೆಗೆ ಮುಚ್ಚಲಾಗುತ್ತದೆ.ಸಸಿ ಚೆನ್ನಾಗಿ ಬೇರುಕೊಟ್ಟು ಬೆಳೆದುಕೊಳ್ಳುತ್ತದೆ ಎನ್ನುತ್ತಾರೆ ಶಿವಣ್ಣ. ಹೆಚ್ಚಿನ ಮಾಹಿತಿಗೆ ಶಿವಣ್ಣ ದೂ.8861992438 ಅಥವಾ 9880487396 ಸಂಪಕರ್ಿಸಿಬಹುದು.






ಚೋಮನ ಮೂರನೇ ತಲೆಮಾರು ಈ ರೈತ : ಭೂಮಿಯ ಒಡೆಯ `ದೇವಯ್ಯ' !

`ಫಲಶ್ರೇಷ್ಠ ಪ್ರಶಸ್ತಿ' ಪಡೆದ ಕೃಷಿಕ ದಿನ ಪತ್ರಿಕೆ ವಿತರಕ  ನಾಡಿಗೆ ಮಾದರಿ ಯುವಕ 

ಹದಿನೈದು ವರ್ಷಗಳ ಹಿಂದೆ ಕೂಲಿ ಕಾಮರ್ಿಕ.ನಂತರ ಆಂದೋಲನ ಪತ್ರಿಕೆಯ ಏಜೆಂಟ್.ತದನಂತರ ಪೋಟೊ ಸ್ಟೂಡಿಯೋ ಮಾಲೀಕ.ಇಂದು ಐದಾರು ಎಕರೆ ಭೂಮಿಗೆ ಒಡೆಯ. ಹಾಲಿ ಗ್ರಾಮ ಪಂಚಾಯಿತಿ ಸದಸ್ಯ. ಅಷ್ಟೇ ಅಲ್ಲ ಬಾಗಲಕೋಟ ತೋಟಗಾರಿಕ ಕೃಷಿ ವಿಶ್ವವಿದ್ಯಾನಿಲಯದ 2016-17 ನೇ ಸಾಲಿನ `ಫಲಶ್ರೇಷ್ಠ ಪ್ರಶಸ್ತಿ'ಗೆ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಯಾದ ಸಾಧಕ ಈ ವಾರದ ಬಂಗಾರದ ಮನುಷ್ಯ.
ಈ ಅನ್ನದಾತನ ಹೆಸರು ದೇವಯ್ಯ ರಾಘವಪುರ. ಮೈಸೂರು - ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಗ್ರಾಮ ರಾಘವಪುರ.ದಶಕಗಳ ಹಿಂದೆ ವಾಸಿಸಲು ಪುಟ್ಟ ಮನೆಯೊಂದನ್ನು ಹೊರತುಪಡಿಸಿದರೆ ಅಂಗೈ ಅಗಲ ಜಾಗಕೂಡ ಇರದ ಕುಟುಂಬ `ದುಡಿಮೆಯೇ ದೇವರು' ಎಂಬ ನಂಬಿಕೆಯ ಮೇಲೆ ನೆಮ್ಮದಿಯ ಜೀವನ ಕಟ್ಟಿಕೊಂಡಿದೆ. ಪುಟ್ಟಮಾದಮ್ಮ ಮತ್ತು ದಿ.ವೆಂಕಟಯ್ಯನವರ ಮಗನಾದ ದೇವಯ್ಯ ರಾಘವಪುರ ತನ್ನ ದುಡಿಮೆಯಿಂದ ಹಂತಹಂತವಾಗಿ ಮೇಲೆಬಂದು ಅಕ್ಕಲಪುರದಲ್ಲಿ ಮನೆಮಾತಾಗಿದ್ದಾರೆ.ಪತ್ನಿ ಲಕ್ಷ್ಮಿ ಮತ್ತು ಮೂವರು ಮಕ್ಕಳೊಂದಿಗೆ ಕೃಷಿಯಲ್ಲಿ ಖುಶಿಕಾಣುತ್ತಿದ್ದಾರೆ.
ನಾಲ್ಕು ಎಕರೆ ಹದಿನೈದು ಗುಂಟೆ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿಮರ್ಾಣ ಮಾಡಿಕೊಂಡಿದ್ದಾರೆ.ಅಲ್ಲಿ ದೊಣ್ಣೆ ಮೆಣಸಿನಕಾಯಿ,ಟೊಮಟೊ ಬೆಳೆಯುತ್ತಾರೆ.ಉಳಿದ ಮೂರು ಎಕರೆ ಜಮೀನಿನಲ್ಲಿ 12 ಅಡಿ ಅಂತರದಲ್ಲಿ ಜೋಡಿ ಸಾಲುಮಾಡಿ ನಾಲ್ಕು ಸಾವಿರ ಏಲಕ್ಕಿ ಬಾಳೆ ಹಾಕಿದ್ದಾರೆ.ಬಾಳೆಯ ನಡುವೆ ದಪ್ಪ ಮೆಣಸಿನಕಾಯಿ ಹಾಕಿದ್ದಾರೆ.ಜಮೀನಿನ ಬದುವಿನಲ್ಲಿ ಸಪೋಟ,ಹಲಸು,ಪಪ್ಪಾಯದಂತಹ ಹಣ್ಣಿನ ಗಿಡಗಳಿವೆ. ದೀರ್ಘವಧಿಗೆ ಆದಾಯ ತರಲು ಸುತ್ತ ಹೆಬ್ಬೇವು,ತೇಗದಂತಹ ಅರಣ್ಯಧಾರಿತ ಮರಗಳನ್ನು ಬೆಳೆಸಿದ್ದಾರೆ. ಇದಲ್ಲದೆ ಸಮೀಪದಲ್ಲೇ ಮೂರು ಎಕರೆ ಜಮೀನು ಗುತ್ತಿಗೆಗೆ ಮಾಡಿಕೊಂಡು ಅಲ್ಲಿಯೂ ಬಾಳೆ,ಟೊಮಟೊ ಹಾಕಿದ್ದಾರೆ. ತಮ್ಮ ಕೃಷಿ ಕೆಲಸದಲ್ಲಿ ಹೆಚ್ಚಾಗಿ ಕೂಲಿ ಕಾಮರ್ಿಕರನ್ನು ಅವಲಂಭಿಸದೆ ತಾಯಿ ಮತ್ತು ಪತ್ನಿಯೊಂದಿಗೆ ಹೊಲದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.ಕೃಷಿಗೆ ಕೂಲಿ ಆಳುಗಳಿಲ್ಲದೆ ಕಷ್ಟ ಎನ್ನುವವರು ಇಲ್ಲಿ ಬಂದು ನೋಡಿ ಕಲಿಯಬೇಕು.
ಚೋಮನ ಮೂರನೇ ತಲೆಮಾರು : ದೇವಯ್ಯರಾಘವಪುರ ಅವರ ಜೀವನಾನುಭವವನ್ನು ಕೇಳುತ್ತಾ ಕುಳಿತ ನನಗೆ ಥಟ್ಟನೆ ಶಿವರಾಮಕಾರಂತರ ಚೋಮನ ದುಡಿ ಕಾದಂಬರಿ ನೆನಪಾಯಿತು. ಅಂಗೈ ಅಗಲ ಭೂಮಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆಯೂ ಕೈಗೂಡದೆ ಪರಿತಪಿಸುವ ಚೋಮ ದುಡಿಬಾರಿಸುತ್ತಲೇ ಕೊನೆಯುಸಿರೆಳೆಯುತ್ತಾನೆ. ಬದಲಾದ ಕಾಲಘಟ್ಟದಲ್ಲಿ ಚೋಮನ ಮೂರನೇ ತಲೆಮಾರು ದೇವಯ್ಯನಂತಹವರು ಈಗ ಸ್ವಂತ ಭೂಮಿಯನ್ನು ಹೊಂದುವ ಕನಸನ್ನು ನನಸು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಪರಿಶ್ರಮ,ದುಡಿಮೆ,ತನ್ನ ಸುತ್ತಲಿಕ ಬದುಕಿನ ಬಗ್ಗೆ ಸಣ್ಣ ಕುತೂಹಲ ಇದ್ದರೆ ಜೀವನದಲ್ಲಿ ನಾಡು ಗಮನ ಸೆಳೆಯುವಂತಹ ಸಾಧನೆ ಮಾಡುವುದು ಸುಲಭ ಎನ್ನುವುದನ್ನು ದೇವಯ್ಯ ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ನೂರಾರು ಶೋಷಿತರಿಗೆ,ಆಥರ್ಿಕವಾಗಿ ಹಿಂದುಳಿದ ಯುವಕರಿಗೆ ಮಾದರಿಯಾಗಿದ್ದಾರೆ.
"ಚೋಮ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯ ನಾಯಕ.ಅಂಗೈಯಗಲದ ಭೂಮಿಯ ಒಡೆಯನಾಗಲು ವ್ಯರ್ಥ ಪ್ರಯತ್ನ ನಡೆಸಿದವ.ಸ್ಥಳೀಯ ಸಂಪ್ರದಾಯ ಇದನ್ನು ಒಪ್ಪಲು ಸಾಧ್ಯವೇ ಇಲ್ಲ.ಸೋತ,ಹತಾಶ ವ್ಯಕ್ತಿಯಾಗಿ ಆತ ಸಾಯುತ್ತಾನೆ.ಅಂಗೈಯಗಲ ಭೂಮಿ ಕೊಡುವಂತೆ ಪದೇ ಪದೇ ಆತ ಒಡೆಯನನ್ನು ಕೇಳುವ ಸನ್ನಿವೇಶ ಹೃದಯ ವಿದ್ರಾವಕ.ಆದರೆ ಆತನ ಒಡೆಯ ಈ ವಿಷಯದಲ್ಲಿ ಅಸಹಾಯಕ.ಆದರೆ ಬೇಡುವ ದಿನಗಳು ಮುಗಿದು,ಹಕ್ಕುಗಳ ಹಾಗೂ ಹೋರಾಟದ ಹೊಸಯುಗ ಬಂದಿದೆ.ಭೂಮಿಯ ಸಲುವಾಗಿ ಚೋಮನ ಆಸೆ ಇಂದು ವಿಸ್ತಾರಗೊಂಡು ಎಲ್ಲಾ ಬಗೆಯ ಹಕ್ಕುಗಳನ್ನು ಪಡೆಯುವ ದೃಢನಿಧರ್ಾರವಾಗಿ ರೂಪುಗೊಂಡಿದೆ (ಡಿ.ಆರ್.ನಾಗರಾಜ್-ಉರಿ ಚಮ್ಮಾಳಿಗೆ)" ಡಿಆರ್ ಮಾತು ದೇವಯ್ಯವನರನ್ನು ನೋಡಿದಾಗ ನಿಜ ಎನಿಸಿತು.
ದಕ್ಷಿಣ ಕನ್ನಡ ಜಿಲ್ಲೆಯ ಅಸ್ಪೃಶ್ಯ ಸೋಮನ ಜೀವನ ಕಥನ ಶಿವರಾಮಕಾರಂತರ ಚೋಮನ ದುಡಿ ಕಾದಂಬರಿಯ ವಸ್ತು.ಕಾರಂತರ ಪ್ರಕಾರ ಈ ನಾಡಿನ ಸಮಸ್ಯೆ ಭೂಮಿಯ ಅಸಮರ್ಪಕ ಹಂಚಿಕೆಯಲ್ಲಿದೆ. ಈ ಸಮಸ್ಯೆ ಅಸ್ಪೃಶ್ಯದಂತಹ ಸಮಸ್ಯೆಯ ಜೊತೆ ಸೇರಿಕೊಂಡು ಪರಿಸ್ಥಿತಿ ತೀರಾ ಸಂಕೀರ್ಣವಾಗಿದೆ ಎನ್ನುವುದಾಗಿತ್ತು. 30,40ರ ದಶಕದ ಕಾಲಘಟ್ಟದಲ್ಲಿ ಜಾತೀಯತೆ ತೀವ್ರವಾಗಿದ್ದ ಕಾಲದಲ್ಲಿ ಚೋಮನಂತವರಿಗೂ ಒಂದು ದನಿ ಇದೆ ಎಂದು ಶಿವರಾಮ ಕಾರಂತರು ತೋರಿಸಿಕೊಟ್ಟಿದ್ದರು.ಸ್ವಾತಂತ್ರ ಪೂರ್ವ ಕಾಲದ ದಲಿತರ ಬಗೆಗಿನ ಚಿತ್ರಣ ಕಥಾವಸ್ತು ಸಿನಿಮಾ ಆಗಿ ತೆರೆಯ ಮೇಲೂ ಬಂದಿತ್ತು. ಎರಡು ದಶಕದ ಹಿಂದೆ ಅಂಗೈಯಗಲ ಜಾಗವೂ ಇಲ್ಲದ ದೇವಯ್ಯ ಇಂದು ಐದಾರು ಎಕರೆ ಭೂಮಿಯ ಒಡೆಯನಾಗಿ ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ರಾಜ್ಯಮಟ್ಟದ `ಫಲಶ್ರೇಷ್ಠ ಪ್ರಶಸ್ತಿ' ಪಡೆದು ಗಮನಸೆಳೆದಿದ್ದಾರೆ.
ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಸಹಕಾರ,ಬೆಂಬಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ಎಲ್ಲ ವರ್ಗದ ಜನರ ನೆರವು ತಾನು ಈ ಮಟ್ಟಕ್ಕೆ ಬರಲು ಕಾರಣವಾಯಿತು ಎಂದು ನೆನಪಿಸಿಕೊಳ್ಳುವ ದೇವಯ್ಯ ಅಕ್ಕಲಪುರದ ತೋಟದ ಮನೆಯಲ್ಲಿ ಕುಳಿತು ಮಾತನಾಡುತ್ತಾ ಹೋದರು ನಾನು ಬೆರಗಿನಿಂದ ಕೇಳಸಿಕೊಳ್ಳುತ್ತಾ ಹೋದೆ...
ಹಿಂತಿರುಗಿ ನೋಡಿದಾಗ : "ಇಪ್ಪತ್ತು ವರ್ಷಗಳ ಹಿಂದೆ ನಮ್ಮದು ಸಾಮಾನ್ಯ ಬಡಕುಟುಂಬ.ರಾಘವಪುರದಲ್ಲಿ ಇರಲು ಒಂದು ಸಣ್ಣ ಮನೆಯೊಂದನ್ನು ಹೊರತುಪಡಿಸಿ ನಮಗೇನೂ ಇರಲಿಲ್ಲ.ನಮ್ಮ ತಂದೆತಾಯಿ ಬೇರೆಯವರ ಜಮೀನಿಗೆ ಕೂಲಿ ಕೆಲಸಮಾಡಲು ಹೋಗುತ್ತಿದ್ದರು. ಪ್ರೌಢ ಶಾಲೆವರೆಗೆ ಮಾತ್ರ ವಿಧ್ಯಾಭ್ಯಾಸಮಾಡಿದ ನಾನು ಬಡತನದ ಕಾರಣಕ್ಕಾಗಿ ಓದು ಮುಂದುವರಿಸಲು ಆಗಲಿಲ್ಲ.ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ.ಆಂದೋಲನ ಪತ್ರಿಕೆಗೆ ಮೊದಲು ಏಜೆಂಟನಾದೆ.ಪತ್ರಿಕೆ ತರಿಸಿಕೊಂಡು ಸುತ್ತಮುತ್ತಲಿನ ಗ್ರಾಮಗಳಿಗೆ ಮನೆಮನೆಗೆ ಹೋಗಿ ಹಂಚುತ್ತಿದ್ದೆ. ಆ ಕಾಲಕ್ಕೆ 400 ಪತ್ರಿಕೆಗಳನ್ನು ತರಿಸಿಕೊಳ್ಳುತ್ತಿದ್ದೆ.ಪತ್ರಿಕೆಯ ವಿತರಣೆಯ ಜೊತೆಗೆ ಸಣ್ಣಪುಟ್ಟ ಸುದ್ದಿಗಳನ್ನು ಬರೆಯುವುದನ್ನು ಕಲಿತುಕೊಂಡೆ.ಪೋಟೊ ತೆಗೆಯುವುದನ್ನು ಕಲಿತುಕೊಂಡೆ.ಅಲ್ಲಿಂದ ನನ್ನ ಜೀವನ ಸಂಪೂರ್ಣ ಬದಲಾಯಿತು" ಎಂದು ದೇವಯ್ಯ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ.
ಪತ್ರಿಕೆಯ ಏಜೆಂಟರಾಗುವ ಮೊದಲು ದೇವಯ್ಯ ಅಂಗಡಿಗಳಿಗೆ ಚಕ್ಕಲಿ,ಬಿಸ್ಕೆಟ್,ಖಾರ,ಬನ್ನು ಎಲ್ಲವನ್ನೂ ತಂದು ಹೋಲ್ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದರು. ಬೆಳಗಿನ ಜಾವ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೂ ದುಡಿದ ದಿನಗಳೂ ಇವೆ.ಇದೆಲ್ಲಾ ಅವರಿಗೆ ಜೀವನ ಪಾಠವನ್ನು ಕಲಿಸಿವೆ.
ಕೋಟಿ ನೆರವು : "ಹೀಗೆ ಜೀವನ ಸಾಗುತ್ತಿರಬೇಕಾದರೆ ಆಂದೋಲನ ಪತ್ರಿಕೆಯ ವಿತರಣೆಯ ಜೊತೆಗೆ ಬೇಗೂರಿನಲ್ಲಿ ಪೋಟೊ ಸ್ಟುಡಿಯೊ ತೆರೆಯುವ ಆಸೆಯಾಯಿತು.ಆದರೆ ಅಷ್ಟೊಂದು ಹಣ ನನ್ನ ಬಳಿ ಇರಲಿಲ್ಲ.ಆಗ ನೇರವಾಗಿ ನಿಂತದ್ದು ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರ ಬಳಿಗೆ.ಅವರು ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಅವರಿಗೆ ಹೇಳಿ ಮೂರು ಲಕ್ಷ ಸಾಳ ಕೊಡಿಸಿದರು.ಸ್ಟುಡಿಯೊ ಆರಂಭವಾಯಿತು. ಆಗ ಹೀಗಿನಂತೆ ಡಿಜಿಟಲ್ ಯುಗ ಇರಲಿಲ್ಲ.ಪೋಟೊ ಸ್ಟುಡಿಯೋದಿಂದ ದುಡಿದು ಸಾಲತೀರಿಸಿ ಸಾಕಷ್ಟು ಹಣವನ್ನು ಸಂಪಾದಿಸಿದೆ. ನಮ್ಮ ಸುತ್ತಮತ್ತಲಿನ ಗ್ರಾಮಗಳಲ್ಲಿ ಯಾರದೇ ಮನೆಯಲ್ಲಿ ಮದುವೆ ಯಾದರೂ ನನಗೆ ಪೋಟೊ ಆರ್ಡರ್ ಕೊಡುತ್ತಿದ್ದರು. ಎಲ್ಲ ವರ್ಗದ ಜನ ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡರು. ಬರುಬರುತ್ತಾ ಪೋಟೊ ಸ್ಟುಡಿಯೋ ಲಾಭದಾಯಕ ಉದ್ಯೋಗವಾಗಿ ಉಳಿಯಲಿಲ್ಲ. ಅದಕ್ಕಾಗಿ ದುಡಿದು ಸಂಪಾದನೆ ಮಾಡಿದ ಹಣದಿಂದ ನಮ್ಮ ಸಮೀಪದಲ್ಲೇ ಇರುವ ಅಕ್ಕಲಪುರದಲ್ಲಿ ಮೂರು ಎಕರೆ 15 ಗುಂಟೆ ಜಮೀನು ಖರೀದಿಸಿದೆ. ಅಲ್ಲಿಂದ ನನ್ನ ಕೃಷಿ ಬದುಕು ಆರಂಭವಾಯಿತು' ಎನ್ನುತ್ತಾರೆ ದೇವಯ್ಯ.
ಅಕ್ಕಲಪುರದಿಂದ `ಆರಂಭ' : "ಅಕ್ಕಲಪುರದಲ್ಲಿ ಜಮೀನು ಖರೀದಿಸಿದಾಗ ಇದು ಖಾಲಿ ಭೂಮಿ.ಇಲ್ಲಿ ಏನೂ ಇರಲಿಲ್ಲ.ಬರಿ ಬಯಲು.ಬೋರ್ ಹಾಕಿಸಿದೆ ನೀರು ಬಂತು.ಕ್ರಮೇಣ ಕಡಿಮೆಯಾದಾಗ ಮತ್ತೊಂದು ಬೋರ್ ಹಾಕಿಸಿದೆ.ಅದರಲ್ಲೂ ಕಡಿಮೆಯಾದಾಗ ಮತ್ತೂ ಎರಡು ಬೋರ್ ಹಾಕಿಸಿದೆ. ಈಗ ಒಟ್ಟು ನಾಲ್ಕು ಬೋರ್ಗಳಿವೆ.ಕೃಷಿ ಹೊಂಡ ನಿಮರ್ಾಣ ಮಾಡಿಕೊಂಡು ಅದರಿಂದ ಎಲ್ಲಾ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರು ಕೊಡುತ್ತಿದ್ದೇನೆ" ಎಂದು ಜಮೀನಿಗೆ ನೀರುತಂದ ತಮ್ಮ ಸಾಹಸವನ್ನು ದೇವಯ್ಯ ಬಿಚ್ಚಿಟ್ಟರು.
ಇತ್ತೀಚಿಗೆ ಎರಡು ಬೋರ್ವೆಲ್ಗಳನ್ನು ಸಾವಿರ ಅಡಿಕೊರೆಸಿದರು ನೀರು ಬರಲಿಲ್ಲ.ಬರಿ ಧೂಳು.ಸರಿ ನೆಲ ಕೊರೆಯುವುದನ್ನು ನಿಲ್ಲಸಿ,ಕೇಸಿಂಗ್ ಪೈಪ್ ಅನ್ನು ಎಳೆದು ಹಾಕಿ ಸುಮ್ಮನ್ನಿದ್ದೆವು.ಮಳೆಯಾದ ನಂತರ ಬೋರ್ವೆಲ್ಗಳನ್ನು ಮುಚ್ಚಿಬಿಡಲು ಹೋದಾಗ ಧೂಳು ಬಂದಿದ್ದ ಜಾಗದಲ್ಲಿ ನೀರು ಇರುವುದು ಕಂಡಿತು.ಮತ್ತೆ ಕೇಸಿಂಂಗ್ ಪೈಪ್ಹಾಕಿ ಮೋಟಾರ್ ಬಿಟ್ಟಾಗ ಎರಡು ಬೋರ್ವೆಲ್ಗಳಲ್ಲೂ ಚೆನ್ನಾಗಿ ನೀರು ಬರುತ್ತಿದ್ದು ಪ್ರಕೃತಿ ವಿಸ್ಮಯವನ್ನು ಕಂಡು ಬೆರಗಾದ ಪರಿಯನ್ನು ಕಣ್ಣರಳಿಸಿ ಹೇಳಿದರು.
"ಪ್ರತಿವರ್ಷವೂ ತಪ್ಪದೇ ಎರಡು ಎಕರೆ ಬಾಳೆ ಇದ್ದೆ ಇರುತ್ತದೆ. ದೊಣ್ಣೆ ಮೆಣಸಿನಕಾಯಿ,ಟೊಮಟೊ,ತರಕಾರಿ ಬೆಳೆಯುತ್ತೇನೆ. ಇದುವರೆಗೆ ತನಗೆ ಯಾವ ಬೆಳೆಯಿಂದಲ್ಲೂ ನಷ್ಟವಾಗಿಲ್ಲ.ಎಲ್ಲಾ ಬೆಳೆಗಳಿಂದಲ್ಲೂ ಲಾಭವೆ ಆಗಿದೆ ಎನ್ನುತ್ತಾರೆ.
ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿಮರ್ಾಣ ಮಾಡಿಕೊಂಡಿರುವ ದೇವಯ್ಯ ಅದಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಿದ್ದಾರೆ.ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಿಂದ ಪಾಲಿಹೌಸ್ ನಿಮರ್ಾಣ ಮಾಡಿಕೊಂಡಿದ್ದು ದಪ್ಪ ಮೆಣಸಿನಕಾಯಿ,ಟೊಮಟೊ ಬೆಳೆದಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇರುವ ದೇವಯ್ಯ ಕೆಲಸಗಳ ಒತ್ತಡದ ನಡುವೆಯೂ ಪ್ರಯೋಗಶೀಲ ರೈತರ ತೋಟಗಳಿಗೆ ಭೇಟಿನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತಾರೆ. ಕೃಷಿ,ತೋಟಗಾರಿಕೆ ಇಲಾಖೆ.ಜಿಕೆವಿಕೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ.ತಮ್ಮ ಮೂವರು ಮಕ್ಕಳಿಗೂ ಉತ್ತಮ ವಿಧ್ಯಾಭ್ಯಾಸ ಕೊಡಿಸುತ್ತಿರುವ ದೇವಯ್ಯ ಮಾಡುವ ಕೆಲಸವನ್ನು ದೇವರೆಂದು ತಿಳಿದು ಶ್ರದ್ಧೆಯಿಂದ ಮಾಡಿದರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಆತ್ಮ ವಿಶ್ವಾಸದ ಮಾತುಗಳನ್ನಾಡುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೇವಯ್ಯ ರಾಘವಪುರ 9900618597 ಸಂಪಕರ್ಿಸಬಹುದು.






ಬೇಸಾಯದ ಮಿನುಗುತಾರೆಗಳ ಹುಡುಕುತ್ತಾ ಭರವಸೆಗಳೊಂದಿಗೆ ಪಯಣ# ಕೃಷಿಯಿಂದಲೇ ಬದುಕು ಕಟ್ಟಿಕೊಂಡವರ ಯಶೋಗಾಥೆ  ಹೊಸ ವರ್ಷ ಮುನ್ನುಡಿ 

ಕೃಷಿಯ ಯಶೋಗಾಥೆಗಳ ಜೊತೆಗೆ ಬೇಸಾಯದ ಬವಣೆಗಳನ್ನು ತಿಳಿಸಬೇಕು.ಕೃಷಿಯಿಂದ ನಷ್ಟ ಅನುಭವಿಸಿ ಮಣ್ಣಿನಿಂದ ವಿಮುಖರಾದವರ ಬಗ್ಗೆಯೂ ಬರೆಯಬೇಕು ಎಂದು ಹಲವರು ಹೇಳುತ್ತಾರೆ. ಹೌದು.ಯಾವುದೇ ಗೆಲುವು,ಯಶಸ್ಸು ಸುಲಭವಾಗಿ ಸಿಗುವುದಿಲ್ಲ.ಅದಕ್ಕಾಗಿ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ.ಹಗಲು ರಾತ್ರಿಗಳೆನ್ನದೆ ಕುಳಿತಲ್ಲಿ ನಿಂತಲ್ಲಿ ಧ್ಯಾನಿಸಬೇಕಾಗುತ್ತದೆ.ಕೃಷಿಯೂ ಕೂಡ ಹಾಗೇನೆ. ಇಲ್ಲಿ ಶ್ರದ್ಧೆ,ಪ್ರಮಾಣಿಕವಾಗಿ ಬೆವರ ಬಸಿದು ದುಡಿದವರು ಬಂಗಾರದ ಮನುಷ್ಯರಾಗಿದ್ದಾರೆ.ನಾಡಿಗೆ ಮಾದರಿಯಾಗಿದ್ದಾರೆ.ಇಂತಹವರನ್ನು ಮಲೆನಾಡಿನಿಂದ ಹಿಡಿದು ಬಿಸಿಲ ಬೇಗೆಯ ಉತ್ತರ ಕನರ್ಾಟಕ ದವರೆಗೂ ಕಾಣಬಹುದು.
ಸಿಕ್ಕಷ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು,ಮಳೆಯ ನೀರನ್ನೇ ಆವಲಂಭಿಸಿ,ಇರುವುದರಲ್ಲೇ ಸಾಧನೆಮಾಡಿದ ಬಂಗಾರದ ಮನುಷ್ಯರ ಬಗ್ಗೆ ಇದೆ ಅಂಕಣದಲ್ಲಿ ಬರೆದಿದ್ದೇನೆ.ಕೋಲಾರ ಜಿಲ್ಲೆಯ ನೆನಮನಹಳ್ಳಿಯ ಚಂದ್ರಶೇಖರ್,ಬಿಜಾಪುರದ ನಿಂಬರಗಿ ಅವರಂತಹ ಸಾವಿರಾರು ರೈತರು ಹನಿ ನೀರಿನಲ್ಲಿ ಮಳೆಯಾಶ್ರಯದಲ್ಲಿ ತೋಟಕಟ್ಟಿರುವ ಮಾದರಿಗಳು ನಮ್ಮ ಕಣ್ಣೆದುರಿಗಿವೆ. ಮತ್ತೊದು ಕಡೆ ರೈತರ ಆತ್ಮಹತ್ಯೆಯ ಪ್ರಕರಣಗಳೂ ಇವೆ.
ರೈತ ಸಂಕಷ್ಟದಲ್ಲಿದ್ದಾನೆ.ನಿಜ.ಹಾಗಂತ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಯಂತೂ ನಿಮರ್ಾಣವಾಗಿಲ್ಲ ಎನ್ನುವುದೂ ಸತ್ಯ. ಕೃಷಿಯ ಬಗ್ಗೆ ಸರಿಯಾದ ತಿಳಿವಳಿಕೆ,ಪೂರ್ವ ಸಿದ್ಧತೆ, ದೂರಾಲೋಚನೆ, ನೆಲದ ಮೇಲಿನ ನಂಬಿಕೆ ಮತ್ತು ದುಡಿಮೆಯಿಂದ ಬೆವರ ಬಸಿದವರು ಮಾತ್ರ ಯಶಸ್ವಿ ರೈತರಾಗಿದ್ದಾರೆ.ಅಂತಹವರು ಕಡಿಮೆ ಸಂಖ್ಯೆಯಲ್ಲಿರಬಹುದು ಆದರೆ ಅವರೇ ನಮಗೆ ಮಾದರಿ ಮತ್ತು ಅಂತಹ ಯಶೋಗಾಥೆಗಳೆ ರೈತರಿಗೆ ಪ್ರೇರಣೆ ಮತ್ತು ಸ್ಫೂತರ್ಿ. ಅದಕ್ಕಾಗಿಯೇ ನಾವು ಗೆಲುವಿನ ಮಾದರಿಗಳನ್ನೆ ಹುಡುಕಿಕೊಂಡು ಹೋಗಬೇಕು.
ಕೃಷಿಯ ಬಗ್ಗೆ ನಿರಾಸೆಯಿಂದ ಮಾತನಾಡುವವರ ನಡುವೆಯೂ ಕೃಷಿಯಿಂದ ಖುಷಿ,ನೆಮ್ಮದಿ ಕಂಡ ನಕ್ಷತ್ರಗಳು ಇವೆ. ಅಂತಹ ಮಿನುಗುತಾರೆಗಳನ್ನು ಕಾಣುವ ಕಣ್ಣು ನಮ್ಮದಾಗಿರಬೇಕು. 2018 ರ ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಮೊದಲ ಸೂರ್ಯನ ಕಿರಣಗಳನ್ನು ಸ್ಪಶರ್ಿಸುತ್ತಿರುವ ಕನಸುಗಾರರಿಗೆ ಇಂತಹ ಸ್ಫೂತರ್ಿದಾಯಕ ನಕ್ಷತ್ರಗಳ ಬಗ್ಗೆ ಒಂದಷ್ಟು ಮಾಹಿತಿ.
ಮೈಸೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಹಲವು ವರ್ಷ ಥೈಲ್ಯಾಂಡ್,ಮಲೇಶಿಯಾ,ಬ್ಯಾಂಕಾಕ್ನಲ್ಲಿ ಉದ್ಯೋಗ ಮಾಡಿ ತಮಗೆ ಬೋನಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯೋಗವನ್ನೆ ತೊರೆದು ಸ್ವಂತ ಊರಾದ ಕೊಪ್ಪಳ ಜಿಲ್ಲೆಯ ಬಿಕನಹಳ್ಳಿಯಲ್ಲಿ ಬೇಸಾಯ ಮಾಡುತ್ತಿರುವ ಜಯಂತ್ ಅಪರೂಪದ ಕೃಷಿಕ. ಗಾಂಧಿ ವಿಚಾರಧಾರೆಯಿಂದ ಪ್ರೇರಣೆ ಪಡೆದಿರುವ ಜಯಂತ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬು ಪುಕೊವಕ ಅವರಿಂದ ಸ್ಫೂತರ್ಿಪಡೆದು ಪತ್ನಿ ಜಾನಿಕಿ ಅವರೊಂದಿಗೆ ಕೃಷಿಯಿಂದಲೇ ನೆಮ್ಮದಿಯಾಗಿ,ಆರೋಗ್ಯವಂತರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಬೆಂಗಳೂರಿನಲ್ಲೆ ಬೆಳೆದು ಓದಿ ಕನಕಪುರದ ಹಾರೋಹಳ್ಳಿ ಬಳಿ ಹೊಸಗಬ್ಬಾಡಿ ಹಳ್ಳಿಯ ಹೊರವಲಯದಲ್ಲಿ ಹನ್ನೊಂದು ಎಕರೆ ಜಮೀನಿನ ಒಡತಿಯಾಗಿರುವ ಪ್ರತಿಭಾ ನಾಗವಾರ ನಾಡಿನ ಹೆಮ್ಮೆಯ ಕೃಷಿಕ ಮಹಿಳೆ. ಹತ್ತಾರು ವರ್ಷ ಅಮೇರಿಕಾದ ಸಾಫ್ಟವೇರ್ ಕಂಪನಿಯಲ್ಲಿ ದುಡಿದು ಅನುಭವಿದ್ದ ಪ್ರತಿಭಾ ನಾಗವಾರ ಹಳ್ಳಿಗೆ ಮರಳಿ ಸ್ವತಃ ನೇಗಿಲು ಹಿಡಿದದ್ದು ದೊಡ್ಡ ಸಂಗತಿ.ಹೀಗೆ ನಾಡಿನ ತುಂಬಾ ಕೃಷಿಯನ್ನು ಹೊಸ ದೃಷ್ಠಿಕೋನದಿಂದ ನೋಡುವ, ಬೇಸಾಯದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ತರುಣ-ತರುಣಿಯರು ಇದ್ದಾರೆ.
ಕೃಷಿಯಿಂದ ನಷ್ಟ ಅನುಭವಿಸಿ ಆಥರ್ಿಕವಾಗಿ, ದೈಹಿಕವಾಗಿ ಕುಗ್ಗಿಹೋಗಿ ಅನೇಕ ಕಾಯಿಲೆಗಳಿಂದ ಬಳಲುತ್ತಾ ಸಾವಿನ ನಿರೀಕ್ಷೆಮಾಡುತ್ತಾ ಹಾಸಿಗೆ ಹಿಡಿದಿದ್ದ ವ್ಯಕ್ತಿ ಸಣ್ಣ ಪ್ರೇರಣೆಯಿಂದ ದೇಶವಿದೇಶಗಳೆ ಮೆಚ್ಚುವ ಮಾದರಿ ರೈತನಾಗಿ ಬೆಳೆದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರೆ ನಮಗೆ ಸ್ಫೂತರ್ಿ ಮತ್ತು ಆದರ್ಶ. ಡಾ.ಪ್ರಫುಲ್ಲ ಚಂದ್ರ ಅವರ ಜೀವನಗಾಥೆಯ ಕೆಲವು ಮರೆಯಲಾರದ ಘಟನೆಗಳು ಮತ್ತು ರೈತರಿಗೆ ಅವರು ನೀಡಿದ ಒಂದಷ್ಟು ಸಲಹೆಗಳು ಈ ವಾರದ ಅಂಕಣದ ಹೂರಣ.
ಮರೆಯಲಾರದ ಘಟನೆಗಳು : ಅದು 1962. ಕೃಷಿಯಿಂದ ಸಾಕಷ್ಟು ನಷ್ಟ ಅನುಭವಿಸಿ ಕುಗ್ಗಿಹೋಗಿ ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರು ತಮಿಳುನಾಡಿನಲ್ಲಿರುವ ಪ್ರಸಿದ್ಧ ವೆಲ್ಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಾರೆ. ತಮ್ಮ ಪಕ್ಕೆ ಹಾಸಿಗೆಯಿಂದ ಒಬ್ಬೊಬ್ಬರೇ ಮೃತ್ಯುವಿನ ದವಡೆಗೆ ಸಿಲುಕಿ ಹಾಸಿಗೆ ಖಾಲಿ ಮಾಡುತ್ತಿರುವಾಗ ಸಾವಿನ ಅಂಚಿನಲ್ಲಿರುವ ತಾವೂ ಗಡ್ಡ ಬೋಳಿಸುವುದು ಯಾಕೆ ಅಂತ ಗಡ್ಡ ಬಿಟ್ಟಿರುತ್ತಾರೆ.
ಹಾಗತಾನೇ ಇಂಗ್ಲೇಡ್ನಿಂದ ವ್ಯದ್ಯಕೀಯ ಪದವಿ ಪಡೆದು ಆಸ್ಪತ್ರೆಗೆ ಬಂದಿದ್ದ ಡಾ.ಸುಕುಮಾರ ಅವರು ಡಾ.ಪ್ರಫುಲ್ಲಚಂದ್ರ ಅವರನ್ನು ನೋಡಿ "ಮೊದಲು ಗಡ್ಡ ಬೋಳಿಸಿಕೊಂಡು ಲಕ್ಷಣವಾಗಿರುವುದನ್ನು ಕಲಿಯಿರಿ...ನಿಮಗೇನಾಗಿದೆ" ಎಂದು ಹೇಳುತ್ತಾರೆ. ಗಡ್ಡಬೋಳಿಸಿದ ನಂತರ ಮುಖ ಲವಲವಿಕೆಯಿಂದ ಇರುವುದು ಕಂಡಿತು.ತಾನೂ ಹಂತ ಹಂತವಾಗಿ ಮೃತ್ಯುಮುಖದಿಂದ ಹಿಂದೆಬಂದೆ ಬದುಕುವ ಛಲ ಹುಟ್ಟಿತು ಎಂದು ಒಂದೆಡೆ ಬರೆದುಕೊಂಡಿದ್ದಾರೆ.
ಗೆಳೆಯರು ಕಲಿಸಿದ ಜೀವನ ಪಾಠ,ಸುತ್ತಮುತ್ತ ನಡೆಯುತ್ತಿರುವ ಎಷ್ಟೋ ಘಟನೆಗಳು ಡಾ.ಪ್ರಫುಲ್ಲಚಂದ್ರ ಅವರ ಮೇಲೆ ಪ್ರಭಾವ ಬೀರಿವೆ. ಅದರಿಂದ ಕಲಿತ ಪಾಠಗಳನ್ನು ಅವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ.ತಮ್ಮ ಜಮೀನನ್ನು ಆಸಕ್ತ ರೈತರ ಕಲಿಕಾ ಕೇಂದ್ರವಾಗಿ ರೂಪಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಕಬ್ಬಿನ ಬೇಸಾಯದಲ್ಲಿ ಕೂಳೆ ಬೆಳೆ ತೆಗೆಯುವ ಮೂಲಕ ಅಂತರಾಷ್ಟ್ರೀಯ ಮನ್ನಣೆಗೆ ಭಾಜನರಾದ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರು ಬತ್ತ,ತೆಂಗು,ಅಡಿಕೆ,ಸ್ಲರಿ ಬೀಡಿಂಗ್, ಟ್ರ್ಯಾಕ್ಟರ್ನಲ್ಲಿ ಹತ್ತಾರು ಕೆಲಸ ಮಾಡಿ ಕೃಷಿಯ ಹೊಸ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸಿದರು.
ನಾನು ಮಾಡಿದ ತಪ್ಪುಗಳನ್ನು ನೀವು ಮಾಡದಿರಿ ಎನ್ನುವ ಡಾ.ಪ್ರಫುಲ್ಲಚಂದ್ರ ನಮ್ಮ ಉದ್ಧಾರ ನಮ್ಮಿಂದಲೇ ಮಾತ್ರ ಸಾಧ್ಯ.ಆಲಸ್ಯ,ನಮ್ಮ ತಪ್ಪು ಹೆಜ್ಜೆಗಳು,ನಮ್ಮಲಿಯ ಒಡಕು ಮತ್ತು ನಮ್ಮ ಅಶಿಸ್ತು ನಮ್ಮನ್ನು ಕೆಳಗೆ ತಳುತ್ತಿದೆ, ಬಡತನಕ್ಕೆ ನೂಕುತ್ತಿದೆ.ಮುಂದಿನ ಇಪ್ಪತ್ತು ಮೂವತ್ತು ವರ್ಷಗಳ ಯೋಜನೆ,ದೂರದಶರ್ಿತ್ವ ಇದ್ದರೆ ನಿಮ್ಮ ಜಮೀನನ್ನು ನೀವೇ ಬಂಗಾರವಾಗಿಸಬಹುದು ಎನ್ನುತ್ತಾರೆ.
ಬೆಳೆದ ಬೆಳೆಗಳನ್ನು ದನಕರುಗಳಿಂದ ರಕ್ಷಿಸಲು ಮೊದಲು ಕಟ್ಟಿ ಸಾಕುವದನ್ನು ಕಲಿಯಬೇಕು.ನೀವು ಒಂದು ಸಣ್ಣ ಗಿಡ ನೆಟ್ಟು ಕಾಪಾಡಿದರೆ ಅದು ಆನೆ ಕಟ್ಟುವ ಮರವಾಗುತ್ತದೆ.ಅಪ್ಪ ಅಮ್ಮ ತಿಳಿಯದೆ ಸಸಿ ತರಬೇಡಿ.ಕೃಷಿಯಲ್ಲಿ ದಿನನಿತ್ಯ ಸಣ್ಣತಪ್ಪುಗಳನ್ನು ಮಾಡುತ್ತಿದ್ದರೆ ನಮ್ಮ ಏಳಿಗೆ ಹಾಳು ಮಾಡುವುದರ ಜೊತೆಯಲ್ಲಿ ಮುಂದಿನ ಪೀಳಿಗೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ.ಒಳ್ಳೆಯ ಚಟಗಳಿಗೆ ಗಂಟು ಬಿದ್ದರೆ ಕೆಟ್ಟ ಚಟಗಳು ದೂರವಾಗುತ್ತವೆ.ಪ್ರಕೃತಿಗೆ ಹೊಂದಿಕೊಂಡು ಜೀವನ ನಡೆಸಿದರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯ.ಜಮೀನಿನ ಪ್ರತಿ ಜಾಗವನ್ನು ಗಮನಿಸಿ ಬೆಲೆಕೊಡಿ.ಮಳೆಯು ಬಂದಾಗ ನೀರು ಹರಿಯುವುದನ್ನು,ನಿಂತಿರುವುದನ್ನು ಗಮನಿಸಿದರೆ ನಮ್ಮ ಕೃಷಿಗೆ ನೀರು ಕಟ್ಟುವ ವಿಧಾನ ಅಲ್ಲೆ ಕಾಣುತ್ತದೆ. ಬೇಲಿಗೆ ಬೆಲೆ ಕೊಟ್ಟರೆ ದೊಡ್ಡ ಆಸ್ತಿ ರೈತನ ಕೈಯಲ್ಲಿರುತ್ತದೆ.ದೀರ್ಘ ಕಾಲದ ಮರಗಿಡಗಳು ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ. ರೈತನಾದವನು ಜಮೀನಿನಲ್ಲೆ ಮನೆ ಮಾಡಿದರೆ ಅಪಾರ ಲಾಭ,ಶ್ರಮ,ಸಮಯದ ಉಳಿತಾಯ.
ಹೀಗೆ ನೂರಾರು ಉಪಯುಕ್ತ ಮಾಹಿತಿಗಳನ್ನು ನೀಡುವ ಡಾ.ದೇವಂಗಿ ಪ್ರಫುಲ್ಲಚಂದ್ರ ರೈತ ಹೇಗೆ ಚಿಂತಿಸಬೇಕು,ಚಿಂತಿಸಿದ್ದನ್ನು ಅನುಷ್ಠಾನ ಮಾಡಬೇಕು ಎನ್ನುವುದನ್ನು ಹೇಳುತ್ತಾ ಹೋಗುತ್ತಾರೆ. ಭಗವಾನ್ ಎಸ್.ದತ್ತಾತ್ರಿ ಅವರು ಬರೆದಿರುವ ಡಾ.ಡಿ.ಆರ್.ಪ್ರಫುಲ್ಲ ಚಂದ್ರರ "ಸಮಗ್ರ ಸಾಧನೆ" ಎಂಬ ಪುಸ್ತಕವನ್ನು ಓದುತ್ತಿದ್ದಾಗ ನನ್ನಲ್ಲಿ ಮೂಡಿದ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಕೃಷಿಯಲ್ಲಿ ಹಣ,ಶ್ರಮ,ಸಮಯ ಎಲ್ಲವನ್ನೂ ಕನಿಷ್ಠವಾಗಿ ಬಳಸಿಕೊಂಡು ಹೇಗೆ ಬೇಸಾಯ ಮಾಡಬಹುದು ಎನ್ನುವುದಕ್ಕೆ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರ "ಕೃಷಿ ಸಂಪದ" ಮಾದರಿಯಾಗಿದೆ. ತಮ್ಮ ಇಬ್ಬರೂ ಮಕ್ಕಳನ್ನು ಕೃಷಿ ಪದವಿಧರರಾಗಿಸಿ ಕೃಷಿಕರಾಗಿಯೆ ಮಾಡಿದ್ದಾರೆ. ಇಂತಹವರ ಬದುಕು ನಮಗೆ ಸ್ಪೂತರ್ಿ ಮತ್ತು ಪ್ರೇರಣೆ.
ಕೃಷಿಕರಿಗೆ ಯುಗಾದಿ ಮತ್ತು ಮುಂಗಾರು ಆರಂಭವೇ ಹೊಸ ವರ್ಷ.ಆದರೂ 2018 ರ ಹೊಸ್ತಿಲಲ್ಲಿ ನಿಂತಿರುವ ಇಂದು ನಾವು ಒಂದಷ್ಟು ನಿಧರ್ಾರಗಳನ್ನು ಮಾಡೋಣ. ಹೆಚ್ಚು ಸಮಯವನ್ನು ಕೃಷಿಗೆ ನೀಡುವುದು. ತಿಂಗಳಿಗೆ ಒಂದಾದರೂ ಸಾಧಕ ರೈತನ ತೋಟಗಳಿಗೆ ಭೇಟಿ ನೀಡಿ ಅನುಭವಗಳನ್ನು ಕೇಳಿಸಿಕೊಳ್ಳುವುದು.ಪ್ರತಿ ವರ್ಷ ಜಮೀನಿನಲ್ಲಿ ಹಣ್ಣಿನ ಮರಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು.ಮಳೆ ನೀರು ಕೊಯ್ಲು.ಇಂತಹವೇ ಸಣ್ಣಪುಟ್ಟ ನಿಧರ್ಾರಗಳು ನಿಮ್ಮನ್ನು ಬಂಗಾರದ ಮನುಷ್ಯರಾಗಿಸಲಿ.ನಿಮ್ಮೆಲ್ಲರಿಗೂ ಹೊಸ ವರ್ಷದ ಮೊದಲ ದಿನದ ಶುಭಕಾಮನೆಗಳು.