vaddagere.bloogspot.com

ಭಾನುವಾರ, ಮಾರ್ಚ್ 19, 2017

ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣೇ ಸತ್ತರೆ ಏಲ್ಲಿಗೆ ? : 
ಸಹಜ ಕೃಷಿಕ ಜಯರಾಮ್  ಆತಂಕ
ಪ್ರಕೃತಿಯೊಂದಿಗೆ ಸಂಭ್ರಮಿಸುವ "ಸುಕೃಷಿ"ಯ ಹರಿಕಾರ 
ಮೈಸೂರು : ಕೃಷಿಯಿಂದ ಲಾಭಗಳಿಸಬೇಕು,ಹೆಚ್ಚು ಹಣಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಕೃಷಿಕನಾಗಲು ಬಯಸಿದೆ.ಆದರೆ ನಾನು ಓದಿದ ಒಂದು ಪುಸ್ತಕ ನನ್ನ ಆಲೋಚನೆಯನ್ನೇ ಸಂಪೂರ್ಣ ಬುಡಮೇಲುಮಾಡಿತು ಎಂದರು ನಾಡಿನ ಸುಪ್ರಸಿದ್ಧ ಸಾವಯವ ಕೃಷಿಕ "ಸುಕೃಷಿ"ಯ ಹರಿಕಾರ ಎಚ್.ಆರ್,ಜಯರಾಮ್.
ಭೂಮಿಯನ್ನು ಶೋಷಣೆಮಾಡಿ.ರಾಸಾಯನಿಕಎಂಬ ವಿಷಸುರಿದು ಲಾಭಮಾಡಲು ಹೊರಟವನಿಗೆ, ಓದಲು ಸಿಕ್ಕ ಪುಸ್ತಕವೊಂದು, ಕೃಷಿ ಎಂದರೆ ಅದಲ್ಲ.ಪ್ರಕೃತಿಯ ಜೊತೆ ತಧ್ಯಾತ್ಮಹೊಂದಿ ಜೊತೆಜೊತೆಯಾಗಿ ಸಾಗುವುದು ಎಂದು ತೋರಿಸಿಕೊಟ್ಟಿತು. ಅದೇ "ಒನ್ ಸ್ಟ್ರಾ ರೆವಲುಷನ್". 
ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ್ಬ ಪುಕೋವಕ ಅವರ ಈ ಕೃತಿಯನ್ನು ಸಹಜ ಕೃಷಿ ಎಂಬ ಹೆಸರಿನಲ್ಲಿ ಪೂರ್ಣಚಂದ್ರ ತೇಜಸ್ವಿ. ನರೇಂದ್ರ ರೈ ದೆರ್ಲ ಕನ್ನಡಕ್ಕೆ ತಂದರೆ, ಸಂತೋಷ್ ಕೌಲಗಿಯವರು ಒಂದು ಹುಲ್ಲಿನ ಕ್ರಾಂತಿ ಎಂಬ ಹೆಸರಿನಲ್ಲಿ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಮಾಡಿದ್ದಾರೆ. ಇದನ್ನು ಓದಿದ ಮೇಲೆ 1999 ರಿಂದ ಸಹಜ ಕೃಷಿಯ ಧ್ಯಾನಕ್ಕೆ ಬಿದ್ದವನು ಹಿಂತಿರುಗಿ ನೋಡಿಲ್ಲ ಎಂದರು ಸುಕೃಷಿಯ ಹರಿಕಾರ ಜಯರಾಮ್. 
ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣೇ ಸತ್ತರೇ ಏಲ್ಲಿಗೆ ? ಎಂದು ಗಂಭೀರ ಪ್ರಶ್ನೆ ಕೇಳುವ ಜಯರಾಮ್, ನಾಡಿನಲ್ಲಿ ಕಾಡು ಕಟ್ಟಿದ ರೈತ. 40 ಎಕರೆ ಪ್ರದೇಶದಲ್ಲಿ ಒಂದೇ ಒಂದು ಬೋರ್ವೆಲ್ ಬಳಸಿಕೊಂಡು ಮಳೆಯಾಶ್ರಯದಲ್ಲಿ "ಸುಕೃಷಿ" ಎಂಬ ಫುಡ್ಫಾರೆಸ್ಟ್ ರೂಪಿಸಿರುವ ಬೇಸಾಯ ತಪಸ್ವಿ.ಬೆಂಗಳೂರಿನ ಮಲ್ಲೇಶ್ವರಂನಲ್ಲಿ ದೇಶದಲ್ಲೇ ಮೊದಲ ಆಗ್ಯರ್ಾನಿಕ್ ರೆಸ್ಟೋರೆಂಟ್  "ಗ್ರೀನ್ ಪಾಥ್" ಎಂಬ ಹೋಟೆಲ್ ಉದ್ಯಮ ಆರಂಭಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಹೆಮ್ಮಯ ಕನ್ನಡಿಗ.  
"ಸುಕೃಷಿ" ಫಾರಂ ಬೆಂಗಳೂರಿನ ಸಮೀಪ ನೆಲಮಂಗಲ ತಾಲೂಕಿಗೆ ಸೇರಿದ ಮರಸನಹಳ್ಳಿಯಲ್ಲಿದೆ. ಅಲ್ಲಿ ಜಗತ್ತಿನ ಸಾವಯವ ಕೃಷಿಕರು, ದೇಶದ ಕೃಷಿ ವಿಜ್ಞಾನಿಗಳು, ವಿದ್ಯಾಥರ್ಿಗಳು ಬಂದು ಸಾವಯವ ಕೃಷಿಯ ಪಾಠ ಕೇಳಿದ್ದಾರೆ. ಅಲ್ಲಿನ ಜೀವ ವೈವಿಧ್ಯತೆಯನ್ನು ಕಂಡು ಬೆರಗಾಗಿದ್ದಾರೆ. ಅಲ್ಲಿ ನೂರಾರು ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತವೆ.ನವಿಲುಗಳು ಗರಿ ಬಿಚ್ಚಿ ನರ್ತಿಸುತ್ತವೆ. ಗಿಳಿ ಕೋಗಿಲೆ ಕಾಜಾಣಗಳ ಚಿಲಿಪಿಲಿ ನಾದ ಸದಾ ಕೇಳಿಸುತ್ತದೆ.
ಮೂಲತಹ ಕೃಷಿ ಕುಟುಂಬದಿಂದಲೇ ಬಂದ ಜಯಾರಾಮ್ ಶಿವಮೊಗ್ಗ ಜಿಲ್ಲೆಯವರು. ಬಾಲ್ಯದಲ್ಲಿ ತುಂಬ ಬಡತನದಿಂದ ವಿಧ್ಯಾಭ್ಯಾಸಮಾಡಿ ವಕೀಲಿ ವೃತ್ತಿ ಆರಂಭಿಸಿದರು. ಆದರೂ ಮಣ್ಣಿನ ಸೆಳೆತ ಅವರನ್ನು ಬಿಟ್ಟಿರಲಿಲ್ಲ. ವಕೀಲರಾಗಿದ್ದಾಗಲೇ ನೂರಾರು ತೋಟಗಳಿಗೆ ಭೇಟಿಮಾಡಿ ಕೃಷಿಯ ಆಳ ಅಗಲಗಳನ್ನು ಅರಿತುಕೊಂಡಿದ್ದರು. ತಮ್ಮ ತಾಯಿಯ ಆಸೆಯನ್ನು ಪೂರೈಸಲು ನೆಲಮಂಗಲದಲ್ಲಿ 1999 ರಲ್ಲಿ 40 ಎಕರೆ ಬರಡು ನೆಲವಿದ್ದ ಭೂಮಿ ಖರೀದಿಸಿ ಇಂದು ಅವರು ಕಟ್ಟಿದ ಸುಕೃಷಿ ತೋಟ ಸಹಜ ಕೃಷಿಕರೂ ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಪ್ರವಾಸಿತಾಣವಾಗಿ ರೂಪುಗೊಂಡಿದೆ.
ನೆಲ ಜಲ ಸಂರಕ್ಷಣೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ, ಬೆಂಗಳೂರಿನಲ್ಲಿರುವ ಜೈವಿಕ್ ಸೊಸೈಟಿಯ ಸಂಸ್ಥಾಪಕ ಕಾರ್ಯದಶರ್ಿಯಾಗಿರುವ, ಅರ್ಕಾವತಿ,ಕುಮುದ್ವತಿ ನದಿ ಉಳಿಸಿ ಸಮಿತಿಯ ಅಧ್ಯಕ್ಷರೂ ಆಗಿದ್ದ, ಮ್ಯಾರಾಥಾನ್ ಓಟಗಾರ, ಕೈ ತುಂಬಾ ಹಣತಂದುಕೊಡುತ್ತಿದ್ದ ವಕೀಲಿವೃತ್ತಿ ಬಿಟ್ಟು ಕೃಷಿಯನ್ನು ಅಪ್ಪಿಕೊಂಡವರು. ಪ್ರಕೃತಿಯೊಂದಿಗೆ ಸಂಭ್ರಮಿಸೋಣ ಎಂಬ ಧ್ಯೇಯದೊಂದಿಗೆ 40 ಎಕರೆ ಪ್ರದೇಶದಲ್ಲಿ "ಸುಕೃಷಿ"ಎಂಬ ಜೀವವೈವಿಧ್ಯತೆತೆಯ ತೋಟ ಕಟ್ಟಿರುವ ಜಯಾರಾಮ್ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಮಾತನಾಡುವ ಸುವರ್ಣ ಅವಕಾಶವೊಂದು ಒದಗಿಬಂದಿತ್ತು.
ಜಯರಾಮ್ ಅವರು ಮೈಸೂರಿಗೆ ಬಂದಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಲಿಲ್ಲ ನಿಜ. ಆದರೆ ಮಾನಸ ಗಂಗೋತ್ರಿಯ ಸಸ್ಯಶಾಸ್ತ್ರ ವಿಭಾಗದಲ್ಲಿ ಮಾರ್ಚ್ ಮೂರರಂದು ನಡೆದ ಸಾವಯವ ಕೃಷಿ ಕುರಿತ ಒಂದು ದಿನದ ಕಾರ್ಯಾಗಾರ ನನ್ನಂತಹ ಕೃಷಿಕರಿಗೆ ಹಲವಾರು ಪಾಠಗಳನ್ನು ಕಲಿಸಿತು. ಕಾರ್ಯಾಗಾರದ ನಡುವೆ ಸಿಕ್ಕಿದ ಅವರೊಂದಿಗೆ ಮಾತನಾಡಿದ್ದು ಇಲ್ಲಿದೆ. ಜಯರಾಮ್ ಅವರೆ ನಮ್ಮ ಈ ವಾರದ ಬಂಗಾರದ ಮನುಷ್ಯ.
"ರೈತರಿಗೆ ಸೂಕ್ತ ಅರಿವು ಮತ್ತು ಮಾರ್ಗದರ್ಶನದ ಕೊರತೆ ಇರುವುದರಿಂದ ಕೃಷಿಯಲ್ಲಿ ಇಷ್ಟೆಲ್ಲಾ ರಾದ್ಧಾಂತ ಆಗಿದೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿದ್ದರೆ, ನಗರಗಳು ಸ್ಲಂಗಳಾಗಿ,ಕಸದ ತೊಟ್ಟಿಯಾಗಿ ಮಾಪರ್ಾಡಾಗುತ್ತಿವೆ. ಶುದ್ಧ ಗಾಳಿ, ಶುದ್ಧ ನೀರು ಎನ್ನುವುದು ಹಣಕೊಟ್ಟು ಖರೀದಿಸಬೇಕಾದ ಸರಕಾಗಿ ಬದಲಾಗುತ್ತಿದೆ. ಹಳ್ಳಿಗಳಲ್ಲಿ ಹಿಂದೆ ನೀರು,ಮಜ್ಜಿಗೆ ಮಾರಾಟದ ಸರಕುಗಳಾಗಿರಲಿಲ್ಲ.ಇದೆಲ್ಲ ನಂತರ ಆದದ್ದು.
70 ರ ದಶಕದಲ್ಲಿ ಕೃಷಿವಲಯದ ಜಿಡಿಪಿ ಶೇಕಡ 40 ರಿಂದ 50 ಇತ್ತು. ಆದರೆ ಇಂದು ಅದು ಶೇಕಡ  13 ರಿಂದ 14 ಕ್ಕೆ ಇಳಿಮುಖವಾಗಿದೆ. ಶೇ 15 ರಿಂದ 20 ರಷ್ಟು ಮಂದಿ ಕೃಷಿವಲಯದಿಂದ ವಿಮುಖರಾಗಿದ್ದಾರೆ" ಹಾಗಾದರೆ ಇದನ್ನು ಹಾಳುಮಾಡಿದವರು ಯಾರು ಎನ್ನುವುದು ಅವರ ಪ್ರಶ್ನೆ.
"ರಾಜಕಾರಾಣಿಗಳು, ರೈತ ನಾಯಕರ ಲಿಫ್ ಸಿಂಪಂಥಿಯಿಂದ ರೈತರ ಉದ್ಧಾರ ಆಗಲ್ಲ. ಪ್ರಪಂಚದ ಶೇ.65 ರಿಂದ 70 ಭಾಗ ಸಂಪತ್ತು ಶೇ.30-40 ಬಹುರಾಷ್ಟ್ರೀಯ ಕಂಪನಿಗಳ ಹಿಡಿತದಲ್ಲಿದೆ. ನಮ್ಮ ಅನ್ನ, ಬಟ್ಟೆ,ಆಹಾರ,ನೀರು ಹಾಗೂ ದೈನಿಕ ಬದುಕನ್ನು ಈ ಬೃಹತ್ ಕಂಪನಿಗಳು ನಿಯಂತ್ರಿಸುತ್ತಿವೆ. ಭಾರತದಲ್ಲಿ ಹಿಂದೂಸ್ತಾನ್ ಲಿವರ್, ಫಿಲಿಫೈನಸ್ನಲ್ಲಿ ಫಿಲಿಫೈನ್ಸ್ ಲಿವರ್, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಲಿವರ್ ಹೀಗೆ ಬೇರೆ ಬೇರೆ ದೇಶಗಳಲ್ಲಿ ಒಂದೇ ಕಂಪನಿ ಆ ದೇಶದ ಹೆಸರಲ್ಲಿ ವ್ಯವಹರಿಸುತ್ತಾ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತದೆ. ವೈದ್ಯಕೀಯ ಕ್ಷೇತ್ರವನ್ನು ರ್ಯಾನ್ಬಕ್ಸಿ, ಹೋಟೆಲ್ ಉದ್ಯಮವನ್ನು ಎನ್ರಾನ್ ಕಂಪನಿಗಳು ಕಪಿಮುಷ್ಠಿಯಲ್ಲಿ ಇರಿಸಿಕೊಂಡಿವೆ" ಇದು ನಮ್ಮ ರೈತರಿಗೆ ಅರಿವಾಗಬೇಕು.
"ಪ್ರಪಂಚದ ಅತ್ಯಂತ ಡೆವಿಲ್ ಕಂಪನಿ ಮಾನ್ಸಾಂಟೋ.ಇದು ರೈತರ ಪಾಲಿನ ಯಮ.ಬೀಜ,ಗೊಬ್ಬರ ಸೇರಿದಂತೆ ಕೃಷಿವಲಯವನ್ನು ತನ್ನ ಕಬಂಧಬಾಹುಗಳಲ್ಲಿ ಅಪ್ಪಿಕೊಂಡಿರುವ ಮಾನ್ಸಾಂಟೋ ಹಿಡಿತದಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾದ ಅಧ್ಯಕ್ಷ ಯಾರೇ ಆದರೂ ಮೊದಲು ಈ ಕಂಪನಿಗೆ ಹೋಗಿ ಆತಿಥ್ಯ ಸ್ವೀಕರಿಸಬೇಕು. ಈ ಕಂಪನಿಯ ವಾಷರ್ಿಕ ಬಜೆಟ್ ಏಷ್ಯಾ, ಆಫ್ರಿಕನ್ ದೇಶದ ಒಟ್ಟು ಬಜೆಟ್ ಗಾತ್ರಕ್ಕಿಂತ ದೊಡ್ಡದಿದೆ.
ಕಾರ್ಗಿಲ್ ಕಂಪನಿಕೂಡ ಇದರ ಅಂಗ ಸಂಸ್ಥೆ. ಕುಲಾಂತರಿತಳಿಗಳನ್ನು ಕಂಡುಹಿಡಿದು ಬೀಜಸ್ವಾಮ್ಯಕ್ಕೆ ಕತ್ತರಿ ಹಾಕಲು ಹೊರಟಿರುವ ಈ ಕಂಪನಿಗಳ ಹುನ್ನಾರದ ವಿರುದ್ಧ ರೈತರು ಎಚ್ಚೆತ್ತುಕೊಳ್ಳದಿದ್ದರೆ   ಅಪಾಯ ತಪ್ಪಿದ್ದಲ್ಲ ಎನ್ನುವುದು ಜಯರಾಮ್ ಅವರ ಆತಂಕ.
"ಹಿಂದೆ ಹಳ್ಳಿಗಳಲ್ಲಿ ನಮ್ಮ ರೈತರು ಯಾರು ಭಿತ್ತನೆಬೀಜ ಮಾರಾಟಮಾಡುತ್ತಿರಲಿಲ್ಲ. ಬೀಜ ವಿನಿಮಯಮಾಡಿಕೊಳ್ಳುತಿದ್ದರು.ಕೇಂದ್ರ ಸಕರ್ಾರ ಸೀಡ್ಬಿಲ್ (ಬೀಜ ಕಾಯಿದೆ) ಜಾರಿಗೆ ಹುನ್ನಾರ ನಡೆಸಿದ್ದು. ಇದೇನಾದರೂ ಜಾರಿಯಾಗಿಬಿಟ್ಟರೆ ನಾವು ಬೀಜಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ಬೀಜ ಮರುಉಪಯೋಗದ ಹಕ್ಕು ಮತ್ತು ಬೀಜಮಾರಾಟದ ಹಕ್ಕನ್ನು ರೈತ ಕಳೆದುಕೊಳ್ಳಬೇಕಾಗುತ್ತದೆ.
ದೇಶದ ಸೇನೆಗೆ ಲಕ್ಷಾಂತರ ಕೋಟಿ ರೋಪಾಯಿ ಹಣವನ್ನು ಕೇಂದ್ರ ಸಕರ್ಾರ ತನ್ನ ವಾಷರ್ಿಕ ಬಜೆಟ್ನಲ್ಲಿ ಮೀಸಲಿಡುತ್ತದೆ.ಹಾಗೆಯೇ ಕೃಷಿವಲಯಕ್ಕೂ ಲಕ್ಷಾಂತರ ಕೋಟಿ ಹಣ ಮೀಸಲಿಡುವುದನ್ನು ನೀವು ಗಮನಿಸಿರಬಹುದು.ದುರಂತ ಎಂದರೆ ಇದರಲ್ಲಿ ಶೇ.70 ರಷ್ಟು ಹಣ ಸಬ್ಸಡಿ ಹೆಸರಿನಲ್ಲಿ ಮನ್ಸಾಂಟೋ,ಕಾಗರ್ಿಲ್,ರಾಸಾಯನಿಕ ಗೊಬ್ಬರ,ಕ್ರಿಮಿನಾಶಕ ಉತ್ಪಾದಿಸುವ ಕಂಪನಿಗಳಿಗೆ ಹೋಗುತ್ತದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ನಾವು ರೈತರಿಗೆ ಅರಿವು ಮೂಡಿಸಬೇಕು" ಎನ್ನುವುದು ಅವರ ಸ್ಪಷ್ಟನುಡಿ.
"ಅಧಿಕಾರಿಗಳು,ಸಂಶೋಧಕರು ಹೇಳಿದಂತೆ ನಮ್ಮ ಸಕರ್ಾರಗಳು ರೈತನೀತಿಯನ್ನು ಜಾರಿ ಮಾಡುತ್ತವೆ. ಅವು ನಿಜವಾಗಿಯೂ ರೈತ ವಿರೋಧಿನೀತಿಗಳೆ ಆಗಿರುತ್ತವೆ. ವಿಜ್ಞಾನಿಗಳ ಸಂಶೋಧನೆಗೆ ಬೇಕಾದ ಹಣ ಕೊಡುವವರು ಇಂತಹ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಯಿಗಳು. ಅವರ ಪರವಾಗಿಯೇ ವಿಜ್ಞಾನಿಗಳು ಕೆಲಸಮಾಡಬೇಕು. ಹಾಗಾಗಿ ಭಾರತೀಯ ರೈತ ಬಿಡಿಸಲಾರದ ವಿಷವತರ್ುಲದಲ್ಲಿ ಸಿಲುಕಿಕೊಂಡಿದ್ದಾನೆ.
ಇಂತಹ ಕಂಪನಿಗಳು ಉತ್ಪಾದಿಸಿದ ರಾಸಾಯನಿಕ,ಕ್ರಿಮಿನಾಶಕಗಳನ್ನು ವಿಜ್ಞಾನಿಗಳು, ಅಧಿಕಾರಿಗಳ ಶಿಫಾರಸ್ಸಿನ ಮೇಲೆ ರೈತ ಬಳಸುತ್ತಾನೆ.ಇದರಿಂದ ಮಣ್ಣಿನ ಸತ್ವ ನಾಶವಾಗಿದೆ. ಪರಿಸರ ವಿಷಮಯವಾಗಿದೆ.ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣೇ ಸತ್ತರೇ ಏಲ್ಲಿಗೆ? ಅಂತ ಕೇಳುವ ಕಾಲ ಈಗ ಬಂದಿದೆ. ಹತ್ತು ವರ್ಷ ನಾವು ನೀವೆಲ್ಲ ನೆಲ ಜಲದ ಬಗ್ಗೆ ಮಾತನಾಡಿದರೆ ಪರಿಸರವೂ ಉಳಿಯುತ್ತದೆ ನಾವೂ ಉಳಿಯುತ್ತೇವೆ.ಇಲ್ಲದಿದ್ದರೆ ಮನುಷ್ಯ ರೋಗದ ಗೂಡಾಗಿ ಅಬಾಲ ವೃದ್ಧಾಪ್ಯ ಅನುಭವಿಸಬೇಕಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಹಳ್ಳಿಗಳು ಹಸಿರು ಕ್ರಾಂತಿಯ ಪರಿಣಾಮ ಹಾಳಾದವು. ಹಸಿದ ಹೊಟ್ಟೆಗೆ ಅನ್ನ ನೀಡಿದ್ದನ್ನೇ ದಿಗ್ವಿಜಯ ಎಂದುಕೊಂಡ ವಿಜ್ಞಾನಿಗಳು ಮಣ್ಣು ಹಾಳಾದ ಬಗ್ಗೆ ಮಾತನಾಡದೇ ಇರುವುದು ನಮ್ಮ ದುರಂತ. ಮಣ್ಣಿನ ಸಾವಯವ ಇಂಗಾಲ ಶೇಕಡ 5 ರಿಂದ 6 ಇದ್ದದ್ದು ಹಸಿರುಕ್ರಾಂತಿಯ ನಂತರ 0.5 ಕ್ಕೆ ಕುಸಿಯಿತು. ಸಾವಿರಾರು ವರ್ಷಗಳಿಂದ ಫಲವತ್ತಾಗಿದ್ದ ಮಣ್ಣನ್ನು ಕೇವಲ ನಲವತ್ತೇ ವರ್ಷದಲ್ಲಿ ಸತ್ವ ಇಲ್ಲದಂತೆ ಮಾಡಿದ್ದೇವೆ. ಕೋಟ್ಯಾಂತರ ಸೂಕ್ಷ್ಮಾಣು ಜೀವಿಗಳನ್ನು ನಾಶಮಾಡಿದ್ದೇವೆ. ನಮ್ಮ ಬಹುಪಾಲು ಹಣವನ್ನು ಎನ್ಪಿಕೆ ಖರೀದಿಸಲು ಸುರಿದಿದ್ದೇವೆ. ಪಂಜಾಬ್,ಹರಿಯಾಣ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಉಳುಮೆಮಾಡಿದ ಪರಿಣಾಮ ಜೌಗು ಮಣ್ಣು ನಿರ್ಮಾಣ ಗಿದೆ. ಮಂಡ್ಯ, ರಾಯಚೂರು ಜಿಲ್ಲೆಗಳಲ್ಲಿ ಬತ್ತ ಬೆಳೆಯಲು ಅಗತ್ಯಕ್ಕಿಂತ ಹೆಚ್ಚು ನೀರು ರಾಸಾಯನಿಕಗೊಬ್ಬರ ಬಳಸಿದ ಪರಿಣಾಮ ಮಣ್ಣು ಹಾಳಾಗಿದೆ.
ಇದರ ನಡುವೆಯೂ ಸಾವಯವ ಕೃಷಿ ಮಾಡುವವರ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಯುರೋಪ್ ದೇಶಗಳಲ್ಲಿ, ಅಷ್ಟೇ ಯಾಕೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ವಿದ್ಯಾವಂತ ಯುವಕರು ನೌಕರಿ ಬಿಟ್ಟು ಆಗ್ಯರ್ಾನಿಕ್ ಫಾಮರ್ಿಂಗ್ ಕಡೆ ಬರುತ್ತಿದ್ದಾರೆ. ಬ್ಯಾಕ್ ಟು ಲ್ಯಾಂಡ್ ಎಂಬ ಪರಿಕಲ್ಪನೆ ಮೂಡುತ್ತಿದೆ. ಸ್ಲೋ ಲೈಫ್,ಸ್ಲೋ ಫುಡ್, ಸ್ಲೋ ಮನಿ ಎಂಬ ಕಾನ್ಸೆಪ್ಟ್ ನಿಧಾನಕ್ಕೆ ಬಲಗೊಳ್ಳುತ್ತಿದೆ.
ಕೃಷಿಯ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಉತ್ತರವಿದೆ. ಮಳೆ ನೀರಿನಲ್ಲೇ ಎನ್ಪಿಕೆ ಜೊತೆಗೆ ಸುಮಾರು 250 ಸೂಕ್ಷ್ಮಾಣು ಜೀವಿಗಳು ಇವೆ ಎನ್ನುವ ಸತ್ಯವನ್ನು ರೈತ ಅರ್ಥಮಾಡಿಕೊಳ್ಳಬೇಕು.ಸಾವಯವದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳ ಸತ್ವ ಮತ್ತು ಪರಿಮಳವೇ ಅದ್ಭುತ ಎನ್ನುತ್ತಾ ಕಾರ್ಯಾಗಾರದಲ್ಲಿ ರೈತರು ತಂದ ಸೊಪ್ಪು ತರಕಾರಿಗಳನ್ನು ಮೂಗಿಗೆ ಹಿಡಿದು ಅದರ ಪರಿಮಳವನ್ನು ಆಸ್ವಾದಿಸಿದರು. ತಮ್ಮ ಸಮೀಪದಲ್ಲೇ ನಿಂತಿದ್ದವರಿಗೂ ಅರಿಶಿನ ಪುಡಿ, ಸೊಪ್ಪಿನ ಪರಿಮಳವನ್ನು ಆಸ್ವಾದಿಸುವಂತೆ ಮಾಡಿದರು.
"ಸಾವಯವ ಆಹಾರಕ್ಕೆ ಈಗ ಜಗತ್ತಿನಾದ್ಯಂತ ಬೇಡಿಕೆ ಇದೆ. ಜರ್ಮನಿಯಂತಹ ದೇಶಗಳಲ್ಲಿ ಪ್ರತಿಯೊಬ್ಬ ರೈತನ್ನು ತಾನು ಬೆಳೆದ ಉತ್ಪನ್ನಗಳನ್ನು ತನ್ನದೇ ಬ್ರಾಂಡ್ಮಾಡಿ ಮಾರಾಟಮಾಡುತ್ತಾನೆ. ಪ್ರತಿ ಶುಕ್ರವಾರ ಆಹಾರ ಉತ್ಪನ್ನಗಳ ಫ್ಯಾಕ್ ಜೊತೆ ರೈತಸಂತೆಯಲ್ಲಿ ಮಾರಾಟಮಾಡುತ್ತಾನೆ. ಪ್ರಾನ್ಸ್ನಂತಹ ದೇಶಗಳಲ್ಲಿ ಗ್ರಾಹಕರು ಮೊದಲೆ ರೈತರಿಗೆ ಹಣಕೊಟ್ಟು ತಮಗೆ ಬೇಕಾದ ಹಣ್ಣು ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾರೆ.
ಜರ್ಮನಿ, ಭೂತಾನ್, ಇಟಲಿಯಂತಹ ಮುಂದುವರಿದ ದೇಶಗಳು 2020 ರಲ್ಲಿ ಸಂಪೂರ್ಣ ವಿಷಮುಕ್ತ ಆಹಾರಬೆಳೆಯುವ ಯೋಜನೆ ರೂಪಿಸಿಕೊಂಡಿವೆ. ಭಾರತ ದೇಶದಲ್ಲೇ ಸಿಕ್ಕಿಂ ರಾಜ್ಯ ಮೊದಲ ಸಾವಯವರಾಜ್ಯ ಎಂಬ ಕೀರ್ತೀಗೆ ಭಾಜನವಾಗಿದೆ.ಕೇರಳ ರಾಜ್ಯ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ವಿಷಮುಕ್ತ ಆಹಾರ ರೋಗಮುಕ್ತ ಬದುಕು ನಮ್ಮ ಧ್ಯೇಯ ಗುರಿಯಾಗಿರಬೇಕು.ಈ ನಿಟ್ಟಿನಲ್ಲಿ ಎಲ್ಲರ ಚಿಂತನೆಗಳು ಇರಬೇಕು. ಗ್ರೀನ್ ಪಾಥ್ ಸಂಸ್ಥೆಯು ಸಾವಯವ ಕೃಷಿ ಎಂದರೆ     "ವೇ ಆಫ್ ಲೈಫ್" ಎಂದು ಅರಿವು ಮೂಡಿಸುತ್ತಿದೆ. ನಗರದ ಜನತೆಗೆ ಸಾವಯವ ಆಹಾರ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿಸಲು ಬೆಂಗಳೂರಿನಲ್ಲಿ ವಾರಕ್ಕೊಮ್ಮೆ "ಹಸಿರು ಹಬ್ಬ" ಮಾಡುತ್ತಿದೆ. ಸಮುದಾಯಕ್ಕೂ ಸಹಜ ಕೃಷಿಯ ಅನಿವಾರ್ಯತೆಯ ಬಗ್ಗೆ ಅರಿವು ಮೂಡಿಸುತ್ತಿದೆ. ಆಹಾರದ ಜೊತೆಗೆ ವಿವೇಕ ಮತ್ತು ಹಿತಾಸಕ್ತಿ ಇದ್ದರೆ ಮಾತ್ರ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ. ತಾವು ಸುಕೃಷಿ ಮಾಡುತ್ತಿರುವ ಮರಸನಹಳ್ಳಿಯನ್ನು ಸಂಪೋರ್ಣ ಸಲೋರ್ ವಿಲೇಜ್ ಮಾಡಿರುವ ಜಯರಾಮ್ ಹಳ್ಳಿಗೆ ಬೇಕಾದ ರಸ್ತೆ ಮೂಲಭೂತ ಅವಶ್ಯಕತೆಗಳನ್ನು ತಮ್ಮ ಸಂಸ್ಥೆಯ ವತಿಯಿಂದ ಕಲ್ಪಿಸಿಕೊಟ್ಟಿದ್ದಾರೆ.
ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ಹೋರಾಟಗಾರನಾಗಿ, ಕೃಷಿಕನಾಗಿ, ಸಮುದಾಯ ಸಂಘಟಕನಾಗಿ, ಮ್ಯಾರಥಾನ್ ಪಟುವಾಗಿ ಪ್ರಕೃತಿಯೊಂದಿಗೆ ಕ್ಷಣ ಕ್ಷಣವೂ ಸಂಭ್ರಮಪಡುತ್ತಾ ಯಶಸ್ವಿ ಉದ್ಯಮಿಯಾಗಿಯೂ ಬೆಳೆದ ಪರಿ ಅಚ್ಚರಿಮೂಡಿಸುತ್ತದೆ. ನೀವು ಒಮ್ಮೆ "ಸುಕೃಷಿ"ಗೆ ಹೋಗಿ ಬನ್ನಿ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ