ಮರೆಯಲಾಗದ ಮಹಾನ್ ಸಾಧಕ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ
ಒಣಭೂಮಿಯಲ್ಲೂ ತೋಟಗಾರಿಕೆ ಕ್ರಾಂತಿಮಾಡಿದ ಹರಿಕಾರ
ಕೋಲಾರ ಜಿಲ್ಲೆಯಲ್ಲಿ ಮಾವು.ಮೈಸೂರಿನ ಸುತ್ತಮುತ್ತ ಬಾಳೆ. ಹಾಸನ ಜಿಲ್ಲೆಯಲ್ಲಿ ಆಲುಗಡ್ಡೆ.ಬೆಳಗಾವಿ,ವಿಜಯಪುರ,ಕಲಬುಗರ್ಿಯಲ್ಲಿ ದ್ರಾಕ್ಷಿ .ದಕ್ಷಿಣ ಕನ್ನಡದಲ್ಲಿ ಕೋಕೋ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿಯಲ್ಲಿ ತರಕಾರಿ ಹೀಗೆ ಆಯಾಯ ಪ್ರದೇಶದ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹನೀಡಿ ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುವ ವಿಶೇಷ ವಲಯಗಳನ್ನು ರೂಪಿಸಿದ ಮಹಾನ್ ಸಾಧಕ, ತೋಟಗಾರಿಕೆಯ ಪಿತಾಮಹ ಡಾ.ಎಂ.ಎಚ್.ಮರೀಗೌಡರು.
ಭಾರತ ದೇಶದ ತೋಟಗಾರಿಕೆ ಅಭಿವೃದ್ಧಿಗೆ ವಿವಿಧ ಮಾದರಿಗಳನ್ನು ರೂಪಿಸಿಕೊಟ್ಟು, ಕನರ್ಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಡಾ.ಎಂ.ಎಚ್.ಮರೀಗೌಡರು ಕನರ್ಾಟಕದವರು,ಅದರಲ್ಲೂ ಮೈಸೂರು ಜಿಲ್ಲೆಯವರು ಎನ್ನುವುದೇ ಹಮ್ಮೆಯ ವಿಷಯ.
ಇಂತಹ ಮಹಾನ್ ಸಾಧಕನ ನೂರೊಂದನ್ನೆ (101) ಜನ್ಮ ದಿನಾಚರಣೆ ಅಗಸ್ಟ್ 8 ರಂದು ಸದ್ದಿಲ್ಲದೆ ನಡೆದುಹೋಯಿತು. ಮೈಸೂರು ತೋಟಗಾರಿಕಾ ವಿಶ್ವ ವಿದ್ಯಾನಿಲಯದಲ್ಲಿ ಮರೀಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಅರಿಶಿನ ಕೃಷಿಯ ಸುಧಾರಿತ ತಂತ್ರಜ್ಞಾನಗಳನ್ನು ಕುರಿತ ತರಬೇತಿ ಕಾರ್ಯಕ್ರಮ ನಡೆದಿರುವುದನ್ನು ಬಿಟ್ಟರೆ ಅಂತಹ ಯಾವ ಮಹತ್ವದ ಕಾರ್ಯಕ್ರಮಗಳು ನಮ್ಮಲ್ಲಿ ನಡೆದಂತೆ ಕಾಣಲಿಲ್ಲ. ಅಗಸ್ಟ್ 8 ರಿಂದ 15ರ ವರೆಗೂ ಮರೀಗೌಡರ ನೆನಪಿನಲ್ಲಿ ಸರಕಾರ ತೋಟಗಾರಿಕಾ ಸಪ್ತಾಹ ಆಚರಿಸಲಾಗುತ್ತಿದೆ. ರಾಜಕೀಯ ಹಿನ್ನೆಲೆಯ ಸಾಧಕರನ್ನು ತಲೆಯ ಮೇಲೆ ಹೊತ್ತು ಮೆರೆಸುವ ಇಂದಿನ ಪೀಳಿಗೆ ಮರೀಗೌಡರನ್ನು ಮರೆತಂತೆ ಕಾಣುತ್ತಿದೆ.
ತೋಟಗಾರಿಕೆ,ಒಣಭೂಮಿ ಬೇಸಾಯ, ಹವಾಮಾನ ಆಧಾರಿತ ಸಮಗ್ರ ಬೆಳೆ ಪದ್ಧತಿಗಳ ಬಗ್ಗೆ 70 ವರ್ಷಗಳ ಹಿಂದೆಯೇ ರೈತರಲ್ಲಿ ಅರಿವು ಮೂಡಿಸಿದ ಮಹಾನ್ ಸಾಧಕನನ್ನು ನೆನಪು ಮಾಡಿಕೊಳ್ಳುವುದು ಈ ಅಂಕಣ ಬರೆಹದ ಉದ್ದೇಶ.
ಎಪ್ಪತ್ತು ವರ್ಷಗಳ ಹಿಂದೆ ರಾಜ್ಯದ ಪ್ರಮುಖ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ ಹಣ್ಣುಗಳೆಂದರೆ ಬಾಳೆ ಮತ್ತು ಮಾವಿನ ಹಣ್ಣುಗಳು ಮಾತ್ರ. ಅವು ಕೂಡ ಕಡಿಮೆ ಪ್ರಮಾಣದಲ್ಲಿದ್ದು ಜನ ಸಾಮಾನ್ಯರ ಕೈಗೆಟುಕುತ್ತಿರಲಿಲ್ಲ.ಸಾಂಬಾರ ಬೆಳೆ,ತೋಟಗಾರಿಕೆ,ಪುಷ್ಪ ಕೃಷಿ ಮಾಡುವವರು ಶ್ರೀಮಂತರು ಮಾತ್ರ. ಬಡ ರೈತನಿಂದ ಅದು ಸಾಧ್ಯವಾಗದ ಮಾತು ಎಂಬ ಪರಿಸ್ಥಿತಿ ಇದ್ದ ಕಾಲ ಅದು .ಅಂತಹ ಸಮಯದಲ್ಲಿ ಅಮೇರಿಕಾದ ಪ್ರಸಿದ್ಧ ಹಾರ್ವಡರ್್ ವಿಶ್ವ ವಿದ್ಯಾನಿಲಯದಿಂದ ತೋಟಗಾರಿಕೆಯಲ್ಲಿ ಡಾಕ್ಟರೇಟ್ ಪದವಿ ಪಡೆದು ದೇಶಕ್ಕೆ ಮರಳಿ ಕನರ್ಾಟಕದಲ್ಲಿ ಅರ್ಧ ಎಕರೆ ಜಮೀನು ಇರುವ ಬಡ ರೈತ ಕೂಡ ತೋಟಗಾರಿಕೆ ಮಾಡಬಹುದು ಎಂದು ತೋರಿಸಿಕೊಟ್ಟವರು ಡಾ.ಎಂ.ಎಚ್.ಮರೀಗೌಡರು ಎಂದು ನೆನಪಿಸಿಕೊಳ್ಳುತ್ತಾರೆ ಅವರೊಂದಿಗೆ ಕೆಲಸಮಾಡಿ ನಿವೃತ್ತರಾಗಿರುವ ಮತ್ತೊಬ್ಬ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿ.
ಕೋಲಾರ,ಚಿಕ್ಕಬಳ್ಳಾಪುರ ಸುತ್ತಮುತ್ತ 1950 ಕ್ಕೆ ಮುಂಚೆ ಮಾವು,ಹಲಸು,ಜಂಬು ನೇರಳೆ ಬೆಳೆಗಳು ಇರಲಿಲ್ಲ. ಇಂತಹ ಒಣ ಪ್ರದೇಶಕ್ಕೆ ಅಂತಹ ಬೆಳೆಗಳನ್ನು ತಂದು ಪರಿಚಯಿಸಿದವರು ಮರೀಗೌಡರು.ಅಲ್ಲಿನ ಮಾವು,ಹಲಸು ಗಿಡಗಳಿಗೆ ಹೆಚ್ಚೆಂದರೆ 50 ರಿಂದ 65 ವರ್ಷಗಳಷ್ಟು ವಯಸ್ಸಾಗಿದೆ ಅಷ್ಟೇ. ಈಗ ಚಾಮರಾಜನಗರ ಜಿಲ್ಲೆ ಕೋಲಾರಕ್ಕಿಂತಲ್ಲೂ ಭೀಕರವಾದ ಬರವನ್ನು ಎದುರಿಸುತ್ತಿದೆ. ಆ ಕಾರಣಕ್ಕಾಗಿ ಒಣಭೂಮಿ ತೋಟಗಾರಿಕೆಯ ಕಡೆ ಗಮನಕೊಟ್ಟು ಗೋಡಂಬಿ,ಮಾವು,ಅಲಸು,ನೇರಳೆ,ಹುಣಸೆ,ಸೀಬೆ,ಸಪೋಟ, ರಾಮಫಲ,ಸೀತಾಫಲ, ಬೇಲದಂತಹ ಹಣ್ಣಿನ ಗಿಡಗಳನ್ನು ಬೆಳೆಯಲು ರೈತರು ಮುಂದಾಗದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಹಿತ್ತಲಮನಿ ಎಚ್ಚರಿಕೆ ನೀಡುತ್ತಾರೆ.
ಇಂತಹ ಹತ್ತು ಹಲವು ಸಾಧ್ಯತೆಗಳನ್ನು ಮಾಡಿ ತೋರಿಸಿದ ಡಾ.ಎಂ.ಎಚ್.ಮರೀಗೌಡರು ಹುಟ್ಟಿದ್ದು ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಮಾರನಗೌಡನಹಳ್ಳಿಯಲ್ಲಿ. ಬನ್ನೂರು,ಮೈಸೂರು,ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿ ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದು 1942 ರಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದರು.ಲಂಡನ್ನಿನ ಕ್ಯೂಗಾರ್ಡನ್ ಅವರೊಂದಿಗೆ ಸಸ್ಯ ಬೀಜ ವಿನಿಮಯ ಆರಂಭಿಸಿದರು. ಅಮೇರಿಕಾದ ಹಾರ್ವಡರ್್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದು 1951 ರಲ್ಲಿ ಭಾರತಕ್ಕೆ ಮರಳಿ ರಾಜ್ಯದ ತೋಟಗಾರಿಕೆ ಇಲಾಖೆ ಅದ್ಯಕ್ಷ ಸ್ಥಾನಕ್ಕೆ ನೇಮಕವಾದರು.
1965 ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆಯನ್ನು ಬೇರ್ಪಡಿಸಿ ಪುನರ್ರಚನೆ ಮಾಡಿದಾಗ ಅದರ ಪ್ರಥಮ ನಿದರ್ೇಶಕರಾದ ಮರಿಗೌಡರು ಜಿಲ್ಲೆ,ತಾಲೂಕು,ಹೋಬಳಿ ಮಟ್ಟದಲ್ಲಿ ತೋಟಗಾರಿಕೆ ಇಲಾಖೆಯನ್ನು ಅಸ್ತಿತ್ವಕ್ಕೆ ತರುವ ಮೂಲಕ ಜನಸಾಮನ್ಯರ ಮನೆಯ ಬಾಗಿಲಿಗೆ ಹಣ್ಣಿನ ಗಿಡಗಳು ತಲುಪುವಂತೆ ಮಾಡಿದರು.
ಮರೀಗೌಡರು ನಿದೇರ್ಶಕರಾಗಿದ್ದಾಗ "ಹಣ್ಣಿನ ಗಿಡಗಳನ್ನು ರೈತರ ಕಣ್ಣಿಗೆ ಬೀಳುವಂತೆ ರಸ್ತೆಯ ಬದಿಯಲ್ಲಿ ಇಟ್ಟು ಹೋಗುವಂತೆ ತಮ್ಮ ಇಲಾಖೆಯವರಿಗೆ ಹೇಳುತ್ತಿದ್ದರಂತೆ. ಆ ಗಿಡಗಳನ್ನು ಇಲಾಖೆಗೆ ಬರಲು ಆಗದ ರೈತರು ತೆಗೆದುಕೊಂಡು ಹೋಗಿ ತಮ್ಮ ಜಮೀನುಗಳಲ್ಲಿ ಹಾಕಿಕೊಳ್ಳಲ್ಲಿ ಎನ್ನುವುದು ಅವರ ಉದ್ದೇಶ" ಇದು ಈಗಲೂ ಅವರ ಬಗ್ಗೆ ಇರುವ ದಂತಕತೆ.
ಪೋರ್ ಲಿಂಬ್ಸ್ ಕಾನ್ಸೆಪ್ಟ್ : 1. ತೋಟಗಾರಿಕೆ ವಿಸ್ತರಣೆ ಮತ್ತು ಅಭಿವೃದ್ಧಿ 2.ಉದ್ಯಾನ ಕಲಾ ಸಂಘದ ಮೂಲಕ ತೋಟಗಾರಿಕಾ ಪ್ರದರ್ಶನ 3. ಮಾರುಕಟ್ಟೆ ನಿಮರ್ಾಣ ಮತ್ತು 4. ನರ್ಸರಿ ಮೆನ್ಸ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂದು ತೋಟಗಾರಿಕೆಯನ್ನು ನಾಲ್ಕು ವಿಭಾಗಗಳಾಗಿ ವಿಗಂಡಿಸಿ ಅವುಗಳ ಅಭಿವೃದ್ಧಿಗೆ ಆಧ್ಯತೆ ನೀಡಿದರು.
ರೈತರು ಮತ್ತು ಗ್ರಾಹಕರ ನಡುವೆ ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಲು ಮರೀಗೌಡರು 1959 ರಲ್ಲಿ ಆರಂಭಿಸಿದ ಹಾಫ್ಕಾಮ್ಸ್ ಮಳಿಗೆಗಳು ಈಗಲೂ ದಕ್ಷತೆಯಿಂದ ಕೆಲಸಮಾಡುತ್ತಿರುವುದನ್ನು ಎಲ್ಲಾಕಡೆ ಕಾಣಬಹುದಾಗಿದೆ. ಹಾಫ್ಕಾಮ್ಸ್ ಮಳಿಗೆಗಳು ಮರೀಗೌಡರ ಕನಸಿನ ಫಲ ಎನ್ನುವುದನ್ನು ಯಾರೂ ಮರೆಯಲಾಗದು.
ಬೆಂಗಳೂರಿನ ಲಾಲ್ಬಾಗ್ ಸೇರಿದಂತೆ 19 ಜಿಲ್ಲೆಗಳಲ್ಲಿ ತೋಟಗಾರಿಕೆ ವಿಸ್ತರಣಾ ಚಟುವಟಿಕೆಗಳನ್ನು ಆರಂಭಿಸಿದ ಮರೀಗೌಡರು ರಾಜ್ಯಾದ್ಯಂತ 357 ನರ್ಸರಿ ತೋಟಗಾರಿಕೆಯನ್ನು ಅರಂಭಿಸಿದರು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಂಡ್ಯ ಮತ್ತು ಚೆನ್ನಪಟ್ಟಣದ ಬಳಿ ಇರುವ ತೋಟಗಾರಿಕೆ ನರ್ಸರಿಗಳನ್ನು ನೀವು ಗಮನಿಸಿರಬಹುದು.ಇವೆಲ್ಲಾ ಮರೀಗೌಡರ ಕೊಡುಗೆ.
ಮೈಸೂರಿನ ಕೃಷ್ಣರಾಜ ಜಲಾಶಯ(ಕೆಆರ್ಎಸ್)ದಲ್ಲಿರುವ ಹಣ್ಣಿನ ತೋಟ ಮರೀಗೌಡರ ಕಲ್ಪನೆಯಲ್ಲಿ ಅರಳಿದ್ದು.
ರಾಷ್ಟ್ರಕವಿ ಕುವೆಂಪು ಮತ್ತು ಮರೀಗೌಡರಿಗೂ ಅವಿನಾಭಾವ ಸಂಬಂಧ ಇತ್ತು ಎಂದು ನೆನಪಿಸಿಕೊಂಡಿರುವ ಕುವೆಂಪು ಮಗಳು ತಾರಿಣಿ ಚಿದಾನಂದ್ ಅವರು "ಪುಷ್ಪಪ್ರೇಮಿ ಕುವೆಂಪು ಅವರು ಒಮ್ಮೆ ಮರೀಗೌಡರ ಬಳಿ `ಮ್ಯಾನ್ನೋಲಿಯಾ ಪ್ಲಾಂಟ್' ಬೇಕು ಎಂದು ಕೇಳಿಕೊಂಡಿದ್ದರು. ಮರೀಗೌಡರು ಅದನ್ನು ತಂದುಕೊಟ್ಟಾಗ ಅದನ್ನು ಏಳು ವರ್ಷಗಳ ಕಾಲ ಜತನದಿಂದ ಸಾಕಿ ಹೂ ಬಿಟ್ಟಾಗ ಸಂತಸಪಟ್ಟಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.
ರಾಜ್ಯದ ಎಲ್ಲೆಡೆ ತೋಟಗಾರಿಕೆ ತರಬೇತಿ ಕೇಂದ್ರಗಳನ್ನು ಆರಂಭಿಸಿ ಮಣ್ಣು,ನೀರು,ಬೀಜ ಪರೀಕ್ಷೆ ಲ್ಯಾಬ್ಗಳನ್ನು ಆರಂಭಿಸುವ ಮೂಲಕ ಆಯಾಯ ಹವಾಮಾನಕ್ಕೆ ತಕ್ಕಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದರು. 1958 ಇಂತಹ ಪ್ರಥಮ ತರಬೇತಿ ಕೇಂದ್ರವನ್ನು ಲಾಲ್ಬಾಗ್ನಲ್ಲಿ ತೆರೆದರು.ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ತಂತ್ರಜ್ಞಾನಗಳನ್ನು ಪರಿಚಯಿಸಿದರು.
ತೋಟಗಾರಿಕೆ ಇಲಾಖೆಯ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿರಿಸಿಕೊಂಡಿದ್ದ ಮರೀಗೌಡರು ಯಾರೇ ಇಲಾಖೆಗೆ ಹೋದರು ಗಿಡ ಹಾಕ್ತೀರಾ ಎಂದು ಕೇಳುತಿದ್ದರಂತೆ ! ಅಲ್ಲದೆ ಉಚಿತವಾಗಿ ಹಣ್ಣಿನ ಗಿಡಗಳನ್ನು ಕೊಡುತ್ತಿದ್ದರಂತೆ.
ಅತ್ಯಂತ ಸರಳ ಮತ್ತು ನೇರ ನಡೆನುಡಿಯ ವ್ಯಕ್ತಿತ್ವವನ್ನು ಹೋಂದಿದ್ದ ಗೌಡರು ಶಿರಾ ತಾಲೂಕಿನ ಬಳ್ಳಾರ ಎಂಬಲ್ಲಿ 1525 ಎಕರೆ ಪೈಕಿ 400 ಎಕರೆಯಲ್ಲಿ ತೆಂಗಿನ ಗಿಡಗಳನ್ನು ಹಾಕಿಸಿ 1525 ಎಕರೆಯಲ್ಲೂ ತೆಂಗು ಬೆಳೆಯಬಹುದು ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟರು.
ವಿಶೇಷವಾಗಿ ಖುಷ್ಕಿ ಮತ್ತು ಒಣಭೂಮಿ ತೋಟಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದ ಮರೀಗೌಡರ ನಿಷ್ಠೆ,ತ್ಯಾಗ,ಪರಿಶ್ರಮ ಮತ್ತು ಚಿಂತನೆಗಳಿಂದ ತೋಟಗಾರಿಕೆ ಇಲಾಖೆ ಒಂದು ಸ್ಪಷ್ಟ ರೂಪಪಡೆದುಕೊಂಡಿತು. ಹಲವಾರು ಪ್ರಯೋಗಶೀಲ ರೈತರಿಗೆ ಸ್ಫೂತರ್ಿಯಾದರು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತೋಟಗಾರಿಕೆ ಇಲಾಖೆಗಳು ಬರಲು ಕಾರಣಕರ್ತರಾದರು.
1974 ರಲ್ಲಿ ಮರೀಗೌಡರು ಸೇವೆಯಿಂದ ನಿವೃತ್ತರಾದ ಮೇಲೂ "ಡಾ.ಮರೀಗೌಡ ಮಿಷನ್ ಆಫ್ ಹಾರ್ಟಿಕಲ್ಚರ್ ಡೆವಲಫ್ಮೆಂಟ್" ಬೋಡರ್್ ಕ್ರೀಯಾಶೀಲವಾಗಿ ಕೆಲಸಮಾಡುತ್ತಿದೆ. 1993 ರಲ್ಲಿ ಭೌತಿಕವಾಗಿ ನಮ್ಮಿಂದ ಮರೀಗೌಡರು ದೂರವಾದರು ಅವರು ಹಾಕಿಕೊಟ್ಟ ಮಾರ್ಗ, ಕಲಿಸಿದ ಪಾಠಗಳಿಂದ ಲಕ್ಷಾಂತರ ರೈತರು, ಸಾವಿರಾರು ವಿಜ್ಞಾನಿಗಳು ಈಗಲೂ ತೋಟಗಾರಿಕೆಯಲ್ಲಿ ಸ್ಫೂತರ್ಿಯಿಂದ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ತೋಟಗಾರಿಕೆಯಲ್ಲಿ ಹೊಸ ಮೈಲಿಗಲ್ಲನ್ನೇ ಸೃಷ್ಠಿಸಿದ ಮರೀಗೌಡರಂತಹ ಮಹಾನ್ ಚೇತನವನ್ನು ರೈತರು ಮರೆಯಬಾರದಲ್ಲವೇ.ಒಣಭೂಮಿಯಲ್ಲೂ ಹಸಿರು ಚಿಮ್ಮಸಿ ಅವರ ನೆನಪನ್ನು ಹಸಿರಾಗಿಸೋಣ.ಸಧ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ