ಸಕ್ಕರೆ ನಾಡಿನಲ್ಲಿ ಹರಿಯಿತು ಕ್ಷೀರಧಾರೆ
ಶ್ರೀಹರಿ ಗೋಕುಲ್ ಫಾರಂನಲ್ಲಿ ಕೇಳಿದ ಮೋಹನ ರಾಗ
ಹೈನುಗಾರಿಕೆ ತಕ್ಷಣ ಆದಾಯ ತರಬಲ್ಲಂತಹ ಕೃಷಿಯ ಉಪಕಸುಬು. ಇತ್ತೀಚಿಗೆ ಹೈನುಗಾರಿಕೆ ಪ್ರಧಾನ ಕಸುಬಾಗಿದೆ. ಇದರಲ್ಲಿ ಯಶಸ್ಸು ಕಂಡವರು ಇದ್ದಾರೆ ಹಾಗೆಯೆ ನಷ್ಟ ಅನುಭವಿಸಿದವರು ಇದ್ದಾರೆ. ಹೈನುಗಾರಿಗೆ ಮುಂದಾಗುವವರು ಶೆಡ್ ನಿಮರ್ಾಣ ಸೇರಿದಂತೆ, ಮಿಲ್ಕ್ ಮೆಷಿನ್, ಚಾಪರ್ ಕಟಿಂಗ್ ಮತ್ತಿತರ ಯಂತ್ರೋಪಕರಣಗಳಿಗೆ ಹೆಚ್ಚು ಹಣ ವ್ಯಹಿಸಿ ಹಸುಗಳನ್ನು ತರಲು ಹಣವಿಲ್ಲದೆ ಪರದಾಡುತ್ತಾರೆ. ಆದರೆ ಮಂಡ್ಯ ಜಿಲ್ಲೆಯ ಕೊಡಿಯಾಲ ಗ್ರಾಮದ ಪದವಿಧರ ಮೋಹನ್ ಹಂತ ಹಂತವಾಗಿ ಹೈನುಗಾರಿಕೆಯಲ್ಲಿ ಹೇಗೆ ಮೇಲೆ ಬಂದರು ಎಂಬ ಯಶೋಗಾಥೆಯನ್ನು ಕೇಳಿದರೆ ಕಡಿಮೆ ಖಚರ್ು ಬಳಸಿ ಹೇಗೆ ಹೈನುಗಾರಿಕೆ ಮಾಡಬಹುದು ಎಂಬ ಬಗ್ಗೆ ಗೊತ್ತಾಗುತ್ತದೆ.
------------------------------------
ಮಂಡ್ಯ : ಕೃಷಿ ಕ್ಷೇತ್ರದತ್ತ ಇತ್ತೀಚಿನ ದಿನಮಾನಗಳಲ್ಲಿ ಸಾಫ್ಟವೇರ್ ಎಂಜಿನಿಯರ್ಗಳು, ವಿದ್ಯಾವಂತ ತರುಣರು ಏನಾದರೂ ಹೊಸತು ಸಾಧಿಸುವ ಆಸೆಯಿಂದ ಹೆಚ್ಚು ಹೆಚ್ಚು ಆಸಕ್ತಿವಹಿಸಿ ಬರುತ್ತಿದ್ದಾರೆ. ಇಂತಹವರ ಸಾಧನೆಗೆ ಇಲ್ಲಿ ಸವಾಲುಗಳು ಮತ್ತು ಸಾಧ್ಯತೆಗಳು ಇವೆ. ಸಾಮಾನ್ಯವಾಗಿ ಈ ಕ್ಷೇತ್ರದತ್ತ ಬರುವ ಇಂತಹರು ಮೊದಲ ಆಯ್ಕೆ ಹೈನುಗಾರಿಕೆಯಾಗಿರುತ್ತದೆ. ಆದರೆ ಪಶುಪಾಲನೆಯ ನಿರ್ವಹಣೆಯ ಕೊರತೆ ಮತ್ತು ಸ್ಪಷ್ಟ ಮಾಹಿತಿಯ ಕೊರತೆಯಿಂದ ನಷ್ಟ ಅನುಭವಿಸಿ ಭ್ರಮನಿರಸನ ಹೊಂದುವವರೆ ಹೆಚ್ಚು.
ಇಲ್ಲೊಬ್ಬ ವಿದ್ಯಾವಂತ ವೈಜ್ಞಾನಿಕವಾದ ರೀತಿಯಲ್ಲಿ ಹೈನುಗಾರಿಕೆ ಮಾಡಿ ಮಾಸಿಕ ಸರಾಸರಿ ಒಂದು ಲಕ್ಷಕ್ಕೂ ಹೆಚ್ಚು ಆದಾಯಗಳಿಸುವ ಮೂಲಕ ಹೈನುಗಾರಿಕೆಯಲ್ಲಿ ಆಸಕ್ತಿಹೊಂದಿರುವವರಿಗೆ ಭರವಸೆಯ ಬೆಳಕಾಗಿದ್ದಾರೆ. ಇವರೇ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೊಡಿಯಾಲ ಗ್ರಾಮದ ಬಿಎಸ್ಸಿ ಅಗ್ರಿಕಲ್ಚರ್ ಪದವಿಧರ ಮೋಹನ್.
ಶ್ರೀಹರಿ ಗೋಕಲ್ ಫಾಮರ್್ನಲ್ಲಿ ಸಧ್ಯ ಐವತ್ತು ರಾಸು ಹಸುಗಳಿವೆ. ಇದರಲ್ಲಿ ಇಪ್ಪತ್ತಆರು ಹಸುಗಳು ಹಾಲು ಹಿಂಡುತ್ತಿವೆ. ಉಳಿದ ಇಪ್ಪತ್ತಾರು ಹಸುಗಳು ಗರ್ಭ ಧರಿಸಿ ಕರು ಹಾಕುವ ಹಂತದಲ್ಲಿವೆ. ಪ್ರತಿದಿನ ನಾಲ್ಕು ನೂರು ಲೀಟರ್ ಹಾಲು ಕರೆದು ಮನ್ಮುಲ್ ಡೈರಿಗೆ ಸರಬರಾಜು ಮಾಡಲಾಗುತ್ತದೆ. ಪ್ರತಿ ಲೀಟರ್ ಹಾಲಿಗೆ ಡೈರಿಯಿಂದ ಕೊಡುವ ಇಪ್ಪತ್ತೊಂದು ರೂಪಾಯಿ ಜತೆಗೆ ಸರಕಾರ ನೀಡುವ ಸಹಾಯ ಧನ ನಾಲ್ಕು ರೂಪಾಯಿ ಸೇರಿ ಒಟ್ಟು ಇಪ್ಪತ್ತೈದು ರೂಪಾಯಿ ಇವರಿಗೆ ಸಿಗುತ್ತದೆ. ಪ್ರತಿವಾರಕ್ಕೊಮ್ಮೆ ಹಣ ಕೈ ಸೇರುತ್ತದೆ. ಒಟ್ಟು ಆದಾಯದಲ್ಲಿ ಶೇಕಡಾ ಅರವತ್ತಷ್ಟು ರಾಸುಗಳ ನಿರ್ವಹಣೆಗೆ ವೆಚ್ಚವಾದರೆ ಉಳಿಕೆ ಶೇಕಡಾ ನಲವತ್ತರಷ್ಟು ಆದಾಯ ನಿಶ್ಚಿತ ಎಂದು ಮೋಹನ್ ನಿಕರವಾಗಿ ಖಚ್ಚರ್ು ಮತ್ತು ಆದಾಯದ ಬ್ಯಾಲೆನ್ಸ್ ಶೀಟ್ ಕೊಡುತ್ತಾರೆ.
ಕಳೆದ ಎರಡು ವರ್ಷಗಳಿಂದಲ್ಲೂ ಮನಮುಲ್ ನೀಡುವ ಅತ್ಯುತ್ತಮ ಹಾಲು ಉತ್ಪಾದಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿರುವ ಮೋಹನ್ ಮಾದರಿ ಹೈನು ಉದ್ಯಮಿಯಾಗಿ ರೂಪುಗೊಂಡಿದ್ದು ಯುವ ಜನಾಂಗಕ್ಕೆ ಸ್ಫೂತಿಯಾಗಿದ್ದಾರೆ.
2001 ರಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಮುಗಿಸಿದ ಮೋಹನ್ ಕೆಲ ಕಾಲ ಮಂಡ್ಯದ ಮೈಶುಗರ್ ಕಾಖರ್ಾನೆಯಲ್ಲಿ ಕೇನ್ ಸೂಪರ್ವೈಸರ್ ಆಗಿ ವೃತ್ತಿ ಮಾಡಿದರು. ಬಾಲ್ಯದಿಂದಲೂ ವ್ಯವಸಾಯದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಸಕ್ಕರೆ ಕಾಖರ್ಾನೆ ವೃತ್ತಿಯ ಏಕತಾನತೆಯಿಂದ ಬೇಸರವಾಗಿ ಸ್ವಂತ ಉದ್ಯಮವೊಂದನ್ನು ಆರಂಭಿಸಲು ತೀಮರ್ಾನ ಕೈಗೊಳ್ಳುತ್ತಾರೆ. ಆಗ ಇವರಿಗೆ ಹೊಳೆದದ್ದೆ ಹೈನುಗಾರಿಕೆ.
ನಿಶ್ಚಿತವಾದ ಆದಾಯ.ಮಳೆ ಮತ್ತು ಹವಾಮಾನದಂತಹ ಪ್ರತಿಕೂಲಗಳನ್ನು ತಡೆಯಬಲ್ಲಂತಹ ಉದ್ಯಮ ಎಂದರೆ ಹೈನೋದ್ಯಮ ಎಂಬ ಸತ್ಯವನ್ನು ಕಂಡುಕೊಂಡ ಮೋಹನ್ 2009ರಲ್ಲಿ ಎಂಟು ಹಸುಗಳನ್ನು ಸ್ಥಳೀಯವಾಗಿ ಖರೀದಿಸಿ ಹೈನುಗಾರಿಕೆ ಆರಂಭಿಸುತ್ತಾರೆ. ಈಗ ಅವರ ಬಳಿ 50 ರಾಸುಗಳಿವೆ. ಕರುಗಳನ್ನು ಆಗಾಗ ಮಾರಾಟ ಮಾಡುವುದರಿಂದಲ್ಲೂ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ.
ಸರಳ ತಂತ್ರಜ್ಞಾನ : ಮೋಹನ್ ಅವರ ಅನುಭವದ ಪ್ರಕಾರ ಸಾಮಾನ್ಯವಾಗಿ ಹೈನೋದ್ಯಮಕ್ಕೆ ಬರುವ ವಿದ್ಯಾವಂತರು ಶೆಡ್ ನಿಮರ್ಾಣಕ್ಕೆ ಹೆಚ್ಚು ಹಣ ಖಚರ್ು ಮಾಡಿಬಿಡುತ್ತಾರೆ. ಇದರಿಂದಾಗಿ ಹಸು ತರಲು ಹಣವಿಲ್ಲದೆ ತೊಂದರೆ ಅ ನುಭವಿಸುತ್ತಾರೆ. ಇವರು ಅತಿ ಕಡಿಮೆ ವೆಚ್ಚದಲ್ಲಿ ಸುತ್ತ ಯಾವುದೇ ಗೋಡೆ ನಿಮರ್ಿಸದೆ ಉದ್ದಕ್ಕೂ ಕಲ್ನಾರ್ಶೀಟ್ ಹಾಕಿ ರಾಸುಗಳನ್ನು ಕಟ್ಟಲು ಶೆಡ್ ನಿಮರ್ಾಣ ಮಾಡಿಕೊಂಡಿದ್ದಾರೆ. ಇದರಿಂದಾಗಿ ರಾಸುಗಳಿಗೆ ಗಾಳಿ ಬೆಳಕು ಸಮೃದ್ಧವಾಗಿ ಸಿಗುತ್ತದೆ. ನೆಲಹಾಸಿಗೆ ಸಿಮೆಂಟ್ ಗಾರೆ ಹಾಕಿದ್ದು ರಾಸುಗಳಿಗೆ ರಬ್ಬರ್ ಬೆಡ್ಗಳನ್ನು ಹಾಕಿದ್ದಾರೆ. (ಪ್ರತಿ ರಾಸಿನ ಹಾಸಿಗೆಯ ಬೆಲೆ 2400 ರೂಪಾಯಿಗಳು). ಇದರಿಂದಾಗಿ ರಾಸುಗಳಿಗೆ ಬರುವ ಕೆಚ್ಚಲು ಬಾವು ಮತ್ತಿತರರ ರೋಗಗಳು ನಿಯಂತ್ರಣವಾಗಿದೆ ಎ ನ್ನುತ್ತಾರೆ.
ಹಾಲು ಕರೆಯಲು ಎರಡು ಕ್ಯಾನಿನ ಮೆಶಿನ್ ಬಳುಸುತ್ತಾರೆ.ಇದರಿಂದ ಕಡಿಮೆ ಅವಧಿಯಲ್ಲಿ ಇಬ್ಬರು ಕೆಲಸಗಾರರು ಒಂದು ಬಾರಿಗೆ 200 ಲೀಟರ್ ಹಾಲು ಹಿಂಡುತ್ತಾರೆ.
ರಾಸುಗಳ ಮೂತ್ರ ಸರಾಗವಾಗಿ ಹರಿದು ಹೋಗಿ ಒಂದು ತೊಟ್ಟಿಯಲ್ಲಿ ಶೇಖರಣೆಯಾಗುತ್ತದೆ.ಇದನ್ನು ರಾಸುಗಳಿಗೆ ಹುಲ್ಲು ಬೆಳೆಯಲು ರಸಾವರಿಯಾಗಿ ಬಳಕೆಮಾಡಿಕೊಳ್ಳಲಾಗುತ್ತದೆ. ನೆಲಕ್ಕೆ ಬಿದ್ದ ಸಗಣಿಯನ್ನು ಸಲಕರಣೆಯ ಮೂಲಕ ಬಾಚಿ ಒಂದು ಕಡೆ ಸುರಿಯಲಾಗುತ್ತದೆ. ಇತ್ತೀಚಿನವರೆಗೂ ತಮಗೆ ಬೇಕಾದಷ್ಟು ಸಗಣಿ ಬಳಸಿಕೊಂಡು ಉಳಿಕೆ ಮಾರಾಟಮಾಡಿ ಅದರಲ್ಲೂ ಆದಾಯ ಗಳಿಸುತ್ತಿದ್ದ ಮೋಹನ್ ಈಗ ಎರೆಹುಳು ಗೊಬ್ಬರ ಘಟಕ ನಿಮರ್ಾಣಕ್ಕೆ ಯೋಜನೆ ಸಿದ್ಧ ಪಡಿಸಿಕೊಂಡಿದ್ದಾರೆ. ಇದಲ್ಲದೆ ತಮ್ಮದೇ ಆದ ಬ್ರಾಂಡ್ಮಾಡಿ ಹಾಲನ್ನು ಮಾರುಕಟ್ಟೆಗೆ ಬಿಡಲು ಆಲೋಚಿಸುತ್ತಿದ್ದಾರೆ.
ಪಶು ಆಹಾರದ ಪ್ರಾಮುಖ್ಯತೆ : 10 ರಿಂದ 15 ಲೀಟರ್ ಹಾಲು ಕೊಡುವ ರಾಸಿಗೆ ಪ್ರತಿದಿನ 25 ರಿಂದ 30 ಕೆಜಿ ಹಸಿರು ಮೇವು ಜತೆಗೆ 2 ರಿಂದ 3 ಕೆಜಿ ಪಶು ಆಹಾರ ಕೊಡಬೇಕು. ಆರಂಭದಲ್ಲಿ ಬೇರೆ ಬೇರೆ ಕಂಪನಿಯವರು ತಯಾರು ಮಾಡುತ್ತಿದ್ದ ಪಶು ಆಹಾರವನ್ನು ನೀಡಲಾಗುತ್ತಿತ್ತು.ರವೆಬೂಸ, ಎಲೆಬೂಸ ಇಂತಹವುಗಳಲ್ಲಿ ರಾಸುಗಳಿಗೆ ಬೇಕಾದ ನ್ಯೂಟ್ರೀಶಿಯನ್ ಸಿಗದೆ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಇದರಿಂದ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗಿ ಲಾಭ ಕಡಿಮೆ ಬರುತ್ತಿತ್ತು.
ಇದಕ್ಕಾಗಿ ಇವರು ಸರಳ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.ತಮ್ಮ 10 ಎಕರೆ ಜಮೀನಿನಲ್ಲಿ ಮುಸುಕಿನ ಜೋಳವನ್ನು ಪಶು ಆಹಾರಕ್ಕಾಗಿಯೇ ಬೆಳೆಯಲಾಗುತ್ತಿದ್ದು, ಜೊತೆಗೆ ಎರಡು ಎಕರೆಯಲ್ಲಿ ಕೋ 4 ತಳಿಯ ಹುಲ್ಲನ್ನು ಬೆಳೆಯಲಾಗಿದೆ. ಮುಸುಕಿನ ಜೋಳದ ಕಡ್ಡಿಯನ್ನು ಕಾಳು ಹಾಲುಗೂಡಿದಾಗ ಅಂದರೆ 60 ರಿಂದ 75 ದಿನಗಳಾದಾಗ ಕಟಾವುಮಾಡಿ ಪ್ರತಿ ರಾಸಿಗೆ ದಿನಕ್ಕೆ 40 ಕೆಜಿ ಪ್ರಮಾಣದಲ್ಲಿ ಕೊಡುತ್ತಾರೆ.ಜತೆಗೆ ಬೆಳಗ್ಗೆ ಮತ್ತು ಸಂಜೆ ತಲಾ 2 ಕೆಜಿ ಪ್ರಮಾಣದಲ್ಲಿ ಟಿಎಂಆರ್ ಎಂಬ ದ್ವಿದಳ ಧಾನ್ಯಗಳಿಂದ ಮಾಡಿದ ನ್ಯೂಟ್ರಿಶಿಯನ್ ಆಹಾರವನ್ನು ಕೊಡಲಾಗುತ್ತಾದೆ.
ಇದರಿಂದ ರಾಸುಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಲಿನ ಇಳುವರಿಯೂ ಹೆಚ್ಚಳವಾಗಿ, ಎಸ್ಎನ್ಎಫ್ ಪ್ರಮಾಣವು ಅಧಿಕವಾಗಿ ರಾಸುಗಳು ಲವಲವಿಕೆಯಿಂದ ಇರುತ್ತವೆ.ಪ್ರತಿದಿನ 20 ಲೀಟರ್ ಹಾಲು ಕೊಡುವ ರಾಸಿಗೆ ದಿನಕ್ಕೆ 180 ರೂ ಖಚರ್ು ಮಾಡಲಾಗುತ್ತದೆ ಎನ್ನುತ್ತಾರೆ ಮೋಹನ್.
ರಾಸುಗಳಿಗೆ ನೀಡುವ ಟಿಎಂಆರ್ ಪಶು ಆಹಾರವನ್ನು ಇವರು ಹೈದರಬಾದ್ನಿಂದ ತರುತ್ತಾರೆ. ಇವರಿಂದ ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹೈನುಗಾರಿಕೆ ಮಾಡುತ್ತಿರುವ ರೈತರು ಪಶು ಆಹಾರವನ್ನು ಖರೀದಿಸಿ ಉತ್ತಮ ಫಲಿತಾಂ ಶವನ್ನು ಪಡೆಯುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕು ಹುಂಡಿಪುರ ಗ್ರಾಮದಲ್ಲಿ ಹೈನುಗಾರಿಕೆ ಮಾಡುತ್ತಿರುವ ಯುವ ರೈತ ಈಶ ಇಲ್ಲಿಂದಲ್ಲೇ ಟಿಎಂಆರ್ ಆಹಾರ ಖರೀದಿಸಿ ಬಳಸುತ್ತಿದ್ದು ಉತ್ತಮ ಫಲಿತಾಂಶ ಪಡೆದಿರುವುದಾಗಿ ಹೇಳುತ್ತಾರೆ.
ರಾಸುಗಳ ಖರೀದಿಯಲ್ಲಿ ಎಚ್ಚರ : ಮೊದಲ ಹಂತದಲ್ಲಿ ರಾಸುಗಳ ಖರೀದಿಯಲ್ಲಿ ಮುನ್ನಚ್ಚರಿಕೆವಹಿಸುವುದು ತುಂಬಾ ಮುಖ್ಯ. ನಂತರ ಪಶು ಆಹಾರದ ಆಯ್ಕೆ ಮತ್ತು ರಾಸುಗಳಿಗೆ ಬೇಕಾದ ಹಸಿರು ಮೇವು ಬೆಳೆದುಕೊಳ್ಳುವಲ್ಲಿ ಜಾಣ್ಮೆವಹಿಸಬೇಕು. ಗಾಳಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸೂಕ್ತರೀತಿಯಲ್ಲಿ ಕಲ್ಪಿಸಬೇಕು. ರಾಸುಗಳಿಗೆ ಸಾಕಷ್ಟು ಕುಡಿಯುವ ನೀರು ಇರಬೇಕು. ಕಾಲಕಾಲಕ್ಕೆ ರಾಸುಗಳಿಗೆ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಕೊಡಿಸಿಕೊಂಡರೆ ಹೈನುಗಾರಿಕೆಯಿಂದ ಉತ್ತಮ ಆದಾಯಗಳಿಸಿ ನೆಮ್ಮದಿಯಾಗಿರಬಹುದು ಎಂದು ಮೋಹನ್ ಹೆಮ್ಮಯಿಂದ ಹೇಳುತ್ತಾರೆ.
ಆಸಕ್ತರು ಇವರ ಶ್ರೀಹರಿ ಗೋಕಲ ಫಾಮರ್್ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಮೈಸೂರಿನಿಂದ ಎಲಿಯೂರು ಸರ್ಕಲ್ಗೆ ಹೋದರೆ ಅಲ್ಲಿಂದ ಬಲಕ್ಕೆ ತಿರುಗಿದರೆ 4 ಕಿ.ಮೀ.ಅಂತರದಲ್ಲಿ ಹುಣಸಹಳ್ಳಿ ಸಿಗುತ್ತದೆ, ಅಲ್ಲಿ ಕೊಡಿಯಾಲಕ್ಕೆ ಹೋಗುವ ಮಾರ್ಗದಲ್ಲಿ ಇವರ ಡೈರಿ ಫಾಮರ್್ ಇದೆ. ಇವರ ದೂರವಾಣಿ ಸಂಖ್ಯೆ 9449964181.
-----------------------------------------

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ