ಬರಡು ನೆಲದಲ್ಲಿ ಬಂಗಾರದ ಬೆಳೆತೆಗೆದ ಸಾಧಕ
ಕೃಷಿಯಲ್ಲಿ ಖುಶಿಕಾಣುತ್ತಿರುವ ಉದ್ಯಮಿ ಮೂತರ್ಿ
ಮೈಸೂರು:ಕೃಷಿ ಈಗ ಎಲ್ಲರ ನಿರ್ಲಕ್ಷ್ಯ ಮತ್ತು ಕಡೆಗಣನೆಗೆ ಒಳಗಾದ ರೋಗಗ್ರಸ್ತ ವಲಯ.ನಾಲ್ಕು ಕಾಸು ಸಂಪಾದನೆ ಮಾಡಿದವರು ಯಾವುದಾದರೂ ಉದ್ಯಮ ಶುರುಮಾಡಿ ನಿಗಧಿತ ಆದಾಯಗಳಿಸಿ ನೆಮ್ಮದಿ ಕಂಡುಕೊಳ್ಳಲು ಕನಸು ಕಾಣುವ ಕಾಲ ಇದು. ಇಂತಹ ಜನರ ನಡುವೆ ಉದ್ಯಮದಲ್ಲಿ ಸಂಪಾದಿಸಿದ ಹಣವನ್ನು ಕೃಷಿಯಲ್ಲಿ ವಿನಿಯೋಗಿಸುತ್ತಾ ಹಸಿರಿನಲ್ಲಿ ಬದುಕು ಕಂಡ ಅಪರೂಪದ ವ್ಯಕ್ತಿ ಹೋಟೆಲ್ ಉದ್ಯಮಿ ಎಚ್.ಆರ್.ಮೂತರ್ಿ ಈ ವಾರದ ಬಂಗಾರದ ಮನುಷ್ಯ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಎಚ್.ಆರ್.ಮೂತರ್ಿ ಒರ್ವ ಯಶಸ್ವಿ ಹೋಟೆಲ್ ಉದ್ಯಮಿ. ಆದರೂ ಮೂಲತಹ ಕೃಷಿ ಕುಟುಂಬದಿಂದ ಬಂದ ಮೂತರ್ಿ ಅವರನ್ನು ಮಣ್ಣಿನ ಸೆಳೆತ ಬಿಟ್ಟಿಲ್ಲ. ಎಚ್.ಡಿ.ಕೋಟೆ ರಸ್ತೆಯಲ್ಲಿ ಬರುವ ಆಲನಹಳ್ಳಿ ಮತ್ತು ಕ್ಯಾತನಹಳ್ಳಿ ಸಮೀಪ ಕಲ್ಲುಗುಡ್ಡಗಳನ್ನು ಕಡಿದು, ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಮೂವತ್ತು ಎಕರೆ ಪ್ರದೇಶದಲ್ಲಿ ಇವರು ಕಟ್ಟಿರುವ " ಗ್ರೀನ್ ಗೋಲ್ಡ್ ಫಾರಂ" ಎಂಬ ನೈಸಗರ್ಿಕ ಕೃಷಿ ತೋಟ ಮೂತರ್ಿ ಅವರ ಹಸಿರು ಪ್ರೀತಿಗೆ ಸಾಕ್ಷಿಯಾಗಿದೆ.
ಇವರ ತೋಟಕ್ಕೆ ನೆದರ್ ಲ್ಯಾಂಡ್ನ ಇಕೋ ಅಗ್ರಿ ರಿಸರ್ಚ್ ಪೌಂಡೇಶನ್ನಿಂದ ಐಎಂಓ ಮತ್ತು ಇಸ್ಕಾನ್ ಅವರಿಂದ ಸಂಪೂರ್ಣ ಸಾವಯವ ಕ್ಷೇತ್ರ ಎಂಬ ಪ್ರಮಾಣ ಪತ್ರ ದೊರೆತಿದೆ.
ಪ್ರತಿಯೊಂದು ಗಿಡಮರಗಳ ಬಗ್ಗೆ ಪ್ರೀತಿಯಿಂದ ಮಾತನಾಡುವ ಇವರು ಮಣ್ಣು,ಪರಿಸರ ಮತ್ತು ಮಣ್ಣಿಗೆ ಬೇಕಾದ ಪೋಷಕಾಂಶಗಳ ಬಗ್ಗೆ ವಿಜ್ಞಾನಿಯಂತೆ ವಿವರಣೆ ನೀಡುತ್ತಾರೆ. ಕೃಷಿಯ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿರುವ ಮೂತರ್ಿ ಮೈಸೂರಿನ ಕೃಷ್ಣಮೂತರ್ಿ ಪುರಂನಲ್ಲಿರುವ ಸಾವಯವ ಉತ್ಪನ್ನ ಮಾರಾಟ ಮಳಿಗೆ "ನೇಸರ" ಆಗ್ಯರ್ಾನಿಕ್ ಟ್ರಸ್ಟ್ನ ಅಧ್ಯಕ್ಷರೂ ಆಗಿದ್ದಾರೆ.
ಕಲ್ಲರಳಿ ಹೂವಾಗಿ: ಹನ್ನೆರಡು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಕಲ್ಲುಗುಡ್ಡೆಗಳೆ ತುಂಬಿಕೊಂಡು ಬರಡು ಭೂಮಿಯಾಗಿದ್ದ (ಬ್ಯಾರನ್ ಲ್ಯಾಂಡ್) ನೆಲ ಇಂದು ಮೂತರ್ಿ ಅವರ ಶ್ರಮ ಮತ್ತು ಕಾಳಜಿಯಿಂದ ಹಸಿರುವಲಯವಾಗಿ ರೂಪಾಂತರಗೊಂಡಿದೆ. ಮೂತರ್ಿ ಅವರಲ್ಲಿರುವ ಬೆಟ್ಟದಷ್ಟು ತಾಳ್ಮೆಯ ಫಲವಾಗಿ ಈಗ ಇಲ್ಲಿ ಎರಡೂವರೆ ಸಾವಿರ ಅಡಿಕೆ, ಎಂಟನೂರು ತೆಂಗು, ಸಾವಿರಕ್ಕೂ ಹೆಚ್ಚು ಸಪೋಟ, ಒಂದೂವರೆ ಸಾವಿರಕ್ಕೂ ಹೆಚ್ಚು ವಿವಿಧ ಅಪರೂಪದ ತಳಿಯ ಮಾವು, ನಿಂಬೆ, ಮೆಣಸು ಸೇರಿದಂತೆ ನೂರಾರು ಬಗೆಯ ಹಣ್ಣು ಮತ್ತು ಸಾಂಬಾರ ಪದಾರ್ಥ ಗಿಡಗಳು ತೋಟಕ್ಕೊಂದು ಸೌಂದರ್ಯವನ್ನು ತಂದುಕೊಟ್ಟಿವೆ.
ತೋಟ ಕಟ್ಟಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದರು ಇಲ್ಲಿಂದ ಬರುವ ವಾಷರ್ಿಕ ಆದಾಯ ಸಧ್ಯಕ್ಕೆ ಹದಿನೈದು ಲಕ್ಷ ರೂಪಾಯಿಗಳು. ಇದರಲ್ಲಿ ತೋಟದ ನಿರ್ವಹಣೆಗೆ ಮೂರು ಲಕ್ಷ ತೆಗೆದರೆ ಹದಿಮೂರು ಲಕ್ಷ ಉಳಿತಾಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಮಳೆ ಆಗಿ, ನೀರು ಸಂಪೂರ್ಣವಾಗಿ ಲಭ್ಯವಾದರೆ ವಾಷರ್ಿಕ ಮೂವತ್ತು ಲಕ್ಷ ರೂಪಾಯಿ ಆದಾಯ ತೆಗೆಯಬಹುದು. ಒಂದು ಎಕರೆಯಲ್ಲಿ ವಾಷರ್ಿಕ ಕನಿಷ್ಟ ಒಂದು ಲಕ್ಷ ಆದಾಯಗಳಿಸುವುದು ರೈತರ ಗುರಿ ಮತ್ತು ಉದ್ದೇಶವಾಗಿರಬೇಕು ಎನ್ನುತ್ತಾರೆ ಮೂತರ್ಿ.
ಆದರೆ ಕಳೆದ ಐದು ವರ್ಷಗಳಿಂದ ಮಳೆ ಕೈ ಕೊಟ್ಟಿದೆ. ಈವರ್ಷವಂತೂ ಮಳೆ ಇಲ್ಲದೆ ಅತಿ ಹೆಚ್ಚು ಉಷ್ಣಾಂಶದಿಂದ ಮರಗಿಡಗಳು ಬೆಂಕಿಯ ದಾಹಕ್ಕೆ ನಲುಗಿಹೋಗಿವೆ. ಅಂತರ್ಜಲ ಸಂಪೂರ್ಣ ಕುಸಿದಿದ್ದು ತೋಟಗಳನ್ನು ಕಾಪಾಡಿಕೊಳ್ಳುವುದೆ ನಮಗೆ ಒಂದು ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಈ ಭಾಗದಲ್ಲಿ ಯಾವ ತೋಟಗಳು ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ಮೂತರ್ಿ ತಮ್ಮ ತೋಟವನ್ನು ಹಸಿರಾಗಿಡಲು ನೀರಿಗಾಗಿ ಹದಿನೆಂಟು ಬೋರ್ವೆಲ್ ಕೊರೆಸಿದ್ದಾರೆ. ಅದರಲ್ಲಿ ಹನ್ನೆರಡು ಬೋರ್ವೆಲ್ ವಿಫಲವಾಗಿದ್ದು ಎಂಟರಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದೆ.
ತೋಟದ ಎತ್ತರದ ಪ್ರದೇಶದಲ್ಲಿ 120 ಅಡಿ ಉದ್ದ, 100 ಅಡಿ ಅಗಲ ಮತ್ತು 18 ಅಡಿ ಆಳದ ಗುಂಡಿ ತೆಗೆಸಿ ಅದಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಸಿ ಐದು ಲಕ್ಷ ಲೀಟರ್ ಸಾಮಥ್ರ್ಯವಿರುವ ನೀರು ಸಂಗ್ರಹಣ ತೊಟ್ಟಿಯೊಂದನ್ನು ನಿಮರ್ಾಣ ಮಾಡಿಕೊಂಡಿದ್ದಾರೆ. ಎಂಟು ಬೋರ್ವೆಲ್ಗಳಿಂದ ಬರುವ ನೀರನ್ನು ಹೀಗೆ ಒಂದೆ ಕಡೆ ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಮತ್ತೆ ಅಲ್ಲಿಂದ ಡಿಸೇಲ್ ಮೋಟಾರ್ ಪಂಪ್ನಿಂದ ನೀರನ್ನು ಶುದ್ಧೀಕರಿಸಿ ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೂ ನೀರು ಪೂರೈಕೆಯಾಗುವಂತೆ ವ್ಯವಸ್ಥೆಮಾಡಲಾಗಿದೆ. ಎಲ್ಲಾ ಗಿಡಗಳಿಗೂ ಸಮರ್ಪಕ ರೀತಿಯಲ್ಲಿ ನೀರುಸಿಗಲಿ ಎಂಬ ಕಾರಣಕ್ಕೆ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ ಮೂತರ್ಿ.
ಮೊದಲ ಯತ್ನದಲ್ಲೆ ವಿಘ್ನ : ಆರಂಭದಲ್ಲಿ ಹದಿನಾಲ್ಕು ಎಕರೆ ಭೂಮಿ ಖರೀದಿಸಿದ್ದ ಮೂತರ್ಿ ಅವರು, ಕಲ್ಲು ಬಂಡೆಗಳನ್ನೆಲ್ಲ ಕಿತ್ತು ಭೂಮಿಯನ್ನು ಮಟ್ಟಮಾಡಿ ಸಫೇದ್ ಮುಸ್ಲಿ ,ಪಚೋಲಿಯಂತಹ ಔಷದೀಯ ಗಿಡಗಳನ್ನು ಬೆಳೆಯಲು ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ನಂತರ ಚಿನ್ನದ ಬೆಳೆ ಎಂದೆ ಕರೆಸಿಕೊಂಡಿದ್ದ ವೆನ್ನಿಲ್ಲಾವನ್ನು ಎರಡೂವರೆ ಎಕರೆ ಪ್ರದೇಶದಲ್ಲಿ ಶೇಡ್ ನೆಟ್ ವಿದಾನದಲ್ಲಿ ಬೆಳೆದು ಅಪಾರ ನಷ್ಟ ಅನುಭವಿಸದರು. ತರಕಾರಿ,ಟೊಮಟೊ,ಚಿಲ್ಲಿ ಮೆಣಸಿನ ಕಾಯಿಯನ್ನು ಬೆಳೆದು ಆರಂಭದಲ್ಲೆ ವ್ಯವಸಾಯದಲ್ಲಿ ನಷ್ಟ ಅನುಭವಿಸಿದರು ಧೃತಿಗೆಡದೆ ಮುಂದುವರಿದರು.
2005 ರ ನಂತರ ಒಮ್ಮೆ ಮೂತರ್ಿ ಅವರ ತಂದೆ ತೋಟಕ್ಕೆ ಬಂದಿದ್ದಾಗ ಅಡಿಕೆ ಇಲ್ಲದ ತೋಟ ಅದ್ಯಾವ ಸೀಮೆ ತೋಟ. ಒಂದಷ್ಟು ಅಡಿಕೆ ಗಿಡ ಬೆಳೆ ಎಂದು ಮಗನಿಗೆ ಸಲಹೆ ನೀಡಿದ್ದಾರೆ. ಅದರಂತೆ ಬಾಳೆ ಮತ್ತು ಅಡಿಕೆ ಹಾಕಿದರು. ಮತ್ತೆ ನೀರಿನ ತೊಂದರೆಯಾಗಿ ಐದು ವರ್ಷದ ಫಸಲು ಬರುವಂತಹ ಹತ್ತು ಎಕರೆ ಪ್ರದೇಶದಲ್ಲಿದ್ದ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ತೆಗೆಸಿ ಹಾಕಿದರು. ನೀರಿನ ವ್ಯವಸ್ಥೆಗಾಗಿ ಹದಿನಾಲ್ಕು ಎಕರೆ ಇದ್ದ ತೋಟವನ್ನು 30 ಎಕರೆಗೆ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಬಂತು . ಒಂದು ಕಿ.ಮೀ.ದೂರದಲ್ಲಿ ನೀರಿಗಾಗಿಯೇ ಒಂದು ಎಕರೆ ಜಮೀನು ಖರೀದಿ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.
ಅಪರೂಪದ ಹಣ್ಣುಗಳು: ಮೂತರ್ಿ ಅವರ ತೋಟದಲ್ಲಿ ಹಿಂಗು ಗಿಡ, ಲಿಚ್ಚಿ ಹಣ್ಣು ,ದಿವಿ ಹಲಸು,ವಾಟರ್ ಆಫಲ್, ವೈಟ್ ಸಪೋಟ,ದಾಲ್ಚಿನಿಯಂತಹ ವಿಶೇಷವಾದ ಅಪರೂಪದ ಹಣ್ಣಿನ ಗಿಡಗಳು ನೋಡಲು ಸಿಗುತ್ತವೆ. ಪಣಿಯೂರು ತಳಿಯ ಮೆಣಸು,ಎಗ್ ಪ್ರೂಟ್,ಜಮ್ಮು ನೇರಳೆ, ರಾಮಫಲ, ಸೀತಾಫಲ,ಹನುಮಫಲ,ಬಟರ್ ಪ್ರೂಟ್ ಹೀಗೆ ಎಲ್ಲಾ ಬಗೆಯ ಹಣ್ಣಿನ ಗಿಡಗಳು. ತಿನ್ನಲೆಂದೆ ಹಾಕಿರುವ ಐದು ವಿಶೇಷ ತಳಿಯ ರೇಷ್ಮೆ ಹಣ್ಣಿನ ಗಿಡ. ಲವಂಗದ ಪರಿಮಳವಿರುವ ವೀಳ್ಯದೆಲೆ ಗಿಡ ಕೂಡ ತೋಟದ ವಿಶೇಷ ಆಕರ್ಷಣೆ.
ತಂಬಾಕು ಹೊಗೆ ತಂದ ಧಗೆ : ಹುಣಸೂರು, ಕೋಟೆ ಭಾಗಗಳಲ್ಲಿ ವ್ಯಾಪಕವಾಗಿ ತಂಬಾಕು ಕೃಷಿ ಮಾಡುತ್ತಿರುವುದೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಲು ಕಾರಣ ಎನ್ನುವ ಮೂತರ್ಿ ಅವರು ಜನ ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದರೆ ಮುಂದೊಂದು ದಿನ ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.ತಂಬಾಕು ಸುಡಲು ಕಾಡು ನಾಶ ಮಾಡಿದರು,ಜೊತೆಯಲ್ಲಿ ಜಮೀನಿನಲ್ಲಿ ಇದ್ದ ಮರಗಳನೆಲ್ಲ ಕಡಿದರು.ಇದರಿಂದ ಮೋಡಗಳನ್ನು ಆಕರ್ಷಣೆ ಮಾಡಿ ಮಳೆ ತರಿಸಬೇಕಿದ್ದ ಮರಗಳೆ ನಾಶವಾದ ಮೇಲೆ ಮಳೆ ಎಲ್ಲಿಂದ ಬರುತ್ತದೆ.
ಆಫ್ರಿಕನ್ ದೇಶಗಳಲ್ಲಿ ಒಂದು ಎಕರೆ ತಂಬಾಕು ಹಾಕಬೇಕಾದರೆ ಇಂತಿಷ್ಟು ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬೇಕು ಎಂಬ ಕಾನೂನು ಜಾರಿ ಮಾಡಲಾಗಿದೆ. ನಮ್ಮಲ್ಲಿ ಇಂತಹ ಯಾವ ನಿಯಮವೂ ಇಲ್ಲ. ನಷ್ಟ ಅನುಭವಿಸುತ್ತಿರುವ ರೈತರೆಲ್ಲ ಸೇರಿಕೊಂಡು ತಂಬಾಕು ಮಂಡಳಿ ಮೇಲೆ ಕೇಸ್ ಹಾಕಿದರೆ ಅವರು ನಮಗೆ ಬೇಸಾಯದಿಂದ ಆದ ನಷ್ಟವನ್ನು ಭರಿಸಬೇಕಾಗುತ್ತದೆ ಎಂದು ತಂಬಾಕು ಮಂಡಳಿಯವರ ಮೇಲೆ ಸಿಟ್ಟಾಗುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಪರಿಸರ ಜ್ಞಾನ ಇಲ್ಲ. ಏಕರೂಪದ ಕಾಡನ್ನು ಬೆಳೆಸಲು ಹೊರಟ ಪರಿಣಾಮ ಹಣ್ಣು ಮತ್ತು ಮೇವಿನ ಗಿಡಗಳು ಇಲ್ಲದೆ ಕಾಡು ಪ್ರಾಣಿಗಳು ನಾಡಿಗೆ ಬರುವಂತಾಗಿದೆ.ಹಲಸು, ಬಿದಿರು ಕಾಡಿನಿಂದ ಕಣ್ಮರೆಯಾದವು ಆನೆಗಳು ನಾಡಿನತ್ತ ಮುಖಮಾಡಿದವು ಎನ್ನುತ್ತಾರೆ.
ನೀರು ಮತ್ತು ಹೊದಿಕೆ ಮುಖ್ಯ : ಯಾವುದೆ ಬೆಳೆ ಬೆಳೆಯಲು ನೀರು ಮತ್ತು ಮಣ್ಣಿನಲ್ಲಿ ಆದ್ರ್ರತೆ ಕಾಪಾಡಿಕೊಳ್ಳಲು ಹೊದಿಕೆ(ಮಲ್ಚಿಂಗ್)ಮುಖ್ಯ ಎನ್ನುವ ಮೂತರ್ಿ ಅವರು ತಮ್ಮ ತೋಟವನ್ನು ಹೆಚ್ಚು ಉಳುಮೆ ಮಾಡುವುದಿಲ್ಲ. ಮಳೆಗಾಲದಲ್ಲಿ ಒಮ್ಮೆ ಮಾತ್ರ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ ಅಪ್ಪ ಸೆಣಬು,ಉರುಳಿ, ತಡಣಿ ಮತ್ತಿತರ ನವಧಾನ್ಯಗಳನ್ನು ಭಿತ್ತನೆ ಮಾಡುತ್ತಾರೆ. ಇದರಿಂದ ಭೂಮಿಯಲ್ಲಿ ಕಳೆ ಬರುವುದು ಕಡಿಮೆಯಾಗುತ್ತದೆ, ಜೊತೆಗೆ ಜೀವಂತ ಹಸಿರು ಹೊದಿಕೆಯಾಗಿ ಕೆಲಸಮಾಡುತ್ತದೆ. ಈ ಧಾನ್ಯಗಳು ಹೂ ಬಿಡುವ ಹಂತದಲ್ಲಿ ಹೆಣ್ಣಾಳುಗಳನ್ನು ಕರೆದು. ಬುಡ ಸಮೇತ ಕತ್ತರಿಸಿ ಮತ್ತೆ ಅದನ್ನು ಮಣ್ಣಿಗೆ ಹೊದಿಕೆಯಾಗಿಸುತ್ತಾರೆ.
ಆರಂಭದಲ್ಲಿ ಗಿಡಗಳನ್ನು ಹಾಕಿದ್ದಾಗ ಮೂರ್ನಾಲ್ಕು ವರ್ಷ ಜೀವಾಮೃತ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಕೊಡುತ್ತಿದ್ದೆ. ಈಗ ಅದೆಲ್ಲವನ್ನು ನಿಲ್ಲಿಸಿದ್ದೇನೆ. ಮಣ್ಣಿಗೆ ಹಸಿರು ಹೊದಿಕೆ ಮತ್ತು ನೀರು ಇಷ್ಷನ್ನು ಬಿಟ್ಟರೆ ಬೇರೆನೂ ಕೊಡುತ್ತಿಲ್ಲ ಎನ್ನುತ್ತಾರೆ.
ಹತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈಗ ಮಲ್ಲಿಕಾ, ರತ್ನ,ಕೇಸರ್,ಬೇನಿಶಾ,ಹಿಮಾಮ್ ಪಸಂದ್, ಬಾದಾಮಿ,ರಸಪುರಿ ಮಲಗೋವಾ ಸೇರಿದಂತೆ ವಿವಿಧ ತಳಿಯ ಮಾವು ಗಿಡಗಳನ್ನು ಹಾಕಿದ್ದಾರೆ. ಅಲ್ಲದೆ ಆಂಧ್ರ ಪ್ರದೇಶದ ವಿಜಯವಾಡದಿಂದ ತಂದಿರುವ ವಿಶೇಷವಾದ ಅಪರೂಪದ ತಳಿಯ ತೈವಾನ್ ರೆಡ್ ಎಂಬ 1500 ಸೀಬೆ ಗಿಡಗಳನ್ನು ಹಾಕಿದ್ದಾರೆ. ಇಂತಹ ಅಪರೂಪದ ತಳಿಗಳು ನಮ್ಮ ರೈತರಿಗೆ ಹತ್ತಿರದಲ್ಲಿ ಸಿಗುವುದಿಲ್ಲ. ದೂರದಿಂದ ತರಲು ಅಪಾರ ಹಣ ಮತ್ತು ಶ್ರಮ ವ್ಯರ್ಥವಾಗುತ್ತದೆ ಆದ್ದರಿಂದ ಮುಂದೆ ತಾವೆ ಇಲ್ಲಿ ನರ್ಸರಿ ಮಾಡಿ ಇಂತಹ ಅಪರೂಪದ ತಳಿಗಳನ್ನು ಕಸಿ ತಂತ್ರಜ್ಞಾನದಲ್ಲಿ ಬೆಳೆಸಿ ಮಾರಾಟ ಮಾಡುವ ಯೋಜನೆ ಹೊಂದಿರುವುದಾಗಿ ಮೂತರ್ಿ ಹೇಳಿದರು.
ಪ್ರಕೃತಿಗೆ ವಿರುದ್ಧವಾಗಿ ತಮ್ಮ ತೋಟದಲ್ಲಿ ಏನನ್ನೂ ಮಾಡುವುದಿಲ್ಲ. ರಸಾಯನಿಕ ಬಳಕೆಯಾಗಲಿ, ಯಾವುದೆ ಕ್ರಿಮಿನಾಶಕವನ್ನಾಗಲಿ ಇದುವರೆವಿಗೂ ನಾವು ಬಳಸಿಲ್ಲ. ನಮ್ಮದು ಸಂಪೂರ್ಣ ನೈಸಗರ್ಿಕ ತೋಟ ಎನ್ನುವ ಮೂತರ್ಿ, ತಮ್ಮ ತೋಟದಲ್ಲಿ ಬೆಳೆಯುವ ಹಣ್ಣು ಹಂಪಲುಗಳನ್ನು ನೇಸರದಲ್ಲೂ ಮಾರಾಟಕ್ಕೆ ಕೊಡುತ್ತೇವೆ. ಉಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರಿಗಳೆ ತೋಟಕ್ಕೆ ಬದು ಖರೀದಿ ಮಾಡಿಕೊಂಡು ಹೋಗುತ್ತಾರೆ, ನಮಗೆ ನಮ್ಮ ಉತ್ಪನ್ನಗಳ ಮಾರಾಟ ಎಂದಿಗೂ ಸಮಸ್ಯೆಯಾಗಿಲ್ಲ ಎನ್ನುತ್ತಾರೆ.
ದನಕರು, ಆಡು ಕುರಿಗಳಿಲ್ಲದೆ ವ್ಯವಸಾಯ ಮಾಡಬಾರದು ಎನ್ನುವ ಮೂತರ್ಿ ಅವರು, ಆರಂಭದ ಐದಾರು ವರ್ಷ ಕೃಷಿಯಿಂದ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಾರದು. ತೋಟ ಕಟ್ಟಲು ಸ್ವಲ್ಪ ಹೆಚ್ಚು ಹಣ ವೆಚ್ಚವಾಗುತ್ತದೆ. ನಂತರ ಅದು ದೀಘರ್ಾವಧಿಯಲ್ಲಿ ನಿರಂತರವಾಗಿ ಆದಾಯ ತರುವ ಮೂಲವಾಗಿ ಪರಿವರ್ತನೆಯಾಗುತ್ತದೆ. ಅದಕ್ಕಾಗಿ ಕೃಷಿಕನಿಗೆ ತಾಳ್ಮೆ ಮತ್ತು ಸಹನೆ ಇರಬೇಕು ಎನ್ನುತ್ತಾರೆ. ಆಸಕ್ತರು 9448050593 ಸಂಪಕರ್ಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ