vaddagere.bloogspot.com

ಭಾನುವಾರ, ಜೂನ್ 18, 2017

            ಕಾಂಟೂರ್ ಕೃಷಿಕ ಸುಭಾಷ್ ಶರ್ಮ :                 ಸ್ವಾವಲಂಬಿ ಬದುಕಿಗೆ ಮೂರು ಪ್ರತಿಜ್ಞೆಗಳು
ಮೈಸೂರು : ಮೂವತ್ತು,ನಲವತ್ತು ವರ್ಷಗಳಿಂದ ರಾಸಾಯನಿಕ ಕೃಷಿ ಮಾಡುತ್ತಾ ಬಂದಿರುವ ಬಹುತೇಕ ರೈತರು ನೈಸಗರ್ಿಕ ಕೃಷಿಕರಾಗಿ ಬದಲಾಗಲು ಹಿಂಜರಿಕೆ ವ್ಯಕ್ತಪಡಿಸುತ್ತಾರೆ. ತಾವು ಈಗಾಗಲೆ ಕೃಷಿಯ ದೆಸೆಯಿಂದ ಲಕ್ಷಾಂತರ ರೂಪಾಯಿ ಸಾಲಗಾರರಾಗಿದ್ದು, ಈಗ ಸಹಜ ಕೃಷಿಕರಾಗಿ ಬದಲಾದರೆ ಸಾಲತೀರಿಸುವವರು ಯಾರು? ಎನ್ನುವುದು ಅವರ ಹಿಂಜರಿಕೆಗೆ ಇರುವ ಮುಖ್ಯ ಕಾರಣ.
ಸಾವಯವ ಕೃಷಿ ಮಾಡಿದರೆ ಇಳುವರಿ ಕಡಿಮೆ.ಕೀಟಬಾಧೆ ಜಾಸ್ತಿ.ಜಮೀನಿಗೆ ಮಾಡುವ ಖಚರ್ು ಕಡಿಮೆ ನಿಜ. ಅದರಿಂದ ಹೆಚ್ಚು ಆದಾಯವೂ ಬರುವುದಿಲ್ಲ. ಹಾಗಾಗಿ ಲಕ್ಷಾಂತರ ರೂಪಾಯಿ ಸಾಲ ತೀರಿಸುವುದು ಹೇಗೆ?. ಆದ್ದರಿಂದ ನಾವು ನಮ್ಮ ಸಾಲ ತೀರುವವರೆಗೂ ಸಾವಯವ ಕೃಷಿಮಾಡಲು ಸಾಧ್ಯವಿಲ್ಲ ಎನ್ನುವುದು ಬಹುತೇಕರ ಸ್ಪಷ್ಟ ಉತ್ತರವಾಗಿರುತ್ತದೆ.
ದುರಂತ ಎಂದರೆ ತಾವು ಸಾಲಗಾರರಾಗಲು ವಿನಾಶಕಾರಿಯಾದ ರಾಸಾಯನಿಕ ಕೃಷಿಯೇ ಕಾರಣ ಎನ್ನುವುದು ಅವರಿಗೆ ಗೊತ್ತೆ ಇರುವುದಿಲ್ಲ. ಆದರೂ ಕಳೆದ ಹತ್ತು ವರ್ಷಗಳಲ್ಲಿ ರೈತ ಸಮುದಾಯದಲ್ಲಿ ಗುಣಾತ್ಮಕ ಬದಲಾವಣೆಗಳಾಗುತ್ತಿರುವುದನ್ನು ಕಾಣಬಹುದು.
ವಿದ್ಯಾವಂತ ಯುವಕರು ನೈಸಗರ್ಿಕ ಕೃಷಿ ಮಾಡಲು ಬರುತ್ತಿದ್ದಾರೆ. ಅಂತಹವರಿಗೆ ಸೂಕ್ತ ಸಲಹೆ, ಮಾರ್ಗದರ್ಶನದ ಕೊರತೆ ಇರುವುದು ನಿಜವಾದರೂ ಈಗ ಪ್ರತಿ ಹೋಬಳಿಯಲ್ಲೂ ಕನಿಷ್ಠ ಹತ್ತು ಜನರಾದರೂ ನೈಸಗರ್ಿಕ ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.
ರಾಸಾಯನಿಕ ಕೃಷಿಯ ವಿನಾಶಕಾರಿ ಗುಣಗಳನ್ನು ತಿಳಿಸುತ್ತಲೆ ಸಾವಯವ ಕೃಷಿಯ ಮಹತ್ವ ಮತ್ತು ಅಗತ್ಯಗಳನ್ನು ಪ್ರಯೋಗಶೀಲರಾಗಿ ತೋರಿಸಿಕೊಟ್ಟವರು ನಮ್ಮ ನಡುವೆ ಹಲವರು ಇದ್ದಾರೆ. ಅಂತಹ ಯಶಸ್ವಿ ಪ್ರಯೋಗಶೀಲ ರೈತರಲ್ಲಿ ಸುಭಾಷ್ ಶರ್ಮ ಪ್ರಮುಖರು.
ಮಹಾರಾಷ್ಟ್ರದ ಯವತ್ಮಾಲ್ನ ಸುಭಾಷ್ ಶರ್ಮ ದೇಶದ ಅತ್ಯುತ್ತಮ ಸಾವಯವ ಕೃಷಿಕರಲ್ಲಿ ಒಬ್ಬರು.ಅವರು ಪರಿಚಯಿಸಿದ ನೀರು ಮತ್ತು ಮಣ್ಣನ್ನು ಹಿಡಿದಿಡುವ ಕಂಟೂರ್ ಪದ್ಧತಿ ವಿಧಾನ, ಬೆಳೆಶಾಸ್ತ್ರ, ಶ್ರಮ ಶಾಸ್ತ್ರ, ಮೂರು ಪ್ರತಿಜ್ಞೆಯಿಂದ ನೂರ್ಪಟ್ಟು ನೆಮ್ಮದಿ ಎಂಬ ಸೂತ್ರಗಳು ನಮ್ಮ ರೈತರ ಬಾಳಿಗೆ ಬೆಳಕು ನೀಡಬಲ್ಲ ವಿಧಾನಗಳಾಗಿವೆ.
ವಿನಾಶದಿಂದ ಪ್ರಗತಿಯ ಕಡೆಗೆ : 1983 ರಲ್ಲಿ ರಾಸಾಯನಿಕ ಗೊಬ್ಬರ,ಕೀಟನಾಶಕ ಮತ್ತು ಹೈಬ್ರೀಡ್ ಬೀಜಗಳನ್ನು ಬಳಸಿ ದಾಖಲೆ ಇಳುವರಿ ತೆಗೆದದ್ದಕ್ಕಾಗಿ ಮಹಾರಾಷ್ಟ್ರ ಸಕರ್ಾರ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಅದೇ ಸುಭಾಷ್ ಶರ್ಮ ರಾಸಾಯನಿಕ ಕೃಷಿನ್ನು ತೀವ್ರವಾಗಿ ವಿರೋಧಿಸಿ ಸಾವಯವ ವಿಧಾನದಲ್ಲಿ ದಾಖಲೆ ಇಳುವರಿ ಬೆಳೆದದ್ದಕ್ಕಾಗಿ 2002 ರಲ್ಲಿ "ಕೃಷಿ ಭೂಷಣ್" ಬಿರುದು ನೀಡಿ ಸನ್ಮಾನಿಸಿತು.
ಎರಡೂ ವಿಧಾನಗಳಲ್ಲೂ ತಾನು ಪಾಲಿಸಿದ್ದು ಜ್ಞಾನ,ವ್ಯವಸ್ಥಿತ ಯೋಜನೆ ಮತ್ತು ಕಠಿಣ ಶ್ರಮ ಎನ್ನುವ ಶರ್ಮ, ಒಂದು ನಿಸರ್ಗ ವಿರೋಧಿ ನೀತಿಯಾದರೆ ಮತ್ತೊಂದು ನಿಸರ್ಗದ ಲಯದಲ್ಲಿ ಸಮನ್ವಯಗೊಂಡ ನೀತಿ ಎನ್ನುತ್ತಾರೆ.
ಪ್ರತಿಜ್ಞೆ ಮೂರು ಫಲ ನೂರು : ರಾಸಾಯನಿಕ ವಿಷ ಬಳಸಿ ದೇಶದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ರಾಸಾಯನಿಕ ಬಳಸುವುದರಿಂದ ಉತ್ಪಾದನೆ ಜಾಸ್ತಿ ಆಗುವುದಾದರೆ ನನ್ನ ಕೃಷಿ ಉತ್ಪಾದನೆ 400 ಟನ್ನಿಂದ 800 ಟನ್ ಆಗಬೇಕಿತ್ತು. ಆದರೆ ಅದು 400 ಟನ್ನಿಂದ 50 ಟನ್ಗೆ ಕುಸಿಯಿತು. ಅಂದರೆ ರೈತ ಮೋಸ ಹೋದ ಎಂದು ಅರ್ಥ. ಕೃಷಿ ಅವನಿಗೆ ಉರುಳಾಯಿತು.ಇದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಶರ್ಮ ಹೇಳುತ್ತಾರೆ.
ಯಾವುದೆ ರೈತ ನೈಸಗರ್ಿಕ ಕೃಷಿ ಮಾಡಲು ನಿರ್ಧರಿಸಿದರೆ ಮೊದಲು ಮೂರು ಪ್ರತಿಜ್ಞೆಗಳನ್ನು ಕಡ್ಡಾಯವಾಗಿ ಮಾಡಲೆ ಬೇಕು. 1. ಜಮೀನಿನ ಮಣ್ಣನ್ನು ಹೊರ ಹೋಗಲು ಬಿಡುವುದಿಲ್ಲ ಎಂದು ನಿರ್ಧರಿಸಬೇಕು 2. ಬಿದ್ದ ಮಳೆಯ ನೀರನ್ನು ಹೊರ ಹೋಗಲು ಬಿಡಬಾರದು 3.ಗಿಡಮರಗಳನ್ನು ಸಾಕಷ್ಟು ಬೆಳೆಸಲು ಮುಂದಾಗಬೇಕು. ಹೀಗೆ ಈ ತತ್ವಗಳನ್ನು ಬಿಡದೆ ಪಾಲಿಸಿದರೆ ನಮ್ಮ ಭೂಮಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು. 
ಸ್ವಾವಲಂಬನೆ ಬೇಕು : ರೈತರು ಮಣ್ಣಿನ ಸ್ವಾವಲಂಬನೆ, ನೀರಿನ ಸ್ವಾವಲಂಬನೆ ಮತ್ತು ಬೀಜದ ಸ್ವಾವಲಂಬನೆ ಸಾಧಿಸದ ಹೊರತು ಉದ್ಧಾರ ಅಸಾಧ್ಯ. ಈ ಮೂರು ನೈಸಗರ್ಿಕ ಕೃಷಿಯ ಕೊಡುಗೆಗಳು.ನಾವು ನಿಸರ್ಗದೊಂದಿಗೆ ಬೆರೆತುಕೊಂಡರೆ ಮಾತ್ರ ಇದು ಸಾಧ್ಯ.
1994 ರಲ್ಲಿ ತಾವು ಮೊಟ್ಟ ಮೊದಲ ಬಾರಿಗೆ  "ಗೋಮಾತಾ ಸಂಜೀವಕ್ " ಟಾನಿಕ್ ತಯಾರು ಮಾಡಿ ಯಶಸ್ವಿಯಾದದ್ದನ್ನು ಹೀಗೆ ಹೇಳುತ್ತಾರೆ. "ಪ್ರೋ.ಡಾಬೋಲ್ಕರ್ ಅವರ ಉಪನ್ಯಾಸದಿಂದ      ಪ್ರಭಾವಿತರಾಗಿ 200 ಲೀಟರ್ ಬ್ಯಾರಲ್ನಲ್ಲಿ 60 ಕೆಜಿ ಸಗಣಿ,200 ಗ್ರಾಂ ಸಾವಯವ ಬೆಲ್ಲ, 10 ಲೀಟರ್ ಗಂಜಲ ಬೆರಸಿ ಮೇಲೆ ಪೂರಾ ನೀರು ತುಂಬಿ ಅದನ್ನು 6-7 ದಿನ ಕಲಿಸಿ ಎಕರೆಗೆ 15 ದಿನಕ್ಕೊಮ್ಮೆ ಕೊಟ್ಟೆ. ಇದನ್ನು ಕೊಟ್ಟಾಗ ಮೊದಲ ಸಲ ಎಕರೆಗೆ 5 ಕ್ವಿಂಟಾಲ್ ಟೊಮಟೊ ಬಂತು. ಮುಂದೆ 24 ಎಕರೆ ಜಮೀನಿಗೂ ಅಳವಡಿಸಿಕೊಂಡೆ. 
ಇದು ನನ್ನ ಕೃಷಿಯಲ್ಲಿ ನಿಜಕ್ಕೂ ಸಂಜೀವಿನಿಯೆ ಆಗಿದೆ. ಉತ್ಪಾದನೆ ಹೆಚ್ಚಾಯಿತು ಅಲ್ಲದೆ ಜೀವಜಂತುಗಳು ಅಪಾರವಾಗಿ ವೃದ್ಧಿಯಾದವು". ಈಗ ನನ್ನ ಜಮೀನಿನಲ್ಲಿ ಒಂದು ಚದರ ಅಡಿಯಲ್ಲಿ ಆರು ಎರೆ ಹುಳುಗಳು ಇರುತ್ತವೆ. ಒಂದು ಎಕರೆಯಲ್ಲಿ 80 ಲಕ್ಷ ಸಂಖ್ಯೆಯಲ್ಲಿ ಎರೆಹುಳುಗಳು ಇರುತ್ತವೆ.ಇವು ಜಮೀನಿನಲ್ಲಿ ಕೋಟ್ಯಾಂತರ ರಂಧ್ರಗಳನ್ನು ಮಾಡುತ್ತವೆ. ಇದರಿಂದ ಜಮೀನಿನಲ್ಲಿ ನೀರು ಇಂಗುವುದು ಸುಲಭ" ಎನ್ನುತ್ತಾರೆ ಶರ್ಮ.
ಅರಣ್ಯೀಕರಣ : ಅರಣ್ಯಧಾರಿತ ಕೃಷಿ ಎಂದ ತಕ್ಷಣ ಅದು ದೊಡ್ಡ ಮರಗಳ ಕಾಡಲ್ಲ. ಸಣ್ಣ ಗಿಡಗಳು.ಪೊದೆಗಳು. ಮಿಶ್ರ ಬೆಳೆಗಳು ಮತ್ತು ಬೆಳೆ ಕಟಾವಿನ ನಂತರ ಬರುವ ತ್ಯಾಜ್ಯಗಳೆಲ್ಲ ಇದರಲ್ಲಿ ಸೇರುತ್ತವೆ.
ಕಳೆಗಳು ಮತ್ತು ಬೆಳೆಗಳ ಉಳಿಕೆಯಿಂದ ತಮ್ಮ ಜಮೀನಿನಲ್ಲಿ ಪ್ರತಿವರ್ಷ 30 ಟನ್ ಬಯೋಮಾಸ್ ಸಿಗುತ್ತಿದೆ ಎನ್ನುವ ಶರ್ಮ ಆಳವಾದ ಉಳುಮೆ, ಕಳೆತೆಗೆದು ಹೊರಹಾಕುವುದನ್ನು ವಿರೋಧಿಸುತ್ತಾರೆ.
ತಮ್ಮ 32 ಎಕರೆ ಜಮೀನಿನಲ್ಲಿ ಆರು ಸಾವಿರ ಮರಗಳಿದ್ದು, ಒಟ್ಟು ಜಮೀನಿನಲ್ಲಿ ಶೇಕಡ 40 ರಷ್ಟು ಪ್ರದೇಶದಲ್ಲಿ ಆವರಿಸಿಕೊಂಡಿವೆ ಎನ್ನುತ್ತಾರೆ.
ಕೃಷಿಯಲ್ಲಿ ಮರಗಿಡಗಳು ಮುಖ್ಯ.ಮರಗಳಿಲ್ಲದಿದ್ದರೆ ನೈಸಗರ್ಿಕ ಕೃಷಿ ಮಾಡುವುದು ಕಷ್ಟ.ಜಮೀನಿನಲ್ಲಿ ತಾಪಾಂಶ ನಿಯಂತ್ರಣ ಮಾಡುವುದು ನೈಸಗರ್ಿಕ ಕೃಷಿಯಲ್ಲಿ ತುಂಬಾ ಮುಖ್ಯ.ಇದರಿಂದ ಹೊಲದಲ್ಲಿ ಅಸಖ್ಯಾಂತ ಜೀವಾಣುಗಳು ಸೃಷ್ಟಿಯಾಗುತ್ತವೆ. ಪ್ರತಿ ಗಂಟೆಯಲ್ಲೂ ಇವು ಹುಟ್ಟುತ್ತಾ ಸಾಯುತ್ತಾ ಅಪಾರ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುತ್ತಾ ಹೋಗುತ್ತವೆ.
ಮರಗಳು 15 ಅಡಿ ಆಳದಿಂದ ಪೋಷಕಾಂಶಗಳನ್ನು ತೆಗೆದುಕೊಂಡು ಅದನ್ನು ಎಲೆಗಳ ರೂಪದಲ್ಲಿ ಮತ್ತೆ ಮಣ್ಣಿಗೆ ಸೇರಿಸುತ್ತವೆ. ಮರದ ನೆರಳಿನಿಂದ ನಮಗೆ ಶೇಕಡ 10 ರಷ್ಟು ಬೆಳೆ ನಷ್ಟವಾಗಬಹುದು ಆದರೆ ಅದರ ಐದು ಪಟ್ಟು ಲಾಭ ಇದೆ ಎನ್ನುವುದನ್ನು ನೆನಪಿಡಬೇಕು.
ರೈತರು ಹೊರಗಡೆಯಿಂದ ಎರೆಹುಳು ತಂದು ಮಾಡುವುದು ಖಚರ್ಿನ ಬಾಬ್ತು. ದ್ರವ್ಯವಸ್ತು ಎಲ್ಲಿ ತಯಾರಾಗುತ್ತದೋ ಅಲ್ಲೇ ಎರೆಹುಳು ಬೆಳೆದು ತಮ್ಮ ಕೆಲಸ ಮಾಡುತ್ತವೆ. ಮೂರು ವರ್ಷದಲ್ಲಿ ಒಂದು ಚದರ ಅಡಿಯಲ್ಲಿ 5-6 ಎರೆಹುಳುಗಳು ಬರುತ್ತವೆ. ಆದರೆ ಒಂದು ಹನಿ ರಾಸಾಯನಿಕ ವಿಷ ಜಮೀನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ರಾಸಾಯನಿಕ ಕೃಷಿಯಿಂದಾಗಿ ಈ ಸ್ವಾಭಾವಿಕ ಪ್ರಕ್ರಿಯೆ ನಾಶವಾಗುತ್ತದೆ.
ಗಮನದಲ್ಲಿಡಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ನೈಸಗರ್ಿಕ ಕೃಷಿ ಮಾಡುವವರು ಟ್ರಾಕ್ಟರ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು. ನೈಸಗರ್ಿಕ ಕೃಷಿಯಲ್ಲಿ ಟ್ರಾಕ್ಟರ್ ಬಳಸಿದರೆ ಎಲ್ಲಾ ಜೀವಾಣುಗಳು, ಎರೆಹುಳುಗಳು ನಾಶವಾಗುತ್ತವೆ.ಜೀವ ವೈವಿಧ್ಯತೆ ಕುಂಠಿತವಾಗುತ್ತದೆ ಎನ್ನುತ್ತಾರೆ.
ಬೆಳೆಶಾಸ್ತ್ರ : ಪ್ರಕೃತಿ ಯಾವ ಬೆಳೆಗೆ ಯಾವ ಕಾಲವನ್ನು ಗೊತ್ತುಪಡಿಸಿದೆ ಅದೇ ಕಾಲದಲ್ಲಿ ಆ ಬೆಳೆಯನ್ನು ಹಾಕಬೇಕು. ನಮ್ಮ ಮಣ್ಣಿಗೆ, ಹವಾಮಾನಕ್ಕೆ ಹೊಂದಿಕೊಳ್ಳುವಂತದ್ದಾಗಿಬೇಕು. ಮಣ್ಣಿನಿಂದ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ತಿರುಗಿಸಿ ಕೊಡುವ ಬೆಳೆಗಳು ಒಂದರನಂತರ ಒಂದು ಬರುವಂತೆ ನೋಡಿಕೊಳ್ಳಬೇಕು. ಒಂದೇ ಭೂಮಿಯಲ್ಲಿ ಪದೇ ಪದೇ ಅದೇ ಬೆಳೆ ಹಾಕಬಾರದು.
ಇಂತಹ ಸಾಮನ್ಯ ತಿಳಿವಳಿಕೆ ರೈತರಿಗೆ ಇರಬೇಕು.
ನಮ್ಮ ಮುಖ್ಯ ಪ್ಲಾನಿಂಗ್ ಏಪ್ರಿಲ್ 15 ರಿಂದ ಶುರುವಾಗುತ್ತದೆ. ಚಳಿಗಾಲದ ಬೆಳೆಗಳು, ಬೇಸಿಗೆ ಬೆಳೆಗಳು, ಬೇಸಿಗೆ ಜೊತೆಗೆ ಮುಂಗಾರು ಬೆಳೆಗಳು ಮತ್ತು ಮುಂಗಾರು ಬೆಳೆಗಳು ಹೀಗೆ ವಿಗಂಡನೆ ಮಾಡಿಕೊಳ್ಳಲಾಗುತ್ತದೆ. ಹೀಗೆ ವಿವಿಧ ಕಾಲದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಬೆಳೆಗಳನ್ನು ವಿಗಂಡನೆ ಮಾಡಿಕೊಂಡರೆ ನಿಯೋಜನೆ ಮಾಡಿಕೊಳ್ಳುವುದು ಸುಲಭ ಎನ್ನುತ್ತಾರೆ ಶರ್ಮ.
ಶ್ರಮಶಾಸ್ತ್ರ : ತಮ್ಮ ಜಮೀನಿನಲ್ಲಿ 18 ಕುಟುಂಬಗಳು ಕಳೆದ 20 ವರ್ಷಗಳಿಂದ ಕೆಲಸ ಮಡುತ್ತಿದ್ದಾರೆ. ಅವರಿಗೆ 365 ದಿನವೂ ಕೆಲಸ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರಮಕ್ಕರ ತಕ್ಕ ಪ್ರತಿಫಲ ಅವರಿಗೆ ಸಿಗುತ್ತದೆ. ಅವರ ಮಕ್ಕಳ ವಿಧ್ಯಾಭ್ಯಾಸಕ್ಕೂ ಅವಕಾಶ ಮಾಡಿಕೊಡಲಾಗಿದೆ.
ರಾಸಾಯನಿಕ ಕೃಷಿ ಮಾಡುತ್ತಿದ್ದಾಗ ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ ಮೂರು ಸಾವಿರ ರೂಪಾಯಿ ಆಸ್ಪತ್ರೆಗೆ ಖಚರ್ು ಮಾಡುತ್ತಿದ್ದರು. ಸಾವಯವ ಕೃಷಿಗೆ ಬಂದ ಮೆಲೆ ಅದು 300 ರೂಪಾಯಿಗೆ ಇಳಿದಿದೆ. ಅವರು ಇಲ್ಲಿ ಮಾಡುವ ನೈಸಗರ್ಿಕ ಕೃಷಿಯಿಂದಾಗಿ ನಿಮರ್ಾಣವಾದ ಈ ವಾತಾವರಣದಿಂದಾಗಿಯೇ ಅವರ ಆರೋಗ್ಯ ಸುಧಾರಿಸಿದೆ ಎನ್ನುತ್ತಾರೆ ಶರ್ಮ.
ಪ್ರತಿವರ್ಷ ಮಾಚರ್್ ಕೊನೆಯಲ್ಲಿ ನಮ್ಮಲ್ಲಿ ಎಷ್ಟು ಲಾಭ ಬಂದಿದೆಯೋ ಅದರ ಶೇಕಡ 10 ರಷ್ಟನ್ನು ಅವರಿಗೆ ಬೋನಸ್ ಆಗಿ ಹಣದ ರೂಪದಲ್ಲಿ ನೀಡುತ್ತೇವೆ.ಜತೆಗೆ 60 ಕಕೆಜಿ ಧಾನ್ಯ ಕೊಡುತ್ತೇವೆ. ಕೆಲಸಗಾರರ ಮಕ್ಕಳ ವಿಧ್ಯಾಭ್ಯಾಸಕ್ಕೆ ನಮ್ಮದು ಮೊದಲ ಆಧ್ಯತೆ ಎನ್ನುತ್ತಾರೆ.
ಹಲವಾರು ಸಂಘ ಸಂಶ್ಥೆಗಳಿಗೆ ಕೃಷಿ ತರಬೇತಿ. ಭಾರತದ್ಯಾಂತ ಒಂದು ಲಕ್ಷ ರೈತರಿಗೆ ತರಬೇತಿ. ಅದರಲ್ಲೂ ಮುಖ್ಯವಾಗಿ ಕನರ್ಾಟಕ, ಮಹರಾಷ್ಟ್ರ ರೈತರಿಗರ ಹೆಚ್ಚಿನ ತರಬೇತಿ ನೀಡಿದ್ದಾರೆ. ಸಣ್ಣ ಮಳೆಯಾಶ್ರಿತ ಜಮೀನಿನಲ್ಲೂ ನೈಸಗರ್ಿಕ ಕೃಷಿ ಆರಂಭಿಸಬಹುದು ಎನ್ನುವ ಶರ್ಮ ಮೊದಲು ಎಕರೆಗೆ 10 ರಿಂದ 15 ಮರ ಬೆಳೆಸಿಕೊಳ್ಳಿ. ನಂತರ ಮಣ್ಣಿನಲ್ಲಿ ನೀರು ನಿಲ್ಲಿಸಿದಾಗ ಆ ತೇವಾಂಶ ಬಯೋಮಾಸ್ ಕಂಪೋಸ್ಟ್ ಮಾಡಲು ಸಹಾಯವಾಗುತ್ತದೆ. ಭೂಮಿಯಲ್ಲಿ ಬಂದ ಬಯೋಮಾಸ್ ಅನ್ನು ಅಲ್ಲೇ ಹಾಕಿ. ಅದು ಮಳೆಗಾಲದಲ್ಲಿ ಕಂಪೂಸ್ಟ್ ಆಗುತ್ತದೆ ಎಂದು ಸಲಹೆ ನೀಡುತ್ತಾರೆ.
ಇಂತಹ ಮಹಾನ್ ಸಾವಯವ ಸಾದಕನ ಕೃಷಿ ಜೀವನಗಾಥೆಯನ್ನು ಬೆಂಗಳೂರಿನ ಇಕ್ರಾ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.ನೀಲಾ ಹಡರ್ೀಕರ್ ನೆರವಿನಿಂದ ಸಹಜ ಸಾಗುವಳಿಯ ವಿ.ಗಾಯತ್ರಿ ಅವರು "ಸುಭಾಷ್ ಶರ್ಮ ಸಾವಯವ ಸಂಗತಿ- ಸಮಪಾತಳಿ ಸಹಜ ಕೃಷಿಯ ವಿಧಿ ವಿಧಾನಗಳು" ಎಂಬ ಹೆಸರಿನಲ್ಲಿ ನಿರೂಪಿಸಿ ಪುಸ್ತಕ ಹೊರತಂದಿದ್ದಾರೆ. ರೈತರಿಗೆ ಈ ಪುಸ್ತಕದಲ್ಲಿ ಉಪಯುಕ್ತ ಮಾಹಿತಿಗಳಿದ್ದು ಬೇಸಾಯದ ಬದುಕಿಗೆ ತಿರುವುಕೊಡಬಲ್ಲ ಸಂಗತಿಗಳನ್ನು ವಿವರವಾಗಿ ಹೇಳಲಾಗಿದೆ.

2 ಕಾಮೆಂಟ್‌ಗಳು: