ರೈತ ಸಂಘಟನೆ ಜತೆ ಕೃಷಿಯಲ್ಲೂ
ಯಶಸ್ಸು ಕಂಡ ಹೋರಾಟಗಾರ
ಬಸವಣ್ಣನ ಕಾಯಕ, ಪ್ರೋಫೆಸರ್ ಹೋರಾಟ ಆದರ್ಶ ಎಂದ ವಿದ್ಯಾ ಸಾಗರ
ಮೈಸೂರು : ರೈತ ಸಂಘಟನೆ, ಚಳವಳಿ ಮತ್ತು ಕೃಷಿಯನ್ನು ಸಮನಾಗಿ ಸ್ವೀಕರಿಸಿ ರೈತಪರ ಹೋರಾಟಗಳಲ್ಲಿ ಭಾಗಿಯಾಗುತ್ತಲೆ ಬೇಸಾಯವನ್ನು ಮಾಡಿ ಯಶಸ್ವಿ ನೈಸಗರ್ಿಕ ಕೃಷಿಕರಾದ ಯುವ ರೈತ ನಾಯಕನ ಯಶೋಗಾಥೆ ಇದು. ತಾಂಡವಪುರದ ದಿ.ತಾ.ರಾಮೇಗೌಡ ಮತ್ತು ಸಾವಿತ್ರಮ್ಮ ದಂಪತಿಯ ಪುತ್ರ ಪದವಿಧರ ನಂಜನಗೂಡು ತಾಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾ ಸಾಗರ ಅವರೆ ಈ ವಾರದ ಬಂಗಾರದ ಮನುಷ್ಯ.ಐದು ಎಕರೆ ನೀರಾವರಿ ಜಮೀನು. ಐವತ್ತು ಕುರಿ. ಒಂದು ನಾಟಿ ಹಸು. ಯಂತ್ರಗಳ ಬಳಕೆ ಇಲ್ಲ. ಬೆಳಗಿನ ಏಳು ಗಂಟೆಯಿಂದ ಹನ್ನೆರಡು ಗಂಟೆವರೆಗೆ ಜಮೀನಿನಲ್ಲಿ ಕಾಯಕ.ರಸಾಯನಿಕ, ಕ್ರಿಮಿನಾಶಕ ಬಳಕೆ ಇಲ್ಲ. ಅಡಿಕೆ, ತೆಂಗು,ಕೋ ಕೋ,ಸೊಪ್ಪು ತರಕಾರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಬೆಳಗಳ ಸಂಯೋಜನೆ. ಸುಭಾಷ್ ಪಾಳೇಕಾರ್ ಪದ್ಧತಿಯಲ್ಲಿ ಕಟ್ಟಿದ ನೈಸಗರ್ಿಕ ತೋಟದಲ್ಲಿ ವಾಷರ್ಿಕ ಕನಿಷ್ಟ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ನಿಶ್ಚಿತ. ಇದು ಮೈಸೂರು ತಾಲೂಕು ತಾಂಡವಪುರದ ರೈತ ಯುವ ನಾಯಕ ವಿದ್ಯಾ ಸಾಗರ ಅವರ ಅನುಭವದ ನುಡಿ.
ಮೈಸೂರಿನಿಂದ ನಂಜನಗೂಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ತಾಂಡವಪುರದದ ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿಕೊಂಡರೆ ಸಿಗುವ ಎಚಗಳ್ಳಿ ಮತ್ತು ಹಳ್ಳಿದಿಡ್ಡಿ ಗ್ರಾಮಗಳ ನಡುವೆ ವಿದ್ಯಾ ಸಾಗರ ರೂಪಿಸಿರುವ ನೈಸಗರ್ಿಕ ತೋಟ ಸುಸ್ಥಿರ, ಸಮಗ್ರ ಬೇಸಾಯದ ಮಾದರಿ ಕ್ಷೇತ್ರ.
ನಾಲ್ಕು ಎಕರೆ ಪ್ರದೇಶದಲ್ಲಿ 1600 ಅಡಿಕೆ ಗಿಡಗಳಿದ್ದು ಪ್ರಸ್ತುತ 500 ಗಿಡಗಳು ಫಸಲು ನೀಡುತ್ತಿವೆ. ಒಂದು ನೂರು ತೆಂಗಿನ ಗಿಡಗಳಿದ್ದು 30 ಮರಗಳು ಕಾಯಿ ಕೊಡುತ್ತಿವೆ. ಅದರ ನಡುವೆ ಬಾಳೆ, ಶುಂಠಿ,ಏಲಕ್ಕಿ, ನುಗ್ಗೆ, ಮೈಸೂರು ವೀಳ್ಯದೆಲೆ, ದಾಳಿಂಬೆ, ಸಪೋಟ,ಕರಿಬೇವು, ಬೆಟ್ಟದ ನೆಲ್ಲಿ, ಚೆಂಬೆ, ಗ್ಲಿರಿಸೀಡಿಯಾ, ಶುಂಠಿ, ನಿಂಬೆ, ಮೂಲಂಗಿ, ತೊಗರಿ,ಸೊಪ್ಪು, ತರಕಾರಿ ಅಷ್ಟೆ ಅಲ್ಲ ದನ ಕುರಿಗಳಿಗೆ ಬೇಕಾದ ಮೇವು... ಹೀಗೆ ಹತ್ತು ಹಲವು ಸಸ್ಯ ಪ್ರಬೇಧಗಳು ಸಂಪೂರ್ಣ ನೈಸಗರ್ಿಕ ಪದ್ಧತಿಯಲ್ಲಿ ಬೆಳೆದು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.
ಅಡಿಕೆ ಮತ್ತು ತೆಂಗು ಮುಖ್ಯ ವಾಷರ್ಿಕ ಬೆಳೆಗಳಾದರೆ ಉಳಿದವು ಭೂಮಿಯ ಫಲವತ್ತತೆ ಹೆಚ್ಚಿಸಿ, ಮಣ್ಣಿನಲ್ಲಿ ಹ್ಯೂಮಸ್ ನಿಮರ್ಾಣ ಮಾಡುವುದರ ಜತೆಗೆ ಹಸಿರು ಹೊದಿಕೆಯಾಗಿ ಕೆಲಸಮಾಡುತ್ತವೆ. ನಿರಂತರ ಆದಾಯದ ಮೂಲಗಳು ಆಗಿವೆ. ಉಳಿದ ಒಂದು ಎಕರೆ ಪ್ರದೇಶದಲ್ಲಿ ಕುರಿ ಶೆಡ್ ನಿಮರ್ಾಣ ಮಾಡಿದ್ದು ಅಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಸಿದ್ಧತೆಯಲ್ಲಿದ್ದಾರೆ.
ಬಸವಣ್ಣನವರ ಕಾಯಕ ತತ್ವ ಮತ್ತು ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು ಹಾಕಿಕೊಟ್ಟ ಹೋರಾಟದ ಮಾರ್ಗ ನಮಗೆ ದಾರಿ ದೀಪ ಎನ್ನುವ ವಿದ್ಯಾ ಸಾಗರ ಸಂಘಟನೆ, ಹೋರಾಟ ಮತ್ತು ಕೃಷಿಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ರೀತಿ ಮೆಚ್ಚುವಂತದ್ದು. ಚಳುವಳಿ, ಹೋರಾಟಗಳಲ್ಲೆ ಕಳೆದು ಹೋಗಿ ವೈಯಕ್ತಿಕ ಬದುಕನ್ನು ಸ್ವಚ್ಛವಾಗಿರಿಸಿಕೊಂಡು ಕೃಷಿಯಲ್ಲೂ ಯಶಸ್ಸು ಸಾಧಿಸಿ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.
ಬದುಕು ಬದಲಿಸಿದ ಪುಸ್ತಕ : ಕಾಲೇಜಿನಲ್ಲಿ ಪದವಿ ವ್ಯಾಸಂಗಮಾಡುತ್ತಿದ್ದಾಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಮಸನೊಬ್ಬ ಪುಕೊವಕ ಬಗ್ಗೆ ಬರೆದ ಸಹಜ ಕೃಷಿ ಪುಸ್ತಕ ಓದಿ ಪ್ರಭಾವಿತರಾದ ಇವರು ತಾವೂ ಅದೆ ಹಾದಿಯಲ್ಲಿ ಸಾಗಬೇಕೆಂದು ನಿರ್ಧರಿಸಿದರು.ಮರಳಿ ಹಳ್ಳಿಗೆ ಬಂದು ನಿರಂತರವಾಗಿ ಹತ್ತು ವರ್ಷಗಳ ಕಾಲ ಸಹಜ ಕೃಷಿಯಲ್ಲಿ ಕಬ್ಬು ಬೆಳೆದರು.
ಕಬ್ಬಿನ ದರ ಕುಸಿತ ಮತ್ತು ಕಾಖರ್ಾನೆಯವರ ರೈತ ವಿರೋಧಿ ಧೋರಣೆಯಿಂದ ಬೇಸತ್ತು ಇತ್ತೀಚಿಗೆ ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಆಗ ತಾನೆ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿ ಪ್ರವರ್ಧನಮಾನಕ್ಕೆ ಬರುತ್ತಿತ್ತು. 2004 ರಲ್ಲಿ ಸುತ್ತೂರಿನಲ್ಲಿ ಐದು ದಿನಗಳ ಕಾಲ ನಡೆದ ಪಾಳೇಕಾರ್ ಅವರ ಕೃಷಿ ಕಾರ್ಯಗಾರದಲ್ಲಿ ಭಾಗವಹಿಸಿ ಮತ್ತಷ್ಟು ಅನುಭವ ಪಡೆದುಕೊಂಡು, ನೈಸಗರ್ಿಕ ಕೃಷಿಕ ಬನ್ನೂರು ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಬೇಸಾಯ ಮಾಡುತ್ತಿದ್ದಾರೆ. 2004 ರಿಂದ ಆರಂಭವಾದ ಕೃಷಿ ಕಾಯಕ ನಿಂತಿಲ್ಲ.ಕೃಷಿಯಲ್ಲಿ ನಷ್ಟವನ್ನು ಅನುಭವಿಸಿಲ್ಲ ಎನ್ನುತ್ತಾರೆ ವಿದ್ಯಾ ಸಾಗರ.
ಯಂತ್ರಗಳ ಬಳಕೆ ಇಲ್ಲ : ಉಳುಮೆ ಮತ್ತು ಯಂತ್ರಗಳ ಬಳಕೆಯನ್ನು ಸಂಪೂರ್ಣ ನಿಷಿದ್ಧ. ನೈಸಗರ್ಿಕ ಕೃಷಿಗೆ ತೋಟವನ್ನು ವಿಶಿಷ್ಟ ಮಾದರಿಯಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ.ತಮ್ಮ ತೋಟದಲ್ಲಿ ದಕ್ಷಿಣೋತ್ತರವಾಗಿ ಹದಿನೇಳು ಅಡಿ ಅಂತರದ ಸಾಲು ಮಾಡಿ ಎರಡು ಅಡಿ ಅಗಲ ಮತ್ತು ಎರಡು ಅಡಿ ಆಳದಲ್ಲಿ ಟ್ರಂಚ್ ತೆಗೆಸಿದ್ದಾರೆ. ಟ್ರಂಚ್ನಿಂದ ಹೊರತೆಗೆದ ಮಣ್ಣನ್ನು ಎರಡು ಟ್ರಂಚ್ಗಳ ಮಧ್ಯ ಸಮನಾಗಿ ಹರಡಿ, ಗಿಡದಿಂದ ಗಿಡಕ್ಕೆ ಎಂಟುವರೆ ಅಡಿ ಅಂತರ ಬರುವಂತೆ ಅಡಿಕೆ ಸಸಿ ನಾಟಿಮಾಡಿದ್ದಾರೆ. ಮಧ್ಯ ನಾಲ್ಕು ಅಡಿ ಅಂತರದಲ್ಲಿ ತೊಗರಿ ಮತ್ತು ಬೆಂಡೆಕಾಯಿ ಬೀಜ. ಇವುಗಳಿಗೆ ತೊಂದರೆಯಾಗದಂತೆ ನಡುವೆ ಏಲಕ್ಕಿ ಬಾಳೆಯನ್ನು ಸಂಯೋಜನೆ ಮಾಡಲಾಗಿದೆ.
ನಂತರ ತೋಟದ ತುಂಬೆಲ್ಲಾ ಚೆಂಬೆ ಚೆಲ್ಲಿ ಹಸಿರು ಹೊದಿಕೆ ನಿಮರ್ಾಣ ಮಾಡಿ, ಚಂಬೆಯೊಂದಿಗೆ ಮೂಲಂಗಿ ಬೀಜವನ್ನು ಭಿತ್ತನೆ ಮಾಡಲಾಗಿದೆ.ಇದಲ್ಲದೆ ಗ್ಲಿರಿಸೀಡಿಯಾ, ನುಗ್ಗೆ, ಬಿನೀಸ್, ಶುಂಠಿ ಹೀಗೆ ಮನೆಗೆ ಬೇಕಾದ ಎಲ್ಲಾ ಬಗೆಯ ತರಕಾರಿ ಬೆಳೆಗಳನ್ನೆಲ್ಲ ಅದೆ ಜಾಗದಲ್ಲಿ ಅಲ್ಲಲ್ಲಿ ಬೆಳೆದು ಕಾಡು ಕೃಷಿ ಮಾದರಿಯನ್ನು ನಿಮರ್ಾಣಮಾಡಿ ಉಳಿದ ಕೆಲಸವನ್ನು ನಿಸರ್ಗಕ್ಕೆ ಒಪ್ಪಿಸಿದ್ದಾರೆ. ಪ್ರತಿಯೊಂದು ಬೆಳೆಯೂ ತೋಟದಲ್ಲಿರುವ ಫಿಕ್ಸಿಡ್ ಡಿಪಾಜಿಟ್ನಂತಿದ್ದು ಪ್ರತಿ ತಿಂಗಳು ಆದಾಯ ತಂದುಕೊಡುತ್ತವೆ. ನಮ್ಮ ತೋಟದ ಹತ್ತು ಕೆಜಿ ಕೊಬ್ಬರಿಯಿಂದ 8 ಲೀಟರ್ ಕೊಬ್ಬರಿ ಎಣ್ಣೆ ದೊರೆಯುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನೀರಿನ ಮಿತ ಬಳಕೆ : ಸಮಗ್ರ ಪದ್ಧತಿಯಲ್ಲಿ ಬೆಳೆದ ಬೆಳೆಗಳು ಮಳೆಗಾಲದಲ್ಲಿ ನೀರು ಕೇಳುವುದಿಲ್ಲ.ಬೇಸಿಗೆಯಲ್ಲೂ ಹೆಚ್ಚು ನೀರು ಕೊಡಬೇಕಾಗಿಲ್ಲ.ತೋಟದಲ್ಲಿ ಬರುವ ತ್ಯಾಜ್ಯ ಮತ್ತು ಕಳೆ ಗಿಡಗಳನ್ನು ಕಿತ್ತು ಟ್ರಂಚ್ಗೆ ತುಂಬಲಾಗುತ್ತದೆ. ಹದಿನೈದು ಅಥವಾ ತಿಂಗಳಿಗೆ ಒಂದು ಬಾರಿ ಮಾತ್ರ ಟ್ರಂಚ್ಗೆ ನೀರು ಕೊಡುತ್ತಾರೆ. ಇದಕ್ಕಾಗಿ ಹನಿ ನೀರಾವರಿಯನ್ನಾಗಲಿ, ಸ್ಪಿಂಕ್ಲರ್ ಪದ್ಧತಿಯನ್ನಾಗಲಿ ಅನುಸರಿಸಿಲ್ಲ. ಈಗ ಮಳೆ ಬಂತು ಮೂರ್ನಾಲ್ಕು ತಿಂಗಳು ಕಳೆದಿದೆ. ತೋಟಕ್ಕೆ ನೀರು ಕೊಟ್ಟು ತಿಂಗಳಾಗಿದೆ.ಆದರೂ ತೋಟ ಹಸಿರಾಗಿದೆ.
ಇದಕ್ಕೆಲ್ಲ ಕಾರಣ ಭೂಮಿಗೆ ನಾವು ಮಾಡಿರುವ ಹಸಿರು ಹೊದಿಕೆ. ಟ್ರಂಚ್ ಮೂಲಕ ಮಣ್ಣಿನಲ್ಲಿ ಹ್ಯೂಮಸ್ ನಿಮರ್ಾಣ ಮಾಡಿ ಗಿಡಗಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿರುವುದು ಎಂದು ಟ್ರಂಚ್ನಿಂದ ಮಣ್ಣನ್ನು ಬಗೆದು ತೋರಿಸುತ್ತಾರೆ. ಎರೆಗೊಬ್ಬರದಂತೆ ಮೃದುವಾಗಿ, ಸ್ಪಂಜಿನಂತೆ ಇದ್ದ ಮಣ್ಣು ತೋಟದಲ್ಲಿದ್ದ ಅಪಾರ ಸಸ್ಯ ವೈವಿಧ್ಯಗಳನ್ನು ಕಾಪಾಡುವ ವಿಸ್ಮಯದಂತಿದೆ.
ಅಲಲ್ಲಿ ತೇಗದ ಗಿಡಗಳನ್ನು ಹಾಕಿದ್ದು ನಾಲ್ಕೆ ತಿಂಗಳಲ್ಲಿ ಅವು ಆಳೆತ್ತೆರ ಬೆಳೆದು ದೀರ್ಘಕಾಲದಲ್ಲಿ ಆದಾಯ ತರುತ್ತವೆ. ಈ ನಡುವೆ ಬನ್ನೂರು ಕೃಷ್ಣಪ್ಪನವರ ಸಲಹೆಯಂತೆ ಹಾಕಿದ ಕೋ ಕೋ ಗಿಡಗಳು ಮೂರೆ ವರ್ಷದಲ್ಲಿ ಫಸಲು ಬಿಟ್ಟು ಅಚ್ಚರಿ ಮೂಡಿಸಿವೆ. ಬೇರೆಯವರ ತೋಟದಲ್ಲಿ ಹಾಕಿರುವ ಕೋ ಕೋ ಗಿಡಗಳಲ್ಲಿ ಇನ್ನೂ ಫಸಲು ಬಂದಿಲ್ಲ ಆದರೆ ನನ್ನ ತೋಟದ ಗಿಡಗಳು ಕಾಯಿಬಿಟ್ಟಿವೆ.ಇದೆಲ್ಲ ಮಣ್ಣಿನ ಮಹಿಮೆ ಎನ್ನುತ್ತಾರೆ.
ಜೀವಾಮೃತವಾದ ಗೋ ಮೂತ್ರ : ಹತ್ತು ದಿನಗಳಿಗೆ ಒಂದು ಬಾರಿ ಅಂದರೆ ತಿಂಗಳಿಗೆ ಮೂರು ಸಲ ಸುಬಾಷ್ ಪಾಳೇಕರ್ ಮಾದರಿಯಲ್ಲಿ ಜೀವಾಮೃತ ಸಿದ್ಧ ಪಡಿಸಿಕೊಂಡು ಭೂಮಿಗೆ ಚೆಲ್ಲುತ್ತೇವೆ. ರೋಗ ಬಾಧೆ ಕಂಡು ಬಂದರೆ ನಾಟಿ ಹಸುವಿನ ಗಂಜಲ, ಹುಳಿ ಮಜ್ಜಿಗೆ, ನೀರು ಬೆರಸಿ ಸಿಂಪರಣೆ ಮಾಡಿ ರೋಗ ನಿಯಂತ್ರಣ ಮಾಡುತ್ತೆವೆ. ಇದರ ಜೊತೆಗೆ ಮುಖ್ಯವಾಗಿ 50 ಕುರಿಗಳಿಂದ ಬರುವ ಗೊಬ್ಬರವನ್ನು ಇಡಿ ತೋಟದ ಒಂದೊಂದು ಭಾಗಕ್ಕೂ ಪ್ರತಿದಿನ ಚೆಲ್ಲುತ್ತೇವೆ. ತೋಟಕ್ಕೆಲ್ಲ ಕುರಿಗೊಬ್ಬರ ಚೆಲ್ಲಿ ಮುಗಿದ ನಂತರ ಮತ್ತೆ ಮೊದಲಿನಿಂದ ಪರಿವರ್ತನೆ ಮಾಡಿಕೊಂಡು ಚೆಲ್ಲುತ್ತಾ ಹೋಗುತ್ತೇವೆ. ಇದು ಭೂಮಿ ಫಲವತ್ತಾಗಲೂ ಮುಖ್ಯ ಕಾರಣ.ನಾಟಿ ಹಸುವಿನ ಗಂಜಲಕ್ಕೆ ಇರುವ ಶಕ್ತಿ ಯಾವ ಔಷದಿಗೂ ಇಲ್ಲ. ಗಂಜಲ ಭೂಮಿಯಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ.
ಕುರಿ ಸಾಕಾಣೆ : ಸಾಂಪ್ರದಾಯಿಕ ಪದ್ಧತಿಯಲ್ಲಿ ಕುರಿ ಸಾಕಾಣಿಕೆ ಮಾಡುವ ಇವರು ಕುರಿಗಳ ಸಂಖ್ಯೆಯನ್ನು 50 ಕ್ಕಿಂತ ಹೆಚ್ಚು ಮಾಡಿಕೊಳ್ಳುವುದಿಲ್ಲ. ಮರಿಗಳನ್ನು ಮಾರಾಟ ಮಾಡಿ ಅದರಿಂದಲ್ಲೂ ಆದಾಯಗಳಿಸುತ್ತೇವೆ. ಜಮೀನು ಕೆಲಸಕ್ಕೆಂದು ಒರ್ವ ಕಾಮರ್ಿಕ ಮಾತ್ರ ಇದ್ದು, ನನ್ನ ಜೊತೆ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಕೆಲಸ ಮಾಡಿ ನಂತರ ಕುರಿಗಳನ್ನು ಮೇಯಿಸುತ್ತಾರೆ. ನಾವು ಅನುಸರಿಸುತ್ತಿರುವ ಬೇಸಾಯ ಪದ್ಧತಿಯಲ್ಲಿ ಮಾನವ ಹಸ್ತಕ್ಷೇಪ ಕಡಿಮೆ. ಭೂಮಿಯಲ್ಲಿ ಹ್ಯೂಮಸ್ ನಿಮರ್ಾಣವಾದ ನಂತರ ಮತ್ತೂ ಕೆಲಸ ಕಡಿಮೆ. ಆಗ ಪ್ರಕೃತಿಗೆ ಸಹಕಾರಿಯಾಗುವಂತೆ ಏಕದಳ, ದ್ವಿದಳ ಸಸ್ಯಗಳ ಜೊತೆ ತೋಟಗಾರಿಕೆ ಗಿಡಗಳನ್ನು ಸಂಯೋಜನೆ ಮಾಡುತ್ತಾ ಹೋಗುವುದನ್ನು ಬಿಟ್ಟರೆ ಬೇರೆನೂ ಕೆಲಸ ಇಲ್ಲ.
ಆರಂಭದಲ್ಲಿ ರಸಾಯನಿಕ ಬಳಸದೆ ಬೇಸಾಯ ಮಾಡಲು ಶುರುಮಾಡಿದಾಗ ಸುತ್ತಮತ್ತಲಿನ ಜನ ನನ್ನನ್ನು ಹುಚ್ಚ ಎಂದರು. ಕ್ರಮೇಣ ನನ್ನ ಬೇಸಾಯ ಪದ್ಧತಿನೋಡಿ ಹುಚ್ಚ ಅಂದವರೆ ಈಗ ಅಭಿನಂದಿಸುತ್ತಿದ್ದಾರೆ. ಹಿಂದೆ ನಮ್ಮಲ್ಲಿಯು ಕಬ್ಬು ಕಟಾವು ನಂತರ ತರಗಿಗೆ ಬೆಂಕಿ ಹಚ್ಚುತ್ತಿದ್ದರು. ಈಗ ಅದನ್ನು ಬಿಟ್ಟು ಮಣ್ಣಿಗೆ ಹೊದಿಕೆ ಮಾಡಲು ಶುರು ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಸುತ್ತಲಿನ ಜನ ಬದಲಾಗಿದ್ದಾರೆ. ಸಿಂಧುವಳ್ಳಿಯ ರೈತಸಂಘದ ಕಾರ್ಯಕರ್ತ ಸತೀಶ್ ರಾವ್ ಸೇರಿದಂತೆ ಹಲವಾರು ರೈತಸಂಘದ ಕಾರ್ಯಕರ್ತರು ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೇಸಾಯ ಮಾಡಲು ಮುಂದಾಗಿದ್ದಾರೆ. ರೈತರು ನಿಧಾನವಾಗಿಯಾದರೂ ಸಾವಯವ ಆಹಾರ ಬೆಳೆಯುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.
ಜೀವಾಮೃತದ ಜೊತೆ ಸ್ಥಳೀಯವಾಗಿ ಸಿಗುವ ತ್ಯಾಜ್ಯಗಳನ್ನು ಬಳಸಿಕೊಳ್ಳಬೇಕು. ತಿಪ್ಪೆ ಗೊಬ್ಬರ, ಕಾಂಪೋಸ್ಟ್ ಬಳಸಿಕೊಂಡರೆ ಅನುಕೂಲ. ತೋಟದಲ್ಲಿ ತಿರುಗಾಡುವಾಗ ಕೈಯಲ್ಲಿ ಕತ್ತಿ ಜೇಬಿನಲ್ಲಿ ಬೀಜ ಇದ್ದರೆ ಕೆಲಸ ಮುಗಿದಂತೆಯೆ ಎನ್ನುತ್ತಾರೆ ವಿದ್ಯಾ ಸಾಗರ. ತೋಟದ ಮಣ್ಣು ಮೃದುವಾಗಿ,ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ. ಹಾಗಾಗಿ ಇವರು ತೋಟಕ್ಕೆ ಹದಿನೈದು ಅಥವಾ ತಿಂಗಳಿಗೆ ಒಮ್ಮೆ ನೀರು ಕೊಟ್ಟರೆ ಸಾಕು. ಎಂತಹ ಬೇಸಿಗೆಗೂ ಜಗ್ಗದ ಒಂದು ಕೊಳವೆ ಬಾವಿ ಸದಾ ಮೂರು ಇಂಚು ನೀರು ಕೊಡುತ್ತಿದೆ.ನೀರಿನ ಬಳಕೆಯಲ್ಲೂ ಮಿತ ಬಳಕೆ ಸಾಧಿಸಿರುವ ವಿದ್ಯಾ ಸಾಗರಪ್ರಕೃತಿಗೆ ನೀಡುತ್ತಿರುವ ಕೊಡುಗೆಗೆ ಬೆಲೆಕಟ್ಟಲಾಗದು. ಹೆಚ್ಚಿನ ಮಾಹಿತಿಗೆ ಅವರನ್ನು ಮೊ. 8792103855 ರಲ್ಲಿ ಸಂಪಕರ್ಿಸಬಹುದು.
ರೈತ ಹೋರಾಟದಲ್ಲಿ"ಆಂದೋಲನ'
ಮೈಸೂರು : ರೈತ ನಾಯಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರು ರಾಜ್ಯದಲ್ಲಿ ರೈತಸಂಘ ಸ್ಥಾಪಿಸುವ ಮೊದಲೆ ಮೈಸೂರು ಜಿಲ್ಲೆಯ ತಾಂಡವಪುರದಲ್ಲಿ ರೈತ ಸಂಘಟನೆಯೊಂದು ಆರಂಭವಾಗಿ ರೈತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿಯಾಗಿತ್ತು. ಇದರ ರೂವಾರಿ ತಾ.ರಾಮೇಗೌಡರು. ರಘುಪತಿ ನಾಯಕರ ನೃತೃತ್ವದಲ್ಲಿ ತಾಂಡವೇಶ್ವರ ರೈತ ಸಂಘ ಎಂಬ ಹೆಸರಿನಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ತಾಲೂಕಿನ ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು.
ಸಹಕಾರ ಬ್ಯಾಂಕಿನವರು ರೈತರಿಗೆ ನೀಡುತ್ತಿದ್ದ ಕಿರುಕುಳ, ಚಕ್ರ ಬಡ್ಡಿ, ಹರಾಜು, ತಾಂಡವಪುರ ಗೇಟ್ ಬಳಿ ಹಾಕಲಾಗಿದ್ದ ಲೇವಿ ಸಂಗ್ರಹಣೆ ಗೇಟ್ ವಿರುದ್ಧ ಹೋರಾಟಮಾಡಿ ಹಲವಾರು ಬಾರಿ ಜೈಲಿಗೂ ಹೋಗಿ ಬಂದಿದ್ದರು. ನಂತರ ಸಂಘಟನೆಯನ್ನು ರಾಜ್ಯರೈತ ಸಂಘದಲ್ಲಿ ವಿಲೀನ ಮಾಡಿ, 80 ರ ದಶಕದಲ್ಲಿ ನಂಜನಗೂಡು ತಾಲೂಕಿನ ಅರತಲೆಯಲ್ಲಿ ತೋಟ ಮಾಡಿದ್ದ ಪ್ರೊಫೆಸರ್ ನಂಜುಂಡಸ್ವಾಮಿಯವರ ಜತೆಗೂಡಿ ಸುತ್ತಮತ್ತಲಿನ ನೂರಾರು ಹಳ್ಳಿಗಳನ್ನು ಸುತ್ತಾಡಿ ರೈತರನ್ನು ಸಂಘಟಿಸಿದ್ದರು. ನಂಜನಗೂಡು ತಾಲೂಕಿನಾದ್ಯಂತ ಸೈಕಲ್ಗೆ ಮೈಕ್ ಕಟ್ಟಿಕೊಂಡು ರೈತಸಂಘದ ನೀತಿ, ಉದ್ದೇಶ, ಸಂಘಟನೆಯ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಮಾಡಿದ್ದರು.
ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರು ಆಗ ನಮ್ಮ ಮನೆಗೆ ಬರುತ್ತಿದ್ದರು.ಮೊದಲಿನಿಂದಲೂ ರೈತಪರ ಚಳವಳಿಗಳನ್ನು ಬೆಂಬಲಿಸುತ್ತಾ ಬಂದಿರುವ ಕೋಟಿಯವರು ಆಂದೋಲನ ಪತ್ರಿಕೆಯ ಮೂಲಕ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕೆಗೆ ಐವತ್ತು ಪೈಸೆ ಇದ್ದಾಗ ತಾಂಡವಪುರದಲ್ಲಿ ನಮ್ಮ ತಂದೆ ತಾ.ರಾಮೇಗೌಡರು ಪತ್ರಿಕೆಯ ಏಜೆಂಟರಾಗಿದ್ದರು ಎಂದು ವಿದ್ಯಾ ಸಾಗರ ನೆನಪು ಮಾಡಿಕೊಂಡರು.
ಪ್ರತಿ ಸೋಮವಾರ ನಂಜನಗೂಡಿನಲ್ಲಿ "ರೈತ ಸಮಸ್ಯೆ ಸ್ಪಂದನಾ ದಿನ" ವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಇವರು ರೈತ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ನೂರಾರು ರೈತರು ಪ್ರತಿ ಸೋಮವಾರ ತಮ್ಮ ಹಲವಾರು ಸಮಸ್ಯೆಗಳೊಂದಿಗೆ ಬಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.
Sir salute tu your efforts, hats upppppppppp
ಪ್ರತ್ಯುತ್ತರಅಳಿಸಿ