vaddagere.bloogspot.com

ಸೋಮವಾರ, ಮೇ 1, 2017

ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ 
ಸಾವಯವ ಕೃಷಿಕ ನಾರಾಯಣರೆಡ್ಡಿ
ಮೈಸೂರು : ಮಣ್ಣಿಂದ ಕಾಯ ಮಣ್ಣಿಂದ

ಮಣ್ಣ ಬಿಟ್ಟವರಿಗೆ ಆಧಾರವೇ ಇಲ್ಲ... ಎಂಬ ಕನಕದಾಸರ ಜನಪ್ರಿಯ ಕೀರ್ತನೆ ಮಣ್ಣು ಮುಂತಾದ ಸಕಲ ಚರಾಚರ ವಸ್ತುಗಳ ಪ್ರಾಮುಖ್ಯತೆಯನ್ನು ಸಂಕೇತಿಸುತ್ತದೆ.ಮಣ್ಣನ್ನು ಮರೆತು ಕೃಷಿ ಮಾಡಲು ಮುಂದಾದ ಪರಿಣಾಮ ಈಗ ನಮ್ಮ ಕಣ್ಣ ಮುಂದಿದೆ. ಮಣ್ಣನ್ನು ಮಕ್ಕಳಂತೆ ಜತನದಿಂದ ಕಾಪಾಡಿಕೊಂಡು ಕೃಷಿಮಾಡಿದರು ನೂರಾರು ಮಂದಿ ಇದ್ದಾರೆ. ಅಂತಹವರೇ ಇಂದು ನಮಗೆ ಆದರ್ಶವಾಗಬೇಕು.ಕುಳಿತಲ್ಲಿ ನಿಂತಲ್ಲಿ ಮಣ್ಣಿನ ಬಗೆ ಮಾತನಾಡಬೇಕು. ಆ ಮೂಲಕ ಸಹಜ ಕೃಷಿಯ ಬಗ್ಗೆ ಜಾಗೃತಿ ಮೂಡಿಸಬೇಕು.
ಅದು ದೇಶ ವಿದೇಶಗಳ ಕೃಷಿ ವಿದ್ಯಾಥರ್ಿಗಳ ಸ್ಪೂತರ್ಿಯ ನೆಚ್ಚಿನ ತಾಣ.ಪಾರಂಪರಿಕ ಕೃಷಿಯ ಪ್ರಯೋಗಶಾಲೆ. ನಾಲ್ಕು ಎಕರೆ ಪ್ರದೇಶದಲ್ಲಿ ತೇಗ,ಹೊನ್ನೆ,ಬೀಟೆ,ಮತ್ತಿ,ಹಲಸು,ಹೆಬ್ಬೇವು ಸೇರಿದಂತೆ ನಾನಾ ಬಗೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮರಗಳು ಬೆಳೆದು ನಿಂತಿವೆ. ಮನೆಗೆ ಬೇಕಾದ ಎಲ್ಲಾ ಬಗೆಯ ಹಣ್ಣು ತರಕಾರಿಗಳು.ಹಾಲು,ಮೊಸರು,ಮಜ್ಜಿಗೆಗೆ ಬರವಿಲ್ಲ.
ಹೌದು. ಅದೊಂದು ಸುಸ್ಥಿರ,ಸಮೃದ್ಧ ಸಾವಯಾವ ತೋಟ. ದನಕರು,ಕೋಳಿಕುರಿ,ಗಿಡಮರ ಎಲ್ಲಾ ಸೇರಿ ಅಲ್ಲೊಂದು ದೇವಲೋಕವೇ ಸೃಷ್ಠಿಯಾದಂತೆ.ಬೆಂಗಳೂರಿನಿಂದ 50 ಕಿ.ಮೀ.ದೂರದ ದೊಡ್ಡಬಳ್ಳಾಪುರದ ಮರೇನಹಳ್ಳಿ ಬಳಿ ಶ್ರೀನಿವಾಸಪುರ ಎಂಬ ಗ್ರಾಮದಲ್ಲಿ ಈ ತಪೋಭೂಮಿ ಇದೆ. ಡಾ.ಎಲ್.ನಾರಾಯಣರೆಡ್ಡಿ ಮತ್ತು ಪತ್ನಿ ಸರೋಜಮ್ಮ ಅವರು ಸೇರಿ ಕಟ್ಟಿದ ತೋಟ ಅದು.ನಾಲ್ಕು ದಶಕಗಳ ಸಾವಯವ ಕೃಷಿ ನಡಿಗೆ ಅವರದು.
ವಿದೇಶದ ವಿಶ್ವ ವಿದ್ಯಾನಿಲಯವೊಂದು ಒಮ್ಮೆ ನಾರಾಯಣರೆಡ್ಡಿ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದಾಗ ನನ್ನ ಕೃಷಿ ತನ್ನ ಕಾಲ ಮೇಲೆ ನಿಲ್ಲುವವರಗೆ ನಾನು ನನ್ನ ತೋಟದಿಂದ ಹೊರಗೆ ಬರುವ ಮಾತೇ ಇಲ್ಲ ಎಂದು ನಯವಾಗಿ ನಿರಾಕರಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ವಿಡಿಯೋ ಒಂದು ಹರಿದಾಡುತ್ತಿರುವುದನ್ನು ನೀವೂ ನೋಡಿರಬಹುದು.ಕೃಷಿ ಆಸಕ್ತರು ಮತ್ತು ಎನ್ಜಿಒ ಸಂಘಟಕರನ್ನು ಉದ್ದೇಶಿಸಿ ಇಳಿವಯಸ್ಸಿನ ವೃದ್ಧರೊಬ್ಬರು ಮಾತನಾಡುತ್ತಾರೆ. ಸರಕಾರ,ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು ರೈತರಿಗೆ ಸಬ್ಸಿಡಿ,ನೆರವು,ಸಾಲಮನ್ನಾ ಯಾವುದು ಬೇಡ ಈ ಭೂಮಿಯಲ್ಲಿ ಶೇಕಡ ಎರಡರಷ್ಟು ಸಾವಯವ ಇಂಗಾಲ (ಸಾಯಿಲ್ ಕಾರ್ಬನ್) ಹೆಚ್ಚು ಮಾಡಿ ಸಾಕು ಎಂದು ಹೇಳುತ್ತಾರೆ.
ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಬೃಹತ್ ನೀರಾವರಿ ಯೋಜನೆಗಳನ್ನು ಮಾಡುವುದು ಬಿಟ್ಟು ಮಣ್ಣಿನಲ್ಲಿ ಶೇ 2 ರಷ್ಟು ಸಾವಯವ ಇಂಗಾಲ ಹೆಚ್ಚುಮಾಡದಿದ್ದರೆ ಈ ಭೂಮಿಗೆ ಉಳಿಗಾಲವಿಲ್ಲ, ರೈತನಿಗೂ ಭವಿಷ್ಯ ಇಲ್ಲ ಎಂದು ಹೇಳುತ್ತಾರೆ.
ಅದು ಸುಮಾರು ಹದಿನೈದು ನಿಮಿಷಗಳ ವಿಡಿಯೋ.ಅದನ್ನು ಕೇಳಿದ ತುಂಬಾ ಜನ ರೋಮಾಂಚನಗೊಂಡಿದ್ದಾರೆ.ಕೆಲವರು ಇವರು ಯಾರು? ಎಂದು ತಲೆಕೆಡಿಸಿಕೊಂಡಿದ್ದಾರೆ. ಮೊನ್ನೆ ಶಿವಮೊಗ್ಗದಿಂದ ದೂರವಾಣಿ ಕರೆಮಾಡಿದ ಕನ್ನಡ ಉಪನ್ಯಾಸಕಿಯಾಗಿರುವ ಗೆಳತಿ ಗೀತಾ ಕಾತರ್ೀಕ್ ಅವರು ವಿಡಿಯೋದಲ್ಲಿ ಮಾತನಾಡುತ್ತಿರುವ ಯಾರು.ಕೃಷಿಯ ಬಗ್ಗೆ ಇಷ್ಟೊಂದು ಅದ್ಭುತವಾಗಿ ಮಾತನಾಡಿದ್ದಾರೆ ಎಂದು ಕೇಳಿದರು. ಅವರು ಪಾರಂಪರಿಕ ಕೃಷಿಯ ದಿಕ್ಕನ್ನೇ ಬದಲಿಸಿದ.ಅಂತರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಕೃಷಿಯಲ್ಲಿ ಮಾಡಿದ ಸಾಧನೆಯಿಂದ ಗಮನಸೆಳೆದ,ಯುವಕರ ಸ್ಪೂತರ್ಿಯ ಚಿಲುಮೆ ಡಾ.ಎಲ್.ನಾರಾಯಣ ರೆಡ್ಡಿ ಎಂದು ಹೇಳಿದೆ.
ನಾಲ್ಕು ದಶಕಗಳ ಸಾವಯವ ಕೃಷಿಪಯಣಕ್ಕೆ ಅವರಿಗೆ ಹತ್ತಾರು ರಾಷ್ಟ್ರೀಯ,ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳುಲಭಿಸಿವೆ. ಹಾಲೆಂಡ್,ಜಪಾನ್,ಜರ್ಮನಿ ಸೇರಿದಂತೆ ಹದಿನೈದು ದೇಶಗಳ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದ್ದಾರೆ.
ಏಳೆಂಟು ಭಾಷೆಗಳನ್ನು ನಿರ್ರಗಳವಾಗಿ ಮಾತನಾಡಬಲ್ಲ ನಾರಾಯಣರೆಡ್ಡಿ ಓದಿರುವುದು ಕೇವಲ ಎಂಟನೇ ತರಗತಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಬದುಕು ಅವರಿಗೆ ಎಲ್ಲಾ ಪಾಠಗಳನ್ನು ಕಲಿಸಿದೆ.ಅವರ ಮನೆಯೆ ಒಂದು ವಿಶ್ವ ವಿದ್ಯಾನಿಲಯ.ದೇಶ ವಿದೇಶದ ಕೃಷಿ ವಿದ್ಯಾಥರ್ಿಗಳು ಇವರ ತೋಟದಲ್ಲಿರುತ್ತಾರೆ.
1972 ರಲ್ಲಿ ಕೃಷಿಗೆ ಬಂದ ಇವರು ಅದಕ್ಕೂ ಮೊದಲು ಹೋಟೆಲ್ನಲ್ಲಿ ಕ್ಲೀನರ್ ಆಗಿದ್ದರು.ಆಮೇಲೆ ಲಾರಿ ಆಫೀಸಿನಲ್ಲಿ ಪ್ಯೂನ್ಆಗಿ ಸೇರಿಕೊಂಡು ಗುಮಾಸ್ತನಾಗಿ,ಮ್ಯಾನೇಜರ್ ಆಗಿ ಕೆಲಸಮಾಡಿದರು. ಸಂಬಳದಲ್ಲಿ 45 ಸಾವಿರ ರೂಪಾಯಿ ಉಳಿಸಿ ಜಮೀನು ಖರೀದಿಮಾಡಿದರು. ಬೆಂಗಳೂರಿವ ವೈಟ್ ಫೀಲ್ಡ್ ಬಳಿ ಜಮೀನು ಹೊಂದಿರುವ ರೆಡ್ಡಿ ನಾನೂ ಈಗ ಕೋಟ್ಯಾಧಿಪತಿ ಎಂದು ನಗುತ್ತಾರೆ.
ವೈಟ್ಫೀಲ್ಡ್ ಬಳಿ ಇರುವ ಜಮೀನಿಗೆ ಚಿನ್ನದಂತ ಬೆಲೆಇದ್ದು ಅದನ್ನು ಮಾರಾಟ ಮಾಡಿ ಎಲ್ಲಾದರೂ ನೂರಾರು ಎಕರೆ ಜಮೀಣು ಖರೀದಿಸಿ ಕಾಡು ಬೆಳೆಸಬೇಕು ಎನ್ನುತ್ತಾರೆ.
ಹಣ ಇದ್ದರೆ ಸೈಟು ಬಂಗಲೆ,ಕಾಂಫ್ಲೆಕ್ಸು ಅಂತ ಚಿಲ್ಲರೆ ಯೋಚನೆ ಮಾಡುವಮಂದಿಯ ನಡುವೆ ನಾರಾಯಣರೆಡ್ಡಿ ಅಂತಿಮ ಸತ್ಯವನ್ನು ಅರಿತ ಸಂತನಂತೆ ಕಾಣುತ್ತಾರೆ.ಇಂತಹ ಮಹಾನ್ ಸಾಧಕನ ಕೃಷಿ ಚಿಂತನೆಗಳನ್ನು ಈ ವಾರ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಮಳೆಗಾಲದ ಆರಂಭದಲ್ಲಿರುವ ರೈತರು ನಾರಾಯಣರೆಡ್ಡಿ ಅವರ ಕೃಷಿ ವಿಚಾರಧಾರೆಗಳಿಂದ ಕಲಿತರೆ ಭೂಮಿಯಲ್ಲಿ ಸಾಕಷ್ಟು ನೀರು ಹಿಡಿದಿಟ್ಟುಕೊಳ್ಳಬಹುದು, ಮಣ್ಣನ್ನು ಫಲವತ್ತಾಗಿ ಮಾಡಬಹುದು.
"ರೈತ ಮಣ್ಣನ್ನು ಮರೆತು ಕೃಷಿ ಮಾಡಲು ಮುಂದಾದ್ದೆ ಇಂದಿನ ಎಲ್ಲಾ ಅನಾಹುತಗಳಿಗೂ ಕಾರಣ.ಒಂದು ಗ್ರಾಂ ಮಣ್ಣಿನಲ್ಲಿ 2 ಕೋಟಿ 90 ಲಕ್ಷ ಸೂಕ್ಷ್ಮಾಣು ಜೀವಿಗಳು ಇದ್ದರೆ ಅದು ಆರೋಗ್ಯವಾದ ಮಣ್ಣು. ಎಲ್ಲ ಸೂಕ್ಷ್ಮಾಣು ಜೀವಿಗಳು ಒಂದೆ ಆಯಸ್ಸು ಪಡೆದಿರುವುದಿಲ್ಲ. ಕೆಲವು ಗಂಟೆಗಳಲ್ಲಿ,ಕೆಲವು ಎರಡುಮೂರು ದಿನದಲ್ಲಿ ಸಾವನ್ನಪ್ಪುತ್ತವೆ.ಮಣ್ಣಿನಲ್ಲಿ ಬೆರೆತು ಬಿಡುತ್ತವೆ. ಕೆಲವು ಎರಡುಮೂರು ವಾರ ಇರುತ್ತವೆ.ಇದಕ್ಕಿಂತ ಹೆಚ್ಚು ಇರುವುದಿಲ್ಲ. ಇಂತಹ ಸೂಕ್ಷ್ಮಾಣುಜೀವಿಗಳಿಗೆ ನಾವು ಸಾವಯವಗೊಬ್ಬರ ಕೊಡಬೇಕು,ಗಿಡಗಳಿಗಲ್ಲ. ಈ ಸೂಕ್ಷ್ಮಾಣು ಜೀವಿಗಳಲ್ಲಿ ಶೇ 70 ರಷ್ಟು ಜೀವಿಗಳಿಗೆ ರಸಗೊಬ್ಬರಕ್ಕೆ ಹೊಂದಿಕೊಂಡು ಬದುಕುವ ಶಕ್ತಿ ಇಲ್ಲ.ಕೆಲವು ಮಾತ್ರ ಬದುಕುತ್ತವೆ. ಗಾಳಿ ಇಲ್ಲದೆ ವಾಸ ಮಾಡುವ ಶಕ್ತ ಇರೋದು ಅನೋರೆಬಿಕ್. ರಸಗೊಬ್ಬರ ಸಂಪರ್ಕ ಆದ ತಕ್ಷಣವೇ ನಶಿಸಿ ಹೋಗುವುದು ನೆರೋಬಿಕ್. ಅದಕ್ಕಾಗಿಯೇ ಒಂದು ಹಿಡಿ ರಸಗೊಬ್ಬರವನ್ನು ಮಣ್ಣಿಗೆ ಹಾಕಬಾರದು" ಎನ್ನುತ್ತಾರೆ ಡಾ.ನಾರಾಯಣರೆಡ್ಡಿ.
1960 ರಿಂದ 1972 ರವರೆಗೆ 12 ವರ್ಷಗಳ ಕಾಲ ನಮ್ಮ ವಿಜ್ಞಾನಿಗಳು ಕಾಂಪೋಸ್ಟ್ ಗೊಬ್ಬರಕ್ಕೆ ಮಹತ್ವ ನೀಡಲೇಇಲ್ಲ.ಪೆಟ್ರೋಲ್ ಬೆಲೆ ಕಡಿಮೆ ಇತ್ತು.ವಿದೇಶಿ ವಿನಿಮಯ ಕಷ್ಟ ಇರಲಿಲ್ಲ.ಸಲೀಸಾಗಿ ಬ್ಯಾರಲ್ ಬರೋದು.ನಾಫ್ತಾಲಿನನ್ನು ತರಿಸಿಕೊಂಡರು.ರಸಗೊಬ್ಬರನ ಕಡಿಮೆ ಬೆಲೆಗೆ ಮಾಡಿಕೊಟ್ಟರು.1972 ರಲ್ಲಿ ತೈಲ ಬೆಲೆ ಹೆಚ್ಚಳ ಆಯ್ತು. ಆಗ, ಶೇಕಡ 30 ರಷ್ಟು ಕಾಂಪೋಸ್ಟ್ ಗೊಬ್ಬರ ಹಾಗೂ ಶೇ.70 ರಷ್ಟು ರಸಗೊಬ್ಬರ ಬಳಸಿ ಎಂದು ಕೃಷಿ ಅಧಿಕಾರಿಗಳು ಹೇಳಿದರು.ಈಗ ಪೆಟ್ರೋಲ್ ಬೆಲೆ ದುಬಾರಿಯಾಗಿದೆ ಅದಕ್ಕೆ ಶೇ. 70 ರಷ್ಟು ಕಾಂಪೋಸ್ಟ್ ಶೇ.30 ರಷ್ಟು ರಸಗೊಬ್ಬರ ಬಳಸಿ ಅಂತ ಪ್ರಚಾರ ಮಾಡ್ತಾ ಇದ್ದಾರೆ. ಆದರೆ ವೈಜ್ಞಾನಿಕವಾಗಿ ಎಂದು ಎಕರೆ ಭೂಮಿಗೆ ಒಂದು ಹಿಡಿ ರಸಗೊಬ್ಬರವನ್ನು ಹಾಕಲು ನಾನು ಹೇಳುವುದಿಲ್ಲ ಎಂದು ತಮ್ಮ ಅನುಭವದ ಮಾತುಗಳನ್ನು ಸ್ಪಷ್ಟವಾಗಿ ಹೇಳುತ್ತಾರೆ ರೆಡ್ಡಿ.
ಒಂದು ಎಕರೆ ಮೇಲ್ಮಣ್ಣಿನಲ್ಲಿ (ಸುಮಾರು 9 ಇಂಚು) 600 ಕೆಜಿ ಬದುಕಿರೋ ಜೀವಿಗಳು ಇರಬೇಕು.ಇಲ್ಲಿಗೆ ವಿಷ ಹಾಕಿ ಎಲ್ಲವನ್ನೂ ಸಾಯಿಸಿದ್ದೇವೆ.ಎರೆಹುಳು ಇಲ್ಲ.ಒಂದು ದೇಶದ ಶ್ರಿಮಂತಿಕೆ ಅಲ್ಲಿನ ಮಣ್ಣನ್ನು ಅವಲಂಭಿಸಿರುತ್ತದೆ.ಅಲ್ಲಿರೋ ಕಾಖರ್ಾನೆಗಳಿಂದಲ್ಲ.ಬ್ಯಾಂಕಿನ ಠೇವಣಿಗಳಿಂದಲ್ಲ.ಚಿನ್ನದಿಂದ ಅಲ್ಲ.ಮಣ್ಣಿನ ಆರೋಗ್ಯಕ್ಕೆ ನಾವು ಗಮನ ಕೊಡುತಿಲ್ಲ.ಭೂಮಿಗೆ ವಿಷ ಉಣಿಸಿ ಪ್ರಗತಿ ಪ್ರಗತಿ ಅಂತ ಬೊಬ್ಬೆ ಹೊಡೆಯುತ್ತಿದ್ದೇವೆ.
ನೀವೆಲ್ಲ ಕಾಂಗ್ರೇಸ್ ಗಿಡ ಅಂತೀರಲ್ಲಾ (ಯುಪಿಟೋರಿಯಾ)ಅದನ್ನು ನೀರಲ್ಲಿ ನೆನಸಿ ಗಿಡಗಳಿಗೆ ಸ್ಪ್ರೈ ಮಾಡಿದರೆ ಒಂದಡಿ ಜಾಸ್ತಿ ಬೆಳೆಯುತ್ತೆ.ಗಿಡಗಳಿಗೆ ಗ್ರೋಥ್ ಪ್ರಮೋಟರ್ ಟಾನಿಕ್ ಆಗಿ ಕೆಲಸಮಾಡುತ್ತೆ.ಇದನ್ನ ಇಲಾಖೆಯವರು ಹೇಳಿಕೊಡುವುದಿಲ್ಲ.ರೈತ ಸ್ವತಃ ಪ್ರಯೋಗದಿಂದ ಕಂಡುಕೊಳ್ಳಬೇಕು.
ನಾವು ಹಸು ಸಾಕಿದ್ದೇವೆ.ಕಾರಣ ಹಸುಗಳಿಂದ ಗಂಜಲ ಸಿಗುತ್ತೆ ಅಂತ.ಎಷ್ಟು ಲೀಟರ್ ಹಾಲು ಸಿಗುತ್ತೆ ಅಂತ ನೀವು ಲೆಕ್ಕ ಹಾಕಿದರೆ ಎಷ್ಟು ಲೀಟರ್ ಗಂಜಲ ಸಿಗುತ್ತೆ ಅಂತ ನಾವು ಲೆಕ್ಕ ಹಾಕುತ್ತೇವೆ.ಗಂಜಲ ಸಗಣಿಗಿಂತಲ್ಲೂ ಒಳ್ಳೆಯ ಗೊಬ್ಬರ.ಮೂರು ಟನ್ ಗೊಬ್ಬರ ಮಾಡೋಕೆ 150 ಕೆಜಿ ಸಗಣಿ ಸಾಕು.ಜಮೀನಿನಲ್ಲಿ ಸಿಗುವ ಕಸಕಡ್ಡಿ ಸೊಪ್ಪು ಎಲ್ಲ ಕೊಳೆಸಿ ಗೊಬ್ಬರ ಮಾಡಬೇಕು ಎನ್ನುತ್ತಾರೆ.
ಮಧ್ಯ ಪ್ರದೇಶದಲ್ಲಿ ರಿಚಾರಿಯಾ ಅಂತ ಒಬ್ಬ ಕೃಷಿ ಅಧಿಕಾರಿ ಇದ್ದರು.ಅವರು ಸಾವಯವ ಕೃಷಿ ಪರವಾಗಿದ್ದರು.ಆಗ ಸಿ.ಸುಬ್ರಹ್ಮಣ್ಯಂ ಕೃಷಿ ಸಚಿವರು.ರಾಮಣ್ಣ ಕಾರ್ಯದಶರ್ಿ.ಎಂಎಸ್ ಸ್ವಾಮಿನಾಥನ್ ನಮ್ಮ ಹಸಿರು ಕ್ರಾಂತಿ ರುವಾರಿ.ಇವರೆಲ್ಲಾ ರಿಚಾರಿಯಾ ಅವರ ಬಳಿಗೆ ಹೋಗಿ ನೀವ್ಯಾಕೆ ರಸಗೊಬ್ಬರ ಬಳಕೆ ಬಗ್ಗೆ ಅಪಪ್ರಚಾರ ಮಾಡ್ತೀರಿ ಅಂತ ರೇಗಾಡಿದರಂತೆ. ಆಗ ರಿಚಾರಿಯಾ ಕೇಂದ್ರ ಸಚಿವರ ಮುಖಕ್ಕೆ ಪೇಪರ್ ಬಿಸಾಡಿ ನಾನು ಮಾಡ್ತಿರೋದು ಪಾಪ.ನೀವು ಮಾಡ್ತೀರೋದು ದೇಶ ಸೇವೆ ಅಂತ ಹೊರಟುಹೋದರು.ಈಗ ಭೂಪಾಲ್ನಲ್ಲಿ ಜಾಗ ತಗೊಂಡು ಸಾವಯವ ಕೃಷಿ ಮಾಡ್ತಿತಿದ್ದಾರೆ.ಬತ್ತದಲ್ಲಿ 16 ಸಾವಿರ ತಳಿಗಳನ್ನು ಅವರು ಸಂಗ್ರಹಮಾಡಿದ್ದಾರೆ.10 ಸಾವಿರ ತಳಿಗಳನ್ನು ಇಳಾಖೆ ಮಾರಾಟ ಮಾಡಿ ಆಗಿತ್ತು.ಇನ್ನೂ ಆರು ಸಾವಿರ ತಳಿ ಮಾರಿದ್ದರೆ ಬಿತ್ತನೆ ಬೀಜ ನಮಗೆ ವಿದೇಶದಿಂದ ಬರಬೇಕಾಗಿತ್ತು.ಎಇಚಾರಿಯಾ ಇಲ್ಲದೆ ಇದ್ದರೆ ಭತ್ತದ ಬೀಜಕ್ಕಾಗಿ ನಾವು ಫಿಲಿಫೈನ್ಸ್ಗೆ ಹೋಗಬೇಕಾಗಿತ್ತು. ಅವರು ದೇವರ ಹಾಗೆ ಬಂದು ನಮ್ಮನ್ನು ಕಾಪಾಡಿದರು.
ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಭಾರತದಲ್ಲಿ ಪರಿಸರ ಮಾಲೀನ್ಯ ಮಾಡ್ತಾ ಇರೋದು ಉದ್ಯಮಿಗಳಿಗಿಂತ ಜಾಸ್ತಿ ರೈತರು.ವಿದೇಶಗಳಿಗೆ ಹೋಲಿಸಿದರೆ ರಸಗೊಬ್ಬರ ಬಳಕೆ ನಮ್ಮಲ್ಲಿ ಕಡಿಮೆ ನಿಜ.ಆದರೆ ನಾವು ಕಡಿಮೆ ಬಳಸಿದರೂ ಸರಿಯಾದ ರೀತಿಯಲ್ಲಿ ಬಳಸದೆ ಉದ್ದಿಮೆಗಳಿಗಿಂತ ಹೆಚ್ಚು ಪರಿಸರ ಹಾಳು ಮಾಡುತ್ತಿದ್ದೇವೆ.
ಯುರೋಪ್,ಡೆನ್ಮಾಕರ್್,ಹಾಲೆಂಡ್,ಜರ್ಮನಿಲಿ ಆಮ್ಲಮಳೆ ಆಸ್ಯಿಡ್ ರೈನ್ ಬೀಳುತ್ತೆ. ಆ ಮಳೆಲಿ ನೆನೆದರೆ ಮನುಷ್ಯರು ಸುಟ್ಟು ಹೋಗ್ತಾರೆ.ಕಾಡುಗಳು ಸುಟ್ಟುಹೋಗಿವೆ.ನಾನು ಅದನ್ನು ನೋಡಿದೆ. ಕಾರಣ ಇದಕ್ಕೆ ಕೇವಲ ಉದ್ದಿಮೆಗಳು ಕಾರಣವಲ್ಲ. ರೈತರು ಕಾರಣ. ಅದಕ್ಕಾಗಿ ಈಗಲಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಸ್ನೇಹಿ ಕೃಷಿ ಮಾಡದಿದ್ದರೆ ಅಪಾಯ ನಿಶ್ಚಿತ ಎಂದು ನಾರಾಯಣರೆಡ್ಡಿ ಎಚ್ಚರಿಕೆ ನೀಡುತ್ತಾರೆ.
ಹಣ ಮಾಡಲು ಹೊರಟ ಆಧುನಿಕ ಕೃಷಿ ಭೂಮಿತಾಯಿಗೆ ಮಾಡ್ತಾ ಇರೋ ಅಪಚಾರ ಇದು.ಭೂಮಿ ತಾಯಿ ಹೂವು ಬಳ್ಳಿ ಹಸಿರಿನ ಸೆರಗು ಹೊದ್ದು ಚಿನ್ನದ ಒಡವೆ ತೊಟ್ಟು ಭೂಷಣವಾಗಿ ಇರಬೇಕಿತ್ತು.ಇವತ್ತು ನಾವು ರಸಗೊಬ್ಬರ,ಕೀಟನಾಶಕ ಬಳಸಿ ಅವಳನ್ನು ಬೆತ್ತಲೆ ಮಾಡುತ್ತಿದ್ದೇವೆ.
ನಾವು ವ್ಯವಸಾಯದ ಬಗ್ಗೆ ನಮ್ಮ ಮಕ್ಕಳಿಗೆ ಸರಿಯಾದ ಪಾಠ ಹೇಳಿಕೊಟ್ಟಿಲ್ಲ. ಇದೊಂದು ದರಿದ್ರ ಕೆಲಸ,ಲಾಭ ಇಲ್ಲ,ಗೌರವ ಇಲ್ಲ ಅಂತ ತಿಳಿದಿದ್ದಾರೆ.ಇದು ಶ್ರೇಷ್ಠ ಕೆಲಸ.ಸರಿಯಾಗಿ ಕೆಲಸ ಮಾಡಿದರೆ ರೈತನಾಗಿರೋದು ಹೆಮ್ಮೆ ವಿಷಯ ಆಗಬೇಕು ಗೌರವ ಸಲ್ಲಬೇಕು ಎನ್ನುವುದು ಡಾ.ಎಲ್.ನಾರಾಯಣ ರೆಡ್ಡಿ ಅವರ ನೇರ ನುಡಿ.
ಸಸ್ಯ ಮತ್ತು ಮಣ್ಣಿನ ಸಂಬಂಧದ ಬಗ್ಗೆ ವೈಜ್ಞಾನಿಕವಾಗಿ ಮಾತನಾಡಬಲ್ಲ ನಾರಾಯಣರೆಡ್ಡಿ ಅಂತಹ ಕೃಷಿಸಾಧಕರು ವಿರಳ. ಇಂತಹ ಹಿರಿಯ ಜೀವಿಗಳು ಸಾವಯವ ಕೃಷಿಯ ಗಬ್ಬೆ ಖಚಿತವಾಗಿ ತಮ್ಮ ಅನುಭವದಿಂದ ವಿಜ್ಞಾನಿಗಳಿಗೆ ಉತ್ತರ ನೀಡಬಲ್ಲ ಕೃಷಿತಜ್ಞರಾಗಿದ್ದಾರೆ.ಇಂತಹವರ ಸಂತತಿ ಹೆಚ್ಚಲಿ ಎನ್ನುವುದೆ ನಮ್ಮ ಆಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ