vaddagere.bloogspot.com

ಭಾನುವಾರ, ಅಕ್ಟೋಬರ್ 8, 2017


ದೇಸಿ ಕೃಷಿ ವಿಜ್ಞಾನಿ ಬಯಲುಸೀಮೆಯ `ಶಕ್ತಿ'ವೇಲು
ನೈಸಗರ್ಿಕ ಕೃಷಿಯ ದೇಸಿ ತಾಂತ್ರಿಕತೆಗಳ ಅನ್ವೇಷಕ.ಕೃಷಿ ವಿಶ್ವ ವಿದ್ಯಾನಿಲಯಗಳು ಮಾಡಬೇಕಾದ ಕೆಲಸಗಳನ್ನು ಏಕಾಂಗಿಯಾಗಿ ಮಾಡುತ್ತಿರುವ ಸಾಧಕ.ಬಯಲು ಸೀಮೆಯಲ್ಲಿ ನೈಸಗರ್ಿಕ ಕೃಷಿಮಾಡಿ ದೇಶದ ನಾನಾ ಕೃಷಿ ವಿಶ್ವ ವಿದ್ಯಾನಿಲಯಗಳಿಂದ ಪ್ರಶಂಸೆಗೆ ಒಳಗಾದ ಕೃಷಿಕ.ಓದಿದ್ದು ಆರನೇ ತರಗತಿಯಾದರೂ ಕೃಷಿ ವಿವಿ ವಿದ್ಯಾಥರ್ಿಗಳು ಮತ್ತು ವಿಜ್ಞಾನಿಗಳಿಗೆ ಪಾಠ ಹೇಳುವ ಅಪ್ಪಟ ಸಹಜ ಕೃಷಿಕ, ಅವರೇ ಬಂಗಾರದ ಮನುಷ್ಯ ಶಕ್ತಿವೇಲು.
ನೈಸಗರ್ಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆ ಮಾಡುವುದು ಸುಲಭ.ತರಕಾರಿ,ಅರಿಶಿನದಂತಹ ಬಯಲು ಪ್ರದೇಶದ ಬೆಳೆಗಳನ್ನು ಮಾಡುವುದು ಕಷ್ಟ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಹೇಳುವ ದೂರು.ಮನಸ್ಸಿದ್ದರೆ ಮಾರ್ಗ ಎಂಬಂತೆ ಬಯಲು ಪ್ರದೇಶದಲ್ಲೂ ಎಲ್ಲಾ ರೀತಿಯ ತರಕಾರಿ,ಅರಿಶಿನ,ಕಬ್ಬು ಬೆಳೆದು ಸಾಧನೆ ಮಾಡಿದ ಅಪರೂಪದ ಸಾಧಕ ಶಕ್ತಿವೇಲು. ಅವರು ಅನ್ವೇಷಣೆ ಮಾಡಿದ ದೇಸಿ ತಾಂತ್ರಿಕತೆಗಳನ್ನು ಕೃಷಿ ವಿಜ್ಞಾನಿಗಳು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ.ಕೊಯಂತ್ತೂರಿನ ಕೆವಿಕೆ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದೆ.ಈರೋಡು ಸಾವಯವ ಕೃಷಿಕರ ಕೂಟದ ಅಧ್ಯಕ್ಷರಾಗಿಯೂ ನೇಮಕವಾಗಿದ್ದಾರೆ. ತಮ್ಮ ಕೃಷಿ ಸಾಧನೆಯನ್ನು ವಿವರಿಸುವಾಗ ಅವರ ಮುಗ್ಧತೆ,ಸದಾ ಒಳಿತಿನ ಕಡೆಗೆ ಮುಖಮಾಡಿರುವ ಅವರ ಚಿಂತನೆ ಎದ್ದು ಕಾಣುತ್ತದೆ.
ಸಹಜ ಕೃಷಿಯಲ್ಲಿ ಶಕ್ತಿವೇಲು ಮಾಡಿದ ಸಾಧನೆಯನ್ನು ನೋಡಲು ದೇಶದ ನಾನಾ ರಾಜ್ಯದ ರೈತರಲ್ಲದೆ ಇಂಗ್ಲೆಂಡ್,ಸೊಮಾಲಿಕಾ,ಅಮೇರಿಕಾ ಮತ್ತಿತರ ದೇಶಗಳ ರೈತರು ಬಂದುಹೋಗಿದ್ದಾರೆ. ಕೃಷಿ ಸಾಧನೆಯನ್ನು ಕಂಡು,ಮೆಚ್ಚಿ ಸಂದರ್ಶನ ಪುಸ್ತಕದಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಿದ್ದಾರೆ.ಅವರ ತೋಟಕ್ಕೆ ಹೋದರೆ ಹತ್ತಾರು ದೇಸಿ ಕೃಷಿ ತಾಂತ್ರಿಕ ಜ್ಞಾನ ದರ್ಶನ ವಾಗುತ್ತದೆ.
ದನದ ಕೊಟ್ಟಿಗೆಗೆ  ಹೊಂದಿಕೊಂಡಂತೆ ಕಡಿಮೆ ವೆಚ್ಚದಲ್ಲಿ ಜೀವಾಮೃತ ತೊಟ್ಟಿ ನಿಮರ್ಾಣ.ಕೀಟಗಳನ್ನು ನಾಶಮಾಡಲು ಕ್ಯಾಸ್ಟ್ರಾಲ್ ಮಡಕೆ ವಿಧಾನ.ಜಮೀನಿನನ ಬದುಗಳಲ್ಲಿ ಮರಗಳ ಜೋಡಣೆ.ಒಂದು ಎಕರೆಯಲ್ಲಿ ಹತ್ತಾರು ತರಕಾರಿಗಳನ್ನು ಬೆಳೆಯುವ ಬಗೆ.ದೇಹವನ್ನು ಸದಾ ಚೈತನ್ಯವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಕೈತೋಟದಲ್ಲಿ ಬೆಳೆದಿರುವ ಹನ್ನೆರಡು ಬಗೆಯ ತರಕಾರಿಗಳ ಸಂಯೋಜನೆ ಗಮನಸೆಳೆಯುತ್ತವೆ.
ಒಂದು ಚಮಚ ರಾಸಾಯನಿಕವನ್ನು ಸೋಂಕಿಸದೆ,ಹನಿ ಕ್ರಿಮಿನಾಶಕವನ್ನು ಸಿಂಪಡಿಸದೆ  ಐದು ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಅರಿಶಿನ,ಹೂಕೋಸು,ಬೀಟ್ರೋಟ್, ಕ್ಯಾರೇಟ್, ಆಲೂಗಡ್ಡೆ ಮತ್ತು ಅರವತ್ತು ಬಗೆಯ ಮರಗಳಿವೆ.
ತಮಿಳುನಾಡಿಗೆ ಸೇರಿರುವ ಕನ್ನಡಿಗರೆ ಹೆಚ್ಚಾಗಿ ವಾಸವಿರುವ ಕಲ್ಲುಬಂಡಿಪುರದ ಬಳಿಯ ಗಣೇಶಪುರ ಎಂಬಲ್ಲಿ ಶಕ್ತಿವೇಲು ಅವರ ಪುಣ್ಯಭೂಮಿ ಇದೆ.ಕೊಂಗಳ್ಳಿಬೆಟ್ಟದ ಕಡೆಯಿಂದ ಹೋದರೆ ಹತ್ತು ಕಿ.ಮೀ.ಅಂತರದಲ್ಲಿರುವ ಇದು ರಾಮರು ವನವಾಸ ಬಂದ ತಪೋಭೂಮಿ.
"ದೊಡ್ಡಪುರದಲ್ಲಿ ರಾಮರ ಪಾದವಿದೆ.ರಾಮ ವನವಾಸ ಹೊರಡುವಾಗ ಒಂದು ದಿನ ಇಲ್ಲಿ ತಂಗಿದ್ದರು ಎನ್ನುವುದು ಜನರ ನಂಬಿಕೆ. ಹಾಗಾಗಿ ಇಲ್ಲಿ ಏನೂ ಬೆಳೆಯುವುದಿಲ್ಲ ಎಂದು ಕನ್ನಡಿಗರು ಹೇಳುತ್ತಾರೆ.ಆದರೆ ಇದು ನನಗೆ ಸ್ವರ್ಗಭೂಮಿ ಎನ್ನುತ್ತಾರೆ ಶಕ್ತಿವೇಲು. ಗಂಜಲ,ಸಗಣಿ,ಬೆಲ್ಲ ಮತ್ತು ಹರಳನ್ನೇ ಹೆಚ್ಚಾಗಿ ಬಳಸಿ ಸಹಜ ಕೃಷಿಯಲ್ಲಿ ಯಶಸ್ವಿಯಾಗಿರುವ ಶಕ್ತಿವೇಲು ಬಯಲು ಸೀಮೆಯ ರೈತರ ಪಾಲಿಗೆ ಸಂಜೀವಿನಿಯಾಗಿದ್ದಾರೆ.1997 ರಿಂದ ಸಹಜ ಕೃಷಿಕರಾಗಿರುವ ಇವರು ತಮ್ಮ ಕೃಷಿ ಪಯಣದ ಯಶೋಗಾಥೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
ಕಾಯಿಲೆ ಕಲಿಸಿದ ಪಾಠ: "ಅದು 1996. ಒಂದೇ ವರ್ಷದಲ್ಲಿ ನನ್ನ ದೇಹದ ತೂಕ ಹತ್ತು ಕೆಜಿಯಷ್ಟು ಹೆಚ್ಚಾಯಿತು. ಜೊತೆಗೆ ಹೊಟ್ಟೆಯೂ ದಪ್ಪವಾಗಿ ಬೆಳೆಯಿತು. ಇದರಿಂದ ಭಯವಾಗಿ ವೈದ್ಯರ ಬಳಿ ಹೋದೆ. ಅವರು ಇದಕ್ಕೆಲ್ಲ ನಿಮ್ಮ ಆಹಾರ ಪದ್ಧತಿಯೆ ಕಾರಣ ಎಂದರು. ರಾಸಾಯನಿಕ ಮತ್ತು ಕ್ರೀಮಿನಾಶಕ ಬಳಸಿ ಬೆಳೆದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದರಿಂದ ನಿಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.ಸಾಧ್ಯವಾದಷ್ಟು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಎಂದು ಸಲಹೆ ನೀಡಿದರು. ದೇಹದ ಆರೋಗ್ಯ ಕೆಟ್ಟ ಪರಿಣಾಮ ನೈಸಗರ್ಿಕ ಕೃಷಿಮಾಡಿ ನನಗೆ ಬೇಕಾದ ಆಹಾರವನ್ನು ನಾನೇ ಬೆಳೆದುಕೊಳ್ಳುವ ತೀಮರ್ಾನಕ್ಕೆ ಬಂದೆ" ಎನ್ನುತ್ತಾರೆ ಶಕ್ತಿವೇಲು.
ವಿಜ್ಞಾನಿಗಳು,ಕೃಷಿ ವಿಶ್ವ ವಿದ್ಯಾನಿಲಯಗಳು ರೈತರನ್ನು ದಾರಿತಪ್ಪಿಸುತ್ತಿಲ್ಲವೆ ಎಂದು ಕೇಳಿದರೆ " ಮಾರಾಟ ಮಾಡುವವರು ವಿಷಕೊಟ್ಟರೂ ತಿನ್ನಲು ನಾವು ರೆಡಿ ಇರುವಾಗ, ಕೊಡುವವರು ಏನು ಮಾಡುತ್ತಾರೆ. ವಿಷ ಯಾವುದು, ಅಮೃತ ಯಾವುದು ಎನ್ನುವುದು ನಮಗೆ ಗೊತ್ತಿರಬೇಕು. ಪಂಚೇಂದ್ರೀಯಗಳನ್ನು ಎಚ್ಚರವಾಗಿಟ್ಟುಕೊಂಡಿದ್ದರೆ ಯಾರು ನಮ್ಮನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ" ಎನ್ನುತ್ತಾರೆ. 
ಜಗತ್ತಿನ ದೈತ್ಯ ಮಾನ್ಸಾಂಟೊ ಕಂಪನಿಯ ಮೂರು ಯುನಿಟ್ಗಳು ಈಗಾಗಲೇ ನೈಸಗರ್ಿಕ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ.ಹಿಂದೂಸ್ಥಾನ್ ಲೀವರ್ ಕಂಪನಿ ಕೂಡ ನೈಸಗರ್ಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದು ಇಂದಲ್ಲಾ ನಾಳೆ ಮನುಕುಲ ಉಳಿಯಬೇಕಾದರೆ ಎಲ್ಲರೂ ನೈಸಗರ್ಿಕ ಕೃಷಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ.
ಡಾ.ಎಲ್. ನಾರಾಯಣರೆಡ್ಡಿ,ವಂದನಾಶಿವ, ನಮ್ಮಳ್ವಾರ್,ಸುಭಾಷ್ ಪಾಳೇಕಾರ್ ಸೇರಿದಂತೆ ನೂರಾರು ಸಹಜ ಕೃಷಿಕರನ್ನು ಭೇಟಿಮಾಡಿ ಅನುಭವ ಹಂಚಿಕೊಂಡಿದ್ದಾರೆ.ತೋಟಕ್ಕೆ ಬಂದ ರೈತರಿಗೂ ಸಲಹೆ ನೀಡುತ್ತಾರೆ.
ಮೊದಲ ಮೂರು ವರ್ಷಗಳು :  "ಆರಂಭದಲ್ಲಿ ನಾನು ರಾಸಾಯನಿಕ ಕೃಷಿಕ. 1997 ರಿಂದ ಸಾವಯವ ಕೃಷಿಯತ್ತ ಒಲವು ಬೆಳೆಸಿಕೊಂಡೆ. ಆರಂಭದ ಮೂರು ವರ್ಷ ಅಂದರೆ 1999 ರವರೆಗೂ ನನ್ನಲ್ಲೂ ಗೊಂದಲಗಳಿದ್ದವು. ಹುಡುಕಾಟ,ತಡಕಾಟ ನಡೆಯುತ್ತಲೆ ಇತ್ತು. ಬೆಳೆಗಳಲ್ಲಿ ಕೀಟಬಾಧೆ ಕಂಡುಬಂದರೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದೆ. ಬೆಳೆ ಉಳಿಸಿಕೊಳ್ಳಬೇಕೆಂಬ ಆಸೆ ಹಾಗೆ ಮಾಡಿಸುತ್ತಿತ್ತು. ಆದರೆ 1999 ರಿಂದ ಈಚೆಗೆ ನನ್ನ ಎಲ್ಲಾ ಗೊಂದಲಗಳಿಗೂ,ಸಮಸ್ಯೆಗಳಿಗೂ,ಹುಡುಕಾಟಗಳಿಗೂ ಉತ್ತರ ಸಿಕ್ಕಿತು.ಅಲ್ಲಿಂದ ಇಲ್ಲಿಯವರೆಗೂ ಹಿಂತಿರುಗಿ ನೋಡಿದಾಗ ನಮ್ಮ ಜಮೀನಿಗೆ ಒಂದಿಡಿ ರಾಸಾಯನಿಕ ಗೊಬ್ಬರವನ್ನಾಗಲಿ,ಹನಿ ಕ್ರಿಮಿನಾಶಕವನ್ನಾಗಲಿ ಸೋಂಕಿಸಿಲ್ಲ" ಎನ್ನುತ್ತಾರೆ.
ಆರಂಭದ ಮೂರು ವರ್ಷದಲ್ಲಿ ಇವರು ತೊಂದರೆ ಅನುಭವಿಸಿದ್ದಾರೆ.ಬೆಳೆ ಕೈಕೊಟ್ಟು ನಷ್ಟವಾಗಿದೆ. ಇದಕ್ಕೆಲ್ಲ ತಾನು ಮಾಡಿದ ತಪ್ಪುಗಳು ಕಾರಣವೇ ಹೊರತು ನೈಸಗರ್ಿಕ ಕೃಷಿ ಪದ್ಧತಿಯಲ್ಲ.ಮುಖ್ಯವಾಗಿ ನೈಸಗರ್ಿಕ ಕೃಷಿಯಲ್ಲಿ ಏನು ಮಾಡಬೇಕು ಎನ್ನುವುದಕ್ಕಿಂತ ಯಾವುದನ್ನು ಮಾಡಬಾರದು ಎನ್ನುವುದು ಶಕ್ತಿವೇಲು ಕಂಡುಕೊಂಡ ಸತ್ಯ.
ರೈತರು ಜಮೀನಿನಲ್ಲಿ ಬೆಂಕಿ ಹಾಕಬೇಕಾದದ್ದು ಎರಡೇ ಜಾಗದಲ್ಲಿ. ಒಂದು ಅಡುಗೆ ಮನೆ.ಮತ್ತೊಂದು ಪೂಜಾ ಕೋಣೆ.ಇವೆರಡನ್ನು ಬಿಟ್ಟು ಜಮೀನಿನಲ್ಲಿ ಸಿಗುವ ಕಸಕಡ್ಡಿಗಳನ್ನು ಯಾವುದೇ ಕಾರಣಕ್ಕೂ ಬೆಂಕಿಹಾಕಿ ನಾಶಮಾಡಬಾರದು.ಅದನ್ನು ಗಿಡಮರಗಳನ್ನು ಬೆಳೆಸಲು ಹೊದಿಕೆಯಾಗಿ ಬಳಸಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು. ಮಳೆಯ ನೀರು ಭೂಮಿಗೆ ಹಿಂಗುವಂತೆಯೂ ಮಾಡಬಹುದು. ಭೂಮಿಗೆ ಹೊದಿಕೆ ಇದ್ದಾಗ ಮಾತ್ರ ಗೆದ್ದಲು ಹುಳುಗಳು ಬರುತ್ತವೆ. ಇದರಿಂದ ಎರೆಹುಳುಗಳು ಭೂಮಿಯ ಆಳದಿಂದ ಮೇಲೆಬಂದು ಮಣ್ಣನ್ನು ಫಲವತ್ತು ಮಾಡುತ್ತವೆ.
ಗೆದ್ದಲು ಹುಳುಗಳು ಹೇಗೆ ಎರೆಹುಳುಗಳ ಸಂಖ್ಯೆ ಹೆಚ್ಚಾಗಲು ನೆರವಾಗುತ್ತವೆ ಎನ್ನುವುದರ ಬಗ್ಗೆ ಹೊಸ ಸಂಶೋಧನೆಯೊಂದನ್ನು ಮಾಡಿದ್ದು ಅದನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದಾರೆ.ಕೀಟ ವಿಜ್ಞಾನಿಗಳು ಬಂದು ತಮ್ಮ ಈ ಹೊಸ ಸಂಶೋಧನೆಯನ್ನು ದೃಢೀಕರಿಸಬೇಕಿದೆ ಎಂದು ಹೇಳುತ್ತಾರೆ.
ಬಯಲು ಸೀಮೆ ಬೆಳೆಶಾಸ್ತ್ರ : ಪ್ರಕೋಲಿ ತಾವರೆಯೊಂದನ್ನು ಬಿಟ್ಟು ಎಲ್ಲಾ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುವ ಶಕ್ತಿವೇಲು,ಈಗ ಜಮೀನಿನಲ್ಲಿ ಕ್ಯಾರೇಟು,ಹೂ ಕೋಸು ಹಾಗೂ ಬಿಟ್ರೋಟ್, ಆಲೂಗಡ್ಡೆ,ಅರಿಶಿನವನ್ನು ಸಮೃದ್ಧವಾಗಿ ಬೆಳೆದಿದ್ದಾರೆ.
"ಹದಿನೈದು ಎಕರೆಯಲ್ಲಿ ಫಸಲು ಮಾಡುವುದು ಒಬ್ಬರಿಗೆ ಕಷ್ಟ.ಅದಕ್ಕಾಗಿ ಐದು ಎಕರೆಯಲ್ಲಿ ಅರಿಶಿನ ಬೆಳೆಯುತ್ತೇನೆ. ಯಾಕೆಂದರೆ ಇಲ್ಲಿ ಕಾಡು ಹತ್ತಿರವಿರುವುದರಿಂದ ಆನೆ ಮತ್ತು ಹಂದಿಗಳ ಕಾಟ ಜಾಸ್ತಿ.ಅರಿಶಿನ ಬೆಳೆದರೆ ಅದಕ್ಕೆ ಅಂತಹ ಸಮಸ್ಯೆ ಇಲ್ಲ.ಅದಕ್ಕಾಗಿ ಅರಿಶಿನ ಮುಖ್ಯ ಬೆಳೆ. ಉಳಿದ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಾರೆ. 
ಒಂದು ಎಕರೆಯಲ್ಲಿ ಕನಿಷ್ಠ ಹತ್ತು ಬಗೆಯ ತರಕಾರಿ ಹಾಕುತ್ತಾರೆ. ಪ್ರತಿ ನಾಲ್ಕು ಗುಂಟೆಗೂ ಒಂದೊಂದು ಬಗೆಯ ತರಕಾರಿ ಹಾಕುತ್ತಾರೆ.ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾದರೂ ಒಂದಲ್ಲ ಒಂದು ತರಕಾರಿಯಿಂದ ಅದನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಚನ್ನೈ,ಕೇರಳ,ಕೊಯಂತ್ತೂರಿನಲ್ಲಿರುವ ನೈಸಗರ್ಿಕ ಉತ್ಪನ್ನಗಳ ಮಾರುಕಟ್ಟೆಗೆ ತರಕಾರಿಗಳನ್ನು ಕಳಿಸುತ್ತಾರೆ. ಶಕ್ತಿವೇಲು ಬೆಳೆದ ಪದಾರ್ಥಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ.
ಯಾವುದೇ ಬೆಳೆ ಮಾಡುವ ಮೊದಲು ನವಧಾನ್ಯವನ್ನು ಬಿತ್ತಬೇಕು. 21 ಜಾತಿಯ ಏಕದಳ,ದ್ವಿದಳ,ಎಣ್ಣೆಕಾಳು ಬೀಜಗಳನ್ನು ಎಕರೆಗೆ 30 ಕೆಜಿಯಂತೆ ಬಿತ್ತಬೇಕು. ನಂತರ 60 ದಿನಗಳಾದ ಮೇಲೆ ಅದನ್ನು ಭೂಮಿಗೆ ಸೇರಿಸಿ ನಂತರ ಕೃಷಿ ಮಾಡಬೇಕು ಎನ್ನುತ್ತಾರೆ.
ಭೂಮಿಯನ್ನು ಉಳುಮೆ ಮಾಡುವ ಸಮಯ ಕೂಡ ಬಹಳ ಮುಖ್ಯ. ಬೆಳಗ್ಗೆ 10 ಗಂಟೆ ಮೇಲೆ ಸಂಜೆ 5 ಗಂಟೆಯ ಒಳಗೆ ಭೂಮಿಯ ಉಳುಮೆ ಕೆಲಸ ಮುಗಿದಿರಬೇಕು. ಬಿಸಿಲು ಇದ್ದಾಗ ಉಳುಮೆ ಮಾಡುವುದರ ಲಾಭವೆಂದರೆ ಎರೆಹುಳುಗಳು ಭೂಮಿಯ ಆಳಕ್ಕೆ ಹೋಗಿರುತ್ತವೆ.ಮುಂಜಾನೆ ಮತ್ತು ಕತ್ತಲಿನ ಸಮಯದಲ್ಲಿ ಎರೆಹುಳುಗಳು ಮೇಲೆ ಬರುವುದರಿಂದ ಉಳುಮೆ ಮಾಡುವಾಗ  ಟ್ರ್ಯಾಕ್ಟರ್ಗೆ ಸಿಕ್ಕಿ ಸಾಯುತ್ತವೆ. ಭೂಮಿ ತೇವವಾಗಿದ್ದಾಗ ಉಳುಮೆ ಮಾಡಬಾರದು ಎನ್ನುತ್ತಾರೆ.
ಒಂದು ಹಸು ಇದ್ದರೆ ಐದು ಎಕರೆಯಲ್ಲಿ ಕೃಷಿ ಮಾಡಬಹುದು. ಪ್ರತಿದಿನ ಐದು ಲೀಟರ್ ಗಂಜಲ ಸಂಗ್ರಹಣೆ ಮಾಡಿದರೆ ಸಾಕು.ಪ್ರತಿ ಎಕರೆಗೆ ತಿಂಗಳಿಗೆ 30 ಲೀಟರ್ ಗಂಜಲ ಬೇಕಾಗುತ್ತದೆ.ಸಗಣಿ,ಬೆಲ್ಲ,ಗಂಜಲ ಇಷ್ಟೇ ನಾನು ಹಾಕುವುದು.ಇದನ್ನು ನಮ್ಮಲ್ಲಿ ಅಮುದ ದ್ರವಣಂ ಎಂದು ಕರೆಯುತ್ತೇವೆ. ಹೊಸದಾಗಿ ನೈಸಗರ್ಿಕ ಕೃಷಿ ಮಾಡುವವರು ಸುಭಾಷ್ ಪಾಳೇಕಾರ್ ಹೇಳುವಂತೆಯೇ ಜೀವಮೃತ ತಯಾರು ಮಾಡಿಕೊಳ್ಳಬೇಕು.ನಂತರ ಮೂರ್ನಾಲ್ಕು ವರ್ಷ ಕಳೆದರೆ ಬೆಲ್ಲ,ಸಗಣಿ,ಗಂಜಲ ಸಾಕು ಎನ್ನುತ್ತಾರೆ.
ಒಂದು ಅಡಿ ಭೂಮಿ ಅಗೆದಾಗ ಮೂರು ಎರೆಹುಳು ಸಿಕ್ಕಿದರೆ ಅದು ಫಲವತ್ತಾದ ಮಣ್ಣು ಎನ್ನುತ್ತಾರೆ.ಆದರೆ ನನ್ನ ಭೂಮಿಯನ್ನು ಅಗೆದರೆ ಅಡಿಗೆ ಮೂವತ್ತು ಎರೆಹುಳು ಸಿಗುತ್ತವೆ ಎಂದು ಮಣ್ಣನ್ನು ಬಗೆದು ಎರೆಹುಳಗಳ ಲೆಕ್ಕ ತೋರಿಸುತ್ತಾರೆ. ಸಹಜ ಕೃಷಿಯಲ್ಲಿ ಎಕರೆಗೆ 30 ಕ್ವಿಂಟಾಲ್ ಇಳುವರಿ ಅರಿಶಿನ ತೆಗೆಯುತ್ತಾರೆ.
ಒಟ್ಟು ಐದು ಎಕರೆಯಲ್ಲಿ 60 ಜಾತಿಯ ಮರಗಳಿವೆ. ಹುಣಸೆ 20, ಹಲಸು 30, ಕೊಡಂಬುಳಿ (ಕೇರಳದಲ್ಲಿ ಸಿಗುತ್ತದೆ ಹುಣಸೆ ಹಣ್ಣಿನ ಜಾತಿ),ಜಂಬೂನೇರಳೆ ಮತ್ತಿತರ ಮರಗಳಿವೆ.
ಹಿಪ್ಪೆ, ಆಲ,ಬೇವು,ಅರಳಿ,ಹತ್ತಿ ಈ ಐದು ಮರಗಳಿಗೆ ಮಳೆ ಕರೆಯುವ ಶಕ್ತಿ ಹೆಚ್ಚಿರುತ್ತದೆ. ಜಮೀನಿನ ಸುತ್ತಲೂ ಈ ಮರಗಳು ಇದ್ದರೆ ಆ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಹೆಚ್ಚಿರುತ್ತದೆ ಎನ್ನುವುದು ತಮ್ಮ ಅನುಭವಕ್ಕೆ ಬಂದಿದೆ ಎನ್ನುತ್ತಾರೆ.
ವಿಶೇಷ ಬಿಲ್ವ : "ಇದೊಂದು ಅಪರೂಪದ ವಿಶೇಷ ಬಿಲ್ವಪತ್ರೆ ಗಿಡ.ಇದನ್ನು ಮಘಾ ಬಿಲ್ವ ಪತ್ರೆ ಎನ್ನುತ್ತಾರೆ.ಇದರ ಒಂದು ರೆಕ್ಕೆಯನ್ನು ಕಿತ್ತು ನೋಡಿದಾಗ ಅದರ ಎಲೆಗಳು ಶಿವಲಿಂಗಾಕಾರದಲ್ಲಿರುತ್ತವೆ. ದಕ್ಷಿಣ ಭಾರತ ವಿಂಡ್ ಮಿಲ್ ಛೇರ್ಮನ್ ಕಸ್ತೂರಿ ರಂಗನ್ ಇದನ್ನು ನನಗೆ ಗಿಫ್ಟ್ ಆಗಿ ಕೊಟ್ಟರು. ಇಂಟರ್ ನೆಟ್ನಲ್ಲಿ ನನ್ನ ಬಗ್ಗೆ ಓದಿ ಹುಡುಕಿಕೊಂಡು ಬಂದು, ಇದು ನಿಮ್ಮದೆ ಜಮೀನಿನಲ್ಲಿ ಬೆಳೆಯಲು ಸೂಕ್ತ ಎಂದು ಈ ಬಿಲ್ವಪತ್ರೆ ಗಿಡವನ್ನು ಉತ್ತರ ಭಾರತದಿಂದ ತಂದುಕೊಟ್ಟರು ಎಂದು ಸೊಗಸಾಗಿ ಬೆಳೆದ ಗಿಡವನ್ನು ಭಕ್ತಿಯಿಂದ ತೋರಿಸುತ್ತಾರೆ.
ಆರೋಗ್ಯಕ್ಕಾಗಿ ಕೃಷಿ : "ಕೃಷಿಯನ್ನು ವ್ಯವಹಾರಿಕವಾಗಿ ಮಾಡಲು ಮನಸ್ಸು ಒಪ್ಪುತ್ತಿಲ್ಲ.ಇದೊಂದು ಸಂಸ್ಕೃತಿ. ಆರೋಗ್ಯವನ್ನು ಕಾಪಾಡಿಕೊಂಡು ಆಸ್ಪತ್ರೆಯಿಂದ ದೂರವಾಗಿರಲು ಕೃಷಿ ಮಾಡಬೇಕು.ನಮ್ಮ ಕುಟುಂಬದಲ್ಲಿ ಇದುವರೆಗೂ ನಾವ್ಯಾರು ಆಸ್ಪತ್ರೆಗೆ ಹೋಗಿಲ್ಲ. ನಾವು ಉಣ್ಣುವ ಆಹಾರವೇ ನಮ್ಮ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸಮಾಡುತ್ತದೆ. ಅದಕ್ಕಾಗಿ ಈ ಬಾರಿ ಅರ್ಧ ಎಕರೆಯಲ್ಲಿ 12 ಜಾತಿ ತರಕಾರಿಗಳನ್ನು ಬೆಳೆಸುತ್ತಿದ್ದೇನೆ ಎಂದು ತೋರಿಸಿದರು.
ಬೂದುಗುಂಬಳ,ಸೋರೆಕಾಯಿ,ಗೋರಿಕಾಯಿ,ಪಡುವಲಕಾಯಿ,ಕುಂಬಳಕಾಯಿ,ತೊಂಡೆಕಾಯಿ,ನುಗ್ಗೆಕಾಯಿ,ಈರದಕಾಯಿ,ತೆಂಗಿನಕಾಯಿ(ಕೊಬ್ಬರಿ),ನಿಂಬೆ,ಬೆಂಡೆಕಾಯಿ,ಬಾಳೆಕಾಯಿ. ಈ ಹನ್ನೆರಡು ತರಕಾರಿಗಳನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ಯಾವ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಇವೆಲ್ಲ ದೇಹವನ್ನು ಬಾಧಿಸುವ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸಮಾಡುತ್ತವೆ.ಈ ಕಾಯಿಗಳನ್ನು ನೈಸಗರ್ಿಕವಾಗಿ ಕೈತೋಟದಲ್ಲಿ ಬೆಳೆದುಕೊಂಡು ಉಪಯೋಗಿಸುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು. ಈ ಹನ್ನೆರಡು ಬಗೆಯ ತರಕಾರಿಗಳು ಈಗ ತಮ್ಮ ಕೈ ತೋಟದಲ್ಲಿ ಇದ್ದು ಅವುಗಳನ್ನು ಬಳಸುತ್ತಿರುವುದರಿಂದ ತನ್ನ ಕುಟುಂಬ ಯಾವ ಕಾಯಿಲೆಗೂ ತುತ್ತಾಗದೆ ಆಸ್ಪತ್ರೆಯಿಂದ ದೂರ ಇದ್ದೇವೆ" ಎನ್ನುತ್ತಾರೆ.
ಕಳೆ,ಪಾಥರ್ೇನಿಯಂನಾಶಕ : ಸಣ್ಣಪುಟ್ಟ ಕಳೆ ಮತ್ತು ಪಾಥರ್ೇನಿಯಂ ನಾಶಕ್ಕೂ ಜೈವಿಕ ಪರಿಹಾರ ಕಂಡುಕೊಂಡಿದ್ದಾರೆ. 10 ಲೀಟರ್ ಹಸುವಿನ ಗಂಜಲಕ್ಕೆ ಒಂದು ಕೆಜಿ ಹರಳೆಕಾಯಿ ಜಜ್ಜಿ ಹತ್ತು ದಿನಗಳ ವರೆಗೆ ನೆರಳಿನಲ್ಲಿ ಇಡಬೇಕು. ನಂತರ ಸೋಸಿಕೊಂಡು ಪ್ರತಿ 8 ಲೀಟರ್ ನೀರಿಗೆ, 2 ಲೀಟರ್ ಈ ದ್ರವಣ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಪಾಥರ್ೇನಿಯಂ,ಗರಿಕೆ ಸೇರಿದಂತೆ ಸಣ್ಣಪಟ್ಟ ಕಳೆಗಳು ನಾಶವಾಗುತ್ತವೆ. ಗಂಜಲ ಹಳೆಯದದಷ್ಟು ಒಳ್ಳೆಯದು.ಬಾಳೆ,ಕಬ್ಬು,ತೋಟಗಾರಿಕೆ ಬೆಳೆಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎನ್ನುತ್ತಾರೆ.
ಕೀಟ ನಿಯಂತ್ರಣಕ್ಕಡ ಮಡಕೆ ಬಳಕೆ : ಬೆಳೆಗಳಿಗೆ ಬಾಧಿಸುವ ಹುಳುಗಳನ್ನು ನಿಯಂತ್ರಿಸಲು ಮಡಕೆ ಬಳಸುತ್ತಿರುವುದು ಇವರ ಜಾಣ್ಮೆಗೆ ಸಾಕ್ಷಿ. ಚಿಟ್ಟೆಗಳು ಮೊಟ್ಟೆ ಇಟ್ಟು ಹುಳುಮಾಡಿ ಬೆಳೆಗಳಿಗೆ ಹಾನಿ ಉಂಟುಮಾಡುತ್ತವೆ.ಮೊಟ್ಟೆ ಇಡುವ ಮೊದಲು ದುಂಬಿಗಳನ್ನೆ ಹಿಡಿದು ಬಿಟ್ಟರೆ ಸಾಕಷ್ಟು ಹಾನಿ ತಪ್ಪಿಸಬಹುದು.ಅದಕ್ಕಾಗಿ ಸರಳ,ಸುಲಭ ಉಪಾಯ ಇದು.
ಐದು ಲೀಟರ್ ನೀರು ಹಿಡಿಯುವ ಮಡಕೆಯನ್ನು ತೆಗೆದುಕೊಂಡು ನಾಲ್ಕು ಲೀಟರ್ ನೀರು,ಒಂದು ಕೆಜಿ ಹರಳನ್ನು ಕುಟ್ಟಿ ಅದರಲ್ಲಿ ಹಾಕಬೇಕು. ಎಕರೆಗೆ ಐದು ಮಡಕೆ ಬೇಕು. ತೆಂಗಿಗೆ ನುಸಿ ರೋಗ ಕಡಿಮೆಯಾಗುತ್ತದೆ. ಕಬ್ಬು,ಬಾಳೆಯಲ್ಲಿ ಬರುವ ಗೊಣ್ಣೆಹುಳು ನಿಯಂತ್ರಣಕ್ಕೆ ಸಹಕಾರಿ. ಏಪ್ರಿಲ್ನಲ್ಲಿ ಇದನ್ನು  ಸಿದ್ಧಮಾಡಿ ಇಟ್ಟರೆ ದುಂಬಿಗಳನ್ನು ಸೆರೆಹಿಡಿದು ನಾಶಮಾಡಬಹುದು.ಮಡಕೆಗೆ ವಾರಕ್ಕೊಂದು ಸಾರಿ ಅರ್ಧಲೀಟರ್ ನೀರು ಹಾಕಿಕೊಳ್ಳಬೇಕು. ಕತ್ತಿನ ಮಟ್ಟಕ್ಕೆ ಮಡಕೆಯನ್ನು ಭೂಮಿಯಲ್ಲಿ ಹೂಳಬೇಕು. ಮೂರು ವರ್ಷದ ವರೆಗೂ ಬರುತ್ತದೆ. ಮಳೆಗಾಲಕ್ಕೆ ನೀರು ಹಾಕಬೇಕಿಲ್ಲ. ವಾರಕ್ಕೊಂದು ಬಾರಿ ಹುಳುಗಳನ್ನು ತೆಗೆದು ಹಾಕುತ್ತಿರಬೇಕು. ಚಿಟ್ಟೆ ಮೊಟ್ಟೆಹಾಕುವ ಮೊದಲೇ ಹಿಡಿದು ಬಿಟ್ಟರೆ ಕೀಟಬಾಧೆ ಇರುವುದಿಲ್ಲ. ಬಾಳೆದಿಂಡಿಗೂ ಬರುವ ಹುಳುಗಳನ್ನು ಹಿಡಿಯಬಹುದು" ಎಂದು ಮಡಕೆಯಲ್ಲಿ ಬಿದ್ದಿರುವ ದುಂಬಿಗಳ ರಾಶಿಯನ್ನು ತೋರಿಸುತ್ತಾರೆ.
ಗೆದ್ದಲಿನ ಸಮಸ್ಯೆ ಬಗ್ಗೆ ಕೇಳಿದರೆ ಸಮುದ್ರದಲ್ಲಿ ಮೀನು,ಮಣ್ಣಿನಲ್ಲಿ ಗೆದ್ದಲು ಹುಳು ಇರಲೇಬೇಕು.ಮಣ್ಣಿನಲ್ಲಿ ಗೆದ್ದಲುಹುಳುಗಳು ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚು ಮಾಡುವುದರ ಮೂಲಕ ಹ್ಯೂಮಸ್ ನಿಮರ್ಾಣವಾಗಲು ಸಹಕಾರಿಯಾಗುತ್ತವೆ ಎನ್ನುತ್ತಾರೆ. ಒಣಗಿದ ಕಸಕಡ್ಡಿಗಳನ್ನು ಹೆಚ್ಚಾಗಿ ಹೊದಿಕೆ ಮಾಡಿದರೆ ಗೆದ್ದಲಿಗೆ ಆಹಾರ ಕೊಟ್ಟಂತಾಗುತ್ತದೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗೆ ಶಕ್ತಿವೇಲು ಅವರನ್ನು 9486316041 ಗೆ ಸಂಜೆ 7 ರಿಂದ 9 ಗಂಟೆಯವರೆಗೆ ಮಾತ್ರ ಕರೆಮಾಡಿ ಸಂಪಕರ್ಿಸಬಹುದು 

ಸೋಮವಾರ, ಅಕ್ಟೋಬರ್ 2, 2017

ಮಳವಳ್ಳಿಯಬೆಟ್ಟದ ಜೀವ ಕಾಮೇಗೌಡ !

# ಕೆರೆಕಟ್ಟೆ ನಿರ್ಮಿಸಿದ ಹಠಯೋಗಿ # ಹತ್ತೂರು ನೀರ ಬವಣೆ ನೀಗಿದ ಭಗೀರಥ 

`ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು' ಎಂದು ಹಿರಿಯರು ಆಶೀವಾದಮಾಡುತ್ತಿದ್ದ ನಾಡು ನಮ್ಮದು.ಕಲ್ಲನಕೇರಿಯ ಮಲ್ಲನಗೌಡ ಊರಿನ ಹಿತಕ್ಕಾಗಿ ಕೆರೆಯನ್ನು ಕಟ್ಟಿಸಿ ಅದನ್ನು ಉಳಿಸಿಕೊಳ್ಳಲು ಕಿರಿಯಸೊಸೆ ಭಾಗೀರತಿಯನ್ನು ಕೆರೆಗೆ`ಹಾರ'ವಾಗಿ ಬಲಿಕೊಟ್ಟು ತ್ಯಾಗ, ಆದರ್ಶವನ್ನು ಮೆರೆದ ನಾಡು ನಮ್ಮದು.ಭೂಮಿತೂಕದ ಹೆಣ್ಣು,ಕ್ಷಮಯಾಧರಿತ್ರಿ, ಉದಾತ್ತ ಮನೋಭಾವದ ಭಾಗೀರತಿಯ ಕೆರೆಗೆಹಾರ ಕಥನ ಕವನವನ್ನು ಓದುತ್ತಿದ್ದರೆ,ಕೇಳುತ್ತಿದ್ದರೆ ಮನ ತೇವಗೊಳ್ಳುತ್ತದೆ.ನಮ್ಮಲ್ಲಿ ಕೆರೆಗಳಿಲ್ಲದ ಊರೇ ಇಲ್ಲ.ಆದರೆ ಈಗ ಜೀವನಾಡಿಗಳಂತಿರುವ ಕೆರೆಕಟ್ಟೆಗಳನ್ನೇ ನುಂಗುವ ಜನ ಹೆಚ್ಚಾಗುತ್ತಿರುವುದು ದುರಂತ.ಪರಿಣಾಮ ಒಂದು ಬಿರುಮಳೆ ಬಂದರೆ ನಗರಗಳೆಲ್ಲ ನೀರಿನಲ್ಲಿ ತೇಲುತ್ತವೆ. ಪ್ರಕೃತಿ ಕೆರೆ ಸಂರಕ್ಷಣೆಯ ಪಾಠ ಕಲಿಸುತ್ತಿದೆ.
ತಮ್ಮ ಮಕ್ಕಳು,ಮೊಮಕ್ಕಳಿಗಾಗಿ ಆಸ್ತಿ ಹಣ ಮಾಡುವವರನ್ನು ಕಂಡಿದ್ದೇವೆ,ಕೇಳಿದ್ದೇವೆ.ಆದರೆ ಸಕರ್ಾರಿ ಜಾಗದಲ್ಲಿ ತನ್ನ ಮಕ್ಕಳು,ಮೊಮ್ಮಕ್ಕಳಿಗಾಗಿ ಕೆರೆಕಟ್ಟೆ ಕಟ್ಟುವ ಜೀವವನ್ನು ನೋಡಿರುವುದಿಲ್ಲ.ಅಂತಹ ಒಂದು ಬೆಟ್ಟದಜೀವವನ್ನು ಕಣ್ಣ್ತುಂಬಿಕೊಳ್ಳುವ ಅವಕಾಶವನ್ನು ಮೈಸೂರಿನ ನಾಟಕ ಕರ್ನಾಟಕ ರಂಗಾಯಣ ಕಲ್ಪಿಸಿತ್ತು.ಅದಕ್ಕಾಗಿ ರಂಗಾಯಣ ಸಿಬ್ಬಂದಿ ಅಭಿನಂದನಾರ್ಹರು.
ದಸರಾ ಪ್ರಯುಕ್ತ ಪ್ರತಿವರ್ಷ ನಡೆಸುವ ನವರಾತ್ರಿ ರಂಗೋತ್ಸವದಲ್ಲಿ ಪ್ರತಿದಿನ ಸಾಧಕರೊಬ್ಬರನ್ನು ಕರೆಸಿ ಸನ್ಮಾನಿಸಲಾಗುತ್ತದೆ.ಇದರ ಅಂಗವಾಗಿ ಸೆ.23 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನಕೊಪ್ಪಲಿನ ಬೆಟ್ಟದ ಜೀವ ಕಾಮೇಗೌಡರನ್ನು ಕರೆಸಿದ್ದಾಗ ಅವರನ್ನು ಸನ್ಮಾನಿಸುವ ಸೌಭಾಗ್ಯ ನನ್ನ ಪಾಲಿಗೆ ಒದಗಿಬಂದಿತ್ತು. ಅಂತಹ ಹಿರಿಯ ಜೀವವನ್ನು ಕಂಡು ಮಾತನಾಡಿಸಿ,ಅವರು ಹೇಳಿದ್ದನ್ನು ಕೇಳಿದ ಮೇಲೆ ಮನಸ್ಸು ಕೆಲದಿನ ತಲ್ಲಣ ಅನುಭವಿಸಿತು. ಒಂದು ಧರ್ಮಕಾರ್ಯವನ್ನು ಮಾಡಬೇಕಾದರೆ ಮನಸ್ಸು ಹೇಗೆ ಬಂಡೆಯಂತೆ ಗಟ್ಟಿಯಾಗಿರಬೇಕು.ಎಂತಹ ತ್ಯಾಗಕ್ಕೆ ಸಿದ್ಧವಾಗಬೇಕು ಎನ್ನುವ ಕಟುಸತ್ಯವನ್ನು ಕಾಮೇಗೌಡರು ಬಿಚ್ಚಿಟ್ಟಾಗ ಎಲ್ಲರ ಮುಖದಲ್ಲೂ ಗಾಢಮೌನವೊಂದು ಆವರಿಸಿತ್ತು. ಅಂತಹ ಒಂದು ಅಪರೂಪದ ಕಾಡಿನ ಹೂ `ಬೆಟ್ಟದಜೀವ' ಈ ವಾರದ ಬಂಗಾರದ ಮನುಷ್ಯ.
ಅಂದು 74 ರ ಹರಯದ ಕಾಮೇಗೌಡ ಗಾಂಧಿಯಂತೆ ನಡೆದುಬಂದರು. ಕೈಯಲ್ಲಿ ಕೋಲು.ಹೆಗಲ ಮೇಲೊಂದು ಹಸಿರು ಶಾಲು.ಮಾತಿಗೆ ನಿಂತರೆ ರಾಮಾಯಣ,ಮಹಾಭಾರತದ ನೀತಿಕತೆಗಳು ಪುಂಖಾನುಪುಂಖವಾಗಿ ಪ್ರಾಸಂಗಿಕವಾಗಿ ಬಂದುಹೋಗುತ್ತಿರುತ್ತವೆ. ಮಾತಿನಲ್ಲಿ ವಿರಾಗಿ ಅಲ್ಲಮನ ದನಿ ಇಣುಕುತ್ತದೆ.ಗಾಂಧಿಯ ಕಠಿಣ ವೃತನಿಷ್ಠೆ ಎದ್ದು ಕಾಣುತ್ತದೆ.ಬೆಳಕಾಗಿ ಹಾದಿ ತೋರಬೇಕಿದ್ದ ಜ್ಞಾನ ಬೆಂಕಿಯಾಗಿ ಸುಡುತ್ತಿರುವ ಸುಡುವಾಸ್ತವದಲ್ಲಿ ಬೆಟ್ಟಕ್ಕೆ ತಂಪೆರೆಯುತ್ತಿರುವ ಜೀವವೊಂದರ ಬಗ್ಗೆ ಬರೆಯುತ್ತಿದ್ದೇನೆ.
ಕಾಡಿನ ಕುಸುಮ : ಕಾಮೇಗೌಡ ವನ್ಯಪ್ರಾಣಿಗಳೊಂದಿಗೆ ಬೆಳದ ಗಟ್ಟಿಜೀವ.ಜನರ ಸಂಪರ್ಕ ಅವರಿಗೆ ಆಗಲಿಲ್ಲ. ನಾಗರಿಕತೆಯ ರೀತಿರಿವಾಜುಗಳನ್ನು ಇವರು ಕಲಿಯಲಿಲ್ಲ.ಬೆಟ್ಟದ ತಪ್ಪಲಿನಲ್ಲಿ ಕುರಿಕಾಯುತ್ತಾ ಕುಳಿತುಕೊಳ್ಳುವುದು. ಪ್ರಾಣಿಗಳ ಚಲನವಲನವನ್ನು ಗಮನಿಸುವುದು.ಅವುಗಳ ಸಂಕಷ್ಟವನ್ನು ಅರಿಯುವುದು ಇವರ ಅಭ್ಯಾಸ. ವನ್ಯಪ್ರಾಣಿಗಳಿಗೆ ಬೇಕಾದ ನೀರು,ಅನ್ನಾಹಾರವನ್ನು ಕೊಡುವವರು ಯಾರು?.ಇವುಗಳ ಕಷ್ಟ ಕೇಳುವವರು ಯಾರು ? ಎಂಬ ಆಲೋಚನೆ ತಲೆಯಲ್ಲಿ ತುಂಬಿಕೊಂಡಾಗ ಗೌಡರಿಗೆ ಹೊಳೆದದ್ದು ಕೆರೆಕಟ್ಟೆ ನಿಮರ್ಾಣದ ಕನಸು.
ಮಕ್ಕಳಿಗಾಗಿ ದುಡಿದು ಸವೆದು ಆಸ್ತಿಮಾಡಿದರೆ ಮಕ್ಕಳು ಮೊಮಕ್ಕಳ ಕಾಲದವರೆಗೆ ಅದು ಬರುತ್ತದೆ.ನಂತರ ಆಸ್ತಿಯನ್ನು ತಿಂದುಂಡು ಹಾಳು ಮಾಡಿಬಿಡುತ್ತಾರೆ.ಯಾರ ನೆನಪಿನಲ್ಲೂ ಉಳಿಯುವುದಿಲ್ಲ. ಅದಕ್ಕಾಗಿ ಭೂಮಿಯ ಮೇಲೆ ಶಾಶ್ವತವಾದ ಕೆಲಸವನ್ನು ಮಾಡಬೇಕು ಎಂದು ನಿರ್ಧರಿಸಿದರು ಕಾಮೇಗೌಡ. ಅದರ ಫಲವಾಗಿ ಈಗ ಕುಂದೂರುಬೆಟ್ಟ ಕೆರೆಕಟ್ಟೆಗಳಿಂದ ನಳನಳಿಸುತ್ತಿದೆ
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಿಂದ 10 ಕಿ.ಮೀ.ದೂರದಲ್ಲಿದೆ ಕುಂದೂರು ಬೆಟ್ಟ. ಇದನ್ನು ಕುಂದನಪರ್ವತ ಎಂದೂ ಕರೆಯುತ್ತಾರೆ. ಲಿಂಗಾಕಾರದಲ್ಲಿರುವ ಈ ಬೆಟ್ಟದ ತಪ್ಪಲಿನಲ್ಲಿ ದಾಸನದೊಡ್ಡಿ,ಪಂಡಿತಹಳ್ಳಿ,ಹೊಸದೊಡ್ಡಿ,ತಿರುಮಳ್ಳಿ ಹಾಗೂ ಪಣತಹಳ್ಳಿ ಸೇರಿ ಹತ್ತೂರುಗಳಿವೆ. ಕಳೆದ 40 ವರ್ಷಗಳಿಂದ ಈ ಬೆಟ್ಟಕ್ಕೆ ಕಾವಲುಗಾರನಂತಿದ್ದಾರೆ ಬೆಟ್ಟದಜೀವ ದಾಸನದೊಡ್ಡಿಯ ಕಾಮೇಗೌಡ.
ಶಾಲೆಯ ಮೆಟ್ಟಿಲನ್ನೇ ಹತ್ತದ ಕಾಮೇಗೌಡ ಸರ್ವಋತುವಿನಲ್ಲೂ ನೀರು ಹಿಂಗದ ಕೆರೆಕಟ್ಟೆ ನಿಮರ್ಾಣ ಮಾಡಿದ್ದಾರೆ. ಬೆಟ್ಟದ ಮಧ್ಯಭಾಗದಿಂದ ದಾಸನದೊಡ್ಡಿ ಗ್ರಾಮದವರೆಗೆ ಐದು ಕಟ್ಟೆಗಳಿವೆ. ಇಳಿಜಾರಿನಿಂದ ಕೆಳಗಿನವರೆಗೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ನಾಲೆಗಳನ್ನು ಮಾಡಿದ್ದಾರೆ. ಜೆಲ್ಲೆ ಬರದಿಂದ ತತ್ತರಿಸಿದರೂ ಬೆಟ್ಟದ ತಪ್ಪಲಿನಲ್ಲಿರುವ ಹತ್ತೂರು ಜನಜಾನುವಾರುಗಳಿಗೆ ನೀರಿಗೆ ಬರವಿಲ್ಲ. ದಾಸನದೊಡ್ಡಿಯಿಂದ ಈಗ ಪಣತಹಳ್ಳಿ ತಪ್ಪಲಿನಲ್ಲಿ ಕೆರೆ ನಿಮರ್ಾಣ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಕೆರೆಕಟ್ಟೆ ನಿಮರ್ಿಸುವುದರಲ್ಲಿಯೂ ಜಾಣ್ಮೆ ಮೆರೆದಿದದ್ದಾರೆ.ಮೊದಲು ಕೆರೆ ನಿಮರ್ಿಸಲು ಜಾಗವನ್ನು ಪತ್ತೆ ಮಾಡುತ್ತಾರೆ.ಅಲ್ಲಿ ಉಗಾದಿಗೂ ಮುನ್ನ ಅಗೆದಾಗ ತೇವ ಸಿಗುವಂತಿರಬೇಕು.ಆಗ ಅದು ಸರ್ವಋತುವಿನಲ್ಲೂ ನೀರು ನಿಲ್ಲುವ ಜಾಗ ಎನ್ನುವುದು ಕಾಮೇಗೌಡರ ಅನುಭವ. ತಾನೂ ಸತ್ತರೂ ಸಾವಿರಾರು ವರ್ಷ ಈ ಕೆರೆಗಳು ಕಾಮೇಗೌಡನ ಕೆರೆಗಳು ಎಂದು ಕರೆಸಿಕೊಳ್ಳಬೇಕು ಎನ್ನುವುದು ಇವರ ದೊಡ್ಡಆಸೆ.
ಹಠಯೋಗಿ : ಕೆರೆಕಟ್ಟೆ ನಿಮರ್ಾಣಮಾಡಲು ಕಾಮೇಗೌಡರು ಕಾಯಕ ಆರಂಭಿಸಿದರೆಂದರೆ ಎಂತಹ ತ್ಯಾಗಕ್ಕೂ ಸಿದ್ಧರಾಗಿಬಿಡುತ್ತಾರೆ.ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಮಾರಿ,ಇದು ಸಾಲದು ಎಂಬಂತೆ ಸಾಕಿದ ಕುರಿಗಳನ್ನು ಮಾರಿ ಐದು ಕೆರೆಕಟ್ಟೆ ಕಟ್ಟಿದ್ದಾರೆ.ಇದುವರೆಗೂ ಕೆರೆಕಟ್ಟೆ ನಿಮರ್ಾಣಕ್ಕೆ ಹೀಗೆ ಸ್ವಂತ ಏಳೆಂಟು ಲಕ್ಷ ರೂಪಾಯಿಗಳನ್ನು ಹೊಂದಿಸಿಕೊಂಡು ಕೆರೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ಇಪ್ಪತ್ತು ಸಾವಿರ ರೂಪಾಯಿ ಕೂಡಿಟ್ಟುಕೊಂಡಿದ್ದ ಕಾಮೇಗೌಡರು,ಸೊಸೆಗೆ ಸರಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾದಾಗ ಕೂಡಿಟ್ಟ ಹಣವನ್ನು ಕಟ್ಟೆಕಟ್ಟಲು ಬಳಸಿದ್ದಾರೆ. ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟು ಕೃಷ್ಣನ ಹೆಸರಿನಲ್ಲಿ ಒಂದು ಕಟ್ಟೆ ಕಟ್ಟಿಬಿಟ್ಟೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಬೆಟ್ಟದ ಸುತ್ತಲ್ಲೂ ಕಣಗಿಲೆ.ಬಿಲ್ವಪತ್ರೆ,ಹುಣಸೆ,ಹೊಂಗೆ ಹೀಗೆ ಸಾವಿರಾರು ಗಿಡಗಳನ್ನು ನೆಟ್ಟು ಪ್ರಾಣಿಪಕ್ಷಿಗಳಿಗೆ ನೆರಳಾಗಿದ್ದಾರೆ. ಅರಣ್ಯ ಇಲಾಖೆಯವರು ನೆಟ್ಟ ಮರಗಿಡಗಳಿಗೂ ಕಾವಲಾಗಿದ್ದಾರೆ.
ದಾಸನದೊಡ್ಡಿಯ ನೀಲಿವೆಂಕಟಗೌಡರ ಹತ್ತು ಮಕ್ಕಳಲ್ಲಿ ಕೊನೆಯ ಮಗ ಕಾಮೇಗೌಡ.ಪತ್ನಿ ಕೆಂಪಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಪಿತ್ರಾಜರ್ಿತವಾಗಿ ಬಂದ ಎರಡು ಎಕರೆ ಜಮೀನು ಹಂಚಿ ತಾವು ಕಾಡುಪಾಲಾಗಿದ್ದಾರೆ. ಮಕ್ಕಳ ಮನೆಯಲ್ಲೇ ಆಶ್ರಯಪಡೆದಿರುವ ಕಾಮೇಗೌಡ ತಮಗೆ ಬರುವ ಮಾಸಿಕ ಪಿಂಚಣಿ ಹಣದಿಂದ ಸಸಿಗಳನ್ನು ಖರೀದಿಸಿ ಬೆಟ್ಟದಲ್ಲಿ ನೆಡುತ್ತಾರೆ.
ಭವದಿಂದ ಪಾರದ ಬಗೆ: `ನಮ್ಮ ವಂಶ ಹದವಾದ ವಂಶವಲ್ಲ. ಅದಕ್ಕಾಗಿ ನಾನಾದರೂ ಸರಿಯಾದ ಹಾದಿ ಹಿಡಿಯಬೇಕಲ್ಲಾ ಅಂತ ಅಂದುಕೊಂಡೆ. ಶಿವ ಈ ಭವದಿಂದ ನನ್ನನ್ನು ಪಾರುಮಾಡು ತಂದೆ ಅಂತ ಬೇಡಿಕೊಂಡೆ. ಮಾನವ ಜನ್ಮ ಅಪರೂಪದ್ದು. ಹೆಂಡತಿ, ಮಕ್ಕಳು, ಆಸ್ತಿ ಯಾವುದು ಶಾಶ್ವತ ಅಲ್ಲ.ಜೀವ ಇರುವವರೆಗೆ ಧರ್ಮಕಾರ್ಯ ಮಾಡಿಬಿಡೋಣ ಅಂತ ತೀರ್ಮಾನಿನಿಸಿಬಿಟ್ಟೆ. ನಮ್ಮ ಅಪ್ಪ ಎರಡು ಕಟ್ಟೆ ತೆಗೆದಿದ್ದ, ಅದು ಮುಚ್ಚಿಹೋಯ್ತು. ಯಾವನೋ ಒಬ್ಬ ಇನ್ನೂ ಕೆರೆಕಟ್ಟೆ ಕೆಲಸ ಅವನ ಮಗ ಮಾಡ್ತಾನೆ ಅಂತ ಲೇವಡಿ ಮಾಡಿದ. ಹಠ ಸಾಧನೆ ಮಾಡಿದೆ. 30 ವರ್ಷದಿಂದ ಧರ್ಮಕಾರ್ಯ ಮಾಡುತ್ತಿದ್ದೇನೆ. ವಸಂತಕಾಲದಲ್ಲಿ ಕಾಡೆಲ್ಲ ಹಸಿರಾಗಿ ವನ್ಯಪ್ರಾಣಿಗಳು ಬೆಟ್ಟದಲ್ಲಿ ವಿಹರಿಸುತ್ತಿದ್ದರೆ, ಆ ಮರ ಈ ಮರ ಹಿಡಕೊಂಡು ಕುರಿ ಮೇಯಿಸುತ್ತಾ ನಡೆಯುತ್ತಿದ್ದರೆ ಸಂತೋಷವಾಗುತ್ತದೆ" ಎನ್ನುತ್ತಾರೆ ಕಾಮೇಗೌಡ.
ಜೀವಬೆದರಿಕೆ : ಇಂತಹ ಅಪರೂಪದ ಬೆಟ್ಟದ ಜೀವ ಕಾಮೇಗೌಡರಿಗೂ ಖಳನಾಯಕರ ಕಾಟ ತಪ್ಪಿಲ್ಲ.ಕೆರೆಯ ಬಳಿ ಶೇಖರಣೆಯಾಗುವ ಮರಳು ಬಗೆಯಲು ಬರುವ ಲೂಟಿಕೋರರು,ಕಾಡಿನ ಮರ ಕಡಿಯಲು ಬರುವ ಮರಗಳ್ಳರು ಜೀವ ಬೆದರಿಕೆ ಒಡ್ಡುತ್ತಲೇ ಇರುತ್ತಾರೆ. ಇದರಿಂದ ಭಯಭೀತರಾಗಿರುವ ಕಾಮೇಗೌಡರು ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.ಇಂತಹ ಬೆಟ್ಟದ ಜೀವಗಳನ್ನು ಕಾಪಾಡಿಕೊಳ್ಳಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ ಎಂದು ಜನ ಅರಿತುಕೊಳ್ಳಬೇಕು.ಆಗ ಮಾತ್ರ ನಾಗರಿಕತೆಗೂ ಘನತೆ ಬರುತ್ತದೆ.
ಹೃದಯ ಕಲ್ಲು ಬಂಡೆಯಾಗಬೇಕು: ಇಂತಹ ಧರ್ಮಕಾರ್ಯಗಳನ್ನು ಮಾಡಬೇಕಾದರೆ ಮೊದಲು ಹೃದಯ ಕಲ್ಲುಬಂಡೆಯಂತಾಗಬೇಕು.ನಾನು, ನನ್ನದು,ನನ್ನವರು ಎಂಬ ಭಾವನೆ ಬಿಡಬೇಕು ಎನ್ನುತ್ತಾರೆ ಕಾಮೇಗೌಡ. ಬದುಕಿನ ಬೇಗೆಯಲ್ಲಿ ಬೆಂದು,ಸಾವಿನ ಕದವನ್ನು ತಟ್ಟಿ ಬದುಕಿಬಂದಿರುವ ಕಾಮೇಗೌಡರ ಜೀವನಪಯಣ ಅತ್ಯಂತ ಕಠಿಣವಾದದ್ದು.ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ತಾವೊಬ್ಬರೆ ಎತ್ತಿ,ಬೆಟ್ಟದ ತುದಿಯವರೆಗೂ ನಡೆದು ಕೆರೆಕಟ್ಟೆ ಕಟ್ಟಿದ್ದಾರೆ.ಬೇಕಾದಾಗ ಜೆಸಿಬಿ ಬಳಸಿಕೊಂಡಿದ್ದಾರೆ.ಅದಕ್ಕಾಗಿ ಕೈಯಿಂದ ಐದಾರು ಲಕ್ಷ ರೂಪಾಯಿ ಹಣಕೊಟ್ಟಿದ್ದಾರೆ.
ಸತ್ತಾಗ ಈ ದೇಹ ಬೆಂಕಿಗೆ ಆಹುತಿಯಾಗುತ್ತದೆ.ಅದಕ್ಕಾಗಿ ಜೀವನವನ್ನು ವ್ಯರ್ಥವಾಗಿ ಕಳೆದುಬಿಡಬಾರದು. ವಿವೇಕದಿಂದ ಬಾಳಬೇಕು ಎಂಬ ಕಾಮೇಗೌಡರು ಲೋಕಮೆಚ್ಚುವ ಕೆಲಸಮಾಡಿದ್ದರೂ ` ಈ ನರಜನ್ಮದಲ್ಲಿ ಯಾವುದನ್ನು ಕಳೆಯೋಣ,ಯಾವುದನ್ನು ಬಿಡೋಣ ಎನ್ನುವುದು ಇಂದಿಗೂ ಗೊತ್ತಾಗುತ್ತಿಲ್ಲ' ಎನ್ನುತ್ತಾರೆ. ವನ್ಯಪ್ರಾಣಿಗಳು ತನ್ನ ಬಳಗ ಅಂತ ಆದಮೇಲೆ ಅವುಗಳ ಕಷ್ಟ ನಿವಾರಣೆ ಮಾಡಬೇಕಾದದ್ದು ನನ್ನ ಕರ್ತವ್ಯ ಅದಕ್ಕಾಗಿ ಕೆರೆಕಟ್ಟೆ ನಿಮರ್ಾಣಮಾಡುವ ಪುಣ್ಯಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.
ಕೋಟಿ ಕೋಟಿ ಹಣ ಸಂಪಾದಿಸಿದರು ಅದು ಶಾಶ್ವತ ಅಲ್ಲ, ಕೀರ್ತಿ ಮಾತ್ರ ಶಾಶ್ವತ.ಅದಕ್ಕಾಗಿ ಮಗನಿಗೊಂದು,ಮಮ್ಮೊಗನಿಗೊಂದು,ಆ ಮಗನಿಗೆ,ಈ ಮಗನಿಗೆ ಅಂತ ಕೆರೆಕಟ್ಟೆ ಕಟ್ಟುತ್ತಾ ಹೋದೆ.ಪ್ರತಿಯೊಬ್ಬರಿಗೂ ಒಂದೊಂದು ಕೆರೆ ಕಟ್ಟಿದ್ದೇನೆ. ಅದೆಲ್ಲ ಸರ್ಕಾರಿ ಜಾಗದಲ್ಲಿ ಕಟ್ಟಿರುವ ಕೆರೆಗಳು.ಯಾಕೆಂದರೆ ಆ ಕೆರೆಗಳನ್ನು ಯಾರು ಮಾರಬಾರದು ಮತ್ತು ಮುಚ್ಚಬಾರದು.ಸ್ಥಿರವಾಗಿರಬೇಕು, ಇದು ಧರ್ಮ ಎನ್ನುತ್ತಾರೆ.
ಇಬ್ಬರು ರಾಜಕಾರಣಿಗಳ ಬಳಿ ಇರುವ ಹಣದಿಂದ ಇಡೀ ಮಂಡ್ಯ ಜಿಲ್ಲೆಯನ್ನೇ ಬೆಳಕುಮಾಡಿಬಿಡಬಹುದು.ಆದರೆ ಅದು ಆಗುತ್ತಿಲ್ಲ.ಈ ಕಾಮೇಗೌಡನ ಆಸೆ ಕರ್ನಾಟಕವನ್ನೆ ಕೈಯಲ್ಲಿ ಎತ್ತಿ ಹಿಡಿದು ಬೆಳಗಿಬಿಡಬೇಕು ಅನಿಸುತ್ತದೆ. ಆದರೆ ಅದು ನನ್ನಿಂದಾಗದ ಕೆಲಸ. ಮಾತನಾಡುವುದು ಸುಲಭ,ಮಾಡುವುದು ಕಷ್ಟ ಎಂದು ಹೇಳುವ ಮೂಲಕ ಪರಿಸರ ಉಳಿಸಿ ಎಂದು ಕೂಗು ಹಾಕುವ,ಚಳವಳಿ,ಹೋರಾಟ ಮಾಡುವ `ಪರಿಸರಪ್ರೇಮಿ' ಗಳು ನಾಚುವಂತೆ ಮಾಡುತ್ತಾರೆ.
ಕಾಡಿಗೆ ಬೆಂಕಿ ಬೀಳದಂತೆ,ಕಾಡು ತಂಪಾಗಿರುವಂತೆ ನೋಡಿಕೊಳ್ಳಬೇಕು.ವನ್ಯಪ್ರಾಣಿಗಳಿಗೆ ಸಾಕಷ್ಟು ನೀರು ನೆರಳು ಸಿಗುವಂತೆ ಮಾಡಬೇಕಾದದ್ದು ಅರಣ್ಯ ಅಧಿಕಾರಿಗಳ ಕೆಲಸ.ಇಂತಹ ಪ್ರಾಮಾಣಿಕ ಅಧಿಕಾರಿಗಳು ನಮಗೆ ಬೇಕು.ಹಣದ ಆಮಿಷಕ್ಕೆ ಬಲಿಯಾಗಿ ಕಾಡಿನ ಸಂಪತ್ತನ್ನೇ ಲೂಟಿಮಾಡುವ ಅಧಿಕಾರಿಗಳು,ರಾಜಕಾರಣಿಗಳಿಂದ ಪರಿಸರ ಹಾಳಾಗುತ್ತಿದೆ. ಆಸೆ ಇಲ್ಲದೆ ಜಗತ್ತಿಲ್ಲ.ಆದರೆ ಮಾನವನಿಗೆ ದುರಾಸೆ ಇರಬಾರದು. ಈ ಕಾಡು ಮತ್ತು ವನ್ಯಪ್ರಾಣಿಗಳೆ ನನ್ನ ಸಂಪತ್ತು ಎನ್ನುತ್ತಾರೆ. ಇಂತಹ ಬೆಟ್ಟದಜೀವಗಳು ಎಲ್ಲಾಕಡೆ ತಣ್ಣಗಿದ್ದು ನೂರ್ಕಾಲ ಬಾಳಲಿ.ಉರಿಯುತ್ತಿರುವ ಭೂಮಿ ತಂಪಾಗುವ ಪುಣ್ಯಕಾರ್ಯ ಮಾಡಲಿ ಎನ್ನುವುದು ನಮ್ಮ ಆಶಯ 


ಭಾನುವಾರ, ಸೆಪ್ಟೆಂಬರ್ 24, 2017

`ದೇಸಿಕೃಷಿ' ಜ್ಞಾನ ಪರಂಪರೆ : ಕೃಷಿ ಸಂಸ್ಕೃತಿ ಕಥನ
ಪ್ರಸ್ತುತ ಕೃಷಿ ನಷ್ಟವಾಗಿ ಪರಿಣಮಿಸಿರುವುದರಿಂದ ಈಗ ವ್ಯವಸಾಯದ ಆಸಕ್ತಿಯೇ ಕರಗಿಹೋಗಿದೆ. 50ರ ವಯೋಮಾನದ ಆಸುಪಾಸಿನ ಕೃಷಿ ಜ್ಞಾನಿಗಳು ನಶಿಸಿಹೋದರೆ ದೇಸಿ ಕೃಷಿ ಜ್ಞಾನ ಬಲ್ಲವರ ಸಂತತಿಯೇ ಇಲ್ಲವಾಗುತ್ತದೆ. ಆಗ ಅಂತಹ ಕೃಷಿಯನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಸಿ ಕೃಷಿ ಜ್ಞಾನದ ಅಧ್ಯಯನ ಮತ್ತು ಅದರ ದಾಖಲಾತಿ ಅನಿವಾರ್ಯವಾಗಿದೆ. ಬಹುತೇಕ ಹಳ್ಳಿಗರು ಅನಕ್ಷರಸ್ಥರಾಗಿದ್ದರೆ ಹೊರತು ಅಜ್ಞಾನಿಗಳಾಗಿರಲಿಲ್ಲ.ಅರಿವುಗೇಡಿಗಳಾಗಿರಲಿಲ್ಲ. ಈ ದೇಶದ ಮುಖ್ಯವಾಹಿನಿ ಕೃಷಿ ದೇಸಿ ಕೃಷಿ ಮಾತ್ರ. ಈ ನಿಟ್ಟಿನಲ್ಲಿ ಭಾರತಕ್ಕೆ ಪ್ರವಾಸಕ್ಕೆ, ಅಧ್ಯಯನಕ್ಕೆ ಬಂದ ವಿದೇಶಿ ಪ್ರವಾಸಿಗರು,ಸಂಶೋಧಕರು ಬರೆದಿರುವ ಜ್ಞಾನವನ್ನೆಲ್ಲ ಪರಿಶೀಲಿಸುವ ಬೆಳಕಿಗೆ ತರುವ ಮಹತ್ವದ ಕೆಲಸಗಳು ಆಗಬೇಕಾಗಿದೆ. - ಡಾ.ಆರ್.ಸ್ವಾಮಿ ಆನಂದ್
ರೈತ ಸಮುದಾಯದ್ದು "ಮೌನ" ಸಂಸ್ಕೃತಿ.ಬಹುತೇಕ ಅನಕ್ಷರಸ್ಥರರೆ ಆಗಿದ್ದ ರೈತರು ಬರೆಯುವುದಕ್ಕಿಂತ ಹೆಚ್ಚಾಗಿ "ಬದುಕು"ವುದೆ ದೊಡ್ಡದು ಎಂದು ಅರಿತು ಬಾಳಿದವರು.ಮೌಖಿಕ ಪರಂಪರೆಯ ಕೃಷಿ ಸಂಸ್ಕೃತಿಯ ಕುರಿತು ನಮ್ಮಲ್ಲಿ ಅಷ್ಟಾಗಿ ಚಾರಿತ್ರಿಕ ದಾಖಲೆಗಳು ಸಿಗುವುದಿಲ್ಲ.
ಸಾವಿರಾರು ವರ್ಷಗಳ ಇತಿಹಾಸವಿರುವ ಕೃಷಿಯ ಬಗ್ಗೆ ಸರಿಯಾದ ವಿವರಗಳಿಲ್ಲ.ಅತಿವೃಷ್ಠಿ,ಅನಾವೃಷ್ಠಿಯಂತಹ ಪ್ರಕೃತಿ ವೈಪರಿತ್ಯಗಳನ್ನು ಎದುರಿಸಿ,ಪ್ರಾಣಿ,ಕೀಟಗಳ ಹಾವಳಿಯಿಂದ ಪಾರಾಗಿ ಬೆಳೆ ಬೆಳೆದು "ಆಹಾರ ಭದ್ರತೆ" ಯನ್ನು ಒದಗಿಸಿಕೊಟ್ಟಿರುವ ಶ್ರಮಿಕ ಸಂಸ್ಕೃತಿಯ ಬಗ್ಗೆ ಚಾರಿತ್ರಿಕ ದಾಖಲೆ ಇಲ್ಲದಿರುವುದು ದುರಂತವೆ ಸರಿ.
ಈ ಹಿನ್ನೆಲೆಯಲ್ಲಿ ಪತ್ರಕರ್ತ,ಕೃಷಿಕ ಆರ್.ಸ್ವಾಮಿ ಆನಂದ್ "ಕನರ್ಾಟಕ ದೇಸಿ ಕೃಷಿ ಜ್ಞಾನ ಪರಂಪರೆಗಳು" ಎಂಬ ಸಂಶೋಧನ ಮಹಾ ಪ್ರಬಂಧ ರಚಿಸಿ "ದೇಸಿ" ಕೃಷಿ ಪರಂಪರೆಯನ್ನು ದಾಖಲಿಸಿ ಸಾವಯವ ಕೃಷಿ, ಸಹಜ ಕೃಷಿ, ರಾಸಾಯನಿಕ ಕೃಷಿಗಳ ವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದಾರೆ. ಡಾ.ಮೊಗಳ್ಳಿ ಗಣೇಶ್ ಅವರ ಮಾರ್ಗದರ್ಶನವಿರುವ ಈ ಕೃತಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕೃಷಿ ಚರಿತ್ರೆಯಲ್ಲಿ ಶುದ್ಧ ಬೇಸಾಯಕ್ಕೆ ಸಂಬಂಧಿಸಿದಂತೆ ಸುಮಾರು 150 ವರ್ಷಗಳ ಹಿಂದಿನವರೆಗೆ ಸಿಗುವ ಕೃತಿಗಳಲ್ಲಿ "ವೃಕ್ಷಾಯುವರ್ೇದ" ಮುಖ್ಯವಾದದ್ದು. ಸಂಸ್ಕೃತದ ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಆರ್.ಪಿ.ಹೆಗಡೆ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಹತ್ತನೇ ಶತಮಾನದ ಅಜುಬಾಜುವಿನಲ್ಲಿದ್ದ ಸುರಪಾಲ ಮುನಿಯ ವೃಕ್ಷಾಯುವರ್ೇದ ಹೆಚ್ಚಾಗಿ ಅರಣ್ಯಧಾರಿತ ಕೃಷಿಯ ಬಗ್ಗೆ ಮಾತನಾಡುತ್ತದೆ. ನೂರಾರು ಬಗೆಯ ಮರಗಳ ವಿವರ ಇಲ್ಲಿದೆ.ಯಾವ ಮರವನ್ನು ಎಲ್ಲಿ,ಹೇಗೆ ನೆಡಬೇಕು. ಇಂತಿಂತಹ ಮರಗಳನ್ನು ನೆಟ್ಟರೆ ಯಾವ ಫಲ ಸಿಗುತ್ತದೆ.ಅದರಿಂದ ಪರಿಸರದ ಮೇಲೆ ಬೀರುವ ಪರಿಣಾಮ ಎಂತದ್ದು. ಮರಗಳ ಪುನರ್ ಉತ್ಪತ್ತಿ ಹೇಗೆ ಆಗುತ್ತದೆ ಇದೆಲ್ಲವನ್ನು ಸುರಾಪಲ ಮುನಿ ವಿವರಿಸಿದ್ದಾನೆ. ಅಲ್ಲದೆ ರೈತ ಭಿತ್ತನೆಗೆ ಮುಂಚೆ ಕೈಗೊಳ್ಳಬೇಕಾದ ಕ್ರಮಗಳು,ಬೀಜೋಪಚಾರ,ಒಡೆಯನ ಕರ್ತವ್ಯಗಳು,ಸಸಿ ನೆಡುವ ವಿಧಾನ,ಪಾಲನೆ ಎಲ್ಲವನ್ನು ಹೇಳಲಾಗಿದೆ. ಇದೆಲ್ಲವನ್ನು ಸ್ವಾಮಿ ಆನಂದ್ ಇಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ಇದನ್ನು ಬಿಟ್ಟರೆ ಕನ್ನಡದಲ್ಲಿ ಬಂದ ಶ್ರೀ ಘನ ಮಠ ಶಿವಯೋಗಿಗಳ "ಕೃಷಿ ಜ್ಞಾನ ಪ್ರದೀಪಿಕೆ" 150 ವರ್ಷಗಳ ಹಿಂದಿನ ಕೃಷಿಜ್ಞಾನವನ್ನು ತಿಳಿಸಿಕೊಡುವ ಗ್ರಂಥ.ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿರುವ ಶ್ರೀ ಘನಮಠೇಶ್ವರ ಮಠ ಇಂದಿಗೂ ಕೃಷಿಜ್ಞಾನ ದಾಸೋಹ ಮಾಡುವ ವಿಶೇಷ ಮಠ. ಪ್ರತಿವರ್ಷ ಜಾತ್ರೆಯಲ್ಲಿ ಸೇರುವ ಜನರಿಗೆ ಕೃಷಿ ಸಾಧಕರಿಂದ ಪಾಠ ಹೇಳಿಸಿ ಸಾಧಕರನ್ನು ಸನ್ಮಾನಿಸುತ್ತಾ ಬಂದಿದೆ. ಇಂತಹ ಘನಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಘನಮಠ ಶಿವಯೋಗಿಗಳು 1876 ರಲ್ಲಿ ತಮ್ಮ ಸಹಚರರಾಗಿದ್ದ ಕುನ್ನಾಳ್ ಸಿದ್ದರಾಮಪ್ಪ ಅವರಿಂದ "ಕೃಷಿ ಜ್ಞಾನ ಪ್ರದೀಪಿಕೆ"ಯನ್ನು ಹೇಳಿ ಬರೆಸಿದರು. ಇದು 1917 ರಲ್ಲಿ ಪ್ರಕಟಣೆ ಕಂಡಿತು. 312 ಪುಟಗಳ ಈ ಪುಸ್ತಕ ಇದುವೆರೆಗೆ ನಾಲ್ಕು ಮುದ್ರಣಗಳನ್ನು ಕಂಡಿದೆ.
ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗಾದೆಗಳು,ಸರ್ವಜ್ಞ ಮತ್ತು ತೆಲುಗಿನ ಕೆಲವು ಹಿತೋಕ್ತಿಗಳನ್ನು ಸೇರಿಸಿ ರೂಪುಗೊಂಡಿರುವ ಪುಸ್ತಕದ ಬಗ್ಗೆಯೂ ಪ್ರಬಂಧದಲ್ಲಿ ವಿವರವಾಗಿ ಚಚರ್ಿಸಲಾಗಿದೆ.
ಕೃತಿಯ ಅಧ್ಯಯನ ಮಾಡಿದರೆ ನಾಗರೀಕತೆಯ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ.ಭೂಮಿಯ ಉಗಮ,ಜೀವಿಗಳ ಉಗಮ,ಭೂ ಖಂಡಗಳ ಅಲೆದಾಟ, ಸಿಂಧೂ ನಾಗರೀಕತೆ,ವೇದಗಳ ಕಾಲದ ಜನಜೀವನದ ಮಾಹಿತಿಗಳು ಹೇರಳವಾಗಿ ಸಿಗುತ್ತವೆ.ಮಹಾ ಭಾರತ,ರಾಮಯಣ ಕಾಲದ ಕೃಷಿ, ಬುದ್ಧ, ಮಹಾವೀರನ ಕಾಲದಲ್ಲಿದ್ದ ಕೃಷಿ ವಿಧಾನಗಳನ್ನು ಚಚರ್ಿಸಲಾಗಿದೆ.
ಭಾರತದ ಪೂವರ್ೇತಿಹಾಸವನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಿರುವ ಲೇಖಕರು "ಋಗ್ವೇದಗಳ ಕಾಲ,ಮಹಾ ಜನಪದಗಳ ಕಾಲ,ಮಗಧರು,ಮೌರ್ಯರು,ಮಧ್ಯ ಪ್ರಾಚೀನ ಕಾಲ,ಮೊಘಲರು,ವಿಜಯ ನಗರ ಸಾಮ್ರಾಜ್ಯ, ಬ್ರೀಟಿಷರು ಈ ಎಲ್ಲಾ ಆಳ್ವಿಕೆ ಚರಿತ್ರೆಗಳ ಹಿಂದೆ ದುಡಿಯುವ ರೈತರ ಪರಿಶ್ರಮ ಇದೆ. ಇಷ್ಟು ದೊಡ್ಡ ಮಟ್ಟದ ವ್ಯವಸಾಯ ಪ್ರಧಾನ ದೇಶದಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ಶಾಸ್ತ್ರೀಯ ಗ್ರಂಥ ಇತಿಹಾಸ ರಚನೆ ಆಗದೇ ಹೋಗಿರುವುದು ಕೌತುಕದ ಸಂಗತಿ" ಎನ್ನುತ್ತಲೇ ದೇಶದ ಇತಿಹಾಸ,ಸಂಸ್ಕೃತಿ ಮತ್ತು ಪರಂಪರೆಯನ್ನು ಕೃಷಿ ಹಿನ್ನೆಲೆಯಲ್ಲಿ ಓದುಗರಿಗೆ ಪರಿಚಯಿಸುತ್ತಾ ಹೋಗಿದ್ದಾರೆ.
ಟಿಪ್ಪು ಸುಲ್ತಾನ್ ಮಡಿದ ಮೇಲೆ ಲಾಡರ್್ ವೆಲ್ಲೆಸ್ಲಿಯ ಆದೇಶದ ಮೇರೆಗೆ ಹಮ್ಮಿಲ್ಟನ್ ಫ್ರಾನ್ಸಿಸ್ ಬುಚನಾನ್ ಎನ್ನುವ ಸಂಶೋಧಕ `ಹಿಸ್ಟ್ರಿ ಆಫ್ ಟ್ರಾವೆಲ್' ಕುರಿತು 1807 ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟವಾದ "ಎ ಜನರ್ಿ ಫ್ರಮ್ ಮದ್ರಾಸ್ ಥ್ರೋ ದಿ ಕಂಟ್ರೀಸ್ ಆಫ್ ಮೈಸೂರು,ಕೆನರಾ,ಮಲಬಾರ್ " ಎಂಬ ಕೃತಿ ಆ ಕಾಲದ ಕೃಷಿಯ ವಾಸ್ತವದ ಸ್ಥಿತಿಗತಿಗಳನ್ನು ವಸ್ತುನಿಷ್ಠವಾಗಿ ನೋಡಿರುವ ದಾಖಲೆಯಾಗಿದೆ ಎನ್ನುವ ಲೇಖಕರು ಆ ಭಾಗಗಳನ್ನು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ.
12 ನೇ ಶತಮಾನದ ವಚನಗಳನ್ನು ಆಧರಿಸಿ "ಆಧ್ಯಾತ್ಮಿಕ ಕೃಷಿ" ಎಂಬ ಭಾಗದಲ್ಲಿ ಕೃಷಿಯ ಮಹತ್ವ,ಮಠಗಳ ಬೇಸಾಯ ಅವಲಂಬನೆಗಳನ್ನು ಅಲ್ಲಮ ಪ್ರಭು ಮತ್ತಿತರ ಶರಣರ ವಚನಗಳ ಮೂಲಕ ಅರ್ಥಪೂರ್ಣವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ವೆಬ್ಸ್ಟರ್ ನಿಂಘಟುವಿನ ಪ್ರಕಾರ ಬೇಸಾಯ ಎನ್ನುವುದು ಭೂಮಿಯನ್ನು ಉಳುವ,ಬೆಳೆ ಬೆಳೆವ ವಿಜ್ಞಾನ ಅಥವಾ ಕಲೆ ಜೊತೆಗೆ ಪಶು ಸಂವರ್ಧನೆಯೂ ಆಗಿದೆ. ಬೇಸಾಯ ಸಂಸ್ಕೃತಿ ಎಲ್ಲಾ ಸಂಸ್ಕೃತಿಗಳ ತಾಯಿಬೇರು.ಕೃಷಿಗೆ ಯುನಿವರ್ಸಲ್,ಯುನಿಫಾಮರ್ಿಟಿ ಇಲ್ಲ.ರಾಜ್ಯದ 29340 ಹಳ್ಳಿಗಳು ಒಂದರಂತೆ ಒಂದಿಲ್ಲ. ಅಷ್ಟೇ ಯಾಕೆ ಪ್ರತಿ ಐದು ಕಿ.ಮೀ. ಅಂತರಕ್ಕೆ ಮಣ್ಣು, ನೀರು ಬದಲಾಗುತ್ತಾ ಹೋಗುತ್ತದೆ.ಅಷ್ಟೊಂದು ಜೀವ ವೈವಿಧ್ಯತೆ ಇದೆ.
ದೇಸಿ ಕೃಷಿಕರ ಮಳೆಜ್ಞಾನ,ಮಳೆ ನಕ್ಷತ್ರಗಳು,ನಂಬಿಕೆಗಳು, ದೇಸಿ ಜಾನುವಾರುಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿರುವುದು ಕೃಷಿ ಪರಂಪರೆಯನ್ನು ಅರಿತುಕೊಳ್ಳುವ ದೃಷ್ಠಿಯಿಂದ ತುಂಬಾ ಮಹತ್ವದ ಅಧ್ಯಾಯವಾಗಿದೆ.
ಮಳೆ ಬೀಳುವ ಕಾಲ,ತಿಂಗಳು. ಮಳೆ ನಕ್ಷತ್ರ,ಯಾವ ಯಾವ ಮಳೆಗೆ ಎಂತಹ ಬೀಜ ಭಿತ್ತನೆಮಾಡಬೇಕು ಎನ್ನುವ ಪಟ್ಟಿ ನೀಡಿರುವುದು ಕೃಷಿಕರಿಗೆ ಮರೆತ ದೇಸಿಜ್ಞಾನವನ್ನು ಮತ್ತೆ ಜಾರಿಗೆ ತರಲು ಅನುಕೂಲಕರವಾಗಿದೆ.
ಸಾವಿರಾರು ವರ್ಷಗಳಿಂದ ಕೃಷಿಯನ್ನು ಜೀವನ ಧರ್ಮವಾಗಿಸಿಕೊಂಡು ಬಂದಿದ್ದ ನಮ್ಮ ಜನಪದಕ್ಕೆ ಕೃಷಿಯ ನೆಲಮೂಲ ವಿಜ್ಞಾನ ಕಣ್ಮರೆಯಾಗುತ್ತಿದೆ.ಯಂತ್ರ ನಾಗರಿಕತೆ ಕೃಷಿಯನ್ನು ಅರೆದು ನುಂಗಿ ನೀರು ಕುಡಿದಿದೆ.ಇಂಥಹ ದಾರುಣ ಸ್ಥಿತಿಯ ನಡುವೆ ಅಲ್ಲೊಬ್ಬ ಇಲ್ಲೊಬ್ಬ ಹಠಮುನಿಯಂತೆ ನೆಲಮೂಲ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ. "ಭೂಮಿಯ ಧರ್ಮಕ್ಕೆ ಅಂದರೆ ಪಂಚಭೂತಗಳಿಗೆ ಎಂದೂ ವಂಚನೆಯೆಸಗದಂತೆ ರೂಪಗೊಂಡ ದೇಸಿಜ್ಞಾನ ಪದ್ಧತಿ ಅಳಿದುಹೋಗಬಾರದು" ಎನ್ನುವ ಎಸ್.ಜಿ.ಸಿದ್ದರಾಮಯ್ಯ ಕನ್ನಡ ಪುಸ್ತ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ"ದೇಸಿ ಕೃಷಿಜ್ಞಾನ" ಎನ್ನುವ ಸರಣಿಯಲ್ಲಿ ತಂದ ಮಣ್ಣು,ನೀರು,ಅರಣ್ಯ,ಬೀಜ,ತೋಟಗಾರಿಕೆಗೆ ಸಂಬಂಧಿಸಿದ ಹನ್ನೊಂದು ಸಂಪುಟಗಳನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದು.
ಹಸಿರು ಕ್ರಾಂತಿಯಿಂದ ಆದ ದುಷ್ಪರಿಣಾಮಗಳನ್ನು ವೈಜ್ಞಾನಿಕವಾಗಿ ಗುರುತಿಸಿರುವ ಲೇಖಕರು " 1920 ರಿಂದ 1940 ರ ನಡುವೆ ಹುಟ್ಟಿದ ರೈತರು ಹಸಿರು ಕ್ರಾಂತಿಯ ಕಾಲಕ್ಕೆ ಕ್ರಮವಾಗಿ 49 ರಿಂದ 29 ರ ವಯೋಮಾನದವರಾಗಿದ್ದರು.ಬಹುತೇಕ ಅವರೆಲ್ಲರೂ 1985 ನೇ ಇಸವಿಯ ಹೊತ್ತಿಗೆ "ಹಸಿರು ಕ್ರಾಂತಿ"ಯ ಆಮಿಷಗಳಿಗೆ ಬಲಿಯಾಗಿದ್ದರು. 1965 ರ ಆಸುಪಾಸಿನಲ್ಲಿ ಹುಟ್ಟಿ ಈಗ 50 ಆಸುಪಾಸಿನಲ್ಲಿರುವ ಭಾರತೀಯ ರೈತರಿಗೆ ತಮ್ಮ ಹಳೆಯ ಕಾಲದ ಜ್ಞಾನವೂ ಹೊಸತರ ಜ್ಞಾನವೂ ಇದ್ದು-ಹಾಲಿ ಸಂದರ್ಭದಲ್ಲಿ ಒಟ್ಟು ಕೃಷಿಯೇ ನಷ್ಟವಾಗಿ ಪರಿಣಮಿಸಿರುವುದರಿಂದ ವ್ಯವಸಾಯದ ಆಸಕ್ತಿಯೇ ಕರಗಿಹೋಗಿದೆ. ನಮ್ಮ ಈ 50ರ ಆಸುಪಾಸಿನ ಕೃಷಿ ಜ್ಞಾನಿಗಳು ನಶಿಸಿಹೋದರೆ ದೇಸಿ ಕೃಷಿ ಜ್ಞಾನವನ್ನು ಬಲ್ಲವರ ಸಂತತಿಯೇ ಇಲ್ಲವಾಗುತ್ತದೆ.ಆಗ ಅಂಥಹ ಕೃಷಿಯನ್ನು ಹೊಸದಾಗಿಯೇ ಕಲಿಯಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ದೇಸಿ ಕೃಷಿ ಜ್ಞಾನದ ಅಧ್ಯಯನ ಮತ್ತು ಅದರ ದಾಖಲಾತಿ ಅತ್ಯಂತ ಅನಿವಾರ್ಯ ಮತ್ತು ಸಮಯೋಚಿತ" ಎಂದು ಪ್ರಬಂಧದ ಆಶಯವನ್ನು ಸ್ಪಷ್ಟಪಡಿಸಿರುವುದು ಸಾರ್ವಕಾಲೀಕ ಸತ್ಯವಾಗಿದೆ.
ಬೆಳೆ ಬೆಳೆವ ಜ್ಞಾನ ಮತ್ತು ಕೃಷಿ ಪದ್ಧತಿಗಳು ಎಂಬ ನಾಲ್ಕನೇ ಭಾಗದಲ್ಲಿ ದೇಸಿ ಕೃಷಿಯ ಮಹತ್ವ ಮತ್ತು ಅನಿವಾರ್ಯದ ಬಗ್ಗೆ ವಿವರಿಸಿದ್ದಾರೆ."ಸುಭಾಷ್ ಪಾಳೇಕರ್ ಕೃಷಿಯ ಮಂಚೂಣಿಯಲ್ಲಿ ನಿಂತ ನನಗೆ ಈ ಎಲ್ಲವುಗಳ ತಿಳಿವಳಿಕೆ ಅಗತ್ಯವಾಗಿತ್ತು.ವೃಕ್ಷಾಯುವರ್ೇದ,ಆಧ್ಯಾತ್ಮಿಕ,ಬಯೋ ಡೈನಾಮಿಕ್ ಕೃಷಿಯ ಪ್ರಾತ್ಯಕ್ಷಿಕೆಗಳನ್ನು ನೋಡಿ ಅವುಗಳಿಗೆ ವೈಜ್ಞಾನಿಕ ಸಮರ್ಥನೆಗಳಿವೆಯೇ? ಇಲ್ಲವೇ?ಎಂದು ಪರಿಶೀಲಿಸಿ ಅಂಕಿ ಅಂಶಗಳನ್ನು ಹೆಚ್ಚಾಗಿ ಬಳಸದೆ ಉದ್ದೇಶದ ಮಹತ್ವವನ್ನು ಹೇಳಿದ್ದೇನೆ" ಎಂದು ಸ್ವಾಮಿ ಆನಂದ್ ಹೇಳಿಕೊಂಡಿದ್ದಾರೆ.
ಸಹಸ್ರ ಸಹಸ್ರ ವರ್ಷಗಳ "ಸರ್ವಸಾರ"ವೇ ನಮ್ಮ ದೇಸಿಕೃಷಿ ಜ್ಞಾನ ಪರಂಪರೆ!.ವಿಷ ಹಾಕದೆ ಬೆಳೆದು ಉಣ್ಣುವ ಅನ್ನ ಅಮೃತ.ವಿಷಹಾಕಿ ಬೆಳೆದ ಅನ್ನ ವಿಷಕನ್ಯೆ. ಈ ಎರಡನೇ ಅನ್ನವೇ ಹಸಿರು ಕ್ರಾಂತಿ. ಬೆಳೆಗಳ ಬಹು ಮುಖ್ಯ ಪೋಷಕಾಂಶಗಳು ಶೇಕಡ 98.5 ವಾತಾವರಣದ ಕೊಡುಗೆ.ಈ ವಿಷಯದಲ್ಲಿ ವಿಜ್ಞಾನಿಗಳು ಯಾವ ಆಟವನ್ನು ಆಡಲಿಲ್ಲ.ಆದರೆ ಶೇಕಡ 1.5 ಭೂಮಿಯ ಕೊಡುಗೆಯ ಮೇಲೆ ಆಟವಾಡಿದ್ದರ ಪರಿಣಾಮ ಏನಾಯ್ತು ನೋಡಿ ಎಂದು ಹೇಳುತ್ತಾ ಕೃಷಿ ತಲುಪಿರುವ ಅಪಾಯಕಾರಿ ಹಂತಗಳನ್ನೂ ವಿಶ್ಲೇಷಣೆ ಮಾಡಿದ್ದಾರೆ.
ನಮ್ಮ ಕೃಷಿ ಪ್ರಾಚೀನ ಕೃಷಿ ವಿಧಾನಗಳನು ದಾಟಿ ತನಗೆ ಬೇಡದ ಎಲ್ಲವನ್ನೂ ಆಯಾಯ ಕಾಲದಲ್ಲೆ ಬಿಟ್ಟು ಬೇಕಾದ್ದನ್ನ ಘನೀಕರಿಸಿಕೊಳ್ಳುತ್ತಾ ಸಾರರೂಪದಲ್ಲಿ ನಿಂತ ಕೃಷಿ ಸಂಸ್ಕೃತಿ ನಮ್ಮದು.
ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ಸಾವಯವ ಕೃಷಿಯ ಪಿತಾಮಹ ಸರ್ ಆಲ್ಬಟರ್್ ಹೋವಡರ್್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬರೆದ "ಆಗ್ಯರ್ಾನಿಕ್ ಫಾಮರ್ಿಂಗ್ ಮೆಥೆಡ್ ಇನ್ ಇಂಡಿಯಾ" ಅಮೇರಿಕಾ ಸೇರಿದಂತೆ ಬೇರೆ ದೇಶದವರಿಗೆ ಭಾರತದ ಕೃಷಿ ಜ್ಞಾನವನ್ನು ಪರಿಚಯಿಸಿತು. ಝರೋಮ್ ಐ ರೋಡಲ್ 1942 ರಲ್ಲಿ "ಆಗ್ಯರ್ಾನಿಕ್ ಫಾಮರ್ಿಂಗ್ ಅಂಡ್ ಗಾರ್ಡನಿಂಗ್" ಮ್ಯಾಗಜೈನ್ ಮೂಲಕ ತಮ್ಮ ಅನುಭವಗಳನ್ನು ಪ್ರಕಟಿಸುತ್ತಾ ಬಂದರು. ದತ್ತಿ ಸ್ಥಾಪಿಸಿ ಹೆಲ್ತಿ ಸಾಯಿಲ್,ಹೆಲ್ತಿ ಫುಡ್,ಹೆಲ್ತಿ ಫೀಪಲ್ ಎಂಬ ಧ್ಯೇಯವಾಕ್ಯವನ್ನು ಪ್ರಚುರಪಡಿಸಿದರು.1971 ರಲ್ಲಿ ಅವರ ನಿಧನದ ಬಳಿಕ ಅವರ ಮಗ ರೋಡೇಲ್ ಮತ್ತೆ 333 ಎಕರೆ ಜಾಗವನ್ನು ಇದಕ್ಕೆ ಸೇರಿಸಿದರು.
1990 ಹೊತ್ತಿಗೆ ಭಾರತದ ದೇಸಿ ಕೃಷಿ ಪ್ರಪಂಚವನ್ನೆಲ್ಲ ಸಂಚರಿಸಿ ನಮ್ಮ ದೇಶಕ್ಕೆ "ಸಾವಯವ ಕೃಷಿ" ಎಂಬ ಹೆಸರಿನಲ್ಲಿ ಪ್ರವೇಶ ಪಡೆಯಿತು. ಇಷ್ಟೊತ್ತಿಗೆ ಅದು ತನ್ನ ದೇಸಿತನವನ್ನೆಲ್ಲ ಕಳೆದುಕೊಂಡು ಸುಸ್ಥಿರ ಕೃಷಿ,ಸುಸ್ಥಿರ ಮಣ್ಣು,ಸುಸ್ಥಿರ ಆದಾಯ ಎಂಬ ಫಲಕಗಳನ್ನು ನೇತುಹಾಕಿಕೊಂಡಿತು.ಎರೆಹುಳು ಗೊಬ್ಬರ,ಪಂಚಗವ್ಯ,ಬಯೋಕೆಮಿಕಲ್ಸ್,ಬಯೋ ಪಟರ್ಿಲೈಸರ್ಸ್ನಂಥ ದೊಡ್ಡ ದೊಡ್ಡ ಜ್ಞಾನರಾಶಿಯನ್ನೆ ಹೊತ್ತು ತಂದಿತು ಎನ್ನುವುದನ್ನು ಆಧಾರ ಸಹಿತ ನಿರೂಪಿಸಿದ್ದಾರೆ.
ರಾಗಿ ಲಕ್ಷ್ಮಣ್ಣಯ್ಯನವರ ರಾಗಿತಳಿ ಸಂಶೋಧನೆಯ ಬಗ್ಗೆ ಹೇಳುತ್ತಾ ಸಾಮಾಜಿಕ ವ್ಯವಸ್ಥೆ ಹೇಗೆ ನೆಲಮೂಲದ ಜ್ಞಾನವನ್ನು ಮೂಲೆಗುಂಪು ಮಾಡಿತು ಮತ್ತು ಸಾವಯವ ಕೃಷಿ ಮಿಷನ್ ಎಂಬ ನಯವಂಚಕ ಅನಾರ್ಥಕಾರಿ ಯೋಜನೆಯ ಉದ್ದೇಶಗಳನ್ನು ಬಯಲು ಮಾಡಿದ್ದಾರೆ.ಬತ್ತ,ಬಾಳೆ,ಕಬ್ಬು ಬೆಳೆಯ ಬಗ್ಗೆ ವಿವರವಾಗಿ ಮಾಹಿತಿ ಸಮೇತ ವಿಶ್ಲೇಷಣೆ ಇದೆ.
ದೇಸಿ ಅಡುಗೆಗಳ ಬಗ್ಗೆ ವಿವರಣೆ ಇದೆ. ಸುಭಾಷ್ ಪಾಳೇಕರ್ ಕೃಷಿ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಮನ್ಸೂನ್,ಹಿಂಗಾರು,ಮುಂಗಾರು,ಹವಾಗುಣ ಆಧರಿತ ವ್ಯವಸಾಯ ಜ್ಞಾನ ಎಲ್ಲದರ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಲಾಗಿದೆ.
ದೊಡ್ಡಿಂದವಾಡಿಯ ಸಹಜ ಕೃಷಿಕ ಕೈಲಾಸ ಮೂತರ್ಿ,ಎಚ್.ಡಿ.ಕೋಟೆ ತಾಲೂಕಿನ ಸೋಗಳ್ಳಿಯ ನಿಂಗನಾಯಕ ಅವರ ಕೃಷಿ ಅನುಭವಗಳನ್ನು ದಾಖಲಿಸಿದ್ದಾರೆ. ಬಹುತೇಕ ಹಳ್ಳಿಗರು ಅನಕ್ಷರಸ್ಥರಾಗಿದ್ದರೆ ಹೊರತು ಅಜ್ಞಾನಿಗಳಾಗಿರಲಿಲ್ಲ.ಅರಿವುಗೇಡಿಗಳಾಗಿರಲಿಲ್ಲ. ಈ ದೇಶದ ಮುಖ್ಯವಾಹಿನಿ ಕೃಷಿ ದೇಸಿ ಕೃಷಿ ಮಾತ್ರ. ಈ ನಿಟ್ಟಿನಲ್ಲಿ ಭಾರತಕ್ಕೆ ಪ್ರವಾಸಕ್ಕೆ,ಅಧ್ಯಯನಕ್ಕೆ ಬಂದ ವಿದೇಶಿ ಪ್ರವಾಸಿಗರು,ಸಂಶೋಧಕರು ಬರೆದಿರುವ ಜ್ಞಾನವನ್ನೆಲ್ಲ ಪರಿಶೀಲಿಸುವ ಬೆಳಕಿಗೆ ತರುವ ಮಹತ್ವದ ಕೆಲಸಗಳು ಆಗಬೇಕಾಗಿದೆ ಎಂದು ಆನಂದ್ ಹೇಳುತ್ತಾರೆ.
ನಾವೀಗ ಮೊದಲು ರೋಗದ ಮೂಲ ಪತ್ತೆ ಹಚ್ಚಬೇಕು.ರೋಗದ ಮೂಲವಿರುವುದೇ ನಮ್ಮ ಬೇಸಾಯದ ಕ್ರಮದಲ್ಲಿ!.ಅದನ್ನು ಸರಿಪಡಿಸಿಕೊಂಡರೆ ಈ ಅಸ್ಪತ್ರೆಗಳು,ಔಷದಿಗಳು,ಡಾಕ್ಟರ್ಗಳು ಯಾರಿಗೂ ವಿಳಾಸವೇ ಇರುವುದಿಲ್ಲ ಎನ್ನುತ್ತಾರೆ. ಒಟ್ಟಾರೆ ಸಹಸ್ರಾರು ವರ್ಷಗಳ ಕಾಲದ ಪರೀಕ್ಷೆಯಲ್ಲಿ ಗೆದ್ದು "ಸ್ವಯಂ ಪರಿಪೂರ್ಣ" ಅನಿಸಿಕೊಂಡಿದ್ದ ದೇಸಿ ಕೃಷಿ ಪದ್ಧತಿಯನ್ನು ಮರು ಸ್ಥಾಪಿಸುವುದೆ ಅಧ್ಯಯನದ ಮುಖ್ಯ ಉದ್ದೇಶವಾಗಿದೆ 

ಭಾನುವಾರ, ಸೆಪ್ಟೆಂಬರ್ 17, 2017

ಸಕ್ಕರೆ ಸೀಮೆಯಲ್ಲಿ ಗೇರು ಕೃಷಿ, 
ಬೆಳೆ ಬದಲಾವಣೆಯತ್ತ ಬತ್ತದ ನಾಡು
# ನೀರಿನ ಕೊರತೆ ಸರಿದೂಗಿಸಲು ರೈತರ ಜಾಣ್ಮೆ 
ಸಕ್ಕರೆ ನಾಡು ಮಂಡ್ಯ ಜಿಲ್ಲೆ ಹಸಿ ಬತ್ತ,ಬಿಸಿ ಬೆಲ್ಲಕ್ಕೆ ಪ್ರಖ್ಯಾತಿ. ಕಾವೇರಿ ನದಿಗೆ ಕನ್ನಂಬಾಡಿ ಸಮೀಪ ಕೃಷ್ಣರಾಜಸಾಗರ (ಕೆಆರ್ಎಸ್) ಅಣೆಕಟ್ಟು ನಿಮರ್ಾಣ ಮಾಡುವ ಮುನ್ನಾ ಮಂಡ್ಯ ಜಿಲ್ಲೆಯ ರೈತರು ಮಳೆಯಾಶ್ರಯದಲ್ಲೆ ಬೆಳೆ ಬೆಳೆಯುತ್ತಿದ್ದರು. ಕೆಆರ್ಎಸ್ ನಿಮರ್ಾಣವಾದ ನಂತರ ಜಿಲ್ಲೆಯ ಸ್ಥಿತಿ ಸಂಪೂರ್ಣ ಬದಲಾಯಿತು. ಬತ್ತ ಮತ್ತು ಕಬ್ಬು ಪ್ರಮುಖ ಬೆಳೆಯಾದವು. ಅಣೆಕಟ್ಟು ನಿಮರ್ಾಣಕ್ಕೆ ಮೊದಲು ಜಿಲ್ಲೆಯ ರೈತರು ಬರಕ್ಕೆ ಎದುರಿರಲಿಲ್ಲ. ನೀರಾವರಿ ಆದ ನಂತರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡತೊಡಗಿವೆ.
ಅನಿವಾರ್ಯತೆ ಮತ್ತು ಅವಶ್ಯಕತೆಗಳು ಬದಲಾವಣೆಗೆ ನಾಂದಿಯಾಡುತ್ತವೆ.ಅಂತೆಯೇ ಈಗ ಜಿಲ್ಲೆಯ ರೈತರು ಬದಲಾದ ಹವಾಮಾನ ಪರಿಸ್ಥಿತಿಕ್ಕೆ ಹೊಂದಿಕೊಂಡು ತಮ್ಮ ಬೆಳೆ ಪದ್ಧತಿಯನ್ನು ಬದಲಿಸಿಕೊಳ್ಳುವತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಮಂಡ್ಯ ಸಮೀಪದ ಗೆಜ್ಜಲಗೆರೆಯ ಯುವ ಕೃಷಿಕ ಜಿ.ವಿ.ಚೇತನ್ ಜುಂಜೀರ್ ಕಬ್ಬು,ಬತ್ತ ಬೆಳೆಯುತ್ತಿದ್ದ ಭೂಮಿಯಲ್ಲಿ ಗೋಡಂಬಿ(ಗೇರು) ಬೆಳೆ ಬೆಳೆಯುವ ಮೂಲಕ ಬದಲಾವಣೆಯ ಹೊಸಪರ್ವಕ್ಕೆ ನಾಂದಿ ಆಡಿದ್ದಾರೆ.
ಮಂಡ್ಯ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೊಗ್ಗಲಲ್ಲೇ ಇರುವ ಗೆಜ್ಜಲಗೆರೆ ಬಳಿ ಇರುವ ಒಂದುವರೆ ಎಕರೆ ಪ್ರದೇಶದಲ್ಲಿ ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ ಹತ್ತು ಅಡಿಗೆ ಒಂದರಂತೆ 500 ಗೋಡಂಬಿ ಗಿಡಗಳನ್ನು ಬೆಳೆಸಿರುವ ಚೇತನ್ ಎರಡನೆ ವರ್ಷದಿಂದಲೇ ಆದಾಯಗಳಿಸುತ್ತಿದ್ದಾರೆ. ಅಷ್ಟೇ ಅಲ್ಲಾ ಮತ್ತೂ ಮೂರುವರೆ ಎಕರೆಯಲ್ಲಿರುವ ಕಬ್ಬು ಬೆಳೆಯನ್ನು ತೆಗೆದು ಗೋಡಂಬಿ ಸಸಿಗಳನ್ನು ನಾಟಿಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಗೋಡಂಬಿ ಬೆಳೆಯುತ್ತಿರುವುದರ ಬಗ್ಗೆ ಕೇಳಿದಾಗಲೇ ನಮಗೆ ಆಶ್ಚರ್ಯವಾಗಿತ್ತು.ಮಳೆಯಾಶ್ರಿತ.ಅರೆ ನೀರಾವರಿ, ಖುಷ್ಕಿ ಪ್ರದೇಶದಲ್ಲಿ ಗೋಡಂಬಿ ಬೆಳೆಯಲು ರೈತರು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಇದ್ದ ನಮಗೆ ಚಿನ್ನದಂತ ಭೂಮಿಯಲ್ಲಿ ಗೇರು ಬೆಳೆಯುತ್ತಿರುವುದನ್ನು ನೋಡಿದಾಗ ಹವಾಮಾನ,ಮಾರುಕಟ್ಟೆ,ಅತಿವೃಷ್ಠಿ,ಅನಾವೃಷ್ಠಿಗೆ ಹೊಂದಿಕೊಂಡು ಗೋಡಂಬಿ ಬೆಳೆಯಲು ಧೈರ್ಯಮಾಡಿದ ಚೇತನ್ ಅವರ ಜಾಣ್ಮೆ ಅರ್ಥವಾಯಿತು. ಗುಂಡ್ಲುಪೇಟೆ ತಾಲೂಕಿನಿಂದ ಚೇತನ್ ಅವರ ಗೇರು ತೋಟಕ್ಕೆ ಹೋಗಿದ್ದ ನಮ್ಮ ರೈತರ ತಂಡಕ್ಕೆ ತಾಲೂಕಿನಲ್ಲೂ ಗೇರು ಬೆಳೆಯುವ ಆತ್ಮವಿಶ್ವಾಸ ಹೆಚ್ಚಾಯಿತು.
ನೀರಿಗೆ ಕೊರತೆ ಇಲ್ಲ : ಮಂಡ್ಯ ಜಿಲ್ಲೆಯಲ್ಲಿ ನೀರಿಗೆ ಅಷ್ಟೇನೂ ಕೊರತೆ ಇಲ್ಲ.ಕಾವೇರಿ,ಹೇಮಾವತಿ,ಲೋಕಪವಾನಿ,ಶಿಂಷಾ,ವೀರವೈಷ್ಣವಿ ನದಿಗಳು ಇಲ್ಲಿನ ರೈತರ ಕೈಹಿಡಿದಿವೆ. ಕೆಆರ್ಎಸ್ ಜಲಾಶಯದ ವಿಶ್ವೇಶ್ವರನಾಲೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಎತ್ತ ನೋಡಿದರೂ ಬತ್ತ,ಕಬ್ಬಿನ ಗದ್ದೆಗಳು.ಅಕ್ಕಿ ಗಿರಣಿಗಳು,ಕಬ್ಬು ಅರೆಯುವ ಕಾಖರ್ಾನೆಗಳು. ದುರಂತವೆಂದರೆ ಅತಿಯಾದ ನೀರಿನ ಬಳಕೆಯೆ ರೈತರ ಪಾಲಿಗೆ ಶಾಪವಾಗಿದೆ. ಅತಿ ನೀರು ಬಳಕೆಯಿಂದ ಮಣ್ಣು ಜವಳು ಭೂಮಿಯಾಗುತ್ತಿದೆ.ಇಳುವರಿ ಕ್ರಮೇಣ ಕಡಿಮೆಯಾಗುತ್ತಿದೆ.ವೆಚ್ಚ ಮತ್ತು ಆದಾಯಕ್ಕೆ ಅಜಗಜಾಂತರವಾಗಿ ರೈತರು ಚಿಂತಿಗೀಡಾಗಿದ್ದಾರೆ.
ಈ ನಡುವೆ ಮುಂಚಿತವಾಗಿ ಬರುವ ಮುಂಗಾರು,ತಡವಾಗಿ ಬರುವ ನೈರುತ್ಯ ಮುಂಗಾರಿನಿಂದ ಭಿತ್ತನೆ ಸಮಯದ ಮೇಲೂ ದುಷ್ಪರಿಣಾಮವಾಗುತ್ತಿದೆ. ಕಳೆದ ಎರಡುಮೂರು ವರ್ಷಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ನಾಲೆಗಳಿಗೆ ನೀರು ಬಿಡುವುದನ್ನು ಬಂದ್ ಮಾಡಲಾಗಿದೆ.
ರೈತರು ಬತ್ತ,ಕಬ್ಬು ಬೆಳೆಯುವ ಬದಲು ರಾಗಿ,ಜೋಳ.ಸಿರಿಧಾನ್ಯಗಲನ್ನು ಬೆಳೆದುಕೊಳ್ಳುವಂತೆ ಸಕರ್ಾರವೇ ಹೇಳುತ್ತಿದೆ.ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ.ವರ್ಷದಿಂದ ವರ್ಷಕ್ಕೆ ಉಲ್ಬಣವಾಗುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ಜಾಣ ರೈತರು ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಕೃಷಿಕ ಪ್ರಯೋಗಶೀಲನಾಗಬೇಕು : ಈ ಮುಂಚೆ ಗೆಜ್ಜಲಗೆರೆಯ ಚೇತನ್ ಅವರು ಬತ್ತ,ಕಬ್ಬು ಬೆಳೆಗಾರರೆ.ಅವರೀಗಾ ಗೋಡಂಬಿ ಕೃಷಿಕರಾಗಿದ್ದಾರೆ.ಕೆ.ಎಂ.ದೊಡ್ಡಿ ಭಾರತಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಚೇತನ್ ತಮ್ಮ ಬಿಡುವಿನ ವೇಳೆಯನ್ನು ಕೃಷಿಗೆ ಕೊಡುವ ಮೂಲಕ ಪ್ರಯೋಗಶೀಲತೆಗೆ ಮುಂದಾಗಿದ್ದಾರೆ.ಅವರಿಂದ ಪ್ರಭಾವಿತರಾದ ನೂರಾರು ರೈತರು ಈಗ ಗೋಡಂಬಿ ಕೃಷಿಮಾಡಲು ಮುಂದಾಗಿದ್ದಾರೆ. ತಮ್ಮ ಸುತ್ತಮುತ್ತಲಿನ ರೈತರು ಬೆಳೆ ಪದ್ಧತಿ ಬದಲಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.
ಬತ್ತ,ಕಬ್ಬು ಬೆಳೆಯುವಂತಹ ಈ ಭೂಮಿಯಲ್ಲಿ ಯಾಕೆ ಗೇರು ಬೆಳೆಯಲು ನೀವು ಧೈರ್ಯಮಾಡಿದಿರಿ ಎಂದು ಚೇತನ್ ಅವರನ್ನು ಕೇಳಿದಾಗ, ಅದರ ಹಿಂದಿನ ಪ್ರೇರಣೆ ಮತ್ತು ಸ್ಫೂತರ್ಿಯನ್ನು ನಮ್ಮ ತಂಡದ ಎದುರು ತೆರೆದಿಟ್ಟರು.
ಕಳೆದ ಎರಡು ವರ್ಷಗಳಿಂದ ಚೇತನ್ ಗೋಡಂಬಿ ಕೃಷಿ ಮಾಡುತ್ತಿದ್ದಾರೆ.ಒಂದುವರೆ ಎಕರೆ ಪ್ರದೇಶದಲ್ಲಿ ವೆಂಗೂರ್ಲಾ 4 ತಳಿಯ ಗೇರು ಸಸಿಗಳನ್ನು ನಾಟಿ ಮಾಡಿರುವ ಅವರು ಎರಡನೆ ವರ್ಷದಲ್ಲೇ ಎರಡುಮಕ್ಕಾಲು ಕ್ವಿಂಟಾಲ್ ಗೋಡಂಬಿ ಕಚ್ಚಾಬೀಜ ಉತ್ಪಾದನೆ ಮಾಡಿದ್ದಾರೆ. ಕಬ್ಬಿಗಿಂತ ಗೋಡಂಬಿ ಲಾಭದಾಯಕ ಬೆಳೆ ಎನ್ನುವುದು ಅವರ ಅನುಭವ.
ಮೂಡಿಗೆರೆ ಕೃಷಿ ಕೇಂದ್ರದಲ್ಲಿ ಕೆಲಸಮಾಡಿ ನಿವೃತ್ತರಾಗಿರುವ ಹಿರಿಯ ಕೃಷಿ ವಿಜ್ಞಾನಿ ಕಿಲಾರದ ಕೆ.ಟಿ.ಶಿವಶಂಕರ್ ಅವರು ಚೇತನ್ ಅವರ ತಾತ.ಜಿ.ಟಿ.ವೀರಪ್ಪ ತಂದೆ. ಅಲ್ಲದೆ ಮಂಡ್ಯ ಜಿಲ್ಲೆಯ ಕೆಸ್ತೂರು ಭಾಗದ ನಾಗರಾಜು ಅವರು ದಕ್ಷಿಣ ಭಾರತ ಗೋಡಂಬಿ ಅಭಿವೃದ್ಧಿ ಮಂಡಳಿಯ ನಿದರ್ೇಶಕರಾಗಿದ್ದರು. ನಾಗರಾಜು ಅವರು ಮಂಡ್ಯ ಜಿಲ್ಲೆಯ ಮಳೆಯಾಶ್ರಿತ ಪ್ರದೇಶಗಳಲ್ಲೂ ಯಾಕೆ ಈ ಬೆಳೆಯನ್ನು ಬೆಳೆಯಬಾರದು ಅಂತ ತೀಮರ್ಾನಿಸಿ ಈ ಭಾಗದಲ್ಲಿ ಗೋಡಂಬಿ ಬೆಳೆಯಲು ಪ್ರೋತ್ಸಾಹ ನೀಡಿದರು. ಜೊತೆಗೆ ಭಾರತೀಯ ಗೋಡಂಬಿ ಸಂಶೋಧನಾ ಸಂಸ್ಥೆಯವರು ಗೇರು ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದ್ದರು.
ಇವರೆಲ್ಲರ ಪ್ರೇರಣೆಯಿಂದ ಗೋಡಂಬಿ ಬೆಳೆಯಲು ತೀಮರ್ಾನಿಸಿದೆ ಎನ್ನುವ ಚೇತನ್ ಜುಂಜೀರ್ ಗೋಡಂಬಿ ಬೆಳೆಯುತ್ತಿದ್ದ ಕರಾವಳಿ ಪ್ರದೇಶ ಪುತ್ತೂರು,ಮಂಗಳೂರು ಸೇರಿದಂತೆ ರಾಜ್ಯಸ ನಾನಾ ಕಡೆ ಸುತ್ತಾಡಿ ತೋಟಗಳನ್ನು ನೋಡಿ ರೈತರ ಅನುಭವಗಳನ್ನು ಕೇಳಿಸಿಕೊಂಡಿದ್ದಾರೆ.
ಬತ್ತ,ಕಬ್ಬು ಬೆಳೆಯುವ ಫಲವತ್ತಾದ ಭೂಮಿಯಲ್ಲಿ ಖುಷ್ಕಿಯಲ್ಲಿ ಬೆಳೆಯುವ ಗೋಡಂಬಿಯನ್ನು ಬೆಳೆಯಲು ಯಾಕೆ ತೀಮರ್ಾನಿಸಿದರೆ ಎಂದರೆ " ಕೆಆರ್ಎಸ್ ತುಂಬದಿದ್ದರೆ ನಮ್ಮದು ಮಳೆಯಾಶ್ರಿ ಪ್ರದೇಶ ತಾನೆ. ಕೆಆರ್ಎಸ್ ನಿಮರ್ಾಣಕ್ಕೂ ಮೊದಲು ಇದು ತಕ್ಕಲು, ಖುಷ್ಕಿ ಭೂಮಿಯೇ ಆಗಿತ್ತು. ಜೊತೆಗೆ ಈಗ ಮಳೆಯ ಕೊರತೆಯಿಂದ ಅಣೆಕಟ್ಟುಗಳು ತುಂಬುವುದೆ ಕಷ್ಟವಾಗಿದೆ.ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ. ಕಬ್ಬಿನ ನಿರ್ವಹಣಾ ವೆಚ್ಚವೂ ಹೆಚ್ಚಾಯಿತು.ಹಾಗಾಗಿ ಗೋಡಂಬಿ ನನ್ನ ಆಯ್ಕೆಯಾಯಿತು" ಎನ್ನುತ್ತಾರೆ.
"ಗೋಡಂಬಿ ಬೆಳೆಯುವ ತೋಟಗಳಿಗೆ ಹೋಗಿ ಬಂದ ನಂತರ ನಂತರ ಎರಡು ಎಕರೆಯಲ್ಲಿ ಗೋಡಂಬಿ ಸಸಿಗಳನ್ನು ನಾಟಿಮಾಡಿದೆ.ಲಾಭದಾಯಕ ಎನಿಸಿತು. ಈಗ ಮೂರು ಎಕರೆ ಕಬ್ಬು ಇದೆ.ನಂತರ ಅದನ್ನು ತೆಗೆದು ಗೋಡಂಬಿ ಹಾಕಲು ತೀಮರ್ಾನಿಸಿದ್ದೇನೆ. ಒಂದೂವರೆ ಎಕರೆಯಲ್ಲಿ ಅಲ್ಟ್ರಾ ಹೈಡೆನ್ಸಿಟಿ ಪದ್ಧತಿಯಲ್ಲಿ  10*10 ಅಡಿಗೆ 500 ಸಸಿ ಹಾಕಿದ್ದೇನೆ.ಕರಾವಳಿ ಭಾಗದಲ್ಲಿ ಗಿಡಗಳು ನಮ್ಮಲ್ಲಿ ಬೆಳವಣಿಗೆಯಾದಂತೆ ಬೇಗ ಆಗುವುದಿಲ್ಲ. ಗಿಡಗಳು ಚೆನ್ನಾಗಿ ಬೆಳೆಯಲು ಕನಿಷ್ಠ ನಾಲ್ಕರಿಂದ ಐದು ವರ್ಷಬೇಕು. ನಮ್ಮಲ್ಲಿ ಎರಡು ವರ್ಷಕ್ಕೆ ಗಿಡಗಳು ಚೆನ್ನಾಗಿ ಬೆಳೆದು ಹಣ್ಣು ಬಿಡಲು ಶುರುವಾಗಿಬಿಡುತ್ತದೆ. ಸಧ್ಯ ತಮ್ಮ ತೋಟದಲ್ಲಿರುವ ಗಿಡಗಳನ್ನು ಫ್ರೂನಿಂಗ್ ಮಾಡಿದ್ದೇನೆ. ಈಗ ನೀವು ನೋಡುತ್ತಿರುವ ಗಿಡಗಳು ಇದರ ಮೂರು ಪಟ್ಟು ಬೆಳೆದು ದೊಡ್ಡದಾಗಿದ್ದವು.ಕಳೆದ ಅಗಸ್ಟ್ನಲ್ಲಿ ಫ್ರೂನಿಂಗ್ ಮಾಡಿ ಗಿಡಗಳ ಗಾತ್ರವನ್ನು ಕಡಿಮೆ ಮಾಡಿದ್ದೇನೆ. ಜನವರಿ ತಿಂಗಳವರೆಗೆ ಗಿಡಗಳು ಬೆಳವಣಿಗೆ ಹೊಂದುತ್ತವೆ. ಜನವರಿಗೆ ಹೂ ಬಿಟ್ಟು ಒಂದೆರಡು ತಿಂಗಳಲ್ಲಿ ಗೋಡಂಬಿ ಬೀಜ ಸಿಗುತ್ತದೆ" ಎನ್ನುತ್ತಾರೆ.
ಫ್ರೂನಿಂಗ್ ಮಾಡುವುದರ ಮತ್ತೊಂದು ಅನುಕೂಲವೆಂದರೆ ಗಿಡದಲ್ಲಿ ಕವಾಟುಗಳು ಹೆಚ್ಚು ಬರುತ್ತವೆ. ಹೆಚ್ಚು ಇಳುವರಿಯೂ ದೊರೆಯುತ್ತದೆ. ಪ್ರತಿ ವರ್ಷವೂ ಫ್ರೂನಿಂಗ್ ಮಾಡಿಕೊಳ್ಳುವುದು ಒಳ್ಳೆಯದು ಎಂದೂ ಸಲಹೆ ನೀಡುತ್ತಾರೆ
ಮಹಾರಾಷ್ಟ್ರದಿಂದ ಮಂಡ್ಯಕ್ಕೆ : ಎರಡು ವರ್ಷದ ಹಿಂದೆ ಕೇಂದ್ರ ಸಕರ್ಾರ ಯೋಜನೆಯೊಂದರಲ್ಲಿ ರಾಜ್ಯದಲ್ಲಿ ಗೋಡಂಬಿ ಬೆಳೆಸಲು ದಕ್ಷಿಣ ಭಾರತ ಗೋಡಂಬಿ ಅಭಿವೃದ್ಧಿ ಮಂಡಳಿಯ ನಿದರ್ೇಶಕರಾಗಿದ್ದ ನಾಗರಾಜು ಅವರು ಮಹಾರಾಷ್ಟ್ರದ ವೆಂಗೂರ್ಲಾದಿಂದ ಒಂದು ಟ್ಯಾಂಕರ್ನಲ್ಲಿ ಮೂರು ಲಕ್ಷ ಗಿಡಗಳನ್ನು ತರಿಸಿದ್ದರು. ಆಗ ಈ ಬೆಳೆಯ ಮಹತ್ವ ಅರ್ಥವಾಗದೆ ಸಸಿಗಳನ್ನು ತೆಗೆದುಕೊಂಡು ಹೋದ ರೈತರು ಸರಿಯಾಗಿ ನಿರ್ವಹಣೆ ಮಾಡದೆ ಎಲ್ಲಾ ಹಾಳುಮಾಡಿದರು. ಈಗ ಗೋಡಂಬಿ ಕೃಷಿಯ ಮಹತ್ವ ಗೊತ್ತಾಗಿದೆ.ಗಿಡಗಳು ಸಿಗುದೆ ಪರಿತಪಿಸುತ್ತಿದ್ದಾರೆ ಎನ್ನುತ್ತಾರೆ ಚೇತನ್.
ಮಂಡ್ಯ,ಮೈಸೂರು,ಚಾಮರಾಜನಗರ,ಹಾಸನ ವಿಭಾಗದ ರೈತರು ಒಟ್ಟಾಗಿ ಗೋಡಂಬಿ ಬೆಳೆಗಾರರ ಸಂಘ ಕಟ್ಟಿಕೊಂಡು ಸಂಘಟಿತರಾದರೆ ಗೋಡಂಬಿ ಸಂಸ್ಕರಣೆ ಮತ್ತು ಗೇರು ಹಣ್ಣಿನಿಂದ ಪಾನೀಯ ತಯಾರುಮಾಡುವ ಕಾಖರ್ಾನೆಯನ್ನು ನಮ್ಮದೆ ಭಾಗದಲ್ಲಿ ತರಬಹುದು, ಆ ಮೂಲಕ ರೈತರು ಆಥರ್ಿಕವಾಗಿ ಸಬಲರಾಗಬಹುದು ಎನ್ನುತ್ತಾರೆ.
ತಮ್ಮ ಮೂರು ಎಕರೆಯಲ್ಲಿ 22*22 ಅಡಿಗೆ ಒಂದರಂತೆ ಗೋಡಂಬಿ ಗಿಡಗಳನ್ನು ಹಾಕಿ ನಡುವೆ ಅಂತರ ಬೇಸಾಯ ಮಾಡಲು ತೀಮರ್ಾನಿಸಿರುವ ಚೇತನ್ ಗೋಡಂಬಿ ಬೆಳೆಯಲು ಆಸಕ್ತಿವಹಿಸಿ ನೋಡಲು ಬಂದವರಿಗೆ ಕೆಲವೊಂದು ಸಲಹೆ,ಸೂಚನೆಯನ್ನು ಕೊಡುತ್ತಾರೆ.
ಕಳೆದ ವರ್ಷ ಚೇತನ್ ಅವರ ಗೇರು ತೋಟ ನೋಡಿಕೊಂಡು ಹೋದ ರೈತರು ಸುತ್ತಮುತ್ತ  30 ಎಕರೆಯಲ್ಲಿ ಗೇರು ಸಸಿ ನಾಟಿಮಾಡಿದ್ದಾರೆ. ಮಳವಳ್ಳಿಯಲ್ಲೂ ರೈತರೊಬ್ಬರು ಮೂರು ಎಕರೆಗೆ ನಾಟಿ ಮಾಡಿದ್ದಾರೆ.
ಕಹಿಯಾದ ಕಬ್ಬು : "ಕಬ್ಬಿನ ಬೇಸಾಯದಲ್ಲಿ ಲಾಭಕ್ಕಿಂತ ನಷ್ಟವೆ ಹೆಚ್ಚು. ರೈತರು ಮಾಡುವ ತಪ್ಪೆಂದರೆ ಯಾರು ಬೆಳೆಯ ಲೆಕ್ಕ ಬರೆದಿಡುವುದಿಲ್ಲ. ಕಬ್ಬು ನಾಟಿಯಿಂದ ಹಿಡಿದು ಕಟಾವಾಗಿ ಕಾಖರ್ಾನೆಗೆ ಹೋಗುವವರೆಗೂ ಪ್ರತಿಯೊಂದಕ್ಕೂ ಲೆಕ್ಕ ಬರೆದು ಇಡುತ್ತಿದ್ದೆ. ಕೊನೆಗೆ ಕಾಖರ್ಾನೆಯಿಂದ ಅಕೌಂಟ್ಗೆ ಹಣ ಬಂದನಂತರ ನೋಡಿದರೆ ಖಚರ್ೆಲ್ಲಾ ಕಳೆದು ಹತ್ತು ಸಾವಿರ ರೂಪಾಯಿಯಷ್ಟೇ ಉಳಿಯುತ್ತಿತ್ತು. ಓಡಾಡುವ ಪೆಟ್ರೋಲ್ ಖಚರ್ು ಬರೆದುಬಿಟ್ಟಿದ್ದರೆ ಕೈಯಿಂದ ನಾವೇ ಹಣ ಹಾಕಿದ್ದಂತೆ ಆಗೋದು. ಆಗಾಗಿ ಅದು ಕಣ್ಣಿಗೆ ಕಾಣುವುದಿಲ್ಲ. ಲೆಕ್ಕ ಬರೆದಿಟ್ಟರೆ ಎಲ್ಲವೂ ಗೊತ್ತಾಗುತ್ತದೆ.
ಆದರೆ ಗೋಡಂಬಿ ಕೃಷಿಯಲ್ಲಿ ಇಂತಹ ಕಷ್ಟಗಳು ಇಲ್ಲ. ಈ ಬೆಳೆಗೆ ಅಷ್ಟಾಗಿ ಕಾಮರ್ಿಕರು ಬೇಕಾಗಿಲ್ಲ.ಒಂದು ಸಾರಿ ಗಿಡ ಹಾಕಿದ ನಂತರ ಮೂರ್ನಾಲ್ಕು ವರ್ಷ ಪೋಷಣೆ ಮಾಡಬೇಕು. ಆ ನಂತರ  ಇದು ಮಳೆಯಾಶ್ರಯದಲ್ಲಿ ತನಗೆ ತಾನೇ ಬೆಳೆದುಕೊಳ್ಳುತ್ತದೆ. ವರ್ಷದಲ್ಲಿ ಎರಡು ಬಾರಿ ಮುಂಜಾಗ್ರತವಾಗಿ ನೋಡಿಕೊಳ್ಳಬೇಕು. ಅಗಸ್ಟ್,ಸೆಪ್ಟಬಂರ್ ತಿಂಗಳಲ್ಲಿ ಗೊಬ್ಬರ ಕೊಡಬೇಕು. ಚಳಿಗಾಲದಲ್ಲಿ  (ನವೆಂಬರ್ ಅಂತ್ಯ ಡಿಸೆಂಬರ್) ಟಿ ಮಸ್ಕಿಟೋ ಎಂಬ ಸೊಳ್ಳೆ ಬರುತ್ತದೆ. ಅದಕ್ಕೆಲ್ಲ ಜೈವಿಕ,ರಾಸಾಯನಿಕ ಔಷಧಿಗಳಿವೆ ಒಂದೆರಡು ಬಾರಿ ಸಿಂಪರಣೆ ಮಾಡಿದರೆ ಬೇರೆ ರೀತಿಯ ರಿಸ್ಕ್ ಇಲ್ಲ.
ಹೂ ಬಿಡುವ ಸಮಯದಲ್ಲಿ ಹೆಚ್ಚು ನೀರು ಕೊಡಬಾರದು.ಬಿಸಿಲು ಬಂದಷ್ಟು ಹೂ ಹೆಚ್ಚು ಬರುತ್ತದೆ.ನಂತರ ಕಚ್ಚಾ ಗೋಡಂಬಿ ಬೀಜಗಳು ಸಿಗುತ್ತವೆ" ಅದರಿಂದ ಇದು ಲಾಭದಾಯಕ ಕೃಷಿ ಎನ್ನುವುದು ಅನುಭವಕ್ಕೆ ಬಂದಿದೆ ಎನ್ನುತ್ತಾರೆ.
"ಈಗ ರೈತರು ಬದಲಾಗುತ್ತಿದ್ದಾರೆ.ನಮ್ಮೂರು ಗೆಜ್ಜಲಗೆರೆಯಲ್ಲೆ ನೋಡುವುದಾದರೆ ರೈತರು ಈಗ ತೋಟಗಾರಿಕಾ ಬೆಳೆಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.ಮೊದಲು ಬರಿ ಬತ್ತ,ಕಬ್ಬು ಅಬ್ಬಾಬ್ಬ ಅಂದ್ರೆ ರಾಗಿ ಬೆಳೆಯುತ್ತಿದ್ದರು. ಈಗ ಬಾಳೆ,ಹೂ,ತರಕಾರಿ,ರೇಷ್ಮೆ,ಗೋಡಂಬಿಯಂತಹ ತೋಟಗಾರಿಕೆ ಬೆಳೆಗಳನ್ನು ಹಾಕುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ತಾನೇ ಮೊದಲು ಗೋಡಂಬಿ ನಾಟಿ ಮಾಡಿದ್ದು. ಮೊದಲ ವರ್ಷವೇ ಹೂ ಬಿಟ್ಟಿತ್ತು. ಆದರೆ ಹೂ ಕಿತ್ತು ಹಾಕಿದೆ. ಗಿಡಗಳು ಚೆನ್ನಾಗಿ ಬೆಳೆದವು.ಎರಡನೇ ವರ್ಷ ಹೂ ಬಿಟ್ಟೆ ಎರಡುಮುಕ್ಕಾಲು ಕ್ವಿಂಟಾಲ್ ಗೋಡಂಬಿ ಕಚ್ಚಾಬೀಜ ಸಿಕ್ಕಿತು ಪುತ್ತೂರು, ಮಂಗಳೂರು,ಚಿಂತಾಮಣಿಯಲ್ಲಿ ಗೋಡಂಬಿ ಮಾರುಕಟ್ಟೆ ಇದೆ. ಪ್ರತಿ ಕ್ವಿಂಟಾಲ್ ಬೀಜವನ್ನು 17 ಸಾವಿರ ರೂಪಾಯಿಗೆ ಮಾರಾಟಮಾಡಿದೆ. ಒಂದೆರಡು ದಿನ ತಡೆದಿದ್ದರೆ 20 ಸಾವಿರ ರೂಪಾಯಿಗೆ ಹೋಗುತ್ತಿತ್ತು.ಈ ಬೆಳೆಯ ಮತ್ತೊಂದು ವೈಶಿಷ್ಠ್ಯವೆಂದರೆ ಬೀಜವನ್ನು ಒಂದು ವರ್ಷದವರೆಗೂ ದಾಸ್ತಾನು ಮಾಡಿ ದರ ಬಂದಾಗ ಮಾರಾಟಮಾಡಬಹುದು ಎನ್ನುತ್ತಾರೆ.ಗೇರು ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಜಿ.ವಿ.ಚೇತನ್ ಜುಂಜೀರ್ 9916017097 ಅವರನ್ನು ಸಂಪಕರ್ಿಸಬಹುದು. 





ಭಾನುವಾರ, ಸೆಪ್ಟೆಂಬರ್ 10, 2017

ಕರಾವಳಿಯಿಂದ ಬಯಲು ಸೀಮೆಗೆ ಗೋಡಂಬಿ
ಗೇರು ಬೆಳೆಯತ್ತ ರೈತರ ಚಿತ್ತ ,       ಖುಷ್ಕಿಯಲ್ಲೂ ಖುಷಿತರಬಲ್ಲ  ಬೆಳೆ
ಅಕಾಲಿಕ ಮಳೆ,ಪುನಾರವರ್ತನೆಯಾಗುತ್ತಿರುವ ಬರ,ಆಗಾಗ ಕುಸಿಯುವ ದರ ಇವೆಲ್ಲಾ ಸಮಸ್ಯೆಗಳ ನಡುವೆ ಸೂಕ್ತ ಹಾಗೂ ಪಯರ್ಾಯ ಬೆಳೆಗಾಗಿ ಹುಡುಕಾಟ ನಡೆಸುತ್ತಿದ್ದಾಗ ನಮಗೆ ಕಂಡದ್ದು ಗೋಡಂಬಿ(ಗೇರು) ಬೆಳೆ. ಕಡಿಮೆ ನೀರು,ಸುಲಭ ನಿರ್ವಹಣೆ,ಅಧಿಕ ಆದಾಯ,ಕಡಿಮೆ ಮಾನವ ಹಸ್ತಕ್ಷೇಪ ಇರುವ ಸುಲಭವಾಗಿ ದೀರ್ಘಕಾಲ ಸಂಗ್ರಹಿಸಿಡಬಲ್ಲ,ಅಧಿಕ ವಿದೇಶಿ ವಿನಿಮಯ ಗಳಿಸುತ್ತಿರುವ `ಗೋಡಂಬಿ' ಹತಾಶ ರೈತರನ್ನು ಕೈ ಹಿಡಿಯಬಲ್ಲ ಬೆಳೆಯಾಗಿ ಕಾಣಿಸಿತು.
ಕಳೆದ ನಾಲ್ಕೈದು ವರ್ಷಗಳ ಸತತ ಬರಗಾಲದಿಂದ  ರೈತರು ತತ್ತರಿಸಿ ಹೋಗಿದ್ದಾರೆ.ತೆಂಗಿನ ತೋಟಗಳೆಲ್ಲ ಗೂಟಗಳಾಗಿವೆ.ಅಡಿಕೆ ಸಂಪೂರ್ಣ ಒಣಗಿನಿಂತಿದೆ.ಅಂತರ್ಜಲ ಕುಸಿದಿದೆ.ವಾರ್ಷಿಕ ಸರಾಸರಿ ಮಳೆಯ ಪ್ರಮಾಣದಲ್ಲಿ ( ನಮ್ಮಲ್ಲಿ ಈಗಲೂ 600 ರಿಂದ 850 ಮಿ.ಮೀ.ಮಳೆ ಇದೆ) ಅಂತಹ ವ್ಯತ್ಯಾಸವಾಗಿಲ್ಲದಿದ್ದರೂ `ನೀರು ನಿರ್ವಹಣೆ'ಯ ತಪ್ಪಿನಿಂದಾಗಿ ಬೆಳೆ ಪದ್ಧತಿ ಬದಲಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.ಒಣ ಭೂಮಿ ತೋಟಗಾರಿಯತ್ತ ರೈತರು ಮನಸ್ಸು ಮಾಡುತ್ತಿದ್ದಾರೆ.
ಕರಾವಳಿ,ಒಳನಾಡು ಮತ್ತು ಗುಡ್ಡಗಾಡಿನಲ್ಲಿ ಬೆಳೆಯಲಾಗುತ್ತಿದ್ದ ಗೋಡಂಬಿಯನ್ನು ಈಗ ನಮ್ಮ ನೆಲದಲ್ಲೂ ಬೆಳೆಯಬಹುದು ಎನ್ನುವುದು ಸಾಬೀತಾಗಿದೆ. ಅಷ್ಟೇ ಅಲ್ಲ ಒಣ ಭೂಮಿ ಬೇಸಾಯಕ್ಕೆ ಅತ್ಯಂತ ಸೂಕ್ತವಾದ ತೋಟಗಾರಿಕೆ ಬೆಳೆಯಾಗಿದೆ. ನಮ್ಮ ಹವಾಮಾನಕ್ಕೆ ಹೊಂದಿಕೊಂಡು,ಹೆಚ್ಚು ರೋಗ ಬಾಧೆ ಇಲ್ಲದೆ ಆದಾಯ ತರಬಲ್ಲ ಬೆಳೆಯಾಗಿದೆ.25 ರಿಂದ 40 ಡಿಗ್ರಿ ಉಷ್ಣಾಂಶವನ್ನು ತಡೆದುಕೊಳ್ಳಬಲ್ಲ ಶಕ್ತಿ ಗೋಡಂಬಿ ಗಿಡಗಳಿಗಿದೆ. ಮಣ್ಣಿನ ತೇವಾಂಶ ಕಡಿಮೆಯಾದರೂ ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯಬಲ್ಲ ಗುಣ ಗೋಡಂಬಿಯದು.
ಗೋಡಂಬಿ ಬಹುಉಪಯೋಗಿ ಬೆಳೆಯಾಗಿದೆ. ಗೋಡಂಬಿಯ ತಿರುಳನ್ನು ತಿಂಡಿತಿನಿಸುಗಳಲ್ಲಿ ಹೆಚ್ಚಾಗಿ ಬಳಸಿದರೆ ಅದರ ಹಣ್ಣನ್ನು ಸಂಸ್ಕರಿಸಿ ವಿವಿಧ ಪಾನಿಯಗಳಾದ ಮದ್ಯ (ಫೆನ್ನಿ) ತಯಾರಿಕೆಯಲ್ಲಿ ಬಳಸುತ್ತಾರೆ. ಗೋಡಂಬಿ ಸಿಪ್ಪೆಕೂಡ ವಿವಿಧ ಕಾಖರ್ಾನೆಗಳಿಗೆ ಎಣ್ಣೆತಯಾರುಮಾಡಲು ಕಚ್ಛಾವಸ್ತುವಾಗಿ ಬಳಕೆಯಾಗುತ್ತಿದೆ.
ತೆಂಗು,ಬಾಳೆ,ಅರಿಶಿನ,ತರಕಾರಿಯಂತಹ ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ನಂಬಿಕೊಳ್ಳದೆ ರೈತರು ಪರಿಸ್ಥಿತಿಯ ಬದಲಾವಣೆಗೆ ಹೊಂದಿಕೊಳ್ಳುವುದನ್ನು ಕಲಿಯದಿದ್ದರೆ ಕೃಷಿ ಸುಖಸಂತೋಷ ನೀಡುವ, ಆದಾಯ ತರಬಲ್ಲ ಕಸುಬಾಗಿ ಉಳಿಯಲಾರದು.ಅದಕ್ಕಾಗಿ ಹೊಸ ಪ್ರಯೋಗಗಳಿಗೆ ರೈತರು ತೆರೆದುಕೊಳ್ಳಬೇಕಾಗಿದೆ.ಬೇಸಾಯದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿಯಾಡಬೇಕಿದೆ. ಈಗಾಗಲೇ ಮಂಡ್ಯ,ಮೈಸೂರು,ತುಮಕೂರು,ಹಾಸನ,ಬೆಂಗಳೂರು ಗ್ರಾಮಾಂತರ,ರಾಮನಗರ ಮುಂತಾದ ಜಿಲ್ಲೆಗಳಲ್ಲಿ ರೈತರು ಗೋಡಂಬಿ ಕೃಷಿಮಾಡಿ ಯಶಸ್ವಿಯಾಗಿದ್ದಾರೆ.
ಪೋರ್ಚಗೀಸರು ಗೋವಾದ ಮೂಲಕ ಭಾರತಕ್ಕೆ ಗೋಡಂಬಿ ಬೇಸಾಯವನ್ನು ಪರಿಚಯಿಸಿದರು. 1960 ರ ನಂತರ ಗೋಡಂಬಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಸ್ಥಾನಪಡೆಯಿತು. ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಆರಂಭದಲ್ಲಿ ಗೇರು ಬೆಳೆಯಲಾಗುತ್ತಿತ್ತು.
ಮಣ್ಣು ಸಮದ್ರ ಸೇರುವುದನ್ನು ತಡೆಯಲು ಕರಾವಳಿ ಪ್ರದೇಶಕ್ಕೆ ಬಂದ ಗೋಡಂಬಿ ಬೆಳೆ ಈಗ ಬಹುವಾಷರ್ಿಕ ವಾಣಿಜ್ಯ ಬೆಳೆಯಾಗಿ ಬಯಲು ಪ್ರದೇಶಕ್ಕೂ ಬಂದಿದೆ. ಮಹಾರಾಷ್ಟ್ರ, ಗೋವಾ, ಒರಿಸ್ಸಾ, ಕೇರಳ,ಆಂಧ್ರ,ಕನರ್ಾಕಟಕದ ರೈತರು ಈಗ ಗೋಡಂಬಿ ಬೆಳೆದು ಆದಾಯ ಗಳಿಸುತ್ತಿದ್ದಾರೆ. ಕಳೆದ ಶತಮಾನದವರೆಗೂ ರೈತರಿಗೆ ಗೋಡಂಬಿ ಬೆಳೆಯ ಮಹತ್ವ ಗೊತ್ತಿರಲಿಲ್ಲ. ಪ್ರತಿ ಕೆಜಿ ಕಚ್ಚಾ ಗೋಡಂಬಿಗೆ 250 ರೂಪಾಯಿ ದಾಟಿದ ಮೇಲೆ ರೈತರು ಗೋಡಂಬಿಯತ್ತ ನೋಡತೊಡಗಿದ್ದಾರೆ.
2014-15 ರಲ್ಲಿ  ನಮ್ಮ ದೇಶಕ್ಕೆ 6000 ಕೋಟಿ ರೂಪಾಯಿ ಹೆಚ್ಚಿನ ವಿದೇಶಿ ವಿನಿಮಯ ಗೋಡಂಬಿಯಿಂದ ಬಂದಿದೆ. ಈಗ ನಮ್ಮಲ್ಲಿ ಇದರ ಉತ್ಪಾದನೆ ಪ್ರಮಾಣ 7 ಲಕ್ಷ ಟನ್ ಇದ್ದು,ಬೇಕಾಗಿರುವ ಕಚ್ಚಾ ಗೇರು ಬೀಜದ ಪ್ರಮಾಣ 17 ಲಕ್ಷ ಟನ್ಗಳಷ್ಟಿದೆ. ಆಗಾಗಿ ಈ ಬೆಳೆಯ ಪ್ರದೇಶ ವಿಸ್ತರಣೆ,ಉತ್ಪಾದನೆ ಹೆಚ್ಚಿಸಲು ಸಕರ್ಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಮುಂದಾಗಿದೆ. ಮೈಸೂರು,ಚಾಮರಾಜನಗರ ತೋಟಗಾರಿಕೆ ಇಲಾಖೆಗೆ ಎರಡು ಜಿಲ್ಲೆಗಳಲ್ಲಿ ಗೋಡಂಬಿ ಕೃಷಿ ವಿಸ್ತರಣೆಗೆ ಈ ಸಾಲಿಗೆ ಗುರಿ ನಿಗಧಿಮಾಡಲಾಗಿದೆ. ಸಹಾಯಧನವನ್ನು ನೀಡಲಾಗುತ್ತಿದೆ.
ಒಣ ಬೇಸಾಯಕ್ಕೆ ಸೂಕ್ತ : ಇದೊಂದು ಅಸಾಂಪ್ರದಾಯಿಕ ಬೆಳೆ. ಒಣ ಬೇಸಾಯದ ರೈತರ ಆದಾಯದಲ್ಲಿ ಸ್ಥಿರತೆ ಇಲ್ಲ. ಅಕಾಲಿಕ ಮಳೆಯಿಂದಾಗಿ ರೈತರು ಮಾರುಕಟ್ಟೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಬೇಸಾಯ ಮಾಡಬೇಕಾಗುತ್ತದೆ.ದೀರ್ಘಕಾಲದ ಆಪತ್ತು ನಿರ್ವಹಣೆಗೆ ಗೇರು ಜಾಣತನದ ಆಯ್ಕೆ ಎನ್ನುವುದನ್ನು ಈಗಾಗಲೇ ಕೋಲಾರ,ಮಂಡ್ಯ ಜಿಲ್ಲೆಯಲ್ಲಿ ರೈತರು ಕಂಡುಕೊಂಡಿದ್ದಾರೆ.
ಗೋಡಂಬಿ ಬೆಳೆಯುವುದರಿಂದ ಆಗುವ ಪ್ರಯೋಜನವೆಂದರೆ ಇದರ ಸಂಗ್ರಹಣ ಸಾಮಥ್ರ್ಯ ಹೆಚ್ಚು.ರೋಗಬಾಧೆ ಕಡಿಮೆ.ಬೇಸಾಯ ಸುಲಭ. ಗಿಡ ನಾಟಿ ಮಾಡಿದ ಮೂರನೇ ವರ್ಷದಿಂದ ಗೋಡಂಬಿ ಕೊಯ್ಲಿಗೆ ಬರುತ್ತದೆ.ಮೊದಲ ಎರಡು ವರ್ಷ ಪ್ರತಿ ಗಿಡದಿಂದ 1 ರಿಂದ 2 ಕೆಜಿ ಕಚ್ಚಾ ಗೋಡಂಬಿ ಸಿಕ್ಕರೆ 8 ವರ್ಷದ ಗಿಡಗಳಿಂದ ವಾರ್ಷಿಕ 17 ಕೆಜಿ ವರೆಗೂ ಇಳುವರಿ ತೆಗೆದವರು ಇದ್ದಾರೆ.
ಮೊದಲ ಎರಡು ವರ್ಷ ಗಿಡಗಳನ್ನು ನೀರುಕೊಟ್ಟು ಬೆಳೆಸಿದರೆ ನಂತರ ಸರಿಯಾದ ನಿರ್ವಹಣೆ ಮಾಡಿಕೊಂಡರೆ ಮಳೆಯಾಶ್ರಯದಲ್ಲೆ ಗೋಡಂಬಿಯನ್ನು ಬೆಳೆಯಬಹುದು ಎನ್ನುವುದು ರೈತರ ಅನುಭವ.
ಪ್ರಯೋಗಶೀಲ ರೈತರ ಕೊರತೆ : ಮೈಸೂರು ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಇತ್ತೀಚಿಗೆ ಗೋಡಂಬಿ ಬೆಳೆ ಕುರಿತು ನಡೆದ ಕಾಯರ್ಾಗಾರಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಎಚ್.ಕ್ರಾಸ್ ಬಳಿಯ ಕಾಳಿನಾಯಕನಹಳ್ಳಿಯ ರೈತ ನಾಗರಾಜು ಅವರನ್ನು ಮಾತನಾಡಿಸಿದಾಗ, ಈ ಭಾಗದಲ್ಲೂ ಗೋಡಂಬಿಯನ್ನು ಬೆಳೆಯಬಹುದು.ಆದರೆ ಇಲ್ಲಿನ ರೈತರು ಇನ್ನೂ ಹದಿನೈದು ಇಪ್ಪತ್ತು ವರ್ಷ ಹಿಂದೆಯೇ ಇದ್ದಾರೆ ಎನ್ನುತ್ತಾರೆ.
ಕಳೆದ 8 ವರ್ಷಗಳಿಂದ ಗೋಡಂಬಿ ಕೃಷಿಕರಾಗಿರುವ ನಾಗರಾಜು ನಾಲ್ಕು ಎಕರೆ ಪ್ರದೇಶದಲ್ಲಿ 180 ಗಿಡಗಳನ್ನು ಹಾಕಿದ್ದು,ಈಗ ಅವರು ಅದರಿಂದ ವಾಷರ್ಿಕ ಐದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದಕ್ಕೂ ಮುಂಚೆ ಅಪ್ಪ ಹಾಕಿಸಿದ್ದ ಮಾವಿನ ಮರಗಳು ವಾಷರ್ಿಕ 20 ಸಾವಿರ ರೂಪಾಯಿ ಆದಾಯವನ್ನು ತರುತ್ತಿದ್ದವು. ಆಗ ನಾಗರಾಜು ಆಲೋಚನೆಮಾಡಿ ಅವರದೇ ತಾಲೂಕಿನ ಕೆಲ ಗೋಡಂಬಿ ತೋಟಗಳಿಗೆ ಭೇಟಿ ನೀಡಿ ಬೇಸಾಯದ ಬಗ್ಗೆ ತಿಳಿದುಕೊಂಡು ಒಂದು ತೀಮರ್ಾನಕ್ಕೆ ಬಂದರು.
ಮಾವಿನ ಮರಗಳನ್ನೆಲ್ಲ ಬುಡಸಮೇತ ತೆಗೆಸಿ 4 ಎಕರೆ ಜಮೀನಿನಲ್ಲಿ ಉಲ್ಲಾಳ 1 ತಳಿಯ 180 ಗೇರು ಗಿಡಗಳನ್ನು ನೆಟ್ಟರು. ನೀರಿನ ಸಮಸ್ಯೆ ಇರುವವರು ಎಕರೆಗೆ 40 ಗಿಡಗಳ ಮೇಲೆ ಹಾಕಬಾರದು ಎನ್ನುವ ನಾಗರಾಜು. ನಮ್ಮಂತಹ ಬಯಲು ಸೀಮೆಯ ರೈತರು ಹೈಡೆನ್ಸಿಟಿ ಮಾದರಿಯಲ್ಲಿ ಗಿಡಗಳನ್ನು ಹಾಕಬಾರದು ಎನ್ನುತ್ತಾರೆ.
ನಾಗರಾಜು ಅವರ ಜಮೀನಿನ ಸುತ್ತ ಸಾವಿರ ಅಡಿ ಬೋರಿಕೊರೆಸಿದರು ನೀರಿಲ್ಲ.ಅದಕ್ಕೆ ಅವರು ಕಂಡುಕೊಂಡ ಉಪಾಯ ನೀರಿಗಾಗಿ ಬೋರು ಕೊರೆಸಲೇ ಬಾರದು. ನಾಲ್ಕು ಕಿ.ಮೀ.ದೂರದ ತಮ್ಮದೇ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ಟ್ಯಾಂಕರ್ನಲ್ಲಿ ಗಿಡಗಳಿಗೆ ನೀರು ತಂದು ಹಾಕಿದರು.
"ಮಳೆ ಸರಿಯಾಗಿ ಆದ್ರೆ ಗೋಡಂಬಿಗೆ ನೀರೆ ಬೇಡ.ಎಂಟು ವರ್ಷದಲ್ಲಿ ನಮಗೆ ಆರು ವರ್ಷ ಬರ ಇತ್ತು.ಉಳಿದೆರಡು ವರ್ಷ ಮಾತ್ರ ಮಳೆ ಆಯಿತು.ಆಗ ನೀರು ಕೊಡಲೇ ಇಲ್ಲ". ವಾರ್ಷಿಕ 400 ರಿಂದ 600 ಮಿ.ಮೀ.ಮಳೆಯಾಗುವ ಕಡೆ ಮಳೆಯಾಶ್ರಯದಲ್ಲೇ ಗೋಡಂಬಿ ಬೆಳೆಬಹುದು ಎನ್ನುವುದು ನಾಗರಾಜು ಅವರ ಅನುಭವದ ಮಾತು.
ಗೋಡಂಬಿ ಗಿಡ ಹೂ ಬಿಟ್ಟ ಮೇಲೆ ಹದಿನೈದು ದಿನಕ್ಕೊಮ್ಮೆ ನೀರು ಕೊಡಬೇಕು.ಮಾಚರ್್ ನಿಂದ ಮೇ ವರೆಗೆ ಕಟಾವು ಮುಗಿಯುತ್ತದೆ. ಕೃಷಿಹೊಂಡ ಇದ್ದರಂತೂ ಇದರ ಬೇಸಾಯ ಮತ್ತು ನಿರ್ವಹಣೆ ಸುಲಭ ಎನ್ನುತ್ತಾರೆ.
ಮೈದಾನ ಪ್ರದೇಶದಲ್ಲಿ ಗೋಡಂಬಿ ಬೆಳೆದರೆ ಕೀಟಬಾಧೆ ಕಡಿಮೆ. ನಾಟಿ ಮಾಡಿದ ಮೂರನೇ ವರ್ಷದಿಂದ ಪ್ರತಿಗಿಡದಿಂದ ಒಂದು ಕಿಜಿ ಬಂದರೆ ನಂತರ ಪ್ರತಿವರ್ಷ ಇಳುವರಿ ಹೆಚ್ಚಳವಾಗುತ್ತಾ ಹೋಗುತ್ತದೆ. ಈ ಬಾರಿ ತಮಗೆ 180 ಗಿಡಗಳಿಂದ ಸಿಕ್ಕ ಉತ್ಪನ್ನ 38 ಕ್ವಿಂಟಾಲ್. ಬಂದ ಆದಾಯ ಐದು ಲಕ್ಷದ ಎಪ್ಪತ್ತು ಸಾವಿರ. ಖಚರ್ು ಕಳೆದು ಉಳಿದ ನಿವ್ವಳ ಆದಾಯ ಐದು ಲಕ್ಷ ರೂಪಾಯಿ. ಅದೇ ಪಕ್ಕದಲ್ಲೇ ಇರುವ ತಮ್ಮ ಅಣ್ಣ ನಾಲ್ಕು ಎಕರೆ ಪ್ರದೇಶದಲ್ಲಿರುವ ಮಾವಿನಿಂದ 60 ಸಾವಿರ ಆದಾಯಗಳಿಸಿದ ಎಂದು ಲೆಕ್ಕ ನೀಡುತ್ತಾರೆ ನಾಗರಾಜು.
ಗೇರು ಬೆಳೆಯಲ್ಲಿ ಅಪಾರ ಸಂಶೋಧನೆ ಮಾಡಿರುವ ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ನಿವೃತ್ತ ಕೃಷಿ ವಿಜ್ಞಾನಿ ಡಾ.ಗುರು ಪ್ರಸಾದ್ ಅವರು ನೀಡಿದ ಸಲಹೆ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುವ ನಾಗರಾಜು, ವಿವಿಯ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ ಗೋಡಂಬಿ ಕುರಿತು ನಡೆಯುವ ಎಲ್ಲಾ ಕಾರ್ಯಗಾರಗಳಲ್ಲೂ ತಪ್ಪದೇ ಭಾಗವಹಿಸುತ್ತಾರೆ.
ತಮ್ಮ ಸುತ್ತಮತ್ತಲಿನ ರೈತರಿಗೆ ಗೋಡಂಬಿ ಬೆಳೆಯಲು ಪ್ರೋತ್ಸಾಹನೀಡುವುದಲ್ಲದೆ ಅವರಿಗೆ ಬೇಕಾದ ಉತ್ತಮ ತಳಿಯ ಗೋಡಂಬಿ ಗಿಡಗಳನ್ನು ನಾಗರಾಜು ತರಿಸಿಕೊಡುವ ಮೂಲಕ ರೈತರಿಗೂ ನೆರವಾಗುತ್ತಿದ್ದಾರೆ.
ಮುಂದಿನ ಹದಿನೈದು ವರ್ಷಕ್ಕೆ ಏನಾಗುತ್ತದೆ ಎಂಬ ಯೋಚನೆ ಬಿಟ್ಟು ರೈತರು ಗೋಡಂಬಿ ಬೆಳೆಯಲು ಮುಂದಾಗಬೇಕು.ಈ ಭೂಮಿ ನಮ್ಮದಲ್ಲ.ನಾವ್ಯಾರು ಇಲ್ಲಿ ಶಾಶ್ವತವಾಗಿ ಇಲ್ಲೇ ಇರಲು ಬಂದವರಲ್ಲ.ಇರುವವರೆಗೆ ನೆಮ್ಮದಿಯಾಗಿ ಇದ್ದು ಹೊರಟುಬಿಡಬೇಕು. ಇಲ್ಲಸಲ್ಲದ್ದನ್ನು ಯೋಚನೆ ಮಾಡುವುದನ್ನು ಬಿಟ್ಟು ಗೋಡಂಬಿ ಬೇಸಾಯಕ್ಕೆ ರೈತರು ಮುಂದಾಗಬೇಕು. ಇನ್ನೂ ಇಪ್ಪತ್ತು ಮೂವತ್ತು ವರ್ಷ ಗೋಡಂಬಿ ಬೆಳೆಗೆ ಉತ್ತಮ ದರ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಮಾತು ಸೇರಿಸುತ್ತಾರೆ.
ಮಂಡ್ಯ ಜಿಲ್ಲೆಯಲ್ಲೂ ಈಗಾಗಲೇ ನಿವೃತ್ತ ಅರಣ್ಯಧಿಕಾರಿ ಅಣ್ಣಯ್ಯ ಅವರು ಕೃಷಿ ವಿಜ್ಞಾನ ಪದವಿಧರ ಸಂಘದ ಮೂಲಕ ಗೋಡಂಬಿ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಂಡ್ಯಜಿಲ್ಲೆಯ ಗೆಜ್ಜಲಗೆರೆ ಸೇರಿದಂತೆ ಐನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈಗಾಗಲೇ ಗೋಡಂಬಿ ಗಿಡಗಳನ್ನು ಮಹಾರಾಷ್ಟ್ರದ ವೆಂಗೂರ್ಲಾದಿಂದಲೇ ತರಿಸಿ ನಾಟಿಮಾಡಿಸಲಾಗಿದೆ. ಮೈಸೂರು-ಚಾಮರಾಜನಗರ ಜಿಲ್ಲೆಯ ರೈತರು ಗೋಡಂಬಿ ಬೆಳೆಯಲು ಮುಂದಾಗಿದ್ದಾರೆ. ಗುಂಡ್ಲುಪೇಟೆಯ ಸಮನಾಸಕ್ತ ಕೃಷಿಕರ ಬಳಗದ ಸದಸ್ಯರು ಗೋಡಂಬಿ ಬೇಸಾಯದತ್ತ ಮುಖಮಾಡಿದ್ದಾರೆ.ಕಡಿಮೆ ನೀರು,ರೋಗಬಾಧೆ ಹೆಚ್ಚಿಲ್ಲದ, ಕಡಿಮೆ ನಿರ್ವಹಣೆಬೇಡುವ,ಕೌಶಲ್ಯಭರಿತ ಕಾಮರ್ಿಕರನ್ನು ಕೇಳದ ಗೋಡಂಬಿ ಬೆಳೆಯುವ ರೈತರು ತಮ್ಮ ಸಮೀಪದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪಕರ್ಿಸಬಹುದು. ಹೆಬ್ಬಾಳದಲ್ಲಿರುವ ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲಾ ಮಾದರಿಯ ಗೋಡಂಬಿ ಬೇಸಾಯದ ತೋಟಗಳನ್ನು ನೋಡಬಹುದು. ಖುಷ್ಕಿ ಬೇಸಾಯದಲ್ಲೂ ಖುಷಿ ತರುವ ಗೋಡಂಬಿ ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು  ಪ್ರಯೋಗಶೀಲ ರೈತ ನಾಗರಾಜು ಅವರನ್ನು ರಾತ್ರಿ 7 ರಿಂದ 9 ಗಂಟೆಯವರೆಗೆ 7026531847 ಸಂಪರ್ಕಿಸಿ. 



ಸೋಮವಾರ, ಸೆಪ್ಟೆಂಬರ್ 4, 2017

ಅರಿಶಿಣ ಬೇಸಾಯದಲ್ಲಿ ವರದಾನವಾದ ಪ್ರೋಟ್ರೇ ಪದ್ಧತಿ
 ರೈತರ ಮನೆ ಬಾಗಿಲಿಗೆ ತೋಟಗಾರಿಕಾ ಮಹಾವಿದ್ಯಾಲಯ
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರಿಶಿಣ ಒಂದು ಪ್ರಮುಖ ವಾಣಿಜ್ಯ ಬೆಳೆ.ಇದು ಕನರ್ಾಟಕದ ಪ್ರಮುಖ ಸಾಂಬಾರ ಬೆಳೆಯಾಗಿದ್ದು 16 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದೆ.ಇತ್ತೀಚೆಗೆ ಅರಿಶಿಣ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು,ಅದನ್ನು ಕೊಯ್ಲುಮಾಡಿ,ಬೇಯಿಸಿ,ಒಣಗಿಸಿ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವವರೆಗೆ ರೈತ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗಿದೆ.
ಸುಧಾರಿತ ಉತ್ಪಾದನಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ಕಾರಣ ಹೆಕ್ಟರ್ವಾರು ಉತ್ಪಾದಕತೆ ಕಡಿಮೆಯಾಗಿದೆ.ಇದರಿಂದಾಗಿ ಉತ್ಪಾದನಾ ವೆಚ್ಚ ಶೇಕಡ 50 ರಷ್ಟಾಗುತ್ತಿದೆ. ಸಂಪ್ರಾದಾಯಿಕ ವಿಧಾನದಲ್ಲಿ ಅರಿಶಿನ ಬೆಳೆಯುವುದನ್ನು ಬಿಟ್ಟು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಾಗ ಮಾತ್ರ ಅರಿಶಿನ ಕೃಷಿ ಲಾಭದಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಘಟಕವು ರೈತರಿಗೆ ಸುಧಾರಿತ ತಂತ್ರಜ್ಞಾನ ಬಳಸಿ ಅರಿಶಿನ ಬೆಳೆಯುವುದನ್ನು ಕಲಿಸಿಕೊಡುತ್ತಿದೆ. ಅದೇ `ಪ್ರೋಟ್ರೇ' ಎಂಬ ಹೊಸ ವಿಧಾನ.
`ಪ್ರೋಟ್ರೇ ವಿಧಾನದಲ್ಲಿ ಗುಣಮಟ್ಟದ ಸಸಿ ಉತ್ಪಾದನೆ' ಮೂಲತಃ ತಮಿಳುನಾಡಿನ ಕೃಷಿಕರೊಬ್ಬರು ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದೆ.ಈ ವಿಧಾನವನ್ನು ಈಗ ಕ್ಯಾಲಿಕಟ್ನ ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ಮೈಸೂರಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ವಿಸ್ತರಣಾ ಘಟಕದ ವಿದ್ಯಾಥರ್ಿಗಳು ಸುಧಾರಿಸಿ ಕೃಷಿಕರ ಅಳವಡಿಕೆಗೆ ದಾರಿಮಾಡಿಕೊಟ್ಟಿದ್ದಾರೆ. ಈಗಾಗಲೇ ಈ ವಿಧಾನದಲ್ಲಿ ನೂರಾರು ರೈತರು ಅರಿಶಿಣ ಬೆಳೆಯುತ್ತಿದ್ದಾರೆ.
ಭಾರತ ವಿಶ್ವದಲ್ಲೇ ಅತಿಹೆಚ್ಚು ಅರಿಶಿಣ ಉತ್ಪಾದಿಸುತ್ತಿರುವ ದೇಶ. 2014-15 ರ ಅಂಕಿಸಂಖ್ಯೆಗಳ ಪ್ರಕಾರ ನಮ್ಮ ದೇಶದಲ್ಲಿ 1,89,140 ಹೆಕ್ಟರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದೆ.ಹೆಕ್ಟರ್ವಾರು ಉತ್ಪಾದನೆ 4.5 ಟನ್ ಇದೆ. ಸುಧಾರಿತ ತಂತ್ರಜ್ಞಾನ ಬಳಸುವುದರಿಂದ ಇದನ್ನು ಹೆಚ್ಚಿಸಬಹುದು.
ಸಾಂಪ್ರದಾಯಿಕ ಪದ್ಧತಿಯಲ್ಲಿ ಅರಿಶಿಣ ನಾಟಿಮಾಡಿದರೆ ಎಕರೆಗೆ ಸಾಮಾಣ್ಯವಾಗಿ 8 ರಿಂದ 10 ಕ್ವಿಂಟಾಲ್ ಬೇಕಾಗುತ್ತದೆ. ಆದರೆ ಪ್ರೋಟ್ರೇ ವಿಧಾನದಲ್ಲಿ ಸಸಿ ಮಾಡಿಕೊಂಡರೆ ಬರಿ 150 ಕೆಜಿ ಮಾತ್ರ ಸಾಕು ಎನ್ನುತ್ತಾರೆ ತೋಟಗಾರಿಕಾ ಮಹಾವಿದ್ಯಾನಿಲಯದ ವಿಸ್ತರಣಾ ಘಟಕದ ಮುಂದಾಳು ಬಿ.ಎಸ್.ಹರೀಶ್.
ನಮ್ಮಲ್ಲಿ ಈಗ ಹಲವಾರು ತಳಿಗಳನ್ನು ಬಿಡುಗಡೆಮಾಡಲಾಗಿದೆ.ಅದರಲ್ಲಿ ಪ್ರಮುಖವಾಗಿ `ಪ್ರತಿಭ,ಐಐಎಸ್ಆರ್ ಅಲ್ಲೆಪಿ ಸುಪ್ರೀಂ ಮತ್ತು ಪ್ರಗತಿ'  ಎಂಬ ಹೆಸರಿನ ಈ ಮೂರು ತಳಿಗಳಿಗೆ ಹೆಚ್ಚು ಬೇಡಿಕೆ ಇದೆ.ಅರಿಶಿಣ ನಿಲರ್ಿಂಗ ಸಸ್ಯಾಭಿವೃದ್ಧಿ ಅಂದರೆ ಗಡ್ಡೆಗಳನ್ನು ಬಳಸಿ ಬೆಳೆಯುವುದರಿಂದ ತಳಿಯ ಜೈವಿಕ ಶುದ್ಧತೆಯನ್ನು ಕಾಪಾಡುವುದು ಸುಲಭ.ಗುಣ ಮಟ್ಟದ ಬಿತ್ತನೆ ಗಡ್ಡೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಪ್ರೋಟ್ರೇ ಪದ್ಧತಿಯಲ್ಲಿ ಸಸಿಗಳನ್ನು ಮಾಡಿ ಮಾರಾಟ ಮಾಡುವುದರಿಂದಲ್ಲೂ ರೈತರು ಆದಾಯಗಳಿಸಬಹುದು.
ನೂತನ ನಾಟಿ ವಿಧಾನದ ಅನುಕೂಲಗಳು : ಈ ವಿಧಾನದಲ್ಲಿ ಅರಿಶಿಣ ನಾಟಿ ಮಾಡುವುದರಿಂದ ಬಿತ್ತನೆಯಲ್ಲಿ ಶೇಕಡ 60 ರಿಂದ 70 ರಷ್ಟು ಉಳಿತಾಯವಾಗುತ್ತದೆ. ಬಿತ್ತನೆಗೆ ಬೇಕಾದ ಅರಿಶಿಣದ ಬೆರಳುಗಳ ಸಂಖ್ಯೆಯೂ ಕಡಿಮೆಯಾಗುವುದರಿಂದ ಉತ್ಪಾದನಾ ವೆಚ್ಚ ತಗ್ಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭೂಮಿ ಸಿದ್ಧತೆಗೆ ಸಾಕಷ್ಟು ಸಮಯ ಸಿಗುತ್ತದೆ. ಪ್ರೋಟ್ರೇಗಳಲ್ಲಿ ಸಸಿ ಬೆಳೆಯಲು ಎರಡು ತಿಂಗಳು ತೆಗೆದುಕೊಳ್ಳುವುದರಿಂದ ಭೂಮಿಯಲ್ಲಿ ಹಸಿರೆಲೆ ಗೊಬ್ಬರಬೆಳೆದು ಮಣ್ಣಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.
ಎರಡು ತಿಂಗಳು ಬೆಳೆಗೆ ಬೇಕಾದ ನೀರು,ಮಾನವ ಶ್ರಮ,ಗೊಬ್ಬರ ಎಲ್ಲವೂ ಉಳಿದಂತಾಗುತ್ತದೆ. ಮಳೆ ತಡವಾದರೂ ನಾಟಿ ಸಾಧ್ಯ. ಸಸಿಗಳೆಲ್ಲವೂ ಒಂದೆ ಸಮನಾಗಿ ಬರುವುದರಿಂದ ನಿರೀಕ್ಷಿತ ಇಳುವರಿ ತೆಗೆಯಬಹುದು. ಸಸಿಗಳು ಬೇಗನೆ ಬೆಳೆಯುವುದರಿಂದ ಕಳೆ ಕಡಿಮೆ. ಇದರಿಂದ ಕಳೆ ನಿರ್ವಹಣೆ ವೆಚ್ಚವೂ ತಗ್ಗುತ್ತದೆ.
ಸಾಂಪ್ರದಾಯಿಕ ಬೆಳೆಯಲ್ಲಿ ಗಡ್ಡೆಯ ಬೆಳವಣಿಗೆ ಬಿತ್ತನೆಯಾದ 5 ತಿಂಗಳಿಗೆ ಪ್ರಾರಂಭವಾದರೆ ಸಸಿ ನಾಟಿಮಾಡಿದಾಗ ಮೂರು ತಿಂಗಳಿನಿಂದಲೇ ಆರಂಭವಾಗುತ್ತದೆ ಎನ್ನುತ್ತಾರೆ ಹರೀಶ್.
ಅನುಭವಧಾರಿತ ಕಲಿಕೆ : ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದರೆ ನಾವು ಓದುವುದಕ್ಕೂ ಜೀವನ ನಡೆಸುತ್ತಿರುವುದಕ್ಕೂ ಸಂಬಂಧವೇ ಇರುವುದಿಲ್ಲ ಅನ್ನುವ ಹಾಗೆ ಶಿಕ್ಷಣ ಪದ್ಧತಿ ಇರುತ್ತದೆ.ಸಾಹಿತ್ಯ ಓದಿದವನು ಆಡಳಿತ ನಡೆಸುವ ಜಾಗದಲ್ಲಿ ಕುಳಿತರೆ,ವೈದ್ಯಕೀಯ ವಿಜ್ಞಾನ ಕಲಿತವರು ಪೊಲೀಸ್ ಇಲಾಖೆಯಲ್ಲಿ ಲಾಠಿ ಹಿಡಿದು ನಿಂತಿರುತ್ತಾರೆ. ಆದರೆ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತದ್ದು ಬದುಕಿಗೆ ಅನ್ವಯವಾಗುವಂತಹ ವಿಧಾನವೊಂದನ್ನು ಜಾರಿಗೆ ತರಲಾಗಿದೆ.ಅದೇ `ಅನುಭವಧಾರಿತ ಕಲಿಕಾ' ಯೋಜನೆ. 
ರಾಜ್ಯದಲ್ಲಿ ಈಗ ಆರು ಕೃಷಿ ಸಂಬಂಧಿ ವಿಶ್ವವಿದ್ಯಾನಿಲಯಗಳಿಗೆ.ಕಳೆದ ನಾಲ್ಕು ವರ್ಷಗಳಿಂದ ಎಲ್ಲಾ ಕೃಷಿ ವಿವಿಗಳಲ್ಲೂ ಅನುಭವಧಾರಿತ ಕಲಿಕಾ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ವಾಣಿಜ್ಯ ತೋಟಗಾರಿಕೆ,ಜೈವಿಕ ಪೀಡೆನಾಶಕ ಉತ್ಪಾದನೆ.ಸಂರಕ್ಷತ ಕೃಷಿ,ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಎಂಬ ಐದು ವಿಭಾಗಗಳಲ್ಲಿ ವಿದ್ಯಾಥರ್ಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಕೆಲಸಮಾಡಬಹುದು.
ಸಧ್ಯ ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದಲ್ಲಿ 53 ವಿದ್ಯಾಥರ್ಿಗಳು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ . ಈ ವಿದ್ಯಾಥರ್ಿಗಳು ಸೇರಿ ಈ ಬಾರಿ ಪ್ರೋಟ್ರೇ ಪದ್ಧತಿಯಲ್ಲಿ ಅರಿಶಿಣ ಸಸಿಗಳನ್ನು ಬೆಳೆಸಿದ್ದರು.ಇದನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರು ಖರೀದಿಸಿ ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಆ ಮೂಲಕ ಗುಣಮಟ್ಟದ ಸಸಿಗಳ ಜೊತೆಗೆ ಸಮಯ,ನೀರು,ಗೊಬ್ಬರ ಎಲ್ಲವನ್ನೂ ಉಳಿದಂತಾಗಿದೆ ಎನ್ನುತ್ತಾರೆ ಪ್ರೋಟ್ರೇ ಪದ್ಧತಿಯಲ್ಲಿ ಬೆಳೆದ ಅರಿಶಿಣ ಸಸಿಗಳನ್ನು ಖರೀದಿಸಿ ತಮ್ಮ ಜಮೀನಿನಲ್ಲಿ ನಾಟಿ ಮಾಡಿರುವ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ಗ್ರಾಮದ ರೈತರಾದ ಸದಾಶಿವಮೂತರ್ಿ ಮತ್ತು ರಾಜೇಂದ್ರ.
ವಿಜ್ಞಾನಿಗಳು ಮತ್ತು ರೈತರ ಸಹಭಾಗಿತ್ವದಲ್ಲಿ ಅರಿಶಿಣ ಬಿತ್ತನೆ ಗಡ್ಡೆ ಉತ್ಪಾದನೆ ಯೋಜನೆಯನ್ನು ಕೃಷಿ ಮಹಾವಿದ್ಯಾಲಯ ಜಾರಿಗೆ ತಂದಿದೆ. ಆಸಕ್ತ ರೈತರು ಈರುಳ್ಳಿ,ಅರಿಶಿಣ ಬೀಜೋತ್ಪಾದನೆಯನ್ನು ಒಪ್ಪಂದದಲ್ಲಿ ಬೆಳೆದುಕೊಡಬಹುದು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಬಿ.ಎಸ್.ಹರೀಶ್ 8310070998 ಸಂಪಕರ್ಿಸಿ.
============================================================
ಪ್ರೋಟ್ರೇಯಲ್ಲಿ ಅರಿಶಿಣ ಬೆಳೆದ ಪ್ರಸಾದ್...
ಪ್ರೋಟ್ರೇ ವಿಧಾನದಲ್ಲಿ ಅರಿಶಿಣ ಬೆಳೆದು ಯಶಸ್ಸು ಕಂಡ ಪ್ರಯೋಗಶೀಲ ರೈತ ನಂಜನಗೂಡು ತಾಲೂಕಿನ ಹಂಚೀಪುರದ ಪ್ರಸಾದ್ ಹೇಳುವಂತೆ ಈ ಪದ್ಧತಿಯಲ್ಲಿ ಅರಿಶಿಣ ಬೆಳೆದರೆ ಹಣ,ನೀರು,ಸಮಯ,ಗೊಬ್ಬರ ಎಲ್ಲವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಸಸಿಗಳು ಒಂದೇ ಸಮನಾಗಿ ಬರುವುದರಿಂದ ಹೆಚ್ಚಿನ ಇಳುವರಿಯೂ ಬರುತ್ತದೆ.
ಚಾಮರಾಜನಗರ ಸಮೀಪ ಇರುವ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ಕಳೆದ ಸಾಲಿನಲ್ಲಿ 150 ಕೆಜಿ `ಪ್ರತಿಭಾ' ತಳಿಯ ಅರಿಶಿಣ ಭಿತ್ತನೆ ಕೊಂಬುಗಳನ್ನು ಕೊಟ್ಟಿದ್ದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ನಾಟಿ ಮಾಡಿದರೆ ಒಂದು ಎಕರೆಗೆ ಸಾಮಾನ್ಯವಾಗಿ 8 ರಿಂದ 10 ಕ್ವಿಂಟಾಲ್ ಅರಿಶಿನ ಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ `ಪ್ರತಿಭಾ'ತಳಿಯ ಭಿತ್ತನೆ ಅರಿಶಿನ ಸಿಗದ ಕಾರಣ 150 ಕೆಜಿಯನ್ನೇ ಪ್ರೋಟ್ರೇ ವಿಧಾನದಲ್ಲಿ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿಕೊಂಡೆ.
50 ಗುಣಿಗಳಿರುವ ಪ್ರೋಟ್ರೇ ಒಂದಕ್ಕೆ ಹದಿಮೂರು ರೂಪಾಯಿಯಂತೆ ಒಟ್ಟು 600 ಟ್ರೇಗಳನ್ನು ಖರೀದಿಸಿದೆ. 600 ಕೆಜಿ ಎರೆಗೊಬ್ಬರ,600 ಕೆಜಿ ಕೋಕೋಪೀಟ್ ಜೊತೆಗೆ ತಲಾ ಎರಡು ಕೆಜಿ ಟ್ರೈಕೋಡಮರ್ಾ,ಸುಡೋಮನಸ್ ಮಿಶ್ರಣಮಾಡಿ ಅದರಲ್ಲಿ ತುಂಬಿದೆ. ಒಟ್ಟು 30 ಸಾವಿರ ಗುಣಿಗಳಲ್ಲಿ ಗಡ್ಡೆಗಳನ್ನು ಬಿತ್ತನೆಮಾಡಿಕೊಂಡೆ.ಅದರಲ್ಲಿ ಶೇಕಡ 70 ರಷ್ಟು ಸಸಿಗಳು ಚೆನ್ನಾಗಿ ಮೊಳಕೆ ಬಂದು ನಾಟಿಗೆ ದೊರೆತವು.ಒಂದು ಎಕರೆಯಲ್ಲಿ ಒಟ್ಟು 18 ಸಾವಿರ ಸಸಿಗಳನ್ನು ನಾಟಿಮಾಡಿದೆ.ಇದರಿಂದ ಪೈರುಗಳೆಲ್ಲ ಒಂದೆ ಸಮನಾಗಿ ಬಂದವು.112 ಕ್ವಿಂಟಾಲ್ ಅರಿಶಿನ ಇಳುವರಿ ಬಂತು. ಅದನ್ನು ಪ್ರತಿ ಕ್ವಿಂಟಾಲ್ಗೆ ಮೂರು ಸಾವಿರ ರೂಪಾಯಿಯಂತೆ ಬಿತ್ತನೆಗೆ ಮಾರಾಟ ಮಾಡಿದೆ.ಇದರಿಂದ 3,33,000 ರೂಪಾಯಿ ಬಂತು ಎನ್ನುತ್ತಾರೆ ಪ್ರಸಾದ್.
ಅಂತರ್ಜಲ ಕುಸಿತ. ಕೃಷಿ ಕಾಮರ್ಿಕರ ತೊಂದರೆ,ಅಕಾಲಿಕ ಮಳೆಯಿಂದ ಬೇಸತ್ತು ಈಗ ತಮ್ಮ ಕೃಷಿ ಪದ್ಧತಿಯನ್ನೇ ಬದಲಿಸಿಕೊಳ್ಳಲು ಮುಂದಾಗಿರುವ ಪ್ರಸಾದ್ ವಾಣಿಜ್ಯ ಬೆಳೆಗಳನ್ನು ಕಡಿಮೆ ಮಾಡಿ ಸಾವಯವ ವಿಧಾನದಲ್ಲಿ ಅರಣ್ಯಧಾರಿತ ತೋಟಗಾರಿಕೆ ಮಾಡಲು ಮುಂದಾಗಿದ್ದಾರೆ. ಹೆಚ್ಚು ಬೋರ್ವೆಲ್ ನೀರನ್ನು ಅವಲಂಭಿಸದೆ,ಮಳೆಯಾಶ್ರಯದಲ್ಲೆ ಬೇಸಾಯ ಮಾಡುವುದನ್ನು ರೂಢಿಸಿಕೊಳ್ಳದಿದ್ದರೆ ಕೃಷಿ ನಷ್ಟದ ಕಸುಬಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ರಾಸಾಯನಿಕ,ಕ್ರಿಮಿನಾಶಕ ಬಳಸಿ ಈಗಾಗಲೇ ನೆಲ ಜಲ ಎಲ್ಲವನ್ನೂ ಕೆಡಿಸಿದ್ದೇವೆ.ಈಗಲಾದರೂ ಎಚ್ಚೆತ್ತುಕೊಂಡು ಕೃಷಿಯಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಹಾಕಬೇಕು ಎನ್ನುವ ಪ್ರಸಾದ್ ಈಗ 200 ಸೀಬೆ,100 ಹಲಸು,250 ಸೀತಾಫಲ,100 ಬಾಲಾಜಿ ನಿಂಬೆ,80 ಜಂಬುನೇರಳೆ ಜೊತೆಗೆ ಒಂದು ಸಾವಿರ ನುಗ್ಗೆ ಗಿಡಗಳನ್ನು ತಂದು ಜಮೀನಿನಲ್ಲಿ ನಾಟಿ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಪ್ರಸಾದ್ 9449732255 ಸಂಪಕರ್ಿಸಿ.





ಸೋಮವಾರ, ಆಗಸ್ಟ್ 28, 2017

 ಜಲಸಾಕ್ಷರತೆಗೆ ಮುನ್ನುಡಿ ಬರೆದ `ಭಗೀರಥ' ಮಸಗಿ # ನೀರಿನ ಸಮಸ್ಯೆ ವಿರುದ್ಧ ಸಮರ ಸಾರಿದ `ನೀರು ಡಾಕ್ಟರ್'  # ಹತಾಶ ರೈತರ ಆಶಾಕಿರಣ
ನದಿ ಜೋಡಣೆ,ಪಾತಾಳ ಗಂಗೆ,ಬೃಹತ್ ಅಣೆಕಟ್ಟು ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.ಬಿದ್ದ ಮಳೆಯ ನೀರನ್ನು ಯಾರೂ ನೋಡುತ್ತಿಲ್ಲ.ದೊಡ್ಡ ದೊಡ್ಡ ಅಣೆಕಟ್ಟುಗಳು,ನದಿ ಜೋಡಣೆ,ಮೋಡ ಭಿತ್ತನೆಯಂತವು ಆಡಳಿತಶಾಯಿ ಮತ್ತು ಗುತ್ತಿಗೆದಾರಸ್ನೇಹಿ ಯೋಜನೆಗಳು. ನಾವು ನದಿ ಜೋಡಣೆಗಿಂತ ಜನರನ್ನು ಆಕಾಶಕ್ಕೆ ಜೋಡಿಸಬೇಕಿದೆ.ನಮ್ಮಲ್ಲಿ ಶೇಕಡ 2-3 ರಷ್ಟು ಮಳೆಯ ನೀರನ್ನು ಹಿಡಿದಿಡಲಾಗುತ್ತಿದೆ. ಉಳಿದ ಎಲ್ಲಾ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಶೇ.30 ರಿಂದ 40 ರಷ್ಟು ನೀರನ್ನು ಮಣ್ಣಿಗೆ ಸೇರಿಸಿಬಿಟ್ಟರೆ ನೀರಿನ ಸಮಸ್ಯೆಯೇ ತೀರಿಹೋಗುತ್ತದೆ ಎನ್ನುತ್ತಾರೆ ನೀರಿನ ಡಾಕ್ಟರ್ ಎಂದೇ ಪ್ರಸಿದ್ಧರಾದ ಜಲತಜ್ಞ ಅಯ್ಯಪ್ಪ ಮಸಗಿ.
ಸಾವಿರಾರು ಕೆರೆಗಳ ನಿರ್ಮಾಣಮಾಡಿ ,ಒಂದು ಲಕ್ಷಕ್ಕೂ ಹೆಚ್ಚು ಬತ್ತಿದ ಬಾವಿಗಳಿಗೆ ಜಲ ಮರುಪೂರಣಮಾಡಿ `ಯುನಿಕ್ ವರ್ಲ್ಡ್' ಪುಸ್ತಕದಲ್ಲಿ ದಾಖಲಾಗಿ `ನೀರಿನ ಗಾಂಧಿ' ಎಂದು ಕರೆಸಿಕೊಂಡಿರುವ ಜಲತಜ್ಞ ಮಸಗಿ ಅವರ ಪದ್ಧತಿಗಳನ್ನು ಅಳವಡಿಸಿಕೊಂಡರೆ ನೀರಿನ ಬರ ನೀಗಲು ಯಾವ ಮೋಡ ಭಿತ್ತನೆಯೂ ,ನದಿ ಜೋಡಣೆಯೂ ಬೇಕಾಗಿಲ್ಲ.
ಎಲ್ಲಾಕಡೆ ನೀರಿಗಾಗಿ ಬೊಬ್ಬೆ ಹಾಕುತ್ತಿದ್ದರೆ ಬರದಿಂದ ತತ್ತರಿಸಿ ಹೋಗಿದ್ದ ಕುಗ್ರಾಮದಿಂದ ಬೆಳೆದುಬಂದ ಇಂಜಿನಿಯರ್ ಅಯ್ಯಪ್ಪ ಮಸಗಿ `ಮಳೆನೀರು ನಿಲ್ಲಿಸಿದರೆ ನಿತ್ಯೋತ್ಸವ, ಹರಿಯ ಬಿಟ್ಟರೆ ಬರಡೋತ್ಸವ' ಎನ್ನುತ್ತಾ, ಬಿದ್ದ ಮಳೆಯ ನೀರನ್ನು ಭೂಮಿಗೆ ಹಿಂಗಿಸಿಬಿಟ್ಟರೆ 2050 ರವೇಳೆಗೆ ದೇಶದಲ್ಲಿ `ಜಲಕ್ರಾಂತಿ'ಯೇ ನಡೆಯುತ್ತದೆ ಎನ್ನುತ್ತಾರೆ.
ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಾಳ ಗ್ರಾಮದ ಮಸಗಿ ಜಲ ಸಂರಕ್ಷಣೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಜಲ ಜಾಗೃತಿಗಾಗಿ ಸ್ಥಾಪನೆಯಾಗಿರುವ `ವಾಟರ್ ಲಿಟರಸಿ ಫೌಡೇಷನ್' ನ ವ್ಯವಸ್ಥಾಪಕ ಟ್ರಸ್ಟಿಯೂ ಆಗಿರುವ ಅಯ್ಯಪ್ಪ ಮಸಗಿ ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನಿಷ್ಠಾನಗೊಳಿಸಿದ ಸಾಧನೆಗಾಗಿ 2009 ನೇ ಸಾಲಿನಲ್ಲಿ ಪ್ರತಿಷ್ಠಿತ `ಜಮ್ನಾಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ'  ಹಾಗೂ `ರಾಜ್ಯೋತ್ಸವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.
ಮಸಗಿಯವರು ಅಂತರ್ಜಲ ನಿರ್ವಹಣೆ ಮತ್ತು ಸಾವಯವ ಕೃಷಿಯ ಮಹತ್ವ ಕುರಿತು `ನೆಲ-ಜಲ-ಜನ' ಹಾಗೂ `ಭಗೀರಥ-ನೀರಿನ ಸಮಸ್ಯೆಯ ವಿರುದ್ಧ ಸಮರ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ನೀರಿನ ಮಹತ್ವವವನ್ನು ಸಾರುವ `ಭಗೀರಥ' ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನೀರಿನ ವಿಷಯದಲ್ಲಿ ಪರಿಣತರಾಗಿರುವ ಮಸಗಿ ಅವರು ಹೇಳುವುದು ಯಾಕೆ ಮುಖ್ಯ ಎಂದರೆ `ರಾಜೇಂದ್ರ ಸಿಂಗ್,ಅಣ್ಣಾ ಹಜಾರೆ,ಇಸ್ರೇಲ್ ವಿಜ್ಞಾನಿ ಎರಾ ಡೆನ್ಸನ್ ಅವರ ಜೀವನದಿಂದ ಪ್ರೇರಣೆ ಪಡೆದು ನೀರಿನ ಹುಚ್ಚು ಹಿಡಿಸಿಕೊಂಡರು. ತಮ್ಮ ಬಿಡುವಿನ ವೇಳೆಯನ್ನು ಜಲಸಂರಕ್ಷಣೆ ಕುರಿತು ಅಧ್ಯಯನಕ್ಕೆ ಮೀಸಲಿಟ್ಟರು'. ಇದು ಇಷ್ಟೇ ಆಗಿದ್ದರೆ ಇವರೂ ಹತ್ತರಲ್ಲಿ ಒಬ್ಬರಾಗುತ್ತಿದ್ದರು ಮಾತಿನಲ್ಲೇ ಕಳೆದುಹೋಗುತ್ತಿದ್ದರು.
ತಾವು ಪ್ರೇರಣೆ ಪಡೆದು ಕಲಿತ ಜ್ಞಾನವನ್ನು ಸ್ವತಃ ತಾವೇ ಪ್ರಯೋಗಿಸಿ ಯಶಸ್ಸುಪಡೆದು,ಸ್ವಾನುಭವನ್ನು ಹೇಳುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು.ಈ ಕಾರಣಕ್ಕಾಗಿ ಮಸಗಿ ಅವರು ನಮಗೆ ತುಂಬಾ ಮುಖ್ಯ ಅನಿಸುತ್ತಾರೆ. 1994ರಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದ ಬಳಿ ಆರು ಎಕರೆ ಭೂಮಿ ಖರೀದಿಸಿ ಮಳೆ ನೀರುಕೊಯ್ಲು ಪ್ರಯೋಗ ನಡೆಸಿದರು. ಬರದನಾಡಿನಲ್ಲಿ ಅಡಿಕೆ,ತೆಂಗು,ಕಾಫಿ,ಬಾಳೆಯಂತಹ ಮಲೆನಾಡ ಬೆಳೆಗಳನ್ನು ಬೆಳೆದುತೋರಿಸಿದರು. ಪ್ರತಿಷ್ಠಿತ ಎಲ್ ಅಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಮಸಗಿ 2002 ರಲ್ಲಿ ನೌಕರಿಗೆ ವಿದಾಯ ಹೇಳಿ ಜಲಸಾಕ್ಷರತೆ ಮೂಡಿಸುವ ಕಾಯಕನಿರತರಾಗಲು ಸಂಕಲ್ಪ ಮಾಡಿದರು. ಊರೂರು ಅಲೆದರು.ಮಸಗಿಯವರ ಆಸಕ್ತಿಯನ್ನು ಗಮನಿಸಿದ ಅಶೋಕ ಫೌಂಡೇಷನ್ ಜಲಸಂರಕ್ಷಣೆ ಜಾಗೃತಿ ಮುಂದುವರಿಸಲು `ಅಶೋಕಾ ಫೆಲೋಶಿಪ್' ನೀಡಿದರು. ನಂತರ ಮಸಗಿ 2005 ರಲ್ಲಿ `ವಾಟರ್ ಲಿಟರಸಿ ಫೌಂಡೇಶನ್' ಸ್ಥಾಪಿಸಿ ಕನರ್ಾಟಕ,ತಮಿಳುನಾಡು,ಗೋವಾ ಸೇರಿದಂತೆ ಹತ್ತಾರು ರಾಜ್ಯಗಳಲ್ಲಿ ಸುತ್ತಾಡಿ ಜಲ ಸಾಕ್ಷರತೆಯ ಅರಿವು ಮೂಡಿಸುತ್ತಿದ್ದಾರೆ. ಪ್ರತ್ಯಾಕ್ಷಿಕೆಗಳನ್ನು ನಿಮರ್ಾಣಮಾಡಿದ್ದಾರೆ.ಇಂಗ್ಲೆಂಡ್ನ ಗಾಡರ್ಿಯನ್ ಪತ್ರಿಕೆ ಮಸಗಿಯವರನ್ನು ನೀರಿನ ಡಾಕ್ಟರ್ ಎಂದು ಕರೆದರೆ,ಜಿಎಸ್ಐಎಮ್ ಸಂಸ್ಥೆಯ ದೀನ ದಯಾಳನ್ನರು `ನೀರಿನ ಗಾಂಧಿ' ಎಂದು ಕರೆದಿದೆ.ಇಂತಹ ಜಲತಜ್ಞ ಇತ್ತೀಚಿಗೆ ಮೈಸೂರಿಗೂ ಬಂದಿದ್ದ ಅಯ್ಯಪ್ಪ ಮಸಗಿ ಎರಡು ಉಪನ್ಯಾಸಗಳನ್ನು ನೀಡಿ ನಗರದ ಜನರಲ್ಲಿಯೂ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಹೋದರು.
ಇದುವರೆಗೆ ಮಸಗಿಯವರು ಸುಮಾರು 300 ಕ್ಕೂ ಹೆಚ್ಚು ಅಪಾಟರ್್ಮೆಂಟ್ಗಳಿಗೆ, ಹತ್ತು ಆರುಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ಸಂಗ್ರಹದ ಮಾದರಿಗಳನ್ನು ಅನುಷ್ಠಾನಗೊಳಿಸಿದ್ದಾರೆ.ಒಂದು ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡಿದ್ದಾರೆ.ನೀರಾವರಿ ರಹಿತ ಕೃಷಿ ಭೂಮಿಯಲ್ಲಿ ಮಳೆನೀರು ಹಿಂಗಿಸುವ ಸ್ಯಾಂಡ್ಫಿಟ್,ಪಟ್ಟಾ ಬಡ್ಡಿಂಗ್ನಂತಹ ಮಾದರಿಗಳನ್ನು ಅನುಶೋಧಿಸಿ ಹತ್ತಾರು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಅಳವಡಿಸಿದ್ದಾರೆ. ಉತ್ತರ ಕನರ್ಾಟಕದ ಒಂಭತ್ತು ಜಿಲ್ಲೆಗಳ ಮೂರು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇಂತಹ ಮಾದರಿಗಳನ್ನು ಅಳವಡಿಸಿರುವುದನ್ನು ಕಾಣಬಹುದು.
ಎಲ್ಲಾ ಹಳ್ಳಿಗಳಲ್ಲಿ `ಹಳ್ಳದ ಜಲ ಮರುಪೂರಣ'ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಒಂದು ಇಂಚು ಮಳೆ ಆದರೆ 10044 ಲೀಟರ್ ವ್ಯರ್ಥವಾಗಿ ಹರಿದುಹೋಗುತ್ತದೆ. ವರ್ಷಕ್ಕೆ ಸುಮಾರು 18-20 ಲಕ್ಷ ಲೀಟರ್ ನೀರು ಹರಿದು ಹೋಗುತ್ತದೆ.ಮೊದಲ ಮಳೆಯ 150 ಮಿ.ಮೀ.ಮಳೆನೀರನ್ನು ಕೆಂಪು ಮಣ್ಣು ಹೀರಿಕೊಳ್ಳುತ್ತದೆ.ಕಪ್ಪು ಮಣ್ಣು ಮೊದಲ ಮಳೆಯ 300 ಮಿ.ಮೀ. ಮಳೆನೀರನ್ನು ಹೀರಿಕೊಳ್ಳುತ್ತದೆ.ನಂತರ ಬರುವ ಮಳೆಯ ನೀರು ಹರಿದು ಪೋಲಾಗುತ್ತದೆ.ಜೊತೆಗೆ ಒಂದು ಹೆಕ್ಟರ್ನಿಂದ 3-4 ಟನ್ ಫಲವತ್ತಾದ ಮಣ್ಣು ಸಮದ್ರ ಸೇರುತ್ತದೆ.
ಇವತ್ತು ರಾಸಾಯನಿಕ ಬಳಸಿದ ಭೂಮಿಗೆ ನೀರು ಹಿಡಿದಿಡಲು ಆಗುತ್ತಿಲ್ಲ.ಅಕ್ಕಡಿ ಬೆಳೆಗಳು ಇಲ್ಲ.ಹಿಂದೆ ರೈತರಿಗೆ ಯಾವರೀತಿ ಕೃಷಿ ಮಾಡಬೇಕೆನ್ನುವುದುಗೊತ್ತಿತ್ತು. ಉರುಳಿ,ಅಲಸಂದೆ,ಉಚ್ಚೆಳ್ಳು,ಎಳ್ಳು, ತೊಗರಿ,ಉದ್ದು ಎಲ್ಲಾ ಅಕ್ಕಡಿ ಹಾಕುತ್ತಿದ್ದರು. ಅವುಗಳ ಎಲೆಬಿದ್ದು ಭೂಮಿಗೆ ಹಾಸಿಗೆಯಂತಾಗುತ್ತಿತ್ತು.ಬಿದ್ದ ನೀರನ್ನು ಮಣ್ಣು ಹೀರಿಕೊಳ್ಳುತ್ತಿತ್ತು. ಆದರೆ ಈಗ ಹಸಿರು ಕ್ರಾಂತಿಯ ದುಷ್ಪರಿಣಾಮ ದಶಕಗಟ್ಟಲೆ ರಾಸಾಯನಿಕ ಹಾಕಿದ ಮಣ್ಣಿನಲ್ಲಿ ಬಿದ್ದ ನೀರು ಹಿಂಗುವುದು ಕಷ್ಟವಾಗಿದೆ. ಭೂಮಿಯಲ್ಲಿ ನೀರು ಹಿಂಗಬೇಕಾದರೆ ಸಾವಯವ ಪದಾರ್ಥ ಇರಲೇಬೇಕು. ಆದ್ದರಿಂದ ಮಳೆನೀರಿನ ಕೊಯ್ಲು ಜೊತೆಗೆ ಸಾವಯವ ಸಮಗ್ರ ಬೇಸಾಯ ಪದ್ಧತಿಯ ಕಡೆಗೆ ರೈತರು ಮರಳಿ ಬರಬೇಕು ಎನ್ನುತ್ತಾರೆ ಅಯ್ಯಪ್ಪ ಮಸಗಿ.
ಜಲಾನಯನ ಇಲಾಖೆಯವರು ಹೆಚ್ಚಾಗಿ ಟ್ರಂಚ್ಕಂಬಂಡ್ ಮಾಡುತ್ತಾರೆ.ಅದಕ್ಕಿಂತ ಕಂಪಾಟರ್್ಮೆಂಟ್ ಬಂಡಿಂಗ್ ಉತ್ತಮ ಎನ್ನುವ ಮಸಗಿ `ಒಂದು ಮೀಟರ್ ಆಳ,ಒಂದು ಮೀಟರ್ ಅಗಲ,ಹತ್ತು ಮೀಟರ್ ಉದ್ದದ ಟ್ರಂಚ್ಗಳನ್ನು ತೆಗೆದು ನಡುವೆ ಒಂದು ಚದರ ಮೀಟರ್ ಜಾಗ ಬಿಡಬೇಕು. ಹೀಗೆ ಮಾಡಿದರೆ ಒಂದು ಟ್ರಂಚ್ನಲ್ಲಿ 10 ಸಾವಿರ ಲೀಟರ್ ನೀರು ಹಿಂಗುತ್ತದೆ. ಅಕಾಲಿಕ ಮಳೆಗೆ ಹೊಲಗಳಲ್ಲಿ ಹಿಂಗು ಗುಂಡಿಗಳನ್ನು ಮಾಡಿಕೊಳ್ಳುವುದು ಒಳ್ಳೆಯ ಬರ ಪರಹಾರ ಎನ್ನುತ್ತಾರೆ.
`ಯಾರದೇ ಹೊಲಕ್ಕೆ ಹೋದರೂ ನಾನು ನೋಡುವುದು ಬದುವನ್ನು.ಎಲ್ಲಾ ಸಿರಿ ಸಂಪತ್ತು ಇರುವುದೆ ಬದುವಿನಲ್ಲಿ.ಶ್ರೀಗಂಧ,ಹೆಬ್ಬೇವು,ಸಿಲ್ವರ್ ಓಕ್, ನಿಂಬೆ,ತೆಂಗು ಎಲ್ಲವನ್ನು ಬದುವಿನಲ್ಲಿ ಹಾಕಿದರೆ ಕೃಷಿಗೆ ಪೂರಕವಾದ ವಾತಾವರಣ ನಿಮರ್ಾಣವಾಗುತ್ತದೆ. ರೈತರು 12 ತಿಂಗಳು ಕೆಲಸ ಇರುವಂತ ಕೃಷಿಮಾಡಬೇಕು.ಕಾಡು ಇರಬೇಕು,ಸಂಪತ್ತು ಕೊಡುವಂತಹ ಹಣ್ಣಿನ ಮರಗಿಡಗಳೂ ಇರಬೇಕು' ಎನ್ನುವುದು ಮಸಗಿಯವರ ಅನುಭವದ ಮಾತು.
ನಾವು ಯಾವುದನ್ನೇ ಮಾಡಿದರು ಅದರ ಫಲಿತಾಂಶ ಉತ್ತಮವಾಗಿರಬೇಕು ಎನ್ನುವ ಮಸಗಿ `ಜಲ ಮರುಪೂರಣ ಎನ್ನುವುದು ಜನರದ್ದೇ ಯೋಜನೆಯಾಗಬೇಕು.ಅದು ಪ್ರತಿ ಕ್ಷಣವೂ ಅವರ ಮನದಲ್ಲಿ ನಿಲ್ಲಬೇಕು.ತಮ್ಮ ಜಮೀನಿನಲ್ಲಿ ನೀರು ಹಿಂಗಿಸುವ ಕೆಲಸಮಾಡಲು ಸರಕಾರಿ ಯೋಜನೆಗಳಿಗಾಗಿ ಕಾಯುತ್ತಾ ಕುಳಿತಿರಬಾರದು.ಜೀವನೋಪಯೋಗಕ್ಕಾಗಿ ನೀರು ಬೇಕೆಬೇಕು ಎಂದು ಅರಿತುಕೊಂಡು ಹೊಟ್ಟೆ ಬಟ್ಟೆ ಕಟ್ಟಿ ಇದಕ್ಕೆ ದುಡ್ಡು ಹಾಕಬೇಕು' ಎನ್ನುತ್ತಾರೆ.
2020ರ ವೇಳೆಗೆ ಭಾರತ ಮತ್ತೆ ಆಹಾರ ಮತ್ತು ನೀರಿನ ಕೊರತೆ ಎದುರಿಸುವ ಸಾಧ್ಯತೆ ಇದೆ.ಕಾರಣ ಭೂಮಿಯ ಮೇಲಿನ ನೀರು, ನೆಲದ ನೀರು, ಅಂತರ್ಜಲ ಈ ಮೂರನ್ನು ಬೇಕಾಬಿಟ್ಟಿ ಬಳಸುತ್ತಿರುವುದು. ಈಗ ಇದರಿಂದ ತಪ್ಪಿಸಿಕೊಳ್ಳುವ ಮಾರ್ಗ ಎಂದರೆ ಮಳೆ ನೀರಿನ ಸಂಗ್ರಹಣೆ. ಮಳೆ ನೀರಿನ ಉಳಿಕೆ,ಗಳಿಕೆ,ಬಳಕೆಯಲ್ಲಿ ಎಚ್ಚರವಹಿಸಬೇಕಿದೆ.ಪ್ರತಿ ಒಂದು ಹೆಕ್ಟರ್ ಪ್ರದೇಶದಲ್ಲಿ ಕನಿಷ್ಠ ಒಂದು ಗುಂಟೆಯಾದರೂ ಕೆರೆ ಇರಲೇ ಬೇಕು. ಭೂಮಿ ಹೆಚ್ಚು ಇಳಿಜಾರಗಿದ್ದರೆ 30 ಅಡಿಗೆ,ಸಾಧಾರಣ ಇಳಿಜಾರಗಿದ್ದರೆ 40 ಅಡಿಗೆ,ಸಮತಟ್ಟಾಗಿದ್ದರೆ 60 ಅಡಿಗೆ ಒಂದರಂತೆ ಪಟ್ಟ ಬಡ್ಡಿಂಗ್ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ.
ಮಳೆ ಬೀಳುವ ದಿನಗಳಲ್ಲಿ ಹೆಚ್ಚು ಕಡಿಮೆಯಾಗಿದೆ. ಅದು ನಾವೇ ಮಾಡಿಕೊಂಡಿರುವ ಪ್ರಮಾದ.ಆದರೆ ಮಳೆಯ ಪ್ರಮಾಣದಲ್ಲಿ ಅಂತಹ ವ್ಯತ್ಯಾಸವಾಗಿಲ್ಲ. ಅಕಾಲಿಕವಾಗಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟುಕೊಂಡು,ಹಸಿರು ಕಾಡು ಬೆಳೆಸಿ ಮತ್ತೆ ಕಾಲ ಕಾಲಕ್ಕೆ ಮಳೆ ಬೀಳುವಂತೆ ಮಾಡಬೇಕಿದೆ.ಅದಕ್ಕಾಗಿ ನಮ್ಮ ಯುವಕರು ಯಾರಿಗೂ ಯಾವುದಕ್ಕೂ ಕಾಯದೇ ಜಲಯೋಧರಂತೆ ಕೆಲಸಮಾಡಬೇಕಿದೆ.ಅದಕ್ಕಾಗಿ ಓಡುವ ನೀರನು ಹರಿಯುವಂತೆ ಮಾಡಬೇಕು.ಹರಿಯುವ ನೀರನ್ನು ನಿಲ್ಲುವಂತೆ ಮಾಡಬೇಕು.ನಿಲ್ಲುವ ನೀರನ್ನು ಹಿಂಗುವಂತೆ ಮಾಡಬೇಕು.
ರೈತರು ಕೃಷಿ ಲೇಖನಗಳು,ಪುಸ್ತಕಗಳು,ಅಂಕಣ ಬರೆಹಗಳನ್ನು ಓದಿದರೆ ಅರ್ಧಲಾಭ, ತೋಟಗಳನ್ನು ಸುತ್ತಿದರೆ ಇನ್ನರ್ಧಲಾಭ. ಎರಡನ್ನೂ ಮಾಡಿದರೆ ಪೂರ್ತಿಲಾಭ ಎನ್ನುತ್ತಾರೆ ಬಲ್ಲವರು. ಮಳೆ ನೀರು ಕೊಯ್ಲು ಮಾಡುವುದರ ಜೊತೆಗೆ ಸಾವಯವ ಕೃಷಿಯತ್ತ ಯುವಕರು ಒಲವು ಬೆಳೆಸಿಕೊಳ್ಳಬೇಕು.ಸಾವಯವ ಕೃಷಿ ಸಾಯುವ ಕೃಷಿಯಲ್ಲ.ಬದಲಾಗಿ ಸಾಹುಕಾರನಾಗುವ ಕೃಷಿ ಎನ್ನುತ್ತಾರೆ ಅಯ್ಯಪ್ಪ ಮಸಗಿ.
ಅವರು ಪುಸ್ತಕಗಳು ಹಾಗೂ `ಭಗೀರಥ' ಕಿರುಚಿತ್ರದ ಸಿಡಿ ಬೇಕಾದವರು, ಅಂತರ್ಜಲ ಮರುಪೂರಣದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು `ಜಲ-ಸಿರಿ-ಜಲ-ವೃದ್ಧಿ' ನಂ.374,ಪಾರ್ವತಿ ನಿಲಯ,ಕಲ್ಲಪ್ಪ ಬಡಾವಣೆ,ಅಮೃತಹಳ್ಳಿ,ಸಹಕಾರನಗರ ಅಂಚೆ,ಬಳ್ಳಾರಿ ರಸ್ತೆ,ಬೆಂಗಳೂರು-560092. ದೂರವಾಣಿ 080-23339497/ 9448379497 ಸಂಪರ್ಕಿಸಿ.