ಮಣ್ಣಿನ ಸೆಳೆತಕ್ಕೆ ಮನಸೋತ ಹಸಿರು ಪ್ರೇಮಿ
ನಂಬಿದವರ ಕೈ ಬಿಡಾಕಿಲ್ಲ ಭೂಮತಾಯಿ ಎಂದ ಕೃಷ್ಣರಾವ್
ಚಾಮರಾಜನಗರ : ನಗರ ಜನರ ಹಸಿರು ಪ್ರೀತಿ ಇತ್ತೀಚಿಗೆ ಒಂದು ಫ್ಯಾಶನ್ ಆಗಿದೆ. ಟೆಕ್ಕಿಗಳು, ಹಣವಂತರು ಕೃಷಿಯ ಕಡೆಗೆ ಆಕಷರ್ಿತರಾಗುತ್ತಿದ್ದಾರೆ. ಪರಿಣಾಮ ಹೊಸದಾಗಿ ಕೃಷಿ ಭೂಮಿ ಖರೀದಿಸಿ ಹೊಸ ಹೊಸ ಸಾಧನೆಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ಹಳ್ಳಿಯ ಪಾರಂಪರಿಕ ಕೃಷಿಕೂಡ ಸಾಕಷ್ಟು ಸುಧಾರಣೆಯತ್ತ ಸಾಗುತ್ತಿರುವುದನ್ನು ಕಾಣಬಹುದು.ಹೊಸದಾಗಿ ಬಂದ ವಿದ್ಯಾವಂತರು ಪರಿಚಯಿಸುತ್ತಿರುವ ಹೊಸಹೊಸ ಪ್ರಯೋಗಗಳು ನಮ್ಮವರಿಗೂ ಮಾದರಿಗಳಾಗುತ್ತಿವೆ. ಮಾರುಕಟ್ಟೆ, ಭಿತ್ತನೆ ಬೀಜ, ತಂತ್ರಜ್ಞಾನಗಳ ಬಳಕೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದು ತೋರಿಸುತ್ತಿವೆ.
ಇಂತಹವರ ಸಾಲಿಗೆ ನಿಲ್ಲಬಲ್ಲವರು ಕೃಷ್ಣರಾವ್. ಬಿಡುವಿಲ್ಲದ ಕೆಲಸ.ವ್ಯಾಪಾರ, ಸುತ್ತಾಟದಿಂದ ಉಂಟಾದ ಒತ್ತಡದಿಂದ ಬೇಸತ್ತು ಭೂಮಿಯ ಸೆಳೆತಕ್ಕೆ ಅವರು ಮನಸೋತಿದ್ದಾರೆ.
ಮೂಲತಃ ಕೃಷಿಕರೆ ಆದ ಹುಣಸೂರು ತಾಲೂಕು ರತ್ನಪುರಿಗ್ರಾಮದ ಕೃಷ್ಣರಾವ್ ಓದಿದ್ದು ಭೂಗರ್ಭ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ.ನಂತರ ಅವರು ದೇಶ ವಿದೇಶಗಳಲ್ಲಿ ಕಲ್ಲು ಗಣಿ ಮಾಕರ್ೇಟಿಂಗ್ಗಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಚೀನಾ,ಜಪಾನ್ ಸೇರಿದಂತೆ ನಾನಾ ದೇಶಗಳಲ್ಲಿ ವ್ಯಾಪಾರ ವಹಿವಾಟು ಮಾಡಿದರು. ಕೊನೆಗೆ ಅವರು ಬಂದು ನಿಂತಿದ್ದು ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಸಮೀಪ ಇರುವ ಕುದೇರು ಮತ್ತು ದೇಮಳ್ಳಿ ನಡುವೆ ಹೊಸದಾಗಿ ಖರೀದಿಸಿದ ತಮ್ಮ ಕರ್ಮಭೂಮಿಯಲ್ಲಿ. ಇಲ್ಲಿ ಎಬಚಗಳ್ಳಿಯ ಮಹೇಶ್ ಎಂಬ ತರುಣನ ಜೊತೆ ಸೇರಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಗೆಳೆಯರು ಪ್ರೀತಿಯಿಂದ ಅವರನ್ನು "ಕಲ್ಲು' ಎಂದೇ ಕರೆಯುತ್ತಾರೆ.
ಉಸಿರುಗಟ್ಟಿಸುವ ನಗರದ ವಾತಾವರಣ,ವೇಗದ ಬದುಕು, ಸದಾ ಏರುಪೇರಾಗುವ ವ್ಯಾಪಾರ ಇದೆಲ್ಲದ್ದರ ಒತ್ತಡದಿಂದ ಪಾರಾಗಲು ಯೋಚಿಸುತ್ತಿದ್ದಾಗ ಹೊಳೆದದ್ದು ಕೃಷಿ. ಭೂಮಿ ತಾಯಿ ನಂಬಿದವರನ್ನ ಎಂದಿಗೂ ಕೈಬಿಡಲ್ಲ ಎಂಬ ನಂಬಿಕೆಯಿಂದ ಕೃಷಿಕನಾಗಿದ್ದೇನೆ ಎಂದರು ಕೃಷ್ಣರಾವ್.
ತನ್ನ ಆಲೋಚನೆಗಳನ್ನು ಭೂಮಿಯಲ್ಲಿ ಸಾಕಾರಗೊಳಿಸಲು ತಮ್ಮನಂತಹ ಆತ್ಮೀಯ ಗೆಳೆಯ ಮಹೇಶ್ ತಮ್ಮ ಜೊತೆ ಕೈಜೋಡಿಸಿದ್ದು ತಮ್ಮ ಕೃಷಿ ಬದುಕಿಗೆ ಸ್ಫೂತರ್ಿಯಾಯಿತು ಎನ್ನುತ್ತಾರೆ. ತಾವು ತಮ್ಮ ಕೆಲಸದ ನಿಮಿತ್ತ ರಾಜ್ಯದ ಎಲ್ಲೆಡೆ ಸುತ್ತಾಡುವಾಗ ಅಲ್ಲಿ ಸಿಗುವ ಬೇರೆ ಬೇರೆ ಹಣ್ಣು ಮತ್ತು ಔಷದೀಯ ಸಸ್ಯಗಳನ್ನು ತೋಟದ ಅಲ್ಲಲ್ಲಿ ಹಾಕಿದ್ದಾರೆ.
ಬೇಳೆ ಕಾಳುಗಳ ಸಂಯೋಜನೆ : ದೇಮಹಳ್ಳಿ ಸಮೀಪ ತಮ್ಮ ಹದಿಮೂರು ಎಕರೆ ಇರುವ ಜಮೀನಿನಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದು ಮುಖ್ಯವಾಗಿ ಬೇಳೆಕಾಳುಗಳನ್ನು ಬೆಳೆಯುತ್ತಾರೆ. ಸಂಪೂರ್ಣ ಎರೆಮಣ್ಣು ಇರುವ ಇಲ್ಲಿ ಕೊತ್ತಂಬರಿ, ಹೆಸರು. ಉದ್ದು, ಮುಸುಕಿನ ಜೋಳದಂತಹ ದ್ವಿದಳ ದಾನ್ಯಗಳನ್ನು ಬೆಳೆಯುತ್ತಿರುವ ಇವರು ತೋಟದ ಸುತ್ತ ವಿಶೇಷ ತಳಿಯ ಬೇಗ ಕಟಾವಿಗೆ ಬರುವ ತೇಗದ ಮರಗಳನ್ನು ನಾಟಿಮಾಡಿದ್ದಾರೆ. ಅಲ್ಲದೇ ಮಂಡ್ಯ ಸಮೀಪ ಇರುವ ಲೋಕಸರದ ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಎಳನೀರು ತಳಿಯ 200 ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ಹಾಕಿದ್ದಾರೆ. ಇದಲ್ಲದೆ ಮೂಸಂಬಿ, ಕರಿಬೇವು, ನುಗ್ಗೆ, ನೆಲ್ಲಿ,ನೇರಳೆ,ಅಮಟೆ ,ಅಂಜೂರ ಹೀಗೆ ಮುಂತಾದ ಹಣ್ಣಿನ ಗಿಡಗಳನ್ನು ಹಾಕಿದ್ದು ಸಮಗ್ರ ಕೃಷಿಯ ಕಲ್ಪನೆಯನ್ನು ಸಾಕಾರಮಾಡಿದ್ದಾರೆ.ಕೃಷಿಯ ಬಗ್ಗೆ ಈಗ ತಿಳಿದುಕೊಳ್ಳತೊಡಗಿದ್ದು ಈಗ ಸ್ವಲ್ಪ ರಾಸಾಯನಿಕ ಬಳಸುತ್ತಿದ್ದೇವೆ, ಮುಂದೆ ಸಂಪೂರ್ಣ ಸಾವಯವ ಕೃಷಿಮಾಡಲು ಆಲೋಚಿಸುತ್ತಿದ್ದೇವೆ ಎನ್ನುತ್ತಾರೆ.
ಸಾಮಾನ್ಯವಾಗಿ ರೈತರು ತಮ್ಮ ತೋಟದಲ್ಲಿ ಮುಖ್ಯ ಬೆಳೆ ಮಾಡುವಾಗ ಬೇಲಿಯ ಸುತ್ತಲು ಒಂದಿಂಚು ಜಾಗವನ್ನು ಬಿಡದೆ ಫಸಲು ಹಾಕುತ್ತಾರೆ. ಆದರೆ ಇವರು ಆ ರೀತಿ ಮಾಡದೇ ಅಲ್ಲೂ ಜಾಣ್ಮೆ ಮೆರೆದಿದ್ದಾರೆ. ಬೇಲಿಯ ಬದುವಿನಲ್ಲಿ ಸುಮಾರು ಒಂದು ಮೀಟರ್ನಷ್ಟು ಜಾಗವನ್ನು ಯಾವುದೇ ಮುಖ್ಯ ಬೆಳೆ ಬೆಳೆಯದೇ ತುಪ್ಪದ ಈರೇಕಾಯಿ, ಕುಂಬಳಕಾಯಿ, ಹಾಗಲ ಕಾಯಿ ಹೀಗೆ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಸಂಯೋಜನೆ ಮಾಡಿದ್ದು ಇದರಿಂದ ಮನೆಗೆ ಬೇಕಾದ ತರಕಾರಿಗಳು ವರ್ಷಪೂತರ್ಿ ಸಿಗುವಂತೆ ಮಾಡಿಕೊಂಡಿದ್ದಾರೆ.
ಬಾಳೆ ಬಾಗಿದಾಗ : ಕುದೇರು ಸಮೀಪ ಹೊಸದಾಗಿ ಆರಂಭವಾಗಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಕೊಗಳತೆ ದೂರದಲ್ಲಿರು ಕೆಂಪು ಮಣ್ಣಿನಿಂದ ಕೂಡಿದ ಮೂರುವರೆ ಎಕರೆಯಲ್ಲಿ ಇವರು ಮಾಡಿರು ಕೃಷಿ ಪ್ರಯೋಗ ಮೊದಲ ನೋಟದಲ್ಲೆ ಗಮನ ಸೆಳೆಯುತ್ತದೆ.
ಚಾಮರಾಜನಗರ ಸಮೀಪ ಎಣ್ಣೆಹೊಳೆಯ ತೋಟವೊಂದರಲ್ಲಿ ತಂದು ಹಾಕಿರುವ ಏಲಕ್ಕಿ ಬಾಳೆ ಕಂದುಗಳು ದಷ್ಟಪುಷ್ಟವಾಗಿದ್ದು ಅಂಗಾಂಶ ಕೃಷಿಯ ಗಿಡಗಳು ನಾಚುವಂತೆ ನಳನಳಿಸುತ್ತಿವೆ.
ಕಳೆದ ವರ್ಷ ನವಂಬರ್ ತಿಂಗಳಿನಲ್ಲಿ ನಾಟಿ ಮಾಡಿರುವ 3400 ಏಲಕ್ಕಿ ಬಾಳೆ ಫಲವತ್ತಾಗಿ ಬಂದಿದ್ದು ಈಗ ಗೊನೆ ಬರಲು ಶುರುವಾಗಿವೆ. ಸರಿಯಾಗಿ ಗೊನೆಗಳು ವರಲಕ್ಷ್ಮಿ ಹಬ್ಬ, ದಸರಾ ಸಮಯದಲ್ಲಿ ಕಟಾವಿಗೆ ಬರುವಂತೆ ಯೋಜನೆಮಾಡಿ ಹಾಕಿದ್ದು ಪ್ರತಿ ಗೊನೆ ಸರಾಸರಿ 15 ಕೆಜಿ ಬರುವಂತಿದ್ದು ಅದರಿಂದ 20 ಲಕ್ಷಕ್ಕೂ ಹೆಚ್ಚು ಆದಾಯವನ್ನು ನಿರೀಕ್ಷೆ ಮಾಡಿದ್ದಾರೆ.
ಸುತ್ತಮುತ್ತ ನೀರಿಗೆ ತೊಂದರೆ ಇದೆ. ಆದರೆ ತಾವು ಹೊಸದಾಗಿ ಖರೀದಿಸಿದ ಈ ಜಮೀನು ಕಳೆದ 20 ವರ್ಷಗಳಿಂದ ವವ್ಯಸಾಯವನ್ನೇ ಮಾಡದೆ ಪಾಳು ಬಿದ್ದಿತ್ತು. ಅಲ್ಲಿ ಜಮೀನು ಕೊಂಡು ಮೊದಲು ನಾವು ಮಾಡಿದ್ದು ನೀರಿಗಾಗಿ ಬೋರ್ವೆಲ್ ಹಾಕಿಸಿದ್ದು. ಎರಡುವರೆ ಇಂಚು ನೀರು ಬಂತು. ಬೋರ್ ಹಾಕುವಾಗ ನೀರಿನ ರಭಸಕ್ಕೆ ಬೆಣಚುಕಲ್ಲೊಂದು ರೊಯ್ಯನೇ ಮೇಲೆ ಹಾರಿ ಕೆಳಗೆ ಬಿತ್ತು. ಆ ಖುಶಿ, ಸಂಭ್ರಮ ನನ್ನ ಜೀವನದಲ್ಲಿ ಎಂದೂ ಮರೆಯಲಾದ ನೆನಪು. ಅದಕ್ಕಾಗಿಯೇ ಆ ಕಲ್ಲನ್ನು ಈಗಲೂ ತಮ್ಮ ಮನೆಯಲ್ಲಿ ಇಟ್ಟಿರುವುದಾಗಿ ಕೃಷ್ಣರಾವ್ ಹೇಳುತ್ತಾರೆ.
ವ್ಯವಸಾಯವನ್ನೇ ಮಾಡದೇ ಪಾಳು ಬಿಟ್ಟಿದ್ದ ಜಮೀನಾಗಿದ್ದರಿಂದ ನಾವು ಇಲ್ಲಿ ಏನೇ ಬೆಳೆದರು ಉತ್ತಮವಾದ ಫಸಲೇ ಬರುತ್ತಿದೆ. ಕೆಂಪು ಮಣ್ಣಿನಿಂದ ಕೂಡಿರುವ ಭೂಮಿಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಕೃಷಿಯಲ್ಲೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ತನ್ನನ್ನು ಹುಣಸೂರಿನಿಂದ ಇಲ್ಲಿಗೆ ಕರೆದುಕೊಂಡು ಬಂತು ಎನ್ನುತ್ತಾರೆ.
ಈಗ ಕೃಷ್ಣರಾವ್ ಚಾಮರಾಜ ನಗರ ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಸಲು ರೈತರಿಗೆ ತಾವೇ ಭಿತ್ತನೆ ಬೀಜ ಕೊಟ್ಟು ಮತ್ತೆ ಅವರಿಂದ ಬೆಳೆದ ಧಾನ್ಯಗಳನ್ನು ಖರೀದಿ ಮಾಡಿ ಅದಕ್ಕೆ ಸೂಕ್ತ ಮಾರುಕಟ್ಟೆ ರೂಪಿಸುವ ಹೊಸ ಯೋಜನೆಯೊಂದರ ಸಿದ್ಧತೆಯಲ್ಲಿದ್ದಾರೆ.ಜಿಲ್ಲೆಯ ಪರಿಸರ ಸಿರಿಧಾನ್ಯಗಳನ್ನು ಬೆಳೆಯಲು ಸೂಕ್ತವಾಗಿದ್ದು, ನಮ್ಮ ರೈತರು ಹೆಚ್ಚು ಖಚರ್ಿಲ್ಲದೆ ಸಿರಿಧಾನ್ಯ ಬೆಳೆದು ಹೆಚ್ಚು ಲಾಭ ಗಳಿಸಬಹುದು ಎನ್ನುತ್ತಾರೆ.
ಮೂರು ತಿಂಗಳಿಗೆ ಮೂರು ಲಕ್ಷ ಆದಾಯ : ಕಳೆದ ನವೆಂಬರ್ ತಿಂಗಳಿನಲ್ಲಿ ಬಾಳೆ ನಾಟಿ ಮಾಡುವಾಗ ಮಿಶ್ರ ಬೆಳೆಯಾಗಿ ಹಾಕಿದ ಕಲ್ಲಂಗಡಿಯಲ್ಲಿ ಬಂಪರ್ ಬೆಳೆ ತೆಗೆದು ಒಳ್ಳೆಯ ಲಾಭಗಳಿಸಿದ್ದಾರೆ.
ಮೂರುವರೆ ಎಕರೆಯಲ್ಲಿ ಒಟ್ಟು 60 ಟನ್ ಕಲ್ಲಂಗಡಿ ಬಂತು. ಅದರಲ್ಲಿ 48 ಟನ್ ಪ್ರಥಮ ದಜರ್ೆಯವು, 12 ಟನ್ ದ್ವಿತೀಯ ದಜರ್ೆಯ ಹಣ್ಣುಗಳು. ಕಲ್ಲಂಗಡಿ ಬಾಳೆ ಸೇರಿದಂತೆ ಮೂರು ತಿಂಗಳವರೆಗೆ ಒಟ್ಟು ಒಂದು ಲಕ್ಷದ ಅರವತ್ತು ಸಾವಿರ ರೂ ವೆಚ್ಚಮಾಡಲಾಗಿತ್ತು. ಕಲ್ಲಂಗಡಿ ಮಾರಾಟದಿಂದ ನಾಲ್ಕುವರೆ ಲಕ್ಷ ರೂ. ಆದಾಯ ಬಂತು. ಅಲ್ಲಿಗೆ ನಮಗೆ ಖಚರ್ು ಕಳೆದು ಮೂರು ಲಕ್ಷ ರೂ. ಉಳಿತಾಯವಾದಂತಾಯಿತು ಎನ್ನತ್ತಾರೆ ತೋಟದ ನಿರ್ವಹಣೆಯ ಹೊಣೆಹೊತ್ತ ಮಹೇಶ್.
ತಾನು ಕೂಡ ಕೃಷ್ಣರಾವ್ ಅವರ ಸಂಪರ್ಕಕ್ಕೆ ಬರುವ ಮೊದಲು ರಾಜಕೀಯದಲ್ಲಿ ಸಕ್ರೀಯವಾಗಿದ್ದೆ. ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಗೂ ನಿಂತು ಪಂಚಾಯಿತಿ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದೆ. ಕೃಷ್ಣರಾವ್ ಅವರ ಸಂಪರ್ಕ ಸಿಕ್ಕ ಮೇಲೆ ರಾಜಕೀಯದಿಂದ ದೂರ ಸರಿದು ಸಂಪೂರ್ಣ ಕೃಷಿಯನ್ನೇ ಅವಲಂಭಿಸಿರುವುದಾಗಿ ಎಬಚಗಳ್ಳಿಯ ಮಹೇಶ್ ಹೇಳುತ್ತಾರೆ.
ಕೃಷಿಯಿಂದ ಮಾನಸಿಕ ನೆಮ್ಮದಿ ಇದ್ದು ಸದಾ ಹಸಿರಿನ ನಡುವೆ ಇರುವುದರಿಂದ ಆರೋಗ್ಯವಾಗಿದ್ದೇನೆ.ನಮ್ಮ ಯುವಕರು ರಾಜಕೀಯವನ್ನೇ ಪ್ರಧಾನವಾಗಿ ತೆಗೆದುಕೊಂಡು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಕೃಷಿ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಇದು ತಪ್ಪು ಕಲ್ಪನೆ. ಶ್ರದ್ಧೆಯಿಂದ, ಯೋಜನೆ ಹಾಕಿಕೊಂಡು ಕೃಷಿ ಮಾಡಿದರೆ ಎಂದಿಗೂ ನಷ್ಟ ಎಂಬ ಮಾತೇ ಇಲ್ಲ. ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಾರೆ ಮಹೇಶ್. ಆಸಕ್ತರು ಇವರನ್ನು ಮೊ.9743271157 ಸಂಪಕರ್ಿಸಬಹುದು.
ಬಾನೆತ್ತರ ಬೆಳೆವ ತೇಗ
ಚಾಮರಾಜನಗರ : ಕೃಷ್ಣರಾವ್ ಅವರ ತೋಟಕ್ಕೆ ಹೋದವರ ಮೊದಲ ಗಮನ ಸೆಳೆಯುವುದು ತೋಟದ ಸುತ್ತ ಹಾಕಿರುವ ಸಾವಿರಕ್ಕೂ ಹೆಚ್ಚು ತೇಗದ ಗಿಡಗಳು. ಬೆಂಗಳೂರಿನ ಮದರ್ ಬಯೋಟೆಕ್ ಸಂಸ್ಥೆಯಿಂದ ತಂದು ಹಾಕಿರುವ ತೇಗದ ಗಿಡಗಳು ಕೇವಲ ಆರೆ ತಿಂಗಳಲ್ಲಿ ಹತ್ತು ಅಡಿಗೂ ಎತ್ತರ ಬೆಳೆದು, ಅಗಲವಾದ ಎಲೆಗಳಿಂದ ಕೂಡಿವೆ.
ಅಂಗಾಂಶ ಕೃಷಿ ವಿಧಾನದಲ್ಲಿ ಈ ಗಿಡಗಳನ್ನು ಮೂರು ಹಂತಗಳಲ್ಲಿ ಬೆಳೆಸಲಾಗುತ್ತದೆ. ಪ್ರತಿ 30 ದಿನಗಳಂತೆ ಮೂರು ಹಂತಗಳಲ್ಲಿ 90 ದಿನ ಬೆಳೆಸಿದ ಒಂದು ಗಿಡದ ಬೆಲೆ 180 ರಿಂದ 220 ರೂಪಾಯಿ. ಆಯಾಯ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿಯೇ ಲ್ಯಾಬ್ನಲ್ಲಿ ಸಸಿಗಳನ್ನು ಬೆಳೆಸಲಾಗುತ್ತಾದೆ ಎನ್ನುತ್ತಾರೆ ಕೃಷ್ಣರಾವ್.
ಎರಡು ಅಡಿ ಅಗಲ ಆಳದ ಗುಂಡಿ ತೆಗೆದು ಪ್ರತಿ 7 ಅಡಿಗೆ ಒಂದರಂತೆ ಸಸಿಗಳನ್ನು ನಾಟಿ ಮಾಡಲಾಗಿದೆ. ಹತ್ತು ವರ್ಷಕ್ಕೆ ಸುಮಾರು 25 ಅಡಿಗಳಿಗೂ ಹೆಚ್ಚು ಉದ್ದ ಬೆಳೆಯುವ ಈ ತಳಿಯ ಮರದ ಗತರ್್ ಒಂದು ಮೀಟರ್ಗೂ ಮಿಗಿಲಾಗಿ ಇರುತ್ತದೆ. ಇಂತಹ ಗಿಡಮರಗಳನ್ನು ಜಮೀನಿನ ಬದುಗಳಲ್ಲಿ ನಮ್ಮ ರೈತರು ಬೆಳೆದುಕೊಳ್ಳುವುದರಿಂದ ಸಾಕಷ್ಟು ಆದಾಯಗಳಿಸಬಹುದು. ಅಲ್ಲದೆ ಮುಂದೊಂದು ದಿನ ಪರಿಶಯದ್ಧವಾದ ಗಾಳಿಯನ್ನು ಮಾರಾಟ ಮಾಡುವ ಜಾಲ ಸೃಷ್ಠಿಯಾಗುತ್ತದೆ. ನೀರನ್ನು ಬಾಟಲ್ನಲ್ಲಿ ಮಾರುವಂತೆ ಗಾಳಿಯನ್ನು ಮಾರಾಟಮಾಡುವ ಕಾಲ ಬರುತ್ತದೆ. ಇಂತಹ ಸಂಕಷ್ಟದಿಂದ ಪಾರಾಗಲು ನಮ್ಮ ರೈತರು ಬದುಗಳಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಿಕೊಳ್ಳುವುದರಿಂದ ಮುಂದೊಂದು ದಿನ ಅವು ಸಾಕಷ್ಟು ಕಾಸು ತರಬಲ್ಲ ಆಸ್ತಿಗಳಾಗುತ್ತವೆ ಎನ್ನುತ್ತಾರೆ ಕೃಷ್ಣರಾವ್. ಆಸಕ್ತರು ಇವರನ್ನು ಮೊ.8762031704 ಸಂಪಕರ್ಿಸಬಹುದು.