ತರಕಾರಿ ಬೆಳೆ ಬುದ್ಧಿಮಾತು ಹೇಳುವ `ಬುದ್ಧಿ' ರಾಜಬುದ್ಧಿ !
ಅಂತರ ಬೆಳೆಯಲ್ಲಿ ಆದಾಯಗಳಿಸುವ ರೈತ, ಯುವಕರ ಪಾಲಿನ ಮಾರ್ಗದರ್ಶಕ
"ಕೃಷಿ ಲಾಭದಾಯಕವಲ್ಲ ಎಂದವರು ಯಾರು?. ತಪ್ಪು ತಿಳಿವಳಿಕೆಯಿಂದ ಬಹುತೇಕ ಮಂದಿ ಕೃಷಿ ಲಾಭದಾಯಕವಲ್ಲ ಎಂದು ಹೇಳುತ್ತಾರೆ.ಆದರೆ ಕಳೆದ ಮೂರುವರೆ ದಶಕಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದು ಅದರಿಂದ ಯಾವತ್ತೂ ನಷ್ಟ ಅನುಭವಿಸಿಲ್ಲ. ಹದಿನೈದು ಎಕರೆ ಜಮೀನಿನಿಂದ ವಾರ್ಷಿಕ ಕನಿಷ್ಠ ಹದಿನೈದು ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದೇನೆ" ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ.ತರಕಾರಿ ಬೆಳೆಯುವುದರಲ್ಲಿ ಅವರು ಕಿಂಗ್ (ರಾಜ).ಯುವ ಕೃಷಿಕರಪಾಲಿಗೆ ಬುದ್ದಿಮಾತು ಹೇಳುವ ಬುದ್ಧಿ ಅವರ ಹೆಸರು ರಾಜಬುದ್ಧಿ.
ಮೂಲತಃ ಕೊಳ್ಳೇಗಾಲ ತಾಲೂಕು ಮುಳ್ಳೂರಿನ ಚಂದ್ರಪ್ಪ ಮತ್ತು ರತ್ನಮ್ಮ ಅವರ ಮಗನಾದ ರಾಜಬುದ್ಧಿ ಪ್ರಸ್ತುತ ಮೈಸೂರು ತಾಲೂಕಿನ ವರುಣಾ ಹೋಬಳಿ ಪುಟ್ಟೆಗೌಡನ ಹುಂಡಿಯಲ್ಲಿ(ಕುಪ್ಪೆಗಾಲದಿಂದ ಮುಂದೆ) ತರಕಾರಿ ಮತ್ತು ಬಾಳೆ ಬೆಳೆಯಲ್ಲಿ ಪ್ರಯೋಗ ಮಾಡುತ್ತಾ,ನರ್ಸರಿ ನಡೆಸುತ್ತಾ,ಸುತ್ತಮುತ್ತಲಿನ ರೈತರಿಗೆ ಮಾರ್ಗದರ್ಶನ ಮಾಡುತ್ತಾ ಕೃಷಿಯನ್ನೆ ನಂಬಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ತೋಟಗಾರಿಕೆ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳೆ ತರಕಾರಿ ಬೆಳೆಯಲ್ಲಿ ರಾಜಬುದ್ಧಿ ಮಾಡುವ ಅಂತರಬೇಸಾಯ ಕಂಡು ಬೆರಗಾಗಿದ್ದಾರೆ.ಒಂದು ಎಕರೆಯಲ್ಲಿ ಕನಿಷ್ಠ ಐದು ಬೆಳೆಗಳನ್ನು ಸಂಯೋಜನೆಮಾಡಿ, ರಸಾವರಿ ಬಳಸಿ ರಾಜಬುದ್ಧಿ ಮಾಡುತ್ತಿರುವ ಕೃಷಿ ಈಗ ಪ್ರಯೋಗಶೀಲ ಕೃಷಿಕರ ಗಮನಸೆಳೆದಿದೆ.
ಒಂದು ಮನೆ ಕಟ್ಟಬೇಕಾದರೆ ಯೋಜಿಸಿ ಮನೆ ಕಟ್ಟುತ್ತಾರೆ.ಬೈಕ್,ಬಟ್ಟೆ ತೆಗೆದುಕೊಳ್ಳಬೇಕಾದರೆ ಹತ್ತಾರು ಕಡೆ ವಿಚಾರಿಸಿ ಖರೀದಿಸುತ್ತಾರೆ.ಆದರೆ ಕೃಷಿ ಮಾಡಬೇಕಾದರೆ ಯಾವದೆ ಪೂರ್ವಸಿದ್ಧತೆಯೂ ಇಲ್ಲದೆ ಮುನ್ನುಗ್ಗುತ್ತಾರೆ.ಇದು ರೈತರು ಮಾಡುವ ಮೊದಲ ತಪ್ಪು. ಎರಡನೇಯದು ಹಣ ಮಾಡುವ ಉದ್ದೇಶದಿಂದ ಬೇಸಾಯಮಾಡಲು ಬರುತ್ತಾರೆ. ದಿಢೀರ್ ಅಂತ ಒಂದು ಬೆಳೆ ಮಾಡುತ್ತಾರೆ.ಅದರಿಂದ ನಷ್ಟ ಅನುಭವಿಸಿ ಕೃಷಿ ಲಾಭದಾಯಕವಲ್ಲ ಅಂತ ಕೃಷಿಯನ್ನೆ ಕೈಬಿಟ್ಟು ಅಪಪ್ರಚಾರ ಮಾಡುತ್ತಾರೆ.ಇದು ತಪ್ಪು ಎನ್ನುವುದು ಅವರ ವಾದ.
ಕೈಗಾರಿಕೆಗಳು ಮತ್ತು ಗಾರ್ಮೆಂಟ್ ಕಾಖರ್ಾನೆಗಳು ಬಂದು ಕೆಲಸಗಾರರು ಸಿಗದೆ ಕೃಷಿಗೆ ಒಡೆತ ಬಿದ್ದಿರುವುದು ನಿಜ. ಸರಿಯಾದ ಸಮಯಕ್ಕೆ ಕೆಲಸಗಾರರು ಸಿಕ್ಕೂವುದಿಲ್ಲ ಎನ್ನುವುದು ಸತ್ಯ.ಇದಲ್ಲದೆ
ನಗರದ ಬಣ್ಣದ ಬದುಕು ಮತ್ತು ಪಾಶ್ಚಿಮಾತ್ಯರ ಜೀವನ ಶೈಲಿಯನ್ನು ಅನುಕರಣೆಮಾಡಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ನಗರದಲ್ಲಿ ಗಾರೆ ಕೆಲಸಮಾಡುವವನು ಹಳ್ಳಿಗೆ ಬಂದಾಗ ಟಿಪ್ಟಾಪ್ಆಗಿ ಡ್ರೆಸ್ ಮಾಡಿಕೊಂಡು ಬರುತ್ತಾನೆ.ಸರಕಾರಿ ನೌಕರರು ಸ್ಕೂಟರ್ನಲ್ಲಿ ತಿರುಗಾಡುವುದನ್ನು ನೋಡುತ್ತಾರೆ. ರೈತ ಮಕ್ಕಳಿಗೆ ಟಾಕುಟೀಕಿನ ಜನರ ಆಳಅಗಲ ಗೊತ್ತಾಗುವುದಿಲ್ಲ.ಅವರು ನೆಮ್ಮದಿಯಾಗಿದ್ದಾರೆ ಎಂಬ ಭಾವನೆ ಅವರದು. ವಾಸ್ತವವಾಗಿ ನೋಡಿದರೆ ಅವರಿಗೂ ಕಷ್ಟನಷ್ಟಗಳು ಇರುತ್ತವೆ. ಉದ್ಯಮಿಗಳು ನಷ್ಟವಾಗಿ ಕಾಖರ್ಾನೆಯ ಬಾಗಿಲು ಮುಚ್ಚಿದ ಉದಾಹರಣೆಗಳು ಸಾಕಷ್ಟಿವೆ.
ಹಾಗೆಯೆ ಕೃಷಿಯಲ್ಲೂ ಸಮಸ್ಯೆಗಳು,ಸವಾಲುಗಳು ಸಾಕಷ್ಟಿವೆ.ಅದನ್ನು ಅರಿತು ಬುದ್ಧಿವಂತಿಕೆಯಿಂದ ಕೃಷಿಮಾಡಿದರೆ ನೀರು,ಮಣ್ಣು ಚೆನ್ನಾಗಿದ್ದರೆ ಎಕರೆಗೆ ಖಚರ್ುವೆಚ್ಚ ಕಳೆದು ಕನಿಷ್ಠ ವಾಷರ್ಿಕ ಎರಡು ಲಕ್ಷ ರೂಪಾಯಿ ಆದಾಯಗಳಿಸಬಹುದು. ಇದು ಮೂರು ದಶಕದ ತಮ್ಮ ಅನುಭವದ ಮಾತು ಎನ್ನುತ್ತಾರೆ ರಾಜಬುದ್ಧಿ.
ಮುಳ್ಳೂರಿನಿಂದ 1969 ರಲ್ಲಿ ಪುಟ್ಟೇಗೌಡನಹುಂಡಿಗೆ ಬರುವ ರಾಜಬುದ್ಧಿ ಅವರ ತಂದೆ ಚಂದ್ರಪ್ಪ ಎರಡೂವರೆ ಎಕರೆ ಜಮೀನು ಖರೀದಿಸುತ್ತಾರೆ.ಎಂಟನೇಯ ತರಗತಿ ವ್ಯಾಸಂಗ ಮಾಡುವಾಗಲೆ ಶಾಲೆಬಿಟ್ಟ ರಾಜಬುದ್ಧಿ 1983 ರಿಂದ ತಮ್ಮ ಕೃಷಿಜೀವನ ಆರಂಭಿಸುತ್ತಾರೆ.ಅಲ್ಲಿಂದ ಇಲ್ಲಿಯವರೆಗೆ ಅವರು ಹಿಂತಿರುಗಿ ನೋಡಿಲ್ಲ.ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಈಗ ಮೈಸೂರಿನ ರಾಮನುಜರಸ್ತೆಯಲ್ಲಿರುವ ಮನೆಯಲ್ಲಿ ಪತ್ನಿ,ಮಕ್ಕಳೊಂದಿಗೆ ವಾಸವಿರುವ ರಾಜಬುದ್ಧಿ ಬೆಳಗ್ಗೆ ಏಳುಗಂಟೆಗೆ ಪುಟ್ಟೆಗೌಡನಹುಂಡಿ ಕರ್ಮಭೂಮಿಗೆ ಹೋದರೆ ಸಂಜೆ ಏಳುಗಂಟೆಗೆ ಮರಳುತ್ತಾರೆ.ಅಷ್ಟರಮಟ್ಟಿಗೆ ಅವರು ಶ್ರಮಜೀವಿ.ಮಗ ಜೆಎಸ್ಎಸ್ ಕಾಲೇಜಿನಲ್ಲಿ ಡಿಫ್ಲಮೊ ಫಮರ್ಾಸಿ ಮಾಡುತ್ತಿದ್ದಾನೆ,ಮಗಳು ಗೋಪಾಲಸ್ವಾಮಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.
ಕೈ ಹಿಡಿದ ಟೊಮಟೊ :1987 ರಲ್ಲಿ 20 ಗುಂಟೆ ಟೊಮಟೊ ಹಾಕಿ 50 ಸಾವಿರ ರೂಪಾಯಿ ಆದಾಯಗಳಿಸಿದ ರಾಜಬುದ್ಧಿ ಟೊಮಟೊ ಹೆಸರು ಕೇಳಿದರೆ ರೋಮಾಂಚನಗೊಳ್ಳುತ್ತಾರೆ. ಆಗ
ಮಂಡಿ ದಲ್ಲಾಳಿಯಿಂದ 300 ರೂಪಾಯಿ ಸಾಲಪಡೆದು 5 ಪಾಕೇಟ್ ಟೊಮಟೊ ಬೀಜತಂದು ಹಾಕಿದೆ. 47 ಸಾವಿರ ರೂಪಾಯಿ ಬಂತು. ಅದೇ ನನಗೆ ಮನೆ ಕಟ್ಟಲು ನಾಂದಿಯಾಯಿತು. ತಂಗಿ ಮದುವೆ ಮಾಡಿದ್ದು ಟೊಮಟೊದಿಂದ. ಟೊಮಟೊ ನಮ್ಮ ಜೀವನವನ್ನೆ ಬದಲಿಸಿದ ಬಂಗಾರದಂತಹ ಬೆಳೆ. ನಂಬಿ ದುಡಿದರೆ ಮೋಸವಿಲ್ಲ.2000 ರಲ್ಲಿ ಎರಡು ಬಾರಿ ಟೊಮಾಟೊ ಬೆಳೆದು ನಷ್ಟವಾಯಿತು. ಮೂರನೇ ಬೆಳೆ ಕೈಯಿಡಿಯಿತು.ಸೋಲು ಅಂತ ಕೈ ಬಿಟ್ಟಿದ್ದರೆ ನಷ್ಟ ಆಗುತ್ತಿತ್ತು.ಸತತವಾಗಿ ಹೋರಾಟ ಮಾಡಿದೆ. ಯಶಸ್ಸು ಸಿಕ್ಕಿತು.2010 ರಲ್ಲಿ ಟೊಮಟೊ ಬೆಳೆ ಒಂದರಲ್ಲೆ 8 ಲಕ್ಷ ರೂಪಾಯಿ ಆದಾಯ ಬಂತು ಎಂದು ಹಳೆಯ ನೆನಪುಗಳಿಗೆ ಜಾರುತ್ತಾರೆ.
ಟೊಮಟೊ ಬಿಟ್ಟರೆ ಕಲ್ಲಂಗಡಿ,ಮಂಗಳೂರು ಸೌತೆ,ಯಾಡರ್್ಲಾಂಗ್ ಬಿನೀಸ್,ಚೊಟ್ಟು,ಊಟಿ ಬಿನೀಸ್,ಹೂಕೋಸು,ಎಲೆಕೋಸು,ಬದನೆ ಹೀಗೆ ಎಲ್ಲಾ ರೀತಿಯ ತರಕಾರಿ ಕೃಷಿ ಮಾಡುವ ರಾಜಬುದ್ಧಿ ಇವೆಲ್ಲವನ್ನೂ ಬಾಳೆ ಬೆಳೆಯೊಳಗೆ ಅಂತರ ಬೇಸಾಯವಾಗಿ ಮಾಡಿ ಆದಾಯಗಳಿಸುತ್ತಾರೆ ಎನ್ನುವುದೇ ವಿಶೇಷ.
ರಾಜಬುದ್ಧಿ ಅವರ ಸಲಹೆ ಮಾರ್ಗದರ್ಶನದಲ್ಲಿ ಬೇಸಾಯ ಮಾಡುತ್ತಿರುವ ಸುತ್ತೂರು ಸಮೀಪದ ಆಲತ್ತೂರು ಗ್ರಾಮದ ಗಿರೀಶ್ ಮೂರು ಎಕರೆ ಪ್ರದೇಶದಲ್ಲಿ ಎರಡೆ ವರ್ಷಕ್ಕೆ 25 ಲಕ್ಷ ರೂಪಾಯಿ ಆದಾಯಗಳಿಸಿದ್ದಾಗಿ ಹೇಳುತ್ತಾರೆ. ಆರಂಭದಲ್ಲಿ ಮೊದಲು ಒಂದುಮೂಕ್ಕಾಲು ಎಕರೆಗೆ ಕಲ್ಲಂಗಡಿ ಹಾಕಿದೆ. ಪ್ರತಿ ಕೆಜಿಗೆ ನಾಲ್ಕುವರೆ ರೂಪಾಯಿಯಂತೆ 50 ಟನ್ ಕಲ್ಲಂಗಡಿಯಾಯ್ತು.ನಂತರ ಮತ್ತೆ ಕಲ್ಲಂಗಡಿ ಹಾಕಿದೆ 9 ರೂಪಾಯಿಯಂತೆ 30 ಟನ್ಬಂತು.ನಂತರ ಮಂಗಳೂರು ಸೌತೆ ಹಾಕಿ 30 ಟನ್ ಬೆಳೆದು ಕೆಜಿಗೆ 12 ರೂಪಾಯಿಯಂತೆ ಮಾರಾಟಮಾಡಿದೆ.ನಂತರ ಅದೇ ಭೂಮಿಗೆ ಟೊಮಟೊ ಹಾಕಿದೆ. ಆಗ ಟೊಮಟೊ ಒಂದು ಬಾಕ್ಸ್ 300 ರಿಂದ 700 ರೂಪಾಯಿವರೆಗೂ ಮಾರಾಟವಾಯ್ತು. ಖಚರ್ುಕಳೆದು 10 ಲಕ್ಷ ರೂಪಾಯಿ ಆದಾಯಬಂತು.ಇದಕ್ಕೆಲ್ಲಾ ರಾಜಬುದ್ಧಿಯವರ ಮಾರ್ಗದರ್ಶನ ಕಾರಣ ಎನ್ನುತ್ತಾರೆ ಗಿರೀಶ್.
ದುದ್ದಗೆರೆಯಲ್ಲಿ ಆಟೋ ಒಡಿಸುತ್ತಿದ್ದ ಹುಡುಗನೊಬ್ಬಈಗ ಕೃಷಿ ಮಾಡಿ ಸ್ವತಕ್ಕೆ ಐದು ಎಕರೆ ಜಮೀನು ತೆಗೆದುಕೊಂಡಿದ್ದಾನೆ.ಇಡೀ ಗ್ರಾಮವೇ ಬೇಸಾಯದಿಂದ ಬದಲಾವಣೆಯಾಗಿದೆ. ಅಲ್ಲಿನ ರೈತರು ವಾಷರ್ಿಕ ಕೋಟ್ಯಾಂತರ ರೂಪಾಯಿ ಬಾಳೆ,ತರಕಾರಿ ಬೆಳೆಯುತ್ತಿದ್ದಾರೆ. ರೈತರಲ್ಲಿ ಒಗ್ಗಟ್ಟು,ಸ್ವಾಭಿಮಾನ ಇರಬೇಕು. ನೆಗಿಟಿವ್ ಥಿಕಿಂಗ್ ಇರಬಾರದು.ಹಾಗಾದರೆ ಖಂಡಿತ ಕೃಷಿಯಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾರೆ ರಾಜಬುದ್ಧಿ. ಸಾಫ್ಟವೇರ್ ಉದ್ಯೋಗಿಗಳೆಲ್ಲಾ ಕೃಷಿಗೆ ಬರುತ್ತಿದ್ದಾರೆ. ಹಳ್ಳಿ ಹುಡುಗರೆಲ್ಲ ಕೂಲಿ ಕೆಲಸಕ್ಕೆ ಪಟ್ಟಣಕ್ಕೆ ಹೋಗುತ್ತಿದ್ದಾರೆ.ಇದು ನಾಡಿನ ದುರಂತ ಎನ್ನುತ್ತಾರೆ.
ನರ್ಸರಿಯಿಂದ ಆದಾಯ :ಒಮ್ಮೆ ಕೋಲಾರ ಜಿಲ್ಲೆಯಲ್ಲಿ ಕೃಷಿ ಪ್ರವಾಸ ಮಾಡುತ್ತಿದ್ದಾಗ ಅಲ್ಲಿನ ರೈತರಿಂದ ಸ್ಫೂತರ್ಿಪಡೆದು ತಮಗೆ ತರಕಾರಿ ಸಸಿಗಳನ್ನು ಬೆಳೆದುಕೊಳ್ಳುವ ಉದ್ದೇಶದಿಂದ ಸಣ್ಣದಾಗಿ ಆರಂಭಿಸಿದ ನರ್ಸರಿ ಈಗ ಬೃಹತ್ ಆಗಿ ಬೆಳೆದು ಸುತ್ತಮತ್ತಲಿನ ಮಹಿಳೆಯರಿಗೆ ಉದ್ಯೋಗ ನೀಡಿದೆ.ಲಕ್ಷಾಂತರ ರೂಪಾಯಿ ಆದಾಯವನ್ನು ತರುತ್ತಿದೆ. ಪ್ರತಿದಿನ ನರ್ಸರಿಯಲ್ಲಿ ಕೆಲಸಮಾಡುವವರಿಗೆ ಮೂರು ಸಾವಿರ ರೂಪಾಯಿ ಕೂಲಿ ನೀಡುವ ರಾಜಬುದ್ಧಿ ತಿಂಗಳಿಗೆ ಒಂದು ಲಕ್ಷ ರೂಪಾಯಿಯನ್ನು ಕೆಲಸಗಾರರಿಗೆ ಕೂಲಿ ನೀಡುತ್ತಾರೆ.ಸಾಮಾನ್ಯ ಸಣ್ಣ ರೈತನೊಬ್ಬ ಇಷ್ಟು ಎತ್ತರಕ್ಕೆ ಬೆಳೆಯುವಲ್ಲಿ ಅವನ ಶ್ರದ್ಧೆ,ನಿಷ್ಠೆ ಮತ್ತು ನಂಬಿಕೆ ಕೆಲಸಮಾಡಿದೆ.
"1992 ರಲ್ಲಿ ಕೋಲಾರಕ್ಕೆ ಹೋಗಿದ್ದೆವು. ಅಲ್ಲಿನ ರೈತರು ಸಸಿಗಳನ್ನು ನರ್ಸರಿಯಿಂದ ತಂದು ನಾಟಿಮಾಡುತ್ತೇವೆ ಅಂತ ಹೇಳುತ್ತಿದ್ದರು. ಅವರು ಪೈರನ್ನು ನಾರು ಅಂತಾರೆ. 4000 ನಾರು ಹಾಕ್ದೊ,5000 ನಾರು ಹಾಕ್ದೊ ಅನ್ನುತ್ತಿದ್ದರು. ನಮಗೆಲ್ಲಾ ಆಶ್ಚರ್ಯ. ಏನಿದು ಅಂತ. ಚಾಮರಾಜನಗರ ಜಿಲ್ಲೆ ತೋಟಗಾರಿಕೆ ಇಲಾಖೆ ನಿದರ್ೇಶಕರಾಗಿದ್ದ ಶಿವಶಂಕರ್ ಅವರು ಮುಳಬಾಗಿಲಿನಿಂದ ಟೊಮಟೊ ಸಸಿ ತರಿಸಿ ನಾಟಿಮಾಡಿಸಿದ್ದರು. ನಾನು ನರ್ಸರಿ ಮಾಡಬೇಕಲ್ಲ ಅಂತ ಯೋಚನೆ ಮಾಡಿದೆ. 2005 ರಲ್ಲಿ ಸ್ವಲ್ಪ ಹಣಕಾಸಿನ ತೊಂದರೆಯಾಗಿತ್ತು.ಊರಿನ ಸಮೀಪ ಒಂದು ಎಕರೆ ಜಮೀನು ಕೊಟ್ಟುಬಿಟ್ಟೆ. ಅಲ್ಲಿ ನೂರು ಅಡಿ ಜಾಗ ಉಳಿದಿತ್ತು. ನಾನೇ ತರಕಾರಿ ಪೈರು ತರಲು ಜಕ್ಕನಹಳ್ಳಿವರೆಗೂ ಹೋಗುತ್ತಿದ್ದೆ,ನಾವೇ ಯಾಕೆ ನರ್ಸರಿ ಮಾಡಬಾರದು ಅಂತ ಅಂದುಕೊಂಡು ಶುರುಮಾಡಿದೆ.ನಂತರ ತುಂಬಾ ಜನ ಮಾಡಿದ್ದರಿಂದ ನನಗೆ ಒಳ್ಳೆಯ ರೈತರು ಮಿತ್ರರಾಗಿದ್ದಾರೆ.ಅವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡುವುದರ ಜೊತೆಗೆ ಅವರಿಂದಲ್ಲೂ ಸಾಕಷ್ಟು ಕಲಿತಿದ್ದೇನೆ" ಎಂದು ವಿನಯ ಮೆರೆಯುತ್ತಾರೆ.
ಕಳೆದ ಬಾರಿ ಚೀನಾ ದೇಶಕ್ಕೆ ಕೃಷಿ ಪ್ರವಾಸ ಹೋಗಿದ್ದ ರಾಜಬುದ್ಧಿ ಅಲ್ಲಿನ ಕೃಷಿ ವಿಧಾನ ಕಂಡು ಬೆರಗಾಗಿದ್ದಾರೆ. ಅಧಿಕಾರಿಗಳು ನಮ್ಮನ್ನು ರೈತರ ಬಳಿ ಕರೆದುಕೊಂಡು ಹೋಗಲಿಲ್ಲ. ಸರಕಾರ ನಡೆಸುವ ತೋಟಗಾರಿಕೆ ಇಲಾಖೆಯ ತೋಟಗಳಿಗೆ ಕರೆದುಕೊಂಡು ಹೋಗಿ ಬಂದರು.ಇದರಿಂದ ಏನು ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ಅದಕ್ಕಾಗಿಯೇ ಈ ಬಾರಿ ಸರಕಾರ,ಸಂಘಸಂಸ್ಥೆಗಳ ನೆರವಿಗೆ ಕಾಯದೆ ತಾವೇ ಸ್ವತಃ ತಾವೇ ರೈತರ ತಂಡದೊಂದಿಗೆ ಕಳೆದ ವಾರ ಇಸ್ರೇಲ್ ದೇಶದ ಕೃಷಿನೋಡಲು ಹೋಗಿಬಂದರು.
ಮಾರ್ಗದರ್ಶನದ ಕೊರತೆ : ರೈತರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ.ಬೆಳೆಗಳನ್ನು ಹೇಗೆ,ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬ ಜ್ಞಾನ ಇಲ್ಲ. ನಮ್ಮ ವಿಜ್ಞಾನಿಗಳು ಎಲ್ಲ ಬಗೆಯ ಮಣ್ಣುಗಳಿಗೂ ಒಂದೆ ವಿಧದ ಗೊಬ್ಬರಗಳನ್ನು ಶಿಫಾರಸ್ಸು ಮಾಡುತ್ತಾರೆ. ಕೆಂಪು ಮಣ್ಣು,ಕಪ್ಪು ಮಣ್ಣು, ಮರಳು ಮಿಶ್ರಿತ ಮಣ್ಣಿಗೆ ಯಾವ ಗೊಬ್ಬರ ಕೊಡಬೇಕು ಎಂದು ಅರಿತು ಗೊಬ್ಬರ ಶಿಫಾರಸ್ಸು ಮಾಡಬೇಕು.ಎಲ್ಲದ್ದಕ್ಕೂ ಒಂದೆ ಗೊಬ್ಬರ ಅಲ್ಲ.ಮಣ್ಣು ನೋಡಿಕೊಂಡು ಶಿಫಾರಸ್ಸು ಮಾಡುವವರು ಕಡಿಮೆ ಎನ್ನುತ್ತಾರೆ.
ಹನಿನೀರಾವರಿ,ರಸಾವರಿ ಪದ್ಧತಿ,ಮಲ್ಚಿಂಗ್ ಶೀಟ್ ಬಳಸಿಕೊಂಡರೆ ರೈತರು ಈಗ ಎಲ್ಲಾ ಕಾಲದಲ್ಲೂ ಎಲ್ಲ ಬಗೆಯ ತರಕಾರಿಗಳನ್ನು ಬೆಳೆಯಬಹುದು. ಕಲ್ಲಂಗಡಿ,ಮಂಗಳೂರು ಸೌತೆ ಬೆಳೆಗಳಂತೂ ರೈತರಿಗೆ ವರದಾನವಾಗಿವೆ. ಕೊಟ್ಟಿಗೆ ಗೊಬ್ಬರ,ರಸಾವರಿ,ಬೇವಿನಹಿಂಡಿ ಮತ್ತು ಲಘು ಪೋಷಕಾಂಶಗಳನ್ನು ಯಾವ ಪ್ರಮಾಣದಲ್ಲಿ ಯಾವ ಪದ್ಧತಿಯಲ್ಲಿ ಕೊಡಬೇಕು ಎಂದು ತಿಳಿದುಕೊಂಡರೆ ಕೃಷಿ ಸುಲಭ ಮತ್ತು ಲಾಭದಾಯನ ಎನ್ನುವುದು ಅನುಭವದಿಂದ ಕಂಡಕೊಂಡಿರುವ ಸತ್ಯ.
ಸರಕಾರ ರೈತರಿಗೆ ಸಬ್ಸಿಡಿಕೊಟ್ಟು ಹಾಳು ಮಾಡುತ್ತಿದೆ. ಅದರ ಬದಲು ಸೂಕ್ತ ಬೆಲೆ ಮತ್ತು ಕಡ್ಲೆಕಾಯಿ,ಉಚ್ಚೆಳ್ಳು,ಹರಳು,ಸೂರ್ಯಕಾಂತಿ ಹಿಂಡಿಗಳನ್ನು ಪೂರೈಸಲಿ.ಅದರಿಂದ ಭೂಮಿಗೆ ಬೇಕಾದ ಎಲ್ಲಾ ಪೋಷಕಾಂಶ ಹೆಚ್ಚಾಗಿದೊರೆತು ರೈತರು ಸಾವಯವ ಹಾದಿಗೆ ಮರಳಲು ನೆರವಾಗುತ್ತದೆ ಎನ್ನುತ್ತಾರೆ ರಾಜಬುದ್ಧಿ.
ಜಮೀನಿಗೆ ನಾನು ಭೇಟಿ ನೀಡಿದಾಗ ಬಾಳೆ ಜೊತೆ ಕಲ್ಲಂಗಡಿ, ಮಂಗಳೂರು ಸೌತೆ,ಯಾಡರ್್ಲಾಂಗ್ ಬೀನಸ್,ಟೊಮಟೊ,ಎಲೆಕೋಸು,ಹೂ ಕೋಸು ಬೆಳೆಗಳನ್ನು ಸಂಯೋಜನೆಮಾಡಿ ಅಂತರ ಬೆಳೆಯಾಗಿ ನಾಟಿ ನಡೆಯುತ್ತಿತ್ತು. ಹೀಗೆ ಅಂತರಬೆಳೆ ಬೆಳೆಯುವುದರಿಂದ ಯಾವುದೆ ತೊಂದರೆ ಇಲ್ಲ.ಒಂದೆ ಬೆಳೆ ಬೆಳೆದುಕೊಂಡು ಕುಳಿತುಕೊಂಡರೆ ಆಥರ್ಿಕ ಹೊಡೆತ ಬೀಳುತ್ತದೆ.ಅಂತರ ಬೆಳೆ ಮಾಡಿದಾಗ ನಷ್ಟ ತಪ್ಪಿಸಬಹುದು.ಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದು ಅವರ ಅನುಭವ. ಅವರೊಂದಿಗೆ ಕುಳಿತು ಮಾತನಾಡುತ್ತಿದ್ದರೆ ಪ್ರತಿಯೊಂದು ತರಕಾರಿ ಬೆಳೆಯುವ ವಿಧಾನಗಳನ್ನು ಪಟಪಟನೇ ಹೇಳುತ್ತಾ ಹೋಗುತ್ತಾರೆ.ಕನಿಷ್ಠ ದರ ಸಿಕ್ಕರೆ ಸಿಗುವ ಲಾಭ.ಗರಿಷ್ಠ ದರ ಸಿಕ್ಕರೆ ಬರುವ ಲಾಭ, ನಷ್ಟ ಮತ್ತು ಸರಿದೂಗಿಸಿಕೊಳ್ಳುವ ವಿಧಾನ ಎಲ್ಲವನ್ನೂ ವಿವರ ವಿವರವಾಗಿ ತಿಳಿಸಿಕೊಡುವ ಮೂಲಕ ಆತ್ಮವಿಶ್ವಾಸ ತುಂಬುತ್ತಾರೆ.ಕೃಷಿ ನಷ್ಟ ಕಷ್ಟ ಎನ್ನುವವರು ಒಮ್ಮೆ ರಾಜಬುದ್ಧಿ ಅವರನ್ನು ಭೇಟಿಮಾಡಿದರೆ ಖಂಡಿತವಾಗಿ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.ಹೆಚ್ಚಿನ ಮಾಹಿತಿಗೆ ರಾಜಬುದ್ಧಿ 96328 27891 ಸಂಪಕರ್ಿಸಿ