vaddagere.bloogspot.com

ಬುಧವಾರ, ಮೇ 31, 2017

ಬಯಲಸೀಮೆಯಲ್ಲಿ ಬಂಗಾರದ ಬೆಳೆ ತೆಗೆದ ಕೊಡಗಿನ ಕಲಿ 
ಮೈಸೂರು : ಕೃಷಿ ಅಂದ್ರೆ ಚಿನ್ನದ ವ್ಯಾಪಾರದಂತೆ ಅಲ್ಲ.ಲಾಭ-ನಷ್ಟ ಲೆಕ್ಕಚಾರದ ಮೇಲೆ ಕೃಷಿ ಮಾಡಲು ಆಗಲ್ಲ.ಹಾಗಂತ ಕೃಷಿ ನಷ್ಟದ ಉದ್ಯೋಗ ಏನಲ್ಲಾ. ಹತ್ತು ಎಕರೆ ತೋಟದಿಂದ ನಮಗೆ ವಾಷರ್ಿಕ ಇಪ್ಪತ್ತೈದು ಲಕ್ಷದಿಂದ ಮೂವತ್ತು ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಇದಕ್ಕಿಂತ ಜೀವನಮಾಡಲು ಇನ್ನೇನು ಬೇಕು. ಕೃಷಿಗಿಂತ ಖುಶಿಯಾದ ಕೆಲಸ ಮತ್ತೊಂದಿಲ್ಲ. ಹಾಗಂತ ಖಡಕ್ ಆಗಿ ಹೇಳಿದವರು ಬೋಪು ಫಾರಂನ ಮಾಲೀಕ ಪಿ.ಕೆ.ಸೋಮಣ್ಣ.
ಮೈಸೂರಿನ ಕೂಗಳತೆ ದೂರದಲ್ಲಿದೆ ಬೋಪು ಫಾರಂ. ಸುತ್ತಮತ್ತು ಹತ್ತಾರು ಖಾಸಗಿ ಬಡಾವಣೆಗಳು. ನಡುವೆ ಅಚ್ಚ ಹಸಿರಿನ ತೋಟ. ಅಡಿಕೆ,ತೆಂಗು,ಮೆಣಸು ಸೇರಿದಂತೆ ಹತ್ತಾರು ಹಣ್ಣಿನ ಮರಗಳು. ತೋಟಕ್ಕೆ ಪ್ರವೇಶ ಮಾಡುತ್ತಿದ್ದಂತೆ ಕೊಡಗಿನ ವಾತಾವರಣವನ್ನು ನೆನಪಿಸುವಂತಹ ತಂಪಾದ ಜಾಗ. ಮೈಸೂರಿನ ಬೋಗಾದಿ ರಸ್ತೆಯ ಕೆ.ಎಮ್ಮನಹಳ್ಳಿಯ ಶ್ರೀ ಮಹಾಲಿಂಗೃಶ್ವರ ದೇವಾಲಯದ ಸಮೀಪ ಇದೆ ಬೋಪು ಫಾರಂ.
ಮಡದಿ ಕೆ.ಬಿ.ಶಾರದ ಅವರೊಂದಿಗೆ ತಮ್ಮ ಎಪ್ಪತ್ತರ ಇಳಿವಯಸ್ಸಿನಲ್ಲೂ ತೋಟದಲ್ಲಿ ಕೆಲಸಮಾಡುತ್ತಾ ಬಂದವರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಕೃಷಿಯಲ್ಲೇ ಖುಶಿ ಕಾಣುತ್ತಿದ್ದಾರೆ ಸೋಮಣ್ಣ. ಮೂಲತಃ ಮಡಿಕೇರಿಯವರಾದ ಸೋಮಣ್ಣ ನಲವತ್ತು ವರ್ಷಗಳ ಹಿಂದೆ ಮೈಸೂರಿಗೆ ನೌಕರಿ ಅರಸಿ ಬಂದವರು. ಮೈಸೂರು ಕಾಫಿ ಕ್ಯೂರಿಂಗ್ ವಕ್ಸರ್್ನಲ್ಲಿ ಪತ್ನಿ ಶಾರದ ಅವರೊಂದಿಗೆ ಗುಮಾಸ್ತನಾಗಿ ನೌಕರಿಗೆ ಸೇರಿದ ಸೋಮಣ್ಣ ತಮ್ಮ ದುಡಿಮೆಯಿಂದ ಸೂಪರ್ ವೈಸರ್ ಆಗಿ, ಮ್ಯಾನೇಜರ್ ಆಗಿ ಕೊನೆಗೆ ಮ್ಯನೇಜಿಂಗ್ ಡೈರೆಕ್ಟರ್(ಎಂಡಿ) ಆಗಿ ನಿವೃತ್ತರಾದರು.
ಭೂಮಿಗೆ ಬಂತು ಚಿನ್ನದ ಬೆಲೆ : ಅವರು 1981 ರಲ್ಲಿ  ಕೆ.ಎಮ್ಮನಹಳ್ಳಿಯ ಈ ಜಮೀನು ಖರೀದಿಸಿದಾಗ ಇದು ಬ್ಯಾರನ್ ಲ್ಯಾಂಡ್. ಇಲ್ಲಿ ಯಾವ ಮರಗಿಡಗಳು ಇರದ ಖಾಲಿ ಪ್ರದೇಶ. ಆಗ ಎಕರೆಗೆ ಏಳು ಸಾವಿರ ರೂಪಾಯಿಯಂತೆ ಐದು ಎಕರೆ ಖರೀದಿ ಮಾಡಿದರು.ಒಂದೆರಡು ವರ್ಷದ ಬಳಿಕ ಎಕರೆಗೆ ಇಪ್ಪತ್ತೈದು ಸಾವಿರ ರೂ ನೀಡಿ ಮತ್ತೆ ಎರಡು ಎಕರೆ ಖರೀದಿ ಮಾಡಿದರು. ನಂತರ ಮತ್ತೆ ಎಕರೆಗೆ ಎರಡು ಲಕ್ಷ ರೂಪಾಯಿ ನೀಡಿ ಮೂರು ಎಕರೆ ಖರೀದಿಸಿದರು. ಈಗ ಒಟ್ಟು ಹತ್ತು ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಆ ಭೂಮಿಗೆ ಈಗ ಚಿನ್ನದ ದರ ಬಂದಿದೆ. ಬಯಲಾಗಿದ್ದ ಪ್ರದೇಶವೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಸೂರ್ಯ ರಶ್ಮಗಳು ಭೂಮಿಗೆ ತಾಕಲು ಶ್ರಮಪಡುತ್ತವೆ. ಅಂತಹ ಒಂದು ಸುಂದರವಾದ ತೋಟವನ್ನು ಕಟ್ಟಿದ್ದಾರೆ ಸೋಮಣ್ಣ.
ಇಷ್ಟೇ ಅಲ್ಲ ತಮ್ಮ ಏಕಮಾತ್ರ ಪುತ್ರಿ ಕಳ್ಳಿಚಂಡ ಸುಜ್ಯೋತಿ ರಾಬಿನ್ ಅವರನ್ನು ಪ್ರಗತಿಶೀಲ ಯುವ ರೈತ ಮಹಿಳೆಯಾಗಿ ಮಾಡಿದ್ದಾರೆ. ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಧರೆಯಾಗಿರುವ ಕಳ್ಳಿಚಂಡ ಸುಜ್ಯೋತಿ ರಾಬಿನ್ ವೀರಾಜಪೇಟೆ ಸಮೀಪ ಚಿಕ್ಕಮಂಡೂರಿಗೆ ವಿವಾಹವಾಗಿದ್ದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ವೀರಾಜಪೇಟೆ ತಾಲೂಕು ಮಟ್ಟದ ಪ್ರಗತಿಶೀಲ ಯುವರೈತ ಮಹಿಳೆ ಪ್ರಶಸ್ತಿ ಪಡೆಯುವ ಮೂಲಕ ತಂದೆಗೆ ತಕ್ಕ ಮಗಳಾಗಿದ್ದಾರೆ.
ಸೋಮಣ್ಣನವರ ತೋಟಕ್ಕೆ ನೈಸಗರ್ಿಕ ಕೃಷಿಕರಾದ ಸರಗೂರು ಶಿವನಾಗಪ್ಪ ಮತ್ತು ಕಡಕೊಳ ಹರೀಶ್ ಅವರೊಂದಿಗೆ ಹೋದಾಗ ಎಪ್ಪತ್ತರ ಇಳಿವಯಸ್ಸಿನಲ್ಲೂ ಸೋಮಣ್ಣ ಕೃಷಿನಿರತರಾಗಿದ್ದರು. ಅವರ ಉತ್ಸಾಹ, ಅಸಕ್ತಿಯನ್ನು ಕಂಡು ನಮಗೆ ಅಚ್ಚರಿಯಾಯಿತು. ಕೃಷಿ ಕೆಲಸದ ನಡುವೆಯೂ ಬಿಡುವುಮಾಡಿಕೊಂಡು ಅವರು ತಮ್ಮ ನಾಲ್ಕು ದಶಕಗಳ ಕೃಷಿ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು.
ಕೃಷಿಗೆ ಸುವರ್ಣಕಾಲ : "1980 ರಲ್ಲಿ ನಾವು ಜಮೀನು ಖರೀದಿಸಿದಾಗ  ತೆರೆದ ಬಾವಿಯಲ್ಲಿ ಏಳೆಂಟು ಅಡಿಯಲ್ಲಿ ನೀರು ಬರುತ್ತಿತ್ತು.ನಂತರ ಮೂವತ್ತೈದು ಅಡಿಗೆ ಹೋಯಿತು. ಕ್ರಮೇಣ ಅಂತರ್ಜಲ ಪಾತಾಳ ಸೇರಿತು. 150 ರಿಂದ ಆರಂಭವಾದದ್ದು ಈಗ 500 ಅಡಿ ಮುಟ್ಟಿದೆ.ಮುಂದೆ ಏನಾಗುತ್ತದೋ ಗೊತ್ತಿಲ್ಲ. ಆಗ ಇಪ್ಪತ್ತನಾಲ್ಕು ಗಂಟೆಗಳ ಕಾಲ ವಿದ್ಯುತ್ ದೊರೆಯುತ್ತಿತ್ತು. ಅದು ಕೃಷಿಯ ಸುವರ್ಣಕಾಲ. ನೀರು,ಕರೆಂಟು, ಮಳೆ, ಕೃಷಿ ಕಾಮರ್ಿಕರು ಯಾವುದಕ್ಕೂ ತೊಂದರೆ ಇರಲಿಲ್ಲ. ಆರಂಭದಲ್ಲಿ ತರಕಾರಿ,ಕಬ್ಬು ಎಲ್ಲಾ ಬೆಳೆದೆ. ನಂತರ ಅದು ಲಾಭದಾಯಕವಲ್ಲ ಅಂತ ಗೊತ್ತಾದಾಗ ವಾಣಿಜ್ಯ ಬೆಳೆಗಳನ್ನೆ ಪ್ರಾಧಾನವಾಗಿಟ್ಟುಕೊಂಡು ತೋಟ ಮಾಡಿಕೊಂಡೆ. ಸಾಲ ಮಾಡಿ ವ್ಯವಸಾಯಮಾಡುತ್ತೇನೆ ಎಂಬ ಧೈರ್ಯ ಇದ್ದು, ಪ್ರಮಾಣಿಕವಾಗಿ ದುಡಿದರೆ ಭೂಮಿತಾಯಿ ಕೈ ಬಿಡುವುದಿಲ್ಲ.ಕೃಷಿಯಲ್ಲಿ ಆರಾಮವಾಗಿ ನೆಮ್ಮದಿಯಿಂದ ಇರಬಹುದು" ಎಂದು ತಮ್ಮ ಹಳೆಯ ನೆನಪುಗಳನ್ನು ತೆರೆದಿಟ್ಟರು ಸೋಮಣ್ಣ. ಕೊಡಗಿಗಿಂತಲ್ಲೂ ಇಲ್ಲಿ ಅರೇಬಿಕಾ ಕಾಫಿಯನ್ನು ಚೆನ್ನಾಗಿ ಬೆಳೆದಿದ್ದೆ. ಸೂರ್ಯನ ಕಿರಣಗಳು ಭೂಮಿಗೆ ತಾಕಲು ಸಾಧ್ಯವಾಗದಂತೆ ತೋಟ ಹಸಿರಾಗಿತ್ತು. ಮೂರು ವರ್ಷದಿಂದ ಮಳೆಯಾಗದೆ ಸ್ವಲ್ಪ ಸೊರಗಿದೆ ಎಂದರು.
ಸಂಕಷ್ಟ ಕಾಲ :"ನಾಲ್ಕು ವರ್ಷಗಳಿಂದ ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಕೇವಲ ನಾಲ್ಕು ಇಂಚು ಮಾತ್ರ ಮಳೆಯಾಗಿತ್ತು.ಹತ್ತಾರು ವರ್ಷಗಳಿಂದ ಮಳೆನೀರು ಅಳತೆ ಮಾಪನ ಇಟ್ಟುಕೊಂಡು ಮಳೆಯ ಪ್ರಮಾಣವನ್ನು ದಾಖಲು ಮಾಡುತ್ತಾ ಬಂದಿದ್ದೇನೆ. ಈಗ ನೀರಿಗೆ ತುಂಬಾ ತೊಂದರೆಯಾಗಿದೆ.ಬೋರ್ವೆಲ್ಗಳಲ್ಲಿ ನೀರಿಲ್ಲ.ಕರೆಂಟೂ ಇಲ್ಲ. ಇಷ್ಟಾದರೂ ನಮ್ಮ ತೋಟ ಹಸಿರಾಗಿದೆ. ಉಳಿದವರ ತೋಟಗಳು ಒಣಗಿ ಹೋಗಿವೆ.ಇದಕ್ಕೆ ನಾವು ಅನುಸರಿಸುತ್ತಾ ಬಂದ ಕ್ರಮ ಕಾರಣ" ಎಂದು ತಮ್ಮ ಕೃಷಿ ಪ್ರಯೋಗಗಳ ಬಗ್ಗೆ ಹೇಳುತ್ತಾ ಹೋದರು.
ತೋಟದಲ್ಲಿ ಅಲಲ್ಲಿ ಹಿಂಗುಗುಂಡಿಗಳನ್ನು ನಿಮರ್ಾಣಮಾಡಿರುವುದರಿಂದ ಬಿದ್ದ ಮಳೆಯನೀರು ಅಲ್ಲೇ ಹಿಂಗುತ್ತದೆ.ಒಂದು ಹನಿ ನೀರು ಆಚೆ ಹೋಗುವುದಿಲ್ಲ. ಜೊತೆಗೆ ತೋಟದಲ್ಲೇ ಎರೆಹುಳ ತೊಟ್ಟಿಗಳನ್ನು ಅಲ್ಲಿಲ್ಲಿ ನಿಮರ್ಾಣಮಾಡಿ ಮಣ್ಣಿನ ಹ್ಯೂಮಸ್ ಕಾಪಾಡಿಕೊಳ್ಳಲಾಗಿದೆ. ತೋಟದಲ್ಲಿ ಬಿದ್ದ ಎಲೆಗಳು ಮಣ್ಣಿನಲ್ಲೇ ಕರಗಿ ಗೊಬ್ಬರವಾಗುತ್ತವೆ. ಆರಂಭದಲ್ಲಿ ಗಿಡಗಳಿಗೆ ಜೀವಾಮೃತ ಕೊಡಲಾಗಿತ್ತು.ಕಾಂಪೋಸ್ಟ್ ಗೊಬ್ಬರ ನೀಡಲಾಗಿತ್ತು.ಈಗ ಅದನ್ನೆಲ್ಲಾ ನಿಲ್ಲಿಸಲಾಗಿದೆ.ತೋಟದ ತುಂಬ ಹೊದಿಕೆಯನ್ನು ಮಾತ್ರ ಮಾಡಲಾಗಿದೆ. ಇದರಿಂದಾಗಿ ತೋಟ ತೇವಾಂಶವನ್ನು ಕಾಪಾಡಿಕೊಂಡು ಇಂತಹ ಬಿರು ಬೇಸಗೆಯಲ್ಲೂ ಹಸಿರಾಗಿದೆ.
ಹಿಂದೆ ನಮ್ಮ ತೋಟದಲ್ಲಿ ಮಾಡಿರುವ ಎರೆಹುಳು ಗುಂಡಿಗಳನ್ನು ತೋರಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರನ್ನು ಕರೆದುಕೊಂಡು ಬರುತ್ತಿದ್ದರು. ಮಳೆ ನೀರು ಕೋಯ್ಲು ಮತ್ತು ಎರೆಹುಳು ಗುಂಡಿ ಮಾಡಿಕೊಳ್ಳುವ ಬಗ್ಗೆ ತೋಟದಲ್ಲಿ ಪ್ರಾತ್ಯಕ್ಷಿಕೆ ಕೂಡ ನಡೆಸಲಾಗುತ್ತಿತ್ತು ಎಂದು ನೆನಪಿಸಿಕೊಂಡರು.
ಒಣಗಿ ನಿಂತ ಅಡಿಕೆ : "ಸಮೀಪದಲ್ಲಿ ಇರುವ ಮತ್ತೊಂದು ಮೂರು ಎಕರೆ ತೋಟ ನಾಲ್ಕು ವರ್ಷದ ಹಿಂದೆ ತುಂಬಾ ಚೆನ್ನಾಗಿತ್ತು. ಅಲ್ಲಿಯೂ ಅಡಿಕೆ,ತೆಂಗು,ಮೆಣಸು ಹಾಕಿದ್ದೆವು. ಈ ತೋಟ ಕಟ್ಟಿದ ಅನುಭವದ ಮೇಲೆ ಮೂರು ಎಕರೆಯನ್ನು ಸುಂದರವಾಗಿ, ಹೆಚ್ಚು ಆದಾಯ ಬರುವಂತರ ಯೋಜಿಸಿ,ಯೋಚಿಸಿ ತೋಟ ಕಟ್ಟಿದ್ದೆ. ಆದರೆ ಈಗ ಮಳೆ ಇಲ್ಲದ ಕಾರಣ ಅಡಿಕೆ ಗಿಡಗಳೆಲ್ಲ ಒಣಗಿ ನಿಂತವು.ಅದಕ್ಕಾಗಿ ಅಡಿಕೆ ಇದ್ದ ಜಾಗದಲ್ಲಿ ಸಿಲ್ವರ್ ಮರ ಹಾಕಿ ಮೆಣಸು ಬಳ್ಳಿ ಹಬ್ಬಿಸಿದ್ದೇವೆ" ಎಂದರು ಸೋಮಣ್ಣ. ಕಳೆದ ವಾರ ಮಳೆ ಇಲ್ಲದೆ ತೋಟಕ್ಕೆ ಟ್ಯಾಂಕರ್ನಿಂದ ನೀರು ತಂದು ಗಿಡಗಳಿಗೆ ಹಾಕಿದೆವು.ಹೀಗೆ ಪರಿಸ್ಥಿತಿ ಮುಂದುವರಿದರೆ ಬೇಸಾಯ ಕಷ್ಟ ಎನ್ನುತ್ತಾರೆ.
ನಮಗೆ ಕೃಷಿ ಬಿಡುವ ಮನಸ್ಸಿಲ್ಲ.ಆದರೆ ಸರಕಾರದ ಯೋಜನೆಗಳು ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಿದೆ ಅನಿವಾರ್ಯವಾಗಿ ಕೃಷಿ ಬಿಡಬೇಕಾಗುತ್ತದೆ. ಈಗಾಗಲೇ ಮೈಸೂರು ಮೆಘಾ ಪ್ಲಾನ್ ಪ್ರಕಾರ ನಮ್ಮ ತೋಟ ಇರುವ ಜಾಗವನ್ನು ಸ್ಪೋಟ್ಸರ್್ ಫೆವಿಲಿಯನ್ ಅಂತ ಗುರುತುಮಾಡಿದ್ದಾರೆ. ಇದು ಸ್ಪೋಟ್ಸರ್್ ಫೆವಿಲಿಯನ್ ಆಗಲು ಸೂಕ್ತ ಜಾಗ ಅಲ್ಲ. ಸುತ್ತಮುತ್ತ ಅಲಿನೇಟೆಡ್ ಲ್ಯಾಂಡ್, ವೃದ್ಧಾಶ್ರಮ,ಕೋಳಿಫಾರಂ ಇದೆ. ಪಕ್ಕೆದಲ್ಲಿ ಆರು ಪಥದ ರಸ್ತೆ ಬರುತ್ತಿದೆ.
ಸುತ್ತಮತ್ತೆಲ್ಲ  ನಿವೇಶನಗಳಿವೆ. ಕೆಲವರು ತರಕಾರಿ ಬೆಳೆಯುತ್ತಾರೆ.ತೋಟ ಇದೊಂದೆ. ನಾವೆಲ್ಲ ಸೇರಿ ತಕರಾರು ಅಜರ್ಿ ಸಲ್ಲಿಸಿದ್ದೇವೆ. ಆದರೂ ಭೂಮಿ ವಶಪಡಿಸಿಕೊಳ್ಳಲು ಸರಕಾರ ಮುಂದಾದರೆ ಕೃಷಿ ಬಿಡಬೇಕಾಗುವುದು ಅನಿವಾರ್ಯವಾಗುತ್ತದೆ ಎಂದು ಸೋಮಣ್ಣ ಆತಂಕ ವ್ಯಕ್ತಪಡಿಸುತ್ತಾರೆ.
ಕೃಷಿ ಲಾಭದಾಯಕ : ಕೃಷಿಯನ್ನು ನಂಬಿ ದುಡಿದರೆ ನಷ್ಟ ಇಲ್ಲ. ನಮಗೆ ಆಗಲೂ ಕೂಲಿಕಾಮರ್ಿಕರ ಸಮಸ್ಯೆ ಇರಲಿಲ್ಲ.ಈಗಲೂ ಇಲ್ಲ. ಈಗ ಸ್ವಲ್ಪ ಕೂಲಿ ಹಣ ಹೆಚ್ಚಾಗಿದೆ ಅಷ್ಟೇ ಎನ್ನುತ್ತಾರೆ. ರೈತರು ಮಳೆ ನೀರು ಕೊಯ್ಲು, ಸಮಗ್ರ ಬೇಸಾಯ ಪದ್ಧತಿ, ಪಶು ಆಧಾರಿತಸಾವಯವ ಕೃಷಿ ಅಳವಡಿಸಿಕೊಂಡರೆ ಕೃಷಿಯಿಂದಲ್ಲೂ ಲಾಭ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು.
ಮೊನ್ನೆ ಯಾರೋ ಇಬ್ಬರು ಸಾಫ್ಟ್ವೇರ್ ದಂಪತಿಗಳು ನಮ್ಮ ತೋಟಕ್ಕೆ ಬಂದಿದ್ದರು. ಕೆಲಸ ಬಿಟ್ಟು ಕೃಷಿ ಮಾಡಲು ಮುಂದಾಗಿದ್ದೇವೆ.ಮಂಡ್ಯದ ಸಮೀಪ ಮೂರು ಎಕರೆ ಜಮೀನು ಖರೀದಿಸಿದ್ದೇವೆ. ನಿಮ್ಮ ಸಲಹೆ ಮಾರ್ಗದರ್ಶನ ಬೇಕು ಅಂತ ಕೇಳಿದರು. ಕೃಷಿ ಕ್ಷೇತ್ರಕ್ಕೂ ವಿದ್ಯಾವಂತರು ವಲಸೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಯಾಗಿದೆ. ಮುಂದಿನ ದಿನಗಳಲ್ಲಿ ಕೃಷಿಯೇ ನೆಮ್ಮದಿ ತರುವ ಕೆಲಸವಾಗಲಿದ್ದು ವಿದ್ಯಾವಂತರು ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಲಿದ್ದಾರೆ ಎಂದು ಸೋಮಣ್ಣ ಹೇಳಿದರು. ಆಸಕ್ತರು ಹೆಚ್ಚಿನ ಮಾಹಿತಿಗೆ 9448011528 ಸಂಪಕರ್ಿಸಬಹುದು 




2 ಕಾಮೆಂಟ್‌ಗಳು:

  1. ಸಿಟಿಗಳು ಬೆಳೆಯುವುದನ್ನು ತಡೆದರೆ:
    ೧.ಸರಿ ಪ್ರಮಾಣದಲ್ಲಿ surface water ಹಂಚಿಕೆಯಾಗುತ್ತದೆ:ಸಿಟಿಗೂ ಬೇಸಾಯಕ್ಕೂ
    ೨.convective heat ಇಂದ ಸಿಟಿಯಲ್ಲಾಗುವ ಮಳೆ ಹೊಲಗಳಲ್ಲೊ ಕಾಡಿನಲ್ಲಿ ಆಗಬಹುದು: ಕಾಡಿನಲ್ಲಾದ ಮಳೆ ಹೊಲಕ್ಕೆ ಉಪಯೋಗ. ಸಿಟಿಯಲ್ಲಾದುದು ಮೋರಿ ಪಾಲು
    ೩.ಕರೆಂಟ್ ಸಿಟಿಯಲ್ಲಿ, ಕಾರ್ಖಾನೆಗಳಲ್ಲಿ ಮಿಕ್ಕಿದ್ದು ಹೊಲಕ್ಕೆ ಬರುವುದರಿಂದ ಸಿಟಿಗಳು ಬೆಳೆಯದೆ ಇದ್ದರೆನೆ ಒಳಿತು.
    ೪.ಮುಂದೊಂದುದಿನ ಬಿಲಗಳನ್ನು ಸಿಟಿನುಂಗಿ.. ಹೊಲಗಳು ಕಾಡನುಂಗುತ್ತವೆ.. ಹಸಿವು ಇಂಗದ ಸಿಟಿ ಮತ್ತೆ ಹೊಲವ ನುಂಗುತ್ತವೆ. ಸಿಟಿ ಸಿಮೆಂಟಿನೊಳಗೋ. ಸಿಮೆಂಟು ಸಿಟಿಯೊಳಗೋ

    ಪ್ರತ್ಯುತ್ತರಅಳಿಸಿ