ಅಮೃತ ಭೂಮಿಯಲ್ಲಿ ನವೀನ ಕೃಷಿ
ಚಾಮರಾಜನಗರ : ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ವಿದ್ಯಾವಂತ ಹುಡುಗರನ್ನು ಹಿರಿಯರು ಬಲವಂತವಾಗಿ ನಗರಕ್ಕೆ ನೂಕುತ್ತಿದ್ದಾರೆ.ತಲೆಮಾರುಗಳ ಅಂತರದಿಂದ ನಮ್ಮ ಕೃಷಿ ಹಳಿತಪ್ಪಿದೆ.ಕಲಿತ ಯುವಕರು ವ್ಯವಸಾಯದ ರೀತಿರಿವಾಜುಗಳನ್ನು ಅರಿತುಕೊಂಡು ಮರಳಿ ಹಳ್ಳಿಗೆ ಬಂದಾಗ ಮಾತ್ರ ಪರಿಸರವೂ ಉಳಿದು,ನಾವು ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು....ಹೀಗೆ ಎದುರಿಗೆ ಕುಳಿತ ಹುಡುಗ ಹೇಳುತ್ತಾಹೋದ. ನಮ್ಮ ಮತ್ತು ಅವನ ಎದುರು ಕಳೆದ ಆರು ತಿಂಗಳಿನಲ್ಲಿ ಅವನು ರೂಪಿಸಿದ ತೋಟ ಏಪ್ರಿಲ್ನ ಬಿರು ಬೇಗೆಯಲ್ಲೂ ಹಚ್ಚ ಹಸಿರು ತುಂಬಿಕೊಂಡು ನಗುತ್ತಿತ್ತು.
ಸುಸ್ಥಿರ ಕೃಷಿಯ ಮಾದರಿಗಳನ್ನು ಹುಡುಕಿಕೊಂಡು ಹೊರಟ ನಾವು ಬಂದು ನಿಂತಿದ್ದು ಚಾಮರಾಜನಗರದಿಂದ 13 ಕಿ.ಮೀ.ದೂರದ ವಂಡರಬಾಳುವಿನಲ್ಲಿದ್ದ ಅಂತರ ರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ ಫ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಮಹಾ ಕನಸಿನ "ಅಮೃತ ಭೂಮಿ' ಗೆ. ಬರದ ನಾಡಿನಲ್ಲಿ ಬದುಕುಳಿಯಬಲ್ಲ ಕೃಷಿ ಮಾದರಿಗಳು ನಮಗೆ ಬೇಕಿತ್ತು. ನಮ್ಮ ಸಾವಿರಾರು ಕಿ. ಮೀ ಪಯಣದಲ್ಲಿ ಅಲ್ಲಲ್ಲಿ ನಮ್ಮ ನಾಡಿನ ಯುವಕರು ಮಳೆಯಾಶ್ರಯದಲ್ಲಿ ಕಡಿಮೆ ನೀರು ಬಳಸಿ ಮಿಶ್ರ ಬೇಸಾಯ ಮಾಡುತ್ತಾ, ಹೊಸ ಹೊಸ ಪ್ರಯೋಗಗಳೊಂದಿಗೆ, ಬರದಲ್ಲೂ ಬದುಕುವ ಪಯರ್ಾಯವನ್ನು ಕಟ್ಟಿಕೊಡುತ್ತಿರುವುದು ಕಂಡುಬಂತು.
ಪ್ರೊ.ಎಂ,ಡಿ.ನಂಜುಂಡಸ್ವಾಮಿಯವರು ಅಮೃತಭೂಮಿಯನ್ನು ದೇಸಿತಳಿಯ ಬೀಜಗಳ ಸಂರಕ್ಷಣ ಕೇಂದ್ರವಾಗಿ ಮಾಡುವ ಮಹಾ ಕನಸಿನೊಂದಿಗೆ ಆರಂಭಮಾಡಿದ್ದರು. ಈಗ ಅಲ್ಲಿ ಸದ್ದಿಲ್ಲದೆ ನಾಟಿ ತಳಿಯ ಬೀಜಬ್ಯಾಂಕ್ ಕೆಲಸಮಾಡುತ್ತಿದೆ. ರೈತರಿಗೆ ಇತರ ಕಡೆಗಿಂತ ಕಡಿಮೆ ದರದಲ್ಲಿ ನಾಟಿ ತಳಿಯ ಬೀಜಗಳನ್ನು ಮಾರಾಟಮಾಡುವ ಮೂಲಕ ಅವರನ್ನು ಸ್ವಾವಲಂಭಿ ಕೃಷಿಕರನ್ನಾಗಿ ಮಾಡಲು ಚುಕ್ಕಿನಂಜುಂಡಸ್ವಾಮಿ ಶ್ರಮಿಸುತ್ತಿದ್ದಾರೆ. ಇವರ ಕನಸನ್ನು ಸಾಕಾರಮಾಡಲು ಉತ್ಸಾಹಿ ಯುವಕರ ತಂಡವೊಂದು ಅಲ್ಲಿ ಕೃಷಿನಿರತವಾಗಿದೆ.
ಅಂತಹ ತಂಡದ ಒರ್ವ ಯುವಕ ನವೀನ್. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ,ಇಂಗ್ಲೀಷ್ ಸಾಹಿತ್ಯ ಮತ್ತು ಸೈಕಾಲಜಿ ವಿಷಯದಲ್ಲಿ ಪದವಿ ಮುಗಿಸಿರುವ ನವೀನ್ ಕುಮಾರ್ ಬಿ.ಐ. ಮನಸ್ಸು ಮಾಡಿದ್ದರೆ ಪತ್ರಕರ್ತನಾಗಿ ಅಥವಾ ಯಾವುದಾದರೂ ಕಂಪನಿಯಲ್ಲಿ ನೌಕರಿಗೆ ಸೇರಬಹುದಿತ್ತು. ಆದರೆ ಕೃಷಿಯ ಮೇಲಿನ ಕಾಳಜಿ ಮತ್ತು ಮಣ್ಣಿನ ಮೇಲಿನ ಪ್ರೀತಿ ಅವನನ್ನು ಒಬ್ಬ ಕೃಷಿ ಪಂಡಿತನನ್ನಾಗಿಮಾಡಿದೆ.
ಕೇವಲ ಒಂದು ಎಕರೆ ಹತ್ತು ಗುಂಟೆ ಪ್ರದೇಶದಲ್ಲಿ ನವೀನ್ ಮಾಡುತ್ತಿರುವ ಬೇಸಾಯ ಕೃಷಿ ಪಯರ್ಾಯಗಳನ್ನು ಹುಡುಕುತ್ತಿರುವವರಿಗೆ ಮಾದರಿಯಗಬಲ್ಲದು.
ಆಯಾಯ ಸಮಯದಲ್ಲಿ ಬೆಳೆಯುವ ಬೆಳೆಗಳ ಜತೆಗೆ ದೀರ್ಘಕಾಲ ಇದ್ದು ಆದಾಯ ತಂದು ಕೊಡಬಲ್ಲಂತಹ ಬಾಳೆ, ಅರಿಶಿನ, ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನು ಸಂಯೋಜನೆಮಾಡಿ ಬೆಳೆದಿರುವುದು ಅಚ್ಚರಿ ಮೂಡಿಸುತ್ತದೆ. ಇದೆಲ್ಲದ್ದರಿಂದ ವಾಷರ್ಿಕ ಮೂರು ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿರುವ ನವೀನ್, ಕಡಿಮೆ ನೀರು ಮತ್ತು ಅತಿ ಕಡಿಮೆ ಹಣ ವೆಚ್ಚಮಾಡಿ ಒಂದು ಸಣ್ಣ ಕುಟುಂಬ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬಹುದಾದ ಮಾದರಿಯೊಂದನ್ನು ನಮ್ಮ ಕಣ್ಣಮುಂದೆ ತೋರಿಸುತ್ತಾರೆ.
ಹಿರಿಯರ ವಿರೋಧ : ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ನವೀನ್ಕುಮಾರ್ ಕೃಷಿ ಕುಟುಂಬದಿಂದಲೇ ಬಂದ ಯುವಕ. ಮನೆಯಲ್ಲಿ ಈತನೇ ಮೊದಲ ತಲೆಮಾರಿನ ವಿದ್ಯಾವಂತನಾದ ಕಾರಣ ಮನೆಯವರಿಗೆ ಮಗ ನಗರದಲ್ಲಿ ನೌಕರಿಮಾಡಬೇಕೆಂಬ ಆಸೆ. ಬೇಸಾಯ ನಮ್ಮ ತಲೆಗೆ ಕೊನೆಯಾಗಬೇಕು ಮಗ, ನೀನು ನಗರದಲ್ಲಿ ಯಾವುದಾದದರೂ ನೌಕರಿ ಸೇರಿ ನೆಮ್ಮದಿಯಾಗಿ ಬದುಕಪ್ಪಾ ಎಂಬುದು ತಂದೆ ತಾಯಿಯ ಒತ್ತಾಯ.
ಅಜ್ಜ ಅಜ್ಜಿಯರ ಕಾಲಕ್ಕೆ ನೆಮ್ಮದಿ ತಂದುಕೊಡುತ್ತಿದ್ದ ಬೇಸಾಯ, ತನ್ನ ಅಪ್ಪನ ಕಾಲಕ್ಕೆ ದಿನದಲ್ಲಿ 12 ಗಂಟೆ ದುಡಿದರೂ ಯಾಕೆ ನೆಮ್ಮದಿ ತಂದುಕೊಡುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿ ಯಾಕೆ ನಲುಗುವಂತೆ ಮಾಡಿದೆ. ಎಂಬೆಲ್ಲ ಪ್ರಶ್ನೆಗಳನ್ನು ತಲೆಯ ತುಂಬಾ ತುಂಬಿಕೊಂಡ ನವೀನ್ ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲ್ಲೇ ಬೇಕು ಎಂಬ ಛಲದಿಂದ ಪದವಿ ಮುಗಿಸಿ ಬೇಸಾಯಮಾಡಲು ಮರಳಿ ಊರಿಗೆ ಬರುತ್ತಾರೆ. ಆದರೆ ಮನೆಯವರು ಇವರ ಆಸೆಗೆ ಅಡ್ಡಿಯಾಗುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದ ವಿಚಲಿತರಾದ ನವೀನ್ಗೆ ನೆನಪಾದದ್ದೇ "ಅಮೃತ ಭೂಮಿ".
ವನರಂಗದಿಂದ ಅಮೃತ ಭೂಮಿಗೆ: ಕಳೆದ ವರ್ಷ ಮೈಸೂರಿನ ರಂಗಾಯಣದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ನನ್ನ ಕನಸಿಗೆ ಬಣ್ಣ ತುಂಬಿತು ಎನ್ನುವ ನವೀನ್ ಅಲ್ಲಿ ತಜ್ಙರು ಮಾಡಿದ ಉಪನ್ಯಾಸ ನನಗರಿಯದ ಮಣ್ಣಿನ ಲೋಕವೊಂದನ್ನು ತಿಳಿಸಿಕೊಟ್ಟಿತು. ಅಲ್ಲಿ ಚುಕ್ಕಿ ಅಕ್ಕ ಅವರ ಪರಿಚಯವಾಯಿತು. ವ್ಯವಸಾಯ ಮಾಡಲು ಊರಿಗೆ ಹೋದೆ. ಅಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿದಾಗ ನನಗೆ ನೆನಪಿಗೆ ಬಂದದ್ದು ಚುಕ್ಕಿ ಅಕ್ಕ. ತಕ್ಷಣ ನನ್ನ ಕನಸುಗಳನ್ನು ಅಕ್ಕನೊಂದಿಗೆ ದೂರವಾಣಿಯ ಮೂಲಕ ಹೇಳಿದೆ. ಅಮೃತ ಭೂಮಿಗೆ ಬಂದುಬಿಡು ಎಂದರು. 200 ಕಿ.ಮೀ ದೂರದಿಂದ ಬಂದೆ. ಯಾವತ್ತೂ ನಾನಿಲ್ಲಿ ಏಕಾಂಗಿ ಅನಿಸಿಲ್ಲ. ಆರು ತಿಂಗಳ ಮಟ್ಟಿಗೆ ಇರಲು ಬಂದವನಿಗೆ ಈಗ ಊರಿಗೆ ಹೋಗಲು ಮನಸ್ಸೇ ಬರುತ್ತಿಲ್ಲ. ನನ್ನಂತೆ ಕೃಷಿಯತ್ತ ಆಕಷರ್ಿತವಾದ ಒಂದು ಯುವ ಪಡೆಯೆ ಇಲ್ಲಿ ನನಗೆ ಸಿಕ್ಕಿತು ಎಂದು ಹೂ ನಗೆ ಬೀರುತ್ತಾರೆ.
ಯೋಜಿತ, ವ್ಯವಸ್ಥಿತ :ಬಿಳಿಗಿರಿ ರಂಗನ ಬೆಟ್ಟದ ತಳದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಅಮೃತ ಭೂಮಿ ದೇಸಿ ಜವಾರಿ ತಳಿಯ ಬೀಜ ಸಂರಕ್ಷಣೆಗಾಗಿಯೇ ಬೀಜ ಬ್ಯಾಂಕ್ ಘೋಷಣೆಯೊಂದಿಗೆ ಜನ್ಮ ತಾಳಿದ ಪುಣ್ಯಭೂಮಿ. ಅಲ್ಲಿರುವ ಪ್ರತಿಯೊಬ್ಬರಿಗೂ ಒಂದು, ಎರಡು ಎಕರೆ ಪ್ರದೇಶವನ್ನು ಹಂಚಿಕೆ ಮಾಡಿ ನಿಧರ್ಿಷ್ಟ ಬೆಳೆ ಪದ್ಧತಿಯಲ್ಲಿ ಪ್ರಯೋಗ ಮಾಡಲು ಹೇಳಲಾಗುತ್ತದೆ. ಅದಕ್ಕೆ ಬೇಕಾದ ತರಬೇತಿ ಮತ್ತು ಮಾಹಿತಿಯನ್ನು ಕೊಡಿಸಲಾಗುತ್ತದೆ.
ಇದೆಲ್ಲ ನಡೆಯುವ ಮೊದಲು ಹಲವು ಸುತ್ತಿನ ಸಮಲೋಚನಾ ಸಭೆಗಳು ನಿರಂತರವಾಗಿ ನಡೆದಿರುತ್ತವೆ. ಚುಕ್ಕಿಯವರ ನೇತೃತ್ವದಲ್ಲಿ ಪ್ರತಿ ತಿಂಗಳು ಅಲ್ಲಿ ಕೃಷಿ ಪ್ರಯೋಗದಲ್ಲಿ ತೊಡಗಿಕೊಂಡಿರುವವರ ಜತೆಗೆ ಚಚರ್ೆ, ಸಮಲೋಚನಾ ಸಭೆಗಳನ್ನು ನಡೆಸಲಾಗುತ್ತದೆ. ನಂತರ ಅಮೃತ ಭೂಮಿಯ ಕೋರ್ ಕಮಿಟಿಯಲ್ಲಿ ಸ್ಥಳೀಯ ರೈತ ಮುಖಂಡರು, ಟ್ರಸ್ಟ್ನ ಪದಾಧಿಕಾರಿಗಳು ಎಲ್ಲಾ ಸೇರಿ ಈ ವರ್ಷ ಬೆಳೆಯಬಹುದಾದ ಬೆಳೆ ಮತ್ತು ಬೇಸಾಯ ಕ್ರಮಗಳ ಬಗ್ಗೆ ವಾಷರ್ಿಕ ಯೋಜನೆಯೊಂದು ಸಿದ್ಧಪಡಿಸುತ್ತಾರೆ. ನಂತರವೇ ವ್ಯವಸಾಯದ ಕೆಲಸ ಕಾರ್ಯಗಳ ಆರಂಭ.
ಎಕರೆ ಒಂದು, ಬೆಳೆ ಹಲವು : ನವೀನ್ ಪಾಲಿಗೆ ಒಂದು ಎಕರೆ ಹತ್ತು ಗುಂಟೆ ಪ್ರದೇಶವನ್ನು ನೀಡಲಾಗಿದೆ. ಅಲ್ಲಿ ಶೂನ್ಯ ಬಂಡವಾಳ ಕೃಷಿ ಸಾಧಕ ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬಾಳೆ ಕೃಷಿ ಮಾಡಲು ಹೇಳಲಾಗಿದೆ. ಜನವರಿ ಮೊದಲವಾರದಲ್ಲಿ ಆರುವರೆ * ಆರುವರೆ ಅಡಿ ಅಂತರದಲ್ಲಿ ಏಲಕ್ಕಿ ಬಾಳೆಯನ್ನು ನಾಟಿಮಾಡಲಾಗಿದೆ. ಭೂಮಿಗೆ ನೈಟ್ರೋಜನ್ ಸೇರಿಸಲು ಬಾಳೆ ಕಂದಿನ ಬುಡದ ಸುತ್ತಲ್ಲೂ ಅಲಸಂದೆ ಗಿಡ ಬೆಳೆಯಲಾಗಿದೆ. ಪಾಳೇಕರ್ ಪದ್ಧತಿಯಲ್ಲಿ ಜೀವಾಮೃತ ನೀಡುವ ನವೀನ್ ನೀರಿಗಾಗಿ ಸ್ಪಿಂಕ್ಲರ್ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಬಾಳೆಯ ನಡುವೆ ಮುಸುಕಿ ಜೋಳ, ಬೀನ್ಸ್, ಬೆಂಡೆ, ಬೂದು ಗುಂಬಳ, ಸಹಿ ಗುಂಬಳ, ಹರಳು, ಚೆಂಡು ಹೂ, ಕಲ್ಲಂಗಡಿ ಹಾಕುವ ಮೂಲಕ ಆದಾಯದ ಜತೆಗೆ ಮಣ್ಣಿಗೆ ಜೀವಂತ ಮಲ್ಚಿಂಗ್ ವಿಧಾನವನ್ನು ಮಾಡಿ ಬಹು ಬೆಳೆಯ ಮಿಶ್ರ ಪದ್ಧತಿಗೆ ಆದ್ಯತೆ ನೀಡಿದ್ದಾರೆ. ಇದರಿಂದ ಆಯಾಯ ಕಾಲದಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಹಾಕಿರುವುದರಿಂದ ವರ್ಷಪೂತರ್ಿ ಆದಾಯ ನಿರೀಕ್ಷಿಸಬಹುದು.
ಬೀಜ ಹಾಕುವಾಗಲೂ ನಾಟಿ ತಳಿಯ ಏಕದಳ,ದ್ವಿದಳ ಜವಾರಿ ಬೀಜಗಳನ್ನೇ ಭಿತ್ತನೆ ಮಾಡಲಾಗಿದೆ. ವಾರಕ್ಕೊಮ್ಮೆ ಸಂಜೆ ಸಮಯದಲ್ಲಿ ಜೀವಾಮೃತ, ಹುಳಿ ಮಜ್ಜಿಗೆ, ಅಗ್ನಿ ಅಸ್ತ್ರವನ್ನು ಅಲ್ಟರ್ನೇಟಿವ್ ವಿಧಾನದಲ್ಲಿ ಗಿಡಗಳಿಗೆ ಸಿಂಪರಣೆ ಮಾಡುತ್ತಾರೆ. ಚೆಂಡು ಹೂ ಮತ್ತು ಹರಳು ಹಾಕಿರುವುದರಿಂದ ಸಾಕಷ್ಟು ರೋಗಗಳನ್ನು ತಡೆಯಬಹುದು.ಹೊರಗಿನಿಂದ ಬರುವ ಕೀಟಗಳು ಮೊದಲು ಚೆಂಡು ಹೂ ಮತ್ತು ಹರಳು ಗಿಡದ ಅಗಲವಾದ ಎಲೆಗಳಿಗೆ ಆಕಷರ್ಿತವಾಗುವುದರಿಂದ ಉಳಿದ ಗಿಡಗಳು ಬದುಕಿ ಉಳಿಯುತ್ತವೆ ಎನ್ನುವುದು ಇಲ್ಲಿ ನೋಡಿದರೆ ಗೊತ್ತಾಗುತ್ತದೆ ಎಂದು ಅರಳಿನಿಂತ ತೋಟವನ್ನು ತೋರಿಸುತ್ತಾರೆ.ಅಮೃತ ಭೂಮಿಗೆ ಬಂದ ಮೇಲೆ ಕೃಷಿಯ ಹತ್ತು ಹಲವು ಸಾಧ್ಯತೆಗಳು, ಮಾದರಿಗಳು ಸಿಕ್ಕವು. ಮರಳಿ ಊರಿಗೆ ಹೋಗಿ ಕೃಷಿಮಾಡಲು ಈಗ ದೃಢವಾದ ವಿಶ್ವಾಸಮೂಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ನಾಡಿನ ಉದ್ದಗಲ್ಲಕ್ಕೂ ಇರುವ ನೂರಾರು ನೈಸಗರ್ಿಕ ಕೃಷಿಕರ ಸಂಪರ್ಕದಲ್ಲಿರು ನವೀನ್ ಅವರಿಂದ ಅಮೂಲ್ಯವಾದ ಚುರುಕು ಮೆಣಸಿನಕಾಯಿ, ಕಸ್ತೂರಿ ಅರಿಶಿನ, ಕೆಂಪು ಬೆಂಡೆ, ನಾಮದ ಬಣ್ಣದ ಮುಸುಕಿನ ಜೋಳ, ನೆಂಬೆ ಹೀಗೆ ನಾನಾ ತಳಿಗಳನ್ನು ತರಿಸಿಕೊಂಡು ನಾಟಿ ಮಾಡಿದ್ದಾರೆ. ಇಂತಹ ಯುವಕರಿಂದ ಮಾತ್ರ ನಾಟಿ ತಳಿಯ ಬೀಜಗಳು ಉಳಿದು ನಮ್ಮ ರೈತರನ್ನು ಬದುಕಿಸಬಲ್ಲವು. ಹೆಚ್ಚಿನ ಮಾಹಿತಿಗೆ ಆಸಕ್ತರು ಮೊ.9591066583 ಸಂಪಕರ್ಿಸಬಹುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ