vaddagere.bloogspot.com

ಸೋಮವಾರ, ಅಕ್ಟೋಬರ್ 30, 2017

ಅನ್ನದಾತನ ಋಣ ತೀರಿಸುತ್ತಿರುವ ಕೃಷಿವಿಜ್ಞಾನ ಪದವಿಧರರು

# ಮಂಡ್ಯ ಜಿಲ್ಲೆಯಲ್ಲಿ ವಿನೂತನ ಪ್ರಯೋಗ # ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹ

ಬತ್ತದ ನಾಡು, ಸಕ್ಕರೆ ಜಿಲ್ಲೆ ಮಂಡ್ಯ ಬೇಸಾಯವನ್ನೆ ಹೆಚ್ಚು ಅವಂಭಿಸಿರುವ ಪ್ರದೇಶ.ಇಂತಹ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚುಮಂದಿ ಪದವಿಧರರು ಕೃಷಿಗೆ ಸಂಬಂಧಿಸಿದ ವಿಭಾಗಗಳಲ್ಲಿ ಉನ್ನತ ಅಧ್ಯಯನ ಮಾಡಿ ಪದವಿಗಳಿಸಿದ್ದಾರೆ. ಕೆಲವರೂ ಈಗಲೂ ಅಧ್ಯಯನ ಮಾಡುತ್ತಿದ್ದರೆ ಮತ್ತೆ ಕೆಲವರು ವಿಧ್ಯಾಭ್ಯಾಸ ಮುಗಿಸಿ ಸಕರ್ಾರಿ ಸೇವೆಗೆ ಸೇರಿ ನಿವೃತ್ತರಾಗಿದ್ದಾರೆ. ಇಂತಹ ಸಮಾನಾಸಕ್ತರೆಲ್ಲ ಸೇರಿ ಅನ್ನದಾತನಿಗೆ ನೆರವಾಗಲು ಚಿಂತಿಸಿದಾಗ ಅಸ್ತಿತ್ವಕ್ಕೆ ಬಂದದ್ದೆ ಮಂಡ್ಯ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ. ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘದಲ್ಲಿ 75 ವರ್ಷ ದಾಟಿದ ಹಿರಿಯರೂ ಇದ್ದಾರೆ. ಪ್ರೊ.ಕೆ.ಟಿ.ಶಿವಶಂಕರ್ ಸಂಘದ ಅಧ್ಯಕ್ಷರಾಗಿದ್ದಾರೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಯ್ಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಡಾ.ಎ.ರಾಜಣ್ಣ ಸಂಘದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಸರಕಾರಿ ಇಲಾಖೆಗಳು ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿರುವ ಸಂಘ ವಿಚಾರ ಸಂಕಿರಣ, ತರಬೇತಿ ಶಿಬಿರ,ತೋಟಗಳ ಭೇಟಿ,ಪ್ರಾತ್ಯಕ್ಷತೆ ನಡೆಸುವ ಮೂಲಕ ಅನ್ನದಾತನಿಗೆ ನೆರವಾಗುತ್ತಿದೆ.


ರೈತರ ಬಗ್ಗೆ ಎಲ್ಲರಿಗೂ ಕಾಳಜಿ. ರೈತಪರವಾದ ಪ್ರತಿಭಟನೆ,ಚಳವಳಿಗಳು ನಡೆದರೆ ಎಲ್ಲರ ಬೆಂಬಲವೂ ಇರುತ್ತದೆ.ನೇಗಿಲಯೋಗಿ,ಅನ್ನದಾತ,ಉಳುವಯೋಗಿ ಎಂದು ರೈತರನ್ನು ಎಲ್ಲರೂ ಹಾಡಿ ಹೊಗುಳುವವರೆ.ಸರಕಾರ ರೂಪಿಸುವ ಯೋಜನೆಗಳು ಕೂಡ ರೈತಸ್ನೇಹಿಯಾಗಿಯೆ ಇರುತ್ತವೆ.ದುರಂತವೆಂದರೆ ಅಂತಹ ಯೋಜನೆಗಳ ಅನುಷ್ಠಾನದಲ್ಲಿ ಸರಕಾರಿಯಂತ್ರ ವಿಫಲವಾಗುತ್ತದೆ.ಇದಕ್ಕೆ ಪ್ರಮುಖ ಕಾರಣ ರೈತರಿಗೆ ಸಿಗಬೇಕಾದ ಮಾಹಿತಿ ಮತ್ತು ಸಲಹೆಗಳ ಕೊರತೆ ಎನ್ನುವುದು ಸತ್ಯ.
ರೈತರಿಗೆ ಅನ್ಯಾಯವಾದಾಗ ಬೀದಿಗಿಳಿದು ಪ್ರತಿಭಟಿಸುವ ರೈತನಾಯಕರು,ಆರಂಭದಲ್ಲೆ ಸ್ವಲ್ಪ ಎಚ್ಚೆತ್ತುಕೊಂಡು ರೈತರಿಗೆ ಸರಕಾರಿ ಇಲಾಖೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರೆ,ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರೆ ಅನ್ನದಾತನ ಮೊಗದಲ್ಲಿ ನಗು ಕಾಣಬಹುದು. ಇಂತಹ ಪುಣ್ಯದ ಕೆಲಸ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಸರಕಾರದ ಕೃಷಿ,ತೋಟಗಾರಿಕೆ,ಅರಣ್ಯ,ಪಶುಸಂಗೋಪನೆ,ಮೀನುಗಾರಿಕೆ ಹೀಗೆ ವಿವಿಧ ಇಲಾಖೆಗಳು ಮತ್ತು ರೈತರ ನಡುವೆ ಸೇತುವೆಯಾಗಿ ಜಿಲ್ಲೆಯ ಪ್ರಜ್ಞಾವಂತರು ಸಂಘಟಿತರಾಗಿ ಕೆಲಸಮಾಡುತ್ತಿದ್ದಾರೆ.ಇಂತಹ ಮಾದರಿಗಳು ಪ್ರತಿ ಜಿಲ್ಲೆಯಲ್ಲೂ ಅಸ್ತಿತ್ವಕ್ಕೆ ಬಂದರೆ ಅಷ್ಟರ ಮಟ್ಟಿಗೆ ಅನ್ನದಾತ ನಿಟ್ಟುಸಿರು ಬಿಟ್ಟಾನು.
ಬತ್ತದ ನಾಡು, ಸಕ್ಕರೆ ಜಿಲ್ಲೆ ಮಂಡ್ಯ ಬೇಸಾಯವನ್ನೆ ಹೆಚ್ಚು ಅವಂಭಿಸಿರುವ ಪ್ರದೇಶ.ಇಂತಹ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚುಮಂದಿ ಪದವಿಧರರು ಕೃಷಿಗೆ ಸಂಬಂಧಿಸಿದ ವಿಭಾಗಗಳಲ್ಲಿ ಉನ್ನತ ಅಧ್ಯಯನಮಾಡಿ ಪದವಿಗಳಿಸಿದ್ದಾರೆ. ಕೆಲವರೂ ಈಗಲೂ ಅಧ್ಯಯನ ಮಾಡುತ್ತಿದ್ದರೆ ಮತ್ತೆ ಕೆಲವರು ವಿಧ್ಯಾಭ್ಯಾಸ ಮುಗಿಸಿ ಸಕರ್ಾರಿ ಸೇವೆಗೆ ಸೇರಿ ನಿವೃತ್ತರಾಗಿದ್ದಾರೆ. ಇಂತಹ ಸಮಾನಾಸಕ್ತರೆಲ್ಲ ಸೇರಿಕೊಂಡು ಅನ್ನದಾತನಿಗೆ ನೆರವಾಗಲು ಚಿಂತಿಸಿದಾಗ ಅಸ್ತಿತ್ವಕ್ಕೆ ಬಂದದ್ದೆ ಮಂಡ್ಯ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ. 
ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘದಲ್ಲಿ 75 ವರ್ಷ ದಾಟಿದ ಹಿರಿಯರೂ ಇದ್ದಾರೆ. ಪ್ರೊ.ಕೆ.ಟಿ.ಶಿವಶಂಕರ್ ಸಂಘದ ಅಧ್ಯಕ್ಷರಾಗಿದ್ದಾರೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಯ್ಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಡಾ.ಎ.ರಾಜಣ್ಣ ಸಂಘದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಉಳಿದಂತೆ ನಿದೇರ್ಶಕರನ್ನು ಒಳಗೊಂಡ ಆಡಳಿತ ಮಂಡಳಿ ಇದೆ.
ಸರಕಾರಿ ಇಲಾಖೆಗಳು ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿರುವ ಸಂಘದವರು ವಿಚಾರ ಸಂಕಿರಣ, ತರಬೇತಿ ಶಿಬಿರ,ತೋಟಗಳ ಭೇಟಿ,ಪ್ರಾತ್ಯಕ್ಷತೆ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಕೃಷಿಗೆ ಸಂಬಂಧಿಸಿದ ಪತ್ರಿಕೆಯನ್ನು ರೂಪಿಸಿ ರೈತರಿಗೆ ಸೂಕ್ತ ಮಾಹಿತಿ ಒದಗಿಸಲು ಚಿಂತನೆ ನಡೆಸುತ್ತಿದ್ದಾರೆ.
ಸಂಘದ ಉದ್ದೇಶಗಳು : ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬತ್ತ ಮತ್ತು ಕಬ್ಬು ಬೆಳೆಯಲಾಗುತ್ತದೆ.ನೀರನ್ನೆ ಹೆಚ್ಚು ಅವಲಂಭಿಸಿರುವ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ನೀರನ್ನು ಪೋಲು ಮಾಡುತ್ತಾರೆ ಇದು ಜಿಲ್ಲೆಯ ದೊಡ್ಡ ಸಮಸ್ಯೆ . ಇದಕ್ಕೆ ಏನಾದರೂ ಪಯರ್ಾಯ ಮಾಡಬಹುದಾ? ನೀರನ್ನು ಕಡಿಮೆ ಬಳಸಿ ಪಯರ್ಾಯ ಬೆಳೆ ಪದ್ಧತಿಗಳನ್ನು ಜಾರಿಗೆ ತರಬಹುದಾ? ಎನ್ನುವ ನಿಟ್ಟಿನಲ್ಲಿ ಸಂಘ ಕೆಲಸಮಾಡುತ್ತಿದೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ನಿವೃತ್ತ ಅರಣ್ಯಾಧಿಕಾರಿ (ಐಎಫ್ಎಸ್) ಅಣ್ಣಯ್ಯ.
ರೈತರು ಪಯರ್ಾಯ ಬೆಳೆ ಬೆಳೆಯಲು ಸಲಹೆ ಸೂಚನೆ ಕೊಡುವುದು. ಯಾವ ಪ್ರದೇಶದಲ್ಲಿ ಯಾವ ಮಣ್ಣಿಗೆ ಎಂತಹ ಬೆಳೆ ಸೂಕ್ತ ಅಂತ ತಿಳಿಸಿಕೊಡುವುದು. ಕೃಷಿ.ತೋಟಗಾರಿಕೆ ಹಾಗೂ ಅರಣ್ಯದ ಬೆಳೆಗಳನ್ನು ಒಟ್ಟೊಟ್ಟಿಗೆ ಸಮಗ್ರ ಪದ್ಧತಿ ಬೇಸಾಯದಲ್ಲಿ ಬೆಳೆದು ಆದಾಯವನ್ನು ಹೆಚ್ಚಿಸಿಕೊಂಡು ಸುಸ್ಥಿರ ಕೃಷಿ ಮಾಡಲು ಪ್ರೋತ್ಸಾಹ ನೀಡುವುದು.ಆ ಮೂಲಕ ರೈತರನ್ನು ಆಥರ್ಿಕವಾಗಿ ಸಬಲರನ್ನಾಗಿ ಮಾಡುವುದು ಸಂಘದ ಉದ್ದೇಶ ಮತ್ತು ಗುರಿ.
20015 ರಲ್ಲಿ ಜಿಲ್ಲೆಯವರೆ ಆದ ನಾಗರಾಜು ಅವರು ಗೇರು ಅಭಿವೃದ್ಧಿ ಮಂಡಳಿಯ ನಿದರ್ೇಶಕರಾಗಿದ್ದರು. ಒಳನಾಡು ಪ್ರದೇಶದಲ್ಲಿ ಗೇರು ವಿಸ್ತರಣೆಗೆ ಯೋಜನೆ ಜಾರಿಯಲ್ಲಿತ್ತು.ಇದರ ಅಂಗವಾಗಿ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ 2015 ಅಗಸ್ಟ್ನಲ್ಲಿ ಮಹಾರಾಷ್ಟ್ರದ ವೆಂಗೂಲರ್ಾದಿಂದ ಒಂದು ಲಕ್ಷ ಕಸಿಮಾಡಿದ ಗೇರು ಗಿಡಗಳನ್ನು ತರಿಸಿತು. ಕೇಂದ್ರ ಸಕರ್ಾರದ ಯೋಜನೆಯಡಿ ಕೇರಳ ರಾಜ್ಯದ ಕೊಚ್ಚಿನ್ನಲ್ಲಿರುವ ಗೇರು ಮತ್ತು ಸಂಬಾರ ಅಭಿವೃದ್ಧಿ ಮಂಡಳಿ (ಡಿಸಿಸಿಡಿ)ಯವರು ಈ ಸಸಿಗಳನ್ನು ಉಚಿತವಾಗಿ ಕೊಟ್ಟರು.
ಮಂಡ್ಯ ಜಿಲ್ಲೆಯಲ್ಲಿ ಆಸಕ್ತಿ ಇರುವ ರೈತರ ಗುಂಪುಗಳನ್ನು ರಚನೆ ಮಾಡಲಾಯಿತು.ನಂತರ ಅವರ ಜಮೀನುಗಳಿಗೆ ಸಂಘದ ಸದಸ್ಯರು ಭೇಟಿನೀಡಿ ಕೆಲವೊಂದು ಸಲಹೆ ಸೂಚನೆ ನೀಡಿದರು.ನಂತರ ಆಸಕ್ತ ರೈತರಿಗೆ ಕ್ಷೇತ್ರ ಭೇಟಿ,ಗೇರು ತೋಟಗಳ ವೀಕ್ಷಣೆ ಮಾಡಿಸಿ ಗೇರು ಬೆಳೆಯ ಬಗ್ಗೆ ಅರಿವು ಮೂಡಿಸಲಾಯಿತು. ಪುತ್ತೂರಿನ ಗೇರು ಸಂಶೋಧನಾ ಕೇಂದ್ರಕ್ಕೂ ರೈತರು ಹೋಗಿಬಂದರು.ಅಲ್ಲದೆ ಸಮೀಪದಲ್ಲೇ ಇರುವ ಪ್ರಗತಿಪರ ಗೇರು ಕೃಷಿಕ ಕಡಮಂಜಲು ಸುಭಾಷ್ ರೈ ಅವರ ಗೇರು ತೋಟವನ್ನು ನೋಡಿಬಂದರು.ಮಂಗಳೂರು,ಪುತ್ತೂರಿನ ಸಂಸ್ಕರಣಾ ಘಟಕಗಳಿಗೂ ಹೋಗಿ ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡರು.ಜಕ್ಕೂರಿನ ಜಿಕೆವಿಕೆ,ಚಿಂತಾಮಣಿಯ ಸಂಶೋಧನಾ ಕೇಂದ್ರ ಮತ್ತು ಮಾರುಕಟ್ಟೆಗೂ ರೈತರು ಹೋಗಿ ಬಂದರು.ಇದಕ್ಕೆಲ್ಲಾ ಸಂಘ ಒತ್ತಾಸೆಯಾಗಿ ನಿಂತು ನೆರವಾಯಿತು ಎನ್ನುತ್ತಾರೆ ಅಣ್ಣಯ್ಯ.
ಇದರ ಫಲವಾಗಿ ಈಗ ಜಿಲ್ಲೆಯಲ್ಲಿ ರೈತರು ಬತ್ತ,ಕಬ್ಬು ಬೆಳೆಗಳಿಗೆ ಪಯರ್ಾಯವಾಗಿ ಗೇರು ಕೃಷಿಮಾಡಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದಲ್ಲಿ ಜಿಲ್ಲೆಯಲ್ಲೂ ದಟ್ಟ ಬರ ಇತ್ತು. ಬರಕ್ಕೆ ಹೊಂದಿಕೊಳ್ಳುವ ಗೇರು ಲಾಭದಾಯಕ ಬೆಳೆಯಾಗಿಯೂ ಯಶಸ್ವಿಯಾಯಿತು.ಈ ಬಾರಿ  ಮಳೆಯಾದ ಪರಿಣಾಮ  ಎಂಟು ಸಾವಿರ ಗಿಡಗಳನ್ನು ಮತ್ತೆತರಿಸಿ ರೈತರಿಗೆ ವಿತರಿಸಲಾಗಿದೆ. ಮಂಡ್ಯ ಜಿಲ್ಲೆಯ ಜೊತೆಗೆ ಮೈಸೂರು,ಚಾಮರಾಜನಗರ,ಹಾಸನ,ರಾಮನಗರ,ತುಮಕೂರು ಜಿಲ್ಲೆಯ ರೈತರಿಗೂ ಈ ಗೇರು ಸಸಿಗಳನ್ನು ವಿತರಿಸಲಾಗಿದೆ. 
ಕೃಷಿ,ಅರಣ್ಯ,ತೋಟಗಾರಿಕೆ ಎನ್ನುವ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಿಜ್ಞಾನ ಪದವಿಧರರ ಸಂಘ  ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ಜೇನು ಸಾಕಾಣೆಯನ್ನು ಕಲಿಸಲು ಮುಂದಾಗಿದೆ. ರೈತರ ತೋಟದ ಬದುಗಳಲ್ಲಿ ನೆಡಲು ಸೂಕ್ತವಾದ ಅರಣ್ಯಧಾರಿತ ಗಿಡಗಳನ್ನು ವಿತರಿಸಲಾಗುತ್ತಿದೆ . ಕೆಂಪು ಮಣ್ಣು ಇರುವ ಪ್ರದೇಶಗಳಲ್ಲಿ ತೇಗದ ಜೊತೆಗೆ ನುಗ್ಗೆ,  ಪಪ್ಪಾಯ,ನಡುವೆ ಉರುಳಿ. ಕಪ್ಪು ಭೂಮಿ ಇರುವ ಕಡೆ ಹೆಬ್ಬೇವು,ನುಗ್ಗೆ ಎರಡು ಪಟಗಳ ನಡುವೆ ದನಿಯಾ( ಕೊತ್ತಂಬರಿ) ಬೆಂಗಾಲ್ ಗ್ರಾಂ( ಕಡಲೆ) ಹೀಗೆ ವಿವಿಧ ಮಾದರಿಗಳನ್ನು ಜಿಲ್ಲೆಯಲ್ಲಿ ಕಾಣಬಹುದು ಎನ್ನುತ್ತಾರೆ ಅಣ್ಣಯ್ಯ. ಕಳೆದ ವರ್ಷ ಇಂತಹ ಮಾದರಿ ತೋಟಗಲಲ್ಲಿ ಕ್ಷೇತ್ರೋತ್ಸವಮಾಡಿ ರೈತರಿಗೆ ಅರಿವು ಮೂಡಿಸಲಾಗಿದೆ.
ಮಾದರಿ ನರ್ಸರಿ : ಬೇರೆ ಬೇರೆ ಜಿಲ್ಲೆಗಳಲ್ಲಿ ಅಗ್ರಿ ಕಲ್ಬ್ ಇದೆ.ಅದೊಂದು ತಾಂತ್ರಿಕ ಸಂಸ್ಥೆ. ಅಲ್ಲಿ ರೈತರಿಗೆ ಮಾಹಿತಿ ಕೊಡುತ್ತಾರೆ. ಅದರೆ ನಾವು ಕೃಷಿ ವಿಜ್ಞಾನ ಪದವಿಧರ ಸಂಘದಿಂದ ಸಲಹೆ,ಮಾಹಿತಿ ಕೊಡುವುದರ ಜೊತೆಗೆ ಪ್ರಾಯೋಗಿಕವಾಗಿಯೂ ತಾಕುಗಳನ್ನು ಮಾಡಿಕೊಳ್ಳಲು ನೆರವಾಗುತ್ತಿದ್ದೇವೆ.ಇದರಿಂದ ರೈತರಿಗೆ ಹೆಚ್ಚು ಆತ್ಮವಿಶ್ವಾಸ ಮೂಡಲು ಸಹಾಯವಾಗುತ್ತದೆ ಎನ್ನುತ್ತಾರೆ.
ಮಂಡ್ಯ ಜಿಲ್ಲೆಯವರೆ ಸೇರಿ ಮಂಡ್ಯ ಕೃಷಿ ವಿಜ್ಞಾನ ಪದವಿಧರರ ಸಂಘ ಮಾಡಿಕೊಂಡಿರುವುದರಿಂದ ಜಿಲ್ಲೆಗೆ ಹೆಚ್ಚು ಗಮನಕೊಡಲಾಗುತ್ತದೆ. ಆದರೆ ಒಂದು ಪ್ರದೇಶ ಅಂತ ಇದನ್ನು ಸೀಮಿತ ಗೊಳಿಸಿಕೊಂಡಿಲ್ಲ. ಅಕ್ಕಪಕ್ಕದ ಜಿಲ್ಲೆಯ ರೈತರಿಗೂ ಸಲಹೆ,ಮಾಹಿತಿ,ನರ್ಸರಿ ಸೇವೆ ಎಲ್ಲವನ್ನೂ ನೀಡುತ್ತಾ ಬರುತ್ತಿದ್ದೇವೆ. ಇತ್ತೀಚಿಗೆ ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ನಡೆದೆ ಗೇರು ಬೆಳೆ ವಿಚಾರ ಸಂಕಿರಣದಲ್ಲಿ ರೈತರು ಗೇರು ಗಿಡಗಳು ಬೇಕು ಅಂತ ಕೇಳಿದರು. ಈ ಬಾರಿ ಉತ್ತಮ ಮಳೆಯಾದ ಕಾರಣ ಗೇರು ಗಿಡಗಳಿಗೂ ದೊಡ್ಡ ಬೇಡಿಕೆ ಬಂತು. ಗಿಡಗಳು ಎಲ್ಲೂ ಸಿಗುತ್ತಿರಲಿಲ್ಲ.ನಾವು ನಮ್ಮ ಜಿಲ್ಲೆಯಲ್ಲಿ ಕೊಟ್ಟು ಉಳಿದಿದ್ದ ಐದಾರು ಸಾವಿರ ಗಿಡಗಳನ್ನು ಚಾಮರಾಜನಗರ,ಹಾಸನ,ತುಮಕೂರು ಜಿಲ್ಲೆಯ ರೈತರಿಗೂ ಪೂರೈಕೆ ಮಾಡಿದ್ದೇವೆ ಎನ್ನುತ್ತಾರೆ ಅಣ್ಣಯ್ಯ.
ಇದೊಂದು ನೋಂದಣಿಯಾಗಿರುವ ಸಂಘ.ಕಾನೂನು ಬದ್ಧವಾಗಿ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ.
ಮಂಡ್ಯದಿಂದ 15 ಕಿ.ಮೀ ದೂರದ ಕೆರೆಗೋಡು ಸಮೀಪ ಹಾನಸೋಸಲು ಎಂಬ ಗ್ರಾಮದಲ್ಲಿ ಸಂಘದಿಂದ ಗಿಡಗಳ ನರ್ಸರಿ ಮಾಡಲಾಗಿದೆ. ಇಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ.ಮುಖ್ಯವಾಗಿ ತೇಗ,ಸಾಗುವಾನಿ,ನುಗ್ಗೆ,ಪಪ್ಪಾಯ ರೀತಿಯ ಗಿಡಗಳನ್ನು ಕಳೆದ ಮೂರು ವರ್ಷಗಳಿಂದ ಬೆಳೆಸುತ್ತಿದ್ದಾರೆ,ವಿತರಿಸುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತಿತರರ ಸಂಘಗಳು ಇದೆ ಕೆಲಸ ಮಾಡುತ್ತಿದ್ದಾರೆ ನಿಜ ಆದರೆ ಗುಣಮಟ್ಟದ ಬೀಜ ಮತ್ತು ಮೂಲ ತಳಿಯ ಮರಗಳು ಇರುವ ಜಾಗ ನಮಗೆ ಗೊತ್ತಿರುವುದರಿಂದ ನಾವೂ ಕೂಡ ಗುಣಮಟ್ಟದ ಗಿಡಗಳನ್ನು ಉತ್ಪಾದಿಸಿ ರೈತರಿಗೆ ನೆರವಾಗುತ್ತಿದ್ದೇವೆ. ಸಧ್ಯಕ್ಕೆ ರೈತರಿಗೆ ಬೇಡಿಕೆ ಇರುವ ಗಿಡಗಳನ್ನು ಬೆಳೆಸುತ್ತಿದ್ದೇವೆ. ಇಂತಹ ಗಿಡಗಳನ್ನು ಲಾಭದ ದೃಷ್ಠಿಯಿಂದ ನೋಡದೆ ಗಿಡದ ನಿರ್ವಹಣೆ ಮತ್ತು ಬೆಳೆಸಲು ಆದ ವೆಚ್ಚವನ್ನಷ್ಟೇ ಲೆಕ್ಕಹಾಕಿ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಗಿಡಗಳನ್ನು ಕೊಡಲಾಗುತ್ತಿದೆ ಎನ್ನುತ್ತಾರೆ ಅಣ್ಣಯ್ಯ. ಹೆಚ್ಚಿನ ಮಾಹಿತಿಗೆ ಅಣ್ಣಯ್ಯ 9448019306 ಸಂಪಕರ್ಿಸಿ.




ಸೋಮವಾರ, ಅಕ್ಟೋಬರ್ 23, 2017

ಸಾಫ್ಟ್ ವೇರ್ ಜನರಿಂದ ವನ`ಸಿರಿ'ಗೆ ಕೊಡುಗೆ

     # ಬಂಡಿಪುರ ಸುತ್ತಮುತ್ತ ಪರ್ಮಾಕಲ್ಚರ್ ಕಲರವ        #  ಅಂತರ್ಜಲ ಹೆಚ್ಚಳಕ್ಕೆ ಕಾಂಟೂರ್ ಬಂಡ್ಡಿಂಗ್ ಬಲ

ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ.ಕೈತುಂಬಾ ಸಂಬಳ.ಬಿಡುವಿಲ್ಲದಷ್ಟು ಕೆಲಸ ಇದ್ದರೆ ಏನು ಮಾಡಬಹುದು.ಸ್ವಂತಕ್ಕೊಂದು ಸುಂದರ ಮನೆ ಕಟ್ಟಿಕೊಳ್ಳಬಹುದು.ಓಡಾಡಲು ಐಷಾರಾಮಿ ಕಾರು ಖರೀದಿಸಿ ನಗರದಲ್ಲಿ ಬದುಕು ಕಟ್ಟಿಕೊಂಡು ಆರಾಮವಾಗಿ ಇದ್ದು ಬಿಡಬಹುದು. ಆದರೆ ಅದನ್ನೆಲ್ಲಾ ಬಿಟ್ಟು ಕಾಡು ಬೆಳೆಸಲು ಮುಂದಾಗಿರುವ ಹಸಿರು ಪ್ರೇಮಿಗಳ ಕತೆ ಇದು.
ಬಂಡೀಪುರ ಅರಣ್ಯದ ಕುಂದುಕೆರೆ ಅರಣ್ಯ ವಲಯಕ್ಕೆ ಸೇರಿದ ಶೆಟ್ಟಹಳ್ಳಿ ಬಳಿ ಕಾಡಂಚಿನಲ್ಲಿ ನಲವತ್ತು ಎಕರೆ ಪ್ರದೇಶದಲ್ಲಿ ವೈವಿಧ್ಯ ಸಸ್ಯಗಳ ಕಾಡುಬೆಳೆಸಿ ಪರ್ಮಾ ಕಲ್ಚರ್ (ಶಾಶ್ವತ ಕೃಷಿ) ಮಾಡಲು ಹೊರಟ ಸಮಾನ ಮನಸ್ಕ ಗೆಳೆಯರ ಕಥಾನಕ ಇದು.
ಬೆಂಗಳೂರಿನ ಸಂತೋಷ್ ತಮ್ಮಂತಹ ಹಲವಾರು ಗೆಳೆಯರು ಸೇರಿ ಹೀಗೆ ನಾನಾ ಭಾಗಗಳಲ್ಲಿ ಮಾಡುತ್ತಿರುವ ಯೋಜನೆಗಳ ಬಗ್ಗೆ ಹೇಳುತ್ತಿದ್ದಾಗ ಈ ಭೂಮಿಯ ಮೇಲೆ ಎಂತೆಂತಹ ಪರಿಸರ ಪ್ರೇಮಿಗಳು, `ಹಸಿರು ಹುಚ್ಚರು' ಇದ್ದಾರಲ್ಲ! ಅನಿಸಿತು.
ಕಳೆದ ಹತ್ತು ವರ್ಷಗಳಿಂದ ಅವರೆಲ್ಲಾ ಶೆಟ್ಟಹಳ್ಳಿಯ ಕರ್ಮಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಪುಣೆ, ಹೈದರಾಬಾದ್ ಹೀಗೆ ಬೇರೆ ಬೇರೆ ಕಡೆ ಕೆಲಸಮಾಡುತ್ತಿದ್ದ ಸಮಾನಮನಸ್ಕ ಗೆಳೆಯರನ್ನು ಹಸಿರು ಪ್ರೀತಿ ಒಂದೆಡೆ ಸೇರಿಸಿದೆ.ಕೆಲವರು ಬಿಡುವಿನ ವೇಳೆಯಲ್ಲಿ ಇಲ್ಲಿಗೆ ಓಡೋಡಿ ಬಂದರೆ ಮತ್ತೆ ಕೆಲವರು ಇಲ್ಲೇ ನಿಂತು ಇದನ್ನೆಲ್ಲಾ ನೋಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಸಂತೋಷ್ ಬಾಚಹಳ್ಳಿ ಎಲ್ಲೆಗೆ ಸೇರಿದ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿ ಜಮೀನು ಖರೀದಿಸಿ ಮನೆಮಾಡಿಕೊಂಡಿದ್ದಾರೆ. ಜೇಡಿ ಆಲ್ಫ್ರೆಡ್ ಪುಣೆಯಲ್ಲಿದ್ದ ತಮ್ಮ ಮನೆ,ಆಸ್ತಿ ಎಲ್ಲಾ ಮಾರಾಟಮಾಡಿ,ಐಟಿ ಉದ್ಯೋಗವನ್ನೂ ಬಿಟ್ಟು ಪತ್ನಿ ಸಮೇತ ಪಮರ್ಾಕಲ್ಚರ್ ಕೃಷಿಮಾಡಲು ಬಂದಿದ್ದಾರೆ.ಹಿಮಾಲಯದ ರಾಣಿಕೇತ್ನಲ್ಲಿರುವ ಲೀಡರ್ ಶಿಫ್ ಸ್ಕೂಲ್ನ ನಿದರ್ೇಶಕ ರವಿ ಕುಮಾರ್,ನಂದನ್ ನೀಲಕೆಣಿ ಜೊತೆ ಕೆಲಸಮಾಡುತ್ತಿರುವ ಜಗದೀಶ್,ಕೌಶಿಕ್ ಎಲ್ಲಾ ಸೇರಿ ಮಾಡುತ್ತಿರುವ ಕೆಲಸದಿಂದ ಒಂದೆರಡು ವರ್ಷದಲ್ಲಿ ಶೆಟ್ಟಹಳ್ಳಿಯ ಸುತ್ತಮತ್ತ ಅಂತರ್ಜಲ ಮಟ್ಟ ಸುಧಾರಿಸಲಿದೆ.ಅದಕ್ಕಿಂತ ಮುಖ್ಯವಾಗಿ ನೂರಾರು ಬಗೆಯ ಕಾಡುಜಾತಿಯ ಗಿಡಮರಗಳು ಇಲ್ಲಿ ಬರಲಿವೆ.ಇದರಿಂದ ಇಡೀ ಪ್ರದೇಶ ಹಸಿರನ್ನು ಹೊದ್ದು ಕಂಗೊಳಿಸಲಿದೆ.ಹಳ್ಳಿಯ ಆಸಕ್ತ ರೈತರಿಗೆ ಪಮರ್ಾಕಲ್ಚರ್ನ ಮಾದರಿ ನೋಡಲು ಅಲ್ಲಿ ಸಿಗುತ್ತದೆ.ಜೊತೆಗೆ ತಮ್ಮ ಜಮೀನುಗಳಲ್ಲೂ ಪಮರ್ಾಕಲ್ಚರ್,ಕಾಂಟೂರ್ ಬಂಡ್ಡಿಂಗ್ ಮಾಡಿಕೊಳ್ಳಲು,ಜೀವನಮಟ್ಟ ಸುಧಾರಿಸಿಕೊಳ್ಳಲು ಈ ಗೆಳೆಯರ ಸಹಕಾರ,ಸಲಹೆ ಹಾಗೂ ನೆರವು ನೀಡಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೀಗೆ ಸಾವಯವ ಕೃಷಿಕರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಕೆ.ಎನ್.ನಾಗೇಶ್ ಎಂಬ ಯುವಕ ಪರ್ಮಾ ಕಲ್ಚರ್,ಕಾಂಟೂರ್ ಬಂಡ್ಡಿಂಗ್ ಮತ್ತು ವಿವಿಧ ಬಗೆಯ ಅರಣ್ಯಜಾತಿಯ ಮರಗಿಡಗಳ ಬಗ್ಗೆ ಬರೆಯುತ್ತಿರುವುದನ್ನು ಗಮನಿಸುತ್ತಿದ್ದೆ.ನೈಸರ್ಗಿಕ ಕೃಷಿಯಲ್ಲಿನ ಆಸಕ್ತಿ,ಸದಭಿರುಚಿ ನೋಡಿ ಮತ್ತಷ್ಟು ಕುತೂಹಲವಾಗಿ ನೋಡಲು ಹೊರಟೆ.ನಾಗೇಶ್ ಅವರನ್ನು ಭೇಟಿಮಾಡಲು ಕೃಷಿಕ ಮಿತ್ರರಾದ ಶರಣು ಮತ್ತು ಹಂಚೀಪುರದ ಪ್ರಸಾದ್ ಅವರೊಂದಿಗೆ ಹೊರಟವನಿಗೆ ಅಲ್ಲಿ ಮತ್ತೊಂದು ಹೊಸ ಪ್ರಪಂಚವೇ ತೆರೆದುಕೊಂಡಿತ್ತು.ನಮ್ಮ ಆಲೋಚನೆಳನ್ನೆ ತಲೆಕೆಳಗೂ ಮಾಡುವ,ಬದುಕನ್ನು ಸಹಜವಾಗಿ ನೋಡುವ,ಪರಿಸರದ ಜೊತೆ ಜೊತೆಯಾಗಿ ನೈತಿಕ ಅನುಸಂಧಾನ ನಡೆಸುವ ಮಾದರಿಯ ದರ್ಶನವಾಯಿತು.
ಇದೆಲ್ಲಾ ಸರಿ ಇಷ್ಟೊಂದು ಹಣ ವೆಚ್ಚ ಮಾಡಿ ಹೀಗೆ ಕಾಡು ಬೆಳೆಸುತ್ತೀರಲ್ಲಾ ಇದರಿಂದ ಲಾಭ ಏನು ಅಂತ ವ್ಯವಹಾರಿಕ ಪ್ರಶ್ನೆ ಕೇಳಿದಾಗ ಸಂತೋಷ್ "ಹಣ ಬೇರೊಂದು ಕಡೆಯಿಂದ ಬರುತ್ತದೆ. ಆದರೆ ನಮಗೆ ಮರಗಿಡ ಬೆಳೆಸಿದ ಸಂತೋಷ ಇದೆಯಲ್ಲಾ ಅದಕ್ಕೆ ಬೆಲೆಕಟ್ಟಲಾಗದು. ಇಲ್ಲೂ ಪರ್ಮಾ ಕಲ್ಚರ್ ಮಾಡುವುದರಿಂದಲ್ಲೂ ಹಣ ಬಂದೇ ಬರುತ್ತದೆ ಆದರೆ ಸ್ವಲ್ಪಕಾಲ ಕಾಯಬೇಕು" ಎಂದಾಗ ಹೌದು ಹಣವಂತರೆಲ್ಲಾ ಹೀಗೆ ಯೋಚನೆಮಾಡಿಬಿಟ್ಟರೆ ಭೂಮಿತಾಯಿ ಧನ್ಯಳಾಗಿಬಿಡುತ್ತಾಳೆ,ಸುತ್ತೆಲ್ಲಾ ಹಸಿರು ವನರಾಶಿ ಸೃಷ್ಠಿಯಾಗಿಬಿಡುತ್ತದೆ ಅನಿಸಿತು.
ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೆ ಬಂಡೀಪುರದ ಸುತ್ತಮುತ್ತಾ ಬರಡಾಗಿದ್ದ ಭೂಮಿ ಈಗ ಹಸಿರಾಗಿದೆ.ಮೂರ್ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇಡಿ ವಾತಾವರಣವನ್ನು ತಂಪಾಗಿಸಿದೆ. ಪ್ರಸಕ್ತ ವರ್ಷ ಅಲ್ಲಿ ಹದಿಮೂರು ಸಾವಿರ ಗಿಡಗಳನ್ನು ಹಾಕಿದ್ದಾರೆ.ಮುಂದಿನ ವರ್ಷ ಐವತ್ತು ಸಾವಿರ ಗಿಡಗಳನ್ನು ಹಾಕುವ ಯೋಜನೆ ಇದೆ ಎನ್ನುತ್ತಾರೆ ಸಂತೋಷ್.
ದೇಶದ ನಾನಾ ಭಾಗಗಳಲ್ಲಿ ವೈವಿಧ್ಯಮಯ ಗಿಡಗಳನ್ನು ಹುಡುಕಿ ತಂದು ಇಲ್ಲಿ ಹಾಕಲಾಗಿದೆ. ಕೊಯಮತ್ತೂರಿನ ಈಶಾ ಫೌಂಡೇಶನ್ ನರ್ಸರಿಯಲ್ಲಿ ಹೆಚ್ಚು ಕಾಡುಗಿಡಗಳು ಸಿಕ್ಕಿವೆ. ಒಂದು ಬಾರಿ ಗಿಡ ನೆಟ್ಟಾಗ ನೀರು ಹಾಕುವುದನ್ನು ಬಿಟ್ಟರೆ ಸಹಜವಾಗಿಯೇ ಪರಿಸರಕ್ಕೆ ಹೊಂದಿಕೊಂಡು ಬೆಳೆಯಲು ಬಿಡಲಾಗುತ್ತದೆ.ಇದೊಂದು ಪರಸರದಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆ.ಗಿಡ ಬೆಳೆಯಲು ನೀರು ಮತ್ತು ಸೂಕ್ತವಾದ ಪರಿಸರ ನಿಮರ್ಾಣ ಮಾಡಿಕೊಟ್ಟುಬಿಟ್ಟರೆ ಅಲ್ಲಿ ವಿಸ್ಮಯವೇ ನಡೆಯುತ್ತದೆ.ಅದನ್ನು ಗಮನಿಸುವುದೆ ಒಂದು ಸೌಂದರ್ಯ ಮತ್ತು ಖುಶಿ ಎಂದು ಸಂತೋಷ್ ಕರ್ಮಭೂಮಿಯಲ್ಲಿ ನಿಂತು ಹೇಳುತ್ತಿದ್ದರೆ ಬೆಟ್ಟದ ಮೇಲಿಂದ ಬೀಸುತಿದ್ದ ತಂಗಾಳಿ ನಮ್ಮನ್ನು ಹಿತವಾಗಿ ಮುಟ್ಟಿ ಮಾತನಾಡಿಸಿ ಮುಂದೆ ಹೋಗುತ್ತಿತ್ತು.
ಇಲ್ಲಿ ನಡೆಯುತ್ತಿರುವ ಕಾಡುಮರಗಳು ಮತ್ತು ಪರಿಸರದಲ್ಲಿ ಜರುಗುವ ವಿಸ್ಮಯವನ್ನು ನೋಡಲು ಇಸ್ರೋ ವಿಜ್ಞಾನಿ ಸಾಂಬಕುಮಾರ್ ಸೇರಿದಂತೆ ಹಲವು ವಿಜ್ಞಾನಿಗಳು ಅಧ್ಯಯನಕ್ಕೆ ಬರುತ್ತಾರೆ.ಪ್ರತಿ ಗಿಡಮರಗಳ ಬಗ್ಗೆ ದಾಖಲಾತಿ ಇದೆ. ಐದು ಎಕರೆ ಪ್ರದೇಶದಲ್ಲಿ ಐದು ಪ್ರತ್ಯೇಕ ವಲಯಗಳನ್ನಾಗಿ ಮಾಡಿಕೊಂಡು ಅದನ್ನು ಮಾತ್ರ ಉಳುಮೆ ಮಾಡಿದ್ದಾರೆ. ಅಲ್ಲಿ ಬೇಳೆಕಾಳುಗಳನ್ನು ಬೆಳೆಯುವ ಪ್ರದೇಶ,ಹಣ್ಣಿನ ಗಿಡಮರ ಬೆಳೆಯುವ ಪ್ರದೇಶ,ಅರಣ್ಯಧಾರಿತ ಮರ ಬೆಳೆಯುವ ಪ್ರದೇಶ,ಹುಲ್ಲುಗಾವಲು (ಗ್ರಾಸ್ ಲ್ಯಾಂಡ್) ಹೀಗೆ ವಿಗಂಡಣೆ ಮಾಡಿಕೊಂಡು ನೈಸಗರ್ಿಕವಾಗಿ ಬೆಳೆಯಲಾಗುತ್ತಿದೆ.
ಉಕ್ಕಿಬಂದ ಗಂಗೆ : ನೀರಿಗಾಗಿ ಒಂದು ಬೋರ್ವೆಲ್ ತೆಗಿಸಿ ಅದಕ್ಕೆ ಹ್ಯಾಂಡ್ಪಂಪ್ ಅಳವಡಿಸಿಕೊಂಡಿದ್ದಾರೆ. ಮಳೆ ಶುರುವಾಗುವುದಕ್ಕಿಂತ ಐದಾರು ತಿಂಗಳ ಹಿಂದೆ 570 ಅಡಿಗೆ ಮತ್ತೊಂದು ಬೋರ್ವೆಲ್ ಕೊರೆಸಲಾಗಿತ್ತು.ಒಂದು ಹನಿ ನೀರು ಬರಲಿಲ್ಲ.ಬರೀ ಧೂಳು.ಸರಿ ಮತ್ತೆ ಪ್ರಯೋಜನವಿಲ್ಲ ಅಂತ ಬಿಟ್ಟುಬಿಟ್ಟರು. ಮಳೆ ಆರಂಭವಾದಾಗ ಕೇವಲ ಒಂದೇ ಮಳೆಗೆ ಆ ನಿಜರ್ೀವ ಬೋರ್ವೆಲ್ಗೂ ಜೀವಬಂತು.ಗಂಗೆ ಹರಿದು ಬಂದಳು.ಇದಕ್ಕೆಲ್ಲಾ ಕಾರಣವಾಗಿದ್ದು ಕಾಂಟೂರ್ ಬಂಡ್ಡಿಂಗ್ ಎಂಬ ಸಂಜೀವಿನಿ.
ಮಳೆ ಬಂದ ನಂತರ ಜನರೇಟರ್ ತಂದು ಎರಡು ದಿನ ಬೋರ್ವೆಲ್ನಿಂದ ನೀರೆತ್ತಿ ಇಳುವರಿ ಪರೀಕ್ಷೆ ಮಾಡಿದ್ದಾರೆ.190 ಅಡಿ ಮೇಲೆ ಬೋರ್ವೆಲ್ನಲ್ಲಿ ನೀರು ನಿಂತಿದೆ.ಒಳ್ಳೆಯ ನೀರಿನ ಇಳುವರಿಯೂ ಸಿಗುತ್ತಿದೆ.ಸಧ್ಯ ಆ ಬೋರ್ವೆಲ್ಗೆ ಸೋಲಾರ್ ವಿದ್ಯುತ್ ಅಳವಡಿಸುವ ಕೆಲಸಸಾಗಿದೆ.
ಯಾಕೆ,ಇಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲವೇ? ಎಂದು ಕೇಳಿದರೆ,ಒಂದೆರಡು ಕಿ,ಮೀ.ಅಂತರದಿಂದ ವಿದ್ಯುತ್ ಸಂಪರ್ಕಕ್ಕೆ ಕಂಬ ತರಬಹುದು.ಆದರೆ ಅದೆಲ್ಲಾ ನಮಗೆ ಬೇಡ.ಸಾಧ್ಯವಾದಷ್ಟು ವಿಕಾರಗಳಿಂದ ದೂರವಿರಬೇಕು. ಪ್ರಕೃತಿಯಲ್ಲಿ ಸಿಗುವ ಸಂಪನ್ಮೂಲಗಳನ್ನಷ್ಟೇ ಬಳಸಿಕೊಂಡು ಕೃಷಿಮಾಡುವುದು ನಮ್ಮ ಧ್ಯೇಯ.ಪಮರ್ಾಕಲ್ಚರ್ನ ಮೂಲಧರ್ಮ ಕೂಡ ಅದೆ.ಪ್ರಾಕೃತಿಕ ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಆದಷ್ಟು ಕಡಿಮೆ ಬಳಸಿ ಸುದೀರ್ಘ ಅವಧಿಯವರೆಗೆ ಕಾಯ್ದುಕೊಳ್ಳಬೇಕು.ಕಡಿಮೆ ಶ್ರಮ,ವೆಚ್ಚ ಹಾಗೂ ಹೆಚ್ಚು ಉತ್ಪಾದನೆ.ಜೊತೆಗೆ ಪರಿಸರ ಯಾವತ್ತೂ ಮನುಷ್ಯನಿಗೆ ಸ್ಫೂತರ್ಿದಾಯಕ ವಾಗಿಬೇಕು ಎನ್ನುತ್ತಾರೆ ಸಂತೋಷ್.
ಕಾಂಟೂರ್ ಬಂಡ್ಡಿಂಗ್: ಮಳೆ ಬಂದರೆ ನೀರು ಜಮೀನಿನಲ್ಲಿ ಹಳ್ಳ ಇರುವ ಕಡೆಗೆ ಹರಿದು ನಿಲ್ಲುತ್ತದೆ ಅಥವಾ ಕೆರೆಕಟ್ಟೆ ಪಾಲಾಗುತ್ತದೆ.ಇದರಿಂದ ಭೂಮಿ ಸಮಪ್ರಮಾಣದಲ್ಲಿ ನೀರು ಕುಡಿಯುವುದಿಲ್ಲ.ಒಂದು ಭಾಗದಲ್ಲಿ ಹೆಚ್ಚು ಮತ್ತೊಂದು ಭಾಗದಲ್ಲಿ ಕಡಿಮೆ ನೀರು ಅಸಮಾನವಾಗಿ ಹಂಚಿಕೆಯಾಗುತ್ತದೆ. ಆದರೆ ಕಾಂಟೂರ್ ಬಂಡ್ಡಿಂಗ್ ಮಾಡುವುದರಿಂದ ಇಡೀ ಭೂಮಿ ಸಮಾನಾಂತರವಾಗಿ ನೀರು ಕುಡಿಯುತ್ತದೆ.ಶೇಕಡ 75 ರಷ್ಟು ನೀರು ಭೂಮಿಗೆ ಸಮಪ್ರಮಾಣದಲ್ಲಿ ಹಂಚಿಕೆಯಾಗುತ್ತದೆ.
ಜಮೀನಿನಲ್ಲಿ ತಂತ್ರಜ್ಞಾನ ಬಳಸಿ ಕಾಂಟೂರ್ ಲೈನ್ ಮಾಡಿಕೊಂಡು ನಂತರ ಟ್ರಂಚ್ ಮತ್ತು ಬಂಡ್ಡಿಂಗ್ ಮಾಡುವುದರಿಂದ ಮಣ್ಣು ಫಲವತ್ತಾಗಿ,ಅಂತರ್ಜಲವೂ ಹೆಚ್ಚಾಗುತ್ತದೆ. ಈಗ ಈ ನಲವತ್ತು ಎಕರೆಯಲ್ಲಿ ಕಾಂಟೂರ್ ಬಂಡ್ಡಿಂಗ್ ಮಾಡಿರುವುದರಿಂದ ಮಳೆ ಬಂದಾಗ ನೀರು ಎಲ್ಲಾ ಟ್ರಂಚ್ಗಳಲ್ಲೂ ಒಂದು ಮಟ್ಟದಲ್ಲಿ ನಿಂತು ನಂತರ ನಡೆಯುತ್ತದೆ.ಬೆಟ್ಟದ ಮೇಲೆ ನೀಮತು ನೋಡಿದರೆ ನೀರಿನ ಪ್ರಮಾಣ ಸಮಾನಾಂತರವಾಗಿ ಹಂಚಿಕೆಯಾಗಿರುವುದನ್ನು ನೋಡಬಹುದು.ಒಂದು ಸಾರಿ ಟ್ರಂಚ್ಗಳು ತುಂಬಿದರೆ 12 ಲಕ್ಷ ಲೀಟರ್ ನೀರು ಅಂತರ್ಜಲ ಸೇರುತ್ತದೆ ಎನ್ನುತ್ತಾರೆ ಸಂತೋಷ್.
ಇಲ್ಲಿನ ಸುತ್ತಮುತ್ತಲಿನ ಜನರಿಗೆ ಈಗ ನಮ್ಮನ್ನು ನೋಡಿದರೆ ಕುತೂಹಲ.ಏನೋ ಜೀಪಿನಲ್ಲಿ ಬರುತ್ತಾರೆ ಹೋಗುತ್ತಾರೆ ಅಂತ ತಿಳಿದುಕೊಂಡಿದ್ದಾರೆ.ಆದರೆ ಹೀಗೆ ಮಳೆ ಆದರೆ ಒಂದೆರಡು ವರ್ಷದಲ್ಲಿ ಇಲ್ಲಿ ನಡೆಯುತ್ತಿರುವ ಗುಣಾತ್ಮಕ ಬದಲಾವಣೆಗಳು ಕಣ್ಣಿಗೆ ಬೀಳುತ್ತವೆ. ನಾವೂ ಕೂಡ ಸಮುದಾಯದ ಜೊತೆ ಸೇರಿ ಕೆಲಸಮಾಡಬೇಕು ಎಂದುಕೊಂಡಿದ್ದೇವೆ.ಅದಕ್ಕಾಗಿ ಶೆಟ್ಟಹಳ್ಳಿಯಲ್ಲೇ ಯಾವುದಾದರೂ ಸಣ್ಣ ರೈತರ ಒಂದೆರಡು ಎಕರೆಯಲ್ಲಿ ಪರ್ಮಾ ಕಲ್ಚರ್ (ಶಾಶ್ವತ ಕೃಷಿ) ಮಾದರಿ ಮಾಡಲು ತೀರ್ಮಾನಿಸಿದ್ದೇವೆ. ಜೊತೆಗೆ ವಾಟರ್ ಶೆಡ್,ನರ್ಸರಿ,ಪರ್ಮಾ ಕಲ್ಚರ್ ಅಂದರೆ ಫರ್ಮನೆಂಟ್ ಕೃಷಿ ಬಗ್ಗೆ ಯುವ ರೈತರಿಗೆ ತರಬೇತಿ ಎಲ್ಲವನ್ನೂ ಮಾಡುವ ಆಲೋಚನೆ ಇದೆ ಎನ್ನುತ್ತಾರೆ ಸಂತೋಷ್.
ನಮ್ಮೂರಿನ ಕೂಗಳತೆ ದೂರದಲ್ಲೇ ನಡೆಯುತ್ತಿರುವ ಪ್ರಯೋಗಶೀಲ ಪರಿಸರ ವಿಸ್ಮಯ ನಮ್ಮ ಜನರ ಕಣ್ಣಿಗೆ ಬೀಳಲಿ,ಕೃಷಿಯ ನಾನಾ ಮುಖಗಳನ್ನು ಅದು ತೆರೆದುತೋರಿಸಲಿ ಎನ್ನುವ ಆಶಯದೊಂದಿಗೆ ನಾವು ಅಲ್ಲಿಂದ ಹೊರಟಾಗ ಸೋನೆ ಮಳೆ ಮತ್ತೆ ಆರಂಭವಾಗಿತ್ತು. ನಾವೂ ಕೂಡ  ಈಗ ನಮ್ಮ ಜಮೀನುಗಲಲ್ಲಿ ಸಂತೋಷ್ ಮತ್ತು ಗೆಳೆಯರ ನೆರವಿನಿಂದ ಕಾಂಟೂರ್ ಬಡ್ಡಿಂಗ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೆವೆ. ಮುಂದಿನ ಮಳೆಗಾಲದ ಹೊತ್ತಿಗೆ ನಮ್ಮ ಜಮೀನುಗಳು ಕಾಂಟೂರ್ ಆಗಲಿವೆ.

ಸೋಮವಾರ, ಅಕ್ಟೋಬರ್ 16, 2017


 ಹಳ್ಳಿಗಳಲ್ಲಿ ಹೊಸ `ಮಾದರಿ' ರೂಪಿಸುತ್ತಿರುವ ದೇಸಿ ಕೃಷಿಕ
# ಕಾಡಂಚಿನ ಗ್ರಾಮಗಳಲ್ಲಿ ನೈಸರ್ಗಿಕ ಕೃಷಿ # ನಾಟಿತಳಿ ಬೀಜಗಳ ಸಂರಕ್ಷಣೆ
ಸದ್ದಿಲ್ಲದೆ ನಡೆಯುವ ಒಳ್ಳೆಯ ಕೆಲಸಗಳು ಹೇಗೆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ.ಅಷ್ಟೇ ಅಲ್ಲಾ ಸದಭಿರುಚಿ ಬೆಳೆಸಿ ಮಣ್ಣು,ನೀರು,ಆರೋಗ್ಯವನ್ನೂ ಕಾಪಾಡುತ್ತವೆ ಎನ್ನುವುದಕ್ಕೆ ಈ ಕಥಾನಕವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ನೈಸರ್ಗಿಕ ಕೃಷಿಕರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದವರೇ ಕೆ.ಎನ್.ನಾಗೇಶ್.
ತಾನಿರುವ ಜಾಗದಲ್ಲೆ ನಡೆಯುತ್ತಿರುವ ಚಮತ್ಕಾರಗಳನ್ನು ಕಾಣುವ ಕಣ್ಣು ಮತ್ತು ಸಹಜ ಕುತೂಹಲ ಇದ್ದರೆ ವ್ಯಕ್ತಿಯೊಬ್ಬ ಹೇಗೆ ಪರಿಸರ  ಪ್ರೇಮಿಯಾಗಬಲ್ಲ ಎನ್ನುವುದಕ್ಕೆ ಕೆ.ಎನ್.ನಾಗೇಶ್ ಅವರ ಜೀವನಗಾಥೆ ಜ್ವಲಂತ ನಿದರ್ಶನ.
ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಸೋಮಪ್ಪ ಮತ್ತು ಗೌರಮ್ಮನವರ ಮಗನಾದ ನಾಗೇಶ್ ಕಾಡಂಚಿನಲ್ಲಿ ಕುಳಿತುಕೊಂಡು ಕಾಂಟೂರ್ ಬಂಡ್ಡಿಂಗ್,ಪಮರ್ಾಕಲ್ಚರ್,ಸಹಜ ಕೃಷಿಯ ಬಗ್ಗೆ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕುತ್ತಿರುವುದನ್ನು ಗಮನಿಸುತ್ತಿದ್ದ ನನಗೆ ಆ ವ್ಯಕ್ತಿಯನ್ನು ಕಾಣಬೇಕೆಂಬ ಹಂಬಲ ಹೆಚ್ಚಾಗತೊಡಗಿತು.
ಕುತೂಹಲಕ್ಕಾಗಿ ಶೆಟ್ಟಹಳ್ಳಿಯಲ್ಲಿ ನೈಸಗರ್ಿಕ ಕೃಷಿ ಮಾಡುತ್ತಿರುವ ನಾಗೇಶ್ ಅವರನ್ನು ಕಂಡು ಮಾತನಾಡಿಸಲು ಹೋದೆ.ಅವರೊಂದಿಗೆ ಮಾತಿಗೆ ಕುಳಿತರೆ ಕುಸಿಯುತ್ತಿರುವ ಕೃಷಿ, ರಾಜಕೀಯದ ಹುಚ್ಚಿನಿಂದ ಹಳ್ಳಿ ತೊರೆಯುತ್ತಿರುವ ಯುವಕರು,ತಾಲೂಕು ಆಫೀಸ್ ಮುಂದೆ ನಿತ್ಯವೂ ಕಾಣಸಿಗುವ ಜನಜಂಗುಳಿ ಎಲ್ಲದರ ಅಸಹನೆ ಬೇಸರ ಇಣುಕುತ್ತಿತ್ತು. ಸಾಮಾಜಿಕ,ಆಥರ್ಿಕ ಕುಸಿತಕ್ಕೆ ಕಾರಣಗಳು ಸಿಗುತ್ತಾ ಹೋದವು. ಅದೆಲ್ಲಕ್ಕಿಂತ ಮುಖ್ಯವಾಗಿ ತಾನೇಕೆ ನೈಸಗರ್ಿಕ ಕೃಷಿಕನಾದೆ ಎಂದು ಅವರು ಹೇಳಿದ್ದು ಆರೋಗ್ಯದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸಿತು.
"ನೈಸಗರ್ಗಿಕವಾಗಿ ಬೆಳೆದ ಆಹಾರ ಪದಾರ್ಥಗಳನ್ನು ಉಪಯೋಗಿಸುತ್ತಿರುವುದರಿಂದ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದ್ದೇನೆ.ಜಮೀನಿನಲ್ಲಿ ಕೆಲಸ ಮಾಡುವಾಗ ನೀರಡಿಕೆ,ಹಸಿವು.ಸುಸ್ತು ಹೆಚ್ಚಾಗಿ ಆಗುವುದಿಲ್ಲ. ಸಾವಯವ ಆಹಾರ ಸೇವಿಸುವುದರಿಂದ ಹೋಟೆಲ್ಗಳಲ್ಲಾಗಲಿ,ಸಮಾರಂಭಗಳಲ್ಲಾಗಲಿ ಊಟ ಮಾಡಲು ಇಷ್ಟವಾಗುವುದಿಲ್ಲ" ಎನ್ನುತ್ತಾರೆ ನಾಗೇಶ್.
ಪಿಯುಸಿವರೆಗೆ ವ್ಯಾಸಂಗ ಮಾಡಿರುವ ನಾಗೇಶ್ ಆರಂಭದಲ್ಲಿ ಎಲ್ಲರಂತೆ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಎಲ್ಲರಂತೆ ಅವರೂ ಸೈಕಲ್ ಹೊಡೆದಿದ್ದಾರೆ.ಫ್ಯಾಕ್ಟರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಮಾಡಿದ್ದಾರೆ.ಕೊನೆಗೆ ಹಳ್ಳಿಗೆ ಮರಳಿ ಕೃಷಿಕರಾಗಿ ನೆಲೆಕಂಡುಕೊಂಡಿದ್ದಾರೆ.ಅದರಲ್ಲಿ ಸಂತೋಷವಾಗಿಯೂ ಇದ್ದಾರೆ.
ಇದಕ್ಕೆಲ್ಲಾ ಕಾರಣವಾಗಿದ್ದು ತಮ್ಮೂರಿನಲ್ಲೇ ತಾವು ಕಂಡ ಒಂದು ನೈಸಗರ್ಿಕ ತೋಟ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.ಸಿವಿಲ್ ಇಂಜಿನಿಯರ್ ಆಗಿರುವ ಮಂಗಲ ಗ್ರಾಮದ ನಾಗೇಂದ್ರ ಅವರಿಗೆ ಕೃಷಿಯಲ್ಲೂ ಆಸಕ್ತಿ.ಹಾಗಾಗಿ ಅವರು ಊರಿನಲ್ಲಿ ನೈಸಗರ್ಿಕ ಕೃಷಿ ಮಾಡುತ್ತಾರೆ.ತಮಗೆ ಬೇಕಾದ ಆಹಾರವನ್ನು ಸಾವಯವ ಪದ್ಧತಿಯಲ್ಲಿ ಬೆಳೆದುಕೊಳ್ಳುತ್ತಾರೆ.ಇದನ್ನು ಕಂಡ ನಾಗೇಶ್ಗೆ ತಾನೂ ಯಾಕೆ ನೈಸಗರ್ಿಕವಾಗಿ ಆಹಾರ ಪದಾರ್ಥಗಳನ್ನು ಬೆಳೆದುಕೊಂಡು ಬಳಸಬಾರದು ಎಂಬ ಪ್ರಶ್ನೆ ಕಾಡುತ್ತದೆ. ತಡಮಾಡದೆ ನಗರದ ಬದುಕಿಗೆ ವಿದಾಯ ಹೇಳಿ ಸಂಪೂರ್ಣವಾಗಿ ಕೃಷಿಕಾಯಕದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸುತ್ತಾರೆ.
ಈಗ ಅವರು ನೈಸಗರ್ಿಕ ಕೃಷಿಯ ಆಳ ಅಗಲ,ಮಣ್ಣು,ನೀರು,ಮರಗಿಡಗಳ ಬಗ್ಗೆ ಸಮರ್ಥವಾಗಿ ಮಾತನಾಡಬಲ್ಲ ದೇಸಿಕೃಷಿ ವಿಜ್ಞಾನಿಯಾಗಿ ರೂಪುಗೊಳ್ಳುತ್ತಿದ್ದಾರೆ.ಕಾಡಂಚಿನ ಗ್ರಾಮವಾದ ಕಾರಣ ಕೃಷಿಯ ಜೊತೆ ಸೋಲಾರ್ ಫೆನ್ಸ್ ಕೆಲಸ ಕೂಡ ಮಾಡಿಕೊಳ್ಳುವುದನ್ನು ಕಲಿತಿರುವ ನಾಗೇಶ್ ಸುತ್ತಮತ್ತಲಿನ ರೈತರಿಗೆ ಪರಿಸರ ಪಾಠ ಹೇಳಿಕೊಡುವ ಹಾದಿಯಲ್ಲಿದ್ದಾರೆ.
ಶೆಟ್ಟಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ನಾಲ್ಕು ಎಕರೆ ಜಮೀನು ಖರೀದಿಸಿ ಅಲ್ಲಿ ಮಳೆಯಾಶ್ರಯದಲ್ಲಿ ಯಾವುದೇ ರಸಾಯನಿಕ,ಕ್ರಿಮಿನಾಶಕವನ್ನೂ ಬಳಸದೆ ಕಡಿಮೆ ವೆಚ್ಚದಲ್ಲಿ ಹಲಸಂದೆ,ಮುಸುಕಿನ ಜೋಳ,ತಿಂಗಳ ಅವರೆ,ಈ ಭಾಗದಲ್ಲಿ ವಿಶೇಷವಾಗಿ ಬೆಳೆಯುವ ಬಟಾಣಿ,ಬೇಳೆಕಾಳು ಎಲ್ಲವನ್ನೂ ಬೆಳೆಯುತ್ತಿದ್ದಾರೆ.ಕಳೆದ ಬಾರಿ ಸೂರ್ಯಕಾಂತಿ ಬೆಳೆದು ಅದರಿಂದ ಅಡುಗೆ ಎಣ್ಣೆಯನ್ನೂ ಮಾಡಿಸಿಕೊಂಡು ತಾವೂ ಬಳಸಿ,ಬೆಂಗಳೂರಿನ ಕೆಲವು ಗೆಳೆಯರಿಗೆ ಮಾರಾಟಮಾಡಿದ್ದಾರೆ.
ವಿಶೇಷವೆಂದರೆ ನಾಗೇಶ್ ಅವರ ಕೃಷಿ ಪ್ರೀತಿಗೆ ಬೆಂಬಲವಾಗಿ ಸಾಫ್ಟ್ವೇರ್ ಉದ್ಯೋಗಿಗಳ ತಂಡವೊಂದು ಆಸರೆಯಾಗಿದೆ.ಬೆಂಗಳೂರು,ಪುಣೆ,ಹೈದರಾಬಾದ್ ಮೂಲದ ಸಮಾನಮನಸ್ಕರ ಗೆಳೆಯರ ತಂಡವೊಂದು ಬಂಡಿಪುರದ ಕಾಡಂಚಿನ ಶೆಟ್ಟಹಳ್ಳಿಯಲ್ಲಿ ನಲವತ್ತು ಎಕರೆ ಪ್ರದೇಶದಲ್ಲಿ ಕಾಡು ಬೆಳೆಸುತ್ತಾ,ಪಮರ್ಾಕಲ್ಚರ್ ಮಾಡಲು ಮುಂದಾಗಿದೆ. ಆ ತಂಡದ ಒರ್ವ ಸಕ್ರೀಯ ಸದಸ್ಯರಾಗಿ ನಾಗೇಶ್ ಗುರುತಿಸಿಕೊಂಡಿದ್ದು ಅವರಿಗೆ ನೈಸಗರ್ಿಕ ಕೃಷಿಯ ಬಗ್ಗೆ ಅರಿವು ಹೆಚ್ಚಾಗಲು,ಕಾಡಿನ ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಿದೆ.
ಇದರಿಂದಾಗಿ ನಾಗೇಶ್ಗೆ ಹಲವು ಅನುಕೂಲಗಳಾಗಿವೆ.ಈಗ ಅವರ ಬಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಫಲಕೊಡುವ ತೊಗರಿ ಇದೆ.ದೇಶದ ನಾನಾ ಭಾಗಗಳಲ್ಲಿ ಉಳಿದುಕೊಂಡಿರುವ ಅಪರೂಪದ ನಾಟಿ ತಳಿಯ ತರಕಾರಿ,ಬೇಳೆಕಾಳುಗಳ ಬೀಜಗಳಿವೆ. ಮುಂದೆ ಈ ಬೀಜಗಳನ್ನು ಹೆಚ್ಚುಮಾಡಿಕೊಂಡು ಈ ಭಾಗದಲ್ಲಿ ಸಹಜ ಕೃಷಿ ಮಾಡುವ ರೈತರಿಗೆ ಕೊಡುವ ಮೂಲಕ ದೇಸಿಬೀಜಗಳನ್ನು ಕಾಪಾಡಿಕೊಳ್ಳಬೇಕು ಎನ್ನುವ ವಿವೇಕ ಇದೆ.ಪ್ರತಿ ಹಳ್ಳಿಯಲ್ಲೂ ದೇಸಿಬೀಜ ಬ್ಯಾಂಕ್ ಮಾಡುವ ಸುಂದರ ಕನಸಿದೆ.
ಇಂತಹ ಹತ್ತಾರು ಯುವ ರೈತರಿಂದ ದೇಸಿತಳಿಯ ಬೀಜಗಳ ಸಂರಕ್ಷಣೆ ಮತ್ತು ಲಭ್ಯತೆಯಾಗುತ್ತಿರುವುದರಿಂದ ನೈಸಗರ್ಿಕ ಕೃಷಿಗೆ ಮತ್ತಷ್ಟು ಬಲತುಂಬಲು ಸಾಧ್ಯವಾಗಿದೆ.ನಾಗೇಶ್ರಂತಹವರು ಮರಳಿ ಹಳ್ಳಿಗೆ ಬಂದು ಹೀಗೆ ಪರಿಸರ ಸ್ನೇಹಿ ಬದುಕು ಕಟ್ಟಿಕೊಳ್ಳುವ ಮೂಲಕ ಹೊಸ `ಮಾದರಿ'ಗಳನ್ನು ಹುಟ್ಟುಹಾಕುತ್ತಿರುವುದು ಈ ಭಾಗದ ಯುವಕರಲ್ಲಿ ಆಶಾಭಾವನೆ ಮೂಡಿಸಿದೆ.ಸಹಜ ಕೃಷಿಗೆ ಮರಳಲು ಸ್ಫೂರ್ತಿಯಾಗಿದ್ದಾರೆ.
ಅಂತರ್ಜಲ,ಕಾಂಟೂರ್ ಬಂಡ್ಡಿಂಗ್,ಪರ್ಮಾಕಲ್ಚರ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು ಎಂದು ಕೇಳಿದರೆ " ಜಕ್ಕಳ್ಳಿಯಲ್ಲಿ ಬೆಂಗಳೂರಿನಿಂದ ಬಂದು ಕೃಷಿಮಾಡುತ್ತಿರುವ ಸಂತೋಷ್,ಪುಣೆಯ ಜೇಡಿ ಆಲ್ಫ್ರೇಡ್ ಮತ್ತು ಗೆಳೆಯರ ಸಹವಾಸ. ಸಂಘದಂತೆ ಸಹವಾಸ ಎನ್ನುವಂತೆ ಇಂತಹ ಅಗತ್ಯವಾಗಿ ಆಗಲೇ ಬೇಕಾಗಿರುವ ಸಂಗತಿಗಳ ಬಗ್ಗೆ ತಿಳಿಯುತ್ತಾ ಹೋಯಿತು" ಎನ್ನುತ್ತಾರೆ ನಾಗೇಶ್.
"ನಗರದಲ್ಲಿ ಕೆಲಸಮಾಡುತ್ತಿರುವಾಗ ಇಷ್ಟೊಂದು ಸಂತೋಷವಾಗಿ ನಾನು ಇರಲಿಲ್ಲ.ಕೃಷಿ ಕೆಲಸಮಾಡಲು ಬಂದ ನಂತರ ಆರೋಗ್ಯದಲ್ಲಿಯೂ ಸುಧಾರಣೆ ಕಂಡಿದೆ.ವಿಷಮುಕ್ತ ಆಹಾರ,ಸ್ವಚ್ಛಗಾಳಿ,ಒತ್ತಡ ರಹಿತ ಬದುಕು ನನ್ನದಾಗಿದೆ.ಅಗತ್ಯವಿರುವವರಿಗೆ ಸೋಲಾರ್ ಫೆನ್ಸ್ ಕೂಡ ಮಾಡಿಕೊಡುತ್ತಾ,ನೈಸರ್ಗಿಕ ಕೃಷಿಯಲ್ಲೂ ಹಲವು ಪ್ರಯೋಗಗಳನ್ನು ಮಾಡುತ್ತಾ ಆರಾಮವಾಗಿದ್ದೇನೆ.ನಮ್ಮ ಮನೆಯವರೆಲ್ಲರೂ ನೈಸರ್ಗಿಕವಾಗಿ ಬೆಳೆದ ಆಹಾರ ಪದಾರ್ಥಗಳನ್ನೆ ಬಳಸುತ್ತಿದ್ದೇವೆ. ಕೆಲವರಿಗೆ ಔಷದವೇ ಆಹಾರವಾಗಿರುವ ಕಾಲದಲ್ಲಿ ನಾವೂ ಸೇವಿಸುವ ಆಹಾರವನ್ನೇ ಔಷಧಿಯಾಗಿಸಿಕೊಂಡಿದ್ದೇವೆ" ಇದಕ್ಕಿಂತ ಬದುಕಿನಲ್ಲಿ ಹೆಚ್ಚಿಗೆ ಇನ್ನೇನೂ ತಾನೇ ನಿರೀಕ್ಷೆ ಮಾಡಲು ಸಾಧ್ಯ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ ನಾಗೇಶ್ 9448226802 ಸಂಪರ್ಕಿಸಬಹುದು..



ಭಾನುವಾರ, ಅಕ್ಟೋಬರ್ 8, 2017


ದೇಸಿ ಕೃಷಿ ವಿಜ್ಞಾನಿ ಬಯಲುಸೀಮೆಯ `ಶಕ್ತಿ'ವೇಲು
ನೈಸಗರ್ಿಕ ಕೃಷಿಯ ದೇಸಿ ತಾಂತ್ರಿಕತೆಗಳ ಅನ್ವೇಷಕ.ಕೃಷಿ ವಿಶ್ವ ವಿದ್ಯಾನಿಲಯಗಳು ಮಾಡಬೇಕಾದ ಕೆಲಸಗಳನ್ನು ಏಕಾಂಗಿಯಾಗಿ ಮಾಡುತ್ತಿರುವ ಸಾಧಕ.ಬಯಲು ಸೀಮೆಯಲ್ಲಿ ನೈಸಗರ್ಿಕ ಕೃಷಿಮಾಡಿ ದೇಶದ ನಾನಾ ಕೃಷಿ ವಿಶ್ವ ವಿದ್ಯಾನಿಲಯಗಳಿಂದ ಪ್ರಶಂಸೆಗೆ ಒಳಗಾದ ಕೃಷಿಕ.ಓದಿದ್ದು ಆರನೇ ತರಗತಿಯಾದರೂ ಕೃಷಿ ವಿವಿ ವಿದ್ಯಾಥರ್ಿಗಳು ಮತ್ತು ವಿಜ್ಞಾನಿಗಳಿಗೆ ಪಾಠ ಹೇಳುವ ಅಪ್ಪಟ ಸಹಜ ಕೃಷಿಕ, ಅವರೇ ಬಂಗಾರದ ಮನುಷ್ಯ ಶಕ್ತಿವೇಲು.
ನೈಸಗರ್ಿಕ ಕೃಷಿಯಲ್ಲಿ ತೋಟಗಾರಿಕೆ ಬೆಳೆ ಮಾಡುವುದು ಸುಲಭ.ತರಕಾರಿ,ಅರಿಶಿನದಂತಹ ಬಯಲು ಪ್ರದೇಶದ ಬೆಳೆಗಳನ್ನು ಮಾಡುವುದು ಕಷ್ಟ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಹೇಳುವ ದೂರು.ಮನಸ್ಸಿದ್ದರೆ ಮಾರ್ಗ ಎಂಬಂತೆ ಬಯಲು ಪ್ರದೇಶದಲ್ಲೂ ಎಲ್ಲಾ ರೀತಿಯ ತರಕಾರಿ,ಅರಿಶಿನ,ಕಬ್ಬು ಬೆಳೆದು ಸಾಧನೆ ಮಾಡಿದ ಅಪರೂಪದ ಸಾಧಕ ಶಕ್ತಿವೇಲು. ಅವರು ಅನ್ವೇಷಣೆ ಮಾಡಿದ ದೇಸಿ ತಾಂತ್ರಿಕತೆಗಳನ್ನು ಕೃಷಿ ವಿಜ್ಞಾನಿಗಳು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ.ಕೊಯಂತ್ತೂರಿನ ಕೆವಿಕೆ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದೆ.ಈರೋಡು ಸಾವಯವ ಕೃಷಿಕರ ಕೂಟದ ಅಧ್ಯಕ್ಷರಾಗಿಯೂ ನೇಮಕವಾಗಿದ್ದಾರೆ. ತಮ್ಮ ಕೃಷಿ ಸಾಧನೆಯನ್ನು ವಿವರಿಸುವಾಗ ಅವರ ಮುಗ್ಧತೆ,ಸದಾ ಒಳಿತಿನ ಕಡೆಗೆ ಮುಖಮಾಡಿರುವ ಅವರ ಚಿಂತನೆ ಎದ್ದು ಕಾಣುತ್ತದೆ.
ಸಹಜ ಕೃಷಿಯಲ್ಲಿ ಶಕ್ತಿವೇಲು ಮಾಡಿದ ಸಾಧನೆಯನ್ನು ನೋಡಲು ದೇಶದ ನಾನಾ ರಾಜ್ಯದ ರೈತರಲ್ಲದೆ ಇಂಗ್ಲೆಂಡ್,ಸೊಮಾಲಿಕಾ,ಅಮೇರಿಕಾ ಮತ್ತಿತರ ದೇಶಗಳ ರೈತರು ಬಂದುಹೋಗಿದ್ದಾರೆ. ಕೃಷಿ ಸಾಧನೆಯನ್ನು ಕಂಡು,ಮೆಚ್ಚಿ ಸಂದರ್ಶನ ಪುಸ್ತಕದಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಿದ್ದಾರೆ.ಅವರ ತೋಟಕ್ಕೆ ಹೋದರೆ ಹತ್ತಾರು ದೇಸಿ ಕೃಷಿ ತಾಂತ್ರಿಕ ಜ್ಞಾನ ದರ್ಶನ ವಾಗುತ್ತದೆ.
ದನದ ಕೊಟ್ಟಿಗೆಗೆ  ಹೊಂದಿಕೊಂಡಂತೆ ಕಡಿಮೆ ವೆಚ್ಚದಲ್ಲಿ ಜೀವಾಮೃತ ತೊಟ್ಟಿ ನಿಮರ್ಾಣ.ಕೀಟಗಳನ್ನು ನಾಶಮಾಡಲು ಕ್ಯಾಸ್ಟ್ರಾಲ್ ಮಡಕೆ ವಿಧಾನ.ಜಮೀನಿನನ ಬದುಗಳಲ್ಲಿ ಮರಗಳ ಜೋಡಣೆ.ಒಂದು ಎಕರೆಯಲ್ಲಿ ಹತ್ತಾರು ತರಕಾರಿಗಳನ್ನು ಬೆಳೆಯುವ ಬಗೆ.ದೇಹವನ್ನು ಸದಾ ಚೈತನ್ಯವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಕೈತೋಟದಲ್ಲಿ ಬೆಳೆದಿರುವ ಹನ್ನೆರಡು ಬಗೆಯ ತರಕಾರಿಗಳ ಸಂಯೋಜನೆ ಗಮನಸೆಳೆಯುತ್ತವೆ.
ಒಂದು ಚಮಚ ರಾಸಾಯನಿಕವನ್ನು ಸೋಂಕಿಸದೆ,ಹನಿ ಕ್ರಿಮಿನಾಶಕವನ್ನು ಸಿಂಪಡಿಸದೆ  ಐದು ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಅರಿಶಿನ,ಹೂಕೋಸು,ಬೀಟ್ರೋಟ್, ಕ್ಯಾರೇಟ್, ಆಲೂಗಡ್ಡೆ ಮತ್ತು ಅರವತ್ತು ಬಗೆಯ ಮರಗಳಿವೆ.
ತಮಿಳುನಾಡಿಗೆ ಸೇರಿರುವ ಕನ್ನಡಿಗರೆ ಹೆಚ್ಚಾಗಿ ವಾಸವಿರುವ ಕಲ್ಲುಬಂಡಿಪುರದ ಬಳಿಯ ಗಣೇಶಪುರ ಎಂಬಲ್ಲಿ ಶಕ್ತಿವೇಲು ಅವರ ಪುಣ್ಯಭೂಮಿ ಇದೆ.ಕೊಂಗಳ್ಳಿಬೆಟ್ಟದ ಕಡೆಯಿಂದ ಹೋದರೆ ಹತ್ತು ಕಿ.ಮೀ.ಅಂತರದಲ್ಲಿರುವ ಇದು ರಾಮರು ವನವಾಸ ಬಂದ ತಪೋಭೂಮಿ.
"ದೊಡ್ಡಪುರದಲ್ಲಿ ರಾಮರ ಪಾದವಿದೆ.ರಾಮ ವನವಾಸ ಹೊರಡುವಾಗ ಒಂದು ದಿನ ಇಲ್ಲಿ ತಂಗಿದ್ದರು ಎನ್ನುವುದು ಜನರ ನಂಬಿಕೆ. ಹಾಗಾಗಿ ಇಲ್ಲಿ ಏನೂ ಬೆಳೆಯುವುದಿಲ್ಲ ಎಂದು ಕನ್ನಡಿಗರು ಹೇಳುತ್ತಾರೆ.ಆದರೆ ಇದು ನನಗೆ ಸ್ವರ್ಗಭೂಮಿ ಎನ್ನುತ್ತಾರೆ ಶಕ್ತಿವೇಲು. ಗಂಜಲ,ಸಗಣಿ,ಬೆಲ್ಲ ಮತ್ತು ಹರಳನ್ನೇ ಹೆಚ್ಚಾಗಿ ಬಳಸಿ ಸಹಜ ಕೃಷಿಯಲ್ಲಿ ಯಶಸ್ವಿಯಾಗಿರುವ ಶಕ್ತಿವೇಲು ಬಯಲು ಸೀಮೆಯ ರೈತರ ಪಾಲಿಗೆ ಸಂಜೀವಿನಿಯಾಗಿದ್ದಾರೆ.1997 ರಿಂದ ಸಹಜ ಕೃಷಿಕರಾಗಿರುವ ಇವರು ತಮ್ಮ ಕೃಷಿ ಪಯಣದ ಯಶೋಗಾಥೆಯನ್ನು ನಮ್ಮೊಂದಿಗೆ ಹಂಚಿಕೊಂಡರು.
ಕಾಯಿಲೆ ಕಲಿಸಿದ ಪಾಠ: "ಅದು 1996. ಒಂದೇ ವರ್ಷದಲ್ಲಿ ನನ್ನ ದೇಹದ ತೂಕ ಹತ್ತು ಕೆಜಿಯಷ್ಟು ಹೆಚ್ಚಾಯಿತು. ಜೊತೆಗೆ ಹೊಟ್ಟೆಯೂ ದಪ್ಪವಾಗಿ ಬೆಳೆಯಿತು. ಇದರಿಂದ ಭಯವಾಗಿ ವೈದ್ಯರ ಬಳಿ ಹೋದೆ. ಅವರು ಇದಕ್ಕೆಲ್ಲ ನಿಮ್ಮ ಆಹಾರ ಪದ್ಧತಿಯೆ ಕಾರಣ ಎಂದರು. ರಾಸಾಯನಿಕ ಮತ್ತು ಕ್ರೀಮಿನಾಶಕ ಬಳಸಿ ಬೆಳೆದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದರಿಂದ ನಿಮ್ಮ ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.ಸಾಧ್ಯವಾದಷ್ಟು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಎಂದು ಸಲಹೆ ನೀಡಿದರು. ದೇಹದ ಆರೋಗ್ಯ ಕೆಟ್ಟ ಪರಿಣಾಮ ನೈಸಗರ್ಿಕ ಕೃಷಿಮಾಡಿ ನನಗೆ ಬೇಕಾದ ಆಹಾರವನ್ನು ನಾನೇ ಬೆಳೆದುಕೊಳ್ಳುವ ತೀಮರ್ಾನಕ್ಕೆ ಬಂದೆ" ಎನ್ನುತ್ತಾರೆ ಶಕ್ತಿವೇಲು.
ವಿಜ್ಞಾನಿಗಳು,ಕೃಷಿ ವಿಶ್ವ ವಿದ್ಯಾನಿಲಯಗಳು ರೈತರನ್ನು ದಾರಿತಪ್ಪಿಸುತ್ತಿಲ್ಲವೆ ಎಂದು ಕೇಳಿದರೆ " ಮಾರಾಟ ಮಾಡುವವರು ವಿಷಕೊಟ್ಟರೂ ತಿನ್ನಲು ನಾವು ರೆಡಿ ಇರುವಾಗ, ಕೊಡುವವರು ಏನು ಮಾಡುತ್ತಾರೆ. ವಿಷ ಯಾವುದು, ಅಮೃತ ಯಾವುದು ಎನ್ನುವುದು ನಮಗೆ ಗೊತ್ತಿರಬೇಕು. ಪಂಚೇಂದ್ರೀಯಗಳನ್ನು ಎಚ್ಚರವಾಗಿಟ್ಟುಕೊಂಡಿದ್ದರೆ ಯಾರು ನಮ್ಮನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ" ಎನ್ನುತ್ತಾರೆ. 
ಜಗತ್ತಿನ ದೈತ್ಯ ಮಾನ್ಸಾಂಟೊ ಕಂಪನಿಯ ಮೂರು ಯುನಿಟ್ಗಳು ಈಗಾಗಲೇ ನೈಸಗರ್ಿಕ ಕೃಷಿಗೆ ಪ್ರೋತ್ಸಾಹ ನೀಡುತ್ತಿವೆ.ಹಿಂದೂಸ್ಥಾನ್ ಲೀವರ್ ಕಂಪನಿ ಕೂಡ ನೈಸಗರ್ಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದು ಇಂದಲ್ಲಾ ನಾಳೆ ಮನುಕುಲ ಉಳಿಯಬೇಕಾದರೆ ಎಲ್ಲರೂ ನೈಸಗರ್ಿಕ ಕೃಷಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಾರೆ.
ಡಾ.ಎಲ್. ನಾರಾಯಣರೆಡ್ಡಿ,ವಂದನಾಶಿವ, ನಮ್ಮಳ್ವಾರ್,ಸುಭಾಷ್ ಪಾಳೇಕಾರ್ ಸೇರಿದಂತೆ ನೂರಾರು ಸಹಜ ಕೃಷಿಕರನ್ನು ಭೇಟಿಮಾಡಿ ಅನುಭವ ಹಂಚಿಕೊಂಡಿದ್ದಾರೆ.ತೋಟಕ್ಕೆ ಬಂದ ರೈತರಿಗೂ ಸಲಹೆ ನೀಡುತ್ತಾರೆ.
ಮೊದಲ ಮೂರು ವರ್ಷಗಳು :  "ಆರಂಭದಲ್ಲಿ ನಾನು ರಾಸಾಯನಿಕ ಕೃಷಿಕ. 1997 ರಿಂದ ಸಾವಯವ ಕೃಷಿಯತ್ತ ಒಲವು ಬೆಳೆಸಿಕೊಂಡೆ. ಆರಂಭದ ಮೂರು ವರ್ಷ ಅಂದರೆ 1999 ರವರೆಗೂ ನನ್ನಲ್ಲೂ ಗೊಂದಲಗಳಿದ್ದವು. ಹುಡುಕಾಟ,ತಡಕಾಟ ನಡೆಯುತ್ತಲೆ ಇತ್ತು. ಬೆಳೆಗಳಲ್ಲಿ ಕೀಟಬಾಧೆ ಕಂಡುಬಂದರೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದೆ. ಬೆಳೆ ಉಳಿಸಿಕೊಳ್ಳಬೇಕೆಂಬ ಆಸೆ ಹಾಗೆ ಮಾಡಿಸುತ್ತಿತ್ತು. ಆದರೆ 1999 ರಿಂದ ಈಚೆಗೆ ನನ್ನ ಎಲ್ಲಾ ಗೊಂದಲಗಳಿಗೂ,ಸಮಸ್ಯೆಗಳಿಗೂ,ಹುಡುಕಾಟಗಳಿಗೂ ಉತ್ತರ ಸಿಕ್ಕಿತು.ಅಲ್ಲಿಂದ ಇಲ್ಲಿಯವರೆಗೂ ಹಿಂತಿರುಗಿ ನೋಡಿದಾಗ ನಮ್ಮ ಜಮೀನಿಗೆ ಒಂದಿಡಿ ರಾಸಾಯನಿಕ ಗೊಬ್ಬರವನ್ನಾಗಲಿ,ಹನಿ ಕ್ರಿಮಿನಾಶಕವನ್ನಾಗಲಿ ಸೋಂಕಿಸಿಲ್ಲ" ಎನ್ನುತ್ತಾರೆ.
ಆರಂಭದ ಮೂರು ವರ್ಷದಲ್ಲಿ ಇವರು ತೊಂದರೆ ಅನುಭವಿಸಿದ್ದಾರೆ.ಬೆಳೆ ಕೈಕೊಟ್ಟು ನಷ್ಟವಾಗಿದೆ. ಇದಕ್ಕೆಲ್ಲ ತಾನು ಮಾಡಿದ ತಪ್ಪುಗಳು ಕಾರಣವೇ ಹೊರತು ನೈಸಗರ್ಿಕ ಕೃಷಿ ಪದ್ಧತಿಯಲ್ಲ.ಮುಖ್ಯವಾಗಿ ನೈಸಗರ್ಿಕ ಕೃಷಿಯಲ್ಲಿ ಏನು ಮಾಡಬೇಕು ಎನ್ನುವುದಕ್ಕಿಂತ ಯಾವುದನ್ನು ಮಾಡಬಾರದು ಎನ್ನುವುದು ಶಕ್ತಿವೇಲು ಕಂಡುಕೊಂಡ ಸತ್ಯ.
ರೈತರು ಜಮೀನಿನಲ್ಲಿ ಬೆಂಕಿ ಹಾಕಬೇಕಾದದ್ದು ಎರಡೇ ಜಾಗದಲ್ಲಿ. ಒಂದು ಅಡುಗೆ ಮನೆ.ಮತ್ತೊಂದು ಪೂಜಾ ಕೋಣೆ.ಇವೆರಡನ್ನು ಬಿಟ್ಟು ಜಮೀನಿನಲ್ಲಿ ಸಿಗುವ ಕಸಕಡ್ಡಿಗಳನ್ನು ಯಾವುದೇ ಕಾರಣಕ್ಕೂ ಬೆಂಕಿಹಾಕಿ ನಾಶಮಾಡಬಾರದು.ಅದನ್ನು ಗಿಡಮರಗಳನ್ನು ಬೆಳೆಸಲು ಹೊದಿಕೆಯಾಗಿ ಬಳಸಿಕೊಳ್ಳಬೇಕು. ಗಿಡಮರಗಳನ್ನು ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು. ಮಳೆಯ ನೀರು ಭೂಮಿಗೆ ಹಿಂಗುವಂತೆಯೂ ಮಾಡಬಹುದು. ಭೂಮಿಗೆ ಹೊದಿಕೆ ಇದ್ದಾಗ ಮಾತ್ರ ಗೆದ್ದಲು ಹುಳುಗಳು ಬರುತ್ತವೆ. ಇದರಿಂದ ಎರೆಹುಳುಗಳು ಭೂಮಿಯ ಆಳದಿಂದ ಮೇಲೆಬಂದು ಮಣ್ಣನ್ನು ಫಲವತ್ತು ಮಾಡುತ್ತವೆ.
ಗೆದ್ದಲು ಹುಳುಗಳು ಹೇಗೆ ಎರೆಹುಳುಗಳ ಸಂಖ್ಯೆ ಹೆಚ್ಚಾಗಲು ನೆರವಾಗುತ್ತವೆ ಎನ್ನುವುದರ ಬಗ್ಗೆ ಹೊಸ ಸಂಶೋಧನೆಯೊಂದನ್ನು ಮಾಡಿದ್ದು ಅದನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದಾರೆ.ಕೀಟ ವಿಜ್ಞಾನಿಗಳು ಬಂದು ತಮ್ಮ ಈ ಹೊಸ ಸಂಶೋಧನೆಯನ್ನು ದೃಢೀಕರಿಸಬೇಕಿದೆ ಎಂದು ಹೇಳುತ್ತಾರೆ.
ಬಯಲು ಸೀಮೆ ಬೆಳೆಶಾಸ್ತ್ರ : ಪ್ರಕೋಲಿ ತಾವರೆಯೊಂದನ್ನು ಬಿಟ್ಟು ಎಲ್ಲಾ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುವ ಶಕ್ತಿವೇಲು,ಈಗ ಜಮೀನಿನಲ್ಲಿ ಕ್ಯಾರೇಟು,ಹೂ ಕೋಸು ಹಾಗೂ ಬಿಟ್ರೋಟ್, ಆಲೂಗಡ್ಡೆ,ಅರಿಶಿನವನ್ನು ಸಮೃದ್ಧವಾಗಿ ಬೆಳೆದಿದ್ದಾರೆ.
"ಹದಿನೈದು ಎಕರೆಯಲ್ಲಿ ಫಸಲು ಮಾಡುವುದು ಒಬ್ಬರಿಗೆ ಕಷ್ಟ.ಅದಕ್ಕಾಗಿ ಐದು ಎಕರೆಯಲ್ಲಿ ಅರಿಶಿನ ಬೆಳೆಯುತ್ತೇನೆ. ಯಾಕೆಂದರೆ ಇಲ್ಲಿ ಕಾಡು ಹತ್ತಿರವಿರುವುದರಿಂದ ಆನೆ ಮತ್ತು ಹಂದಿಗಳ ಕಾಟ ಜಾಸ್ತಿ.ಅರಿಶಿನ ಬೆಳೆದರೆ ಅದಕ್ಕೆ ಅಂತಹ ಸಮಸ್ಯೆ ಇಲ್ಲ.ಅದಕ್ಕಾಗಿ ಅರಿಶಿನ ಮುಖ್ಯ ಬೆಳೆ. ಉಳಿದ ಪ್ರದೇಶದಲ್ಲಿ ತರಕಾರಿ ಬೆಳೆಯುತ್ತಾರೆ. 
ಒಂದು ಎಕರೆಯಲ್ಲಿ ಕನಿಷ್ಠ ಹತ್ತು ಬಗೆಯ ತರಕಾರಿ ಹಾಕುತ್ತಾರೆ. ಪ್ರತಿ ನಾಲ್ಕು ಗುಂಟೆಗೂ ಒಂದೊಂದು ಬಗೆಯ ತರಕಾರಿ ಹಾಕುತ್ತಾರೆ.ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ವ್ಯತ್ಯಾಸವಾದರೂ ಒಂದಲ್ಲ ಒಂದು ತರಕಾರಿಯಿಂದ ಅದನ್ನು ಸರಿದೂಗಿಸಲು ಸಾಧ್ಯವಾಗುತ್ತದೆ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಚನ್ನೈ,ಕೇರಳ,ಕೊಯಂತ್ತೂರಿನಲ್ಲಿರುವ ನೈಸಗರ್ಿಕ ಉತ್ಪನ್ನಗಳ ಮಾರುಕಟ್ಟೆಗೆ ತರಕಾರಿಗಳನ್ನು ಕಳಿಸುತ್ತಾರೆ. ಶಕ್ತಿವೇಲು ಬೆಳೆದ ಪದಾರ್ಥಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ.
ಯಾವುದೇ ಬೆಳೆ ಮಾಡುವ ಮೊದಲು ನವಧಾನ್ಯವನ್ನು ಬಿತ್ತಬೇಕು. 21 ಜಾತಿಯ ಏಕದಳ,ದ್ವಿದಳ,ಎಣ್ಣೆಕಾಳು ಬೀಜಗಳನ್ನು ಎಕರೆಗೆ 30 ಕೆಜಿಯಂತೆ ಬಿತ್ತಬೇಕು. ನಂತರ 60 ದಿನಗಳಾದ ಮೇಲೆ ಅದನ್ನು ಭೂಮಿಗೆ ಸೇರಿಸಿ ನಂತರ ಕೃಷಿ ಮಾಡಬೇಕು ಎನ್ನುತ್ತಾರೆ.
ಭೂಮಿಯನ್ನು ಉಳುಮೆ ಮಾಡುವ ಸಮಯ ಕೂಡ ಬಹಳ ಮುಖ್ಯ. ಬೆಳಗ್ಗೆ 10 ಗಂಟೆ ಮೇಲೆ ಸಂಜೆ 5 ಗಂಟೆಯ ಒಳಗೆ ಭೂಮಿಯ ಉಳುಮೆ ಕೆಲಸ ಮುಗಿದಿರಬೇಕು. ಬಿಸಿಲು ಇದ್ದಾಗ ಉಳುಮೆ ಮಾಡುವುದರ ಲಾಭವೆಂದರೆ ಎರೆಹುಳುಗಳು ಭೂಮಿಯ ಆಳಕ್ಕೆ ಹೋಗಿರುತ್ತವೆ.ಮುಂಜಾನೆ ಮತ್ತು ಕತ್ತಲಿನ ಸಮಯದಲ್ಲಿ ಎರೆಹುಳುಗಳು ಮೇಲೆ ಬರುವುದರಿಂದ ಉಳುಮೆ ಮಾಡುವಾಗ  ಟ್ರ್ಯಾಕ್ಟರ್ಗೆ ಸಿಕ್ಕಿ ಸಾಯುತ್ತವೆ. ಭೂಮಿ ತೇವವಾಗಿದ್ದಾಗ ಉಳುಮೆ ಮಾಡಬಾರದು ಎನ್ನುತ್ತಾರೆ.
ಒಂದು ಹಸು ಇದ್ದರೆ ಐದು ಎಕರೆಯಲ್ಲಿ ಕೃಷಿ ಮಾಡಬಹುದು. ಪ್ರತಿದಿನ ಐದು ಲೀಟರ್ ಗಂಜಲ ಸಂಗ್ರಹಣೆ ಮಾಡಿದರೆ ಸಾಕು.ಪ್ರತಿ ಎಕರೆಗೆ ತಿಂಗಳಿಗೆ 30 ಲೀಟರ್ ಗಂಜಲ ಬೇಕಾಗುತ್ತದೆ.ಸಗಣಿ,ಬೆಲ್ಲ,ಗಂಜಲ ಇಷ್ಟೇ ನಾನು ಹಾಕುವುದು.ಇದನ್ನು ನಮ್ಮಲ್ಲಿ ಅಮುದ ದ್ರವಣಂ ಎಂದು ಕರೆಯುತ್ತೇವೆ. ಹೊಸದಾಗಿ ನೈಸಗರ್ಿಕ ಕೃಷಿ ಮಾಡುವವರು ಸುಭಾಷ್ ಪಾಳೇಕಾರ್ ಹೇಳುವಂತೆಯೇ ಜೀವಮೃತ ತಯಾರು ಮಾಡಿಕೊಳ್ಳಬೇಕು.ನಂತರ ಮೂರ್ನಾಲ್ಕು ವರ್ಷ ಕಳೆದರೆ ಬೆಲ್ಲ,ಸಗಣಿ,ಗಂಜಲ ಸಾಕು ಎನ್ನುತ್ತಾರೆ.
ಒಂದು ಅಡಿ ಭೂಮಿ ಅಗೆದಾಗ ಮೂರು ಎರೆಹುಳು ಸಿಕ್ಕಿದರೆ ಅದು ಫಲವತ್ತಾದ ಮಣ್ಣು ಎನ್ನುತ್ತಾರೆ.ಆದರೆ ನನ್ನ ಭೂಮಿಯನ್ನು ಅಗೆದರೆ ಅಡಿಗೆ ಮೂವತ್ತು ಎರೆಹುಳು ಸಿಗುತ್ತವೆ ಎಂದು ಮಣ್ಣನ್ನು ಬಗೆದು ಎರೆಹುಳಗಳ ಲೆಕ್ಕ ತೋರಿಸುತ್ತಾರೆ. ಸಹಜ ಕೃಷಿಯಲ್ಲಿ ಎಕರೆಗೆ 30 ಕ್ವಿಂಟಾಲ್ ಇಳುವರಿ ಅರಿಶಿನ ತೆಗೆಯುತ್ತಾರೆ.
ಒಟ್ಟು ಐದು ಎಕರೆಯಲ್ಲಿ 60 ಜಾತಿಯ ಮರಗಳಿವೆ. ಹುಣಸೆ 20, ಹಲಸು 30, ಕೊಡಂಬುಳಿ (ಕೇರಳದಲ್ಲಿ ಸಿಗುತ್ತದೆ ಹುಣಸೆ ಹಣ್ಣಿನ ಜಾತಿ),ಜಂಬೂನೇರಳೆ ಮತ್ತಿತರ ಮರಗಳಿವೆ.
ಹಿಪ್ಪೆ, ಆಲ,ಬೇವು,ಅರಳಿ,ಹತ್ತಿ ಈ ಐದು ಮರಗಳಿಗೆ ಮಳೆ ಕರೆಯುವ ಶಕ್ತಿ ಹೆಚ್ಚಿರುತ್ತದೆ. ಜಮೀನಿನ ಸುತ್ತಲೂ ಈ ಮರಗಳು ಇದ್ದರೆ ಆ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಹೆಚ್ಚಿರುತ್ತದೆ ಎನ್ನುವುದು ತಮ್ಮ ಅನುಭವಕ್ಕೆ ಬಂದಿದೆ ಎನ್ನುತ್ತಾರೆ.
ವಿಶೇಷ ಬಿಲ್ವ : "ಇದೊಂದು ಅಪರೂಪದ ವಿಶೇಷ ಬಿಲ್ವಪತ್ರೆ ಗಿಡ.ಇದನ್ನು ಮಘಾ ಬಿಲ್ವ ಪತ್ರೆ ಎನ್ನುತ್ತಾರೆ.ಇದರ ಒಂದು ರೆಕ್ಕೆಯನ್ನು ಕಿತ್ತು ನೋಡಿದಾಗ ಅದರ ಎಲೆಗಳು ಶಿವಲಿಂಗಾಕಾರದಲ್ಲಿರುತ್ತವೆ. ದಕ್ಷಿಣ ಭಾರತ ವಿಂಡ್ ಮಿಲ್ ಛೇರ್ಮನ್ ಕಸ್ತೂರಿ ರಂಗನ್ ಇದನ್ನು ನನಗೆ ಗಿಫ್ಟ್ ಆಗಿ ಕೊಟ್ಟರು. ಇಂಟರ್ ನೆಟ್ನಲ್ಲಿ ನನ್ನ ಬಗ್ಗೆ ಓದಿ ಹುಡುಕಿಕೊಂಡು ಬಂದು, ಇದು ನಿಮ್ಮದೆ ಜಮೀನಿನಲ್ಲಿ ಬೆಳೆಯಲು ಸೂಕ್ತ ಎಂದು ಈ ಬಿಲ್ವಪತ್ರೆ ಗಿಡವನ್ನು ಉತ್ತರ ಭಾರತದಿಂದ ತಂದುಕೊಟ್ಟರು ಎಂದು ಸೊಗಸಾಗಿ ಬೆಳೆದ ಗಿಡವನ್ನು ಭಕ್ತಿಯಿಂದ ತೋರಿಸುತ್ತಾರೆ.
ಆರೋಗ್ಯಕ್ಕಾಗಿ ಕೃಷಿ : "ಕೃಷಿಯನ್ನು ವ್ಯವಹಾರಿಕವಾಗಿ ಮಾಡಲು ಮನಸ್ಸು ಒಪ್ಪುತ್ತಿಲ್ಲ.ಇದೊಂದು ಸಂಸ್ಕೃತಿ. ಆರೋಗ್ಯವನ್ನು ಕಾಪಾಡಿಕೊಂಡು ಆಸ್ಪತ್ರೆಯಿಂದ ದೂರವಾಗಿರಲು ಕೃಷಿ ಮಾಡಬೇಕು.ನಮ್ಮ ಕುಟುಂಬದಲ್ಲಿ ಇದುವರೆಗೂ ನಾವ್ಯಾರು ಆಸ್ಪತ್ರೆಗೆ ಹೋಗಿಲ್ಲ. ನಾವು ಉಣ್ಣುವ ಆಹಾರವೇ ನಮ್ಮ ಕಾಯಿಲೆಗಳಿಗೆ ಔಷಧಿಯಾಗಿ ಕೆಲಸಮಾಡುತ್ತದೆ. ಅದಕ್ಕಾಗಿ ಈ ಬಾರಿ ಅರ್ಧ ಎಕರೆಯಲ್ಲಿ 12 ಜಾತಿ ತರಕಾರಿಗಳನ್ನು ಬೆಳೆಸುತ್ತಿದ್ದೇನೆ ಎಂದು ತೋರಿಸಿದರು.
ಬೂದುಗುಂಬಳ,ಸೋರೆಕಾಯಿ,ಗೋರಿಕಾಯಿ,ಪಡುವಲಕಾಯಿ,ಕುಂಬಳಕಾಯಿ,ತೊಂಡೆಕಾಯಿ,ನುಗ್ಗೆಕಾಯಿ,ಈರದಕಾಯಿ,ತೆಂಗಿನಕಾಯಿ(ಕೊಬ್ಬರಿ),ನಿಂಬೆ,ಬೆಂಡೆಕಾಯಿ,ಬಾಳೆಕಾಯಿ. ಈ ಹನ್ನೆರಡು ತರಕಾರಿಗಳನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ಯಾವ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ.ಇವೆಲ್ಲ ದೇಹವನ್ನು ಬಾಧಿಸುವ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸಮಾಡುತ್ತವೆ.ಈ ಕಾಯಿಗಳನ್ನು ನೈಸಗರ್ಿಕವಾಗಿ ಕೈತೋಟದಲ್ಲಿ ಬೆಳೆದುಕೊಂಡು ಉಪಯೋಗಿಸುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು. ಈ ಹನ್ನೆರಡು ಬಗೆಯ ತರಕಾರಿಗಳು ಈಗ ತಮ್ಮ ಕೈ ತೋಟದಲ್ಲಿ ಇದ್ದು ಅವುಗಳನ್ನು ಬಳಸುತ್ತಿರುವುದರಿಂದ ತನ್ನ ಕುಟುಂಬ ಯಾವ ಕಾಯಿಲೆಗೂ ತುತ್ತಾಗದೆ ಆಸ್ಪತ್ರೆಯಿಂದ ದೂರ ಇದ್ದೇವೆ" ಎನ್ನುತ್ತಾರೆ.
ಕಳೆ,ಪಾಥರ್ೇನಿಯಂನಾಶಕ : ಸಣ್ಣಪುಟ್ಟ ಕಳೆ ಮತ್ತು ಪಾಥರ್ೇನಿಯಂ ನಾಶಕ್ಕೂ ಜೈವಿಕ ಪರಿಹಾರ ಕಂಡುಕೊಂಡಿದ್ದಾರೆ. 10 ಲೀಟರ್ ಹಸುವಿನ ಗಂಜಲಕ್ಕೆ ಒಂದು ಕೆಜಿ ಹರಳೆಕಾಯಿ ಜಜ್ಜಿ ಹತ್ತು ದಿನಗಳ ವರೆಗೆ ನೆರಳಿನಲ್ಲಿ ಇಡಬೇಕು. ನಂತರ ಸೋಸಿಕೊಂಡು ಪ್ರತಿ 8 ಲೀಟರ್ ನೀರಿಗೆ, 2 ಲೀಟರ್ ಈ ದ್ರವಣ ಮಿಶ್ರಣ ಮಾಡಿ ಸಿಂಪರಣೆ ಮಾಡಿದರೆ ಪಾಥರ್ೇನಿಯಂ,ಗರಿಕೆ ಸೇರಿದಂತೆ ಸಣ್ಣಪಟ್ಟ ಕಳೆಗಳು ನಾಶವಾಗುತ್ತವೆ. ಗಂಜಲ ಹಳೆಯದದಷ್ಟು ಒಳ್ಳೆಯದು.ಬಾಳೆ,ಕಬ್ಬು,ತೋಟಗಾರಿಕೆ ಬೆಳೆಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎನ್ನುತ್ತಾರೆ.
ಕೀಟ ನಿಯಂತ್ರಣಕ್ಕಡ ಮಡಕೆ ಬಳಕೆ : ಬೆಳೆಗಳಿಗೆ ಬಾಧಿಸುವ ಹುಳುಗಳನ್ನು ನಿಯಂತ್ರಿಸಲು ಮಡಕೆ ಬಳಸುತ್ತಿರುವುದು ಇವರ ಜಾಣ್ಮೆಗೆ ಸಾಕ್ಷಿ. ಚಿಟ್ಟೆಗಳು ಮೊಟ್ಟೆ ಇಟ್ಟು ಹುಳುಮಾಡಿ ಬೆಳೆಗಳಿಗೆ ಹಾನಿ ಉಂಟುಮಾಡುತ್ತವೆ.ಮೊಟ್ಟೆ ಇಡುವ ಮೊದಲು ದುಂಬಿಗಳನ್ನೆ ಹಿಡಿದು ಬಿಟ್ಟರೆ ಸಾಕಷ್ಟು ಹಾನಿ ತಪ್ಪಿಸಬಹುದು.ಅದಕ್ಕಾಗಿ ಸರಳ,ಸುಲಭ ಉಪಾಯ ಇದು.
ಐದು ಲೀಟರ್ ನೀರು ಹಿಡಿಯುವ ಮಡಕೆಯನ್ನು ತೆಗೆದುಕೊಂಡು ನಾಲ್ಕು ಲೀಟರ್ ನೀರು,ಒಂದು ಕೆಜಿ ಹರಳನ್ನು ಕುಟ್ಟಿ ಅದರಲ್ಲಿ ಹಾಕಬೇಕು. ಎಕರೆಗೆ ಐದು ಮಡಕೆ ಬೇಕು. ತೆಂಗಿಗೆ ನುಸಿ ರೋಗ ಕಡಿಮೆಯಾಗುತ್ತದೆ. ಕಬ್ಬು,ಬಾಳೆಯಲ್ಲಿ ಬರುವ ಗೊಣ್ಣೆಹುಳು ನಿಯಂತ್ರಣಕ್ಕೆ ಸಹಕಾರಿ. ಏಪ್ರಿಲ್ನಲ್ಲಿ ಇದನ್ನು  ಸಿದ್ಧಮಾಡಿ ಇಟ್ಟರೆ ದುಂಬಿಗಳನ್ನು ಸೆರೆಹಿಡಿದು ನಾಶಮಾಡಬಹುದು.ಮಡಕೆಗೆ ವಾರಕ್ಕೊಂದು ಸಾರಿ ಅರ್ಧಲೀಟರ್ ನೀರು ಹಾಕಿಕೊಳ್ಳಬೇಕು. ಕತ್ತಿನ ಮಟ್ಟಕ್ಕೆ ಮಡಕೆಯನ್ನು ಭೂಮಿಯಲ್ಲಿ ಹೂಳಬೇಕು. ಮೂರು ವರ್ಷದ ವರೆಗೂ ಬರುತ್ತದೆ. ಮಳೆಗಾಲಕ್ಕೆ ನೀರು ಹಾಕಬೇಕಿಲ್ಲ. ವಾರಕ್ಕೊಂದು ಬಾರಿ ಹುಳುಗಳನ್ನು ತೆಗೆದು ಹಾಕುತ್ತಿರಬೇಕು. ಚಿಟ್ಟೆ ಮೊಟ್ಟೆಹಾಕುವ ಮೊದಲೇ ಹಿಡಿದು ಬಿಟ್ಟರೆ ಕೀಟಬಾಧೆ ಇರುವುದಿಲ್ಲ. ಬಾಳೆದಿಂಡಿಗೂ ಬರುವ ಹುಳುಗಳನ್ನು ಹಿಡಿಯಬಹುದು" ಎಂದು ಮಡಕೆಯಲ್ಲಿ ಬಿದ್ದಿರುವ ದುಂಬಿಗಳ ರಾಶಿಯನ್ನು ತೋರಿಸುತ್ತಾರೆ.
ಗೆದ್ದಲಿನ ಸಮಸ್ಯೆ ಬಗ್ಗೆ ಕೇಳಿದರೆ ಸಮುದ್ರದಲ್ಲಿ ಮೀನು,ಮಣ್ಣಿನಲ್ಲಿ ಗೆದ್ದಲು ಹುಳು ಇರಲೇಬೇಕು.ಮಣ್ಣಿನಲ್ಲಿ ಗೆದ್ದಲುಹುಳುಗಳು ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚು ಮಾಡುವುದರ ಮೂಲಕ ಹ್ಯೂಮಸ್ ನಿಮರ್ಾಣವಾಗಲು ಸಹಕಾರಿಯಾಗುತ್ತವೆ ಎನ್ನುತ್ತಾರೆ. ಒಣಗಿದ ಕಸಕಡ್ಡಿಗಳನ್ನು ಹೆಚ್ಚಾಗಿ ಹೊದಿಕೆ ಮಾಡಿದರೆ ಗೆದ್ದಲಿಗೆ ಆಹಾರ ಕೊಟ್ಟಂತಾಗುತ್ತದೆ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗೆ ಶಕ್ತಿವೇಲು ಅವರನ್ನು 9486316041 ಗೆ ಸಂಜೆ 7 ರಿಂದ 9 ಗಂಟೆಯವರೆಗೆ ಮಾತ್ರ ಕರೆಮಾಡಿ ಸಂಪಕರ್ಿಸಬಹುದು 

ಸೋಮವಾರ, ಅಕ್ಟೋಬರ್ 2, 2017

ಮಳವಳ್ಳಿಯಬೆಟ್ಟದ ಜೀವ ಕಾಮೇಗೌಡ !

# ಕೆರೆಕಟ್ಟೆ ನಿರ್ಮಿಸಿದ ಹಠಯೋಗಿ # ಹತ್ತೂರು ನೀರ ಬವಣೆ ನೀಗಿದ ಭಗೀರಥ 

`ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು' ಎಂದು ಹಿರಿಯರು ಆಶೀವಾದಮಾಡುತ್ತಿದ್ದ ನಾಡು ನಮ್ಮದು.ಕಲ್ಲನಕೇರಿಯ ಮಲ್ಲನಗೌಡ ಊರಿನ ಹಿತಕ್ಕಾಗಿ ಕೆರೆಯನ್ನು ಕಟ್ಟಿಸಿ ಅದನ್ನು ಉಳಿಸಿಕೊಳ್ಳಲು ಕಿರಿಯಸೊಸೆ ಭಾಗೀರತಿಯನ್ನು ಕೆರೆಗೆ`ಹಾರ'ವಾಗಿ ಬಲಿಕೊಟ್ಟು ತ್ಯಾಗ, ಆದರ್ಶವನ್ನು ಮೆರೆದ ನಾಡು ನಮ್ಮದು.ಭೂಮಿತೂಕದ ಹೆಣ್ಣು,ಕ್ಷಮಯಾಧರಿತ್ರಿ, ಉದಾತ್ತ ಮನೋಭಾವದ ಭಾಗೀರತಿಯ ಕೆರೆಗೆಹಾರ ಕಥನ ಕವನವನ್ನು ಓದುತ್ತಿದ್ದರೆ,ಕೇಳುತ್ತಿದ್ದರೆ ಮನ ತೇವಗೊಳ್ಳುತ್ತದೆ.ನಮ್ಮಲ್ಲಿ ಕೆರೆಗಳಿಲ್ಲದ ಊರೇ ಇಲ್ಲ.ಆದರೆ ಈಗ ಜೀವನಾಡಿಗಳಂತಿರುವ ಕೆರೆಕಟ್ಟೆಗಳನ್ನೇ ನುಂಗುವ ಜನ ಹೆಚ್ಚಾಗುತ್ತಿರುವುದು ದುರಂತ.ಪರಿಣಾಮ ಒಂದು ಬಿರುಮಳೆ ಬಂದರೆ ನಗರಗಳೆಲ್ಲ ನೀರಿನಲ್ಲಿ ತೇಲುತ್ತವೆ. ಪ್ರಕೃತಿ ಕೆರೆ ಸಂರಕ್ಷಣೆಯ ಪಾಠ ಕಲಿಸುತ್ತಿದೆ.
ತಮ್ಮ ಮಕ್ಕಳು,ಮೊಮಕ್ಕಳಿಗಾಗಿ ಆಸ್ತಿ ಹಣ ಮಾಡುವವರನ್ನು ಕಂಡಿದ್ದೇವೆ,ಕೇಳಿದ್ದೇವೆ.ಆದರೆ ಸಕರ್ಾರಿ ಜಾಗದಲ್ಲಿ ತನ್ನ ಮಕ್ಕಳು,ಮೊಮ್ಮಕ್ಕಳಿಗಾಗಿ ಕೆರೆಕಟ್ಟೆ ಕಟ್ಟುವ ಜೀವವನ್ನು ನೋಡಿರುವುದಿಲ್ಲ.ಅಂತಹ ಒಂದು ಬೆಟ್ಟದಜೀವವನ್ನು ಕಣ್ಣ್ತುಂಬಿಕೊಳ್ಳುವ ಅವಕಾಶವನ್ನು ಮೈಸೂರಿನ ನಾಟಕ ಕರ್ನಾಟಕ ರಂಗಾಯಣ ಕಲ್ಪಿಸಿತ್ತು.ಅದಕ್ಕಾಗಿ ರಂಗಾಯಣ ಸಿಬ್ಬಂದಿ ಅಭಿನಂದನಾರ್ಹರು.
ದಸರಾ ಪ್ರಯುಕ್ತ ಪ್ರತಿವರ್ಷ ನಡೆಸುವ ನವರಾತ್ರಿ ರಂಗೋತ್ಸವದಲ್ಲಿ ಪ್ರತಿದಿನ ಸಾಧಕರೊಬ್ಬರನ್ನು ಕರೆಸಿ ಸನ್ಮಾನಿಸಲಾಗುತ್ತದೆ.ಇದರ ಅಂಗವಾಗಿ ಸೆ.23 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನಕೊಪ್ಪಲಿನ ಬೆಟ್ಟದ ಜೀವ ಕಾಮೇಗೌಡರನ್ನು ಕರೆಸಿದ್ದಾಗ ಅವರನ್ನು ಸನ್ಮಾನಿಸುವ ಸೌಭಾಗ್ಯ ನನ್ನ ಪಾಲಿಗೆ ಒದಗಿಬಂದಿತ್ತು. ಅಂತಹ ಹಿರಿಯ ಜೀವವನ್ನು ಕಂಡು ಮಾತನಾಡಿಸಿ,ಅವರು ಹೇಳಿದ್ದನ್ನು ಕೇಳಿದ ಮೇಲೆ ಮನಸ್ಸು ಕೆಲದಿನ ತಲ್ಲಣ ಅನುಭವಿಸಿತು. ಒಂದು ಧರ್ಮಕಾರ್ಯವನ್ನು ಮಾಡಬೇಕಾದರೆ ಮನಸ್ಸು ಹೇಗೆ ಬಂಡೆಯಂತೆ ಗಟ್ಟಿಯಾಗಿರಬೇಕು.ಎಂತಹ ತ್ಯಾಗಕ್ಕೆ ಸಿದ್ಧವಾಗಬೇಕು ಎನ್ನುವ ಕಟುಸತ್ಯವನ್ನು ಕಾಮೇಗೌಡರು ಬಿಚ್ಚಿಟ್ಟಾಗ ಎಲ್ಲರ ಮುಖದಲ್ಲೂ ಗಾಢಮೌನವೊಂದು ಆವರಿಸಿತ್ತು. ಅಂತಹ ಒಂದು ಅಪರೂಪದ ಕಾಡಿನ ಹೂ `ಬೆಟ್ಟದಜೀವ' ಈ ವಾರದ ಬಂಗಾರದ ಮನುಷ್ಯ.
ಅಂದು 74 ರ ಹರಯದ ಕಾಮೇಗೌಡ ಗಾಂಧಿಯಂತೆ ನಡೆದುಬಂದರು. ಕೈಯಲ್ಲಿ ಕೋಲು.ಹೆಗಲ ಮೇಲೊಂದು ಹಸಿರು ಶಾಲು.ಮಾತಿಗೆ ನಿಂತರೆ ರಾಮಾಯಣ,ಮಹಾಭಾರತದ ನೀತಿಕತೆಗಳು ಪುಂಖಾನುಪುಂಖವಾಗಿ ಪ್ರಾಸಂಗಿಕವಾಗಿ ಬಂದುಹೋಗುತ್ತಿರುತ್ತವೆ. ಮಾತಿನಲ್ಲಿ ವಿರಾಗಿ ಅಲ್ಲಮನ ದನಿ ಇಣುಕುತ್ತದೆ.ಗಾಂಧಿಯ ಕಠಿಣ ವೃತನಿಷ್ಠೆ ಎದ್ದು ಕಾಣುತ್ತದೆ.ಬೆಳಕಾಗಿ ಹಾದಿ ತೋರಬೇಕಿದ್ದ ಜ್ಞಾನ ಬೆಂಕಿಯಾಗಿ ಸುಡುತ್ತಿರುವ ಸುಡುವಾಸ್ತವದಲ್ಲಿ ಬೆಟ್ಟಕ್ಕೆ ತಂಪೆರೆಯುತ್ತಿರುವ ಜೀವವೊಂದರ ಬಗ್ಗೆ ಬರೆಯುತ್ತಿದ್ದೇನೆ.
ಕಾಡಿನ ಕುಸುಮ : ಕಾಮೇಗೌಡ ವನ್ಯಪ್ರಾಣಿಗಳೊಂದಿಗೆ ಬೆಳದ ಗಟ್ಟಿಜೀವ.ಜನರ ಸಂಪರ್ಕ ಅವರಿಗೆ ಆಗಲಿಲ್ಲ. ನಾಗರಿಕತೆಯ ರೀತಿರಿವಾಜುಗಳನ್ನು ಇವರು ಕಲಿಯಲಿಲ್ಲ.ಬೆಟ್ಟದ ತಪ್ಪಲಿನಲ್ಲಿ ಕುರಿಕಾಯುತ್ತಾ ಕುಳಿತುಕೊಳ್ಳುವುದು. ಪ್ರಾಣಿಗಳ ಚಲನವಲನವನ್ನು ಗಮನಿಸುವುದು.ಅವುಗಳ ಸಂಕಷ್ಟವನ್ನು ಅರಿಯುವುದು ಇವರ ಅಭ್ಯಾಸ. ವನ್ಯಪ್ರಾಣಿಗಳಿಗೆ ಬೇಕಾದ ನೀರು,ಅನ್ನಾಹಾರವನ್ನು ಕೊಡುವವರು ಯಾರು?.ಇವುಗಳ ಕಷ್ಟ ಕೇಳುವವರು ಯಾರು ? ಎಂಬ ಆಲೋಚನೆ ತಲೆಯಲ್ಲಿ ತುಂಬಿಕೊಂಡಾಗ ಗೌಡರಿಗೆ ಹೊಳೆದದ್ದು ಕೆರೆಕಟ್ಟೆ ನಿಮರ್ಾಣದ ಕನಸು.
ಮಕ್ಕಳಿಗಾಗಿ ದುಡಿದು ಸವೆದು ಆಸ್ತಿಮಾಡಿದರೆ ಮಕ್ಕಳು ಮೊಮಕ್ಕಳ ಕಾಲದವರೆಗೆ ಅದು ಬರುತ್ತದೆ.ನಂತರ ಆಸ್ತಿಯನ್ನು ತಿಂದುಂಡು ಹಾಳು ಮಾಡಿಬಿಡುತ್ತಾರೆ.ಯಾರ ನೆನಪಿನಲ್ಲೂ ಉಳಿಯುವುದಿಲ್ಲ. ಅದಕ್ಕಾಗಿ ಭೂಮಿಯ ಮೇಲೆ ಶಾಶ್ವತವಾದ ಕೆಲಸವನ್ನು ಮಾಡಬೇಕು ಎಂದು ನಿರ್ಧರಿಸಿದರು ಕಾಮೇಗೌಡ. ಅದರ ಫಲವಾಗಿ ಈಗ ಕುಂದೂರುಬೆಟ್ಟ ಕೆರೆಕಟ್ಟೆಗಳಿಂದ ನಳನಳಿಸುತ್ತಿದೆ
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಿಂದ 10 ಕಿ.ಮೀ.ದೂರದಲ್ಲಿದೆ ಕುಂದೂರು ಬೆಟ್ಟ. ಇದನ್ನು ಕುಂದನಪರ್ವತ ಎಂದೂ ಕರೆಯುತ್ತಾರೆ. ಲಿಂಗಾಕಾರದಲ್ಲಿರುವ ಈ ಬೆಟ್ಟದ ತಪ್ಪಲಿನಲ್ಲಿ ದಾಸನದೊಡ್ಡಿ,ಪಂಡಿತಹಳ್ಳಿ,ಹೊಸದೊಡ್ಡಿ,ತಿರುಮಳ್ಳಿ ಹಾಗೂ ಪಣತಹಳ್ಳಿ ಸೇರಿ ಹತ್ತೂರುಗಳಿವೆ. ಕಳೆದ 40 ವರ್ಷಗಳಿಂದ ಈ ಬೆಟ್ಟಕ್ಕೆ ಕಾವಲುಗಾರನಂತಿದ್ದಾರೆ ಬೆಟ್ಟದಜೀವ ದಾಸನದೊಡ್ಡಿಯ ಕಾಮೇಗೌಡ.
ಶಾಲೆಯ ಮೆಟ್ಟಿಲನ್ನೇ ಹತ್ತದ ಕಾಮೇಗೌಡ ಸರ್ವಋತುವಿನಲ್ಲೂ ನೀರು ಹಿಂಗದ ಕೆರೆಕಟ್ಟೆ ನಿಮರ್ಾಣ ಮಾಡಿದ್ದಾರೆ. ಬೆಟ್ಟದ ಮಧ್ಯಭಾಗದಿಂದ ದಾಸನದೊಡ್ಡಿ ಗ್ರಾಮದವರೆಗೆ ಐದು ಕಟ್ಟೆಗಳಿವೆ. ಇಳಿಜಾರಿನಿಂದ ಕೆಳಗಿನವರೆಗೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ನಾಲೆಗಳನ್ನು ಮಾಡಿದ್ದಾರೆ. ಜೆಲ್ಲೆ ಬರದಿಂದ ತತ್ತರಿಸಿದರೂ ಬೆಟ್ಟದ ತಪ್ಪಲಿನಲ್ಲಿರುವ ಹತ್ತೂರು ಜನಜಾನುವಾರುಗಳಿಗೆ ನೀರಿಗೆ ಬರವಿಲ್ಲ. ದಾಸನದೊಡ್ಡಿಯಿಂದ ಈಗ ಪಣತಹಳ್ಳಿ ತಪ್ಪಲಿನಲ್ಲಿ ಕೆರೆ ನಿಮರ್ಾಣ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಕೆರೆಕಟ್ಟೆ ನಿಮರ್ಿಸುವುದರಲ್ಲಿಯೂ ಜಾಣ್ಮೆ ಮೆರೆದಿದದ್ದಾರೆ.ಮೊದಲು ಕೆರೆ ನಿಮರ್ಿಸಲು ಜಾಗವನ್ನು ಪತ್ತೆ ಮಾಡುತ್ತಾರೆ.ಅಲ್ಲಿ ಉಗಾದಿಗೂ ಮುನ್ನ ಅಗೆದಾಗ ತೇವ ಸಿಗುವಂತಿರಬೇಕು.ಆಗ ಅದು ಸರ್ವಋತುವಿನಲ್ಲೂ ನೀರು ನಿಲ್ಲುವ ಜಾಗ ಎನ್ನುವುದು ಕಾಮೇಗೌಡರ ಅನುಭವ. ತಾನೂ ಸತ್ತರೂ ಸಾವಿರಾರು ವರ್ಷ ಈ ಕೆರೆಗಳು ಕಾಮೇಗೌಡನ ಕೆರೆಗಳು ಎಂದು ಕರೆಸಿಕೊಳ್ಳಬೇಕು ಎನ್ನುವುದು ಇವರ ದೊಡ್ಡಆಸೆ.
ಹಠಯೋಗಿ : ಕೆರೆಕಟ್ಟೆ ನಿಮರ್ಾಣಮಾಡಲು ಕಾಮೇಗೌಡರು ಕಾಯಕ ಆರಂಭಿಸಿದರೆಂದರೆ ಎಂತಹ ತ್ಯಾಗಕ್ಕೂ ಸಿದ್ಧರಾಗಿಬಿಡುತ್ತಾರೆ.ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಮಾರಿ,ಇದು ಸಾಲದು ಎಂಬಂತೆ ಸಾಕಿದ ಕುರಿಗಳನ್ನು ಮಾರಿ ಐದು ಕೆರೆಕಟ್ಟೆ ಕಟ್ಟಿದ್ದಾರೆ.ಇದುವರೆಗೂ ಕೆರೆಕಟ್ಟೆ ನಿಮರ್ಾಣಕ್ಕೆ ಹೀಗೆ ಸ್ವಂತ ಏಳೆಂಟು ಲಕ್ಷ ರೂಪಾಯಿಗಳನ್ನು ಹೊಂದಿಸಿಕೊಂಡು ಕೆರೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ಇಪ್ಪತ್ತು ಸಾವಿರ ರೂಪಾಯಿ ಕೂಡಿಟ್ಟುಕೊಂಡಿದ್ದ ಕಾಮೇಗೌಡರು,ಸೊಸೆಗೆ ಸರಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾದಾಗ ಕೂಡಿಟ್ಟ ಹಣವನ್ನು ಕಟ್ಟೆಕಟ್ಟಲು ಬಳಸಿದ್ದಾರೆ. ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟು ಕೃಷ್ಣನ ಹೆಸರಿನಲ್ಲಿ ಒಂದು ಕಟ್ಟೆ ಕಟ್ಟಿಬಿಟ್ಟೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಬೆಟ್ಟದ ಸುತ್ತಲ್ಲೂ ಕಣಗಿಲೆ.ಬಿಲ್ವಪತ್ರೆ,ಹುಣಸೆ,ಹೊಂಗೆ ಹೀಗೆ ಸಾವಿರಾರು ಗಿಡಗಳನ್ನು ನೆಟ್ಟು ಪ್ರಾಣಿಪಕ್ಷಿಗಳಿಗೆ ನೆರಳಾಗಿದ್ದಾರೆ. ಅರಣ್ಯ ಇಲಾಖೆಯವರು ನೆಟ್ಟ ಮರಗಿಡಗಳಿಗೂ ಕಾವಲಾಗಿದ್ದಾರೆ.
ದಾಸನದೊಡ್ಡಿಯ ನೀಲಿವೆಂಕಟಗೌಡರ ಹತ್ತು ಮಕ್ಕಳಲ್ಲಿ ಕೊನೆಯ ಮಗ ಕಾಮೇಗೌಡ.ಪತ್ನಿ ಕೆಂಪಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಪಿತ್ರಾಜರ್ಿತವಾಗಿ ಬಂದ ಎರಡು ಎಕರೆ ಜಮೀನು ಹಂಚಿ ತಾವು ಕಾಡುಪಾಲಾಗಿದ್ದಾರೆ. ಮಕ್ಕಳ ಮನೆಯಲ್ಲೇ ಆಶ್ರಯಪಡೆದಿರುವ ಕಾಮೇಗೌಡ ತಮಗೆ ಬರುವ ಮಾಸಿಕ ಪಿಂಚಣಿ ಹಣದಿಂದ ಸಸಿಗಳನ್ನು ಖರೀದಿಸಿ ಬೆಟ್ಟದಲ್ಲಿ ನೆಡುತ್ತಾರೆ.
ಭವದಿಂದ ಪಾರದ ಬಗೆ: `ನಮ್ಮ ವಂಶ ಹದವಾದ ವಂಶವಲ್ಲ. ಅದಕ್ಕಾಗಿ ನಾನಾದರೂ ಸರಿಯಾದ ಹಾದಿ ಹಿಡಿಯಬೇಕಲ್ಲಾ ಅಂತ ಅಂದುಕೊಂಡೆ. ಶಿವ ಈ ಭವದಿಂದ ನನ್ನನ್ನು ಪಾರುಮಾಡು ತಂದೆ ಅಂತ ಬೇಡಿಕೊಂಡೆ. ಮಾನವ ಜನ್ಮ ಅಪರೂಪದ್ದು. ಹೆಂಡತಿ, ಮಕ್ಕಳು, ಆಸ್ತಿ ಯಾವುದು ಶಾಶ್ವತ ಅಲ್ಲ.ಜೀವ ಇರುವವರೆಗೆ ಧರ್ಮಕಾರ್ಯ ಮಾಡಿಬಿಡೋಣ ಅಂತ ತೀರ್ಮಾನಿನಿಸಿಬಿಟ್ಟೆ. ನಮ್ಮ ಅಪ್ಪ ಎರಡು ಕಟ್ಟೆ ತೆಗೆದಿದ್ದ, ಅದು ಮುಚ್ಚಿಹೋಯ್ತು. ಯಾವನೋ ಒಬ್ಬ ಇನ್ನೂ ಕೆರೆಕಟ್ಟೆ ಕೆಲಸ ಅವನ ಮಗ ಮಾಡ್ತಾನೆ ಅಂತ ಲೇವಡಿ ಮಾಡಿದ. ಹಠ ಸಾಧನೆ ಮಾಡಿದೆ. 30 ವರ್ಷದಿಂದ ಧರ್ಮಕಾರ್ಯ ಮಾಡುತ್ತಿದ್ದೇನೆ. ವಸಂತಕಾಲದಲ್ಲಿ ಕಾಡೆಲ್ಲ ಹಸಿರಾಗಿ ವನ್ಯಪ್ರಾಣಿಗಳು ಬೆಟ್ಟದಲ್ಲಿ ವಿಹರಿಸುತ್ತಿದ್ದರೆ, ಆ ಮರ ಈ ಮರ ಹಿಡಕೊಂಡು ಕುರಿ ಮೇಯಿಸುತ್ತಾ ನಡೆಯುತ್ತಿದ್ದರೆ ಸಂತೋಷವಾಗುತ್ತದೆ" ಎನ್ನುತ್ತಾರೆ ಕಾಮೇಗೌಡ.
ಜೀವಬೆದರಿಕೆ : ಇಂತಹ ಅಪರೂಪದ ಬೆಟ್ಟದ ಜೀವ ಕಾಮೇಗೌಡರಿಗೂ ಖಳನಾಯಕರ ಕಾಟ ತಪ್ಪಿಲ್ಲ.ಕೆರೆಯ ಬಳಿ ಶೇಖರಣೆಯಾಗುವ ಮರಳು ಬಗೆಯಲು ಬರುವ ಲೂಟಿಕೋರರು,ಕಾಡಿನ ಮರ ಕಡಿಯಲು ಬರುವ ಮರಗಳ್ಳರು ಜೀವ ಬೆದರಿಕೆ ಒಡ್ಡುತ್ತಲೇ ಇರುತ್ತಾರೆ. ಇದರಿಂದ ಭಯಭೀತರಾಗಿರುವ ಕಾಮೇಗೌಡರು ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.ಇಂತಹ ಬೆಟ್ಟದ ಜೀವಗಳನ್ನು ಕಾಪಾಡಿಕೊಳ್ಳಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ ಎಂದು ಜನ ಅರಿತುಕೊಳ್ಳಬೇಕು.ಆಗ ಮಾತ್ರ ನಾಗರಿಕತೆಗೂ ಘನತೆ ಬರುತ್ತದೆ.
ಹೃದಯ ಕಲ್ಲು ಬಂಡೆಯಾಗಬೇಕು: ಇಂತಹ ಧರ್ಮಕಾರ್ಯಗಳನ್ನು ಮಾಡಬೇಕಾದರೆ ಮೊದಲು ಹೃದಯ ಕಲ್ಲುಬಂಡೆಯಂತಾಗಬೇಕು.ನಾನು, ನನ್ನದು,ನನ್ನವರು ಎಂಬ ಭಾವನೆ ಬಿಡಬೇಕು ಎನ್ನುತ್ತಾರೆ ಕಾಮೇಗೌಡ. ಬದುಕಿನ ಬೇಗೆಯಲ್ಲಿ ಬೆಂದು,ಸಾವಿನ ಕದವನ್ನು ತಟ್ಟಿ ಬದುಕಿಬಂದಿರುವ ಕಾಮೇಗೌಡರ ಜೀವನಪಯಣ ಅತ್ಯಂತ ಕಠಿಣವಾದದ್ದು.ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ತಾವೊಬ್ಬರೆ ಎತ್ತಿ,ಬೆಟ್ಟದ ತುದಿಯವರೆಗೂ ನಡೆದು ಕೆರೆಕಟ್ಟೆ ಕಟ್ಟಿದ್ದಾರೆ.ಬೇಕಾದಾಗ ಜೆಸಿಬಿ ಬಳಸಿಕೊಂಡಿದ್ದಾರೆ.ಅದಕ್ಕಾಗಿ ಕೈಯಿಂದ ಐದಾರು ಲಕ್ಷ ರೂಪಾಯಿ ಹಣಕೊಟ್ಟಿದ್ದಾರೆ.
ಸತ್ತಾಗ ಈ ದೇಹ ಬೆಂಕಿಗೆ ಆಹುತಿಯಾಗುತ್ತದೆ.ಅದಕ್ಕಾಗಿ ಜೀವನವನ್ನು ವ್ಯರ್ಥವಾಗಿ ಕಳೆದುಬಿಡಬಾರದು. ವಿವೇಕದಿಂದ ಬಾಳಬೇಕು ಎಂಬ ಕಾಮೇಗೌಡರು ಲೋಕಮೆಚ್ಚುವ ಕೆಲಸಮಾಡಿದ್ದರೂ ` ಈ ನರಜನ್ಮದಲ್ಲಿ ಯಾವುದನ್ನು ಕಳೆಯೋಣ,ಯಾವುದನ್ನು ಬಿಡೋಣ ಎನ್ನುವುದು ಇಂದಿಗೂ ಗೊತ್ತಾಗುತ್ತಿಲ್ಲ' ಎನ್ನುತ್ತಾರೆ. ವನ್ಯಪ್ರಾಣಿಗಳು ತನ್ನ ಬಳಗ ಅಂತ ಆದಮೇಲೆ ಅವುಗಳ ಕಷ್ಟ ನಿವಾರಣೆ ಮಾಡಬೇಕಾದದ್ದು ನನ್ನ ಕರ್ತವ್ಯ ಅದಕ್ಕಾಗಿ ಕೆರೆಕಟ್ಟೆ ನಿಮರ್ಾಣಮಾಡುವ ಪುಣ್ಯಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.
ಕೋಟಿ ಕೋಟಿ ಹಣ ಸಂಪಾದಿಸಿದರು ಅದು ಶಾಶ್ವತ ಅಲ್ಲ, ಕೀರ್ತಿ ಮಾತ್ರ ಶಾಶ್ವತ.ಅದಕ್ಕಾಗಿ ಮಗನಿಗೊಂದು,ಮಮ್ಮೊಗನಿಗೊಂದು,ಆ ಮಗನಿಗೆ,ಈ ಮಗನಿಗೆ ಅಂತ ಕೆರೆಕಟ್ಟೆ ಕಟ್ಟುತ್ತಾ ಹೋದೆ.ಪ್ರತಿಯೊಬ್ಬರಿಗೂ ಒಂದೊಂದು ಕೆರೆ ಕಟ್ಟಿದ್ದೇನೆ. ಅದೆಲ್ಲ ಸರ್ಕಾರಿ ಜಾಗದಲ್ಲಿ ಕಟ್ಟಿರುವ ಕೆರೆಗಳು.ಯಾಕೆಂದರೆ ಆ ಕೆರೆಗಳನ್ನು ಯಾರು ಮಾರಬಾರದು ಮತ್ತು ಮುಚ್ಚಬಾರದು.ಸ್ಥಿರವಾಗಿರಬೇಕು, ಇದು ಧರ್ಮ ಎನ್ನುತ್ತಾರೆ.
ಇಬ್ಬರು ರಾಜಕಾರಣಿಗಳ ಬಳಿ ಇರುವ ಹಣದಿಂದ ಇಡೀ ಮಂಡ್ಯ ಜಿಲ್ಲೆಯನ್ನೇ ಬೆಳಕುಮಾಡಿಬಿಡಬಹುದು.ಆದರೆ ಅದು ಆಗುತ್ತಿಲ್ಲ.ಈ ಕಾಮೇಗೌಡನ ಆಸೆ ಕರ್ನಾಟಕವನ್ನೆ ಕೈಯಲ್ಲಿ ಎತ್ತಿ ಹಿಡಿದು ಬೆಳಗಿಬಿಡಬೇಕು ಅನಿಸುತ್ತದೆ. ಆದರೆ ಅದು ನನ್ನಿಂದಾಗದ ಕೆಲಸ. ಮಾತನಾಡುವುದು ಸುಲಭ,ಮಾಡುವುದು ಕಷ್ಟ ಎಂದು ಹೇಳುವ ಮೂಲಕ ಪರಿಸರ ಉಳಿಸಿ ಎಂದು ಕೂಗು ಹಾಕುವ,ಚಳವಳಿ,ಹೋರಾಟ ಮಾಡುವ `ಪರಿಸರಪ್ರೇಮಿ' ಗಳು ನಾಚುವಂತೆ ಮಾಡುತ್ತಾರೆ.
ಕಾಡಿಗೆ ಬೆಂಕಿ ಬೀಳದಂತೆ,ಕಾಡು ತಂಪಾಗಿರುವಂತೆ ನೋಡಿಕೊಳ್ಳಬೇಕು.ವನ್ಯಪ್ರಾಣಿಗಳಿಗೆ ಸಾಕಷ್ಟು ನೀರು ನೆರಳು ಸಿಗುವಂತೆ ಮಾಡಬೇಕಾದದ್ದು ಅರಣ್ಯ ಅಧಿಕಾರಿಗಳ ಕೆಲಸ.ಇಂತಹ ಪ್ರಾಮಾಣಿಕ ಅಧಿಕಾರಿಗಳು ನಮಗೆ ಬೇಕು.ಹಣದ ಆಮಿಷಕ್ಕೆ ಬಲಿಯಾಗಿ ಕಾಡಿನ ಸಂಪತ್ತನ್ನೇ ಲೂಟಿಮಾಡುವ ಅಧಿಕಾರಿಗಳು,ರಾಜಕಾರಣಿಗಳಿಂದ ಪರಿಸರ ಹಾಳಾಗುತ್ತಿದೆ. ಆಸೆ ಇಲ್ಲದೆ ಜಗತ್ತಿಲ್ಲ.ಆದರೆ ಮಾನವನಿಗೆ ದುರಾಸೆ ಇರಬಾರದು. ಈ ಕಾಡು ಮತ್ತು ವನ್ಯಪ್ರಾಣಿಗಳೆ ನನ್ನ ಸಂಪತ್ತು ಎನ್ನುತ್ತಾರೆ. ಇಂತಹ ಬೆಟ್ಟದಜೀವಗಳು ಎಲ್ಲಾಕಡೆ ತಣ್ಣಗಿದ್ದು ನೂರ್ಕಾಲ ಬಾಳಲಿ.ಉರಿಯುತ್ತಿರುವ ಭೂಮಿ ತಂಪಾಗುವ ಪುಣ್ಯಕಾರ್ಯ ಮಾಡಲಿ ಎನ್ನುವುದು ನಮ್ಮ ಆಶಯ