vaddagere.bloogspot.com

ಸೋಮವಾರ, ಜೂನ್ 5, 2017


ಬಿಡುವಿನ ವೇಳೆಯಲ್ಲಿ ಅರಳಿದ ಕನಸೇ "ಕಾನನ" 
ಮೈಸೂರು : ಪರಸ್ಪರ ಸಂಪರ್ಕವಿಲ್ಲದೆ ಸಂಬಂಧಗಳು ಬೆಸೆಯುವುದಿಲ್ಲ, ಬೆಳೆಯುವುದಿಲ್ಲ. ಉದ್ಯೋಗ, ಮನೆಕೆಲಸದ ಒತ್ತಡದ ನಡುವೆ ಕಳೆದುಹೋಗುವ ನಗರದ ಬದುಕು ಸಾಕಾಗಿ ಸುಸ್ತಾಗಿಸುತ್ತದೆ. ಇಂತಹ ಒತ್ತಡದ ನಡುವೆಯೂ ಒಂದಷ್ಟು ಸಮಯ ಇದ್ದೇ ಇರುತ್ತದೆ. ಅಂತಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೇಗೆ ಒತ್ತಡಗಳಿಂದ ಪರಾಗಬಹುದು ಎಂದು ಚಿಂತಿಸಿದಾಗ ಅರಳಿದ ಕನಸೇ "ಕಾನನ" ಎಂಬ ಸಾವಯವ ಕೃಷಿ ತೋಟ.
ಮೈಸೂರು ತಾಲೂಕು ಜಯಪುರ ಹೋಬಳಿಯ ಬರಡನಪುರದ ಕೆರೆ ಪಕ್ಕದಲ್ಲಿದೆ ಕಾನನ. ಹೌದು.ನಿಜಕ್ಕೂ ಇದೊಂದು ಮಾದರಿ ಎನಿಸಬಲ್ಲ ಓಟವಿಲ್ಲದ, ಆಯಾಸವಿಲ್ಲದ, ಎದುಸಿರಿಲ್ಲದ ಬದುಕ ಹುಡುಕಿಹೊರಟವರ ಸಾವಯವ ಕಥಾನಕ.
ಅರಿವು ಶಾಲೆಯ ಟ್ರಸ್ಟಿ ಹೋಮಿಯೋಪತಿ ವೈದ್ಯ ಡಾ.ಮನೋಹರ್, ಪರಿಸರ ತಜ್ಞ, ಸಿವಿಲ್ ಎಂಜಿನೀಯರ್ ಗುರು ಪ್ರಸಾದ್, ಎನ್ಐ ಕಾಲೇಜಿನ ಪ್ರೋಫೆಸರ್ ಕ್ರಿಸ್ಟ್ ನಿದರ್ೇಶಕ ಡಾ.ಶ್ಯಾಂಸುಂದರ್, ವಿಜಯ್, ಸುಬ್ರಹ್ಮಣ್ಯ ಶರ್ಮ ಮತ್ತು ಡಾ.ಗಣೇಶ್ ಅವರೆಲ್ಲ ಒಟ್ಟಿಗೆ ಕಟ್ಟಿದ್ದು ಕಾನನ.
ಅವರು ಆರು ಜನ ಗೆಳೆಯರು. ಅವರಿಗೆ ಒಂದಿಷ್ಟು ಸಮಾನಆಸಕ್ತಿ, ಸದಭಿರುಚಿ,ಜೀವನ ಪ್ರೀತಿ ಇತ್ತು. ಎಲ್ಲರೂ ಉದ್ಯೋಗಸ್ಥರು. ನೆಮ್ಮದಿಯಾಗಿ ಬದುಕಲು ಸಾಕಾಗುವಷ್ಟು ಹಣ, ಸ್ವಂತ ಮನೆ, ಸುಂದರ ಸಂಸಾರ ಇದ್ದ ಗೆಳೆಯರು. ಅವರೆಲ್ಲರೂ ಆಗಾಗ ಬಿಡುವಿನ ವೇಳೆಯಲ್ಲಿ ಜೊತೆಯಾಗಿ ಒಂದೆಡೆ ಸೇರುತಿದ್ದರು.
ಆಗ ಅವರಿಗನಿಸಿತು, ಕೆಲಸದ ನಡುವೆ ಸಿಗುವ ಇಂತಹ ಅಮೂಲ್ಯ ಕ್ಷಣಗಳನ್ನು ನಾವೇಕೆ ಹೀಗೆ ಕಾಡು ಹರಟೆಯಲ್ಲಿ ಕಳೆದು ಬಿಡುತ್ತಿದ್ದೇವೆ. ಈ ವೇಳೆಯನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ, ಪರಿಸರಕ್ಕೆ ನಮ್ಮಿಂದ ಏನಾದರೂ ಸಹಾಯವಾಗುವಂತಹ ಖುಷಿಯ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲ ಎಂದುಕೊಂಡರು.
ತಮ್ಮ ಕನಸಿಗೆ ರೂಪ ಕೊಟ್ಟಾಗ "ಕಾನನ" ಎಂಬ ಹಸಿರು ಸಾವಯವ ಕೃಷಿ ತೋಟ ಅರಳಿ ನಿಂತಿದೆ. ಆರು ಜನ ಗೆಳೆಯರು ಆರು ಬ್ಲಾಕ್ಗಳನ್ನು ಮಾಡಿಕೊಂಡಿದ್ದು ತಮ್ಮಗೆ ಬೇಕಾದ ಹಣ್ಣು, ತರಕಾರಿ,ಸೊಪ್ಪು ಎಲ್ಲವನ್ನೂ ವಿಷಮುಕ್ತವಾಗಿ ಬೆಳೆದುಕೊಳ್ಳುತ್ತಿದ್ದಾರೆ.
ವೈದ್ಯರು,ಎಂಜಿನೀಯರ್ಗಳು,ಖಾಸಗಿ ಕಂಪನಿಯಲ್ಲಿ ಕೆಲಸಮಾಡುವವರು ಎಲ್ಲರೂ ಸೇರಿ ತಮಗೆ ಬೇಕಾದಂತೆ ಕಟ್ಟಿಕೊಂಡ ಸಹಜ ಸಾವಯವ ಕೃಷಿತೋಟ ನಗರದ ಬೇಸರದ ಬದುಕಿಗೆ ಪಯರ್ಾಯ ಹುಡುಕಾಟ ನಡೆಸುವವರಿಗೆಲ್ಲ ಮಾದರಿಯಂತಿದೆ.
ಅವರೆಲ್ಲರೂ ಆಗಾಗ ಕಾನನದಲ್ಲಿ ಒಟ್ಟಿಗೆ ಸೇರಿ ಶ್ರಮದಾನ ಮಾಡುತ್ತಾರೆ.ನಕ್ಕು ನಲಿಯುತ್ತಾರೆ. ಕಾನನ ಹಬ್ಬ ಮಾಡುವ ಮೂಲಕ ಗ್ರಾಮೀಣ ಕಲೆಗಳು ನಶಿಸಿಹೋಗದಂತೆ ಕಾಪಿಡುತ್ತಾ, ಕ್ರೀಡೆ,ಸಾವಯವ ಉತ್ಪನ್ನಗಳ ಪರಿಚಯ, ವಿಷಮುಕ್ತ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಅಲ್ಲಿ ಹಕ್ಕಿಗಳಿಗೆ ಮರದ ಮೇಲೆ ಗಾಜಿನ ಸೀಸೆಗಳಲ್ಲಿ ಕಾಳುತುಂಬಿ ತೂಗು ಬಿಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರಿಗೂ ವ್ಯವಸ್ಥೆ ಇದೆ. 20 ಅಡಿ ಎತ್ತರದ ಟ್ರೀ ಹೌಸ್, ಹ್ಯಾಂಡ್ ಪಂಪ್. ಸಣ್ಣ ಏತ ನೀರಾವರಿ ಎಲ್ಲವೂ ಅವರ ಸೃಜನಶೀಲತೆಗೆ ಸಾಕ್ಷಿಯಾಗಿವೆ.
ಕಾನನ ನೋಡಲು ಗೆಳೆಯ ಶಿವಾನಂದ್ ಮತ್ತು ನೈಸಗರ್ಿಕ ಕೃಷಿಕ ಶಿವನಾಗಪ್ಪ ಅವರೊಂದಿಗೆ ಹೋದಾಗ ಡಾ.ಗಣೇಶ್ ತಮ್ಮ ಮಡದಿ ಮಕ್ಕಳೊಂದಿಗೆ ಕಾನನದಲ್ಲಿ ಕೃಷಿ ಕೆಲಸಗಳನ್ನು ಮಾಡಲು ಬಂದಿದ್ದರು. ಕಾನನ ಸುತ್ತಿಬಂದ ನಾವು ಅವರನ್ನು ಮಾತಿಗೆಳೆದೆವು.
"ನಮಗೆ ಇಂದು ರಜಾ. ಅದಕ್ಕೆ ನಾವು ಕಾನನಕ್ಕೆ ಬಂದಿದ್ದೇವೆ. ಮಾಲ್ಗಳಿಗೆ ಹೋಗುವ ಬದಲು, ಶಾಪಿಂಗ್ ನೆಪದಲ್ಲಿ ಸಿಟಿಗೆ ಹೋಗುವ ಬದಲು ನಾವು ಕಾನನಕ್ಕೆ ಬಂದಿದ್ದೇವೆ.ಇಲ್ಲಿ ನಮಗೆ ಯಾವ ಖಚರ್ು ಇಲ್ಲ. ಒಳ್ಳೆಯ ಗಾಳಿ, ಕಣ್ಣಿಗೆ ಮುದ ನೀಡುವ ಹಸಿರು, ಮನೆಗೆ ಬೇಕಾದ ಸೊಪ್ಪು ತರಕಾರಿ, ಹಣ್ಣು ಸಿಗುತ್ತದೆ. ಆನಂದವೂ ಆಗುತ್ತದೆ ಎಂದರು ಡಾ.ಗಣೇಶ್.
ಉಳಿದವರು ಅವರವರ ರಜಾ ದಿನಗಳನ್ನು, ಬಿಡುವಿನ ಸಮಯವನ್ನು ಹೊಂದಿಸಿಕೊಂಡು ಕಾನನಕ್ಕೆ ಬಂದು ಹೋಗುತ್ತಾರೆ. ಆಗಾಗ ಎಲ್ಲರೂ ಒಟ್ಟಿಗೆ ಸೇರುತ್ತೇವೆ. ನಮ್ಮ ಬಗ್ಗೆ ಮಾತಾಡಿಕೊಳ್ಳುವುದಕ್ಕೆ. ನಮ್ಮ ಮಕ್ಕಳ ಬೇಕು ಬೇಡಗಳನ್ನು ತಿಳಿದುಕೊಳ್ಳುವುದಕ್ಕೆ ಒಂದಷ್ಟು ಸಮಯ ಜಾಗ ಇದರಿಂದ ನಮಗೆ ಸಿಕ್ಕಂತಾಗಿದೆ ಎಂದರು.
ಮಕ್ಕಳು ತಮ್ಮ ಶಾಲಾ ಕಾಲೇಜುಗಳ ಅನುಭವಗಳನ್ನು ಹಂಚಿಕೊಳ್ಳುತ್ತಾ ಬೆಳೆಯುವುದನ್ನು ಕಲ್ಪಸಿಕೊಳ್ಳಿ "ಕಾನನ"ದಂತಹ ಮಾದರಿಗಳು ಎಷ್ಟು ಮುಖ್ಯ ಎನ್ನುವುದು ಅರ್ಥವಾಗುತ್ತದೆ. ಇದೆಲ್ಲಾ ಹೇಗೆ ಆರಂಭವಾಯಿತು ಎಂದು ಡಾ.ಗಣೇಶ್ ಅವರನ್ನು ಕೇಳಿದರೆ 
ಜಮೀನಿಗೆ ಅಲೆದಾಟ : " ಅದು 2004. ನಾವು ಆರು ಜನ ಗೆಳೆಯರು ಒಂದಿಷ್ಟು ಜಮೀನು ತೆಗೆದುಕೊಂಡು ಸಾವಯವ ಕೃಷಿ ಮಾಡೋಣ ಎಂದು ನಿರ್ಧರಿಸಿದೆವು.
ಆರು ತಿಂಗಳು ಜಮೀನು ಹುಡುಕಲು ಅಲೆದಾಡಿದೆವು.ಕೊನೆಗ ಮೈಸೂರಿಗೆ 15 ಕಿ.ಮೀ.ಅಂತರವಿರುವ ಬರಡನಪುರ ಈ ಜಮೀನನ್ನು ಕೊಂಡುಕೊಂಡೆವು. ಆರಂಭದಲ್ಲಿ ಮೂರುವರೆ ಎಕರೆ ನಂತರ ಈಗ 2008 ರಲ್ಲಿ ಅರ್ಧ ಎಕರೆ ಜಮೀನು ಖರೀದಿಸಿದೆವು. ಈ ಅರ್ಧ ಎಕರೆಯಲ್ಲಿ ಒಂದು ಕಲ್ಯಾಣಿ ಕೊಳ ಮತ್ತು ಒಂದು ದೊಡ್ಡ ಬೇಲದ ಮರ ಇತ್ತು. ಅದಕ್ಕಾಗಿಯೇ ಈ ತುಂಡು ಭೂಮಿಯನ್ನು ಖರೀದಿಸಿದೆವು ಎಂದು ಕಲ್ಯಾಣಿಯತ್ತ ಕೈ ಮಾಡಿ ತೋರಿಸಿದರು ಗಣೇಶ್. ಮೊನ್ನೆಯಾದ ಮಳೆಗೆ ಕಲ್ಯಾಣಿ ಭತರ್ಿಯಾಗಿ ನೀರು ಆಚೆ ಹರಿಯುತ್ತಿತ್ತು. ಮೆಟ್ಟಿಲುಗಳೆಲ್ಲ ನೀರಿನಲ್ಲಿ ಮುಳುಗಿಹೋಗಿದ್ದವು.
ನಾವು ಜಮೀನುಕೊಂಡಾಗ ಇದು ಬಯಲಿನಂತೆ ಇತ್ತು.ಒಂದೆರಡು ದೊಡ್ಡ ಮಾವಿನ ಮರಗಳು ಮಾತ್ರ ಇದ್ದವು,ಬೇರೆನೂ ಇರಲಿಲ್ಲ.ಈಗ ನೀವು ನೋಡುತ್ತಿರುವ ಎಲ್ಲಾ ಗಿಡಮರಗಳು,ತೆಂಗು ಎಲ್ಲಾ ನಾವು ನೆಟ್ಟು ಬೆಳೆಸಿದ್ದು ಎಂದರು.
ಆರು ಜನರು ನಮ್ಮ ಭಾಗಕ್ಕೆ ಸೇರುವ ತುಂಡುಭೂಮಿಯನ್ನು ನಮ್ಮ ನಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದೇವೆ. ಮೂರುವರೆ ಎಕರೆ ಸೇರಿ ಒಟ್ಟಿಗೆ ಸೋಲಾರ್ ತಂತಿ ಬೇಲಿ ಹಾಕಿಸಿಕೊಂಡಿದ್ದೇವೆ.ಉಳಿದಂತೆ ನಮ್ಮ ಭಾಗದ ತೋಟಗಳನ್ನು ನಮಗೆ ಬೇಕಾದಂತೆ ರೂಪಿಸಿಕೊಂಡಿದ್ದೇವೆ
ಎದುರುಗಡೆ ಇರುವ ಅರ್ಧ ಎಕರೆಯಲ್ಲಿ ಪರಿಸರ ಸ್ನೇಹಿ ಮನೆ ಕಟ್ಟಿಕೊಂಡಿದ್ದೇವೆ. ತೋಟದಲ್ಲಿ ಕೆಲಸಮಾಡುವ ನೌಕರನಿಗೆ ಪಕ್ಕದಲ್ಲಿ ಮಣ್ಣಿನಲ್ಲಿ ಮನೆಕಟ್ಟಿದ್ದೇವೆ. ಮನೆಗೆ ಮಳೆ ನೀರು ಕೊಯ್ಲು ಅಳವಡಿಸಿದ್ದು ಅದನ್ನು ಬಳಸಿಕೊಳ್ಳುತ್ತಿದ್ದೇವೆ ಎಂದರು.
ವಿವಾಹ ವಾಷರ್ಿಕೋತ್ಸವ " ಮೊನ್ನೆ ನಮ್ಮ ಗೆಳಯರ ಬಳಗದ ಶ್ಯಾಂಸುಂದರ್ ಅವರ ವಿವಾಹ ವಾಷರ್ಿಕೋತ್ಸವವನ್ನು ಕಾನನದಲ್ಲೇ ಆಚರಿಸಿದೆವು. ಚಪ್ಪರಹಾಕಿ ಎಲ್ಲಾ ಆರುಮಂದಿ ಗೆಳೆಯರ ಕುಟುಂಬದ ಮನೆಮಂದಿಯೆಲ್ಲ ಸೇರಿ ಮರುಮದುವೆಯಂತೆ ಆಚರಿಸಿ ಸಂಭ್ರಮಿಸಿದೆವು. ಮನೆಗೆ ಚಪ್ಪರ ಹಾಕಿ ಸಿಂಗಾರಮಾಡಿ ಸಂಜೆವರೆಗೂ ಇಲ್ಲೆ ಇದ್ದು ಖುಷಿ ಪಟ್ಟುಹೋದೆವು ಎಂದು ನೆನಪಿಸಿಕೊಂಡರು ಡಾ.ಗಣೇಶ್.
ಮುಂದೆ ನಮ್ಮ ನಿವೃತ್ತ ಜೀವನವನ್ನು ಎಲ್ಲರೂ ಇಲ್ಲೆ ಕಳೆಯುವ ಯೋಜನೆ ಮಾಡುತ್ತಿದ್ದೇವೆ.ಜೊತೆಗೆ ನಮ್ಮ ಮಕ್ಕಳ ಮದುವೆಗಳನ್ನು ಯಾರದೋ ಛತ್ರದಲ್ಲಿ ಮಾಡುವ ಬದಲು ಕಾನನದಲ್ಲೇ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದರು.
ಖಚರ್ು ವೆಚ್ಚ : ತೋಟದ ನಿರ್ವಹಣೆಗೆ ಬೇಕಾದ ನೌಕರನ ಸಂಬಳ, ಮನೆ ಕ್ಲೀನಿಂಗ್ ನಂತಹ ಕೆಲಸಗಳಿಗೆ ಎಲ್ಲರೂ ಸೇರಿ ಒಂದು ಗ್ರೂಫ್ ಪಂಢ್ ಇಟ್ಟಿದ್ದು ಅದರಲ್ಲಿ ಖಚೂಮಾಡುತ್ತೇವೆ.ಉಳಿದಂತೆ ನಮ್ಮ ಭಾಗದ ತುಂಡುಭೂಮಿಯ ಖರ್ಚನ್ನು ನಾವೇ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಹಣಕೊಟ್ಟು ಹಣ್ಣು ತರಕಾರಿ ಖರೀದಿಸುವುದು ಬೇರೆ. ಆದರೆ ನಾವೇ ಬೆಳೆದ ಹಣ್ಣು ತರಕಾರಿಗಳನ್ನು ತಿನ್ನುವುದರಲ್ಲಿ ಇರುವ ಖುಷಿ ಅದರಲ್ಲಿ ಇಲ್ಲ. ನಮ್ಮ ಭಾಗದಲ್ಲಿ ಮಾವು, ಸಪೋಟ,ಸೀಬೆ,ಪನ್ನೇರಳೆ,ಬಾಳೆ,ನಿಂಬೆ ಅಮಟೆ,ಅಂಟುವಾಳ,ಪುನರ್ಪುಳಿ,ನೆಲ್ಲಿ ಸೇರಿದಂತೆ ಆರ್ಯವೇದ ಔಷದೀಯ ಗಿಡಗಳನ್ನು ಹಾಕಿಕೊಂಡಿದ್ದೇವೆ. ಮನೆಯಲ್ಲಿ ಬರುವ ಅಡಿಗೆಮನೆಯ ತ್ಯಾಜ್ಯ ಮತ್ತಿತರ ಕಸವನ್ನು ವಾರಕ್ಕೊಮ್ಮೆ ತೋಟಕ್ಕೆ ತಂದು ಗಿಡದ ಬುಡಕ್ಕೆ ಹಾಕುತ್ತೇವೆ. ಆರಂಭದಲ್ಲಿ ಶ್ರೀ ಪದ್ಧತಿಯಲ್ಲಿ ಬತ್ತವನ್ನು ಬೆಳೆದಿದ್ದವು. ಮೊದಲು ಪ್ರತಿ ಭಾನುವಾರ ಎಲ್ಲರೂ ಒಟ್ಟಿಗೆ ಇಲ್ಲಿ ಸೇರುತ್ತಿದ್ದೆವು.ಈಗ ಬಿಡುವಿನ ವೇಳೆಯಲ್ಲಿ ಒಬ್ಬರಲ್ಲ ಒಬ್ಬರು ಪ್ರತಿದಿನ ಬಂದು ಹೋಗುತ್ತೇವೆ. ಆಗಾಗ ಒಟ್ಟಿಗೆ ಸೇರುತ್ತೇವೆ ಎಂದರು.
ಟ್ರೀ ಹೌಸ್ : ಶ್ಯಾಂಸುಂದರ್ ಅವರಿಗೆ ಸೇರಿದ ಭಾಗದಲ್ಲಿರುವ ಟ್ರೀ ಹೌಸ್ ಥಟ್ಟನೇ ಗಮನಸೆಳೆಯುತ್ತದೆ. ನಾಲ್ಕು ಮರಗಳ ನಡುವೆ ಕಬ್ಬಿಣದ ಕಂಭಗಳನ್ನು ಬಳಸಿಕೊಂಡು ಇಪ್ಪತ್ತು ಅಡಿ ಎತ್ತರದಲ್ಲಿ ನಿಮಾಘಣಮಾಡಿರುವ ಟ್ರೀ ಹೌಸ್ ನೋಡಲು ಆಕರ್ಷಣೀಯವಾಗಿ ಕಾಣುತ್ತದೆ.
ಒಂದು ಹಾಲ್ ಮತ್ತು ವಾಶೀಂಗ್ ರೂಂ ಹೊಂದಿರುವ ಟ್ರೀಹೌಸ್ 10* 15 ಅಡಿ ಅಳತೆಯಲ್ಲಿದೆ. ಮೇಲಕ್ಕೆ ಹತ್ತಲು ಬಿದಿರಿನ ಏಣಿ ಬಳಸುತ್ತಾರೆ. ವಿದ್ಯುತ್ಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪರಿಸರ ಪ್ರೀತಿ : ಆರಂಭದಲ್ಲಿ ಜಮೀನು ಖರೀದಿಸಿದಾಗ ಬರಡನಪುರ ಕೆರೆಯಲ್ಲಿ ವಲಸೆ ಹಕ್ಕಿಗಳಿಗೆ ಅನುಕೂಲವಾಗಲೆಂದು ಮೂರು ಐಲ್ಯಾಂಡ್ ನಿಮರ್ಾಣ ಮಾಡಿದ್ದೆವು. ಅದರಲ್ಲಿ ಈಗ ಒಂದು ಮಾತ್ರ ಉಳಿದುಕೊಂಡಿದೆ. ಕೆರಯ ಆಚೆಬದಿಯಲ್ಲಿ, ಸುತ್ತಾ ಒಂದಷ್ಟು ಗಿಡಗಳನ್ನು ಹಾಕಿದ್ದೆವು.ಈಗ ಅವೆಲ್ಲಾ ಬೆಳೆದು ದೊಡ್ಡ ಮರಗಳಾಗಿವೆ ಎಂದು ಮರಗಳತ್ತ ಕೈಮಾಡಿ ತೋರಿಸಿದರು.
ನಗರದ ಒತ್ತಡದ ನಡುವೆಯೂ ಹಳ್ಳಿಯ ಪ್ರಜ್ಞೆಯನ್ನು ಉಳಿಸಿಕೊಂಡು ತಮ್ಮ ಬಿಡುವಿನ ವೇಳೆಯನ್ನು ಪರಿಸರ ನಿಮರ್ಾಣಕ್ಕೆ ನೀಡಿರುವ ಗೆಳೆಯರ ಕಾನನದ ಕನಸನ್ನು ಕಣ್ತಂಬಿಕೊಂಡು ಪ್ರೇರಣೆ ಪಡೆಯುವವರು ಡಾ.ಗಣೇಶ್ 9900293689 ಅಥವಾ ಶ್ಯಾಂಸುಂದರ್ 9972695511 ಸಂಪಕರ್ಿಸಿ.







3 ಕಾಮೆಂಟ್‌ಗಳು: